Shikhar Dhawan: ನಿಷ್ಕಲ್ಮಶ ಮನಸ್ಸಿನಿಂದ ವಿಶ್ವಕಪ್​ ತಂಡಕ್ಕೆ ಶುಭ ಹಾರೈಸಿದ ಧವನ್​ - Vistara News

ಕ್ರಿಕೆಟ್

Shikhar Dhawan: ನಿಷ್ಕಲ್ಮಶ ಮನಸ್ಸಿನಿಂದ ವಿಶ್ವಕಪ್​ ತಂಡಕ್ಕೆ ಶುಭ ಹಾರೈಸಿದ ಧವನ್​

ಭಾರತ ತಂಡ ವಿಶ್ವಕಪ್​ ಗೆದ್ದು ಸಂಭ್ರಮಿಸಲಿ ಎಂದು ವಿಶ್ವಕಪ್​ ತಂಡದಲ್ಲಿ ಸ್ಥಾನ ಸಿಗದ ಎಡಗೈ ಆಟಗಾರ ಶಿಖರ್​ ಧವನ್(Shikhar Dhawan)​ ಅವರು ತಂಡಕ್ಕೆ ಹಾರೈಸಿದ್ದಾರೆ.

VISTARANEWS.COM


on

Indian cricketer shikhar dhawan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಏಕದಿನ ವಿಶ್ವಕಪ್(ICC World Cup 2023)​ ಕ್ರಿಕೆಟ್​ನಲ್ಲಿ ಭಾರತ ತಂಡ ಶ್ರೇಷ್ಠ ಪ್ರದರ್ಶನ ತೋರುವಂತಾಗಲಿ, ವಿಶ್ವಕಪ್​ ಗೆದ್ದು ಸಂಭ್ರಮಿಸಲಿ ಎಂದು ವಿಶ್ವಕಪ್​ ತಂಡದಲ್ಲಿ ಸ್ಥಾನ ಸಿಗದ ಎಡಗೈ ಆಟಗಾರ ಶಿಖರ್​ ಧವನ್(Shikhar Dhawan)​ ಅವರು ಹಾರೈಸಿದ್ದಾರೆ. ಉತ್ತಮ ಫಾರ್ಮ್​ನಲ್ಲಿದ್ದರೂ ಕಳೆದ ಒಂದು ವರ್ಷಗಳಿಂದ ಧವನ್​ ಅವರಿಗೆ ಭಾರತ ತಂಡದಲ್ಲಿ ಅವಕಾಶ ನೀಡದೆ ಕಡೆಗಣಿಸಲಾಗಿದೆ. ಆದರೂ ಈ ವಿಚಾರದ ಬಗ್ಗೆ ಧವನ್​ ಇದುವರೆಗೆ ಆಯ್ಕೆ ಸಮಿತಿಯ ಬಗ್ಗೆಯಾಗಲಿ ಬಿಸಿಸಿಐ ವಿರುದ್ಧವೂ ಯಾವುದೇ ಆಕ್ಷೇಪ ಮತ್ತು ಆರೋಪವನ್ನು ಮಾಡಿಲ್ಲ. ಭಾರತ ತಂಡ ವಿಶ್ವಕಪ್​ ಗೆಲ್ಲಬೇಕು ಎನ್ನುವುದು ಅವರ ಕನಸಗಿದೆ.

ಟ್ವಿಟರ್​ನಲ್ಲಿ ತಂಡಕ್ಕೆ ಶುಭಹಾರೈಕೆ

ಮಂಗಳವಾರದಂದು ಏಕದಿನ ವಿಶ್ವಕಪ್​ಗೆ 15 ಮಂದಿ ಸದಸ್ಯರ ಟೀಮ್ ಇಂಡಿಯಾ(icc world cup india squad) ಪ್ರಕಟಗೊಂಡಿತ್ತು. ಆದರೆ ಹಲವು ಅನುಭವಿಗಳಿಗೆ ಇಲ್ಲಿ ಅವಕಾಶ ಸಿಗಲಿಲ್ಲ. ಇದೇ ವಿಚಾರವಾಗಿ ಕೆಲ ಆಟಗಾರರು ಆಯ್ಕೆ ಸಮಿತಿಯ ವಿರುದ್ಧ ಪರೋಕ್ಷವಾಗಿ ಬೇಸರ ಹೊರಹಾಕಿದ್ದರು.​ ಆದರೆ ಧವನ್​ ಮಾತ್ರ ನಿಷ್ಕಲ್ಮಶ ಮನಸ್ಸಿನಿಂದ ಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದು ವಿಶ್ವಕಪ್ ಗೆಲ್ಲುವಂತೆ ಶುಭ ಹಾರೈಸಿ ಟ್ವೀಟ್​ ಮಾಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದಿದ್ದಾರೆ.

ಹಲವು ಪ್ರಮುಖ ಟೂರ್ನಿ ಆಡಿದ್ದಾರೆ ಶಿಖರ್​

ಶಿಖರ್​ ಧವನ್​ ಅವರು 2013 ಹಾಗೂ 2017ರ ಚಾಂಪಿಯನ್ಸ್ ಟ್ರೋಫಿ, 2015ರ ವಿಶ್ವಕಪ್ ಟೂರ್ನಿ ಹಾಗೂ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಅಮೋಘ ಪ್ರದರ್ಶನ ತೋರಿದ್ದರು. ಅದರಲ್ಲೂ 2019ರಲ್ಲಿ ಲಂಡನ್​ನಲ್ಲಿ ನಡೆದ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಫೋಟಕ ಬ್ಯಾಟಿಂಗ್​ ನಡೆಸಿ ಶತಕ ಬಾರಿಸಿದ್ದರು. ಆದರೆ ಅದೇ ಪಂದ್ಯದಲ್ಲಿ ಹೆಬ್ಬೆರಳಿಗೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಇದಾದ ಬಳಿಕ ಅವರಿಗೆ ಸರಿಯಾದ ಅವಕಾಶ ಸಿಗಲೇ ಇಲ್ಲ.

