IND vs NZ: ವಿಶ್ವಕಪ್​ನಲ್ಲಿ ಅನಿಲ್‌ ಕುಂಬ್ಳೆ ದಾಖಲೆ ಮುರಿದ ಮೊಹಮ್ಮದ್​ ಶಮಿ - Vistara News

ಕ್ರಿಕೆಟ್

IND vs NZ: ವಿಶ್ವಕಪ್​ನಲ್ಲಿ ಅನಿಲ್‌ ಕುಂಬ್ಳೆ ದಾಖಲೆ ಮುರಿದ ಮೊಹಮ್ಮದ್​ ಶಮಿ

ಮೊಹಮ್ಮದ್​ ಶಮಿ(Mohammed Shami) ಅವರು ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಭಾರತದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.

VISTARANEWS.COM


on

mohammed shami
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಧರ್ಮಶಾಲಾ: ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಆಡುವ ಅವಕಾಶ ಸಿಗದೆ ಇದ್ದ ಮೊಹಮ್ಮದ್​ ಶಮಿ(Mohammed Shami) ಅವರು ನ್ಯೂಜಿಲ್ಯಾಂಡ್(IND vs NZ)​ ವಿರುದ್ಧದ ಪಂದ್ಯದಲ್ಲಿ ಅವಕಾಶ ಪಡೆದಿದ್ದಾರೆ. ಕಣಕ್ಕಿಳಿದ ಈ ಪಂದ್ಯದಲ್ಲಿ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಭಾರತದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.

ಶಾರ್ದೂಲ್ ಠಾಕೂರ್​ ಅವರ ಸ್ಥಾನದಲ್ಲಿ ಆಡಲಿಳಿದ ಮೊಹಮ್ಮದ್​ ಶಮಿ ಅವರು ತಮ್ಮ ದ್ವಿತೀಯ ಓವರ್​ನ ಮೊದಲ ಎಸೆತದಲ್ಲೇ ಡೇಂಜರಸ್​ ಬ್ಯಾಟರ್​ ವಿಲ್​ ಯಂಗ್​ ಅವರ ವಿಕೆಟ್​ ಕಿತ್ತು. ಈ ಸಾಧನೆ ಮಾಡಿದರು. ಈ ಹಿಂದೆ 31 ವಿಕೆಟ್​ ಪಡೆದು ಮೂರನೇ ಸ್ಥಾನದಲ್ಲಿದ್ದ ಅನೀಲ್​ ಕುಂಬ್ಳೆ ದಾಖಲೆ ಪತನಗೊಂಡಿದೆ. ಸದ್ಯ ಶಮ್ಮಿ 32* ವಿಕೆಟ್​ ಪಡೆದಿದ್ದಾರೆ.

ಭಾರತ ಪರ ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ದಾಖಲೆ ಜಹೀರ್​ ಖಾನ್​ ಹೆಸರಿನಲ್ಲಿದೆ. ಅವರು 2003-2011 ವರೆಗೆ ವಿಶ್ವಕಪ್​ ಆಡಿ 44 ವಿಕೆಟ್​ಗಳನ್ನು ಕಿತ್ತಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಜಾವಗಲ್ ಶ್ರೀನಾಥ್​ ಕಾಣಿಸಿಕೊಂಡಿದ್ದಾರೆ. ಅವರು 1992-2003 ಆಡಿ 44 ವಿಕೆಟ್​ ಪಡೆದಿದ್ದಾರೆ. ಶಮಿ ಅವರು ಇನ್ನು 13 ವಿಕೆಟ್​ ಪಡೆದರೆ ಜಹೀರ್​ ಮತ್ತು ಶ್ರೀನಾಥ್​ ದಾಖಲೆಯನ್ನು ಮುರಿಯಲಿದ್ದಾರೆ.

ವಿಶ್ವ ದಾಖಲೆ ಗ್ಲೆನ್ ಮೆಕ್​ಗ್ರಾತ್ ಹೆಸರಿನಲ್ಲಿದೆ

ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್​ ಕಿತ್ತ ದಾಖಲೆ ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್​ಗ್ರಾತ್(Glenn McGrath) ಅವರ ಹೆಸರಿನಲ್ಲಿದೆ. 1996-2007ರ ತನಕ ವಿಶ್ವಕಪ್​ ಆಡಿದ ಸಾಧನೆ ಇವರದ್ದು. ಅಲ್ಲದೆ ಮೂರು ಬಾರಿಯ ವಿಶ್ವಕಪ್​ ವಿಜೇತ ತಂಡದ ಸದಸ್ಯ ಎಂಬ ಹಿರಿಮೆಯೂ ಇವರ ಪಾಲಿಗಿದೆ. 39 ವಿಶ್ವಕಪ್​ ಪಂದ್ಯ ಆಡಿರುವ ಅವರು 1955 ಬಾಲ್​ ಎಸೆದು 71 ವಿಕೆಟ್​ ಕೆಡವಿದ್ದಾರೆ. 42 ಮೇಡನ್​ ಒಳಗೊಂಡಿದೆ. 15 ರನ್​ಗೆ 7 ವಿಕೆಟ್​ ಕಿತ್ತದ್ದು ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ.

