Nobel Prize 2023: ಅಮೆರಿಕದ ಮೌಂಗಿ ಬವೆಂಡಿ, ಲೂಯಿಸ್ ಬ್ರಸ್, ಅಲೆಕ್ಸಿ ಎಕಿಮೊವ್‌ಗೆ ಕೆಮೆಸ್ಟ್ರಿ ನೊಬೆಲ್ ಪ್ರಶಸ್ತಿ - Vistara News

ಕಲೆ/ಸಾಹಿತ್ಯ

Nobel Prize 2023: ಅಮೆರಿಕದ ಮೌಂಗಿ ಬವೆಂಡಿ, ಲೂಯಿಸ್ ಬ್ರಸ್, ಅಲೆಕ್ಸಿ ಎಕಿಮೊವ್‌ಗೆ ಕೆಮೆಸ್ಟ್ರಿ ನೊಬೆಲ್ ಪ್ರಶಸ್ತಿ

Nobel Prize 2023: ಬುಧವಾರ ಕೆಮೆಸ್ಟ್ರಿ ನೊಬೆಲ್ ಘೋಷಣೆಯಾಗಿದ್ದು, ಅಮೆರಿಕದ ಮೂವರು ವಿಜ್ಞಾನಿಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.

VISTARANEWS.COM


on

Moungi Bawendi, Louis Brus, Alexei Ekimov Get Nobel Prize 2023 For Chemistry
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸ್ಟಾಕ್‌ಹೋಮ್: ಕ್ವಾಂಟಮ್ ಡಾಟ್ಸ್‌ (quantum dots) ಎಂದು ಕರೆಯಲಾಗುವ ಟಿನ್ನಿ ಪಾರ್ಟಿಕಲ್ಸ್ ಕುರಿತಾದ ಸಂಶೋಧನೆಗಾಗೆ ಫ್ರೆಂಚ್ ಮೂಲಕ ಮೌಂಗಿ ಬವೆಂಡಿ(Moungi Bawendi), ಅಮೆರಿಕದ ಲೂಯಿಸ್ ಬ್ರಸ್ (Louis Brus) ಮತ್ತು ರಷ್ಯನ್ ಮೂಲದ ಅಲೆಕ್ಸಿ ಎಕಿಮೂವ್ (Alexei Ekimov) ಅವರಿಗೆ 2023ರ ಸಾಲಿನ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಈ ಮೂವರು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಶೇಷ ಎಂದರೆ, ಘೋಷಣೆಗೂ ಮೊದಲೇ ಈ ಮೂವರ ಹೆಸರುಗಳು ಸ್ವೀಡಿಸ್‌ ಪತ್ರಿಕೆಗಳಲ್ಲಿ ಸೋರಿಕೆಯಾಗಿದ್ದವು. ಈ ಮೂವರು ವಿಜ್ಞಾನಿಗಳ ಸಂಶೋಧನೆಯು ಕ್ವಾಂಟಮ್ ಡಾಟ್ಸ್ ಉತ್ಪಾದನೆಯಲ್ಲಿ ಸಕ್ಸೆಸ್ ಆಗಿದೆ. ಈಗ ಟೆಲಿವಿಷನ್ ಮತ್ತು ಎಲ್‌ಇಡಿ ಬಲ್ಬಗಳಲ್ಲಿ ಬೆಳಕು ಹರಡಲು ಮತ್ತು ಗೆಡ್ಡೆಯ ಅಂಗಾಂಶಗಳನ್ನು ತೆಗೆಯಲು ಶಸ್ತ್ರಚಿಕಿತ್ಸಕರಿಗೆ ಮಾರ್ಗದರ್ಶನ ಸೇರಿದಂತೆ ಅನೇಕ ರೀತಿಯಲ್ಲಿ ನೆರವಿಗೆ ಕಾರಣವಾಗಿದೆ ಎಂದು ನೊಬೆಲ್ ಆಯ್ಕೆ ಸಮಿತಿ ಹೇಳಿದೆ(Nobel Prize 2023).

62 ವರ್ಷದ ಮೌಂಗಿ ಬವೆಂಡಿ ಅವರು ಫ್ರೆಂಚ್ ಮತ್ತು ಟುನಿಷಿಯನ್ ತಂದೆ ತಾಯಿಗೆ ಪ್ಯಾರಿಸಿನಲ್ಲಿ ಜನಿಸಿದರು. ಸದ್ಯ ಅವರು ಮಸ್ಸಾಚುಸೆಟ್ಸ್ ಇನ್ಸ್‌ಟಿಟ್ಯೂ ಆಫ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. 80 ವರ್ಷದ ಬ್ರಸ್ ಅವರು ನ್ಯೂಯಾರ್ಕ್‌ನ ಕೊಲಂಬಿಯಾದಲ್ಲಿ ಪ್ರೊಫೆಸರ್ ಆಗಿದ್ದಾರೆ. ರಷನ್ ಮೂಲದ ಎಕಿಮೋವ್ ಅವರು ಅಮೆರಿಕ ಮೂಲದ ನ್ಯಾನಕ್ರಿಸ್ಟಲ್ ಟೆಕ್ನಾಲಜಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಅಗೋಸ್ಟಿನಿ, ಕ್ರೌಸ್ಟ್, ಎಲ್‌’ಹುಲ್ಲಿಯರ್‌ಗೆ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಘೋಷಣೆ

2023ರ ಸಾಲಿನ ನೊಬೆಲ್ ಪ್ರಶಸ್ತಿ (Nobel Prize 2023) ಘೋಷಣೆಯಾಗುತ್ತಿದ್ದು, ಫ್ರಾನ್ಸ್‌ನ ಪಿಯರೆ ಅಗೋಸ್ಟಿನಿ(Pierre Agostini), ಹಂಗೇರಿ-ಆಸ್ಟ್ರಿಯಾದ ಫೆರೆಂಕ್ ಕ್ರೌಸ್ಟ್ (Ferenc Krausz) ಮತ್ತು ಫ್ರಾನ್ಸ್-ಸ್ವೀಡನ್‌ನ ಆನ್ನೆ ಎಲ್’ಹುಲ್ಲಿಯರ್ (Anne L’ Huillier) ವಿಜ್ಞಾನಿಗಳಿಗೆ ಸೋಮವಾರ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ವಸ್ತುಗಳಲ್ಲಿನ ಎಲೆಕ್ಟ್ರಾನ್ ಡೈನಾಮಿಕ್ಸ್ ಅಧ್ಯಯನಕ್ಕಾಗಿ ಬೆಳಕಿನ ಅಟೊಸೆಕೆಂಡ್ ಪಲ್ಸ್ ಅನ್ನು ಉತ್ಪಾದಿಸುವ ಪ್ರಾಯೋಗಿಕ ವಿಧಾನಗಳಿಗಾಗಿ ಈ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ನೊಬೆಲ್ ಪ್ರಶಸ್ತಿ ನೀಡುವ ಸಂಸ್ಥೆ ತಿಳಿಸಿದೆ.

ಕೋವಿಡ್ ಲಸಿಕೆ ಅಭಿವೃದ್ಧಿಗೆ ಕಾರಣರಾದ ಇಬ್ಬರಿಗೆ ವೈದ್ಯಕೀಯ ನೊಬೆಲ್ ಅವಾರ್ಡ್

ತ್ವರಿತ ಕೋವಿಡ್ ವ್ಯಾಕ್ಸಿನ್ (Covid Vaccine) ‌ತಯಾರಿಕೆಗೆ ದಾರಿ ಮಾಡಿಕೊಟ್ಟ ಮೆಂಸೆಂಜರ್ ಆರ್‌ಎನ್ಎ(mRNA) ತಂತ್ರಜ್ಞಾನದ ಕೆಲಸಕ್ಕಾಗಿ ಕಟಲಿನ್ ಕರಿಕೊ (Katalin Kariko) ಮತ್ತು ಡ್ರೂ ವೈಸ್‌ಮನ್ (Drew Weissman) ಅವರಿಗೆ ವೈದ್ಯಕೀಯ (Medicine) ನೊಬೆಲ್ ಪುರಸ್ಕಾರ ಲಭಿಸಿದೆ(Nobel Prize 2023). ಆಧುನಿಕ ಕಾಲದ ಮಾನವ ಆರೋಗ್ಯಕ್ಕೆ ದೊಡ್ಡ ಬೆದರಿಕೆಯ ಸಮಯದಲ್ಲಿ ಲಸಿಕೆ ಅಭಿವೃದ್ಧಿಗೆ ಅಭೂತಪೂರ್ವ ಕಾಣಿಕೆಯನ್ನು ಮೆಂಸೆಂಜರ್ ಆರ್‌ಎನ್ಎ ನೀಡಿದೆ ಎಂದು ತೀರ್ಪುಗಾರರ ಸಮಿತಿ ಹೇಳಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪುರಸ್ಕಾರಕ್ಕೆ ಪರಿಗಣಿಸುವಾಗ ದಶಕಗಳ ಹಳೆಯ ಸಂಶೋಧನೆಯನ್ನು ಗೌರವಿಸುವ ತನ್ನ ಸಂಪ್ರದಾಯವನ್ನು ನೊಬೆಲ್ ಸಮಿತಿ ಈ ಬಾರಿ ಕೈ ಬಿಟ್ಟಿದೆ. ಬಹುಮಾನ ವಿಜೇತ ವಿಜ್ಞಾನವು 2005ರ ಹಿಂದಿನದ್ದಾರೂ ಎಂಆರ್‌ಎನ್‌ಎ ತಂತ್ರಜ್ಞಾನವನ್ನು ಬಳಸಿಕೊಂಡು ಫೈಜರ್/ಬಯೋಎನ್‌ಟೆಕ್ ಮತ್ತು ಮಾಡರ್ನಾ ಕೋವಿಡ್ ಲಸಿಕೆಗಳನ್ನು ತಯಾರಿಸಿದವು.

ಈ ಸುದ್ದಿಯನ್ನೂ ಓದಿ: Nobel Peace Prize: 20ನೇ ಶತಮಾನದ ಮೇರು ನಾಯಕ ‘ಮಹಾತ್ಮ ಗಾಂಧಿ’ಗೇಕೆ ಸಿಗಲಿಲ್ಲ ನೊಬೆಲ್ ಪ್ರಶಸ್ತಿ?

