Fashion Guru Desi Style: ಯೂನಿಕ್‌ ದೇಸಿ ಸ್ಟೈಲ್‌ನಲ್ಲಿ ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ - Vistara News

ಫ್ಯಾಷನ್

Fashion Guru Desi Style: ಯೂನಿಕ್‌ ದೇಸಿ ಸ್ಟೈಲ್‌ನಲ್ಲಿ ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ

ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ (Fashion Guru Desi Style) ಕೇವಲ ಸೂಪರ್‌ ಮಾಡೆಲ್‌ಗಳ ಸೃಷ್ಟಿಕರ್ತರಲ್ಲ! ಖುದ್ದು ದೇಸಿ ಫ್ಯಾಷನ್‌ ಪ್ರೇಮಿ ಕೂಡ. ಆಗಾಗ್ಗೆ ಭಾಗವಹಿಸುವ ಇವೆಂಟ್‌ಗಳಲ್ಲಿ ತಮ್ಮದೇ ಆದ ವಿಭಿನ್ನ ದೇಸಿ ಲುಕ್‌ ನೀಡುವ ಸ್ಟೈಲ್‌ಮೆಂಟ್‌ ಮೂಲಕ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಬಗ್ಗೆ ಅವರೇನು ಹೇಳಿದ್ದಾರೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Fashion Guru Desi Style
ಚಿತ್ರಗಳು: ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಫ್ಯಾಷನ್‌ ಗುರು ಪ್ರಸಾದ್‌ (Fashion Guru Desi Style) ಬಿದ್ದಪ್ಪ ಸ್ಟೈಲ್‌ ಸ್ಟೇಟ್‌ಮೆಂಟ್‌ನಲ್ಲಿ ಇದೀಗ ಖಾದಿ ಹಾಗೂ ಹ್ಯಾಂಡ್‌ಲೂಮ್‌ವೇರ್‌ಗಳದ್ದೇ ಕಾರುಬಾರು. ನೋಡಲು ವಿಭಿನ್ನ ಲುಕ್‌ನಿಂದ ಕಾಣಿಸಿಕೊಳ್ಳುವ ಪ್ರಸಾದ್‌ ಬಿದ್ದಪ್ಪ ಅವರದ್ದು ಕಂಪ್ಲೀಟ್‌ ಡಿಫರೆಂಟ್‌ ಸ್ಟೈಲ್‌ಸ್ಟೇಟ್‌ಮೆಂಟ್‌. ಒಮ್ಮೆ ಕಾಣಿಸಿಕೊಂಡ ಹಾಗೆ ಮತ್ತೊಮ್ಮೆ ಕಾಣಿಸಿಕೊಳ್ಳದಿರುವುದು ಅವರ ಯೂನಿಕ್‌ ದೇಸಿ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳಲ್ಲೊಂದಾಗಿದೆ.

A desi look that innovates every time

ಪ್ರತಿಬಾರಿಯೂ ಹೊಸತನ ಮೂಡಿಸುವ ದೇಸಿ ಲುಕ್‌

ಪ್ರತಿಬಾರಿಯೂ ನಾನಾ ದೇಸಿ ಲುಕ್‌ಗಳಲ್ಲಿ, ಇವೆಂಟ್‌ಗಳಲ್ಲಿ ಕಾಣಿಸಿಕೊಳ್ಳುವ ಪ್ರಸಾದ್‌ ಬಿದ್ದಪ್ಪ ಅವರು ತಮ್ಮದೇ ಆದ ಡಿಫರೆಂಟ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ಪ್ರಯೋಗ ಮಾಡುತ್ತಲೇ ಇರುತ್ತಾರೆ. ಇದು ಹೊಸ ದೇಸಿ ಫ್ಯಾಷನ್‌ ರೂಲ್ಸ್‌ಗೆ ನಾಂದಿ ಹಾಡಿದೆ. ಇತರೇ ಫ್ಯಾಷನಿಸ್ಟ್‌ಗಳು ಹೇಳುವಂತೆ, ಬಿದ್ದಪ್ಪ ಅವರು ಕೇವಲ ಸೂಪರ್‌ ಮಾಡೆಲ್‌ಗಳ ಸೃಷ್ಠಿಕರ್ತರಲ್ಲ! ಖುದ್ದು ಫ್ಯಾಷನ್‌ ಪ್ರೇಮಿ ಕೂಡ. ಆಗಾಗ್ಗೆ ಭಾಗವಹಿಸುವ ಇವೆಂಟ್‌ಗಳಲ್ಲಿ ತಮ್ಮದೇ ಆದ ವಿಭಿನ್ನ ಪ್ರಯೋಗಾತ್ಮಕ ಸ್ಟೈಲ್‌ಮೆಂಟ್‌ ಮೂಲಕ ಕಾಣಿಸಿಕೊಂಡು ಫ್ಯಾಷನ್ ಪ್ರಿಯರನ್ನು ಸೆಳೆಯುತ್ತಿರುತ್ತಾರೆ.

