Nikhil Kumaraswamy: ನಾನು ಧರಿಸಿದ್ದ ಹುಲಿ ಉಗುರು ಕೃತಕ; ನಿಖಿಲ್ ಕುಮಾರಸ್ವಾಮಿ - Vistara News

South Cinema

Nikhil Kumaraswamy: ನಾನು ಧರಿಸಿದ್ದ ಹುಲಿ ಉಗುರು ಕೃತಕ; ನಿಖಿಲ್ ಕುಮಾರಸ್ವಾಮಿ

Nikhil Kumaraswamy : ಇದು ಸತ್ಯಕ್ಕೆ ದೂರ. ವನ್ಯಜೀವಿ ಸಂರಕ್ಷಣಾ ಕಾಯ್ದೆ, ಅದರ ಗಂಭೀರತೆ ಬಗ್ಗೆ ನನಗೆ ಖಂಡಿತ ಅರಿವಿದೆ ಎಂದ ನಿಖಿಲ್‌.

VISTARANEWS.COM


on

The tiger claw wore Nikhil Kumaraswamy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು; ಜೆಡಿಎಸ್ ಯುವ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಮದುವೆಗೆ ಹುಲಿ ಉಗುರು ಪೆಂಡೆಂಟ್ ಧರಿಸಿದ್ದರು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು ಇದೀಗ ನಿಖಿಲ್‌ ನಾನು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದು ಎಂದು ಸ್ಪಷ್ಟಪಡಿಸಿದ್ದಾರೆ.

ʻʻನಾನು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದೇ ಹೊರತು ನೈಜವಾದುದ್ದಲ್ಲ. ಅದನ್ನು ನನ್ನ ಮದುವೆ ಸಮಯದಲ್ಲಿ ಉಡುಗೊರೆ ನೀಡಿದ್ದು. ಅದು ಈಗಲೂ ನನ್ನ ಬಳಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬಹುದು. ದಯಮಾಡಿ ಯಾರೂ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ವಿನಂತಿ ಮಾಡಿಕೊಳ್ಳುತ್ತೇʼʼಎಂದು ನಿಖಿಲ್‌ ಅವರು ಟ್ವೀಟ್‌ ಮಾಡಿದ್ದಾರೆ.

ʻʻತಮ್ಮ ಮದುವೆ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ. ಇದು ಸತ್ಯಕ್ಕೆ ದೂರ. ವನ್ಯಜೀವಿ ಸಂರಕ್ಷಣಾ ಕಾಯ್ದೆ, ಅದರ ಗಂಭೀರತೆ ಬಗ್ಗೆ ನನಗೆ ಖಂಡಿತ ಅರಿವಿದೆʼʼ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Tiger pawl : ಧನಂಜಯ ಸ್ವಾಮಿಯ ಹುಲಿ ಉಗುರಿನ ಪೆಂಡೆಂಟ್‌ ನಿಗೂಢ ನಾಪತ್ತೆ; ಬೆನ್ನು ಹತ್ತಿದ ಅಧಿಕಾರಿಗಳು!

ಹುಲಿ ಉಗುರು ಧರಿಸಿದ ಆರೋಪದ ಮೇಲೆ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಅವರನ್ನು ಬಂಧಿಸಿದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿನಯ್ ಗುರೂಜಿ, ನಟ ಜಗ್ಗೇಶ್ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಅಂತಹದ್ದೇ ಪೆಂಡೆಂಟ್ ಧರಿಸಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆ ಹಲವರು ಒತ್ತಾಯಿಸಿದ್ದಾರೆ.

ಇದೀಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಈ ಬಗ್ಗೆ ಮಾತನಾಡಿ ʻʻಈಗಾಗಲೇ ಹುಲಿ ಚರ್ಮ ಉಗುರಿನ ಬಗ್ಗೆ ಗಣ್ಯ ವ್ಯಕ್ತಿಗಳ ಮೇಲೆ ದೂರು ಬಂದಿದೆ. ಉನ್ನತ ಮಟ್ಟದ ಸಮಿತಿ ನಡೆಸಿ ಕಾರ್ಯಚರಣೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ನೊಟೀಸ್‌ ಕೊಟ್ಟು ಪರೀಶಿಲನೆ ಮಾಡುತ್ತೇವೆ. ನಿಖಿಲ್‌ ಕುಮಾರ್‌ ಅವರನ್ನೂ ಪರಿಶೀಲನೆ ಮಾಡುತ್ತೇವೆ. ನೇರವಾಗಿ ಬರುವ ಮಾಹಿತಿಗಳಿಂದ ಕ್ರಮ ತೆಗೆದುಕೊಳ್ಳುತ್ತೇವೆʼʼಎಂದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Darshan : Boss ನಿಮ್ಮನ್ನ ಈ ರೀತಿ ನೋಡೊಕೆ ಆಗ್ತಿಲ್ಲ; ಬಿಕ್ಕಿ ಬಿಕ್ಕಿ ಅತ್ತ ದರ್ಶನ್​ ಮಹಿಳಾ ಅಭಿಮಾನಿ!

VISTARANEWS.COM


on

Actor Darshan case support by women fan and she cry
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಬಗ್ಗೆ ದರ್ಶನ್ (Darshan) ನನಗೆ ಏನೂ ಗೊತ್ತಿಲ್ಲ ಎನ್ನುತ್ತಿದ್ದಾರೆ ದರ್ಶನ್‌ (Actor Darshan ) . ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎನ್ನುತ್ತಿದ್ದಾರೆ. ಈ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಹಾಗೂ ದರ್ಶನ್ ಎ2 ಆರೋಪಿ ಆಗಿದ್ದು. 17 ಮಂದಿ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಈ ಪ್ರಕರಣ ಬಯಲಾದ ನಂತರ ದರ್ಶನ್​ ಕ್ರಿಮಿನಲ್ ಬುದ್ಧಿಯ ಪ್ರಕರಣಗಳು ಒಂದೊಂದಾಗಿ ಹೊರಕ್ಕೆ ಬರುತ್ತಿದೆ. ಹೀಗಿದ್ದರೂ ದಚ್ಚು ಅಭಿಮಾನಿಗಳು ʻʻದರ್ಶನ್‌ ಕಂಡರೆ ಆಗದವರು ಮಾಡಿರುವ ಕೆಲಸ, ಅವರ ಏಳಿಗೆ ಸಹಿಸದವರು ಮಾಡುತ್ತಿರುವ ಈ ರೀತಿ ಅವರಿಗೆ ತೊಂದರೆ ನೀಡುತ್ತಿದ್ದಾರೆ. ಬಾಸ್‌ ಜತೆ ನಾವಿದ್ದೇವೆʼʼಎಂದು ಹೇಳುತ್ತಿದ್ದಾರೆ. ಮಾತ್ರವಲ್ಲ ʻದಾಸʼನ ಕಷ್ಟ ಕಂಡು ಕಣ್ಣೀರಿಡುತ್ತಿದ್ದಾರೆ.

