Leo box office collection: 2ನೇ ದಿನ ಭಾರತದಲ್ಲಿ 100 ಕೋಟಿ ರೂ. ಕಲೆಕ್ಷನ್‌ ಮಾಡಿದ ʻಲಿಯೋʼ! - Vistara News

South Cinema

Leo box office collection: 2ನೇ ದಿನ ಭಾರತದಲ್ಲಿ 100 ಕೋಟಿ ರೂ. ಕಲೆಕ್ಷನ್‌ ಮಾಡಿದ ʻಲಿಯೋʼ!

Leo box office collection: ಮೊದಲ ದಿನವೇ ಜಾಗತಿಕವಾಗಿ 140 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ ಲಿಯೋ. ಇದೀಗ ಚಿತ್ರದ ದೇಶೀಯ ಗಳಿಕೆ ಎರಡನೇ ದಿನ 100 ಕೋಟಿ ದಾಟಿದೆ.

VISTARANEWS.COM


on

Vijay's film
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಲೋಕೇಶ್ ಕನಕರಾಜ್ ನಿರ್ದೇಶನದ ಲಿಯೋ ಎರಡನೇ (Leo box office collection) ದಿನ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡಿದೆ. ವರದಿಯ ಪ್ರಕಾರ, ಲಿಯೋ ಭಾರತದಲ್ಲಿ 100 ಕೋಟಿ ರೂ. ಕ್ಲಬ್‌ ಪ್ರವೇಶಿಸಿದೆ. ಗುರುವಾರ (ಅ.20) ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಲಿಯೋ ಚಿತ್ರದಲ್ಲಿ ವಿಜಯ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇಡೀ ಪ್ರಪಂಚದ ಲೆಕ್ಕಾಚಾರ ನೋಡಿದರೆ ಲಿಯೊ ಮೊದಲ ದಿನವೇ 140 ಕೋಟಿ ರೂ. ಗಳಿಕೆ ಮಾಡಿ ದಾಖಲೆ ಬರೆದಿದೆ.

ಮೊದಲ ದಿನ ಲಿಯೋ ಭಾರತದಲ್ಲಿ 64.8 ಕೋಟಿ ಗಳಿಸಿತ್ತು. ತಮಿಳು ಭಾಷೆಯಲ್ಲಿ 48.96 ಕೋಟಿ ರೂ, ತೆಲುಗಿನಲ್ಲಿ 12.9 ಕೋಟಿ ರೂ.; ಹಿಂದಿಯಲ್ಲಿ 2.8 ಕೋಟಿ ರೂ; ಕನ್ನಡ: 1.4 ಕೋಟಿ ರೂ ಸಂಗ್ರಹಿಸಿದೆ. ಆರಂಭಿಕ ಅಂದಾಜಿನ ಪ್ರಕಾರ, ಶುಕ್ರವಾರ, ಲಿಯೋ ತನ್ನ ಎರಡನೇ ದಿನದಲ್ಲಿ ಭಾರತದಲ್ಲಿ 36 ಕೋಟಿ ರೂ. ಗಳಿಸಿದೆ. ಇದುವರೆಗೆ ಚಿತ್ರ 100.80 ಕೋಟಿ ರೂ. ಗಳಿಸಿದೆ. ಲಿಯೋ ಶುಕ್ರವಾರ ಒಟ್ಟಾರೆ ಶೇ. 66.85 ತಮಿಳು ಆಕ್ಯುಪೆನ್ಸಿಯನ್ನು ಹೊಂದಿದೆ ಎಂದು ವರದಿಯಾಗಿದೆ.

ಮೊದಲ ದಿನ ಗಳಿಕೆಯಲ್ಲಿ ಪ್ರಭಾಸ್‌ ಅವರ ಆದಿಪುರುಷ (130 ಕೋಟಿ ರೂ.) ನಂಬರ್‌ ಒನ್‌ ಸ್ಥಾನದಲ್ಲಿತ್ತು. ಶಾರುಖ್ ಖಾನ್‌ರ ಜವಾನ್ (129 ಕೋಟಿ ರೂ) ಎರಡನೇ ಸ್ಥಾನದಲ್ಲಿತ್ತು. ಐದು ವರ್ಷಗಳ ಹಿಂದೆ ರಜನಿಕಾಂತ್ ಅವರ 2.0 ಸಿನಿಮಾ 110 ಕೋಟಿ ರೂಪಾಯಿಗಳನ್ನು ಕಲೆಕ್ಷನ್‌ ಮಾಡಿತ್ತು. ಇದೀಗ ಲಿಯೋ ಮೊದಲ ದಿನವೇ 140 ಕೋಟಿ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಲಿಯೋ ಈಗ ತನ್ನ ಆರಂಭಿಕ ದಿನದಂದು ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಸಿದ ಕ್ಲಬ್‌ಗಳ ಆಯ್ದ ಪಟ್ಟಿಗೆ ಸೇರಿಕೊಂಡಿದೆ. ಈ ಕ್ಲಬ್‌ಗೆ ಆರ್‌ಆರ್‌ಆರ್, ಬಾಹುಬಲಿ 2, ಕೆಜಿಎಫ್ 2, ಸಾಹೋ, ಪಠಾಣ್‌, ಹಾಗೆಯೇ ಆದಿಪುರುಷ, 2.0 ಮತ್ತು ಜವಾನ್ ಕೂಡ ಸೇರಿತ್ತು.

ಇದನ್ನೂ ಓದಿ: Leo Box Office Collection: ಮೊದಲ ದಿನ ‘ಲಿಯೋ’ ಬಾಕ್ಸ್‌ ಆಫೀಸ್‌ ಉಡೀಸ್; ಎಲ್ಲ ದಾಖಲೆ ಠುಸ್!

