VISTARA TOP 10 NEWS: ಅದ್ಧೂರಿಯಾಗಿ ನಡೆದ ಜಂಬೂ ಸವಾರಿ, ರಾಮಮಂದಿರ ಉದ್ಘಾಟನಾ ದಿನಾಂಕ ಫಿಕ್ಸ್ ಮತ್ತಿತರ ದಿನದ ಪ್ರಮುಖ ಸುದ್ದಿಗಳು - Vistara News

ಕ್ರೀಡೆ

VISTARA TOP 10 NEWS: ಅದ್ಧೂರಿಯಾಗಿ ನಡೆದ ಜಂಬೂ ಸವಾರಿ, ರಾಮಮಂದಿರ ಉದ್ಘಾಟನಾ ದಿನಾಂಕ ಫಿಕ್ಸ್ ಮತ್ತಿತರ ದಿನದ ಪ್ರಮುಖ ಸುದ್ದಿಗಳು

VISTARA TOP 10 NEWS: ದೇಶ, ವಿದೇಶಗಳ ಸುದ್ದಿಗಳು, ದಿನವಿಡೀ ನಡೆದ ಪ್ರಮುಖ ಬೆಳವಣಿಗೆಗಳ ಸುತ್ತುನೋಟವೇ Vistara Top10 News

VISTARANEWS.COM


on

Top 10news
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

1. ವೈಭವದ ಜಂಬೂ ಸವಾರಿಗೆ ಸಿಎಂ ಚಾಲನೆ; ರಾಜ ಬೀದಿಯಲ್ಲಿ ಚಾಮುಂಡಿ ವಿಲಾಸ
ಮೈಸೂರು: ಐತಿಹಾಸಿಕ 414ನೇ ದಸರಾ ಮಹೋತ್ಸವ (Mysore Dasara) ಅಂತಿಮ ಘಟ್ಟವನ್ನು ತಲುಪಿದೆ. ಮಂಗಳವಾರ (ಅಕ್ಟೋಬರ್‌ 24) ಸಂಜೆ 4.40ರಿಂದ 5ರವರೆಗೆ ಸಂದ ಶುಭ ಮೀನ ಲಗ್ನದಲ್ಲಿ (Meena Lagna) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಕುಳಿತಿರುವ ಮಾತೆ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಅರಮನೆ ಅಂಗಳದಲ್ಲಿ ಕ್ಯಾಪ್ಟನ್‌ ಅಭಿಮನ್ಯು (Captain Abhimanyu) ಹೊತ್ತು ತಂದ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿದ್ದ ತಾಯಿ ಚಾಮುಂಡೇಶ್ವರಿ ಮೂರ್ತಿಗೆ (Chamundeshwari Statue) ಸಮೀಪಿಸುತ್ತಿದ್ದಂತೆ ಪುಷ್ಪಾರ್ಚನೆ ಸಲ್ಲಿಸಿ, ದೇವಿಗೆ ಕೈಮುಗಿದರು. ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar), ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಮೇಯರ್‌ ಶಿವಕುಮಾರ್‌, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾಗೂ ನಗರ ಪೊಲೀಸ್‌ ಆಯುಕ್ತ ರಮೇಶ್ ಬಾನೋತ್ ಸಾಥ್‌ ನೀಡಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: Mysore Dasara: ದಸರಾ ಸ್ತಬ್ಧಚಿತ್ರಗಳ ಮೆರವಣಿಗೆ; ಕರುನಾಡ ಕಲಾ ವೈಭವ ಅನಾವರಣ
ದಸರಾ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ:

2. ಬೆಂಗಳೂರಿಗರಿಗೆ ಯಾವುದೇ ಕಾರಣಕ್ಕೂ ಭೂಮಿ ಮಾರಬೇಡಿ ಎಂದ ಡಿಕೆಶಿ!
ಕನಕಪುರ: ಶಿವನಹಳ್ಳಿ ಗ್ರಾಮ ಹೆದ್ದಾರಿಯ ಪಕ್ಕದಲ್ಲಿದೆ, ಯಾವುದೇ ಕಾರಣಕ್ಕೂ ಭೂಮಿಯನ್ನು ಬೆಂಗಳೂರಿಗರಿಗೆ ಮಾರಾಟ ಮಾಡಬೇಡಿ ಎಂದು ಕನಕಪುರ ತಾಲೂಕಿನ ಈ ಗ್ರಾಮಸ್ಥರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರು ಮನವಿ ಮಾಡಿದರು. ಶಿವನಹಳ್ಳಿ ಗ್ರಾಮದ ವೀರಭದ್ರಸ್ವಾಮಿ ದೇವಸ್ಥಾನದ (Veerabhadra swamy temple) ಜೀರ್ಣೋದ್ಧಾರದ ಭೂಮಿ ಪೂಜೆ ಮತ್ತು ಶಿಲಾ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಕೆಎಂಎಫ್ ಡೇರಿ ಇದೆ, ಕನಕಪುರ ಪಟ್ಟಣವಾಗಿ ಇಲ್ಲಿಯ ತನಕ ಬೆಳೆಯಲಿದೆ. ಆದ್ದರಿಂದ, ಎಲ್ಲರಲ್ಲಿ ಮನವಿ ಮಾಡುತ್ತೇನೆ, ಭೂಮಿ ಮಾರಾಟ ಮಾಡಬೇಡಿʼʼ ಎಂದು ಹೇಳಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಡಿಕೆಶಿ ಹೇಳಿಕೆಗೆ ಎಚ್‌ಡಿಕೆ ಆಕ್ಷೇಪ

3. ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳು ದೇಶದ ಏಳಿಗೆ ಸಹಿಸಲ್ಲ; ಮೋಹನ್‌ ಭಾಗವತ್‌ ಆಕ್ರೋಶ
ಮುಂಬೈ: “ದೇಶದಲ್ಲಿ ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳು ಭಾರತದ ಏಳಿಗೆಯನ್ನು ಸಹಿಸುತ್ತಿಲ್ಲ ಹಾಗೂ ಅವರು ಹಗೆತನವನ್ನು ಪಸರಿಸುತ್ತಿದ್ದಾರೆ” ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದರು. ವಿಜಯ ದಶಮಿ ಹಿನ್ನೆಲೆಯಲ್ಲಿ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್‌ ಕಚೇರಿಯಲ್ಲಿ ಆಯೋಜಿಸಿದ್ದ ವಿಜಯ ದಶಮಿ ಉತ್ಸವದಲ್ಲಿ ಮಾತನಾಡುವ ವೇಳೆ ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳ ವಿರುದ್ಧ ಹರಿಹಾಯ್ದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ದಿನಾಂಕ ಫಿಕ್ಸ್‌; ವಿಜಯ ದಶಮಿ ದಿನ ಮೋಹನ್‌ ಭಾಗವತ್‌ ಘೋಷಣೆ

4. ಗರ್ಭಿಣಿಯ ಹೊಟ್ಟೆ ಸೀಳಿ, ಭ್ರೂಣದ ರುಂಡ ಕತ್ತರಿಸಿದ ಹಮಾಸ್‌ ಉಗ್ರರು; ಇವರೆಂಥಾ ರಾಕ್ಷಸರು!
ಜೆರುಸಲೇಂ: ಹಮಾಸ್‌ ಉಗ್ರರು ಹಾಗೂ ಇಸ್ರೇಲ್‌ ಸೇನೆಯ ನಡುವಿನ ಸಮರವು (Israel Palestine War) 18ನೇ ದಿನಕ್ಕೆ ಕಾಲಿಟ್ಟಿದೆ. ಅದರಲ್ಲೂ, ಇಸ್ರೇಲ್‌ನಲ್ಲಿ ಮನೆ ಮನೆಗೆ ನುಗ್ಗಿ ಹಮಾಸ್‌ ಉಗ್ರರು (Hamas Terrorists) ಹತ್ಯೆ ಮಾಡುತ್ತಿದ್ದಾರೆ. ಇಸ್ರೇಲ್‌ ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡು, ಅವರಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಗರ್ಭಿಣಿಯೊಬ್ಬರ ಹೊಟ್ಟೆ ಸೀಳಿದ ಹಮಾಸ್‌ ಉಗ್ರರು, ಭ್ರೂಣವನ್ನು ಹೊರತೆಗೆದು, ಅದರ ರುಂಡವನ್ನು ಕತ್ತರಿಸುವ ಮೂಲಕ ರಕ್ಕಸ ಕೃತ್ಯ ಎಸಗಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ:Israel Palestine War: ಹಮಾಸ್‌ ಉಗ್ರರನ್ನು ನಿರ್ನಾಮ ಮಾಡದೆ ಬಿಡಲ್ಲ; ಇಸ್ರೇಲ್‌ ಶಪಥ

5. ಮಳೆಯಾಟ ಬಂದ್‌; ಇನ್ನೆರಡು ದಿನ ಕರ್ನಾಟಕ ಸಿಕ್ಕಾಪಟ್ಟೆ Hot
ಬೆಂಗಳೂರು: ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಒಣ ಹವೆ (Dry Weather) ಇರಲಿದೆ. ಮಲೆನಾಡು ಮತ್ತು ಕರಾವಳಿಯ ಪ್ರತ್ಯೇಕ ಕಡೆಗಳಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ (Rain News) ಮಳೆಯಾಗಲಿದೆ. ಉಳಿದಂತೆ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ (Karnataka weather Forecast) ಮುನ್ಸೂಚನೆಯನ್ನು ನೀಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.

6. ಬೆಂಗಳೂರಿಗರ ಉಸಿರು ಸೇರುತ್ತಿರುವ ವಿಷ ಗಾಳಿ!
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನೆಮ್ಮದಿಯ ಉಸಿರಾಟಕ್ಕೂ ಇನ್ನು ಮುಂದೆ ಕಷ್ಟವಾಗಲಿದೆ. ಕಾರಣ ಗಾಳಿಯ ಮಾನದಂಡಕ್ಕಿಂತ ಐದು ಪಟ್ಟು ವಿಷ ಗಾಳಿಯನ್ನು ಜನರು (Air Pollution) ಸೇವಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ನಗರದ ಹಲವು ಭಾಗಗಳಲ್ಲಿ ಗಣನೀಯ ಮಟ್ಟದಲ್ಲಿ ವಾಯು ಹದಗೆಡುತ್ತಿದೆ. ಹಾಗಾದರೆ ನಗರದಲ್ಲಿನ ಮಾಲಿನ್ಯ ಪ್ರಮಾಣ ಹೇಗಿದೆ? ಯಾವ ಏರಿಯಾದಲ್ಲಿ ವಾಯುಮಾಲಿನ್ಯ (Bengaluru News) ಹೆಚ್ಚಾಗಿದೆ ಎಂಬುದರ ವಿವರ ಇಲ್ಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.