ಇದನ್ನೂ ಓದಿ ICC Ranking : ಏಕ ದಿನ ಶ್ರೇಯಾಂಕ ಪಟ್ಟಿಯಲ್ಲಿ ಶುಭ್​ಮನ್​ ಗಿಲ್​ಗೆ ಭರ್ಜರಿ ಬಡ್ತಿ

ಶಿಖರ್​ ಧವನ್​ ಅವರು ಭಾರತ ಪರ ಒಟ್ಟು 167 ಏಕದಿನ ಪಂದ್ಯಗಳನ್ನು ಆಡಿದ್ದು, 6793 ರನ್​ ಬಾರಿಸಿದ್ದಾರೆ. ಇದರಲ್ಲಿ 39 ಅಧರ್ಶತಕ ಮತ್ತು 17 ಶತಕ ಒಳಗೊಂಡಿದೆ. 143 ರನ್​ ಅವರ ಗರಿಷ್ಠ ಮೊತ್ತವಾಗಿದೆ. ಟೆಸ್ಟ್​ ಕ್ರಿಕೆಟ್​ನಲ್ಲಿ 34 ಪಂದ್ಯ ಆಡಿ 2315 ಗಳಿಸಿದ್ದಾರೆ. 7 ಶತಕ ಮತ್ತು 5 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ ಉತ್ತಮ ದಾಖಲೆ ಹೊಂದಿರುವ ಧವನ್​ 68 ಪಂದ್ಯ ಆಡಿ 1759 ರನ್​ ಕಲೆಹಾಕಿದ್ದಾರೆ. 11 ಅರ್ಧಶತಕ ಬಾರಿಸಿದ್ದಾರೆ.

ಏಕದಿನ ವಿಶ್ವಕಪ್​ಗೆ ಭಾರತ ತಂಡ

ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌, ಅಕ್ಷರ್​ ಪಟೇಲ್‌, ಸೂರ್ಯಕುಮಾರ್‌.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Virat Kohli : ನಿವೃತ್ತಿ ಬಳಿಕ ಪತ್ನಿ ಜತೆ ಲಂಡನ್​ಗೆ ತೆರಳಿ ನೆಲೆಸಲಿದ್ದಾರೆ ವಿರಾಟ್​ ಕೊಹ್ಲಿ,

Virat kohli : ಅನುಷ್ಕಾ ಮತ್ತು ವಿರಾಟ್ ಆಗಾಗ್ಗೆ ಲಂಡನ್​ಗೆ ಭೇಟಿ ನೀಡುತ್ತಿರುವ ಕಾರಣ ಈ ಊಹಾಪೋಹಗಳು ಎದ್ದಿವೆ. . 2023 ರಲ್ಲಿ, ವಿರಾಟ್ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ವಿರಾಮ ತೆಗೆದುಕೊಂಡು ಲಂಡನ್​​ನಲ್ಲಿ ಅನುಷ್ಕಾ ಅವರೊಂದಿಗೆ ಸ್ವಲ್ಪ ಸಮಯ ಕಳೆದರು. ವೈರಲ್ ಫೋಟೋದಲ್ಲಿ ಅನುಷ್ಕಾ ಮತ್ತು ವಿರಾಟ್ ಲಂಡನ್​​​ ರೆಸ್ಟೋರೆಂಟ್ ಹೊರಗೆ ಕಾಣಿಸಿಕೊಂಡಿದ್ದರು.

VISTARANEWS.COM


on

Virat kohli
Koo

ಬೆಂಗಳೂರು: ಸ್ಟಾರ್​ ಬ್ಯಾಟರ್ ವಿರಾಟ್​ ಕೊಹ್ಲಿಯ (Virat Kohli) ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ಪ್ರಸ್ತುತ ತಮ್ಮ ಇಬ್ಬರು ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಜತೆ ಲಂಡನ್​​ನಲ್ಲಿದ್ದಾರೆ. ಬಾರ್ಬಡೋಸ್​​ನಿಂದ ಭಾರತಕ್ಕೆ ಮರಳಿದ ವಿರಾಟ್ ಕೊಹ್ಲಿ ತಕ್ಷಣವೇ ಲಂಡನ್​ಗೆ ಹೋಗಿದ್ದಾರೆ. ಜೂನ್ 29ರಂದು ಟೀಮ್ ಇಂಡಿಯಾ ಟಿ 20 ವಿಶ್ವಕಪ್ ಗೆದ್ದ ತಕ್ಷಣವೇ ಕೊಹ್ಲಿ 20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಲಂಡನ್​ಗೆ ತೆರಳಿರುವ ಅವರು ಭವಿಷ್ಯದಲ್ಲಿ ಕಾಯಂ ಅಲ್ಲೇ ನೆಲೆಗೊಳ್ಳಲಿದ್ದರೆ ಎಂಬುದಾಗಿ ಹೇಳಲಾಗಿದೆ.

ಅನುಷ್ಕಾ ಮತ್ತು ವಿರಾಟ್ ಆಗಾಗ್ಗೆ ಲಂಡನ್​ಗೆ ಭೇಟಿ ನೀಡುತ್ತಿರುವ ಕಾರಣ ಈ ಊಹಾಪೋಹಗಳು ಎದ್ದಿವೆ. . 2023 ರಲ್ಲಿ, ವಿರಾಟ್ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ವಿರಾಮ ತೆಗೆದುಕೊಂಡು ಲಂಡನ್​​ನಲ್ಲಿ ಅನುಷ್ಕಾ ಅವರೊಂದಿಗೆ ಸ್ವಲ್ಪ ಸಮಯ ಕಳೆದರು. ವೈರಲ್ ಫೋಟೋದಲ್ಲಿ ಅನುಷ್ಕಾ ಮತ್ತು ವಿರಾಟ್ ಲಂಡನ್​​​ ರೆಸ್ಟೋರೆಂಟ್ ಹೊರಗೆ ಕಾಣಿಸಿಕೊಂಡಿದ್ದರು. ಅಕಾಯ್ ಅವರ ಜನನವನ್ನು ಘೋಷಿಸಿದ ಕೆಲವು ದಿನಗಳ ನಂತರ ವಿರಾಟ್ ಲಂಡನ್​ನ ರೆಸ್ಟೋರೆಂಟ್​​ನಲ್ಲಿ ವಮಿಕಾ ಅವರೊಂದಿಗೆ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Narendra Modi : ಚಾಂಪಿಯನ್ನರ ಜತೆ ಸ್ಮರಣೀಯ ಸಂಭಾಷಣೆ; ಭಾರತ ಕ್ರಿಕೆಟ್ ತಂಡದ ಜತೆಗಿನ ಮಾತುಕತೆಯ ವಿಡಿಯೊ ಬಿಡುಗಡೆ ಮಾಡಿದ ಮೋದಿ

