ind vs pak : ಭಾರತ-ಪಾಕ್ ಪಂದ್ಯದ ವೇಳೆ ಸ್ಟೇಡಿಯಮ್​ ಖಾಲಿ ಖಾಲಿ; ಯಾಕೆ ಗೊತ್ತೇ? - Vistara News

ಕ್ರಿಕೆಟ್

ind vs pak : ಭಾರತ-ಪಾಕ್ ಪಂದ್ಯದ ವೇಳೆ ಸ್ಟೇಡಿಯಮ್​ ಖಾಲಿ ಖಾಲಿ; ಯಾಕೆ ಗೊತ್ತೇ?

ಕೊಲೊಂಬೊದ ಆರ್. ಪ್ರೇಮದಾಸ ಕ್ರೀಡಾಂಗಣವು 35,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಆದರೆ, 15 ಸಾವಿರ ಟಿಕೆಟ್​ ಮಾರಾಟವಾಗದೇ ಉಳಿದಿದೆ.

VISTARANEWS.COM


on

Blank Seat
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ವೇಳಾಪಟ್ಟಿ ಗೊಂದಲ ಮಳೆಯ ಸಮಸ್ಯೆಯಿಂದಾಗಿ ಭಾರತ ಹಾಗೂ ಪಾಕಿಸ್ತಾನ (ind vs pak ) ತಂಡಗಳ ನಡುವಿನ ಪಂದ್ಯದದ ಟಿಕೆಟ್​ಗಳು ಮಾರಾಟವಾಗಿಲ್ಲ. ಏಷ್ಯಾ ಕಪ್ 2023 ರ (Asia Cup 2023) ಸೂಪರ್ ಫೋರ್​ 4 ಹಂತದ 3ನೇ ಪಂದ್ಯದ 15000 ಟಿಕೆಟ್​ಗಳು ಮಾರಾಟವಾಗದೆ ಉಳಿದಿವೆ ಎಂದು ಮೂಲಗಳು ತಿಳಿಸಿವೆ. ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ (Premadasa Stadium) ನಿಗದಿಯಾಗಿರುವ ಪಂದ್ಯವು ಮಳೆಯಿಂದಾಗಿ ಪೂರ್ಣಗೊಳ್ಳುವ ಸಾಧ್ಯತೆಗಳು ಬಹಳ ಕಡಿಮೆ ಎಂದು ಹೇಳಲಾಗಿರುವ ಕಾರಣ ಟಿಕೆಟ್​ಗಳು ಮಾರಾವಾಗದೇ ಉಳಿದಿದೆ. ಹವಾಮಾನ ಮುನ್ಸೂಚನೆಯ ಪ್ರಕಾರ, ಭಾನುವಾರ ಮತ್ತು ಸೋಮವಾರ (ಪಂದ್ಯದ ದಿನ ಮತ್ತು ಮೀಸಲು ದಿನ) ಮಳೆಯಾಗುವ ಶೇಕಡಾ 90ರಷ್ಟು ಅವಕಾಶವಿದೆ.

ಬಿಸಿಸಿಐ ಮತ್ತು ಪಿಸಿಬಿ ನಡುವಿನ ಗೊಂದಲವೇ ಈ ಸಮಸ್ಯೆಗೆ ಕಾರಣವಾಗಿದೆ. ಪಂದ್ಯ ಸ್ಥಳಾಂತರವಾಗಬಹುದು, ರದ್ದಾಗಬಹುದು ಎಂಬ ಅನುಮಾನದ ಮೇರೆಗೆ ಅಭಿಮಾನಿಗಳು ಟಿಕೆಟ್​ಗಳನ್ನು ಖರೀದಿ ಮಾಡಲಿಲ್ಲ ಎಂದು ಹೇಳಲಾಗಿದೆ. ಮಧ್ಯಾಹ್ನ ಭಾರತ ಮತ್ತು ಪಾಕ್ ನಡುವಿನ ಪಂದ್ಯ ಆರಂಭಗೊಂಡಾಗ ಹವಾಮಾನವು ಶುಭ್ರಗೊಂಡಂತೆ ತೋರುತ್ತಿದ್ದರೂ, ಸಂಜೆ ಮತ್ತು ರಾತ್ರಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ ; Team India : ಶ್ರೇಯಸ್​ ಅಯ್ಯರ್​, ರಾಹುಲ್​ ರೆಡಿ; ಹೊಸ ವಿಡಿಯೊ ಹಾಕಿದ ರಿಷಭ್​ ಪಂತ್​

ಆರ್ ಪ್ರೇಮದಾಸ ಕ್ರೀಡಾಂಗಣವು 35,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ ವೇಳಾಪಟ್ಟಿಯ ಗೊಂದಲ ಮತ್ತು ನಿರಂತರ ಮಳೆಯ ಅಡೆತಡೆಗಳಿಂದಾಗಿ ಸುಮಾರು 40% ಟಿಕೆಟ್ ಗಳು ಹಾಗೆಯೇ ಉಳಿದಿವೆ ಎನ್ನಲಾಗಿದೆ.

