Hostel Hudugaru Bekagiddare: ಒಟಿಟಿಗೆ ಎಂಟ್ರಿ ಕೊಡ್ತಾ ಇದೆ ʻಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ! - Vistara News

South Cinema

Hostel Hudugaru Bekagiddare: ಒಟಿಟಿಗೆ ಎಂಟ್ರಿ ಕೊಡ್ತಾ ಇದೆ ʻಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ!

Hostel Hudugaru Bekagiddare: ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಮೋಹಕ ತಾರೆ ರಮ್ಯಾ ಅವರು ಲೆಕ್ಚರರ್ ಪಾತ್ರದಲ್ಲಿ ನಟಿಸಿದ್ದರು. ರಮ್ಯಾ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಬದಲಾಯಿಸಲಾಗಿತ್ತು. ತೆಲುಗು ಆ್ಯಂಕರ್ ರಶ್ಮಿ ಗೌತಮ್ (Rashmi Gautam) ಆ ಪಾತ್ರದಲ್ಲಿ ನಟಿಸಿದ್ದರು.

VISTARANEWS.COM


on

Hostel Hudugaru Bekagiddare
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (Hostel Hudugaru Bekagiddare) ಸಿನಿಮಾ ಕನ್ನಡದಲ್ಲಿ ಸಕ್ಸೆಸ್‌ ಕಂಡು ತೆಲುಗಿನತ್ತ ಹೆಜ್ಜೆ ಹಾಕಿ ಅಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ. ತೆಲುಗಿನಲ್ಲಿ ‘ಬಾಯ್ಸ್ ಹಾಸ್ಟೆಲ್’ ಟೈಟಲ್‌ ಅಡಿಯಲ್ಲಿ ರಿಲೀಸ್ ಆಗಿತ್ತು. ಇದೀಗ ಸಿನಿಮಾ ಸೆಪ್ಟೆಂಬರ್ 15ರಂದು ಚಿತ್ರ ಒಟಿಟಿಗೆ ಬರುವ ನಿರೀಕ್ಷೆ ಇದೆ ಎನ್ನಲಾಗಿದೆ.

ಜೀ 5ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಮೋಹಕ ತಾರೆ ರಮ್ಯಾ ಅವರು ಲೆಕ್ಚರರ್ ಪಾತ್ರದಲ್ಲಿ ನಟಿಸಿದ್ದರು. ರಮ್ಯಾ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಬದಲಾಯಿಸಲಾಗಿತ್ತು. ತೆಲುಗು ಆ್ಯಂಕರ್ ರಶ್ಮಿ ಗೌತಮ್ (Rashmi Gautam) ಆ ಪಾತ್ರದಲ್ಲಿ ನಟಿಸಿದ್ದರು.

ವಿವಾದವಾಗಿದ್ದರೂ ಸೂಪರ್‌ ಹಿಟ್‌ ಆಯ್ತು!

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ರಮ್ಯಾ ಲೆಕ್ಚರರ್ ಪಾತ್ರದಲ್ಲಿ ನಟಿಸಿದ್ದರು. ಚಿತ್ರದ ಆರಂಭದ ಸನ್ನಿವೇಶವೊಂದರಲ್ಲಿ ಕಾಣಿಸಿಕೊಳ್ಳುವ ರಮ್ಯಾ ಅವರು ತೆರೆಮೇಲೆ ಬಂದು ನಗು ಬೀರಿ ಹೋಗಿದ್ದರು. ರಮ್ಯಾ ಅವರನ್ನು ಸರಿಯಾಗಿ ತೆರೆಮೇಲೆ ತೋರಿಸಲಿಲ್ಲ ಎನ್ನುವುದು ಕೆಲವರ ವಾದ. ಇನ್ನು ಇದೇ ಪಾತ್ರದ ವಿಚಾರವಾಗಿ ಸಿನಿಮಾ ರಿಲೀಸ್ ಇರುವ ಸಮಯದಲ್ಲೇ ನಟಿ ತಂಡಕ್ಕೆ ಲೀಗಲ್ ನೋಟಿಸ್ ನೀಡಿದ್ದರು. ಆದರೆ ಅದೆಲ್ಲವನ್ನು ಮೀರಿ ಸಿನಿಮಾ ತೆರೆಕಂಡು ಹಿಟ್ ಆಗಿತ್ತು. ತೆಲುಗಿಗೆ ಡಬ್ ಮಾಡಿ ಬಿಡುವಂತೆ ಕೆಲವರು ಮನವಿ ಮಾಡಿದ್ದರು. ಸಿನಿಮಾ ಡೈಲಾಗ್ಸ್ ತುಂಬಾ ಸ್ಪೀಡ್ ಇದೆ. ಡಬ್ ಮಾಡುವುದು ಅಷ್ಟು ಸುಲಭ ಅಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ‘ಹಾಸ್ಟೆಲ್ ಬಾಯ್ಸ್’ ಹೆಸರಿನಲ್ಲಿ ಸಿನಿಮಾ ತೆಲುಗಿಗೆ ಡಬ್ ಆಗಿದೆ.

ಇದನ್ನೂ ಓದಿ: Hostel Hudugaru Bekagiddare: ಕನ್ನಡದಲ್ಲಿ ಗೆದ್ದ ಹಾಸ್ಟೆಲ್‌ ಹುಡುಗ್ರು ಟಾಲಿವುಡ್‌ಗೆ ಎಂಟ್ರಿ!

ರಂಗಭೂಮಿ ಹಿನ್ನೆಲೆ ಹೊಂದಿರುವ ಪ್ರತಿಭಾನ್ವಿತ ತಂಡಕ್ಕೆ ರಿಷಬ್ ಶೆಟ್ಟಿ, ರಮ್ಯಾ, ಪವನ್ ಕುಮಾರ್, ಶೈನ್ ಶೆಟ್ಟಿ, ದಿಗಂತ್ ಹಾಗೂ ಇನ್ನಿತರರು ಸಾಥ್ ಕೊಟ್ಟಿದ್ದಾರೆ. ಗುಲ್ಮೊಹರ್ ಫಿಲ್ಮ್ಸ್ ಮತ್ತು ವರುಣ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಟಾಲಿವುಡ್

Kalki 2898 AD: ʻಕಲ್ಕಿʼ ಸಿನಿಮಾ ಹಾಡಿ ಹೊಗಳಿದ ರಾಕಿಂಗ್‌ ಸ್ಟಾರ್‌ ಯಶ್‌!