ಲಿಯೋ’ 2023ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರವು ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದೆ. 2021ರಲ್ಲಿ ಬಿಡುಗಡೆಯಾದ ʻಮಾಸ್ಟರ್ʼ ಚಿತ್ರದ ಭಾರಿ ಯಶಸ್ಸಿನ ನಂತರ ದಳಪತಿ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಅವರು ಈ ‘ಲಿಯೋ’ ಸಿನಿಮಾ ಮೂಲಕ ಮತ್ತೆ ಒಂದಾಗಿದ್ದಾರೆ. ಹಲವು ವರ್ಷಗಳ ನಂತರ ವಿಜಯ್ ಜತೆ ತ್ರಿಷಾ ನಾಯಕಿಯಾಗಿ ಈ ಸಿನಿಮಾ ಮೂಲಕ ಮಿಂಚಲಿದ್ದಾರೆ. ಕೀರ್ತಿ ಸುರೇಶ್, ಅರ್ಜುನ್, ಮಿಶಾ ಘೋಷಾಲ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಮತ್ತು ಸಂಜಯ್ ತಾರಾ ಬಳಗವಿದೆ.

ಈ ಚಿತ್ರವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೊದ ಲಲಿತ್ ಕುಮಾರ್ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ʼಲಿಯೋʼ ಚಿತ್ರದಲ್ಲಿ ಸಂಜಯ್ ದತ್ ಅಣ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದಳಪತಿ ವಿಜಯ್‌ (Thalathy Vijay) ಹಾಗೂ ಲೋಕೇಶ್‌ ಕನಕರಾಜ್‌ ʼಲಿಯೋʼ ಸಿನಿಮಾ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ. ಈಗಾಗಲೆ ಸಿನಿಮಾದ ಫಸ್ಟ್‌ ಲುಕ್‌ ಹಾಗೂ ಮೊದಲ ಸಾಂಗ್‌ ʻನಾ ರೆಡಿʼ ಬಿಡುಗಡೆಗೊಂಡಿದೆ. ʻಲಿಯೋʼ ಚಿತ್ರಕ್ಕೆ ಮನೋಜ್ ಪರಮಹಂಸ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಅವರ ಸಂಕಲನವಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

koti kannada movie : ಕಾಂಚಾಣದ ಕನಸು; ಕೋಟಿ ಸಿನಿಮಾದ ‘ಜನತಾ ಸಿಟಿ’ ಹಾಡು ಬಿಡುಗಡೆ

koti kannada movie : “ಕೋಟಿ ಸಿನಿಮಾದಲ್ಲಿ ‘ಜನತಾ ಸಿಟಿ’ ಹಾಡು ನನಗೆ ತುಂಬಾ ಇಷ್ಟದ ಹಾಡು. ನಾನು ಒಂದು ಸಣ್ಣ ಹಳ್ಳಿಯಿಂದ ಬೆಂಗಳೂರಿಗೆ ಬಂದವನು. ಮಹಾನಗರಗಳಿಗೆ ಏನೋ ಸೆಳೆಯುವ ಗುಣ. ಈ ಹಾಡು ಮಹಾನಗರಗಳ‌ಲ್ಲಿ ಬದುಕುವ ಎಲ್ಲರಿಗೂ ತುಂಬಾ ರಿಲೇಟೆಬಲ್ ಆಗಲಿದೆ ” ಎಂದು ಕೋಟಿಯ ನಿರ್ದೇಶಕ ‘ಪರಮ್’ ಅಭಿಪ್ರಾಯ ಪಟ್ಟಿದ್ದಾರೆ.

VISTARANEWS.COM


on

koti kannada movie
Koo

ಬೆಂಗಳೂರು: ಮಹಾನಗರಗಳು ಎಂತವರನ್ನೂ ಸೆಳೆಯುತ್ತವೆ‌. ಅವುಗಳು ತಮ್ಮೊಳಗೆ ಬಚ್ಚಿಟ್ಟುಕೊಂಡಿರುವ ಕೌತುಕತೆಗೆ ಸೋಲದವರಿಲ್ಲ. ಇಂತ ಒಂದು ಮಹಾನಗರ ‘ಜನತಾ ಸಿಟಿ’ಯಲ್ಲಿ ‘ಕೋಟಿ’ ಜೀವನ ನಡೆಸುತ್ತಿದ್ದಾನೆ.‌ ಇದು ಒಂದು ಭ್ರಷ್ಟ ನಗರವೂ ಹೌದು. ಕೋಟಿ ಸಿನಿಮಾದ (koti kannada movie) ಈ ನಗರದ ಬಗೆಗಿನ ಹಾಡು ‘ಜನತಾ ಸಿಟಿ’ ಈಗ ಬಿಡುಗಡೆಯಾಗಿದೆ. ವಾಸುಕಿ ವೈಭವ್ ಸಾಹಿತ್ಯ ರಚಿಸಿ, ಸಂಯೋಜಿಸಿರುವ ಈ ಹಾಡನ್ನು ಸಂಜಿತ್ ಹೆಗ್ಡೆ ಹಾಡಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೋವನ್ನು ಸರೆಗಮ ಕನ್ನಡ ಯೂಟ್ಯೂಬ್ ಚಾನೆಲ್ಲಿನಲ್ಲಿ ವೀಕ್ಷಿಸಬಹುದು.

