PAK vs SL: ಪರದಾಡಿ ಗೆದ್ದ ಪಾಕಿಸ್ತಾನಕ್ಕೆ ಶ್ರೀಲಂಕಾ ಸವಾಲು - Vistara News

ಕ್ರಿಕೆಟ್

PAK vs SL: ಪರದಾಡಿ ಗೆದ್ದ ಪಾಕಿಸ್ತಾನಕ್ಕೆ ಶ್ರೀಲಂಕಾ ಸವಾಲು

ಏಕದಿನ ಶ್ರೇಯಾಂಕದ ಅಗ್ರ ಮೂರು ಮಂದಿ ಪಾಕ್​ ತಂಡದಲ್ಲಿದ್ದರೂ ಅವರ ಪ್ರದರ್ಶನ ಮಾತ್ರ ಏನು ಸಾಲದು.

VISTARANEWS.COM


on

pakistan vs sri lanka
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್​: ನೆದರ್ಲೆಂಡ್​​ ವಿರುದ್ಧದ ಪಂದ್ಯದಲ್ಲಿ ಪರದಾಡಿ ಗೆದ್ದ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ದಿಟ್ಟ ಹೋರಾಟ ನಡೆಸಿ ಸೋಲು ಕಂಡ ಶ್ರೀಲಂಕಾ(Pakistan vs Sri Lanka) ಮಂಗಳವಾರದ ದ್ವಿತೀಯ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಪಂದ್ಯಕ್ಕೆ ಹೈದರಾಬಾದ್​ನ ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂ ಅಣಿಯಾಗಿದೆ.

ಏಷ್ಯಾ ಕಪ್​ನಲ್ಲಿ ಭಾರತ ವಿರುದ್ಧ 50ಕ್ಕೆ ಕುಸಿದಿದ್ದ ಲಂಕಾವನ್ನು ವಿಶ್ವಕಪ್​ನಲ್ಲಿ ಆಟಕ್ಕುಂಟು ಲೆಕ್ಕಕಿಲ್ಲ ಎಂದು ಪರಿಗಣಿಸಲಾಗಿತ್ತು. ಆದರೆ ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ತಂಡದೆದುರು 400 ರನ್​ಗಳ ಗುರಿ ಬೆನ್ನಟ್ಟಿ ಹೋದ ಲಂಕಾ ಆಟಗಾರರು 326 ರನ್​ ತನಕ ಬಂದಿದ್ದು ಅಸಾಮಾನ್ಯ ಪ್ರದರ್ಶನವೇ ಸರಿ. ಲಂಕಾ ಸೋಲು ಕಂಡರೂ ತಂಡದ ಪ್ರದರ್ಶನ ಕಂಡು ಉಳಿದ ಎಲ್ಲ ತಂಡಗಳು ಬೆಚ್ಚಿಬಿದ್ದಿದ್ದವು. ಲಂಕಾ ಸವಾಲನ್ನು ಹಗುರವಾಗಿ ಕಂಡರೆ ಸೋಲು ಖಚಿತ ಎನ್ನುವ ದೃಢ ನಿರ್ಧಾರವೊಂದನ್ನು ಎಲ್ಲ ತಂಡಗಳು ಗಮನದಲ್ಲಿಟ್ಟುಕೊಂಡಿದೆ.

ಪಾಕ್​ ಅಸ್ಥಿರ ಪ್ರದರ್ಶನ

ಏಕದಿನ ಶ್ರೇಯಾಂಕದ ಅಗ್ರ ಮೂರು ಮಂದಿ ಪಾಕ್​ ತಂಡದಲ್ಲಿದ್ದರೂ ಅವರ ಪ್ರದರ್ಶನ ಮಾತ್ರ ಏನು ಸಾಲದು. ಇದಕ್ಕೆ ನೆದರ್ಲೆಂಡ್ ಎದುರಿನ ಪಂದ್ಯವೇ ಸಾಕ್ಷಿ. ಫಕಾರ್​ ಜಮಾನ್​, ಬಾಬರ್​ ಅಜಂ, ಇಮಾಮ್​ ಉಲ್​ ಹಕ್​ ಅಗ್ಗಕ್ಕೆ ಔಟಾಗಿ ಪೆವಿಲಿಯನ್​ ಪರೇಡ್​ ನಡೆಸಿದ್ದರು. ರಿಜ್ವಾನ್​ ಮತ್ತು ಸೌದ್ ಶಕೀಲ್ ಅರ್ಧಶತಕ ಬಾರಿಸದೇ ಹೋಗಿದ್ದರೆ ಪಾಕ್​ 150ರ ಗಡಿ ದಾಟುವುದು ಅಸಾಧ್ಯ ಎನ್ನುವಂತಿತ್ತು. ಹೀಗಾಗಿ ಪಾಕ್​ ಈ ಪಂದ್ಯದಲ್ಲಿ ಬ್ಯಾಟಿಂಗ್​ ಸಮಸ್ಯೆಗೆ ಮದ್ದು ಮಾಡದೇ ಹೋದರೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ.

ಬೌಲಿಂಗ್​ ಓಕೆ

ಘಾತಕ ವೇಗಿ ಶಾಹೀನ್​ ಅಫ್ರಿದಿ ಮಿಂಚದಿದ್ದರೂ ಉಳಿದ ಬೌಲರ್​ಗಳಾದ ಹ್ಯಾರಿಸ್ ರಾವುಫ್​, ಹಸನ್​ ಅಲಿ, ಮೊಹಮ್ಮದ್​ ನವಾಜ್​ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿರುವ ಕಾರಣ ಲಂಕಾಗೆ ಹೋಲಿಸಿದರೆ ಪಾಕ್​ ತಂಡದ ಬೌಲಿಂಗ್​ ಓಕೆ ಎನ್ನುವ ಮಟ್ಟದಲ್ಲಿದ್ದೆ.

ಲಂಕಾ ಬೌಲಿಂಗ್​ ಸುಧಾರಣೆ ಅಗತ್ಯ

ಲಂಕಾ ತಂಡದ ದೊಡ್ಡ ಸಮಸ್ಯೆ ಎಂದರೆ ಅದು ಬೌಲಿಂಗ್​. ಕೊನೆಯದಾಗಿ ಮಾಲಿಂಗ, ಕುಲಶೇಖರ ಜಾಯಮಾನ ಹೋದ ಬಳಿಕ ಲಂಕಾ ತಂಡಕ್ಕೆ ಹೇಳಿಕೊಳ್ಳುವಂತಹ ಬೌಲರ್ ಇನ್ನೂ ಸಿಕ್ಕಿಲ್ಲ. ಎಲ್ಲ ಐಪಿಎಲ್​ ಆಡಿ ಬಂದ ಯುವ ಆಟಗಾರರೇ ನೆಚ್ಚಿಕೊಂಡಿದ್ದಾರೆ. ಆದರೆ ಬ್ಯಾಟಿಂಗ್​ನಲ್ಲಿ ಎಲ್ಲರು ಸಮರ್ಥರಿದ್ದಾರೆ. ಅದು ಕೂಡ ಹೊಡಿ ಬಡಿ ಆಟಕ್ಕೆ. ನಿಂತು ಆಡುವುದು ತಿಳಿದೇ ಇಲ್ಲ. ಕುಸಿದರೆ 50ರ ಒಳಗೆ ಗಂಟು ಮೂಟೆ ಕಟ್ಟುತ್ತದೆ. ಸಿಡಿದರೆ ಮುನ್ನೂರರ ಗಡಿ ದಾಡುತ್ತದೆ. ಒಟ್ಟಾರೆ ಬ್ಯಾಟಿಂಗ್​ ತಂಡದ ಬಲವಾಗಿದೆ.​

ಇದನ್ನೂ ಓದಿ ENG vs BAN: ಗೆಲುವಿನ ಹಳಿ ಏರಿತೇ ಹಾಲಿ ಚಾಂಪಿಯನ್​ ಇಂಗ್ಲೆಂಡ್​?; ಬಾಂಗ್ಲಾ ಎದುರಾಳಿ

ಪಿಚ್​ ರಿಪೋರ್ಟ್​

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪಿಚ್ ಸಾಂಪ್ರದಾಯಿಕವಾಗಿ ಬ್ಯಾಟಿಂಗ್ ಗೆ ಉತ್ತಮವಾಗಿದೆ. ಈ ಮೈದಾನದಲ್ಲಿ 300 ಕ್ಕೂ ಹೆಚ್ಚು ಸ್ಕೋರ್​ಗಳು ದಾಖಲಾಗಿವೆ. ಆದರೆ ಚೇಸಿಂಗ್​ ಇಲ್ಲಿ ಬಲು ಸುಲಭ. ಹೀಗಾಗಿ ಟಾಸ್​ ಗೆದ್ದ ತಂಡ ಬೌಲಿಂಗ್​ ಆಯ್ಕೆ ಮಾಡಿಕೊಳ್ಳಬಹುದು.

