ಮನೆ ಬಾಗಿಲಿಗೆ ಮೆಟ್ರೋ : ಶೀಘ್ರವೇ ಓಡಾಡಲಿದೆ ನಿಯೋ ರೈಲು - Vistara News

ಬೆಂಗಳೂರು

ಮನೆ ಬಾಗಿಲಿಗೆ ಮೆಟ್ರೋ : ಶೀಘ್ರವೇ ಓಡಾಡಲಿದೆ ನಿಯೋ ರೈಲು

ನಗರದಲ್ಲಿ ಇದೇ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿರುವ ನಿಯೋ ಮೆಟ್ರೋ ರೈಲು
ಬಸ್‌ ಮಾದರಿಯಲ್ಲಿ ನಿಯೋ ಜನರಿಗೆ ಭರ್ಜರಿ ಆಫರ್‌

VISTARANEWS.COM


on

ನಿಯೋ ಮೆಟ್ರೊ ಕಾಲ್ಪನಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ರಾಜ್ಯದ ರಾಜಧಾನಿಗೂ ಹಾಗೂ ಟ್ರಾಫಿಕ್‌ಗೂ ಅದೇನೋ ಅವಿನಾಭಾವ ಸಂಬಂಧ. ಕೊರೋನಾ ಕೊಂಚ ಕಡಿಮೆ ಆದರೂ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ಒದ್ದಾಡೋದು ಮಾತ್ರ ತಪ್ಪಿದ್ದಲ್ಲ. ಅಷ್ಟೇ ಅಲ್ಲದೇ ಮೆಟ್ರೋ ನಿಲ್ದಾಣದಿಂದ ಜನರಿಗೆ ಮನೆಯನ್ನ ಸೇರಲು ಕಿಲೋಮೀಟರ್‌ನಷ್ಟು ನಡೆಯೋ ಫಜೀತಿ ಮಾತ್ರ ತಪ್ಪಿದ್ದಲ್ಲ. ಆದರೆ ಇದಕ್ಕೆಲ್ಲ ಬ್ರೇಕ್‌ ಹಾಕಲು ಬರ್ತಾ ಇದೆ ನಿಯೋ ಮೆಟ್ರೋ.

ಏನಿದು ನಿಯೋ ಮೆಟ್ರೋ ?

ಸಾಮಾನ್ಯವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳು ಅಂದಾಜು 14 ಮೀಟರ್‌ ಉದ್ದವಿರುತ್ತವೆ. ಸದ್ಯ ಬೆಂಗಳೂರು ಮೆಟ್ರೊ ರೈಲ್‌ನ ಪ್ರತಿ ಬೋಗಿ 20.8 ಉದ್ದವಿರುತ್ತದೆ. ನಗರದಲ್ಲಿ ಇದೇ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿರುವ ನಿಯೋ ಮೆಟ್ರೋ ರೈಲು 18 ರಿಂದ 25 ಮೀ ಉದ್ದವಿದ್ದು, ಬಸ್‌ ಮಾದರಿಯಲ್ಲಿ ಬೋಗಿಯನ್ನು ಹೊಂದಿದೆ. ಸಾಮಾನ್ಯ ಮೆಟ್ರೋ ರೈಲಿಗಳಿಗಿಂತ ಬೋಗಿಯು ಚಿಕ್ಕದಾಗಿದ್ದು ಮತ್ತು ಹಗುರವಾಗಿರುವುದು ಇನ್ನೂ ವಿಶೇಷ. ನಿಯೋ ರಸ್ತೆಯ ಸಮತಟ್ಟಾದ ಹಾಗೂ ಏರಿಳಿತದ ಪ್ರದೇಶಗಳಲ್ಲಿ ಚಲಿಸಲಿವೆ.

ಇದನ್ನೂ ಓದಿ : ಒಂದು ವರ್ಷದಿಂದ ಕೊರೆಯುತ್ತಿದ್ದ ಸುರಂಗ ಪೂರ್ಣ, Namma Metro ದಿಂದ ಮತ್ತೊಂದು ಮೈಲಿಗಲ್ಲು

ನಿಯೋ ಸ್ಪೇಷಾಲಿಟಿ :

ಒಂದೇ ಸಮಯದಲ್ಲಿ 250 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಸಹ ಹೊಂದಿದೆ. ಈ ನಿಯೋ ರೈಲಿನ ಕೋಚ್‌ಗೆ ಟೈರ್‌ಗಳನ್ನು ಅಳವಡಿಸಲಾಗುತ್ತಿದ್ದು, ವಿದ್ಯುತ್‌ ರೈಲಿನ ಮಾದರಿಯಲ್ಲಿ ವಿದ್ಯುತ್‌ ಸಂಪರ್ಕದಲ್ಲೇ ಚಲಿಸುತ್ತದೆ. ಓವರ್‌ ಹೆಡ್‌ ಎಲೆಕ್ಟ್ರಿಕ್‌ ಟ್ರಾಕ್ಷನ್‌ ಹೊಂದಿರುವ ಟ್ರಾಲಿಬಸ್‌ ವ್ಯವಸ್ಥೆಗೆ ʼಟೆಕ್‌ ಹಳ್ಳಿ ಎಕ್ಸ್‌ಪ್ರೆಸ್‌ʼ ಎಂಬ ಕರೆಯುವ ಸಾಧ್ಯತೆಗಳು ಇದೆ. ಹವಾನಿಯಂತ್ರಿತ ಮತ್ತು ಸ್ವಯಂ ಚಾಲಿತ ಬಾಗಿಲು ಮುಚ್ಚುವ ವ್ಯವಸ್ಥೆ, ಲೆವೆಲ್‌ ಬೋರ್ಡಿಂಗ್‌, ಆರಾಮದಾಯಕ ಆಸನಗಳು, ಪ್ರಕಟಣೆ ವ್ಯವಸ್ಥೆ ಮತ್ತು ಎಲೆಕ್ಟ್ರಾನಿಕ್‌ ಪ್ರದರ್ಶನ ಫಲಕ ಇರಲಿದೆ.

ಎಲೆಕ್ಟ್ರಾನಿಕ್‌ ಸಿಟಿ ಇಂಡಸ್ಟ್ರೀಯಲ್‌ ಟೌನ್‌ಶಿಪ್‌ ಅಥಾರಿಟಿಯಿಂದ ಮೆಟ್ರೋ ನಿಯೋ ರೈಲು ವ್ಯವಸ್ಥೆ ಪರಿಚಯಿಸಲಾಗುತ್ತಿದೆ. ಮೇಟ್ರೋ ಫೀಡರ್‌ ಆಗಿಯೂ ಕೂಡ ಇದು ಕಾರ್ಯ ನಿರ್ವಹಿಸಲಿದೆ. ಮೆಟ್ರೊ ರೈಲು ಇಳಿದ ನಂತರ ಮನೆಯವರೆಗೆ ತೆರಳಲು ಸಂಪರ್ಕ ಸಾಧನಗಳಿಲ್ಲ ಎಂಬ ಕೊರಗಿಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಿದೆ.

