David Warner: ಶತಕ ಬಾರಿಸಿ ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ಡೇವಿಡ್​ ವಾರ್ನರ್​ - Vistara News

ಕ್ರಿಕೆಟ್

David Warner: ಶತಕ ಬಾರಿಸಿ ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ಡೇವಿಡ್​ ವಾರ್ನರ್​

ದಕ್ಷಿಣ ಆಫ್ರಿಕಾ(Australia vs South Africa) ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಡೇವಿಡ್​ ವಾರ್ನರ್‌ 93 ಎಸೆತ ಎದುರಿಸಿ 12 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 106 ರನ್‌ ಬಾರಿಸಿದರು.

VISTARANEWS.COM


on

David Warner walks back after making a 106 off 93 balls
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜೊಹಾನ್ಸ್​ಬರ್ಗ್​: ಆಸ್ಟ್ರೇಲಿಯಾದ ಎಡಗೈ ಆರಂಭಿಕ ಆಟಗಾರ ಡೇವಿಡ್​ ವಾರ್ನರ್​(David Warner), ದಕ್ಷಿಣ ಆಫ್ರಿಕಾ(Australia vs South Africa) ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸುವ ಜತೆಗೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರ ದಾಖಲೆಯೊಂದನ್ನು ಮರಿದಿದ್ದಾರೆ. ವಾರ್ನರ್‌ ಆರಂಭಿಕನಾಗಿ 46ನೇ ಅಂತಾರಾಷ್ಟ್ರೀಯ ಶತಕ(ಮೂರು ಮಾದರಿಯ) ಬಾರಿಸಿ ಸಚಿನ್‌ ತೆಂಡೂಲ್ಕರ್‌(Sachin Tendulkar) ಅವರ ದಾಖಲೆಯನ್ನು ಮುರಿದರು.

ಶನಿವಾರ ನಡೆದ ಈ ಪಂದ್ಯದಲ್ಲಿ ಡೇವಿಡ್​ ವಾರ್ನರ್‌ 93 ಎಸೆತ ಎದುರಿಸಿ 12 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 106 ರನ್‌ ಬಾರಿಸಿದರು. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ 20ನೇ ಶತಕ ಪೂರೈಸಿದರು. ಕಳೆದೊಂದು ವರ್ಷಗಳಿಂದ ಬ್ಯಾಟಿಂಗ್​ ಫಾರ್ಮ್​ ಕಳೆದುಕೊಂಡಿದ್ದ ಡೇವಿಡ್​ ವಾರ್ನರ್​ ವಿಶ್ವಕಪ್​ಗೂ ಮುನ್ನ ಪ್ರಚಂಡ ಫಾರ್ಮ್​ಗೆ ಮರಳಿದ್ದು ಆಸ್ಟ್ರೇಲಿಯಾ ತಂಡಕ್ಕೆ ಆನೆ ಬಲ ಬಂದಂತಾಗಿದೆ.

ಸಚಿನ್​ ದಾಖಲೆ ಪತನ

ಸಚಿನ್​ ತೆಂಡೂಲ್ಕರ್‌ ಅವರು ಆರಂಭಿಕನಾಗಿ 45 ಶತಕ ಹೊಡೆದು ಇದುವರೆಗೆ ಅಗ್ರ ಸ್ಥಾನದಲ್ಲಿದ್ದರು. ಈ ಎಲ್ಲ ಶತಕಗಳು ಏಕದಿನದಲ್ಲೇ ದಾಖಲಾಗಿತ್ತು. ವಾರ್ನರ್​ ಅವರು ಟೆಸ್ಟ್‌ನಲ್ಲಿ 25, ಏಕದಿನದಲ್ಲಿ 20 ಹಾಗೂ ಟಿ20ಯಲ್ಲಿ ಒಂದು ಶತಕ ಹೊಡೆದಿದ್ದಾರೆ. ಸಚಿನ್​ ಈ ಮೈಲುಗಲ್ಲನ್ನು ತಲುಪಲು 346 ಇನಿಂಗ್ಸ್​ ಆಡಿದ್ದರು. ಆದರೆ ವಾರ್ನರ್​ 342 ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ್ದಾರೆ.

ವಾರ್ನರ್‌ ಜತೆಗೆ ಮಾರ್ನಸ್‌ ಲಬುಶೇನ್‌ 124 ರನ್‌ ಹೊಡೆದರು. ಆದರೆ ಲಬುಶೇನ್​ ಅವರನ್ನು ಏಕದಿನ ವಿಶ್ವಕಪ್​ಗೆ ಪರಿಗಣನೆ ಮಾಡಿಲ್ಲ. ಇದೀಗ ಅವರ ಪ್ರಚಂಡ ಬ್ಯಾಟಿಂಗ್​ ಕಂಡ ಆಸೀಸ್​ ಕ್ರಿಕೆಟ್​ ಮಂಡಳಿಗೆ ಅವರನ್ನು ಕೈಬಿಟ್ಟಿರುವುದು ಚಿಂತೆಗೀಡು ಮಾಡಿದೆ. ಸದ್ಯ ಪ್ರಕಟಗೊಂಡಿರುವ 15 ಆಟಗಾರರ ಪೈಕಿ ಯಾರಾದರು ಗಾಯಗೊಂಡರೆ ಆಗ ಲಬುಶೇನ್ ಆಯ್ಕೆಯಾಗಬಹುದು.

