Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು? - Vistara News

ಕಿರುತೆರೆ

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials TRP: ಅತಿದೊಡ್ಡ ರಿಯಾಲಿಟಿ ಶೋ ಎಂದು ಖ್ಯಾತಿ ಪಡೆದಿರುವ ಬಿಗ್ ಬಾಸ್ (Bigg Boss) ನಗರ ಭಾಗದಲ್ಲಿ 5.7 ರೇಟಿಂಗ್ ಪಡೆದಿದೆ. ಇನ್ನು ಧಾರಾವಾಹಿಯಲ್ಲಿ ಅಮೃತಧಾರೆ ಏಳನೇ ಸ್ಥಾನಕ್ಕೆ ಕುಸಿದಿದೆ.

VISTARANEWS.COM


on

Bigg Boss- Saregamapa 20 average TRP
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಧಾರಾವಾಹಿಗಳ (Kannada Serials TRP) ಹೊರತಾಗಿ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳು ಕೂಡ ಅಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಧಾರಾವಾಹಿಗಳ ಮಧ್ಯೆ ಎಷ್ಟು ಸ್ಪರ್ಧೆಗಳು ಇವೆಯೋ ಹಾಗೇ ರಿಯಾಲಿಟಿ ಶೋಗಳ ಮಧ್ಯೆ ಕೂಡ ಇದೆ. ಅತಿದೊಡ್ಡ ರಿಯಾಲಿಟಿ ಶೋ ಎಂದು ಖ್ಯಾತಿ ಪಡೆದಿರುವ ಬಿಗ್ ಬಾಸ್ (Bigg Boss) ನಗರ ಭಾಗದಲ್ಲಿ 5.7 ರೇಟಿಂಗ್ ಪಡೆದಿದೆ. ಇನ್ನು ಧಾರಾವಾಹಿಯಲ್ಲಿ ಅಮೃತಧಾರೆ ಏಳನೇ ಸ್ಥಾನಕ್ಕೆ ಕುಸಿದಿದೆ.

ರಿಯಾಲಿಟಿ ಶೋಗಳು

ಜೀ ವಾಹಿನಿಯ ʻಸರಿಗಮಪ ಸೀಸನ್‌ 20ʼ 8.2 ಟಿಆರ್​ಪಿ ಪಡೆದಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫಿನಾಲೆಗೆ 5.1 ರೇಟಿಂಗ್ ಸಿಕ್ಕಿದೆ. ವಾರದ ದಿನದಲ್ಲಿ ಬಿಗ್‌ ಬಾಸ್‌ ರಿಯಾಲಿಟಿ ಶೋ ನಗರ ಭಾಗದಲ್ಲಿ 5.7 ರೇಟಿಂಗ್ ಪಡೆದಿದೆ. ವೀಕೆಂಡ್​ನಲ್ಲಿ 7.1 ರೇಟಿಂಗ್ ಶೋಗೆ ಸಿಕ್ಕಿದೆ.

ಪುಟ್ಟಕ್ಕನ ಮಕ್ಕಳು

ಉಮಾಶ್ರೀ ಮೊದಲಾದವರು ನಟಿಸುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಟಿಆರ್​ಪಿ ಹೆಚ್ಚಿದೆ. ಪುಟ್ಟಕ್ಕನ ಕಿರಿಯ ಮಗಳು ಸುಮ ಸದ್ಯ ಕಾಲೇಜಿಗೆ ಎಂಟ್ರಿ ಕೊಟ್ಟಿದ್ದಾಳೆ. ಹಿರಿಯ ಅಕ್ಕನ ಮನೆಯಲ್ಲಿ ಇದ್ದು ಸ್ಯ ಓದುತ್ತಿದ್ದಾಳೆ. ಇತ್ತ ಮನೆಯಲ್ಲಿ ಮಕ್ಕಳಿಲ್ಲದೇ ಪುಟ್ಟಕ್ಕ ಒಬ್ಬಂಟಿ. ರಮೇಶ್ ಪಂಡಿತ್, ಉಮಾಶ್ರೀ, ಅಕ್ಷರಾ, ಸಂಜನಾ ಬುರ್ಲಿ, ಮಂಜು ಭಾಷಿಣಿ, ಹಂಸ, ಧನುಷ್, ಸೂರಜ್ ಹೊಳ್ಳ, ಪವನ್ ಕುಮಾರ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ.

ಇದನ್ನೂ ಓದಿ:Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

‘ಸೀತಾ ರಾಮ’

‘ ‘ಸೀತಾ ರಾಮ’ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ, ವೈಷ್ಣವಿ ಗೌಡ ಮೊದಲಾದವರು ನಟಿಸಿದ್ದಾರೆ. ಸದ್ಯ ಸಹಾಯ ಬೇಡ ಎಂದು ಹೇಳುವ ರೀತಿಯಲ್ಲೂ.. ರಾಮನ ಮನಸ್ಸು ಗೆದ್ದಿದ್ದಾಳೆ ಸೀತಾ. ರಾಮನಿಗೆ ಸೀತಾ ಮೇಲೆ ಪ್ರೀತಿವಾಗುತ್ತಾ ಎಂಬುದು ಕಾದು ನೋಡಬೇಕಿದೆ.

