BBK Season 10 : ಬಿಗ್‌ ಬಾಸ್‌ನಿಂದ ಹೊರಬಿದ್ದ ಗೌರೀಶ್‌ ಅಕ್ಕಿ; ಇದು ಸ್ಕ್ರಿಪ್ಟೆಡಾ? - Vistara News

ಪ್ರಮುಖ ಸುದ್ದಿ

BBK Season 10 : ಬಿಗ್‌ ಬಾಸ್‌ನಿಂದ ಹೊರಬಿದ್ದ ಗೌರೀಶ್‌ ಅಕ್ಕಿ; ಇದು ಸ್ಕ್ರಿಪ್ಟೆಡಾ?

BBK Season 10 : ಬಿಗ್‌ ಬಾಸ್‌ ಸೀಸನ್‌ 10ರ ಎರಡನೇ ಎಲಿಮಿನೇಷನ್‌ನಲ್ಲಿ ಪತ್ರಕರ್ತ ಗೌರೀಶ್‌ ಅಕ್ಕಿ ಹೊರಬಿದ್ದಿದ್ದಾರೆ. ಬಿಗ್‌ ಬಾಸ್‌ ಸ್ಕ್ರಿಪ್ಟೆಡಾ ಎಂಬ ಸುದೀಪ್‌ ಪ್ರಶ್ನೆಗೆ ಅವರು ಉತ್ತರ ನೀಡಿದರು.

VISTARANEWS.COM


on

Gowrish Akki Bigboss 10 elimination
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಖ್ಯಾತ ನಿರೂಪಕ, ಆಲ್ಮಾ ಮೀಡಿಯಾ ಸಂಸ್ಥೆಯ ಸಂಸ್ಥಾಪಕ ಗೌರೀಶ್‌ ಅಕ್ಕಿ (Gowrish Akki) ಅವರು ಬಿಗ್‌ ಬಾಸ್‌ ಸೀಸನ್‌ 10ನಿಂದ (BBK Season 10) ಎರಡನೇ ವಾರದಲ್ಲೇ ಹೊರಬಿದ್ದಿದ್ದಾರೆ. ಭಾನುವಾರ ನಡೆದ ಸೂಪರ್‌ ಸಂಡೇ ವಿದ್‌ ಸುದೀಪ್‌ (Super sunday with Sudeep) ಕಾರ್ಯಕ್ರಮದಲ್ಲಿ ಎಲಿಮಿನೇಷನ್‌ ರೌಂಡ್‌ನಲ್ಲಿ ಗೌರೀಶ್‌ ಅಕ್ಕಿ ಹೊರಬಂದರು. ಬಳಿಕ ವೇದಿಕೆಯಲ್ಲಿ ಸುದೀಪ್‌ ಅವರೊಂದಿಗೆ ಮಾತನಾಡಿದ ಗೌರೀಶ್‌ ಬಿಗ್‌ ಬಾಸ್‌ ಶೋ ಒಂದು ಪರ್ಸೆಂಟ್‌ ಕೂಡಾ ಸ್ಕ್ರಿಪ್ಟೆಡ್‌ ಅಲ್ಲವೇ ಅಲ್ಲ ಎಂದು ಘೋಷಿಸಿದರು.

ಅಕ್ಟೋಬರ್‌ 8ರಂದು ಆರಂಭವಾದ ಬಿಗ್‌ ಬಾಸ್‌ ಸೀಸನ್‌ 10ರಲ್ಲಿ ಅಕ್ಟೋಬರ್‌ 22ರಂದು ರಾತ್ರಿ ನಡೆದದ್ದು ಎರಡನೇ ಎಲಿಮಿನೇಷನ್‌. ಅದರ ಹಿಂದಿನ ವಾರದಲ್ಲಿ ಸ್ನೇಕ್‌ ಶ್ಯಾಮ್‌ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಇದೀಗ ಮನೆಯಲ್ಲಿ 15 ಮಂದಿ ಉಳಿದಂತಾಗಿದೆ.

ಎಲಿಮಿನೇಷನ್‌ನಿಂದ ತಪ್ಪಿಸಿಕೊಂಡ ಭಾಗ್ಯ ಶ್ರೀ

ಎರಡನೇ ವಾರದ ಅಂತ್ಯದಲ್ಲಿ ಆರು ಮಂದಿ ಎಲಿಮಿನೇಷನ್‌ಗೆ ನಾಮಿನೇಟ್‌ ಆಗಿದ್ದರು. ತುಕಾಲಿ ಸಂತು, ತನಿಷಾ ಕುಪ್ಪಂಡ, ಸಂಗೀತ ಶೃಂಗೇರಿ, ಭಾಗ್ಯಶ್ರೀ, ಗೌರೀಶ್ ಅಕ್ಕಿ ಮತ್ತು ಕಾರ್ತಿಕ್ ಮಹೇಶ್. ಅವರಲ್ಲಿ ಇಬ್ಬರನ್ನು (ತುಕಾಲಿ ಸಂತೋಷ್‌, ಕಾರ್ತಿಕ್‌ ಮಹೇಶ್‌) ಶನಿವಾರದ ವಾರದ ಕಥೆ ಕಿಚ್ಚನ ಜತೆಯಲ್ಲಿ ಸೇಫ್‌ ಮಾಡಲಾಗಿತ್ತು. ಭಾನುವಾರಕ್ಕೆ ತನಿಷಾ ಕುಪ್ಪಂಡ, ಸಂಗೀತ ಶೃಂಗೇರಿ, ಭಾಗ್ಯಶ್ರೀ ಹಾಗೂ ಗೌರೀಶ್ ಅಕ್ಕಿ ಉಳಿದಿದ್ದರು. ಇವರ ಪೈಕಿ ಮೊದಲು ಸಂಗೀತಾ ಶೃಂಗೇರಿ ಮತ್ತು ಬಳಿಕ ತನಿಷಾ ಕುಪ್ಪಂಡ ಸೇಫ್‌ ಆದರು. ಕೊನೆಯ ಫೈಟ್‌ ಉಳಿದದ್ದು ಗೌರೀಶ್‌ ಅಕ್ಕಿ ಮತ್ತು ಭಾಗ್ಯಶ್ರೀ ಮಧ್ಯೆ. ಇದರಲ್ಲಿ ಜನರಲ್‌ ವೋಟಿಂಗ್‌ ಆಧರಿಸಿ ಗೌರೀಶ್‌ ಅಕ್ಕಿ ಅವರನ್ನು ಎಲಿಮಿನೇಟ್‌ ಮಾಡಲಾಗಿದೆ.