Kalki 2898 AD: ಎಸ್‌ಎಸ್ ರಾಜಮೌಳಿ, ಅವರ ಮಗ ಎಸ್‌ಎಸ್ ಕಾರ್ತಿಕೇಯ ಮತ್ತು ವಿಜಯ್ ದೇವರಕೊಂಡ ಮುಂತಾದವರು ಚಿತ್ರದ ಬಗ್ಗೆ ಈಗಾಗಲೇ ಪ್ರಶಂಸೆ ವ್ಯಕ್ತಪಡಿಸಿದ್ದರು. ಸಿನಿಮಾ ಬಗ್ಗೆ ಪ್ರೇಕ್ಷಕರು ಮಾತ್ರವಲ್ಲ ಅನೇಕ ನಟರುಗಳು ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ ಯಶ್‌ ಕೂಡ ಸಿನಿಮಾ ಕುರಿತು ಹಾಡಿ ಹೊಗಳಿದ್ದಾರೆ.

VISTARANEWS.COM


on

Kalki 2898 AD Yash calls visually stunning spectacle
Koo

ಬೆಂಗಳೂರು: ವಿಶ್ವದಾದ್ಯಂತ (world) ಅದ್ಧೂರಿಯಾಗಿ ಬಿಡುಗಡೆಯಾದ 2024ರ ಬಹು ನಿರೀಕ್ಷಿತ ಚಿತ್ರ ಕಲ್ಕಿ 2898ಎಡಿ (Kalki 2898 AD) ಭಾರತೀಯ ಚಿತ್ರರಂಗದಲ್ಲಿ (Indian cinema) ಮೂರನೇ ಅತೀ ದೊಡ್ಡ ಓಪನರ್ ಕಂಡ ಸಿನಿಮಾವಾಗಿ ಹೊರಹೊಮ್ಮಿದ್ದು ಮಾತ್ರವಲ್ಲದೇ ಚಿತ್ರದ ಮುಂದಿನ ಸರಣಿ (Kalki 2898 AD 2) ಶೀಘ್ರದಲ್ಲೇ ತೆರೆ ಕಾಣುವ ನಿರೀಕ್ಷೆಯನ್ನು ಮೂಡಿಸಿದೆ. ಸಿನಿಮಾ ಬಗ್ಗೆ ಪ್ರೇಕ್ಷಕರು ಮಾತ್ರವಲ್ಲ ಅನೇಕ ನಟರುಗಳು ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ ಯಶ್‌ ಕೂಡ ಸಿನಿಮಾ ಕುರಿತು ಹಾಡಿ ಹೊಗಳಿದ್ದಾರೆ.

ಶುಕ್ರವಾರ ಸಿನಿಮಾ ಬಗ್ಗೆ ಯಶ್ ಟ್ವೀಟ್‌ ಮಾಡಿ, “ಕಣ್ಣಿಗೆ ಹಬ್ಬವಾಗುವ ರೀತಿಯಲ್ಲಿ ಸೃಷ್ಟಿಸಿದ ಕಲ್ಕಿ 2898AD ತಂಡಕ್ಕೆ ಅಭಿನಂದನೆಗಳು! ಈ ಚಿತ್ರವು ಹೆಚ್ಚು ಸೃಜನಶೀಲ ಕಥೆಯನ್ನು ಹೇಳಲು ದಾರಿ ಮಾಡಿಕೊಡುತ್ತದೆ. ನಾಗ್‌ ಅಶ್ವಿನ್‌ ಮತ್ತು ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಸ್ಫೂರ್ತಿ ನೀಡಿದೆ. ಡಾರ್ಲಿಂಗ್ ಪ್ರಭಾಸ್‌, ಅಮಿತಾಭ್‌, ದೀಪಿಕಾ, ಕಮಲ್‌ ಹಾಸನ್‌ ಹಾಗೇ ಕೆಲವು ಅತಿಥಿ ಪಾತ್ರಗಳನ್ನು ಒಟ್ಟಿಗೆ ನೋಡುವುದು ಒಂದು ಅದ್ಭುತ ಅನುಭವವಾಗಿದೆ. . ಇಂಥಹಾ ಒಂದು ಅದ್ಭುತವಾದ ಸಿನಿಮಾವನ್ನು ಪ್ರೇಕ್ಷಕರ ಎದುರು ತಂದ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು, ಈ ಸಿನಿಮಾ ನಿಜಕ್ಕೂ ಬೆಳ್ಳಿತೆರೆಯನ್ನು ಬೆಳಗಿಸುತ್ತಿದೆ’ ಎಂದಿದ್ದಾರೆ.

ಎಸ್‌ಎಸ್ ರಾಜಮೌಳಿ, ಅವರ ಮಗ ಎಸ್‌ಎಸ್ ಕಾರ್ತಿಕೇಯ ಮತ್ತು ವಿಜಯ್ ದೇವರಕೊಂಡ ಮುಂತಾದವರು ಚಿತ್ರದ ಬಗ್ಗೆ ಈಗಾಗಲೇ ಪ್ರಶಂಸೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Kalki 2898 AD: ಎರಡನೇ ದಿನವೂ ಒಳ್ಳೆಯ ಗಳಿಕೆ ಕಂಡ  ‘ಕಲ್ಕಿ 2898 ಎಡಿ’ ಸಿನಿಮಾ!

ಕಲ್ಕಿ 2898ಎಡಿ ದೊಡ್ಡ ಪರದೆಯ ಮೇಲೆ ದಾಖಲೆಯನ್ನೇ ಬರೆದಿದೆ. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಸೇರಿದಂತೆ ಬಹುದೊಡ್ಡ ತಾರಾ ಬಳಗವನ್ನೇ ಹೊಂದಿದ್ದು, ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಗಳಿಸಿದೆ. ಮಾತ್ರವಲ್ಲದೆ ಇದೀಗ ಚಿತ್ರ ತಂಡ ಪ್ರೇಕ್ಷಕರಿಗೆ ಇನ್ನೊಂದು ಸಿಹಿ ಸುದ್ದಿಯನ್ನೂ ನೀಡಿದೆ.