ಇದನ್ನೂ ಓದಿ IPL 2023: ಗೆದ್ದ ಸಂತಸದಲ್ಲಿದ್ದ ಡೇವಿಡ್​ ವಾರ್ನರ್​ಗೆ 12 ಲಕ್ಷ ದಂಡ

ಪಂದ್ಯ ಗೆದ್ದ ಆಸ್ಟ್ರೇಲಿಯಾ

ಮೊದಲು ಬ್ಯಾಟಿಂಗ್​ ನಡೆಸಿದ ಆಸ್ಟ್ರೇಲಿಯಾ ತಂಡ 8 ವಿಕೆಟಿಗೆ 392 ರನ್‌ ಪೇರಿಸಿತು. ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 41.5 ಓವರ್ ಗಳಲ್ಲಿ 269 ರನ್ ಗಳಿಗೆ ಆಲೌಟಾಯಿತು. ಆಸ್ಟ್ರೇಲಿಯ 123 ರನ್‌ಗಳ ಭರ್ಜರಿ ಜಯ ಸಾಧಿಸುವ ಜತೆಗೆ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯ ಸೆಪ್ಟೆಂಬರ್​ 12ರಂದು ನಡೆಯಲಿದೆ. ಇದು ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಸೋತರೆ ತವರಿನಲ್ಲಿ ಸರಣಿ ಸೋಲಿನ ಮುಖಭಂಗ ಅನುಭವಿಸಲಿದೆ. ಗೆದ್ದರಷ್ಟೇ ಸರಣಿ ಜೀವಂತ ಇರಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

INDW vs SAW: ಶುಭಾರಂಭದ ನಿರೀಕ್ಷೆಯಲ್ಲಿ ಹರ್ಮನ್​ಪ್ರೀತ್​ ಬಳಗ; ಇಂದು ಮೊದಲ ಏಕದಿನ

INDW vs SAW: ಗಾಯದಿಂದ ವಿಶ್ರಾಂತಿ ಪಡೆದಿದ್ದ ಅನುಭವಿ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಈ ಸರಣಿ ಮೂಲಕ ಮತ್ತೆ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಇವರು ತಂಡಕ್ಕೆ ಆಸರೆಯಾಗಬಲ್ಲರು.

VISTARANEWS.COM


on

INDW vs SAW
Koo

ಬೆಂಗಳೂರು: ಆತಿಥೇಯ ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ(INDW vs SAW) ಮಹಿಳಾ ಕ್ರಿಕೆಟ್​​ ಸರಣಿಗೆ ಇಂದು(ಭಾನುವಾರ) ಚಾಲನೆ ಸಿಗಲಿದೆ. ಏಕದಿನ ಪಂದ್ಯ ಆಡುವ ಮೂಲಕ ಸರಣಿ ಆರಂಭವಾಗಲಿದೆ. ಮೊದಲ ಏಕದಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯ ಮಧ್ಯಾಹ್ನ 1.30ಕ್ಕೆ ಆರಂಭಗೊಳ್ಳಲಿದೆ. ಪಂದ್ಯಕ್ಕೆ ಮಳೆ ಭೀತಿ ಕೂಡ ಎದುರಾಗಿದೆ.

ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಭಾರತ ತಂಡ ವರ್ಷಾರಂಭದಲ್ಲಿ ಆಸ್ಟ್ರೇಲಿಯಾ ಎದುರಿನ ಏಕದಿನ ಹಾಗೂ ಟಿ20 ಸರಣಿಯಲ್ಲಿ ಕಳಪೆ ಪ್ರದರ್ಶನ ತೋರುವ ಮೂಲಕ ಸೋಲು ಕಂಡಿತ್ತು. ಇದೇ ವರ್ಷ ಟಿ20 ವಿಶ್ವಕಪ್​ ಟೂರ್ನಿಯೂ ಇರುವ ಕಾರಣ ಭಾರತ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಬೇಕಿದೆ. ಜತೆಗೆ ಯುವ ಆಟಗಾರ್ತಿಯರು ಸಿಕ್ಕ ಅವಕಾಶವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕಿದೆ.

ಉಪನಾಯಕಿ ಸ್ಮೃತಿ ಮಂಧನಾ-ಶಫಾಲಿ ವರ್ಮ ಜೋಡಿ ಕಳೆದ ಕೆಲ ವರ್ಷಗಳಿಂದ ನಿರೀಕ್ಷಿತ ಆರಂಭ ಒದಗಿಸುತ್ತಿಲ್ಲ. ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿದ್ದ ಅಗ್ರ ಕ್ರಮಾಂಕದ ಬ್ಯಾಟರ್ ಪ್ರಿಯಾ ಪೂನಿಯಾ ಏಕದಿನ ಮತ್ತು ಟೆಸ್ಟ್‌ ತಂಡಕ್ಕೆ ಮರಳಿದ್ದಾರೆ. ಇವರಿಗೆ ಇಂದಿನ ಪಂದ್ಯದಲ್ಲಿ ಸ್ಥಾನ ಸಿಗುವುದು ಅನುಮಾನ. ಶಫಾಲಿ ಬ್ಯಾಟಿಂಗ್​ ವೈಫಲ್ಯ ಕಂಡರೆ ಮುಂದಿನ ಪಂದ್ಯದಲ್ಲಿ ಇವರು ಬೆಂಚ್​ ಕಾಯಬೇಕಾದೀತು. ಆಗ ಇವರ ಸ್ಥಾನದಲ್ಲಿ ಪ್ರಿಯಾ ಆಡಬಹುದು.

