20 ವರ್ಷಗಳ ಬಳಿಕ ಆಂಗ್ಲರನ್ನು ಸದೆಬಡಿದ ಭಾರತ; ಸೆಮಿ ಟಿಕೆಟ್​ ಬಹುತೇಕ ಖಚಿತ - Vistara News

ಕ್ರಿಕೆಟ್

20 ವರ್ಷಗಳ ಬಳಿಕ ಆಂಗ್ಲರನ್ನು ಸದೆಬಡಿದ ಭಾರತ; ಸೆಮಿ ಟಿಕೆಟ್​ ಬಹುತೇಕ ಖಚಿತ

ಭಾರತ ವಿರುದ್ಧ ಸೋಲು ಕಂಡ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿದ್ದ ಸಂಕಟ್ಟಕೆ ಸಿಲುಕಿದೆ.

VISTARANEWS.COM


on

Mohammed Shami celebrates after castling Jonny Bairstow
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಕ್ನೋ: ಕಳೆದ 20 ವರ್ಷಗಳಿಂದ ಇಂಗ್ಲೆಂಡ್(IND vs ENG)​ ವಿರುದ್ಧ ಏಕದಿನ ವಿಶ್ವಕಪ್​ ಗೆಲುವಿನ ಹುಡುಕಾಟ ನಡೆಸುತ್ತಿದ್ದ ಭಾರತ, ಕೊನೆಗೂ ಇದರಲ್ಲಿ ಯಶಸ್ಸು ಕಂಡಿದೆ. ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ 100 ರನ್​ಗಳ ಗೆಲುವು ದಾಖಲಿಸುವ ಮೂಲಕ 20 ವರ್ಷಗಳ ಬಳಿಕ ವಿಶ್ವಕಪ್​ ಗೆಲುವಿನ ಕೊರಗನ್ನು ನೀಗಿಸಿದೆ. ಅಲ್ಲದೆ ಈ ಗೆಲುವಿನೊಂದಿಗೆ ಹಾಲಿ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಸತತ 6 ಗೆಲುವು ದಾಖಲಿಸಿ 12 ಅಂಕದೊಂದಿಗೆ​ ಸೆಮಿಫೈನಲ್ ಸ್ಥಾನವನ್ನು​ ಬಹುತೇಕ ಖಚಿತಪಡಿಸಿದೆ. ಸೋಲು ಕಂಡ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಟೂರ್ನಿಯಿಂದ ಹೊರಬಿದ್ದಿದೆ. ಇದು ಇಂಗ್ಲೆಂಡ್​ಗೆ ಎದುರಾದ 5ನೇ ಸೋಲು.

ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಭಾರತ ರೋಹಿತ್​ ಮತ್ತು ಸೂರ್ಯಕುಮಾರ್​ ಅವರ ಬ್ಯಾಟಿಂಗ್​ ಸಾಹಸದಿಂದ ನಿಗದಿತ 50 ಓವರ್​ಗಳಲ್ಲಿ​ 9 ವಿಕೆಟ್​ನಷ್ಟಕ್ಕೆ 229 ರನ್ ಗಳಿಸಿತು. ಸಣ್ಣ ಮೊತ್ತಕ್ಕೆ ಭಾರತವನ್ನು ಕಟ್ಟಿಹಾಕಿದ ಜೋಶ್​ನಲ್ಲಿ ಗುರಿ ಬೆನ್ನಟ್ಟಲಾರಂಭಿಸಿದ ಇಂಗ್ಲೆಂಡ್​ ಉತ್ತಮ ಆರಂಭ ಪಡೆದರೂ ಆ ಬಳಿಕ ನಾಟಕೀಯ ಕುಸಿತ ಕಂಡು 34.5 ಓವರ್​ಗಳಲ್ಲಿ 129 ರನ್​ಗೆ ಸರ್ವಪತನ ಕಂಡು ಹೀನಾಯ ಸೋಲು ಕಂಡಿತು. ಘಾತಕ ಬೌಲಿಂಗ್​ ದಾಳಿ ನಡೆಸಿ 22 ರನ್​ ವೆಚ್ಚದಲ್ಲಿ 4 ವಿಕೆಟ್​ ಕಿತ್ತ ಮೊಹಮ್ಮದ್​ ಶಮಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಜಸ್​ಪ್ರೀತ್​ ಬುಮ್ರಾ ಮೂರು ವಿಕೆಟ್​ ಪಡೆದರು.

ಶಮಿ-ಬುಮ್ರಾ ಜುಗಲ್ ಬಂದಿ

ಗುರಿ ಬೆನ್ನಟ್ಟಿದ ಇಂಗ್ಲೆಂಡ್​ ತಂಡ ಉತ್ತಮ ಆರಂಭವನ್ನೇ ಪಡೆಯಿತು. 4 ಓವರ್​ಗೆ ವಿಕೆಟ್​ ನಷ್ಟವಿಲ್ಲದೆ 26 ರನ್​ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಈ ವೇಳೆ ಭಾರತದ ತಂಡದ ಮೊತ್ತ ಆಂಗ್ಲರಿಗೇ ಯಾವ ಲೆಕ್ಕವೂ ಅಲ್ಲ ಎಂಬ ವಾತಾವರಣ ಸೃಷ್ಟಿಯಾಯಿತು. ಈ ಪಂದ್ಯದಲ್ಲಿ ಭಾರತಕ್ಕೆ ಸೋಲು ಖಚಿತ ಎಂದು ಅದಾಗಲೇ ಅಭಿಮಾನಿಗಳು ತೀರ್ಮಾಣ ಮಾಡಿದ್ದರು. ಆದರೆ ಜಸ್​ಪ್ರೀತ್​ ಬುಮ್ರಾ ಮತ್ತು ಮೊಹಮ್ಮದ್​ ಶಮಿ ಸೇರಿಕೊಂಡು ಜಿದ್ದಿಗೆ ಬಿದ್ದವರಂತೆ ಘಾತಕ ಸ್ಫೆಲ್​ ನಡೆಸಿ ಬ್ಯಾಕ್​ಡು ಬ್ಯಾಕ್​ ವಿಕೆಟ್​ ಕಿತ್ತು ಮಿಂಚಿದರು. ಇಲ್ಲಿ ಏನಾಗುತ್ತಿದೆ ಎಂದು ಯೋಚಿಸುದರಲ್ಲಿ  52 ರನ್​ಗೆ ಇಂಗ್ಲೆಂಡ್​ನ 5 ವಿಕೆಟ್​ಗಳು ಹಾರಿ ಹೋಗಿತ್ತು. ಭಾರತ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿತು.