ಖಾಸಗಿ ಸಹಭಾಗಿತ್ವ :

ಬಿಎಂಆರ್‌ಸಿಎಲ್‌ ನಿಯೋ ರೈಲಿಗೆ ಬೇಕಾದಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಕಂಪನಿಗಳ ಎಂಪ್ಲಾಯಿಸ್‌ಗೆ ಉಚಿತ ಪ್ರಯಾಣ ನೀಡುತ್ತಿರುವುದು ವಿಶೇಷ.

ಮುಖ್ಯ ಉದ್ದೇಶ :

ಮೆಟ್ರೋ ಸೇವೆ ನಗರದ ಪ್ರತಿಯೊಂದು ದಿಕ್ಕಿನಲ್ಲಿಯೂ ವಿಸ್ತರಣೆ ಹೊಂದಿದ್ದು, ಆದರೆ ಜನವಸತಿ ಅಥವಾ ಸಣ್ಣ ಪ್ರದೇಶಗಳಿಗೆ ಮೆಟ್ರೋ ಸೇವೆ ನೀಡಲು ಸಾಧ್ಯವಿಲ್ಲ. ಇಂತಹ ಸ್ಥಳಗಳಲ್ಲಿ ನಿಯೋ ಮೆಟ್ರೋ, ಮೆಟ್ರೋ ಲೈಟ್‌ ಸೇರಿ ವಿವಿಧ ಸೇವೆ ಆರಂಭಿಸಲು ಈ ಮುಂಚೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡಿತ್ತು. ಮೆಟ್ರೋದ ಪ್ರಮುಖ ಯೋಜನೆಗಳಲ್ಲಿ ಒಂದಾದ ಹಳದಿಮಾರ್ಗದಲ್ಲಿ (ಆರ್‌.ವಿ. ರಸ್ತೆ-ಬೊಮ್ಮಸಂದ್ರ) ಎರಡು ಮೆಟ್ರೋ ನಿಲ್ದಾಣಗಳು ಪ್ರಾರಂಭವಾಗಲಿದೆ. ಇಲ್ಲಿಂದಎಲೆಕ್ಟ್ರಾನಿಕ್‌ ಸಿಟಿ ಒಳಭಾಗದ ವಿವಿಧ ಪ್ರದೇಶಗಳಿಗೆ ಹೋಗಲು ಕಾರು, ಬಸ್‌ ಮತ್ತು ಇತರೆ ವಾಹನಗಳನ್ನು ಬಳಸಲಾಗುತ್ತಿದೆ.

ಇದನ್ನೂ ಓದಿ : ಕಲ್ಲಿದ್ದಲು ಕೊರತೆ, ಇನ್ನಷ್ಟು ಪವರ್‌ ಕಟ್‌ ಅನುಭವಿಸಲು ರೆಡಿಯಾಗಿ!

ಜನರಿಗೆ ಭರ್ಜರಿ ಆಫರ್‌ :

ಮೆಟ್ರೋದಿಂದ ಇಳಿದ ಸಾರ್ವಜನಿಕರಿಗೆ ಎಲೆಕ್ಟ್ರಾನಿಕ್ಸ್‌ ಸಿಟಿ ಟೌನ್‌ಶಿಪ್‌ನಲ್ಲಿರುವ ಕಂಪನಿಗಳು, ಕಚೇರಿಗಳು, ಕೈಗಾರಿಕೆಗಳು, ಕಾರ್ಖಾನೆಗಳು, ಜನವಸತಿ, ಅಪಾರ್ಟ್‌ಮೆಂಟ್‌ಗಳು ಹೋಗಲು ಎಲೆಕ್ಟ್ರಾನಿಕ್ಸ್‌ ಸಿಟಿ ಇಂಡಸ್ಟ್ರಿಯಲ್‌ ಟೌನ್‌ಶಿಪ್‌ ಅಥಾರಿಟಿ (ಎಲ್ಸಿಟಾ) ವತಿಯಿಂದ ನಿಯೋ ಮೆಟ್ರೋ ನೆಟ್‌ವರ್ಕ್‌ ಸಿದ್ಧಪಡಿಸಲಾಗುತ್ತಿದೆ.

ಪ್ರತೀ ಕಿ.ಮೀ ಗೆ ಅಂದಾಜು 130 ಕೋಟಿ ರೂ. ವೆಚ್ಚದಂತೆ ಒಟ್ಟು 650 ಕೋಟಿ ರೂ ವೆಚ್ಚವಾಗುವ ಸಾದ್ಯತೆಗಳಿವೆ. ನಿಯೋ ನೆಟ್‌ವರ್ಕ್‌ನ ಮೊದಲ ಹಂತದಲ್ಲಿ ಇನ್ಪೋಸಿಸ್‌ ಪೌಂಡೇಷನ್‌, ಕೋನಪ್ಪನ ಅಗ್ರಹಾರ ನಿಲ್ದಾಣ, ಟಿಮ್ಕೆನ್‌, ವೆಲಂಕಣಿ, 3 ಎಂ.ಇಂಡಿಯಾ. ಎಲೆಕ್ಟ್ರಾನಿಕ್ಸ್‌ ಸಿಟಿ ಹಂತ-3, ವಿಪ್ರೋ, ಇಂಟರ್‌ ಪ್ಲೆಕ್ಸ್‌, ಎಲೆಕ್ಟ್ರಾನಿಕ್ಸ್‌, ಹ್ಯಾಪಿಯೆಸ್ಟ್‌ ಮೈಂಡ್ಸ್‌, ಎಲೆಕ್ಟ್ರಾನಿಕ್ಸ್‌ ಸಿಟಿ ಮೆಟ್ರೋ ಸ್ಟೇಷನ್‌ ಸೇರಿ ಒಟ್ಟು 10 ನಿಲ್ದಾಣ ನಿರ್ಮಿಸಲಾಗುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Karnataka rain : ವಾರದವರೆಗೂ ಬಿಡುವು ನೀಡಿದ್ದ ವರುಣ ನಿನ್ನೆ ಶನಿವಾರದಿಂದ ಮತ್ತೆ ಅಬ್ಬರಿಸಲು ಶುರು ಮಾಡಿದ್ದಾನೆ. ಭಾನುವಾರ ಸಂಜೆ ವೇಳೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ (Rain news) ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

VISTARANEWS.COM


on

By

Karnataka Rain
Koo

ಬೆಂಗಳೂರು: ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಮತ್ತು 30-40 ಕಿ.ಮೀ ಗಾಳಿ ಬೀಸುವ (Karnataka Rain) ಸಾಧ್ಯತೆಯಿದೆ. ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಚದುರಿದಂತೆ ಹಾಗೂ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ.

ತುಮಕೂರು, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಾಮರಾಜನಗರ ಸಾಧಾರಣ ಮಳೆಯಾದರೆ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಯಾದಗಿರಿ, ಬೆಳಗಾವಿ, ಧಾರವಾಡ, ಗದಗದಲ್ಲಿ, ವಿಜಯನಗರ ಮತ್ತು ಹಾವೇರಿಯ ಬಹುತೇಕ ಕಡೆಗಳಲ್ಲಿ ಮಳೆಯು ಅಬ್ಬರಿಸಲಿದೆ.

ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲೂ ಗುಡುಗು ಸಹಿತ ಸಾಧಾರಣ ಮಳೆಯಾದರೆ, ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ.