ಚಿತ್ರದ ಮುಂದುವರಿದ ಭಾಗ ಶೀಘ್ರದಲ್ಲೇ ತೆರೆ ಕಾಣಲಿದೆ ಎಂಬ ಸಂದೇಶದೊಂದಿಗೆ ಕಲ್ಕಿ 2898ಎಡಿ ಚಲನಚಿತ್ರವು ಮುಕ್ತಾಯಗೊಂಡಿರುವುದರಿಂದ 2898ಎಡಿ ಚಿತ್ರ ಭಾಗ 2 ಸಾಕಷ್ಟು ಕುತೂಹಲ ಮೂಡುವಂತೆ ಮಾಡಿದೆ.

ಮಹಾಕಾವ್ಯವನ್ನು ಆಧರಿಸಿದ ಚಿತ್ರವೂ ಸಂಪೂರ್ಣವಾಗಿ ತೆರೆದುಕೊಳ್ಳಲು ಒಂದಕ್ಕಿಂತ ಹೆಚ್ಚು ಕಂತುಗಳ ಅಗತ್ಯವಿದೆ ಎಂದು ನಿರ್ದೇಶಕ ನಾಗ್ ಅಶ್ವಿನ್ ಕೂಡ ದೃಢಪಡಿಸಿದ್ದಾರೆ.

ಕಮಲ್ ಹಾಸನ್ ನಿರ್ವಹಿಸಿರುವ ಅಸಾಧಾರಣ ಪಾತ್ರ ಯಾಸ್ಕಿನ್ ನ ಅಪಾಯಕಾರಿ ಕಾರ್ಯಾಚರಣೆಯೊಂದಿಗೆ ‘ಕಲ್ಕಿ 2898ಎಡಿ ಭಾಗ 2 ಪ್ರಾರಂಭವಾಗುವ ನಿರೀಕ್ಷೆ ಇದೆ. ಚಿತ್ರದ ಮೊದಲ ಭಾಗದಲ್ಲಿ ಕಮಲ್ ಹಾಸನ್ ಅವರ ಚಿಕ್ಕ ಪಾತ್ರವನ್ನು ಮಾತ್ರ ತೋರಿಸಲಾಗಿದೆ. ಅಮಿತಾಬ್ ಬಚ್ಚನ್ ಅಶ್ವತ್ಥಾಮನ ಪಾತ್ರದಲ್ಲಿ, ಪ್ರಭಾಸ್ ಭೈರವ ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಯಾಸ್ಕಿನ್ ಅವರನ್ನು ಹೇಗೆ ಎದುರಿಸಲು ಯೋಜಿಸುತ್ತಾರೆ ಎಂಬುದರ ಸುತ್ತ ಕಥೆ ಕೇಂದ್ರೀಕೃತವಾಗಿದೆ.

ಕಲ್ಕಿ 2898ಎಡಿ ಭಾಗ 2 ಚಿತ್ರ ನಿರ್ಮಾಣಕ್ಕೆ ಮೂರು ವರ್ಷಗಳು ಬೇಕಾಗಬಹುದು ಎಂದು ನಿರೀಕ್ಷಿಸಲಾಗಿದೆ. ಪ್ರಭಾಸ್ ಈ ವಿಭಾಗವನ್ನು ಎರಡು ಭಾಗಗಳಾಗಿ ವಿಂಗಡಿಸುವ ಬಗ್ಗೆ ಸುಳಿವು ನೀಡಿದ್ದಾರೆ. ವಿವಿಧ ಸಂದರ್ಶನಗಳಲ್ಲಿ ತಮ್ಮ ಮುಂದಿನ ಸರಣಿಯ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಸುಮಾರು ಮೂರು ವರ್ಷಗಳಲ್ಲಿ ಎರಡನೇ ಕಂತನ್ನು ಅಭಿಮಾನಿಗಳು ಎದುರು ನೋಡಬಹುದು ಎಂದು ನಾಗ್ ಅಶ್ವಿನ್ ಕೂಡ ಖಚಿತಪಡಿಸಿದ್ದಾರೆ.

Continue Reading

ಸ್ಯಾಂಡಲ್ ವುಡ್

Actor Darshan: ‘ಶಾಂತಂ ಪಾಪಂ’ ಕಿರುತೆರೆ ಶೋನಲ್ಲಿ ದರ್ಶನ್‌ ಕಥೆ? ಏನಿದು ಡೇರ್ ಡೆವಿಲ್ ದೇವದಾಸ್‌ ಡೆಡ್ಲಿ ಕಹಾನಿ?

Actor Darshan: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಸಿನಿಮಾ ಮಾಡುತ್ತಾರಾ? ಎನ್ನುವ ಚರ್ಚೆ ನಡೀತಿತ್ತು. ಕಾರಣ ಆರ್‌ಜಿವಿ ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಇದೀಗ ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ನೆನೆಪಿಸುವ ಕಾರ್ಯಕ್ರಮ ಕಿರುತೆರೆಯಲ್ಲಿ ಪ್ರಸಾರವಾಗಿದೆ.

VISTARANEWS.COM


on

Actor Darshan Renuka Swamy case In colorskannada shantam Paapam
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣ ಆದ ಬಳಿಕ ದರ್ಶನ್‌ (Actor Darshan) ಅವರ ಕೈದಿ ನಂಬರ್‌ ಸಖತ್‌ ಚರ್ಚೆ ಆಗಿತ್ತು. ಇದೀಗ ಈ ಮಧ್ಯೆ ಧಾರಾವಾಹಿಯಲ್ಲಿ ದರ್ಶನ್ ಕಥೆ ಬಂತೇ ಎನ್ನುವ ಪ್ರಶ್ನೆ ಮೂಡಿದೆ. ಕಲರ್ಸ್ ಕನ್ನಡದಲ್ಲಿ ‘ಶಾಂತಂ ಪಾಪಂ’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ನೋಡಿದ ಅನೇಕರಿಗೆ ರೇಣುಕಾ ಸ್ವಾಮಿ ಕೊಲೆ ಕೇಸ್ ನೆನಪಾಗಿದೆ. ಇದೀಗ ಕಲರ್ಸ್‌ ಕನ್ನಡ ಪ್ರೋಮೊ ಹಂಚಿಕೊಂಡಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಸಿನಿಮಾ ಮಾಡುತ್ತಾರಾ? ಎನ್ನುವ ಚರ್ಚೆ ನಡೀತಿತ್ತು. ಕಾರಣ ಆರ್‌ಜಿವಿ ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಇದೀಗ ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ನೆನೆಪಿಸುವ ಕಾರ್ಯಕ್ರಮ ಕಿರುತೆರೆಯಲ್ಲಿ ಪ್ರಸಾರವಾಗಿದೆ.

ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ಹೋಲುವ ಡೇರ್ ಡೆವಿಲ್ ದೇವದಾಸ್ ಎಪಿಸೋಡ್‌ನಲ್ಲಿ ದಾಸ್ ಒಬ್ಬ ಶ್ರೀಮಂತ. ಆದರೆ ಕೊಲೆ ಆರೋಪದಲ್ಲಿ ಆತನನ್ನು ಪೊಲೀಸರು ಬಂಧಿಸುತ್ತಾರೆ. ಮದುವೆ ಆಗಿದ್ದರೂ ಖ್ಯಾತ ಉದ್ಯಮಿ ದಾಸ್ ಒಬ್ಬ ನಟಿಯ ಮೋಹಕ್ಕೆ ಸಿಲುಕಿರುತ್ತಾನೆ. ಆ ನಟಿಗೆ ಒಬ್ಬನಿಂದ ಕೆಟ್ಟ ಕೆಟ್ಟ ಮೆಸೇಜ್‌ಗಳು ಬರಲು ಆರಂಭಿಸುತ್ತದೆ. ಫೇಕ್‌ ಅಕೌಂಟ್‌ಗಳಿಂದ ಅಸಭ್ಯ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿರುತ್ತಾನೆ. ಅದನ್ನು ಆಕೆ ದಾಸ್ ಮುಂದಿಡುತ್ತಾಳೆ. ಅದನ್ನು ಕೇಳಿದ ಆತ ಕೊಲೆ ಮಾಡುತ್ತಾನೆ. ಆತನನ್ನು ಕರೆತಂದು ಒಂದು ಶೆಡ್‌ ಮುಂದೆ ಥಳಿಸುವುದನ್ನು ಪ್ರೋಮೊದಲ್ಲಿ ನೋಡಬಹುದು. ಇದೀಗ ಈ ಪ್ರೋಮೊ ಸಖತ್‌ ವೈರಲ್‌ ಆಗುತ್ತಿದೆ. ಇದು ಪಕ್ಕಾ ರೇಣುಕಾ ಸ್ವಾಮಿ ಕಥೆನೇ ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: Actor Darshan: ಜೈಲಲ್ಲಿ ಮುದ್ದೆ-ಚಿಕನ್‌ ಸಾಂಬಾರ್‌ ಸವಿದ ದರ್ಶನ್;‌ ನಟನ ನೋಡಲು ಮುಗಿಬಿದ್ದ ಕೈದಿಗಳು!

ಈ ಧಾರಾವಾಹಿ ಎಪಿಸೋಡ್ ನೋಡಿದ ಅನೇಕರು ದರ್ಶನ್ ಕಥೆಗೆ ಹೋಲಿಕೆ ಮಾಡಿಕೊಂಡಿದ್ದಾರೆ. ಆಪ್ತೆ ಪವಿತ್ರಾಗೆ ಕಿರುಕುಳ ನೀಡಿದ್ದಕ್ಕೆ ರೇಣುಕಾ ಸ್ವಾಮಿಯನ್ನು ದರ್ಶನ್ ಅವರು ಕೊಲೆ ಮಾಡಿದರು ಎನ್ನಲಾಗಿದೆ. ಈ ಆರೋಪದಲ್ಲಿ ಅರೆಸ್ಟ್ ಆಗಿ ಅವರು ವಿಚಾರಣೆ ಎದುರಿಸುತ್ತಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು (Parappana Agrahara) ಸೇರಿರುವ ನಟ ದರ್ಶನ್‌ (Actor Darshan) ಅವರಿಗೆ ಜೈಲಿನ ಮೆನು ಪ್ರಕಾರವೇ ಊಟ ನೀಡಲಾಗುತ್ತಿದೆ. ಅದರಂತೆ, ಶುಕ್ರವಾರ (ಜೂನ್‌ 28) ರಾತ್ರಿ ದರ್ಶನ್‌ ಅವರಿಗೆ ಚಿಕನ್‌ ಸಾಂಬಾರ್‌, ಮುದ್ದೆ ಹಾಗೂ ಅನ್ನವನ್ನು ನೀಡಲಾಗಿದೆ. ಜೈಲಿನ ಅನ್ನ-ಸಾಂಬಾರ್‌ ತಿಂದು ಬಸವಳಿದಿದ್ದ ದರ್ಶನ್‌ ಅವರಿಗೆ ಚಿಕನ್‌ ಸಾಂಬಾರ್‌ ನೀಡಿರುವುದು ತುಸು ಸಮಾಧಾನ ತಂದಿದೆ. ಮುದ್ದೆ, ಚಿಕನ್‌ ಸಾಂಬಾರ್‌ ಸೇವಿಸಿದ ದರ್ಶನ್‌ ತಡವಾಗಿ ನಿದ್ದೆಗೆ ಜಾರಿದರು ಎಂದು ತಿಳಿದುಬಂದಿದೆ.