ಭಾರತ-ಪಾಕ್ ಪಂದ್ಯಕ್ಕೆ ಮೀಸಲು ದಿನ ನಿಯಮ

  • ದೀರ್ಘಕಾಲದ ಮಳೆ ಅಡೆತಡೆಗಳ ಸಂದರ್ಭಗಳಲ್ಲಿ ಓವರ್​​ಗಳನ್ನು ಕಡಿಮೆ ಮಾಡುವುದು ಸೇರಿದಂತೆ ಮೂಲ ಪಂದ್ಯದ ದಿನದಂದು ಫಲಿತಾಂಶವನ್ನು ಸಾಧಿಸಲು ಅಗತ್ಯ ಕ್ರಮಗಳು ಕೈಗೊಳ್ಳುವುದು.
  • ಮೂಲ ಪಂದ್ಯದ ದಿನದಂದು ಫಲಿತಾಂಶವನ್ನು ನಿರ್ಧರಿಸಲು ಎರಡೂ ಇನಿಂಗ್ಸ್​ಗಳಲ್ಲಿ ಕನಿಷ್ಠ 20 ಓವರ್​ಗಳನ್ನು ಎಸೆಯಬೇಕು.
  • ಎರಡೂ ಇನಿಂಗ್ಸ್​ಗಳಲ್ಲಿ 20 ಓವರ್​ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಪಂದ್ಯವನ್ನು ಮೀಸಲು ದಿನದಂದು ಮುಂದುವರಿಸಲಾಗುವುದು.
  • ಮೀಸಲು ದಿನವು ಮೂಲ ಪಂದ್ಯದ ಮುಂದುವರಿಕೆಯಾಗಿದೆ, ಮರುಪ್ರಾರಂಭವಲ್ಲ. ಆದ್ದರಿಂದ, ಮೂಲ ಪಂದ್ಯದ ದಿನದಿಂದ ಸ್ಕೋರ್ ಮೀಸಲು ದಿನದಿಂದ ಮುಂದುವರಿಯುವುದು.
  • ಮೂಲ ಪಂದ್ಯದ ದಿನದಂದು ಯಾವುದೇ ಆಟ ಸಾಧ್ಯವಾಗದಿದ್ದರೆ, ಪೂರ್ಣ ಏಕದಿನ ಪಂದ್ಯವು ಮೀಸಲು ದಿನದಂದು ಪ್ರಾರಂಭವಾಗುತ್ತದೆ.

ರಾಹುಲ್​ ಫಿಟ್​, ಪಂದ್ಯಕ್ಕೆ ಲಭ್ಯ

ಸಂಪೂರ್ಣ ಫಿಟ್​ ಆಗದ ಕಾರಣ ಏಷ್ಯಾಕಪ್​ನ(Asia Cup 2023) ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಕನ್ನಡಿಗ, ಸ್ಟಾರ್​ ಆಟಗಾರ ಕೆ.ಎಲ್​ ರಾಹುಲ್(kl rahul)​ ಅವರು ಭಾನುವಾರ ಪಾಕಿಸ್ತಾನ ವಿರುದ್ಧದ ಸೂಪರ್​-4 ಪಂದ್ಯದಲ್ಲಿ ಕಣಕ್ಕಿಳಿದರು. ಅವರ ಆಗಮನದಿಂದ ಎದುರಾಳಿ ಪಾಕ್​ಗೆ ಭಯ ಕಾಡಿದೆ. ಒಂದು ಸಲ ರಾಹುಲ್​ ಕ್ರೀಸ್ ಕಚ್ಚಿ ನಿಂತರೆ ಮತ್ತೆ ಅವರನ್ನು ತಡೆಯುವುದು ಕಷ್ಟದ ಮಾತು. ಸಿಕ್ಸರ್​ ಬೌಂಡರಿಗಳ ಸುರಿಮಳೆ ಖಚಿತ.

​ಕಳೆದ ಸುಮಾರು ಸರಣಿಯಲ್ಲಿ ಬ್ಯಾಟಿಂಗ್​ ವೈಫಲ್ಯ ಕಂಡ ರಾಹುಲ್​ ಅವರು ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್​ ನಡೆಸಲಿ ಎನ್ನುವುದು ಅವರ ಅಭಿಮಾನಿಗಳ ಆಶಯವಾಗಿದೆ. ಸದ್ಯಕ್ಕೆ ಭಾರತ ತಂಡದಲ್ಲಿ ಯಾವುದೇ ಕ್ರಮಾಂಕದಲ್ಲಿ ಆಡಬಲ್ಲ ಸಾಮರ್ಥ್ಯ ಇರುವುದು ಕೂಡ ರಾಹುಲ್​ ಅವರಲ್ಲಿ ಮಾತ್ರ. ಈ ಮಾತನ್ನು ಈಗಾಗಲೇ ಟೀಮ್​ ಇಂಡಿಯಾದ ಅನೇಕ ಮಾಜಿ ಆಟಗಾರರು ಸೇರಿ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್​ ಅಗರ್ಕರ್​ ಕೂಡ ಹೇಳಿದ್ದಾರೆ. ವಿಶ್ವಕಪ್​ಗೆ ತಂಡ ಪ್ರಕಟಿಸುವ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅಗರ್ಕರ್​, “ರಾಹುಲ್​ ಉಪಸ್ಥಿತಿ ವಿಶ್ವಕಪ್​ನಲ್ಲಿ ಭಾರತ ತಂಡಕ್ಕೆ ಅತ್ಯುತ್ತಮ ಸಮತೋಲನ ಒದಗಿಸಲಿದೆ.

ಐಪಿಎಲ್​ ವೇಳೆ ಗಾಯಗೊಂಡಿದ್ದ ರಾಹುಲ್​

31 ವರ್ಷದ ರಾಹುಲ್ ಮೇ 1ರಂದು ನಡೆದ ಆರ್​ಸಿಬಿ ವಿರುದ್ಧದ ಐಪಿಎಲ್​ ಪಂದ್ಯದ ವೇಳೆ ರಾಹುಲ್ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಆಟಗಾರರ ಸಹಾಯದಿಂದ ಮೈದಾನದಿಂದ ಹೊರಕ್ಕೆ ಕೊಂಡೊಯ್ಯಲಾಗಿತ್ತು. ಗಾಯದ ಪ್ರಮಾಣ ಗಂಭಿರವಾದ ಪರಿಣಾಮ ಅವರಿಗೆ ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಹೀಗಾಗಿ ಅವರು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಿಂದ ಹೊರಗುಳಿದಿದ್ದರು.