ಈ ಹಾಡಿನ ಸಂಯೋಜಕರಾದ ವಾಸುಕಿ ವೈಭವ್ ಹಾಡಿನ ಬಗ್ಗೆ ಮಾತನಾಡಿ, “ಕೋಟಿ ‘ಜನತಾಸಿಟಿ’ಯಲ್ಲಿ ಜೀವನ ನಡೆಸುತ್ತಿದ್ದಾನೆ. ಅವನಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ದುಡಿಯುವ ಆಸೆ. ಈ ಹಾಡು ಅವನ ಮತ್ತು ಜನತಾ ಸಿಟಿಯ ಸಂಬಂಧವನ್ನು ಹೇಳುತ್ತದೆ. ಈ ಹಾಡನ್ನು ಬರೆದು, ಸಂಯೋಜಿಸುವುದು ಎಕ್ಸೈಂಟಿಂಗ್ ಮತ್ತು ಚಾಲೆಂಜಿಂಗ್ ಆಗಿತ್ತು. ಸಖತ್ ಮಜಾ ಮಾಡಿದೀನಿ ಈ ಹಾಡನ್ನು ಮಾಡುವ ಪ್ರಕ್ರಿಯೆಯಲ್ಲಿ” ಎಂದು ಹೇಳಿದರು.

“ಕೋಟಿ ಸಿನಿಮಾದಲ್ಲಿ ‘ಜನತಾ ಸಿಟಿ’ ಹಾಡು ನನಗೆ ತುಂಬಾ ಇಷ್ಟದ ಹಾಡು. ನಾನು ಒಂದು ಸಣ್ಣ ಹಳ್ಳಿಯಿಂದ ಬೆಂಗಳೂರಿಗೆ ಬಂದವನು. ಮಹಾನಗರಗಳಿಗೆ ಏನೋ ಸೆಳೆಯುವ ಗುಣ. ಈ ಹಾಡು ಮಹಾನಗರಗಳ‌ಲ್ಲಿ ಬದುಕುವ ಎಲ್ಲರಿಗೂ ತುಂಬಾ ರಿಲೇಟೆಬಲ್ ಆಗಲಿದೆ ” ಎಂದು ಕೋಟಿಯ ನಿರ್ದೇಶಕ ‘ಪರಮ್’ ಅಭಿಪ್ರಾಯ ಪಟ್ಟರು.

ತಾರಾಗಣ ಇಂತಿದೆ

ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

ಇದನ್ನೂ ಓದಿ: Udho Udho Shri Renuka Yellamma : ಬಾಲ್ಯದಿಂದ ತಾರುಣ್ಯದ ಕಡೆಗೆ ರೇಣುಕಾ-ಯಲ್ಲಮ್ಮ, ಕಾದಿವೆ ಹಲವು ರೋಚಕ ಕತೆಗಳು

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.

ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Continue Reading

ಪ್ರಮುಖ ಸುದ್ದಿ

Superstar Rajinikanth : ನಟ ರಜನಿಕಾಂತ್​​ಗೆ ವಿಶೇಷ ಗಿಫ್ಟ್​ ಕೊಟ್ಟ ಲುಲು ಮಾಲ್​ನ ಮಾಲೀಕ ಯೂಸುಫ್​​ ಅಲಿ

Superstar Rajnikanth : ಇತ್ತೀಚೆಗೆ ಯುಎಇಯಲ್ಲಿದ್ದಾಗ, ನಟ ಲುಲು ಗ್ರೂಪ್​ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಎ.ಯೂಸುಫ್ ಅಲಿ ಮತ್ತು ಅದರ ಇತರ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಸೂಪರ್ ಸ್ಟಾರ್ ಮತ್ತು ಉದ್ಯಮಿ ರೋಲ್ ರಾಯ್ಸ್ ನಲ್ಲಿ ಸವಾರಿ ಮಾಡಿದ್ದರು.

VISTARANEWS.COM


on

superstar rajnikanth
Koo

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ (Superstar Rajinikanth) ಅವರಿಗೆ ಯುಎಇಯ ಪ್ರವಾಸೋದ್ಯಮ ಇಲಾಖೆ ಗೋಲ್ಡನ್ ವೀಸಾ ನೀಡಿದೆ. ಹಿರಿಯ ನಟ ಈ ಸಂಭ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಬುಧಾಬಿ ಸರ್ಕಾರ ಮತ್ತು ಲುಲು ಗ್ರೂಪ್​​ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಎ.ಯೂಸುಫ್ ಅಲಿ (M A Yusuf Ali) ಅವರ ಪ್ರಯತ್ನಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಜನಿಕಾಂತ್ “ಅಬುಧಾಬಿ ಸರ್ಕಾರದಿಂದ ಪ್ರತಿಷ್ಠಿತ ಯುಎಇ ಗೋಲ್ಡನ್ ವೀಸಾ ಸ್ವೀಕರಿಸಲು ಹೆಮ್ಮೆ ಎನಿಸುತ್ತಿದೆ. ಈ ವೀಸಾ ಲಭ್ಯತೆಯನ್ನು ಸುಗಮಗೊಳಿಸಿದ್ದಕ್ಕಾಗಿ ಮತ್ತು ಎಲ್ಲಾ ರೀತಿಯ ಬೆಂಬಲಕ್ಕಾಗಿ ಅಬುಧಾಬಿ ಸರ್ಕಾರಕ್ಕೆ ಮತ್ತು ನನ್ನ ಉತ್ತಮ ಸ್ನೇಹಿತ, ಲುಲು ಗ್ರೂಪ್​ನ ಸಿಎಂಡಿ ಯೂಸುಫ್ ಅಲಿ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಯುಎಇಯಲ್ಲಿದ್ದಾಗ, ನಟ ಲುಲು ಗ್ರೂಪ್​ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಎ.ಯೂಸುಫ್ ಅಲಿ ಮತ್ತು ಅದರ ಇತರ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಸೂಪರ್ ಸ್ಟಾರ್ ಮತ್ತು ಉದ್ಯಮಿ ರೋಲ್ ರಾಯ್ಸ್ ನಲ್ಲಿ ಸವಾರಿ ಮಾಡಿದ್ದರು.

