Money Guide: ಹಣ ಉಳಿಸೋದು ಹೇಗೆ? ಮಿಲೇನಿಯಲ್ಸ್‌ಗಾಗಿ 10 ಟಿಪ್ಸ್‌ ಇಲ್ಲಿವೆ! - Vistara News

ಮನಿ-ಗೈಡ್

Money Guide: ಹಣ ಉಳಿಸೋದು ಹೇಗೆ? ಮಿಲೇನಿಯಲ್ಸ್‌ಗಾಗಿ 10 ಟಿಪ್ಸ್‌ ಇಲ್ಲಿವೆ!

ನೀವು ಮಿಲೇನಿಯಲ್ಸ್‌ ಆಗಿದ್ದರೆ (1981- 1996 ನಡುವೆ ಜನಿಸಿದವರು) ಮತ್ತು ನಿಮ್ಮ ಭವಿಷ್ಯಕ್ಕಾಗಿ ಹಣವನ್ನು ಉಳಿಸುವ ಬಗೆಗಳನ್ನು ಆಲೋಚನೆ ಮಾಡುತ್ತಿದ್ದರೆ, ಹಣಕಾಸು ತಜ್ಞರು ನೀಡಿರುವ ಈ ಟಾಪ್ 10 ಸಲಹೆಗಳನ್ನು ಓದಿ.

VISTARANEWS.COM


on

money saving tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

1981ರಿಂದ 1996ರ ನಡುವೆ ಜನಿಸಿದವರನ್ನು ʼಮಿಲೇನಿಯಲ್ಸ್’ (millennials) ಎಂದು ಕರೆಯುತ್ತಾರೆ. ಇವರ ಆದಾಯ, ವೆಚ್ಚದ ಸಾಮರ್ಥ್ಯ ಹೆಚ್ಚು. ನಿರಂತರ ಏರಿಕೆಯನ್ನೂ ಕಾಣುತ್ತಿದೆ. ಕ್ರೆಡಿಟ್ ಕಾರ್ಡ್‌ಗಳು ಮತ್ತು ವಿವಿಧ ಆನ್‌ಲೈನ್ ಶಾಪಿಂಗ್ (Online shopping) ಇವರಿಗೆ ಸುಲಭ. ಮಿಲೇನಿಯಲ್‌ಗಳು ಖರ್ಚು ಮಾಡುವತ್ತ ಗಮನಹರಿಸುವುದು ಹೆಚ್ಚು. ಉಳಿತಾಯದ ಮೇಲೆ ಗಮನ ಹರಿಸುವುದು ಕಡಿಮೆ. ಆದರೆ ಮಿಲೇನಿಯಲ್‌ಗಳು (millennials saving) ಸಹ ತಮ್ಮ ಹಣವನ್ನು ಉತ್ತಮವಾಗಿ ನಿರ್ವಹಿಸುವುದು (money guide) ಅಗತ್ಯ.

ಹೆಚ್ಚಿನ ಮಿಲೇನಿಯಲ್‌ಗಳು ದೊಡ್ಡ ಮನೆಯನ್ನು ಹೊಂದುವ, ರಜೆಯಲ್ಲಿ ವಿದೇಶಗಳಿಗೆ ಹೋಗುವ ಕನಸು ಕಾಣುತ್ತಾರೆ. ಕಠಿಣ ಕಾರ್ಪೊರೇಟ್ ಉದ್ಯೋಗಗಳನ್ನು ನಿರ್ವಹಿಸುತ್ತಾರೆ. ಆದರೆ ಭವಿಷ್ಯದಲ್ಲಿ ತಮ್ಮ ಜೀವನಶೈಲಿಯನ್ನು ಉಳಿಸಿಕೊಳ್ಳಲು ಅವರು ಸಾಕಷ್ಟು ಉಳಿಸುತ್ತಾರೆಯೇ? ನೀವು ಮಿಲೇನಿಯಲ್ಸ್‌ ಆಗಿದ್ದರೆ, ಭವಿಷ್ಯಕ್ಕಾಗಿ ಹಣ ಉಳಿಸುವ ಯೋಚನೆ ಹೊಂದಿದ್ದರೆ ಈ ಟಿಪ್ಸ್‌ ಓದಿ.

1) ಸಣ್ಣ ಉಳಿತಾಯ ಅಭ್ಯಾಸ ರೂಢಿಸಿಕೊಳ್ಳಿ

ಉಳಿತಾಯಕ್ಕೆ (small savings) ಸಂಬಂಧಿಸಿ ಮಿಲೇನಿಯಲ್‌ಗಳ ಚಿಂತನೆ ವಿಭಿನ್ನ. ಪ್ರವಾಸ, ದುಬಾರಿ ಗ್ಯಾಜೆಟ್‌, ಫ್ಯಾಶನ್ ಟ್ರೆಂಡ್‌ಗಳನ್ನು ಅನುಸರಿಸುವುದು ಇತ್ಯಾದಿಗಳಿಂದಾಗಿ ದೀರ್ಘಾವಧಿಯ ಉಳಿತಾಯದ ಶಿಸ್ತನ್ನು ಅನುಸರಿಸುವಲ್ಲಿ ಅಡ್ಡಿಯಾಗುತ್ತದೆ. ಖರ್ಚು ಮಾಡುವ ಮೊದಲು ಮಾಸಿಕ ಆದಾಯದ ಒಂದು ಭಾಗವನ್ನು ಉಳಿಸುವುದು ಉಳಿತಾಯದ ಶಿಸ್ತನ್ನು ಬೆಳೆಸಲು ಅತ್ಯುತ್ತಮ ಸೂತ್ರ.

ಸ್ಮಾರ್ಟ್ ಸಲಹೆ: 50-20-30 ನಿಯಮವನ್ನು ಅನುಸರಿಸಿ. ಇದರ ಅಡಿಯಲ್ಲಿ, ಆದಾಯದ 50% ಜೀವನ ವೆಚ್ಚಕ್ಕಾಗಿ, 20% ಆಹಾರ, ಮನರಂಜನೆ ಮತ್ತು ಪ್ರಯಾಣಕ್ಕಾಗಿ ಮೀಸಲಿಡಬಹುದು. ಉಳಿದ ಶೇ.30ರಷ್ಟು ಹಣವನ್ನು ಉಳಿತಾಯವಾಗಿ ಇಡಬೇಕು.

2) ವೆಚ್ಚಗಳನ್ನು ಟ್ರ್ಯಾಕ್ ಮಾಡಿ

ಮಿಲೇನಿಯಲ್ಸ್ ಆದಾಯವನ್ನು ತಕ್ಷಣ ಖರ್ಚು ಮಾಡುವತ್ತಲೇ ಪರಿಗಣಿಸುತ್ತಾರೆ. ಮನೆ ಬಾಡಿಗೆ, ದಿನಸಿ, ಭೋಜನ ಇತ್ಯಾದಿಗಳಂತಹ ತಕ್ಷಣದ ಉದ್ದೇಶಗಳಿಗಾಗಿ ಅದನ್ನು ಬಳಸಲು ಬಯಸುತ್ತಾರೆ. ಸ್ಮಾರ್ಟ್ ಉಳಿತಾಯ ಅಭ್ಯಾಸ ಅಳವಡಿಸಿಕೊಳ್ಳುವ ಒಂದು ಹೆಜ್ಜೆಯೆಂದರೆ ಖರ್ಚುಗಳನ್ನು ಗುರುತಿಸುವುದು. ಒಂದು ನಿರ್ದಿಷ್ಟ ಅವಧಿಗೆ ಎಲ್ಲಾ ಖರ್ಚುಗಳನ್ನು ನಮೂದಿಸುವ ಮೂಲಕ ಇದನ್ನು ಮಾಡಬಹುದು. ಇದರಿಂದ ಅನಗತ್ಯ ಅಥವಾ ತಪ್ಪಿಸಬಹುದಾದ ವೆಚ್ಚವನ್ನು ಕಡಿತಗೊಳಿಸಬಹುದು.

