Asian Games 2023: ಬೆಳ್ಳಿ ಗೆದ್ದ ಟೋಕಿಯೊ ಸ್ಟಾರ್‌ ಲವ್ಲಿನಾ ಬೋರ್ಗಹೈನ್‌ - Vistara News

ಕ್ರೀಡೆ

Asian Games 2023: ಬೆಳ್ಳಿ ಗೆದ್ದ ಟೋಕಿಯೊ ಸ್ಟಾರ್‌ ಲವ್ಲಿನಾ ಬೋರ್ಗಹೈನ್‌

ಲವ್ಲಿನಾ ಬೋರ್ಗಹೈನ್‌(Lovlina Borgohain) ಇಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​(Asian Games 2023) ಕ್ರೀಡಾಕೂಟದ ಫೈನಲ್‌ನಲ್ಲಿ ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ

VISTARANEWS.COM


on

lovlina borgohain
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹ್ಯಾಂಗ್‌ಝೌ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬಾಕ್ಸರ್‌ ಲವ್ಲಿನಾ ಬೋರ್ಗಹೈನ್‌(Lovlina Borgohain) ಇಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​(Asian Games 2023) ಕ್ರೀಡಾಕೂಟದ ಫೈನಲ್‌ನಲ್ಲಿ ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ. 75 ಕೆಜಿ ವಿಭಾಗದ ಮಹಿಳಾ ಬಾಕ್ಸಿಂಗ್‌ನಲ್ಲಿ ಕಣಕ್ಕಿಳಿದಿದ್ದ​ ಅವರ ಮೇಲೆ ಚಿನ್ನದ ಪದಕ ಬರವಸೆ ಮಾಡಲಾಗಿತ್ತು. ಆದರೆ ಇದು ಹುಸಿಗೊಂಡಿದೆ.

ಮಂಗಳವಾರ ನಡೆದಿದ್ದ ಸೆಮಿಫೈನಲ್‌ನಲ್ಲಿ ಲವ್ಲಿನಾ ಬೋರ್ಗಹೈನ್‌ ಥಾಯ್ಲೆಂಡ್‌ನ ಬೈಸನ್ ಮನೀಕಾನ್ ವಿರುದ್ಧ 5-0 ಅಂಕಗಳಿಂದ ಗೆದ್ದು ಮುಂದಿನ ವರ್ಷ ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ಗೆ ಅರ್ಹತೆಯನ್ನು ಪಡೆದಿದ್ದರು. ಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಲವ್ಲಿನಾ 69 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಕಂಚು ಗೆದ್ದಿದ್ದರು. ಬುಧವಾರ ನಡೆದ ಫೈನಲ್‌ನಲ್ಲಿ ಚೀನಾದ ಲಿ ಕಿಯಾನ್ ವಿರುದ್ಧ ಸೋತು ನಿರಾಸೆ ಮೂಡಿಸಿದರು.

ಇದೇ ವರ್ಷ ಮಾರ್ಚ್​ನಲ್ಲಿ ನಡೆದಿದ್ದ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ(Women’s Boxing Championship) ಲವ್ಲಿನಾ ​ ಅವರು ಚಿನ್ನದ ಪದಕ ಜಯಿಸಿದ್ದರು. ನೂತನ ತೂಕ ವಿಭಾಗದಲ್ಲಿ ಸ್ಪರ್ಧೆಗೆ ಇಳಿದಿದ್ದರು. 69 ಕೆಜಿ ವೆಲ್ಟರ್‌ವೆಟ್‌ನಿಂದ 75 ಕೆಜಿ ಮಿಡ್ಲ್ ವೇಟ್‌ಗೆ ಸ್ಪರ್ಧೆಯನ್ನು ಬದಲಿಸಿಕೊಂಡು ಸ್ಪರ್ಧಿಸಿದ್ದರು.

ದಾಖಲೆ ಬರೆದ ಭಾರತ

ಬುಧವಾರ ಬೆಳಗ್ಗೆ ಭಾರತ ಚಿನ್ನ ಮತ್ತು ಕಂಚಿನ ಪದಕ ಜಯಿಸಿತ್ತು ಈ ಮೂಲಕ ಭಾರತ ಏಷ್ಯಾಡ್​ನಲ್ಲಿ ದಾಖಲೆಯ ಪದಕ ಸಾಧನೆ ಮಾಡಿತು. ಇದಾದ ಬಳಿಕ ಮತ್ತೆ ಎರಡು ಪದಕ ಲಭಿಸಿತ್ತು. ಮಿಕ್ಸೆಡ್‌ ಸ್ಕ್ವ್ಯಾಶ್‌ನಲ್ಲಿ ಅನಾಹತ್ ಸಿಂಗ್(Anahat Singh) ಮತ್ತು ಅಭಯ್ ಸಿಂಗ್(Abhay Singh) ಮತ್ತು 57 ಕೆಜಿ ಮಹಿಳಾ ಸಿಂಗಲ್ಸ್‌ ಬಾಕ್ಸಿಂಗ್‌ನಲ್ಲಿ ಪರ್ವೀನ್‌ ಹೂಡಾ(parveen hooda) ಕಂಚು ಗೆದ್ದರು.