ಸಂಭಾವ್ಯ ತಂಡ

ಪಾಕಿಸ್ತಾನ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ಸಿ), ಮೊಹಮ್ಮದ್ ರಿಜ್ವಾನ್ (ವಿಕೆ), ಸೌದ್ ಶಕೀಲ್, ಇಫ್ತಿಖರ್ ಅಹ್ಮದ್, ಶದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರವೂಫ್.

ಶ್ರೀಲಂಕಾ: ಕುಸಲ್ ಪೆರೇರ, ಪಾತುಂ ನಿಸ್ಸಾಂಕ, ಕುಸಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಗೆ, ಮಥೀಶ ಪತಿರಣ, ದಿಲ್ಶನ್ ಮಧುಶಂಕ, ಕಸುನ್ ರಜಿತ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Dinesh Karthik : ಆರ್​​ಸಿಬಿ ಬ್ಯಾಟಿಂಗ್ ಕೋಚ್​, ಮಾರ್ಗದರ್ಶಕರಾಗಿ ದಿನೇಶ್​ ಕಾರ್ತಿಕ್ ನೇಮಕ

Dinesh Karthik : ನಮ್ಮ ಕೀಪರ್ ದಿನೇಶ್ ಕಾರ್ತಿಕ್ ಅವರನ್ನು ಹೊಸ ಅವತಾರದಲ್ಲಿ ಆರ್​​​ಸಿಬಿಗೆ ಸ್ವಾಗತಿಸುತ್ತೇವೆ. ಆರ್​ಸಿಬಿ ಪುರುಷರ ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ಡಿಕೆ ಕಾರ್ಯನಿರ್ವಹಿಸಲಿದ್ದಾರೆ. ನೀವು ಕಾರ್ತಿಕ್ ಅವರನ್ನು ಕ್ರಿಕೆಟ್​ನಿಂದ ಹೊರತೆಗೆಯಬಹುದು ಆದರೆ ಕ್ರಿಕೆಟ್ ಅನ್ನು ಅವರಿಂದ ಹೊರತೆಗೆಯಲು ಸಾಧ್ಯವಿಲ್ಲ! 🙌 12 ಮ್ಯಾನ್​ ಆರ್ಮಿ. ಅವರಿಗಾಗಿ ಪ್ರೀತಿಯನ್ನು ಸ್ಪುರಿಸಿ ಎಂದು ಬರೆದುಕೊಂಡಿದೆ.

VISTARANEWS.COM


on

Dinesh Karthik
Koo

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ (Dinesh Karthik) ಅವರನ್ನು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನಲ್ಲಿ (IPL 2025) ಬ್ಯಾಟಿಂಗ್ ಕೋಚ್ ಮತ್ತು ತಂಡದ ಮಾರ್ಗದರ್ಶಕರಾಗಿ ನೇಮಕ ಮಾಡಿದೆ. ಐಪಿಎಲ್ ಫ್ರಾಂಚೈಸಿ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ ನ ತನ್ನ ಅಧಿಕೃತ ಹ್ಯಾಂಡಲ್ ಮೂಲಕ ಈ ಘೋಷಣೆಯನ್ನು ಪ್ರಕಟಿಸಿದೆ.

ನಮ್ಮ ಕೀಪರ್ ದಿನೇಶ್ ಕಾರ್ತಿಕ್ ಅವರನ್ನು ಹೊಸ ಅವತಾರದಲ್ಲಿ ಆರ್​​​ಸಿಬಿಗೆ ಸ್ವಾಗತಿಸುತ್ತೇವೆ. ಆರ್​ಸಿಬಿ ಪುರುಷರ ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ಡಿಕೆ ಕಾರ್ಯನಿರ್ವಹಿಸಲಿದ್ದಾರೆ. ನೀವು ಕಾರ್ತಿಕ್ ಅವರನ್ನು ಕ್ರಿಕೆಟ್​ನಿಂದ ಹೊರತೆಗೆಯಬಹುದು ಆದರೆ ಕ್ರಿಕೆಟ್ ಅನ್ನು ಅವರಿಂದ ಹೊರತೆಗೆಯಲು ಸಾಧ್ಯವಿಲ್ಲ! 12 ಮ್ಯಾನ್​ ಆರ್ಮಿ. ಅವರಿಗಾಗಿ ಪ್ರೀತಿಯನ್ನು ಸ್ಪುರಿಸಿ ಎಂದು ಬರೆದುಕೊಂಡಿದೆ.

ದಿನೇಶ್ ಕಾರ್ತಿಕ್ ಬ್ಯಾಟಿಂಗ್ ವೈಭವ

ಕೆಳ ಮಧ್ಯಮ ಕ್ರಮಾಂಕದ ಬ್ಯಾಟರ್​ ಆಗಿರುವ ಕಾರ್ತಿಕ್, ಮೈದಾನದ ಎಲ್ಲೆಡೆ ಚೆಂಡು ಕಳುಹಿಸಿ ಸ್ಕೋರ್ ಮಾಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದ ನಂತರ, ಕೀಪರ್- ಬ್ಯಾಟರ್​ ಐಪಿಎಲ್ 2022 ಕ್ಕೆ ಮುಂಚಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡರು. ಐಪಿಎಲ್ ವೃತ್ತಿಜೀವನದಲ್ಲಿ ಆರು ತಂಡಗಳನ್ನು ಪ್ರತಿನಿಧಿಸಿರುವ ಕಾರ್ತಿಕ್, ಆರ್ಸಿಬಿ ಪರ 53 ಇನಿಂಗ್ಸ್​ಗಳಲ್ಲಿ 162.96 ಸ್ಟ್ರೈಕ್​ ರೇಟ್​​ನಲ್ಲಿ ಮೂರು ಅರ್ಧಶತಕಗಳು ಸೇರಿದಂತೆ 937 ರನ್ ಗಳಿಸಿದ್ದಾರೆ.

ಅವರು ಇತ್ತೀಚೆಗೆ ಐಪಿಎಲ್ 2024 ರಲ್ಲಿ ಅದ್ಭುತ ಯಶಸ್ಸನ್ನು ಅನುಭವಿಸಿದ್ದಾರೆ. 36.22 ಸರಾಸರಿ ಮತ್ತು 187.36 ಸ್ಟ್ರೈಕ್ ರೇಟ್​​ನಲ್ಲಿ 326 ರನ್ ಗಳಿಸಿದ್ದಾರೆ. ಆದಾಗ್ಯೂ, ನಾವು ಮೆಗಾ ಹರಾಜು ಬರುತ್ತಿರುವುದನ್ನು ಪರಿಗಣಿಸಿ, ಕಾರ್ತಿಕ್ ಐಪಿಎಲ್​​ನಿಂದ ಹೊರಕ್ಕೆ ನಡೆದರು.