ಸ್ಮಾರ್ಟ್ ಸಲಹೆ: ಖರ್ಚು ಟ್ರ್ಯಾಕರ್ ಅಪ್ಲಿಕೇಶನ್‌ಗಳನ್ನು ಬಳಸಿ. ಹೆಚ್ಚಿನ ಮಿಲೇನಿಯಲ್‌ಗಳು ಟೆಕ್ ಸೇವಿಗಳು. ಮೊಬೈಲ್ ಖರ್ಚು ಟ್ರ್ಯಾಕರ್ ಅಪ್ಲಿಕೇಶನ್ ಅನ್ನು ಬಳಸುವುದು ವೆಚ್ಚಗಳನ್ನು ಟ್ರ್ಯಾಕ್ ಮಾಡುಲು ಉತ್ತಮ ಆಹಾರ, ಶಾಪಿಂಗ್ ಮತ್ತು ಮನರಂಜನೆಯಂತಹ ವೆಚ್ಚಗಳನ್ನು ವರ್ಗೀಕರಿಸಲು ಈ ಅಪ್ಲಿಕೇಶನ್‌ಗಳು ಸಹಾಯ ಮಾಡುತ್ತವೆ. ತಡವಾಗಿ ಬಿಲ್‌ಗಳನ್ನು ಪಾವತಿಸುವುದನ್ನು ತಪ್ಪಿಸಲು ರಿಮೈಂಡರ್‌ ಬಳಸಬಹುದು.

cash

3) ವಿವೇಚನೆಯಿಂದ ವೆಚ್ಚ ಮಾಡಿ

ತಮ್ಮ ವೃತ್ತಿಜೀವನವನ್ನು ಇತ್ತೀಚೆಗೆ ಪ್ರಾರಂಭಿಸಿರುವ ಮಿಲೇನಿಯಲ್‌ಗಳು ಉಳಿತಾಯ ಪ್ರಾರಂಭಿಸಲು ಅನಿವಾರ್ಯವಲ್ಲದ ವೆಚ್ಚಗಳನ್ನು ತಪ್ಪಿಸಬೇಕು. ಅಗತ್ಯ ಮತ್ತು ಅನಿವಾರ್ಯವಲ್ಲದ ವೆಚ್ಚವನ್ನು ಗುರುತಿಸುವುದು ಮುಖ್ಯ. ಅನಿಯಂತ್ರಿತವಾಗಿ ಬಿಟ್ಟರೆ ಈ ವೆಚ್ಚಗಳು ಸುಲಭವಾಗಿ ಆದಾಯವನ್ನು ಅಳಿಸಿಹಾಕಬಹುದು ಮತ್ತು ಭವಿಷ್ಯದ ಬಳಕೆಗಾಗಿ ಏನನ್ನೂ ಉಳಿಸದೇ ಇರಬಹುದು.

4) ಅನಗತ್ಯ ಸಾಲವನ್ನು ತಪ್ಪಿಸಿ

ಕ್ರೆಡಿಟ್ ಸೌಲಭ್ಯಗಳು ಸುಲಭವಾಗಿ ಲಭ್ಯವಿವೆ ಮತ್ತು ಸುಲಭವಾಗಿ ಪಡೆಯಬಹುದು. ಈ ಕಾರಣದಿಂದ ಅನೇಕ ಯುವಜನ ತಮ್ಮ ಜೀವನಶೈಲಿಯ ಅವಶ್ಯಕತೆಗಳನ್ನು ಪೂರೈಸಲು ಇವುಗಳ ಕಡೆಗೆ ಒಲವು ತೋರುತ್ತಾರೆ. ಆದರೆ ಇದು ಸಾಲದ ಬಲೆಗೆ ಕಾರಣವಾಗಬಹುದು. ಅಸುರಕ್ಷಿತ ವೈಯಕ್ತಿಕ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್ ಸಾಲಗಳಂತಹ ಅನಗತ್ಯ ಸಾಲವನ್ನು ತಪ್ಪಿಸುವುದು ಉತ್ತಮ. ಸಾಲದ ಉದ್ದೇಶ, ಮರುಪಾವತಿ ಯೋಜನೆ, ಮರುಪಾವತಿಗೆ ಹಣದ ಲಭ್ಯತೆ ಇತ್ಯಾದಿ ಅಂಶಗಳನ್ನು ಪರಿಗಣಿಸಿ.

5) ತುರ್ತು ನಿಧಿಯನ್ನು ಹೊಂದಿಸಿಡಿ

ಹೊಸ ಕಾರನ್ನು ಹೊಂದುವುದು, ಮದುವೆ ಅಥವಾ ಮನೆ ನವೀಕರಣಗಳಿಗೆಲ್ಲ ಸಾಕಷ್ಟು ಹಣದ ಅಗತ್ಯವಿರುತ್ತದೆ. ಈ ಗುರಿಗಳು ಉತ್ತಮವಾಗಿ ಉಳಿಸಲು ನಿಮ್ಮನ್ನು ಪ್ರೇರೇಪಿಸುತ್ತವೆ. ಆದರೆ ಹೆಚ್ಚಿನವರು ತುರ್ತು ನಿಧಿಯ (Emergency fund) ಅವಶ್ಯಕತೆಯನ್ನು ಕಡೆಗಣಿಸುತ್ತಾರೆ. ವೈದ್ಯಕೀಯ ಅಗತ್ಯಗಳಂತಹ ತುರ್ತು ಪರಿಸ್ಥಿತಿಗಳಿಗಾಗಿ ಉಳಿಸುವುದು ಯಾವಾಗಲೂ ಒಳ್ಳೆಯದು.

6) ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ

ಇನ್ನೂ ಹೂಡಿಕೆಯನ್ನು ಪ್ರಾರಂಭಿಸದ ಮಿಲೇನಿಯಲ್‌ಗಳು ತಮ್ಮ ಹೂಡಿಕೆಯ ಪ್ರಯಾಣವನ್ನು ಪ್ರಾರಂಭಿಸಲು ಸರಿಯಾದ ಸಮಯವಿದು. ದೀರ್ಘಾವಧಿಯ ಗುರಿಗಳನ್ನು ಸಾಧಿಸಲು ಹಣವನ್ನು ಉಳಿಸುವುದು ಹೂಡಿಕೆಯ ಮೂಲಕ ಮಾತ್ರ ಸಾಧ್ಯ. ನಿಮ್ಮ ಆದಾಯದ ಮಟ್ಟವನ್ನು ಲೆಕ್ಕಿಸದೇ ಮ್ಯೂಚುಯಲ್ ಫಂಡ್ ಹೂಡಿಕೆಗಳಿಗಾಗಿ ಕನಿಷ್ಠ 15-20% ಅನ್ನು ಮೀಸಲಿಡಬೇಕು. ಇವುಗಳು ನೀವು ಅನುಸರಿಸಿದ ಹೂಡಿಕೆಯ ಮಾದರಿ ಅವಲಂಬಿಸಿ ಧನಾತ್ಮಕ ಆದಾಯವನ್ನು ನೀಡಬಹುದು.

ಸ್ಮಾರ್ಟ್ ಸಲಹೆ: ಇಂದು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮ್ಯೂಚುವಲ್ ಫಂಡ್‌ಗಳು ಲಭ್ಯವಿದೆ. ಮ್ಯೂಚುವಲ್ ಫಂಡ್‌ಗಳ ರಿಸ್ಕ್ ರೇಟಿಂಗ್ ಅನ್ನು ನೋಡಿ ಹೂಡಿಕೆ ಮಾಡಲು ಪ್ರಾರಂಭಿಸಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಮ್ಯೂಚುಯಲ್ ಫಂಡ್‌ನಲ್ಲಿ ಹೆಚ್ಚಿನ ರಿಸ್ಕ್‌ ಕೂಡಾ ಇರುತ್ತದೆ.

Mutual Fund

7) ಷೇರು ಮಾರುಕಟ್ಟೆಯಲ್ಲಿ ಹೂಡಿಕೆ

ಇಂದು ಷೇರು ಮಾರುಕಟ್ಟೆ ಎಲ್ಲರಿಗೂ ಸುಲಭವಾಗಿ ಲಭ್ಯವಿದೆ ಮತ್ತು ಪ್ರವೇಶಿಸಬಹುದಾಗಿದೆ. ಹೂಡಿಕೆಯ ಆಯ್ಕೆಗಳಿಗಾಗಿ ಸ್ಟಾಕ್ ಮಾರುಕಟ್ಟೆಯನ್ನು ಅನ್ವೇಷಿಸುವುದು, ಒಟ್ಟು ಆದಾಯದ ಒಂದು ನಿರ್ದಿಷ್ಟ ಭಾಗವನ್ನು ಹೂಡುವುದು ಒಳ್ಳೆಯದು. ಸ್ಟಾಕ್ ಮಾರುಕಟ್ಟೆಗಳು ಏರಿಳಿತಗೊಳ್ಳುತ್ತಲೇ ಇರುತ್ತವೆ. ಆದ್ದರಿಂದ ಇವುಗಳ ಬಗ್ಗೆ ಹೆಚ್ಚಿನ ಜ್ಞಾನವನ್ನೂ ಗಳಿಸಿಕೊಳ್ಳಬೇಕು.

ಇದನ್ನೂ ಓದಿ: Money Guide: ಅತ್ಯುತ್ತಮ ನಿವೃತ್ತ ಜೀವನಕ್ಕಾಗಿ ಟಾಪ್ 10 ಹಣ ಉಳಿತಾಯದ ಟಿಪ್ಸ್!