ಇದನ್ನೂ ಓದಿ Heinrich Klaasen: ಕ್ಲಾಸಿ ಶತಕ ಬಾರಿಸಿ ವಿಶ್ವಕಪ್​ನಲ್ಲಿ ದಾಖಲೆ ಬರೆದ ಕ್ಲಾಸೆನ್‌

ದಿಗ್ಗಜ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರು ವಿಶ್ವಕಪ್​ನಲ್ಲಿ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮುರಳೀಧರನ್ 1996-2011ರ ವರೆಗೆ ವಿಶ್ವಕಪ್​ ಆಡಿ 68 ವಿಕೆಟ್​ ಪಡೆದಿದ್ದಾರೆ. ಒಟ್ಟು 40 ಪಂದ್ಯ ಆಡಿದ್ದಾರೆ. 15 ಮೇಡನ್​, 19 ರನ್​ಗೆ 4 ವಿಕೆಟ್​ ಕಿತ್ತಿರುವುದು ವೈಯಕ್ತಿಕ ಸಾಧನೆಯಾಗಿದೆ.

ಯಾರ್ಕರ್​ ಕಿಂಗ್​ ಲಂಕಾದ ಲಸಿತ ಮಾಲಿಂಗ ಅವರು 2007-2019ರ ತನಕ ವಿಶ್ವಕಪ್​ ಆಡಿ 56 ವಿಕೆಟ್​ ಕಿತ್ತಿದ್ದಾರೆ. ಈ ಮೂಲಕ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಇದಲ್ಲದೆ ವಿಶ್ವಕಪ್​ ಟೂರ್ನಿಯಲ್ಲಿ ಎರಡು ಬಾರಿ ಹ್ಯಾಟ್ರಿಕ್​ ವಿಕೆಟ್​ ಪಡೆದ ಮೊದಲ ಬೌಲರ್​ ಎನಿಸಿಕೊಂಡಿದ್ದಾರೆ. 29 ಪಂದ್ಯಗಳನ್ನು ಆಡಿದ್ದಾರೆ. 38ಕ್ಕೆ 6 ವಿಕೆಟ್​ ಉತ್ತಮ ಬೌಲಿಂಗ್​ ಸಾಧನೆಯಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Sandeep Lamichhane: ಪಾಕ್​ ಆಟಗಾರನನ್ನು ಹಿಂದಿಕ್ಕಿ ಟಿ20 ಕ್ರಿಕೆಟ್​ನಲ್ಲಿ ದಾಖಲೆ ಬರೆದ ನೇಪಾಳ ಸ್ಪಿನ್ನರ್​

Sandeep Lamichhane: ನೇಪಾಳ ತಂಡದ ಪ್ರಮುಖ ಸ್ಪಿನ್ನರ್‌ ಸಂದೀಪ್‌ ಲಮಿಚಾನೆ(Sandeep Lamichhane) ಅವರು ಟಿ20 ಕ್ರಿಕೆಟ್​ನಲ್ಲಿ ಅತಿ ಕಡಿಮೆ ಪಂದ್ಯಗಳನ್ನಾಡಿ 100 ವಿಕೆಟ್​ ಕಿತ್ತ ವಿಶ್ವದ 2ನೇ ಬೌಲರ್​(fastest bowler to 100 T20I wickets) ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

VISTARANEWS.COM


on

Sandeep Lamichhane
Koo

ಕಿಂಗ್ಸ್‌ಟೌನ್‌: ಅತ್ಯಾಚಾರ ಪ್ರಕರಣ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸಿ ನಿರ್ದೋಷಿ ಎಂದು ಸಾಬೀತಾದ ಬಳಿಕ ಟಿ20 ವಿಶ್ವಕಪ್​ ಆಡಲಿಳಿದ ನೇಪಾಳ ತಂಡದ ಪ್ರಮುಖ ಸ್ಪಿನ್ನರ್‌ ಸಂದೀಪ್‌ ಲಮಿಚಾನೆ(Sandeep Lamichhane) ಅವರು ಟಿ20 ಕ್ರಿಕೆಟ್​ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಅತಿ ಕಡಿಮೆ ಪಂದ್ಯಗಳನ್ನಾಡಿ 100 ವಿಕೆಟ್​ ಕಿತ್ತ ವಿಶ್ವದ 2ನೇ ಬೌಲರ್​(fastest bowler to 100 T20I wickets) ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಸೋಮವಾರ ಬಾಂಗ್ಲಾದೇಶ(BAN vs NEP) ವಿರುದ್ಧದ ಟಿ20 ವಿಶ್ವಕಪ್​ ಲೀಗ್​ ಪಂದ್ಯದಲ್ಲಿ 2 ವಿಕೆಟ್​ ಪಡೆಯುವ ಮೂಲಕ ವೇಗವಾಗಿ 100 ವಿಕೆಟ್​ ಕಿತ್ತ ಮೈಲುಗಲ್ಲು ನಿರ್ಮಿಸಿದರು. ವಿಶ್ವ ದಾಖಲೆ ಅಫಘಾನಿಸ್ತಾನ ತಂಡದ ನಾಯಕ ರಶೀದ್​ ಖಾನ್(Rashid Khan)​ ಹೆಸರಿನಲ್ಲಿದೆ. ರಶೀದ್​ 53 ಪಂದ್ಯಗಳಿಂದ 100 ವಿಕೆಟ್​ ಕಿತ್ತಿದ್ದಾರೆ. ಲಮಿಚಾನೆ 54 ಪಂದ್ಯ ಆಡಿ 100 ವಿಕೆಟ್​ ಪೂರ್ತಿಗೊಳಿಸಿದರು. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಂದೀಪ್‌ ಲಮಿಚಾನೆಗೆ ಯುಎಸ್‌ ವೀಸಾ ಲಭಿಸುವುದು ವಿಳಂಬವಾಗಿತ್ತು. ಹೀಗಾಗಿ ಅವರು ಆರಂಭಿಕ ಪಂದ್ಯಳಲ್ಲಿ ಆಡುವ ಅವಕಾಶ ಕಳೆದುಕೊಂಡರು.

