ICC World Cup 2023 : ನಾಯಕರ ದಿನದಂದು ತೂಕಡಿಸಿದ ದಕ್ಷಿಣ ಆಫ್ರಿಕಾ ನಾಯಕ ಫುಲ್ ಟ್ರೋಲ್​! - Vistara News

ಕ್ರಿಕೆಟ್

ICC World Cup 2023 : ನಾಯಕರ ದಿನದಂದು ತೂಕಡಿಸಿದ ದಕ್ಷಿಣ ಆಫ್ರಿಕಾ ನಾಯಕ ಫುಲ್ ಟ್ರೋಲ್​!

ವಿಶ್ವಕಪ್ ನಾಯಕರ (ICC World Cup 2023) ದಿನದ ಸಭೆಯ ವೇಳೆ ತೆಂಬಾ ಬವುಮಾ ನಿದ್ದೆ ಮಾಡಿದ್ದರು. ಆ ಚಿತ್ರವನ್ನು ಇಟ್ಟುಕೊಂಡು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೀಮ್​ಗಳನ್ನು ಸೃಷ್ಟಿಸಿದ್ದಾರೆ.

VISTARANEWS.COM


on

Temba Bavuma
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಹಮದಾಬಾದ್​: ಅಕ್ಟೋಬರ್ 4 ರಂದು (ಗುರುವಾರ) ನಡೆದ ವಿಶ್ವ ಕಪ್​ (ICC World Cup 2023) ಆಡಲಿರುವ ತಂಡಗಳ ನಾಯಕರ ಭೇಟಿಯ ದಿನದ ವೇಳೆ (Captain’s day meet ) ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ನಿದ್ರೆಗೆ ಜಾರಿರುವ ಸುದ್ದಿ ವೈರಲ್ ಆಗಿದೆ. ಈ ಭೇಟಿ ಹಾಗೂ ಫೋಟೋ ಶೂಟ್ ವೇಳೆ ಕೇನ್ ವಿಲಿಯಮ್ಸನ್, ಶಕೀಬ್ ಅಲ್ ಹಸನ್, ದಸುನ್ ಶನಕಾ ಸೇರಿದಂತೆ ಇತರ ತಂಡಗಳ ನಾಯಕರು ಸಹ ವೇದಿಕೆಯಲ್ಲಿ ಕಾಣಿಸಿಕೊಂಡರು. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಬವುಮಾ ನಿದ್ರೆಗೆ ಜಾರಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ಕೆಲವರು ಆಫ್ರಿಕನ್ ನಾಯಕನ ಬಗ್ಗೆ ಮೀಮ್ಸ್​ಗಳನ್ನೂ ಮಾಡಿದರು.

ತೆಂಬಾ ಅವರು ಕೌಟುಂಬಿಕ ಕಾರಣಗಳಿಂದಾಗಿ ಭಾರತಕ್ಕೆ ಬಂದಿದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ವಾಪಸ್​ ಹೋಗಿದ್ದರು. ಅದಲ್ಲಿಂದ ತಮ್ಮ ಕೆಲಸಗಳನ್ನು ಮುಗಿಸಿ ಮತ್ತೆ ಭಾರತಕ್ಕೆ ನೇರವಾಗಿ ಬಂದು ನಾಯಕರ ಭೇಟಿ ಕಾರ್ಯಕ್ರಮಕ್ಕಾಗಿ ಅಹಮದಾಬಾದ್​ಗೆ ಬಂದಿಳಿದಿದ್ದರು. ಹೀಗಾಗಿ ಅವರು ಸಾಕಷ್ಟು ಸುಸ್ತಾಗಿ ಇರುವಂತೆ ಕಂಡು ಬಂತು. ಆ ಕಾರಣಕ್ಕೆ ಅವರು ನಿದ್ದೆ ಮಾಡಿರಬಹುದು ಎಂದು ಹೇಳಲಾಗಿದೆ.

ಇದು ಎಲ್ಲಾ ತಂಡಗಳಿಗೆ ಭಾರತದ ಪಿಚ್​ಗಳ ಪರಿಚಯವಿದೆ. ಅದೇ ರೀತಿ ನಮ್ಮ ತಂಡದಲ್ಲಿ ಭಾರತದಲ್ಲಿ ಆಡಿದ ಮತ್ತು ಭಾರತದಲ್ಲಿ ಉತ್ತಮವಾಗಿ ಪ್ರದರ್ಶನ ತೋರಿದ ಆಟಗಾರರು ಇದ್ದಾರೆ. ಇದು ನಮಗೆ ಅನುಕೂಲ ಎಂದು ನಾನು ನಿಜವಾಗಿಯೂ ಹೇಳುವುದಿಲ್ಲ ಎಂದು ತೆಂಬ ಬವುಮಾ ಈ ಸಂದರ್ಭದಲ್ಲಿ ಹೇಳಿದರು.

ನಿದ್ದೆ ಮಾಡಿರುವ ತೆಂಬಾ ಅವರನ್ನು ಕೆಲವು ಕ್ರಿಕೆಟ್​ ಅಭಿಮಾನಿಗಳು ಗೇಲಿ ಮಾಡಿದರೆ. ಕೆಲವರು ಬವುಮಾ ಅವರನ್ನು ಬೆಂಬಲಿಸಿದರು. ಅವರು ಇತ್ತೀಚೆಗೆ ಮಾಡುತ್ತಿರುವ ಪ್ರಯಾಣದ ಬಗ್ಗೆ ಒಬ್ಬರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು. ಅಭ್ಯಾಸದ ಅವಧಿಗಳಲ್ಲಿ ಮತ್ತು ಅಭ್ಯಾಸ ಪಂದ್ಯಗಳಲ್ಲಿಯೂ ಬವುಮಾ ತಮ್ಮ ತಂಡಕ್ಕೆ ಲಭ್ಯವಿರಲಿಲ್ಲ. ಎಂದು ಹಲವರು ಹೇಳಿದ್ದಾರೆ.