ಬಲಿಷ್ಠ ಆಟಗಾರರಾದ ಜೋ ರೂಟ್​, ಬೆನ್​ ಸ್ಟೋಕ್ಸ್​ ಅವರು ಶೂನ್ಯಕ್ಕೆ ಔಟಾಗಿ ಬಂದ ವೇಗದಲ್ಲೇ ಪೆವಿಲಿಯನ್​ ಸೇರಿದರು. ಜಸ್​ಪ್ರೀತ್​ ಬುಮ್ರಾ ಅವರು ಒಂದೇ ಓವರ್​ನಲ್ಲಿ ಸತತವಾಗಿ ಡೇವಿಡ್​ ಮಲಾನ್​(16) ಮತ್ತು ಜೋ ರೂಟ್(0)​ ವಿಕೆಟ್​ ಕಡೆವಿದರು. ಇದರ ಬೆನ್ನಲ್ಲೇ ಶಮಿ ಅವರು ಆರಂಭಕಾರ ಜಾನಿ ಬೇರ್​ಸ್ಟೋ(14) ಮತ್ತು ಬೆನ್​ ಸ್ಟೋಕ್ಸ್​(0) ಅವರನ್ನು ಕ್ಲೀನ್​ ಬೌಲ್ಡ್​ ಮಾಡಿ ಆಂಗ್ಲರನ್ನು ಸದೆ ಬಡಿದರು.

20 ವರ್ಷಗಳ ಬಳಿಕ ಒಲಿದ ಗೆಲುವು

ಭಾರತ ತಂಡ ಇಂಗ್ಲೆಂಡ್​ ವಿರುದ್ಧ ವಿಶ್ವಕಪ್​ನಲ್ಲಿ ಗೆಲುವು ಕಾಣದೆ 20 ವರ್ಷಗಳೇ ಕಳೆದಿತ್ತು. ಕೊನೆಯ ಬಾರಿ ಭಾರತ ತಂಡ ಗೆಲುವು ಸಾಧಿಸಿದ್ದು 2003ರಲ್ಲಿ. ಗಂಗೂಲಿ ಸಾರಥ್ಯದಲ್ಲಿ ಭಾರತ ಗೆಲುವು ಸಾಧಿಸಿತ್ತು. ಆ ಬಳಿಕ ಎರಡು ಉಭಯ ತಂಡಗಳು ಆಡಿದ್ದರೂ ಭಾರತ ಗೆಲುವು ಸಾಧಿಸುವಲ್ಲಿ ವಿಫಲವಾಗಿತ್ತು. 2011ರ ವಿಶ್ವಕಪ್​ ಪಂದ್ಯ ಟೈನಲ್ಲಿ ಅಂತ್ಯಕಂಡಿತ್ತು. 2015 ಆವೃತ್ತಿಯಲ್ಲಿ ಉಭಯ ತಂಡಗಳಿಗೆ ಮುಖಾಮುಖಿಯಾಗುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಭಾರತ 20 ವರ್ಷಗಳ ಬಳಿಕ ಆಂಗ್ಲರ ವಿರುದ್ಧ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.

ಮತ್ತೆ ವೈಫಲ್ಯ ಕಂಡ ಬಟ್ಲರ್​

ವಿಶ್ವಕಪ್​ಗೂ ಮುನ್ನ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದ ನಾಯಕ ಜಾಸ್​ ಬಟ್ಲರ್​ ಅವರ ಬ್ಯಾಟಿಂಗ್​ ವೈಫಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು. ಭಾರತ ವಿರುದ್ಧವಾದರೂ ಬ್ಯಾಟಿಂಗ್​ ಜೋಶ್​ ತೋರಬಹುದೆಂದು ನಿರೀಕ್ಷೆ ಮಾಡಿದವರ ನಿರೀಕ್ಷೆ ಹುಸಿಯಾಗಿತು. ಬಟ್ಲರ್​ ಕೇವಲ 10 ರನ್​ಗೆ ಆಟ ಮುಸಿದರು. ಈ ಮೊತ್ತವನ್ನು ಬಾರಿಸಲು 23 ಎಸೆತ ಎದುರಿಸಬೇಕಾಯಿತು. ಬಾರಿಸಿದ್ದು ಒಂದು ಬೌಂಡರಿ. ಅಷ್ಟರ ಮಟ್ಟಿಗೆ ಅವರ ಬ್ಯಾಟಿಂಗ್​ ವೈಫಲ್ಯ ಕಂಡುಬಂತು. ಅಂತಿಮ ಹಂತದಲ್ಲಿ ಲಿವಿಂಗ್​​ಸ್ಟೋನ್​ ಸಣ್ಣ ಮಟ್ಟದ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಅವರಿಂದ ಸಾಧ್ಯವಾಗಲಿಲ್ಲ. ಅವರು 27 ರನ್​ ಬಾರಿಸಿ ಕುಲ್​ದೀಪ್​ ಎಸೆತದಲ್ಲಿ ಎಲ್​ಬಿಡಬ್ಲ್ಯು ಆದರು. ಬುಮ್ರಾಗೆ ಸಿಕ್ಸರ್​ ಬಾರಿಸಿದ್ದ ಆದೀಲ್​ ರಶೀದ್​ ಶಮಿ ಎಸೆತದಲ್ಲಿ ಕ್ಲೀನ್ ಬೌಲ್ಡ್​ ಆದರು. ಅವರ ಗಳಿಕೆ 13 ರನ್​. ಇಲ್ಲಿಗ

ಇದನ್ನೂ ಓದಿ Rohit Sharma: ಅರ್ಧಶತಕ ಬಾರಿಸಿ 2 ದಾಖಲೆ ಬರೆದ ರೋಹಿತ್​ ಶರ್ಮ

ಆರಂಭಿಕ ಆಘಾತ ಎದುರಿಸಿದ ಭಾರತ

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಭಾರತ ಆರಂಭದಲ್ಲೇ ಆಘಾತ ಎದುರಿಸಿತು. ಶುಭಮನ್​ ಗಿಲ್​ 9 ರನ್​ಗೆ ವಿಕೆಟ್​ ಒಪ್ಪಿಸಿದರು. ಆ ಬಳಿಕ ಬಂದ ವಿರಾಟ್​ ಕೊಹ್ಲಿ ಅವರು 9 ಎಸೆತ ಎದುರಿಸಿ ಶೂನ್ಯಕ್ಕೆ ವಿಕೆಟ್​ ಕೈ ಚೆಲ್ಲಿದರು. ಇದು ವಿರಾಟ್​ ಕೊಹ್ಲಿ ಅವರ ವಿಶ್ವಕಪ್​ ಮೊದಲ ಡಕ್​ ಔಟ್​ ಆಗಿದೆ. ಕೊಹ್ಲಿ ಬೆನ್ನಲ್ಲೇ ಶ್ರೇಯಸ್​ ಅಯ್ಯರ್​ ಕೂಡ 4 ರನ್​ಗೆ ಆಟ ಮುಗಿಸಿದರು. 40 ರನ್​ಗೆ ಮೂರು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ರೋಹಿತ್​ ಆಸರೆ