Prasad Vidappa's Khadi Love

ಪ್ರಸಾದ್‌ ಬಿದ್ದಪ್ಪರ ಖಾದಿ ಲವ್‌

ಇತ್ತೀಚಿಗಿನ ಪ್ರಸಾದ್‌ ಬಿದ್ದಪ್ಪ ಅವರ ದೇಸಿ ಲುಕ್‌ನಲ್ಲಿ, ಈ ಕೆಳಕಂಡತಿರುವ ಔಟ್‌ಫಿಟ್ಸ್‌ ಕಾಣಬಹುದು. ಪ್ರಸನ್ನ ಅವರ ನೇತೃತ್ವದ ಚರಕ ಸಂಸ್ಥೆಯ ಶಾರ್ಟ್ ಕುರ್ತಿ ಜೊತೆಗೆ ಫ್ಯಾಬ್‌ ಇಂಡಿಯಾದ ಚೂಡಿದಾರ್‌ ಮ್ಯಾಚ್‌ ಮಾಡಿದ್ದು, ಇವೆರೆಡಕ್ಕೂ ಹೊಂದುವಂತೆ 100 ಹ್ಯಾಂಡ್ಸ್ನ ಬ್ಲಾಕ್‌ ಪ್ರಿಂಟೆಡ್‌ನ ಗಂಚಾ ಮಿಕ್ಸ್‌ ಮ್ಯಾಚ್‌ ಸ್ಟೋಲ್‌ನಂತೆ ಹಾಕಿರುವುದು ಇಡೀ ಲುಕ್‌ಗೆ ಕಂಪ್ಲೀಟ್‌ ದೇಸಿ ಇಮೇಜ್‌ ನೀಡಿದೆ. ಮತ್ತೊಂದು ಲುಕ್‌ನಲ್ಲಿ ತಸ್ವಾಗಾಗಿ ತರುಣ್‌ ತೆಹ್ಲೆಯಾನಿ ವಿನ್ಯಾಸ ಮಾಡಿರುವ ಸಿಂಪಲ್‌ ಕಾಟನ್‌ ಕುರ್ತಾ ಚೂಡಿದಾರ್‌ನೊಂದಿಗೆ ಗುಜರಾತಿನಲ್ಲಿ ತಯಾರಾಗುವ ವೂಲ್‌ನ ಟ್ರೆಡಿಷನಲ್‌ ಲುಕ್‌ ನೀಡುವ ಬುಜೋಡಿ ಶಾಲ್ ಸಿಂಪಲ್‌ ದೇಸಿ ಲುಕ್‌ ನೀಡಿದೆ. ಇನ್ನು ಖ್ಯಾತ ಫ್ಯಾಷನಿಸ್ಟ್‌ ಬಿಬಿ ರಸೂಲ್‌ ಅವರ ವಿನ್ಯಾಸದ ಮೆನ್ಸ್ ಕುರ್ತಾ ಚೂಡಿದಾರ್‌ ಹಾಗೂ ಶಾಲ್‌ನಲ್ಲಿ ಪ್ರಸಾದ್‌ ಬಿದ್ದಪ್ಪ ಅವರು ಕಾಣಿಸಿಕೊಂಡಿರುವುದು ಮತ್ತೊಂದು ಬಗೆಯ ದೇಸಿ ಸ್ಟೈಲ್‌ ಸ್ಟೇಟ್‌ಮೆಂಟ್‌ ರೂಪಿಸಿದೆ.

Prasad Biddappa Desi Fashion Talk

ಪ್ರಸಾದ್‌ ಬಿದ್ದಪ್ಪ ದೇಸಿ ಫ್ಯಾಷನ್‌ ಟಾಕ್‌

ವಿಸ್ತಾರದೊಂದಿಗೆ ತಮ್ಮ ಯೂನಿಕ್‌ ದೇಸಿ ಸ್ಟೈಲ್‌ ಸ್ಟೇಟ್‌ಮೆಂಟ್‌ ಬಗ್ಗೆ ಮಾತನಾಡಿರುವ ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ, ದೇಸಿ ಲುಕ್‌ ತಮ್ಮ ಆಲ್‌ಟೈಮ್‌ ಫೇವರಿಟ್ ಉಡುಪು ಎಂದಿದ್ದಾರೆ. ಪ್ರತಿ ಬಾರಿಯೂ ಇವೆಂಟ್‌ಗಳಲ್ಲಿ ಆದಷ್ಟೂ ತಮ್ಮದೇ ಆದ ನಯಾ ದೇಸಿ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ. ಇದು ನನ್ನ ಯೂನಿಕ್‌ ದೇಸಿ ಲುಕ್‌ ಎಂದಿದ್ದಾರೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Bangalore Fashion Week: ಬೆಂಗಳೂರು ಫ್ಯಾಷನ್‌ ವೀಕ್‌ನಲ್ಲಿ ಡಿಸೈನರ್‌ಗಳ ಸಂಗಮ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