ಮಾರ್ಕ್ರಮ್ ಹಂಗಾಮಿ ನಾಯಕರಾಗಿದ್ದರು

ಅಭ್ಯಾಸ ಪಂದ್ಯಗಳಲ್ಲಿ ಐಡೆನ್ ಮಾರ್ಕ್ರಮ್ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸಿದ್ದರಿಂದ ಅಭ್ಯಾಸ ಪಂದ್ಯಗಳಲ್ಲಿ ಬವುಮಾ ದಕ್ಷಿಣ ಆಫ್ರಿಕಾ ತಂಡದ ಭಾಗವಾಗಿರಲಿಲ್ಲ. ಕಳೆದ ವಾರ “ಕೌಟುಂಬಿಕ ಕಾರಣಗಳಿಗಾಗಿ ಇದ್ದಕ್ಕಿದ್ದಂತೆ ದಕ್ಷಿಣ ಆಫ್ರಿಕಾಕ್ಕೆ ಮರಳಬೇಕಾಗಿ ಬಂದಿದ್ದರು.

ದಕ್ಷಿಣ ಆಫ್ರಿಕಾ ತಂಡವು ತಿರುವನಂತಪುರಂನಿಂದ ಹೊರಟು ಸೆಪ್ಟೆಂಬರ್ 3 ರಂದು ದೆಹಲಿ ತಲುಪಿತ್ತು. ಏತನ್ಮಧ್ಯೆ, ತೆಂಬಾ ಬವುಮಾ ಮತ್ತು ಬಳಗ ಆರಂಭಿಕ ಮುಖಾಮುಖಿಯಲ್ಲಿ ಶ್ರೀಲಂಕಾವನ್ನು ಎದುರಿಸುವ ಮೊದಲು ದೆಹಲಿಯಲ್ಲಿ ತರಬೇತಿ ಅವಧಿಗಳನ್ನು ಪಡೆಯಲಿದ್ದಾರೆ. ಅಕ್ಟೋಬರ್ 7ರಂದು ಆ ತಂಡಗಳ ನಡುವೆ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಇದನ್ನೂ ಓದಿ : ICC World Cup 2023: ಶ್ರೀಲಂಕಾ ತಂಡದಲ್ಲಿ ಯುವಪಡೆ; ತಂಡದ ಪ್ಲಸ್‌-ಮೈನಸ್‌ ಏನು?

ಸ್ಪಷ್ಟನೆ ನೀಡಿದ ತೆಂಬಾ

ವಿಶ್ವಕಪ್ ಚಾಂಪಿಯನ್ಸ್ ಮೀಟ್ ವೇಳೆ ತಾನು ನಿದ್ದೆ ಮಾಡಿರಲಿಲ್ಲ ಎಂದು ಬವುಮಾ ಸ್ಪಷ್ಟಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಿಂದ ವೈರಲ್ ಆಗಿರುವ ಫೋಟೋಗೆ ಕ್ಯಾಮೆರಾ ಮ್ಯಾನ್ ಕಾರಣ ಎಂದು ಅವರು ದೂಷಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Rishabh Pant: ದೇವರ ಕೃಪೆಯಿಂದ ಮತ್ತೆ ಟೀಮ್​ ಇಂಡಿಯಾ ಜೆರ್ಸಿ ಧರಿಸುವಂತಾಯಿತು ಎಂದು ಭಾವುಕರಾದ ರಿಷಭ್​ ಪಂತ್

Rishabh Pant: ಬಿಸಿಸಿಐ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪಂತ್​, ಭಾರತದ ಸಮವಸ್ತ್ರ ಧರಿಸಿ ಆಡುವುದೇ ವಿಭಿನ್ನ ಅನುಭವ. ತಂಡವನ್ನು ಸೇರಿಕೊಂಡಿರುವುದು, ಮತ್ತೆ ಸಹ ಆಟಗಾರರೊಂದಿಗೆ ಸಮಯ ಕಳೆಯಲು ಸಾಧ್ಯವಾಗಿರುವುದು, ಪರಸ್ಪರ ತಮಾಷೆ, ಸಂಭಾಷಣೆ, ನಿಜಕ್ಕೂ ಈ ಎಲ್ಲ ಕ್ಷಣಗಳನ್ನು ಆನಂದಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

VISTARANEWS.COM


on

Rishabh Pant
Koo

ನ್ಯೂಯಾರ್ಕ್: 2022ರ ಡಿಸೆಂಬರ್​ 30ರಂದು(rishabh pant accident date) ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಪಂತ್​ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಗಾಯದಿಂದ ಚೇತರಿಸಿಕೊಂಡು ಇದೀಗ ಸುಮಾರು ಒಂದೂವರೆ ವರ್ಷದ ಬಳಿಕ ಟೀಮ್​ ಇಂಡಿಯಾ ಪರ ಆಡಲು ಸಜ್ಜಾಗಿರುವ ಪಂತ್​ ಅವರು ಭಾರತದ ಸಮವಸ್ತ್ರ ಧರಿಸಿ ಆಡುವುದೇ ವಿಭಿನ್ನ ಅನುಭವ. ಈ ಕ್ಷಣವನ್ನು ತುಂಬಾ ಮಿಸ್ ಮಾಡಿಕೊಂಡಿದ್ದೆ. ಈಗ ಉತ್ತಮ ಪ್ರದರ್ಶನ ನೀಡುವ ಭರವಸೆಯಿದೆ’ ಎಂದು ಹೇಳಿದ್ದಾರೆ.