ಒಂದೆಡೆ ವಿಕೆಟ್​ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ನಾಯಕ ರೋಹಿತ್​ ಶರ್ಮ ಅವರು ಎದೆಗುಂದದೆ ಇಂಗ್ಲೆಂಡ್​ ಬೌಲಿಂಗ್​ ದಾಳಿಯನ್ನು ದಿಟ್ಟ ರೀತಿಯಲ್ಲಿ ಎದುರಿಸಿ ನಿಂತರು. ಆರಂಭದಿಂದಲೇ ಆಂಗ್ಲರಿಗೆ ಸಿಕ್ಸರ್​, ಬೌಂಡರಿಗಳ ರುಚಿ ತೋರಿಸುತ್ತಾ ತಮ್ಮ ಎಂದಿನ ಶೈಲಿಯಲ್ಲೇ ಬ್ಯಾಟ್​ ಬೀಸುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಇವರಿಗೆ ಕೆಲ ಕಾಲ ರಾಹುಲ್​ ಉತ್ತಮ ಬೆಂಬಲ ನೀಡಿದರು.

ಜೀವದಾನ ಪಡೆದು ಅರ್ಧಶತಕ ಬಾರಿಸಿದ ರೋಹಿತ್​

ಬಿರುಸಿನ ಬ್ಯಾಟಿಂಗ್​ ನಡೆಸುತ್ತಿದ್ದ ರೋಹಿತ್​ ಅವರು 33 ರನ್​ ಗಳಿಸಿದ ವೇಳೆ ಎಲ್​ಬಿಡಬ್ಲ್ಯುನಿಂದ ಜೀವದಾನ ಪಡೆದರು. ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಅವರು ಅರ್ಧಶತಕ ಬಾರಿಸಿ ಸಂಭ್ರಮಿಸಿದರು. ಇದೇ ವೇಳೆ ಏಕದಿನ ಕ್ರಿಕೆಟ್​ನಲ್ಲಿ ಕ್ಯಾಲೆಂಡರ್​ ವರ್ಷದಲ್ಲಿ 1000 ರನ್​ ಪೂರ್ತಿಗೊಳಿಸಿದ ಸಾಧನೆ ಮಾಡಿದರು. ಇದು ಕ್ಯಾಲೆಂಡರ್ ವರ್ಷದಲ್ಲಿ ರೋಹಿತ್​ 1000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಐದನೇ ನಿದರ್ಶನ. 2013, 2017, 2018 ಮತ್ತು 2019 ರಲ್ಲಿ ಈ ಸಾಧನೆ ಮಾಡಿದ್ದರು.

ಇದನ್ನೂ ಓದಿ Virat Kohli: ಶೂನ್ಯಕ್ಕೆ ಔಟಾದ ಸಿಟ್ಟಿನಲ್ಲಿ ಡ್ರೆಸ್ಸಿಂಗ್​ ರೂಮ್​ನಲ್ಲಿ ಆ್ಯಂಗ್ರಿ ಮ್ಯಾನ್​ ಆದ ಕೊಹ್ಲಿ

13 ರನ್​ ಅಂತರದಲ್ಲಿ ಕೈ ತಪ್ಪಿದ ಶತಕ

ಶತಕ ಬಾರಿಸುವತ್ತ ಮುನ್ನಗುತ್ತಿದ್ದ ರೋಹಿತ್​ ಅವರ ಆಟಕ್ಕೆ ಕೊನೆಗೂ ಆದೀಲ್​ ರಶೀದ್​ ಬ್ರೇಕ್​ ಹಾಕುವಲ್ಲಿ ಯಶಸ್ಸು ಕಂಡರು. ಸಿಕ್ಸರ್​ಗೆ ಬಾರಿಸಿದ ಚೆಂಡು ಲಿವಿಂಗ್​ಸ್ಟೋನ್​ ಕೈ ಸೇರಿತು. 87 ರನ್​ಗೆ ಆಟ ಮುಗಿಸಿದರು. ಕೇವಲ 13 ರನ್​ ಅಂತರದಲ್ಲಿ ಶತಕ ವಂಚಿತರಾದರು. ಅವರ ಅರ್ಧಶತಕದ ಇನಿಂಗ್ಸ್​ನಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್​ ಸಿಡಿಯಿತು. ಇವರಿಗೆ ಸಾಥ್​ ನೀಡಿದ ರಾಹುಲ್ 58 ಎಸೆತ ಎದುರಿಸಿ ಮೂರು ಬೌಂಡರಿ ನೆರವಿನಿಂದ 39 ರನ್​ ಗಳಿಸಿದರು.

ಅಬ್ಬರಿಸಿದ ಸೂರ್ಯಕುಮಾರ್​

ರೋಹಿತ್​ ಮತ್ತು ರಾಹುಲ್​ ವಿಕೆಟ್​ ಪತನದ ಬಳಿಕ ಭಾರತ ಮತ್ತೆ ಕುಸಿತ ಕಂಡಿತು. ರವೀಂದ್ರ ಜಡೇಜಾ(8) ಮತ್ತು ಮೊಹಮ್ಮದ್​ ಶಮಿ(1) ರನ್​ಗೆ ವಿಕೆಟ್​ ಒಪ್ಪಿಸಿದರು. ಈ ವೇಳೆ ಸಿಡಿದು ನಿಂತ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್​ ಅವರು ತಮ್ಮ ನಟರಾಜ ಭಂಗಿಯ ಶೈಲಿಯಲ್ಲಿ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ತಂಡದ ಮೊತ್ತವನ್ನು ಶಕ್ತಿ ಮೀರಿ ಹಿಗ್ಗಿಸ ತೊಡಗಿದರು. ಆದರೆ ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ಸಿಗಲೇ ಇಲ್ಲ. ಆದರೂ ಕೆಚ್ಚೆದೆಯಿಂದ ಬ್ಯಾಟಿಂಗ್​ ನಡೆಸಿ 4 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 49 ರನ್​ ಗಳಿಸಿದರು. ಅವರ ಈ ಅಂತಿಮ ಹಂತದ ಪ್ರದರ್ಶನದಿಂದ ತಂಡ 200ರ ಗಡಿ ದಾಟುವಂತೆ ಮಾಡಿತು.

ಅಂತಿಮ ಹಂತದಲ್ಲಿ ಜಸ್​ಪ್ರೀತ್​ ಬುಮ್ರಾ 16 ರನ್​ ಬಾರಿಸಿ ಉಪಯುಕ್ತ ಕೊಡುಗೆ ನೀಡಿದರು. ಇಂಗ್ಲೆಂಡ್​ ಪರ ಡೇವಿಡ್​ ವಿಲ್ಲಿ 45 ರನ್​ ವೆಚ್ಚದಲ್ಲಿ 3 ವಿಕೆಟ್​ ಕಿತ್ತರು. ಉಳಿದಂತೆ ಆದೀಲ್​ ರಶೀದ್​ 35ಕ್ಕೆ 2, ಕ್ರಿಕ್ಸ್​ ವೋಕ್ಸ್​ ಕೂಡ 2 ವಿಕೆಟ್​ ಪಡೆದರು. ಮಾರ್ಕ್​ ವುಡ್​ ಒಂದು ವಿಕೆಟ್​ಗೆ ಸೀಮಿತಾರಾದರು.