ಟಿ20ಯಲ್ಲಿ ವೇಗವಾಗಿ 100 ವಿಕೆಟ್​ ಕಿತ್ತ ಬೌಲರ್​ಗಳು


ರಶೀದ್​ ಖಾನ್​-53 ಪಂದ್ಯ

ಸಂದೀಪ್‌ ಲಮಿಚಾನೆ-54 ಪಂದ್ಯ

ಹ್ಯಾರಿಸ್ ರೌಫ್- 71 ಪಂದ್ಯ

ಮಾರ್ಕ್ ಅಡೇರ್-72 ಪಂದ್ಯ

ಬಿಲಾಲ್ ಖಾನ್-72 ಪಂದ್ಯ

ಲಸಿತ್ ಮಾಲಿಂಗ-76 ಪಂದ್ಯ

ಸಂದೀಪ್‌ ಲಮಿಚಾನೆ ಅವರು 18 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 8 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಇದೇ ವರ್ಷದ ಜನವರಿಯಲ್ಲಿ ಕಠ್ಮಂಡು ಜಿಲ್ಲಾ ನ್ಯಾಯಾಲಯವು ಲಮಿಚಾನೆಗೆ 8 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿತ್ತು. ಶಿಶಿರ್ ರಾಜ್ ಧಾಕಲ್ ಅವರ ಪೀಠವು ವಿಚಾರಣೆಯ ಬಳಿಕ 8 ವರ್ಷಗಳ ಜೈಲು ಶಿಕ್ಷೆ, ಪರಿಹಾರ ಮತ್ತು ದಂಡದ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಸಂದೀಪ್ ಲಮಿಚಾನೆ ಹೈಕೋರ್ಟ್ ಮೆಟ್ಟಿಲ್ಲೇರಿದ್ದರು. ಮರು ವಿಚಾರಣೆ ನಡೆಸಿದ ನೇಪಾಳ ಹೈಕೋರ್ಟ್(Nepal High Court) ಕಳೆದ ತಿಂಗಳಷ್ಟೇ ಲಮಿಚಾನೆ ಅವರನ್ನು ನಿರಪರಾಧಿ ಎಂದು ಘೋಷಿಸಿತ್ತು. ನಿರಪರಾಧಿ ಎಂದು ಸಾಬೀತಾದ ನಂತರ ಸಂದೀಪ್ ಅವರಿಗೆ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ನೀಡಲಾಗಿತ್ತು.

ಇದನ್ನೂ ಒದಿ Euro 2024: ಗೆಲುವಿನ ಶುಭಾರಂಭ ಕಂಡ ಇಂಗ್ಲೆಂಡ್​; ರೋಚಕ ಗೆಲುವು ಸಾಧಿಸಿದ ನೆದರ್ಲೆಂಡ್ಸ್

ಏನಿದು ಪ್ರಕರಣ?

2022ರಲ್ಲಿ ಲಾಮಿಚಾನೆ ವಿರುದ್ಧ ಹದಿಹರೆಯದ ಹುಡುಗಿಯೊಬ್ಬಳು ಅತ್ಯಾಚಾರದ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಳು. ಈ ಆರೋಪದ ಬಳಿಕ ಲಾಮಿಚಾನೆ ಬಂಧನ ಕೂಡ ಆಗಿತ್ತು. ಕ್ರಿಮಿನಲ್ ಕೋಡ್ 2074 ರ ಸೆಕ್ಷನ್ 219 ರ ಅಡಿಯಲ್ಲಿ ಕ್ರಿಕೆಟಿಗನ ಮೇಲೆ ಆರೋಪ ಹೊರಿಸಲಾಗಿತ್ತು.

2022ರಲ್ಲಿ ಲಾಮಿಚಾನೆ ಅವರು ವೆಸ್ಟ್​ ಇಂಡೀಸ್​ನಲ್ಲಿ ನಡೆಯುತ್ತಿದ್ದ ಕೆರಿಬಿಯನ್​ ಕ್ರಿಕೆಟ್​ ಲೀಗ್​ನಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ವೇಳೆ ಅವರ ಮೇಲೆ ಅತ್ಯಾಚಾರದ ದೂರು ದಾಖಲಾಗಿತ್ತು. ತನಿಖೆಗೆ ಹಾಜರಾಗದ ಕಾರಣ ಅವರ ವಿರುದ್ಧ ಕೋರ್ಟ್​ ಜಾಮೀನು ರಹಿತ ವಾರಂಟ್​ ಹೊರಡಿಸಿತ್ತು. ಬಳಿಕ ಅವರು ತವರಿಗೆ ಮರಳಿದ್ದರು. ಅವರನ್ನು ವಿಮಾನ ನಿಲ್ದಾಣದಲ್ಲೇ ಪೊಲೀಸರು ವಶಪಡಿಸಿಕೊಂಡು ಕೋರ್ಟ್​ಗೆ ಹಾಜರುಪಡಿಸಿದ್ದರು. ಕೆಳ ಹಂತದ ನ್ಯಾಯಾಲಯ ಲಾಮಿಚಾನೆಯನ್ನು ನ್ಯಾಯಾಂಗ ಬಂಧನದಲ್ಲಿ ಇಡುವಂತೆ ಆದೇಶಿಸಿತ್ತು. ಹೀಗಾಗಿ ಮೂರು ತಿಂಗಳು ಜೈಲಿನಲ್ಲಿದ್ದರು.

Continue Reading

ಕ್ರೀಡೆ

Smriti Mandhana: ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಸ್ಮೃತಿ ಮಂಧಾನ

Smriti Mandhana: ಸ್ಮೃತಿ ಮಂಧಾನ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7 ಸಾವಿರ ರನ್‌ಗಳನ್ನು ಪೂರ್ತಿಗೊಳಿಸಿದ ಮೈಲುಗಲ್ಲು ನಿರ್ಮಿಸಿದರು. ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾತಿಘ ಎನ್ನುವ ಹಿರಿಗೆಮೆ ಪಾತ್ರರಾದರು.