ಟೀಕೆಗೆ ಉತ್ತರಿಸಬೇಕು ರಾಹುಲ್​

ಗಾಯದಿಂದ ಚೇತರಿಕೆ ಕಂಡ ತಕ್ಷಣ ರಾಹುಲ್​ ಹಿಂದಿನ ಫಾರ್ಮ್​ಗೆ ಮರಳುವುದು ಕಷ್ಟ. ಹೀಗಾಗಿ ಅವರನ್ನು ಮಹತ್ವದ ಟೂರ್ನಿಯಲ್ಲಿ ಆಡಿಸುವ ಬದಲು ದ್ವಿಪಕ್ಷೀಯ ಸರಣಿಯಲ್ಲಿ ಆಡಿಸಿ ಬಳಿಕ ಮಹತ್ವದ ಟೂರ್ನಿಗೆ ಅವಕಾಶ ನೀಡಿದರೆ ಉತ್ತಮ ಎಂದು ಹಲವು ಮಾಜಿ ಆಟಗಾರರು ಹೇಳಿದ್ದರು. ಹೀಗಾಗಿ ರಾಹುಲ್​ ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿ ಟೀಕೆಗೆ ತಕ್ಕ ಉತ್ತರ ನೀಡಬೇಕು. ಮಂಗಳವಾರ ಪಕಟಗೊಂಡ ವಿಶ್ವಕಪ್​ ತಂಡದಲ್ಲಿಯೂ ರಾಹುಲ್​ ಅವರು ಮೊದಲ ಕೀಪರ್​ ಆಗಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Rishabh Pant: ಯೂಟ್ಯೂಬ್ ಸಿಲ್ವರ್ ಪ್ಲೇ ಬಟನ್ ಪಡೆದ ರಿಷಭ್​ ಪಂತ್​; ಗಳಿಕೆಯ ಹಣ ದಾನಕ್ಕೆ ಮೀಸಲು

Rishabh Pant: ಐಪಿಎಲ್​ ಸಂದರ್ಭದಲ್ಲಿ ಪಂತ್​ ಅವರು ಈ ಯುಟ್ಯೂಬ್(YouTube) ಚಾನೆಲ್​ ಅನ್ನು ಪ್ರಾರಂಭಿಸಿದ್ದರು. ಈ ವಿಚಾರವನ್ನು ಅವರು ವಿಡಿಯೊ ಮೂಲಕ ಟ್ವೀಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದ್ದರು. ಜತೆಗೆ ತಮ್ಮ ಈ ಚಾನೆಲ್​ಗೆ ಬೆಂಬಲ ಸೂಚಿಸುವಂತೆ ಕೇಳಿಕೊಂಡಿದ್ದರು. ಇದೀಗ ಕೇವಲ ಒಂದೇ ತಿಂಗಳಿನಲ್ಲಿ ಇವರ ಚಾನೆಲ್​ 1 ಲಕ್ಷ ಸಬ್​ಸ್ಕ್ರೈಬ್ ಕಂಡಿದೆ.

VISTARANEWS.COM


on

Rishabh Pant
Koo

ಮುಂಬಯಿ: ಟೀಮ್​ ಇಂಡಿಯಾದ ಕ್ರಿಕೆಟಿಗ ರಿಷಭ್​ ಪಂತ್​(Rishabh Pant) ಅವರು ಕ್ರಿಕೆಟ್​ ಜತೆಗೆ ಯೂಟ್ಯೂಬ್​ ಚಾನೆಲ್(Rishabh Pant YouTube channel)​ ಒಂದನ್ನು ನಡೆಸುತ್ತಿದ್ದಾರೆ. 1 ಲಕ್ಷ ಸಬ್​ಸ್ಕ್ರೈಬ್ ಆದ ನಿಟ್ಟಿನಲ್ಲಿ ಯುಟ್ಯೂಬ್ ಕಡೆಯಿಂದ ಅವರಿಗೆ ಸಿಲ್ವರ್ ಪ್ಲೇ ಬಟನ್(Silver Play Button) ಸಿಕ್ಕಿದೆ. ಈ ಸಂತಸದ ವಿಚಾರವನ್ನು ಸ್ವತಃ ಪಂತ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ. ಈ ಚಾನೆಲ್​ನಿಂದ ಬರುವ ಹಣವನ್ನು ಅಸಹಾಯಕರಿಗೆ ದಾನ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಐಪಿಎಲ್​ ಸಂದರ್ಭದಲ್ಲಿ ಪಂತ್​ ಅವರು ಈ ಯುಟ್ಯೂಬ್(YouTube) ಚಾನೆಲ್​ ಅನ್ನು ಪ್ರಾರಂಭಿಸಿದ್ದರು. ಈ ವಿಚಾರವನ್ನು ಅವರು ವಿಡಿಯೊ ಮೂಲಕ ಟ್ವೀಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದ್ದರು. ಜತೆಗೆ ತಮ್ಮ ಈ ಚಾನೆಲ್​ಗೆ ಬೆಂಬಲ ಸೂಚಿಸುವಂತೆ ಕೇಳಿಕೊಂಡಿದ್ದರು. ಇದೀಗ ಕೇವಲ ಒಂದೇ ತಿಂಗಳಿನಲ್ಲಿ ಇವರ ಚಾನೆಲ್​ 1 ಲಕ್ಷ ಸಬ್​ಸ್ಕ್ರೈಬ್ ಕಂಡಿದೆ.


ಪಂತ್​ ಅವರು ಸದ್ಯ ಸಾಗುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಪಾಕ್​ ವಿರುದ್ಧದ ಪಂದ್ಯದಲ್ಲಿ ಏಕಾಂಗಿ ಬ್ಯಾಟಿಂಗ್​ ಹೋರಾಟ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇವರು ಆ ಪಂದ್ಯದಲ್ಲಿ ನಿಂತು ಆಡದೇ ಇದ್ದಿದ್ದರೆ ಭಾರತ 100 ಗಡಿ ಕೂಡ ದಾಟುವುದು ಕೂಡ ಕಷ್ಟವಾಗಿರುತ್ತಿತ್ತು.

2022ರ ಡಿಸೆಂಬರ್​ 30ರಂದು(rishabh pant accident date) ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಪಂತ್​ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು.

