Rohit Sharma : ಗರಿಷ್ಠ ಶತಕಗಳ ದಾಖಲೆ ಪಟ್ಟಿಯಲ್ಲಿ ನಮ್ದೇ ಹವಾ, ಎಲ್ಲರೂ ಭಾರತದವರೇ - Vistara News

ಕ್ರಿಕೆಟ್

Rohit Sharma : ಗರಿಷ್ಠ ಶತಕಗಳ ದಾಖಲೆ ಪಟ್ಟಿಯಲ್ಲಿ ನಮ್ದೇ ಹವಾ, ಎಲ್ಲರೂ ಭಾರತದವರೇ

ಏಕ ದಿನ ಶತಕಗಳ ದಾಖಲೆ ಪಟ್ಟಿಯಲ್ಲಿ ಸಚಿನ್​ ಮೊದಲ ಸ್ಥಾನದಲ್ಲಿದ್ದರೆ ವಿರಾಟ್​ ಎರಡನೇ ಹಾಗೂ ರೋಹಿತ್ ಶರ್ಮ (Rohit Sharma) ಮೂರನೇ ಸ್ಥಾನದಲ್ಲಿದ್ದಾರೆ.

VISTARANEWS.COM


on

Rohit Sharna
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಭಾರತ ತಂಡದ ನಾಯಕ ರೋಹಿತ್​ ಶರ್ಮಾ (Rohit Sharma) ಬುಧವಾರ ನಡೆದ ಏಕ ದಿನ ವಿಶ್ವ ಕಪ್​ ಪಂದ್ಯದಲ್ಲಿ ಅಪಫಾನಿಸ್ತಾನ ವಿರುದ್ಧ ಶತಕ ಬಾರಿಸಿದ್ದಾರೆ. ಈ ಮೂಲಕ ಅವರು ತಂಡದ ಸುಲಭ ಜಯಕ್ಕೆ ಕಾರಣವಾದರು. ರೋಹಿತ್ ಪಾಲಿಗೆ ಇದು 31ನೇ ಏಕ ದಿನ ಕ್ರಿಕೆಟ್ ಶತಕ. ಈ ಮೂಲಕ ಅವರು ಏಕ ದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಈ ಪಟ್ಟಿಯಲ್ಲಿ ಮೊದಲ ಮೂರು ಅಗ್ರಸ್ಥಾನಗಳನ್ನು ಭಾರತೀಯರೇ ಪಡೆದುಕೊಂಡಂತಾಗಿದೆ.

ಭಾರತದ ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರು ಒಟ್ಟು 49 ಶತಕಗಳನ್ನು ಬಾರಿಸಿ ದೊಡ್ಡ ದಾಖಲೆ ಮಾಡಿದ್ದರು. ನಂತರದ ಸ್ಥಾನವನ್ನು ಕಿಂಗ್ ಕೊಹ್ಲಿ ಪಡೆದುಕೊಂಡಿದ್ದಾರೆ. ಅವರು 47 ಶತಕಗಳನ್ನು ಬಾರಿಸಿದ್ದಾರೆ. ಅವರು ಸಚಿನ್ ದಾಖಲೆ ಮುರಿದು ಇನ್ನಷ್ಟು ಶತಕಗಳನ್ನು ಬಾರಿಸುವ ಅವಕಾಶ ಹೊಂದಿದ್ದಾರೆ.

ಅತಿ ಹೆಚ್ಚು ಏಕದಿನ ಶತಕಗಳು

  • ಸಚಿನ್ ತೆಂಡೂಲ್ಕರ್ (ಭಾರತ) 49 ಶತಕ
  • ವಿರಾಟ್ ಕೊಹ್ಲಿ (ಭಾರತ) 47 ಶತಕ
  • ರೋಹಿತ್ ಶರ್ಮಾ (ಭಾರತ) 30 ಶತಕ
  • ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) 30 ಶತಕ
  • ಸನತ್ ಜಯಸೂರ್ಯ (ಶ್ರೀಲಂಕಾ) 28 ಶತಕ
  • ಹಶೀಮ್ ಆಮ್ಲಾ (ದಕ್ಷಿಣ ಆಫ್ರಿಕಾ) 27 ಶತಕ
  • ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ) 25 ಶತಕ
  • ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) 25 ಶತಕ
  • ಕುಮಾರ ಸಂಗಕ್ಕಾರ (ಶ್ರೀಲಂಕಾ) 25 ಶತಕ
  • ಸೌರವ್ ಗಂಗೂಲಿ (ಭಾರತ) 22 ಶತಕ