8) ವಿಮೆ ಇರಲಿ

ಇಂದಿನ ಕಾಲದಲ್ಲಿ ಆರೋಗ್ಯ ವಿಮೆ ಬಹಳ ನಿರ್ಣಾಯಕ. ಆರೋಗ್ಯ ರಕ್ಷಣೆ, ಜೀವ ವಿಮೆಯಂತಹ ವಿಮೆಗಳನ್ನು ಆರಿಸಿಕೊಳ್ಳುವ ಮೂಲಕ ಮಿಲೇನಿಯಲ್‌ಗಳು ಹಣಕಾಸಿನ ಭದ್ರತೆಯನ್ನು ಹೊಂದಬೇಕು. ವಿಮೆಯು ನಿಮ್ಮ ಭವಿಷ್ಯಕ್ಕೆ ಮತ್ತು ನಿಮ್ಮ ಕುಟುಂಬ/ಅವಲಂಬಿತರ ಭವಿಷ್ಯಕ್ಕೆ ಆರ್ಥಿಕ ರಕ್ಷಣೆ ಒದಗಿಸುತ್ತದೆ. ವಿಮೆ ಯೋಜನೆ ಆರಿಸುವ ಮೊದಲು ನೀವು ವಿಮೆಯ ಕೆಲವು ಮೂಲಭೂತ ಅಂಶಗಳನ್ನು ಕಲಿಯಬೇಕು, ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಸರಿಯಾದುದನ್ನು ಆರಿಸಿಕೊಳ್ಳಬೇಕು. ವಿಮೆಯು ಕೇವಲ ಹಿರಿಯರಿಗೆ ಮಾತ್ರ ಅಲ್ಲ.

Health insurence
#image_title

9) ಲೈಫ್‌ಸ್ಟೈಲ್‌ ಬದಲಾವಣೆಗಳು

ಮಿಲೇನಿಯಲ್‌ಗಳ ಜೀವನಶೈಲಿಯು (lifestyle) ಹಿಂದಿನ ಪೀಳಿಗೆಗಿಂತ ಬಹಳ ಭಿನ್ನ. ಮಿಲೇನಿಯಲ್ಸ್ ಜೀವನದಲ್ಲಿ ಐಷಾರಾಮಿತನ ಬಯಸುತ್ತಾರೆ. ಐಷಾರಾಮಿ ಕೆಟ್ಟದ್ದಲ್ಲ. ಆದರೆ ಕೆಲವು ಜೀವನಶೈಲಿ ಹೊಂದಾಣಿಕೆಗಳು ದೀರ್ಘಾವಧಿಯಲ್ಲಿ ಗಮನಾರ್ಹ ಉಳಿತಾಯವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ.

10) ಕ್ರೆಡಿಟ್ ಕಾರ್ಡ್ ಬಾಕಿ ಪಾವತಿ ತಪ್ಪಿಸಬೇಡಿ

ಕ್ರೆಡಿಟ್ ಕಾರ್ಡ್‌ಗಳು ಬಳಕೆದಾರರಿಗೆ ಪಾವತಿ (credit card payment) ಮುಂದೂಡಲು ಅವಕಾಶ ನೀಡುತ್ತವೆ. ಆದರೆ ಅಷ್ಟೇ ಪ್ರಮಾಣದ ಬಡ್ಡಿಯನ್ನೂ ಕಸಿಯುತ್ತವೆ. ನಿಗದಿತ ದಿನಾಂಕದಂದು ಬಾಕಿ ಕಟ್ಟದೆ ಮುಂದೂಡಿ ಅದೇ ಹಣವನ್ನು ಇತರ ವೆಚ್ಚಗಳಿಗೆ ಬಳಸುವುದು ಅಪಾಯಕಾರಿ. ನೀವು ಹಣ ಉಳಿಬಯಸಿದ್ದರೆ ಕ್ರೆಡಿಟ್ ಕಾರ್ಡ್ ಬಾಕಿ ಮೇಲೆ ಪೂರ್ಣ ಪಾವತಿ ಮಾಡಿ. ಇದರಿಂದ ಲಾಭವೆಂದರೆ, ಒಂದು, ನಿಮ್ಮ ಕ್ರೆಡಿಟ್ ಸ್ಕೋರ್‌ ಮೇಲೆ ಧನಾತ್ಮಕ ಪರಿಣಾಮ ಮತ್ತು ಎರಡನೆಯದು, ನಿಮ್ಮ ಆದಾಯ-ವೆಚ್ಚದ ಮೇಲೆ ಉತ್ತಮ ನಿಯಂತ್ರಣ.

ಇದನ್ನೂ ಓದಿ: Money Guide: ಅಕ್ಟೋಬರ್ 1ರ ಮೊದಲೇ ಇದೆಲ್ಲ ಮಾಡಿಕೊಳ್ಳಿ… ಇಲ್ಲದಿದ್ದರೆ ಹಣ ಕಳೆದುಕೊಳ್ಳುವಿರಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಪ್ಯಾನ್‌ ಕಾರ್ಡ್‌ ಕಳೆದುಹೋದರೆ ಚಿಂತೆ ಬೇಡ; ಮನೆಯಲ್ಲೇ ಕೂತು ಡುಬ್ಲಿಕೇಟ್‌ ಪಡೆಯುವ ವಿಧಾನ ಇಲ್ಲಿದೆ

Money Guide: ನಮ್ಮ ಆರ್ಥಿಕ ಚಟುವಟಿಕೆಗೆ ಪ್ಯಾನ್‌ ನಂಬರ್‌ ಕಡ್ಡಾಯಗೊಳಿಸಲಾಗಿದೆ. ಅಂದರೆ ಪ್ಯಾನ್‌ ಕಾರ್ಡ್ ಇಲ್ಲದೆ ಇನ್‌ಕಮ್‌ ಟ್ಯಾಕ್ಸ್, ಬ್ಯಾಂಕಿನ ವಹಿವಾಟನ್ನು ನಡೆಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಆಕಸ್ಮಿಕವಾಗಿ ಪ್ಯಾನ್‌ ಕಾರ್ಡ್‌ ಕಳೆದು ಹೋದರೆ ಏನು ಮಾಡಬೇಕು? ಮರಳಿ ಪಡೆಯುವುದು ಹೇಗೆ? ಡುಬ್ಲಿಕೇಟ್‌ ಕಾರ್ಡ್‌ಗೆ ಆನ್‌ಲೈನ್‌ನಲ್ಲೇ ಹೇಗೆ ಅಪ್ಲೈ ಮಾಡಬಹುದು? ಮುಂತಾದ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

VISTARANEWS.COM


on

Money Guide
Koo

ಬೆಂಗಳೂರು: ಕೇಂದ್ರ ಸರ್ಕಾರವು ನಾಗರಿಕರಿಗೆ ಹಲವು ರೀತಿಯ ದಾಖಲೆಗಳನ್ನು ನೀಡಿದೆ. ಇವುಗಳಲ್ಲಿ ಆಧಾರ್ ಕಾರ್ಡ್, ವೋಟರ್ ಐಡಿ ಹಾಗೂ ಪ್ಯಾನ್ ಕಾರ್ಡ್ ಮುಖ್ಯವಾದುದು. ಹಣ ವರ್ಗಾವಣೆಯಿಂದ ಹಿಡಿದು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಈ ದಾಖಲೆಗಳು ಅಗತ್ಯ. ಅದರಲ್ಲೂ ನಮ್ಮ ಆರ್ಥಿಕ ಚಟುವಟಿಕೆಗೆ ಪ್ಯಾನ್‌ ನಂಬರ್‌ (Permanent Account Number) ಕಡ್ಡಾಯಗೊಳಿಸಲಾಗಿದೆ. ಅಂದರೆ ಪ್ಯಾನ್‌ ಕಾರ್ಡ್ ಇಲ್ಲದೆ ಇನ್‌ಕಮ್‌ ಟ್ಯಾಕ್ಸ್, ಬ್ಯಾಂಕಿನ ವಹಿವಾಟನ್ನು ನಡೆಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಆಕಸ್ಮಿಕವಾಗಿ ಪ್ಯಾನ್‌ ಕಾರ್ಡ್‌ ಕಳೆದು ಹೋದರೆ ಏನು ಮಾಡಬೇಕು? ಮರಳಿ ಪಡೆಯುವುದು ಹೇಗೆ? ಡುಬ್ಲಿಕೇಟ್‌ ಕಾರ್ಡ್‌ಗೆ ಆನ್‌ಲೈನ್‌ನಲ್ಲೇ ಹೇಗೆ ಅಪ್ಲೈ ಮಾಡಬಹುದು? ಮುಂತಾದ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Money Guide).

ಮೊದಲು ಏನು ಮಾಡಬೇಕು?

ನಿಮ್ಮ ಪ್ಯಾನ್‌ ಕಾರ್ಡ್‌ ಕಳೆದುಹೋಗಿದ್ದರೆ ಅಥವಾ ಕಳವಾಗಿದ್ದರೆ ಮೊದಲು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಇದರಿಂದ ಬೇರೆಯವರು ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆ ಮಾಡದಂತೆ ತಡೆಯಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಪ್ಯಾನ್ ಕಾರ್ಡ್ ದುರ್ಬಳಕೆ ಪ್ರಕರಣಗಳು ಹೆಚ್ಚುತ್ತಿರುವುದುರಿಂದ ಈ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ. ಬಳಿಕ ನಕಲಿ ಪ್ಯಾನ್‌ ಕಾರ್ಡ್‌ಗೆ ಅಪ್ಲೈ ಮಾಡಬಹುದು. ನಕಲಿ ಪ್ಯಾನ್‌ ಕಾರ್ಡ್‌ನ ಅನುಕೂಲವೆಂದರೆ ನಿಮಗೆ ಹಳೆ ನಂಬರ್ ಸಿಗಲಿದೆ. ಅದು ನಿಮ್ಮ ಕಳೆದು ಹೋದ ಪಾನ್ ಕಾರ್ಡ್‌ನ ನಕಲಿಯಾಗಿರುತ್ತದೆ.