ರಿಷಭ್​ ಪಂತ್​ ಅವರ ಗಂಭೀರ ಗಾಯವನ್ನು ಕಂಡ ಅನೇಕರು ಪಂತ್​ ಕ್ರಿಕೆಟ್​ ಬಾಳ್ವೆ ಇನ್ನು ಮಂದೆ ಕಷ್ಟ, ಒಂದೊಮ್ಮೆ ಅವರು ಕ್ರಿಕೆಟ್​ಗೆ ಮರಳಬೇಕಾದರೂ ಹಲವು ವರ್ಷ ಬೇಕಾದಿತು ಹೀಗೆ ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಆದರೆ ಪಂತ್​ ತಮ್ಮ ನಂಬಿಕೆ ಮತ್ತು ಕ್ರಿಕೆಟ್​ಗೆ ಮರಳುವ ದೃಢ ಸಂಕಲ್ಪದಿಂದ ಕಠಿಣ ವ್ಯಾಯಾಮ ನಡೆಸಿ ಕೇವಲ 14 ತಿಂಗಳಲ್ಲಿ ಸಂಪೂರ್ಣ ಫಿಟ್​ ಆಗಿ ಈ ಬಾರಿಯ ಐಪಿಎಲ್​ ಟೂರ್ನಿ ಆಡುವ ಮೂಲಕ ಮತ್ತೆ ಕ್ರಿಕೆಟ್​ ಕಮ್​ಬ್ಯಾಕ್​ ಮಾಡಿದ್ದರು.

ಇದನ್ನೂ ಓದಿ Rishabh Pant : ಸಂಜು ಸ್ಯಾಮ್ಸನ್​ ಜತೆಗಿನ ಒಳ ಜಗಳದ ಬಗ್ಗೆ ಸ್ಪಷ್ಟನೆ ನೀಡಿದ ರಿಷಭ್ ಪಂತ್​

ಸುಟ್ಟ ಗಾಯಗಳು ಹಾಗೂ ಮಂಡಿಗೆ ಗಾಯಗೊಂಡಿಗೆ ರಿಷಭ್​ ಪಂತ್​ಗೆ ಆರಂಭದಲ್ಲಿ ಡೆಹ್ರಾಡೂನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಪಂತ್​ ದುಬೈಯಲ್ಲಿ ಕ್ರಿಸ್​ಮಸ್​ ಪಾರ್ಟಿಯಲ್ಲಿ ಮುಗಿಸಿ ಮರಳಿ ಭಾರತಕ್ಕೆ ಬಂದು ತಾಯಿಗೆ ಹೊಸ ವರ್ಷದ ಸರ್​ಪ್ರೈಸ್​ ನೀಡಲೆಂದು ದೆಹಲಿಯಿಂದ ಡೆಹ್ರಾಡೂನ್​ಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿತ್ತು. 

ಹರಿಯಾಣ ರಾಜ್ಯ ಸಾರಿಗೆ ನಿಗಮದ ಚಾಲಕ ಸುಶೀಲ್ ಕುಮಾರ್ ಮತ್ತು ಕಂಡಕ್ಟರ್ ಪರಮ್‌ಜೀತ್ ಅಪಘಾತಕ್ಕೀಡಾಗಿ ನೋವಿನಿಂದ ನರಳುತ್ತಿದ್ದ ಕ್ರಿಕೆಟಿಗ ರಿಷಭ್​ ಪಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪಾಣ ಉಳಿಸುವಂತೆ ಮಾಡಿದ್ದರು. ರಸ್ತೆ ವಿಭಜಕಕ್ಕೆ ಕಾರೊಂದು ಡಿಕ್ಕಿ ಹೊಡೆದದ್ದನ್ನು ನೋಡಿದ ಸುಶೀಲ್ ಕುಮಾರ್ ಕುಮಾರ್​ ಮತ್ತು ಪರಮ್‌ಜೀತ್ ತಕ್ಷಣ ಬಸ್​ ನಿಲ್ಲಿಸಿ ಪಂತ್​ ಅವರಿಗೆ ಆರೈಕೆ ಮಾಡಿದ್ದರು.

Continue Reading

ಕ್ರೀಡೆ

Team India Coach: ಭಾರತ ತಂಡದ ಕೋಚ್​ ಆಗಿ ಗಂಭೀರ್​ ಆಯ್ಕೆ; ಶೀಘ್ರದಲ್ಲೇ ಅಧಿಕೃತ ಘೋಷಣೆ

Team India Coach: ಕಳೆದ ತಿಂಗಳು ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಆರಂಭದಲ್ಲಿ ಎನ್​ಸಿಎ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರ ಹೆಸರು ಕೇಳಿ ಬಂದಿತ್ತು. ಆದರೆ ಅವರು ಕೊಚ್​ ಹುದ್ದೆಯಲ್ಲಿ ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದರು. ಈ ವೇಳೆ ಗಂಭೀರ್​ ಕೋಚ್​ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು.

VISTARANEWS.COM


on

Team India Coach
Koo

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನೂತನ ಕೋಚ್‌(Team India Coach) ಆಗಿ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌(Gautam Gambhir) ಅವರನ್ನೇ ನೇಮಕ ಮಾಡಲು ಬಿಸಿಸಿಐ(BCCI) ತೀರ್ಮಾನ ಕೈಗೊಂಡಿದ್ದು ಇದೇ ತಿಂಗಳ ಅಂತ್ಯದಲ್ಲಿ ಅಧಿಕೃತ ಘೋಷಣೆ ಮಾಡಲಿದೆ ಎಂದು ಕೆಲ ಆಂಗ್ಲ ಮಾಧ್ಯಮಗಳು ವರದಿ ಮಾಡಿದೆ. ರಾಹುಲ್​ ದ್ರಾವಿಡ್(Rahul Dravid)​ ಅವರು ಟಿ20 ವಿಶ್ವಕಪ್​ ಬಳಿಕ ಕೋಚ್(India Head Coach)​ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.