ರೋಹಿತ್ ಶರ್ಮಾ ಸಿಕ್ಸರ್ ದಾಖಲೆ

ಅಫ್ಘಾನಿಸ್ತಾನ ವಿರುದ್ಧದ ಐಸಿಸಿ ವಿಶ್ವಕಪ್ 2023 ರ ಪಂದ್ಯದಲ್ಲಿ ಭಾರತದ ಬ್ಯಾಟರ್​ ರೋಹಿತ್ ಶರ್ಮಾ (Rohit Sharma) ಎಲ್ಲಾ ಸ್ವರೂಪಗಳಲ್ಲಿ ಅತಿ ಹೆಚ್ಚು ಅಂತಾರರಾಷ್ಟ್ರೀಯ ಸಿಕ್ಸರ್​ಗಳನ್ನು ಬಾರಿಸಿದ ಹೊಸ ದಾಖಲೆ ಸೃಷ್ಟಿಸಿದರು. ಅವರು ವೆಸ್ಟ್ ಇಂಡೀಸ್​​ನ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ 551 ಇನಿಂಗ್ಸ್​​ಗಳಲ್ಲಿ ಬಾರಿಸಿದ್ದ 553 ಸಿಕ್ಸರ್​ಗಳ ದಾಖಲೆ ಮುರಿದರು. ರೋಹಿತ್ ಖಾತೆಯಲ್ಲಿ ಈಗ 554 ಸಿಕ್ಸರ್​ಗಳಿದ್ದು, ಇದು ಕೇವಲ 473 ಇನಿಂಗ್ಸ್​ಗಳಲ್ಲಿ ಸೃಷ್ಟಿಯಾಗಿವೆ. ಏಕದಿನ ಪಂದ್ಯಗಳಲ್ಲಿ ಶಾಹಿದ್ ಅಫ್ರಿದಿ ಮತ್ತು ಗೇಲ್ ನಂತರ ರೋಹಿತ್ ಮೂರನೇ ಸ್ಥಾನದಲ್ಲಿದ್ದಾರೆ. ಆದರೆ ಟಿ 20ಐನಲ್ಲಿ 140 ಇನಿಂಗ್ಸ್​ಗಳಲ್ಲಿ 182 ಸಿಕ್ಸರ್​ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್​​ನಲ್ಲಿ 77 ಸಿಕ್ಸರ್ಗಳೊಂದಿಗೆ ರೋಹಿತ್ ಮೂರನೇ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಎನಿಸಿಕೊಂಡಿದ್ದಾರೆ. ವೀರೇಂದ್ರ ಸೆಹ್ವಾಗ್ (91) ಮತ್ತು ಎಂಎಸ್ ಧೋನಿ (78) ನಂತರದ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ : Virat Kohli : ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ

ಗರಿಷ್ಠ ಸಿಕ್ಸರ್ ಬಾರಿಸಿದವರ ಪಟ್ಟಿ ಇಲ್ಲಿದೆ

ರೋಹಿತ್ ಶರ್ಮಾ (ಭಾರತ) – 554 ಸಿಕ್ಸರ್*
ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) – 553 ಸಿಕ್ಸರ್
ಶಾಹಿದ್ ಅಫ್ರಿದಿ (ಪಾಕಿಸ್ತಾನ) – 476 ಸಿಕ್ಸರ್
ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್) – 398 ಸಿಕ್ಸರ್
ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) – 383 ಸಿಕ್ಸರ್
ಎಂಎಸ್ ಧೋನಿ (ಭಾರತ) – 359 ಸಿಕ್ಸರ್
ಸನತ್ ಜಯಸೂರ್ಯ (ಶ್ರೀಲಂಕಾ) – 352 ಸಿಕ್ಸರ್
ಇಯಾನ್ ಮಾರ್ಗನ್ (ಇಂಗ್ಲೆಂಡ್) – 346 ಸಿಕ್ಸರ್
ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ) – 328 ಸಿಕ್ಸರ್
ಜೋಸ್ ಬಟ್ಲರ್ – 312 ಸಿಕ್ಸರ್*

7 ಶತಕಗಳ ದಾಖಲೆ

ಶರ್ಮಾ (Rohit Sharma) ಹಲವು ದಾಖಲೆಗಳನ್ನು ಮಾಡಿದ್ದಾರೆ. ಅದರಲ್ಲೊಂದು ವಿಶ್ವ ಕಪ್​ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳ ದಾಖಲೆ. ಅವರಿಗೆ ಇದು ವಿಶ್ವ ಕಪ್​ನಲ್ಲಿ ಏಳನೇ ದಾಖಲೆಯಾಗಿದೆ. ಈ ಮೂಲಕ ಅವರು ಕ್ರಿಕೆಟ್​ ಇತಿಹಾಸದಲ್ಲಿ ಏಕ ದಿನ ವಿಶ್ವ ಕಪ್​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇದೇ ವೇಳೆ ಅವರು ಭಾರತದ ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಮ್ಮೆಟ್ಟಿಸಿದ್ದಾರೆ. ಸಚಿನ್ ಅವರು ವಿಶ್ವ ಕಪ್​ನಲ್ಲಿ 6 ಶತಕಗಳನ್ನು ಬಾರಿಸಿದ್ದರು.

ಈ ಸುದ್ದಿಯನ್ನೂ ಓದಿ : Virat Kohli : ಚೇಸಿಂಗ್ ವೇಳೆ ಅರ್ಧ ಶತಕಗಳು; ಇಲ್ಲಿಯೂ ಒಂದು ದಾಖಲೆ ಬರೆದ ವಿರಾಟ್​

ರೋಹಿತ್ ಕೇವಲ 63 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್ಗಳೊಂದಿಗೆ ಈ ಮೈಲಿಗಲ್ಲನ್ನು ತಲುಪಿದರು. ಕೇವಲ 19 ಇನ್ನಿಂಗ್ಸ್ಗಳಲ್ಲಿ 1000 ರನ್ ಪೂರೈಸಿದ ವೇಗದ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು 36 ವರ್ಷದ ಆಟಗಾರ ಸರಿಗಟ್ಟಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

INDW vs SAW: ವಿಶ್ವ ದಾಖಲೆ ನಿರ್ಮಿಸಿದ ಭಾರತ ಮಹಿಳಾ ತಂಡ

INDW vs SAW: 603 ರನ್ ಗಳಿಸುವ ಮೂಲಕ ಮಹಿಳಾ ಟೆಸ್ಟ್​ ಕ್ರಿಕೆಟ್​ನಲ್ಲಿ(highest-team total in Women’s Test) ಅತ್ಯಧಿಕ ರನ್​ ಕಲೆಹಾಕಿದ ವಿಶ್ವ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿತು. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು. ಅಚ್ಚರಿ ಎಂದರೆ ಇದೇ ವರ್ಷ ಪರ್ತ್​ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 575 ರನ್​ಗಳಿಸಿ ಈ ದಾಖಲೆ ಬರೆದಿತ್ತು.