7. ಪಾಕ್​ ವಿರುದ್ಧ ಅಫಘಾನಿಸ್ತಾನದ ಗೆಲುವಿನಲ್ಲಿ ಭಾರತದ ಮಾಜಿ ಕ್ರಿಕೆಟಿಗನ ಕೈವಾಡ
ನವದೆಹಲಿ: ಅಕ್ಟೋಬರ್ 23 ರಂದು ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ (ICC World Cup 2023) ಅಫ್ಘಾನಿಸ್ತಾನವು ಪಾಕಿಸ್ತಾನವನ್ನು ಹೀನಾಯವಾಗಿ ನಂತರ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್ ಅವರು ಅಫಘಾನಿಸ್ತಾನ ತಂಡದ ಮೆಂಟರ್​​ ಅಜಯ್ ಜಡೇಜಾ ಅವರನ್ನು ಶ್ಲಾಘಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: ಪಾಕ್​ ಉಪಟಳಕ್ಕೆ ಗಡಿಪಾರಾದ ಆಫ್ಘನ್ನರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಅರ್ಪಿಸಿದ ಜದ್ರಾನ್

8. ಕದನ, ಬಿಕ್ಕಟ್ಟೇ ಎಲ್ಲ; ಚುನಾವಣೆಗೆ ಇಂಡಿಯಾ ಒಕ್ಕೂಟದ ಸೀಟು ಹಂಚಿಕೆ ಇಲ್ಲ
ನವದೆಹಲಿ: 2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ (Lok Sabha Election 2024) ರಣಾಂಗಣ ಸಿದ್ಧವಾಗುತ್ತಿದೆ. ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ, ನರೇಂದ್ರ ಮೋದಿ (Narendra Modi) ಅವರ ವರ್ಚಸ್ಸು, ಎನ್‌ಡಿಎ ಮೈತ್ರಿಕೂಟದ ಒಗ್ಗಟ್ಟು ಸೇರಿ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಆದರೆ, ಶತಾಯ ಗತಾಯ ಬಿಜೆಪಿಯನ್ನು ಸೋಲಿಸಬೇಕು ಎಂಬ ದೃಷ್ಟಿಯಿಂದ 26 ಪ್ರತಿಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟದಲ್ಲಿ (INDIA Bloc) ಬಿಕ್ಕಟ್ಟು, ಗೊಂದಲ, ಒಮ್ಮತದ ಅಭಿಪ್ರಾಯದ ಕೊರತೆಯಿಂದಾಗಿ ಇದುವರೆಗೆ ಸೀಟು ಹಂಚಿಕೆಯ ಬಗ್ಗೆಯೇ ತೀರ್ಮಾನವಾಗಿಲ್ಲ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.

9. ಗೌರೀಶ್‌ ಅಕ್ಕಿ ಪ್ರಕಾರ ಈ ಬಾರಿ ಬಿಗ್‌ ಬಾಸ್‌ ವಿನ್ನರ್‌ ಇವರೇ..; ಯಾರವರು?
ಎಲ್ಲವೂ ಇತ್ತು ಅಲ್ಲಿ… ಊಟ ಇತ್ತು, ನಿದ್ರೆ ಇತ್ತು, ಆಟ ಇತ್ತು, ಸ್ಪರ್ಧಿಗಳಿದ್ದರು, ಜನ ಇದ್ರು ಎಲ್ಲಾನೂ ಇತ್ತು. ಆದ್ರೆ ಅಲ್ಲಿ ಒಂದೇ ಒಂದು ಇರ್ಲಿಲ್ಲ. ಅದು ಸ್ವಾತಂತ್ರ್ಯ! ಕಂಡೀಷನ್ಡ್ ಸ್ವಾತಂತ್ರ್ಯ ಇದೆ ಅಲ್ಲಿ. ಅದ್ರ ಬ್ಯೂಟಿನೇ ಅದು’- ಹೀಗೆಂದವರು ಬೇರೆ ಯಾರೂ ಅಲ್ಲ. ಕಳೆದ ವಾರ ಬಿಗ್‌ಬಾಸ್‌ ಮನೆಯಿಂದ (BBK Season 10) ಹೊರಬಿದ್ದ ಹಿರಿಯ ಪತ್ರಕರ್ತ, ನಿರ್ದೇಶಕ ಗೌರೀಶ ಅಕ್ಕಿ (Gowrish Akki). ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.

10. ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿರಲು ಇಷ್ಟು ವಯಸ್ಸು ಆಗಿರಲೇಬೇಕು, ಹೈಕೋರ್ಟ್‌ ಆದೇಶ
ಲಖನೌ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿರುವುದು (Live In Relationship) ಕಾನೂನುಬಾಹಿರ ಎಂದು ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ. 19 ವರ್ಷದ ಯುವತಿಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ 17 ವರ್ಷದ ಬಾಲಕನ ವಿರುದ್ಧ ದಾಖಲಾದ ಪ್ರಕರಣದಲ್ಲಿ ಭದ್ರತೆ ನೀಡಬೇಕು ಎಂದು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್‌, ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿರಲು 18 ವರ್ಷ ವಯಸ್ಸಾಗಿರಲೇಬೇಕು ಎಂದು ಸ್ಪಷ್ಟಪಡಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

KVS Sports Meet : 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ; ಮೈದಾನದಲ್ಲಿ ಬಾಲಕರ ರೋಚಕ ಕ್ರಿಕೆಟ್

KVS Sports Meet : 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗಿದ್ದು, ಮೊದಲ ದಿನವೇ ಮೈದಾನದಲ್ಲಿ ಬಾಲಕರ ಕ್ರಿಕೆಟ್ ರೋಚಕವಾಗಿತ್ತು.

VISTARANEWS.COM


on

By

53rd KVS National Games inaugurated
Koo

ಬೆಂಗಳೂರು: 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟ 2024-25ಕ್ಕೆ (KVS Sports Meet) ಸೋಮವಾರ ಬೆಂಗಳೂರಿನ ಯಲಹಂಕದ ಕೇಂದ್ರೀಯ ವಿದ್ಯಾಲಯ ಆರ್‌ಡಬ್ಲ್ಯೂ ಎಫ್‌ನಲ್ಲಿ ಚಾಲನೆ ನೀಡಲಾಯಿತು. 14 ವರ್ಷದೊಳಗಿನ ಬಾಲಕರ ವಿಭಾಗದ ಕ್ರಿಕೆಟ್‌ ರೋಚಕವಾಗಿತ್ತು. ಮುಖ್ಯ ಅತಿಥಿಯಾಗಿ ಕೆವಿಎಸ್‌ ಉಪ ಆಯುಕ್ತರು ಡಾ.ಧರ್ಮೇಂದ್ರ ಪಟ್ಲೆ, ಸಹಾಯಕ ಆಯುಕ್ತ ಆರ್ ಪ್ರಮೋದ್ ಸೇರಿ ಇತರರು ಭಾಗಿಯಾಗಿದ್ದರು.