ನಟ ಫುಲ್ ಬ್ಯುಸಿ

ಸೂಪರ್​ಸ್ಟಾರ್​ ರಜನಿಕಾಂತ್ ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ ‘ವೆಟ್ಟೈಯಾನ್’ ನ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದರು. ಇದನ್ನು ಟಿ.ಜೆ.ಜ್ಞಾನವೇಲ್ ಬರೆದು ನಿರ್ದೇಶಿಸಿದ್ದಾರೆ. ಲೈಕಾ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಿಸಲಾಗಿರುವ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್ ಮತ್ತು ದುಶಾರಾ ವಿಜಯನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ: Golden Star Ganesh: ಮೈಸೂರಿನಲ್ಲಿ ಮೇ 25ರಂದು ʼಕೃಷ್ಣಂ ಪ್ರಣಯ ಸಖಿʼ ಚಿತ್ರದ ಫಸ್ಟ್‌ ಸಾಂಗ್‌ ರಿಲೀಸ್‌

ಈ ತಿಂಗಳ ಆರಂಭದಲ್ಲಿ, ರಜನಿಕಾಂತ್ ಮತ್ತು ಅಮಿತಾಬ್ ಒಟ್ಟಿಗೆ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದ್ದರು. ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್​ನಲ್ಲಿ ಅಮಿತಾಬ್ ಬಚ್ಚನ್ ಇಬ್ಬರೂ ಒಟ್ಟಿಗೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದರು. “ತಲಾ ದಿ ಗ್ರೇಟ್ ರಜನಿ ಅವರೊಂದಿಗೆ ಇರುವುದೇ ನನಗೆ ಗೌರವ, ಅವರು ಬದಲಾಗಲೇ ಇಲ್ಲ.. ಅದೇ ಸರಳ, ವಿನಮ್ರತೆ ಸ್ನೇಹಿತ ಎಂದು ಬರೆದುಕೊಂಡಿದ್ದರು.

ಇದಕ್ಕೂ ಮೊದಲು, ಲೈಕ್ರಾ ಪ್ರೊಡಕ್ಷನ್ ಹೌಸ್ ತಮ್ಮ ಎಕ್ಸ್ ಹ್ಯಾಂಡಲ್​ನಲ್ಲಿ ಫೋಟೋಗಳನ್ನು ಹಂಚಿಕೊಂಡು, “ದಿ ಟೈಟಾನ್ಸ್ ಆಫ್ ಇಂಡಿಯನ್ ಸಿನೆಮಾ! ಸೂಪರ್​ಸ್ಟಾರ್​ ಎಂದು ಬರೆದಕೊಂಡಿತ್ತು. ಆ ಫೋಟೋಗಳಲ್ಲಿ, ಅಮಿತಾಬ್ ಬಚ್ಚನ್ ಮತ್ತು ರಜನಿಕಾಂತ್ ಸ್ಟೈಲಿಶ್ ಕಪ್ಪು ದಿರಸಿನಲ್ಲಿ ಪೋಸ್ ನೀಡಿದ್ದರು. ಅವರಿಬ್ಬರು ಮಾತನಾಡಿದ್ದರು.

Continue Reading

ಸಿನಿಮಾ

Sharad Kelkar: ‘ಬಾಹುಬಲಿ’ಗೆ ಧ್ವನಿ ನೀಡಿದ್ದು ಮರೆಯಲಾಗದ ಅನುಭವ ಎಂದ ಶರದ್ ಕೇಳ್ಕರ್

ಬಾಹುಬಲಿ: ಕ್ರೌನ್ ಆ ಬ್ಲಡ್ ಅನಿಮೇಟೆಡ್ ಸರಣಿ ಡಿಸ್ನಿ+ಹಾಟ್‌ಸ್ಟಾರ್‌ ನಲ್ಲಿ ಬಿಡುಗಡೆಯಾಗಿದ್ದು, ಶರದ್ ಕೇಲ್ಕರ್ (Sharad Kelkar) ಚಿತ್ರದೊಂದಿಗಿನ ತಮ್ಮ ನಂಟನ್ನು ನೆನಪಿಸಿಕೊಂಡಿದ್ದಾರೆ.

VISTARANEWS.COM


on

By

Sharad Kelkar
Koo

ಅದ್ಧೂರಿ ಬಜೆಟ್‌ನ ʼಬಾಹುಬಲಿʼ (bahubali) ಚಿತ್ರದ ಒಂದೊಂದು ದೃಶ್ಯಗಳು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಸಿನಿಮಾದ ಮೊದಲ ಭಾಗ ಬಿಡುಗಡೆಯಾಗಿ ಹತ್ತು ವರ್ಷ ಸಮೀಪಿಸಿದರೂ ಈಗಲೂ ಚಿತ್ರದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ʼಬಾಹುಬಲಿʼ ಪಾತ್ರಧಾರಿ ಪ್ರಭಾಸ್‌ಗೆ (actor prabhas) ಧ್ವನಿ ನೀಡಿರುವ ಶರದ್ ಕೇಳ್ಕರ್ (Sharad Kelkar) ತಮ್ಮ ಮರೆಯಲಾಗದ ಅನುಭವವನ್ನು ಹಂಚಿಕೊಂಡಿದ್ದಾರೆ.