ಶ್ರೀರಸ್ತು ಶುಭಮಸ್ತು

ಗಟ್ಟಿಮೇಳ ಧಾರಾವಾಹಿ ಹಿಂದಿಕ್ಕಿ ಅಂತೂ ಮೂರನೇ ಸ್ಥಾನಕ್ಕೆ ಬಂದಿದೆ. ತುಳಸಿ ಕೊಟ್ಟ ಉತ್ತರ ಎಲ್ಲರ ಬಾಯಿ ಕಟ್ಟಿಹಾಕಿದೆ. ತುಳಸಿ ಈಗ ಮುಂಚಿನಂತಲ್ಲ. ಅವಿನಾಶ್‌ ತುಳಸಿ ಹತ್ತಿರವಾಗುತ್ತಿದ್ದಾರೆ. ಈ ಧಾರಾವಾಹಿ ಇದೀಗ ಮೂರನೇ ಸ್ಥಾನದಲ್ಲಿದೆ.

ಸತ್ಯ

ಸತ್ಯ ಧಾರಾವಾಹಿ ಈ ನಡುವೆ ಒಳ್ಳೆಯ ಟಿಆರ್‌ಪಿ ಪಡೆದು ಮುನ್ನುಗ್ಗುತ್ತಿದೆ. ಸತ್ಯ ಮತ್ತು ಅತ್ತೆಯ ನಡುವೆ ಬಾಂಧವ್ಯ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ಲಕ್ಷ್ಮಣ ಇನ್ನೊಂದು ಮದುವೆಯಾಗಿರುವ ಬಗ್ಗೆ ಕಥೆಯೂ ಸಾಗುತ್ತಿದೆ. ಇದೀಗ ಧಾರಾವಾಹಿ ನಾಲ್ಕನೇ ಸ್ಥಾನದಲ್ಲಿದೆ.

ಗಟ್ಟಿಮೇಳ

ಎರಡನೇ ಸ್ಥಾನದಲ್ಲಿದ್ದ ಗಟ್ಟಿಮೇಳ ಐದನೇ ಸ್ಥಾನಕ್ಕೆ ಬಂದು ನಿಂತಿದೆ. ದಲ್ಲಿ ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ನಟಿಸಿದ್ದಾರೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.

ಭಾಗ್ಯ ಲಕ್ಷ್ಮೀ

ಹಿಂದಿನ ವಾರ ಭಾರಿ ಕುಸಿತ ಕಂಡಿದ್ದ ಈ ಧಾರಾವಾಹಿ ಈ ಬಾರಿ ಆರನೇ ಸ್ಥಾನ ಪಡೆದುಕೊಂಡಿದೆ. ಈ ಧಾರಾವಾಹಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.

ಅಮೃತಧಾರೆ

ಒಂಟಿ ಜೀವಗಳ ಜಂಟಿ ಪಯಣ ಒಲವ ‘ಅಮೃತಧಾರೆ’ಗೆ 100 ಸಂಚಿಕೆಗಳ ಸಂಭ್ರಮ. ಧಾರಾವಾಹಿ ಏಳನೇ ಸ್ಥಾನದಲ್ಲಿದೆ. ಗೌತಮ್‌ ಹಾಗೂ ಭೂಮಿಕಾ ಅರ್ಥ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Puttakkana Makkalu: ʻಪುಟ್ಟಕ್ಕʼನ ನಟನೆಗೆ ಕೋಟಿ ಕೋಟಿ ನಮನ ಅಂತಿದ್ದಾರೆ ಫ್ಯಾನ್ಸ್‌!

Puttakkana Makkalu: ಮಗಳನ್ನು ಕಳೆದುಕೊಂಡ ಪುಟ್ಟಕ್ಕ ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ, ಅವರ ಅದ್ಭುತ ನಟನೆ ನೋಡಿ ವೀಕ್ಷಕರು ಕಣ್ತುಂಬಿಕೊಂಡಿದ್ದಾರೆ.ಹಿರಿಮಗಳು ಸಹನಾಳನ್ನು ಕಳೆದುಕೊಂಡ ಪುಟ್ಟಕ್ಕನ ಆಕ್ರಂದನ ಮುಗಿಲು ಮುಟ್ಟಿದೆ. ಒಂದೇ ಒಂದು ಸಲ ʻʻಓ ಅನ್ನು ಮಗಳೆ, ನಾನೇ ಪಾಪಿ, ಆ ಮಗುನ ಅತ್ತೆ ಮನೆಗೆ ಹೋಗು ಹೋಗು ಅಂತ ಹೇಳಿ ಹೇಳಿ ಈಗ ನಾನೇ ಆ ಮಗುವ ಬೆಂಕಿಗೆ ಹಾಕಿದೆʼʼ ಎಂದು ಎದೆ ಬಡಿದುಕೊಂಡು ಅಳುತ್ತಿದ್ದಾಳೆ ಪುಟ್ಟಕ್ಕ. ಉಮಾಶ್ರೀ ಅವರ ಈ ದೃಶ್ಯಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

VISTARANEWS.COM


on

Puttakkana Makkalu umashree acting praised
Koo

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʻಪುಟ್ಟಕ್ಕನ ಮಕ್ಕಳುʼ (Puttakkana Makkalu) ಧಾರಾವಾಹಿಯಲ್ಲಿ ಸದ್ಯ ಸಹನಾ ಮೃತಪಟ್ಟಿದ್ದಾಳೆ. ಸಹನಾ ಅಂತ್ಯಕ್ರಿಯೆಯ ದೃಶ್ಯ ಪ್ರೇಕ್ಷಕರಲ್ಲಿ ಕಣ್ಣೀರು ತರಸಿವಂತೆ ಇತ್ತು.