ನಾಯಕನಾಗಿ ನೂರನೇ ಪಂದ್ಯ

ರೋಹಿತ್​ ಶರ್ಮ(Rohit Sharma) ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿಶೇಷ ಮೈಲಿಗಲ್ಲೊಂದನ್ನು ನಿರ್ಮಿಸಿದರು. ನಾಯಕನಾಗಿ 100ನೇ ಪಂದ್ಯವನ್ನು ಮುನ್ನಡೆಸಿದ ದಾಖಲೆ ಬರೆದರು. ಈ ಮೂಲಕ 100ನೇ ಪಂದ್ಯವನ್ನು ಮುನ್ನಡೆಸಿದ 7ನೇ ಭಾರತೀಯ ನಾಯಕ ಎನಿಸಿಕೊಂಡರು. ಅಲ್ಲದೆ ಈ ಸ್ಮರಣೀಯ ಪಂದ್ಯವನ್ನು ಗೆಲ್ಲುವ ಮೂಲಕ ಡಬಲ್​ ಸಂಭ್ರಮ ಆಚರಿಸಿದರು. ಅತಿ ಹೆಚ್ಚು ಪಂದ್ಯಗಳಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ ದಾಖಲೆ ವಿಶ್ವಕಪ್​ ವಿಜೇತ ಮಹೇಂದ್ರ ಸಿಂಗ್​ ಧೋನಿ ಅವರ ಹೆಸರಿನಲ್ಲಿದೆ. ಧೋನಿ ಅವರು 332 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಆ ಬಳಿಕದ ಸ್ಥಾನ ಮೊಹಮ್ಮದ್ ಅಜರುದ್ದೀನ್ (221), ವಿರಾಟ್ ಕೊಹ್ಲಿ (213), ಸೌರವ್ ಗಂಗೂಲಿ (196), ಕಪಿಲ್ ದೇವ್ (108) ಮತ್ತು ರಾಹುಲ್ ದ್ರಾವಿಡ್ (104) ಹೆಸರಿನಲ್ಲಿದೆ. ಒಟ್ಟಾರೆಯಾಗಿ, ಪುರುಷರ ಕ್ರಿಕೆಟ್‌ನಲ್ಲಿ 49 ಕ್ರಿಕೆಟಿಗರು ತಮ್ಮ ರಾಷ್ಟ್ರೀಯ ತಂಡಗಳನ್ನು 100 ಅಥವಾ ಅದಕ್ಕಿಂತ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ.

18 ಸಾವಿರ ರನ್​ ಎಲೈಟ್​ ಪಟ್ಟಿಗೆ ಸೇರಿದ ರೋಹಿತ್​

ರೋಹಿತ್​ ಅವರು 48 ರನ್​ ಗಳಿಸಿದ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 18 ಸಾವಿರ ರನ್​ ಪೂರ್ತಿಗೊಳಿಸಿದರು. ಈ ಸಾಧನೆ ಮಾಡಿದ 5ನೇ ಭಾರತೀಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಈ ಮೈಲಿಗಲ್ಲು ತಲುಪಲು ರೋಹಿತ್​ 477 ಇನ್ನಿಂಗ್ಸ್‌ ಆಡಿದ್ದಾರೆ. ರೋಹಿತ್‌ಗಿಂತ ಮೊದಲು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

KVS Sports Meet : 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ; ಮೈದಾನದಲ್ಲಿ ಬಾಲಕರ ರೋಚಕ ಕ್ರಿಕೆಟ್

KVS Sports Meet : 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗಿದ್ದು, ಮೊದಲ ದಿನವೇ ಮೈದಾನದಲ್ಲಿ ಬಾಲಕರ ಕ್ರಿಕೆಟ್ ರೋಚಕವಾಗಿತ್ತು.

VISTARANEWS.COM


on

By

53rd KVS National Games inaugurated
Koo

ಬೆಂಗಳೂರು: 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟ 2024-25ಕ್ಕೆ (KVS Sports Meet) ಸೋಮವಾರ ಬೆಂಗಳೂರಿನ ಯಲಹಂಕದ ಕೇಂದ್ರೀಯ ವಿದ್ಯಾಲಯ ಆರ್‌ಡಬ್ಲ್ಯೂ ಎಫ್‌ನಲ್ಲಿ ಚಾಲನೆ ನೀಡಲಾಯಿತು. 14 ವರ್ಷದೊಳಗಿನ ಬಾಲಕರ ವಿಭಾಗದ ಕ್ರಿಕೆಟ್‌ ರೋಚಕವಾಗಿತ್ತು. ಮುಖ್ಯ ಅತಿಥಿಯಾಗಿ ಕೆವಿಎಸ್‌ ಉಪ ಆಯುಕ್ತರು ಡಾ.ಧರ್ಮೇಂದ್ರ ಪಟ್ಲೆ, ಸಹಾಯಕ ಆಯುಕ್ತ ಆರ್ ಪ್ರಮೋದ್ ಸೇರಿ ಇತರರು ಭಾಗಿಯಾಗಿದ್ದರು.

53rd KVS National Games inaugurated
53rd KVS National Games inaugurated

ಇದೇ ವೇಳೆ ಕೆ.ವಿ.ಎಸ್ ಧ್ವಜಾರೋಹಣವನ್ನು ಮುಖ್ಯ ಅತಿಥಿಗಳು ನೆರವೇರಿಸಿದರು. ಪಾತ್ರ ಮತ್ತು ನಾಯಕತ್ವ ಎರಡನ್ನೂ ಅಭಿವೃದ್ಧಿಪಡಿಸುವಲ್ಲಿ ಕ್ರೀಡೆಯ ಮಹತ್ವವನ್ನು ಎತ್ತಿ ತೋರಿಸಿದರು. ಆಟಗಾರರನ್ನು ಹುಮ್ಮಸ್ಸಿನಿಂದ ಸ್ಪರ್ಧಿಸಲು ಪ್ರೋತ್ಸಾಹಿಸಿದರು. ಮುಂಬರುವ ದಿನಗಳಲ್ಲಿ ರೋಚಕ ಕ್ರಿಕೆಟ್ ಪಂದ್ಯಗಳನ್ನು ನೋಡುವ ನಿರೀಕ್ಷೆಯಿದೆ, ಏಕೆಂದರೆ ಭಾಗವಹಿಸುವವರು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮೈದಾನಕ್ಕೆ ತರುತ್ತಾರೆ ಎಂದು ಅಭಿಪ್ರಾಯಪಟ್ಟರು.