ಅನುಷ್ಕಾ ಶರ್ಮಾ ತನ್ನ ಗರ್ಭಧಾರಣೆಯ ಹಲವಾರು ತಿಂಗಳುಗಳನ್ನು ಲಂಡನ್​ನಲ್ಲಿ ಕಳೆದರು ಎಂದು ವರದಿಯಾಗಿದೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಮಗನ ಜನನದ ಸುದ್ದಿಯನ್ನು ಐದು ದಿನಗಳ ನಂತರ ಘೋಷಿಸಿದ್ದರು. ಅಲ್ಲಿಯವರೆಗೆ ಅಭಿಮಾನಿಗಳಿಗೆ ಅಕಾಯ್ ಜನನದ ಬಗ್ಗೆ ಯಾವುದೇ ಸುಳಿವು ಇರಲಿಲ್ಲ . ವಿರಾಟ್ ಕೊಹ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ತಮ್ಮ ಎರಡನೇ ಮಗುವಿನ ಜನನಕ್ಕಾಗಿ ಇಂಗ್ಲೆಂಡ್​​ ಪ್ರಯಾಣಿಸಿದ್ದಾರೆ ಎಂದು ವರದಿಗಳು ಹೇಳಿದವು.

ಬಾಲಿವುಡ್ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಿಂದ ಅನುಷ್ಕಾ ಶರ್ಮಾ ಅನುಪಸ್ಥಿತಿಯೂ ಈ ಊಹಾಪೋಹಗಳಿಗೆ ಕಾರಣವಾಯಿತು. ಕಳೆದ ವರ್ಷ ನಟಿ ಇನ್ನು ಮುಂದೆ ಹೆಚ್ಚು ಚಲನಚಿತ್ರಗಳನ್ನು ಮಾಡಲು ಬಯಸುವುದಿಲ್ಲ ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲು ಬಯಸುವೆ ಎಂದಿದ್ದರು. “ನನಗೆ ನಟನೆ ಇಷ್ಟ. ನಾನು ಮೊದಲು ಮಾಡಿದಷ್ಟು ಹೆಚ್ಚು ಚಲನಚಿತ್ರಗಳನ್ನು ಮಾಡಲು ಇಷ್ಟಪಡುವುದಿಲ್ಲ . ನಾನು ವರ್ಷಕ್ಕೆ ಒಂದು ಚಿತ್ರ ಮಾಡಲು ಬಯಸುತ್ತೇನೆ. ಹೆಚ್ಚಾಗಿ ಕುಟುಂಬಕ್ಕೆ ಸಮಯ ನೀಡಲು ಬಯಸುತ್ತೇನೆ” ಎಂದು ಅವರು ಹೇಳಿದ್ದರು.

ವಿರಾಟ್ ಕೊಹ್ಲಿ ಕೂಡ ಲಂಡನ್​​ನಲ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಾರೆ ಎಂದು ಆಗಾಗ್ಗೆ ವ್ಯಕ್ತಪಡಿಸಿದ್ದರು. “ಕುಟುಂಬದೊಂದಿಗೆ ಸಮಯ ಕಳೆಯಲು ಸಿಗುವ ಅವಕಾಶಕ್ಕಾಗಿ ದೇವರಿಗೆ ಕೃತಜ್ಞತೆ ಹೇಳುವೆ. ಸಾಮಾನ್ಯ ವ್ಯಕ್ತಿಯಾಗಿ ಅಲ್ಲಿರುವುದು ಖುಷಿ ” ಎಂದು ವಿರಾಟ್ ಕೊಹ್ಲಿ ಹೇಳಿದ್ದರು.

ಸ್ಟಾರ್ ಕ್ರಿಕೆಟಿಗ ಕೊಹ್ಲಿ ಮೇ ತಮ್ಮ ಅಭಿಪ್ರಾಯ ಹೇಳಿದ್ದರು. “ನಾನು ಕ್ರಿಕೆಟ್​​ ಮುಗಿದ ನಂತರ ಕುಟುಂಬದ ಜತೆ ಹೋಗುತ್ತೇನೆ. ನೀವು ಸ್ವಲ್ಪ ಸಮಯದವರೆಗೆ ನೋಡಲು ಆಗುವುದಿಲ್ಲ. ಆದ್ದರಿಂದ ನಾನು ಆಡುವ ಸಮಯದವರೆಗೆ ನನ್ನಲ್ಲಿರುವ ಎಲ್ಲವನ್ನೂ ನೀಡಲು ನಾನು ಬಯಸುತ್ತೇನೆ ಎಂದು ಹೇಳಿದ್ದರು

ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಅನುಷ್ಕಾ ಮತ್ತು ವಿರಾಟ್ ಯುಕೆ ಮೂಲದ ಕಂಪನಿಯ ನಿರ್ದೇಶಕರಾಗಿದ್ದಾರೆ. ಯುಕೆ ಸರ್ಕಾರದ ಫೈಂಡ್ ಅಂಡ್ ಅಪ್ಡೇಟ್ ಕಂಪನಿಯ ಮಾಹಿತಿ ಸೇವೆಯ ಪ್ರಕಾರ, ದಂಪತಿಗಳು ಮ್ಯಾಜಿಕ್ ಲ್ಯಾಂಪ್​​ನ ಮೂವರು ನಿರ್ದೇಶಕರಲ್ಲಿ ಇಬ್ಬರು. ಇದು ಆಗಸ್ಟ್ 1, 2022 ರಂದು ಆರಂಭಗೊಂಡ ಸಲಹಾ ಸಂಸ್ಥೆಯಾಗಿದೆ. ಕಂಪನಿಯ ಅಧಿಕೃತ ಕಚೇರಿ ವಿಳಾಸವು ಯುಕೆಯ ವೆಸ್ಟ್ ಯಾರ್ಕ್​ಶೈರ್​ನಲ್ಲಿದೆ.

Continue Reading

ಪ್ರಮುಖ ಸುದ್ದಿ

Narendra Modi : ಚಾಂಪಿಯನ್ನರ ಜತೆ ಸ್ಮರಣೀಯ ಸಂಭಾಷಣೆ; ಭಾರತ ಕ್ರಿಕೆಟ್ ತಂಡದ ಜತೆಗಿನ ಮಾತುಕತೆಯ ವಿಡಿಯೊ ಬಿಡುಗಡೆ ಮಾಡಿದ ಮೋದಿ

Narendra Modi: ಮೋದಿ ಹಾಗೂ ಕ್ರಿಕಟಿಗರ ನಡುವಿನ ಸಂಭ್ರಮದ ಕ್ಷಣಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಕ್ರಿಕೆಟಿಗರು ಚಾಂಪಿಯನ್ ಎಂದು ಬರೆದುಕೊಂಡಿದ್ದ ಜೆರ್ಸಿಯನ್ನ ಧರಿಸಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು, ಮೋದಿಯೊಂದಿಗೆ ಕೈ ಕುಲುಕಿ ಮಾತನಾಡಿರುವುದು, ಟ್ರೋಫಿಯೊಂದಿಗೆ ಫೋಟೊ ತೆಗೆಸಿಕೊಂಡಿರುವುದು ವಿಶೇವಾಗಿತ್ತು.