ಇದೀಗ ಮಹಿಳಾ ಅಭಿಮಾನಿ ಒಬ್ಬರು ವಿಡಿಯೊ ಮೂಲಕ ಕಣ್ಣಿರು ಹಾಕಿರುವ ವಿಡಿಯೊ ವೈರಲ್‌ ಆಗುತ್ತಿದೆ. ವಿಡಿಯೊದಲ್ಲಿ ಮಹಿಳಾ ಅಭಿಮಾನಿ ʻʻನೀವು ಅಪರಾಧಿನೋ, ನಿರಾಪರಾಧಿನೋ ಗೊತ್ತಿಲ್ಲ. ಆದರೆ ನಿಮ್ಮನ್ನು ಈ ಸ್ಥಿತಿಯಲ್ಲಿ ನೋಡೊದು ತುಂಬ ಕಷ್ಟ ಆಗ್ತಿದೆ. ಆದರೆ ನಿಮ್ಗೆ ಯಾವುದೆ ಕಷ್ಟ ಬಂದ್ರು ನಿಮ್ಮ ಜತೆ ಯಾವಗ್ಲೂ ಇರುತ್ತೇವೆʼʼಎಂದು ಬಿಕ್ಕಿ ಬಿಕ್ಕಿ ಅತ್ತು ಹೇಳಿಕೊಂಡಿದ್ದಾರೆ. ಇನ್ನು ಕೆಲವರು ಸೋಷಿಯಲ್‌ ಮೀಡಿಯಾ ಮೂಲಕ ದರ್ಶನ್‌ ಅವರಿಗೆ ಕ್ಲಾಸ್‌ ತೆಗದುಕೊಂಡಿದ್ದಾರೆ.

ಇದನ್ನೂ ಓದಿ: Actor Darshan: ಸೋದರ ಮಾವಂದಿರನ್ನೇ ಬೀದಿಪಾಲು ಮಾಡಿದ್ದ ದರ್ಶನ್​, ಒಂದೊಂದಾಗಿ ಹೊರಬರುತ್ತಿದೆ ‘ದಾಸ’ನ ದುರ್ಬುದ್ಧಿ !

https://twitter.com/ShSandeepa/status/1801435837898625429
https://twitter.com/AmruthBe/status/1800872567982751908

ದರ್ಶನ್ ಅವರು ಕೊಲೆ ಕೇಸ್​​ನಲ್ಲಿ ಜೈಲು ಸೇರಿದ್ದಾರೆ. ಈಗಾಗಲೇ ಪೊಲೀಸ್ ಕಸ್ಟಡಿ ಅವಧಿ ಪೂರ್ಣಗೊಳ್ಳುವ ಹಂತ ತಲುಪಿದೆ. ದರ್ಶನ್ ತಮಗೆ ಇರುವ ಪ್ರಭಾವ ಬಳಸಿಕೊಂಡು ಹೊರಗೆ ಬರುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆ ರೀತಿ ಆಗಿಲ್ಲ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇದರಿಂದ ಅವರು ಕಂಗಾಲಾಗಿದ್ದಾರೆ.

ರೇಣುಕಾಸ್ವಾಮಿಯನ್ನ ಚಿತ್ರದುರ್ಗದಲ್ಲಿ ಜೂನ್‌ 8ರಂದು ಬೆಳಗ್ಗೆ 11 ಗಂಟೆಗೆ ರಾಘವೇಂದ್ರ, ನಂದೀಶ್ ಹಾಗೂ ಮತ್ತಿಬ್ಬರು ಕಿಡ್ನಾಪ್ ಮಾಡಿದ್ದರು. ನಂತರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದಿದ್ದರು. ಶೆಡ್‌ನಲ್ಲಿ ಪವನ್, ಕಾರ್ತಿಕ್, ಪ್ರದೋಶ್‌ ಸೇರಿ ಹಲ್ಲೆ ಮಾಡಿದ್ದರು. ರೇಣುಕಾಸ್ವಾಮಿಯ ಕಾಲನ್ನು ಅಗಲಿಸಿ ಮರ್ಮಾಂಗದ ಮೇಲೆ ಹಲ್ಲೆ ಮಾಡಲಾಗಿತ್ತು. ಮೊದಲು ನಾಲ್ಕು ಜನ ಹಲ್ಲೆ ನಡೆಸಿದಾಗಲೇ ರೇಣುಕಾಸ್ವಾಮಿ ಸ್ಥಿತಿ ಗಂಭೀರವಾಗಿತ್ತು. ಬಳಿಕ ಉಳಿದ ಆರೋಪಿಗಳು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ.

ಕೊನೆಗೆ ನಟ ದರ್ಶನ್‌ ಸಹ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಸಂಜೆ 6.30ರ ಸುಮಾರಿಗೆ ರೇಣುಕಾಸ್ವಾಮಿ ಕೊನೆಯುಸಿರೆಳೆದಿದ್ದ. ಅದಾದ ಮೇಲೆ ರಾತ್ರಿ ಒಂದು ಗಂಟೆವರೆಗೆ ಮೃತದೇಹದೊಂದಿಗೆ ಹಂತಕರು ಇದ್ದರು. ಬಳಿಕ ದರ್ಶನ್‌ಗೆ ರಾಘವೇಂದ್ರ ಹಾಗೂ ವಿನಯ್ ಮಾಹಿತಿ ನೀಡಿದ್ದರು. ಬಳಿಕ ಶವ ಬಿಸಾಡುವುದರ ಬಗ್ಗೆ ಡೀಲ್ ನಡೆದಿದೆ. ನಂತರ ಜೂನ್‌ 9ರಂದು ಬೆಳಗ್ಗೆ ಸುಮನಹಳ್ಳಿ ರಾಜಕಾಲುವೆ ಬಳಿ ರೇಣುಕಾಸ್ವಾಮಿ ಶವ ಪತ್ತೆಯಾಗಿತ್ತು. ರೇಣುಕಾಸ್ವಾಮಿಗೆ ಒದ್ದಿರುವುದು ನಿಜ ಎಂಬುದಾಗಿ ವಿಚಾರಣೆ ವೇಳೆ ದರ್ಶನ್‌ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Continue Reading

ಸ್ಯಾಂಡಲ್ ವುಡ್

Actor Darshan: ಸೋದರ ಮಾವಂದಿರನ್ನೇ ಬೀದಿಪಾಲು ಮಾಡಿದ್ದ ದರ್ಶನ್​, ಒಂದೊಂದಾಗಿ ಹೊರಬರುತ್ತಿದೆ ‘ದಾಸ’ನ ದುರ್ಬುದ್ಧಿ !