ಮಗಳನ್ನು ಕಳೆದುಕೊಂಡ ಪುಟ್ಟಕ್ಕ ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ, ಅವರ ಅದ್ಭುತ ನಟನೆ ನೋಡಿ ವೀಕ್ಷಕರು ಕಣ್ತುಂಬಿಕೊಂಡಿದ್ದಾರೆ.

ಈ ಎಪಿಸೋಡ್ ನೋಡಿದ ಪ್ರೇಕರೊಬ್ಬರು ಹೀಗೆ ಕಮೆಂಟ್‌ ಮಾಡಿದ್ದಾರೆ. ʻʻದಯವಿಟ್ಟು ತಂದೆ ತಾಯಿ ಗಮನಿಸಿ. ನಿಮ್ಮ ಹೆಣ್ಣು ಮಕ್ಕಳು ಗಂಡನ ಮನೆಯಲ್ಲಿ ತೊಂದರೆ ಎಂದು ಬಂದಾಗ ಅವಳಿಗೆ ಸ್ವಲ್ಪ ಸಮಯ ಕೊಡಿ ಯೊಚನೆ ಮಾಡೋಕೆ. ಮನೆಯ ಮಾನ ಮರ್ಯಾದೆ ಹೋಗುತ್ತೆ ಅಂತ ಗಂಡನ ಮನೆಗೆ ಹೋಗು ಅಂತ ಬಲವಂತ ಮಾಡಬೇಡಿ. ಅಕ್ಕಪಕ್ಕದ ಮನೆಯವರು ಏನೋ ಹೇಳ್ತಾರೆ ಅಂತ ಮನೆ ಮಗಳಿಗೆ ಹಿಂಸೆ ನೀಡಬೇಡಿ ಪ್ಲೀಸ್ʼʼಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ʻʻಉಮಾಶ್ರೀ ಅಮ್ಮ ನಿಮ್ಮ ನಟನೆ ಬೇರೆ ಲೆವೆಲ್‌! ಎಷ್ಟು ನ್ಯಾಚುರಲ್ ಆಗಿ ಅಭಿನಹಿಸುತ್ತಿದ್ದೀರಾ. ನಿಮಗೆ ನನ್ನ ಕೋಟಿ ಕೋಟಿ ನಮನಗಳುʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Puttakkana Makkalu: ಸಹನಾಳ ಸಾವಿನ ಸುದ್ದಿ ಕೇಳಿ ಮುಗಿಲುಮುಟ್ಟಿತು ಪುಟ್ಟಕ್ಕನ ಆಕ್ರಂದನ

ಹಿರಿಮಗಳು ಸಹನಾಳನ್ನು ಕಳೆದುಕೊಂಡ ಪುಟ್ಟಕ್ಕನ ಆಕ್ರಂದನ ಮುಗಿಲು ಮುಟ್ಟಿದೆ. ಒಂದೇ ಒಂದು ಸಲ ʻʻಓ ಅನ್ನು ಮಗಳೆ, ನಾನೇ ಪಾಪಿ, ಆ ಮಗುನ ಅತ್ತೆ ಮನೆಗೆ ಹೋಗು ಹೋಗು ಅಂತ ಹೇಳಿ ಹೇಳಿ ಈಗ ನಾನೇ ನನ್ನ ಮಗುವನ್ನ ಬೆಂಕಿಗೆ ಹಾಕಿದೆʼʼ ಎಂದು ಎದೆ ಬಡಿದುಕೊಂಡು ಅಳುತ್ತಿದ್ದಾಳೆ ಪುಟ್ಟಕ್ಕ. ಉಮಾಶ್ರೀ ಅವರ ಈ ದೃಶ್ಯಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ಗಂಡನ ಮನೆಬಿಟ್ಟು ಅಮ್ಮನ ಮನೆ ಸೇರಿರುವ ಸಹನಾ, ಕೊನೆಗೆ ತಾನು ಅಮ್ಮನಿಗೆ ಭಾರವಾಗಿರೋದು ಬೇಡ ಎಂದು ಬೇಸರದಲ್ಲಿ ಮನೆಯನ್ನೇ ಬಿಟ್ಟು ಹೊರಟಿರುತ್ತಾಳೆ. ರಾತ್ರೋ ರಾತ್ರಿ ಬ್ಯಾಗ್ ಹಿಡಿದು ಮನೆಯಿಂದ ಹೊರಟಿದ್ದ ಸಹನಾಳಿಗಾಗಿ ಎಲ್ಲೆಡೆಯೂ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಆಕೆ ಸಿಕ್ಕಿದ್ದು, ಶವವಾಗಿ. ಜಜ್ಜಿದ ಮುಖದ, ಗುರುತಿಸಲಾರದ ಸ್ಥಿತಿಯಲ್ಲಿ ಸಹನಾ ಶವ ಪತ್ತೆಯಾಗಿದ್ದು, ಅದರ ಪಕ್ಕ ಸಹನಾ ಐಡೆಂಟಿಟಿ ಕಾರ್ಡ್ ಕೂಡ ಲಭ್ಯವಾಗಿರುತ್ತದೆ. ಸಹನಾಳದ್ದೆ ಸಾವಾಗಿದೆ ಎಂದು ಎಲ್ಲರೂ ಒಪ್ಪಿಕೊಂಡು ಬಳಿಕ ಅಂತ್ಯಕ್ರಿಯೆ ನೆರವೇರಿಸಿದರು. ಇಂದಿನ ಪ್ರೋಮೊದಲ್ಲಿ ಸಹನಾ ಜೀವಂತವಾಗಿರುವ ಬಗ್ಗೆ ಜೀ ವಾಹಿನಿ ಪೋಸ್ಟ್‌ ಮಾಡಿದೆ. ಮುಂದೆ ಸಹನಾಳ ಕಥೆ ಏನು ಎಂಬುದು ಇಂದಿನ ಎಪಿಸೋಡ್‌ನಲ್ಲಿ ಪ್ರಸಾರ ಆಗಲಿದೆ.