ಇದನ್ನೂ ಓದಿ: Jasprit Bumrah : ಜಸ್​ಪ್ರಿತ್ ಬುಮ್ರಾ ವೈಟ್ ಬಾಲ್ ಕ್ರಿಕೆಟ್​​ನ ಅತ್ಯುತ್ತಮ ಬೌಲರ್​ ಎಂದು ಹೊಗಳಿದ ಮೈಕಲ್ ವಾನ್

ಕಾರ್ತಿಕ್ ಮೂರು ಸ್ವರೂಪಗಳಲ್ಲಿ 180 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ ಅವರು ಏಕೈಕ ಟೆಸ್ಟ್ ಶತಕ ಮತ್ತು 17 ಅರ್ಧಶತಕಗಳೊಂದಿಗೆ 3463 ರನ್ ಗಳಿಸಿದ್ದಾರೆ. ಕಾರ್ತಿಕ್ 172 ಔಟ್​ಗಳನ್ನು ಸಹ ಮಾಡಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಸ್ಪಂಪ್​​ಗಳ ಹಿಂದೆ ಹಾಗೂ ಕೆಲವು ಔಟ್​ಫೀಲ್ಡ್​ ಕ್ಯಾಚ್​ಗಳು. 2022ರ ಟಿ20 ವಿಶ್ವಕಪ್​​ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಬಾರಿ ಆಡಿದ್ದರು.

20007 ವಿಶ್ವ ಕಪ್ ವಿಜೇತ

2007 ರ ಟಿ 20 ವಿಶ್ವಕಪ್ ವಿಜೇತ ತಾರೆ ಕಾರ್ತಿಕ್​ ಐಪಿಎಲ್​ನಲ್ಲಿ ಭರ್ಜರಿ ಅನುಭವ ಹೊಂದಿದ್ದಾರೆ. 257 ಪಂದ್ಯಗಳನ್ನು ಆಡಿದ ಅವರು 26.32 ಸರಾಸರಿಯಲ್ಲಿ 4,842 ರನ್ ಗಳಿಸಿದ್ದಾರೆ. ಕಾರ್ತಿಕ್ ತಮ್ಮ ಐಪಿಎಲ್ ಪ್ರಯಾಣವನ್ನು ಡೆಲ್ಲಿ ಡೇರ್ ಡೆವಿಲ್ಸ್ (ಈಗ ಕ್ಯಾಪಿಟಲ್ಸ್) ನೊಂದಿಗೆ ಪ್ರಾರಂಭಿಸಿದ್ದರು. ಆರ್ ಸಿಬಿ ಹೊರತುಪಡಿಸಿ ಕೋಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಅನ್ನು ಪ್ರತಿನಿಧಿಸಿದರು.

ಬ್ಯಾಟಿಂಗ್ ಕೋಚ್ ಮತ್ತು ಬ್ಯಾಟಿಂಗ್ ಮೆಂಟರ್ ಆಗಿ ನೇಮಕಗೊಂಡ ಬಗ್ಗೆ ಮಾತನಾಡಿದ ದಿನೇಶ್ ಕಾರ್ತಿಕ್, ವೃತ್ತಿಪರ ಮಟ್ಟದಲ್ಲಿ ಕೋಚಿಂಗ್ ನನಗೆ ನಂಬಲಾಗದಷ್ಟು ರೋಮಾಂಚನಕಾರಿಯಾಗಿದೆ. ಇದು ನನ್ನ ಜೀವನದ ಹೊಸ ಅಧ್ಯಾಯ. ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ. ಒಬ್ಬ ಆಟಗಾರನಾಗಿ ನನ್ನ ಅನುಭವಗಳನ್ನು ತಂಡದ ಅಭಿವೃದ್ಧಿಗೆ ಕೊಡುಯಾಗಿ ನೀಡುತ್ತೇನೆ. ಹೆಚ್ಚುವರಿ ಮೌಲ್ಯವನ್ನು ತರುತ್ತೇನೆ ಎಮದು ಹೇಳಿದ್ದಾರೆ.

ಕ್ರಿಕೆಟ್ ಯಶಸ್ಸು ಕೇವಲ ತಾಂತ್ರಿಕ ಪ್ರಾವೀಣ್ಯತೆಯ ಮೇಲೆ ಮಾತ್ರವಲ್ಲ, ಬುದ್ಧಿವಂತಿಕೆ ಮತ್ತು ಸಂಯಮದ ಮೇಲೂ ಅವಲಂಬಿತವಾಗಿದೆ ಎಂದು ನಾನು ನಂಬುತ್ತೇನೆ. ನಮ್ಮ ಬ್ಯಾಟಿಂಗ್ ಗುಂಪಿಗೆ ತರಬೇತಿ ನೀಡಲು ಮತ್ತು ಮಾರ್ಗದರ್ಶನ ನೀಡಲು ನಾನು ಉತ್ಸುಕನಾಗಿದ್ದೇನೆ. ಆಟಗಾರರ ವಿಧಾನವನ್ನು ಪರಿಷ್ಕರಿಸಲು ಮಾತ್ರವಲ್ಲದೆ ಒತ್ತಡದಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯ ಅರಿವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತೇನೆ. ನಾನು ಆರ್ಸಿಬಿಯೊಂದಿಗೆ ನನ್ನ ಒಡನಾಟವನ್ನು ಮುಂದುವರಿಸುವುದು ಖುಷಿಯ ವಿಚಾರ ಎಂದು ಅವರು ಹೇಳಿದರು.

ಆರ್​ಸಿಬಿ ದೊಡ್ಡ ಪ್ರಮಾಣದ ಅಭಿಮಾನಿ ಬಳಗ ಹೊಂದಿದೆ. ಆದರೆ ಇನ್ನೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಫ್ರಾಂಚೈಸಿ ನಾಯಕ ಮತ್ತು ತರಬೇತುದಾರರ ಹಲವಾರು ಸಂಯೋಜನೆಗಳನ್ನು ಪ್ರಯತ್ನಿಸಿದೆ ಮತ್ತು ಪರೀಕ್ಷಿಸಿದೆ. ಆದರೆ ಏನೂ ಕೆಲಸ ಮಾಡಿಲ್ಲ. ಆದರೆ 2008ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹಾಗೂ 2016ರಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಫೈನಲ್​​ನಲ್ಲಿ ಆರ್​ಸಿಬಿ ಸೋತಿದೆ

Continue Reading

ಕ್ರೀಡೆ

Jasprit Bumrah : ಜಸ್​ಪ್ರಿತ್ ಬುಮ್ರಾ ವೈಟ್ ಬಾಲ್ ಕ್ರಿಕೆಟ್​​ನ ಅತ್ಯುತ್ತಮ ಬೌಲರ್​ ಎಂದು ಹೊಗಳಿದ ಮೈಕಲ್ ವಾನ್

Jasprit Bumrah : ಫೈನಲ್​​ನಲ್ಲಿ ಹೆನ್ರಿಕ್ ಕ್ಲಾಸೆನ್ 27 ಎಸೆತಗಳಲ್ಲಿ 52 ರನ್ ಗಳಿಸಿದ್ದರಿಂದ ದಕ್ಷಿಣ ಆಫ್ರಿಕಾ ಗೆಲುವಿನತ್ತ ಸಾಗಿತ್ತು. ಬುಮ್ರಾ ತಮ್ಮ ಅತ್ಯುತ್ತಮ ಸ್ಪೆಲ್ ಅನ್ನು ಕಾರ್ಯಗತಗೊಳಿಸಿದರು. ಅವರು ತಮ್ಮ ನಾಲ್ಕು ಓವರ್ ಗಳಲ್ಲಿ ಕೇವಲ 18 ರನ್ ನೀಡಿ ಎರಡು ವಿಕೆಟ್ ಪಡೆದರು. ಕೊನೆಯ ಐದು ಓವರ್​ಗಳಲ್ಲಿ ದಕ್ಷಿಣ ಆಫ್ರಿಕಾಕ್ಕೆ ಬಹುತೇಕ ಒಂದು ಎಸೆತಕ್ಕೆ ಒಂದು ರನ್​ ಅಗತ್ಯವಿತ್ತು. ವೇಗಿ ಎರಡು ಓವರ್​ಗಳನ್ನು ಎಸೆದು ಕ್ರಮವಾಗಿ ಒಂದು ಮತ್ತು ಆರು ರನ್​​ ನೀಡಿದರು