ರಾಜಧಾನಿಯಲ್ಲಿ ಅಬ್ಬರದ ಮಳೆ

ಬೆಂಗಳೂರಿನಲ್ಲಿ ಭಾನುವಾರ ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಸೂಚನೆ ಇದೆ. ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಿಸಿಲಿನಿಂದ ಕಂಗೆಟ್ಟ ಸಿಟಿ ಮಂದಿಗೆ ರಾತ್ರಿ ಪೂರ್ತಿ ಸುರಿದ ಮಳೆಯಿಂದಾಗಿ ವಾತಾವರಣವೂ ಕೂಲ್‌ ಆಗಿದೆ.

ಇದನ್ನೂ ಓದಿ: Weather Updates:ಇಡೀ ರಾತ್ರಿ ಭಾರೀ ಮಳೆ; ಮುಂಗಾರು ಆರಂಭದಲ್ಲೇ ಬೆಂಗಳೂರು ಅಸ್ತವ್ಯಸ್ತ

ಮೈಸೂರಿನಲ್ಲಿ ಗಾಳಿ-ಮಳೆಗೆ ನೆಲಕ್ಕುರುಳಿದ ಬಾಳೆ ಬೆಳೆ

ಮೈಸೂರಿನಲ್ಲಿ ವಿವಿಧೆಡೆ ಭಾರಿ ಮಳೆ ಗಾಳಿಗೆ ಬಾಳೆ ಬೆಳೆ ನೆಲಕ್ಕುರುಳಿದೆ. ಮಳೆ, ಗಾಳಿಯು ಕೈಯಿಗೆ ಬಂದ ತುತ್ತು ಬಾಯಿಗೆ ಇಲ್ಲದಂತೆ ಮಾಡಿದೆ. ಶನಿವಾರ ಸುರಿದ ಮಳೆ ಹಾಗೂ ಗಾಳಿಗೆ ಅವಾಂತರವೇ ಸೃಷ್ಟಿಯಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಚಿಕ್ಕಹೊಮ್ಮ, ದೊಡ್ಡ ಹೊಮ್ಮ ಸೇರಿದಂತೆ ಹಲವೆಡೆ ಗಾಳಿ ಮಳೆಗೆ ಹತ್ತಾರು ಎಕರೆ ಬಾಳೆ ನಾಶವಾಗಿದೆ. ಚಿಕ್ಕಹೊಮ್ಮ ಗ್ರಾಮದ ನಾಗೇಂದ್ರ ಎಂಬುವವರ ಜಮೀನಲ್ಲಿ ಎರಡು ಸಾವಿರ ಬಾಳಿ ಗಿಡ ನೆಲಕ್ಕುರುಳಿದ್ದು ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸೂಕ್ತ ಪರಿಹಾರಕ್ಕೆ ರೈತರು ಆಗ್ರಹಿಸಿದ್ದಾರೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ವ್ಯಾಪ್ತಿಯಲ್ಲಿ ಮಳೆಗೆ ಅಪಾರ ಪ್ರಮಾಣದ ತಂಬಾಕು ಹಾಗೂ ಶುಂಠಿ ಬೆಳೆ ನಾಶವಾಗಿದೆ. ಪೆಂಜಹಳ್ಳಿ, ಹರಳಹಳ್ಳಿ, ಕಿರಂಗೂರು, ಹಿಂಡಗೂಡ್ಲು ಸುತ್ತ ಮುತ್ತ ಸಾಕಷ್ಟು ಮಳೆ ಅವಾಂತರವೇ ಸೃಷ್ಟಿಯಾಗಿತ್ತು. ತಂಬಾಕು ಸಸಿ ನಾಟಿ ಮಾಡಿ ಗೊಬ್ಬರ ಹಾಕಿದ್ದ ಜಮೀನಿನಲ್ಲಿ ಮಳೆಯ ನೀರು ನಿಂತು ಬೆಳೆ ಹಾನಿಯಾಗಿತ್ತು. ಹರಳಹಳ್ಳಿ ಮಾದಳ್ಳಿಕಟ್ಟೆ, ಹುಲಿಕೆರೆ, ಆದ್ವಾಳಕೆರೆ, ಸೇರಿದಂತೆ ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿವೆ.

ಕೆಜಿಎಫ್‌ನಲ್ಲಿ ಭರ್ಜರಿ ಮಳೆ

ಕೋಲಾರ ಜಿಲ್ಲೆಯ ವಿವಿಧಡೆ ತಡರಾತ್ರಿ ಗುಡುಗು ಸಿಡಿಲ ಧಾರಾಕಾರ ಮಳೆಯಾಗಿದೆ. ಕೆಜಿಎಫ್‌ನಲ್ಲಿ 6.4 ಸೆಂ.ಮೀ ಅತಿ ಹೆಚ್ಚು ಮಳೆಯಾಗಿದೆ. ಬಂಗಾರಪೇಟೆ, ಮಾಲೂರು, ಕೋಲಾರ ಸೇರಿದಂತೆ ಹಲವು ಕಡೆ ಮಳೆಯಾಗಿದೆ. ಕೆಜಿಎಫ್‌ನ ಬೆಮಲ್ ಬಡಾವಣೆಯಲ್ಲಿ ಭಾರಿ ಮಳೆಗೆ ಬೃಹತ್ ಮರವೊಂದು ನೆಲಕ್ಕುರಲಿದೆ. ತಡರಾತ್ರಿ ರಸ್ತೆಗೆ ಮರ ಉರುಳಿದ ಪರಿಣಾಮ ಕೆಲಕಾಲ ಸಂಚಾರವು ಅಸ್ತವ್ಯಸ್ತಗೊಂಡಿತ್ತು.

ಚಲಿಸುತ್ತಿದ್ದ ಬೈಕ್‌ ಮೇಲೆ ಬಿದ್ದ ಮರ, ಸವಾರ ಗಂಭೀರ

ಇನ್ನೂ ವಿಜಯನಗರದ ನಿವಾಸಿ ಬೈಕ್‌ನಲ್ಲಿ ಬರುವಾಗ ಗಾಳಿ ಮಳೆಗೆ ಮರ ಬಿದ್ದಿದೆ. ಪರಿಣಾಮ ಬೈಕ್ ಸವಾರ ಇಮ್ಯುನಿಯಲ್ ಎಂಬಾತ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಜಿಎಫ್ ನ ಮಾರಿಕೊಪ್ಪ ಮತ್ತು ಆಂಧ್ರದ ಕುಪ್ಪಂ ರಾಮಕುಪ್ಪಂ ಬಂಗಾರಪೇಟೆ ಮಾಲೂರು ಕಡೆ ಬಿರುಸಿನ ಮಳೆಯಾಗಿದೆ .ಹಳ್ಳ ಕೊಳ್ಳಗಳು ತುಂಬಿ ನೀರು ಹರಿದಿದೆ. ಇನ್ನು ಎರಡು ದಿನಗಳ ಕಾಲ ಕೋಲಾರ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ವಿಜಯಪುರದಲ್ಲಿ ಗಾಳಿ ರಭಸ