Continue Reading

ಕ್ರೀಡೆ

Duleep Trophy: ದುಲೀಪ್​ ಟ್ರೋಫಿಯಿಂದ ಹೊರಬಿದ್ದ ಮೊಹಮ್ಮದ್ ಸಿರಾಜ್

Duleep Trophy: ವೃತ್ತಿಪರ ಕ್ರಿಕೆಟ್​ಗೆ ಮರಳುವ ನಿರೀಕ್ಷೆಯಲ್ಲಿ ಜಮ್ಮ ಕಾಶ್ಮೀರದ ವೇಗಿ ಉಮ್ರಾನ್ ಮಲಿಕ್(Umran Malik) ಕೂಡ ಅನಾರೋಗ್ಯದ ಕಾರಣ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.

VISTARANEWS.COM


on

Duleep Trophy
Koo

ಮುಂಬಯಿ: ದುಲೀಪ್​ ಟ್ರೋಫಿ(Duleep Trophy) ಆರಂಭಕ್ಕೂ ಮುನ್ನವೇ ಟೀಮ್​ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್(mohammed siraj) ಅನಾರೋಗ್ಯದ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ನವದೀಪ್ ಸೈನಿ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಹಿರಿಯ ಆಟಗಾರ ರವೀಂದ್ರ ಜಡೇಜಾ(Ravindra Jadeja) ಅವರನ್ನು ಭಾರತ ‘ಬಿ’ ತಂಡದಿಂದ ಬಿಡುಗಡೆ ಮಾಡಲಾಗಿದೆ.

ವೃತ್ತಿಪರ ಕ್ರಿಕೆಟ್​ಗೆ ಮರಳುವ ನಿರೀಕ್ಷೆಯಲ್ಲಿ ಜಮ್ಮ ಕಾಶ್ಮೀರದ ವೇಗಿ ಉಮ್ರಾನ್ ಮಲಿಕ್(Umran Malik) ಕೂಡ ಅನಾರೋಗ್ಯದ ಕಾರಣ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಉಮ್ರಾನ್ ಬದಲಿಗೆ ಮಧ್ಯಪ್ರದೇಶದ ಮಧ್ಯಮ ವೇಗಿ ಗೌರವ್ ಯಾದವ್ ಭಾರತ ‘ಸಿ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜಡೇಜಾ ಸ್ಥಾನಕ್ಕೆ ಬದಲಿ ಆಟಗಾರನನ್ನ ಹೆಸರಿಸಲಾಗಿಲ್ಲ. ಜಡೇಜಾ ದುಲೀಪ್ ಟ್ರೋಫಿಯಲ್ಲಿ ಕೇವಲ ಒಂದು ಪಂದ್ಯವನ್ನು ಆಡಿ ಬಳಿಕ ಬಾಂಗ್ಲಾದೇಶ ಟೆಸ್ಟ್​ ಸರಣಿಗೆ ಮುಂಚಿತವಾಗಿ ಭಾರತ ಶಿಬಿರಕ್ಕೆ ತೆರಳಬೇಕಿತ್ತು. ಆದರೆ ಬಿಸಿಸಿಐ ಅವರಿಗೆ ಕೊನೆಯ ಕ್ಷಣದಲ್ಲಿ ವಿಶ್ರಾಂತಿ ನೀಡಿದೆ. ಭಾರತ ‘ಎ’ ತಂಡವನ್ನು ಶುಭಮನ್ ಗಿಲ್ ಮುನ್ನಡೆಸಿದರೆ, ‘ಡಿ’ತಂಡವನ್ನು ಶ್ರೇಯಸ್‌ ಅಯ್ಯರ್‌ ಮುನ್ನಡೆಸಲಿದ್ದಾರೆ.

ಭಾರತ ‘ಎ’ ತಂಡ


ಶುಭಮನ್ ಗಿಲ್ (ನಾಯಕ), ಮಯಾಂಕ್ ಅಗರ್ವಾಲ್, ರಿಯಾನ್ ಪರಾಗ್, ಧ್ರುವ ಜುರೆಲ್ (ವಿಕೆಟ್‌ ಕೀಪರ್), ಕೆಎಲ್ ರಾಹುಲ್, ತಿಲಕ್ ವರ್ಮಾ, ಶಿವಂ ದುಬೆ, ತನುಷ್ ಕೋಟ್ಯಾನ್, ಕುಲದೀಪ್ ಯಾದವ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಖಲೀಲ್ ಅಹ್ಮದ್, ಅವೇಶ್ ಖಾನ್, ವಿದ್ವತ್ ಕಾವೇರಪ್ಪ, ಕುಮಾರ್ ಕುಶಾಗ್ರ , ಶಾಶ್ವತ್ ರಾವತ್.

ಭಾರತ ‘ಬಿ’ ತಂಡ


ಅಭಿಮನ್ಯು ಈಶ್ವರನ್ (ನಾಯಕ), ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿ.ಕೀ), ಮುಷೀರ್ ಖಾನ್, ನಿತೀಶ್ ಕುಮಾರ್ ರೆಡ್ಡಿ (ಫಿಟ್‌ನೆಸ್‌ ಟೆಸ್ಟ್‌ ಅವಲಂಬನೆ), ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಯಶ್ ದಯಾಳ್, ಮುಖೇಶ್ ಕುಮಾರ್, ರಾಹುಲ್ ಚಹರ್, ಆರ್ ಸಾಯಿ ಕಿಶೋರ್, ಮೋಹಿತ್ ಆವಸ್ತಿ, ಎನ್ ಜಗದೀಸನ್ (ವಿ.ಕೀ)

ಇದನ್ನೂ ಓದಿ Natasa Stankovic: ಪಾಂಡ್ಯ ಜತೆಗಿನ ವಿಚ್ಛೇದನದ ಅಸಲಿ ಸತ್ಯ ಬಿಚ್ಚಿಟ್ಟ ನತಾಶ!

ಭಾರತ ‘ಸಿ’ ತಂಡ


ಋತುರಾಜ್ ಗಾಯಕ್ವಾಡ್​ (ನಾಯಕ), ಸಾಯಿ ಸುದರ್ಶನ್, ರಜತ್ ಪಾಟಿದಾರ್, ಅಭಿಷೇಕ್ ಪೊರೆಲ್ (ವಿ.ಕೀ), ಸೂರ್ಯಕುಮಾರ್ ಯಾದವ್, ಬಿ ಇಂದ್ರಜಿತ್, ಹೃತಿಕ್ ಶೋಕೀನ್, ಮಾನವ್ ಸುತಾರ್, ಗೌರವ್ ಯಾದವ್, ವೈಶಾಕ್ ವಿಜಯ್‌ಕುಮಾರ್, ಅನ್ಶುಲ್ ಖಂಬೋಜ್, ಹಿಮಾಂಶು ಚೌಹಾಣ್, ಮಯಾಂಕ್ ಮಾರ್ಕಂಡೆ, ಆರ್ಯನ್‌ ಜುಯೆಲ್‌ (ವಿ.ಕೀ), ಸಂದೀಪ್ ವಾರಿಯರ್.