53rd KVS National Games inaugurated
53rd KVS National Games inaugurated

ಇದೇ ವೇಳೆ ಕೆ.ವಿ.ಎಸ್ ಧ್ವಜಾರೋಹಣವನ್ನು ಮುಖ್ಯ ಅತಿಥಿಗಳು ನೆರವೇರಿಸಿದರು. ಪಾತ್ರ ಮತ್ತು ನಾಯಕತ್ವ ಎರಡನ್ನೂ ಅಭಿವೃದ್ಧಿಪಡಿಸುವಲ್ಲಿ ಕ್ರೀಡೆಯ ಮಹತ್ವವನ್ನು ಎತ್ತಿ ತೋರಿಸಿದರು. ಆಟಗಾರರನ್ನು ಹುಮ್ಮಸ್ಸಿನಿಂದ ಸ್ಪರ್ಧಿಸಲು ಪ್ರೋತ್ಸಾಹಿಸಿದರು. ಮುಂಬರುವ ದಿನಗಳಲ್ಲಿ ರೋಚಕ ಕ್ರಿಕೆಟ್ ಪಂದ್ಯಗಳನ್ನು ನೋಡುವ ನಿರೀಕ್ಷೆಯಿದೆ, ಏಕೆಂದರೆ ಭಾಗವಹಿಸುವವರು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮೈದಾನಕ್ಕೆ ತರುತ್ತಾರೆ ಎಂದು ಅಭಿಪ್ರಾಯಪಟ್ಟರು.

Continue Reading

ವೈರಲ್ ನ್ಯೂಸ್

Deepfake Video: ಶುಬ್ ಮನ್ ಗಿಲ್ ಅನ್ನು ದೂಷಿಸಿದ ವಿರಾಟ್; ಡೀಪ್ ಫೇಕ್ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿರಾಟ್ ಕೊಹ್ಲಿಯ ಡೀಪ್ ಫೇಕ್ ವಿಡಿಯೋದಲ್ಲಿ (Deepfake Video) ಶುಬ್‌ಮನ್ ಗಿಲ್ ಅವರನ್ನು ದೂಷಿಸುತ್ತಿದ್ದಾರೆ. ಶುಬ್ ಮನ್ ಗಿಲ್‌ಗೆ ಏನು ಕೊರತೆಯಿದೆ ಮತ್ತು ಅವರು ಇನ್ನು ಎಷ್ಟು ದೂರ ಹೋಗಬೇಕಾಗಿದೆ ಎಂಬುದರ ಕುರಿತು ಹೇಳಿದ್ದಾರೆ.

VISTARANEWS.COM


on

By

Deepfake Video
Koo

ಭಾರತೀಯ ಕ್ರಿಕೆಟ್ ತಂಡದ ಬ್ಯಾಟ್ಸ್ ಮ್ಯಾನ್ (Indian cricket team batsman) ಶುಬ್ ಮನ್ ಗಿಲ್ (Shubman Gill) ಅವರನ್ನು ವಿರಾಟ್ ಕೊಹ್ಲಿ (Virat Kohli) ದೂಷಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social food) ಭಾರಿ ವೈರಲ್ ಆಗಿದೆ. ಆದರೆ ಇದು ಡೀಪ್ ಫೇಕ್ ವಿಡಿಯೋ (Deepfake Video) ಎನ್ನಲಾಗಿದ್ದರೂ ಇದು ಸಾಕಷ್ಟು ನೆಟ್ಟಿಗರ ಗಮನ ಸೆಳೆದಿದೆ.

ವಿರಾಟ್ ಕೊಹ್ಲಿಯು ಈ ಡೀಪ್ ಫೇಕ್ ವಿಡಿಯೋದಲ್ಲಿ ಶುಬ್‌ಮನ್ ಗಿಲ್ ಅವರನ್ನು ದೂಷಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿಯು ಮಾತನಾಡುತ್ತಾ, ಶುಬ್ ಮನ್ ಗಿಲ್‌ಗೆ ಏನು ಕೊರತೆಯಿದೆ ಮತ್ತು ಅವರು ಇನ್ನು ಎಷ್ಟು ದೂರ ಹೋಗಬೇಕಾಗಿದೆ ಎಂಬುದರ ಕುರಿತು ಹೇಳಿದ್ದಾರೆ.

ವೈರಲ್ ಆಗಿರುವ ಈ ವಿಡಿಯೋ ಕೃತಕ ಬುದ್ಧಿಮತ್ತೆಯ ತಪ್ಪು ಬಳಕೆ ಮತ್ತು ಅದು ಹೇಗೆ ಅಪಾಯಕಾರಿ ಎಂಬುದರ ಕುರಿತು ಕಳವಳ ವ್ಯಕ್ತಪಡಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಗಮನಾರ್ಹ ಗಮನ ಸೆಳೆದಿರುವ ಎಡಿಟ್ ಮಾಡಿದ ವಿಡಿಯೋದಲ್ಲಿ ಕೊಹ್ಲಿಯು, ನಾನು ಗಿಲ್ ಅವರನ್ನು ಹತ್ತಿರದಿಂದ ನೋಡುತ್ತಿದ್ದೇನೆ. ಅವರು ನಿಸ್ಸಂದೇಹವಾಗಿ ಪ್ರತಿಭಾವಂತರು. ಆದರೆ ಭರವಸೆಯನ್ನು ತೋರಿಸುವುದು ಮತ್ತು ದಂತಕಥೆಯಾಗುವುದರ ನಡುವೆ ದೊಡ್ಡ ಅಂತರವಿದೆ ಎಂದು ಹೇಳಿದ್ದಾರೆ.