ಇದನ್ನೂ ಓದಿ Asian Games 2023: ಸ್ಕ್ವ್ಯಾಶ್‌ನಲ್ಲಿ ಕಂಚು ಗೆದ್ದ 15 ವರ್ಷದ ಬಾಲಕಿ; ಬಾಕ್ಸಿಂಗ್‌ನಲ್ಲಿ ಪರ್ವೀನ್‌ಗೆ ಕಂಚು

ಸ್ಕ್ವ್ಯಾಶ್‌ನಲ್ಲಿ ಭಾರತದ ಅನಾಹತ್ ಸಿಂಗ್ ಮತ್ತು ಅಭಯ್ ಸಿಂಗ್ ಅವರು ಮಲೇಷ್ಯಾದ ಐಫಾ ಬಿಂಟಿ ಅಜ್ಮಾನ್ ಮತ್ತು ಮೊಹಮ್ಮದ್ ಸಯಾಫಿಕ್ ಕಮಾಲ್ ವಿರುದ್ಧ ಸೋತು ಕಂಚಿನ ಪದಕಕ್ಕೆ ತೃಪ್ತಿಪಟರು. ಈ ಪಂದ್ಯದಲ್ಲಿ ಭಾರತೀಯ ಜೋಡಿಯು ಕಠಿಣ ಸವಾಲು ಎದುರಿಸಿತು. ಅಂತಿಮವಾಗಿ 39 ನಿಮಿಷಗಳ ಸ್ಪರ್ಧೆಯಲ್ಲಿ 11-8, 2-11, 9-11 ರಲ್ಲಿ ಸೋಲು ಕಂಡರು. ಕಂಚಿನ ಪದಕ ಗೆದ್ದ ಅನಾಹತ್ ಸಿಂಗ್‌ಗೆ ಕೇವಲ 15 ವರ್ಷ.

57 ಕೆಜಿ ಮಹಿಳಾ ಸಿಂಗಲ್ಸ್‌ ಬಾಕ್ಸಿಂಗ್‌ ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ಪರ್ವೀನ್‌ ಹೂಡಾ ಚೈನೀಸ್ ತೈಪೆಯ ಲಿನ್ ಯು ಟಿಂಗ್ ಎದುರು ಸೋಲು ಕಂಚಿಗೆ ತೃಪ್ತಿಪಟ್ಟರು.

ಇದಕ್ಕೂ ಮುನ್ನ ಮಿಕ್ಸೆಡ್ ಕಾಂಪೌಂಡ್ ಆರ್ಚರಿಯಲ್ಲಿ​ ಓಜಾಸ್ ಮತ್ತು ಜ್ಯೋತಿ ವೆನ್ನಮ್ ಚಿನ್ನಕ್ಕೆ ಗುರಿ ಇರಿಸಿದರೆ, ರಾಮ್ ಬಾಬು ಮತ್ತು ಮಂಜು ರಾಣಿ 35ಕೀ.ಮೀ ಓಟದ ನಡಿಗೆ(ರೇಸ್​ ವಾಕ್​) ಮಿಶ್ರ ತಂಡದಲ್ಲಿ ಕಂಚು ಗೆದ್ದರು. ಈ ಮೂಲಕ ಭಾರತ ಏಷ್ಯಾಡ್​ನಲ್ಲಿ ದಾಖಲೆಯ ಪದಕ ಸಾಧನೆ ಮಾಡಿತು.

ರೋಚಕ ಫೈನಲ್​ ಪಂದ್ಯದಲ್ಲಿ ಆರ್ಚರಿ ಪಟುಗಳಾದ ಓಜಾಸ್ ಮತ್ತು ಜ್ಯೋತಿ ವೆನ್ನಮ್ ಜೋಡಿ ಕೇವಲ ಒಂದು ಅಂಕದ ಮುನ್ನಡೆಯಿಂದ ಚಿನ್ನ ತಮ್ಮದಾಗಿಸಿಕೊಂಡರು. ಹಾಲಿ ಚಾಂಪಿಯನ್​ ದಕ್ಷಿಣ ಕೊರಿಯಾವನ್ನು 159-158 ಅಂಕಗಳಿಂದ ಸೋಲಿಸಿದ ಭಾರತ ಐತಿಹಾಸಿಕ ಚಿನ್ನ ಗೆದ್ದಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರಿಕೆಟ್

Chahal-Dhanashree: ನ್ಯೂಯಾರ್ಕ್​ನಲ್ಲಿ ಪತ್ನಿ ಜತೆ ಪ್ರವಾಸಿ ತಾಣ ಸುತ್ತಿ ಎಂಜಾಯ್​ ಮಾಡಿದ ಚಹಲ್​

Chahal-Dhanashree: ಚಹಲ್​ ಮತ್ತು ಧನಶ್ರೀ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ. ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನ ಧನಶ್ರೀ ಗರ್ಭಿಣಿಯರು ಧರಿಸುವ ಉಡುಗೆ ತೊಟ್ಟು(Dhanashree Verma Maternity Dress) ತನ್ನ ಗಂಡ ಚಹಲ್ ಜತೆಗಿರುವ ಫೋಟೊವನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಹೀಗಾಗಿ ಚಹಲ್ ತಂದೆಯಾಗುತ್ತಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