ಭಾರತ ‘ಡಿ’ ತಂಡ

ಶ್ರೇಯಸ್ ಅಯ್ಯರ್​ (ನಾಯಕ), ಅಥರ್ವ ಟೈಡೆ, ಯಶ್ ದುಬೆ, ದೇವದತ್ ಪಡಿಕ್ಕಲ್, ಇಶಾನ್ ಕಿಶನ್ (ವಿಕೆಟ್‌ ಕೀಪರ್), ರಿಕಿ ಭುಯಿ, ಸರನ್ಶ್ ಜೈನ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಆದಿತ್ಯ ಠಾಕರೆ, ಹರ್ಷಿತ್ ರಾಣಾ, ತುಷಾರ್ ದೇಶಪಾಂಡೆ, ಆಕಾಶ್ ಸೇನ್‌ಗುಪ್ತ, ಕೆಎಸ್ (ವಿಕೆಟ್‌ ಕೀಪರ್), ಸೌರಭ್ ಕುಮಾರ್.

Continue Reading

ಕ್ರೀಡೆ

IPL 2025: ಮುಂಬೈ ಇಂಡಿಯನ್ಸ್​ಗೆ ನೂತನ ನಾಯಕ; ಪೋಸ್ಟರ್​ ಬಿಡುಗಡೆ ಮಾಡಿದ ಫ್ರಾಂಚೈಸಿ

IPL 2025: ಬುಮ್ರಾ ರೋಹಿತ್​ಗೆ ಬಹಳ ಆತ್ಮಿಯರಾಗಿರುವ ಕಾರಣ ಬುಮ್ರಾ ನಾಯಕನಾದರೆ ರೋಹಿತ್​ ಕೂಡ ಮುಂಬೈ ತೊರೆಯಲು ಹಿಂದೇಟು ಹಾಕಬಹುದು ಎನ್ನುವುದು ಫ್ರಾಂಚೈಸಿಯ ಯೋಜನೆ.

VISTARANEWS.COM


on

Jasprit Bumrah
Koo

ಮುಂಬಯಿ: 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​(Mumbai Indians) ಮುಂಬರುವ ಐಪಿಎಲ್​ ಆವೃತ್ತಿಗೂ ಮುನ್ನ ಮಹತ್ವದ ಘೋಷಣೆಯೊಂದನ್ನು ಮಾಡಲು ಮುಂದಾಗಿದೆ. ಇದರ ಸುಳಿವನ್ನು ಸ್ವತಃ ಫ್ರಾಂಚೈಸಿಯೇ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟುಕೊಟ್ಟಿದೆ. ಹೌದು, ಪ್ರಧಾನ ವೇಗಿ ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರನ್ನು ನೂತನ ನಾಯಕನನ್ನಾಗಿ ಮಾಡಲು ನಿರ್ಧರಿಸಿದಂತಿದೆ. ಬುಮ್ರಾ ಅವರು ಜನಗಳ ಮಧ್ಯೆ ಕೈಬೀಸುತ್ತಾ ರ‍್ಯಾಂಪ್ ವಾಕ್ ಮಾಡುತ್ತಿರುವ ಫೋಟೊವನ್ನು ಹಂಚಿಕೊಂಡಿದೆ. ಹೀಗಾಗಿ ಬುಮ್ರಾ ನಾಯಕನಾಗುವುದು ಖಚಿತ ಎನ್ನುವಂತಿದೆ. ಇದಕ್ಕೆ ಅಧಿಕೃತ ಮುದ್ರೆಯೊಂದು ಬೀಳಲು ಮಾತ್ರ ಬಾಕಿ ಇದೆ.

ಕಳೆದ ಬಾರಿ ರೋಹಿತ್​ ಶರ್ಮ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್​ ಪಾಂಡ್ಯ(Hardik Pandya)ಗೆ ನಾಯಕತ್ ಪಟ್ಟ ನೀಡಲಾಗಿತ್ತು. ಆದರೆ, ಪಾಂಡ್ಯ ನಾಯಕತ್ವದಲ್ಲಿ ಮುಂಬೈ ತಂಡ ಎಂದೂ ಕಾಣದ ವೈಫಲ್ಯ ಕಂಡಿತ್ತು. ಪಾಂಡ್ಯ ನಾಯಕನಾಗುವ ಬಗ್ಗೆ ಬುಮ್ರಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಬಳಿಕ ಫ್ರಾಂಚೈಸಿಯೇ ಅವರನ್ನು ಸಮಾಧಾನಪಡಿಸಿತ್ತು. ಇದೀಗ ಬುಮ್ರಾ ಅವರನ್ನೇ ನಾಯಕನನ್ನಾಗಿ ಮಾಡಲು ಮುಂದಾಗಿದೆ. ಬುಮ್ರಾ ಕಾರ್ಯವೈಖರಿ ಬಗ್ಗೆಯೂ ಸಹ ಆಟಗಾರರಿಗೆ ಸಮಧಾನವಿದೆ. ಬುಮ್ರಾ ರೋಹಿತ್​ಗೆ ಬಹಳ ಆತ್ಮಿಯರಾಗಿರುವ ಕಾರಣ ಬುಮ್ರಾ ನಾಯಕನಾದರೆ ರೋಹಿತ್​ ಕೂಡ ಮುಂಬೈ ತೊರೆಯಲು ಹಿಂದೇಟು ಹಾಕಬಹುದು ಎನ್ನುವುದು ಫ್ರಾಂಚೈಸಿಯ ಯೋಜನೆ.

ಜಸ್​ಪ್ರೀತ್​ ಬುಮ್ರಾ ಅವರು ಇದುವರೆಗೆ 133 ಐಪಿಎಲ್​ ಆಡಿದ್ದು 165 ವಿಕೆಟ್​ ಕೆಡವಿದ್ದಾರೆ. 2013ರಲ್ಲಿ ಮುಂಬೈ ತಂಡದ ಪರ ಐಪಿಎಲ್​ ಪದಾರ್ಪಣೆ ಮಾಡಿದ್ದ ಬುಮ್ರಾ ಇದುವರೆಗೂ ಮುಂಬೈ ಪರವೇ ಆಡುತ್ತಿದ್ದಾರೆ.