VISTARANEWS.COM


on

INDW vs SAW
Koo

ಚೆನ್ನೈ: ಪ್ರವಾಸಿ ದಕ್ಷಿಣ ಆಫ್ರಿಕಾ(INDW vs SAW) ವಿರುದ್ಧ ಸಾಗುತ್ತಿರುವ ಏಕೈಕ ಟೆಸ್ಟ್​ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಸಂಘಟಿತ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದೆ. ಮೊದಲ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 525 ರನ್ ಗಳಿಸಿದ್ದ ಭಾರತ ದ್ವಿತೀಯ ದಿನದಾಟದಲ್ಲಿ 78 ರನ್​ ಕಲೆ ಹಾಕಿ ಒಟ್ಟು 6 ವಿಕೆಟ್​ಗೆ 603 ರನ್​ ಬಾರಿಸಿ ಡಿಕ್ಲೇರ್​ ಘೋಷಿಸಿದೆ.

603 ರನ್ ಗಳಿಸುವ ಮೂಲಕ ಮಹಿಳಾ ಟೆಸ್ಟ್​ ಕ್ರಿಕೆಟ್​ನಲ್ಲಿ(highest-team total in Women’s Test) ಅತ್ಯಧಿಕ ರನ್​ ಕಲೆಹಾಕಿದ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು. ಅಚ್ಚರಿ ಎಂದರೆ ಇದೇ ವರ್ಷ ಪರ್ತ್​ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 575 ರನ್​ಗಳಿಸಿ ಈ ದಾಖಲೆ ಬರೆದಿತ್ತು. ಆದರೆ ಕೆಲವೇ ತಿಂಗಳ ಅಂತರದಲ್ಲಿ ಈ ದಾಖಲೆ ಪತನಗೊಂಡಿದೆ.

ಸದ್ಯ ಈ ಟೆಸ್ಟ್ ಪಂದ್ಯದಲ್ಲಿ ಭಾರತ ಬಿಗಿ ಹಿಡಿತ ಸಾಧಿಸಿದೆ. ಮೊದಲ ದಿನದಾಟಕ್ಕೆ ಅಜೇಯರಾಗಿದ್ದ ನಾಯಕಿ ಹರ್ಮನ್ ಮತ್ತು ವಿಕೆಟ್ ಕೀಪರ್ ರಿಚಾ ಘೋಷ್ ಇಂದು ಆರಂಭಗೊಂಡ ದ್ವಿತೀಯ ದಿನದಾಟದಲ್ಲಿ ಅರ್ಧಶತಕ ಬಾರಿಸಿ ಗಮನಸೆಳೆದರು. ಹರ್ಮನ್​ಪ್ರೀತ್​ 69 ರನ್ ಗಳಿಸಿದರೆ, ರಿಚಾ 86 ರನ್ ವಿಕೆಟ್​ ಒಪ್ಪಿಸಿದರು. ರಿಚಾ ಔಟಾಗುತ್ತಿದ್ದಂತೆ ಭಾರತ ತಂಡವು ಡಿಕ್ಲೇರ್ ಘೋಷಿಸಿತು. ಸದ್ಯ ಚೇಸಿಂಗ್​ ನಡೆಸುತ್ತಿರುವ ದಕ್ಷಿಣ ಆಫ್ರಿಕಾ 1 ವಿಕೆಟ್ ಕಳೆದುಕೊಂಡು 50ರ ಗಡಿ ದಾಟಿದೆ. ​

ಇದನ್ನೂ ಓದಿ IND vs SA Final: ವಿಶ್ವಕಪ್​ ಗೆಲ್ಲಲು ಕೊಹ್ಲಿ, ರೋಹಿತ್​, ದ್ರಾವಿಡ್​ಗೆ ಇದು ಕೊನೆಯ ಅವಕಾಶ!

ಮೊದಲ ದಿನದಾಟದಲ್ಲಿ ಸೊಗಸಾದ ಬ್ಯಾಟಿಂಗ್​ ನಡೆಸಿದ ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ ಶತಕ ಸಂಭ್ರಮಿಸಿದರೆ, ಇವರ ಜತೆಗಾರ್ತಿ ಶಫಾಲಿ ವರ್ಷ ಬಿರುಸಿನ ಬ್ಯಾಟಿಂಗ್​ ಮೂಲಕ ದ್ವಿಶತಕ ಬಾರಿಸಿ ಮಿಂಚಿದರು. ದಕ್ಷಿಣ ಆಫ್ರಿಕಾ ಬೌಲರ್​ಗಳನ್ನು ಬೆಂಡೆತ್ತಿದ ಇವರಿಬ್ಬರು ಮೊದಲ ವಿಕೆಟ್​ಗೆ ದಾಖಲೆಯ 292 ರನ್ ಜೊತೆಯಾಟವಾಡಿದರು. ಮಂಧಾನ 149 ರನ್ ಗಳಿಸಿದರೆ, ಶಫಾಲಿ 197 ಎಸೆತಗಳಲ್ಲಿ 205 ರನ್ ಮಾಡಿದರು. ಈ ಇನ್ನಿಂಗ್ಸ್ ನಲ್ಲಿ ಅವರು 23 ಬೌಂಡರಿ ಮತ್ತು 8 ಸಿಕ್ಸರ್ ಚಚ್ಚಿದರು. ಈ ವಿಕೆಟ್​ ಪತನದ ಬಳಿಕ ಆಡಲಿಳಿದ ಮಧ್ಯಮ ಕ್ರಮಾಂಕದ ನಂಬಿಕಸ್ತ ಆಟಗಾರ್ತಿ ಜೆಮಿಮಾ ರೋಡ್ರಿಗಸ್ 55 ರನ್ ಬಾರಿಸಿದರು.