ಕರಿಕೊ ಅವರು ಹಂಗ್ರಿ ದೇಶದವರು ಮತ್ತು ವೈಸ್‌ಮನ್ ಅವರು ಅಮೆರಿಕದವರು. ಯುನಿರ್ವಸಿಟಿ ಆಫ್ ಪೆನ್ಸಿಲ್ವೇನಿಯಾ ಇಬ್ಬರು ಕೊಲಿಗ್ಸ್ ಆಗಿದ್ದವು. ತಮ್ಮ ಸಂಶೋಧನೆಗಳಿಗಾಗಿ 2021ರಲ್ಲಿ ಲಸ್ಕರ್ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ದುರ್ಬಲಗೊಂಡ ವೈರಸ್ ಅಥವಾ ವೈರಸ್‌ನ ಪ್ರೋಟೀನ್‌ನ ಪ್ರಮುಖ ಅಂಶಗಳನ್ನು ಬಳಸುವ ಸಾಂಪ್ರದಾಯಿಕ ಲಸಿಕೆಗಳಿಗಿಂತ ಭಿನ್ನವಾಗಿ, ಎಂಆರ್‌ಎನ್ಎ ಲಸಿಕೆಗಳು ಆನುವಂಶಿಕ ಅಣುಗಳನ್ನು ಒದಗಿಸುತ್ತವೆ. ಅದು ಜೀವಕೋಶಗಳಿಗೆ ಯಾವ ಪ್ರೋಟೀನ್‌ಗಳನ್ನು ಮಾಡಬೇಕೆಂದು ತಿಳಿಸುತ್ತದೆ, ಇದು ಸೋಂಕನ್ನು ಅನುಕರಿಸುತ್ತದೆ ಮತ್ತು ನಿಜವಾದ ವೈರಸ್‌ಗೆ ಎದುರಾದಾಗ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪೂರಿಸುತ್ತದೆ. ಹಾಗಾಗಿ, ಲಸಿಕೆ ನಿರ್ಮಾಣದಲ್ಲಿ ಎಂಆರ್‌ಎನ್ಎ ಪ್ರಮುಖ ಸಂಶೋಧನೆಯಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ಕರ್ನಾಟಕದ ಶ್ರುತಿ ಬಿ.ಆರ್, ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗರಿ

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಾಧವ್‌ ಕೌಶಿಕ್‌ ಅವರ ನೇತೃತ್ವದಲ್ಲಿ ಇತ್ತೀಚೆಗೆ ಗುಜರಾತ್‌ನ ನರ್ಮದಾದಲ್ಲಿ ನಡೆದ ಸಭೆಯಲ್ಲಿ ಪ್ರಶಸ್ತಿ ಘೋಷಣೆ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ. ದೇಶದ ಭಾಷೆಗಳ ಸಾಹಿತಿಗಳನ್ನು ಗುರುತಿಸಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷ ಪ್ರಶಸ್ತಿಗಳನ್ನು ನೀಡುತ್ತದೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಹಾಗೂ ಫಲಕವನ್ನು ಹೊಂದಿದೆ. ಒಟ್ಟು 23 ಸಾಹಿತಿಗಳಿಗೆ ಪ್ರಶಸ್ತಿ ನೀಡಲಾಗಿದ್ದು, ಕರ್ನಾಟಕದ ಇಬ್ಬರಿಗೂ ಪ್ರಶಸ್ತಿ ದೊರೆತಿದೆ.

VISTARANEWS.COM


on

Kendra Sahitya Akademi Award
Koo

ನವದೆಹಲಿ/ಬೆಂಗಳೂರು: ದೇಶದ 23 ಲೇಖಕರಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು (Kendra Sahitya Akademi Award) ಘೋಷಣೆ ಮಾಡಲಾಗಿದ್ದು, ಕರ್ನಾಟಕದ ಇಬ್ಬರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಶ್ರುತಿ ಬಿ.ಆರ್.‌ (Shruti BR) ಅವರಿಗೆ ಯುವ ಪುರಸ್ಕಾರ ಘೋಷಿಸಿದ್ದರೆ, ಕೃಷ್ಣಮೂರ್ತಿ ಬಿಳಿಗೆರೆ (Krishnamurthy Biligere) ಅವರಿಗೆ ಬಾಲ ಪುರಸ್ಕಾರ ಘೋಷಣೆ ಮಾಡಲಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಾಧವ್‌ ಕೌಶಿಕ್‌ ಅವರ ನೇತೃತ್ವದಲ್ಲಿ ಇತ್ತೀಚೆಗೆ ಗುಜರಾತ್‌ನ ನರ್ಮದಾದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಗಿದೆ.

ಶ್ರುತಿ ಬಿ.ಆರ್.‌ ಅವರು ಚಿಕ್ಕಮಗಳೂರಿನ ತರೀಕೆರೆಯವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ಕೆಎಎಸ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕವಯತ್ರಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇವರ ಮೊದಲ ಕವನ ಸಂಕಲನವಾದ ‘ಜೀರೋ ಬ್ಯಾಲೆನ್ಸ್’‌ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಐದು ಚಿನ್ನದ ಪದಕಗಳೊಂದಿಗೆ ಪಡೆದಿದ್ದು, ಪಿಎಚ್‌.ಡಿಯನ್ನೂ ಪಡೆದಿದ್ದಾರೆ. ಇವರ ಲೇಖನಗಳು, ಕವಿತೆಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಬಿಳಿಗೆರೆ ಅವರು ಇದೇ ಜಿಲ್ಲೆಯ ಹುಳಿಯಾರಿನ ಬಿಎಂಎಸ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾವಯವ ಕೃಷಿ, ಬೀಜ ನಾಟಿ, ನೀರು ಸಂಗ್ರಹ ಸೇರಿ ಹಲವು ಚಳವಳಿಗಳಲ್ಲೂ ಸಕ್ರಿಯರಾಗಿರುವ ಇವರು, ಸಾಹಿತ್ಯ ಕೃಷಿಯಲ್ಲೂ ನಾಡಿನಾದ್ಯಂತ ಹೆಸರು ಗಳಿಸಿದ್ದಾರೆ. ಕಾವ್ಯ, ಕತೆ, ನಾಟಕಗಳ ರಚನೆ ಮೂಲಕ ಇವರು ನಾಡಿನ ಮನೆಮಾತಾಗಿದ್ದಾರೆ. ಇವರಿಗೆ ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ದೊರೆತಿವೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರನ್ನೂ ಒಳಗೊಂಡ ತೀರ್ಪುಗಾರರ ಸಮಿತಿ ಮಾಡಿದ ಶಿಫಾರಸಿನಂತೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ದೇಶದ ಭಾಷೆಗಳ ಸಾಹಿತಿಗಳನ್ನು ಗುರುತಿಸಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷ ಪ್ರಶಸ್ತಿಗಳನ್ನು ನೀಡುತ್ತದೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಹಾಗೂ ಫಲಕವನ್ನು ಹೊಂದಿದೆ.