ಇದನ್ನೂ ಓದಿ IPL 2025: ಮುಂಬೈ ಇಂಡಿಯನ್ಸ್​ಗೆ ಶ್ರೇಯಸ್​ ಅಯ್ಯರ್​, ಕೆಕೆಆರ್​ಗೆ ಸೂರ್ಯಕುಮಾರ್​ ನಾಯಕ!​

ಸೂರ್ಯಕುಮಾರ್​ ಯಾದವ್​ಗೆ ಹಾಲಿ ಚಾಂಪಿಯನ್​ ಕೆಕೆಆರ್(KKR)​ ತಂಡದಿಂದ ನಾಯಕತ್ವದ ಆಫರ್​ ಬಂದಿದೆ ಎಂದು ವರದಿಯಾಗಿದೆ. ಸೂರ್ಯಕುಮಾರ್​ ಯಾದವ್​ ಅವರು ಮುಂಬೈ ತಂಡ ಸೇರುವ ಮುನ್ನ ಕೆಕೆಆರ್​ ಪರ ಆಡುತ್ತಿದ್ದರು. 2014 ರ ಐಪಿಎಲ್ ಹರಾಜಿನಲ್ಲಿ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಖರೀದಿಸಿತ್ತು. ಇದೇ ಆವೃತ್ತಿಯಲ್ಲಿ ಕೆಕೆಆರ್​ ಚಾಂಪಿಯನ್​ ಕೂಡ ಆಗಿತ್ತು. ಗೌತಮ್​ ಗಂಭೀರ್​ ತಂಡದ ನಾಯಕನಾಗಿದ್ದರು. ಸೂರ್ಯಕುಮಾರ್​ ಕೆಕೆಆರ್​ ಪರ ನಾಲ್ಕು ಋತುಗಳಲ್ಲಿ 54 ಪಂದ್ಯಗಳನ್ನಾಡಿ 608 ರನ್​ ಬಾರಿಸಿದ್ದರು. 2018ರಲ್ಲಿ ಸೂರ್ಯ ಮುಂಬೈ ತಂಡ ಸೇರಿದ್ದರು.

ಸೂರ್ಯಕುಮಾರ್​ ಇದುವರೆಗೆ 150 ಐಪಿಎಲ್ ಪಂದ್ಯಗಳಿಂದ 3594 ರನ್​ ಬಾರಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 24 ಅರ್ಧಶತಕ ಒಳಗೊಂಡಿದೆ. ರೋಹಿತ್ ಶರ್ಮ ಅವರು ಟಿ20 ಕ್ರಿಕೆಟ್​ಗೆ ನಿವೃತ್ತಿ ಹೇಳಿದ ಕಾರಣ ಭಾರತ ತಂಡದ ಟಿ20 ನಾಯಕತ್ವ ಸೂರ್ಯಕುಮಾರ್​ ಹೆಗಲೇರಿದೆ. ಅವರ ಪೂರ್ಣ ಪ್ರಮಾಣದ ನಾಯಕತ್ವದಲ್ಲಿ ಆಡಿದ್ದ ಕಳೆದ ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 3-0 ಅಂತರದಿಂದ ಗೆದ್ದು ಬೀಗಿತ್ತು.

Continue Reading

ಕ್ರೀಡೆ

Natasa Stankovic: ಪಾಂಡ್ಯ ಜತೆಗಿನ ವಿಚ್ಛೇದನದ ಅಸಲಿ ಸತ್ಯ ಬಿಚ್ಚಿಟ್ಟ ನತಾಶ!

Natasa Stankovic: ನತಾಶಾ ಅವರ ಈ ಪೋಸ್ಟ್ ನೋಡುವಾಗ ಪಾಂಡ್ಯ ಅವರು ನತಾಶ ಜತೆಗೆ ಸರಿಯಾಗಿ ಸಂವಹನ ಮತ್ತು ಅವರನ್ನು ಕೇರ್​ ಮಾಡುತ್ತಿರಲಿಲ್ಲ ಎನ್ನುವಂತಿದೆ.

VISTARANEWS.COM


on

Natasa Stankovic
Koo

ಲಂಡನ್​: ಜುಲೈನಲ್ಲಿ ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ(Hardik Pandya) ಅವರು ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್(Natasa Stankovic) ಅವರಿಗೆ ವಿಚ್ಛೇದನ(Hardik-Natasa Divorce) ನೀಡುವ ಮೂಲಕ 4 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದರು. ಆದರೆ, ಈ ಜೋಡಿಯ ವಿಚ್ಛೇದನಕ್ಕೆ ಏನು ಕಾರಣವಿರಬಹುದೆಂದು ಎಂಬ ಬಗ್ಗೆ ನಿರಂತರ ಊಹಾಪೋಹಗಳ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇದೆ. ಇದೀಗ ನತಾಶ ಅವರೇ ತಮ್ಮ ವಿಚ್ಛೇದನಕ್ಕೆ ಕಾರಣ ಏನೆಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್​ ಒಂದನ್ನು ಮಾಡಿರುವ ನತಾಶ, “ಪ್ರೀತಿಯು ಇತರರನ್ನು ಎಂದಿಗೂ ಅವಮಾನಿಸುವುದಿಲ್ಲ.. ಪ್ರೀತಿ ಎಂದರೇ ದಯೆ ಮತ್ತು ತಾಳ್ಮೆ, ಇದು ಹೆಮ್ಮೆ ಅಥವಾ ಅಸೂಯೆಯಲ್ಲ. ಪ್ರೀತಿ ಎನ್ನುವುದು ಬೇಡಿಕೆಯ ವಸ್ತು ಆಗಬಾರದು. ಪ್ರೀತಿ ಎನ್ನುವುದು ರಕ್ಷಣೆ ನೀಡಬೇಕು. ನಿಜವಾದ ಪ್ರೀತಿ ಎಂದಿಗೂ ಸುಳ್ಳಾಗುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ Natasa Stankovic : ‘ಹೊಸ ಹೆಸರನ್ನು ಪಡೆಯುತ್ತಿದ್ದೇನೆ’; ಕುತೂಹಲ ಮೂಡಿಸಿದ ನತಾಶಾ ಸ್ಟಾಂಕೊವಿಕ್​ ಹೊಸ ಪೋಸ್ಟ್​​​

ನತಾಶಾ ಅವರ ಈ ಪೋಸ್ಟ್ ನೋಡುವಾಗ ಪಾಂಡ್ಯ ಅವರು ನತಾಶ ಜತೆಗೆ ಸರಿಯಾಗಿ ಸಂವಹನ ಮತ್ತು ಅವರನ್ನು ಕೇರ್​ ಮಾಡುತ್ತಿರಲಿಲ್ಲ ಎನ್ನುವಂತಿದೆ. ಅಲ್ಲದೇ ನತಾಶಾಗೆ ಹಾರ್ದಿಕ್‌ ಅವರ ಕೆಲ ನಡುವಳಿಕೆ ಕೂಡ ಇಷ್ಟವಾಗದೇ ಅದನ್ನು ಸರಿಪಡಿಸಿಕೊಳ್ಳಲು ಹೇಳಿದ್ದರೂ ಪಾಂಡ್ಯ ಇದನ್ನು ಪಾಲಿಸಲು ನಿರಾಕರಿಸಿರಬಹುದು ಇದೇ ಕಾರಣಕ್ಕೆ ಇವರಿಬ್ಬರು ಬೇರೆಯಾದರು ಎನ್ನುವಂತಿದೆ.