VISTARANEWS.COM


on

Actor Darshan his brother-in-law homeless
Koo

ಬೆಂಗಳೂರು: ನಟ ದರ್ಶನ್‌ (Actor Darshan) ರೇಣುಕಾಸ್ವಾಮಿ ಹತ್ಯೆ ಸಂಬಂಧ ಕಂಬಿ ಎಣಿಸುತ್ತಿದ್ದಾರೆ. ಇದಾದ ಬಳಿಕ ದರ್ಶನ್‌ ಅವರ ಹಲವು ಕೃತ್ಯಗಳು ಒಂದೊಂದಾಗಿಯೇ ಬೆಳಕಿಗೆ ಬರುತ್ತಿದೆ. ಇದೀಗ ದರ್ಶನ್‌ ತಾನು ಹುಟ್ಟಿ ಬೆಳದ ಊರಿನಲ್ಲಿ ತಮ್ಮ ಸಂಬಂಧಿಕರನ್ನೇ ಬೀದಿಪಾಲು ಮಾಡಿದ ಕೃತ್ಯ ರಿವೀಲ್‌ ಆಗಿದೆ. ಮಾಧ್ಯಮದವೊಂದು ವರದಿ ಮಾಡಿದಂತೆ ದರ್ಶನ್‌ ಹುಟ್ಟಿ ಬೆಳೆದ ತವರು ಮನೆ ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ. ಅಜ್ಜಿ-ತಾತನ ಮನೆಯನ್ನು ಸ್ವತಃ ದರ್ಶನ್ ಮತ್ತು ತಾಯಿ ಮೀನಾ ಕೆಡವಿ ನೆಲಸಮಗೊಳಿಸಿ ಸೋದರ ಮಾವಂದಿರನ್ನು ಬೀದಿಪಾಲು ಮಾಡಿದ್ದಾರಂತೆ. ಆಸ್ತಿ ವಿಚಾರವಾಗಿ ಸೋದರ ಮಾವಂದಿರ ಜೊತೆ ಗಲಾಟೆ ಮಾಡಿಕೊಂಡಿದ್ದ ದರ್ಶನ್ ಮತ್ತು ತಾಯಿ ಮೀನಾ ಸೇರಿ ನೆಲಸಮ ಮಾಡಿದ್ದಾರೆ. ಈ ಪ್ರಕರಣದ ಕಳೆದ 10 ವರ್ಷಗಳ ಹಿಂದೆ ನಡೆದಿದ್ದು, ಈಗಲೂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.

ದರ್ಶನ್‌ ವಿರುದ್ಧ ಹತ್ತು ಹಲವು ಕೇಸ್‌ಗಳು ಇವೆ ಎನ್ನಲಾಗುತ್ತಿದೆ. ಕೇವಲ ಹೊರಗೆ ಮಾತ್ರವಲ್ಲ ಸಂಬಂಧಿಕರಿಗೂ ವಿಕೃತಿ ಮೆರೆದಿದ್ದಾರೆ ದಾಸ.

ತಂದೆ , ತಾಯಿ ಊರಿನಲ್ಲಿಯೂ ವಿಲನ್‌ ಆಗಿಯೇ ಅಬ್ಬರಿಸಿದ್ದಾರೆ ಅವರು. ಇದೀಗ ಹೊಸ ಮಾಹಿತಿ ಪ್ರಕಾರ ದರ್ಶನ್‌ ಅವರು ಆಸ್ತಿ ವಿಚಾರಕ್ಕಾಗಿ ಸೋದರ ಮಾವಂದಿರನ್ನು ಬೀದಿಪಾಲು ಮಾಡಿದ್ದಾರಂತೆ.. ಈ ಬಗ್ಗೆ ದರ್ಶನ್ ವಿರುದ್ಧ ಸ್ವತಃ ಅವರ ಸೋದರ ಮಾವ ಟಿ.ಎಲ್. ಶ್ರೀನಿವಾಸ್ ಮಾಧ್ಯಮವೊಂದಕ್ಕೆ ಮಾತನಾಡಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: Actor Darshan: ಇದು ರೌಡಿಸಂ ಸೆಂಟರ್‌ ಅಲ್ಲ; ನಿಜ ಆಗ್ತಾ ಇದೆಯಾ ಅಂದು ಜಗ್ಗೇಶ್‌ ನುಡಿದಿದ್ದ ಭವಿಷ್ಯ?

ʻʻದರ್ಶನ್‌ ಅವರನ್ನು ನಾವು ಎತ್ತಿ ಆಡಿಸಿದವರು. ಆದರೆ ಈಗ ಜೈಲು ಸೇರಿದ್ದಾನೆ. ಕೊಲೆ ಕೇಸ್‌ನಲ್ಲಿ ಭಾಗಿಯಾಗಿರುವುದು ಬೇಸರ ಆಗಿದೆ. ಈ ಹಿಂದೆ ನಮ್ಮ ಮನೆಯ ಆಸ್ತಿ ವಿಚಾರಕ್ಕೂ ಗಲಾಟೆ ಮಾಡಿದ್ದ. ಮಾತುಕತೆಯಲ್ಲಿ ಬಗೆಹರಿಸಿಕೊಳ್ಳಬೇಕಾದ ವಿಚಾರವನ್ನು ದೊಡ್ಡದ್ದು ಮಾಡಿ ನಮ್ಮನ್ನು ಬೀದಿ ಪಾಲು ಮಾಡಿದರು. ಮನಯನ್ನೇ ಕೊನೆಗೆ ನೆಲಸಮ ಮಾಡಿದರು. ನಾವು ಆ ಬಳಿಕ ದರ್ಶನ್‌ ಜತೆ ಸಂಪರ್ಕದಲ್ಲಿ ಇರಲಿಲ್ಲ. ಯಾವಾಗ ಪತ್ನಿ ಜತೆ ಜಗಳವಾಡಿ ಕೇಸ್‌ ದಾಖಲಾಯ್ತೋ ಹೋಗಿ ಸಂಧಾನ ಮಾಡಿ ಬಂದೆವು. ಇದಾದ ನಂತರ ಅವರ ಬಳಿ ಹೋಗಿರಲಿಲ್ಲ. ಈಗ ರೇಣುಕಾಸ್ವಾಮಿ ಎನ್ನುವವರನ್ನು ಕೊಲೆ ಮಾಡಿ ಜೈಲು ಸೇರಿರುವುದು ನೋವಿನ ಸಂಗತಿಯಾಗಿದೆ. ಇನ್ನು ದರ್ಶನ್‌ ತಾಯಿ ಜತೆ ಕೂಡ ಸರಿಯಾಗಿ ಮಾತನಾಡುತ್ತಿರಲಿಲ್ಲ. ದರ್ಶನ್ ನಿರಪರಾಧಿ ಎಂದು ಸಾಬೀತಾಗಿ ಹೊರ ಬರುತ್ತಾರೆ ಎಂಬ ನಂಬಿಕೆಯಿದೆ. ಮುಂದೆ ಆದರೂ ಒಳ್ಳೆಯ ದಾರಿಯಲ್ಲಿ ಸಾಗಲಿʼʼಎಂದು ಹೇಳಿದರು.

ಬಡಪಾಯಿ ಕಾರ್ಮಿಕರ ಮೇಲೆ ನಾಯಿ ಛೂ ಬಿಟ್ಟು ಹಿಂಸಿಸಿದ್ದ ದರ್ಶನ್‌ & ಗ್ಯಾಂಗ್‌!