ದ್ರಾವಿಡ್​ ಅವರು ಕೋಚ್​ ಹುದ್ದೆಯಿಂದ ಕೆಳಗಿಳಿಯುವುದಾಗಿ ಹೇಳಿದ ಬೆನ್ನಲ್ಲೇ ಗಂಭೀರ್​ ಮುಂದಿನ ಕೋಚ್ ಎನ್ನುವ ಮಾತುಗಳು ಕೇಳಿಬಂದಿತ್ತು. ಐಪಿಎಲ್​ ವೇಳೆ ಇದಕ್ಕಾಗಿ ಜಯ್​ ಶಾ ಮತ್ತು ಬಿಸಿಸಿಐ ಅಧಿಕಾರಿಗಳು ಕೂಡ ಗಂಭೀರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮೂಲಗಳ ಪ್ರಕಾರ ಗಂಭೀರ್​ ಕೂಡ ಕೋಚ್​ ಆಗಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಾರಿಯ ಐಪಿಎಲ್​ನಲ್ಲಿ ಕೆಕೆಆರ್‌ ತಂಡಕ್ಕೆ ಯಶಸ್ವಿ ಮಾರ್ಗದರ್ಶನ ನೀಡಿ ತಂಡವನ್ನು ಚಾಂಪಿಯನ್​ ಮಾಡಿದ ಗಂಭೀರ್‌, ರಾಹುಲ್‌ ದ್ರಾವಿಡ್‌ ಅವರ ಸ್ಥಾನ ತುಂಬಲು ಅರ್ಹರು ಎಂದು ಬಿಸಿಸಿಐ ಭಾವಿಸಿದೆ ಎಂದು ಮೂಲಗಳು ತಿಳಿಸಿವೆ.  ಮೂಲಗಳ ಪ್ರಕಾರ ಗಂಭೀರ್​ ಕೋಚ್​ ಆಗುವ ದೃಷ್ಟಿಯಿಂದಲೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಎನ್ನಲಾಗಿದೆ.

ಕಳೆದ ತಿಂಗಳು ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಆರಂಭದಲ್ಲಿ ಎನ್​ಸಿಎ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರ ಹೆಸರು ಕೇಳಿ ಬಂದಿತ್ತು. ಆದರೆ ಅವರು ಕೊಚ್​ ಹುದ್ದೆಯಲ್ಲಿ ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದರು. ಈ ವೇಳೆ ಗಂಭೀರ್​ ಕೋಚ್​ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಸದ್ಯ ಅವರೇ ಕೋಚ್​ ಆಗುವುದು ಖಚಿತ ಎನ್ನುತ್ತಿದೆ ಮೂಲಗಳು. ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ಆಯ್ಕೆಯಾದ ಹೊಸ ಕೋಚ್‌ ಟಿ20 ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ India Coach: ಕೋಚ್​ ಆಗುವ ಮುನ್ನವೇ ಗಂಭೀರ್​ಗೆ ಕಿವಿಮಾತು ಹೇಳಿದ ಅನಿಲ್ ಕುಂಬ್ಳೆ

ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಭರ್ತಿ ಮಾಡುವ ಮುನ್ನ ಗಂಭೀರ್​ ಅವರು ​ಒಂದು ಷರತ್ತು ಹಾಕಿದ್ದರು. ‘ಆಯ್ಕೆಯ ಗ್ಯಾರಂಟಿ’ ನೀಡಿದರೆ ಮಾತ್ರ ಗಂಭೀರ್ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸಿದ್ಧರಿರುವುದಾಗಿ ಹೇಳಿದ್ದರು. ಕೋಚ್​ ಹುದ್ದೆಗಾಗಿ ಎಷ್ಟು ಅರ್ಜಿಗಳು ಬಂದಿದೆ ಎಂಬುದರ ಬಗ್ಗೆ ಸದ್ಯ ಯಾವುದೇ ಮಾಹಿತಿ ಹೊರಬಿದ್ದಿಲ್ಲ ಆದರೆ ಗಂಭೀರ್​ ಕೋಚ್​ ಆಗುವುದು ಖಚಿತ ಎನ್ನಲಾಗಿದೆ.

ದ್ರಾವಿಡ್ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಬಳಿಕವೇ ಕೋಚ್​ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದರು. ಆದರೆ, ಬಿಸಿಸಿಐ ಟಿ20 ವಿಶ್ವಕಪ್​ ತನಕ ಅವರನ್ನು ಮುಂದುವರಿಯುವಂತೆ ಒತ್ತಾಯ ಮಾಡಿತ್ತು. ಹೀಗಾಗಿ ದ್ರಾವಿಡ್​ ಟಿ20 ವಿಶ್ವಕಪ್ ತನಕ ಈ ಹುದ್ದೆಯಲ್ಲಿ ಮುಂದುವರಿದರು.

Continue Reading

ಕ್ರಿಕೆಟ್

Pakistan Cricket Team: ಪಾಕಿಸ್ತಾನ ಕ್ರಿಕೆಟಿಗರ ವೇತನ ಕಡಿತಕ್ಕೆ ಮುಂದಾದ ಪಾಕ್​ ಕ್ರಿಕೆಟ್ ಮಂಡಳಿ

Pakistan Cricket Team: ಪಾಕ್​ ಮಾಧ್ಯಮ ವರದಿಗಳ ಪ್ರಕಾರ ಮಾಜಿ ಆಟಗಾರರು ಹಾಗೂ ಪಿಸಿಬಿ ಸದಸ್ಯರು ಆಟಗಾರರ ಸಂಬಳ ಕಡಿತಗೊಳಿಸಲು ಪಾಕ್​ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ಮೊಹ್ಸಿನ್​ ನಖ್ವಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