ಸಾಧ್ವಿ ಸೈಲ್ ಮಿಸ್ ವರ್ಲ್ಡ್ ಪ್ರಶಸ್ತಿ ಗೆಲ್ಲಲಿ: ಸಿಎಂ ಸಿದ್ದರಾಮಯ್ಯ ಆಶಯ

VISTARANEWS.COM


on

ಬೆಂಗಳೂರು: ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಪುತ್ರಿ ಸಾಧ್ವಿ ಸೈಲ್ ಅವರು 61ನೇ ಸಾಲಿನ ‘ಫೆಮಿನಾ ಮಿಸ್ ಇಂಡಿಯಾ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮ್ಮದೇ ಪಕ್ಷದ ಶಾಸಕರ ಪುತ್ರಿಯೊಬ್ಬರು ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೃತ್ಪೂರ್ವಕ ಅಭಿನಂದನೆ ತಿಳಿಸಿದ್ದಾರೆ.
ತಮ್ಮ ‘ಎಕ್ಸ್’ ಸಂದೇಶದಲ್ಲಿ ಒಡಿಶಾದ ಭುವನೇಶ್ವರದಲ್ಲಿ ನಡೆದ 61ನೇ “ಫೆಮಿನಾ ಮಿಸ್ ಇಂಡಿಯಾ -2026” ಕಿರೀಟ ಮುಡಿಗೇರಿಸಿಕೊಂಡಿರುವ ಕಾರವಾರದ ಕಾಂಗ್ರೆಸ್ ಶಾಸಕರಾದ ಸತೀಶ್ ಸೈಲ್ ಅವರ ಪುತ್ರಿ ಸಾಧ್ವಿ ಸತೀಶ್ ಸೈಲ್ ಅವರಿಗೆ ಅಭಿನಂದನೆಗಳು.
ತಮ್ಮ ಮಗಳ ಈ ಸಾಧನೆಯನ್ನು ಖುದ್ದು ಸತೀಶ್ ಸೈಲ್ ಅವರೇ ನನ್ನೊಂದಿಗೆ ಹಂಚಿಕೊಂಡು, ಹರ್ಷ ವ್ಯಕ್ತಪಡಿಸಿದರು. ಮಗಳ ಕನಸುಗಳಿಗೆ ಬೆಂಬಲವಾಗಿ ನಿಂತಿರುವ ಅವರನ್ನು ಕೂಡ ಇದೇ ವೇಳೆ ಅಭಿನಂದಿಸಿದೆ. 2027ರ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಸಾಧ್ವಿ ಪ್ರತಿನಿಧಿಸಲಿದ್ದು, ಅಲ್ಲಿಯೂ ಗೆಲುವು ಸಾಧಿಸಿ ಜಾಗತಿಕ ಮಟ್ಟದಲ್ಲಿ ರಾಜ್ಯದ ಕೀರ್ತಿ ರಾರಾಜಿಸುವಂತಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ಒಡಿಶಾದ ಭುವನೇಶ್ವರದಲ್ಲಿ ಏಪ್ರಿಲ್ 18ರಂದು ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯಲ್ಲಿ ‘ಫೆಮಿನಾ ಮಿಸ್ ಇಂಡಿಯಾ ಫಿನಾಲೆ ಸ್ಪರ್ಧೆ ಜರುಗಿತ್ತು. ಗೆಲುವು ಸಾಧಿಸಿದ ನಂತರ ಸಾಧ್ವಿ ಸೈಲ್ ತಮ್ಮ ತಂದೆಯ ಜೊತೆ ವಿಡಿಯೋ ಕಾಲ್​​​ನಲ್ಲಿ ಮಾತನಾಡಿದ್ದ ಸುದ್ದಿ ವೈರಲ್‌ ಆಗಿ ಗಮನ ಸೆಳೆದಿತ್ತು.

Continue Reading

ಫ್ಯಾಷನ್

ದೇಶದ ಗಮನ ಸೆಳೆದ ಕಾರವಾರದ ಪ್ರತಿಭೆ: ಶಾಸಕ ಸತೀಶ್ ಸೈಲ್ ಪುತ್ರಿಗೆ ‘ಮಿಸ್ ಇಂಡಿಯಾ’ ಕಿರೀಟದ ಗರಿ.