ರೇಣುಕಾ ಸ್ವಾಮಿ ಕೊಲೆ ವಿಚಾರದಲ್ಲಿ ದರ್ಶನ್‌ ಹಾಗೂ ಗ್ಯಾಂಗ್‌ ಈಗಾಗಲೇ ಅರೆಸ್ಟ್‌ ಆಗಿದೆ. ಇದೀಗ ನಟ ದರ್ಶನ್ (Actor Darshan) ಮತ್ತು ಗ್ಯಾಂಗ್‌ನ ಮತ್ತೊಂದು ಕರಾಳ ಮುಖ ಬಯಲಾಗಿದೆ. 10 ವರ್ಷಗಳ ಹಿಂದೆ, ಪರಿಹಾರ ಕೇಳಲು ಹೋಗಿದ್ದ ಕೂಲಿ ಕೆಲಸಗಾರನ ಮೇಲೆ ನಾಯಿ ಛೂ ಬಿಟ್ಟು ವಿಕೃತಿ ಮೆರೆದಿದ್ದರೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಚಾಮರಾಜನಗರ ತಾಲೂಕಿನ ನಿಜಲಿಂಗನಪುರದ ಮಹೇಶ್ ಎಂಬುವರು 10 ವರ್ಷಗಳ ಹಿಂದೆ ಪರಿಹಾರ ಕೇಳಲು ಹೋಗಿ ಕಣ್ಣು ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಟಿ. ನರಸೀಪುರ ಸಮೀಪದ ತೂಗುದೀಪ ಫಾರ್ಮ್​ಹೌಸ್​ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಈ ರೀತಿ ವಿಕೃತಿ ತೋರಿಸಲಾಗಿತ್ತು ಎನ್ನಲಾಗಿದೆ.

ಮಹಿಳೆ ಮೇಲೆ ನಟ ದರ್ಶನ್ ಕ್ರೌರ್ಯ

ಮತ್ತೊಂದು ಪ್ರಕರಣದಲ್ಲಿ ಕೊಡಗಿನ ಹೋಂ ಸ್ಟೇ ಒಂದರಲ್ಲಿ ಮಹಿಳೆ ಮೇಲೆ ನಟ ದರ್ಶನ್ ಕ್ರೌರ್ಯ ಮೆರೆದಿದ್ದಾರೆ ಎನ್ನಲಾಗಿದೆ. ಕೊಡಗು ಜಿಲ್ಲೆಯ ಹೊಂ ಸ್ಟೇ ಯಲ್ಲಿ ಕೆಲವು ವರ್ಷಗಳ ಹಿಂದೆ ಘಟನೆ ನಡೆದಿತ್ತು. ನಟ ದರ್ಶನ್ ಸ್ನೇಹಿತರ ಜತೆ ಹೋಂ ಸ್ಟೇ ಯಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಹೋಂ ಸ್ಟೇಯಲ್ಲಿ ಕೆಲಸ ಮಾಡುವ ಮಹಿಳೆಗೆ ಸಿಗರೇಟ್‌ನಿಂದ ಸುಟ್ಟು ಹಲ್ಲೆ ಮಾಡಿದ್ದರು ಎಂದು ಆರೋಪ ಮಾಡಿದ್ದಾರೆ.

Continue Reading

ಸ್ಯಾಂಡಲ್ ವುಡ್

Actor Darshan: ಇದು ರೌಡಿಸಂ ಸೆಂಟರ್‌ ಅಲ್ಲ; ನಿಜ ಆಗ್ತಾ ಇದೆಯಾ ಅಂದು ಜಗ್ಗೇಶ್‌ ನುಡಿದಿದ್ದ ಭವಿಷ್ಯ?

VISTARANEWS.COM


on

Actor Darshan warn darshan previous
Koo

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan) ಅವರು ಅರೆಸ್ಟ್‌ ಆದ ಬಳಿಕ ಪರೋಕ್ಷವಾಗಿ ದರ್ಶನ್‌ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದರು. ʻಯಾರನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ! ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆʼಎಂದು ಬರೆದುಕೊಂಡಿದ್ದರು. ಈ ಹಿಂದೆ ‘ತೋತಾಪುರಿ’ ಸಿನಿಮಾ ಚಿತ್ರೀಕರಣ ಸೆಟ್‌ಗೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿ ಜಗ್ಗೇಶ್ ವಿರುದ್ಧ ಧಿಕ್ಕಾರ ಕೂಗಿದ್ದು ವಿವಾದ ಸೃಷ್ಟಿಸಿತ್ತು. ದರ್ಶನ್ ಹುಡುಗರ ಬಗ್ಗೆ ನಟ ಜಗ್ಗೇಶ್ ಹಗುರವಾಗಿ ಮಾತನಾಡಿದ್ದರು. ಈ ಘಟನೆಯ ಕುರಿತು ಜಗ್ಗೇಶ್‌ ಅವರು ತಮ್ಮ ಟ್ವಿಟರ್‌ ಖಾತೆ ಮೂಲಕ ಅಸಮಾಧಾನ ಹೊರಹಾಕಿದ್ದರು. ಇದೀಗ ಈ ವಿಡಿಯೊ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಹಿರಿಯ ಕಲಾವಿದರಿಗೆ ಬೆಲೆ ಕೊಡ್ತಾ ಇಲ್ಲ ಎಂಬ ಮಾತುಗಳನ್ನು ಜಗ್ಗೇಶ್‌ ಈ ಹಿಂದೆ ಹೇಳಿಕೊಂಡಿದ್ದರು. ಇದು ರೌಡಿಸಂ ಸೆಂಟರ್‌ ಅಲ್ಲ ಎಂದೂ ಹೇಳಿದ್ದರು. ಸದ್ಯ ಈಗ ಆ ಮಾತು ನಿಜ ಆಗುತ್ತಿದೆ ಎಂದು ಕೆಲವರು ವಿಡಿಯೊವನ್ನು ಮತ್ತೆ ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

ಜಗ್ಗೇಶ್‌ ಹೇಳಿದ್ದೇನು?

‘ಸಿನಿಮಾ ರಂಗದಲ್ಲಿ ನಾನು 40 ವರ್ಷ ಕೆಲಸ ಮಾಡಿದ್ದೇನೆ. ನಾನು ಏನು ಎಂಬುದು ಮಾಧ್ಯಮದವರಿಗೆ ಗೊತ್ತಿದೆ. ನನ್ನ ಜತೆ ಮಾತನಾಡಲು ಹುಡುಗರ ಬಂದಾಗ ನಾನೇನೂ ಓಡಿಹೋಗಿಲ್ಲ. ಯಾವುದೋ ಒಂದು ಸಣ್ಣ ವಿಷಯ ಇಟ್ಟುಕೊಂಡು ಜಗ್ಗೇಶ್‌ಗೆ ಅಪಮಾನ ಮಾಡಿಬಿಟ್ವಿ ಅಂತ ನಿಮಗೆ ಅನಿಸಿದರೆ ಅದರಿಂದ ನನಗೆ ಯಾವುದೇ ನೋವು, ನಷ್ಟ ಇಲ್ಲʼʼಎಂದಿದ್ದರು.