ಇದಲ್ಲದೆ, ಎಡಿಟ್ ಮಾಡಿರುವ ವಿಡಿಯೋದಲ್ಲಿ ನಾಯಕ ಗಿಲ್ ಅವರ ತಂತ್ರದ ಬಗ್ಗೆ ಕೊಹ್ಲಿ ಮಾತನಾಡುವುದನ್ನು ಕಾಣಬಹುದು. ಗಿಲ್ ಅವರ ತಂತ್ರವು ಘನವಾಗಿದೆ. ಆದರೆ ನಾವೇ ಮುಂದೆ ಹೋಗಬಾರದು. ಜನರು ಮುಂದಿನ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುತ್ತಾರೆ. ಆದರೆ ನಾನು ಸ್ಪಷ್ಟವಾಗಿ ಹೇಳುತ್ತೇನೆ.. ಒಬ್ಬನೇ ವಿರಾಟ್ ಕೊಹ್ಲಿ.

ಈ ವಿಡಿಯೋವನ್ನು ಆಗಸ್ಟ್ 27 ರಂದು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ಅನಂತರ ಇದು ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಸುಮಾರು 4,000 ಹೆಚ್ಚು ಲೈಕ್‌ಗಳನ್ನು ಹೊಂದಿದೆ. ಅನೇಕ ಜನರು ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

ಇದನ್ನೂ ಓದಿ: Duleep Trophy: ದುಲೀಪ್​ ಟ್ರೋಫಿಯಿಂದ ಹೊರಬಿದ್ದ ಮೊಹಮ್ಮದ್ ಸಿರಾಜ್

ಒಬ್ಬ ಬಳಕೆದಾರ, ಜನರು ಎಷ್ಟೇ ಸೊಕ್ಕಿನವರಾಗಿರಬಹುದು ಆದರೆ ಅವರು ಇದನ್ನು ಎಂದಿಗೂ ಹೇಳುವುದಿಲ್ಲ ಎಂದಿದ್ದಾರೆ. ಇನ್ನೊಬ್ಬರು , ನೀವು ಎಐ ಎಂದು ಹೇಳದಿದ್ದರೆ, ನಾನು ಶೇ. 95ರಷ್ಟು ನಂಬುತ್ತಿದ್ದೆ ಎಂದಿದ್ದಾರೆ.

ನಾನು ಅರೆ ನಿದ್ದೆಯಲ್ಲಿದ್ದೇನೆ ಮತ್ತು ವಿರಾಟ್ ಈ ರೀತಿ ಮಾತನಾಡುವುದಿಲ್ಲ ಮತ್ತು ಇದು ಅವರ ಧ್ವನಿಯೂ ಅಲ್ಲ ಎಂದು ನನಗೆ ಇನ್ನೂ ತಿಳಿದಿದೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

Continue Reading

ಕ್ರೀಡೆ

Duleep Trophy: ದುಲೀಪ್​ ಟ್ರೋಫಿಯಿಂದ ಹೊರಬಿದ್ದ ಮೊಹಮ್ಮದ್ ಸಿರಾಜ್

Duleep Trophy: ವೃತ್ತಿಪರ ಕ್ರಿಕೆಟ್​ಗೆ ಮರಳುವ ನಿರೀಕ್ಷೆಯಲ್ಲಿ ಜಮ್ಮ ಕಾಶ್ಮೀರದ ವೇಗಿ ಉಮ್ರಾನ್ ಮಲಿಕ್(Umran Malik) ಕೂಡ ಅನಾರೋಗ್ಯದ ಕಾರಣ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.

VISTARANEWS.COM


on

Duleep Trophy
Koo

ಮುಂಬಯಿ: ದುಲೀಪ್​ ಟ್ರೋಫಿ(Duleep Trophy) ಆರಂಭಕ್ಕೂ ಮುನ್ನವೇ ಟೀಮ್​ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್(mohammed siraj) ಅನಾರೋಗ್ಯದ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ನವದೀಪ್ ಸೈನಿ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಹಿರಿಯ ಆಟಗಾರ ರವೀಂದ್ರ ಜಡೇಜಾ(Ravindra Jadeja) ಅವರನ್ನು ಭಾರತ ‘ಬಿ’ ತಂಡದಿಂದ ಬಿಡುಗಡೆ ಮಾಡಲಾಗಿದೆ.

ವೃತ್ತಿಪರ ಕ್ರಿಕೆಟ್​ಗೆ ಮರಳುವ ನಿರೀಕ್ಷೆಯಲ್ಲಿ ಜಮ್ಮ ಕಾಶ್ಮೀರದ ವೇಗಿ ಉಮ್ರಾನ್ ಮಲಿಕ್(Umran Malik) ಕೂಡ ಅನಾರೋಗ್ಯದ ಕಾರಣ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಉಮ್ರಾನ್ ಬದಲಿಗೆ ಮಧ್ಯಪ್ರದೇಶದ ಮಧ್ಯಮ ವೇಗಿ ಗೌರವ್ ಯಾದವ್ ಭಾರತ ‘ಸಿ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜಡೇಜಾ ಸ್ಥಾನಕ್ಕೆ ಬದಲಿ ಆಟಗಾರನನ್ನ ಹೆಸರಿಸಲಾಗಿಲ್ಲ. ಜಡೇಜಾ ದುಲೀಪ್ ಟ್ರೋಫಿಯಲ್ಲಿ ಕೇವಲ ಒಂದು ಪಂದ್ಯವನ್ನು ಆಡಿ ಬಳಿಕ ಬಾಂಗ್ಲಾದೇಶ ಟೆಸ್ಟ್​ ಸರಣಿಗೆ ಮುಂಚಿತವಾಗಿ ಭಾರತ ಶಿಬಿರಕ್ಕೆ ತೆರಳಬೇಕಿತ್ತು. ಆದರೆ ಬಿಸಿಸಿಐ ಅವರಿಗೆ ಕೊನೆಯ ಕ್ಷಣದಲ್ಲಿ ವಿಶ್ರಾಂತಿ ನೀಡಿದೆ. ಭಾರತ ‘ಎ’ ತಂಡವನ್ನು ಶುಭಮನ್ ಗಿಲ್ ಮುನ್ನಡೆಸಿದರೆ, ‘ಡಿ’ತಂಡವನ್ನು ಶ್ರೇಯಸ್‌ ಅಯ್ಯರ್‌ ಮುನ್ನಡೆಸಲಿದ್ದಾರೆ.