VISTARANEWS.COM


on

ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಕಾರವಾರದ ಸುಂದರಿ: ವಿಶ್ವ ಸುಂದರಿ ಸ್ಪರ್ಧೆಗೆ ಸಜ್ಜಾದ ಸಾಧ್ವಿ ಸೈಲ್‌!

ಭುವನೇಶ್ವರ: ಒಡಿಶಾದ ಭುವನೇಶ್ವರದಲ್ಲಿ ನಡೆದ 61ನೇ ಆವೃತ್ತಿಯ ‘ಫೆಮಿನಾ ಮಿಸ್ ಇಂಡಿಯಾ-2026’ ಸೌಂದರ್ಯ ಸ್ಪರ್ಧೆಯಲ್ಲಿ ಕಾರವಾರದ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಸಾಧ್ವಿ ಸತೀಶ್ ಸೈಲ್ ಐತಿಹಾಸಿಕ ಜಯ ದಾಖಲಿಸಿದ್ದಾರೆ. ದೇಶದ ವಿವಿಧ ರಾಜ್ಯಗಳ 30 ಸ್ಪರ್ಧಿಗಳನ್ನು ಹಿಂದಿಕ್ಕಿ ಮಿಸ್ ಇಂಡಿಯಾ ಪಟ್ಟ ಅಲಂಕರಿಸಿರುವ ಸಾಧ್ವಿ, ಈ ಮೂಲಕ ಗೋವಾ ರಾಜ್ಯಕ್ಕೆ ಮೊದಲ ಬಾರಿಗೆ ಈ ಪ್ರತಿಷ್ಠಿತ ಗೌರವವನ್ನು ತಂದುಕೊಟ್ಟಿದ್ದಾರೆ. ಕನ್ನಡಿಗರಿಗೆ ಮತ್ತು ಕರಾವಳಿ ಭಾಗಕ್ಕೆ ಸಾಧ್ವಿ ಅವರ ಈ ಸಾಧನೆ ಅಪಾರ ಹೆಮ್ಮೆ ತಂದಿದೆ.

27 ವರ್ಷದ ಸಾಧ್ವಿ ಸೈಲ್ ಸೌಂದರ್ಯದ ಜೊತೆಗೆ ಅಪ್ರತಿಮ ಬುದ್ಧಿವಂತಿಕೆಯನ್ನೂ ಹೊಂದಿದ್ದಾರೆ. ಇವರು ಕೆನಡಾದ ಪ್ರತಿಷ್ಠಿತ ಯೂನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾದಲ್ಲಿ ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಡಬಲ್ ಮೇಜರ್ ಪದವಿ ಪಡೆದಿದ್ದಾರೆ. ವಿಶೇಷವೆಂದರೆ ಸಾಧ್ವಿ ಅವರಿಗೆ ಕನ್ನಡ, ಕೊಂಕಣಿ ಸೇರಿ ಒಟ್ಟು ಏಳು ಭಾಷೆಗಳಲ್ಲಿ ಮಾತನಾಡಲು ತಿಳಿದಿದೆ. ಜೇನು ಕೃಷಿ, ಫೋಟೋಗ್ರಫಿ ಮತ್ತು ಬ್ಯಾಡ್ಮಿಂಟನ್‌ನಂತಹ ವಿಭಿನ್ನ ಹವ್ಯಾಸಗಳನ್ನು ಹೊಂದಿರುವ ಇವರು, ‘ಬ್ಯೂಟಿ ವಿತ್ ಬ್ರೈನ್ಸ್’ ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದ್ದಾರೆ.

ಕೇವಲ ಮಾಡೆಲಿಂಗ್ ಕ್ಷೇತ್ರವಷ್ಟೇ ಅಲ್ಲದೆ, ಉದ್ಯಮಿಯಾಗಿಯೂ ಸಾಧ್ವಿ ಸೈಲ್ ಗುರುತಿಸಿಕೊಂಡಿದ್ದಾರೆ. ಕನ್‌ಸ್ಟ್ರಕ್ಷನ್ ಕಂಪನಿಯೊಂದರ ಸಹ-ಸಂಸ್ಥಾಪಕಿಯಾಗಿರುವ ಇವರು, ಪ್ರಸ್ತುತ ಪ್ರಖ್ಯಾತ ಬ್ರ್ಯಾಂಡ್‌ಗಳ ರಾಯಭಾರಿಯಾಗಿಯೂ ಮಿಂಚುತ್ತಿದ್ದಾರೆ. ಮಿಸ್ ಇಂಡಿಯಾ ಕಿರೀಟ ಗೆದ್ದಿರುವ ಇವರು 2027ರ ಕೊನೆಯಲ್ಲಿ ನಡೆಯಲಿರುವ ‘ಮಿಸ್ ವರ್ಲ್ಡ್’ (ವಿಶ್ವ ಸುಂದರಿ) ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದು, ಜಾಗತಿಕ ವೇದಿಕೆಯ ಮೇಲೆ ದೇಶದ ಧ್ವಜವನ್ನು ಹಾರಿಸಲು ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದಾರೆ.

