Ind vs Aus : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ವೇಳೆ ಸೃಷ್ಟಿಯಾಗಬಲ್ಲ ದಾಖಲೆಗಳ ವಿವರ ಇಲ್ಲಿದೆ - Vistara News

ಕ್ರಿಕೆಟ್

Ind vs Aus : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ವೇಳೆ ಸೃಷ್ಟಿಯಾಗಬಲ್ಲ ದಾಖಲೆಗಳ ವಿವರ ಇಲ್ಲಿದೆ

ಭಾರತ ಹಾಗೂ ಆಸ್ಟ್ತೇಲಿಯಾ (Ind vs Aus) ತಂಡಗಳ ನಡುವಿನ ವಿಶ್ವ ಕಪ್ ಪಂದ್ಯ (ICC Word Cup 2023) ಚೆನ್ನೈನ ಚೆಪಾಕ್​ ಸ್ಟೇಡಿಯಮ್​ನಲ್ಲಿ ಅಕ್ಟೋಬರ್​ 8 ರಂದು ನಡೆಯಲಿದೆ.

VISTARANEWS.COM


on

Team India
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೆನ್ನೈ: ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾವನ್ನು ಎದುರಿಸುವ ಮೂಲಕ ಆತಿಥೇಯ ಭಾರತ (ind vs aus) ತನ್ನ ಅಭಿಯಾನವನ್ನು ಪ್ರಾರಂಭಿಸಲು ಸಜ್ಜಾಗಿದೆ. ವಿಶ್ವಕಪ್ ಅಭ್ಯಾಸ ಪಂದ್ಯಗಳು ((ICC Word Cup 2023) ರದ್ದಾಗಿದ್ದ ಕಾರಣ ಭಾರತ ನೇರವಾಗಿ ಪ್ರಮುಖ ಸುತ್ತಿಗೆ ಪ್ರವೇಶ ಪಡೆದಂತಾಗಿದೆ. ಆದಾಗ್ಯೂ ಇತ್ತೀಚಿನ ಏಷ್ಯಾ ಕಪ್ 2023 ರ ಚಾಂಪಿಯನ್​ ಪಟ್ಟದಿಂದ ಸೃಷ್ಟಿಯಾಗಿರುವ ಆತ್ಮವಿಶ್ವಾಸದೊಂದಿಗೆ ತಂಡವು ಆಸ್ಟ್ರೇಲಿಯಾ ವಿರುದ್ಧದ ಕಣಕ್ಕೆ ಇಳಿಯಲಿದೆ.

ಟೂರ್ನಿಯ ಆರಂಭಕ್ಕೂ ಮುನ್ನ ಮೂರು ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಮೆನ್ ಇನ್ ಬ್ಲೂ ಮತ್ತು ಕಾಂಗರೂಗಳು ಪರಸ್ಪರ ಮುಖಾಮುಖಿಯಾಗಿದ್ದವು. ತವರಿನ ತಂಡವಾದ ಟೀಮ್ ಇಂಡಿಯಾ ಆರಂಭಿಕ ಎರಡು ಪಂದ್ಯಗಳನ್ನು ಗೆದ್ದುಕೊಂಡಿತು ಮತ್ತು ಕೊನೇ ಪಂದ್ಯದಲ್ಲಿ ಆಸೀಸ್ ಪುನರಾಗಮನ ಮಾಡಿತ್ತು.

ತಂಡದ ಸಂಯೋಜನೆಯ ಬಗ್ಗೆ ಮಾತನಾಡುವುದಾದರೆ, ಭಾರತದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಡೆಂಗ್ಯೂನಿಂದ ಬಳಲುತ್ತಿರುವುದರಿಂದ ಅವರ ಲಭ್ಯತೆ ಅನುಮಾನ. ನಾಲ್ಕನೇ ವಿಶ್ವಕಪ್ ಆಡಲಿರುವ ಸ್ಟಾರ್ ವಿರಾಟ್ ಕೊಹ್ಲಿ ಮೇಲೆ ಎಲ್ಲರ ನಿರೀಕ್ಷೆಯಿದೆ. ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಕುಲದೀಪ್ ಯಾದವ್ ಈ ವಿಶ್ವಕಪ್​ನಲ್ಲಿ ಸ್ಥಿರ ಪ್ರದರ್ಶನ ನೀಡಬಹುದು ಎಂಬುದು ಅಭಿಮಾನಿಗಳ ಅಭಿಲಾಷೆ.

ಇದನ್ನೂ ಓದಿ : ind vs aus : ವಿಶ್ವ ಕಪ್​ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸುವುದೇ ಭಾರತ?

ಆಸೀಸ್ ಪರ, ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಗಾಯದ ಕಾರಣ ಸ್ಪರ್ಧೆಯ ಆರಂಭಿಕ ಹಂತದಿಂದ ಹೊರಗುಳಿಯಲಿದ್ದಾರೆ. ಮಿಚೆಲ್ ಮಾರ್ಷ್ ಆರಂಭಿಕರಾಗಿ ಡೇವಿಡ್ ವಾರ್ನರ್ ಅಗ್ರಸ್ಥಾನದಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್, ಮಿಚೆಲ್ ಸ್ಟಾರ್ಕ್ ಮತ್ತು ನಾಯಕ ಪ್ಯಾಟ್ ಕಮಿನ್ಸ್ ಅವರ ಮೇಲೆ ಕಾಂಗರೂಗಳು ಅವಲಂಬಿತರಾಗಿದ್ದಾರೆ. ಏತನ್ಮಧ್ಯೆ, ವಿಶ್ವಕಪ್ 2023 ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಸಂಖ್ಯೆ 5ರಲ್ಲಿ ಸೃಷ್ಟಿಯಾಗಬಹುದಾದ ಕೆಲವು ದಾಖಲೆಗಳು ಇಲ್ಲಿವೆ.

ಭಾರತ ಮತ್ತು ಆಸ್ಟ್ರೇಲಿಯಾ ಏಕದಿನ ಪಂದ್ಯಗಳಲ್ಲಿ 149 ಬಾರಿ ಮುಖಾಮುಖಿಯಾಗಿದ್ದು, ಭಾರತ ತಂಡ 56 ಬಾರಿ ಗೆದ್ದಿದ್ದರೆ, ಆಸೀಸ್ 83 ಬಾರಿ ಗೆದ್ದಿದೆ. ಹತ್ತು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ.

8- ಏಕದಿನ ಕ್ರಿಕೆಟ್ನಲ್ಲಿ 300 ಸಿಕ್ಸರ್​ಗಳ ಗಡಿ ದಾಟಲು ರೋಹಿತ್ ಶರ್ಮಾಗೆ (292) ಎಂಟು ಸಿಕ್ಸರ್​ಗಳ ಅಗತ್ಯವಿದೆ.