ವಿಜಯಪುರ ಜಿಲ್ಲೆಯ ಹೂವಿನ ಹಿಪ್ಪರಗಿ ಭಾಗದಲ್ಲಿ ಭಾರಿ ಮಳೆ ಸುರಿದಿದೆ. ಭೀಕರ ಬರಗಾಲದಿಂದ ಕಂಗೆಟ್ಟಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಮಳೆಯಿಂದಾಗಿ ರೈತರ ಮೊಗದಲ್ಲಿ ಸಂತಸ ಮೂಡಿದೆ. ರಭಸವಾಗಿ ಸುರಿದ ಮಳೆಯಿಂದಾಗಿ ಕೆರೆ ಹಾಗೂ ರಸ್ತೆಗಳು ತುಂಬಿ ಹರಿದಿದ್ದವು. ಭಾರಿ ಗಾಳಿ ಸಮೇತವಾಗಿ ಸತತ ಮೂರು ಗಂಟೆ ಸುರಿದ ಮಳೆಗೆ ಮರಗಳು‌ ಹಾಗೂ ವಿದ್ಯುತ್ ಕಂಬ ನೆಲಕ್ಕೆ ಬಿದ್ದಿದ್ದವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Hassan MP Prajwal Revanna case: ಮೊಂಡಾಟ ಬಿಡದ ಪ್ರಜ್ವಲ್‌; ಇಂದೇ ಸ್ಥಳ ಮಹಜರಿಗೆ SIT ಪ್ಲ್ಯಾನ್‌

Hassan MP Prajwal Revanna case:ಇಂದು ಎಸ್‌ಐಟಿ ಪ್ರಜ್ವಲ್‌ ರೇವಣ್ಣ ಅವರನ್ನು ಹೊಳೆನರಸೀಪುರಕ್ಕೆ ಕರೆದೊಯ್ದು ಅಲ್ಲಿ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸದ್ಯ ಎಮ್ ಪಿ ಚುನಾವಣಾ ಎಕ್ಸಿಟ್ ಪೋಲ್ ನಡೀತಿದ್ದು, ಪ್ರಜ್ವಲ್ ರೇವಣ್ಣ ಗೆಲ್ಲುವ ಸಾಧ್ಯತೆ ಎಂಬ ಮಾತಿರುವ ಹಿನ್ನೆಲೆ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಬೆಂಬಲಿಗರು, ಅಭಿಮಾನಿಗಳು ಸೇರಬಹುದಾದ ಸಂಭವವಿದೆ. ಹೀಗಾಗಿ ಹೀಗಾಗಿ ಇವತ್ತು ಅಥವಾ ನಾಳೆ ಸ್ಥಳ ಮಹಜರು ಮಾಡಿದ್ರೆ ಮುಂದಿನ ಹಂತದ ಪ್ರಕ್ರಿಯೆ ಸುಲಭವಾಗುತ್ತದೆ ಎಂದು ಪ್ಲ್ಯಾನ್‌ ಮಾಡಿರೋ ಎಸ್‌ಐಟಿ, ಸ್ಥಳ ಮಹಜರು ನಂತರ ಮತ್ತೆ ಪ್ರಜ್ವಲ್ ರೇವಣ್ಣ ವಿಚಾರಣೆ ಮುಂದುವರೆಸಲಿದೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣ (physical abuse) ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassan MP Prajwal Revanna case) ಮೂರನೇ ದಿನದ ಕಸ್ಟಡಿ ಮುಂದುವರೆದಿದ್ದು, ಇಂದೇ ಸ್ಥಳ ಮಹಜರಿಗೆ ಎಸ್ಐಟಿ ಪ್ಲಾನ್ ಮಾಡಿದೆ. ಕಳೆದ ಎರಡು ದಿನಗಳಿಂದ ವಿಚಾರಣೆ ವೇಳೆ ಪ್ರಜ್ವಲ್‌ ಏನನ್ನೂ ಬಾಯ್ಬಿಡದಿರುವುದ ಎಸ್‌ಐಟಿಗೆ ಭಾರೀ ತಲೆನೋವಾಗಿದೆ. ಎಸ್‌ಐಟಿ (SIT) ಹಲವಾರು ಪ್ರಶ್ನೆಗಳ ಮೂಲಕ ಗ್ರಿಲ್‌ ಮಾಡಿದ್ದರೂ ಎಲ್ಲವೂ ಷಡ್ಯಂತರ.. ನಾನೇನು ಮಾಡಿಲ್ಲ ಅಂತಲೇ ಪ್ರಜ್ವಲ್‌ ಉತ್ತರ ನೀಡಿದ್ದಾರೆ.

ಇಂದು ಎಸ್‌ಐಟಿ ಪ್ರಜ್ವಲ್‌ ರೇವಣ್ಣ ಅವರನ್ನು ಹೊಳೆನರಸೀಪುರಕ್ಕೆ ಕರೆದೊಯ್ದು ಅಲ್ಲಿ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸದ್ಯ ಎಮ್ ಪಿ ಚುನಾವಣಾ ಎಕ್ಸಿಟ್ ಪೋಲ್ ನಡೀತಿದ್ದು, ಪ್ರಜ್ವಲ್ ರೇವಣ್ಣ ಗೆಲ್ಲುವ ಸಾಧ್ಯತೆ ಎಂಬ ಮಾತಿರುವ ಹಿನ್ನೆಲೆ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಬೆಂಬಲಿಗರು, ಅಭಿಮಾನಿಗಳು ಸೇರಬಹುದಾದ ಸಂಭವವಿದೆ. ಹೀಗಾಗಿ ಹೀಗಾಗಿ ಇವತ್ತು ಅಥವಾ ನಾಳೆ ಸ್ಥಳ ಮಹಜರು ಮಾಡಿದ್ರೆ ಮುಂದಿನ ಹಂತದ ಪ್ರಕ್ರಿಯೆ ಸುಲಭವಾಗುತ್ತದೆ ಎಂದು ಪ್ಲ್ಯಾನ್‌ ಮಾಡಿರೋ ಎಸ್‌ಐಟಿ, ಸ್ಥಳ ಮಹಜರು ನಂತರ ಮತ್ತೆ ಪ್ರಜ್ವಲ್ ರೇವಣ್ಣ ವಿಚಾರಣೆ ಮುಂದುವರೆಸಲಿದೆ.