VISTARANEWS.COM


on

Pakistan Cricket Team
Koo

ಇಸ್ಲಾಮಾಬಾದ್‌: ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ(T20 World Cup 2024) ಕಳಪೆ ಪ್ರದರ್ಶನ ತೋರುವ ಮೂಲಕ ಟೂರ್ನಿಯಿಂದ ಹೊರಬಿದ್ದು ಆಘಾತ ಕಂಡಿರುವ ಪಾಕಿಸ್ತಾನ ತಂಡದ(Pakistan Cricket Team) ಆಟಗಾರರಿಗೆ ಮತ್ತೊಂದು ಶಾಕ್​ ಎದುರಾಗಿದೆ. ಆಟಗಾರರ ವಾರ್ಷಿಕ ಸಂಭಾವನೆಯಲ್ಲಿ ಕಡಿತ ಮಾಡಲು ಪಾಕ್​ ಕ್ರಿಕೆಟ್​ ಮಂಡಳಿ(PCB) ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಮೂರು ಪಂದ್ಯಗಳನ್ನು ಆಡಿರುವ ಪಾಕಿಸ್ತಾನವು ಅಮೆರಿಕ ಹಾಗೂ ಭಾರತದ ವಿರುದ್ಧ ಹೀನಾಯವಾಗಿ ಸೋಲನುಭವಿಸಿದೆ. ಕೆನಡಾ ವಿರುದ್ಧ ಮಾತ್ರ ಗೆದ್ದಿರುವ ಕಾರಣ 2 ಪಾಯಿಂಟ್‌ಗಳನ್ನು ಪಡೆದಿದೆ. ಅಮೆರಿಕ ಹಾಗೂ ಐರ್ಲೆಂಡ್‌ ನಡುವಿನ ಪಂದ್ಯವು ಮಳೆಯಿಂದ ರದ್ದಾದ ಕಾರಣ ಅಮೆರಿಕದ ಅಂಕ 5ಕ್ಕೆ ಏರಿಕೆಯಾಯಿತು. ಇದರಿಂದಾಗಿ ಐರ್ಲೆಂಡ್‌ ವಿರುದ್ಧ ಪಾಕ್‌ ಗೆದ್ದರೂ ಯಾವುದೇ ಉಪಯೋಗವಿಲ್ಲದಂತಾಗಿದೆ. ಟೂರ್ನಿಯಿಂದ ಹೊರಬಿದ್ದ ಪಾಕ್​ ತಂಡದ ವಿರುದ್ಧ ಮಾಜಿ ಆಟಗಾರರು ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ. ಈ ರೀತಿ ಪ್ರದರ್ಶನ ತೋರುದಕ್ಕಿಂತ ಟೂರ್ನಿಯಲ್ಲಿ ಪಾಲ್ಗೊಳ್ಳದೇ ಇದ್ದಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.

ಪಾಕ್​ ಮಾಧ್ಯಮ ವರದಿಗಳ ಪ್ರಕಾರ ಮಾಜಿ ಆಟಗಾರರು ಹಾಗೂ ಪಿಸಿಬಿ ಸದಸ್ಯರು ಆಟಗಾರರ ಸಂಬಳ ಕಡಿತಗೊಳಿಸಲು ಪಾಕ್​ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ಮೊಹ್ಸಿನ್​ ನಖ್ವಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಪಾಕ್​ ಕ್ರಿಕೆಟ್​ ಮಂಡಳಿ ಕೂಡ ಈ ವಿಚಾರವನ್ನು ಗಂಭಿರವಾಗಿ ಪರಿಗಣಿಸಿದ್ದು ಉನ್ನತ ಮಟ್ಟದ ಸಭೆ ನಡೆಸಿ ಆಟಗಾರರ ಕೇಂದ್ರೀಯ ಗುತ್ತಿಗೆಯನ್ನು ಮರು ಪರಿಶೀಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ Pakistan Cricket Board: ಟಿ20 ವಿಶ್ವಕಪ್​ನಿಂದ ಹೊರಬಿದ್ದ ಬೆನ್ನಲ್ಲೇ ಹೊಸ ನಿಯಮ ಜಾರಿಗೆ ತಂದ ಪಾಕ್​ ಕ್ರಿಕೆಟ್​ ಮಂಡಳಿ

ವೇತನ ಮಾತ್ರವಲ್ಲದೆ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನಿಯಮವನ್ನು ಜಾರಿಗೆ ತೆರಲಿದೆ ಎಂದು ತಿಳಿದುಬಂದಿದೆ. ಈ ನಿಯಮದ ಪ್ರಕಾರ ದೇಶಿ ಕ್ರಿಕೆಟ್‌ ಹಾಗೂ ಕೇಂದ್ರೀಯ ಗುತ್ತಿಗೆಗೆ ಸಹಿ ಮಾಡಿರುವ ಎಲ್ಲ ಪಾಕ್​ ಆಟಗಾರರು ವರ್ಷವೊಂದರಲ್ಲಿ ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಹೊರತುಪಡಿಸಿ, ವಿದೇಶಗಳಲ್ಲಿ ನಡೆಯುವ ಎರಡು ಟಿ20 ಲೀಗ್‌ಗಳಲ್ಲಿ ಮಾತ್ರ ಭಾಗವಹಿಸಬಹುದಾಗಿದೆ.