3- ಕ್ರಿಸ್ ಗೇಲ್ (553) ಅವರನ್ನು ಹಿಂದಿಕ್ಕಲು ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೆಚ್ಚು ಸಿಕ್ಸರ್​ಗಳ ಬಾರಿಸಿದ ಬ್ಯಾಟರ್​ ಆಗಲು ರೋಹಿತ್ (551) ಮೂರು ಸಿಕ್ಸರ್​ಗಳ ಅಗತ್ಯವಿದೆ.

    83 – ಶುಬ್ಮನ್ ಗಿಲ್ (1917) 50 ಓವರ್​ಗಳ ಸ್ವರೂಪದಲ್ಲಿ 2000 ರನ್​ಗಳ ಮೈಲಿಗಲ್ಲನ್ನು ತಲುಪಲು 83 ರನ್​ಗಳ ಅಗತ್ಯವಿದೆ.

    1- ಸ್ಟೀವನ್ ಸ್ಮಿತ್ (49) ಏಕದಿನ ಮಾದರಿಯಲ್ಲಿ 50 ಸಿಕ್ಸರ್​ಗಳನ್ನು ತಲುಪಲು ಒಂದು ದೊಡ್ಡ ಹಿಟ್ ಅಗತ್ಯವಿದೆ.

    114 – ಇಶಾನ್ ಕಿಶನ್ ಅವರಿಗೆ (886) ಏಕದಿನ ಪಂದ್ಯಗಳಲ್ಲಿ 1000 ರನ್​ಗಳ ಮೈಲಿಗಲ್ಲನ್ನು ತಲುಪಲು 114 ರನ್​ಗಳ ಅಗತ್ಯವಿದೆ.

    7- ಗ್ಲೆನ್ ಮ್ಯಾಕ್ಸ್ವೆಲ್ (5993) ಎಲ್ಲಾ ಸ್ವರೂಪದ ಕ್ರಿಕೆಟ್​​ನಲ್ಲಿ 6000 ರನ್ ಪೂರೈಸಲು ಏಳು ರನ್​ಗಳ ಅಗತ್ಯವಿದೆ.

    5- ಮಾರ್ಕಸ್ ಸ್ಟೊಯಿನಿಸ್ (45) ಏಕದಿನ ಕ್ರಿಕೆಟ್​​ನಲ್ಲಿ 50 ಸಿಕ್ಸರ್​ಗಳನ್ನು ತಲುಪಲು 5 ದೊಡ್ಡ ಹಿಟ್​ಗಳ ಅಗತ್ಯವಿದೆ.

    150 – ಭಾರತ ಮತ್ತು ಆಸ್ಟ್ರೇಲಿಯಾ ತಮ್ಮ 150 ನೇ ಏಕದಿನ ಪಂದ್ಯವನ್ನು ಆಡಲಿವೆ.

    5- ರವೀಂದ್ರ ಜಡೇಜಾ (95) ಅವರಿಗೆ ತವರಿನಲ್ಲಿ ಏಕದಿನ ಪಂದ್ಯಗಳಲ್ಲಿ 100 ವಿಕೆಟ್ ಪಡೆಯಲು ಐದು ವಿಕೆಟ್ ಅಗತ್ಯವಿದೆ.

    10- ಇಶಾನ್ (90) ಏಕದಿನ ಕ್ರಿಕೆಟ್​ನಲ್ಲಿ 100 ಬೌಂಡರಿಗಳನ್ನು ಪೂರೈಸಲು ಹತ್ತು ಫೋರ್​ಗಳ ದೂರದಲ್ಲಿದ್ದಾರೆ.

    ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
    ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

    ಕ್ರೀಡೆ

    Rohit Sharma: ವಿಶ್ವ ದಾಖಲೆ ಮೇಲೆ ಕಣ್ಣಿಟ್ಟ ಹಿಟ್​ಮ್ಯಾನ್​ ರೋಹಿತ್​; ಲಂಕಾ ಆಟಗಾರನಿಗೆ ನಡುಕ

    Rohit Sharma: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿದ ರೋಹಿತ್,​ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಕೇವಲ 4 ಬೌಂಡರಿ ಬಾರಿಸಿದರೆ, ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಲಿದ್ದಾರೆ.

    VISTARANEWS.COM


    on

    Rohit Sharma
    Koo


    ಪ್ರೊವಿಡೆನ್ಸ್‌: ಭಾರತ ತಂಡ ನಾಳೆ ನಡೆಯುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ(T20 World Cup 2024) ಇಂಗ್ಲೆಂಡ್​ ವಿರುದ್ಧ(IND vs ENG Semi Final) ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಟೀಮ್​ ಇಂಡಿಯಾ ನಾಯಕ, ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮ(Rohit Sharma) ಅವರಿಗೆ ಟಿ20 ವಿಶ್ವಕಪ್​ ಕ್ರಿಕೆಟ್​ನಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸುವ ಸುವರ್ಣಾವಕಾಶವೊಂದಿದೆ.

    ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿದ ರೋಹಿತ್,​ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಕೇವಲ 4 ಬೌಂಡರಿ ಬಾರಿಸಿದರೆ, ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಲಿದ್ದಾರೆ. ಈ ಮೂಲಕ ಶ್ರೀಲಂಕಾದ ಮಾಜಿ ಆಟಗಾರ ಮಹೇಲ ಜಯವರ್ಧನೆ(Mahela Jayawardene) ಅವರ ದಾಖಲೆಯನ್ನು ಮುರಿಯಲಿದ್ದಾರೆ. ಮಹೇಲ ಜಯವರ್ಧನೆ 111 ಬೌಂಡರಿ ಬಾರಿಸಿದ್ದಾರೆ. ರೋಹಿತ್​ ಸದ್ಯ 107* ಬೌಂಡರಿ ಬಾರಿಸಿದ್ದಾರೆ. ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನ ರೋಹಿತ್​ ಅವರ ಬೌಂಡರಿಗಳ ಸಂಖ್ಯೆ 91 ಇತ್ತು.