ಭಾರತ ‘ಎ’ ತಂಡ


ಶುಭಮನ್ ಗಿಲ್ (ನಾಯಕ), ಮಯಾಂಕ್ ಅಗರ್ವಾಲ್, ರಿಯಾನ್ ಪರಾಗ್, ಧ್ರುವ ಜುರೆಲ್ (ವಿಕೆಟ್‌ ಕೀಪರ್), ಕೆಎಲ್ ರಾಹುಲ್, ತಿಲಕ್ ವರ್ಮಾ, ಶಿವಂ ದುಬೆ, ತನುಷ್ ಕೋಟ್ಯಾನ್, ಕುಲದೀಪ್ ಯಾದವ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಖಲೀಲ್ ಅಹ್ಮದ್, ಅವೇಶ್ ಖಾನ್, ವಿದ್ವತ್ ಕಾವೇರಪ್ಪ, ಕುಮಾರ್ ಕುಶಾಗ್ರ , ಶಾಶ್ವತ್ ರಾವತ್.

ಭಾರತ ‘ಬಿ’ ತಂಡ


ಅಭಿಮನ್ಯು ಈಶ್ವರನ್ (ನಾಯಕ), ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿ.ಕೀ), ಮುಷೀರ್ ಖಾನ್, ನಿತೀಶ್ ಕುಮಾರ್ ರೆಡ್ಡಿ (ಫಿಟ್‌ನೆಸ್‌ ಟೆಸ್ಟ್‌ ಅವಲಂಬನೆ), ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಯಶ್ ದಯಾಳ್, ಮುಖೇಶ್ ಕುಮಾರ್, ರಾಹುಲ್ ಚಹರ್, ಆರ್ ಸಾಯಿ ಕಿಶೋರ್, ಮೋಹಿತ್ ಆವಸ್ತಿ, ಎನ್ ಜಗದೀಸನ್ (ವಿ.ಕೀ)

ಇದನ್ನೂ ಓದಿ Natasa Stankovic: ಪಾಂಡ್ಯ ಜತೆಗಿನ ವಿಚ್ಛೇದನದ ಅಸಲಿ ಸತ್ಯ ಬಿಚ್ಚಿಟ್ಟ ನತಾಶ!

ಭಾರತ ‘ಸಿ’ ತಂಡ


ಋತುರಾಜ್ ಗಾಯಕ್ವಾಡ್​ (ನಾಯಕ), ಸಾಯಿ ಸುದರ್ಶನ್, ರಜತ್ ಪಾಟಿದಾರ್, ಅಭಿಷೇಕ್ ಪೊರೆಲ್ (ವಿ.ಕೀ), ಸೂರ್ಯಕುಮಾರ್ ಯಾದವ್, ಬಿ ಇಂದ್ರಜಿತ್, ಹೃತಿಕ್ ಶೋಕೀನ್, ಮಾನವ್ ಸುತಾರ್, ಗೌರವ್ ಯಾದವ್, ವೈಶಾಕ್ ವಿಜಯ್‌ಕುಮಾರ್, ಅನ್ಶುಲ್ ಖಂಬೋಜ್, ಹಿಮಾಂಶು ಚೌಹಾಣ್, ಮಯಾಂಕ್ ಮಾರ್ಕಂಡೆ, ಆರ್ಯನ್‌ ಜುಯೆಲ್‌ (ವಿ.ಕೀ), ಸಂದೀಪ್ ವಾರಿಯರ್.

ಭಾರತ ‘ಡಿ’ ತಂಡ

ಶ್ರೇಯಸ್ ಅಯ್ಯರ್​ (ನಾಯಕ), ಅಥರ್ವ ಟೈಡೆ, ಯಶ್ ದುಬೆ, ದೇವದತ್ ಪಡಿಕ್ಕಲ್, ಇಶಾನ್ ಕಿಶನ್ (ವಿಕೆಟ್‌ ಕೀಪರ್), ರಿಕಿ ಭುಯಿ, ಸರನ್ಶ್ ಜೈನ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಆದಿತ್ಯ ಠಾಕರೆ, ಹರ್ಷಿತ್ ರಾಣಾ, ತುಷಾರ್ ದೇಶಪಾಂಡೆ, ಆಕಾಶ್ ಸೇನ್‌ಗುಪ್ತ, ಕೆಎಸ್ (ವಿಕೆಟ್‌ ಕೀಪರ್), ಸೌರಭ್ ಕುಮಾರ್.

Continue Reading

ಕ್ರೀಡೆ

IPL 2025: ಮುಂಬೈ ಇಂಡಿಯನ್ಸ್​ಗೆ ನೂತನ ನಾಯಕ; ಪೋಸ್ಟರ್​ ಬಿಡುಗಡೆ ಮಾಡಿದ ಫ್ರಾಂಚೈಸಿ

IPL 2025: ಬುಮ್ರಾ ರೋಹಿತ್​ಗೆ ಬಹಳ ಆತ್ಮಿಯರಾಗಿರುವ ಕಾರಣ ಬುಮ್ರಾ ನಾಯಕನಾದರೆ ರೋಹಿತ್​ ಕೂಡ ಮುಂಬೈ ತೊರೆಯಲು ಹಿಂದೇಟು ಹಾಕಬಹುದು ಎನ್ನುವುದು ಫ್ರಾಂಚೈಸಿಯ ಯೋಜನೆ.