ಗಾಯದಿಂದ ವಿಶ್ರಾಂತಿ ಪಡೆದಿದ್ದ ಅನುಭವಿ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಈ ಸರಣಿ ಮೂಲಕ ಮತ್ತೆ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಇವರು ತಂಡಕ್ಕೆ ಆಸರೆಯಾಗಬಲ್ಲರು. ನಾಯಕಿ ಹರ್ಮನ್​ಪ್ರೀತ್​ ತಮ್ಮ ಬ್ಯಾಟಿಂಗ್​ ವೈಫಲ್ಯದಿಂದ ಹೊರಬರಬೇಕಿದೆ. ಇತ್ತೀಚೆಗೆ ಆಡಿದ ಎಲ್ಲ ಸರಣಿಯಲ್ಲೂ ಅವರು ರನ್​ ಬರ ಎದುರಿಸಿದ್ದರು. ಕರ್ನಾಟಕದ ಶ್ರೇಯಾಂಕಾ ಪಾಟೀಲ್‌ ಮೇಲೆ ಭಾರೀ ಭರವಸೆ ಇಡಲಾಗಿದೆ. ಅವರಿಗೆ ಇದು ತವರಿನ ಮೈದಾನವೂ ಹೌದು.

ಇದನ್ನೂ ಓದಿ INDW vs SAW: ಏಕದಿನ ಸರಣಿಗೆ ಅಭ್ಯಾಸ ಆರಂಭಿಸಿದ ಭಾರತ ಮಹಿಳಾ ತಂಡ; ಕನ್ನಡದಲ್ಲೇ ತಂಡದ ಸಿದ್ಧತೆ ವಿವರಿಸಿದ ಶ್ರೇಯಾಂಕಾ

ಕೆಲ ದಿನಗಳ ಹಿಂದೆ ಪಂದ್ಯ ಸಿದ್ಧತೆ ಬಗ್ಗೆ ಕನ್ನಡದಲ್ಲೇ ಮಾತನಾಡಿದ್ದ ಶ್ರೇಯಾಂಕ, ‘ಎಲ್ಲರಿಗೂ ನಮಸ್ಕಾರ, ನಾವು ಬೆಂಗಳೂರಿನಲ್ಲಿದ್ದೇವೆ. ಇಲ್ಲಿನ ವಾತಾವರಣ ತುಂಬಾ ಹಿತ ನೀಡಿದೆ. ಮೊದಲ ಅಭ್ಯಾಸ ಅವಧಿಯನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿದ್ದೇವೆ. ಎಲ್ಲರು ತುಂಬಾ ಎನರ್ಜಿಯಿಂದ ಅಭ್ಯಾಸ ನಡೆಸಿದೆವು. ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಆಡಲು ಕಾತರಗೊಂಡಿದ್ದೇವೆ. ಇಲ್ಲಿ ನಡೆದ ಡಬ್ಲ್ಯುಪಿಎಲ್​ ಪಂದ್ಯಾವಳಿಯ ವೇಳೆ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬಂದು ಸ್ಟೇಡಿಯಂ ತುಂಬಿ ಹೋಗಿತ್ತು. ಇದೀಗ ಏಕದಿನ ಸರಣಿಗೂ ಅದೇ ರೀತಿ ಸ್ಟೇಡಿಯಂಗೆ ಬಂದು ಟೀಮ್​ ಇಂಡಿಯಾಕ್ಕೆ ಸಪೋರ್ಟ್​ ಮಾಡಿ’ ಎಂದು ಕೇಳಿಕೊಂಡಿದ್ದರು.

ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೋಲ್ವಾರ್ಟ್‌ ಅಮೋಘ ಫಾರ್ಮ್ ನಲ್ಲಿದ್ದಾರೆ. ಕಳೆದ 5 ಇನ್ನಿಂಗ್ಸ್‌ಗಳಲ್ಲಿ ಮೂರು ಶತಕ ಬಾರಿಸಿದ ಸಾಧನೆ ಮಾಡಿದ್ದರು. ಹೀಗಾಗಿ ಇವರನ್ನು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಇರದಂತೆ ಭಾರತೀಯ ಬೌಲರ್​ಗಳು ನೋಡಿಕೊಳ್ಳಬೇಕು. ಮರಿಜಾನ್‌ ಕಾಪ್‌, ಅಯಬೊಂಗಾ ಖಾಕಾ, ನಾಡಿನ್‌ ಡಿ ಕ್ಲರ್ಕ್‌ ಕೂಡ ಉತ್ತಮ ಫಾರ್ಮ್​ನಲ್ಲಿದ್ದಾರೆ. ಈ ಬಾರಿಯ ಡಬ್ಲ್ಯುಪಿಎಲ್​ ಟೂರ್ನಿಯಲ್ಲೂ ಇವರೆಲ್ಲ ಶ್ರೇಷ್ಠ ಪ್ರದರ್ಶನ ತೋರಿದ್ದರು. ಬೆಂಗಳೂರಿನಲ್ಲಿ ಆಡಿದ ಅನುಭವ ಕೂಡ ಇವರಿಗಿದೆ. ಹೀಗಾಗಿ ಇವರಿಗೆ ಇಲ್ಲಿನ ಪಿಚ್​ಗೆ ಹೊಂದಿಕೊಳ್ಳಲು ಅಷ್ಟು ಕಷ್ಟವಾಗದು. ಒಟ್ಟಾರೆ ಪಂದ್ಯವನ್ನು ಜಿದ್ದಾಜಿದ್ದಿನಿಂದ ನಿರೀಕ್ಷಿಸಬಹುದು.