‘ನಾನು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗ ಈ ಯಾವನೂ ಹುಟ್ಟಿರಲಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ನೀವು ಯಾರಿಗೆ ಬಕೆಟ್‌ ಹಿಡಿಯುತ್ತಿದ್ದೀರೋ ಅವರು ಯಾರೂ ಹುಟ್ಟಿರಲಿಲ್ಲ. 80ರ ದಶಕದಲ್ಲಿ ಸಿನಿಮಾ ರಂಗಕ್ಕೆ ಬಂದವನು ನಾನು. ರಾಜ್‌ಕುಮಾರ್‌, ಅಂಬರೀಶ್‌, ವಿಷ್ಣುವರ್ಧನ್‌, ಶಂಕರ್‌ನಾಗ್‌, ಪ್ರಭಾಕರ್‌, ಅನಂತ್‌ನಾಗ್‌ ಅವರ ಜೊತೆ ಹೆಜ್ಜೆ ಹಾಕಿದವನು ನಾನು. ಅಂಥವರ ಜೊತೆ ಬದುಕಿದವನು ನಾನು. ಇವತ್ತು ನಾನು ಈ ಜಾಗದಲ್ಲಿ ನಿಂತಿದ್ದೇನೆ ಎಂದರೆ ನಿಮ್ಮ ಯಾರಿಂದಲೂ ಅಲ್ಲ. ಕನ್ನಡಿಗರಿಂದ, ಕನ್ನಡಿಗರ ಪ್ರೀತಿಯಿಂದ. ಜಗ್ಗೇಶ್‌ ಕಾಗೆ ಹಾರಿಸುತ್ತಾನೆ ಎನ್ನುತ್ತೀರಾ? ನನ್ನ ಬದುಕಿನಲ್ಲಿ ನಾನು ಕಾಗೆ ಹಾರಿಸುವುದಾಗಿದ್ದರೆ 20 ಸಾರಿ ಎಂಎಲ್‌ಎ ಆಗುತ್ತಿದ್ದೆ. 20 ಬಾರಿ ಮಂತ್ರಿ ಆಗುತ್ತಿದ್ದೆ. ಬಕೆಟ್‌ ಹಿಡಿದು ಬೂಟ್‌ ನೆಕ್ಕಿದ್ದರೆ ನೂರಾರು ಪೋಸ್ಟ್‌ಗಳನ್ನು ನಾನು ತೆಗೆದುಕೊಳ್ಳುತ್ತಿದ್ದೆ. ಇವತ್ತು ನಾನು ಸ್ವಾಭಿಮಾನಿಯಾಗಿ ಬದುಕುತ್ತಿರುವುದು ನಿಮ್ಮಿಂದ ಈ ಮಾತುಗಳನ್ನು ಕೇಳಿಸಿಕೊಳ್ಳೋಕೆ ಅಲ್ಲ. ಈ ಕರ್ನಾಟಕದಲ್ಲಿ ನನ್ನ ಮೈ ಮುಟ್ಟೋಕೆ ಯಾವನಿಗಾದ್ರೂ ಆಗತ್ತಾ?’ಎಂದು ಹೇಳಿದ್ದರು.

ಇದನ್ನೂ ಓದಿ: Actor Darshan: ಅಪ್ಪನನ್ನು ಬೈದಿದ್ದಕ್ಕೆ ಥ್ಯಾಂಕ್ಸ್‌ ಎಂದ ದರ್ಶನ್‌ ಪುತ್ರ ವಿನೀಶ್;‌ ಪೋಸ್ಟ್‌ನಲ್ಲಿ ಇನ್ನೇನಿದೆ?

ನಾವು ಸತ್ತಮೇಲೆ ನಮ್ಮ ತಿಥಿ ಮಾಡಿ ಆನಂದ ಪಡಿ

ʻʻರಾಜ್‌ಕುಮಾರ್‌, ಅಂಬರೀಷ್‌, ವಿಷ್ಟುವರ್ಧನ್‌ ಸತ್ತ ಮರುದಿನ ಕನ್ನಡದ ಸ್ವಾಭಿಮಾನವೂ ಸಾಯುತ್ತಿದೆ. ನೆನಪಿಟ್ಟುಕೊಳ್ಳಿ, ಉಳಿದಿರುವುದು ನಾವು ಮೂರ್ನಾಲ್ಕು ಜನ ಮಾತ್ರ. ನಾನು, ಶಿವರಾಜ್‌ಕುಮಾರ್‌, ರಮೇಶ್‌ ಅರವಿಂದ್‌, ರವಿಚಂದ್ರನ್‌ ಮಾತ್ರ. ನಾವು ಸತ್ತಮೇಲೆ ನಮ್ಮ ತಿಥಿ ಮಾಡಿ ಆನಂದ ಪಡಿ, ಸಂತೋಷಪಡಿ. ನನ್ನ ಒಕ್ಕಲಿಗತನದ ಬಗ್ಗೆ ಮಾತನಾಡಿದಾಗ ನಾನು ಸುಮ್ಮನಿದ್ದೇನೆ. ಅಲ್ಲಿ 20 ಜನ ಹುಡುಗರು ಬಂದಿದ್ದರು. ಅವರಲ್ಲಿ ಉದ್ವೇಗ ಇತ್ತು. ಒಪ್ಪಿಕೊಳ್ಳುತ್ತೇನೆ. ನಾನು ಓಡಿ ಹೋಗಲಿಲ್ಲವಲ್ಲ. ಗಂಡಸು ಥರ ಇದ್ದುಕೊಂಡು ಮಾತಾಡಿದ್ದೇನೆ. ನನಗೆ ಅವರು ಬುದ್ದಿ ಕಲಿಸಬೇಕಾಗಿಲ್ಲ. ನನಗೆ ಬುದ್ದಿ ಕಲಿಸಬೇಕಾಗಿರುವುದು ರಾಘವೇಂದ್ರ ಸ್ವಾಮಿಗಳು, ಕನ್ನಡಿಗರು ಮತ್ತು ನನ್ನನ್ನು ಹೆತ್ತ ಜನʼʼಎಂದರು.

ಇದು ರೌಡಿಸಂ ಸೆಂಟರ್‌ ಅಲ್ಲ

ʻʻಇಂಥ ಸ್ಥಿತಿಗತಿಯನ್ನು ನೀವು ಬೆಳೆಸಿದರೆ ಚಿತ್ರರಂಗದಲ್ಲಿ ರೌಡಿಸಂ ಶುರು ಮಾಡುತ್ತಾರೆ. ಎಲ್ಲ ನಟರನ್ನೂ ಹೆಸರಿಸೋಕೆ ಶುರು ಮಾಡುತ್ತಾರೆ. ಅದನ್ನು ನೀವು ನಿಲ್ಲಿಸಲೇಬೇಕು. ಇದು ರೌಡಿಸಂ ಸೆಂಟರ್‌ ಅಲ್ಲ. ಇಲ್ಲಿ ಕೂತು-ನಿಂತು ಮಾತನಾಡಬೇಕು. ದೊಡ್ಡವರು-ಚಿಕ್ಕವರು ಇದ್ದಾರೆ. ಇವತ್ತು ಒಬ್ಬ ನಟನ ಸಿನಿಮಾ ಹಿಟ್‌ ಆಯ್ತು ಎಂದರೆ, ಮತ್ತೊಬ್ಬ ನಟ ಹುನ್ನಾರ ಮಾಡ್ತಾನೆ. ನಾವೆಲ್ಲರೂ ಬೆಳೆಯೋಣ ಎಂಬ ಭಾವನೆ ಇಲ್ಲ. ನಾನೊಬ್ಬನೇ ಬೆಳೆಯಬೇಕು ಎಂಬ ಸ್ಥಿತಿ ಬರ್ತಾ ಇದೆ. ಅಪಮಾನ ಮಾಡುವಂತವರನ್ನು ಪ್ರೋತ್ಸಾಹಿಸಬೇಡಿ ಎಂದು ಕನ್ನಡಿಗರಲ್ಲಿ ನಾನು ವಿನಂತಿ ಮಾಡುತ್ತೇನೆ’ ಎಂದಿದ್ದರು ಜಗ್ಗೇಶ್‌.