ಕನ್ನಡದ ಖ್ಯಾತ ಬರಹಗಾರ ಲಕ್ಷ್ಮೀಶ ತೋಳ್ಪಾಡಿ ಅವರಿಗೆ 2023ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗಿತ್ತು. ಲಕ್ಷ್ಮೀಶ ತೋಳ್ಪಾಡಿ ಅವರ ಮಹಾಭಾರತದ ಅನುಸಂಧಾನದ ಭಾರತಯಾತ್ರೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತ್ತು. ಕನ್ನಡ ವಿಭಾಗದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ, ಆನಂದ ಝುಂಜರವಾಡ ಮತ್ತು ಜೆ. ಎನ್. ತೇಜಶ್ರೀ ಅವರಿದ್ದರು.

ಇದನ್ನೂ ಓದಿ: Kendra Sahitya Akademi Award: ಇಬ್ಬರು ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ; ಯಾರಿವರು?

Continue Reading

ಪ್ರಮುಖ ಸುದ್ದಿ

Kendra Sahitya Akademi Award: ಇಬ್ಬರು ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ; ಯಾರಿವರು?

Kendra Sahitya Akademi Award: ಮಾನಸ್‌ ರಂಜನ್‌ ಸಮಾಲ್‌ ಅವರು ರಚಿಸಿದ ಸಣ್ಣ ಕತೆಗಳ ಸಂಕಲನವಾದ ‘ಗಾಪ ಕಲಿಕಾ’ ಕೃತಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಹಾಗೆಯೇ, ಸಂಜಯ್‌ ಕುಮಾರ್‌ ಪಾಂಡಾ ಅವರ ‘ಹು ಬೈಯಾ’ ಕೃತಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಇದು ಕೂಡ ಸಣ್ಣ ಕತೆಗಳ ಸಂಕಲನವಾಗಿದೆ. ಇಬ್ಬರ ಕೃತಿಗಳಿಗೂ ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರಶಸ್ತಿ ಘೋಷಿಸಿದೆ/

VISTARANEWS.COM


on

Kendra Sahitya Akademi Award
Koo

ನವದೆಹಲಿ: ಒಡಿಶಾದ ಇಬ್ಬರು ಲೇಖಕರಿಗೆ 2024ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು (Kendra Sahitya Akademi Award 2024) ಅವರಿಗೆ ಘೋಷಣೆ ಮಾಡಲಾಗಿದೆ. ಒಡಿಶಾ ಲೇಖಕರಾದ ಮಾನಸ್‌ ರಂಜನ್‌ ಸಮಾಲ್‌ (Manas Ranjan Samal) ಹಾಗೂ ಸಂಜಯ್‌ ಕುಮಾರ್‌ ಪಾಂಡಾ (Sanjay Kumar Panda) ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಾಧವ್‌ ಕೌಶಿಕ್‌ ಅವರ ನೇತೃತ್ವದಲ್ಲಿ ಇತ್ತೀಚೆಗೆ ಗುಜರಾತ್‌ನ ನರ್ಮದಾದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಗಿದೆ. ಕರ್ನಾಟಕದ ಇಬ್ಬರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಶ್ರುತಿ ಬಿ.ಆರ್.‌ (Shruti BR) ಅವರಿಗೆ ಯುವ ಪುರಸ್ಕಾರ ಘೋಷಿಸಿದ್ದರೆ, ಕೃಷ್ಣಮೂರ್ತಿ ಬಿಳಿಗೆರೆ (Krishnamurthy Biligere) ಅವರಿಗೆ ಬಾಲ ಪುರಸ್ಕಾರ ಘೋಷಣೆ ಮಾಡಲಾಗಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಮಾನಸ್‌ ರಂಜನ್‌ ಸಮಾಲ್‌ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಪುರಸ್ಕಾರ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಸಂಜಯ್‌ ಕುಮಾರ್‌ ಪಾಂಡಾ ಅವರಿಗೆ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಘೋಷಿಸಲಾಗಿದೆ. ಮಾನಸ್‌ ರಂಜನ್‌ ಸಮಾಲ್‌ ಅವರು ರಚಿಸಿದ ಸಣ್ಣ ಕತೆಗಳ ಸಂಕಲನವಾದ ‘ಗಾಪ ಕಲಿಕಾ’ (Gapa Kalika) ಕೃತಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಹಾಗೆಯೇ, ಸಂಜಯ್‌ ಕುಮಾರ್‌ ಪಾಂಡಾ ಅವರ ‘ಹು ಬೈಯಾ’ (Hu Baia) ಕೃತಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಇದು ಕೂಡ ಸಣ್ಣ ಕತೆಗಳ ಸಂಕಲನವಾಗಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರನ್ನೂ ಒಳಗೊಂಡ ತೀರ್ಪುಗಾರರ ಸಮಿತಿ ಮಾಡಿದ ಶಿಫಾರಸಿನಂತೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ದೇಶದ ಭಾಷೆಗಳ ಸಾಹಿತಿಗಳನ್ನು ಗುರುತಿಸಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷ ಪ್ರಶಸ್ತಿಗಳನ್ನು ನೀಡುತ್ತದೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಹಾಗೂ ಫಲಕವನ್ನು ಹೊಂದಿದೆ.