Continue Reading

ಬೆಂಗಳೂರು

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Bengaluru News : 21 ನೇ ವಯಸ್ಸಿನಲ್ಲಿ, “ಕಿರಿಯ ಸೌಂದರ್ಯ ಸ್ಪರ್ಧೆಯ ನಿರ್ದೇಶಕ” ಗಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ.

VISTARANEWS.COM


on

Bengaluru News

ಬೆಂಗಳೂರು: ಬಹುನಿರೀಕ್ಷಿತ ಸೌಂದರ್ಯ ಸ್ಪರ್ಧೆ, ಮಿಸ್ಟರ್ ಅಂಡ್ ಮಿಸ್ ಐಡಲ್ ಆಫ್ ಇಂಡಿಯಾ 2024 ಕಳೆದ ಅಕ್ಟೋಬರ್ 27 ರಂದು ತರಳು ಎಸ್ಟೇಟ್‌ನ ವಿಂಟೇಜ್ ಫಾರ್ಮ್ಸ್ನಲ್ಲಿ (Bengaluru News) ನಡೆಯಿತು. ಈ ಕಾರ್ಯಕ್ರಮವನ್ನು ಕಿರಿಯ ಸೌಂದರ್ಯ ಸ್ಪರ್ಧೆಯ ನಿರ್ದೇಶಕ ಕೌಶಿಕ್ ಆರ್ ಅವರು ಕೌಶಲ್ಯದಿಂದ ನಿರ್ದೇಶಿಸಿದರು. ಅವರು ಕೇವಲ 21 ನೇ ವಯಸ್ಸಿನಲ್ಲಿ, “ಕಿರಿಯ ಸೌಂದರ್ಯ ಸ್ಪರ್ಧೆಯ ನಿರ್ದೇಶಕ” ಗಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅಜಯ್ ಪ್ರಸಾದ್, ರಾವುಲ್, ಶರತ್, ಕಾತಿ೯ಕ್ ಮತ್ತು ಕೆಎಸ್‌ಎಚ್‌ ಗ್ರೂಪ್ಸ್‌ ( Ksh Groups) ಸಹಕಾರ ನೀಡಿದರು.

A 21-year-old man is trying to set a Guinness World Record as the director of a junior beauty pageant

ಈ ಸ್ಪರ್ಧೆಯು ಭಾರತದಾದ್ಯಂತದ ಪ್ರತಿಭಾವಂತ ಸ್ಪರ್ಧಿಗಳನ್ನು ಒಟ್ಟುಗೂಡಿಸಿ ಅವರ ಸೌಂದರ್ಯ, ಪ್ರತಿಭೆ ಮತ್ತು ವರ್ಚಸ್ಸನ್ನು ಪ್ರದರ್ಶಿಸಿತು. ಮಹತ್ವಾಕಾಂಕ್ಷಿ ಮಾದರಿಗಳಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಮನರಂಜನಾ ಉದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ವೇದಿಕೆಯನ್ನು ಒದಗಿಸುವುದು ಈ ಕಾರ್ಯಕ್ರಮದ ಪ್ರಾಥಮಿಕ ಉದ್ದೇಶವಾಗಿತ್ತು.

A 21-year-old man is trying to set a Guinness World Record as the director of a junior beauty pageant

ರ‍್ಯಾಂಪ್ ವಾಕ್, ನೃತ್ಯ ಮತ್ತು ಪ್ರಶ್ನೆ-ಉತ್ತರಗಳಂತಹ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ಸ್ಪರ್ಧಿಗಳು ಕಠಿಣ ತರಬೇತಿ ಮತ್ತು ಅಂದಗೊಳಿಸುವ ಸೆಷನ್ಗಳಿಗೆ ಒಳಗಾದರು. ಪ್ರಸಿದ್ಧ ಉದ್ಯಮ ತಜ್ಞರನ್ನು ಒಳಗೊಂಡ ತೀರ್ಪುಗಾರರ ಸಮಿತಿಯು ಸ್ಪರ್ಧಿಗಳ ಪ್ರದರ್ಶನವನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿತು.