ಶನಿವಾರ (ಜೂನ್‌ 29) ಬೆಳಗ್ಗೆ 6 ಗಂಟೆಗೆ ಎದ್ದ ದರ್ಶನ್‌, ಕೆಲಹೊತ್ತು ಜೈಲಿನ ಕೊಠಡಿಯಲ್ಲಿಯೇ ವಾಕಿಂಗ್‌ ಮಾಡಿದರು. ಇದರ ಮಧ್ಯೆಯೇ, ಪದೇಪದೆ ಅನಾರೋಗ್ಯದ ನೆಪ ಹೇಳಿ ಜೈಲು ಆಸ್ಪತ್ರೆ ಕಡೆ ಸುಳಿಯುತ್ತಿದ್ದು, ಜೈಲಧಿಕಾರಿಗಳಿಗೆ ನಟ ತಲೆನೋವಾಗಿದ್ದಾರೆ. ಹೊಟ್ಟೆ ನೋವು, ತಲೆನೋವು ಸೇರಿ ಹಲವು ನೆಪಗಳನ್ನು ಹೇಳಿಕೊಂಡು ಅವರು ಆಸ್ಪತ್ರೆಗೆ ಹೋಗುತ್ತಿದ್ದಾರೆ. ಇದರ ಮಧ್ಯೆಯೇ, ನಟ ದರ್ಶನ್‌ ಅವರನ್ನು ನೋಡಲು ಜೈಲಿನಲ್ಲಿರುವ ಕೈದಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ಕೂಡ ತಿಳಿದುಬಂದಿದೆ.

Continue Reading

ಸ್ಯಾಂಡಲ್ ವುಡ್

Kannada New Movie: ವಿಶ್ವಮಟ್ಟದಲ್ಲಿ ದಾಖಲೆ ಬರೆದ ಕನ್ನಡದ `ಕೆಂಡ’!

Kannada New Movie: ಈ ಹಿಂದೆ ʻಗಂಟುಮೂಟೆʼ ಎಂಬ ಚಿತ್ರ ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದ ರೂಪಾ ರಾವ್ ಕೆಂಡವನ್ನು ನಿರ್ಮಾಣ ಮಾಡಿದ್ದಾರೆ. ಬದುಕಿಗೆ ಹತ್ತಿರಾದ, ಬರಿಗಣ್ಣಿಗೆ ನಿಲುಕದ ಸೂಕ್ಷ್ಮ ಕಥಾನಕದೊಂದಿಗೆ ಸಹದೇವ್ ಕೆಲವಡಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬಿಡುಗಡೆಯ ಹೊಸ್ತಿಲಿನಲ್ಲಿರುವಾಗಲೇ ಕನ್ನಡದ ಕೆಂಡದ ಹವಾ ವಿಶ್ವಾದ್ಯಂತ ಹಬ್ಬಿಕೊಂಡಿದೆ. ಈ ಎಲ್ಲ ಕಾರಣಗಳಿಂದಾಗಿ ಕೆಂಡ ವಿಶಿಷ್ಟ ಚಿತ್ರವಾಗಿ ಪ್ರೇಕ್ಷಕರನ್ನು ಬಹುವಾಗಿ ಸೆಳೆಯುತ್ತಿದೆ.
ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ. \

VISTARANEWS.COM


on

Kannada New Movie Kenda in premier In world wide
Koo

ಬೆಂಗಳೂರು: ಕಂಟೆಂಟು ಗಟ್ಟಿಯಾಗಿದ್ದರೆ ಯಾವುದೇ ಹೈಪು, ಪ್ರಚಾರದ ಪಟ್ಟುಗಳಿಲ್ಲದೆಯೇ ಚಿತ್ರವೊಂದು ಸದ್ದು ಮಾಡಬಲ್ಲದು (Kannada New Movie). ಈ ಮಾತಿಗೆ ಉದಾಹರಣೆಯಂತೆ ಅನೇಕ ಚಿತ್ರಗಳು ಪ್ರೇಕ್ಷಕರನ್ನು ಸೆಳೆದಿವೆ. ದೊಡ್ಡ ಮಟ್ಟದಲ್ಲಿ ಗೆದ್ದಿವೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ಎಲ್ಲ ಲಕ್ಷಣಗಳಿರುವ ಚಿತ್ರ ʻಕೆಂಡ’. ಸಹದೇವ್ ಕೆಲವಡಿ ನಿರ್ದೇಶನದ ಈ ಚಿತ್ರ ಹೆಜ್ಜೆ ಹೆಜ್ಜೆಗೂ ಸುದ್ದಿ ಕೇಂದ್ರದಲ್ಲಿದೆ. ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ಇದೀಗ ಮಾರ್ಟಿನ್ ಸ್ಕಾರ್ಸೆಸೆ, ಆಂಗ್ ಲೀ, ಜಿಮ್ ಜರ್ಮುಷ್, ಸ್ಟೈಕ್ ಲೀ, ಕೋಯೆನ್ ಬ್ರದರ್ಸ್ ಮುಂತಾದ ಘಟಾನುಘಟಿ ನಿರ್ದೇಶಕರಿಗೆ ತರಬೇತಿ ಕೊಟ್ಟಿರುವ ನ್ಯೂಯಾರ್ಕ್‍ನ ಟಿಶ್ ಸ್ಕೂಲ್ ಆಫ್ ಆರ್ಟ್‍ನಲ್ಲಿ ಜೂನ್ 28ರಂದು ಪ್ರದರ್ಶನಗೊಳ್ಳಲಿದೆ.

ಕನ್ನಡದಲ್ಲಿ ತಯಾರುಗೊಂಡಿದ್ದ ಈ ಚಿತ್ರವೀಗ ತಾನೇತಾನಾಗಿ ವಿಶ್ವ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದೆ. ಕನ್ನಡದ `ತಿಥಿ’ ಸಿನಿಮಾದ ಹಾದಿಯಲ್ಲಿ ಮುಂದುವರೆದು, ಜೂನ್ 29ರಂದು ಸ್ವಿಟ್ಜರ್‍ಲ್ಯಾಂಡಿನಲ್ಲಿಯೂ ಕೆಂಡ ಪ್ರದರ್ಶನಗೊಳ್ಳಲಿದೆ. ಇದೇನು ಸಲೀಸಾದ ಹಾದಿಯಲ್ಲ. ತನ್ನ ಕಂಟೆಂಟಿನ ಅಸಲೀ ಕಸುವಿನ ಕಾರಣದಿಂದಲೇ ಅದೆಲ್ಲ ಸಾಧ್ಯವಾಗಿದೆ. ನ್ಯೂಯಾರ್ಕ್‍ನ ಟಿಶ್ ಸ್ಕೂಲ್ ಆಫ್ ಆರ್ಟ್‍ನಲ್ಲಿ ಪ್ರದರ್ಶನ ಕಂಡ ಮೊಟ್ಟ ಮೊದಲ ಕನ್ನಡ ಚಿತ್ರವಾಗಿಯೂ ಕೆಂಡ ದಾಖಲೆ ಬರೆದಿದೆ. ಈ ಹಿಂದೆ ದಾದಾ ಸಾಹೇಬ್ ಫಾಲ್ಕೆ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡಿದ್ದ ಈ ಚಿತ್ರ ಬೆಸ್ಟ್ ಡೆಬ್ಯೂ ಡೈರೆಕ್ಟರ್ ಜ್ಯೂರಿ ಅವಾರ್ಡ್ ಅನ್ನು ಪಡೆದುಕೊಂಡಿತ್ತು. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ಕಾಣುವ ಮೂಲಕ ಮತ್ತೊಂದು ದಾಖಲೆ ಕೆಂಡದ ಖಾತೆಗೆ ಜಮೆಯಾಗಿದೆ.