VISTARANEWS.COM


on

Jasprit Bumrah
Koo

ಬೆಂಗಳೂರು: ಬಾರ್ಬಡೋಸ್​​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ಜೂನ್ 29 ರಂದು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತವು ಎರಡನೇ ಟಿ 20 ವಿಶ್ವಕಪ್ ಪ್ರಶಸ್ತಿ ಗೆದ್ದಿತು. ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಜಸ್​ಪ್ರಿತ್ ಬುಮ್ರಾ (Jasprit Bumrah ) ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಭಾರತ ಗೆಲುವಿನಲ್ಲಿ ಬುಮ್ರಾ ಮುಂಚೂಣಿ ಸ್ಥಾನ ಪಡೆದಿದ್ದರು. ಆಗಾಗ ನಿರ್ಣಾಯಕ ಪ್ರಗತಿಯನ್ನು ಒದಗಿಸಿದ್ದರು. ಭಾರತದ ಸ್ಟಾರ್ ವೇಗಿ ಟಿ 20 ವಿಶ್ವಕಪ್ ಆವೃತ್ತಿಯಲ್ಲಿ ಯಾವುದೇ ಬೌಲರ್​​ಗೆ ಕಡಿಮೆ ಇಲ್ಲದ ಎಕಾನಮಿ ರೇಟ್ ಪ್ರದರ್ಶಿಸಿದರು. ಅವರು 8.26 ಸರಾಸರಿ ಮತ್ತು 4.17 ಎಕಾನಮಿ ರೇಟ್​​​ನಲ್ಲಿ 15 ವಿಕೆಟ್​ ಉರುಳಿಸಿ ಭಾರತದ ಗೆಲುವಿನ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಫೈನಲ್​​ನಲ್ಲಿ ಹೆನ್ರಿಕ್ ಕ್ಲಾಸೆನ್ 27 ಎಸೆತಗಳಲ್ಲಿ 52 ರನ್ ಗಳಿಸಿದ್ದರಿಂದ ದಕ್ಷಿಣ ಆಫ್ರಿಕಾ ಗೆಲುವಿನತ್ತ ಸಾಗಿತ್ತು. ಬುಮ್ರಾ ತಮ್ಮ ಅತ್ಯುತ್ತಮ ಸ್ಪೆಲ್ ಅನ್ನು ಕಾರ್ಯಗತಗೊಳಿಸಿದರು. ಅವರು ತಮ್ಮ ನಾಲ್ಕು ಓವರ್ ಗಳಲ್ಲಿ ಕೇವಲ 18 ರನ್ ನೀಡಿ ಎರಡು ವಿಕೆಟ್ ಪಡೆದರು. ಕೊನೆಯ ಐದು ಓವರ್​ಗಳಲ್ಲಿ ದಕ್ಷಿಣ ಆಫ್ರಿಕಾಕ್ಕೆ ಬಹುತೇಕ ಒಂದು ಎಸೆತಕ್ಕೆ ಒಂದು ರನ್​ ಅಗತ್ಯವಿತ್ತು. ವೇಗಿ ಎರಡು ಓವರ್​ಗಳನ್ನು ಎಸೆದು ಕ್ರಮವಾಗಿ ಒಂದು ಮತ್ತು ಆರು ರನ್​​ ನೀಡಿದರು. ಈ ಸಾಧನೆಗಾಗಿ ಇಂಗ್ಲೆಂಡ್​​ನ ಮಾಜಿ ನಾಯಕ ಮೈಕಲ್ ವಾನ್ ಬುಮ್ರಾ ಅವರನ್ನು ಪಾಕಿಸ್ತಾನದ ಮಾಜಿ ಬೌಲರ್​ ವಾಸಿಂ ಅಕ್ರಮ್​ಗೆ ಸರಿಸಮಾನರು ಎಂದು ಹೊಗಳಿದ್ದಾರೆ.

ಇದನ್ನೂ ಓದಿ: Rohit Sharma: ನನಗೆ ಟಿ20ಗೆ ನಿವೃತ್ತಿ ಘೋಷಿಸಲು ಮನಸ್ಸು ಇರಲಿಲ್ಲ; ಆಘಾತಕಾರಿ ಹೇಳಿಕೆ ನೀಡಿದ ರೋಹಿತ್​ ಶರ್ಮಾ

“ಅವರು ಉತ್ತಮ ಬೌಲರ್, ಅವರು ಎಲ್ಲಾ ವಿಭಿನ್ನ ಬ್ಯಾಟರ್​ಗಳ ವಿರುದ್ಧ ಬೌಲಿಂಗ್ ಮಾಡಲು ಯೋಜನೆ ಹೊಂದಿದ್ದಾರೆ. ಅದಕ್ಕಾಗಿ ಅವರು ಕೌಶಲ ಹೊಂದಿದ್ದಾರೆ. ಯಾವ ಎಸೆತವನ್ನು ಯಾವಾಗ ಎಸೆಯಬೇಕು ಎಂಬುದನ್ನು ತಿಳಿದುಕೊಂಡಿದ್ದಾರೆ. ನನ್ನ ಪ್ರಕಾರ ಉತ್ತಮ ಸೀಮ್ ಬೌಲರ್ ಎಂದು ಹೇಳುವುದಾದರೆ ಮಾಜಿ ಆಟಗಾರ ವಾಸಿಮ್ ಅಕ್ರಮ್ ವಿಶೇಷ. ಆದರೆ, ಅದಕ್ಕೆ ಸಮಾನಾಗಿದ್ದಾರೆ ಬುಮ್ರಾ. ಬುಮ್ರಾ ಅದ್ಭುತ ಆ್ಯಕ್ಷನ್ ಸಾಮರ್ಥ್ಯವನ್ನು ಹೊಂದಿದ್ದಾರೆ ಹಾಗೂ ವೇಗವನ್ನೂ ಹೊಂದಿದ್ದಾರೆ/ ಅವರು ಎಲ್ಲಾ ವಿಭಿನ್ನ ತಾಂತ್ರಿಕತೆಯನ್ನೂ ಹೊಂದಿದ್ದು ಎದುರಾಳಿಯನ್ನು ಒತ್ತಡದಲ್ಲಿ ಇಡುತ್ತಾರೆ. ಇದು ವಿಶ್ವಕಪ್​ನಲ್ಲಿ ಕೇವಲ ಎರಡು ಅಥವಾ ಮೂರು ಬಾರಿ ಅಲ್ಲ. ಇದು ಪ್ರತಿಯೊಂದು ಪಂದ್ಯದಲ್ಲೂ ಆಗಿದೆ “ಎಂದು ವಾನ್ ತಿಳಿಸಿದ್ದಾರೆ.