ಡಿಸ್ನಿ+ಹಾಟ್‌ಸ್ಟಾರ್‌ ನಲ್ಲಿ (Disney Plus star) ಬಿಡುಗಡೆಯಾಗಿರುವ “ಬಾಹುಬಲಿ: ಕ್ರೌನ್ ಆ ಬ್ಲಡ್” (Baahubali: Crown of Blood) ಅನಿಮೇಟೆಡ್ ಸರಣಿಯು ಈಗ ಚರ್ಚೆಯಲ್ಲಿದೆ. ಬಾಹುಬಲಿ ಮತ್ತು ಮಾಹಿಷ್ಮತಿಯ ಜಗತ್ತಿನಲ್ಲಿ ಇದೂವರೆಗೂ ಕೇಳಿರದ, ಕಂಡಿರದ ಹಾಗೂ ತಿಳಿಯಲಾಗದಿದ್ದ ಅನೇಕ ಘಟನೆಗಳು ಕಥೆಗಳು ಒಂದೊಂದಾಗಿ ಕೇಳಿ ಬರುತ್ತಿವೆ.


ಅನೇಕ ಐತಿಹಾಸಿಕ ಚಿತ್ರಗಳಿಗೆ ಧ್ವನಿ ನೀಡಿ ಖ್ಯಾತರಾಗಿರುವ ಮೂಲತಃ ನಟರೂ ಆಗಿರುವ ಶರದ್ ಕೇಳ್ಕರ್ ಅವರು ಬಾಹುಬಲಿ ನಾಯಕ ಪ್ರಭಾಸ್‌ ಅವರಿಗೆ ಕಂಠದಾನ ಮಾಡಿದ್ದರು. ಈ ಕುರಿತಂತೆ ಅವರು ತಮ್ಮ ಸಂತಸವನ್ನು ಈಗ ಹಂಚಿಕೊಂಡಿದ್ದಾರೆ.

ತನ್ನ ಬಲವಾದ ಧ್ವನಿಗಾಗಿ ಹೆಸರಾಗಿರುವ ಶರದ್ , ಐಕಾನಿಕ್ ‘ಬಾಹುಬಲಿ’ ಸರಣಿಯನ್ನು ಹಿಂದಿ ಭಾಷೆಗೆ ಡಬ್‌ ಮಾಡುವಾಗ ಚಲನಚಿತ್ರ ನಿರ್ಮಾಪಕ ಎಸ್‌.ಎಸ್. ರಾಜಮೌಳಿ ಅವರು ತಮ್ಮ ಆಯ್ಕೆ ಬಗ್ಗೆ ಮೊದಲು ಸಂದೇಹ ಪಟ್ಟಿದ್ದರು. ‘ಬಾಹುಬಲಿ: ದಿ ಬಿಗಿನಿಂಗ್’ ಮತ್ತು ‘ಬಾಹುಬಲಿ: ದಿ ಕನ್‌ಕ್ಲೂಷನ್’ ಎರಡರಲ್ಲೂ ರೆಬೆಲ್ ಸ್ಟಾರ್ ಪ್ರಭಾಸ್ ಮೂಲತಃ ಚಿತ್ರಿಸಿದ ಅಮರೇಂದ್ರ ಬಾಹುಬಲಿ ಮತ್ತು ಮಹೇಂದ್ರ ಬಾಹುಬಲಿ ಪಾತ್ರಗಳಿಗೆ ಧ್ವನಿ ನೀಡಿದ ಕೇಳ್ಕರ್‌ ಅವರು ಎಪಿಕ್ ಸಾಹಸದ ಡಬ್ಬಿಂಗ್ ಕಾರ್ಯದ ಬಗ್ಗೆ ಅನೇಕ ವಿಚಾರಗಳನ್ನು ಹೇಳಿಕೊಂಡಿದ್ದಾರೆ.

ಪವನ್ ಕಲ್ಯಾಣ್ ಅಭಿನಯದ 2016 ರ ತೆಲುಗು ಆಕ್ಷನ್- ಕಾಮಿಡಿ ಚಿತ್ರ ‘ಸರ್ದಾರ್ ಗಬ್ಬರ್ ಸಿಂಗ್’ ನಲ್ಲಿ ಕೇಳ್ಕರ್ ತೊಡಗಿಸಿಕೊಂಡಿದ್ದರು. ಈ ವೇಳೆ ಸಿಬ್ಬಂದಿಯೊಬ್ಬ ಅವರ ಗಾಯನವನ್ನು ಗುರುತಿಸಿ ರಾಜಮೌಳಿ ಅವರಿಗೆ ಇವರ ಹೆಸರು ಶಿಫಾರಸು ಮಾಡಿದ್ದರು ಎನ್ನಲಾಗಿದೆ.


ನನಗೆ ‘ಬಾಹುಬಲಿ’ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ. ಆದರೆ ನಾನು ರಾಜಮೌಳಿ ಅವರ ಹಿಂದಿನ ಚಿತ್ರಗಳಾದ ‘ಮಗಧೀರ’ ನೋಡಿದ್ದೇನೆ. ಒಬ್ಬ ನಟನಾಗಿ ನಾನು ಈ ಮಾಸ್ಟರ್‌ಪೀಸ್‌ನ ಸೃಷ್ಟಿಕರ್ತನನ್ನು ಭೇಟಿಯಾಗಲು ಬಯಸಿದ್ದೆ. ಹಾಗಾಗಿ ನಾನು ನನ್ನ ಧ್ವನಿ ಪರೀಕ್ಷೆಯನ್ನು ಮಾಡಿದೆ. ಟೇಪ್ ನೊಂದಿಗೆ ಮರುದಿನ ಅವರನ್ನು ಸ್ಟುಡಿಯೋದಲ್ಲಿ ಭೇಟಿಯಾದೆ. ನೀವು ಬಾಹುಬಲಿಗಾಗಿ ಡಬ್ಬಿಂಗ್ ಮಾಡುತ್ತಿದ್ದೀರಿ ಎಂದು ಅವರು ಹೇಳಿದಾಗ ನಂಬಲು ಅಸಾಧ್ಯವಾಯಿತು ಎಂದಿದ್ದಾರೆ ಕೇಳ್ಕರ್.