VISTARANEWS.COM


on

Chahal-Dhanashree
Koo

ನ್ಯೂಯಾರ್ಕ್​: ಟಿ20 ವಿಶ್ವಕಪ್​ ಟೂರ್ನಿಯನ್ನಾಡಲು ನ್ಯೂಯಾರ್ಕ್​ನಲ್ಲಿರುವ ಟೀಮ್​ ಇಂಡಿಯಾದ ಸ್ಪಿನ್ನರ್​ ಯಜುವೇಂದ್ರ ಚಹಲ್(Yuzvendra Chahal)​ ಅವರು ಬಿಡುವಿನ ವೇಳೆ ತಮ್ಮ ಪತ್ನಿ ಧನಶ್ರೀ ವರ್ಮಾ(Chahal-Dhanashree) ಜತೆ ನ್ಯೂಯಾರ್ಕ್​ ಸಿಟಿ ಸುತ್ತಿದ್ದಾರೆ. ಈ ಜೋಡಿ ಇಲ್ಲಿನ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಿ ಎಂಜಾಯ್​ ಮಾಡಿದ ಸುಂದರ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುತ್ತಿದ್ದ ನೆಟ್ಟಿಗರಿಗೆ ನಾವಿಬ್ಬರು ಚೆನ್ನಾಗಿಯೇ ಇದ್ದೇವೆ ಎನ್ನುವ ಪರೋಕ್ಷ ಸಂದೇಶವೊಂದನ್ನು ನೀಡಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಚಹಲ್ ಹಾಗೂ ಧನ ಶ್ರೀ(Dhanashree Verma) ಅವರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂಬುದಾಗಿ ಸುದ್ದಿ ಹರಡಿತ್ತು. ಧನಶ್ರಿ ತಮ್ಮ ಗೆಳೆಯರೊಂದಿಗೆ ಕಾಣಿಸಿಕೊಂಡಾಗಲೆಲ್ಲವೂ ಸಾಮಾಜಿ ಜಾಲತಾಣದಲ್ಲಿ ಈ ವಿಚಾರ ಆಗಾಗ ಮುನ್ನಲೆಗೆ ಬರುತ್ತಿತ್ತು. ಆದರೆ ಈ ಜೋಡಿ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಒಳ್ಳೆಯ ರೀತಿಯಲ್ಲೇ ಸಂಸಾರ ನಡೆಸುತ್ತಿದ್ದಾರೆ. ಇದೀಗ ನ್ಯೂಯಾರ್ಕ್ ಸಿಟಿಯಲ್ಲಿ ಎಂಜಾಯ್​ ಮೂಡ್​ನಲ್ಲಿರುವ ಫೋಟೊಗಳನ್ನು ಹಂಚಿಕೊಂಡು ತಮ್ಮ ಸಂಸಾರದ ಮಧ್ಯೆ ಹುಳಿ ಹಿಂಡುತ್ತಿರುವವರಿಗೆ ತಕ್ಕ ಉತ್ತರ ನೀಡಿದ್ದಾರೆ.

ತಂದೆಯಾಗಲಿದ್ದಾರಾ ಚಹಲ್​?


ಚಹಲ್​ ಮತ್ತು ಧನಶ್ರೀ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ. ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನ ಧನಶ್ರೀ ಗರ್ಭಿಣಿಯರು ಧರಿಸುವ ಉಡುಗೆ ತೊಟ್ಟು(Dhanashree Verma Maternity Dress) ತನ್ನ ಗಂಡ ಚಹಲ್ ಜತೆಗಿರುವ ಫೋಟೊವನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಹೀಗಾಗಿ ಚಹಲ್ ತಂದೆಯಾಗುತ್ತಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಆದರೆ ಈ ಜೋಡಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇದು ಕೇವಲ ನೆಟ್ಟಿಗರ ಕಲ್ಪನೆಯಾಗಿದೆ. ಧನಶ್ರೀ ಡ್ಯಾನ್ಸರ್​ ಮತ್ತು ಮಾಡೆಲ್​ ಆಗಿರುವ ಕಾರಣ ಟ್ರೆಂಡ್​ಗಾಗಿ ಈ ಉಡುಗೆಯನ್ನು ತೊಟ್ಟಿರುವ ಸಾಧ್ಯತೆಯೂ ಅಧಿಕವಾಗಿದೆ. 2020ರಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.

ಇದನ್ನೂ ಓದಿ Yuzvendra Chahal: ಸಿಕ್ಸರ್​ ಹೊಡೆಸಿಕೊಂಡು ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಚಹಲ್​

ಏಷ್ಯಾ ಕಪ್​ ಮತ್ತು ಏಕದಿನ ವಿಶ್ವಕಪ್​ನಲ್ಲಿ ಅವಕಾಶ ಸಿಗದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರಿಗೆ ಐಪಿಎಲ್​ ಪ್ರದರ್ಶನ ನೋಡಿ ಟಿ20ಯಲ್ಲಿ ಅವಕಾಶ ನೀಡಲಾಗಿದೆ. ಚಹಲ್​ ಸದ್ಯ ಅಮೆರಿಕಕ್ಕೆ ತೆರಳಿದ್ದಾರೆ. ಇದುವರೆಗೆ ಭಾರತ ಪರ 72 ಏಕದಿನ ಪಂದ್ಯಗಳಿಂದ 121 ವಿಕೆಟ್​, 80 ಟಿ20 ಆಡಿ 96 ವಿಕೆಟ್​ ಕಡೆವಿದ್ದಾರೆ. ಇಂದು ನಡೆಯುವ ಕೆನಾಡ ವಿರುದ್ಧದ ಪಂದ್ಯದಲ್ಲಿ ಮತ್ತು ಸೂಪರ್​-8 ಹಂತದ ಪಂದ್ಯದಲ್ಲಿ ಚಹಲ್​ಗೆ ಆಡುವ ಅವಕಾಶ ಸಿಗುವ ಸಾಧ್ಯತೆ ಅಧಿಕವಾಗಿದೆ.