ಹಾರ್ದಿಕ್​ ಮತ್ತು ನತಾಶಾ ನಡುವಿನ ಬ್ರೇಕಪ್​ಗೆ ಸಂವಹನ ಕೊರತೆಯೇ ಮುಖ್ಯ ಕಾರಣ ಎಂದು ಆಪ್ತ ಮೂಲಗಳು ಮಾಹಿತಿ ನೀಡಿತ್ತು. ಇಬ್ಬರ ನಡುವಿನ ಮನಸ್ತಾಪ ಮತ್ತು ಜಗಳಕ್ಕೆ ಪರಿಹಾರ ಕಂಡುಕೊಳ್ಳುವ ತಾಳ್ಮೆ ಇಬ್ಬರಲ್ಲೂ ಇರಲಿಲ್ಲ. ಹೀಗಾಗಿ ಮನಸ್ತಾಪ ದೊಡ್ಡದಾಗಿ ಡಿವೋರ್ಸ್​ಗೆ ಕಾರಣವಾಯಿತು ಎಂದು ಆಪ್ತ ಮೂಲಗಳು ತಿಳಿಸಿತ್ತು. ಇದೀಗ ನತಾಶ ಕೂಡ ಪ್ರೀತಿಯ ಬಗ್ಗೆ ಬರೆದುಕೊಂಡಿರುವುದನ್ನು ನೋಡುವಾಗ ಆಪ್ತ ಮೂಲಗಳು ನೀಡಿದ ಮಾಹಿತಿ ಸತ್ಯ ಎನ್ನುವಂತಿದೆ.


ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇದಕ್ಕೂ ಮುನ್ನ ಈ ಜೋಡಿ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು. ವಿಚ್ಛೇದನ ಪಡೆದರೂ ಕೂಡ ಇಬ್ಬರೂ ಪುತ್ರ ಅಗಸ್ತ್ಯನನ್ನು(Agastya) ಸಹ-ಪೋಷಕರಾಗಿ ನೋಡಿಕೊಳ್ಳುತ್ತೇವೆ. ಅವನಿಗೆ ಯಾವುದೇ ಕಾರಣಕ್ಕೂ ಯಾವ ಕೊರತೆಯೂ ಆಗದಂತೆ ನಾವಿಬ್ಬರೂ ಸಮನಾಗಿ ಅವನ ಜವಾಬ್ದಾರಿ ಹಂಚಿಕೊಳ್ಳಲಿದ್ದೇವೆ ಎಂದು ಈಗಾಗಲೇ ಪಾಂಡ್ಯ ಮತ್ತು ನತಾಶ ಜಂಟಿ ಹೇಳಿಯಲ್ಲಿ ಖಚಿತಪಡಿಸಿದ್ದಾರೆ.

Continue Reading
Advertisement
Kodagu News
ಕೊಡಗು19 ನಿಮಿಷಗಳು ago

Kodagu News : ದಸರಾದಲ್ಲಿ ಡಿಜೆ ಬಳಕೆಗೆ ನಿರ್ಬಂಧ; ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್

Actor Darshan Renukaswamy murder case
ಬೆಂಗಳೂರು49 ನಿಮಿಷಗಳು ago

Actor Darshan : ತನಿಖಾಧಿಕಾರಿಗಳ ವಿರುದ್ಧ ಬ್ಯಾಟಿಂಗ್‌ ಮಾಡಿದ ದರ್ಶನ್‌ ಪರ ವಕೀಲ; ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Bomb threat to BMS, MS Ramayya and four other colleges in Basavanagudi Bengaluru
ಬೆಂಗಳೂರು1 ಗಂಟೆ ago

Bomb Threat : ಬೆಂಗಳೂರಿನ ಬಸವನಗುಡಿಯ ಬಿಎಂಎಸ್‌ ಸೇರಿ ನಾಲ್ಕು ಕಾಲೇಜುಗಳಿಗೆ ಬಾಂಬ್‌ ಬೆದರಿಕೆ

Medical Seat
ಬೆಂಗಳೂರು2 ಗಂಟೆಗಳು ago

Medical Seat : ಬೆಂಗಳೂರಿನಲ್ಲಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ಉದ್ಯಮಿಗೆ 1.5 ಕೋಟಿ ರೂ. ವಂಚನೆ

Murder case
ಚಿತ್ರದುರ್ಗ3 ಗಂಟೆಗಳು ago

Murder Case : ಪ್ರಿಯಕರನಿಗಾಗಿ ಪತಿಗೆ ಚಟ್ಟ ಕಟ್ಟಿದ್ದಳು ಪಾಪಿ ಪತ್ನಿ; ಹೊಟ್ಟೆ ಉರಿಯಿಂದ ಸತ್ತ ಎಂದವಳು ಈಗ ಜೈಲುಪಾಲು

Namma metro ticket prices will be hiked soon
ಬೆಂಗಳೂರು4 ಗಂಟೆಗಳು ago

Namma Metro : ಸಿಟಿ ಮಂದಿಗೆ ಮತ್ತೊಂದು ಶಾಕ್‌; ಶೀಘ್ರದಲ್ಲೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯ ಬರೆ!

Murder case
ಬೆಂಗಳೂರು5 ಗಂಟೆಗಳು ago

Murder Case : ನಿದ್ದೆಗೆ ಜಾರಿದ 13 ವರ್ಷದ ಬಾಲಕಿಯನ್ನು ಕೊಂದಿದ್ಯಾರು? ನಿಗೂಢ ಸಾವಿನ ಬೆನ್ನಟ್ಟಿದ ಪೊಲೀಸರು

murder case
ಬೆಂಗಳೂರು5 ಗಂಟೆಗಳು ago

Murder case : ಬೆಂಗಳೂರಲ್ಲಿ ಬಿಹಾರಿ ಮೂಲದ ವ್ಯಕ್ತಿಯನ್ನು ದೊಣ್ಣೆಯಿಂದ ಹೊಡೆದು ಭೀಕರ ಹತ್ಯೆ

Wall Collapse
ಬೆಂಗಳೂರು6 ಗಂಟೆಗಳು ago

Wall collapse : ಕಾಂಪೌಂಡ್ ಗೋಡೆ ಕುಸಿದು ಕೂಲಿ ಕಾರ್ಮಿಕ ಸಾವು; ಮತ್ತೊಬ್ಬ ಗಂಭೀರ

karnataka Weather Forecast
ಮಳೆ12 ಗಂಟೆಗಳು ago

Karnataka Weather : ಇಂದು ಅಬ್ಬರಿಸಲಿದೆ ಗುಡುಗು ಸಹಿತ ಭಾರಿ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ22 ಗಂಟೆಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