Continue Reading

T20 ವಿಶ್ವಕಪ್

T20 World Cup 2024: ಭಾರತ-ಕೆನಡಾ ಪಂದ್ಯ ಮಳೆಯಿಂದ ರದ್ದು; ಅಗ್ರಸ್ಥಾನಿಯಾಗಿ ರೋಹಿತ್‌ ಪಡೆ ಸೂಪರ್‌ 8ಕ್ಕೆ ಎಂಟ್ರಿ

T20 World Cup 2024: ಕಳೆದ ಹಲವು ದಿನಗಳಿಂದ ಲಾಡರ್‌ಹಿಲ್‌ನಲ್ಲಿ ಭಾರಿ ಮಳೆಯಾಗುತ್ತಿದ್ದು, ಶುಕ್ರವಾರ ನಡೆಯಬೇಕಿದ್ದ ಎರಡೂ ಪಂದ್ಯಗಳು ರದ್ದಾಗಿದ್ದವು. ಭಾರತ ಹಾಗೂ ಕೆನಡಾ ಪಂದ್ಯಕ್ಕೂ ಮಳೆಯ ಭೀತಿ ಇತ್ತು. ಹವಾಮಾನ ಇಲಾಖೆಯೂ ಎಚ್ಚರಿಕೆ ನೀಡಿತ್ತು. ಅದರಂತೆ, ಕೊನೆಗೆ ಟಾಸ್‌ ಕೂಡ ನಡೆಯದೆ ಪಂದ್ಯವನ್ನು ರದ್ದುಗೊಳಿಸಿ, ಅಂಕಗಳನ್ನು ಸಮನಾಗಿ ಹಂಚಿಕೆ ಮಾಡಲಾಗಿದೆ.

VISTARANEWS.COM


on

T20 World Cup 2024
Koo

ಲಾಡರ್‌ಹಿಲ್‌ (ಯುಎಸ್‌ಎ): ಅಮೆರಿಕದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್‌ (T20 World Cup 2024) ಟೂರ್ನಿಯ ಗ್ರೂಪ್‌ ಹಂತದ ಭಾರತ ಹಾಗೂ ಕೆನಡಾ ನಡುವಿನ (India vs Canada Match) ಪಂದ್ಯವು ಒಂದೂ ಎಸೆತ ಕಾಣದೆ ರದ್ದಾಗಿದೆ. ಭಾರಿ ಮಳೆಯಿಂದಾಗಿ ಶನಿವಾರ (ಜೂನ್‌ 15) ಲಾಡರ್‌ಹಿಲ್‌ನಲ್ಲಿರುವ ಮೈದಾನದಲ್ಲಿ ನಡೆಯಬೇಕಿದ್ದ ಪಂದ್ಯವು ರದ್ದಾಯಿತು. ಇದರಿಂದಾಗಿ ಎರಡೂ ತಂಡಗಳಿಗೆ ತಲಾ ಒಂದು ಅಂಕ ಹಂಚಿಕೆ ಮಾಡಲಾಯಿತು. ಗ್ರೂಪ್‌ ಹಂತದಲ್ಲಿ ಒಂದೂ ಪಂದ್ಯ ಸೋಲದ ಭಾರತ ತಂಡವು 7 ಅಂಕಗಳೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಸೂಪರ್‌ 8 ಹಂತಕ್ಕೆ ಪ್ರವೇಶ ಪಡೆದಿದೆ.

ಕಳೆದ ಹಲವು ದಿನಗಳಿಂದ ಲಾಡರ್‌ಹಿಲ್‌ನಲ್ಲಿ ಭಾರಿ ಮಳೆಯಾಗುತ್ತಿದ್ದು, ಶುಕ್ರವಾರ ನಡೆಯಬೇಕಿದ್ದ ಎರಡೂ ಪಂದ್ಯಗಳು ರದ್ದಾಗಿದ್ದವು. ಭಾರತ ಹಾಗೂ ಕೆನಡಾ ಪಂದ್ಯಕ್ಕೂ ಮಳೆಯ ಭೀತಿ ಇತ್ತು. ಹವಾಮಾನ ಇಲಾಖೆಯೂ ಎಚ್ಚರಿಕೆ ನೀಡಿತ್ತು. ಅದರಂತೆ, ಕೊನೆಗೆ ಟಾಸ್‌ ಕೂಡ ನಡೆಯದೆ ಪಂದ್ಯವನ್ನು ರದ್ದುಗೊಳಿಸಿ, ಅಂಕಗಳನ್ನು ಸಮನಾಗಿ ಹಂಚಿಕೆ ಮಾಡಲಾಗಿದೆ. ಇದರೊಂದಿಗೆ ಭಾರತ ಹಾಗೂ ಅಮೆರಿಕ ತಂಡವು ಸೂಪರ್‌ 8 ಪ್ರವೇಶಿಸಿವೆ. ಭಾನುವಾರ ಐರ್ಲೆಂಡ್‌ ಹಾಗೂ ಪಾಕಿಸ್ತಾನ ತಂಡಗಳು ಗ್ರೂಪ್‌ ಹಂತದ ಹಾಗೂ ಟೂರ್ನಿಯ ಕೊನೆಯ ಪಂದ್ಯವನ್ನು ಆಡಲಿವೆ.

ಭಾರತ ಹಾಗೂ ಕೆನಡಾ ಪಂದ್ಯವನ್ನು ಆಡಲಿಸಲು ಪ್ರಯತ್ನ ಮಾಡಲಾಯಿತು. ಹಲವು ಬಾರಿ ಪಿಚ್‌ ಹಾಗೂ ಮೈದಾನವನ್ನು ಪರಿಶೀಲನೆ ನಡೆಸಲಾಯಿತು. ಕೊನೆಗೆ ಐದು ಓವರ್‌ಗಳ ಪಂದ್ಯವನ್ನಾದರೂ ಆಡಿಸಲು ಪ್ರಯತ್ನಿಸಲಾಯಿತು. ಆದರೆ, ಮಳೆ ಕಡಿಮೆಯಾದರೂ ಮೈದಾನದಲ್ಲಿ ತೇವಾಂಶ ರದ್ದಿರುವ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು. ಸೂಪರ್‌ 8ರಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಒಂದೇ ಗ್ರೂಪ್‌ನಲ್ಲಿವೆ. ಜೂನ್‌ 19ರಿಂದ ಸೂಪರ್‌ 8 ಪಂದ್ಯಗಳು ಆರಂಭವಾಗಲಿವೆ. ಸೂಪರ್‌ 8 ಪಂದ್ಯಗಳು ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿವೆ.