ನನ್ನದು ಪ್ರಾಮಾಣಿಕ ಅಭಿಪ್ರಾಯ : ವಾನ್

ಫೈನಲ್ ಪಂದ್ಯದಲ್ಲಿ ರೀಜಾ ಹೆಂಡ್ರಿಕ್ಸ್ ಅವರನ್ನು ಬೌಲ್ಡ್ ಮಾಡುವ ಮೂಲಕ ಭಾರತ ಪರ ಬೌಲಿಂಗ್ ದಾಳಿ ಪ್ರಾರಂಭಿಸಿದ ಬುಮ್ರಾ, ಪವರ್ ಪ್ಲೇನಲ್ಲಿ ವಿಶೇಷವಾಗಿ ಅತ್ಯುತ್ತಮವಾಗಿ ಅಡಿದ್ದರು. ಈ ಎಸೆತವನ್ನು ಪ್ರಸಾರಕರು ಪ್ರಸಾರ ಮಾಡದೇ ಇರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಮಾರ್ಕೊ ಜಾನ್ಸೆನ್ ಅವರನ್ನು ಔಟ್​ ಮಾಡಿದ್ದಂತೂ ಅದ್ಭುತ. ಹೀಗಾಗಿ ನನ್ನ ಪ್ರಾಮಾಣಿಕ ಅಭಿಪ್ರಾಯದ ಪ್ರಕಾರ ಬುಮ್ರಾ ಆಧುನಿಕ ಯುಗ ಬೆಸ್ಟ್​ ಬೌಲರ್​.

Continue Reading

ಪ್ರಮುಖ ಸುದ್ದಿ

Rohit Sharma: ನನಗೆ ಟಿ20ಗೆ ನಿವೃತ್ತಿ ಘೋಷಿಸಲು ಮನಸ್ಸು ಇರಲಿಲ್ಲ; ಆಘಾತಕಾರಿ ಹೇಳಿಕೆ ನೀಡಿದ ರೋಹಿತ್​ ಶರ್ಮಾ

Rohit Sharma: 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ ಬಳಿಕ ರೋಹಿತ್ ಶರ್ಮಾ ಚುಟುಕು ಕ್ರಿಕೆಟ್​ನಲ್ಲಿ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದರು. ಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್​ಗಳಿಂದ ಸೋಲಿಸಿದ ಮೆನ್ ಇನ್ ಬ್ಲೂ, 2007 ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಉದ್ಘಾಟನಾ ಆವೃತ್ತಿಯಲ್ಲಿ ಪ್ರಶಸ್ತಿಯನ್ನು ಗೆದ್ದ ನಂತರ ತಮ್ಮ ಎರಡನೇ ಟಿ 20 ವಿಶ್ವಕಪ್ ಅನ್ನು ಎತ್ತಿ ಹಿಡಿಯಿತು.

VISTARANEWS.COM


on

Rohit Sharma
Koo

ಬೆಂಗಳೂರು: 2024 ರ ಟಿ 20 ವಿಶ್ವಕಪ್ (T20 World Cup 2024) ಗೆಲುವಿನ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಟಿ 20 ಯಿಂದ (T20 Cricket) ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಬಿಸಿಸಿಐ ಹೊಸ ನಾಯಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ನಡುವೆ ಅವರು ಆಘಾತಕಾರಿ ಹೇಳಿಕೆ ನೀಡಿದ್ದು ತಮಗೆ ನಾಯಕತ್ವಕ್ಕೆ ವಿದಾಯ ಹೇಳಲು ಮನಸ್ಸಿರಲಿಲ್ಲ ಎಂದಿದ್ದಾರೆ. ಪರಿಸ್ಥಿತಿ ನನಗೆ ಪೂರಕವಾಗಿರಲಿಲ್ಲ. ಹೀಗಾಗಿ ಅವರು ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ.

2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ ಬಳಿಕ ರೋಹಿತ್ ಶರ್ಮಾ ಚುಟುಕು ಕ್ರಿಕೆಟ್​ನಲ್ಲಿ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದರು. ಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್​ಗಳಿಂದ ಸೋಲಿಸಿದ ಮೆನ್ ಇನ್ ಬ್ಲೂ, 2007 ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಉದ್ಘಾಟನಾ ಆವೃತ್ತಿಯಲ್ಲಿ ಪ್ರಶಸ್ತಿಯನ್ನು ಗೆದ್ದ ನಂತರ ತಮ್ಮ ಎರಡನೇ ಟಿ 20 ವಿಶ್ವಕಪ್ ಅನ್ನು ಎತ್ತಿ ಹಿಡಿಯಿತು.

2007 ರಿಂದ ಭಾರತೀಯ ಟಿ 20 ಐ ತಂಡದ ಭಾಗವಾಗಿರುವ ರೋಹಿತ್ ಶರ್ಮಾ, 2024 ರ ಟಿ 20 ವಿಶ್ವಕಪ್​ನಲ್ಲಿ ತಮ್ಮ ಎಲ್ಲ ಶ್ರಮವನ್ನು ಮೀಸಲಿಟ್ಟರು. ಭಾರತಕ್ಕೆ ಪ್ರಶಸ್ತಿ ಬರವನ್ನು ಕೊನೆಗೊಳಿಸುವಲ್ಲಿ ಅವರ ಎಲ್ಲಾ ಕಠಿಣ ಪರಿಶ್ರಮವು ಫಲ ನೀಡಿತು. 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದ ಭಾರತ ಬಳಿಕ ಐಸಿಸಿಯ ಪ್ರತಿಯೊಂದು ಟೂರ್ನಿಯಲ್ಲೂ ಸೋಲು ಕಂಡಿತ್ತು.

ಭಾರತವು ಪಂದ್ಯಾವಳಿಯನ್ನು ಗೆದ್ದಾಗ, ರೋಹಿತ್ ಶರ್ಮಾ ಅವರು ಟಿ 20 ಯಿಂದ ನಿವೃತ್ತರಾಗುವುದಾಗಿ ಘೋಷಿಸಿದರು. ಅವರ ಪ್ರಕಾರ ಟಿ20 ವೃತ್ತಿಜೀವನವನ್ನು ತೊರೆಯಲು ಮತ್ತು ಕೊನೆಗೊಳಿಸಲು ಇದು ಸರಿಯಾದ ಸಮಯ ಎಂದು ವಿವರಿಸಿದ್ದರು.

ನಾನು ಈ ಸ್ವರೂಪದಲ್ಲಿ ಆಡಲು ಪ್ರಾರಂಭಿಸಿದಾಗಿನಿಂದ ನಾನು ಸಾಕಷ್ಟು ಆನಂದಿಸಿದ್ದೇನೆ. ಈ ಸ್ವರೂಪಕ್ಕೆ ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯವಿಲ್ಲ. ನಾನು ಇದರ ಪ್ರತಿ ಕ್ಷಣವನ್ನು ಪ್ರೀತಿಸುತ್ತೇನೆ. ನಾನು ಬಯಸಿದ್ದು ಇದನ್ನೇ. ನಾನು ಕಪ್ ಗೆಲ್ಲಲು ಬಯಸಿದ್ದೆ ಎಂದು ಹೇಳಿದ್ದಾರೆ. ಅದರ ನಂತರ, ಅವರು ವರದಿಗಾರರೊಂದಿಗಿನ ಸಂವಾದದ ಸಮಯದಲ್ಲಿ, ರೋಹಿತ್ ಶರ್ಮಾ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಅವರು ನಿವೃತ್ತರಾಗಲು ಬಯಸಿರಲಿಲ್ಲ. ಆದರೆ ಪರಿಸ್ಥಿತಿಯು ಅವರನ್ನು ಒತ್ತಾಯ ಮಾಡಿತು ಎಂದು ಹೇಳಿದ್ದಾರೆ. ಆದಾಗ್ಯೂ, ವಿದಾಯ ಹೇಳಲು ಇದು ಸರಿಯಾದ ಸಮಯ ಎಂದು ಅವರು ಮತ್ತೊಮ್ಮೆ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Team India Captain : ರೋಹಿತ್ ಶರ್ಮಾ ನಂತರ ಟಿ20 ತಂಡದ ನಾಯಕ ಯಾರು? ಇಲ್ಲಿದೆ ಐದು ಮುಂಚೂಣಿ ಹೆಸರುಗಳು

ನಾನು ಟಿ 20 ಪಂದ್ಯಗಳಿಂದ ನಿವೃತ್ತಿಯಾಗುತ್ತೇನೆ ಎಂದು ನಾನು ಭಾವಿಸಿರಲಿಲ್ಲ, ಆದರೆ ಪರಿಸ್ಥಿತಿ ಹೀಗಿತ್ತು. ಇದು ನನಗೆ ಪರಿಪೂರ್ಣ ಪರಿಸ್ಥಿತಿ ಎಂದು ನಾನು ಭಾವಿಸಿದೆ. ಕಪ್ ಗೆದ್ದು ವಿದಾಯ ಹೇಳುವುದಕ್ಕಿಂತ ಉತ್ತಮವಾದುದು ಯಾವುದೂ ಇಲ್ಲ, ಎಂದು ಹೇಳಿದರು.