Continue Reading

ಕಿರುತೆರೆ

Puttakkana Makkalu: ಸಹನಾಳ ಸಾವಿನ ಸುದ್ದಿ ಕೇಳಿ ಮುಗಿಲುಮುಟ್ಟಿತು ಪುಟ್ಟಕ್ಕನ ಆಕ್ರಂದನ

Puttakkana Makkalu: ಮುರಳಿ-ಸಹನಾ ದಾಂಪತ್ಯ ಜೀವನದಲ್ಲಿ ಒಡಕು ಮೂಡಿದೆ. ಸಹನಾಗೆ ವಿಚ್ಛೇದನ ಬೇಕು, ಮುರಳಿಗೆ ತನ್ನ ತಪ್ಪಿನ ಅರಿವಾಗಿದೆ. ಮುರಳಿ ಜತೆ ಬಾಳಲು ರೆಡಿ ಇಲ್ಲ ಸಹನಾ. ಸಹನಾ ಈಗ ಮನೆ ಬಿಟ್ಟು ಹೋಗಿದ್ದಾಳೆ.ತಾಯಿಗೆ ಎಲ್ಲಿ ತಾನು ಭಾರವಾಗುತ್ತೇನೋ ಎಂದು ಸಹನಾ ಮನೆಯಿಂದ ಆಚೆ ನಡೆದಿದ್ದಾಳೆ. ಸದ್ಯ ಪುಟ್ಟಕ್ಕನ ಮಗಳು ಸಹನಾ ಮನೆ ಬಿಟ್ಟು ಹೋಗಿದ್ದಾಳೆ.

VISTARANEWS.COM


on

Puttakkana makkalu sahana dead
Koo
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ʻಪುಟ್ಟಕನ ಮಕ್ಕಳುʼ (Puttakkana Makkalu) ಸತತ ಎರಡನೇ ವಾರ ಒಳ್ಳೆಯ ಟಿಆರ್‌ಪಿ ಕಂಡಿದೆ. ಸದ್ಯ ಪುಟ್ಟಕ್ಕನ ಮಗಳು ಸಹನಾ ಮನೆ ಬಿಟ್ಟು ಹೋಗಿದ್ದಾಳೆ.

ಸಹನಾ ಶವ ಪತ್ತೆ ಆಗಿದೆ, ಎಲ್ಲರೂ ಮನೆ ಮಗಳನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ: Puttakkana Makkalu Serial: ಅವ್ವನಂತೆ ಯಾರ ಹಂಗಿಲ್ಲದೆ ಬದುಕಲು ಮನೆ ಬಿಟ್ಟು ಹೊರಟೇ ಬಿಟ್ಟಳು ಸಹನಾ!

ಬಾಳಬೇಕಾದ ಮಗಳು ಶವವಾಗಿ ಮಲಗಿರೋದು ನೋಡಿ ಪುಟ್ಟಕ್ಕ ಅಳುತ್ತಿದ್ದಾಳೆ. ಸಹನಾ ಅಂತ್ಯಸಂಸ್ಕಾರ ಮುಗಿದಿದೆ.