ಆರ್. ಸಿ. ರೋಹಿತ್ ಮಿಸ್ಟರ್ ಐಡಲ್ ಆಫ್ ಇಂಡಿಯಾ 2024 ಕಿರೀಟವನ್ನು ಪಡೆದರೆ, ವರ್ಷಿತಾ ಮಿಸ್ ಐಡಲ್ ಆಫ್ ಇಂಡಿಯಾ 2024 ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ವಿಜೇತರಿಗೆ ಪ್ರತಿಷ್ಠಿತ ಬಹುಮಾನಗಳು ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶಗಳನ್ನು ನೀಡಲಾಯಿತು. ಕೌಶಿಕ್ ಅವರ ಗಮನಾರ್ಹ ಸಾಧನೆಯು ಅವರ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಈವೆಂಟ್ ನಿರ್ವಹಣೆಯ ನವೀನ ವಿಧಾನಕ್ಕೆ ಸಾಕ್ಷಿಯಾಗಿದೆ.

21 ವರ್ಷ ವಯಸ್ಸಿನಲ್ಲಿ ರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯನ್ನು ನಿರ್ದೇಶಿಸುವ ಮೂಲಕ, ಅವರು ಯುವ ಉದ್ಯಮಿಗಳು ಮತ್ತು ಈವೆಂಟ್ ವೃತ್ತಿಪರರಿಗೆ ಹೊಸ ಮಾನದಂಡವನ್ನು ಸ್ಥಾಪಿಸಿದ್ದಾರೆ. ಈ ಪ್ರತಿಷ್ಠಿತ ಕಾರ್ಯಕ್ರಮವನ್ನು ನಿರ್ದೇಶಿಸುವ ಮತ್ತು ಇತಿಹಾಸ ನಿರ್ಮಿಸುವ ಅವಕಾಶ ದೊರೆತಿರುವುದಕ್ಕೆ ನಾನು ರೋಮಾಂಚನಗೊಂಡಿದ್ದೇನೆ ಎಂದು ಕೌಶಿಕ್ ಆರ್ ಹೇಳಿದರು.

Continue Reading

ಫ್ಯಾಷನ್

Velevet Saree Fashion: ವೆಲ್ವೆಟ್‌ ಸೀರೆಯಲ್ಲಿ ನಟಿ ಮೇಘಾ ಶೆಟ್ಟಿಯಂತೆ ಕಾಣಿಸಲು ಇಲ್ಲಿದೆ 5 ಐಡಿಯಾ!

Velevet Saree Fashion: ಸ್ಯಾಂಡಲ್‌‌‌ವುಡ್‌ ನಟಿ ಮೇಘಾ ಶೆಟ್ಟಿಯಂತೆ ವೆಲ್ವೆಟ್‌ ಸೀರೆಯಲ್ಲಿ ನೀವೂ ಕೂಡ ಆಕರ್ಷಕವಾಗಿ ಕಾಣಿಸಬಹುದು. ಅದಕ್ಕಾಗಿ ಈ 5 ಸಿಂಪಲ್‌ ಐಡಿಯಾ ಫಾಲೋ ಮಾಡಿ ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Velevet Saree Fashion
ಚಿತ್ರಗಳು: ಮೇಘಾ ಶೆಟ್ಟಿ, ಸ್ಯಾಂಡಲ್‌ ವುಡ್‌ ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೆಲ್ವೆಟ್‌ ಸೀರೆ (Velevet Saree Fashion) ಈ ಸೀಸನ್‌ನಲ್ಲಿ ಟ್ರೆಂಡಿಯಾಗಿದೆ. ಇನ್ನು, ಇದಕ್ಕೆ ಪೂರಕ ಎಂಬಂತೆ ಬಾಲಿವುಡ್‌ ಸೆಲೆಬ್ರೆಟಿಗಳಿಂದಿಡಿದು ಸ್ಯಾಂಡಲ್‌ವುಡ್‌ ತಾರೆಯರು ಕೂಡ ಈ ಸೀರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಇದೀಗ ಕಿರುತೆರೆ ಹಾಗೂ ಸ್ಯಾಂಡಲ್‌ವುಡ್‌ ನಟಿ ಮೇಘಾ ಶೆಟ್ಟಿ ಕೂಡ ಇವೆಂಟ್‌ವೊಂದರಲ್ಲಿ ಟೀಲ್‌ ಬ್ಲ್ಯೂ ಶೇಡ್‌ನ ವೆಲ್ವೆಟ್‌ ಸೀರೆಯಲ್ಲಿ ಅಂದವಾಗಿ ಕಾಣಿಸಿಕೊಂಡು ಅಭಿಮಾನಿಗಳನ್ನು ಸೆಳೆದಿದ್ದಾರೆ.