ಇತ್ತೀಚೆಗೆ 150ನೇ ಐಪಿಎಲ್​ ಪಂದ್ಯವನ್ನಾಡಿದ ಚಹಲ್​ಗೆ ಪತ್ನಿ ಭಾವುಕ ವಿಡಿಯೊ ಸಂದೇಶದ ಮೂಲಕ ಹಾರೈಸಿದ್ದರು. “ಹೇ ಯುಜಿ, ನಿಮ್ಮ 150ನೇ ಐಪಿಎಲ್ ಪಂದ್ಯಕ್ಕೆ ಅಭಿನಂದನೆಗಳು. ನಿವು ಈ ಹಿಂದೆ ಆಡಿದ ತಂಡಕ್ಕೆ ಮತ್ತು ಈಗ ಆಡುತ್ತಿರುವ ರಾಜಸ್ಥಾನ್ ರಾಯಲ್ಸ್‌ಗೆ ನೀವು ಅಪಾರ ಕೊಡುಗೆ ನೀಡಿದ್ದೀರಿ. ನಿಮ್ಮ ಬಗ್ಗೆ ನನಗೆ ಯಾವತ್ತೂ ಹೆಮ್ಮೆ ಇದೆ. ನೀವು ನಿಮ್ಮ ಆಟವನ್ನು ಹೇಗೆ ಆಡುತ್ತೀರಿ ಮತ್ತು ಪ್ರತಿ ಬಾರಿ ನೀವು ಕಮ್​ಬ್ಯಾಕ್​ ಮಾಡುವ ರೀತಿ ನಿಜಕ್ಕೂ ಮೆಚ್ಚಲೇ ಬೇಕು. ಯಾವುದೇ ಪಂದ್ಯ ಒತ್ತಡದಲ್ಲಿದ್ದಾಗಲೆಲ್ಲಾ ವಿಕೆಟ್​ ತೆಗೆಯಬಲ್ಲ ಬೌಲರ್​ ನೀವಾಗಿದ್ದೀರಿ. ನಾನು ನಿಮ್ಮ ದೊಡ್ಡ ಚೀರ್‌ಲೀಡರ್ ಮತ್ತು ನಾನು ಯಾವಾಗಲೂ 100 ಪ್ರತಿಶತದಷ್ಟು ನಿಮ್ಮನ್ನು ಬೆಂಬಲಿಸುತ್ತೇನೆ” ಎಂದು ಶುಭ ಹಾರೈಸಿದ್ದರು. ವಿಡಿಯೊವನ್ನು ರಾಜಸ್ಥಾನ್​ ರಾಯಲ್ಸ್(Rajasthan Royals)​ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಪೋಸ್ಟ್​ ಮಾಡಿತ್ತು.

Continue Reading

ಕ್ರಿಕೆಟ್

Viral Video: ಪಾಕ್​ ಕ್ರಿಕೆಟಿಗ ವಾಸಿಂ ಅಕ್ರಮ್ ಜತೆ​ ಬ್ರೇಕ್​ ಡ್ಯಾನ್ಸ್​ ಮಾಡಿದ ಸುನಿಲ್ ಗಾವಸ್ಕರ್

Viral Video: ಗವಾಸ್ಕರ್​ ಮತ್ತು ಅಕ್ರಮ್​ ಉತ್ತಮ ಸ್ನೇಹಿತರಾಗಿದ್ದಾರೆ. ಕಾಮೆಂಟ್ರಿ ವೇಳೆಯೂ ಆಗಾಗ ಪರಸ್ಪರ ಕಾಲೆಳೆಯುತ್ತಿರುತ್ತಾರೆ. ಅದರಲ್ಲೂ ಭಾರತ ಮತ್ತು ಪಾಕ್​ ಪಂದ್ಯ ಇರುವ ಸಂದರ್ಭದಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ.

VISTARANEWS.COM


on

Viral Video
Koo

ನ್ಯೂಯಾರ್ಕ್​: ವೆಸ್ಟ್​ ಇಂಡೀಸ್​ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್(T20 World Cup)​ ಟೂರ್ನಿಯಲ್ಲಿ ಕಾಮೆಂಟ್ರಿ ಮಾಡುತ್ತಿರುವ ಮಾಜಿ ಆಟಗಾರರಾದ ಪಾಕಿಸ್ತಾನ ವಾಸಿಂ ಅಕ್ರಮ್​(Wasim Akram) ಮತ್ತು ಭಾರತದ ಸುನಿಲ್​ ಗವಾಸ್ಕರ್​(Sunil Gavaskar) ಅವರು ಜತೆಯಾಗಿ ಡ್ಯಾನ್ಸ್​ ಮಾಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video)​ ಆಗಿದೆ. ಈ ವಿಡಿಯೊಗೆ ನೆಟ್ಟಿಗರು ಹಲವು ಹಾಡುಗಳನ್ನು ಎಡಿಟ್​ ಮಾಡಿ ಶೇರ್​ ಮಾಡಿದ್ದಾರೆ.

ಗವಾಸ್ಕರ್​ ಮತ್ತು ಅಕ್ರಮ್​ ಉತ್ತಮ ಸ್ನೇಹಿತರಾಗಿದ್ದಾರೆ. ಕಾಮೆಂಟ್ರಿ ವೇಳೆಯೂ ಆಗಾಗ ಪರಸ್ಪರ ಕಾಲೆಳೆಯುತ್ತಿರುತ್ತಾರೆ. ಅದರಲ್ಲೂ ಭಾರತ ಮತ್ತು ಪಾಕ್​ ಪಂದ್ಯ ಇರುವ ಸಂದರ್ಭದಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ.

ಇದನ್ನೂ ಓದಿ RSA vs NEP: ನೇಪಾಳ ವಿರುದ್ಧ ದಕ್ಷಿಣ ಆಫ್ರಿಕಾಗೆ 1 ರನ್​ ರೋಚಕ ಜಯ; ಗೆಲುವಿನ ಖಾತೆ ತೆರೆದ ಕಿವೀಸ್​