ಉತ್ತಮ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗವನ್ನು ಹೊಂದಿದ್ದರೂ ಸಂಘಟಿತ ಪ್ರದರ್ಶನ ನೀಡುವಲ್ಲಿ ವಿಫಲವಾಗುವ ಜತೆಗೆ ಅದೃಷ್ಟದಾಟದಲ್ಲೂ ಹಿನ್ನಡೆ ಅನುಭವಿಸಿದ ಪಾಕಿಸ್ತಾನ ಕ್ರಿಕೆಟ್‌ ತಂಡವು ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್‌ ಟೂರ್ನಿಯಿಂದಲೇ ಹೊರಬಿದ್ದಿದೆ. ಸೂಪರ್‌ 8ರ ರೇಸ್‌ನಲ್ಲಿ ಹಿನ್ನಡೆ ಅನುಭವಿಸಿದ ಬಾಬರ್‌ ಅಜಂನೇತೃತ್ವದ ತಂಡವು ಟೂರ್ನಿಯಿಂದ ಹೊರಬಿದ್ದಿದ್ದು, ಪಾಕ್‌ ಕ್ರಿಕೆಟ್‌ ಅಭಿಮಾನಿಗಳು ತಂಡದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: T20 World Cup 2024: ಟಿ-20 ವಿಶ್ವಕಪ್‌ನಿಂದ ಪಾಕಿಸ್ತಾನ ಔಟ್;‌ ಸೂಪರ್‌ 8ಕ್ಕೆ ಲಗ್ಗೆ ಇಟ್ಟ ಅಮೆರಿಕ

Continue Reading

ಕ್ರೀಡೆ

Trent Boult: ಕೊನೆಯ ಟಿ20 ವಿಶ್ವಕಪ್​ ಆಡಲು ಸಿದ್ಧರಾದ ಟ್ರೆಂಟ್​ ಬೌಲ್ಟ್

Trent Boult: 34 ವರ್ಷದ ಎಡಗೈ ವೇಗಿ ಬೌಲ್ಟ್​ ಇದುವರೆಗೆ ನ್ಯೂಜಿಲ್ಯಾಂಡ್​ ಪರ 60 ಟಿ20 ಪಂದ್ಯಗಳನ್ನು ಆಡಿ ಒಟ್ಟು 81 ವಿಕೆಟ್​ ಕಬಳಿಸಿದ್ದಾರೆ.

VISTARANEWS.COM


on

Trent Boult
Koo

ನ್ಯೂಯಾರ್ಕ್​: ನ್ಯೂಜಿಲ್ಯಾಂಡ್​ ಕ್ರಿಕೆಟ್​ ತಂಡದ ಹಿರಿಯ ವೇಗಿ ಟ್ರೆಂಟ್​ ಬೌಲ್ಟ್(​Trent Boult) ಅವರು ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ ವೃತ್ತಿ ಬುದುಕಿಗೆ ತೆರೆ ಎಳೆಯಲು ಸಿದ್ಧರಾಗಿದ್ದಾರೆ. ಇದು ತನ್ನ ಕೊನೆಯ ಟಿ20 ವಿಶ್ವಕಪ್​ ಟೂರ್ನಿ ಎಂದು ಹೇಳುವ ಮೂಲಕ ತಮ್ಮ ನಿವೃತ್ತಿಯನ್ನು ಖಚಿತಪಡಿಸಿದಂತಿದೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ನ್ಯೂಜಿಲ್ಯಾಂಡ್​ ತನ್ನ ಕೊನೆಯ ಲೀಗ್​ ಪಂದ್ಯವನ್ನು ಜೂನ್​ 17ರಂದು ಪಪುವಾ ನ್ಯೂಗಿನಿಯಾ ವಿರುದ್ಧ ಆಡಲಿದೆ. ಈ ಪಂದ್ಯ ಬೌಲ್ಟ್​ ಅವರಿಗೆ ಕೊನೆಯ ಪಂದ್ಯವಾಗುವ ಸಾಧ್ಯತೆ ಇದೆ.


34 ವರ್ಷದ ಎಡಗೈ ವೇಗಿ ಬೌಲ್ಟ್​ ಇದುವರೆಗೆ ನ್ಯೂಜಿಲ್ಯಾಂಡ್​ ಪರ 60 ಟಿ20 ಪಂದ್ಯಗಳನ್ನು ಆಡಿ ಒಟ್ಟು 81 ವಿಕೆಟ್​ ಕಬಳಿಸಿದ್ದಾರೆ. 13 ರನ್​ಗೆ 4 ವಿಕೆಟ್​ ಕಿತ್ತದ್ದು ವೈಯಕ್ತಿಕ ಜೀವಮಾನ ಶ್ರೇಷ್ಠ ಬೌಲಿಂಗ್​ ಸಾಧನೆಯಾಗಿದೆ. 2013ರಲ್ಲಿ ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ಆಡುವ ಮೂಲಕ ಬೌಲ್ಟ್​ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಐಪಿಎಲ್​ ಟೂರ್ನಿಯಲ್ಲಿ 103 ಪಂದ್ಯಗಳನ್ನಾಡಿ 121 ವಿಕೆಟ್​ ಕಿತ್ತಿದ್ದಾರೆ. ಕಿವೀಸ್​ ತಂಡದ ಪರ ಟಿ20 ಆಡದಿದ್ದರೂ ಕೂಡ ಅವರು ವಿದೇಶಿ ಟಿ20 ಲೀಗ್​ನಲ್ಲಿ ಆಟ ಮುಂದುವರಿಸಲಿದ್ದಾರೆ.