VISTARANEWS.COM


on

Smriti Mandhana
Koo

ಬೆಂಗಳೂರು: ಭಾನುವಾರ ನಡೆದ ದಕ್ಷಿಣ ಆಫ್ರಿಕಾ(NDW vs RSAW) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಭರ್ಜರಿ 143 ರನ್​ ಜಯ ಸಾಧಿಸಿ ಸರಣಿಯಲ್ಲಿ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಸೊಗಸಾದ ಬ್ಯಾಟಿಂಗ್​ ನಡೆಸಿ ಶತಕ ಬಾರಿಸಿದ ಎಡಗೈ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ(Smriti Mandhana) ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪದಲ್ಲಿ ಸೇರಿ 7 ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದ ದಾಖಲೆ ಬರೆದಿದ್ದಾರೆ. ಮಂಧನಾ ಅವರ 6ನೇ ಏಕದಿನ ಶತಕ ಇದಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ 56 ರನ್‌ಗಳನ್ನು ಕಲೆ ಹಾಕುತ್ತಿದ್ದಂತೆ ಸ್ಮೃತಿ ಮಂಧಾನ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7 ಸಾವಿರ ರನ್‌ಗಳನ್ನು ಪೂರ್ತಿಗೊಳಿಸಿದ ಮೈಲುಗಲ್ಲು ನಿರ್ಮಿಸಿದರು. ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾತಿಘ ಎನ್ನುವ ಹಿರಿಗೆಮೆ ಪಾತ್ರರಾದರು. ದಾಖಲೆ ಮಾಜಿ ಆಟಗಾರ್ತಿ ಮಿಥಾಲಿ ರಾಜ್(Mithali Raj) ಹೆಸರಿನಲ್ಲಿದೆ. ಮಿಥಾಲಿ ರಾಜ್ ಅವರು 10868 ರನ್‌ಗಳನ್ನು ಬಾರಿಸಿದ್ದಾರೆ. 7,059 ರನ್​ ಪೂರ್ತಿಗೊಳಿಸಿದ ಮಂಧಾನಗೆ ಬಿಸಿಸಿಐ ಶುಭ ಹಾರೈಸಿದೆ.


ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದಕೊಂಡ ಭಾರತ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. 15 ರನ್​ ಒಟ್ಟುಗೂಡುವಷ್ಟರಲ್ಲಿ ಶಫಾಲಿ ವರ್ಮ(7) ವಿಕೆಟ್​ ಪತನಗೊಂಡಿತು. ಬಳಿಕ ಬಂದ ಹೇಮಲತಾ(12), ಜೆಮಿಮಾ ರೋಡ್ರಿಗಸ್​(17), ನಾಯಕಿ ಹರ್ಮನ್​ ಪ್ರೀತ್​ ಕೌರ್​(10), ರಿಚಾ ಘೋಷ್​(3) ಕಳಪೆ ಬ್ಯಾಟಿಂಗ್​ ನಡೆಸಿ ವಿಕೆಟ್​ ಕಳೆದುಕೊಂಡರು. ಈ ವೇಳೆ ಏಕಾಂಗಿಯಾಗಿ ಹೋರಾಡಿದ ಮಂಧನಾ ಶತಕ ಬಾರಿಸಿ ತಂಡದ ಪಾಲಿಗೆ ಆಪತ್ಬಾಂಧವರಾಗಿ ಮೂಡಿಬಂದರು.

47ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಮಂಧಾನ 12 ಬೌಂಡರಿ ಮತ್ತು ಒಂದು ಸಿಕ್ಸರ್​ ಸಿಡಿಸಿ 117 ರನ್​ ಬಾರಿಸಿದರು. ಇವರಿಗೆ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ದೀಪ್ತಿ ಶರ್ಮ ಮತ್ತು(37) ಮತ್ತು ಪೂಜಾ ವಸ್ತ್ರಾಕರ್​(31*) ಉತ್ತಮ ಸಾಥ್​ ನೀಡಿದರು. ಹೀಗಾಗಿ ತಂಡ 250ರ ಗಡಿ ದಾಟಿತು. ಚೇಸಿಂಗ್​ ನಡೆಸಿದ ದಕ್ಷಿಣ ಆಫ್ರಿಕಾ ಆಶಾ ಸೋಬನಾ( 4 ವಿಕೆಟ್​) ಅವರ ಸ್ಪಿನ್​ ಬೌಲಿಂಗ್​ ದಾಳಿಗೆ ಕೇವಲ 122 ರನ್​ಗೆ ಸರ್ವಪತನ ಕಂಡಿತು. ಪದಾರ್ಪಣ ಪಂದ್ಯದಲ್ಲೇ ಆಶಾ ಸೋಬನಾ ಅಮೊಘ ಪ್ರದರ್ಶನ ತೋರುವ ಮೂಲಕ ಭಾರತ ತಂಡದಲ್ಲಿ ಖಾಯಂ ಸ್ಥಾನವನ್ನು ಗಿಟ್ಟಿಸಿಕೊಳ್ಳುವ ಭರವಸೆ ಮೂಡಿಸಿದ್ದಾರೆ.