ಪಾಕ್​ ತಂಡದ ವಿರುದ್ಧ ದೇಶದ್ರೋಹದ ಕೇಸ್‌


ನಿರಾಸದಾಯಕ ಪ್ರದರ್ಶನ ತೋರಿರುವ ಪಾಕಿಸ್ತಾನ ತಂಡದ ವಿರುದ್ಧ ಪಾಕ್‌ನ ಗುಜ್ರಾನ್ವಾಲಾ ನಗರದ ವಕೀಲರೊಬ್ಬರು ದೇಶದ್ರೋಹ ಕೇಸ್‌ ದಾಖಲಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಕೇಸ್‌ನ ಬಗ್ಗೆ ಜೂನ್​ 21ಕ್ಕೆ ಮುನ್ನ ವರದಿ ಸಲ್ಲಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ ಎಂದು ತಿಳಿದುಬಂದಿದೆ. ಪಾಕ್‌ ತಂಡದ ಕಳಪೆ ಪ್ರದರ್ಶನದಿಂದ ಹಣ ವ್ಯರ್ಥವಾಗುತ್ತಿದೆ ಮತ್ತು ರಾಷ್ಟ್ರದ ನಂಬಿಕೆಗೆ ದ್ರೋಹ ಉಂಟಾಗಿದೆ. ಆಟಗಾರರು ದೇಶದ ಬಗ್ಗೆ ಗೌರವಕ್ಕಿಂತ ಆರ್ಥಿಕ ಲಾಭಕ್ಕೆ ಆದ್ಯತೆ ನೀಡಿದ್ದಾರೆ ಎಂದು ಅರ್ಜಿದಾರ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಗಿ ವರದಿಯಾಗಿದೆ.

Continue Reading

ಕ್ರೀಡೆ

David Wiese Retirement: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಡೇವಿಡ್ ವೈಸ್

David Wiese Retirement: ಡೇವಿಡ್ ವೈಸ್ ಅವರು ತಮ್ಮ ಕ್ರಿಕೆಟ್​ ವೃತ್ತಿ ಜೀವನ ಆರಂಭಿಸಿದ್ದು ದಕ್ಷಿಣ ಆಫ್ರಿಕಾ ತಂಡದ ಪರ ಆಡುವ ಮೂಲಕ. 2021ರಲ್ಲಿ ನಮೀಬಿಯಾ ತಂಡ ಸೇರಿದ್ದರು. ಒಟ್ಟು 5 ವರ್ಷಗಳ ಕಾಲ ನಮೀಬಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ. 2021ರ ಟಿ20 ವಿಶ್ವಕಪ್‌ನಲ್ಲಿ ಆಡುವ ಮೂಲಕ ನಮೀಬಿಯಾ ತಂಡದ ಪರ ಪಾದಾರ್ಪಣೆ ಮಾಡಿದ್ದರು.

VISTARANEWS.COM


on

David Wiese Retirement
Koo

ನ್ಯೂಯಾರ್ಕ್​: ನಮೀಬಿಯಾ(Namibia allrounder David Wiese) ತಂಡದ ಅನುಭವಿ ಆಟಗಾರ ಡೇವಿಡ್ ವೈಸ್(David Wiese) ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ(David Wiese Retirement) ಹೇಳಿದ್ದಾರೆ. ಶನಿವಾರ ರಾತ್ರಿ ನಡೆದ ಇಂಗ್ಲೆಂಡ್​ ವಿರುದ್ಧದ ಟಿ20 ವಿಶ್ವಕಪ್​ನ ಅಂತಿಮ ಲೀಗ್​ ಪಂದ್ಯದಲ್ಲಿ ಆಡಿದ ಬಳಿಕ ಡೇವಿಡ್ ವೈಸ್ ತಮ್ಮ ನಿವೃತ್ತಿ ಘೋಷಿಸಿದರು.

ಡೇವಿಡ್ ವೈಸ್ ಅವರು ತಮ್ಮ ಕ್ರಿಕೆಟ್​ ವೃತ್ತಿ ಜೀವನ ಆರಂಭಿಸಿದ್ದು ದಕ್ಷಿಣ ಆಫ್ರಿಕಾ ತಂಡದ ಪರ ಆಡುವ ಮೂಲಕ. 2021ರಲ್ಲಿ ನಮೀಬಿಯಾ ತಂಡ ಸೇರಿದ್ದರು. ಒಟ್ಟು 5 ವರ್ಷಗಳ ಕಾಲ ನಮೀಬಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ. 2021ರ ಟಿ20 ವಿಶ್ವಕಪ್‌ನಲ್ಲಿ ಆಡುವ ಮೂಲಕ ನಮೀಬಿಯಾ ತಂಡದ ಪರ ಪಾದಾರ್ಪಣೆ ಮಾಡಿದ್ದರು.

ಆಲ್​ರೌಂಡರ್​ ಆಗಿರುವ ವೈಸ್​ ಅವರು ನಮೀಬಿಯಾ ಪರ 34 ಟಿ20 ಪಂದ್ಯಗಳನ್ನು ಆಡಿ 532 ರನ್ ಗಳಿಸಿದ್ದಾರೆ. ಬೌಲಿಂಗ್​ನಲ್ಲಿಯೂ ಉತ್ತಮ ಪ್ರದರ್ಶನ ತೋರಿರುವ ಅವರು 35 ವಿಕೆಟ್​ ಕಿತ್ತಿದ್ದಾರೆ. ಒಂಬತ್ತು ಏಕದಿನ ಪಂದ್ಯಗಳನ್ನು ಆಡಿ 228 ರನ್ ಗಳಿಸಿದ್ದಾರೆ. ಆರು ವಿಕೆಟ್​ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾ ತಂಡದ ಪರ ಆಡಿ ಒಟ್ಟಾರೆಯಾಗಿ, ಅವರು 54 ಟಿ20 ಮತ್ತು 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಇದನ್ನೂ ಓದಿ SCO vs AUS: ಆಸೀಸ್​ಗೆ 5 ವಿಕೆಟ್​ ಗೆಲುವು; ಸೂಪರ್​-8ಗೆ ಲಗ್ಗೆಯಿಟ್ಟ ಇಂಗ್ಲೆಂಡ್​

“ನನಗೆ ಈಗ 39 ವರ್ಷ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇನ್ನು ಮುಂದುವರಿಯಲು ಇದು ಸೂಕ್ತ ಸಯಯವಲ್ಲ ಎಂದು ತಿಳಿದಿದೆ. ಹೀಗಾಗಿ ನಾನು ಕ್ರಿಕೆಟ್​ನಿಂದ ನಿವೃತ್ತಿಯಾಗುತ್ತಿದ್ದೇನೆ. 2 ದೇಶಗಳನ್ನು ಪ್ರತಿನಿಧಿಸಲು ನನಗೆ ಅವಕಾಶ ಮಾಡಿಕೊಟ್ಟ ಎಲ್ಲ ಸಿಬ್ಬಂದಿ ಮತ್ತು ಸಹ ಆಟಗಾರರಿಗೆ ಧನ್ಯವಾದಗಳು” ಎಂದು ವೈಸ್ ಹೇಳಿದರು.