2014-2024ರ ತನಕ ಟಿ0 ವಿಶ್ವಕಪ್​ ಆಡಿರುವ ಬೌಲ್ಟ್​ ಇದುವರೆಗೆ 17 ಪಂದ್ಯಗಳಿಂದ 32 ವಿಕೆಟ್​ ಕಲೆಹಾಕಿದ್ದಾರೆ. ಇಂದು(ಶನಿವಾರ) ನಡೆದ ಉಗಾಂಡ ವಿರುದ್ಧದ ಪಂದ್ಯದಲ್ಲಿ ಬೌಲ್ಟ್​ 4 ಓವರ್​ ನಡೆಸಿ ಒಂದು ಮೇಡನ್​ ಸಹಿತ ಕೇವಲ 7 ರನ್​ಗೆ 2 ವಿಕೆಟ್​ ಕಿತ್ತು ಮಿಂಚಿದ್ದರು.

ಇದನ್ನೂ ಓದಿ T20 World Cup 2024 Super 8: ಸೂಪರ್​-8 ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಆಫ್ಘಾನ್​ ಮೊದಲ ಎದುರಾಳಿ

ಪಂದ್ಯ ಗೆದ್ದ ಕಿವೀಸ್​


ಟ್ರಿನಿಡಾಡ್​ನ ಬ್ರಿಯನ್​ ಲಾರ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಉಗಾಂಡ, ಟಿಮ್​ ಸೌಥಿ ಮತ್ತು ಬೌಲ್ಟ್​ ಘಾತದ ದಾಳಿಗೆ ತತ್ತರಿಸಿ ಕೇವಲ 40 ರನ್​ಗೆ ಆಲೌಟ್​ ಆಯಿತು. ಈ ಸಣ್ಣ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್​ 5.2 ಓವರ್​ಗಳಲ್ಲಿ 1 ವಿಕೆಟ್​ಗೆ 41 ರನ್​ ಬಾರಿಸಿ 9 ವಿಕೆಟ್​ ಅಂತರದಿಂದ ಗೆಲುವು ಸಾಧಿಸಿತು. ಇದು ಕಿವೀಸ್​ಗೆ ಟೂರ್ನಿಯಲ್ಲಿ ಒಲಿದ ಮೊದಲ ಗೆಲುವು. ಇದಕ್ಕು ಮುನ್ನ ಆಡಿದ 2 ಪಂದ್ಯಗಳಲ್ಲಿಯೂ ಹೀನಾಯ ಸೋಲು ಕಂಡಿತ್ತು. ಕಿವೀಸ್​ ಪರ ಬೌಲಿಂಗ್​ನಲ್ಲಿ ಟಿಮ್​ ಸೌಥಿ 4 ಓವರ್​ ಎಸೆದು ಕೇವಲ 4 ರನ್​ಗೆ 3 ವಿಕೆಟ್​ ಕಿತ್ತು ಮಿಂಚಿದರು. ಚೇಸಿಂಗ್​ನಲ್ಲಿ ಡೆವೋನ್​ ಕಾನ್ವೆ ಅಜೇಯ 22 ರನ್​ ಬಾರಿಸಿ ತಂಡದ ಗೆಲುವು ಸಾರಿಸಿದರು.

Continue Reading

ಕ್ರಿಕೆಟ್

Pakistan Cricket Board: ಟಿ20 ವಿಶ್ವಕಪ್​ನಿಂದ ಹೊರಬಿದ್ದ ಬೆನ್ನಲ್ಲೇ ಹೊಸ ನಿಯಮ ಜಾರಿಗೆ ತಂದ ಪಾಕ್​ ಕ್ರಿಕೆಟ್​ ಮಂಡಳಿ

Pakistan Cricket Board: ಎನ್‌ಒಸಿ ನಿಯಮದ ಪ್ರಕಾರ, ವಿದೇಶಗಳಲ್ಲಿ ನಡೆಯುವ ಲೀಗ್‌ಗಳಿಗೆ ಸಂಬಂಧಿಸಿದಂತೆ ಪಾಕ್​ ಕ್ರಿಕೆಟ್​ ಮಂಡಳಿಯು ಆಟಗಾರರಿಗೆ ಎರಡು ಎನ್‌ಒಸಿಗಳನ್ನು ನೀಡುತ್ತದೆ. ಈ ನಿಯಮಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಪಿಸಿಬಿ ಸೂಚಿಸಿದೆ.