ಇದೀಗ ಜಗ್ಗೇಶ್‌ ಮಾತನಾಡಿರುವ ಈ ವಿಡಿಯೊ ಭಾರಿ ವೈರಲ್‌ ಆಗುತ್ತಿದೆ. ಜಗ್ಗೇಶ್‌ ಅವರ ಈ ಮಾತುಗಳಿಗೆ ಕೆಲವರು ಸಾಥ್‌ ಕೊಟ್ಟಿದ್ದಾರೆ.

 ದರ್ಶನ್‌ ಅರೆಸ್ಟ್​ ಆದ ಬೆನ್ನಲ್ಲೇ ಕರ್ಮ ಫಲ ಎಂದು ಜಗ್ಗೇಶ್‌ ಟ್ವೀಟ್‌

ʻಸರ್ವ ಆತ್ಮಾನೇನ ಬ್ರಹ್ಮ” ಸರ್ವ ಜೀವಿಯಲ್ಲಿ ದೇವರಿದ್ದಾನೆ. ಯಾರನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ! ಕರ್ಮ ಜೀವನವನ್ನು ಹಿಂದೆ ಹಿಂಬಾಲಿಸುತ್ತದೆ. ಅವನ ಪಾಪಕರ್ಮ ಅವನ ಸುಡುತ್ತದೆ! ಕಲಿಯುಗದಲ್ಲಿ ದೇವರು ಕಲ್ಲಲ್ಲ. ಎಲ್ಲಾ ಕರ್ಮಕ್ಕು ತತಕ್ಷಣ ಫಲಿತಾಂಶ ಉಂಟು! ರಾಮನಾಗು.. ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ! ಮದಕ್ಕೆ ಕಾರುಣ್ಯದ ಅರಿವಿಲ್ಲಾ!ʼʼಎಂದು ಬರೆದುಕೊಂಡಿದ್ದಾರೆ. ಮದ ಇದ್ದವನಿಗೆ ಕರುಣೆ ಎಂಬುದೆಲ್ಲ ಇರುವುದಿಲ್ಲ ಎಂಬುದು ಈ ವಾಕ್ಯದ ಅರ್ಥ.ಈ ಮೂಲಕ ಅವರು ದರ್ಶನ್ ಬಗ್ಗೆಯೇ ಟ್ವೀಟ್ ಮಾಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

Continue Reading

ಸಿನಿಮಾ

Actor Darshan: ʻಡೆವಿಲ್ʼ ಸಿನಿಮಾಗೆ ದರ್ಶನ್‌ ಪಡೆದಿದ್ದು ಬರೋಬ್ಬರಿ 22 ಕೋಟಿ ರೂ.; ಶಾಕ್‌ನಲ್ಲಿ ನಿರ್ಮಾಪಕ!

VISTARANEWS.COM


on

Actor Darshan devil 22 crore taken by producer
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್‌ ಅವರನ್ನು (Actor Darshan) ಆರು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆರೋಪ ಸಾಬೀತಾದರೆ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.  ಇನ್ನೇನು ದಚ್ಚು ಫ್ಯಾನ್ಸ್‌ ʻಡೆವಿಲ್‌ʼ ಸಿನಿಮಾ ರಿಲೀಸ್‌ಗೆ ಕಾಯುತ್ತಿರುವಾಗಲೇ ʻದಾಸʼ ಕೊಲೆ ಪ್ರಕರಣದಲ್ಲಿ ಅರೆಸ್ಟ್‌ ಆಗಿದ್ದಾರೆ. ಈ ಮುಂಚೆಯೂ ಹಲವು ಪ್ರಕರಣಗಳಲ್ಲಿ ದರ್ಶನ್‌ ಪೊಲೀಸರು ಅತಿಥಿಯಾಗಿದ್ದರೂ ಈ ಬಾರಿ ಗಂಭೀರ ಪ್ರಕರಣವಾಗಿರುವುದರಿಂದ ದರ್ಶನ್‌ಗೆ ಜೈಲು ಶಿಕ್ಷೆ ಗ್ಯಾರಂಟಿ ಎನ್ನಲಾಗುತ್ತಿದೆ. ಇದೀಗ ದರ್ಶನ್‌ ಡೆವಿಲ್‌ ಸಿನಿಮಾಗಾಗಿ 22 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕಾಟೇರ ಯಶಸ್ಸಿನ ಬಳಿಕ ಡೆವಿಲ್‌ ಎಂಬ ಸಿನಿಮಾದಲ್ಲಿ ದರ್ಶನ್‌ ನಟಿಸುತ್ತಿದ್ದಾರೆ. ಈ ವರ್ಷ ಚಿತ್ರಮಂದಿರಗಳಿಗೆ ಆಗಮಿಸುವ ನಿರೀಕ್ಷೆಯಿತ್ತು. ಈ ಸಿನಿಮಾದ ಶೂಟಿಂಗ್‌ ಭರದಿಂದ ನಡೆಯುತ್ತಿತ್ತು. ಈ ಚಿತ್ರದ ಗ್ಲಿಂಪ್ಸ್‌ ವಿಡಿಯೋ ಕೂಡ ರಿಲೀಸ್‌ ಮಾಡಲಾಗಿತ್ತು. ಡೆವಿಲ್‌ನಲ್ಲಿ ಬಾಲಿವುಡ್‌ ನಟ ಮಹೇಶ್‌ ಮಂಜ್ರೇಕರ್‌ ಕೂಡ ನಟಿಸುತ್ತಿದ್ದಾರೆ. ಪ್ರಕಾಶ್‌ ವೀರ್‌ ನಿರ್ದೇಶನದ ಡೆವಿಲ್‌ ಸಿನಿಮಾಗೆ ದರ್ಶನ್‌ ಬರೋಬ್ಬರಿ 22 ಕೋಟಿ ರೂ. ಪಡೆದುಕೊಂಡಿದ್ದರು.