ಮೂರು ಪಂದ್ಯಗಳನ್ನು ಆಡಿರುವ ಪಾಕಿಸ್ತಾನವು ಅಮೆರಿಕ ಹಾಗೂ ಭಾರತದ ವಿರುದ್ಧ ಹೀನಾಯವಾಗಿ ಸೋಲನುಭವಿಸಿದೆ. ಕೆನಡಾ ವಿರುದ್ಧ ಮಾತ್ರ ಗೆದ್ದಿರುವ ಕಾರಣ 2 ಪಾಯಿಂಟ್‌ಗಳನ್ನು ಪಡೆದಿದೆ. ಇನ್ನು, ನಾಲ್ಕು ಪಾಯಿಂಟ್ ಹೊಂದಿದ್ದ ಅಮೆರಿಕ ತಂಡವು ಐರ್ಲೆಂಡ್‌ ವಿರುದ್ಧ ಸೋತು, ಜೂನ್‌ 16ರಂದು ಐರ್ಲೆಂಡ್‌ ವಿರುದ್ಧ ನಡೆಯುವ ಪಂದ್ಯದಲ್ಲಿ ಬಾಬರ್‌ ಅಜಂ ಬಳಗ ಗೆದ್ದರೆ ಮಾತ್ರ ಸೂಪರ್‌ 8ಕ್ಕೆ ಅರ್ಹತೆ ಪಡೆಯುತ್ತಿತ್ತು. ಆದರೆ, ಅಮೆರಿಕ ಹಾಗೂ ಐರ್ಲೆಂಡ್‌ ನಡುವಿನ ಪಂದ್ಯವು ಮಳೆಯಿಂದ ರದ್ದಾದ ಕಾರಣ ಅಮೆರಿಕದ ಅಂಕಗಳು 5ಕ್ಕೆ ಏರಿಕೆಯಾದವು. ಇದರಿಂದಾಗಿ ಐರ್ಲೆಂಡ್‌ ವಿರುದ್ಧ ಪಾಕ್‌ ಗೆದ್ದರೂ ಯಾವುದೇ ಉಪಯೋಗವಿಲ್ಲದಂತಾಗಿದೆ.

ಟೂರ್ನಿಯಿಂದ ಹೊರಬಿದ್ದಿರುವ ಪಾಕ್​ ತಂಡದ ಪ್ರದರ್ಶನದ ಬಗ್ಗೆ ವಾಸಿಂ ಅಕ್ರಮ್ ಸೇರಿ ಅನೇಕ ಮಾಜಿ ಆಟಗಾರರು ಆಕ್ರೋಶ ಹೊರಹಾಕಿದ್ದಾರೆ. ಕ್ರಿಕೆಟ್​ ಅಭ್ಯಾಸ ಮಾಡುವುದನ್ನು ಬಿಟ್ಟು ಶೋಕಿಗಾಗಿ ಸೇನೆಯಲ್ಲಿ ಫಿಟ್​ನೆಸ್​ ತರಬೇತಿ ಪಡೆದು ಸಮಯ ವ್ಯರ್ಥ ಮಾಡಿದ್ದು ಈ ಸೋಲಿಗೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಟೂರ್ನಿಯಿಂದ ಹೊರಬಿದ್ದ ಪಾಕ್​ ತಂಡವನ್ನು(Pakistan Team Troll) ಸ್ವತಃ ತವರಿನ ಅಭಿಮಾನಿಗಳು ಸೇರಿ ಭಾರತೀಯ(India fans troll Pakistan cricket team) ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ. ಹಲವು ಮಿಮ್ಸ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮತ್ತೆ ಬಾಬರ್​ ತಲೆದಂಡ?

ಕಳೆದ ವರ್ಷ(2023) ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಬಾಬರ್​ ಸಾರಥ್ಯದಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ತೋರಿತ್ತು. ಆಡಿದ 9 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ ಲೀಗ್​ ಹಂತದಲ್ಲೇ ಹೊರಬಿದ್ದಿತ್ತು. ಹೀಗಾಗಿ ಬಾಬರ್​ ವಿರುದ್ಧ ಪಾಕ್​ ತಂಡದ ಮಾಜಿ ಆಟಗಾರರು ಸೇರಿ ಅಂದಿನ ಪಿಬಿ ಅಧ್ಯಕ್ಷ ಭಾರೀ ಟೀಕೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಾಬರ್ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದರು. ಇದೀಗ ಟಿ20 ವಿಶ್ವಕಪ್​ನಲ್ಲಿ ಪಾಕ್​ ತಂಡ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದಕ್ಕಾಗಿ ಮತ್ತೆ ಬಾಬರ್​ ಅವರ ತಲೆದಂಡವಾಗುವ ಸಾಧ್ಯತೆ ಅಧಿಕವಾಗಿದೆ ಎನ್ನಲಾಗಿದೆ.

Continue Reading

ಕ್ರೀಡೆ

Paris Olympics 2024: ಒಲಿಂಪಿಕ್ಸ್ ಆಯೋಜನೆ; ಫ್ರಾನ್ಸ್​ ಅಧ್ಯಕ್ಷರಿಗೆ ಶುಭ ಕೋರಿದ ಪ್ರಧಾನಿ ಮೋದಿ

Paris Olympics 2024: ಜಿ-7 ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, “ತಂತ್ರಜ್ಞಾನದ ಅಳವಡಿಕೆ ಜತೆಗೆ ಮಾನವ ಕೇಂದ್ರಿತವಾಗಿಯೇ ಏಳಿಗೆ ಹೊಂದಲು ಭಾರತ ಆದ್ಯತೆ ನೀಡುತ್ತಿದೆ. ಜಾಗತಿಕವಾಗಿ ತಂತ್ರಜ್ಞಾನದ ಜತೆಗೇ ಮಾನವ ಕೇಂದ್ರಿತ ಅಭಿವೃದ್ಧಿಯು ಪ್ರಮುಖ ವಿಷಯವಾಗಬೇಕಿದೆ” ಎಂದು ಪ್ರತಿಪಾದಿಸಿದರು.

VISTARANEWS.COM


on

Paris Olympics 2024
Koo

ಬಾರಿ(ಇಟಲಿ): ಇಟಲಿಯಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ (G7 Summit Italy) ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್‌(Emmanuel Macron)​ ಅವರನ್ನು ಭೇಟಿಯಾದ ವೇಳೆ ಪ್ಯಾರಿಸ್​ ಒಲಿಂಪಿಕ್ಸ್ ಆಯೋಜಿಸುತ್ತಿರುವುದಕ್ಕೆ ಶುಭ ಹಾರೈಸಿದ್ದಾರೆ. ಟೂರ್ನಿ ಅತ್ಯಂತ ಯಶಸ್ವಿಯಾಗಿ ಸಾಗಲಿ ಎಂದು ಮೋದಿ ಹಾರೈಸಿದ್ದಾರೆ. ಉಭಯ ನಾಯಕರು ಮಾತುಕತೆ ನಡೆಸಿದ ಫೋಟೊವನ್ನು ಮೋದಿ ಅವರು ತಮ್ಮ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.​ ಬಹುನಿರೀಕ್ಷಿತ ಪ್ಯಾರಿಸ್​ ಒಲಿಂಪಿಕ್ಸ್​(Paris Olympics 2024) ಜುಲೈ 26ರಿಂದ ಆರಂಭಗೊಳ್ಳಲಿದೆ. ಆಗಸ್ಟ್​ 11ರ ತನಕ ಈ ಟೂರ್ನಿ ಸಾಗಲಿದೆ.