VISTARANEWS.COM


on

Pakistan Cricket Board
Koo

ಟಿ20 ವಿಶ್ವಕಪ್​ ಟೂರ್ನಿಯಿಯ ಲೀಗ್​ ಹಂತದಿಂದಲೇ ಪಾಕಿಸ್ತಾನ ತಂಡ(Pakistan Cricket Team) ಹೊರಬಿದ್ದ ಬೆನ್ನಲ್ಲೇ ಪಾಕ್​ ಕ್ರಿಕೆಟ್​ ಮಂಡಳಿ(Pakistan Cricket Board) ಮಹತ್ವದ ನಿಯಮವೊಂದನ್ನು ಜಾರಿಗೆ ತರಲು ಮುಂದಾಗಿದೆ. ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ ದೇಶಿ ಕ್ರಿಕೆಟ್‌ ಹಾಗೂ ಕೇಂದ್ರೀಯ ಗುತ್ತಿಗೆಗೆ ಸಹಿ ಮಾಡಿರುವ ಎಲ್ಲ ಪಾಕ್​ ಆಟಗಾರರು ವರ್ಷವೊಂದರಲ್ಲಿ ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಹೊರತುಪಡಿಸಿ, ವಿದೇಶಗಳಲ್ಲಿ ನಡೆಯುವ ಎರಡು ಟಿ20 ಲೀಗ್‌ಗಳಲ್ಲಿ ಮಾತ್ರ ಭಾಗವಹಿಸಬಹುದಾಗಿದೆ.

ಎನ್‌ಒಸಿ ನಿಯಮದ ಪ್ರಕಾರ, ವಿದೇಶಗಳಲ್ಲಿ ನಡೆಯುವ ಲೀಗ್‌ಗಳಿಗೆ ಸಂಬಂಧಿಸಿದಂತೆ ಪಾಕ್​ ಕ್ರಿಕೆಟ್​ ಮಂಡಳಿಯು ಆಟಗಾರರಿಗೆ ಎರಡು ಎನ್‌ಒಸಿಗಳನ್ನು ನೀಡುತ್ತದೆ. ಈ ನಿಯಮಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಪಿಸಿಬಿ ಸೂಚಿಸಿದೆ. ಅಚ್ಚರಿ ಎಂದರೆ ವಿಶ್ವಕಪ್‌ನಲ್ಲಿ ಪಾಲ್ಗೊಂಡ ಅಜಂ ಖಾನ್‌ ಮತ್ತು ಸೈಮ್ ಆಯೂಬ್‌ ಅವರಿಗೆ ಮಂಡಳಿ ಈವರೆಗೆ ಎನ್‌ಒಸಿ ನೀಡಿಲ್ಲ. ಆದರೂ ಇವರು ವಿಶ್ವಕಪ್​ ಆಡಿದ್ದಾರೆ.

ಇದನ್ನೂ ಓದಿ Viral Video: ಪಾಕ್​ ಕ್ರಿಕೆಟಿಗ ವಾಸಿಂ ಅಕ್ರಮ್ ಜತೆ​ ಬ್ರೇಕ್​ ಡ್ಯಾನ್ಸ್​ ಮಾಡಿದ ಸುನಿಲ್ ಗಾವಸ್ಕರ್

ಎರಡು ಎನ್‌ಒಸಿ ನಿಯಮ


ದೇಶಿ ಕ್ರಿಕೆಟ್‌ ಹಾಗೂ ಕೇಂದ್ರೀಯ ಗುತ್ತಿಗೆಗೆ ಸಹಿ ಮಾಡಿರುವ ಉಳಿದೆಲ್ಲ ಆಟಗಾರರಿಗೆ ಎರಡು ಎನ್‌ಒಸಿ ನಿಯಮ ಅನ್ವಯವಾಗುತ್ತದೆ. ಯಾವುದೇ ಆಟಗಾರ ಎನ್‌ಒಸಿಗಾಗಿ ಸಲ್ಲಿಸುವ ಮನವಿಯನ್ನು ತಡೆಹಿಡಿಯುವ ಹಕ್ಕು ಕೂಡ ಪಿಸಿಬಿಗೆ ಇದೆ ಎಂದು ಮಂಡಳಿಯ ಅಧಿಕೃತ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.

ಮೂರು ಪಂದ್ಯಗಳನ್ನು ಆಡಿರುವ ಪಾಕಿಸ್ತಾನವು ಅಮೆರಿಕ ಹಾಗೂ ಭಾರತದ ವಿರುದ್ಧ ಹೀನಾಯವಾಗಿ ಸೋಲನುಭವಿಸಿದೆ. ಕೆನಡಾ ವಿರುದ್ಧ ಮಾತ್ರ ಗೆದ್ದಿರುವ ಕಾರಣ 2 ಪಾಯಿಂಟ್‌ಗಳನ್ನು ಪಡೆದಿದೆ. ಇನ್ನು, ನಾಲ್ಕು ಪಾಯಿಂಟ್ ಹೊಂದಿದ್ದ ಅಮೆರಿಕ ತಂಡವು ಐರ್ಲೆಂಡ್‌ ವಿರುದ್ಧ ಸೋತು, ಜೂನ್‌ 16ರಂದು ಐರ್ಲೆಂಡ್‌ ವಿರುದ್ಧ ನಡೆಯುವ ಪಂದ್ಯದಲ್ಲಿ ಬಾಬರ್‌ ಅಜಂ ಬಳಗ ಗೆದ್ದರೆ ಮಾತ್ರ ಸೂಪರ್‌ 8ಕ್ಕೆ ಅರ್ಹತೆ ಪಡೆಯುತ್ತಿತ್ತು. ಆದರೆ, ಅಮೆರಿಕ ಹಾಗೂ ಐರ್ಲೆಂಡ್‌ ನಡುವಿನ ಪಂದ್ಯವು ಮಳೆಯಿಂದ ರದ್ದಾದ ಕಾರಣ ಅಮೆರಿಕದ ಅಂಕಗಳು 5ಕ್ಕೆ ಏರಿಕೆಯಾದವು. ಇದರಿಂದಾಗಿ ಐರ್ಲೆಂಡ್‌ ವಿರುದ್ಧ ಪಾಕ್‌ ಗೆದ್ದರೂ ಯಾವುದೇ ಉಪಯೋಗವಿಲ್ಲದಂತಾಗಿದೆ.