ಆನ್‌ಲೈನ್‌ನಲ್ಲಿ ಡುಬ್ಲಿಕೇಟ್‌ ಪ್ಯಾನ್‌ ಕಾರ್ಡ್‌ ಪಡೆಯುವ ರೀತಿ

  • ಡುಬ್ಲಿಕೇಟ್‌ ಪ್ಯಾನ್‌ ಕಾರ್ಡ್‌ ಅಪ್ಲಿಕೇಷನ್‌ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ.
  • ನಿಮ್ಮ ಪ್ಯಾನ್‌ ನಂಬರ್‌, ಆಧಾರ್‌ ನಂಬರ್‌ ಮತ್ತು ಡೇಟ್‌ ಆಫ್‌ ಬರ್ತ್‌ ಕಾಲಂ ಭರ್ತಿ ಮಾಡಿ.
  • ಗಮನವಿಟ್ಟು ಷರತ್ತುಗಳನ್ನು ಓದಿ ಮನನ ಮಾಡಿಕೊಳ್ಳಿ.
  • ಕ್ಯಾಪ್ಚಾ ಕೋಡ್‌ ಭರ್ತಿ ಮಾಡಿ.
  • Submit ಬಟನ್‌ ಕ್ಲಿಕ್‌ ಮಾಡಿ.
  • ಈಗ ಹೊಸ ಪುಟ ತೆರೆದುಕೊಳ್ಳಲಿದ್ದು, ಅದರಲ್ಲಿ ನಿಮ್ಮ ಪ್ಯಾನ್‌ ಕಾರ್ಡ್‌ನ ವಿವರ ಕಂಡು ಬರುತ್ತದೆ.
  • ಪುಟದ ಕೆಳಗೆ ಕಂಡು ಬರುವ OTP on Email ID, Mobile Number ಆಯ್ಕೆಯನ್ನು ಸೆಲೆಕ್ಟ್‌ ಮಾಡಿ.
  • Generate OTP ಆಪ್ಶನ್‌ ಕ್ಲಿಕ್‌ ಮಾಡಿ.
  • ಒಟಿಪಿ ನಮೂದಿಸಿ Validate ಬಟನ್‌ ಆಯ್ಕೆ ಮಾಡಿ.

ಆಫ್‌ಲೈನ್‌ನಲ್ಲಿ ಡುಬ್ಲಿಕೇಟ್‌ ಪ್ಯಾನ್‌ ಕಾರ್ಡ್‌ ಪಡೆಯುವ ರೀತಿ

  • ಪ್ಯಾನ್ ಸೆಂಟರ್, ಐಟಿ ಪ್ಯಾನ್ ಸೇವಾ ಕೇಂದ್ರಕ್ಕೆ ತೆರಳಿ.
  • ‘Request for New PAN Changes or Correction in PAN Data’ ಅರ್ಜಿ ಪಡೆದು ಭರ್ತಿ ಮಾಡಿ.
  • ಗಮನಿಸಿ ಬ್ಲಾಕ್ ಲೆಟರ್‌ನಲ್ಲಿ, ಕಪ್ಪು ಶಾಹಿಯಲ್ಲಿ, ಆಂಗ್ಲ ಭಾಷೆಯಲ್ಲೇ ಫಾರ್ಮ್ ಭರ್ತಿ ಮಾಡಬೇಕು.
  • ಪ್ಯಾನ್ ಸಂಖ್ಯೆ ನಮೂದಿಸಿ. ಜತೆಗೆ ಇತ್ತೀಚಿನ ಛಾಯಾಚಿತ್ರ, ಸಹಿ ಅಗತ್ಯ.
  • ಬಳಿಕ ಅರ್ಜಿ ಸಲ್ಲಿಸಿ.

ಯಾವೆಲ್ಲ ದಾಖಲೆ ಅಗತ್ಯ?

  • ಐಡಿ ಪುರಾವೆ: ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ರೇಷನ್ ಕಾರ್ಡ್
  • ವಯಸ್ಸು ಪುರಾವೆ: ಜನನ ಪ್ರಮಾಣ ಪತ್ರ, ಪಿಂಚಣಿ ಪತ್ರ, ವಿವಾಹ ಪ್ರಮಾಣ ಪತ್ರ, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್
  • ಅಫಿಡವೀತ್ ವಿಳಾಸ ಪುರಾವೆ: ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ರೇಷನ್ ಕಾರ್ಡ್, ಪಿಂಚಣಿ ಪತ್ರ

ಇದನ್ನೂ ಓದಿ: Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Continue Reading

ಮನಿ-ಗೈಡ್

Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ವಿವಿಧ ಬ್ಯಾಂಕ್‌ಗಳ ಬಡ್ಡಿದರ ಪರಿಶೀಲಿಸಿ

Money Guide: ಟೈಮ್ ಡೆಪಾಸಿಟ್ ಅಥವಾ ಟರ್ಮ್ ಡೆಪಾಸಿಟ್ ಎಂದೂ ಕರೆಯಲ್ಪಡುವ ನಿಶ್ಚಿತ ಠೇವಣಿ ಭಾರತೀಯರ ನೆಚ್ಚಿನ ಹೂಡಿಕೆಯ ಆಯ್ಕೆ ಎನಿಸಿಕೊಂಡಿದೆ. ಯಾವುದೇ ರಿಸ್ಕ್‌ಗಳನ್ನು ತೆಗೆದುಕೊಳ್ಳದೆ ಇರುವ ಹೂಡಿಕೆದಾರರಿಗೆ ಇದು ಉತ್ತಮ. ಈ ಯೋಜನೆ ಮುಖಾಂತರ ಹೂಡಿಕೆದಾರರು ತಮ್ಮ ಹೆಚ್ಚುವರಿ ಹಣವನ್ನು ನಿಗದಿತ ಅವಧಿಗೆ ಠೇವಣಿ ಇರಿಸಿಕೊಳ್ಳಬಹುದು. ಫಿಕ್ಸೆಡ್ ಡೆಪಾಸಿಟ್‌ಗೆ ವಿವಿಧ ಬ್ಯಾಂಕ್‌ಗಳು ಎಷ್ಟು ಬಡ್ಡಿದರ ನೀಡುತ್ತವೆ ಎನ್ನುವ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಟೈಮ್ ಡೆಪಾಸಿಟ್ ಅಥವಾ ಟರ್ಮ್ ಡೆಪಾಸಿಟ್ ಎಂದೂ ಕರೆಯಲ್ಪಡುವ ನಿಶ್ಚಿತ ಠೇವಣಿ (Fixed Deposit) ಭಾರತೀಯರ ನೆಚ್ಚಿನ ಹೂಡಿಕೆಯ ಆಯ್ಕೆ ಎನಿಸಿಕೊಂಡಿದೆ. ಯಾವುದೇ ರಿಸ್ಕ್‌ಗಳನ್ನು ತೆಗೆದುಕೊಳ್ಳದೆ ಇರುವ ಹೂಡಿಕೆದಾರರಿಗೆ ಇದು ಉತ್ತಮ. ಈ ಯೋಜನೆ ಮುಖಾಂತರ ಹೂಡಿಕೆದಾರರು ತಮ್ಮ ಹೆಚ್ಚುವರಿ ಹಣವನ್ನು ನಿಗದಿತ ಅವಧಿಗೆ ಠೇವಣಿ ಇರಿಸಿಕೊಳ್ಳಬಹುದು. ಆಯ್ಕೆ ಮಾಡಿದ ಅವಧಿಗೆ ಸ್ಥಿರ ಬಡ್ಡಿಯನ್ನೂ ಪಡೆಯಬಹುದು ಎನ್ನುವ ಕಾರಣಕ್ಕೆ ಇದು ಅನೇಕರ ಗಮನ ಸೆಳೆಯುತ್ತದೆ. ಹೂಡಿಕೆಯ ಅವಧಿಯನ್ನು ಅವಲಂಬಿಸಿ ವಿವಿಧ ಬ್ಯಾಂಕ್‌ಗಳು ಶೇ. 3ರಿಂದ 7.50 ರವರೆಗೆ ಬಡ್ಡಿದರಗಳನ್ನು ನೀಡುತ್ತವೆ. ಹಿರಿಯ ನಾಗರಿಕರು ಹೆಚ್ಚುವರಿ ಶೇ. 0.5 ಬಡ್ಡಿಯೂ ಲಭ್ಯ. ಇಂದಿನ ಮನಿಗೈಡ್‌ (Money Guide)ನಲ್ಲಿ ಫಿಕ್ಸೆಡ್ ಡೆಪಾಸಿಟ್‌ಗೆ ವಿವಿಧ ಬ್ಯಾಂಕ್‌ಗಳು ಎಷ್ಟು ಬಡ್ಡಿದರ ನೀಡುತ್ತವೆ ಎನ್ನುವುದನ್ನು ಗಮನಿಸೋಣ.