ಮೊದಲು ವಿಕೆಟ್ 292 ರನ್ ಜೊತೆಯಾಟವಾಡಿದ ಮಂಧನಾ ಮತ್ತು ಶಫಾಲಿ ಹೊಸ ವಿಶ್ವದಾಖಲೆ ಬರೆದರು. 2004 ರಲ್ಲಿ ಕರಾಚಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನದ ಸಜ್ಜಿದಾ ಶಾ ಮತ್ತು ಕಿರಣ್ ಬಲೂಚ್ ಅವರ 241 ರನ್ ಆರಂಭಿಕ ವಿಕೆಟ್ ಜೊತೆಯಾಟದ ದಾಖಲೆಯನ್ನು ಶಫಾಲಿ ಮತ್ತು ಸ್ಮೃತಿ ಹಿಂದಿಕ್ಕಿದರು.

Continue Reading

ಕ್ರೀಡೆ

Aiden Markram: ಧೋನಿಯಂತೆ ಮಾರ್ಕ್ರಮ್​ ಕೂಡ ಲಕ್ಕಿ ಕ್ಯಾಪ್ಟನ್​; ಸಾಧನೆ ಹೀಗಿದೆ

Aiden Markram:ಐಡನ್‌ ಮಾರ್ಕ್ರಮ್ ನಾಯಕತ್ವದಲ್ಲಿ 2014ರ ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್‌ ಆಗಿತ್ತು. ಇದೀಗ ಸೀನಿಯರ್‌ ಮಟ್ಟದಲ್ಲಿಯೂ ಅವರ ನಾಯಕತ್ವದಲ್ಲೇ ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿದೆ. 32 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ ಗಡಿ ದಾಟಿದ್ದು ಕೂಡ ಇವರ ನಾಯಕತ್ವದಲ್ಲೇ.

VISTARANEWS.COM


on

Aiden Markram
Koo

ಬಾರ್ಬಡೋಸ್​: ವಿಶ್ವಕಪ್‌(T20 World Cup 2024) ಇತಿಹಾಸದಲ್ಲೇ ಮೊದಲ ಸಲ ಪ್ರಶಸ್ತಿ ಸುತ್ತಿಗೆ ನೆಗೆದು ಇತಿಹಾಸ ಬರೆಯಲು ಮುಂದಾಗಿರುವ ದಕ್ಷಿಣ ಆಫ್ರಿಕಾ(South Africa vs India Final) ತಂಡಕ್ಕೆ ಐಡನ್‌ ಮಾರ್ಕ್ರಮ್(Aiden Markram)​ ಲಕ್ಕಿ ಕ್ಯಾಪ್ಟನ್​(lucky captain) ಆಗಿದ್ದಾರೆ. ಇದು ಈಗಾಗಲೇ ಸಾಬೀತಾಗಿದೆ. ಅವರ ನಾಯಕತ್ವದ ಸಾಧನೆ ಇಂತಿದೆ.

ಹೌದು, ಐಡನ್‌ ಮಾರ್ಕ್ರಮ್ ನಾಯಕತ್ವದಲ್ಲಿ 2014ರ ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್‌ ಆಗಿತ್ತು. ಇದೀಗ ಸೀನಿಯರ್‌ ಮಟ್ಟದಲ್ಲಿಯೂ ಅವರ ನಾಯಕತ್ವದಲ್ಲೇ ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿದೆ. 32 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ ಗಡಿ ದಾಟಿದ್ದು ಕೂಡ ಇವರ ನಾಯಕತ್ವದಲ್ಲೇ. ಇದೀಗ ಫೈನಲ್​ನಲ್ಲಿ ಇವರ ಲಕ್‌ ಹೇಗಿದೆ, ಚೋಕರ್ಸ್ ಹೋಗಿ ಚಾಂಪಿಯನ್​ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಧೋನಿ 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್​ ಮತ್ತು 2011ರ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ತಮ್ಮ ನಾಯಕತ್ವದ ಮೊದಲ ಪ್ರಯತ್ನದಲ್ಲೇ ಕಪ್​ ಗೆದ್ದು ಭಾರತದ ಪಾಲಿಗೆ ಲಕ್ಕಿ ಕ್ಯಾಪ್ಟನ್​ ಎನಿಸಿಕೊಂಡಿದ್ದರು. 2013ರಲ್ಲಿ ಇವರ ನಾಯಕತ್ವದಲ್ಲೇ ಚಾಂಪಿಯನ್ಸ್​ ಟ್ರೋಫಿ ಕೂಡ ಗೆದ್ದಿತ್ತು. ಇದಾದ ಬಳಿಕ ಭಾರತ ಇದುವರೆಗೂ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ದಕ್ಷಿಣ ಆಫ್ರಿಕಾ ಕೂಡ ಇದುವರೆಗೂ ಒಂದೇ ಒಂದು ವಿಶ್ವಕಪ್​ ಗೆದ್ದಿಲ್ಲ. ಇದೀಗ ಧೋನಿಯಂತೆ ಮಾರ್ಕ್ರಮ್​ ಅವರು ದಕ್ಷಿಣ ಆಫ್ರೀಕಾಗೆ ಐತಿಹಾಸಿಕ ಕಪ್​ ಗೆಲ್ಲವು ಕಾತರದಲ್ಲಿದ್ದಾರೆ. ಅಜೇಯವಾಗಿ ಫೈನಲ್ ಪ್ರವೇಶಿಸಿರುವವ ಹರಿಣ ಪಡೆಗೆ ಈ ಬಾರಿಯಾದರೂ ಕಪ್​ ಗೆಲ್ಲುವ ಭಾಗ್ಯ ಇದೆಯಾ ಎಂದು ಕಾದು ನೋಡಬೇಕಿದೆ. ಈ ಹಿಂದೆ ಆಡಿದ ಎಲ್ಲ 7(ಏಕದಿನ, ಟಿ20) ಸೆಮಿಫೈನಲ್​ ಪಂದ್ಯದಲ್ಲಿಯೂ ಸೋಲು ಕಂಡಿತ್ತು.