VISTARANEWS.COM


on

Jasprit Bumrah
Koo

ಮುಂಬಯಿ: 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​(Mumbai Indians) ಮುಂಬರುವ ಐಪಿಎಲ್​ ಆವೃತ್ತಿಗೂ ಮುನ್ನ ಮಹತ್ವದ ಘೋಷಣೆಯೊಂದನ್ನು ಮಾಡಲು ಮುಂದಾಗಿದೆ. ಇದರ ಸುಳಿವನ್ನು ಸ್ವತಃ ಫ್ರಾಂಚೈಸಿಯೇ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟುಕೊಟ್ಟಿದೆ. ಹೌದು, ಪ್ರಧಾನ ವೇಗಿ ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರನ್ನು ನೂತನ ನಾಯಕನನ್ನಾಗಿ ಮಾಡಲು ನಿರ್ಧರಿಸಿದಂತಿದೆ. ಬುಮ್ರಾ ಅವರು ಜನಗಳ ಮಧ್ಯೆ ಕೈಬೀಸುತ್ತಾ ರ‍್ಯಾಂಪ್ ವಾಕ್ ಮಾಡುತ್ತಿರುವ ಫೋಟೊವನ್ನು ಹಂಚಿಕೊಂಡಿದೆ. ಹೀಗಾಗಿ ಬುಮ್ರಾ ನಾಯಕನಾಗುವುದು ಖಚಿತ ಎನ್ನುವಂತಿದೆ. ಇದಕ್ಕೆ ಅಧಿಕೃತ ಮುದ್ರೆಯೊಂದು ಬೀಳಲು ಮಾತ್ರ ಬಾಕಿ ಇದೆ.

ಕಳೆದ ಬಾರಿ ರೋಹಿತ್​ ಶರ್ಮ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್​ ಪಾಂಡ್ಯ(Hardik Pandya)ಗೆ ನಾಯಕತ್ ಪಟ್ಟ ನೀಡಲಾಗಿತ್ತು. ಆದರೆ, ಪಾಂಡ್ಯ ನಾಯಕತ್ವದಲ್ಲಿ ಮುಂಬೈ ತಂಡ ಎಂದೂ ಕಾಣದ ವೈಫಲ್ಯ ಕಂಡಿತ್ತು. ಪಾಂಡ್ಯ ನಾಯಕನಾಗುವ ಬಗ್ಗೆ ಬುಮ್ರಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಬಳಿಕ ಫ್ರಾಂಚೈಸಿಯೇ ಅವರನ್ನು ಸಮಾಧಾನಪಡಿಸಿತ್ತು. ಇದೀಗ ಬುಮ್ರಾ ಅವರನ್ನೇ ನಾಯಕನನ್ನಾಗಿ ಮಾಡಲು ಮುಂದಾಗಿದೆ. ಬುಮ್ರಾ ಕಾರ್ಯವೈಖರಿ ಬಗ್ಗೆಯೂ ಸಹ ಆಟಗಾರರಿಗೆ ಸಮಧಾನವಿದೆ. ಬುಮ್ರಾ ರೋಹಿತ್​ಗೆ ಬಹಳ ಆತ್ಮಿಯರಾಗಿರುವ ಕಾರಣ ಬುಮ್ರಾ ನಾಯಕನಾದರೆ ರೋಹಿತ್​ ಕೂಡ ಮುಂಬೈ ತೊರೆಯಲು ಹಿಂದೇಟು ಹಾಕಬಹುದು ಎನ್ನುವುದು ಫ್ರಾಂಚೈಸಿಯ ಯೋಜನೆ.

ಜಸ್​ಪ್ರೀತ್​ ಬುಮ್ರಾ ಅವರು ಇದುವರೆಗೆ 133 ಐಪಿಎಲ್​ ಆಡಿದ್ದು 165 ವಿಕೆಟ್​ ಕೆಡವಿದ್ದಾರೆ. 2013ರಲ್ಲಿ ಮುಂಬೈ ತಂಡದ ಪರ ಐಪಿಎಲ್​ ಪದಾರ್ಪಣೆ ಮಾಡಿದ್ದ ಬುಮ್ರಾ ಇದುವರೆಗೂ ಮುಂಬೈ ಪರವೇ ಆಡುತ್ತಿದ್ದಾರೆ.

ಇದನ್ನೂ ಓದಿ IPL 2025: ಮುಂಬೈ ಇಂಡಿಯನ್ಸ್​ಗೆ ಶ್ರೇಯಸ್​ ಅಯ್ಯರ್​, ಕೆಕೆಆರ್​ಗೆ ಸೂರ್ಯಕುಮಾರ್​ ನಾಯಕ!​

ಸೂರ್ಯಕುಮಾರ್​ ಯಾದವ್​ಗೆ ಹಾಲಿ ಚಾಂಪಿಯನ್​ ಕೆಕೆಆರ್(KKR)​ ತಂಡದಿಂದ ನಾಯಕತ್ವದ ಆಫರ್​ ಬಂದಿದೆ ಎಂದು ವರದಿಯಾಗಿದೆ. ಸೂರ್ಯಕುಮಾರ್​ ಯಾದವ್​ ಅವರು ಮುಂಬೈ ತಂಡ ಸೇರುವ ಮುನ್ನ ಕೆಕೆಆರ್​ ಪರ ಆಡುತ್ತಿದ್ದರು. 2014 ರ ಐಪಿಎಲ್ ಹರಾಜಿನಲ್ಲಿ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಖರೀದಿಸಿತ್ತು. ಇದೇ ಆವೃತ್ತಿಯಲ್ಲಿ ಕೆಕೆಆರ್​ ಚಾಂಪಿಯನ್​ ಕೂಡ ಆಗಿತ್ತು. ಗೌತಮ್​ ಗಂಭೀರ್​ ತಂಡದ ನಾಯಕನಾಗಿದ್ದರು. ಸೂರ್ಯಕುಮಾರ್​ ಕೆಕೆಆರ್​ ಪರ ನಾಲ್ಕು ಋತುಗಳಲ್ಲಿ 54 ಪಂದ್ಯಗಳನ್ನಾಡಿ 608 ರನ್​ ಬಾರಿಸಿದ್ದರು. 2018ರಲ್ಲಿ ಸೂರ್ಯ ಮುಂಬೈ ತಂಡ ಸೇರಿದ್ದರು.