    ಇದನ್ನೂ ಓದಿ IND vs ENG Semi Final: ಇಂಡೋ-ಆಂಗ್ಲ ಸೆಮಿಫೈನಲ್​ ಪಂದ್ಯದ ಸಂಭಾವ್ಯ ತಂಡ, ಪಿಚ್​ ರಿಪೋರ್ಟ್​ ಹೀಗಿದೆ

    ರೇಸ್​ನಲ್ಲಿ ಕೊಹ್ಲಿ


    ಮಹೇಲ ಜಯವರ್ಧನೆ ಅವರ ಈ ದಾಖಲೆಯನ್ನು ಮುರಿಯಲು ಮೊದಲು ಅವಕಾಶವಿದದ್ದು ವಿರಾಟ್​ ಕೊಹ್ಲಿಗೆ. ಆದರೆ ಅವರು ಆಡಿದ ಎಲ್ಲ ಪಂದ್ಯಗಳಲ್ಲಿಯೂ ವಿಫಲರಾದ ಕಾರಣ ಈ ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ. ಈ ಸಾಧಕರ ಪಟ್ಟಿಯಲ್ಲಿ 2ನೇ ಸ್ಥಾನಿಯಾಗಿದ್ದ ಕೊಹ್ಲಿಯನ್ನು(Virat Kohli) ಹಿಂದಿಕ್ಕಿ ರೋಹಿತ್​ ಮುಂದೆ ಸಾಗಿದ್ದಾರೆ. ಕೊಹ್ಲಿ ಸದ್ಯ 105* ಬೌಂಡರಿಯೊಂದಿಗೆ ಮೂರನೇ ಸ್ಥಾನಿಯಾಗಿದ್ದಾರೆ. ಸದ್ಯ ಜಯವರ್ಧನೆ ದಾಖಲೆ ಮುರಿಯಲು ಕೊಹ್ಲಿ ಮತ್ತು ರೋಹಿತ್​ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.

    ಅತ್ಯಧಿಕ ಬೌಂಡರಿ ಬಾರಿದ ಬ್ಯಾಟರ್​ಗಳು

    ಆಟಗಾರದೇಶಇನಿಂಗ್ಸ್​ಬೌಂಡರಿ
    ಮಹೇಲಾ ಜಯವರ್ಧನೆಶ್ರೀಲಂಕಾ31111
    ರೋಹಿತ್​ ಶರ್ಮ​ಭಾರತ45107*
    ವಿರಾಟ್​​ ಕೊಹ್ಲಿಭಾರತ33105
    ಡೇವಿಡ್​ ವಾರ್ನರ್​ಆಸ್ಟ್ರೇಲಿಯಾ41101
    ತಿಲಕರತ್ನೆ ದಿಲ್ಶನ್ಶ್ರೀಲಂಕಾ35101
    ಜಾಸ್​ ಬಟ್ಲರ್​ಇಂಗ್ಲೆಂಡ್3487*
    ಕ್ರಿಸ್​ ಗೇಲ್​​ವೆಸ್ಟ್​ ಇಂಡೀಸ್​3178
    ಶಕೀಬ್​ ಅಲ್​ ಹಸನ್​ಬಾಂಗ್ಲಾದೇಶ​4374*
    ಕೇನ್​ ವಿಲಿಯಮ್ಸನ್​ನ್ಯೂಜಿಲ್ಯಾಂಡ್2971*
    ಬ್ರೆಂಡನ್​ ಮೆಕಲಮ್​ನ್ಯೂಜಿಲ್ಯಾಂಡ್2567

    ಗೆದ್ದು ಬಾ ಭಾರತ…


    ಚುಟುಕು ಕ್ರಿಕೆಟ್‌ನಲ್ಲಿ ತನ್ನದೇ ಹೆಗ್ಗುರುತು ಸ್ಥಾಪಿಸಿರುವ ಟೀಮ್‌ ಇಂಡಿಯಾ ನಾಳೆ (ಗುರುವಾರ) ನಡೆಯುವ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಯ ಸೆಮಿಫೈನಲ್​(IND vs ENG Semi Final) ಪಂದ್ಯದಲ್ಲಿ ಇಂಗ್ಲೆಂಡ್(IND vs ENG)​ ವಿರುದ್ಧ ಅದೃಷ್ಠ ಪರೀಕ್ಷೆಗೆ ಇಳಿಯಲಿದೆ. ಸೀಮಿತ ಓವರ್‌ಗಳ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ಕಳೆದ ಕೆಲವು ವರ್ಷಗಳಿಂದ ಸ್ಥಿರತೆಯನ್ನು ಕಾಪಾಡಿಕೊಂಡು ಬಂದಿದೆ. ಅತ್ತ ಹಾಲಿ ಚಾಂಪಿಯನ್​ ಆಗಿರುವ ಇಂಗ್ಲೆಂಡ್​ ಸಹ ಇತ್ತೀಚೆಗೆ ಟಿ20ಗಳಲ್ಲಿ ಬಲಾಡ್ಯ ತಂಡವಾಗಿ ಹೊರಹೊಮ್ಮಿದೆ. ಹೀಗಾಗಿ ಇತ್ತಂಡಗಳ ನಡುವಿನ ಕ್ರಿಕೆಟ್‌ ಸಮರ ತೀವ್ರ ಕುತೂಹಲ, ರೋಮಾಂಚನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.

    Continue Reading

    ಕ್ರೀಡೆ

    IND vs ENG Semi Final: ಇಂಡೋ-ಆಂಗ್ಲ ಸೆಮಿಫೈನಲ್​ ಪಂದ್ಯದ ಸಂಭಾವ್ಯ ತಂಡ, ಪಿಚ್​ ರಿಪೋರ್ಟ್​ ಹೀಗಿದೆ

    IND vs ENG Semi Final: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಇತ್ತಂಡಗಳು 4 ಪಂದ್ಯಗಳನ್ನು ಆಡಿ ತಲಾ 2 ಪಂದ್ಯಗಳಲ್ಲಿ ಗೆಲುವು ಮತ್ತು ಸೋಲು ಕಂಡಿವೆ. ಭಾರತ ಕೊನೆಯ ಬಾರಿಗೆ ಇಂಗ್ಲೆಂಡ್​ ವಿರುದ್ಧ ಟಿ20 ಗೆಲುವು ಕಂಡಿದ್ದು 2012ರಲ್ಲಿ. ಆ ಪಂದ್ಯದಲ್ಲಿ ಧೋನಿ ಪಡೆ 90 ರನ್​ ಗೆಲುವು ಸಾಧಿಸಿತ್ತು.

    VISTARANEWS.COM


    on

    IND vs ENG Semi Final
    Koo

    ಪ್ರೊವಿಡೆನ್ಸ್‌: ಕ್ರಿಕೆಟ್​ ಅಭಿಮಾನಿಗಳು ಭಾರೀ ನಿರೀಕ್ಷೆಯೊಂದಿಗೆ ಕಾದು ಕುಳಿತಿರುವ ಭಾರತ ಮತ್ತು ಇಂಗ್ಲೆಂಡ್​ ನಡುವಣ ಹೈವೋಲ್ಟೇಜ್ ಸೆಮಿಫೈನಲ್(IND vs ENG Semi Final)​​ ಪಂದ್ಯ ನಾಳೆ (ಗುರುವಾರ) ಗಯಾನದ (Guyana) ಪ್ರೊವಿಡೆನ್ಸ್‌(Providence Stadium) ಸ್ಟೇಡಿಯಂನಲ್ಲಿ ನಡೆಯಲಿದೆ. ಇತ್ತಂಡಗಳ ಇದುವರೆಗಿನ ಟಿ20 ಮುಖಾಮುಖಿ, ಸಂಭಾವ್ಯ ತಂಡ, ಪಿಚ್​ ರಿಪೋರ್ಟ್​ ಮಾಹಿತಿ ಹೀಗಿದೆ.