ಪಂದ್ಯ ಗೆದ್ದ ಇಂಗ್ಲೆಂಡ್​


ಶನಿವಾರ ರಾತ್ರಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ ನಮೀಬಿಯಾ ವಿರುದ್ಧ ಡಕ್​ವರ್ತ್​ ಲೂಯಿಸ್​ ನಿಯಮದನ್ವಯ 41 ರನ್​ ಅಂತರದಿಂದ ಗೆದ್ದು ಬೀಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 10 ಓವರ್ ಗಳಲ್ಲಿ 122 ರನ್ ಗಳಿಸಿದರೆ, ನಮೀಬಿಯಾ ತಂಡವು 84 ರನ್ ಮಾತ್ರ ಗಳಿಸಿ ಸೋಲು ಕಂಡಿತು. ಇಂದು ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸ್ಕಾಟ್ಲೆಂಡ್​ ವಿರುದ್ಧ 5 ವಿಕೆಟ್​ ಅಂತರದ ಗೆಲುವು ಸಾಧಿಸಿದ ಪರಿಣಾಮ ಇಂಗ್ಲೆಂಡ್​ ಸೂಪರ್​-8 ಹಂತಕ್ಕೇರಿತು.

Continue Reading
Advertisement
EVM Row
ದೇಶ3 mins ago

EVM Row: ಮೊಬೈಲ್‌ ಬಳಸಿ ಇವಿಎಂ ಅನ್‌ಲಾಕ್‌ ಮಾಡಿದ ಸಂಸದನ ಸಂಬಂಧಿ; ಎಲ್ಲಿ ನಡೆಯಿತು ಮೋಸ?

Vijayalakshmi Darshan Reactivated Instagram Account
ಸ್ಯಾಂಡಲ್ ವುಡ್18 mins ago

Actor Darshan:  ಇನ್​ಸ್ಟಾಗ್ರಾಮ್‌ ಖಾತೆಯನ್ನು ಸಕ್ರಿಯಗೊಳಿಸಿದ ದರ್ಶನ್‌ ಪತ್ನಿ; ಮಾಧ್ಯಮದ ಮುಂದೆ ಬರ್ತಾರಾ?

Rishabh Pant
ಕ್ರೀಡೆ20 mins ago

Rishabh Pant: ಯೂಟ್ಯೂಬ್ ಸಿಲ್ವರ್ ಪ್ಲೇ ಬಟನ್ ಪಡೆದ ರಿಷಭ್​ ಪಂತ್​; ಗಳಿಕೆಯ ಹಣ ದಾನಕ್ಕೆ ಮೀಸಲು

Electric Shock
ಕರ್ನಾಟಕ26 mins ago

Electric Shock: ಕುಷ್ಟಗಿಯಲ್ಲಿ ವಿದ್ಯುತ್ ತಂತಿ ತಗುಲಿ ರೈತ, 2 ಎತ್ತುಗಳ ಸಾವು

Renuka swamy murder case
ಕ್ರೈಂ29 mins ago

Renuka swamy Murder : ಟೀಕೆಗೆಲ್ಲ ಕೊಲೆ ಮಾಡುವುದಾದರೆ ಗಂಟೆಗೊಂದು ಹೆಣ ಬೀಳುತ್ತಿತ್ತು- ಸಿಟಿ ರವಿ

Goat With Plastic Teeth
ವಿದೇಶ50 mins ago

Goat With Plastic Teeth: ಬಕ್ರೀದ್‌ಗೆ ಬಲಿ ಕೊಡಲು ಪ್ಲಾಸ್ಟಿಕ್‌ ಹಲ್ಲಿರುವ ಮೇಕೆ ಮಾರಾಟ ಮಾಡಿ ಸಿಕ್ಕಿಬಿದ್ದ ಭೂಪ

Double iSmart to release on August 15
ಟಾಲಿವುಡ್52 mins ago

Ram Pothineni: ರಾಮ್ ಪೋತಿನೇನಿ ಅಭಿನಯದ ʻಡಬಲ್ ಇಸ್ಮಾರ್ಟ್ʼ ಬಿಡುಗಡೆಗೆ‌ ಮುಹೂರ್ತ ಫಿಕ್ಸ್!

Rahul Gandhi
ದೇಶ1 hour ago

Rahul Gandhi: ಕಾಂಗ್ರೆಸ್‌ ಹೆಚ್ಚು ಕ್ಷೇತ್ರ ಗೆದ್ದರೂ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಾಹುಲ್‌ ಗಾಂಧಿ !

Euro 2024
ಕ್ರೀಡೆ1 hour ago

Euro 2024: ಡೆನ್ಮಾರ್ಕ್ ಸವಾಲನ್ನು ಮೆಟ್ಟಿ ನಿಂತೀತೇ ಸ್ಲೊವೇನಿಯಾ?; ಬಲಾಬಲ ಹೇಗಿದೆ?

Renuka Swamy murder
ಪ್ರಮುಖ ಸುದ್ದಿ1 hour ago

Renuka Swamy Murder:‌ ರೇಣುಕಾಸ್ವಾಮಿಗೆ 4 ಬಾರಿ ಎಲೆಕ್ಟ್ರಿಕ್ ಶಾಕ್; ಪೋಸ್ಟ್ ಮಾರ್ಟಂ ವರದಿಯಲ್ಲಿವೆ ಭಯಾನಕ ಅಂಶಗಳು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Vijayanagara News
ವಿಜಯನಗರ4 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 day ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

ಟ್ರೆಂಡಿಂಗ್‌