Velevet Saree Fashion

ಆಕರ್ಷಕವಾಗಿ ಕಾಣಿಸುವ ವೆಲ್ವೆಟ್‌ ಸೀರೆಗಳು

ನೋಡಲು ಸಿಂಪಲ್‌ ಹಾಗೂ ಎಲಿಗೆಂಟ್‌ ಲುಕ್‌ ನೀಡುವ ಈ ವೆಲ್ವೆಟ್‌ ಸೀರೆಗಳು, ಸೀಸನ್‌ನಲ್ಲಿ ಬೆಚ್ಚಗಿಡುವುದು ಮಾತ್ರವಲ್ಲ, ಸಿಂಪಲ್‌ ಲುಕ್‌ನಲ್ಲೆ ಆಕರ್ಷಕವಾಗಿ ಬಿಂಬಿಸುತ್ತವೆ. ಸದ್ಯ ಮೇಘಾ ಶೆಟ್ಟಿ ಉಟ್ಟಿರುವ ಈ ವೆಲ್ವೆಟ್‌ ಸೀರೆ, ಯುವತಿಯರನ್ನು ಸೆಳೆದಿದ್ದು, ಈ ಸೀರೆಯನ್ನು ಡಿಸೈನ್‌ ಹಾಗೂ ಸ್ಟೈಲಿಂಗ್‌ ಮಾಡಿರುವ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ ಅವರು, ಈ ಲುಕ್‌ ಬಯಸುವ ಯುವತಿಯರಿಗೆ 5 ಸಿಂಪಲ್‌ ಐಡಿಯಾ ನೀಡಿದ್ದಾರೆ.

Velevet Saree Fashion

ರಾಯಲ್‌ ಲುಕ್‌ಗಾಗಿ ವೆಲ್ವೆಟ್‌ ಸೀರೆ

ರಾಯಲ್‌ ಲುಕ್‌ಗಾಗಿ ವೆಲ್ವೆಟ್‌ ಸೀರೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಯಾವುದೇ ಸಮಾರಂಭಗಳಲ್ಲೂ ಇತರರಿಗಿಂತ ವಿಭಿನ್ನವಾಗಿ ಕಾಣಿಸಲು ಕೂಡ ವೆಲ್ವೆಟ್‌ ಸೀರೆ ಉಡಬಹುದು.

Velevet Saree Fashion

ಸ್ಕಿನ್‌ ಟೋನ್‌ಗೆ ತಕ್ಕಂತೆ ಕಲರ್‌ ಚಾಯ್ಸ್

ನಿಮ್ಮ ಸ್ಕಿನ್‌ ಟೋನ್‌ಗೆ ತಕ್ಕಂತೆ ವೆಲ್ವೆಟ್‌ ಸೀರೆ ಆಯ್ಕೆ ಮಾಡಿ. ಪಾರ್ಟಿಗಳಿಗಾದಲ್ಲಿ ಡಾರ್ಕ್‌ ಶೇಡ್‌, ಡೇ ಟೈಮ್‌ ಸಮಾರಂಭಗಳಿಗಾದಲ್ಲಿ ಲೈಟ್‌ ಶೇಡ್ಸ್ ಹೀಗೆ ನಿಮ್ಮ ಸ್ಕಿನ್‌ ಟೋನ್‌ ಹಾಗೂ ಕಾರ್ಯಕ್ರಮಕ್ಕೆ ತಕ್ಕಂತೆ ಆಯ್ಕೆ ಮಾಡಬಹುದು.

Velevet Saree Fashion

ಸೆಲೆಬ್ರೆಟಿ ಲುಕ್‌ಗಾಗಿ ಸ್ಟೈಲಿಂಗ್‌

ವೆಲ್ವೆಟ್‌ ಸೀರೆಯಲ್ಲಿ ಸೆಲೆಬ್ರೆಟಿ ಲುಕ್‌ ಪಡೆಯಲು ಆದಷ್ಟೂ ಸ್ಟೈಲಿಂಗ್‌ಗೆ ಪ್ರಾಮುಖ್ಯತೆ ನೀಡಬೇಕು. ಮಿನಿಮಲ್‌ ಹಾಗೂ ಅಗತ್ಯವಿರುವಷ್ಟು ಆಕ್ಸೆಸರೀಸ್‌ ಧರಿಸಬೇಕು. ಹಾಗಾಗಿ ಧರಿಸುವ ಆಕ್ಸೆಸರೀಸ್‌ ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಮರೆಯಬಾರದು.

ವೆಲ್ವೆಟ್‌ ಸೀರೆ ಲೈಟ್‌ವೈಟಾಗಿರಲಿ

ಉಡುವ ವೆಲ್ವೆಟ್‌ ಸೀರೆಯ ಫ್ಯಾಬ್ರಿಕ್‌ ಆದಷ್ಟೂ ಲೈಟ್‌ವೈಟ್‌ ಆಗಿರಲಿ. ಆಗ ಧರಿಸಿದಾಗ ನೋಡಲು ಚೆನ್ನಾಗಿ ಕಾಣಿಸುವುದಲ್ಲದೇ, ಉಟ್ಟವರಿಗೂ ಕಂಫರ್ಟಬಲ್‌ ಫೀಲ್‌ ಆಗುತ್ತದೆ.