ಭಾರತವು ಜಿ7 ರಾಷ್ಟ್ರಗಳ ಒಕ್ಕೂಟದ ಸದಸ್ಯ ರಾಷ್ಟ್ರವಾಗಿರದಿದ್ದರೂ ಜಾರ್ಜಿಯಾ ಮೆಲೋನಿ ಅವರು ನರೇಂದ್ರ ಮೋದಿ ಅವರನ್ನು ವಿಶೇಷವಾಗಿ ಆಹ್ವಾನಿಸಿದ್ದರು. ಮೋದಿ ಅವರು ಶುಕ್ರವಾರ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್‌, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಸೇರಿ ಹಲವು ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಶನಿವಾರವೂ ಹಲವು ನಾಯಕರೊಂದಿಗೆ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ತಂತ್ರಜ್ಞಾನ ಜತೆಗೆ ಮಾನವ ಕೇಂದ್ರಿತ ಏಳಿಗೆಗೆ ಭಾರತ ಆದ್ಯತೆ


ಜಿ-7 ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, “ತಂತ್ರಜ್ಞಾನದ ಅಳವಡಿಕೆ ಜತೆಗೆ ಮಾನವ ಕೇಂದ್ರಿತವಾಗಿಯೇ ಏಳಿಗೆ ಹೊಂದಲು ಭಾರತ ಆದ್ಯತೆ ನೀಡುತ್ತಿದೆ. ಜಾಗತಿಕವಾಗಿ ತಂತ್ರಜ್ಞಾನದ ಜತೆಗೇ ಮಾನವ ಕೇಂದ್ರಿತ ಅಭಿವೃದ್ಧಿಯು ಪ್ರಮುಖ ವಿಷಯವಾಗಬೇಕಿದೆ” ಎಂದು ಪ್ರತಿಪಾದಿಸಿದರು.

“ತಂತ್ರಜ್ಞಾನವನ್ನು ಸೃಜನಶೀಲತೆಯ ಸೃಷ್ಟಿಗಾಗಿ, ಅಭಿವೃದ್ಧಿಗಾಗಿ, ಏಳಿಗೆಗಾಗಿ ಬಳಸಬೇಕೇ ಹೊರತು, ವಿನಾಶಕ್ಕಾಗಿ ಅದನ್ನು ಬಳಸಬಾರದು. ಜಗತ್ತಿನಾದ್ಯಂತ ಬೇರೂರಿರುವ ಸಾಮಾಜಿಕ ಅಸಮಾನತೆಯನ್ನು ನಿರ್ಮೂಲನೆ ಮಾಡುವ ದಿಸೆಯಲ್ಲಿ ಇಂದು ತಂತ್ರಜ್ಞಾನವನ್ನು ಬಳಸಬೇಕಾಗಿದೆ. ಭಾರತವು, ಇಂತಹ ಪ್ರಯತ್ನ ಮಾಡುತ್ತಿದೆ. ಕೃತಕ ಬುದ್ಧಿಮತ್ತೆ ಸೇರಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಏಳಿಗೆಯತ್ತ ಮುಂದೆ ಸಾಗುತ್ತಿದೆ. ಎಲ್ಲರಿಗೂ ಕೃತಕ ಬುದ್ಧಿಮತ್ತೆ (AI For All) ಎಂಬ ತತ್ವದೊಂದಿಗೆ, ಕೃತಕ ಬುದ್ಧಿಮತ್ತೆ ಬಳಕೆಗೆ ರಾಷ್ಟ್ರೀಯ ಸ್ಟ್ರ್ಯಾಟಜಿಯೊಂದಿಗೆ ಮುನ್ನಡೆಯುತ್ತಿದೆ” ಎಂದು ತಿಳಿಸಿದರು.

ಮೋದಿಯನ್ನು ಹಾಡಿ ಹೊಗಳಿದ್ದ ಮೆಲೋನಿ

ಜಾರ್ಜಿಯಾ ಮೆಲೋನಿ ಅವರು ಇದಕ್ಕೂ ಮೊದಲು ನರೇಂದ್ರ ಮೋದಿ ಅವರನ್ನು ಹೊಗಳಿದ್ದರು. ರೈಸಿನಾ ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿದ್ದ ಜಾರ್ಜಿಯಾ ಮೆಲೋನಿ, “ನರೇಂದ್ರ ಮೋದಿ ಅವರು ವಿಶ್ವದ ನಾಯಕರಲ್ಲಿಯೇ ಹೆಚ್ಚು ಪ್ರೀತಿಗೆ ಪಾತ್ರರಾಗಿದ್ದಾರೆ. ಅವರು ಧೀಮಂತ ನಾಯಕರು ಎಂಬುದು ಸಾಬೀತಾಗಿದೆ. ಇದಕ್ಕಾಗಿ ಮೋದಿ ಅವರಿಗೆ ಅಭಿನಂದನೆಗಳು” ಎಂದಿದ್ದರು. “ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಹಾಗೂ ಇಟಲಿ ಸಂಬಂಧ ಮತ್ತಷ್ಟು ವೃದ್ಧಿಯಾಗುತ್ತಿದೆ. ಉಭಯ ದೇಶಗಳ ಸಂಬಂಧವನ್ನು ವ್ಯೂಹಾತ್ಮಕ ಸಂಬಂಧವಾಗಿ ಮಾರ್ಪಡಿಸಲು ನಾವು ಉತ್ಸುಕರಾಗಿದ್ದೇವೆ. ಇದರಿಂದ ಎರಡೂ ದೇಶಗಳ ಸಂಬಂಧ ಇನ್ನಷ್ಟು ವೃದ್ಧಿಯಾಗಲಿದೆ” ಎಂದು ತಿಳಿಸಿದ್ದರು.