ಇದನ್ನೂ ಓದಿ IND vs SA Final: ವಿಶ್ವಕಪ್​ ಗೆಲ್ಲಲು ಕೊಹ್ಲಿ, ರೋಹಿತ್​, ದ್ರಾವಿಡ್​ಗೆ ಇದು ಕೊನೆಯ ಅವಕಾಶ!

ಚೋಕರ್ಸ್​

ದಕ್ಷಿಣ ಆಫ್ರಿಕಾ ತಂಡ(South Africa) 1992ರಲ್ಲಿ ಸಿಡ್ನಿಯಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಮೊದಲ ಬಾರಿಗೆ​ ಸೆಮಿಫೈನಲ್​ ಪ್ರವೇಶಿಸಿತ್ತು. ಇನ್ನೇನು ಪಂದ್ಯ ಗೆಲ್ಲುತ್ತದೆ ಎನ್ನುವಷ್ಟರಲ್ಲಿ ಮಳೆ ಸುರಿದು ಪಂದ್ಯ ಸ್ಥಗಿತಗೊಂಡಿತು. 13 ಎಸೆತಗಳಲ್ಲಿ ಗೆಲುವಿಗೆ 22 ರನ್ ಬೇಕಿತ್ತು.​ ಮತ್ತೆ ಆಟ ಮುಂದುವರಿದಾಗ ಮೊಟ್ಟ ಮೊದಲ ಬಾರಿಗೆ ಪರಿಚವಾಗಿದ್ದ ಡಕ್​ವರ್ತ್​ ಲೂಯಿಸ್​ ನಿಯದ ಪ್ರಕಾರ ಹರಿಣ ಪಡೆಗೆ 1 ಎಸೆತದಲ್ಲಿ 22 ರನ್​ ಗಳಿಸುವ ಗುರಿ ನೀಡಲಾಯಿತು. ಈ ಪಂದ್ಯ ಸೋತ ಬಳಿಕ 1999ರಲ್ಲಿ ಬರ್ಮಿಂಗ್‌ಹ್ಯಾಮ್​ನಲ್ಲಿ ಆಸ್ಟ್ರೇಲಿಯ ವಿರುದ್ದದ ಪಂದ್ಯ ಟೈ ಆಗಿತ್ತು. ಆ ಪಂದ್ಯದಲ್ಲಿ ಆಸ್ಟ್ರೇಲಿಯ ಲೆಕ್ಕಾಚಾರದ ಮೂಲಕ ಫೈನಲ್ ಪ್ರವೇಶಿಸಿ ಕಪ್ ಗೆದ್ದಿತ್ತು. 2007 ರಲ್ಲಿ ಆಸ್ಟ್ರೇಲಿಯ ವಿರುದ್ಧ ಗ್ರಾಸ್‌ ಐಲೆಟ್‌ ನಲ್ಲಿ 7 ವಿಕೆಟ್‌ ಸೋಲು ಅನುಭವಿಸಿ ಆಘಾತಕ್ಕೆ ಗುರಿಯಾಗಿತ್ತು. 2015 ರಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಆಕ್ಲೆಂಡ್‌ ನಲ್ಲಿ 4 ವಿಕೆಟ್‌ ಸೋಲು ಅನುಭವಿಸಿ ಚೋಕರ್ಸ್ ಎಂದು ಮತ್ತೆ ಕರೆಸಿಕೊಳ್ಳುವ ಸ್ಥಿತಿ ಹರಿಣಗಳ ಪಾಲಿಗೆ ಬಂದೊದಗಿತ್ತು.

Continue Reading

ಕ್ರೀಡೆ

IND vs SA Final: ವಿಶ್ವಕಪ್​ ಗೆಲ್ಲಲು ಕೊಹ್ಲಿ, ರೋಹಿತ್​, ದ್ರಾವಿಡ್​ಗೆ ಇದು ಕೊನೆಯ ಅವಕಾಶ!

IND vs SA Final: ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌, ಹಾರ್ದಿಕ್‌ ಪಾಂಡ್ಯ, ರಿಷಭ್​ ಪಂತ್​, ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್​ ಇರುವ ಭಾರತ ತಂಡವನ್ನು ಬಲಿಷ್ಠ ಎನ್ನಲೇಬೇಕು. ಆದರೆ, ಭಾರತ ಪೂರ್ಣ ಎಚ್ಚರದಿಂದಲೇ ಫೈನಲ್​ ಆಡಬೇಕು.

VISTARANEWS.COM


on

IND vs SA Final
Koo

ಬಾರ್ಬಡೋಸ್​: 10 ವರ್ಷಗಳ ಬಳಿಕ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಯಲ್ಲಿ ಫೈನಲ್​(IND vs SA Final) ಪ್ರವೇಶಿಸಿರುವ ಭಾರತ ತಂಡ ಫೈನಲ್​ ಪಂದ್ಯ ಆಡಲು ಸಜ್ಜಾಗಿ ನಿಂತಿದೆ. ಬ್ರಿಜ್‌ಟೌನ್‌ನ(Bridgetown) “ಕೆನ್ಸಿಂಗ್ಟನ್‌ ಓವಲ್‌’(Kensington Oval) ಮೈದಾನದಲ್ಲಿ ಇಂದು ನಡೆಯುವ ಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ(South Africa vs India Final) ಸವಾಲು ಎದುರಿಸಲಿದೆ. ರೋಹಿತ್ ಶರ್ಮ ಮತ್ತು ವಿರಾಟ್​ ಕೊಹ್ಲಿಗೆ ಇದು ಬಹುತೇಕ ಕೊನೆಯ ಟಿ20 ವಿಶ್ವಕಪ್​ ಟೂರ್ನಿಯಾಗಿದೆ. ತಮ್ಮ ಅಂತಿಮ ಪ್ರಯತ್ನದಲ್ಲಾದರೂ ಕಪ್​ ಗೆದ್ದು ಸ್ಮರಣೀಯ ವಿದಾಯ ಸಿಗುವಂತಾಗಲಿ ಎಂದು ಉಭಯ ಆಟಗಾರರ ಅಭಿಮಾನಿಗಳ ಹಾರೈಕೆಯಾಗಿದೆ.