ಸೂರ್ಯಕುಮಾರ್​ ಇದುವರೆಗೆ 150 ಐಪಿಎಲ್ ಪಂದ್ಯಗಳಿಂದ 3594 ರನ್​ ಬಾರಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 24 ಅರ್ಧಶತಕ ಒಳಗೊಂಡಿದೆ. ರೋಹಿತ್ ಶರ್ಮ ಅವರು ಟಿ20 ಕ್ರಿಕೆಟ್​ಗೆ ನಿವೃತ್ತಿ ಹೇಳಿದ ಕಾರಣ ಭಾರತ ತಂಡದ ಟಿ20 ನಾಯಕತ್ವ ಸೂರ್ಯಕುಮಾರ್​ ಹೆಗಲೇರಿದೆ. ಅವರ ಪೂರ್ಣ ಪ್ರಮಾಣದ ನಾಯಕತ್ವದಲ್ಲಿ ಆಡಿದ್ದ ಕಳೆದ ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 3-0 ಅಂತರದಿಂದ ಗೆದ್ದು ಬೀಗಿತ್ತು.

Continue Reading
Advertisement
Mysuru News
ಮೈಸೂರು13 ನಿಮಿಷಗಳು ago

Mysuru News : ಪರ್ಯಾವರಣ ಸಂರಕ್ಷಣ ಗತಿವಿಧಿಯಿಂದ ತ್ಯಾಜ್ಯ ಸಂಗ್ರಹಣ ಅಭಿಯಾನಕ್ಕೆ ಚಾಲನೆ

Kodagu News
ಕೊಡಗು32 ನಿಮಿಷಗಳು ago

Kodagu News : ದಸರಾದಲ್ಲಿ ಡಿಜೆ ಬಳಕೆಗೆ ನಿರ್ಬಂಧ; ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್

Actor Darshan Renukaswamy murder case
ಬೆಂಗಳೂರು1 ಗಂಟೆ ago

Actor Darshan : ತನಿಖಾಧಿಕಾರಿಗಳ ವಿರುದ್ಧ ಬ್ಯಾಟಿಂಗ್‌ ಮಾಡಿದ ದರ್ಶನ್‌ ಪರ ವಕೀಲ; ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Bomb threat to BMS, MS Ramayya and four other colleges in Basavanagudi Bengaluru
ಬೆಂಗಳೂರು1 ಗಂಟೆ ago

Bomb Threat : ಬೆಂಗಳೂರಿನ ಬಸವನಗುಡಿಯ ಬಿಎಂಎಸ್‌ ಸೇರಿ ನಾಲ್ಕು ಕಾಲೇಜುಗಳಿಗೆ ಬಾಂಬ್‌ ಬೆದರಿಕೆ

Medical Seat
ಬೆಂಗಳೂರು3 ಗಂಟೆಗಳು ago

Medical Seat : ಬೆಂಗಳೂರಿನಲ್ಲಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ಉದ್ಯಮಿಗೆ 1.5 ಕೋಟಿ ರೂ. ವಂಚನೆ

Murder case
ಚಿತ್ರದುರ್ಗ3 ಗಂಟೆಗಳು ago

Murder Case : ಪ್ರಿಯಕರನಿಗಾಗಿ ಪತಿಗೆ ಚಟ್ಟ ಕಟ್ಟಿದ್ದಳು ಪಾಪಿ ಪತ್ನಿ; ಹೊಟ್ಟೆ ಉರಿಯಿಂದ ಸತ್ತ ಎಂದವಳು ಈಗ ಜೈಲುಪಾಲು

Namma metro ticket prices will be hiked soon
ಬೆಂಗಳೂರು5 ಗಂಟೆಗಳು ago

Namma Metro : ಸಿಟಿ ಮಂದಿಗೆ ಮತ್ತೊಂದು ಶಾಕ್‌; ಶೀಘ್ರದಲ್ಲೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯ ಬರೆ!

Murder case
ಬೆಂಗಳೂರು5 ಗಂಟೆಗಳು ago

Murder Case : ನಿದ್ದೆಗೆ ಜಾರಿದ 13 ವರ್ಷದ ಬಾಲಕಿಯನ್ನು ಕೊಂದಿದ್ಯಾರು? ನಿಗೂಢ ಸಾವಿನ ಬೆನ್ನಟ್ಟಿದ ಪೊಲೀಸರು

murder case
ಬೆಂಗಳೂರು6 ಗಂಟೆಗಳು ago

Murder case : ಬೆಂಗಳೂರಲ್ಲಿ ಬಿಹಾರಿ ಮೂಲದ ವ್ಯಕ್ತಿಯನ್ನು ದೊಣ್ಣೆಯಿಂದ ಹೊಡೆದು ಭೀಕರ ಹತ್ಯೆ

Wall Collapse
ಬೆಂಗಳೂರು7 ಗಂಟೆಗಳು ago

Wall collapse : ಕಾಂಪೌಂಡ್ ಗೋಡೆ ಕುಸಿದು ಕೂಲಿ ಕಾರ್ಮಿಕ ಸಾವು; ಮತ್ತೊಬ್ಬ ಗಂಭೀರ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ22 ಗಂಟೆಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