    ಟಿ20 ಮುಖಾಮುಖಿ


    ಭಾರತ ಮತ್ತು ಇಂಗ್ಲೆಂಡ್​ ಇದುವರೆಗೆ ಟಿ20 ಕ್ರಿಕೆಟ್​ನಲ್ಲಿ 23 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 12 ಪಂದ್ಯ ಗೆದ್ದಿದ್ದರೆ, ಇಂಗ್ಲೆಂಡ್​ 11 ಪಂದ್ಯಗಳನ್ನು ಗೆದ್ದಿದೆ. ಕಳೆದ 2 ವರ್ಷಗಳಿಂದ ಇಂಗ್ಲೆಂಡ್​ ವಿರುದ್ಧ ಭಾರತ ಗೆಲುವು ಕಂಡಿಲ್ಲ. 2022ರ ಟಿ20 ವಿಶ್ವಕಪ್(T20 World Cup 2024)​ ಸೆಮಿಫೈನಲ್​ ಪಂದ್ಯದ ಬಳಿಕ ಉಭಯ ತಂಡಗಳು ಇದುವರೆಗೂ ಟಿ20ಯಲ್ಲಿ ಮುಖಾಮುಖಿಯಾಗಿಲ್ಲ. ಆ ಪಂದ್ಯದಲ್ಲಿ ಭಾರತ 10 ವಿಕೆಟ್​ ಸೋಲು ಕಂಡಿತ್ತು. ಅಂದಿನ ಸೋಲಿಗೆ ಈ ಬಾರಿಯ ಸೆಮಿ ಕಾದಾಟದಲ್ಲಿ ಭಾರತ ಸೇಡು ತೀರಿಸಿಕೊಂಡೀತೇ ಎಂದು ಕಾದು ನೋಡಬೇಕಿದೆ.

    ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಇತ್ತಂಡಗಳು 4 ಪಂದ್ಯಗಳನ್ನು ಆಡಿ ತಲಾ 2 ಪಂದ್ಯಗಳಲ್ಲಿ ಗೆಲುವು ಮತ್ತು ಸೋಲು ಕಂಡಿವೆ. ಭಾರತ ಕೊನೆಯ ಬಾರಿಗೆ ಇಂಗ್ಲೆಂಡ್​ ವಿರುದ್ಧ ಟಿ20 ಗೆಲುವು ಕಂಡಿದ್ದು 2012ರಲ್ಲಿ. ಆ ಪಂದ್ಯದಲ್ಲಿ ಧೋನಿ ಪಡೆ 90 ರನ್​ ಗೆಲುವು ಸಾಧಿಸಿತ್ತು.

    ಇದನ್ನೂ ಓದಿ IND vs ENG Semi Final: ಆಂಗ್ಲರನ್ನು ಸದೆಬಡಿದು ಫೈನಲ್​ ಪ್ರವೇಶಿಸಲಿ ಭಾರತ

    ಪಿಚ್​ ರಿಪೋರ್ಟ್​


    ಪ್ರಾವಿಡೆನ್ಸ್ ಸ್ಟೇಡಿಯಂನ ಪಿಚ್​ ಬೌಲಿಂಗ್​ಗೆ ಹೆಚ್ಚಿನ ನೆರವು ನೀಡುತ್ತದೆ. ಪಂದ್ಯ ಸಾಗಿದಂತೆ ಇಲ್ಲಿ ಹೆಚ್ಚಾಗಿ ಸ್ಪಿನ್ನರ್‌ಗಳು ಪ್ರಾಬಲ್ಯ ಸಾಧಿಸಲಿದ್ದಾರೆ. ದೊಡ್ಡ ಮೊತ್ತ ಬಾರಿಸುವುದು ಇಲ್ಲಿ ಅಷ್ಟು ಸುಲಭವಲ್ಲ. 2010ರಲ್ಲಿ 191 ರನ್ ದಾಖಲಾದದ್ದೆ ಇಲ್ಲಿನ ಗರಿಷ್ಠ ಸ್ಕೋರ್​. ಹೀಗಾಗಿ ನಾಳಿನ ಪಂದ್ಯ ಕೂಡ ಲೋ ಸ್ಕೋರ್​ ಆಗುವ ಸಾಧ್ಯತೆ ಅಧಿಕವಾಗಿದೆ.

    ಹವಾಮಾನ ವರದಿ


    ಈಗಾಗಲೇ ಹವಾಮಾನ ಇಲಾಖೆ ಈ ಪಂದ್ಯಕ್ಕೆ ಭಾರೀ ಮಳೆ ಎಚ್ಚರಿಕೆ ನೋಡಿದ್ದು, ಪಂದ್ಯದ ಸಮಯದಲ್ಲಿ ಮಳೆ ಸುರಿಯುವ ಸಾಧ್ಯತೆ ಶೇ. 88ರಷ್ಟಿದೆ ಎಂದು ತಿಳಿಸಿದೆ. ಪಂದ್ಯ ರದ್ದಾದರೂ ಅಚ್ಚರಿ ಇಲ್ಲ ಎಂದು ಹೇಳಿದೆ. ಅಚ್ಚರಿ ಎಂದರೆ ಈ ಪಂದ್ಯಕ್ಕೆ ಮೀಸಲು ದಿನ ಕೂಡ ಇಲ್ಲ. ಆದರೆ, ಪಂದ್ಯ ಮುಗಿಸಲು 250 ನಿಮಿಷಗಳ ಹೆಚ್ಚುವರಿ ಸಮಯವನ್ನು ಐಸಿಸಿ ನೀಡಿದೆ. ಒಂದು ವೇಳೆ ಪಂದ್ಯ ರದ್ದುಗೊಂಡರೆ ಭಾರತ ತಂಡ ಫೈನಲ್​ಗೇರಲಿದೆ. ಏಕೆಂದರೆ ಸೂಪರ್​-8 ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಸಂಪಾದಿಸಿದೆ. ಇಂಗ್ಲೆಂಡ್​ ಸೂಪರ್​-8 ಅಂಕಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿತ್ತು. ಹೀಗಾಗಿ ಈ ಲಾಭ ಭಾರತಕ್ಕೆ ಲಭಿಸಲಿದೆ.