ಇದನ್ನೂ ಓದಿ Smriti Mandhana: ಆರ್​ಸಿಬಿ ಅಭಿಮಾನಿಗಳ ಕ್ರೇಜ್​ಗೆ ಫಿದಾ ಆದ ಸ್ಮೃತಿ ಮಂಧಾನ

ಸಂಕ್ಷಿಪ್ತ ಸ್ಕೋರ್‌: ಭಾರತ-8 ವಿಕೆಟಿಗೆ 265 (ಮಂಧನಾ 117, ದೀಪ್ತಿ 37, ಪೂಜಾ ಔಟಾಗದೆ 31, ಅಯಬೊಂಗಾ ಖಾಕಾ 47ಕ್ಕೆ 3, ಮಸಬಟಾ ಕ್ಲಾಸ್‌ 51ಕ್ಕೆ 2). ದಕ್ಷಿಣ ಆಫ್ರಿಕಾ-37.4 ಓವರ್‌ಗಳಲ್ಲಿ 122 (ಸುನೆ ಲೂಸ್‌ 33, ಸಿನಾಲೊ ಜಾಫ‌¤ 27, ಮರಿಜಾನ್‌ ಕಾಪ್‌ 24, ಆಶಾ 21ಕ್ಕೆ 4, ದೀಪ್ತಿ 10ಕ್ಕೆ 2). ಪಂದ್ಯಶ್ರೇಷ್ಠ: ಸ್ಮೃತಿ ಮಂಧನಾ

Continue Reading

ಕ್ರೀಡೆ

BAN vs NEP: ಸ್ವಿಮ್ಮಿಂಗ್ ಪೂಲ್​ಗೆ ಜಿಗಿದು ಸಂಭ್ರಮಿಸಿದ ನೇಪಾಳ ಅಭಿಮಾನಿ; ವಿಡಿಯೊ ವೈರಲ್​

BAN vs NEP: ನೇಪಾಳ ತಂಡದ ಬೌಲಿಂಗ್​ ಇನಿಂಗ್ಸ್​ನ 5ನೇ ಓವರ್​ ನಾಯಕ ರೋಹಿತ್ ಪೌಡೆಲ್ ಎಸೆದರು. ಈ ಓವರ್​ನ 4ನೇ ಎಸೆತಕ್ಕೆ ಬಾಂಗ್ಲಾದೇಶದ ಬ್ಯಾಟರ್​ ತೌಹಿದ್ ಹೃದಯೋಯ್ ಸಿಕ್ಸರ್​ ಬಾರಿಸುವ ಯತ್ನದಲ್ಲಿ ಸಂದೀಪ್ ಲಮಿಚಾನೆಗೆ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಈ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ನೇಪಾಳದ ಅಭಿಮಾನಿಯೊಬ್ಬ ಸಂತಸದಲ್ಲಿ ಸ್ಟೇಡಿಯಂನ ಮುಂದೆ ಇದ್ದ ಸ್ವಿಮ್ಮಿಂಗ್ ಪೂಲ್​ಗೆ ಜಿಗಿದ್ದಾನೆ.

VISTARANEWS.COM


on

BAN vs NEP
Koo

ಕಿಂಗ್‌ಸ್ಟನ್‌: ಸೋಮವಾರ ನಡೆದ ಟಿ20 ವಿಶ್ವಕಪ್​ನ(T20 World Cup 2024) ಲೀಗ್​ ಪಂದ್ಯದಲ್ಲಿ ನೇಪಾಳ(BAN vs NEP) ತಂಡ ಬಾಂಗ್ಲಾದೇಶ ವಿರುದ್ಧ ಸೋಲು ಕಂಡರೂ ಕೂಡ ಅಭಿಮಾನಿಯೊಬ್ಬ ನೇಪಾಳ ತಂಡಕ್ಕೆ ಬೆಂಬಲ ಸೂಚಿಸಿದ ರೀತಿ ಎಲ್ಲರ ಗಮನಸೆಳೆದಿದೆ. ಬಾಂಗ್ಲಾದೇಶದ ವಿಕೆಟ್​ ಪತನಗೊಂಡ ವೇಳೆ ಈ ಅಭಿಮಾನಿ ಸ್ಟೇಡಿಯಂನಲ್ಲಿದ್ದ ಸ್ವಿಮ್ಮಿಂಗ್ ಪೂಲ್​ಗೆ(Nepal Fan Jumps in Swimming Pool) ಜಿಗಿದು ಸಂಭ್ರಮಿಸಿದ್ದಾನೆ. ಈ ವಿಡಿಯೊವನ್ನು ಐಸಿಸಿ ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದೆ. ವಿಡಿಯೊ ಎಲ್ಲೆಡೆ ವೈರಲ್​ ಆಗಿದೆ.

ನೇಪಾಳ ತಂಡದ ಬೌಲಿಂಗ್​ ಇನಿಂಗ್ಸ್​ನ 5ನೇ ಓವರ್​ ನಾಯಕ ರೋಹಿತ್ ಪೌಡೆಲ್ ಎಸೆದರು. ಈ ಓವರ್​ನ 4ನೇ ಎಸೆತಕ್ಕೆ ಬಾಂಗ್ಲಾದೇಶದ ಬ್ಯಾಟರ್​ ತೌಹಿದ್ ಹೃದಯೋಯ್ ಸಿಕ್ಸರ್​ ಬಾರಿಸುವ ಯತ್ನದಲ್ಲಿ ಸಂದೀಪ್ ಲಮಿಚಾನೆಗೆ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಈ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ನೇಪಾಳದ ಅಭಿಮಾನಿಯೊಬ್ಬ ಸಂತಸದಲ್ಲಿ ಸ್ಟೇಡಿಯಂನ ಮುಂದೆ ಇದ್ದ ಸ್ವಿಮ್ಮಿಂಗ್ ಪೂಲ್​ಗೆ ಜಿಗಿದ್ದಾನೆ. ಈ ವಿಡಿಯೊವನ್ನು ಐಸಿಸಿ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುವುದರ ಜತೆಗೆ ಈ ದೃಶ್ಯಕ್ಕೆ ಉತ್ತಮ ಎಸೆತ, ಉತ್ತಮ ಕ್ಯಾಚ್, ಉತ್ತಮ ಪೂಲ್ ಆಚರಣೆ ಎಂದು ಇನ ಬರೆದುಕೊಂಡಿದೆ.