ಈ ಪಾತ್ರವು ಕೇಳ್ಕರ್ ಅವರ ವೃತ್ತಿಜೀವನವನ್ನು ಗಮನಾರ್ಹವಾಗಿ ಹೆಚ್ಚಿಸಿತು. ಮಾತ್ರವಲ್ಲದೆ ಅವರನ್ನು ಅಪಾರ ಅಭಿಮಾನಿಗಳ ಗುಂಪಿಗೆ ಪ್ರೀತಿಸುವಂತೆ ಮಾಡಿತು, ಅವರಿಗೆ “ಬಾಹುಬಲಿಯ ಧ್ವನಿ” ಮತ್ತು ಪ್ರೀತಿಯಿಂದ “ಭಾರತದ ಧ್ವನಿ” ಎಂಬ ಬಿರುದು ಸಿಗುವಂತಾಯಿತು. ಮೊದಲು ನಾನೊಬ್ಬ ನಟ. ಉತ್ತಮವಾಗಿ ಅಭಿನಯಿಸಬಲ್ಲೆ. ವಿವಿಧ ಬಗೆಯ ಪಾತ್ರಗಳನ್ನು ಮಾಡುತ್ತಾ ಬಂದಿದ್ದೇನೆ. ಆದರೂ ಒಳ್ಳೆಯ ಕಾಲಕ್ಕೆ ಕಾಯುತ್ತಿದ್ದೇನೆ. ಅತ್ಯುತ್ತಮವಾದದ್ದು ಇನ್ನು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ ಎನ್ನುತ್ತಾರೆ ಶರದ್.

ಇದನ್ನೂ ಓದಿ: Kalki 2898 AD: ʼಕಲ್ಕಿʼ ಚಿತ್ರದ ನಾಯಕ ಭೈರವನ ಆಪ್ತ ಗೆಳೆಯ ಬುಜ್ಜಿ ಯಾರು? ಈ ವಿಡಿಯೊ ನೋಡಿ

ಎ ಗ್ರಾಫಿಕ್ ಇಂಡಿಯಾ ಮತ್ತು ಆರ್ಕ ಮೀಡಿಯಾ ವರ್ಕ್ಸ್ ಪ್ರೊಡಕ್ಷನ್ ಅಡಿಯಲ್ಲಿ ಎಸ್.ಎಸ್. ರಾಜಮೌಳಿ- ಶರದ್‌ದೇವರಾಜನ್ ಕ್ರಿಯೆಟೀವ್ ಮುಖ್ಯಸ್ಥರಾಗಿದ್ದು, ಜೀವನ್ ಜೆ. ಕಾಂಗ್, ನವೀನ್ ಜಾನ್ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಇವರೆಲ್ಲರೂ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ ಎಂದು ಶರದ್ ಹೇಳಿದ್ದಾರೆ.


ಅನಿಮೇಟೆಡ್ ಸರಣಿ ‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ ಹಿಂದಿ ಭಾಷೆಗೆ ಭಾಷಾಂತರವಾಗಿದ್ದು, ಕೇಲ್ಕರ್ ಧ್ವನಿ ನೀಡಿದ್ದಾರೆ. ಈ ಸರಣಿಯು ಮೇ 17ರಿಂದ ಡಿಸ್ನಿ ಪ್ಲಸ್‌ನಲ್ಲಿ ಪ್ರದರ್ಶನ ಕಾಣುತ್ತಿದೆ.

Continue Reading

ಸಿನಿಮಾ

Kalki 2898 AD: ʼಕಲ್ಕಿʼ ಚಿತ್ರದ ನಾಯಕ ಭೈರವನ ಆಪ್ತ ಗೆಳೆಯ ಬುಜ್ಜಿ ಯಾರು? ಈ ವಿಡಿಯೊ ನೋಡಿ

Kalki 2898 AD: ಪ್ರಭಾಸ್‍, ದೀಪಿಕಾ ಪಡುಕೋಣೆ, ಅಮಿತಾಭ್‍ ಬಚ್ಚನ್ ಮತ್ತಿತರರು ನಟಿಸುತ್ತಿರುವ ಬಹು ನಿರೀಕ್ಷಿತ ಚಿತ್ರ  ‘ಕಲ್ಕಿ 2898 ಎಡಿ’ಯ ಹೊಸ ಪಾತ್ರ ‘ಬುಜ್ಜಿ’ ಗಮನ ಸೆಳೆಯುತ್ತಿದೆ. ಚಿತ್ರದ ಐದನೇ ಸೂಪರ್‌ ಸ್ಟಾರ್ ‘ಬುಜ್ಜಿ’ಯನ್ನು ಚಿತ್ರತಂಡ ಅದ್ಧೂರಿ ಕಾರ್ಯಕ್ರಮದಲ್ಲಿ ಪರಿಚಯಿಸಿದೆ. ನಾಯಕ ಭೈರವ (ಪ್ರಭಾಸ್‌)ನ ಆಪ್ತ ಸ್ನೇಹಿತ ಎಂದೇ ಕರೆಯಲ್ಪಡುವ ವಿಶೇಷ ವಾಹನ ಈ ಬುಜ್ಜಿ. ಬುಜ್ಜಿ ಝಳಕ್‌ ಅನ್ನು ಈ ವಿಡಿಯೊದಲ್ಲಿ ನೋಡಿ.