    ಸಂಭಾವ್ಯ ತಂಡಗಳು


    ಭಾರತ:
    ರೋಹಿತ್​ ಶರ್ಮ(ನಾಯಕ), ವಿರಾಟ್ ಕೊಹ್ಲಿ, ರಿಷಭ್​ ಪಂತ್​(ವಿಕೀ), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್​ಪ್ರೀತ್​ ಬುಮ್ರಾ.

    ಇಂಗ್ಲೆಂಡ್​: ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (ನಾಯಕ), ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ರೀಸ್ ಟೋಪ್ಲಿ.

    Continue Reading

    ಕ್ರೀಡೆ

    AFG vs SA Semi Final: ಚೊಚ್ಚಲ ಫೈನಲ್​ ನಿರೀಕ್ಷೆಯಲ್ಲಿ ಆಫ್ಘನ್​-ದಕ್ಷಿಣ ಆಫ್ರಿಕಾ; ಯಾರಿಗೆ ಒಲಿಯಲಿದೆ ಗೆಲುವಿನ ಲಕ್?​

    AFG vs SA Semi Final: ವೇಳಾಪಟ್ಟಿಯಂತೆ ದಕ್ಷಿಣ ಆಫ್ರಿಕಾ ಮತ್ತು ಅಫಘಾನಿಸ್ತಾನ ನಡುವಣ ಪಂದ್ಯ ಜೂನ್​ 26(ಇಂದು) ನಡೆಯುವ ಸ್ಪರ್ಧೆಯಾಗಿದೆ. ವಿಂಡೀಸ್​ನಲ್ಲಿ ಇದು ರಾತ್ರಿ ಪಂದ್ಯವಾದರೆ ಭಾರತೀಯ ಕಾಲಮಾನದಂತೆ ಗುರುವಾರ ಬೆಳಗ್ಗೆ ಪ್ರಸಾರಗೊಳ್ಳಲಿದೆ.

    VISTARANEWS.COM


    on

    AFG vs SA Semi Final
    Koo

    ಟ್ರಿನಿಡಾಡ್: ಟಿ20 ವಿಶ್ಕಪ್​ ಟೂರ್ನಿಯ ಸೆಮಿಫೈನಲ್​ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಭಾರತೀಯ ಕಾಲಮಾನದಂತೆ ನಾಳೆ ಟರೂಬದಲ್ಲಿ ನಡೆಯುವ ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ-ಅಫಘಾನಿಸ್ಥಾನ(AFG vs SA Semi Final) ಮುಖಾಮುಖೀ ಆಗಲಿವೆ. ಇದೇ ದಿನ ರಾತ್ರಿ ಗಯಾನಾದ ಪ್ರೊವಿಡೆನ್ಸ್‌ನಲ್ಲಿ ನಡೆಯುವ ಮೊತ್ತೊಂದು ಸೆಮಿ ಪಂದ್ಯದಲ್ಲಿ ಭಾರತ ಮತ್ತು ಹಾಲಿ ಚಾಂಪಿಯನ್‌ ಇಂಗ್ಲೆಂಡ್​ ತಂಡದ ಸವಾಲನ್ನು ಎದುರಿಸಲಿದೆ.

    ವೇಳಾಪಟ್ಟಿಯಂತೆ ದಕ್ಷಿಣ ಆಫ್ರಿಕಾ ಮತ್ತು ಅಫಘಾನಿಸ್ತಾನ ನಡುವಣ ಪಂದ್ಯ ಜೂನ್​ 26(ಇಂದು) ನಡೆಯುವ ಸ್ಪರ್ಧೆಯಾಗಿದೆ. ವಿಂಡೀಸ್​ನಲ್ಲಿ ಇದು ರಾತ್ರಿ ಪಂದ್ಯವಾದರೆ ಭಾರತೀಯ ಕಾಲಮಾನದಂತೆ ಗುರುವಾರ ಬೆಳಗ್ಗೆ ಪ್ರಸಾರಗೊಳ್ಳಲಿದೆ. ಈ ಪಂದ್ಯಕ್ಕೆ ಮಳೆ ಬಂದರೂ ಕೂಡ ಮೀಸಲು ದಿನವಿದೆ.

    ಹಾಲಿ ಟಿ20 ವಿಶ್ವಕಪ್‌(T20 World Cup 2024) ಕ್ರಿಕೆಟ್‌ ಪಂದ್ಯಾವಳಿಯಲ್ಲಿ ನ್ಯೂಜಿಲ್ಯಾಂಡ್​, ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳಿಗೆ ಸೊಕ್ಕಡಗಿಸಿ ಕನಸಿನ ಓಟ ಬೆಳೆಸಿರುವ ಅಫಘಾನಿಸ್ತಾನ(AFG vs SA) ಸೆಮಿಫೈನಲ್​ನಲ್ಲಿಯೂ ಗೆಲುವು ಸಾಧಿಸುವ ಇರಾದೆಯಲ್ಲಿದೆ. ಅತ್ತ ಕೂಟದ ಅಜೇಯ ತಂಡವಾದ ದಕ್ಷಿಣ ಆಫ್ರಿಕಾದ (South Africa vs Afghanistan Semi Final 1) ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿ ಚಾಂಪಿಯನ್​ ಪಟ್ಟ ಅಲಂಕರಸಿ ಚೋಕರ್ಸ್​ ಹಣೆಪಟ್ಟಿಯನ್ನು ಅಳಿಸಿ ಹಾಕುವ ಪಣತೊಟ್ಟಿದೆ. ಹೀಗಾಗಿ ಈ ಪಂದ್ಯವನ್ನು ಜಿದ್ದಾಜಿದ್ದಿನ ಪಂದ್ಯ ಎಂದಉ ನಿರೀಕ್ಷೆ ಮಾಡಬಹುದು.