Continue Reading

ಕ್ರಿಕೆಟ್

T20 World Cup 2024 Super 8: ಸೂಪರ್​-8 ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಆಫ್ಘಾನ್​ ಮೊದಲ ಎದುರಾಳಿ

T20 World Cup 2024 Super 8: ಭಾರತ, ಆಸ್ಟ್ರೇಲಿಯಾ, ಅಫಘಾನಿಸ್ತಾನ, ಅಮೆರಿಕ, ದಕ್ಷಿಣ ಆಫ್ರಿಕಾ, ವೆಸ್ಟ್​ ಇಂಡೀಸ್​ ಸೂಪರ್​-8ಗೆ ಪ್ರವೇಶ ಪಡೆದ ತಂಡಗಳು. ಇನ್ನುಳಿದ 2 ಸ್ಥಾನಕ್ಕೆ ಸ್ಕಾಟ್ಲೆಂಡ್​, ಇಂಗ್ಲೆಂಡ್​, ಬಾಂಗ್ಲಾದೇಶ ಮತ್ತು ನೆದರ್ಲೆಂಡ್ಸ್​ ವಿರುದ್ಧ ತೀವ್ರ ಪೈಪೋಟಿ ಏರ್ಪಟ್ಟಿದೆ.

VISTARANEWS.COM


on

T20 World Cup 2024 Super 8
Koo

ನ್ಯೂಯಾರ್ಕ್​: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ಸಾಗುತ್ತಿರುವ ಟಿ20 ವಿಶ್ವಕಪ್(T20 World Cup 2024) ಟೂರ್ನಿಯ ಲೀಗ್​ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಹಲವು ತಂಡಗಳು ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಸದ್ಯ 6 ತಂಡಗಳು ಸೂಪರ್​ 8 ಹಂತಕ್ಕೆ ಪ್ರವೇಶ ಪಡೆದಿವೆ. ಇನ್ನುಳಿದ 4 ಸ್ಥಾನಗಳಿಗೆ ಮೂರು ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದಕ್ಕೂ ಮುನ್ನವೇ ಐಸಿಸಿ ಸೂಪರ್​-8 ಹಂತದ ವೇಳಾಪಟ್ಟಿಯನ್ನು(T20 World Cup 2024 Super 8) ಪ್ರಕಟಿಸಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಅಫಘಾನಿಸ್ತಾನ ವಿರುದ್ಧ ಆಡಲಿದೆ.

ಭಾರತ, ಆಸ್ಟ್ರೇಲಿಯಾ, ಅಫಘಾನಿಸ್ತಾನ, ಅಮೆರಿಕ, ದಕ್ಷಿಣ ಆಫ್ರಿಕಾ, ವೆಸ್ಟ್​ ಇಂಡೀಸ್​ ಸೂಪರ್​-8ಗೆ ಪ್ರವೇಶ ಪಡೆದ ತಂಡಗಳು. ಇನ್ನುಳಿದ 2 ಸ್ಥಾನಕ್ಕೆ ಸ್ಕಾಟ್ಲೆಂಡ್​, ಇಂಗ್ಲೆಂಡ್​, ಬಾಂಗ್ಲಾದೇಶ ಮತ್ತು ನೆದರ್ಲೆಂಡ್ಸ್​ ವಿರುದ್ಧ ತೀವ್ರ ಪೈಪೋಟಿ ಏರ್ಪಟ್ಟಿದೆ.

ಸೂಪರ್​-8ನಲ್ಲಿ ಭಾರತ, ಆಸ್ಟ್ರೇಲಿಯಾ, ಅಫಘಾನಿಸ್ತಾನ ಮತ್ತು ‘ಡಿ’ ಗುಂಪಿನಲ್ಲಿ 2ನೇ ಸ್ಥಾನಿಯಾಗುವ ತಂಡ ಕಾದಾಟ ನಡೆಸಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಹೈವೋಲ್ಟೇಜ್​ ಪಂದ್ಯ ಜೂನ್​ 24 ಭಾನುವಾರದಂದು ನಡೆಯಲಿದೆ. ಸೂಪರ್​-8 ಪಂದ್ಯಗಳು ಜೂನ್​ 19ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ಸೆಣಸಾಟ ನಡೆಸಲಿವೆ. ಟೀಮ್​ ಇಂಡಿಯಾದ ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಸಾರಗೊಳ್ಳಲಿದೆ.

ಭಾರತದ ಸೂಪರ್​-8 ಪಂದ್ಯದ ವೇಳಾಪಟ್ಟಿ

ಎದುರಾಳಿದಿನಾಂಕತಾಣಪ್ರಸಾರ
ಭಾರತ-ಅಫಘಾನಿಸ್ತಾನಜೂನ್​ 20ಬಾರ್ಬಡೋಸ್ರಾತ್ರಿ 8ಕ್ಕೆ
ಭಾರತ-ಡಿ 2(ಡಿ ಗುಂಪಿನ 2ನೇ ಸ್ಥಾನಿ)ಜೂನ್​ 22ಆಂಟಿಗುವಾರಾತ್ರಿ 8ಕ್ಕೆ
ಭಾರತ-ಆಸ್ಟ್ರೇಲಿಯಾಜೂನ್​ 24ಸೇಂಟ್ ಲೂಸಿಯಾರಾತ್ರಿ 8ಕ್ಕೆ