VISTARANEWS.COM


on

Narendra Modi
Koo

ಬೆಂಗಳೂರು: ವೆಸ್ಟ್​​ ಇಂಡೀಸ್ ಹಾಗೂ ಅಮೆರಿಕದ ಆತಿಥ್ಯದಲ್ಲಿ ನಡೆದ ಟಿ20 ವಿಶ್ವ ಕಪ್​ನಲ್ಲಿ (T20 World Cup) ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಕ್ರಿಕೆಟ್​ ಪ್ರೇಮಿಗಳ ಪಾಲಿಗೆ ಅತ್ಯಂತ ಸಂಭ್ರಮದ ವಿಷಯ. ಅಂತೆಯೇ ಭಾರತಕ್ಕೆ ವಾಪಸಾದ ಟೀಮ್ ಇಂಡಿಯಾ ಸದಸ್ಯರಿಗೆ ಮುಂಬೈನ ಬೀದಿ ಬೀದಿಗಳಲ್ಲಿ ಅದ್ಧೂರಿ ಸ್ವಾಗತ ದೊರಕಿದೆ. ತೆರೆದ ಬಸ್​​ನಲ್ಲಿ ಮೆರವಣಿ, ಐತಿಹಾಸಿಕ ವಾಂಖೆಡೆ ಸ್ಟೇಡಿಯಮ್​​ನಲ್ಲಿ ಅವಿಸ್ಮರಣೀಯ ಸಮಾರಂಭವನ್ನೂ ಆಯೋಜಿಸಲಾಗಿತ್ತು. ಈ ಎಲ್ಲ ಕ್ಷಣಗಳು ಭಾರತೀಯ ಕ್ರಿಕೆಟ್ ಇತಿಹಾಸದ ಪುಸ್ತಕದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಲಾಗಿದೆ. ಆದರೆ, ಇದಕ್ಕಿಂತ ಮೊದಲು ಭಾರತಕ್ಕೆ ಏರ್​ ಇಂಡಿಯಾದ ವಿಶೇಷ ವಿಮಾನದಲ್ಲಿ ಬಂದಿಳಿದ ಚಾಂಪಿಯನ್ ಭಾರತ ತಂಡಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ತಮ್ಮ ನಿವಾಸದಲ್ಲಿ ವಿಶೇಷ ಆತಿಥ್ಯ ನೀಡಿದ್ದರು. ಗುರುವಾರ (ಜುಲೈ4ರಂದು) ಬೆಳಗ್ಗೆ 11 ಗಂಟೆಯಿಂದ 12 ಗಂಟೆಯ ತನಕ ಮೋದಿ ಕ್ರಿಕೆಟಿಗರೊಂದಿಗೆ ಮಾತುಕತೆ ನಡೆಸಿದ್ದರು.

ಮೋದಿ ಹಾಗೂ ಕ್ರಿಕಟಿಗರ ನಡುವಿನ ಸಂಭ್ರಮದ ಕ್ಷಣಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಕ್ರಿಕೆಟಿಗರು ಚಾಂಪಿಯನ್ ಎಂದು ಬರೆದುಕೊಂಡಿದ್ದ ಜೆರ್ಸಿಯನ್ನ ಧರಿಸಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು, ಮೋದಿಯೊಂದಿಗೆ ಕೈ ಕುಲುಕಿ ಮಾತನಾಡಿರುವುದು, ಟ್ರೋಫಿಯೊಂದಿಗೆ ಫೋಟೊ ತೆಗೆಸಿಕೊಂಡಿರುವುದು ವಿಶೇವಾಗಿತ್ತು. ಕೊನೆಯಲ್ಲಿ ಮೋದಿ ಅವರಿಗೆ ಚಾಂಪಿಯನ್​ ಎಂದು ಬರೆದಿದ್ದ 1 ಸಂಖ್ಯೆಯ ಜೆರ್ಸಿಯನ್ನೂ ನೀಡಿದ್ದರು. ಈ ಎಲ್ಲ ಕ್ಷಣಗಳು ಮೋದಿ ಅವರಿಗೆ ಖುಷಿ ಕೊಟ್ಟಿತ್ತು. ಈ ಬಗ್ಗೆ ಅವರು ಶುಕ್ರವಾರ ಸೋಶಿಯಲ್ ಮೀಡಿಯಾ ಪೋಸ್ಟ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅವರು ‘ವಿಶ್ವ ಟಿ 20 ಚಾಂಪಿಯನ್ ಭಾರತೀಯ ಕ್ರಿಕೆಟ್ ತಂಡದೊಂದಿಗೆ ಅವಿಸ್ಮರಣೀಯ ಸಂಭಾಷಣೆ,’ ಎಂದು ಬರೆದುಕೊಂಡಿದ್ದಾರೆ.

ವಿಶ್ವ ಕಪ್​ ಗೆದ್ದುಕೊಂಡು ಭಾರತಕ್ಕೆ ಬಂದಿದ್ದ ಆಟಗಾರರಿಗೆ ಪ್ರೇರಣಾದಾಯಕ ಮಾತುಗಳಿಂದ ಮೋದಿ ಹುರಿದುಂಬಿಸಿದ್ದರು. ಅಲ್ಲದೆ ಆಟಗಾರರು ಕಠಿಣ ಹಾಗೂ ಒತ್ತಡದ ಸಂದರ್ಭದಲ್ಲಿ ತೋರಿದ ಮನಸ್ಥಿತಿಯನ್ನು ಹೊಗಳಿದ್ದರು. ಈ ಎಲ್ಲ ಮಾತುಕತೆಯ ತುಣುಕುಗಳನ್ನು ಒಟ್ಟಾಗಿಸಿ ಸಣ್ಣ ವಿಡಿಯೊವೊಂದನ್ನು ಮಾಡಿ ನರೇಂದ್ರ ಮೋದಿ ಅವರು ಅಧಿಕೃತ ಹ್ಯಾಂಡಲ್​ ಮೂಲಕ ಶೇರ್ ಮಾಡಲಾಗಿದೆ.