Gowrish Akki Bigboss 10 elimination

ಗೌರೀಶ್‌ ಅಕ್ಕಿ ಎಲಿಮಿನೇಷನ್‌ಗೆ ಏಳು ಕಾರಣಗಳು

  1. ಗೌರೀಶ್‌ ಅಕ್ಕಿ ಅವರಿಗೆ ಈ ಶೋಗೆ ಹೋಗಲು ಮನಸಿರಲಿಲ್ಲ. ಪತ್ನಿಯ ಒತ್ತಾಯಕ್ಕೆ ಮಣಿದು ಹೋಗಿದ್ದರು.
  2. ಮನೆಯಲ್ಲಿ ಅವರಿಗೆ ಪೂರ್ತಿಯಾಗಿ ಹೊಂದಿಕೊಳ್ಳಲು ಸಾಧ್ಯವಾಗಿರಲಿಲ್ಲ. ಎಲ್ಲರ ಜತೆ ಬೆರೆಯುವುದು ಅವರಿಗೆ ಕಷ್ಟವಾಗುತ್ತಿತ್ತು. ಅವರ ಸಂವಾದ ಕೆಲವರ ಜತೆ ಸೀಮಿತವಾಗಿತ್ತು.
  3. ಮನರಂಜನೆ ವಿಚಾರದಲ್ಲಿ ಅವರು ಹಿಂದೆ ಬಿದ್ದಿದ್ದರು. ಯಾವ ಗಮನಾರ್ಹ ಪರ್ಫಾರ್ಮೆನ್ಸ್‌ ಕೂಡಾ ಇರಲಿಲ್ಲ.
  4. ಉಳಿದ ಸ್ಪರ್ಧಿಗಳು ಅವರಿಂದ ದೂರ ಇರಲು ಪ್ರಯತ್ನಿಸುತ್ತಿದ್ದರು. ಅತಿಯಾದ ಗೌರವದಿಂದ ನಡೆದುಕೊಳ್ಳುತ್ತಿದ್ದುದೂ ಹಿನ್ನಡೆಯಾಗಿತ್ತು.
  5. ಗೌರೀಶ್‌ ಅಕ್ಕಿ ಅವರು ಮೈಚಳಿ ಬಿಟ್ಟಿರಲಿಲ್ಲ. ಮಾತನಾಡಿದರೂ ತುಂಬ ಹೈಲೆವೆಲ್ ಯೋಚನೆಯಲ್ಲೇ ಮಾತನಾಡುತ್ತಿದ್ದರು.
  6. ನಾಮಿನೇಷನ್‌ನಲ್ಲಿ ಅವರಿಗೆ ಹೆಚ್ಚು ವೋಟುಗಳು ಬಿದ್ದಿದ್ದವು. ಪಬ್ಲಿಕ್‌ ವೋಟ್‌ ಕೂಡಾ ಬಿದ್ದಿರಲಿಲ್ಲ.
  7. ಟಾಸ್ಕ್‌ ವಿಚಾರದಲ್ಲೂ ಅವರು ಗಟ್ಟಿತನ ತೋರಿಸಲಿಲ್ಲ. ಆಸಕ್ತಿಯನ್ನೂ ತೋರಿಸಲಿಲ್ಲ.

ಬಿಗ್‌ ಬಾಸ್‌ ಸ್ಕ್ರಿಪ್ಟೆಡ್‌ ಅಲ್ಲ ಎಂದ ಗೌರೀಶ್‌ ಅಕ್ಕಿ

ಬಿಗ್‌ ಬಾಸ್‌ ಹೌಸ್‌ನಿಂದ ಹೊರಗೆ ಬಂದ ಗೌರೀಶ್‌ ಅಕ್ಕಿ ಅವರಿಗೆ ವೇದಿಕೆಯಲ್ಲಿ ಸುದೀಪ್‌ ಅವರಿಗೆ ಒಂದು ಪ್ರಶ್ನೆ ಕೇಳಿದರು: ಬಿಗ್‌ ಬಾಸ್‌ ಸ್ಕ್ರಿಪ್ಟೆಡ್‌ ಅಂತ ನಿಮಗೆ ಅನಿಸಿತಾ?

ಅದಕ್ಕೆ ಉತ್ತರಿಸಿದ ಗೌರೀಶ್‌ ಅಕ್ಕಿ ಅವರು, ಇಲ್ಲವೆ ಇಲ್ಲ. ನಾನು ಇದ್ದ ಇಷ್ಟೂ ದಿನದಲ್ಲಿ ಒಂದೇ ಒಂದು ಮಾಹಿತಿಯಾಗಲಿ, ನಮಗೆ ನೀಡಲಾಗಿಲ್ಲ. ಯಾರೂ ನಮ್ಮ ಜತೆ ಮಾತನಾಡಿಲ್ಲ. ಹೀಗಾಗಿ ನನ್ನ ಪ್ರಕಾರ ಇದು 200% ಸ್ಕ್ರಿಪ್ಟೆಡ್‌ ಅಲ್ಲ ಎಂದು ಸ್ಪಷ್ಟಪಡಿಸಿದರು.

ಗೌರೀಶ್‌ ಅವರ ಪತ್ನಿ ಹೇಳಿದ್ದೇನು?