ರನ್‌ ಮಷಿನ್‌ ಖ್ಯಾತಿಯ ವಿರಾಟ್​ ಕೊಹ್ಲಿ ಈ ಬಾರಿಯ ವಿಶ್ವಕಪ್​ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಆಡಿದ 7 ಪಂದ್ಯಗಳಲ್ಲಿ ವಿರಾಟ್‌ ಗಳಿಸಿರುವುದು ಕೇವಲ 75 ರನ್‌. ಪ್ರತಿ ಐಸಿಸಿ ಟೂರ್ನಿಯಲ್ಲಿ ಅಬ್ಬರಿಸುವ ಕೊಹ್ಲಿ ಇಷ್ಟೊಂದು ಕಳಪೆ ಪ್ರದರ್ಶನ ತೋರಿದ್ದು ಇದೇ ಮೊದಲು. ಸ್ವತಃ ಕೊಹ್ಲಿ ಕೂಡ ತಮ್ಮ ಬ್ಯಾಟಿಂಗ್​ ಬಗ್ಗೆ ಚಿಂತಿಸಿ ಕಣ್ಣೀರು ಕೂಡ ಹಾಕಿದ್ದಾರೆ. 35 ವರ್ಷದ ವಿರಾಟ್ ಕೊಹ್ಲಿ ಮತ್ತು 36 ವರ್ಷದ ರೋಹಿತ್​ ಶರ್ಮ ಪಾಲಿಗೆ ಬಹುತೇಕ ಇದೇ ಕೊನೆಯ ಟಿ20 ವಿಶ್ವಕಪ್ ಆಗುವ ಸಾಧ್ಯತೆಯಿದೆ. ಹೀಗಾಗಿ ವಿರಾಟ್ ಮತ್ತು ರೋಹಿತ್​ ತಮ್ಮ ಪಾಲಿನ ಬಹುತೇಕ ಕೊನೆಯ ವಿಶ್ವಕಪ್ ಫೈನಲ್‌ನಲ್ಲಿ ಸ್ಮರಣೀಯ ಇನಿಂಗ್ಸ್ ಆಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಬೇಕಿದೆ.

ದ್ರಾವಿಡ್​ಗೆ ಸಿಗಲಿ ಸ್ಮರಣೀಯ ಉಡುಗೊರೆ

ರಾಹುಲ್​ ದ್ರಾವಿಡ್​ ಅವರಿಗೆ ಕೋಚ್​ ಆಗಿ ಇದು ಕೊನೆಯ ಟೂರ್ನಿಯಾಗಿದೆ. ಈ ಟೂರ್ನಿ ಮುಕ್ತಾಯದ ಬಳಿಕ ಅವರು ಕೋಚಿಂಗ್​ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. 2022ರಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ರಾಹುಲ್​ ದ್ರಾವಿಡ್​ಗೆ ಕೋಚ್​ ಆಗಿ ಮೊದಲ ಸವಾಲಾಗಿತ್ತು. ಇಲ್ಲಿ ಕಪ್​ ಗೆಲ್ಲಲು ತಂಡ ವಿಫಲವಾಗಿತ್ತು. ಬಳಿಕ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ನಲ್ಲಿಯೂ ಭಾರತ ಫೈನಲ್​ನಲ್ಲಿ ಸೋಲು ಕಂಡಿತ್ತು. ಇದೀಗ ನಿರ್ಗಮನದ ಹಂತದಲ್ಲಿರುವ ದ್ರಾವಿಡ್​ ತಮ್ಮ ಕೊನೆಯ ಮಾರ್ಗದರ್ಶನದಲ್ಲಿ ಭಾರತ ತಂಡ ಕಪ್​ ಗೆದ್ದರೆ ಅವರಿಗೂ ಕೂಡ ವಿಶ್ವಕಪ್​ ಗೆದ್ದ ಸಂತಸವಿರುತ್ತದೆ. ಜತೆಗೆ ಸ್ಮರಣೀಯ ಉಡುಗೊರೆಯೊಂದು ಲಭಿಸಲಿದೆ. ಇದು ನೆರವೇರಲಿ ಎನ್ನುವುದು ಕೊಟ್ಯಂತರ ಅಭಿಮಾನಿಗಳ ಹಾರೈಕೆಯಾಗಿದೆ.

ಇದನ್ನೂ ಓದಿ IND vs SA Final: ಭಾರತ ತಂಡ ವಿಶ್ವಕಪ್​ ಗೆಲ್ಲಲಿ; ಪ್ರಯಾಗ್ ರಾಜ್​ನಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ

ಭಾರತ ಬಲಿಷ್ಠ ಆದರೆ ಎಚ್ಚರ ಅಗತ್ಯ


ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌, ಹಾರ್ದಿಕ್‌ ಪಾಂಡ್ಯ, ರಿಷಭ್​ ಪಂತ್​, ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್​ ಇರುವ ಭಾರತ ತಂಡವನ್ನು ಬಲಿಷ್ಠ ಎನ್ನಲೇಬೇಕು. ಆದರೆ, ಭಾರತ ಪೂರ್ಣ ಎಚ್ಚರದಿಂದಲೇ ಫೈನಲ್​ ಆಡಬೇಕು. ಎದುರಾಳಿಯನ್ನು ಒಮ್ಮೆಯೂ ಕಡೆಗಣಿಸುವುದು ಸಾಧ್ಯವೇ ಇಲ್ಲ. ಯಾರು ಯಾರನ್ನು ಕೆಡವಿ ಬೀಳಿಸುತ್ತಾರೆ ಎಂಬುದು ಟಿ20 ಮಾದರಿಯಲ್ಲಿ ಅಂದಾಜಿಸುವುದಕ್ಕೆ ಕಷ್ಟ ಸಾಧ್ಯ. ಕೆಲವೇ ಓವರ್‌ಗಳಲ್ಲಿ ಪಂದ್ಯದ ಚಿತ್ರಣವೇ ಬದಲಾಗುವುದು ಟಿ20 ಪಂದ್ಯಗಳ ಶಕ್ತಿ.