ಕನ್ನಡದ ಖ್ಯಾತ ಬರಹಗಾರ ಲಕ್ಷ್ಮೀಶ ತೋಳ್ಪಾಡಿ ಅವರಿಗೆ 2023ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗಿತ್ತು. ಲಕ್ಷ್ಮೀಶ ತೋಳ್ಪಾಡಿ ಅವರ ಮಹಾಭಾರತದ ಅನುಸಂಧಾನದ ಭಾರತಯಾತ್ರೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತ್ತು. ಕನ್ನಡ ವಿಭಾಗದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ, ಆನಂದ ಝುಂಜರವಾಡ ಮತ್ತು ಜೆ. ಎನ್. ತೇಜಶ್ರೀ ಅವರಿದ್ದರು.

ಭಗವದ್ಗೀತೆಯ ಕುರಿತಾದ ‘ಮಹಾಯುದ್ದಕ್ಕೆ ಮುನ್ನ’ ಅವರ ಮೊದಲ ಪ್ರಕಟಿತ ಕೃತಿಯಾಗಿದೆ. ಭಾಗವತದ ಬಗ್ಗೆ ಬರೆದ ಸರಣಿ ಬರಹಗಳ ಸಂಕಲನ ‘ಸಂಪಿಗೆ ಭಾಗವತ’, ‘ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ’, ‘ಭವ ತಲ್ಲಣ’ ಅವರ ಇತರ ಕೃತಿಗಳಾಗಿವೆ. ಜತೆಗೆ, ಕನ್ನಡದ ಅನೇಕ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕವಾಗುತ್ತಲೇ ಇರುತ್ತವೆ.

ಇದನ್ನೂ ಓದಿ: All We Imagine As Light: ʻದಿ ಕೇರಳ ಸ್ಟೋರಿʼ ಸಿನಿಮಾ ಆಡಿಷನ್‌ ರಿಜೆಕ್ಟ್‌ ಮಾಡಿದ್ರಂತೆ ಕಾನ್‌ ಪ್ರಶಸ್ತಿ ವಿಜೇತೆ!

Continue Reading

ಕರ್ನಾಟಕ

Bengaluru News: ಬೆಂಗಳೂರಿನಲ್ಲಿ ಜೂ.15ರಂದು ʼನಾರಿ ಸಮ್ಮಾನ್‌ʼ ಪ್ರಶಸ್ತಿ ಪ್ರದಾನ

Bengaluru News: ಮೀಡಿಯಾ ವಿಷನ್‌, ಬೆಂಗಳೂರು, ಬಿ.ಎಂ. ವಿರುಪಾಕ್ಷಯ್ಯ ಕಲಾ ಟ್ರಸ್ಟ್‌ (ಬಿ.ಎಂ.ವಿ.), ಬಸವ ಪರಿಷತ್‌, ವಿಸ್ತಾರ ನ್ಯೂಸ್‌ ಸಹಯೋಗದಲ್ಲಿ ಇದೇ ಜೂ.15ರಂದು ಶನಿವಾರ ಸಂಜೆ 5 ಗಂಟೆಗೆ ಬೆಂಗಳೂರು ನಗರದ ಅರಮನೆ ರಸ್ತೆಯಲ್ಲಿರುವ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಸಂಸ್ಥೆ ಪ್ರಾಂಗಣದಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ʼನಾರಿ ಸಮ್ಮಾನ್‌ 2024ʼ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.