ಈ ಬಾರಿಯ ಐಪಿಎಲ್​ ಮೂಲಕ ಪಂತ್​ ಮತ್ತೆ ಕ್ರಿಕೆಟ್​ ಕಮ್​ಬ್ಯಾಕ್​ ಮಾಡಿದ್ದರು. 14 ತಿಂಗಳ ಬಳಿಕ ಆಡಿದ್ದರೂ ಕೂಡ ಅವರ ಬ್ಯಾಟಿಂಗ್​ ಮತ್ತು ಕೀಪಿಂಗ್​ ಪ್ರದರ್ಶನದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿರಲಿಲ್ಲ. ಹಿಂದಿನಂತೆ ತಮ್ಮ ಪ್ರದರ್ಶನ ತೋರಿದ್ದರು. ಆಡಿದ 13 ಪಂದ್ಯಗಳಿಂದ 446 ರನ್​ ಬಾರಿಸಿದ್ದರು. ಕೀಪಿಂಗ್​ ಕೂಡ ಉತ್ತಮ ಮಟ್ಟದಲ್ಲಿತ್ತು.

ಬಿಸಿಸಿಐ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪಂತ್​, ಭಾರತದ ಸಮವಸ್ತ್ರ ಧರಿಸಿ ಆಡುವುದೇ ವಿಭಿನ್ನ ಅನುಭವ. ತಂಡವನ್ನು ಸೇರಿಕೊಂಡಿರುವುದು, ಮತ್ತೆ ಸಹ ಆಟಗಾರರೊಂದಿಗೆ ಸಮಯ ಕಳೆಯಲು ಸಾಧ್ಯವಾಗಿರುವುದು, ಪರಸ್ಪರ ತಮಾಷೆ, ಸಂಭಾಷಣೆ, ನಿಜಕ್ಕೂ ಈ ಎಲ್ಲ ಕ್ಷಣಗಳನ್ನು ಆನಂದಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ರಿಷಭ್​ ಪಂತ್​ ಅವರ ಗಂಭೀರ ಗಾಯವನ್ನು ಕಂಡ ಅನೇಕರು ಪಂತ್​ ಕ್ರಿಕೆಟ್​ ಬಾಳ್ವೆ ಇನ್ನು ಮಂದೆ ಕಷ್ಟ, ಒಂದೊಮ್ಮೆ ಅವರು ಕ್ರಿಕೆಟ್​ಗೆ ಮರಳಬೇಕಾದರೂ ಹಲವು ವರ್ಷ ಬೇಕಾದಿತು ಹೀಗೆ ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಆದರೆ ಪಂತ್​ ತಮ್ಮ ನಂಬಿಕೆ ಮತ್ತು ಕ್ರಿಕೆಟ್​ಗೆ ಮರಳುವ ದೃಢ ಸಂಕಲ್ಪದಿಂದ ಕಠಿಣ ವ್ಯಾಯಾಮ ನಡೆಸಿ ಕೇವಲ 14 ತಿಂಗಳಲ್ಲಿ ಸಂಪೂರ್ಣ ಫಿಟ್​ ಆಗಿ ಕ್ರಿಕೆಟ್​ಗೆ ಮರಳಿದ್ದರು. ಇದೇ ಛಲ ವಿಶ್ವಕಪ್​ ಗೆಲ್ಲುವಲ್ಲಿಯೂ ತಂಡಕ್ಕೆ ಇರಬೇಕು ಎನ್ನುವ ಅರ್ಥದಲ್ಲಿ ಪಂತ್​ ಅವರನ್ನು ಬಿಸಿಸಿಐ ಈ ವಿಡಿಯೊದಲ್ಲಿ ತೋರಿಸಿದೆ.

ಇದನ್ನೂ ಓದಿ Rishabh Pant Video Calls: ನ್ಯೂಯಾರ್ಕ್​ನಿಂದ ವಿಡಿಯೊ ಕಾಲ್​ ಮಾಡಿ ರಿಂಕು ಸಿಂಗ್​ಗೆ ಅಭಿನಂದಿಸಿದ ಪಂತ್​

ಭಾರತ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಭಾರತೀಯ ಕ್ರಿಕೆಟ್​ ಅಭಿಮಾನಿಗಳು ನೂತನ ಜೆರ್ಸಿ ತೊಟ್ಟು ತಂಡ ಕಪ್​ ಗೆಲ್ಲಲಿ ಎಂದು ಹಾರೈಸಿದ್ದಾರೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

Continue Reading

ಕ್ರೀಡೆ

IPL 2024 : ಜಿಯೋಸಿನಿಮಾದಲ್ಲಿ ದಾಖಲೆಯ 62 ಕೋಟಿಗೂ ಅಧಿಕ ವೀಕ್ಷಣೆ ಕಂಡ ಐಪಿಎಲ್​

IPL 2024: ಭಾರತದಲ್ಲಿ ಕ್ರೀಡಾಕೂಟಗಳನ್ನು ನೋಡುವ ವಿಧಾನವನ್ನು ಮರು ವ್ಯಾಖ್ಯಾನಿಸುವುದನ್ನು ಮುಂದುವರಿಸುವ ಭರವಸೆಯೊಂದಿಗೆ ನಾವು ಐಪಿಎಲ್-2024 ಆವೃತ್ತಿಯನ್ನು ಮುಕ್ತಾಯಗೊಳಿಸುತ್ತೇವೆ. ನಾವು ವರ್ಷದಿಂದ ವರ್ಷಕ್ಕೆ ಕಾಣುತ್ತಿರುವ ಬೆಳವಣಿಗೆಯು ನಮ್ಮ ವೀಕ್ಷಕ ಕೇಂದ್ರಿತ ಪ್ರಸಾರದ ಮೂಲಕ ಮೆಚ್ಚುಗೆ ಪಡೆದುಕೊಂಡಿದೆ ಎಂಬ ಭರವಸೆ ನಮಗೆ ನೀಡುತ್ತಿದೆ.