ಗೌರೀಶ್‌ ಅವರ ಪತ್ನಿ ಮಾಲತಿ ಅವರು ಈ ವಾರ ಗೌರೀಶ್‌ ಅವರೇ ಹೊರಬರುತ್ತಾರೆ ಎಂಬ ಬಗ್ಗೆ ಮೊದಲೇ ಕ್ಲೂ ಕೊಟ್ಟಿದ್ದರು. ಶುಕ್ರವಾರದ ತಮ್ಮ ಫೇಸ್‌ ಬುಕ್‌ ಪೋಸ್ಟ್‌ನಲ್ಲಿ ನನ್ನ ಮುಂದಿನ ಪೋಸ್ಟ್‌ ಗೌರೀಶ್‌ ಜತೆ ಸೆಲ್ಫಿಯೊಂದಿಗೆ ಎಂದು ಹೇಳಿದ್ದರು. ಗೌರೀಶ್‌ ಅವರು ಹೆಣ್ಮಕ್ಕಳ ಜತೆ ಮಾತನಾಡಲು ಮುಜುಗರ ಮಾಡುತ್ತಾರೆ ಎಂದು ಮಾಲಕಿ ಅವರು ಬಿಗ್‌ ಬಾಸ್‌ ಮನೆ ಪ್ರವೇಶದ ವೇಳೆ ಹೇಳಿದ್ದರು. ಸುದೀಪ್‌ ಅವರು ಗೌರೀಶ್‌ ಮನೆಯಲ್ಲಿ ಹೆಣ್ಮಕ್ಕಳ ಜತೆ ಸಹಜವಾಗಿ ಇದ್ದರಲ್ಲವೇ ಎಂದು ಪ್ರಶ್ನಿಸಿದರು. ಆದರೆ ಮಾಲತಿ ಅವರು ಇದನ್ನು ಒಪ್ಪಿಕೊಳ್ಳಲಿಲ್ಲ. ಅವರು ಮಾತನಾಡುತ್ತಿದ್ದರೂ ಮುಖದಲ್ಲಿ ಮುಜುಗರ ಇತ್ತು ಎಂದರು. ಕೊನೆಗೆ ಬದಲಾಗಿದ್ದರೆ ನನಗೆ ಸಂತೋಷ ಎಂದು ಹೇಳಿದರು.

ಇದನ್ನೂ ಓದಿ: BBK Season 10: ಬಿಗ್‌ ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ ಅರೆಸ್ಟ್‌; ದೊಡ್ಮನೆಯಿಂದಲೇ ಎಳೆದೊಯ್ದರು!

ನೀತೂ ವನಜಾಕ್ಷಿ ನಾಮಿನೇಟ್‌

ಈ ನಡುವೆ, ಗೌರೀಶ್‌ ಅಕ್ಕಿ ಅವರು ಮನೆಯಿಂದ ಹೊರಬೀಳುವ ಹೊತ್ತಿನಲ್ಲಿ ನೀತೂ ಅವರನ್ನು ನೇರವಾಗಿ ಮುಂದಿನ ವಾರಕ್ಕೆ ನಾಮಿನೇಟ್‌ ಮಾಡಿದ್ದಾರೆ. ನೀತು ಅವರು ಸ್ವಲ್ಪ ಅಹಂ ಹೊಂದಿದ್ದಾರೆ, ಯಾರು ಹೇಳಿದ್ದನ್ನೂ ಒಪ್ಪಿಕೊಳ್ಳುವುದಿಲ್ಲ ಎಂಬ ಕಾರಣ ನೀಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Narendra Modi: ಸಂಸತ್ತಿನಲ್ಲಿ ಇಬ್ಬರು ‘ಪುಟಾಣಿ’ ಅತಿಥಿಗಳನ್ನು ಸ್ವಾಗತಿಸಿದ ಮೋದಿ; ಯಾರವರು? Video ನೋಡಿ

Narendra Modi: ಸಂಸತ್‌ನಲ್ಲಿರುವ ತಮ್ಮ ಕಚೇರಿಗೆ ಆಗಮಿಸಿದ ಇಬ್ಬರು ಪುಟಾಣಿಗಳೊಂದಿಗೆ ಮೋದಿ ನಲಿದಾಡಿದ್ದಾರೆ. ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರ ಇಬ್ಬರು ಮೊಮ್ಮಕ್ಕಳು ಸಂಸತ್‌ಗೆ ಆಗಮಿಸಿದ್ದಾರೆ. ಅವರು ನರೇಂದ್ರ ಮೋದಿ ಅವರ ಕಚೇರಿಗೆ ತೆರಳಿದ್ದು, ಇಬ್ಬರೂ ಆಗಮಿಸುತ್ತಲೇ ಮೋದಿ ಅವರು ನಗುತ್ತಲೇ ಅವರನ್ನು ಸ್ವಾಗತಿಸಿದ್ದಾರೆ. ನರೇಂದ್ರ ಮೋದಿ ಅವರು ಮಕ್ಕಳೊಂದಿಗೆ ಕಾಲ ಕಳೆದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

VISTARANEWS.COM


on

Narendra Modi
Koo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಚುನಾವಣೆ ರ‍್ಯಾಲಿ ಇರಲಿ, ರಕ್ಷಾಬಂಧನವೇ ಇರಲಿ, ಎಲ್ಲಿಯೇ ಮಕ್ಕಳನ್ನು ಕಂಡರೂ ಅವರೊಂದಿಗೆ ಮೋದಿ ಬೆರೆಯುತ್ತಾರೆ. ಅವರ ಜತೆ ಒಂದಷ್ಟು ಕಾಲ ಕಳೆಯುತ್ತಾರೆ. ಕಿವಿ ಹಿಂಡಿ ಚೇಷ್ಟೆ ಮಾಡುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ನರೇಂದ್ರ ಮೋದಿ ಅವರು ಬುಧವಾರ (ಜೂನ್‌ 26) ಸಂಸತ್ತಿನಲ್ಲಿ (Parliament) ಇಬ್ಬರು ಬಾಲಕಿಯರೊಂದಿಗೆ ಕಾಲ ಕಳೆದಿದ್ದಾರೆ. ಸಂಸತ್‌ ಅಧಿವೇಶನ, ಪ್ರತಿಪಕ್ಷಗಳ ಗಲಾಟೆ, ನೂತನ ಸ್ಪೀಕರ್‌ ಆಯ್ಕೆಯ ಭರಾಟೆಯ ಮಧ್ಯೆಯೂ ಮೋದಿ ಅವರು ಇಬ್ಬರು ಪುಟಾಣಿಗಳೊಂದಿಗೆ ಕಾಲ ಕಳೆದಿದ್ದಾರೆ.