ಟೀಸರ್ ನಿಂದಲೇ ಕೌತುಕ ಹುಟ್ಟಿಸಿದ ಡೆವಿಲ್ ಸಿನಿಮಾ ಕೇವಲ 25 ದಿನ ಶೂಟಿಂಗ್ ಆಗಿದೆ. ಮೊದಲ ಶೆಡ್ಯೂಲ್ ಚಿತ್ರೀಕರಣದ ವೇಳೆ ದರ್ಶನ್ ಆಕ್ಷನ್ ಸಿಕ್ವೇನ್ಸ್ ಮಾಡೋದಿಕ್ಕೆ ಹೋಗಿ ಎಡಗೈಯಿ ಮುರಿದುಕೊಂಡರು. ಹೀಗಾಗಿ ದಾಸ ಶಸ್ತ್ರ ಚಿಕಿತ್ಸೆಗೆ ಒಳಗಾದ ಕಾರಣ ಈ ಸಿನಿಮಾ ಶೂಟಿಂಗ್ ಮುಂದಕ್ಕೆ ಹಾಕಲಾಗಿತ್ತು. ಈ ಘಟನೆ ನಡೆಯುವ ಎರಡು ದಿನದ ಹಿಂದೆ ಡೆವಿಲ್ ಚಿತ್ರದ ಎರಡನೇ ಹಂತದ ಶೂಟಿಂಗ್ ಆರಂಭವಾಗಿತ್ತು. ನಿನ್ನೆ ದರ್ಶನ್ ಭಾಗವಹಿಸಬೇಕಿತ್ತು ಅಷ್ಟರಲ್ಲಿ ಡಿ ಬಾಸ್ ಪೊಲೀಸರ ಅತಿಥಿಯಾಗಿದ್ದರು.

ಇದನ್ನೂ ಓದಿ: Actor Darshan: ಆರ್ ಆರ್​​ ನಗರ ವಾಸ್ತು ಸರಿಯಿಲ್ಲ, ಕೇಸುಗಳು ಬೀಳ್ತವೆ ಎಂದಿದ್ದರು ಆರ್ಯವರ್ಧನ್​ ಗುರೂಜಿ; ದರ್ಶನ್ ವಿಷಯದಲ್ಲಿ ಸತ್ಯವಾಯ್ತೇ?

ಈ ಕಡೆ ದರ್ಶನ್ ಅರೆಸ್ಟ್ ಆಗಿದ್ದಾರೆ ಎಂಬ ಸುದ್ದಿ ಕೇಳಿದ ತಕ್ಷಣ ನಿರ್ದೇಶಕ ಪ್ರಕಾಶ್ ಶಾಕ್‌ಗೆ ಒಳಗಾಗಿ ನಿನ್ನೆ ಶೂಟಿಂಗ್‌ವನ್ನು ಸ್ಟಾಪ್ ಮಾಡಿದ್ದಾರೆ ಎನ್ನಲಾಗಿದೆ. ಡೆವಿಲ್ ಚಿತ್ರವನ್ನ ಡಿಸೆಂಬರ್ 25ಕ್ಕೆ ಬಿಡುಗಡೆ ಮಾಡುತ್ತೇವೆ ಎಂದ ನಿರ್ದೇಶಕ ಪ್ರಕಾಶ್ ಕಂಗಾಲು ಆಗಿದ್ದಾರೆ. ಕಾರಣ ದರ್ಶನ್ ಹೊರಗಡೆ ಬರುವರೆಗೆ ಡೆವಿಲ್ ಹೀರೋ ಸಿನಿಮಾ ಶೂಟಿಂಗ್ ಶುರುವಾಗೋದಿಲ್ಲ. ಹಾಗೇ ಡಿಸೆಂಬರ್ ನಲ್ಲಿ ಡೆವಿಲ್ ಚಿತ್ರ ಬಿಡುಗಡೆ ಇಲ್ಲದೆ ಮುಂದಿನ ವರ್ಷಕ್ಕೆ ಹೋಗುತ್ತೆ. ಅಷ್ಟಕ್ಕೂ ದರ್ಶನ್ ಸಿನಿಮಾಗೆ ತೆಗೆದುಕೊಂಡಿರುವ ಸಂಭಾವನೆ ಬರೋಬ್ಬರಿ 22 ಕೋಟಿ ರೂ. ಎನ್ನಲಾಗಿದೆ ಡೆವಿಲ್ ಚಿತ್ರದ ಬಳಿಕ ದರ್ಶನ್ ನಟಿಸಲು ಒಪ್ಪಿಕೊಂಡ ಚಿತ್ರ ಸಿಂಧೂರ ಲಕ್ಷ್ಮಣ.

ಕ್ರಾಂತಿ ಸಿನಿಮಾ ಮಾಡಿದ್ದ ನಿರ್ಮಾಪಕ ಬಿ ಸುರೇಶ್ ನಿರ್ಮಾಣದ ಹಾಗು ತರುಣ್ ಸುಧೀರ್ ನಿರ್ದೇಶನದ ಸಿಂಧೂರು ಲಕ್ಷ್ನಣ ಸಿನಿಮಾ ಶುರುವಾಗಬೇಕಿತ್ತು. ಆದರೆ ದರ್ಶನ್ ಎಡವಟ್ಟಿನಿಂದ ಸಿಂಧೂರ ಲಕ್ಷ್ಮಣ ಸಿನಿಮಾ ಶೂಟಿಂಗ್ ಕೂಡ ಮುಂದಿನ ವರ್ಷಕ್ಕೆ ಹೋಗಲಿದೆ. ಈ ಸಿನಿಮಾ ದರ್ಶನ್ ಪಡೆದಿರೋ ಅಡ್ವಾನ್ಸ್ 3 ಕೋಟಿ ರೂ. ಯಂತೆ.

ಈ ಚಿತ್ರದ ಮಧ್ಯೆ ದರ್ಶನ್ ಮತ್ತೊಂದು ಬಿಗ್ ಬಜೆಟ್ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದರು. ಅದು ಜೋಗಿ ಪ್ರೇಮ್ ನಿರ್ದೇಶನದ ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೋಡಕ್ಷನ್ ದರ್ಶನ್ ಬಹುಕೋಟೆ ವೆಚ್ಚದ ಸಿನಿಮಾ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಅಡ್ವಾನ್ಸ್ ಹಣ ಎಂದು ದರ್ಶನ್ 3 ರಿಂದ 5 ಕೋಟಿ ಪಡೆದಿದ್ದಾರೆ ಎನ್ನುವುದು ಗಾಂಧಿನಗರದ ಮಾತು.

ಈ ಪ್ರಾಜೆಕ್ಟ್ ಮುಗಿದ ಮೇಲೆ ದರ್ಶನ್ ಮತ್ತೆ ಜಗ್ಗುದಾದ ಸಿನಿಮಾ ನಿರ್ದೇಶಕರಾದ ರಾಘವೇಂದ್ರ ಹೆಗ್ಡೆ ಜೊತೆ ಸಿನಿಮಾ ಮಾಡ್ತಾ ಇದ್ದಾರೆ.‌ ಸಿಂಧೂರ ಲಕ್ಷ್ಮಣ ಚಿತ್ರ ಶೂಟಿಂಗ್ ಮುಗಿದ ಬಳಿಕ ಈ ಚಿತ್ರದ ಸ್ಟಾರ್ ಆಗೋದು ಬಹುಶಃ 2025ನೇ ವರ್ಷದ ಅಂತ್ಯದಲ್ಲಿ. ಈ ಚಿತ್ರಕ್ಕೆ ದರ್ಶನ್ ಮುಂಗಡ ಹಣ ಎಂದು 5 ಕೋಟಿ ರೂ. ಪಡೆದಿದ್ದಾರೆ ಎನ್ನಲಾಗಿದೆ.