VISTARANEWS.COM


on

IPL 2024
Koo

ಮುಂಬೈ: ಟಾಟಾ ಐಪಿಎಲ್‌ನ ಅಧಿಕೃತ ಸ್ಟ್ರೀಮಿಂಗ್ ಆಗಿದ್ದ ಜಿಯೋಸಿನಿಮಾ, ಟಾಟಾ ಐಪಿಎಲ್‌-2024ರ (IPL 2024) ಋತುವಿನಲ್ಲಿ 2,600 ಕೋಟಿ ವೀಕ್ಷಣೆ ದಾಖಲೆ ಸೃಷ್ಟಿಸಿದೆ. ಇದು ಟಾಟಾ ಐಪಿಎಲ್‌-2023ಕ್ಕೆ ಹೋಲಿಸಿದರೆ ಶೇ. 53ರಷ್ಟು ಹೆಚ್ಚಳವಾಗಿದೆ. ಜಿಯೋಸಿನಿಮಾ ಐಪಿಎಲ್​​ನಲ್ಲಿ ತನ್ನ ಎರಡನೇ ಋತುವನ್ನು ಮುಕ್ತಾಯಗೊಳಿಸುತ್ತಿದ್ದಂತೆ, ಈ ಪ್ಲಾಟ್ಫಾರ್ಮ್ 35,000 ಕೋಟಿಗೂ ಅಧಿಕ ನಿಮಿಷಗಳ ವೀಕ್ಷಣೆ ಸಮಯವನ್ನು ದಾಖಲಿಸಿದೆ.

ಮೊದಲ ದಿನದ ಅದ್ಭುತ ಆರಂಭದ ನಂತರ ತನ್ನ ವೀಕ್ಷಣೆಯ ಪ್ರಮಾಣವನ್ನು ಹೆಚ್ಚಿಸಿದ ಜಿಯೋಸಿನಿಮಾ, ತನ್ನ ವ್ಯಾಪ್ತಿಯನ್ನು ಶೇ. 38ಕ್ಕಿಂತ ಅಧಿಕವಾಗಿ ಬೆಳೆಸಿದ್ದು, 62 ಕೋಟಿಗೂ ಅಧಿಕ ವಿಕ್ಷಣೆಯೊಂದಿಗೆ ಮುಕ್ತಾಯಗೊಳಿಸಿದೆ. 12 ಭಾಷೆಯ ಫೀಡ್‌ಗಳು, 4ಕೆ ವೀಕ್ಷಣೆ, ಮಲ್ಟಿ-ಕ್ಯಾಮ್ ದೃಶ್ಯಗಳು ಮತ್ತು ಎಆರ್/ವಿಆರ್ ಮೂಲಕ ವರ್ಚುಯಲ್​ ಅನುಭವ ಮತ್ತು 360-ಡಿಗ್ರಿ ವೀಕ್ಷಣೆಯ ಅವಕಾಶ ನೀಡಿದ್ದರಿಂದ ಟಿವಿ ವೀಕ್ಷಕರು ಗಣನೀಯವಾಗಿ ವಿಸ್ತರಿಸಿದರು. ಕಳೆದ ಆವೃತ್ತಿಯಲ್ಲಿ ವೀಕ್ಷಣೆಯ ಸರಾಸರಿಯು 60 ನಿಮಿಷಗಳಾಗಿತ್ತು.

ಜಿಯೋಸಿನಿಮಾ 2024ರ ಆವೃತ್ತಿಯನ್ನು 11.3 ಕೋಟಿ ವೀಕ್ಷಕರು ಮೊದಲ ದಿನದಂದೇ ಲಾಗ್ಇನ್ ಆಗುವುದರೊಂದಿಗೆ ಶುಭಾರಂಭ ಮಾಡಿತ್ತು. ಐಪಿಎಲ್-2023ರ ಮೊದಲ ದಿನಕ್ಕೆ ಹೋಲಿಸಿದರೆ ಇದು ಶೇ.51ರಷ್ಟು ಹೆಚ್ಚಳ. ಜಿಯೋಸಿನಿಮಾ ತನ್ನ ಎರಡನೇ ಆವೃತ್ತಿಯನ್ನು ಡಿಜಿಟಲ್‌ನಲ್ಲಿ ಪ್ರಾರಂಭಿಸುತ್ತಿದ್ದಂತೆ ಟಾಟಾ ಐಪಿಎಲ್-2024ರ ಆರಂಭಿಕ ದಿನವು 59 ಕೋಟಿಗೂ ಹೆಚ್ಚು ವೀಡಿಯೊ ವೀಕ್ಷಣೆಗಳನ್ನು ಪ್ಲಾಟ್​ಫಾರ್ಮ್​​ನಲ್ಲಿ ದಾಖಲಿಸಿಕೊಂಡಿತು. ಅಂತಿಮವಾಗಿ ಇದು 660 ಕೋಟಿ ನಿಮಿಷಗಳ ವೀಕ್ಷಣೆ ಸಮಯ ದಾಖಲಿಸಿತು.

ಭಾರತದಲ್ಲಿ ಕ್ರೀಡಾಕೂಟಗಳನ್ನು ನೋಡುವ ವಿಧಾನವನ್ನು ಮರು ವ್ಯಾಖ್ಯಾನಿಸುವುದನ್ನು ಮುಂದುವರಿಸುವ ಭರವಸೆಯೊಂದಿಗೆ ನಾವು ಐಪಿಎಲ್-2024 ಆವೃತ್ತಿಯನ್ನು ಮುಕ್ತಾಯಗೊಳಿಸುತ್ತೇವೆ. ನಾವು ವರ್ಷದಿಂದ ವರ್ಷಕ್ಕೆ ಕಾಣುತ್ತಿರುವ ಬೆಳವಣಿಗೆಯು ನಮ್ಮ ವೀಕ್ಷಕ ಕೇಂದ್ರಿತ ಪ್ರಸಾರದ ಮೂಲಕ ಮೆಚ್ಚುಗೆ ಪಡೆದುಕೊಂಡಿದೆ ಎಂಬ ಭರವಸೆ ನಮಗೆ ನೀಡುತ್ತಿದೆ. ನಮ್ಮ ಪಾಲುದಾರರು, ಪ್ರಾಯೋಜಕರಿಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ” ಎಂದು ವಯಾಕಾಮ್18ರ ವಕ್ತಾರರು ಹೇಳಿದ್ದಾರೆ.