    ಇತ್ತಂಡಗಳಿಗೂ ಇದೆ ಅದೃಷ್ಟದ ಬಲ


    ಈ ಬಾರಿಯ ಟೂರ್ನಿಯಲ್ಲಿ ಇತ್ತಂಡಗಳಿಗೂ ಕೂಡ ಅದೃಷ್ಟ ಕೈ ಹಿಡಿದಿದೆ. ಲೀಗ್​ ಹಂತದಲ್ಲಿ ಸೋಲುವ ಪಂದ್ಯಗಳನ್ನು ಗೆದ್ದು ಸೂಪರ್​-8 ಹಂತಕ್ಕೇರಿತ್ತು. ಪ್ರತಿ ಐಸಿಸಿ ಟೂರ್ನಿಯಲ್ಲಿ ಗೆಲ್ಲುವ ಪಂದ್ಯಗಳನ್ನು ಸೋಲುವ ಮತ್ತು ಮಳೆಯಿಂದ ಹೊನ್ನಡೆ ಅನುಭವಿಸಿ ಚೋಕರ್ಸ್​ ಎನಿಸಿಕೊಳ್ಳುತ್ತಿದ್ದ ದಕ್ಷಿಣ ಆಫ್ರಿಕಾದ ನಸೀಬು ಈ ಬಾರಿ ಬದಲಾದಂತಿದೆ. ಲೀಗ್​ ಹಂತದಲ್ಲಿ ಬಾಂಗ್ಲಾ ವಿರುದ್ಧ 1 ರನ್​ ಅಂತರದಿಂದ ಗೆದ್ದದ್ದು, ಸೂಪರ್​-8 ಪಂದ್ಯದಲ್ಲಿ ವಿಂಡೀಸ್​ ಎದುರು ಮಳೆ ಪೀಡಿತ ಪಂದ್ಯವನ್ನು ಜಯಿಸಿದ್ದು ನೋಡುವಾಗ ಹರಿಣ ಪಡೆ ಈ ಬಾರಿ ಚೋಕರ್ಸ್​ ಹಣೆಪಟ್ಟಿಯನ್ನು ಕಳಚಿಕೊಳ್ಳುವ ಸಾಧ್ಯತೆಯೊಂದು ಕಂಡಿಬಂದಿದೆ.

    ಇದನ್ನೂ ಓದಿ IND vs ENG Semi Final: ಆಂಗ್ಲರನ್ನು ಸದೆಬಡಿದು ಫೈನಲ್​ ಪ್ರವೇಶಿಸಲಿ ಭಾರತ

    ಸಿಡಿಯಬೇಕಿದೆ ಮಾರ್ಕ್ರಮ್​, ಕ್ಲಾಸೆನ್​, ಮಿಲ್ಲರ್​

    ದಕ್ಷಿಣ ಆಫ್ರಿಕಾ ಪರ ಡಿ ಕಾಕ್​ ಹೊರತುಪಡಿಸಿ ಉಳಿದ ಯಾವುದೇ ಬ್ಯಾಟರ್​ ಇದುವರೆಗೂ ನಿರೀಕ್ಷತ ಬ್ಯಾಟಿಂಗ್​ ಪ್ರದರ್ಶನ ತೋರದಿದ್ದರು. ಕೂಡ ಬೌಲಿಂಗ್​ ಮತ್ತು ಫೀಲ್ಡಿಂಗ್​ನಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರುವ ಮೂಲಕ ಪಂದ್ಯವನ್ನು ಗೆದ್ದಿದ್ದಾರೆ. ಆದರೆ, ಸೆಮಿಫೈನಲ್​ನಲ್ಲಿಯೂ ಇದೇ ರೀತಿಯಲ್ಲಿ ಪಂದ್ಯವನ್ನು ಗೆಲ್ಲಬಹುದೆಂದು ಯೋಚಿಸಿ ಕುಳಿತರೆ ಸೋಲು ಎದುರಾಗುವುದು ಖಚಿತ ಎನ್ನಲಡ್ಡಿಯಿಲ್ಲ. ಏಕೆಂದರೆ, ಅಫಘಾನಿಸ್ತಾನ 100 ರನ್​ ಬಾರಿಸಿದರೂ ಕೂಡ ಇದನ್ನು ಹಿಡಿದು ನಿಲ್ಲಿಸುವ ತಾಕತ್ತು ಈ ತಂಡದ ಬೌಲರ್​ಗಳಿಗಿದೆ. ಸ್ಪಿನ್​, ಸ್ಪೀಡ್​ ಎರಡೂ ವಿಭಾಗದಲ್ಲಿಯೂ ವೈವಿಧ್ಯಮಯವಾಗಿದೆ. ಬ್ಯಾಟಿಂಗ್​ನಲ್ಲಿ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಪ್ರತಿ ಪಂದ್ಯದಲ್ಲಿಯೂ ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಮಧ್ಯಮ ವೇಗಿ ನವೀನ್​ ಉಲ್​ ಹಕ್​ ಕೂಡ ಘಾತಕ ಬೌಲಿಂಗ್​ ಪ್ರದರ್ಶನ ತೋರುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.

    ಬಲಾಬಲ

    ಅಫಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇದುವರೆಗೂ ಟಿ20 ಕ್ರಿಕೆಟ್​ನಲ್ಲಿ 2 ಬಾರಿ ಮುಖಾಮುಖಿಯಾಗಿವೆ. ಈ ಎರಡೂ ಪಂದ್ಯಗಳನ್ನು ಕೂಡ ದಕ್ಷಿಣ ಆಫ್ರಿಕಾವೇ ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಹರಿಣ ಪಡೆಯೇ ಬಲಿಷ್ಠವಾಗಿ ಗೋಚರಿಸಿದೆ. ಆದರೂ ಕೂಡ ಅಪಾಯಕಾರಿ ಆಫ್ಘನ್​ ಸವಾಲನ್ನು ಹಗುರವಾಗಿ ಕಾಣಬಾರದು. ಏಕೆಂದರೆ ಹೊಡಿ ಬಡಿ ಆಟವಾದ ಟಿ20 ಕ್ರಿಕೆಟ್​ನಲ್ಲಿ ಕೊನೆಯ ಎಸೆತದಲ್ಲಿಯೂ ಪಂದ್ಯದ ಫಲಿತಾಂಶ ಬದಲಾದ ನಿದರ್ಶನವಿದೆ.

    Continue Reading

    ಕ್ರೀಡೆ

    IND vs ENG Semi Final: ಆಂಗ್ಲರನ್ನು ಸದೆಬಡಿದು ಫೈನಲ್​ ಪ್ರವೇಶಿಸಲಿ ಭಾರತ

    IND vs ENG Semi Final: ಇಂಗ್ಲೆಂಡ್​ ನಾಯಕ ಜಾಸ್​ ಬಟ್ಲರ್‌, ಫಿಲ್​ ಸಾಲ್ಟ್​, ಜಾನಿ ಬೇರ್‌ಸ್ಟೊ, ಹ್ಯಾರಿ ಬ್ರೂಕ್​, ಸ್ಯಾಮ್​ ಕರನ್​, ಮೊಯಿನ್​ ಅಲಿ ಅವರನ್ನೊಳಗೊಂಡ ಬ್ಯಾಟಿಂಗ್‌ ಸರದಿ ಟಿ20ಗೆ ಹೇಳಿ ಮಾಡಿಸಿದಂತಿದೆ. ಇವರನ್ನು ನಿಯಂತ್ರಿಸುವುದರಲ್ಲಿ ಭಾರತದ ಯಶಸ್ಸು ಅಡಗಿದೆ.