ವಿಚಾರಣೆ ವೇಳೆ ಮೊಂಡಾಟ

ಪ್ರಜ್ವಲ್‌ ರೇವಣ್ಣ ಎಸ್‌ಐಟಿ ವಿಚಾರಣೆ ವೇಳೆ ಭಾರೀ ಮೊಂಡಾಟ ತೋರಿದ್ದಾರೆ ಎನ್ನಲಾಗಿದೆ. ಎಷ್ಟು ವಿಚಾರಣೆ ಮಾಡಿದ್ರೂ ಪ್ರಜ್ವಲ್‌ ಸರಿಯಾಗಿ ಬಾಯಿ ಬಿಡ್ತಿಲ್ಲ. ವಿಚಾರಣೆ ವೇಳೆ ಎದ್ದೇಳೋದು.. ಆಕಡೆ ಈಕಡೆ ಓಡಾಡೋದು.. ಏನೂ ಗೊತ್ತಿಲ್ಲ ಅಂತಾನೆ ಉತ್ತರ ನೀಡುತ್ತಾ ಎಸ್ಐಟಿ ಅಧಿಕಾರಿಗಳಿಗೆ ತಲೆ ಕೆಡಿಸಿದ್ದಾರೆ. ಏನು ಕೇಳಿದ್ರೂ ನಂಗೆ ಗೊತ್ತಿಲ್ಲ.. ನಾನೇನು ಮಾಡಿಲ್ಲ ಅಂತಿರುವ ಪ್ರಜ್ವಲ್‌ರನ್ನು ಮೊಬೈಲ್ ಬಗ್ಗೆ ಮತ್ತೆ ಬಾಯಿ ಬಿಡಿಸಲು ಎಸ್ಐಟಿ ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಯಾವ ಮೊಬೈಲ್..? ಇರುವ ಮೊಬೈಲ್ ಏರ್ಪೋರ್ಟ್ ನಲ್ಲೇ ಕೊಟ್ಟೆ.. ಯಾವ ಮೊಬೈಲ್ ಬಗ್ಗೆ ಮಾತನಾಡ್ತಿದೀರಾ..? ಹಳೆ ಮೊಬೈಲ್ ಕಳೆದೋಗಿದೆ ಎಂದು ಉಡಾಫೆ ಉತ್ತರ ಕೊಟ್ಟಿದ್ದಾರೆ ಎನ್ನಲಾಗಿದೆ. ಪ್ರಜ್ವಲ್‌ರ ಈಗಿನ ಮೊಬೈಲ್‌ನಲ್ಲಿ ಯಾವುದೇ ರೀತಿ ವಿಡಿಯೋಗಳು, ಮೆಸೇಜ್ ಗಳು ಪತ್ತೆಯಾಗಿಲ್ಲ. ಸದ್ಯ ಡಿಜಿಟಲ್ ಎವಿಡೆನ್ಸ್ ಕಲೆ ಹಾಕಲು ಎಸ್ಐಟಿ, ಎಲ್ಲಾ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದೆ.

ಈಗಾಗಲೇ ಪ್ರಜ್ವಲ್‌ ಅವರ ವಿಚಾರಣೆ ಮಾಡಿ 161 ಹೇಳಿಕೆಯನ್ನು ಎಸ್‌ಐಟಿ ದಾಖಲಿಸಿದೆ. ಅದರಲ್ಲಿ ಮೊಬೈಲ್‌ ಕುರಿತು ದಾಖಲಿಸಿದೆ. ನೀವು ಹೇಳುತ್ತಿರುವ ಮೊಬೈಲ್ ನನ್ನ ಬಳಿ ಇಲ್ಲ. ಕಳೆದ ವರ್ಷವೇ ಫೋನ್ ಕಳೆದು ಹೋಗಿದ್ದು, ಆ ಬಗ್ಗೆ ಹೊಳೆನರಸೀಪುರ ಠಾಣೆಯಲ್ಲಿ ದೂರು ಕೂಡ ನೀಡಿದ್ದೇನೆ ಎಂದು ಪ್ರಜ್ವಲ್‌ ಹೇಳಿದ್ದಾರೆ. ಈ ಹೇಳಿಕೆ ಸತ್ಯಾಸತ್ಯತೆಯನ್ನು ಎಸ್‌ಐಟಿ ಪರಿಶೀಲಿಸಲಿದೆ.

ನೀವು ತೋರಿಸಿರುವ ವಿಡಿಯೋಗಳಲ್ಲಿ ಇರುವುದು ನಾನಲ್ಲ. ಅವರೆಲ್ಲ ನನಗೆ ಪರಿಚಯ ಅಷ್ಟೇ. ನಾನು ಯಾರನ್ನೂ ಅತ್ಯಾಚಾರ ಮಾಡಿಲ್ಲ. ಅತ್ಯಾಚಾರ ಆರೋಪಗಳಿಗೂ ನನಗೂ ಯಾವ ಸಂಬಂಧವೂ ಇಲ್ಲ. ವಿಡಿಯೋಗಳ ಬಗ್ಗೆ ನಂಗಷ್ಟು ಗೊತ್ತಿಲ್ಲ ಎಂದು ಪ್ರಜ್ವಲ್‌ ಹೇಳಿದ್ದಾರೆ. ವೈರಲ್ ಆಗಿರುವ ವಿಡಿಯೋಗಳನ್ನು ತೋರಿಸಿ ಪ್ರಶ್ನಿಸಿದಾಗ ಈ ಉತ್ತರ ದೊರೆತಿದೆ. ತನ್ನ ಮೇಲಿರುವ ಎಲ್ಲ ಆರೋಪಗಳನ್ನು ಪ್ರಜ್ವಲ್‌ ತಳ್ಳಿ ಹಾಕಿದ್ದಾರೆ.

ಇದನ್ನೂ ಓದಿ:Exit Poll 2024 : ಕರ್ನಾಟಕದಲ್ಲಿ ಬಿಜೆಪಿಗೆ ನಷ್ಟ, ಕಾಂಗ್ರೆಸ್​ಗೆ ಲಾಭ ; ಜೆಡಿಎಸ್​ಗೆ +1

Continue Reading

ಮಳೆ

Weather Updates:ಇಡೀ ರಾತ್ರಿ ಭಾರೀ ಮಳೆ; ಮುಂಗಾರು ಆರಂಭದಲ್ಲೇ ಬೆಂಗಳೂರು ಅಸ್ತವ್ಯಸ್ತ

Weather Updates: ಕಳೆದ 24 ಗಂಟೆಯಲ್ಲಿ ಯಾವ ಭಾಗದಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ ಅಂತ ನೋಡೋದಾದ್ರೆ ಪೀಣ್ಯ ಇಂಡಸ್ಟ್ರಿಯಲ್ ಏರಿಯಾ 7.8ಸೆಂ.ಮೀ, ಹೊರಮಾವು 7 ಸೆಂ.ಮೀ, ವಿದ್ಯಾಪೀಠ 6.3ಸೆಂ.ಮೀ, ಹಂಪಿನಗರ 6.2ಸೆಂ.ಮೀ, ಕೊಡಿಗೆಹಳ್ಳಿ 6ಸೆಂ.ಮೀ, ಹೇರೋಹಳ್ಳಿ 5.9 ಸೆಂಮೀ, ದೊಡ್ಡನೆಕುಂದಿ 5.8ಸೆಂಮೀ, ಜಕ್ಕೂರು 5.6 ಸೆಂ.ಮೀ, ನಾಗೇನಹಳ್ಳಿ 5.3ಸೆಂ.ಮೀ, ಯಲಹಂಕಾ 5.3 ಸೆಂ.ಮೀ, RR ನಗರ 5.2 ಸೆಂ.ಮೀ ಮಳೆಯಾಗಿದೆ.

VISTARANEWS.COM


on

Weather Updates
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಸುರಿದ ಮಳೆ(Weather Updates)ಗೆ ಜನಜೀವನ ಅಸ್ತವ್ಯಸ್ತವಾಗಿದೆ. ನಿನ್ನೆ ರಾತ್ರಿ ಇಡೀ ಹಲವಡೆ ಭಾರೀ ಮಳೆಯಾಗಿದ್ದು, ಮುಂಗಾರು ಆರಂಭದಲ್ಲೇ ಪ್ರವಾಹ ಸ್ಥಿತಿ ಎದುರಾಗಿದೆ. ಇನ್ನು ರಸ್ತೆ, ಮನೆಗಳಿಗೆ ನುಗ್ಗಿದ ನೀರು ಒಂದೇ ದಿನಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಇನ್ನು ಭಾರೀ ಗಾಳಿ ಮಳೆಗೆ ಮರಗಳು ರಸ್ತೆಗುರುಳಿದ್ದು, ಸಂಚಾರಕ್ಕೆ ಭಾರೀ ಅಡ್ಡಿಯಾಗಿತ್ತು.