ಮುರಳಿಯಿಂದ ಡಿವೋರ್ಸ್ ಪಡೆದಿರುವ ಸಹನಾ ತವರುಮನೆಗೂ ಕೂಡ ಸ್ವಲ್ಪವೂ ಭಾರವಾಗದೆ, ತನ್ನ ಜೀವನ ತಾನೇ ನಡೆಸಬೇಕು ಅಂತ ಅಂದುಕೊಂಡಿದ್ದಳು. ಹೀಗೆ ಅಂದುಕೊಂಡವಳು ಹೇಗೆ ಶವವಾದಳು. ಆದರೆ ವೀಕ್ಷಕರು ಸಹನಾ ಸತ್ತಿಲ್ಲ ಬದುಕಿದ್ದಾಳೆ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು ಸಹನಾ ಮುಖ ಪ್ಲಾಸ್ಟಿಕ್‌ ಸರ್ಜರಿ ಆಗರಿಬಹುದೆಂದು ಕಮೆಂಟ್‌ ಮಾಡಿದ್ದಾರೆ!

Continue Reading

ಕಿರುತೆರೆ

Shine Shetty: ಸಖತ್‌ ಫಿಟ್‌ ಆದ ‘ಬಿಗ್ ಬಾಸ್‌’ ವಿನ್ನರ್ ಶೈನ್ ಶೆಟ್ಟಿ!

Shine Shetty: ಶೈನ್‌ ಶೆಟ್ಟಿ ಅವರು ʻಜಸ್ಟ್‌ ಮ್ಯಾರಿಡ್‌ʼ ಮತ್ತು ʻನಿದ್ರಾದೇವಿ ನೆಕ್ಸ್ಟ್‌ ಡೋರ್‌ʼ ಎಂಬ ಎರಡು ಹೊಸ ಚಿತ್ರಗಳಿಗೆ ನಾಯಕರಾಗಿದ್ದಾರೆ. ಶೈನ್‌ ಶೆಟ್ಟಿ ಬಿಗ್‌ ಬಾಸ್‌ ಮೂಲಕ ಸಖತ್‌ ಫೇಮಸ್‌ ಆಗಿದ್ದರು. ದೀಪಿಕಾ ದಾಸ್‌ ಅವರು ಶೈನ್‌ ಶೆಟ್ಟಿ (Shyne Shetty) ಅವರ ಜತೆ ಬಿಗ್‌ ಬಾಸ್‌ ಮನೆಯಲ್ಲಿ ತುಂಬ ಕ್ಲೋಸ್‌ ಆಗಿದ್ದರು. ಬಿಗ್‌ ಬಾಸ್‌ ಮನೆಯಿಂದ ಆಚೆ ಬಂದ ನಂತರವೂ ಇಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಜನ ಅಂದುಕೊಳ್ಳುತ್ತಿದ್ದರು.

VISTARANEWS.COM


on

Shine Shetty follows diet and fitness
Koo

ಸ್ಯಾಂಡಲ್‌ವುಡ್‌, ನಟ ಬಿಗ್‌ ಬಾಸ್‌ ವಿಜೇತ, ಕನ್ನಡ ಕಿರುತೆರೆ ಜನಪ್ರಿಯ ನಟ ಶೈನ್ ಶೆಟ್ಟಿ (Shine Shetty) ಕೈಯಲ್ಲಿ ಎರಡು ಬಿಗ್ ಪ್ರಾಜೆಕ್ಟ್ ಸಿನಿಮಾಗಳಿವೆ. ಇದೀಗ ಚಿತ್ರಕ್ಕೆಂದು ಫಿಟ್ನೆಸ್‌ ಬಗ್ಗೆ ಗಮನ ಕೊಟ್ಟಿದ್ದಾರೆ.

ಫಿಟ್‌ ಆಗಿರುವ ಹಾಗೂ ವರ್ಕೌಟ್‌ ಮಾಡಿರುವ ಫೋಟೊಗಳನ್ನು ಶೈನ್‌ ಶೆಟ್ಟಿ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಸುಮಾರು 11 ದಿನಗಳ ಕಾಲ ಕಠಿಣ ವರ್ಕೌಟ್ ಮತ್ತು ಡಯಟ್ ಫಾಲೋ ಮಾಡಿ ಸಿಕ್ಸ್‌ ಪ್ಯಾಕ್ ಮಾಡಿರುವ ಶೈನ್‌ ಇದೀಗ ರಗಡ್‌ ಆಗಿ ಕಾಣುತ್ತಿದ್ದಾರೆ.

ಶೈನ್‌ ಶೆಟ್ಟಿ ಅವರು ʻಜಸ್ಟ್‌ ಮ್ಯಾರಿಡ್‌ʼ ಮತ್ತು ʻನಿದ್ರಾದೇವಿ ನೆಕ್ಸ್ಟ್‌ ಡೋರ್‌ʼ ಎಂಬ ಎರಡು ಹೊಸ ಚಿತ್ರಗಳಿಗೆ ನಾಯಕರಾಗಿದ್ದಾರೆ.

ಇದನ್ನೂ ಓದಿ: Ranjani Raghavan: ರಂಜನಿ ರಾಘವನ್ ಸಿನಿಮಾದಲ್ಲಿ ಇರಲಿದೆ ಪಂಜುರ್ಲಿ ದೈವದ ಕಥೆ! ಬಿಡುಗಡೆ ಯಾವಾಗ?