ಟಿ20 ವಿಶ್ವಕಪ್ 2024: ರೋಹಿತ್ ಶರ್ಮಾ ಮುನ್ನಡೆ

2024ರ ಟಿ20 ವಿಶ್ವಕಪ್​ನಲ್ಲಿ ರೋಹಿತ್ ಶರ್ಮಾ ತಮ್ಮ ತಂಡದ ಅತ್ಯುತ್ತಮ ಬ್ಯಾಟರ್​ ಆಗಿದ್ದರು. ಅವರು ಮುಂಚೂಣಿಯಿಂದ ತಂಡವನ್ನು ಮುನ್ನಡೆಸಿದರು. ಪಂದ್ಯಾವಳಿಯಲ್ಲಿ ತಮ್ಮ ತಂಡವನ್ನು ಗೆಲುವಿನ ಮೊತ್ತಕ್ಕೆ ಕೊಂಡಯ್ದಿದ್ದಾರೆ. ಅವರು ಅಗ್ರಸ್ಥಾನದಲ್ಲಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದರು.

ರೋಹಿತ್ ಶರ್ಮಾ 8 ಪಂದ್ಯಗಳಲ್ಲಿ 156.70 ಸ್ಟ್ರೈಕ್ ರೇಟ್ನೊಂದಿಗೆ 257 ರನ್ ಗಳಿಸಿದ್ದಾರೆ. ಅವರು ಪಂದ್ಯಾವಳಿಯಲ್ಲಿ ಮೂರು ಅರ್ಧಶತಕಗಳನ್ನು ಬಾರಿಸಿದರು. ಒಂದು ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್​​ನಲ್ಲಿ ಬಂದಿದೆ. ನಾಯಕನಾಗಿಯೂ, ಅವರು ಬಹುತೇಕ ಪ್ರತಿಯೊಂದು ಅಂಶದಲ್ಲೂ ಯಶಸ್ವಿಯಾಗಿದ್ದಾರೆ.

ಒಟ್ಟಾರೆಯಾಗಿ ಟಿ 20 ಐನಲ್ಲಿ, ರೋಹಿತ್ ಶರ್ಮಾ ತಮ್ಮ ತಂಡಕ್ಕೆ ನಂಬಲಾಗದ ಸಾಧನೆ ಮಾಡಿದ್ದಾರೆ. ಅವರು 4231 ರನ್​ಗಳೊಂದಿಗೆ ಸಾರ್ವಕಾಲಿಕ ಪ್ರಮುಖ ರನ್ ಸ್ಕೋರರ್ ಆಗಿ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದರೆ. ನಾಯಕ ಐದು ಶತಕಗಳನ್ನು ಗಳಿಸಿದ್ದಾರೆ. ಇದು ಟಿ20 ಐ ಕ್ರಿಕೆಟ್​​ನಲ್ಲಿ ಮುಂಚೂಣಿ ಸಾಧನೆ.

Continue Reading

ಕ್ರೀಡೆ

Team India Captain : ರೋಹಿತ್ ಶರ್ಮಾ ನಂತರ ಟಿ20 ತಂಡದ ನಾಯಕ ಯಾರು? ಇಲ್ಲಿದೆ ಐದು ಮುಂಚೂಣಿ ಹೆಸರುಗಳು

Team India Captain: ರೋಹಿತ್ ನಿವೃತ್ತಿಯ ಬಳಿಕ ಅವರ ಸ್ಥಾನವನ್ನು ತುಂಬುವವರು ಯಾರು ಎಂಬ ಪ್ರಶ್ನೆ ಎದ್ದಿದೆ. ಚುಟುಕು ಮಾದರಿಯಲ್ಲಿ ಅಬ್ಬರದ ಪ್ರದರ್ಶನ ನೀಡುವ ಜತೆಗೆ ತಂಡದ ಮುಂದಾಳತ್ವ ವಹಿಸಲು ಯಾರು ಸಮರ್ಥರು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ತಂಡದಲ್ಲಿ ಹಿರಿಯ ಆಟಗಾರರ ಸಂಖ್ಯೆ ಕಡಿಮೆ ಇರುವ ಕಾರಣ ಇರುವವರಲ್ಲೇ ಇವರಾಗಬಹುದು ಎಂಬ ಊಹಾಪೋಗಳು ಹೆಚ್ಚಾಗಿದೆ. ಹೀಗಾಗಿ ಯಾರಿಗೆ ಹೆಚ್ಚಿನ ಅವಕಾಶ ಇದೆ ಎಂಬುದನ್ನು ನೋಡೋಣ.

VISTARANEWS.COM


on

Team India Captain
Koo

ಬೆಂಗಳೂರು : 2024 ರ ಟಿ 20 ವಿಶ್ವಕಪ್ ಚಾಂಪಿಯನ್​ ಪಟ್ಟ ಲಭಿಸಿದ ತಕ್ಷಣ ನಾಯಕ ರೋಹಿತ್ ಶರ್ಮಾ (Rohit Sharma) ಶನಿವಾರ ಟಿ20 ಐ ಗೆ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಆಟದ ಕಿರು ಸ್ವರೂಪದಲ್ಲಿ ರಾಷ್ಟ್ರೀಯ ತಂಡದ ನಾಯಕತ್ವವು (Team India Captain) ಸ್ಥಾನ ಖಾಲಿ ಬಿದ್ದಿದೆ. 20 ಓವರ್​ಗಳ ಸ್ವರೂಪದಲ್ಲಿ 62 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ರೋಹಿತ್​ ಮೊದಲ ಪ್ರಶಸ್ತಿ ಗೆದ್ದ ತಕ್ಷಣ ಟಿ20 ವೃತ್ತಿಜೀವನಕ್ಕೆ ವಿದಾಯ ಹೇಳಿದರು. ಬಾರ್ಬಡೋಸ್​​ನಲ್ಲಿ ನಡೆದ ಫೈನಲ್​ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ಕ್ಷಣದಲ್ಲಿಯೇ ಅವರು ನಿರ್ಧಾರ ತೆಗೆದುಕೊಂಡರು. ಇವರ ಜತೆಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಟಿ 20 ಪಂದ್ಯಗಳಲ್ಲಿ ನಿವೃತ್ತಿ ಘೋಷಿಸಿದ್ದರು. ಈ ಎರಡು ಬ್ಯಾಟಿಂಗ್ ದಿಗ್ಗಜರು ಇನ್ನು ಮುಂದೆ ಲಭ್ಯರಿಲ್ಲದ ಕಾರಣ ಭಾರತೀಯ ಕ್ರಿಕೆಟ್​​ ಹೊಸ ಯುಗ ಆರಂಭಿಸಬೇಕಾಗಿದೆ.