VISTARANEWS.COM


on

Kalki 2898 AD
Koo

ಹೈದರಾಬಾದ್: ಪ್ಯಾನ್‍ ಇಂಡಿಯಾ ಸೂಪರ್‌ ಸ್ಟಾರ್‌ ಪ್ರಭಾಸ್‍ (Actor Prabhas) ಅಭಿನಯದ ‘ಕಲ್ಕಿ 2898 ಎಡಿ’ (Kalki 2898 AD) ಚಿತ್ರ ಸದ್ಯ ಸದ್ದು ಮಾಡುತ್ತಿದೆ. ಜೂನ್ 27ರಂದು ತೆರೆಗೆ ಬರಲು ಸಜ್ಜಾಗಿರುವ ಈ ಸೈನ್ಸ್‌ ಫಿಕ್ಷನ್‌ ಈಗಾಗಲೇ ಸಿನಿ ಪ್ರಿಯರ ಗಮನ ಸೆಳೆದಿದೆ. ಈ ಸಿನಿಮಾದಲ್ಲಿನ ಪ್ರಮುಖ ನಟರ ಪಾತ್ರಗಳನ್ನು ಪರಿಚಯಿಸುತ್ತಿರುವ ಚಿತ್ರತಂಡ ಬುಧವಾರ (ಮೇ 22) ಚಿತ್ರದ ಐದನೇ ಸೂಪರ್‌ ಸ್ಟಾರ್ ‘ಬುಜ್ಜಿ’ಯನ್ನು ಅನಾವರಣಗೊಳಿಸಿದೆ. ಇದಕ್ಕಾಗಿ ನಗರದ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಐದನೇ ಸೂಪರ್‌ ಸ್ಟಾರ್‌ ಬುಜ್ಜಿ ಬೇರೆ ಯಾರೂ ಅಲ್ಲ ನಾಯಕ ಭೈರವ (ಪ್ರಭಾಸ್‌)ನ ಆಪ್ತ ಸ್ನೇಹಿತ ಎಂದೇ ಕರೆಯಲ್ಪಡುವ ವಿಶೇಷ ವಾಹನ. ಬುಜ್ಜಿಯನ್ನು ಭವಿಷ್ಯದ ವಾಹನ ಎಂದೇ ಚಿತ್ರತಂಡ ಹೇಳಿಕೊಂಡು, ಅದರ ಕಿರು ಝಲಕ್‌ ಅನ್ನು ಅನಾವರಣಗೊಳಿಸಿದೆ. ನಿರ್ದೇಶಕ ನಾಗ್ ಅಶ್ವಿನ್, ನಿರ್ಮಾಪಕರಾದ ಸಿ. ಅಶ್ವಿನಿ ದತ್, ಸ್ವಪ್ನಾ ದತ್ ಚಲಸಾನಿ, ಪ್ರಿಯಾಂಕಾ ದತ್ ಚಲಸಾನಿ ಸೇರಿ ಸುಮಾರು ಇಪ್ಪತ್ತು ಸಾವಿರ ಪ್ರೇಕ್ಷಕರು ಮತ್ತು ಮಾಧ್ಯಮದವರ ಸಮ್ಮುಖದಲ್ಲಿ ಹೈದರಾಬಾದ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಬುಜ್ಜಿಯನ್ನು ಪ್ರೇಕ್ಷಕರ ಮುಂದಿಡಲಾಗಿದೆ.

ಬುಜ್ಜಿ ಹೆಸರಿನ ಈ ಆಪ್ತ ಗೆಳೆಯ ಚಿತ್ರದ ನಾಯಕ ಭೈರವನ ಅತ್ಯಂತ ನಂಬಿಕಸ್ಥ ಎನಿಸಿಕೊಂಡಿದೆ ಎಂದು ಚಿತ್ರ ತಂಡ ವಿವರಿಸಿದೆ. ಈ ಗೆಳೆಯನ ಕುರಿತು ವೈಜಯಂತಿ ನೆಟ್‍ವರ್ಕ್ ಯೂಟ್ಯೂಬ್‌ ಚಾನಲ್‍ನಲ್ಲಿ ಹೊಸ ವೀಡಿಯೋ ರಿಲೀಸ್‌ ಮಾಡಿದೆ. ವಿಡಿಯೋದಲ್ಲಿ ಬುಜ್ಜಿ ಹೇಗೆಲ್ಲ ಕೆಲಸ ಮಾಡುತ್ತೆ, ಭವಿಷ್ಯದ ಆಪ್ತ ಸ್ನೇಹಿತ ಎಂದು ಏಕೆ ಕರೆಯಲಾಗುತ್ತದೆ ಎಂಬುದು ಸ್ಪಷ್ಟವಾಗುತ್ತದೆ.

ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್ ಜತೆಗೆ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ತಯಾರಾಗುತ್ತಿರುವ ಈ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶನ ಮಾಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಚಿತ್ರದಲ್ಲಿನ ಅಮಿತಾಭ್ ಬಚ್ಚನ್‍ ಅವರ ಪಾತ್ರವನ್ನು ಅನಾವರಣಗೊಳಿಸಲಾಗಿತ್ತು. ಅಶ್ವತ್ಥಾಮನಾಗಿ ಅಮಿತಾಭ್‍ ನಟಿಸಿದ್ದು, ಅವರ ಪಾತ್ರ ಹೇಗಿರಬಹುದು ಎಂದು ಪ್ರೇಕ್ಷಕರು ತುದಿಗಾಲಲ್ಲಿ ಕಾಯುವಂತಾಗಿದೆ. ಅವರ ಪಾತ್ರ ಪರಿಚಯಿಸುವ ಟೀಸರ್‌ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಮತ್ತು ಇಂಗ್ಲಿಷ್‍ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.