ಯೂಟ್ಯೂಬ್ ಮೂಲಕ ಬಿಡುಗಡೆ ಮಾಡಿರುವ ವಿಡಿಯೊ ಸುಮಾರು 41 ನಿಮಿಷವಿದೆ. ಅದರಲ್ಲಿ ಆಟಗಾರರು ಹಾಗೂ ಮೋದಿ ನಡುವಿನ ನೇರ ಸಂಭಾಷಣೆಯಿದೆ. ಕೋಚ್​ ದ್ರಾವಿಡ್​, ನಾಯಕ ರೋಹಿತ್​, ಸ್ಟಾರ್ ಬ್ಯಾಟರ್​ ವಿರಾಟ್​ ಸೇರಿದಂತೆ ಎಲ್ಲರ ನಡುವಿನ ಸಂಭಾಷಣೆಯನ್ನು ವಿಡಿಯೊ ಮೂಲಕ ವೀಕ್ಷಿಸಬಹುದು.

ಇದನ್ನೂ ಓದಿ: T20 World Cup :​ ವಿಜಯೋತ್ಸವದ ಕ್ಷಣಗಳನ್ನು ಉಲ್ಲೇಖಿಸಿ ಬಿಸಿಸಿಐಗೆ ಕುಟುಕಿದ ಆದಿತ್ಯ ಠಾಕ್ರೆ

ಮೋದಿ ಅವರ ಜತೆ ಆಟಗಾರರು ಉಪಾಹಾರ ಸೇವಿಸಿದರು. ನಂತರ ಕೆಲ ಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಮೋದಿ ವಿಶ್ವಕಪ್‌ ಹೀರೋಗಳನ್ನು ಸನ್ಮಾನಿಸಿ, ಅಭಿನಂದಿಸಿದರು. ಸುಮಾರು 17 ವರ್ಷಗಳ ಬಳಿಕ ಟಿ-20 ವಿಶ್ವಕಪ್‌ ಗೆದ್ದುಕೊಂಡ ರೋಹಿತ್‌ ಶರ್ಮ ಮತ್ತು ತಂಡದ ಗೆಲುವನ್ನು ಪ್ರಧಾನಿ ಕೊಂಡಾಡಿದರು.

ಆಟಗಾರರಿಗೆ ಕರೆ ಮಾಡಿದ್ದ ಮೋದಿ

ಜೂನ್‌ 29ರಂದು ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ 7 ರನ್‌ಗಳಿಂದ ಜಯ ಸಾಧಿಸಿತ್ತು. ಆ ವೇಳೆ ಆಟಗಾರರಿಗೆ ಕರೆ ಮಾಡಿ ಮೋದಿ ಅಭಿನಂದನೆ ಸಲ್ಲಿಸಿದ್ದರು. ಮೋದಿ ಅವರು ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಿ, ಅದ್ಭುತ ನಾಯಕತ್ವಕ್ಕಾಗಿ ಅಭಿನಂದನೆ ತಿಳಿಸಿದರು. ಅವರ ಟಿ20 ವೃತ್ತಿ ಜೀವನವನ್ನು ಶ್ಲಾಘಿಸಿದರು. ಜತೆಗೆ ಪ್ರಧಾನಿ ಫೈನಲ್‌ ಪಂದ್ಯದಲ್ಲಿ ಭಾರತವು ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ಸಹಾಯ ಮಾಡಿದ ವಿರಾಟ್ ಕೊಹ್ಲಿ (76 ರನ್) ಅವರ ಆಟವನ್ನೂ ಮೆಚ್ಚಿಕೊಂಡರು. ಜತೆಗೆ ಭಾರತೀಯ ಕ್ರಿಕೆಟ್‌ಗೆ ಕೊಹ್ಲಿ ನೀಡಿದ ಕೊಡುಗೆಯನ್ನೂ ನೆನಪಿಸಿಕೊಂಡಿದ್ದರು.

Continue Reading

ಕ್ರೀಡೆ

Team India: ರೋಹಿತ್​, ಸೂರ್ಯಕುಮಾರ್​, ದುಬೆ, ಜೈಸ್ವಾಲ್​ಗೆ ಸನ್ಮಾನ ಮಾಡಿದ ಸಿಎಂ ಏಕನಾಥ್​ ಶಿಂಧೆ

Team India: ಶುಕ್ರವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಹಾರಾಷ್ಟ ಮುಖ್ಯಮಂತ್ರಿ ಏಕನಾಥ್ ಶಿಂಧೆ(Maharashtra CM Eknath Shinde) ಅವರು ಮುಂಬೈ ಆಟಗಾರಿಗೆ ಗಣೇಶನ ವಿಗ್ರಹವನ್ನು ಸ್ಮರಣಿಕೆಯಾಗಿ ನೀಡಿದರು.

VISTARANEWS.COM


on

Team India
Koo

ಮುಂಬಯಿ: ಟಿ20 ವಿಶ್ವಕಪ್ ತಂಡದ​ ಸದ್ಯಸರಾಗಿದ್ದ ಮುಂಬೈಯ ರೋಹಿತ್​ ಶರ್ಮ(Rohit Sharma), ಸೂರ್ಯಕುಮಾರ್​ ಯಾದವ್(Suryakumar Yadav)​, ಶಿವಂ ದುಬೆ(Shivam Dube) ಮತ್ತು ಯಶಸ್ವಿ ಜೈಸ್ವಾಲ್(Yashasvi Jaiswal)​ ಅವರಿಗೆ ಶುಕ್ರವಾರ ಮಹಾರಾಷ್ಟ ಮುಖ್ಯಮಂತ್ರಿ ಏಕನಾಥ್ ಶಿಂಧೆ(Maharashtra CM Eknath Shinde) ಅವರು ತಮ್ಮ ಕಚೇರಿಯಲ್ಲಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಶುಕ್ರವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಶಿಂಧೆ ಅವರು ಮುಂಬೈ ಆಟಗಾರಿಗೆ ಗಣೇಶನ ವಿಗ್ರಹವನ್ನು ಸ್ಮರಣಿಕೆಯಾಗಿ ನೀಡಿದರು. ಬಳಿಕ ಕೆಲ ಕಾಲ ಆಟಗಾರರೊಂದಿಗೆ ಮಾತು ಕತೆ ನಡೆಸಿ ಟಿ20 ವಿಶ್ವಕಪ್​ನ ಅನುಭವಗಳನ್ನು ಆಲಿಸಿದರು.