ಇಲ್ಲಿನ ಸೇಂಟ್ ವಿನ್ಸೆಂಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಬಾಂಗ್ಲಾದೇಶ 19.3 ಓವರ್​ಗಳಲ್ಲಿ ಕೇವಲ 106 ರನ್​ಗೆ ಕುಸಿತ ಕಂಡಿತು. ಈ ಮೊತ್ತವನ್ನು ನೋಡುವಾಗ ಬಾಂಗ್ಲಾ ಸೋಲು ಕಾಣಬಹುದೆಂದು ಊಹಿಸಲಾಯಿತು. ಆದರೆ, ಬಾಂಗ್ಲಾ ಬೌಲರ್​ಗಳು ಉತ್ಕೃಷ್ಟ ಮಟ್ಟದ ಬೌಲಿಂಗ್​ ದಾಳಿ ನಡೆಸಿ ನೇಪಾಳವನ್ನು 85 ರನ್​ಗೆ ಕಟ್ಟಿಹಾಕಿ ಅಮೋಘ ಗೆಲುವು ಸಾಧಿಸಿದರು. ಈ ಗೆಲುವಿನೊಂದಿಗೆ ಬಾಂಗ್ಲಾ ಸೂಪರ್​-8 ಹಂತಕ್ಕೂ ಪ್ರವೇಶ ಪಡೆಯಿತು. ಭಾರತ, ಆಸ್ಟ್ರೇಲಿಯಾ, ಅಫಘಾನಿಸ್ತಾನ ತಂಡದ ಜತೆ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಇದನ್ನೂ ಓದಿ T20 World Cup 2024: ಸೂಪರ್​-8 ಹಂತದ ವೇಳಾಪಟ್ಟಿ ಪ್ರಕಟ; 8 ತಂಡಗಳ ಮಾಹಿತಿ ಹೀಗಿದೆ

ಸಣ್ಣ ಮೊತ್ತವನ್ನು ಚೇಸಿಂಗ್​ ನಡೆಸಿದ ನೇಪಾಳ ಆರಂಭಿಕ ಆಘಾತ ಎದುರಿಸಿದರೂ ಕೂಡ ಮಧ್ಯಮ ಕ್ರಮಾಂಕದಲ್ಲಿ ಕುಶಾಲ್ ಮಲ್ಲ ಮತ್ತು ದೀಪೇಂದ್ರ ಸಿಂಗ್ ಐರಿ ಉತ್ತಮ ಜತೆಯಾಟವೊಂದನ್ನು ಸಂಘಟಿಸಿದ ಕಾರಣ ತಂಡ ಚೇತರಿಕೆಯ ಹಾದಿಗೆ ಮರಳಿ ಗೆಲುವು ಕಾಣುವ ಸ್ಥಿತಿಯಲ್ಲಿತ್ತು. ಆದರೆ, ಮುಸ್ತಫಿಜುರ್​ ರೆಹಮಾನ್​ ಅವರು ಉಭತ ಆಟಗಾರರ ವಿಕೆಟ್​ ಬೇಟೆಯಾಡಿ ಬಾಂಗ್ಲಾಗೆ ಯಶಸ್ಸು ತಂದುಕೊಟ್ಟರು. ಕುಶಾಲ್ ಮಲ್ಲ 27 ರನ್​ ಬಾರಿಸಿದರೆ, ದೀಪೇಂದ್ರ ಸಿಂಗ್ 25 ರನ್​ ಗಳಿಸಿದರು. ಇವರಿಬ್ಬರ ವಿಕೆಟ್​ ಪತನಗೊಳ್ಳುತ್ತಿದ್ದಂತೆ ನೆಪಾಳ ಸೋಲು ಕೂಡ ಖಚಿತಗೊಂಡಿತು.

ಬಾಂಗ್ಲಾದೇಶದ ಪರ ಘಾತಕ ಬೌಲಿಂಗ್​ ದಾಳಿ ನಡೆಸಿದ ತಂಜಿಮ್ ಹಸನ್ ಸಾಕಿಬ್ 4 ಓವರ್​ ಎಸೆದು 2 ಮೇಡನ್​ ಸಹಿತ ಕೇವಲ 7 ರನ್​ಗೆ 4 ವಿಕೆಟ್​ ಕಿತ್ತು. ಜೀವನಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರಿದರು. ಮುಸ್ತಫಿಜುರ್ ರೆಹಮಾನ್ 7 ರನ್​ಗೆ 3 ವಿಕೆಟ್​ ಪಡೆದರು. ನಾಯಕ ಶಕೀಬ್​ 2 ವಿಕೆಟ್​ ಕಿತ್ತು ಮಿಂಚಿದರು. ಮುಂದಿನ ಪಂದ್ಯದಲ್ಲಿ ಶಕೀಬ್​ ಮೊದಲ ಎಸೆತದಲ್ಲೇ ವಿಕೆಟ್​ ಕಿತ್ತರೆ ಬ್ರೋಕನ್​ ಹ್ಯಾಟ್ರಿಕ್​ ವಿಕೆಟ್​ ಕಿತ್ತ ದಾಖಲೆ ಮಾಡಲಿದ್ದಾರೆ.