ಕಳೆದ 24 ಗಂಟೆಯಲ್ಲಿ ಯಾವ ಭಾಗದಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ ಅಂತ ನೋಡೋದಾದ್ರೆ ಪೀಣ್ಯ ಇಂಡಸ್ಟ್ರಿಯಲ್ ಏರಿಯಾ 7.8ಸೆಂ.ಮೀ, ಹೊರಮಾವು 7 ಸೆಂ.ಮೀ, ವಿದ್ಯಾಪೀಠ 6.3ಸೆಂ.ಮೀ, ಹಂಪಿನಗರ 6.2ಸೆಂ.ಮೀ, ಕೊಡಿಗೆಹಳ್ಳಿ 6ಸೆಂ.ಮೀ, ಹೇರೋಹಳ್ಳಿ 5.9 ಸೆಂಮೀ, ದೊಡ್ಡನೆಕುಂದಿ 5.8ಸೆಂಮೀ, ಜಕ್ಕೂರು 5.6 ಸೆಂ.ಮೀ, ನಾಗೇನಹಳ್ಳಿ 5.3ಸೆಂ.ಮೀ, ಯಲಹಂಕಾ 5.3 ಸೆಂ.ಮೀ, RR ನಗರ 5.2 ಸೆಂ.ಮೀ ಮಳೆಯಾಗಿದೆ.

ಯಲಚೇನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನ ಪರದಾಡುವಂತಾಗಿತ್ತು. ಇದರಿಂದ ರೊಚ್ಚಿಗೆದ್ದ ಜನ ಬೀದಿಗಿಳಿದು ಮಳೆ ನೀರಲ್ಲೇ ನಿಂತು ರಸ್ತೆ ತಡೆದು ಬಿಬಿಎಂಪಿ ವಿರುದ್ಧ ಜನ ಪ್ರತಿಭಟನೆ ನಡೆಸಿದರು. ಸರ್ಜಾಪುರ, ರಾಜಪಾಳ್ಯ, ಮಾರತ್ತಹಳ್ಳಿ, ಯಲಹಂಕಾ ಸುತ್ತಮುತ್ತ ರಸ್ತೆಗಳು ಕೆರೆಯಂತಾಗಿದ್ದು, ಬಿಬಿಎಂಪಿ ವಿರುದ್ಧ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದರು.

ಇನ್ನು ಬೆಂಗಳೂರು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮುಂಗಾರು ಅಬ್ಬರ ಹೆಚ್ಚಾಗಲಿದ್ದು, ಈ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ದಕ್ಷಿಣ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಮತ್ತು 30-40 ಕಿ.ಮೀ ಗಾಳಿ ಬೀಸುವ (Karnataka weather Forecast) ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ವ್ಯಾಪಕ ಲಘುದಿಂದ ಸಾಧಾರಣ ಮಳೆ ಸಾಧ್ಯತೆ ಇದೆ. ತುಮಕೂರು, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಾಮರಾಜನಗರ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಯಾದಗಿರಿ, ಬೆಳಗಾವಿ, ಧಾರವಾಡ, ಗದಗದಲ್ಲಿ ಸಾಧಾರಣ ಮಳೆಯಾಗಲಿದೆ. ವಿಜಯನಗರ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:Assault Case: ಯುವತಿಯ ಪ್ರಿಯಕರನ ಕುತ್ತಿಗೆಗೆ ಚಾಕುವಿನಿಂದ ಇರಿದ ಮಾಜಿ ಪ್ರಿಯಕರ!

ಮಲೆನಾಡಿನ ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

Continue Reading

ಮಳೆ

Karnataka Weather : ಮೇಲ್ಮೈ ಸುಳಿಗಾಳಿ ಎಫೆಕ್ಟ್‌; ಗುಡುಗು, ಮಿಂಚು ಸಹಿತ ಮಳೆ ಸಾಧ್ಯತೆ

Rain News : ರಾಜ್ಯಾದ್ಯಂತ ಗುಡುಗು ಸಹಿತ ಮಧ್ಯಮ ಮಳೆಯಾಗಲಿದ್ದು, ಗಾಳಿ ವೇಗವು 30-40 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

VISTARANEWS.COM


on

By

Karnataka weather Forecast
Koo

ಬೆಂಗಳೂರು: ದಕ್ಷಿಣ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ (Rain News) ಸಾಧ್ಯತೆಯಿದೆ. ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಮತ್ತು 30-40 ಕಿ.ಮೀ ಗಾಳಿ ಬೀಸುವ (Karnataka weather Forecast) ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ವ್ಯಾಪಕ ಲಘುದಿಂದ ಸಾಧಾರಣ ಮಳೆ ಸಾಧ್ಯತೆ ಇದೆ. ತುಮಕೂರು, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಾಮರಾಜನಗರ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಯಾದಗಿರಿ, ಬೆಳಗಾವಿ, ಧಾರವಾಡ, ಗದಗದಲ್ಲಿ ಸಾಧಾರಣ ಮಳೆಯಾಗಲಿದೆ. ವಿಜಯನಗರ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಮಲೆನಾಡಿನ ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: World Milk Day: ಹಾಲಿಗೊಂದು ದಿನವೇ ಬೇಕೆಂದಿಲ್ಲ, ವರ್ಷವಿಡೀ ಆಚರಿಸಬಹುದು!