ನಿಶ್ಚಿತ ಠೇವಣಿಯಲ್ಲಿ ಹೂಡಿಕೆಯ ಅವಧಿ ಮತ್ತು ಬಡ್ಡಿದರವನ್ನು ಮೊದಲೇ ನಿಗದಿಪಡಿಸಲಾಗಿರುತ್ತದೆ. ಸಾಮಾನ್ಯವಾಗಿ 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಯಲ್ಲಿ ನೀವು ಒಂದು ಬಾರಿ ಹೂಡಿಕೆ ಮಾಡಬಹುದು. ಇದರ ಮೇಲಿನ ಬಡ್ಡಿಯನ್ನು ನಿಯಮಿತ ಮಧ್ಯಂತರಗಳಲ್ಲಿ ಪಡೆಯಬಹುದು ಅಥವಾ ನೀವು ಮುಕ್ತಾಯದ ಸಮಯದಲ್ಲಿ ಅದನ್ನು ಸ್ವೀಕರಿಸುವ ಆಯ್ಕೆಯನ್ನು ಆಯ್ದುಕೊಳ್ಳಬಹುದು. 

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (2 ಕೋಟಿ ರೂ.ಗಿಂತ ಕಡಿಮೆ ಠೇವಣಿಗಳ ಮೇಲಿನ ಬಡ್ಡಿದರ)

ಎಸ್‌ಬಿಐಯ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡುವ ಗ್ರಾಹಕರಿಗೆ ಶೇ. 3ರಿಂದ 7ರವರೆಗೆ ಬಡ್ಡಿ ಲಭಿಸುತ್ತದೆ. ಜತೆಗೆ ಹಿರಿಯ ನಾಗರಿಕರು ಹೆಚ್ಚುವರಿ 50 ಬೇಸಿಸ್ ಪಾಯಿಂಟ್‌ (ಬಿಪಿಎಸ್) ಪಡೆಯಲಿದ್ದಾರೆ. ನಿರ್ದಿಷ್ಟವಾಗಿ ಒಂದು ವರ್ಷದಲ್ಲಿ ಮುಕ್ತಾಯಗೊಳ್ಳುವ ಎಫ್‌ಡಿಗೆ ಬ್ಯಾಂಕ್ ಶೇ. 6.80ರಷ್ಟು ಬಡ್ಡಿದರವನ್ನು ಒದಗಿಸುತ್ತದೆ. ಇದಲ್ಲದೆ, ಎರಡರಿಂದ ಮೂರು ವರ್ಷಗಳ ಅವಧಿಗೆ ಬ್ಯಾಂಕ್ ಶೇ. 7ರಷ್ಟು ಬಡ್ಡಿದರವನ್ನು ನೀಡುತ್ತದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (2 ಕೋಟಿ ರೂ.ಗಿಂತ ಕಡಿಮೆ ಠೇವಣಿಗಳ ಮೇಲಿನ ಬಡ್ಡಿದರ)

ಪಿಎನ್‌ಬಿ ಸ್ಥಿರ ಠೇವಣಿಗೆ ಶೇ. 3.50ರಿಂದ 7.50ರವರೆಗೆ ಬಡ್ಡಿದರ ಒದಗಿಸುತ್ತದೆ. ನಿರ್ದಿಷ್ಟವಾಗಿ ಒಂದು ವರ್ಷದಲ್ಲಿ ಮುಕ್ತಾಯಗೊಳ್ಳುವ ಸ್ಥಿರ ಠೇವಣಿಗಳಿಗೆ ಸಾಮಾನ್ಯ ಹೂಡಿಕೆದಾರರಿಗೆ ಬಡ್ಡಿದರವು ಶೇಕಡಾ 6.75ರಷ್ಟಿದ್ದರೆ, ಹಿರಿಯ ನಾಗರಿಕರು ಶೇ. 7.25ರಷ್ಟು ಪಡೆಯಲಿದ್ದಾರೆ.

ಎಚ್‌ಡಿಎಫ್‌ಸಿ ಬ್ಯಾಂಕ್ (2 ಕೋಟಿ ರೂ.ಗಿಂತ ಕಡಿಮೆ ಠೇವಣಿಗಳ ಮೇಲಿನ ಬಡ್ಡಿದರ)

ಎಚ್‌ಡಫ್‌ಸಿ ಬ್ಯಾಂಕ್ ಒಂದು ವರ್ಷದ ಸ್ಥಿರ ಠೇವಣಿಗಳಿಗೆ ಆಕರ್ಷಕ ಬಡ್ಡಿ ದರವನ್ನು ನೀಡುತ್ತದೆ. ನಿಯಮಿತ ಹೂಡಿಕೆದಾರರು ಶೇಕಡಾ 6.60ರಷ್ಟು ಬಡ್ಡಿದರವನ್ನು ಪಡೆಯಬಹುದು. ಮಾತ್ರವಲ್ಲ ಹಿರಿಯ ನಾಗರಿಕರು ಅಂತಹ ಠೇವಣಿಗಳ ಮೇಲೆ ಶೇಕಡಾ 7.10ರಷ್ಟು ಬಡ್ಡಿದರ ಹೊಂದಬಹುದು.

ಐಸಿಐಸಿಐ ಬ್ಯಾಂಕ್ (5 ಕೋಟಿ ರೂ.ಗಿಂತ ಕಡಿಮೆ ಠೇವಣಿಗಳ ಮೇಲಿನ ಬಡ್ಡಿದರ)

ಐಸಿಐಸಿಐ ಬ್ಯಾಂಕ್ ತನ್ನ ಎಫ್‌ಡಿ ಖಾತೆಗಳಿಗೆ ಬಡ್ಡಿದರಗಳನ್ನು ಶೇ. 3ರಿಂದ 7.50ರವರೆಗೆ ನೀಡುತ್ತದೆ. ಮಾತ್ರವಲ್ಲ ಹಿರಿಯ ನಾಗರಿಕರು ಹೆಚ್ಚುವರಿ ಶೇ. 0.5ರಷ್ಟು ಬಡ್ಡಿ ಪಡೆಯಲಿದ್ದಾರೆ. ನಿರ್ದಿಷ್ಟವಾಗಿ ಒಂದು ವರ್ಷದಲ್ಲಿ ಮುಕ್ತಾಯಗೊಳ್ಳುವ ಸ್ಥಿರ ಠೇವಣಿಗಳಿಗೆ ಸಾಮಾನ್ಯ ಗ್ರಾಹಕರಿಗೆ ಶೇ. 6.70ರಷ್ಟು ಬಡ್ಡಿ ಇದೆ.

ಇದನ್ನೂ ಓದಿ: Money Guide: ಭಾರತದಲ್ಲಿಯೂ ಆರಂಭವಾಯ್ತು ಬಹು ನಿರೀಕ್ಷಿತ ಗೂಗಲ್ ವ್ಯಾಲೆಟ್‌; ಇದು ಗೂಗಲ್‌ ಪೇಗಿಂತ ಹೇಗೆ ಭಿನ್ನ?

Continue Reading

ಮನಿ-ಗೈಡ್

Money Guide: ಎಫ್‌ಡಿ V/S ಆರ್‌ಡಿ; ಯಾವುದು ಉತ್ತಮ? ಯಾವುದರಲ್ಲಿ ಹೂಡಿಕೆ ಮಾಡಬೇಕು?

Money Guide: ಉಳಿತಾಯವು ಅನಿರೀಕ್ಷಿತ ಆಘಾತ, ಆರ್ಥಿಕ ಸಮಸ್ಯೆಗಳಿಂದ ನಿಮ್ಮನ್ನು ಕುಗ್ಗದಂತೆ ಕಾಪಾಡುತ್ತದೆ. ಹೀಗಾಗಿ ನೀವು ಭವಿಷ್ಯದ ದೃಷ್ಟಿಯಿಂದ ವಿವಿಧ ಯೋಜನೆಗಳಲ್ಲಿ ನಿಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡುವತ್ತ ಗಮನ ಹರಿಸಬೇಕು. ಈ ಪೈಕಿ ನಿಶ್ಚಿತ ಠೇವಣಿ ಮತ್ತು ರಿಕರಿಂಗ್‌ ಠೇವಣಿ ಪ್ರಮುಖವಾದುದು. ಹಾಗಾದರೆ ಈ ಎರಡು ಯೋಜನೆಗಳ ವೈಶಿಷ್ಟ್ಯಗಳೇನು ಎನ್ನುವುದನ್ನು ನೋಡೋಣ. ಎಫ್‌ಡಿ ಮತ್ತು ಆರ್‌ಡಿ ಇವೆರಡೂ ಭಾರತದಲ್ಲಿನ ಅತ್ಯಂತ ಜನಪ್ರಿಯ ಹೂಡಿಕೆ ಯೋಜನೆಗಳು ಎನಿಸಿಕೊಂಡಿವೆ. ವಿಶೇಷವಾಗಿ ಯಾವುದೇ ರಿಸ್ಕ್‌ಗಳನ್ನು ತೆಗೆದುಕೊಳ್ಳದೆ ಇರುವ ಹೂಡಿಕೆದಾರರಿಗೆ ಇವು ಉತ್ತಮ ಆಯ್ಕೆ.