ಇದನ್ನೂ ಓದಿ: Kalki 2898 AD: ʼಕಲ್ಕಿ 2898 ಎಡಿʼ ಚಿತ್ರದ ಹೊಸ ಪೋಸ್ಟರ್‌ ಔಟ್‌; ಪ್ರಭಾಸ್‌ ಪಾತ್ರದ ಹೆಸರು ರಿವೀಲ್‌

ಈ ಹಿಂದೆ ಚಿತ್ರದ ಬಗ್ಗೆ ಮಾತನಾಡಿದ್ದ ನಾಗ್‌ ಚೈತ್ಯನ್ಯ, ʼʼಈ ಸಿನಿಮಾದ ಕಥೆ ಮಹಾಭಾರತದ ಕಾಲಘಟ್ಟಲ್ಲಿ ಆರಂಭವಾಗಿ ಕ್ರಿ.ಶ. 2898ರಲ್ಲಿ ಕೊನೆಗೊಳ್ಳಲಿದೆ. ಆ ಮೂಲಕ ಸುಮಾರು 6,000 ವರ್ಷಗಳ ಕಥೆಯನ್ನು ತೆರೆ ಮೇಲೆ ಮೂಡಿಸಲಿದ್ದೇವೆ. ಇದಕ್ಕಾಗಿ ಬಹಳಷ್ಟು ಶ್ರಮ ವಹಿಸಿದ್ದೇವೆʼʼ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದರು. ಜತೆಗೆ ಮೊದಲ ಬಾರಿಗೆ ಪ್ರಭಾಸ್‌ ಮತ್ತು ದೀಪಿಕಾ ಪಡುಕೋಣೆ ತೆರೆಮೇಲೆ ಒಂದಾಗುತ್ತಿರುವುದೂ ನಿರೀಕ್ಷೆ ಹೆಚ್ಚಿಸಿದೆ.

Continue Reading
Advertisement
Former DGP Arrested
ಕ್ರೈಂ9 mins ago

Former DGP Arrested: ವಿಚ್ಛೇದಿತ ಪತ್ನಿಯ ದೂರು; ಮಾಜಿ ಡಿಜಿಪಿ ಜೈಲು ಪಾಲು

ಕ್ರೈಂ9 mins ago

Rameshwaram Cafe Blast: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ 5ನೇ ಆರೋಪಿಗೆ ಲಷ್ಕರ್–ಎ–ತಯ್ಬಾ ಜತೆ ಲಿಂಕ್‌!

CSK vs RC
ಕ್ರೀಡೆ15 mins ago

CSK vs RCB: ಮತ್ತೆ ಆರ್​ಸಿಬಿ, ಕೊಹ್ಲಿಯ ಬಗ್ಗೆ ಕಿಡಿಕಾರಿದ ಚೆನ್ನೈ ತಂಡದ ಮಾಜಿ ಆಟಗಾರ

BSNL network problem in Hosanagara The lawyer decided to climb the tower and protest
ಕರ್ನಾಟಕ17 mins ago

Hosanagara News: ಹೊಸನಗರದಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸಮಸ್ಯೆ; ಟವರ್‌ ಏರಿ ಪ್ರತಿಭಟನೆಗೆ ಮುಂದಾದ ವಕೀಲ!

union minister pralhad joshi spoke in North East Graduate Constituency Electoral Convention at ballari
ಕರ್ನಾಟಕ21 mins ago

MLC Election: ಜಗತ್ತು ತೆವಳುತ್ತಿದ್ದರೆ ಮೋದಿ ಭಾರತ ಓಡುತ್ತಿದೆ; ಸಚಿವ ಪ್ರಲ್ಹಾದ್‌ ಜೋಶಿ ವ್ಯಾಖ್ಯಾನ

Crocodile Attack
ಕರ್ನಾಟಕ28 mins ago

Crocodile Attack: ಕೃಷ್ಣಾ ನದಿಯಲ್ಲಿ ಬಾಲಕನನ್ನು ಎಳೆದೊಯ್ದ ಮೊಸಳೆ

Washing Machine Cleaning Tips
ಲೈಫ್‌ಸ್ಟೈಲ್29 mins ago

Washing Machine Cleaning Tips: ವಾಷಿಂಗ್ ಮೆಷಿನ್ ಹೆಚ್ಚು ಬಾಳಿಕೆ ಬರಬೇಕೆ? ಈ ರೀತಿ ಸ್ವಚ್ಛಗೊಳಿಸಿ

Ebola Virus
ಪ್ರಮುಖ ಸುದ್ದಿ37 mins ago

Ebola Virus: ಲ್ಯಾಬ್‌ನಲ್ಲಿ ಮತ್ತೊಂದು ಡೆಡ್ಲಿ ವೈರಸ್‌ ಸೃಷ್ಟಿಸಿದ ಚೀನಾ; ಈ ಲಕ್ಷಣ ಕಂಡರೆ ಮರಣ ನಿಶ್ಚಿತ!

Karnataka Weather Forecast
ಮಳೆ45 mins ago

Karnataka Weather : ಕೈಯಲ್ಲಿ ಛತ್ರಿ ಹಿಡಿದು ಬಸ್ ಡ್ರೈವಿಂಗ್; ಮಳೆಗೆ ಕುಸಿದು ಬಿದ್ದ ಮಾಳಿಗೆ ಮನೆ

Murder Attempt
ಕ್ರೈಂ46 mins ago

Murder Attempt: ಮಗು ಹೆಣ್ಣೋ ಗಂಡೋ ನೋಡಲು ಹೆಂಡತಿಯ ಹೊಟ್ಟೆ ಸೀಳಿದವನಿಗೆ ಜೀವಾವಧಿ ಶಿಕ್ಷೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ7 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