    VISTARANEWS.COM


    on

    Koo

    ಟರೂಬ/ಪ್ರೊವಿಡೆನ್ಸ್‌: ಚುಟುಕು ಕ್ರಿಕೆಟ್‌ನಲ್ಲಿ ತನ್ನದೇ ಹೆಗ್ಗುರುತು ಸ್ಥಾಪಿಸಿರುವ ಟೀಮ್‌ ಇಂಡಿಯಾ ನಾಳೆ (ಗುರುವಾರ) ನಡೆಯುವ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಯ ಸೆಮಿಫೈನಲ್​(IND vs ENG Semi Final) ಪಂದ್ಯದಲ್ಲಿ ಇಂಗ್ಲೆಂಡ್(IND vs ENG)​ ವಿರುದ್ಧ ಅದೃಷ್ಠ ಪರೀಕ್ಷೆಗೆ ಇಳಿಯಲಿದೆ. ಸೀಮಿತ ಓವರ್‌ಗಳ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ಕಳೆದ ಕೆಲವು ವರ್ಷಗಳಿಂದ ಸ್ಥಿರತೆಯನ್ನು ಕಾಪಾಡಿಕೊಂಡು ಬಂದಿದೆ. ಅತ್ತ ಹಾಲಿ ಚಾಂಪಿಯನ್​ ಆಗಿರುವ ಇಂಗ್ಲೆಂಡ್​ ಸಹ ಇತ್ತೀಚೆಗೆ ಟಿ20ಗಳಲ್ಲಿ ಬಲಾಡ್ಯ ತಂಡವಾಗಿ ಹೊರಹೊಮ್ಮಿದೆ. ಹೀಗಾಗಿ ಇತ್ತಂಡಗಳ ನಡುವಿನ ಕ್ರಿಕೆಟ್‌ ಸಮರ ತೀವ್ರ ಕುತೂಹಲ, ರೋಮಾಂಚನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.

    ಭಾರತಕ್ಕೆ ಕೊಹ್ಲಿಯದ್ದೇ ಚಿಂತೆ


    ಪ್ರತಿ ಐಸಿಸಿ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿಯ ಬ್ಯಾಟ್​ ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಸದ್ದು ಮಾಡುತ್ತಿಲ್ಲ. ಇದು ಭಾರತ ತಂಡಕ್ಕೆ ದೊಡ್ಡ ಚಿಂತೆ ಉಂಟು ಮಾಡಿದೆ. ಆಡಿದ 7 ಪಂದ್ಯಗಳಲ್ಲಿ 2 ಶೂನ್ಯ ಸುತ್ತಿದ್ದಾರೆ. ಒಂದು ಪಂದ್ಯದಲ್ಲಿ ಮಾತ್ರ ಎರಡಂಕಿ ದಾಟಿದ್ದಾರೆ. ಹೀಗಾಗಿ ಕೊಹ್ಲಿ ಇಂಗ್ಲೆಂಡ್‌ ವಿರುದ್ಧ ಸಿಡಿದು ನಿಲ್ಲಬೇಕಾದುದ ಅನಿವಾರ್ಯತೆ ಇದೆ. ಕೊಹ್ಲಿ ಜತೆಗೆ ಶಿವಂ ದುಬೆ ಕೂಡ ಸಿಡಿದು ನಿಲ್ಲಬೇಕಿದೆ. ಐಪಿಎಲ್​ನಲ್ಲಿ ತೋರಿದ ಬ್ಯಾಟಿಂಗ್​ ಆರ್ಭಟವನ್ನು ದುಬೆ ಈ ಟೂರ್ನಿಯಲ್ಲಿ ಇದುವರೆಗೆ ತೋರಿಸಿಲ್ಲ. ಎಲ್ಲ ಪಂದ್ಯಗಳಲ್ಲಿಯೂ ಆಮೆ ಗತಿಯ ಬ್ಯಾಟಿಂಗ್​ ನಡೆಸಿ ತಂಡದ ಬೃಹತ್​ ಮೊತ್ತಕ್ಕೆ ಹಿನ್ನಡೆ ಉಂಟುಮಾಡುತ್ತಿದ್ದಾರೆ.

    ಉಪನಾಯಕ ಹಾರ್ದಿಕ್​ ಪಾಂಡ್ಯ ಅವರು ಈ ಬಾರಿಯ ಐಪಿಎಲ್​ನಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಘೋರ ವೈಫಲ್ಯ ಕಂಡಿದ್ದರು. ಅವರನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಿದಾಗ ಭಾರೀ ಟೀಕೆಗಳು ವ್ಯಕ್ತವಾಗಿತ್ತು. ಆದರೆ, ಪಾಂಡ್ಯ ಪ್ರತಿ ಪಂದ್ಯದಲ್ಲಿಯೂ ತಂಡಕ್ಕೆ ನೆರವಾಗುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಂದು ಪಾಂಡ್ಯ ಬೇಡ ಎಂದವರು ಇಂದು ಪಾಂಡ್ಯ ಇಲ್ಲದೇ ಇದ್ದರೆ ಗೆಲುವು ಕಷ್ಟ ಎನ್ನುತ್ತಿದ್ದಾರೆ. ಕಳೆದ ಆಸೀಸ್​ ವಿರುದ್ಧ ಪ್ರಚಂಡ ಬ್ಯಾಟಿಂಗ್​ ನಡೆಸಿದ ನಾಯಕ ರೋಹಿತ್​ ಶರ್ಮ ಅವರ ಬ್ಯಾಟಿಂಗ್​ ಮೇಲೆ ಈ ಪಂದ್ಯದಲ್ಲಿಯೂ ತಂಡ ನಂಬಿಕೆ ಇರಿಸಿದೆ.

    ಇದನ್ನೂ ಓದಿ IND vs ENG: ಇಂಗ್ಲೆಂಡ್‌ ಎದುರು ಭಾರತಕ್ಕೆ ಸೇಡಿನ ಪಂದ್ಯ; ನಾಳೆ ದ್ವಿತೀಯ ಸೆಮಿಫೈನಲ್​

    ಇಂಗ್ಲೆಂಡ್​ ಕೂಡ ಬಲಿಷ್ಠ

    ಇಂಗ್ಲೆಂಡ್​ ನಾಯಕ ಜಾಸ್​ ಬಟ್ಲರ್‌, ಫಿಲ್​ ಸಾಲ್ಟ್​, ಜಾನಿ ಬೇರ್‌ಸ್ಟೊ, ​ಲಿವಿಂಗ್​​ಸ್ಟೋನ್​, ಹ್ಯಾರಿ ಬ್ರೂಕ್​, ಸ್ಯಾಮ್​ ಕರನ್​, ಮೊಯಿನ್​ ಅಲಿ ಅವರನ್ನೊಳಗೊಂಡ ಬ್ಯಾಟಿಂಗ್‌ ಸರದಿ ಟಿ20ಗೆ ಹೇಳಿ ಮಾಡಿಸಿದಂತಿದೆ. ಇವರನ್ನು ನಿಯಂತ್ರಿಸುವುದರಲ್ಲಿ ಭಾರತದ ಯಶಸ್ಸು ಅಡಗಿದೆ. ಕಳೆದ ಕೆಲವು ವರ್ಷಗಳಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದ ಘಾತಕ ವೇಗಿ ಜೋಫ್ರಾ ಆರ್ಚರ್​ ಕೂಡ ತಂಡಕ್ಕೆ ಮರಳಿದ್ದು ಇಂಗ್ಲೆಂಡ್​ ಬೌಲಿಂಗ್​ ಬಲವನ್ನು ಹೆಚ್ಚಿಸಿದೆ.