VISTARANEWS.COM


on

Nari Samman 2024 award ceremony on June 15 in Bengaluru
Koo

ಬೆಂಗಳೂರು: ಮೀಡಿಯಾ ವಿಷನ್‌, ಬೆಂಗಳೂರು, ಬಿ.ಎಂ. ವಿರುಪಾಕ್ಷಯ್ಯ ಕಲಾ ಟ್ರಸ್ಟ್‌ (ಬಿ.ಎಂ.ವಿ.), ಬಸವ ಪರಿಷತ್‌, ವಿಸ್ತಾರ ನ್ಯೂಸ್‌ ಸಹಯೋಗದಲ್ಲಿ ಇದೇ ಜೂ.15ರಂದು ಶನಿವಾರ ಸಂಜೆ 5 ಗಂಟೆಗೆ, ಬೆಂಗಳೂರು ನಗರದ ಅರಮನೆ ರಸ್ತೆಯಲ್ಲಿರುವ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಸಂಸ್ಥೆ ಪ್ರಾಂಗಣದಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ʼನಾರಿ ಸಮ್ಮಾನ್‌ 2024ʼ ಪ್ರಶಸ್ತಿ ಪ್ರದಾನ ಕಾರ್ಯಕ್ರಮ (Bengaluru News) ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾಂಬೆ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾ. ಮಂಜುಳಾ ಚೆಲ್ಲೂರು, ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್‌, ಖ್ಯಾತ ಚಲನಚಿತ್ರ ನಟ ಶ್ರೀನಾಥ್‌, ಬೆಂಗಳೂರಿನ ಬಸವ ಪರಿಷತ್‌ ಅಧ್ಯಕ್ಷೆ ಎಂ.ಪಿ. ಉಮಾದೇವಿ, ಮಾಜಿ ಸಚಿವೆ ರಾಣಿ ಸತೀಶ್‌, ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಇಸ್ರೋ ಸಂಸ್ಥೆ ವಿಜ್ಞಾನಿ ಬಿ.ಎಚ್‌.ಎಂ. ದಾರುಕೇಶ್‌, ಡಾ. ಎಚ್‌.ಆರ್‌. ಶಾಂತರಾಜಣ್ಣ, ಚಲನಚಿತ್ರ ನಟ ಸುಚೇಂದ್ರ ಪ್ರಸಾದ್‌, ಚಲನಚಿತ್ರ ನಟಿ ಭಾವನಾ, ಡಾ. ಮಂಜುಳಾ ಎ. ಪಾಟೀಲ್‌ ಪಾಲ್ಗೊಳ್ಳುವರು.

ಇದನ್ನೂ ಓದಿ: Gold Rate Today: ಆಭರಣ ಖರೀದಿಸಲು ಇದು ಸಕಾಲ; ಚಿನ್ನದ ಬೆಲೆ ಇಳಿಕೆ

ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಕಿರುತೆರೆ ನಿರೂಪಕಿ ಅನುಶ್ರೀ, ಚಲನಚಿತ್ರ ನಟಿ ಸೋನಾಲ್‌ ಮಂಥೇರೋ, ಉದ್ಯಮಿ ಪಲ್ಲವಿ ರವಿ, ಡಾ. ಮಮತಾ ಎಸ್‌.ಎಚ್‌., ಉಮಾಬಾಯಿ ಖರೆ, ಜ್ಯೋತಿ ಟೋಸೂರ, ಡಾ. ರತ್ನಮ್ಮ ಆರ್‌., ಹಿರಿಯ ನಿರೂಪಕಿ ನವಿತ ಜೈನ್‌, ಸುಜಾತ ಬಯ್ಯಾಪುರ, ಮಧುರ ಅಶೋಕ್‌ ಕುಮಾರ, ಡಾ. ಸುಮಾ ಬಿರಾದಾರ, ಸುಮಿತ್ರಾ ಎಂ.ಪಿ.ರೇಣುಖಾಚಾರ್ಯ, ಡಾ. ಸಂದರ್ಶಿನಿ ನರೇಂದ್ರಕುಮಾರ್‌, ಡಾ. ಪುಲಿಗೆರೆ ಸಂಪದ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: Euro Cup 2024: ಇಂದಿನಿಂದ ಯುರೋ ಕಪ್ ಟೂರ್ನಿ; ಜರ್ಮನಿ-ಸ್ಕಾಟ್ಲೆಂಡ್ ನಡುವೆ ಮೊದಲ ಪಂದ್ಯ

ನಾಟ್ಯ ಸಂಪದ ನೃತ್ಯ ಶಾಲೆ ಸಂಸ್ಥಾಪಕಿ ಡಾ. ಮಾನಸ ಕಂಠಿ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

Continue Reading

Latest

Veeraloka Books : ಹೊಸ ಲೇಖಕರಿಗೆ ವೀರಲೋಕ ಪ್ರಕಾಶನ ಹೆದ್ದಾರಿಯನ್ನೇ ಸೃಷ್ಟಿಸಿದೆ: ಜಯಂತ್‌ ಕಾಯ್ಕಿಣಿ ಶ್ಲಾಘನೆ

Veeraloka Books: ಕನ್ನಡ ಪುಸ್ತಕ ಲೋಕದ ಪ್ರತಿಕೂಲ ಪರಿಸ್ಥಿತಿಯಲ್ಲಿ ವೀರಲೋಕ ಪ್ರಕಾಶನವು ಅಜ್ಞಾತ ಓದುಗರನ್ನೂ ತಲುಪಿದೆ. ಎಲ್ಲೋ ತಮ್ಮ ಪಾಡಿಗೆ ತಾವು ಬರೆದುಕೊಂಡಿದ್ದು, ಪ್ರಕಾಶಕರು ಸಿಗದೆ ಪರದಾಡುತ್ತಿರುವವರಿಗೆ ವೀರಲೋಕ ಹೆದ್ದಾರಿಯನ್ನೇ ಸೃಷ್ಟಿ ಮಾಡಿದೆ. ಇಡೀ ತಂಡದ ವೇಗ ಹೀಗೆಯೇ ಮುಂದುವರಿಯಲಿ ಎಂದು ಹಿರಿಯ ಸಾಹಿತಿ ಜಯಂತ್‌ ಕಾಯ್ಕಿಣಿ ಅವರು ಹಾರೈಸಿದರು.