Continue Reading

ಕ್ರಿಕೆಟ್

IND vs SA Final: ಭಾರತ ತಂಡ ವಿಶ್ವಕಪ್​ ಗೆಲ್ಲಲಿ; ಪ್ರಯಾಗ್ ರಾಜ್​ನಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ

IND vs SA Final: 2014ರಲ್ಲಿ ಭಾರತ ಟಿ20 ಫೈನಲ್​ ಪ್ರವೇಶಿಸಿತ್ತು. ಆದರೆ ಲಂಕಾ ವಿರುದ್ಧ ಸೋಲು ಕಂಡು ನಿರಾಸೆ ಅನುಭವಿಸಿತ್ತು. ಇದೀಗ 10 ವರ್ಷಗಳ ಬಳಿಕ ಈ ಕೂಟದಲ್ಲಿ ಭಾರತ ಫೈನಲ್​ ಪಂದ್ಯ ಆಡುತ್ತಿದೆ. ಎದುರಾಳಿ ದಕ್ಷಿಣ ಆಫ್ರಿಕಾಕ್ಕೆ ಇದು ಚೊಚ್ಚಲ ಫೈನಲ್​ ಪಂದ್ಯವಾಗಿದೆ.

VISTARANEWS.COM


on

IND vs SA Final
Koo

ಉತ್ತರ ಪ್ರದೇಶ: 2023ರ ಏಕದಿನ ವಿಶ್ವಕಪ್‌ ಗೆಲ್ಲುವ ಸುವರ್ಣಾವಕಾಶ ಕಳೆದುಕೊಂಡ ಭಾರತದ ಮುಂದೆ ಇದೀಗ ಟಿ20 ವಿಶ್ವಕಪ್(T20 World Cup 2024)​ ಗೆಲ್ಲುವ ಅವಕಾಶವೊಂದು ಬಂದು ನಿಂತಿದೆ. ಇಂದು(ಶನಿವಾರ) ನಡೆಯುವ ಫೈನಲ್(IND vs SA Final)​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಟಿ20 ವಿಶ್ವಕಪ್‌ ಭಾರತಕ್ಕೆ ಒಲಿಯಲಿ ಎಂಬುದು ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳ ಹಾರೈಕೆ. ಭಾರತ ತಂಡದ ಯಶಸ್ಸಿಗಾಗಿ ಅಭಿಮಾನಿಗಳು ಮತ್ತು ಕೆಲ ಸಾಧು ಸಂತರು ಉತ್ತರಪ್ರದೇಶದ ಪ್ರಯಾಗ್ ರಾಜ್​ನಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

2013ರ ಬಳಿಕ ಭಾರತ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಈ ಬಾರಿಯಾದರೂ ಫೈನಲ್​ನಲ್ಲಿ ಗೆದ್ದು ಭಾರತದ ಪ್ರಶಸ್ತಿ ಬರ ನೀಗಲಿ ಎನ್ನುವ ನಿಟ್ಟಿನಲ್ಲಿ ಪ್ರಯಾಗ್ ರಾಜ್​ನಲ್ಲಿ ಅಭಿಮಾನಿಗಳು ಟೀಮ್​ ಇಂಡಿಯಾ ಆಟಗಾರಾದ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಸೇರಿ ತಂಡದ ಆಟಗಾರರ ಫೋಟೊವನ್ನು ಇರಿಸಿ ಪೂಜೆ, ಭಜನೆ ಮತ್ತು ಗಂಗಾ ಪೂಜೆ ನೆರವೇರಿಸಿ ಯಶಸ್ಸಿಗೆ ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ IND vs SA Final: ಫೈನಲ್​ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ನಡುಕ ಹುಟ್ಟಿಸಿದ ಅಂಪೈರ್​!

2014ರಲ್ಲಿ ಭಾರತ ಟಿ20 ಫೈನಲ್​ ಪ್ರವೇಶಿಸಿತ್ತು. ಆದರೆ ಲಂಕಾ ವಿರುದ್ಧ ಸೋಲು ಕಂಡು ನಿರಾಸೆ ಅನುಭವಿಸಿತ್ತು. ಇದೀಗ 10 ವರ್ಷಗಳ ಬಳಿಕ ಈ ಕೂಟದಲ್ಲಿ ಭಾರತ ಫೈನಲ್​ ಪಂದ್ಯ ಆಡುತ್ತಿದೆ. ಎದುರಾಳಿ ದಕ್ಷಿಣ ಆಫ್ರಿಕಾಕ್ಕೆ ಇದು ಚೊಚ್ಚಲ ಫೈನಲ್​ ಪಂದ್ಯವಾಗಿದೆ. ಇತ್ತಂಡಗಳು ಕೂಡ ಟೂರ್ನಿಯ ಅಜೇಯ ತಂಡಗಳಾಗಿ ಫೈನಲ್​ ಪ್ರವೇಶಿಸಿರುವ ಕಾರಣ ಈ ಪ್ರಶಸ್ತಿ ಸಮರ ತೀವ್ರ ಕುತೂಹಲ, ರೋಮಾಂಚನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.