VISTARANEWS.COM


on

Money Guide
Koo

ಬೆಂಗಳೂರು: ಇಂದಿನ ಉಳಿತಾಯವೇ ನಾಳೆಯ ಆದಾಯ ಎನ್ನುವ ಮಾತಿದೆ. ಅಂದರೆ ನಾವು ಎಷ್ಟು ಉಳಿತಾಯ ಮಾಡುತ್ತೇವೆಯೋ ಭವಿಷ್ಯದಲ್ಲಿ ಅಷ್ಟು ನೆಮ್ಮದಿ ಇರುತ್ತದೆ ಎನ್ನುವುದು ಇದಕ್ಕೆ ಕಾರಣ. ಇದಕ್ಕಾಗಿಯೇ ಆರ್ಥಿಕ ತಜ್ಞರು ಉಳಿತಾಯದತ್ತ ಗಮನ ಹರಿಸುವಂತೆ ಸಲಹೆ ನೀಡುತ್ತಾರೆ. ಉಳಿತಾಯವು ಅನಿರೀಕ್ಷಿತ ಆಘಾತ, ಆರ್ಥಿಕ ಸಮಸ್ಯೆಗಳಿಂದ ನಿಮ್ಮನ್ನು ಕುಗ್ಗದಂತೆ ಕಾಪಾಡುತ್ತದೆ. ಹೀಗಾಗಿ ನೀವು ಭವಿಷ್ಯದ ದೃಷ್ಟಿಯಿಂದ ವಿವಿಧ ಯೋಜನೆಗಳಲ್ಲಿ ನಿಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡುವತ್ತ ಗಮನ ಹರಿಸಬೇಕು. ಈ ಪೈಕಿ ನಿಶ್ಚಿತ ಠೇವಣಿ (Fixed Deposits) ಮತ್ತು ರಿಕರಿಂಗ್‌ ಠೇವಣಿ (Recurring Deposits) ಪ್ರಮುಖವಾದುದು. ಹಾಗಾದರೆ ಈ ಎರಡು ಯೋಜನೆಗಳ ವೈಶಿಷ್ಟ್ಯಗಳೇನು ಎನ್ನುವುದನ್ನು ನೋಡೋಣ (Money Guide).

ಎಫ್‌ಡಿ ಮತ್ತು ಆರ್‌ಡಿ ಇವೆರಡೂ ಭಾರತದಲ್ಲಿನ ಅತ್ಯಂತ ಜನಪ್ರಿಯ ಹೂಡಿಕೆ ಯೋಜನೆಗಳು ಎನಿಸಿಕೊಂಡಿವೆ. ವಿಶೇಷವಾಗಿ ಯಾವುದೇ ರಿಸ್ಕ್‌ಗಳನ್ನು ತೆಗೆದುಕೊಳ್ಳದೆ ಇರುವ ಹೂಡಿಕೆದಾರರಿಗೆ ಇವು ಉತ್ತಮ ಆಯ್ಕೆ. ಇದರಿಂದ ಯಾವುದೇ ಅಪಾಯವಿಲ್ಲದೆ ಸ್ಥಿರ ಆದಾಯವನ್ನು ಗಳಿಸಬಹುದು ಎನ್ನುವ ಕಾರಣಕ್ಕೆ ಇದನ್ನು ಬಹುತೇಕರು ನೆಚ್ಚಿಕೊಂಡಿದ್ದಾರೆ.

ನಿಶ್ಚಿತ ಠೇವಣಿಯಲ್ಲಿ ಹೂಡಿಕೆಯ ಅವಧಿ ಮತ್ತು ಬಡ್ಡಿದರವನ್ನು ಮೊದಲೇ ನಿಗದಿಪಡಿಸಲಾಗಿರುತ್ತದೆ. ಸಾಮಾನ್ಯವಾಗಿ 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಯಲ್ಲಿ ನೀವು ಒಂದು ಬಾರಿ ಹೂಡಿಕೆ ಮಾಡಬಹುದು. ಇದರ ಮೇಲಿನ ಬಡ್ಡಿಯನ್ನು ನಿಯಮಿತ ಮಧ್ಯಂತರಗಳಲ್ಲಿ ಪಡೆಯಬಹುದು ಅಥವಾ ನೀವು ಮುಕ್ತಾಯದ ಸಮಯದಲ್ಲಿ ಅದನ್ನು ಸ್ವೀಕರಿಸುವ ಆಯ್ಕೆಯನ್ನು ಆಯ್ದುಕೊಳ್ಳಬಹುದು. 

ರಿಕರಿಂಗ್ ಡೆಪಾಸಿಟ್ ಯೋಜನೆಯಲ್ಲಿ ನೀವು ನಿರ್ದಿಷ್ಟ ಮೊತ್ತಗಳನ್ನು ಠೇವಣಿ ಇಡಬಹುದು. ಇದು 6 ತಿಂಗಳಿಂದ 10 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಶ್ರೇಣಿಯಲ್ಲಿರಬಹುದು. ರಿಕರಿಂಗ್ ಡೆಪಾಸಿಟ್‌ನಲ್ಲಿ ನೀವು ಹೂಡಿಕೆ ಮಾಡಬಹುದಾದ ಕನಿಷ್ಠ ಮೊತ್ತವು ಸಾಮಾನ್ಯವಾಗಿ ಕೇವಲ ರೂ. 100 ಅಥವಾ ಅದಕ್ಕೂ ಕಡಿಮೆ ಇರುತ್ತದೆ. ಮೆಚ್ಯೂರಿಟಿ ಸಮಯದಲ್ಲಿ ಬಡ್ಡಿಯೊಂದಿಗೆ ಅಸಲನ್ನು ಪಡೆಯಬಹುದು.

ಎಫ್‌ಡಿಯ ವೈಶಿಷ್ಟ್ಯ

  • ಒಟ್ಟು ಮೊತ್ತದ ಹೂಡಿಕೆ: ಎಫ್‌ಡಿಗಳಿಗೆ ಒಂದು ಬಾರಿಯ ದೊಡ್ಡ ಮೊತ್ತದ ಠೇವಣಿ ಅಗತ್ಯ.
  • ಸ್ಥಿರ ಬಡ್ಡಿದರ: ಬಡ್ಡಿದರವನ್ನು ಹೂಡಿಕೆಯ ಸಮಯದಲ್ಲಿ ನಿಗದಿಪಡಿಸಲಾಗುತ್ತದೆ ಮತ್ತು ಅವಧಿಯುದ್ದಕ್ಕೂ ಸ್ಥಿರವಾಗಿರುತ್ತದೆ.
  • ಬಡ್ಡಿ ಪಾವತಿ ಆಯ್ಕೆಗಳು: ನಿಮ್ಮ ಆದ್ಯತೆಯನ್ನು ಅವಲಂಬಿಸಿ ಬಡ್ಡಿಯನ್ನು ಸಂಯೋಜಿಸಬಹುದು ಮತ್ತು ಮರುಹೂಡಿಕೆ ಮಾಡಬಹುದು.
  • ಕಡಿಮೆ ದ್ರವ್ಯತೆ: ಗಮನಿಸಿ ಅವಧಿ ಮುಕ್ತಾಯಗೊಳ್ಳುವ ಮೊದಲು ಎಫ್‌ಡಿಯನ್ನು ಹಿಂಪಡೆಯುವುದು ದಂಡಕ್ಕೆ ಮತ್ತು ಬಡ್ಡಿ ನಷ್ಟಕ್ಕೆ ಕಾರಣವಾಗಬಹುದು.