ಗುರುವಾರ ಟೀಮ್​ ಇಂಡಿಯಾ(Team India) ನವದೆಹಲಿಗೆ ಬಂದಿಳಿಯುತ್ತಿದ್ದಂತೆ ರೋಹಿತ್​ ಶರ್ಮ ವಿಶ್ವಕಪ್​ ಮೇಲೆತ್ತಿ ಪ್ರದರ್ಶಿಸಿದ್ದರು. ಈ ವೇಳೆ ನೆರದಿದ್ದ ಜನಸ್ತೋಮ ರೋಹಿತ್​ ಪಡೆಗೆ ಜೈಕಾರ, ಡೊಳ್ಳು, ತಮಟೆ ಬಾರಿಸುವ ಮೂಲಕ ಅದ್ಧೂರಿ ಸ್ವಾಗತ ಕೋರಿತ್ತು. ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಆತಿಥ್ಯ ಸ್ವೀಕರಿಸಿ ಮಧ್ಯಾಹ್ನ 3.42ಕ್ಕೆ ತಂಡ ಮುಂಬೈಗೆ ಪ್ರಯಾಣ ಬೆಳೆಸಿತ್ತು. ಸಂಜೆ ಐದು ಗಂಟೆಯ ಮುಂಬೈ ತಲುಪಿದ ತಂಡಕ್ಕೆ ಭರ್ಜರಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಾಗರೋಪಾದಿಯಲ್ಲಿ ಸೇರಿದ್ದ ಅಭಿಮಾನಿಗಳ ಗುಂಪಿನಲ್ಲಿ ಆಟಗಾರರು ತೆರೆದ ಬಸ್​ನಲ್ಲಿ ವಿಶ್ವಕಪ್​ ಟ್ರೋಫಿಯೊಂದಿಗೆ ರೋಡ್ ಶೋ ನಡೆಸಿದ್ದರು. ದಕ್ಷಿಣ ಮುಂಬೈನ ಮರೀನ್ ಡ್ರೈವ್‌ ಪ್ರದೇಶ ಸಾವಿರಾರು ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ತುಂಬಿ ಹೋಗಿತ್ತು.

ಎಲ್ಲ ಕಾರ್ಯಕ್ರಮ ಮುಗಿದ ಬಳಿಕ ರೋಹಿತ್​ ಅವರು ತಮ್ಮ ಬಾಲ್ಯದ ಗೆಳೆಯರನ್ನು ಭೇಟಿ ಮಾಡಿದರು. ಈ ವೇಳೆ ಗೆಳೆಯರು ಸೆಲ್ಯೂಟ್​ ಹೊಡೆದು, ರೋಹಿತ್​ ಅವರನ್ನು ಭುಜದ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು. ಈ ವೇಳೆ​ ಟೀಮ್​ ಇಂಡಿಯಾ ಆಟಗಾರ, ರೋಹಿತ್​ ಅವರ ಆಪ್ತರಾಗಿರುವ ತಿಲಕ್​ ವರ್ಮಾ ಕೂಡ ಜತೆಗಿದ್ದರು. ಇವರು ಕೂಡ ಸೆಲ್ಯೂಟ್​ ಹೊಡೆದು ರೋಹಿತ್​ಗೆ ಗೌರವಿಸಿದ್ದಾರೆ.

ಇದನ್ನೂ ಓದಿ Team India’s Victory Parade: ಟೀಮ್ ಇಂಡಿಯಾದ ವಿಕ್ಟರಿ ಪೆರೇಡ್​ನಲ್ಲಿ ಹಲವು ಅಭಿಮಾನಿಗಳಿಗೆ ಗಾಯ; ಆಸ್ಪತ್ರೆಗೆ ದಾಖಲು

ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ ರೋಹಿತ್​


ನಾಯಕನಾಗಿ ಮತ್ತು ಆಟಗಾರನಾಗಿ 2 ಟಿ20 ವಿಶ್ವಕಪ್​ ಗೆದ್ದ ರೋಹಿತ್​ ಗೆಲುವಿನ ಬಳಿಕ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಈ ಮೂಲಕ ಸ್ಮರಣೀಯ ವಿದಾಯ ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್​, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ. ಚುಟುಕು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಕಯನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ” ಎಂದು ಹೇಳುವ ಮೂಲಕ ವಿದಾಯ ಹೇಳಿದರು. ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್‌, 4231 ರನ್‌ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಐತಿಹಾಸಿಕ ಗೆಲುವಿನ ಬಳಿಕ ನಾಯಕ ರೋಹಿತ್​ ಶರ್ಮ(Rohit Sharma) ಅವರು ಬಾರ್ಬಡೋಸ್​ ಕ್ರೀಡಾಂಗಣದ ಪಿಚ್​ನಲ್ಲಿನ ಮಣ್ಣನ್ನು ತಿಂದು ಧನ್ಯತಾ ಭಾವ ವ್ಯಕ್ತಪಡಿಸಿದ್ದರು. ‘ಆ ವಿಷಯಗಳನ್ನು ನನ್ನಿಂದ ವಿವರಿಸಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ಏಕೆಂದರೆ, ಯಾವುದನ್ನೂ ನಾನು ಸ್ಕ್ರಿಪ್ಟ್ ಮಾಡಿಲ್ಲ. ನಾನು ಮೈದಾನಕ್ಕೆ ಇಳಿದಾಗ ಆ ಕ್ಷಣವನ್ನು ಅನುಭವಿಸುತ್ತಿದ್ದೆ. ಗೆಲುವು ತಂದು ಕೊಟ್ಟ ಈ ಪಿಚ್​ನ ಋಣವನ್ನು ಮರೆಯಲು ಸಾಧ್ಯವಿಲ್ಲ. ನನ್ನ ಜೀವನದುದ್ದಕ್ಕೂ ಈ ಪಿಚ್​ನ ಮಣ್ಣಿನ ನೆನಪನ್ನು ಇಟ್ಟು ಕೊಳ್ಳುವ ಸಲುವಾಗಿ ನಾನು ಪಿಚ್​ನ ಮಣ್ಣು ತಿಂದೆ” ಎಂದು ಹೇಳಿದ್ದರು.