ಬೇಸಿಗೆಯ ತಾಪಕ್ಕೆ ಮೂಗಿನಲ್ಲಿ ರಕ್ತಸ್ರಾವವೇ? ತಡೆಯಲು ಇಲ್ಲಿವೆ ಸರಳ ಉಪಾಯ

ಚಳಿಗಾಲದಲ್ಲಿ ಮಾತ್ರವಲ್ಲ, ಬೇಸಿಗೆಯಲ್ಲೂ ಮೂಗಿನಲ್ಲಿ ರಕ್ತಸ್ರಾವ ಆಗುವುದು ಸಾಮಾನ್ಯ. ಆದರೆ ಹಾಗೇಕಾಗುತ್ತದೆ? ಹಾಗೆ ಆಗದಂತೆ ತಡೆಯುವುದಕ್ಕೆ ಸಾಧ್ಯವಿಲ್ಲವೇ- ಈ ಎಲ್ಲ ಮಾಹಿತಿಗಳ ಜೊತೆಗೆ ಅದನ್ನು ತಡೆಯುವ ಸರಳ (Nosebleeds In Summer) ಉಪಾಯಗಳು ಇಲ್ಲಿವೆ. ಬೇಸಿಗೆಯಲ್ಲಿ ಕಾಡುವ ಹಲವು ರೀತಿಯ ಆರೋಗ್ಯ ಸಮಸ್ಯೆಗಳ ಪೈಕಿ ಮೂಗಿನಲ್ಲಿ ರಕ್ತ ಸೋರುವುದೂ ಒಂದು. ಅತಿ ಬಿಸಿಯಾದ ಮತ್ತು ಶುಷ್ಕ ವಾತಾವರಣವಿದ್ದಾಗ ಈ ಸಮಸ್ಯೆ ಕಾಡುವುದು ಹೆಚ್ಚು. ಅತಿಯಾದ ಚಳಿಯ ಜೊತೆಗಿನ ಒಣ ಹವೆ ಇದ್ದರೂ ಈ ತೊಂದರೆ ಕಾಡಬಹುದು. ಆದರೆ ಹೆಚ್ಚಿನ ಜನ ಬೇಸಿಗೆಯಲ್ಲಿ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಅಲ್ಪಸ್ವಲ್ಪ ರಕ್ತ ಸೋರುತ್ತಿದ್ದರೆ ಇದನ್ನು ತಡೆಯುವುದಕ್ಕೆ ಕೆಲವು ಮನೆಮದ್ದುಗಳು ಸಹಾಯ ಮಾಡಬಹುದು. ಆದರೆ ಮೂಗಿನಲ್ಲಿ ಹೆಚ್ಚು ರಕ್ತಸ್ರಾವ ಆಗುತ್ತಿದ್ದರೆ ವೈದ್ಯರನ್ನು ಕಾಣಬೇಕಾದೀತು. ಮೂಗಿನಲ್ಲಿ ರಕ್ತ ಸೋರುವುದಕ್ಕೆ ಕಾರಣಗಳನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ಒಣಗಿದ ಬಿಸಿ ಹವೆಯಿಂದಾಗಿ ಮೂಗಿನ ಒಳ ಭಾಗದಲ್ಲಿರುವ ಸೂಕ್ಷ್ಮ ರಕ್ತನಾಳಗಳು ಒಡೆದಾಗ ಉಂಟಾಗುವ ಸಮಸ್ಯೆಯಿದು. ಕೆಲವೊಮ್ಮೆ ಸೋಂಕಿನಿಂದಲೂ ಈ ಸಮಸ್ಯೆ ಕಾಣಬಹುದು. ಅತಿಯಾಗಿ ರಕ್ತಸ್ರಾವ ಆಗುತ್ತಿದ್ದರೆ, ಬೇರೆಯದೇ ಸಮಸ್ಯೆಯನ್ನಿದು ಸೂಚಿಸಬಹುದು. ಆದರೆ ಬೇಸಿಗೆಯ ಕಾರಣದಿಂದಲೇ ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ, ಕೆಲವು ಮನೆಮದ್ದುಗಳು ಇದಕ್ಕೆ ಉಪಶಮನ ನೀಡುತ್ತವೆ.

drink Water night

ನೀರು ಕುಡಿಯಿರಿ

ಇದಕ್ಕಿರುವ ಅತ್ಯಂತ ಸರಳವಾದ ಮದ್ದೆಂದರೆ ನೀರು ಕುಡಿಯುವುದು. ಹೆಚ್ಚಿನ ನೀರು ದೇಹ ಸೇರಿದಂತೆ ಕೋಶಗಳಲ್ಲಿರುವ ಶುಷ್ಕತೆ ಕಡಿಮೆಯಾಗುತ್ತದೆ. ಇದರಿಂದ ಮೂಗಿನಲ್ಲಿರುವ ಮ್ಯೂಕಸ್‌ ಕೋಶಗಳು ಸಹ ತಮ್ಮ ತೇವವನ್ನು ಕಾಪಿಟ್ಟುಕೊಳ್ಳುವುದಕ್ಕೆ ಸಹಾಯವಾಗುತ್ತದೆ. ಅಂದರೆ, ಒಣ ಹವೆಯ ಪ್ರತಿಕೂಲ ಪರಿಣಾಮ ಬೀರದಂತೆ ತಡೆಯುವುದಕ್ಕೆ ಇದು ಸುಲಭದ ಉಪಾಯ.

ಹ್ಯುಮಿಡಿಫಯರ್‌

ಬೇಸಿಗೆಯ ನೆವದಿಂದ ಎಷ್ಟೋ ಬಾರಿ ಅತಿಯಾಗಿ ಫ್ಯಾನ್‌ ಅಥವಾ ಎಸಿ ಬಳಸುತ್ತೇವೆ. ಇದರಿಂದ ಮನೆಯ ಅಥವಾ ಕಚೇರಿಯ ವಾತಾವರಣದಲ್ಲಿ ಶುಷ್ಕತೆ ಹೆಚ್ಚಾಗುತ್ತದೆ. ನೈಸರ್ಗಿಕವಾದ ಬಿಸಿ ಗಾಳಿಯ ಜೊತೆಗೆ ಇದೂ ಸಹ ಸಮಸ್ಯೆಗಳನ್ನು ಹೆಚ್ಚಿಸಬಹುದು. ಹಾಗಾಗಿ ವಾತಾವರಣದ ತೇವಾಂಶವನ್ನು ಹೆಚ್ಚಿಸುವಂಥ ಹ್ಯುಮಿಡಿಫಯರ್‌ ಬಳಸುವುದು ಇನ್ನೊಂದು ಮಾರ್ಗ. ಇದರಿಂದ ಮೂಗಿನ ಅಂಗಾಂಶಗಳು ಹಾನಿಗೊಳ್ಳುವುದನ್ನು ತಡೆಯಬಹುದು.

Moisturizer

ಮಾಯಿಶ್ಚರೈಸರ್‌ ಬಳಕೆ

ಮೂಗಿನ ಒಳ ಭಾಗ ಒಣಗಿ ಬಿರಿಯದಂತೆ ತಡೆಯಲು ಮಾಯಿಶ್ಚರೈಸರ್‌ ಬಳಕೆ ಮಾಡುವುದು ಉಪಯುಕ್ತ. ಇದಕ್ಕಾಗಿ ಇರುವ ಜೆಲ್‌ ಇಲ್ಲವೇ ಸ್ಟ್ರೇ ಬಳಸಬಹುದು. ಸಾಲೈನ್‌ ಸ್ಪ್ರೇ ಬಳಕೆಯೂ ಉಪಯುಕ್ತವಾದೀತು. ಇವನ್ನೆಲ್ಲ ಹೊಸದಾಗಿ ಖರೀದಿಸಿ ತರುವಷ್ಟು ವ್ಯವಧಾನ ಇಲ್ಲದಿದ್ದರೆ, ಸರಳವಾಗಿ ಕೊಬ್ಬರಿ ಎಣ್ಣೆಯನ್ನು ಮೂಗಿನ ಒಳಭಾಗದ ಅಂಗಾಂಶಗಳಿಗೆ ಹೆಚ್ಚಿ. ಇದು ಪರಿಣಾಮಕಾರಿಯಾಗಿ ತೇವವನ್ನು ಹಿಡಿದಿಡುತ್ತದೆ.