    ಸೇಡಿನ ಪಂದ್ಯ

    2022ರಲ್ಲಿ ಅಡಿಲೇಡ್​ನಲ್ಲಿ ನಡೆದ ಟಿ20 ವಿಶ್ವಕಪ್​ ಸೆಮೀಸ್​ನಲ್ಲಿ ಇಂಗ್ಲೆಂಡ್​ ತಂಡ ಭಾರತಕ್ಕೆ 10 ವಿಕೆಟ್​ಗಳ ಹೀನಾಯ ಸೋಲುಣಿಸಿ ಫೈನಲ್​ ಪ್ರವೇಶಿಸಿತ್ತು. ಇದೀಗ ಅಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಅಪೂರ್ವ ಅವಕಾಶವೊಂದು ಭಾರತಕ್ಕೆ ಎದುರಾಗಿದೆ. ಇದರಲ್ಲಿ ರೋಹಿತ್​ ಬಳಗ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದೊಂದು ಕುತೂಹಲ.

    Continue Reading
    Advertisement
    Narendra Modi
    ದೇಶ22 mins ago

    Narendra Modi: ಸಂಸತ್ತಿನಲ್ಲಿ ಇಬ್ಬರು ‘ಪುಟಾಣಿ’ ಅತಿಥಿಗಳನ್ನು ಸ್ವಾಗತಿಸಿದ ಮೋದಿ; ಯಾರವರು? Video ನೋಡಿ

    Weight Loss Tips
    ಆರೋಗ್ಯ28 mins ago

    Weight Loss Tips: ನಲವತ್ತರ ನಂತರ ತೂಕ ಇಳಿಸುವುದು ಹೇಗೆ?

    Nadaprabhu Kempegowda
    ಬೆಂಗಳೂರು34 mins ago

    Essay on Kempegowda in Kannada: ನಾಡಪ್ರಭು ಕೆಂಪೇಗೌಡರು ಆಧುನಿಕ ಬೆಂಗಳೂರಿನ ಮೂಲ ಶಿಲ್ಪಿ!

    Nitin Gadkari
    ದೇಶ1 hour ago

    Nitin Gadkari: ಜಿಪಿಎಸ್‌ ತಂತ್ರಜ್ಞಾನದಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಬಂಪರ್;‌ 10 ಸಾವಿರ ಕೋಟಿ ರೂ. ಆದಾಯ!

    Paris Fashion Week
    ಫ್ಯಾಷನ್1 hour ago

    Paris Fashion Week: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್ 2024ರ ಹೈಲೈಟ್ಸ್

    Anant Ambani
    ದೇಶ1 hour ago

    Anant Ambani Video: ಮಹಾರಾಷ್ಟ್ರ ಸಿಎಂ ಹೆಗಲ ಮೇಲೆ ಕೈ ಹಾಕಿದ ಅಂಬಾನಿ ಮಗ! ನೀವೇನಂತೀರಿ?

    Viral Video
    Latest2 hours ago

    Viral Video: ಜಿಮ್‌ಗೆ ಹೋಗುವವರೇ ಹುಷಾರ್‌! ಈ ವಿಡಿಯೊ ನೋಡಿ!

    Acharya Pramod Krishnam
    ದೇಶ2 hours ago

    ಕಾಂಗ್ರೆಸ್‌ನಂತೆ 15 ತಿಂಗಳಲ್ಲಿ ಪ್ರತಿಪಕ್ಷಗಳೂ ರಾಹುಲ್‌ ಗಾಂಧಿಯಿಂದ ನಿರ್ನಾಮ; ಆಚಾರ್ಯ ಪ್ರಮೋದ್‌ ಸ್ಫೋಟಕ ಹೇಳಿಕೆ!

    Viral Video
    Latest2 hours ago

    Viral Video: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್‌ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್‌!

    Rohit Sharma
    ಕ್ರೀಡೆ2 hours ago

    Rohit Sharma: ವಿಶ್ವ ದಾಖಲೆ ಮೇಲೆ ಕಣ್ಣಿಟ್ಟ ಹಿಟ್​ಮ್ಯಾನ್​ ರೋಹಿತ್​; ಲಂಕಾ ಆಟಗಾರನಿಗೆ ನಡುಕ

    Sharmitha Gowda in bikini
    ಕಿರುತೆರೆ9 months ago

    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

    Kannada Serials
    ಕಿರುತೆರೆ9 months ago

    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

    Bigg Boss- Saregamapa 20 average TRP
    ಕಿರುತೆರೆ8 months ago

    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

    galipata neetu
    ಕಿರುತೆರೆ7 months ago

    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

    Kannada Serials
    ಕಿರುತೆರೆ9 months ago

    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

    Kannada Serials
    ಕಿರುತೆರೆ9 months ago

    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

    Bigg Boss' dominates TRP; Sita Rama fell to the sixth position
    ಕಿರುತೆರೆ8 months ago

    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

    geetha serial Dhanush gowda engagement
    ಕಿರುತೆರೆ6 months ago

    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

    varun
    ಕಿರುತೆರೆ7 months ago

    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

    Kannada Serials
    ಕಿರುತೆರೆ10 months ago

    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

    karnataka Weather Forecast
    ಮಳೆ2 days ago

    Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

    karnataka weather Forecast
    ಮಳೆ5 days ago

    Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

    International Yoga Day 2024
    ಕರ್ನಾಟಕ5 days ago

    International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

    Karnataka Weather Forecast
    ಮಳೆ6 days ago

    Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

    Actor Darshan
    ಮೈಸೂರು1 week ago

    Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

    Bakrid 2024
    ಬೆಂಗಳೂರು1 week ago

    Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

    Renukaswamy murder case The location of the accused is complete
    ಸಿನಿಮಾ1 week ago

    Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

    Renuka swamy murder
    ಚಿತ್ರದುರ್ಗ1 week ago

    Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

    Vijayanagara News
    ವಿಜಯನಗರ1 week ago

    Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

    Actor Darshan
    ಯಾದಗಿರಿ2 weeks ago

    Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

    ಟ್ರೆಂಡಿಂಗ್‌