28 ಪ್ರಾಯೋಜಕರು

ಜಿಯೊ ಸಿನಿಮಾಗೆ ಆರಂಭಲ್ಲಿ ಬ್ರಾಂಡ್‌ಗಳಾದ ಡ್ರೀಮ್11, ಥಮ್ಸ್ ಅಪ್, ಪಾರ್ಲೆ ಪ್ರಾಡಕ್ಟ್ಸ್, ಬ್ರಿಟಾನಿಯಾ, ದಾಲ್ಮಿಯಾ ಸಿಮೆಂಟ್ಸ್ ಮತ್ತು ಎಚ್ಡಿಎಫ್​ಸಿ ಬ್ಯಾಂಕ್‌ನ ಪ್ರಾಯೋಜಕತ್ವ ಇತ್ತು. ಋತುವಿನ ಅಂತ್ಯದ ವೇಳೆಗೆ ಜಿಯೋಸಿನಿಮಾ ದಾಖಲೆಯ 28 ಪ್ರಾಯೋಜಕರು ಮತ್ತು 1400ಕ್ಕೂ ಹೆಚ್ಚು ಜಾಹೀರಾತುದಾರರನ್ನು ಹೊಂದಿತ್ತು.

ಇದನ್ನೂ ಓದಿ: Singapore Open: ದ್ವಿತೀಯ ಸುತ್ತಿಗೆ ಆಟ ಮುಗಿಸಿದ ಭಾರತದ ಪಿ.ವಿ.ಸಿಂಧು

ಅತ್ಯುತ್ತಮ ದರ್ಜೆಯ ಕ್ರೀಡಾ ವಿಷಯವನ್ನು ನೀಡುವ ಜಿಯೋಸಿನಿಮಾದ ಬದ್ಧತೆಯು ಪ್ಯಾರಿಸ್ ಒಲಿಂಪಿಕ್ ಗೇಮ್ಸ್-2024ರೊಂದಿಗೆ ಮುಂದುವರಿಯುತ್ತದೆ. ವೀಕ್ಷಕರು ಸಾವಿರಾರು ಗಂಟೆಗಳ ಲೈವ್ ಮತ್ತು ಬೇಡಿಕೆಯ ಕ್ರೀಡೆಯೊಂದಿಗೆ ಒಲಿಂಪಿಕ್ಸ್‌ನ ವರ್ಧಿತ ವೀಕ್ಷಣೆಯ ಅನುಭವವನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ನಿರೀಕ್ಷಿಸಬಹುದು. ವಯಾಕಾಮ್18ರ ಪ್ಯಾರಿಸ್​ ಒಲಿಂಪಿಕ್ಸ್-2024ರ ಸಮಗ್ರ ಕವರೇಜ್, ಭಾರತದ ಅಭಿಮಾನಿಗಳು, ಒಲಿಂಪಿಕ್ಸ್‌ನಲ್ಲಿ ಭಾರತೀಯರು ನೋಡಲೇಬೇಕಾದ ಸ್ಪರ್ಧೆಗಳನ್ನು ವಿಕ್ಷಿಸಬಹುದು.

ವೀಕ್ಷಕರು ಜಿಯೋಸಿನಿಮಾ ಆ್ಯಪ್ (ಐಒಎಸ್ ಮತ್ತು ಆಂಡ್ರಾಯ್ಡ್) ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಆಯ್ಕೆಯ ಕ್ರೀಡೆಗಳನ್ನು ವೀಕ್ಷಿಸಬಹುದಾಗಿದೆ. ತಾಜಾ ಸುದ್ದಿಗಳು, ಸ್ಕೋರ್, ವಿಡಿಯೋಗಳಿಗಾಗಿ ಅಭಿಮಾನಿಗಳು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್, ಯುಟ್ಯೂಬ್ ಮತ್ತು ವ್ಯಾಟ್ಸ್ಆ್ಯಪ್ನಲ್ಲಿ ಜಿಯೋಸಿನಿಮಾ ಹಾಗೂ ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಮತ್ತು ಯುಟ್ಯೂಬ್ನಲ್ಲಿ ಸ್ಪೋರ್ಟ್ಸ್18 ಅನ್ನು ಫಾಲೋ ಮಾಡಬಹುದು.

Continue Reading

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ಕ್ಯಾಚ್​ ಹಿಡಿದ ಫೀಲ್ಡರ್​ಗಳಿವರು…

T20 World Cup 2024: ಟೀಮ್​ ಇಂಡಿಯಾದ ನಾಯಕ, ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮ(Rohit Sharma) ಅವರು 16 ಕ್ಯಾಚ್​ ಹಿಡಿದು ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಆವೃತ್ತಿಯಲ್ಲಿ 4 ಕ್ಯಾಚ್​ ಹಿಡಿದರೆ ಮಾರ್ಟಿನ್ ಗಪ್ಟಿಲ್ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.

VISTARANEWS.COM


on

T20 World Cup 2024
Koo

ಬೆಂಗಳೂರು: ಕಳೆದ 8 ಆವೃತ್ತಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ(T20 World Cup 2024) ಅತ್ಯಧಿಕ ಕ್ಯಾಚ್​ ಹಿಡಿದ ಆಟಗಾರ(most catches in T20 World Cup) ಯಾರು? ಈ ಬಾರಿಯ ಟೂರ್ನಿಯಲ್ಲಿ ಯಾರಿಗೆಲ್ಲ ಮಾಜಿ ಆಟಗಾರರ ದಾಖಲೆಗಳನ್ನು ಮುರಿಯುವ ಅವಕಾಶವಿದೆ ಎನ್ನುವ ಸಂಪೂರ್ಣ ಮಾಹಿತಿ ಇಂತಿದೆ.