ಆರ್‌ಡಿಯ ವೈಶಿಷ್ಟ್ಯ

  • ನಿಯಮಿತ ಉಳಿತಾಯ: ಆರ್‌ಡಿ ನಿಮಗೆ ನಿಯಮಿತವಾಗಿ ಸಾಮಾನ್ಯವಾಗಿ ಮಾಸಿಕವಾಗಿ ನಿಗದಿತ ಮೊತ್ತವನ್ನು ಉಳಿಸಲು ಅನುವು ಮಾಡಿಕೊಡುತ್ತದೆ.
  • ಫ್ಲೆಕ್ಸಿಬಲ್ ಡೆಪಾಸಿಟ್ ಮೊತ್ತ: ನೀವು ಪ್ರತಿ ತಿಂಗಳು ಠೇವಣಿ ಮಾಡಬೇಕಾದ ಮೊತ್ತವನ್ನು ಆಯ್ಕೆ ಮಾಡಬಹುದು.
  • ಸ್ಥಿರ ಬಡ್ಡಿದರ: ಎಫ್‌ಡಿಯಂತೆಯೇ ಆರ್‌ಡಿ ಕೂಡ ಇಡೀ ಅವಧಿಗೆ ಸ್ಥಿರ ಬಡ್ಡಿದರವನ್ನು ನೀಡುತ್ತದೆ.
  • ನಿಗದಿತ ಅವಧಿ: ಆರ್‌ಡಿ ನಿಗದಿತ ಅವಧಿಯನ್ನು ಹೊಂದಿರುತ್ತದೆ. ಮೆಚ್ಯೂರಿಟಿ ಮೊತ್ತವನ್ನು ಮೊದಲೇ ನಿರ್ಧರಿಸಲಾಗುತ್ತದೆ.
  • ಹೆಚ್ಚಿನ ದ್ರವ್ಯತೆ: ಎಫ್‌ಡಿಗೆ ಹೋಲಿಸಿದರೆ ಆರ್‌ಡಿ ಉತ್ತಮ ದ್ರವ್ಯತೆಯನ್ನು ನೀಡುತ್ತವೆ. ನೀವು ಸಂಗ್ರಹಿಸಿಟ್ಟ ಮೊತ್ತವನ್ನು ಯಾವಾಗ ಬೇಕಾದರೂ ಹಿಂಪಡೆಯಬಹುದು ಅಥವಾ ತುರ್ತು ಸಂದರ್ಭಗಳಲ್ಲಿ ಅದರ ಮೇಲೆ ಸಾಲವನ್ನು ತೆಗೆದುಕೊಳ್ಳಬಹುದು.

ಯಾವುದು ಉತ್ತಮ?

ಮೊದಲೇ ಹೇಳಿದಂತೆ ಎಫ್‌ಡಿ ಮತ್ತು ಆರ್‌ಡಿ ಎರಡೂ ಉತ್ತಮ ಉಳಿತಾಯ ಯೋಜನೆ ಎನಿಸಿಕೊಂಡಿದೆ. ಎಫ್‌ಡಿಯಲ್ಲಿ ಹೂಡಿಕೆ ಮಾಡಲು ದೊಡ್ಡ ಮೊತ್ತವನ್ನು ಹೊಂದಿರಬೇಕಾಗುತ್ತದೆ. ಆದರೆ ಮಾಸಿಕ ಆದಾಯದಿಂದ ಸಣ್ಣ ಭಾಗವನ್ನು ಹೂಡಿಕೆ ಮಾಡುವವರಿಗೆ ಆರ್‌ಡಿ ಉತ್ತಮ. ಆರ್‌ಡಿ ಮತ್ತು ಎಫ್‌ಡಿ ಎರಡೂ ಕಡಿಮೆ ತೆರಿಗೆ ಸ್ಲ್ಯಾಬ್‌ನಲ್ಲಿರುವ ರಿಸ್ಕ್‌ಗಳನ್ನು ತೆಗೆದುಕೊಳ್ಳದ ಹೂಡಿಕೆದಾರರಿಗೆ ಹೆಚ್ಚು ಸೂಕ್ತವಾಗಿವೆ. ನಿಮಗೆ ಯಾವುದು ಉತ್ತಮ ಎಂಬುದು ನಿಮ್ಮ ಆರ್ಥಿಕ ಗುರಿಗಳು ಮತ್ತು ಆದ್ಯತೆಗಳನ್ನು ಅವಲಂಬಿಸಿರುತ್ತದೆ. ನೀವು ಹೂಡಿಕೆ ಮಾಡಲು ದೊಡ್ಡ ಮೊತ್ತವನ್ನು ಹೊಂದಿದ್ದರೆ ಮತ್ತು ದ್ರವ್ಯತೆ ಅಗತ್ಯವಿಲ್ಲದಿದ್ದರೆ ಎಫ್‌ಡಿ ಸೂಕ್ತವಾಗಬಹುದು. ಮತ್ತೊಂದೆಡೆ ನೀವು ನಿಯಮಿತವಾಗಿ ಉಳಿತಾಯ ಮಾಡಲು ಮತ್ತು ದ್ರವ್ಯತೆಗೆ ಆದ್ಯತೆ ನೀಡಲು ಬಯಸಿದರೆ ಆರ್‌ಡಿ ಉತ್ತಮ ಆಯ್ಕೆಯಾಗಿದೆ. ನಿರ್ಧಾರ ತೆಗೆದುಕೊಳ್ಳುವ ಮೊದಲು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ನಿರ್ಣಯಿಸುವುದು ಮತ್ತು ಹಣಕಾಸು ಸಲಹೆಗಾರರೊಂದಿಗೆ ಸಮಾಲೋಚನೆ ನಡೆಸಿ.

ಇದನ್ನೂ ಓದಿ: Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Continue Reading

ಮನಿ-ಗೈಡ್

Money Guide: ಮಹಿಳಾ ಸಮ್ಮಾನ್‌ ಸರ್ಟಿಫಿಕೆಟ್‌: ಈ ಅಮ್ಮಂದಿರ ದಿನ ನೀವು ನೀಡಬಹುದಾದ ಅತ್ಯುತ್ತಮ ಉಡುಗೊರೆ

Money Guide: ಈ ಅಮ್ಮಂದಿರ ದಿನ ನಿಮ್ಮ ತಾಯಿಗೆ ಉಡುಗೊರೆ ಕೊಡಬೇಕೆಂಬ ಯೋಜನೆಯಲ್ಲಿದ್ದೀರಾ? ಹಾಗಾದರೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರದಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ಮಾರ್ಗ. ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗಾಗಿ ಜಾರಿಗೆ ತಂದ ವಿಶೇಷ ಉಳಿತಾಯ ಯೋಜನೆಯೇ ಈ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ. ಈ ಯೋಜನೆಯ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ನಾಳೆ (ಮೇ 12) ವಿಶ್ವ ಅಮ್ಮಂದಿರ ದಿನ (Mother’s Day 2024). ಜೀವನಪೂರ್ತಿ ನಮಗಾಗಿ ನಿಸ್ವಾರ್ಥವಾಗಿ ಮಿಡಿಯುವ ಜೀವಕ್ಕೆ ಚಿಕ್ಕದೊಂದು ಧನ್ಯವಾದ ಹೇಳುವ ದಿನ ಇದು. ಅಮ್ಮಂದಿರ ಋಣವನ್ನು ತೀರಿಸಲು ಸಾಧ್ಯವಿಲ್ಲವಾದರೂ ಒಂದು ಚಿಕ್ಕ ಉಡುಗೊರೆ ಕೊಡುವ ಮೂಲಕ ಅವರ ಮೊಗದಲ್ಲಿ ನಗು ಅರಳಿಸಬಹುದು. ಈ ಅಮ್ಮಂದಿರ ದಿನದಲ್ಲಿ ನಿಮ್ಮ ಅಮ್ಮನಿಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆಯ ಪೈಕಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ (Mahila Samman Saving Certificate Scheme)ವೂ ಒಂದು. ಏನಿದು ಯೋಜನೆ? ಈ ಯೋಜನೆ ಮಹಿಳೆಯರಿಗೆ ಹೇಗೆ ಪ್ರಯೋಜಕಾರಿ? ಮುಂತಾದ ನಿಮ್ಮ ಸಂದೇಹಕ್ಕೆ ಇಲ್ಲಿದೆ ಉತ್ತರ (Money Guide).

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಎಂದರೇನು?

ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗಾಗಿ ಜಾರಿಗೆ ತಂದ ವಿಶೇಷ ಉಳಿತಾಯ ಯೋಜನೆಯೇ ಈ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ. ಈ ವಿಶೇಷ ಉಳಿತಾಯ ಯೋಜನೆ ಮಹಿಳೆಯರನ್ನು ಆರ್ಥಿಕವಾಗಿ ಮುಖ್ಯವಾಹಿನಿಗೆ ತರುವ ಗುರಿಯನ್ನು ಹೊಂದಿದ್ದು, ಅವರ ಭವಿಷ್ಯಕ್ಕಾಗಿ ಉಳಿತಾಯವನ್ನು ಮಾಡಲು ಪ್ರೋತ್ಸಾಹಿಸುತ್ತದೆ.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯನ್ನು ಕೇಂದ್ರ ಬಜೆಟ್ ತನ್ನ 2023ರ ಬಜೆಟ್‌ನಲ್ಲಿ ಘೋಷಿಸಿದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರವು ಮಾರ್ಚ್ 2025ರವರೆಗೆ ಲಭ್ಯವಿದೆ. ಇದು 2 ವರ್ಷಗಳ ಅವಧಿಗೆ ಮಹಿಳೆಯರು ಅಥವಾ ಹುಡುಗಿಯರ ಹೆಸರಿನಲ್ಲಿ 2 ಲಕ್ಷ ರೂ.ವರೆಗೆ ಠೇವಣಿ ಇಡುವ ಸೌಲಭ್ಯವನ್ನು ಒದಗಿಸುತ್ತದೆ. ಈ ಯೋಜನೆಯ ಅಡಿಯಲ್ಲಿ ಕೇವಲ ಮಹಿಳೆಯರು ಹಾಗೂ ಯುವತಿಯರು ಮಾತ್ರ ಹೂಡಿಕೆ ಮಾಡಬಹುದಾಗಿದೆ. ಮಹಿಳೆಯರು ಸ್ವತಃ ತಾವೇ ಹಾಗೂ ಅಪ್ರಾಪ್ತ ಬಾಲಕಿಯರ ಪರವಾಗಿ ಅವರ ಪೋಷಕರು ಈ ಖಾತೆಯನ್ನು ನಿರ್ವಹಿಸಬಹುದಾಗಿದೆ. ಹೀಗಾಗಿ ಈ ಬಾರಿ ನೀವು ತಾಯಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಉತ್ತೇಜನ ನೀಡಿ.