Continue Reading

ಪ್ರಮುಖ ಸುದ್ದಿ

T20 World Cup :​ ವಿಜಯೋತ್ಸವದ ಕ್ಷಣಗಳನ್ನು ಉಲ್ಲೇಖಿಸಿ ಬಿಸಿಸಿಐಗೆ ಕುಟುಕಿದ ಆದಿತ್ಯ ಠಾಕ್ರೆ

T20 World Cup : ಟಿ20 ವಿಶ್ವ ಕಪ್​ ಗೆದ್ದುಕೊಂಡು ವೆಸ್ಟ್​ ಇಂಡೀಸ್​ನಿಂದ ಬಂದ ಭಾರತ ತಂಡದ ಆಟಗಾರರಿಗೆ ಅಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಸೇರಿದ್ದರು. ಮುಂಬೈನಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮ ಸ್ಟೇಡಿಯಮ್​ನ ಹೊರಗೂ ಹಾಗೂ ಒಳಗೂ ಲಕ್ಷಾಂತರ ಮಂದಿಯ ಕೂಡುವಿಕೆಗೆ ಸಾಕ್ಷಿಯಾಗಿತ್ತು. ಇದನ್ನು ಉಲ್ಲೇಖಿಸಿ ಬಿಸಿಸಿಐಗೆ ಪರೋಕ್ಷವಾಗಿ ಕುಟುಕಿದ್ದಾರೆ ಆದಿತ್ಯ ಠಾಕ್ರೆ.

VISTARANEWS.COM


on

T20 World Cup
Koo

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ 2023 ರ ಫೈನಲ್ ಪಂದ್ಯವನ್ನು ಮುಂಬೈನಲ್ಲಿ ಆಯೋಜಿಸದೆ ಗುಜರಾತ್​​ನ ಅಹಮದಾಬಾದ್​ನಲ್ಲಿರುವ ವಿಶ್ವ ವಿಖ್ಯಾತ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡಿಸಿರುವ ಬಗ್ಗೆ ಕ್ರಿಕೆಟ್ ಮುಂಬೈ ಅಭಿಮಾನಿಗಳಿಗೆ ಬೇಸರವಿತ್ತು. ಕ್ರಿಕೆಟ್​​ ಕಾಶಿಯಾಗಿರುವ ವಾಂಖೆಡೆ ಸ್ಟೇಡಿಯಮ್​ನಲ್ಲೇ ಪಂದ್ಯ ನಡೆಸಬೇಕು ಎಂಬುದು ಬಹುತೇಕ ಭಾರತೀಯರ ಒತ್ತಾಸೆಯಾಗಿತ್ತು. ಆದರೆ, ದೊಡ್ಡ ಸ್ಟೇಡಿಯಮ್​ (1.30 ಲಕ್ಷ ಮಂದಿ ಪ್ರೇಕ್ಷಕರನ್ನು ತುಂಬಿಕೊಳ್ಳುವ ಸಾಮರ್ಥ್ಯ) ಎಂಬ ಕಾರಣಕ್ಕೆ ನರೇಂದ್ರ ಮೋದಿ ಸ್ಟೇಡಿಯಮ್​ಗೆ ಫೈನಲ್ ಪಂದ್ಯವನ್ನು ವರ್ಗಾಯಿಸಲಾಯಿತ್ತು. ಫೈನಲ್​ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋತಿತ್ತು. ಇದೀಗ ಆ ನೋವನ್ನು ಶಿವಸೇನೆ ಮುಖಂಡ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಆದಿತ್ಯ ಠಾಕ್ರೆ ಹೊರ ಹಾಕಿದ್ದಾರೆ. ಅದಕ್ಕೆ ಕಾರಣವೂ ಇದೆ. ಟಿ20 ವಿಶ್ವ ಕಪ್​ ಗೆದ್ದುಕೊಂಡು (T20 World Cup ) ವೆಸ್ಟ್​ ಇಂಡೀಸ್​ನಿಂದ ಬಂದ ಭಾರತ ತಂಡದ ಆಟಗಾರರಿಗೆ ಅಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಸೇರಿದ್ದರು. ಮುಂಬೈನಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮ ಸ್ಟೇಡಿಯಮ್​ನ ಹೊರಗೂ ಹಾಗೂ ಒಳಗೂ ಲಕ್ಷಾಂತರ ಮಂದಿಯ ಕೂಡುವಿಕೆಗೆ ಸಾಕ್ಷಿಯಾಗಿತ್ತು. ಇದನ್ನು ಉಲ್ಲೇಖಿಸಿ ಬಿಸಿಸಿಐಗೆ ಪರೋಕ್ಷವಾಗಿ ಕುಟುಕಿದ್ದಾರೆ ಆದಿತ್ಯ ಠಾಕ್ರೆ.

ಮುಂಬೈನಲ್ಲಿ ನಿನ್ನೆ ನಡೆದ ವಿಶ್ವ ಕಪ್​ ಟ್ರೋಫಿಯ ಸಂಭ್ರಮಾಚರಣೆ ಬಿಸಿಸಿಐಗೆ ನೇರ ಸಂದೇಶವಾಗಿದೆ. ವಿಶ್ವಕಪ್ ಫೈನಲ್ ಪಂದ್ಯವನ್ನು ಮುಂಬೈನಿಂದ ಎಂದಿಗೂ ಕಸಿದುಕೊಳ್ಳಬೇಡಿ” ಎಂದು ಆದಿತ್ಯ ಠಾಕ್ರೆ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಐಸಿಸಿ ಕ್ರಿಕೆಟ್ ವಿಶ್ವಕಪ್ 2024 ರ ಚಾಂಪಿಯನ್ ಆಗಿರುವ ಭಾರತೀಯ ಕ್ರಿಕೆಟ್ ತಂಡವನ್ನು ಮುಂಬೈನಲ್ಲಿ ಗುರುವಾರ ವಿಜಯೋತ್ಸವದ ಮೆರವಣಿಗೆಯಲ್ಲಿ ಭಾರಿ ಜನಸಮೂಹ ಸ್ವಾಗತಿಸಿದ್ದರು. ಅದಾದ ಒಂದು ದಿನದ ನಂತರ ಆದಿತ್ಯ ಬಿಸಿಸಿಐ ವಿರುದ್ಧ ಟೀಕೆ ಮಾಡಿದ್ದಾರೆ.

ಇದನ್ನೂ ಓದಿ: Virat Kohli’s Phone Wallpaper: ಕೊಹ್ಲಿಯ ಮೊಬೈಲ್​ ​ವಾಲ್​ ಪೇಪರ್​ನಲ್ಲಿರುವ ವ್ಯಕ್ತಿ ಯಾರು? ಇವರ ಹಿನ್ನಲೆ ಏನು?