ಟೂರ್ನಿಯಿಂದ ಹೊರಬಿದ್ದಿರುವ ಪಾಕ್​ ತಂಡದ ಪ್ರದರ್ಶನದ ಬಗ್ಗೆ ವಾಸಿಂ ಅಕ್ರಮ್ ಸೇರಿ ಅನೇಕ ಮಾಜಿ ಆಟಗಾರರು ಆಕ್ರೋಶ ಹೊರಹಾಕಿದ್ದಾರೆ. ಕ್ರಿಕೆಟ್​ ಅಭ್ಯಾಸ ಮಾಡುವುದನ್ನು ಬಿಟ್ಟು ಶೋಕಿಗಾಗಿ ಸೇನೆಯಲ್ಲಿ ಫಿಟ್​ನೆಸ್​ ತರಬೇತಿ ಪಡೆದು ಸಮಯ ವ್ಯರ್ಥ ಮಾಡಿದ್ದು ಈ ಸೋಲಿಗೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಟೂರ್ನಿಯಿಂದ ಹೊರಬಿದ್ದ ಪಾಕ್​ ತಂಡವನ್ನು(Pakistan Team Troll) ಸ್ವತಃ ತವರಿನ ಅಭಿಮಾನಿಗಳು ಸೇರಿ ಭಾರತೀಯ(India fans troll Pakistan cricket team) ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ. ಹಲವು ಮಿಮ್ಸ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Continue Reading
Advertisement
Darshan Arrested vinish write special message for darshan fathers day
ಸ್ಯಾಂಡಲ್ ವುಡ್7 mins ago

Darshan Arrested: `ಅಪ್ಪ, ನೀವೇ ನನ್ನ ಹೀರೊʼಎಂದ ದರ್ಶನ್‌ ಪುತ್ರ; ಫಾದರ್ಸ್‌ ಡೇಗೆ ಭಾವುಕ ಪೋಸ್ಟ್‌!

INDW vs SAW
ಕ್ರೀಡೆ26 mins ago

INDW vs SAW: ಶುಭಾರಂಭದ ನಿರೀಕ್ಷೆಯಲ್ಲಿ ಹರ್ಮನ್​ಪ್ರೀತ್​ ಬಳಗ; ಇಂದು ಮೊದಲ ಏಕದಿನ

Kannada New Movie Maryade Prashne out now
ಸ್ಯಾಂಡಲ್ ವುಡ್27 mins ago

Kannada New Movie : ಆರ್​ಜೆ ಪ್ರದೀಪ್​ರ ‘ಮರ್ಯಾದೆ ಪ್ರಶ್ನ’ಗೆ ಆಲ್​ ಓಕೆಯ ಸಖತ್‌ ಹಾಡು!

Darshan Arrested
ಕರ್ನಾಟಕ35 mins ago

Darshan Arrested: ಕೊಲೆ ಬಳಿಕ ಮೈಸೂರಲ್ಲಿ ಕೂತು ಕೇಸ್‌ ಮುಚ್ಚಿಹಾಕಲು ದರ್ಶನ್‌ ಯತ್ನ; ಇಂದು ಸ್ಥಳ ಮಹಜರು!

Kotee Movie Review dolly dhanjay News In Kannada
ಸ್ಯಾಂಡಲ್ ವುಡ್38 mins ago

Kotee Movie Review: ಎಲ್ಲರೂ ಬೆತ್ತಲೆಯಾಗಿರುವ ಸಮಾಜದಲ್ಲಿ ಬಟ್ಟೆ ಹಾಕಿಕೊಂಡವನಿಗೆ ನಾಚಿಕೆಯಾದಾಗ?!

Illegal beef trade
ದೇಶ40 mins ago

ಗೋಮಾಂಸ ಅಕ್ರಮ ವ್ಯಾಪಾರ ನಡೆಸುತ್ತಿದ್ದ 11 ಮುಸ್ಲಿಮರ ಮನೆ ಕೆಡವಿದ ಪೊಲೀಸರು; 150 ಹಸುಗಳ ರಕ್ಷಣೆ

Actor Darshan ACP Chandan Kumar work salute by people
ಕ್ರೈಂ51 mins ago

Actor Darshan: ದರ್ಶನ್‌ ಬಂಧಿಸಿದ ಎಸಿಪಿ ಚಂದನ್ ಕುಮಾರ್‌ ಕೆಲಸಕ್ಕೆ ಸೆಲ್ಯೂಟ್‌ ಎಂದ ಗ್ರಾಮಸ್ಥರು!

Euro 2024
ಕ್ರೀಡೆ1 hour ago

Euro 2024: ಕ್ರೊವೇಷಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಸ್ಪೇನ್

Bihar Women
ದೇಶ1 hour ago

ರಾಹುಲ್‌ ಗಾಂಧಿ ‘ಟಕಾ ಟಕ್’‌ 1 ಲಕ್ಷ ರೂ.ಗಾಗಿ ಬ್ಯಾಂಕ್‌ಗೆ ನುಗ್ಗಿದ ನೂರಾರು ಸ್ತ್ರೀಯರು; ಬಳಿಕ ಆಗಿದ್ದೇನು?

Kalaburagi News
ಕರ್ನಾಟಕ1 hour ago

Kalaburagi News: ಕಲಬುರಗಿಯಲ್ಲಿ ಲಾರಿಗೆ ಕಾರು ಡಿಕ್ಕಿಯಾಗಿ ಇಬ್ಬರ ಸಾವು; ಮತ್ತೊಬ್ಬನ ಸ್ಥಿತಿ ಗಂಭೀರ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ20 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ5 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