ಈ ಹಿಂದೆ ʻಗಂಟುಮೂಟೆʼ ಎಂಬ ಚಿತ್ರ ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದ ರೂಪಾ ರಾವ್ ಕೆಂಡವನ್ನು ನಿರ್ಮಾಣ ಮಾಡಿದ್ದಾರೆ. ಬದುಕಿಗೆ ಹತ್ತಿರಾದ, ಬರಿಗಣ್ಣಿಗೆ ನಿಲುಕದ ಸೂಕ್ಷ್ಮ ಕಥಾನಕದೊಂದಿಗೆ ಸಹದೇವ್ ಕೆಲವಡಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬಿಡುಗಡೆಯ ಹೊಸ್ತಿಲಿನಲ್ಲಿರುವಾಗಲೇ ಕನ್ನಡದ ಕೆಂಡದ ಹವಾ ವಿಶ್ವಾದ್ಯಂತ ಹಬ್ಬಿಕೊಂಡಿದೆ. ಈ ಎಲ್ಲ ಕಾರಣಗಳಿಂದಾಗಿ ಕೆಂಡ ವಿಶಿಷ್ಟ ಚಿತ್ರವಾಗಿ ಪ್ರೇಕ್ಷಕರನ್ನು ಬಹುವಾಗಿ ಸೆಳೆಯುತ್ತಿದೆ.
ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ.

Kannada New Movie: ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್‌ಫ್ಲೈ’ ತಂಡ ಸೇರಿದ ಸುಧಾರಾಣಿ!ಇದನ್ನೂ ಓದಿ:

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕೆಂಡ ಶೀಘ್ರದಲ್ಲೇ ತೆರೆಗಾಣಲಿದೆ. ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ಕೆಂಡವನ್ನು ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ. ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶನ, ಪ್ರದೀಪ್ ನಾಯಕ್ ಸಂಕಲನ, ಲಕ್ಷ್ಮಿಕಾಂತ್ ಜೋಶಿ ಕಲಾ ನಿರ್ದೇಶನವಿರುವ ಈ ಚಿತ್ರದಲ್ಲಿ ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಷಿದಿ, ಶರತ್ ಗೌಡ, ಸತೀಶ್ ಕುಮಾರ್, ಅರ್ಚನ ಶ್ಯಾಮ್, ಪೃಥ್ವಿ ಬನವಾಸಿ, ದೀಪ್ತಿ ನಾಗೇಂದ್ರ ಮುಂತಾದವರ ತಾರಾಗಣವಿದೆ.

Continue Reading

ಟಾಲಿವುಡ್

Kalki 2898 AD: ಎರಡನೇ ದಿನವೂ ಒಳ್ಳೆಯ ಗಳಿಕೆ ಕಂಡ  ‘ಕಲ್ಕಿ 2898 ಎಡಿ’ ಸಿನಿಮಾ!

Kalki 2898 AD: ಕಲ್ಕಿ 2898 AD ಜೂನ್ 27 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಯಿತು. ಚಲನಚಿತ್ರವು ಈಗಾಗಲೇ ತನ್ನ ಮುಂಗಡ ಬುಕಿಂಗ್‌ನಲ್ಲಿ ಎಲ್ಲಾ ಭಾಷೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ.ಕರ್ನಾಟಕದಲ್ಲಿ ‘ಕಲ್ಕಿ2898 AD’ ಸಿನಿಮಾ ಅತೀ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಇಲ್ಲದೇ ಇರುವುದರಿಂದ ಕರ್ನಾಟಕದಲ್ಲಿ ಸುಮಾರು 444 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲಾಗಿತ್ತು.

VISTARANEWS.COM


on

Kalki 2898 AD box office day 2 prediction Prabhas
Koo

ಬೆಂಗಳೂರು: ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ (Kalki 2898 AD) ಮತ್ತು ಕಮಲ್ ಹಾಸನ್ ಅಭಿನಯದ ಕಲ್ಕಿ 2898 ಎಡಿ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಮೂರನೇ ಅತಿದೊಡ್ಡ ಓಪನರ್ ಕಂಡ ಸಿನಿಮಾವಾಗಿ ಹೊರಹೊಮ್ಮಿತ್ತು. ಎರಡನೇ ದಿನ ಭಾರದಲ್ಲಿ ಸುಮಾರು 50 ಕೋಟಿ ರೂ. ಗಳಿಕೆ ಕಂಡಿದೆ ಎಂದು ವರದಿಯಾಗಿದೆ. ಒಟ್ಟು ಸಂಗ್ರಹ 150 ಕೋಟಿ ರೂ. ಆಗಿದೆ ಎಂದು ವರದಿಯಾಗಿದೆ. ಈ ಮೂಲಕ ವಿಶ್ವ ಬಾಕ್ಸ್ ಆಫೀಸ್ ಲೆಕ್ಕಾಚಾರವೂ ಸೇರಿದರೆ ಸಿನಿಮಾದ ಒಟ್ಟಾರೆ ಗಳಿಕೆ 300 ಕೋಟಿ ರೂಪಾಯಿ ಸಮೀಪಿಸಿದೆ.