ಎಬಿ ಡಿವಿಲಿಯರ್ಸ್


ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಆಟಗಾರ ಎಬಿ ಡಿವಿಲಿಯರ್ಸ್(AB de Villiers) ಅವರು ಇದುವರೆಗಿನ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕ್ಯಾಚ್​ ಪಡೆದ ದಾಖಲೆ ಹೊಂದಿದ್ದಾರೆ. 2007-2016 ತನಕ ವಿಶ್ವಕಪ್​ ಆಡಿದ ವಿಲಿಯರ್ಸ್, 30 ಪಂದ್ಯಗಳಿಂದ 23 ಕ್ಯಾಚ್​ ಹಿಡಿದಿದ್ದಾರೆ.


ಡೇವಿಡ್​ ವಾರ್ನರ್​


ವಿದಾಯದ ಟಿ20 ವಿಶ್ವಕಪ್​ ಆಡುತ್ತಿರುವ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​(David Warner) ಈ ಯಾದಿಯಲ್ಲಿ ದ್ವಿತೀಯ ಸ್ಥಾನಿಯಾಗಿದ್ದಾರೆ. 34* ಪಂದ್ಯವನ್ನಾಡಿ 21* ಕ್ಯಾಚ್​ ಹಿಡಿದಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ 3 ಕ್ಯಾಚ್​ ಹಿಡಿದರೆ ಡಿವಿಲಿಯರ್ಸ್ ದಾಖಲೆ ಪತನಗೊಳ್ಳಲಿದೆ. ವಾರ್ನರ್​ ಈಗಾಗಲೇ ಏಕದಿನ ಮತ್ತು ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.

ಇದನ್ನೂ ಓದಿ T20 World Cup 2024: ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಬ್ಯಾಟರ್​ಗಳು ಯಾರು?


ಮಾರ್ಟಿನ್ ಗಪ್ಟಿಲ್


ನ್ಯೂಜಿಲ್ಯಾಂಡ್​ನ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್(Martin Guptill) ಅವರು ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಕ್ಯಾಚ್​ ಹಿಡಿದ ಆಟಗಾರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 28 ಪಂದ್ಯಗಳಿಂದ 19 ಕ್ಯಾಚ್​ ಹಿಡಿದಿದ್ದಾರೆ. ಈ ಬಾರಿ ಅವರಿಗೆ ಆಡುವ ಅವಕಾಶ ಸಿಕ್ಕಿಲ್ಲ.


ರೋಹಿತ್​ ಶರ್ಮ


ಟೀಮ್​ ಇಂಡಿಯಾದ ನಾಯಕ, ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮ(Rohit Sharma) ಅವರು 16 ಕ್ಯಾಚ್​ ಹಿಡಿದು ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಆವೃತ್ತಿಯಲ್ಲಿ 4 ಕ್ಯಾಚ್​ ಹಿಡಿದರೆ ಮಾರ್ಟಿನ್ ಗಪ್ಟಿಲ್ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಚೊಚ್ಚಲ ಆವೃತ್ತಿಯಿಂದ ಇದುವರೆಗಿನ ಎಲ್ಲ ಆವೃತ್ತಿಯ ಟಿ20 ವಿಶ್ವಕಪ್​ ಆಡಿದ ಆಟಗಾರ ಎನ್ನುವ ಹಿರಿಮೆಯೂ ರೋಹಿತ್​ ಅವರದ್ದಾಗಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಟಾಪ್​ 5 ಬೌಲರ್​ಗಳು ಯಾರು?


ಗ್ಲೆನ್​ ಮ್ಯಾಕ್ಸ್​ವೆಲ್​


ಆಸ್ಟ್ರೇಲಿಯಾದ ಬಿಗ್​ ಹಿಟ್ಟರ್​, ಸ್ಟಾರ್​ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್(Glenn Maxwell)​ ಕೂಡ 16 ಕ್ಯಾಚ್​ ಹಿಡಿದು ರೋಹಿತ್​ ಶರ್ಮ ಜತೆ ಜಂಟಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಈ ಬಾರಿಯೂ ಆಡುತ್ತಿರುವ ಕಾರಣ ಅವರ ಕ್ಯಾಚ್​ಗಳ ಸಂಖ್ಯೆ ಹೆಚ್ಚಿಸುವ ಅವಕಾಶವಿದೆ.


ಕೇನ್​ ವಿಲಿಯಮ್ಸನ್​


ನ್ಯೂಜಿಲ್ಯಾಂಡ್​ ತಂಡದ ನಾಯಕ ಕೇನ್​ ವಿಲಿಯಮ್ಸನ್(Kane Williamson)​ 2012-2022ರ ಅವಧಿಯಲ್ಲಿ 25 ಪಂದ್ಯಗಳಿಂದ 15 ಕ್ಯಾಚ್​ ಹಿಡಿದಿದ್ದಾರೆ. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಕ್ಯಾಚ್​ ಹಿಡಿದ ಆಟಗಾರರ ಪಟ್ಟಿಯಲ್ಲಿ ಸದ್ಯ 5ನೇ ಸ್ಥಾನಿಯಾಗಿದ್ದಾರೆ. 2 ಕ್ಯಾಚ್​ ಹಿಡಿದರೆ ರೋಹಿತ್​ ಶರ್ಮ ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್ ದಾಖಲೆ ಹಿಂದಿಕ್ಕಲಿದ್ದಾರೆ.

Continue Reading

ಕ್ರಿಕೆಟ್

Team India T20 World Cup: ಚಿಂಟುವಿನ ಆಸೆ ನೆರವೇರಿಸಲು ಟೀಮ್​ ಇಂಡಿಯಾ ಜತೆ ನ್ಯೂಯಾರ್ಕ್​ಗೆ ತೆರಳಿದ ತಾಯಿ

Team India T20 World Cup: 2007ರಲ್ಲಿ ನಡೆದಿದ್ದ ಚೊಚ್ಚಲ ಆವೃತ್ತಿಯಲ್ಲಿ ಕಪ್​ ಗೆದ್ದ ಬಳಿಕ ಇದುವರೆಗೆ ಭಾರತ(Team India) ಕಪ್​ ಗೆದಿಲ್ಲ. 17 ವರ್ಷಗಳ ಬಳಿಕ ಮತ್ತೊಂದು ಕಪ್​ ಗೆಲ್ಲುವ ಇರಾದೆಯೊಂದಿಗೆ ಆಟಗಾರರು ಕಣಕ್ಕಿಳಿಯಲಿದ್ದಾರೆ. ಇದೀಗ ಡ್ರೀಮ್​ ಇಲೆವೆನ್​ನ(Dream11) ಜಾಹೀರಾತೊಂದು ಭಾರೀ ಸದ್ದು ಮಾಡುತ್ತಿದೆ.