Continue Reading

ಕ್ರೀಡೆ

T20 World Cup 2024: ಸೂಪರ್​-8 ಹಂತದ ವೇಳಾಪಟ್ಟಿ ಪ್ರಕಟ; 8 ತಂಡಗಳ ಮಾಹಿತಿ ಹೀಗಿದೆ

T20 World Cup 2024: ಸೂಪರ್​ 8 ಹಂತದ ಮೊದಲ ಪಂದ್ಯ ಜೂನ್​ 19ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ಸೆಣಸಾಟ ನಡೆಸಲಿವೆ.

VISTARANEWS.COM


on

T20 World Cup 2024
Koo

ನ್ಯೂಯಾರ್ಕ್​: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ಸಾಗುತ್ತಿರುವ ಟಿ20 ವಿಶ್ವಕಪ್(T20 World Cup 2024) ಟೂರ್ನಿಯ ಸೂಪರ್​-8 ಹಂತದ(Super Eight stage) ತಂಡಗಳ ಪಟ್ಟಿ ಅಂತಿಮಗೊಂಡಿದೆ. ಇಂದು(ಸೋಮವಾರ) ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ನೇಪಾಳ ವಿರುದ್ಧ ಗೆಲುವು ಸಾಧಿಸುವ ಮೂಲಕ ಈ ಪಟ್ಟಿ ಅಂತಿಮಗೊಂಡಿತು. 7 ತಂಡಗಳು ಈಗಾಗಲೇ ಈ ಹಂತಕ್ಕೇರಿತ್ತು. ಆದರೆ ಉಳಿದ ಒಂದು ಸ್ಥಾನಕ್ಕಾಗಿ ಡಿ ಗುಂಪಿನಿಂದ ಬಾಂಗ್ಲಾ ಮತ್ತು ನೆದರ್ಲೆಂಡ್ಸ್​ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಬಾಂಗ್ಲಾ ಮೇಲುಗೈ ಸಾಧಿಸಿ ಅಂತಿಮವಾಗಿ ತೇರ್ಗಡೆಗೊಂಡಿದೆ.

ಬಾಂಗ್ಲಾದೇಶ ‘ಎ’ ಗುಂಪಿನಲ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ಅಪಘಾನಿಸ್ತಾನದ ಜತೆ ಸ್ಥಾನ ಪಡೆದಿದೆ. ‘ಬಿ’ ಗುಂಪಿನಲ್ಲಿ ವೆಸ್ಟ್​ ಇಂಡೀಸ್​, ಅಮೆರಿಕ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್​ ತಂಡಗಳು ಕಾಣಿಸಿಕೊಂಡಿವೆ. ಲೀಗ್​ ಹಂತದ ಪಂದ್ಯಕ್ಕೆ ನಾಳೆ ತೆರೆ ಬೀಳಲಿದೆ. ಅಂತಿಮ ಪಂದ್ಯದಲ್ಲಿ ವಿಂಡೀಸ್​ ಮತ್ತು ಆಫ್ಘಾನ್​ ಮುಖಾಮುಖಿಯಾಗಲಿವೆ. ಸೂಪರ್​ 8 ಹಂತದ ಮೊದಲ ಪಂದ್ಯ ಜೂನ್​ 19ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ಸೆಣಸಾಟ ನಡೆಸಲಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಅಫಘಾನಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯ ಜೂನ್​ 20ರಂದು ಬಾರ್ಬಡೋಸ್​ನಲ್ಲಿ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಹೈವೋಲ್ಟೇಜ್​ ಪಂದ್ಯ ಜೂನ್​ 24 ಭಾನುವಾರದಂದು ನಡೆಯಲಿದೆ. ಟೀಮ್​ ಇಂಡಿಯಾದ ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಸಾರಗೊಳ್ಳಲಿದೆ.

ಇದನ್ನೂ ಓದಿ BAN vs NEP: ಸೂಪರ್​-8 ಪ್ರವೇಶಿಸಿದ ಬಾಂಗ್ಲಾದೇಶ; ನೇಪಾಳ ವಿರುದ್ಧ 21 ರನ್​ ಗೆಲುವು

ಭಾರತದ ಸೂಪರ್​-8 ಪಂದ್ಯದ ವೇಳಾಪಟ್ಟಿ

ಎದುರಾಳಿದಿನಾಂಕತಾಣಪ್ರಸಾರ
ಭಾರತ-ಅಫಘಾನಿಸ್ತಾನಜೂನ್​ 20ಬಾರ್ಬಡೋಸ್ರಾತ್ರಿ 8ಕ್ಕೆ
ಭಾರತ-ಬಾಂಗ್ಲಾದೇಶಜೂನ್​ 22ಆಂಟಿಗುವಾರಾತ್ರಿ 8ಕ್ಕೆ
ಭಾರತ-ಆಸ್ಟ್ರೇಲಿಯಾಜೂನ್​ 24ಸೇಂಟ್ ಲೂಸಿಯಾರಾತ್ರಿ 8ಕ್ಕೆ

ಬಾಂಗ್ಲಾಗೆ 21 ರನ್​ ಜಯ


ಸೋಮವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ನೇಪಾಳ ವಿರುದ್ಧ 21 ರನ್​ ಅಂತರದಿಂದ ಗೆದ್ದು ಸೂಪರ್​-8ಗೆ ಪ್ರವೇಶ ಪಡೆಯಿತು. ಇಲ್ಲಿನ ಸೇಂಟ್ ವಿನ್ಸೆಂಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಬಾಂಗ್ಲಾದೇಶ 19.3 ಓವರ್​ಗಳಲ್ಲಿ ಕೇವಲ 106 ರನ್​ಗೆ ಕುಸಿತ ಕಂಡಿತು. ಈ ಮೊತ್ತವನ್ನು ನೋಡುವಾಗ ಬಾಂಗ್ಲಾ ಸೋಲು ಕಾಣಬಹುದೆಂದು ಊಹಿಸಲಾಯಿತು. ಆದರೆ, ಬಾಂಗ್ಲಾ ಬೌಲರ್​ಗಳು ಉತ್ಕೃಷ್ಟ ಮಟ್ಟದ ಬೌಲಿಂಗ್​ ದಾಳಿ ನಡೆಸಿ ನೇಪಾಳವನ್ನು 85 ರನ್​ಗೆ ಕಟ್ಟಿಹಾಕಿ ಅಮೋಘ ಗೆಲುವು ಸಾಧಿಸಿದರು.