ಹೌದು, ಸಂಸತ್‌ನಲ್ಲಿರುವ ತಮ್ಮ ಕಚೇರಿಗೆ ಆಗಮಿಸಿದ ಇಬ್ಬರು ಪುಟಾಣಿಗಳೊಂದಿಗೆ ಮೋದಿ ನಲಿದಾಡಿದ್ದಾರೆ. ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರ ಇಬ್ಬರು ಮೊಮ್ಮಕ್ಕಳು ಸಂಸತ್‌ಗೆ ಆಗಮಿಸಿದ್ದಾರೆ. ಅವರು ನರೇಂದ್ರ ಮೋದಿ ಅವರ ಕಚೇರಿಗೆ ತೆರಳಿದ್ದು, ಇಬ್ಬರೂ ಆಗಮಿಸುತ್ತಲೇ ಮೋದಿ ಅವರು ನಗುತ್ತಲೇ ಅವರನ್ನು ಸ್ವಾಗತಿಸಿದ್ದಾರೆ. ಇನ್ನು, ಪುಟಾಣಿಗಳೂ ಅಷ್ಟೇ, ಮೋದಿ ಅವರ ಎದುರು ದೇಶಭಕ್ತಿ ಗೀತೆಯನ್ನು ಒಟ್ಟಿಗೆ ಹಾಡುವ ಮೂಲಕ ಗಮನ ಸೆಳೆದಿದ್ದಾರೆ. ಇಬ್ಬರೂ ಒಂದೇ ಬಣ್ಣದ ದಿರಸು ಧರಿಸಿದ್ದು ವಿಶೇಷವಾಗಿತ್ತು. ಇಬ್ಬರು ಪುಟಾಣಿಗಳೊಂದಿಗೆ ಮೋದಿ ಸಮಯ ಕಳೆದ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

18ನೇ ಲೋಕಸಭೆಯ ಮೊದಲ ಅಧಿವೇಶನದ ಮೂರನೇ ದಿನವಾದ ಬುಧವಾರ ಹಲವು ಮಹತ್ವದ ಘಟನೆಗಳಿಗೆ ಸಂಸತ್ ಸಾಕ್ಷಿಯಾಯಿತು. ಸ್ಪೀಕರ್‌ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಓಂ ಬಿರ್ಲಾಅವರು ಎರಡನೇ ಬಾರಿ ಲೋಕಸಭೆಯ ಸ್ಪೀಕರ್‌ ಆಗಿ ಚುನಾಯಿತರಾಗಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಮತ್ತು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಪರಸ್ಪರ ಹಸ್ತಾಲಾಘವ ಮಾಡಿದ ಅಪರೂಪದ ಕ್ಷಣಗಳಿಗೆ ಇಡೀ ಸದನವೇ ಸಾಕ್ಷಿ ಆಯಿತು.

ಓಂ ಬಿರ್ಲಾ ಅವರು ಸ್ಪೀಕರ್‌ ಆಗಿ ಚುನಾಯಿತರಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಪಕ್ಷ ನಾಯಕರ ರಾಹುಲ್‌ ಗಾಂಧಿ ತಮ್ಮ ತಮ್ಮ ಸ್ಥಾನಗಳಿಂದ ಎದ್ದು ಬಂದು ಓಂ ಬಿರ್ಲಾ ಅವರನ್ನು ಸ್ವಾಗತಿಸಿದರು. ಈ ವೇಳೆ ಪರಸ್ಪರ ಶೇಕ್‌ ಹ್ಯಾಂಡ್‌ ಮಾಡಿಕೊಂಡರು. ಬಳಿಕ ಓಂ ಬಿರ್ಲಾ ಅವರನ್ನು ಅವರ ಸೀಟ್‌ವರೆಗೆ ಕರೆದೊಯ್ದರು. ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಆರಂಭವಾದ ಚುನಾವಣಾ ಪ್ರಕ್ರಿಯೆಯಲ್ಲಿ ಓಂ ಬಿರ್ಲಾ ಅವರು ಬಹುಮತ ಪಡೆದುಕೊಂಡರು. ಓಂ ಬಿರ್ಲಾ ಅವರನ್ನು ಸ್ಪೀಕರ್‌ ಆಗಿ ಆಯ್ಕೆ ಮಾಡುವ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ಮಂಡಿಸಿದರು. ಬಳಿಕ ಹಲವು ನಾಯಕರು ಅನುಮೋದಿಸಿದರು. ಧ್ವನಿ ಮತದ ಮೂಲಕ ಸದಸ್ಯರು ಮತ ಚಲಾಯಿಸಿದರು. 

ಇದನ್ನೂ ಓದಿ: Parliament Sessions: ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಸದನ; ಶೇಕ್‌ ಹ್ಯಾಂಡ್‌ ಮಾಡಿದ ಪ್ರಧಾನಿ ಮೋದಿ, ರಾಹುಲ್‌

Continue Reading

ದೇಶ

Nitin Gadkari: ಜಿಪಿಎಸ್‌ ತಂತ್ರಜ್ಞಾನದಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಬಂಪರ್;‌ 10 ಸಾವಿರ ಕೋಟಿ ರೂ. ಆದಾಯ!

Nitin Gadkari: ದೇಶದಲ್ಲಿ ಜಿಪಿಎಸ್‌ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆಯ ಜಾರಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹೆಚ್ಚುವರಿಯಾಗಿ 10 ಸಾವಿರ ಕೋಟಿ ರೂಪಾಯಿ ಆದಾಯ ಲಭಿಸುವ ಜತೆಗೆ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನೂ ಸರಿಪಡಿಸಲಾಗುತ್ತದೆ ಎಂಬುದಾಗಿ ನಿತಿನ್‌ ಗಡ್ಕರಿ ಹೇಳಿದ್ದಾರೆ. ವರ್ಷಾಂತ್ಯದಲ್ಲೇ ನೂತನ ಟೋಲ್‌ ಸಂಗ್ರಹ ವ್ಯವಸ್ಥೆ ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