ಶೈನ್‌ ಶೆಟ್ಟಿ ಬಿಗ್‌ ಬಾಸ್‌ ಮೂಲಕ ಸಖತ್‌ ಫೇಮಸ್‌ ಆಗಿದ್ದರು. ದೀಪಿಕಾ ದಾಸ್‌ ಅವರು ಶೈನ್‌ ಶೆಟ್ಟಿ (Shyne Shetty) ಅವರ ಜತೆ ಬಿಗ್‌ ಬಾಸ್‌ ಮನೆಯಲ್ಲಿ ತುಂಬ ಕ್ಲೋಸ್‌ ಆಗಿದ್ದರು. ಬಿಗ್‌ ಬಾಸ್‌ ಮನೆಯಿಂದ ಆಚೆ ಬಂದ ನಂತರವೂ ಇಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಜನ ಅಂದುಕೊಳ್ಳುತ್ತಿದ್ದರು. ಬಿಗ್‌ ಬಾಸ್‌ ಸಂದರ್ಭದಲ್ಲಿ ಈ ಜೋಡಿಗೆ ಜನರೇ ‘ಶಿನಿಕಾ’ ಎಂದು ಹೆಸರಿಟ್ಟು, ತುಂಬಾ ಮುದ್ದಾದ ಜೋಡಿ ಎಂದು ಹೇಳುತ್ತಿದ್ದರು.

Continue Reading

ಸಿನಿಮಾ

Karan Johar: ‘ಕಳಪೆ’ ಮಿಮಿಕ್ರಿ ಕಂಡು ಕರಣ್ ಜೋಹರ್ ಗರಂ; ಕ್ಷಮೆಯಾಚಿಸಿದ ಹಾಸ್ಯನಟ!

Karan Johar: ಕೆತನ್‌ ಸಿಂಗ್ ಅವರು ಕರಣ್‌ ಅವರ ರೀತಿ ಅನುಕರಣೆ ಮಾಡಿದ್ದಾರೆ. ಇದು ಕರಣ್‌ ಅವರಿಗೆ ಇಷ್ಟವಾಗಲಿಲ್ಲ. ಹೀಗಾಗಿ ಕರಣ್‌ ಬೇಸರದಲ್ಲಿ ಇನ್‌ಸ್ಟಾದಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿದ್ದಾರೆ. ಆದರೆ ಎಲ್ಲಿಯೂ ಕಾರ್ಯಕ್ರಮದ ಹೆಸರನ್ನು ಉಲ್ಲೇಖಿಸಿಲ್ಲ. ಹೀಗಾಗಿ ಇದು ʻಮ್ಯಾಡ್ನೆಸ್ ಮಚಾಯೆಂಗೆʼ ಕಾರ್ಯಕ್ರಮದ ಬಗ್ಗೆಯೇ ಕರಣ್ ಮಾತನಾಡಿರುವುದು ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

VISTARANEWS.COM


on

Karan Johar upset with Kettan Singh's poor mimicry of him
Koo

ಬೆಂಗಳೂರು: ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ (Karan Johar) ಭಾನುವಾರ ರಾತ್ರಿ (ಮೇ.5) ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಮ್ಮನ್ನು ಅನುಕರಣೆ ಮಾಡಿದ ಕಾಮಿಡಿ ಶೋ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಕೆತನ್‌ ಸಿಂಗ್ (Comedian Kettan Singh ) ಅವರು `ಮ್ಯಾಡ್ನೆಸ್ ಮಚಾಯೆಂಗೆʼ ( Madness Machaenge) ಕಾರ್ಯಕ್ರಮದ ಪ್ರೋಮೊ ಪೋಸ್ಟ್‌ ಮಾಡಿದ್ದಾರೆ. ಕೆತನ್‌ ಸಿಂಗ್ ಅವರು ಕರಣ್‌ ಅವರ ರೀತಿ ಅನುಕರಣೆ ಮಾಡಿದ್ದಾರೆ. ಇದು ಕರಣ್‌ ಅವರಿಗೆ ಇಷ್ಟವಾಗಲಿಲ್ಲ. ಹೀಗಾಗಿ ಕರಣ್‌ ಬೇಸರದಲ್ಲಿ ಇನ್‌ಸ್ಟಾದಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿದ್ದಾರೆ. ಆದರೆ ಎಲ್ಲಿಯೂ ಕಾರ್ಯಕ್ರಮದ ಹೆಸರನ್ನು ಉಲ್ಲೇಖಿಸಿಲ್ಲ. ಹೀಗಾಗಿ ಇದು ʻಮ್ಯಾಡ್ನೆಸ್ ಮಚಾಯೆಂಗೆʼ ಕಾರ್ಯಕ್ರಮದ ಬಗ್ಗೆಯೇ ಕರಣ್ ಮಾತನಾಡಿರುವುದು ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. ಕರಣ್ ಟೀಕೆಗೆ ಇದೀಗ ಹಾಸ್ಯನಟ ಕೂಡ ಪ್ರತಿಕ್ರಿಯಿಸಿದ್ದಾರೆ.