VISTARANEWS.COM


on

Team India Dream 11
Koo

ಮುಂಬಯಿ: ಟಿ20 ವಿಶ್ವಕಪ್​ ಟೂರ್ನಿ(T20 World Cup 2024) ಇನ್ನೆರಡು ದಿನಗಳಲ್ಲಿ ಕಾವೇರಲಿದೆ. ಭಾರತ(Team India T20 World Cup) ತನ್ನ ಮೊದಲ ಪಂದ್ಯವನ್ನು ಜೂನ್​ 5ರಂದು ಐರ್ಲೆಂಡ್​ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. 2007ರಲ್ಲಿ ನಡೆದಿದ್ದ ಚೊಚ್ಚಲ ಆವೃತ್ತಿಯಲ್ಲಿ ಕಪ್​ ಗೆದ್ದ ಬಳಿಕ ಇದುವರೆಗೆ ಭಾರತ(Team India) ಕಪ್​ ಗೆದಿಲ್ಲ. 17 ವರ್ಷಗಳ ಬಳಿಕ ಮತ್ತೊಂದು ಕಪ್​ ಗೆಲ್ಲುವ ಇರಾದೆಯೊಂದಿಗೆ ಆಟಗಾರರು ಕಣಕ್ಕಿಳಿಯಲಿದ್ದಾರೆ. ಇದೀಗ ಡ್ರೀಮ್​ ಇಲೆವೆನ್​ನ(Dream11) ಜಾಹೀರಾತೊಂದು ಭಾರೀ ಸದ್ದು ಮಾಡುತ್ತಿದೆ.

ಭಾರತ ತಂಡ ಉತ್ತಮವಾಗಿ ಆಡು ಕಪ್​ ಗೆಲ್ಲಲಿ ಎನ್ನುವ ಪ್ರಧಾನ ಗುರಿಯೊಂದಿಗೆ ಡ್ರೀಮ್​ ಇಲೆವೆನ್​ ಜಾಹೀರಾತೊಂದನ್ನು ಬಿಡುಗಡೆ ಮಾಡಿದೆ. ಇದಲ್ಲಿ ಪುಟ್ಟ ಮಗು ಭಾರತ ತಂಡ ಜೆರ್ಸಿ ತೊಟ್ಟು ತನ್ನ ತಾಯಿಯ ಬಳಿ ನನ್ನ ತಂದೆ, ಸಹೋದರ ಭಾರತ ತಂಡ ವಿಶ್ವಕಪ್​ ಗೆದ್ದಿರುವುದನ್ನು ನೋಡಿದ್ದಾರೆ. ಆದರೆ ನಾನು ಯಾವಾಗ ಈ ಸುಂದರ ಕ್ಷಣವನ್ನು ನೋಡಲು ಸಾಧ್ಯ. ಈ ಬಾರಿ ಖಂಡಿತವಾಗಿಯೂ ನೋಡಲು ಸಾಧ್ಯವೇ? ಎಂದು ಪ್ರಶ್ನೆ ಮಾಡುತ್ತಾನೆ. ಈ ವಿಡಿಯೊವನ್ನು ತಾಯಿ ಟೀಮ್​ ಇಂಡಿಯಾದ ಆಟಗಾರರಿಗೆ ತೋರಿಸಿ ನೀವು ಏನು ಮಾಡುತ್ತೀರಾ ಎಂದು ನನಗೆ ತಿಳಿದಿಲ್ಲ ನನ್ನ ಮಗ ಚಿಂಟುವಿನ ಆಸೆಯನ್ನು ಈ ಬಾರಿ ಈಡೇರಿಸಲೇ ಬೇಕೆಂದು ಮಗುವಿನ ತಾಯಿ ಆಟಗಾರರಿಗೆ ಖಡಕ್​ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ T20 World Cup 2007: ಚೊಚ್ಚಲ ಟಿ20 ವಿಶ್ವಕಪ್ ಭಾರತ-ಪಾಕ್​ ಫೈನಲ್​ ಪಂದ್ಯದ ಮೆಲುಕು ನೋಟ

ಈ ಬಾರಿಯ ಟೂರ್ನಿಗೆ ಸಿದ್ಧತೆ ಹೇಗಿದೆ ಎಂದು ಕೇಳಿದಾಗ ರೋಹಿತ್​ ನಾವು ಕಠಿಣ ತರಬೇತಿ ಪಡೆಯುತ್ತಿದ್ದೇವೆ ಎನ್ನುತ್ತಾರೆ. ಈ ವೇಳೆ ಚಿಂಟು ತಾಯಿ ನೋಡುತ್ತಿದ್ದೇನೆ ನಿಮ್ಮ ತಯಾರಿಯನ್ನು… ಹೀಗೆ ಅಭ್ಯಾಸ ನಡೆಸಿದರೆ ಕಪ್​ ಗೆಲ್ಲಲು ಸಾಧ್ಯವೇ ಎನ್ನುತ್ತಾರೆ. ಈ ವೇಳೆ ಉಪನಾಯಕ ಹಾರ್ದಿಕ್​ ಪಾಂಡ್ಯ ನೀವು ಆಶೀರ್ವಾದ ಮಾಡಿ ಸಾಕು ಉಳಿದದ್ದು ನಾವು ನೋಡಿಕೊಳ್ಳುತ್ತೇವೆ ಎನ್ನುತ್ತಾರೆ. ನಾವು ವಿಶ್ವದ ನಂ.1 ತಂಡ ಎಂದು ರೋಹಿತ್​ ಹೇಳುತ್ತಾರೆ. ಆಗ ಈ ತಾಯಿ ತಾನು ಈ ವಿಶ್ವದ ನಂ.1 ಮಮ್ಮಿ ಎಂದು ಹೇಳುತ್ತಾರೆ. ಈ ವೇಳೆ ಜಡೇಜಾ ಮಮ್ಮಿಜೀ ಇದು ಕ್ರಿಕೆಟ್​ ಎಂದು ಹೇಳುತ್ತಾರೆ. ಇದಕ್ಕೆ ಮಮ್ಮಿ ಹಾ… ಇದು ಕ್ರಿಕೆಟ್..​ ಬ್ಯಾಟ್​, ವಿಕೆಟ್​ ಮತ್ತು ಚೆಂಡು ತಂದು ಅಭ್ಯಾಸ ಆರಂಭಿಸಿ ಎಂದು ಹೇಳುವ ಮೂಲಕ ಕೋಚಿಂಗ್​ ಮಾಡುತ್ತಾರೆ.