VISTARANEWS.COM


on

Veeraloka
Koo

ಬೆಂಗಳೂರು: ಇವತ್ತು ದಾಲ್ ತಡ್ಕ ರೇಟ್ ಜಾಸ್ತಿಯಾದರೆ (Veeraloka Books) ನಾವು ಯಾರನ್ನೂ ಕೇಳುವುದಿಲ್ಲ. ಸುಮ್ಮನೆ ಹೋಗಿ ಹಣ ಕೊಟ್ಟು ತಿಂದು ಬರುತ್ತೇವೆ. ಆದರೆ ಕನ್ನಡ ಪುಸ್ತಕಗಳಿಗೆ ದಾಲ್‌ ತಡ್ಕಾಗಿರುವಷ್ಟು ಬೇಡಿಕೆಯೂ ಇಲ್ಲ. ಮುಖಬೆಲೆ ಐದು ರೂಪಾಯಿ ಜಾಸ್ತಿಯಾದರೂ ಓದುಗ ಪುಸ್ತಕ ಖರೀದಿಸಲು ಹಿಂದೆ ಮುಂದೆ ನೋಡುವಂಥ ಪರಿಸ್ಥಿತಿ ಇದೆ ಎಂದು ಹಿರಿಯ ಸಾಹಿತಿ ಜಯಂತ್‌ ಕಾಯ್ಕಿಣಿ (jayant kaikini) ವಿಷಾದಿಸಿದರು. ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ವೀರಲೋಕ ಬುಕ್ಸ್ 2ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕನ್ನಡ ಪುಸ್ತಕ ಲೋಕದ ಪ್ರತಿಕೂಲ ಪರಿಸ್ಥಿತಿಯಲ್ಲಿ ವೀರಲೋಕ ಪ್ರಕಾಶನವು ಅಜ್ಞಾತ ಓದುಗರನ್ನೂ ತಲುಪಿದೆ. ಎಲ್ಲೋ ತಮ್ಮ ಪಾಡಿಗೆ ತಾವು ಬರೆದುಕೊಂಡಿದ್ದು, ಪ್ರಕಾಶಕರು ಸಿಗದೆ ಪರದಾಡುತ್ತಿರುವವರಿಗೆ ವೀರಲೋಕ ಹೆದ್ದಾರಿಯನ್ನೇ ಸೃಷ್ಟಿ ಮಾಡಿದೆ. ಇಡೀ ತಂಡದ ವೇಗ ಹೀಗೆಯೇ ಮುಂದುವರಿಯಲಿ ಎಂದು ಕಾಯ್ಕಿಣಿ ಅವರು ಹಾರೈಸಿದರು.

ವೀರಲೋಕ ಬುಕ್ಸ್ ಆಯೋಜಿಸಿದ್ದ 2ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಐದು ಕೃತಿಗಳ ಬಿಡುಗಡೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಅವುಗಳಲ್ಲಿ ರಾಧಾಕೃಷ್ಣ ಕಲ್ಚಾರ್‌ ಅವರ ‘ಕವಚ’ ಕಾದಂಬರಿ ವೀರಲೋಕದ ನೂರನೇ ಕೃತಿಯಾಗಿತ್ತು. ಡಾ. ಎಂ ವೆಂಕಟಸ್ವಾಮಿಯವರ ‘ಜಗತ್ತಿನ ಭೀಕರ ಯುದ್ಧಗಳು’, ನೌಶಾದ್ ಜನ್ನತ್ತ್ ಅವರ ‘ಬೇವಾಚ್’, ಸಂದ್ಯಾರಾಣಿಯವರ ‘ನಾತಿಚರಾಮಿ’, ಡಾ. ಶೈಲೇಶ್ ಕುಮಾರ್ ಅವರ ‘ಸುಪ್ತ ಸಾಗರದಾಚೆ’ ಇನ್ನಿತರ ಕೃತಿಗಳಾಗಿದ್ದವು.
ವೀರಲೋಕ ಬುಕ್ಸ್ ಸಂಸ್ಥಾಪಕರಾದ ವೀರಕಪುತ್ರ ಶ್ರೀನಿವಾಸ್ ಅವರು ಆಶಯ ನುಡಿಗಳನ್ನಾಡಿದರು. ಎರಡು ವರ್ಷಗಳಲ್ಲಿನ ಏಳುಬೀಳುಗಳು, ಮೈಲುಗಲ್ಲುಗಳು, ಮುಂದಿನ ತಯಾರಿಗಳ ಬಗ್ಗೆ ವಿವರಿಸಿದರು.

ಇದೇ ವೇದಿಕೆಯಲ್ಲಿ ಅನಂತ ಕುಣಿಗಲ್ ಅವರು ಸಂಪಾದಿಸಿರುವ ವೀರಕಪುತ್ರ ಶ್ರೀನಿವಾಸ್ ಅವರ ಲಲಿತ ಪ್ರಬಂಧಗಳ ಸಂಕಲನ ‘ಬದುಕೇ ಥ್ಯಾಂಕ್ಯೂ’ ಕೃತಿಯೂ ಬಿಡುಗಡೆಯಾಯಿತು. ಕನ್ನಡ ಮಾಣಿಕ್ಯ ಮಾಸ ಪತ್ರಿಕೆಯ ದಶಮಾನೋತ್ಸವವನ್ನೂ ಆಚರಿಸಲಾಯಿತು. ವೀರಲೋಕದ ಐದು ಕೃತಿಗಳ ಮರುಮುದ್ರಣದ ಆವೃತ್ತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ: V Somanna profile : ಅಂದು ಜನತಾ ಬಜಾರ್‌ನಲ್ಲಿ ಸೇಲ್ಸ್‌ಮ್ಯಾನ್‌; ಇಂದು ಕೇಂದ್ರ ಸಚಿವ! ವಿ ಸೋಮಣ್ಣ ರಾಜಕೀಯ ಹಾದಿ ಕುತೂಹಲಕರ

ಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಹಿರಿಯ ಸಾಹಿತಿ ಮಲ್ಲೇಪುರಂ ಜಿ. ವೆಂಕಟೇಶ್, ನಿರ್ದೇಶಕ ಮಂಸೋರೆ, ಸಂಭಾಷಣೆಕಾರ ಮಾಸ್ತಿ, ಮಹೇಶ ಅರಬಳ್ಳಿ, ಭಾರತಿ ಬಿ.ವಿ, ಪೂರ್ಣಿಮಾ ಮಾಳಗಿಮನಿ, ಶೋಭಾ ರಾವ್, ನವೀನ್ ಸಾಗರ್, ಮಂಡ್ಯ ರಮೇಶ್, ಜೋಗಿ, ಸಂತೋಷ್ ಹಾನಗಲ್, ದಿವ್ಯಾ ಆಲೂರು, ಹರಿವು ರತೀಶ್, ಕಾನ್ಕೇವ್ ನಂದೀಶ್, ಪ್ರಕಾಶ್ ಕಂಬತ್ತಳ್ಳಿ, ಷಡಕ್ಷರಿ, ವಿ ನಾಗೇಂದ್ರ ಪ್ರಸಾದ್ ಮತ್ತಿತರು ಉಪಸ್ಥಿತರಿದ್ದರು.

Continue Reading
Advertisement
Lockie Ferguson
ಕ್ರಿಕೆಟ್15 mins ago

Lockie Ferguson: 4 ಓವರ್‌ ಎಸೆದು, ಒಂದೂ ರನ್‌ ಕೊಡದೆ 3 ವಿಕೆಟ್‌ ಕಿತ್ತ ಲಾಕಿ ಫರ್ಗ್ಯೂಸನ್;‌ ವಿಶ್ವದಾಖಲೆ

Narendra Modi
ಪ್ರಮುಖ ಸುದ್ದಿ1 hour ago

Narendra Modi: ಅಮೆರಿಕ ಭದ್ರತಾ ಸಲಹೆಗಾರ-ನರೇಂದ್ರ ಮೋದಿ ಭೇಟಿ; ಯಾವೆಲ್ಲ ವಿಷಯ ಚರ್ಚೆ?

Actor Chikkanna
ಕರ್ನಾಟಕ2 hours ago

Actor Chikkanna: ದರ್ಶನ್‌ ಊಟಕ್ಕೆ ಕರೆದಿದ್ರು, ಹೋಗಿದ್ದೆ; ಪೊಲೀಸ್‌ ವಿಚಾರಣೆ ಬಳಿಕ ಚಿಕ್ಕಣ್ಣ ಫಸ್ಟ್‌ ರಿಯಾಕ್ಷನ್!

Kalki 2898 AD Movie Bhairava Anthem Released
ಕರ್ನಾಟಕ3 hours ago

Kalki 2898 AD: ʼಕಲ್ಕಿ 2898 ADʼ ಚಿತ್ರದ ಭೈರವ ಆಂಥಮ್‌ ರಿಲೀಸ್‌!

Union Minister HD Kumaraswamy visit Shira
ತುಮಕೂರು3 hours ago

Shira News: ಶಿರಾಕ್ಕೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಭೇಟಿ

Maharashtra government appoints Marathi teachers to Kannada schools; Ashoka Chandragi wrote a letter to CM Siddaramaiah
ಬೆಳಗಾವಿ3 hours ago

Belagavi News: ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರು! ಮುಖ್ಯಮಂತ್ರಿಗಳೇ ಗಮನ ಹರಿಸಿ

District administration failed to prevent illegal activities in the district MLA Janardhana Reddy alleges
ಕರ್ನಾಟಕ3 hours ago

Koppala News: ಜಿಲ್ಲೆಯಲ್ಲಿ ಕಾನೂನುಬಾಹಿರ ಚಟುವಟಿಕೆ ತಡೆಯುವಲ್ಲಿ ಜಿಲ್ಲಾಡಳಿತ ವಿಫಲ; ಶಾಸಕ ಜನಾರ್ದನ ರೆಡ್ಡಿ ಆರೋಪ

Pushpa 2
ಸಿನಿಮಾ3 hours ago

Pushpa 2: ಪುಷ್ಪ 2 ಸಿನಿಮಾ ಬಿಡುಗಡೆ 5 ತಿಂಗಳು ಮುಂದೂಡಿಕೆ; ಇಲ್ಲಿದೆ ಹೊಸ ಡೇಟ್

HD Kumaraswamy
ಕರ್ನಾಟಕ3 hours ago

HD Kumaraswamy: ಕೊಬ್ಬರಿಗೆ 16-18 ಸಾವಿರ ಬೆಂಬಲ ಬೆಲೆ ಕೊಡಿಸುವೆ: ರೈತರಿಗೆ ಎಚ್‌ಡಿಕೆ ಭರವಸೆ

Narendra Modi
ದೇಶ3 hours ago

ಪೋಪ್‌-ಮೋದಿ ಭೇಟಿಯನ್ನು ಲೇವಡಿ ಮಾಡಲು ಹೋದ ಕಾಂಗ್ರೆಸ್‌ಗೆ ಮುಖಭಂಗ; ಕ್ರೈಸ್ತರ ಕ್ಷಮೆ ಕೇಳಿದ್ದೇಕೆ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು11 hours ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು12 hours ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 day ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 day ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