ಇದನ್ನೂ ಓದಿ: Shalini Rajaneesh: ಸೀರೆ, ಹಣೆಗೆ ಅಗಲವಾದ ರೆಡ್ ಬಿಂದಿ ಎಂದಿಗೂ ಬದಲಾಗದ ನನ್ನ ಯೂನಿಕ್ ಫ್ಯಾಷನ್ ಸ್ಟೇಟ್ಮೆಂಟ್!

ವೆಲ್ವೆಟ್‌ ಸೀರೆಗೆ ತಕ್ಕಂತೆ ಮೇಕಪ್‌-ಹೇರ್‌ಸ್ಟೈಲ್‌

ವೆಲ್ವೆಟ್‌ ಸೀರೆ ಉಟ್ಟಾಗ ಆ ಸೀರೆಗೆ ತಕ್ಕಂತೆ ಮೇಕಪ್‌ ಕೂಡ ಮಾಡಬೇಕು. ಹೇರ್‌ಸ್ಟೈಲ್‌ ಕೂಡ ಹೊಂದಬೇಕು. ಅತಿಯಾದ ಮೇಕಪ್‌ ಬೇಡ. ನೋಡಲು ಎಲಿಗೆಂಟ್‌ ಲುಕ್‌ ನೀಡುವ ಮೇಕಪ್‌ಗೆ ಸೈ ಎನ್ನಿ. ಇನ್ನು ಸೀರೆಯ ಶೇಡ್‌ಗೆ ತಕ್ಕಂತೆ ಲಿಪ್‌ಸ್ಟಿಕ್ ಹಾಗೂ ಐ ಮೇಕಪ್‌ ಮಾಡಬೇಕು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
Rakshit Shetty Richard Anthony Produce By Hombale
Live News5 hours ago

ಪಂಚರಾಜ್ಯ ವಿಧಾನಸಭಾ ಚುನಾವಣೆ , ಕರ್ನಾಟಕ ಉಪಚುನಾವಣೆ ಫಲಿತಾಂಶದ ಕ್ಷಣಕ್ಷಣದ ಅಪ್‌ಡೇಟ್‌

Latest1 day ago

‘ಟಾಕ್ಸಿಕ್’ ಸಿನಿಮಾದಲ್ಲಿ ಬೋಲ್ಡ್ ದೃಶ್ಯಕ್ಕೆ ಕತ್ತರಿ ಹಾಕಿ ಕಿಯಾರಾ ಅಡ್ವಾಣಿ ಮನವಿ?

Latest2 days ago

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಬಾಂಗ್ಲಾದೇಶಕ್ಕೆ ಏಕೆ ಟೆನ್ಶನ್‌?

Latest2 days ago

ಜೂನಿಯರ್‌ ಡಾಲಿ ಎಂಟ್ರಿ.. ಗಂಡು ಮಗುವಿಗೆ ಜನ್ಮ ನೀಡಿದ ಧನ್ಯತಾ

Latest3 days ago

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಏರಿಕೆ: ಒಂದೇ ದಿನ 993 ರೂ ಹೆಚ್ಚಳ

Latest4 days ago

ಜನಪ್ರಿಯತೆಯಲ್ಲಿ ಪ್ರಧಾನಿ ಮೋದಿ ಈಗಲೂ ನಂ.1

Latest4 days ago

ಕುರ್ಚಿ ಕದನಕ್ಕೆ ಹೊಸ ಟ್ವಿಸ್ಟ್ : ದಲಿತ ಸಿಎಂ ಕೂಗು ಜೋರು

Latest4 days ago

ಟಿವಿಕೆ-ಎನ್‌ಡಿಎ ಮೈತ್ರಿ?, ತಮಿಳುನಾಡಿನಲ್ಲಿ ಸಂಚಲನ, ಸ್ಟಾಲಿನ್‌ ಸಭೆ

Latest4 days ago

ಎಕ್ಸಿಟ್‌ ಪೋಲ್‌: ಅಸ್ಸಾಂ, ಪುದುಚೇರಿ ಪ.ಬಂಗಾಳದಲ್ಲಿ ಬಿಜೆಪಿ, ತ.ನಾಡಲ್ಲಿ ಡಿಎಂಕೆ, ಕೇರಳಂನಲ್ಲಿ ಯುಡಿಎಫ್‌

Latest4 days ago

ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿ? ಎಂಜಿಆರ್‌ ಆಗ್ತಾರಾ ವಿಜಯ್‌?

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