ರೋಹಿತ್ ನಿವೃತ್ತಿಯ ಬಳಿಕ ಅವರ ಸ್ಥಾನವನ್ನು ತುಂಬುವವರು ಯಾರು ಎಂಬ ಪ್ರಶ್ನೆ ಎದ್ದಿದೆ. ಚುಟುಕು ಮಾದರಿಯಲ್ಲಿ ಅಬ್ಬರದ ಪ್ರದರ್ಶನ ನೀಡುವ ಜತೆಗೆ ತಂಡದ ಮುಂದಾಳತ್ವ ವಹಿಸಲು ಯಾರು ಸಮರ್ಥರು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ತಂಡದಲ್ಲಿ ಹಿರಿಯ ಆಟಗಾರರ ಸಂಖ್ಯೆ ಕಡಿಮೆ ಇರುವ ಕಾರಣ ಇರುವವರಲ್ಲೇ ಇವರಾಗಬಹುದು ಎಂಬ ಊಹಾಪೋಗಳು ಹೆಚ್ಚಾಗಿದೆ. ಹೀಗಾಗಿ ಯಾರಿಗೆ ಹೆಚ್ಚಿನ ಅವಕಾಶ ಇದೆ ಎಂಬುದನ್ನು ನೋಡೋಣ.

ಹಾರ್ದಿಕ್ ಪಾಂಡ್ಯ

ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟಿ 20 ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಲು ಇರುವ ಮುಂಚೂಣಿ ಹೆಸರು. ಅವರು ಭಾರತದ ಟಿ 20 ವಿಶ್ವಕಪ್ 2024 ಅಭಿಯಾನಕ್ಕೆ ಉಪನಾಯಕರಾಗಿದ್ದರು. ಪ್ರಶಸ್ತಿ ಗೆಲುವಿನಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.

ಐಪಿಎಲ್ 2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದ ಅವರು ಮುಂದಿನ ಋತುವಿನಲ್ಲಿ ಫ್ರಾಂಚೈಸಿಯನ್ನು ಫೈನಲ್​ಗೆ ಕೊಂಡೊಯ್ದಿದ್ದರು. ಹೀಗಾಗಿ ಹಾರ್ದಿಕ್ ಈ ಸ್ವರೂಪದಲ್ಲಿ ನಾಯಕತ್ವದ ಅನುಭವ ಹೊಂದಿದ್ದಾರೆ. ಪ್ರಸ್ತುತ ಅವರು ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದಾರೆ. ಅದರ ಜತೆಗೆ 2022-23ರ ಅವಧಿಯಲ್ಲಿ 16 ಟಿ20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದರು.

2022 ರ ಟಿ 20 ವಿಶ್ವಕಪ್​​ನ ಸೆಮಿಫೈನಲ್​ನಲ್ಲಿ ಭಾರತ ನಿರ್ಗಮಿಸಿದ ನಂತರ ನ್ಯೂಜಿಲೆಂಡ್​​ನಲ್ಲಿ ನಡೆದ ಮೂರು ಪಂದ್ಯಗಳ ಸರಣಿಗೆ ಪಾಂಡ್ಯ ನಾಯಕರಾಗಿದ್ದರು. ಶ್ರೀಲಂಕಾ ವಿರುದ್ಧ 3-0 ವೈಟ್ವಾಶ್ ಮತ್ತು ತವರಿನಲ್ಲಿ ಕಿವೀಸ್ ವಿರುದ್ಧ 2-1 ಅಂತರದ ಗೆಲುವು ಸಾಧಿಸಿದ ತಂಡದ ಮುಂದಾಳತ್ವ ವಹಿಸಿದ್ದರು. ನಾಯಕನಾಗಿ ಅವರ ಕೊನೆಯ ಟಿ 20 ಐ ಸರಣಿ ಕಳೆದ ವರ್ಷ ಆಗಸ್ಟ್​​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 2-3 ಅಂತರದಲ್ಲಿ ಸರಣಿ ಸೋಲಿನೊಂದಿಗೆ ಕೊನೆಗೊಂಡಿತ್ತು. ಹಾರ್ದಿಕ್ ಪಾಂಡ್ಯ ಏಕದಿನ ತಂಡದ ಪ್ರಮುಖ ಆಟಗಾರನಾಗಿರುವುದರಿಂದ ಎರಡು ಸ್ವರೂಪಗಳನ್ನು ಹೇಗೆ ಸಮತೋಲನಗೊಳಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ.

ಸೂರ್ಯಕುಮಾರ್ ಯಾದವ್

ಸೂರ್ಯಕುಮಾರ್ ವಿಶ್ವದ ಪ್ರಮುಖ ಟಿ 20 ಬ್ಯಾಟರ್​ಗಳಲ್ಲಿ ಒಬ್ಬರು. ಈ ಮಾದರಿಯಲ್ಲಿ ಬ್ಯಾಟ್​ನೊಂದಿಗೆ ಭಾರತದ ಪರ ಆಕ್ರಮಣಕಾರಿಯಾಗಿದ್ದಾರೆ. ಕಳೆದ ವರ್ಷ ಏಕದಿನ ವಿಶ್ವಕಪ್ ನಂತರ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಐದು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಅವರು ಭಾರತವನ್ನು ಮುನ್ನಡೆಸಿದ್ದರು. ನಂತರ ಡಿಸೆಂಬರ್​​ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ 20 ಐಗಳಲ್ಲಿ ತಂಡದ ನಾಯಕರಾಗಿದ್ದರು. ನಾಯಕನಾಗಿದ್ದ ತಮ್ಮ ಕೊನೆಯ ಪಂದ್ಯದಲ್ಲಿ, ಸೂರ್ಯಕುಮಾರ್ 56 ಎಸೆತಗಳಲ್ಲಿ ಶತಕ ಬಾರಿಸಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ 106 ರನ್​ಗಳ ಬೃಹತ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು

ಟೆಸ್ಟ್ ಮತ್ತು ಏಕದಿನ ತಂಡಗಳಲ್ಲಿ ಇನ್ನೂ ಕಾಯಂ ಸ್ಥಾನ ಪಡೆಯದ ಕಾರಣ, ಸೂರ್ಯಕುಮಾರ್ ತಮ್ಮ ಗಮನವನ್ನು ಆಟದ ಕಿರು ಸ್ವರೂಪಕ್ಕೆ ಮೀಸಲಿಡುವ ಸರ್ವ ಅವಕಾಶ ಹೊಂದಿದ್ದಾರೆ.

ಜಸ್ಪ್ರೀತ್ ಬುಮ್ರಾ

ಭಾರತದ ಆಲ್-ಫಾರ್ಮ್ಯಾಟ್ ವೇಗದ ಬೌಲರ್ ಆಧುನಿಕ ಯುಗದ ​​ ಅತ್ಯುತ್ತಮ ಕ್ರಿಕೆಟಿಗ. ಭಾರತ ತಂಡದ ಯಶಸ್ಸಿನ ರೂವಾರಿ ಕೂಡ. ಸೀಮಿತ ನಾಯಕತ್ವ ಅನುಭವವನ್ನು ಹೊಂದಿದ್ದರೂ, ಬುಮ್ರಾ ತಮ್ಮ ತೀಕ್ಷ್ಣ ಚಾತುರ್ಯ ಮತ್ತು ಆಟದ ಅರಿವಿಗೆ ಪ್ರಖ್ಯಾತರು. ಅವರು ಹಲವು ಬಾರಿ ತಂಡದ ಉಪನಾಯಕರೂ ಆಗಿದ್ದಾರೆ. ಕಳೆದ ವರ್ಷ ಐರ್ಲೆಂಡ್ ವಿರುದ್ಧ ಎರಡು ಟಿ 20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದರು. ಆದಾಗ್ಯೂ, ಎಲ್ಲಾ ಮೂರು ಸ್ವರೂಪಗಳಲ್ಲಿ ಅವರ ಬೌಲಿಂಗ್ ಭಾರತಕ್ಕೆ ಮುಖ್ಯ. ಅವರ ಇತ್ತೀಚಿನ ಗಾಯಗಳನ್ನು ಗಮನಿಸಿದರೆ, ತಂಡದ ಆಡಳಿತವು ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡದು.