VISTARANEWS.COM


on

Nitin Gadkari
Koo

ನವದೆಹಲಿ: ಸತತ ಮೂರನೇ ಅವಧಿಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ವಹಿಸಿಕೊಂಡಿರುವ ನಿತಿನ್‌ ಗಡ್ಕರಿ (Nitin Gadkari) ಅವರು ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಸಂಗ್ರಹ ವ್ಯವಸ್ಥೆಯನ್ನು ಬದಲಿಸಲು ತೀರ್ಮಾನಿಸಿದ್ದಾರೆ. ಟೋಲ್‌ ಗೇಟ್‌ಗಳ ಬದಲಿಗೆ ಜಿಪಿಎಸ್‌, ಸ್ಯಾಟಲೈಟ್‌ ಆಧಾರಿತ ಗ್ಲೋಬಲ್‌ ನ್ಯಾವಿಗೇಷನ್‌ ಸ್ಯಾಟಲೈಟ್‌ ಸಿಸ್ಟಂ (GNSS) ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಜನರಿಗೆ ಸಮಯ ಉಳಿತಾಯವಾಗುವ ಜತೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) 10 ಸಾವಿರ ಕೋಟಿ ರೂ. ಹೆಚ್ಚುವರಿ ಆದಾಯ ಲಭಿಸಲಿದೆ ಎಂದು ನಿತಿನ್‌ ಗಡ್ಕರಿ ಹೇಳಿದ್ದಾರೆ.

“ಜಿಎನ್‌ಎಸ್‌ಎಸ್‌ ತಂತ್ರಜ್ಞಾನದ ಅಳವಡಿಕೆಯಿಂದ 10 ಸಾವಿರ ಕೋಟಿ ರೂ. ಹೆಚ್ಚುವರಿ ಆದಾಯದ ಜತೆಗೆ ವ್ಯವಸ್ಥೆಯಲ್ಲಿರುವ ಶೇ.99ರಷ್ಟು ಲೋಪದೋಷಗಳನ್ನು ಕೂಡ ತೆಗೆಯಬಹುದಾಗಿದೆ. ಯಾವುದೇ ಲೋಪಗಳು ಇಲ್ಲದ, ಪಾರದರ್ಶಕ ವ್ಯವಸ್ಥೆಯಿಂದ ಕೂಡಿದ ಜಿಎನ್‌ಎಸ್‌ಎಸ್‌ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಆದಾಯದ ಜತೆಗೆ ಜನರಿಗೆ ಉತ್ತಮ ಸೇವೆ ಒದಗಿಸಲಾಗುವುದು” ಎಂದು ನಿತಿನ್‌ ಗಡ್ಕರಿ ಮಾಹಿತಿ ನೀಡಿದ್ದಾರೆ. ಜಿಎನ್‌ಎಸ್‌ಎಸ್‌ ಅಳವಡಿಕೆಯ ಕುರಿತು ಕೊನೆಯ ಹಂತದ ತೀರ್ಮಾನ ಬಾಕಿ ಇದೆ. ವರ್ಷಾಂತ್ಯದಲ್ಲೇ ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಏನಿದು ಜಿಪಿಎಸ್‌ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆ?

ಉಪಗ್ರಹ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆ ಜಾರಿಗೆ ಬಂದರೆ, ವಾಹನಗಳಿಗೆ ಜಿಪಿಎಸ್‌ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಜಿಪಿಎಸ್‌ ಯಂತ್ರವು ಉಪಗ್ರಹದೊಂದಿಗೆ ಸಂಪರ್ಕ ಹೊಂದಿರುತ್ತದೆ. ಇದರಿಂದಾಗಿ ನಮ್ಮ ವಾಹನವು ಯಾವ ಟೋಲ್‌ ರಸ್ತೆಗೆ ಪ್ರವೇಶ ಪಡೆದಿದೆ, ಯಾವ ರಸ್ತೆಯಿಂದ ನಿರ್ಗಮಿಸಿದೆ ಎಂಬುದನ್ನು ಲೆಕ್ಕ ಹಾಕಿ, ಬ್ಯಾಂಕ್‌ ಖಾತೆಯಿಂದ ಟೋಲ್‌ ಕಡಿತಗೊಳಿಸುತ್ತದೆ.

ಉಪಗ್ರಹ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆಯು ಜಾರಿಗೆ ಬಂದರೆ, ಭಾರತದಲ್ಲಿ ಸಮಯದ ಜತೆಗೆ ಹಣವನ್ನೂ ಉಳಿತಾಯ ಮಾಡಬಹುದಾಗಿದೆ. ಟೋಲ್‌ ಸಂಗ್ರಹ ಇರುವ ಹೆದ್ದಾರಿಯಲ್ಲಿ ನಾವು ಎಷ್ಟು ದೂರ ಕ್ರಮಿಸಿದ್ದೇವೋ, ಅಷ್ಟಕ್ಕೆ ಮಾತ್ರ ಟೋಲ್‌ ಶುಲ್ಕ ಪಾವತಿಸುತ್ತೇವೆ. ಟೋಲ್‌ ಗೇಟ್‌ ನಂತರ ಅರ್ಧ ಕಿಲೋಮೀಟರ್‌ ಇದ್ದರೂ, ಪೂರ್ತಿ ಹಣವನ್ನು ನಾವೀಗ ಪಾವತಿಸಬೇಕು. ಆದರೆ, ಸ್ಯಾಟಲೈಟ್‌ ಆಧಾರಿತ ಟೋಲ್‌ ವ್ಯವಸ್ಥೆ ಜಾರಿಗೆ ಬಂದರೆ, ಎಷ್ಟು ದೂರ ಕ್ರಮಿಸಿದ್ದೇವೋ, ಅಷ್ಟಕ್ಕೆ ಮಾತ್ರ ಹಣ ಪಾವತಿಸುತ್ತೇವೆ.

ಇದನ್ನೂ ಓದಿ: Driverless Car: ಭಾರತದಲ್ಲಿ ಡ್ರೈವರ್‌‌ಲೆಸ್ ಕಾರುಗಳಿಗೆ ಅನುಮತಿ ನೀಡಲ್ಲ ಎಂದ ನಿತಿನ್ ಗಡ್ಕರಿ

Continue Reading

Latest

Viral Video: ಜಿಮ್‌ಗೆ ಹೋಗುವವರೇ ಹುಷಾರ್‌! ಈ ವಿಡಿಯೊ ನೋಡಿ!