ಅರ್ಹತೆ

  • ಯಾವುದೇ ಭಾರತೀಯ ಮಹಿಳೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದಕ್ಕೆ ವಯಸ್ಸಿನ ನಿರ್ಬಂಧವಿಲ್ಲ.
  • ಅಪ್ರಾಪ್ತ ವಯಸ್ಸಿನ ಬಾಲಕಿಯ ಸ್ವಾಭಾವಿಕ ಅಥವಾ ಕಾನೂನುಬದ್ಧ ಪೋಷಕರು ಖಾತೆ ತೆರೆಯಬಹುದು.
  • ಗಮನಿಸಿ ವೈಯಕ್ತಿಕ ಖಾತೆಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.
  • ಹೂಡಿಕೆಯ ಕನಿಷ್ಠ ಮೊತ್ತ 1,000 ರೂ. ಮತ್ತು ಗರಿಷ್ಠ ಮೊತ್ತ 2,00,000.

ಬಡ್ಡಿ ದರ

ಈ ಖಾತೆಯನ್ನು ಹೊಂದಿರುವವರಿಗೆ ವಾರ್ಷಿಕ 7.5 ಪ್ರತಿಶತ ನಿಶ್ಚಿತ ಬಡ್ಡಿ ದರವನ್ನು ನೀಡಲಾಗುತ್ತದೆ. ಬ್ಯಾಂಕ್‌ನ ಸ್ಥಿರ ಠೇವಣಿ ಹಾಗೂ ಇತರ ಸಣ್ಣ ಉಳಿತಾಯ ಯೋಜನೆಗಳಿಗೆ ಹೋಲಿಕೆ ಮಾಡಿದರೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರದ ಅಡಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಬಡ್ಡಿದರ ಸಿಗಲಿದೆ.

ಅವಧಿ

ಈ ಯೋಜನೆಯ ಮೆಚ್ಯೂರಿಟಿ ಅವಧಿ 2 ವರ್ಷ. ಈ ಅವಧಿಯನ್ನು ಪೂರ್ಣಗೊಳಿಸಿದ ಬಳಿಕ ಖಾತೆದಾರರಿಗೆ ಮೆಚ್ಯೂರಿಟಿ ಮೊತ್ತ ಪಾವತಿಯಾಗುತ್ತದೆ. ಒಂದು ವೇಳೆ ಅವಧಿ ಮೀರುವ ಮುನ್ನ ಹಿಂಪಡೆಯಬೇಕೆಂದರೆ ಖಾತೆಯಲ್ಲಿರುವ ಒಟ್ಟು ಮೊತ್ತದ ಶೇ. 40ರಷ್ಟು ಹಿಂಪಡೆಯಬಹುದು. ಆದರೆ ಖಾತೆಯನ್ನು ತೆರೆದು ಒಂದು ವರ್ಷ ಆಗಿರಬೇಕು. ಜತೆಗೆ ಆಯ್ದ ಸಂದರ್ಭಗಳಲ್ಲಿ ಖಾತೆಗಳನ್ನು ಅಕಾಲಿಕವಾಗಿ ಬಂದ್ ಮಾಡಬಹುದು.

ಖಾತೆ ತೆರೆಯುವುದು ಹೇಗೆ?

ಈ ಖಾತೆಯನ್ನು ಅಂಚೆ ಕಚೇರಿ ಅಥವಾ ಆಯ್ದ ಬ್ಯಾಂಕ್‌ಗಳಲ್ಲಿ ತೆರೆಯಬಹುದು. ನಿರ್ದಿಷ್ಟ ಅರ್ಜಿಯನ್ನು ಭರ್ತಿ ಮಾಡಿ, ಕೆವೈಸಿ ದಾಖಲೆಗಳನ್ನು ಒದಗಿಸಿ ಆರಂಭಿಕ ಠೇವಣಿ ಮೊತ್ತವನ್ನು ಇಡುವ ಮೂಲಕ ಖಾತೆಯನ್ನು ತೆರೆಯಬಹುದಾಗಿದೆ. ಇದಕ್ಕಾಗಿ ನೀವು ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್ ನೀಡಬೇಕಾಗುತ್ತದೆ.

ಇದನ್ನೂ ಓದಿ: Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Continue Reading
Advertisement
Karnataka Weather
ಕರ್ನಾಟಕ3 mins ago

Karnataka Weather: ಇಂದು, ನಾಳೆ ಗುಡುಗು, ಮಿಂಚು ಸಹಿತ ಭಾರಿ ಮಳೆ; ಉತ್ತರ ಒಳನಾಡಿನಲ್ಲಿ ಆರೆಂಜ್ ಅಲರ್ಟ್

Amit Shah
ದೇಶ20 mins ago

Amit Shah: ಭಾರತದ ಜತೆ ಪಿಒಕೆ ವಿಲೀನ ಮಾಡುವುದೇ ನಮ್ಮ ಗುರಿ, ಬದ್ಧತೆ; ಅಮಿತ್‌ ಶಾ ಘೋಷಣೆ

Prajwal Revanna Case Will SIT team go abroad for arrest Prajwal
ಕ್ರೈಂ24 mins ago

Prajwal Revanna Case: ವಿದೇಶದಿಂದ ಬಾರದ ಪ್ರಜ್ವಲ್‌; ಜರ್ಮನಿಗೆ ಹೋಗುತ್ತಾ ಎಸ್‌ಐಟಿ ಟೀಂ? ಮುಂದಿನ ಆಯ್ಕೆ ಏನು?

Rajkummar Rao
ಸಿನಿಮಾ28 mins ago

Rajkummar Rao: ಮುಂಬಯಿಗೆ ಬಂದು ಶಾರುಕ್‌ ಮನೆ ಮುಂದೆ ದಿನವಿಡೀ ಕಾದಿದ್ದರಂತೆ ನಟ ರಾಜ್‌ಕುಮಾರ್ ರಾವ್‌!

North East Graduate Constituency Election Congress party leaders and workers Meeting in Yadgiri
ರಾಜಕೀಯ41 mins ago

MLC Election: ಪರಿಷತ್ ಚುನಾವಣೆ; ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಶ್ರಮಿಸಲು ಕಾರ್ಯಕರ್ತರಿಗೆ ದರ್ಶನಾಪುರ ಮನವಿ

T20 World Cup 2024
ಕ್ರೀಡೆ43 mins ago

T20 World Cup 2024: ಭಾರತ ಕೇವಲ ಒಂದು ಅಭ್ಯಾಸ ಪಂದ್ಯ ಮಾತ್ರ ಆಡಲಿದೆ; ಕಾರಣ ಏನು?

MLC Election
ಕರ್ನಾಟಕ57 mins ago

MLC Election: ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಫೈನಲ್‌; ಬಂಡಾಯವಾಗಿ ಬಿಜೆಪಿ ಅಭ್ಯರ್ಥಿ ನಾಮಪತ್ರ

CAA
EXPLAINER59 mins ago

CAA: ಸಿಎಎ ಅನ್ವಯ 14 ಜನಕ್ಕೆ ಭಾರತದ ಪೌರತ್ವ; ಏನಿದು ಕಾಯ್ದೆ? ಭಾರತದ ಮುಸ್ಲಿಮರಿಗೆ ತೊಂದರೆ ಇದೆಯೇ?

Fortis Hospital doctors team performed a successful complex kidney transplant surgery for two patients with robotic assistance
ಕರ್ನಾಟಕ1 hour ago

Fortis Hospital: ರೋಬೋಟಿಕ್‌ ನೆರವಿನಿಂದ ಇಬ್ಬರಿಗೆ ‘ಸಂಕೀರ್ಣ ಕಿಡ್ನಿ ಕಸಿ’ ಆಪರೇಷನ್ ಸಕ್ಸೆಸ್!

V. Sunil Kumar latest statemetn
ಬೆಂಗಳೂರು1 hour ago

V. Sunil Kumar: ರಾಜ್ಯದಲ್ಲಿ ಅಸಮರ್ಥ ಸಂಪುಟ, ಅಭಿವೃದ್ಧಿ ಶೂನ್ಯ ಸರ್ಕಾರ: ವಿ. ಸುನೀಲ್ ಕುಮಾರ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ11 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ13 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ23 hours ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20241 day ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20241 day ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ1 day ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು1 day ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