ಈ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡು, ವಿಶ್ವಕಪ್‌ಗಳು ಅಭಿಮಾನಿಗಳ ಶಕ್ತಿಯ ಜತೆಗೆ ಈ ಬಾರಿ ತಾಯಂದಿರ ಹರ್ಷೋದ್ಗಾರ ಜೋರಾಗಿರಲಿವೆ. ‘ಮಮ್ಮಿ ಕೆ ಮ್ಯಾಜಿಕ್ ಕೆ ಸಾಥ್'(ತಾಯಿಯ ವಿಶೇಷ ಬೆಂಬಲದೊಂದಿಗೆ) ಟೀಮ್​ ಇಂಡಿಯಾ ವಿಶ್ವಕಪ್​ ಗೆಲ್ಲಲು ಸಜ್ಜಾಗಿದೆ ಎಂದು ಬರೆದುಕೊಂಡಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

Continue Reading
Advertisement
Cow Smugling
ಪ್ರಮುಖ ಸುದ್ದಿ15 mins ago

Cow Smugling : ಅಕ್ರಮ ಗೋ ಸಾಗಾಟದ ವಾಹನ ಬೆನ್ನಟ್ಟಿ ಹಿಡಿದ ಭಜರಂಗದಳದ ಕಾರ್ಯಕರ್ತರು

Modi Meditation
ದೇಶ30 mins ago

Modi Meditation: ಕನ್ಯಾಕುಮಾರಿಯಲ್ಲಿ 45 ಗಂಟೆಗಳ ಧ್ಯಾನ ಆರಂಭಿಸಿದ ಮೋದಿ; ಹಗಲು-ರಾತ್ರಿ ಪ್ರಧಾನಿ ಮೆಡಿಟೇಷನ್

Mumbai Satta Bazar
ದೇಶ1 hour ago

Mumbai Satta Bazar: ಮೋದಿ ಹ್ಯಾಟ್ರಿಕ್‌ ಗ್ಯಾರಂಟಿ ಎಂದ ಮುಂಬೈ ಸಟ್ಟಾ ಬಜಾರ್;‌ ಕಾಂಗ್ರೆಸ್‌ಗೆ ಎಷ್ಟು ಕ್ಷೇತ್ರ?

Radhika Merchant
ಪ್ರಮುಖ ಸುದ್ದಿ1 hour ago

Radhika Merchant : ಅನಂತ್​​ ಅಂಬಾನಿ- ರಾಧಿಕಾ ಮರ್ಚೆಂಟ್​ ವಿವಾಹದ ಸ್ಥಳ ಬಹಿರಂಗ; ಇಲ್ಲಿದೆ ವಿವರ

Suspicious Death Advocate Chaitra Gowda Case
ಬೆಂಗಳೂರು2 hours ago

Suspicious Death: ಸಿಸಿಬಿ ತೆಕ್ಕೆಗೆ ವಕೀಲೆ ಚೈತ್ರಾ ಡೆತ್ ಕೇಸ್; 15 ದಿನಗಳ ಸಿಸಿಟಿವಿ ಪರಿಶೀಲನೆ

Star Fashion
ಫ್ಯಾಷನ್2 hours ago

Star Fashion: ಪಂಚೆ ಜೊತೆ ಟ್ರೋಫಿ ಜಾಕೆಟ್‌ ಧರಿಸಿದ ನಟಿ ತಮನ್ನಾಳ ಯೂನಿಕ್‌ ಫ್ಯಾಷನ್‌!

Health Insurance
ಮನಿ-ಗೈಡ್2 hours ago

Health Insurance: ಕ್ಯಾಶ್​ಲೆಸ್​ ಕ್ಲೈಮ್‌ ಗಳಿಗೆ ಆಸ್ಪತ್ರೆಯಲ್ಲಿ ಇನ್ನು ಹೆಚ್ಚು ಹೊತ್ತು ಕಾಯಬೇಕಿಲ್ಲ; ಇಲ್ಲಿದೆ ಹೊಸ ನಿಯಮ

First successful TAVR surgery in the state at Fortis Hospital
ಬೆಂಗಳೂರು2 hours ago

Fortis Hospital: ರಾಜ್ಯದಲ್ಲೇ ಮೊದಲ ಬಾರಿಗೆ ಅಪರೂಪದ ಶಸ್ತ್ರಚಿಕಿತ್ಸೆ

MLA Belur Gopalakrishna election campaign for Congress candidates at ripponpete
ರಾಜಕೀಯ2 hours ago

MLC Election: ವಿಧಾನಪರಿಷತ್ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗಳ ಪರ ಶಾಸಕ ಬೇಳೂರು ಗೋಪಾಲಕೃಷ್ಣ ಮತಯಾಚನೆ

Vijayanagara News Distribute good quality sowing seeds and fertilizers says Tehsildar Amaresh G K
ವಿಜಯನಗರ2 hours ago

Vijayanagara News: ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಿ: ತಹಸೀಲ್ದಾರ್‌ ಅಮರೇಶ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ7 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