ಪಿಚ್​ ರಿಪೋರ್ಟ್


ಬ್ರಿಜ್‌ಟೌನ್‌ನಲ್ಲಿ ಈವರೆಗೆ 50 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ತಂಡ 31ರಲ್ಲಿ ಗೆಲುವು ಕಂಡಿದೆ. ಈ ಟೂರ್ನಿಯಲ್ಲಿ ಭಾರತ ಬ್ರಿಜ್‌ಟೌನ್‌ನಲ್ಲಿ ಒಂದು ಪಂದ್ಯ ಆಡಿ ಗೆಲುವು ಕಂಡಿದೆ. ದಕ್ಷಿಣ ಆಫ್ರಿಕಾ ಇಲ್ಲಿ ಇನ್ನೂ ಆಡಿಲ್ಲ. ಟಾಸ್​ ಗೆದ್ದ ತಂಡ ಮೊದಲು ಬ್ಯಾಟಿಂಗ್​ ಆಯ್ದುಕೊಂಡರೆ ಉತ್ತಮ.

ಭಾರತ ತಂಡದ ದೊಡ್ಡ ಸಮಸ್ಯೆ ಎಂದರೆ ಲೀಗ್, ಸೆಮಿಫೈನಲ್​ನಲ್ಲಿ ಎಷ್ಟೇ ಉತ್ತಮ ಪ್ರದರ್ಶನ ತೋರಿದರೂ ಕೂಡ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಂಪೂರ್ಣ ನರ್ವಸ್​ ಆಗಿ ಆಡುವುದು. ಒಂದು ವಿಕೆಟ್​ ಬಿದ್ದರೆ ಸಾಕು ಬಳಿಕ ಕ್ರೀಸ್​ಗಿಳಿವ ಬ್ಯಾಟರ್​ಗಳು ಭಯದಿಂದಲೇ ಆಡಲು ಮುಂದಾಗಿ ಸತತವಾಗಿ ವಿಕೆಟ್​ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುತ್ತಾರೆ. ಕಳೆದ ಏಕದಿನ ವಿಶ್ವಕಪ್​ ಫೈನಲ್​, ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಇದಕ್ಕೆ ಉತ್ತಮ ನಿದರ್ಶನ. ಹೀಗಾಗಿ ನಾಳೆ ನಡೆಯುವ ಫೈನಲ್​ ಪಂದ್ಯದಲ್ಲಿ ಬ್ಯಾಟರ್​ಗಳು ಮತ್ತು ಬೌಲರ್​ಗಳು ವಿಚಲಿತರಾಗದೆ ಆಡಬೇಕು.

Continue Reading
Advertisement
Varalaxmi Sarathkumar invite PM Narendra Modi for wedding
ಸಿನಿಮಾ3 mins ago

Varalaxmi Sarathkumar: ಪ್ರಧಾನಿ ಮೋದಿಗೆ ಮದುವೆ ಆಮಂತ್ರಣ ನೀಡಿದ ನಟಿ ವರಲಕ್ಷ್ಮಿ

Murder Case
ಬೆಂಗಳೂರು13 mins ago

Murder Case: ಕುಡಿದ ಅಮಲಿನಲ್ಲಿ ಕಟ್ಟಡದಿಂದ ಸ್ನೇಹಿತನನ್ನೇ ತಳ್ಳಿ ಕೊಂದ ಯುವಕ!

Gruha Lakshmi
ಕರ್ನಾಟಕ26 mins ago

Gruha Lakshmi: ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಖಾತೆಗೆ ಇಂದು ಅಥವಾ ನಾಳೆ ಹಣ ಜಮೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸ್ಪಷ್ಟನೆ

Road Accident
ಕ್ರೈಂ26 mins ago

Road Accident: ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಬೈಕ್‌ನಿಂದ ಬಿದ್ದು ನವ ವಿವಾಹಿತೆ ಸಾವು

INDW vs SAW
ಕ್ರೀಡೆ26 mins ago

INDW vs SAW: ವಿಶ್ವ ದಾಖಲೆ ನಿರ್ಮಿಸಿದ ಭಾರತ ಮಹಿಳಾ ತಂಡ

Karnataka CM Row
ಪ್ರಮುಖ ಸುದ್ದಿ30 mins ago

Karnataka CM Row: ‘ಗೌಡ’ ಸಿಎಂ ಆಯ್ತು, ಈಗ ‘ಲಿಂಗಾಯತ’ ಸಿಎಂ ಕೂಗು; ರಂಭಾಪುರಿ ಶ್ರೀ ಹೇಳಿದ ಹೆಸರಿದು!

Dengue Fever
ಚಿಕ್ಕಮಗಳೂರು60 mins ago

Dengue Fever : ಡೆಂಗ್ಯೂ ಮಹಾಮಾರಿಗೆ ಚಿಕ್ಕಮಗಳೂರಿನಲ್ಲಿ ಬಾಲಕಿ ಬಲಿ; ಈವರೆಗೆ ಐವರು ಸಾವು

Aiden Markram
ಕ್ರೀಡೆ1 hour ago

Aiden Markram: ಧೋನಿಯಂತೆ ಮಾರ್ಕ್ರಮ್​ ಕೂಡ ಲಕ್ಕಿ ಕ್ಯಾಪ್ಟನ್​; ಸಾಧನೆ ಹೀಗಿದೆ

Fahadh Faasil in trouble faces Human Rights Commission action
ಮಾಲಿವುಡ್1 hour ago

Fahadh Faasil: ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್ ವಿರುದ್ಧ ದೂರು ದಾಖಲು

Viral Video
ವೈರಲ್ ನ್ಯೂಸ್1 hour ago

Viral Video: ಖೈದಿ ಜೊತೆಗೆ ಮಹಿಳಾ ಪೊಲೀಸ್‌ ಅಧಿಕಾರಿ ಲೈಂಗಿಕ ಕ್ರಿಯೆ; ಭಾರೀ ವೈರಲ್‌ ಆಗ್ತಿದೆ ಈ ವಿಡಿಯೋ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ3 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ19 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

ಟ್ರೆಂಡಿಂಗ್‌