ಈ ಚಿತ್ರಗಳ ಬಳಿಕ ದರ್ಶನ್ ತೆಲುಗಿನ ಅತ್ತಾರಿಂಟಿಕಿ ದಾರೇದಿ ಚಿತ್ರದ ನಿರ್ಮಾಪಕರಾದ ಬಿ.ವಿ.ಎಸ್. ಎನ್ ಪ್ರಸಾದ್ ಜೊತೆ ಸಿನಿಮಾ ಮಾತಕಥೆ ಆಗಿ 25 ಲಕ್ಷ ಅಡ್ವಾನ್ಸ್ ಹಣ ಪಡೆದಿದ್ದಾರಂತೆ‌. ಈ ಸಿನಿಮಾ ಶುರುವಾಗೋದಿಕ್ಕೆ ಇನ್ನು ಒಂದು ವರ್ಷ ಆಗುತ್ತೆ. ಇದರ ಜತೆಗೆ ತಮಿಳು ನಿರ್ಮಾಪಕ ರಮೇಶ್ ಪಿಳ್ಳೈ ಜೊತೆ ಚಿತ್ರ ಮಾಡುವುದಾಗಿ ದರ್ಶನ್ ಮಾತುಕತೆ ಆಗಿತ್ತು. ಈ ಸಿನಿಮಾ ಮಾಡುವುದಾಗಿ ಅಡ್ವಾನ್ಸ್ ಹಣ ಅಂತಾ 25 ಲಕ್ಷ ಪಡೆದಿದ್ದರಂತೆ‌. ಹಾಗೇ ಮತ್ತೊಬ್ಬ ಹೈದರಾಬಾದ್ ನಿರ್ಮಾಪಕ ರಘುನಾಥ್ ಎಂಬುವರ ಜತೆ ಸಿನಿಮಾ ಮಾತುಕತೆ ಆಗಿದೆ‌. ಈ ಚಿತ್ರಕ್ಕೂ ದರ್ಶನ್ 25 ಲಕ್ಷ ಅಡ್ವಾನ್ಸ್ ಹಣ ಪಡೆದಿದ್ದಾರಂತೆ‌. ಇದೀಗ ದರ್ಶನ್‌ ಅವರನ್ನು ನಂಬಿಕೊಂಡು ಸಿನಿಮಾಗಳಿಗೆ ಈಗಾಗಲೇ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿರುವ ನಿರ್ಮಾಪಕರ ಗತಿ ಏನು? ಹಾಗೇ ಸಿನಿಮಾಗಳೆ ಬರುತ್ತಿಲ್ಲ ಎಂಬ ಗಾಸಿಪ್‌ಗಳ ಮಧ್ಯೆ ವರ್ಷಕ್ಕೆ ಒಂದೆರಡು ಸಿನಿಮಾ ಮಾಡುತ್ತಿದ್ದ ದರ್ಶನ್‌ ಜೈಲು ಪಾಲಾದರೆ ಏನು ಕಥೆ? ಎಂದು ಫ್ಯಾನ್ಸ್‌ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Continue Reading
Advertisement
Kannada Serials TRP seetha rama grow Ninagaagi serial full down
ಕಿರುತೆರೆ4 mins ago

Kannada Serials TRP: ಟ್ರ್ಯಾಕ್‌ಗೆ ಬಂದ ʻಸೀತಾ ರಾಮʼ ; ʻನಿನಗಾಗಿʼ ಧಾರಾವಾಹಿಗೆ ಕಡಿಮೆ ಟಿಆರ್‌ಪಿ

Udupi News Self harming
ಉಡುಪಿ13 mins ago

Udupi News : ತಂದೆ ಸಾವಿನಿಂದ ಖಿನ್ನತೆಗೆ ಜಾರಿದವಳು ಬಾವಿಗೆ ಹಾರಿ ಆತ್ಮಹತ್ಯೆ; ಮಕ್ಕಳಿಬ್ಬರು ಅನಾಥ

Self Harming
ಮೈಸೂರು27 mins ago

Self Harming : 6 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ನವ ವಿವಾಹಿತೆ ಶವವಾಗಿ ಪತ್ತೆ; ಕೊಂದವರು ಯಾರು?

Italian Parliament
ವೈರಲ್ ನ್ಯೂಸ್33 mins ago

Italian Parliament: ಇಟಲಿ ಪಾರ್ಲಿಮೆಂಟ್‌ನಲ್ಲಿ ಸಂಸದರ ಮಾರಾಮಾರಿ! ವಿಡಿಯೊ ನೋಡಿ

Kotee Movie release today dolly dhananjay
ಸ್ಯಾಂಡಲ್ ವುಡ್37 mins ago

Kotee Movie: ಡಾಲಿ ಧನಂಜಯ್ ಅಭಿನಯದ ‘ಕೋಟಿ’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ

T20 World Cup 2024
ಕ್ರೀಡೆ39 mins ago

T20 World Cup 2024: ಸೂಪರ್​-8 ಪಂದ್ಯಕ್ಕೂ ಮುನ್ನವೇ ತವರಿಗೆ ಮರಳಲು ಸಿದ್ಧರಾದ ಟೀಮ್​ ಇಂಡಿಯಾದ ಇಬ್ಬರು ಆಟಗಾರರು​

Actor Darshan case comparision to serial troll
ಕಿರುತೆರೆ39 mins ago

Actor Darshan: ಚಿನ್ನುಮರಿ ತಂಟೆಗೆ ಹೋದ್ರೆ ಒದೆ, ಪವಿತ್ರಾ ಗೌಡ ತಂಟೆಗೆ ಬಂದ್ರೆ ಕೊಲೆ; ಟ್ರೋಲ್ ಆಗುತ್ತಿದೆ ​ ದರ್ಶನ್​ ಕೊಲೆ ಕೇಸ್​​

CM Award
ಪ್ರಮುಖ ಸುದ್ದಿ49 mins ago

CM Award : ಕಳಂಕಿತ ಡಿವೈಎಸ್ಪಿಜಾವೀದ್​ಗೆ ಸಿಎಂ ಪದಕ ನೀಡುವಂತೆ ಶಿಫಾರಸು; ಶಾಸಕ ಕಂದಕೂರ ವಿರೋಧ

Ajay Devgn Singham Again postponed release on Diwali 2024
ಬಾಲಿವುಡ್53 mins ago

Ajay Devgn: ʻಪುಷ್ಪ’ನಿಗೆ ಹೆದರಿದ ‘ಸಿಂಗಂ’; ಅಜಯ್ ದೇವಗನ್ ಸಿನಿಮಾ ರಿಲೀಸ್​ ಪೋಸ್ಟ್‌ಪೋನ್‌?

Priyanka Gandhi
ದೇಶ1 hour ago

Priyanka Gandhi: ರಾಹುಲ್ ಗಾಂಧಿ ತೆರವು ಮಾಡುವ ವಯನಾಡ್‌ನಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ3 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ3 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ7 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ7 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