ಮುಚ್ಚಿಕೊಳ್ಳಿ

ತೀವ್ರ ತಾಪದ ಹೊತ್ತಿನಲ್ಲಿ ಮನೆಯಿಂದ ಹೊರಗೆ ಹೋಗುವಾಗ ಮುಖಕ್ಕೆ ಮಾಸ್ಕ್‌ ಹಾಕುವುದು ಸಹಾಯಕ. ಇದರಿಂದ ಒಣ ಹವೆಯನ್ನು ಉಸಿರಾಡುವುದು ಸ್ವಲ್ಪ ಮಟ್ಟಿಗಾದರೂ ತಪ್ಪಿಸಬಹುದು. ತಿಳಿ ಬಣ್ಣದ ದೊಡ್ಡ ಹ್ಯಾಟ್‌ ಧರಿಸುವುದರಿಂದ ಮುಖದ ಮೇಲೆ ಬಿಸಿಲು ನೇರವಾಗಿ ಬೀಳದಂತೆ ಮಾಡಬಹುದು. ಈ ಕ್ರಮಗಳೆಲ್ಲ ಸಣ್ಣವೇ ಆದರೂ, ಒಟ್ಟಾರೆಯಾಗಿ ಸಮಸ್ಯೆಯನ್ನು ದೂರ ಮಾಡುವಲ್ಲಿ ನೆರವಾಗುತ್ತವೆ.

ಇದನ್ನೂ ಓದಿ: Mango For Diabetes: ಮಧುಮೇಹಿಗಳೂ ಮಾವಿನಹಣ್ಣಿನ ರುಚಿ ಸವಿಯಬಹುದೇ? ಇಲ್ಲಿದೆ ಉತ್ತರ!

ಮಾಡಬೇಡಿ

ಮೂಗನ್ನು ಶುಚಿಗೊಳಿಸುವ ನೆವದಲ್ಲಿ ನಾಸಿಕದ ಮೇಲೆ ಯಾವುದೇ ರೀತಿಯಲ್ಲೂ ತೀರಾ ಒತ್ತಡ ಹಾಕಬೇಡಿ. ಈಗಾಗಲೇ ಮೂಗಿನಲ್ಲಿ ರಕ್ತ ಸೋರುತ್ತಿದ್ದರಂತೂ ಈ ಬಗ್ಗೆ ಹೆಚ್ಚಿನ ಎಚ್ಚರ ವಹಿಸಿ. ಮೂಗಿನ ಮೇಲೆ ಒತ್ತಡ ಹಾಕಿದರೆ ಬಿರಿದ ಕೋಶಗಳು ದುರಸ್ತಿಯಾಗುವುದು ನಿಧಾನವಾಗುತ್ತದೆ ಅಥವಾ ಇನ್ನಷ್ಟು ಬಿರಿದು ಸಮಸ್ಯೆಯನ್ನೇ ಸೃಷ್ಟಿಸುತ್ತವೆ. ಅಲರ್ಜಿಗಳನ್ನು ಹತ್ತಿಕ್ಕಿ. ದಿನವಿಡೀ ಜೋರಾಗಿ ಸೀನುತ್ತಲೇ ಇದ್ದರೆ, ಮೂಗು ಸೋರುವಾಗ ರಕ್ತಸ್ರಾವ ಆಗುವುದು ಖಚಿತ.

Winter transitions to summer

ಆಹಾರ

ಆರೋಗ್ಯಕರವಾದ ಆಹಾರವನ್ನು ಕಡ್ಡಾಯವಾಗಿ ಪಾಲಿಸಿ. ಸೆಕೆಯ ನೆವವೊಡ್ಡಿ ಅತಿಯಾದ ತಣ್ಣಗಿನ ಪೇಯಗಳನ್ನು ಕುಡಿಯುವುದು, ಐಸ್‌ಕ್ರೀಮ್‌ ಮೆಲ್ಲುವುದು- ಇವೆಲ್ಲ ಮೂಗಿನ ಸಮಸ್ಯೆಗಳನ್ನು ಹೆಚ್ಚಿಸಬಹುದು; ಗಂಟಲಿನ ಸೋಂಕಿಗೆ, ಶೀತ-ನೆಗಡಿಗೆ ಕಾರಣವಾಗಬಹುದು. ವಿಟಮಿನ್‌ ಸಿ ಹೆಚ್ಚಿರುವ ಆಹಾರವನ್ನು ವಿಫುಲವಾಗಿ ಸೇವಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Raveena Tandon attacked In Mumbai After Being Accused Of Rash Driving
ಬಾಲಿವುಡ್6 mins ago

Raveena Tandon: ರವೀನಾ ಟಂಡನ್ ಕಾರು ಅಪಘಾತ; ನಟಿ ಹೊಡೆಯಬೇಡಿ ಪ್ಲೀಸ್ ಎನ್ನುತ್ತಿರುವ ವಿಡಿಯೊ ನೋಡಿ!

gold rate today
ಕರ್ನಾಟಕ14 mins ago

Gold Rate Today: ಬಂಗಾರ ಪ್ರಿಯರಿಗೆ ಶುಭ ಸುದ್ದಿ; ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ

Drowned in water
ಚಿಕ್ಕಬಳ್ಳಾಪುರ33 mins ago

Drowned in Water : ನೀರಿನಲ್ಲಿ ಮುಳುಗಿ ಮುಂಬೈ ಮೂಲದ ಇಬ್ಬರು ಬಾಲಕಿಯರು ಸಾವು

Virat Kohli
ಕ್ರೀಡೆ34 mins ago

Virat Kohli: ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿ ಸ್ವೀಕರಿಸಿದ ವಿರಾಟ್ ಕೊಹ್ಲಿ

Exit Poll 2024
ದೇಶ41 mins ago

Exit poll 2024: ಮೂರು ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ ಸೀಟು 400 ದಾಟಲಿದೆ!

Karnataka Rain
ಮಳೆ1 hour ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Bhavani Revanna hide Not Present For SIT Questioning At Home
ಕರ್ನಾಟಕ1 hour ago

Bhavani Revanna: ಭವಾನಿ ರೇವಣ್ಣ ಕಣ್ಣಾಮುಚ್ಚಾಲೆ ಆಟ; ಎಸ್ ಐ ಟಿಗೆ ಅರೆಸ್ಟ್ ಮಾಡಿ ಜೈಲಿಗಟ್ಟುವ ಹಠ!

IND vs PAK
ಕ್ರಿಕೆಟ್1 hour ago

IND vs PAK: ಇಂಡೋ-ಪಾಕ್​ ಹೈವೋಲ್ಟೇಜ್​ ಟಿ20 ಪಂದ್ಯ ವೀಕ್ಷಿಸಲು ಅಭಿಮಾನಿಗಳ ಹಿಂದೇಟು; ಇನ್ನೂ ಮಾರಾಟವಾಗಿಲ್ಲ ಟಿಕೆಟ್​

Foeticide Case Foeticide another Case in Bagalkot
ಬಾಗಲಕೋಟೆ2 hours ago

Foeticide Case: ಬಾಗಲಕೋಟೆಯಲ್ಲಿ ಮತ್ತೊಂದು ಭ್ರೂಣ ಹತ್ಯೆ: ಗಾಢ ನಿದ್ರೆಯಲ್ಲಿದ್ದಾರಾ ಅಧಿಕಾರಿಗಳು?

Healthy Sandwich Spread
ಆರೋಗ್ಯ2 hours ago

Healthy Sandwich Spread: ಮನೆಯಲ್ಲೇ ಮಾಡಿ ಕಡಿಮೆ ಕ್ಯಾಲರಿಯ ಆರೋಗ್ಯಕರ ಸ್ಯಾಂಡ್‌ವಿಚ್‌ ಸ್ಪ್ರೆಡ್‌!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 hour ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು19 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ7 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು7 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