ಕರಣ್ ಇನ್‌ಸ್ಟಾ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ, “ನಾನು ನನ್ನ ತಾಯಿಯೊಂದಿಗೆ ಕುಳಿತು ಟಿವಿ ನೋಡುತ್ತಿದ್ದೆ. ಒಳ್ಳೆಯ ಚಾನೆಲ್‌ನಲ್ಲಿ ಕಾಮಿಡಿ ರಿಯಾಲಿಟಿ ಶೋ ಹಾಸ್ಯದ ಪ್ರೋಮೊ ನೋಡಿದೆ. ನನ್ನ ಅನುಕರಣೆ ಅದರಲ್ಲಿತ್ತು. ಅತ್ಯಂತ ಕಳಪೆಯಾಗಿತ್ತು. ಈ ರೀತಿ ಕಳಪೆ ಮಟ್ಟದ ಮಿಮಿಕ್ರಿಯನ್ನು ನಾನು ಟ್ರೋಲ್‌ ಪೇಜ್‌ಗಳಿಂದ, ಫೇಮಸ್‌ ಇಲ್ಲದೇ ಇರುವ ಜನರಿಂದ ನಿರೀಕ್ಷಿಸುತ್ತೇನೆ. ಆದರೆ 25 ವರ್ಷಗಳಿಂದ ಒಳ್ಳೆಯ ಬಾಡಿಂಗ್‌ ಇರುವ ಚಾನೆಲ್‌ನಿಂದ ಈ ರೀತಿಯ ಕಳಪೆ ಮಟ್ಟದ ಪ್ರದರ್ಶನ ನಾನು ನಿರೀಕ್ಷಿಸರಲಿಲ್ಲ. ಈ ಪ್ರೋಮೊ ಕಂಡು ನನಗೆ ಕೋಪ ಬರಲಿಲ್ಲ. ಬಹಳ ದುಃಖವನ್ನುಂಟುಮಾಡಿತು!” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ವನ್ನು ನಿರ್ಮಾಪಕಿ ಏಕ್ತಾ ಕಪೂರ್ ಕೂಡ ರಿ ಪೋಸ್ಟ್‌ ಮಾಡಿ ಕರಣ್ ಬೆಂಬಲಕ್ಕೆ ನಿಂತರು. ಕಳಪೆ ಹಾಸ್ಯ ಎಂದು ಏಕ್ತಾ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Karan Johar: ಉಪ ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದ ಕರಣ್ ಜೋಹರ್

ಏಕ್ತಾ ಕಪೂರ್‌ ರಿ ಪೋಸ್ಟ್‌ ಮಾಡಿ ʻʻಈ ರೀತಿ ಹಲವು ಬಾರಿ ಸಂಭವಿಸಿದೆ! ಕಳಪೆ ಹಾಸ್ಯವು ಕೆಲವೊಮ್ಮೆ ಕಾರ್ಯಕ್ರಮಗಳಲ್ಲಿ ಮತ್ತು ಪ್ರಶಸ್ತಿ ಸಮಾರಂಭಗಳಲ್ಲಿಯೂ ಇರುತ್ತದೆ. ಇದರ ಜತೆಗೆ ನೀವು ಹಾಜರಾಗಬೇಕೆಂದು ಅವರು ನಿರೀಕ್ಷಿಸುತ್ತಾರೆʼʼ ಎಂದು ಅವರು ಬರೆದಿದ್ದಾರೆ.

ಕರಣ್‌ ಜೋಹರ್ ಹೇಳಿಕೆಯ ನಂತರ, ಹಾಸ್ಯನಟ ಕೆತನ್‌ ಸಿಂಗ್ ಪ್ರತಿಕ್ರಿಯಿಸಿದರು ಮತ್ತು ಕ್ಷಮೆಯಾಚಿಸಿದರು. “ನಾನು ಕರಣ್ ಸರ್ ಅವರಲ್ಲಿ ಕ್ಷಮೆ ಕೇಳುತ್ತೇನೆ. ಮೊದಲನೇದಾಗಿ ಈ ರೀತಿ ಮಿಮಿಕ್ರಿ ಮಾಡಲು ಕಾರಣ ಕರಣ್ ಜೋಹರ್ ಅವರ ಕಾಫಿ ಶೋವನ್ನು ಬಹಳಷ್ಟು ಬಾರಿ ನೋಡಿದ್ದೇನೆ. ನಾನು ಅವರ ಕೆಲಸಕ್ಕೆ ಮತ್ತು ಆ ಕಾರ್ಯಕ್ರಮಕ್ಕೆ ನಾನು ದೊಡ್ಡ ಅಭಿಮಾನಿ. ಇತ್ತೀಚೆಗೆ ನಾನು ಕರಣ್‌ ಅವರ ಚಿತ್ರ ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾವನ್ನು 5 ರಿಂದ 6 ಬಾರಿ ನೋಡಿದ್ದೇನೆ. ನನ್ನ ಈ ನಟನೆಯಿಂದ ಕರಣ್‌ ಅವರಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮೆ ಇರಲಿ. ನಿಮ್ಮನ್ನು ನೋವಿಸುವ ಉದ್ದೇಶ ನನ್ನದಾಗಿರಲಿಲ್ಲ. ನಾನು ಕೇವಲ ಪ್ರೇಕ್ಷಕರನ್ನು ರಂಜಿಸಲು ಬಯಸಿದ್ದೆʼʼಎಂದು ಹೇಳಿದ್ದಾರೆ.