Viral Video ಈಗ ಎಲ್ಲರೂ ತಮ್ಮ ಫಿಟ್‌ನೆಸ್‌ ಬಗ್ಗೆ ಹೆಚ್ಚು ಒಲವು ತೋರುತ್ತಾರೆ. ತೆಳ್ಳಗೆ ಬಳುಕುವ ದೇಹಸಿರಿ ತಮ್ಮದಾಗಬೇಕು, ಸಪಾಟದ ಹೊಟ್ಟೆ ಇರಬೇಕು ಎಂಬ ಕಾರಣಕ್ಕೆ ಜಿಮ್‌ಗೆ ಹೋಗಿ ದೇಹ ದಂಡಿಸುತ್ತಾರೆ.ಅದರೆ ಇಲ್ಲೊಬ್ಬರು ಮಹಿಳೆ ಜಿಮ್‌ಗೆ ಹೋಗಿ ಜೀವ ಕಳೆದುಕೊಂಡ ಘಟನೆ ನಡೆದಿದೆ. ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ಮಹಿಳೆಯೊಬ್ಬರು ಆಯ ತಪ್ಪಿ ಮೂರನೇ ಮಹಡಿಯಿಂದ ಬಿದ್ದು ಸಾವನಪ್ಪಿದ ಘಟನೆ ಇಂಡೋನೇಷಿಯಾ ಪಾಂಟಿಯಾನಕ್ ನಲ್ಲಿ ನಡೆದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

VISTARANEWS.COM


on

Viral Video
Koo

ಇತ್ತೀಚಿನ ದಿನಗಳಲ್ಲಿ ತಮ್ಮ ದೇಹದ ಫಿಟ್ ನೆಸ್ ಕಾಪಾಡಿಕೊಳ್ಳಲು ಜನರು ಜಿಮ್‌ಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿ ಸ್ವಲ್ಪ ಹೊತ್ತು ವರ್ಕೌಟ್ ಮಾಡುತ್ತಾರೆ. ಆದರೆ ಈ ವೇಳೆ ನೀವು ನಿಮ್ಮ ಬಗ್ಗೆ ಎಚ್ಚರಿಕೆ ವಹಿಸುವುದು ಅವಶ್ಯಕ. ಯಾಕೆಂದರೆ ವರ್ಕೌಟ್ ವೇಳೆ ಹಲವು ಅವಗಢಗಳು ಸಂಭವಿಸುತ್ತಿರುವುದು ನಾವು ಕೇಳಿದ್ದೇವೆ. ಅಂತಹದೊಂದು ದುರ್ಘಟನೆ ಇದೀಗ ಇಂಡೋನೇಷಿಯಾದ ಜಿಮ್‌ವೊಂದರಲ್ಲಿ ನಡೆದಿದ್ದು, ಇದು ವೈರಲ್ (Viral Video) ಆಗಿದೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ಮಹಿಳೆಯೊಬ್ಬರು ಆಯ ತಪ್ಪಿ ಮೂರನೇ ಮಹಡಿಯಿಂದ ಬಿದ್ದು ಸಾವನಪ್ಪಿದ ಘಟನೆ ಇಂಡೋನೇಷಿಯಾ ಪಾಂಟಿಯಾನಕ್‌ನಲ್ಲಿ ನಡೆದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ 22 ವರ್ಷದ ಮಹಿಳೆಯೊಬ್ಬರು ಮೂರನೇ ಮಹಡಿಯಲ್ಲಿದ್ದ ಜಿಮ್ ನ ಕಿಟಕಿಯ ಬಳಿ ಇರಿಸಲಾದ ಟ್ರೆಡ್ ಮಿಲ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಅಲ್ಲಿ ಕಿಟಿಕಿಯ ಬಾಗಿಲು ತೆರೆದಿತ್ತು. ಹಾಗಾಗಿ ಆಕೆ 30 ನಿಮಿಷ ವರ್ಕೌಟ್ ಮಾಡಿ ಟ್ರೆಡ್ ಮಿಲ್ ನಿಂದ ಕೆಳಗೆ ಇಳಿಯುವಾಗ ಹಿಂದೆ ಹೆಜ್ಜೆ ಹಾಕಿ ಎಡವಿ ಕಿಟಿಕಿಯಿಂದ ಹೊರಗೆ ಬಿದ್ದಿದ್ದಾರೆ. ಇದರಿಂದ ಅವರು ಸಾವನಪ್ಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ಕಾಲಿನ್ ರಗ್ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ 8.1 ಮಿಲಿಯನ್ ವೀವ್ಸ್ ಬಂದಿದ್ದು, ಈ ವಿಡಿಯೊ ವೈರಲ್ ಆಗಿದೆ. ಪೊಲೀಸರ ಮಾಹಿತಿ ಪ್ರಕಾರ ಜಿಮ್ ನಲ್ಲಿ ಟ್ರೆಡ್ ಮಿಲ್ ಯಂತ್ರವನ್ನು ಕಿಟಿಕಿಯಿಂದ ಕೇವಲ 2 ಅಡಿ ದೂರದಲ್ಲಿ ಇಡಲಾಗಿದೆ. ಹಾಗೇ ಕಿಟಿಕಿಯ ಎತ್ತರ ಕೇವಲ ಒಂದು ಅಡಿಯಷ್ಟು ಇದ್ದ ಕಾರಣ ಈ ಅವಘಡ ಸಂಭವಿಸಿದೆ. ಅಲ್ಲದೇ ಮಹಿಳೆ ಬೀಳುವಾಗ ಕಿಟಕಿಯ ಅಂಚನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಫಲವಾಗದೆ ಆಕೆ ಕೆಳಗೆ ಬಿದ್ದಿದ್ದಾರೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆಕೆ ಆಗಲೇ ಸಾವನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