ಶನಿವಾರದಿಂದ ಸಿನಿಮಾ ಕಲೆಕ್ಷನ್‌ನಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ. ಈ ಮುಂಚೆ ಸಲಾರ್‌ ಸಿನಿಮಾ ಎರಡನೇ ದಿನ 147.05 ಕೋಟಿ ರೂ. ಗಳಿಕೆ ಕಂಡಿತ್ತು. ‘ಬಾಹುಬಲಿ 2’ ಎರಡನೇ ದಿನದಲ್ಲಿ 90 ಕೋಟಿ ರೂ. ‘ಆದಿಪುರುಷ’ 2ನೇ ದಿನದಲ್ಲಿ 65.25 ಕೋಟಿ ರೂ ಕಲೆಕ್ಷನ್‌ ಮಾಡಿತ್ತು. ಇವುಗಳಿಗೆ ಹೋಲಿಸಿದರೆ ಕಲ್ಕಿ ಎರಡನೇ ದಿನ ಸಂಗ್ರಹ ಮಾಡಿದ್ದು ತುಂಬಾ ಕಡಿಮೆಯಾಗಿದೆ.

ನಾಗ್ ಅಶ್ವಿನ್ ನಿರ್ದೇಶಿಸಿದ ಕಲ್ಕಿ 2898 AD, ಎಲ್ಲಾ ಭಾಷೆಗಳಲ್ಲಿ ಮೊದಲ ದಿನದಲ್ಲಿ ಭಾರತದಲ್ಲಿ ಸುಮಾರು 95 ಕೋಟಿ ರೂಪಾಯಿ ಗಳಿಸಿತ್ತು, ಆದರೆ ಅದರ ಒಟ್ಟು ಸಂಗ್ರಹವು ಸುಮಾರು 115 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು. ಒಟ್ಟಾರೆಯಾಗಿ, ಚಿತ್ರವು ಮೊದಲ ದಿನ ವಿಶ್ವದಾದ್ಯಂತ 180 ಕೋಟಿ ರೂ ಗಳಿಸಿತ್ತು. ಕಲ್ಕಿ 2898 ಎಡಿ ಸಿನಿಮಾ ಹಲವು ಚಿತ್ರಗಳನ್ನು ಹಿಂದಿಕ್ಕಿತ್ತು. ಅದರಲ್ಲಿ ಕೆಜಿಎಫ್ 2 (ರೂ. 159 ಕೋಟಿ), ಸಲಾರ್ (ರೂ. 158 ಕೋಟಿ), ಲಿಯೋ (ರೂ. 142.75 ಕೋಟಿ) ಸಿನಿಮಾಗಳ ಜಾಗತಿಕ ಆರಂಭಿಕ ದಾಖಲೆಗಳನ್ನು ಹಿಂದಿಕ್ಕಿತ್ತು. ಆದರೆ, ಮೊದಲ ದಿನದ ಗಳಿಕೆಯಲ್ಲಿ ‘ಆರ್​ಆರ್​ಆರ್’ (223) ಹಾಗೂ ‘ಬಾಹುಬಲಿ 2’ (217) ಚಿತ್ರವನ್ನು ಹಿಂದಿಕ್ಕಲು ಈ ಸಿನಿಮಾ ಬಳಿ ಸಾಧ್ಯವಾಗಿಲ್ಲ.’

ಇದನ್ನೂ ಓದಿ: Kalki 2898 AD 2: ಶೀಘ್ರದಲ್ಲೇ ಬರಲಿದೆ ಕಲ್ಕಿ 2898ಎಡಿ ಭಾಗ- 2!

ಕರ್ನಾಟಕದಲ್ಲಿ ‘ಕಲ್ಕಿ2898 AD’ ಸಿನಿಮಾ ಅತೀ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಇಲ್ಲದೇ ಇರುವುದರಿಂದ ಕರ್ನಾಟಕದಲ್ಲಿ ಸುಮಾರು 444 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 219 ಸ್ಕ್ರೀನ್‌ಗಳಲ್ಲಿ ತೆಲುಗು, 100 ಸ್ಕ್ರೀನ್‌ಗಳಲ್ಲಿ ಕನ್ನಡ, 85 ಸ್ಕ್ರೀನ್‌ಗಳಲ್ಲಿ ಹಿಂದಿ, 40 ಸ್ಕ್ರೀನ್‌ಗಳಲ್ಲಿ ತಮಿಳು ಭಾಷೆಯ ಕಲ್ಕಿ ರಿಲೀಸ್ ಆಗಿದ್ದವು. ಈ ನಾಲ್ಕು ಭಾಷೆಗಳಿಂದ ಕರ್ನಾಟಕದಲ್ಲಿ ‘ಕಲ್ಕಿ2898 AD’ ಗಳಿಸಿದ್ದು ಬರೋಬ್ಬರಿ 6.7 ಕೋಟಿ ರೂಪಾಯಿ (Nett) ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಕೊಟ್ಟಿದ್ದಾರೆ.

ಕಲ್ಕಿ 2898 AD ಜೂನ್ 27 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಯಿತು. ಚಲನಚಿತ್ರವು ಈಗಾಗಲೇ ತನ್ನ ಮುಂಗಡ ಬುಕಿಂಗ್‌ನಲ್ಲಿ ಎಲ್ಲಾ ಭಾಷೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ.

ವಿಶ್ವದಾದ್ಯಂತ (world) ತೆರೆಗೆ ಬಂದ ಅತ್ಯಂತ ದುಬಾರಿ ಚಿತ್ರ (film) ʼಕಲ್ಕಿ 2898 ಎಡಿʼ (Kalki 2898AD) ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಇದು ಹಿಂದೂ ಧರ್ಮದ (hindu dharma) ವಿಷಯದ ಮೇಲೆ ಕೇಂದ್ರೀಕೃತವಾಗಿರುವುದು. ಭಗವಾನ್ ವಿಷ್ಣುವಿನ (baghavan vishnu) 10ನೇ ಅವತಾರ ಕಲ್ಕಿ (kalki). ಸದಾಚಾರ ಮತ್ತು ನೈತಿಕ ನಡವಳಿಕೆಯನ್ನು ಉತ್ತೇಜಿಸುವ ಕಲ್ಕಿ, ಕಲಿಯುಗವನ್ನು ಕೊನೆಗೊಳಿಸಿ ಮತ್ತೆ ಸತ್ಯಯುಗದ ಸುವರ್ಣ ಯುಗವನ್ನು ಪ್ರಾರಂಭಿಸುತ್ತಾನೆ ಎಂದು ನಂಬಲಾಗಿದೆ.