ಕರಣ್‌ ಜೋಹರ್ ಅವರ ಕೊನೆಯ ಚಿತ್ರ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಕಮರ್ಷಿಯಲ್ ಹಿಟ್ ಆಗಿತ್ತು. ಪ್ರಸ್ತುತ ಅವರು ಹಲವಾರು ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಮತ್ತೊಂದೆಡೆ, ಕರಣ್ ಜೋಹರ್ ಅವರ ಸಲ್ಮಾನ್ ಖಾನ್ ಅವರ ‘ದಿ ಬುಲ್’ ಶೀರ್ಷಿಕೆಯ ಚಿತ್ರ ಸೆಟ್ಟೇರಲು ಸಜ್ಜಾಗಿದೆ.

Continue Reading
Advertisement
Akshaya Tritiya Jewellery
ಫ್ಯಾಷನ್1 min ago

Akshaya Tritiya Jewellery: ಅಕ್ಷಯ ತೃತೀಯಕ್ಕೆ ಬಂದಿವೆ ವೈವಿಧ್ಯಮಯ ಫ್ಯಾಷನ್‌ ಜ್ಯುವೆಲರಿಗಳು!

Narendra Modi
ದೇಶ6 mins ago

Narendra Modi: ಅಂಬಾನಿ, ಅದಾನಿಯಿಂದ ಕಾಂಗ್ರೆಸ್‌ಗೆ ಟೆಂಪೋಗಟ್ಟಲೆ ಹಣ; ಮೋದಿ ತಿರುಗುಬಾಣ!

Apple New Products
ಗ್ಯಾಜೆಟ್ಸ್11 mins ago

Apple New Products: ಐಪ್ಯಾಡ್ ಪ್ರೊನಿಂದ ಪೆನ್ಸಿಲ್ ಪ್ರೊವರೆಗೆ; 2024ರ ಆಪಲ್‌ ಹೊಸ ಉತ್ಪನ್ನಗಳಿವು

State Education Policy
ಕರ್ನಾಟಕ13 mins ago

State Education Policy: 3 ವರ್ಷದ ಪದವಿಗೆ ರಾಜ್ಯ ಸರ್ಕಾರ ಅಸ್ತು; ಎಸ್‌ಇಪಿ ಆಯೋಗದ ಶಿಫಾರುಸುಗಳ ಅನ್ವಯ ಆದೇಶ

Actor Ravichandran female lead in ravichandrans premaloka 2
ಸ್ಯಾಂಡಲ್ ವುಡ್16 mins ago

Actor Ravichandran: ಕನಸುಗಾರನ ʻಪ್ರೇಮಲೋಕ 2’ ಚಿತ್ರಕ್ಕೆ ನಾಯಕಿ ಫಿಕ್ಸ್‌!

Prajwal Revanna Case Two additional SPPs appointed for SIT cases
ಕ್ರೈಂ20 mins ago

Prajwal Revanna Case: ಎಸ್‌ಐಟಿ ಕೇಸ್‌ಗಳಿಗಾಗಿ ಇಬ್ಬರು ಹೆಚ್ಚುವರಿ ಎಸ್‌ಪಿಪಿ ನೇಮಕ; ರಾಜ್ಯ ಸರ್ಕಾರದ ಮಹತ್ವದ ಆದೇಶ

Paris Olympics 2024
ಕ್ರೀಡೆ42 mins ago

Paris Olympics 2024: 19ನೇ ಶತಮಾನದ ಹಡಗಿನಲ್ಲಿ ಇಂದು ಫ್ರಾನ್ಸ್‌ಗೆ ಬರಲಿದೆ ಒಲಿಂಪಿಕ್‌ ಜ್ಯೋತಿ

Chicken Shawarma
ಪ್ರಮುಖ ಸುದ್ದಿ54 mins ago

Chicken Shawarma: ಬೀದಿ ಬದಿ ಚಿಕನ್‌ ಶವರ್ಮಾ ತಿಂದು 19 ವರ್ಷದ ಯುವಕ ಸಾವು; ಚಿಕನ್‌ ಪ್ರಿಯರೇ ಎಚ್ಚರ!

Thug Life Simbu is the new gun wielding gangster in town
South Cinema56 mins ago

Thug Life Movie: ಕಮಲ್‌ ಹಾಸನ್‌ ಸಿನಿಮಾಗೆ ಕಾಲಿವುಡ್‌ ನಟ ಸಿಂಬು ಎಂಟ್ರಿ!

Viral video
ವೈರಲ್ ನ್ಯೂಸ್1 hour ago

Viral Video: ಅಂಬಾನಿಗಿಂತಲೂ ರಿಚ್‌ ಈತ.. ಗದ್ದೆ ಉಳುಮೆಗೆ 20 ಲಕ್ಷದ ಕಾರೇ ಬೇಕು..!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ12 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ20 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ23 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ1 day ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