ಇದನ್ನೂ ಓದಿ: T20 World Cup 2024 : ವೆಸ್ಟ್​ ಇಂಡೀಸ್​ನಲ್ಲಿ ಅಪಾಯಕಾರಿ ಚಂಡಮಾರುತದಲ್ಲಿ ಸಿಲುಕಿಕೊಂಡ ಚಾಂಪಿಯನ್ ಭಾರತ ತಂಡ

ರಿಷಭ್ ಪಂತ್

ಭೀಕರ ಕಾರು ಅಪಘಾತದಿಂದ ಆದ ಗಾಯಗಳಿಂದ ಚೇತರಿಸಿದ ರಿಷಭ್​ ಪಂತ್ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಗಮನಾರ್ಹ ಪುನರಾಗಮನ ಮಾಡಿದ್ದರು. ಐಪಿಎಲ್ 2024 ರಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. ಆ ತಂಡ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. 2022 ರಲ್ಲಿ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಭಾರತವನ್ನು ಮುನ್ನಡೆಸಿದ್ದರು. ಅದು 2-2 ಡ್ರಾದಲ್ಲಿ ಕೊನೆಗೊಂಡಿತ್ತು. ಆದಾಗ್ಯೂ, ಪಂತ್ ಭಾರತದ ಟಿ 20 ಐ ಪ್ಲೇಯಿಂಗ್ ಹನ್ನೊಂದರಲ್ಲಿ ತಮ್ಮ ಸ್ಥಾನವನ್ನು ಇನ್ನೂ ಭದ್ರಪಡಿಸಿಕೊಂಡಿಲ್ಲ. ಅವರನ್ನು ಯಾವ ರೀತಿ ಮ್ಯಾನೇಜ್ಮೆಂಟ್​ ಬಳಸಿಕೊಳ್ಳಲಿದೆ ಎಂದು ನೋಡಬೇಕು. ಅವರ ಬ್ಯಾಟಿಂಗ್​ನಲ್ಲಿ ಅಸ್ಥಿತರೆ ಇರುವ ಕಾರಣ ನಾಯಕತ್ವ ಜವಾಬ್ದಾರಿ ನೀಡುವ ಮೊದಲು ಬಿಸಿಸಿಐ ಇನ್ನೊಮ್ಮೆ ಯೋಚನೆ ಮಾಡಲಿದೆ.

ಶುಬ್ಮನ್ ಗಿಲ್​

ಹಾರ್ದಿಕ್ ಪಾಂಡ್ಯ ಐಪಿಎಲ್​ನಲ್ಲಿ ಮಂಬಯಿ ತಂಡದ ಪಾಲಾದ ಬಳಿಕ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ವಹಿಸಿಕೊಂಡ ಶುಭ್​​ಮನ್​ ಗಿಲ್ ಜಿಂಬಾಬ್ವೆಯಲ್ಲಿ ಮುಂಬರುವ ಐದು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ. ಟಿ 20 ವಿಶ್ವಕಪ್ 2024 ತಂಡದಲ್ಲಿ ಅವರು ಸ್ಥಾನ ಪಡೆಯದಿದ್ದರೂ ರೋಹಿತ್ ಮತ್ತು ಕೊಹ್ಲಿ ಅವರ ನಿವೃತ್ತಿಯ ನಂತರ ಗಿಲ್ ಟಿ 20 ಐಗಳಲ್ಲಿ ಅಗ್ರ ಕ್ರಮಾಂಕದಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅವರು ಇನ್ನೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನಾಯಕತ್ವದ ಅನುಭವವನ್ನು ಹೊಂದಿಲ್ಲವಾದರೂ, 24 ವರ್ಷದ ಆಟಗಾರ ಏಕದಿನ ಮತ್ತು ಟೆಸ್ಟ್ ತಂಡಗಳ ಪ್ರಮುಖ ಸದಸ್ಯರಾಗಿದ್ದಾರೆ. ಭವಿಷ್ಯಕ್ಕಾಗಿ ನಾಯಕನನ್ನು ರೂಪಿಸುವಲ್ಲಿ ಮ್ಯಾನೇಜ್ಮೆಂಟ್ ಕಣ್ಣಿಟ್ಟಿರುವ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ.

Continue Reading
Advertisement
Job Alert
ಉದ್ಯೋಗ12 mins ago

Job Alert: HCLನಲ್ಲಿ ಖಾಲಿ ಇರುವ 56 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಮಾಸಿಕ ವೇತನ 1 ಲಕ್ಷ ರೂ.ವರೆಗೆ: ಇಂದೇ ಅಪ್ಲೈ ಮಾಡಿ

murder case
ಬೆಂಗಳೂರು20 mins ago

Murder Case : ರೌಡಿಯಾಗಲು ಹೊರಟವನನ್ನು ಕೊಂದು ಹಾಕಿದ್ರು ಪುಂಡರು

Viral News
ವೈರಲ್ ನ್ಯೂಸ್23 mins ago

Viral News: ನೀರ ಬಿಟ್ಟು ರಸ್ತೆಗೆ ಬಂದ ಮೊಸಳೆಗೆ ಇಲ್ಲೇನು ಕೆಲಸ? ಅಪರೂಪದ Video ಇಲ್ಲಿದೆ ನೋಡಿ

Dinesh Karthik
ಕ್ರಿಕೆಟ್25 mins ago

Dinesh Karthik : ಆರ್​​ಸಿಬಿ ಬ್ಯಾಟಿಂಗ್ ಕೋಚ್​, ಮಾರ್ಗದರ್ಶಕರಾಗಿ ದಿನೇಶ್​ ಕಾರ್ತಿಕ್ ನೇಮಕ

Actor Darshan Family Jail Entry Police personnel taken in a private car
ಸ್ಯಾಂಡಲ್ ವುಡ್29 mins ago

Actor Darshan: ದರ್ಶನ್ ಕುಟುಂಬ ಜೈಲಿಗೆ ಎಂಟ್ರಿ; ಖಾಸಗಿ ಕಾರಿನಲ್ಲಿ ಕರೆದೊಯ್ದ ಪೊಲೀಸ್ ಸಿಬ್ಬಂದಿ

Dengue fever rises across the state including Bengaluru BBMP Commissioner also get fever
ಪ್ರಮುಖ ಸುದ್ದಿ36 mins ago

Dengue Fever: ರಾಜಧಾನಿಯಲ್ಲಿ ಡೆಂಗ್ಯು ಜ್ವರಕ್ಕೆ ಒಂದು ಬಲಿ, ರಾಜ್ಯದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆ

Gold Rate Today
ಕರ್ನಾಟಕ36 mins ago

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಂದಿನ ಬೆಲೆ ಹೇಗಿದೆ?

Jasprit Bumrah
ಕ್ರೀಡೆ46 mins ago

Jasprit Bumrah : ಜಸ್​ಪ್ರಿತ್ ಬುಮ್ರಾ ವೈಟ್ ಬಾಲ್ ಕ್ರಿಕೆಟ್​​ನ ಅತ್ಯುತ್ತಮ ಬೌಲರ್​ ಎಂದು ಹೊಗಳಿದ ಮೈಕಲ್ ವಾನ್

assault case
ಚಿತ್ರದುರ್ಗ47 mins ago

Assault Case : ಕಚೇರಿಗೆ ನುಗ್ಗಿ ದರದರನೆ ಎಳೆದು ಪಿಡಿಓ ಥಳಿಸಿದ ಪುಂಡರ ಗ್ಯಾಂಗ್‌!

Actor Darshan is like my son says hamsalekha
ಸ್ಯಾಂಡಲ್ ವುಡ್1 hour ago

Actor Darshan: ದರ್ಶನ್ ನನ್ನ ಮಗು, ಆತ ಕೊಟ್ಟ ಕೊಡುಗೆ ಕಡೆ ನೋಡೋಣ ಎಂದ ಹಂಸಲೇಖ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ18 hours ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು23 hours ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ4 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

ಟ್ರೆಂಡಿಂಗ್‌