ಕಲ್ಕಿಯ ಆಗಮನವು ಹಿಂದೂಗಳಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ಈತ ಕಲಿಯುಗದ ಅಂತ್ಯದಲ್ಲಿ ಕಾಣಿಸಿಕೊಳ್ಳುತ್ತಾನೆ ಎಂದೇ ಭಾವಿಸಲಾಗಿದೆ. ಕಲಿಯುಗ ವಂಚನೆ, ಪಾಪ ಮತ್ತು ಅನೈತಿಕತೆಯಿಂದ ತುಂಬಿರುವ ಯುಗವಾಗಿದೆ. ಇದೀಗ ತೆರೆಗೆ ಬಂದಿರುವ ‘ಕಲ್ಕಿ 2898 ಎಡಿ’ ಈ ಕುರಿತು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ತೆಲುಗು ಸೂಪರ್‌ಸ್ಟಾರ್ ಪ್ರಭಾಸ್, ಬಾಲಿವುಡ್ ತಾರೆಗಳಾದ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ತಮಿಳಿನ ಹಿರಿಯ ನಟ ಕಮಲ್ ಹಾಸನ್ ಒಳಗೊಂಡ ಈ ಚಿತ್ರದಲ್ಲಿ ಪೌರಾಣಿಕ ಕಥೆ ಮತ್ತು ವಿಜ್ಞಾನವನ್ನು ಹದವಾಗಿ ಬೆರೆಸಿ ಅದ್ಭುತವಾಗಿ ನಿರ್ಮಿಸಲಾಗಿದೆ. ನಾಗ್ ಅಶ್ವಿನ್ ನಿರ್ದೇಶನದ ಬಹುತೇಕ ಎಲ್ಲಾ ಪ್ರಮುಖ ಪಾತ್ರಗಳನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಗುರುತಿಸಬಹುದು. ಟ್ರೇಲರ್‌ನಲ್ಲಿ ಭವಿಷ್ಯ ನುಡಿದ ಕಲ್ಕಿಯ ಗುರುತಿನ ಬಗ್ಗೆ ಅಶ್ವಿನ್ ಯಾವುದೇ ಸುಳಿವು ನೀಡಲಿಲ್ಲ.

Continue Reading
Advertisement
Love Failure
ರಾಯಚೂರು5 mins ago

Love Failure : ಅತ್ತಿಗೆ ತಂಗಿಯ ಪ್ರೀತಿ ಸಿಗದ್ದಕ್ಕೆ ಫ್ಯಾನಿಗೆ ನೇಣು ಬಿಗಿದುಕೊಂಡ ಹುಚ್ಚು ಪ್ರೇಮಿ

Gold Rate Today
ಪ್ರಮುಖ ಸುದ್ದಿ16 mins ago

Gold Rate Today: ತುಸು ಏರಿಕೆ ಕಂಡ ಚಿನ್ನದ ಬೆಲೆ; ಇಷ್ಟಿದೆ ಇಂದಿನ ದರ

ಬಾಲಿವುಡ್25 mins ago

Asha Bhosle: ಹಿರಿಯ ಗಾಯಕಿ ಆಶಾ ಭೋಂಸ್ಲೆ ಪಾದಕ್ಕೆ ಮುತ್ತಿಟ್ಟು, ಪನ್ನೀರಿನಿಂದ ತೊಳೆದು ನಮಸ್ಕರಿಸಿದ ಸೋನು ನಿಗಮ್

karnataka Rain
ಮಳೆ33 mins ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

Mohan Bhagwat
ದೇಶ41 mins ago

Mohan Bhagwat: ಮುಕೇಶ್‌ ಅಂಬಾನಿ ನಿವಾಸಕ್ಕೆ ಆಗಮಿಸಿದ ಮೋಹನ್‌ ಭಾಗವತ್‌; ಕೈ ಮುಗಿದು ಸ್ವಾಗತಿಸಿದ ನೀತಾ ಅಂಬಾನಿ

Kalki 2898 AD Yash calls visually stunning spectacle
ಟಾಲಿವುಡ್56 mins ago

Kalki 2898 AD: ʻಕಲ್ಕಿʼ ಸಿನಿಮಾ ಹಾಡಿ ಹೊಗಳಿದ ರಾಕಿಂಗ್‌ ಸ್ಟಾರ್‌ ಯಶ್‌!

IND vs SA Final
ಕ್ರೀಡೆ59 mins ago

IND vs SA Final: ವಿಶ್ವಕಪ್​ ಗೆಲ್ಲಲು ಕೊಹ್ಲಿ, ರೋಹಿತ್​, ದ್ರಾವಿಡ್​ಗೆ ಇದು ಕೊನೆಯ ಅವಕಾಶ!

Law And Order
ಕರ್ನಾಟಕ1 hour ago

Law And Order: ಗದಗ, ರಾಯಚೂರಿನಲ್ಲಿ ಪೊಲೀಸರ ಮೇಲೆಯೇ ಹಲ್ಲೆ; ಕಾನೂನು ಸುವ್ಯವಸ್ಥೆ ಗತಿ ಏನು?

Actor Darshan Renuka Swamy case In colorskannada shantam Paapam
ಸ್ಯಾಂಡಲ್ ವುಡ್1 hour ago

Actor Darshan: ‘ಶಾಂತಂ ಪಾಪಂ’ ಕಿರುತೆರೆ ಶೋನಲ್ಲಿ ದರ್ಶನ್‌ ಕಥೆ? ಏನಿದು ಡೇರ್ ಡೆವಿಲ್ ದೇವದಾಸ್‌ ಡೆಡ್ಲಿ ಕಹಾನಿ?

Isha Ambani
ವಾಣಿಜ್ಯ1 hour ago

Isha Ambani: ತಾನು ಅವಳಿ ಮಕ್ಕಳಿಗೆ ತಾಯಿಯಾಗಿದ್ದು ಐವಿಎಫ್ ಮೂಲಕ ಎಂದ ಇಶಾ ಅಂಬಾನಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ33 mins ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ17 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ24 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

ಟ್ರೆಂಡಿಂಗ್‌