ಟಿ 20 ಭಾರತೀಯ ಕ್ರಿಕೆಟ್ ತಂಡವನ್ನು ಸ್ವಾಗತಿಸಲು ಅಭಿಮಾನಿಗಳು ವಾಂಖೆಡೆ ಕ್ರೀಡಾಂಗಣದಲ್ಲಿ ಗಂಟೆಗಳ ಕಾಲ ಕಾದಿದ್ದರು. ಎಂಎಸ್ ಧೋನಿ ನಾಯಕತ್ವದಲ್ಲಿ 2007 ರಲ್ಲಿ ಭಾರತದ ಮೊದಲ ಟಿ 20 ವಿಶ್ವಕಪ್ ಗೆಲುವು, 2011 ರ ಕ್ರಿಕೆಟ್ ವಿಶ್ವಕಪ್ ಗೆಲುವು ಮತ್ತು 2013 ರಲ್ಲಿ ಸಚಿನ್ ತೆಂಡೂಲ್ಕರ್ ಅವರ ಭಾವನಾತ್ಮಕ ವಿದಾಯ ಸೇರಿದಂತೆ ಅನೇಕ ಐತಿಹಾಸಿಕ ಕ್ರಿಕೆಟ್ ಘಟನೆಗಳಿಗೆ ವಾಂಖೆಡೆ ಆತಿಥ್ಯ ವಹಿಸಿದೆ.

ಅವಕಾಶಗಳು ಮತ್ತು ಕಾರ್ಯಕ್ರಮಗಳನ್ನು ಮುಂಬೈನಿಂದ ಅಹಮದಾಬಾದ್​​ಗೆ ಸ್ಥಳಾಂತರಿಸಿದ್ದಕ್ಕಾಗಿ ಠಾಕ್ರೆ ಈ ಹಿಂದೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮೇ ತಿಂಗಳ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹಿಂದೂಸ್ತಾನ್ ಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ, ಕೈಗಾರಿಕೆಗಳು ಮತ್ತು ಯೋಜನೆಗಳನ್ನು ಗುಜರಾತ್​ಗೆ ಸ್ಥಳಾಂತರಿಸಿದ್ದರಿಂದ ಮಹಾರಾಷ್ಟ್ರವು ಗಮನಾರ್ಹ ನಷ್ಟ ಎದುರಿಸಿದೆ ಎಂದು ಆದಿತ್ಯ ಉಲ್ಲೇಖಿಸಿದ್ದರು.

ಇಂಟರ್​​ನ್ಯಾಷನಲ್​ ಫೈನಾನ್ಸ್ ಸೆಂಟರ್, ವೇದಾಂತ ಫಾಕ್ಸ್​ಕಾನ್​, ಬೃಹತ್ ಡ್ರಗ್​ (ಔಷಧ) ಪಾರ್ಕ್ ಮತ್ತು ವೈದ್ಯಕೀಯ ಸಾಧನಗಳ ಪಾರ್ಕ್ ಸೇರಿಕೊಂಡಿವೆ. ಮುಂಬೈನಲ್ಲಿ ನಡೆಯಬೇಕಿದ್ದ ವಿಶ್ವಕಪ್ ಫೈನಲ್ ಪಂದ್ಯವನ್ನು ಅಹಮದಾಬಾದ್​ಗೆ ಸ್ಥಳಾಂತರಿಸಲಾಗಿದೆ ಎಂಬುದಾಗಿಯೂ ಅವರು ಗಮನ ಸೆಳೆದಿದ್ದರು.

Continue Reading
Advertisement
Deadly Attack
ದೇಶ2 mins ago

Deadly Attack: ಹಾಡಹಗಲೇ ಶಿವಸೇನೆ ಮುಖಂಡನ ಮೇಲೆ ಡೆಡ್ಲಿ ಅಟ್ಯಾಕ್‌- ವಿಡಿಯೋ ಇದೆ

Viral Video
Latest4 mins ago

Viral Video: ಮೆಟ್ರೋದಲ್ಲಿ ಕೋತಿ ಚೇಷ್ಟೆಗೆ ಕೊನೆಯೇ ಇಲ್ಲ! ಈ ಮಂಗ್ಯಾನ ಡ್ಯಾನ್ಸ್‌ ನೋಡಿ!

Anganwadi workers should make good use of mobile phones says MLA Channareddy Patil Thunnur
ಯಾದಗಿರಿ14 mins ago

Yadgiri News: ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಉಪಯುಕ್ತ : ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು

congratulation ceremony for Dr. Jinadatta Hadagali on 7th July in Dharwad
ಧಾರವಾಡ16 mins ago

Dharwad News: ಧಾರವಾಡದಲ್ಲಿ ಜು.7ರಂದು ಡಾ. ಜಿನದತ್ತ ಅ. ಹಡಗಲಿಗೆ ಅಭಿನಂದನಾ ಸಮಾರಂಭ

Virat kohli
ಪ್ರಮುಖ ಸುದ್ದಿ18 mins ago

Virat Kohli : ನಿವೃತ್ತಿ ಬಳಿಕ ಪತ್ನಿ ಜತೆ ಲಂಡನ್​ಗೆ ತೆರಳಿ ನೆಲೆಸಲಿದ್ದಾರೆ ವಿರಾಟ್​ ಕೊಹ್ಲಿ,

Porn Passport
ವಿದೇಶ21 mins ago

Porn Passport: ಪೋರ್ನ್ ಪಾಸ್‌ಪೋರ್ಟ್! ಅಶ್ಲೀಲ ವಿಡಿಯೊ ವೀಕ್ಷಿಸಲು ಇದು ಕಡ್ಡಾಯ!!

Lalu Prasad Yadav
ದೇಶ23 mins ago

Lalu Prasad Yadav: ಮುಂದಿನ ತಿಂಗಳು ಮೋದಿ ರಾಜೀನಾಮೆ; ಲಾಲು ಪ್ರಸಾದ್‌ ಯಾದವ್‌ ಸ್ಫೋಟಕ ಭವಿಷ್ಯ

New Fashion Trend
ಫ್ಯಾಷನ್39 mins ago

New Fashion Trend: ಜೆನ್‌ ಜಿ ಹುಡುಗ-ಹುಡುಗಿಯರ ಬೆರಳನ್ನು ಆಕ್ರಮಿಸಿದ ಫಂಕಿ ಉಂಗುರಗಳು!

CM Siddaramaiah
ಕರ್ನಾಟಕ51 mins ago

CM Siddaramaiah: ವಸತಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು: ಸಿಎಂ ಸಿದ್ದರಾಮಯ್ಯ

karnataka Weather Forecast
ಮಳೆ2 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ3 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ4 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ6 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ7 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು8 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು9 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ13 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ1 day ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

ಟ್ರೆಂಡಿಂಗ್‌