Viral Video

ಈ ವಿಡಿಯೊ ನೋಡಿದ ನೆಟ್ಟಿಗರು ದಿಗ್ಭ್ರಮೆಗೊಂಡಿದ್ದಾರೆ. ಮತ್ತು ಈ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಟ್ರೆಡ್ ಮಿಲ್ ಅನ್ನು ತೆರೆದ ಕಿಟಿಕಿಯ ಬಳಿ ಇಡಬಾರದಿತ್ತು. ಅದಕ್ಕೆ ವಿರುದ್ಧವಾಗಿ ಇಟ್ಟಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ ಎಂದು ಕೆಲವರು ಬೇಸರಗೊಂಡಿದ್ದಾರೆ. ಕೆಲವರು ಜಿಮ್ ಮಾಲೀಕನ ನಿರ್ಲಕ್ಷ್ಯದ ಬಗ್ಗೆ ಕಿಡಿಕಾರಿದ್ದಾರೆ. ಹಾಗೇ ಮತ್ತೆ ಈ ಘಟನೆ ಸಂಭವಿಸದಂತೆ ಎಚ್ಚರವಹಿಸುವುದು ಅಗತ್ಯವೆಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ಸಿಮೆಂಟ್, ಕಲ್ಲಿನಿಂದ ವಾಷಿಂಗ್ ಮೆಷಿನ್ ತಯಾರಿಸಿದ ಮಹಿಳೆ; ಹೇಗೆ ಕೆಲಸ ಮಾಡುತ್ತೆ ನೋಡಿ!

ಹಾಗಾಗಿ ಪ್ರತಿದಿನ ಜಿಮ್‌ಗೆ ಹೋಗಿ ವರ್ಕೌಟ್ ಮಾಡುವುದು ತಪ್ಪಲ್ಲ. ಆದರೆ ಈ ವೇಳೆ ನಿಮ್ಮ ಬಗ್ಗೆ ಎಚ್ಚರಿಕೆವಹಿಸಿ. ದೇಹದ ಬಗ್ಗೆ ಕಾಳಜಿಯ ಜೊತೆಗೆ ಜೀವದ ಬಗ್ಗೆಯೂ ಕಾಳಜಿ ಇರಲಿ. ಇದರಿಂದ ಇಂತಹ ದುರ್ಘಟನೆ ನಡೆಯುವುದನ್ನು ತಪ್ಪಿಸಬಹುದು.

Continue Reading

ದೇಶ

ಕಾಂಗ್ರೆಸ್‌ನಂತೆ 15 ತಿಂಗಳಲ್ಲಿ ಪ್ರತಿಪಕ್ಷಗಳೂ ರಾಹುಲ್‌ ಗಾಂಧಿಯಿಂದ ನಿರ್ನಾಮ; ಆಚಾರ್ಯ ಪ್ರಮೋದ್‌ ಸ್ಫೋಟಕ ಹೇಳಿಕೆ!

ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ಅನ್ನು ಮುಗಿಸಲು 15 ವರ್ಷ ತೆಗೆದುಕೊಂಡರು. ಇನ್ನು, ರಾಹುಲ್‌ ಗಾಂಧಿ ಅವರು ಪ್ರತಿಪಕ್ಷಗಳನ್ನು 15 ತಿಂಗಳೊಳಗೇ ಮುಗಿಸಲಿದ್ದಾರೆ ಎಂದು ಕಾಂಗ್ರೆಸ್‌ ಮಾಜಿ ನಾಯಕ ಆಚಾರ ಪ್ರಮೋದ್‌ ಕೃಷ್ಣಂ ಹೇಳಿದರು.

VISTARANEWS.COM


on

Acharya Pramod Krishnam
Koo

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ (Rahul Gandhi) ಗಾಂಧಿ ಅವರು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಹೊರಹೊಮ್ಮಿದ್ದಾರೆ. ಪ್ರತಿಪಕ್ಷ ನಾಯಕನಾಗಿ ಅವರು ಕಾಂಗ್ರೆಸ್‌ ಜತೆಗೆ ಇಂಡಿಯಾ ಒಕ್ಕೂಟವನ್ನೂ (INDIA Bloc) ಸಂಸತ್‌ನಲ್ಲಿ ಪ್ರತಿನಿಧಿಸಲಿದ್ದಾರೆ. ಇದರ ಬೆನ್ನಲ್ಲೇ, ಕಾಂಗ್ರೆಸ್‌ ಮಾಜಿ ನಾಯಕ ಆಚಾರ್ಯ ಪ್ರಮೋದ್‌ ಕೃಷ್ಣಂ (Acharya Pramod Krishnam) ಅವರು ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಕಾಂಗ್ರೆಸ್‌ನಂತೆ ಪ್ರತಿಪಕ್ಷಗಳನ್ನೂ ರಾಹುಲ್‌ ಗಾಂಧಿ ನಿರ್ನಾಮ ಮಾಡಲಿದ್ದಾರೆ” ಎಂದು ಅವರು ಹೇಳಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಐಎಎನ್‌ಎಸ್‌ ಸುದ್ದಿಸಂಸ್ಥೆಯೊಂದಿಗೆ ಆಚಾರ್ಯ ಪ್ರಮೋದ್‌ ಕೃಷ್ಣಂ ಮಾತನಾಡಿದರು. “ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ಅನ್ನು ಮುಗಿಸಲು 15 ವರ್ಷ ತೆಗೆದುಕೊಂಡರು. ಇನ್ನು, ರಾಹುಲ್‌ ಗಾಂಧಿ ಅವರು ಪ್ರತಿಪಕ್ಷಗಳನ್ನು 15 ತಿಂಗಳೊಳಗೇ ಮುಗಿಸಲಿದ್ದಾರೆ” ಎಂದು ಹೇಳಿದರು. ಸಂಸತ್‌ನಲ್ಲಿ ಪ್ರಮಾಣವಚನ ಸ್ವೀಕರಿಸುವ ವೇಳೆ ಜೈ ಪ್ಯಾಲೆಸ್ತೀನ್‌ ಎಂದು ಅಸಾದುದ್ದೀನ್‌ ಓವೈಸಿ ಘೋಷಣೆ ಕೂಗಿದ ಕುರಿತು ಪ್ರತಿಕ್ರಿಯಿಸಿದ ಅವರು, “ಇದು ಭಾರತ ಸಂಸತ್ತು. ಭಾರತದ ಸಂಸತ್‌ನಲ್ಲಿ ಹಾಗೆ ಘೋಷಣೆ ಕೂಗುವುದು ಸರಿಯಲ್ಲ. ಅವರು ಕೂಡಲೇ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದರು.

ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ಕಾಂಗ್ರೆಸ್‌ ನಾಯಕರೂ ಆಗಿದ್ದರು. ಕಲ್ಕಿ ಧಾಮದ ಪೀಠಾಧೀಶರೂ ಆಗಿರುವ ಇವರನ್ನು ಕೆಲವು ತಿಂಗಳ ಹಿಂದಷ್ಟೇ ಕಾಂಗ್ರೆಸ್‌ ಉಚ್ಚಾಟನೆ ಮಾಡಿದೆ. ಕಲ್ಕಿ ದೇವಾಲಯಕ್ಕೆ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ ಬಳಿಕ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಉಚ್ಚಾಟನೆ ಮಾಡಿತ್ತು. ಇದಾದ ಬಳಿಕ ನರೇಂದ್ರ ಮೋದಿ ಅವರು ಕಲ್ಕಿ ದೇವಾಲಯಕ್ಕೆ ಭೇಟಿ ನೀಡಿ, ಆಚಾರ್ಯ ಪ್ರಮೋದ್‌ ಕೃಷ್ಣಂ ಅವರನ್ನು ಹೊಗಳಿದ್ದರು.

“ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ಕಲ್ಕಿ ಧಾಮ ದೇವಾಲಯ ನಿರ್ಮಾಣಕ್ಕಾಗಿ ಹೋರಾಡಿದರು. ಇದಕ್ಕೂ ಮೊದಲಿನ ಸರ್ಕಾರಗಳು ಕಲ್ಕಿ ಧಾಮ ದೇವಾಲಯ ನಿರ್ಮಾಣಕ್ಕೆ ಅವಕಾಶ ಕೊಡಲಿಲ್ಲ. ಕಾನೂನು ಹೋರಾಟವನ್ನೂ ಪ್ರಮೋದ್‌ ಕೃಷ್ಣಂ ಅವರು ಮಾಡಬೇಕಾಯಿತು. ಕಲ್ಕಿ ಮಂದಿರ ನಿರ್ಮಾಣವಾದರೆ ಕಾನೂನು ಸುವ್ಯಸ್ಥೆಗೆ ಧಕ್ಕೆಯುಂಟಾಗುತ್ತದೆ ಎಂದರು. ಆದರೆ, ನಮ್ಮ ಸರ್ಕಾರದ ಅವಧಿಯಲ್ಲಿ ಕಲ್ಕಿ ಮಂದಿರ ನಿರ್ಮಾಣಕ್ಕಶಂಕುಸ್ತಾಪನೆ ನೆರವೇರಿಸಲಾಗುತ್ತದೆ” ಎಂದು ಪ್ರತಿಪಕ್ಷಗಳಿಗೆ ಮೋದಿ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದರು.

ಇದನ್ನೂ ಓದಿ: Parliament Session 2024: ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ರಾಹುಲ್‌ ಗಾಂಧಿ ಮಾಡಿದ್ದೇನು ಗೊತ್ತಾ? ವೈರಲಾಯ್ತು ವಿಡಿಯೋ

Continue Reading
Advertisement
Narendra Modi
ದೇಶ21 mins ago

Narendra Modi: ಸಂಸತ್ತಿನಲ್ಲಿ ಇಬ್ಬರು ‘ಪುಟಾಣಿ’ ಅತಿಥಿಗಳನ್ನು ಸ್ವಾಗತಿಸಿದ ಮೋದಿ; ಯಾರವರು? Video ನೋಡಿ

Weight Loss Tips
ಆರೋಗ್ಯ27 mins ago

Weight Loss Tips: ನಲವತ್ತರ ನಂತರ ತೂಕ ಇಳಿಸುವುದು ಹೇಗೆ?

Nadaprabhu Kempegowda
ಬೆಂಗಳೂರು34 mins ago

Essay on Kempegowda in Kannada: ನಾಡಪ್ರಭು ಕೆಂಪೇಗೌಡರು ಆಧುನಿಕ ಬೆಂಗಳೂರಿನ ಮೂಲ ಶಿಲ್ಪಿ!

Nitin Gadkari
ದೇಶ1 hour ago

Nitin Gadkari: ಜಿಪಿಎಸ್‌ ತಂತ್ರಜ್ಞಾನದಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಬಂಪರ್;‌ 10 ಸಾವಿರ ಕೋಟಿ ರೂ. ಆದಾಯ!

Paris Fashion Week
ಫ್ಯಾಷನ್1 hour ago

Paris Fashion Week: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್ 2024ರ ಹೈಲೈಟ್ಸ್

Anant Ambani
ದೇಶ1 hour ago

Anant Ambani Video: ಮಹಾರಾಷ್ಟ್ರ ಸಿಎಂ ಹೆಗಲ ಮೇಲೆ ಕೈ ಹಾಕಿದ ಅಂಬಾನಿ ಮಗ! ನೀವೇನಂತೀರಿ?

Viral Video
Latest2 hours ago

Viral Video: ಜಿಮ್‌ಗೆ ಹೋಗುವವರೇ ಹುಷಾರ್‌! ಈ ವಿಡಿಯೊ ನೋಡಿ!

Acharya Pramod Krishnam
ದೇಶ2 hours ago

ಕಾಂಗ್ರೆಸ್‌ನಂತೆ 15 ತಿಂಗಳಲ್ಲಿ ಪ್ರತಿಪಕ್ಷಗಳೂ ರಾಹುಲ್‌ ಗಾಂಧಿಯಿಂದ ನಿರ್ನಾಮ; ಆಚಾರ್ಯ ಪ್ರಮೋದ್‌ ಸ್ಫೋಟಕ ಹೇಳಿಕೆ!

Viral Video
Latest2 hours ago

Viral Video: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್‌ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್‌!

Rohit Sharma
ಕ್ರೀಡೆ2 hours ago

Rohit Sharma: ವಿಶ್ವ ದಾಖಲೆ ಮೇಲೆ ಕಣ್ಣಿಟ್ಟ ಹಿಟ್​ಮ್ಯಾನ್​ ರೋಹಿತ್​; ಲಂಕಾ ಆಟಗಾರನಿಗೆ ನಡುಕ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