ಭಾರತಕ್ಕೆ ಇಂದು ಕೊನೆಯ ಲೀಗ್​ ಪಂದ್ಯ


ಟೀಮ್​ ಇಂಡಿಯಾ(IND vs CAN) ತನ್ನ ಅಂತಿಮ ಲೀಗ್ ಪಂದ್ಯವನ್ನಾಡಲು ಸಜ್ಜಾಗಿದೆ. ಇಂದು(ಶನಿವಾರ) ನಡೆಯುವ ಪಂದ್ಯದಲ್ಲಿ ಕೆನಾಡ ವಿರುದ್ಧ ಕಣಕ್ಕಿಳಿಯಲಿದೆ. ಈಗಾಗಲೇ ಸೂಪರ್​-8ಗೆ ಪ್ರವೇಶ ಪಡೆದಿರುವ ಕಾರಣ ರೋಹಿತ್​ ಪಡೆಗೆ ಇದೊಂದು ​ಔಪಚಾರಿಕ ಪಂದ್ಯ ಎಂದರೂ ತಪ್ಪಾಗಲಾರದು. ಆದರೆ ಈ ಪಂದ್ಯ ನಡೆಯುವುದೇ ಅನುಮಾನ ಎನ್ನಲಾಗಿದೆ.

ಇದೇ ಮೈದಾನದಲ್ಲಿ ಶುಕ್ರವಾರ ನಡೆಯಬೇಕಿದ್ದ 2 ಪಂದ್ಯಗಳು ಕೂಡ ಒಂದು ಎಸೆತ ಕಾಣದೆ ರದ್ದಾಗಿತ್ತು. ಇಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು. ಇಂದು ಕೂಡ ಭಾರೀ ಮಳೆ(IND vs CAN weather report) ಬೀಳುವ ಸಾಧ್ಯತೆ ಇದೆ. 2 ದಿನಗಳ ಹಿಂದೆಯೇ ಹವಾಮಾನ ಇಲಾಖೆ ಈ ಕುರಿತು ಎಚ್ಚರಿಕೆ ನೀಡಿತ್ತು. ಒಂದೊಮ್ಮೆ ಪಂದ್ಯ ನಡೆದರೂ ಕೂಡ ಭಾರತ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಹಲವು ಮಹತ್ವದ ಬದಲಾವಣೆ ಮಾಡುವುದು ನಿಶ್ಚಿತ.

Continue Reading
Advertisement
Road Accident
ದೇಶ1 min ago

Road Accident: ಟೆಂಪೋ ಟ್ರಾವೆಲರ್‌ ಆಳವಾದ ಕಮರಿಗೆ ಉರುಳಿ ಕನಿಷ್ಠ 8 ಮಂದಿ ಸಾವು

Chahal-Dhanashree
ಕ್ರಿಕೆಟ್5 mins ago

Chahal-Dhanashree: ನ್ಯೂಯಾರ್ಕ್​ನಲ್ಲಿ ಪತ್ನಿ ಜತೆ ಪ್ರವಾಸಿ ತಾಣ ಸುತ್ತಿ ಎಂಜಾಯ್​ ಮಾಡಿದ ಚಹಲ್​

Self Harming
ಕ್ರೈಂ26 mins ago

Self Harming: ಅತ್ತೆ ಮಗಳು ಪ್ರೀತಿ ‌ನಿರಾಕರಿಸಿದಕ್ಕೆ ವಿಷ ಸೇವಿಸಿ ಯುವಕ ಆತ್ಮಹತ್ಯೆ

Fathers Day 2024
ಪ್ರಮುಖ ಸುದ್ದಿ40 mins ago

Fathers Day 2024: ʼಅಪ್ಪʼನೆಂದರೆ ಆಕಾಶ… ಎನ್ನುವವರು ಈ ಭಾನುವಾರ ತಪ್ಪದೇ ವಿಶ್‌ ಮಾಡಿ!

Drown in Quarry
ಕರ್ನಾಟಕ58 mins ago

Drown in Quarry: ಕ್ವಾರಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು‌

Kannada New Movie hiranys song out
ಸ್ಯಾಂಡಲ್ ವುಡ್1 hour ago

Kannada New Movie: ರಾಜವರ್ಧನ್ ನಟನೆಯ ‘ಹಿರಣ್ಯ’ ಸಿನಿಮಾದ ಮೆಲೋಡಿ ಹಾಡು ರಿಲೀಸ್

Actor Darshan
ಯಾದಗಿರಿ1 hour ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Narendra Modi
ವೈರಲ್ ನ್ಯೂಸ್1 hour ago

Narendra Modi: ನಗು ನಗುತ್ತಾ ಸೆಲ್ಫಿಗೆ ಪೋಸ್‌ ಕೊಟ್ಟ ಮೋದಿ, ಮೆಲೋನಿ; ಸೋಷಿಯಲ್‌ ಮೀಡಿಯಾದಲ್ಲಿ ʼಮೆಲೋಡಿʼಯದ್ದೇ ಸದ್ದು

Viral Video
ಕ್ರಿಕೆಟ್2 hours ago

Viral Video: ಪಾಕ್​ ಕ್ರಿಕೆಟಿಗ ವಾಸಿಂ ಅಕ್ರಮ್ ಜತೆ​ ಬ್ರೇಕ್​ ಡ್ಯಾನ್ಸ್​ ಮಾಡಿದ ಸುನಿಲ್ ಗಾವಸ್ಕರ್

ಪ್ರಮುಖ ಸುದ್ದಿ2 hours ago

Karnataka Politics: ಶಾಸಕ ಸ್ಥಾನಕ್ಕೆ ಎಚ್‌.ಡಿ. ಕುಮಾರಸ್ವಾಮಿ, ಬೊಮ್ಮಾಯಿ ರಾಜೀನಾಮೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ1 hour ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ21 hours ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು22 hours ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು23 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ23 hours ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ4 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ4 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ4 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ4 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