ಬಾಂಗ್ಲಾದೇಶದ ಪರ ಘಾತಕ ಬೌಲಿಂಗ್​ ದಾಳಿ ನಡೆಸಿದ ತಂಜಿಮ್ ಹಸನ್ ಸಾಕಿಬ್ 4 ಓವರ್​ ಎಸೆದು 2 ಮೇಡನ್​ ಸಹಿತ ಕೇವಲ 7 ರನ್​ಗೆ 4 ವಿಕೆಟ್​ ಕಿತ್ತು. ಜೀವನಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರಿದರು. ಮುಸ್ತಫಿಜುರ್ ರೆಹಮಾನ್ 7 ರನ್​ಗೆ 3 ವಿಕೆಟ್​ ಪಡೆದರು. ನಾಯಕ ಶಕೀಬ್​ 2 ವಿಕೆಟ್​ ಕಿತ್ತು ಮಿಂಚಿದರು. ಮುಂದಿನ ಪಂದ್ಯದಲ್ಲಿ ಶಕೀಬ್​ ಮೊದಲ ಎಸೆತದಲ್ಲೇ ವಿಕೆಟ್​ ಕಿತ್ತರೆ ಬ್ರೋಕನ್​ ಹ್ಯಾಟ್ರಿಕ್​ ವಿಕೆಟ್​ ಕಿತ್ತ ದಾಖಲೆ ಮಾಡಲಿದ್ದಾರೆ.

Continue Reading
Advertisement
Gold Rate Today
ಚಿನ್ನದ ದರ4 mins ago

Gold Rate Today: ಆಭರಣ ಖರೀದಿಸುವವರಿಗೆ ರಿಲೀಫ್‌; ಇಳಿದ ಚಿನ್ನದ ದರ

GPF Interest
ಕರ್ನಾಟಕ5 mins ago

GPF Interest: 5 ಲಕ್ಷ ಮೀರಿದ ಜಿಪಿಎಫ್‌ಗೆ ಬಡ್ಡಿ ಪಾವತಿಸಲು ರಾಜ್ಯ ಸರ್ಕಾರ ಆದೇಶ

Actor Darshan
ಮೈಸೂರು6 mins ago

Actor Darshan : ಕೊಲೆ ಕೇಸ್‌ ಬೆನ್ನಲ್ಲೆ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Actor Darshan Police To Serve Notice To sandalwood comedy actor
ಸ್ಯಾಂಡಲ್ ವುಡ್20 mins ago

Actor Darshan: ದರ್ಶನ್ ಪ್ರಕರಣ; ಸ್ಯಾಂಡಲ್‌ವುಡ್‌ ಖ್ಯಾತ ಹಾಸ್ಯ ನಟ ಚಿಕ್ಕಣ್ಣಗೂ ನೋಟಿಸ್‌?

Viral Video
ಪ್ರಮುಖ ಸುದ್ದಿ23 mins ago

Viral Video: ಬಕ್ರೀದ್ ಬಲಿ ಕೊಡುವ ಮೇಕೆಯ ಮೈಮೇಲೆ ʼರಾಮʼ ನಾಮ; ಹಿಂದೂಗಳನ್ನು ಕೆಣಕಿದ ವ್ಯಕ್ತಿ ಅರೆಸ್ಟ್

Sandeep Lamichhane
ಕ್ರೀಡೆ24 mins ago

Sandeep Lamichhane: ಪಾಕ್​ ಆಟಗಾರನನ್ನು ಹಿಂದಿಕ್ಕಿ ಟಿ20 ಕ್ರಿಕೆಟ್​ನಲ್ಲಿ ದಾಖಲೆ ಬರೆದ ನೇಪಾಳ ಸ್ಪಿನ್ನರ್​

Yogi Adithyanath
Latest26 mins ago

Yogi Adithyanath: ಎರಡು ವರ್ಷಗಳ ಬಳಿಕ ತಾಯಿಯನ್ನು ಭೇಟಿಯಾದ ಯೋಗಿ ಆದಿತ್ಯನಾಥ್

Reasi Terror Attack
ವೈರಲ್ ನ್ಯೂಸ್37 mins ago

Reasi Terror Attack: ಪಾಕಿಸ್ತಾನದಲ್ಲಿ ರಿಯಾಸಿ ಭಯೋತ್ಪಾದಕ ದಾಳಿಯ ಮಾಸ್ಟರ್‌ ಮೈಂಡ್‌ನ ಹತ್ಯೆ; ವಿಡಿಯೊ ವೈರಲ್‌

Bakrid 2024
ಬೆಂಗಳೂರು50 mins ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Actor Darshan Please leave Pavitra Darshan request to police
ಸಿನಿಮಾ1 hour ago

Actor Darshan: ಪ್ಲೀಸ್‌ ಪವಿತ್ರಾಳನ್ನು ಬಿಟ್ಟು ಬಿಡಿ ಎಂದು ಅಂಗಲಾಚುತ್ತಿರುವ ದರ್ಶನ್‌?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bakrid 2024
ಬೆಂಗಳೂರು50 mins ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ19 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ20 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 day ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

ಟ್ರೆಂಡಿಂಗ್‌