Fashion Pageant: ಅತ್ಯಾಕರ್ಷಕವಾಗಿ ನಡೆದ ಸೂಪರ್‌ ಮಾಡೆಲ್‌ ಆಫ್‌ ಇಂಡಿಯಾ ಪೇಜೆಂಟ್‌ - Vistara News

ಫ್ಯಾಷನ್

Fashion Pageant: ಅತ್ಯಾಕರ್ಷಕವಾಗಿ ನಡೆದ ಸೂಪರ್‌ ಮಾಡೆಲ್‌ ಆಫ್‌ ಇಂಡಿಯಾ ಪೇಜೆಂಟ್‌

ವರ್ಣರಂಜಿತವಾಗಿ ನಡೆದ ಸೂಪರ್‌ ಮಾಡೆಲ್‌ ಆಫ್‌ ಇಂಡಿಯಾ (Fashion pageant News) ಹಾಗೂ ಇನ್ನಿತರೆ ಸಬ್‌ ಟೈಟಲ್‌ಗಳನ್ನೊಳಗೊಂಡ ಸೌಂದರ್ಯ ಸ್ಪರ್ಧೆಯು ಫ್ಯಾಷನಿಸ್ಟ್‌ ಯಶ್‌ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Fashion Pageant News
ಚಿತ್ರಗಳು : ವೈಎಸ್‌ ಇಂಟರ್‌ನ್ಯಾಷನಲ್‌ ಫ್ಯಾಷನ್‌ ವೀಕ್‌ ಪೇಜೆಂಟ್‌ನ ಚಿತ್ರಗಳು
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಒಂದೇ ವೇದಿಕೆಯಲ್ಲಿ ಸೂಪರ್‌ ಮಾಡೆಲ್‌ ಆಫ್‌ ಇಂಡಿಯಾ, ಮಿಸ್ಟರ್‌, ಮಿಸ್‌ ಹಾಗೂ ಮಿಸೆಸ್‌, ಲಿಟಲ್‌ ಪ್ರಿನ್ಸಸ್ ಸೇರಿದಂತೆ ಮಿಸ್ಟರ್‌ ಟೀನ್‌, ಮಿಸ್‌ ಟೀನ್‌ ಟೈಟಲ್‌ಗಳನ್ನೊಳಗೊಂಡ ಸೌಂದರ್ಯ ಸ್ಪರ್ಧೆಯು (Fashion pageant News) ವೈಎಸ್‌ ಇಂಟರ್‌ನ್ಯಾಷನಲ್‌ ಫ್ಯಾಷನ್‌ ವೀಕ್‌ನಡಿಯಲ್ಲಿ, ಫ್ಯಾಷನಿಸ್ಟ್‌ ಯಶ್‌ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.

Ramp walk for the titles

ಟೈಟಲ್‌ಗಳಿಗಾಗಿ ರ‍್ಯಾಂಪ್‌ ವಾಕ್‌

ಎಲ್ಲ ವಯಸ್ಸಿನ ಮಾಡೆಲ್‌ಗಳು ತಂತಮ್ಮ ಕೆಟಗರಿಯಲ್ಲಿ ತಮ್ಮದೇ ಆದ ಸ್ಟೈಲ್‌ ಸ್ಟೇಟ್‌ಮೆಂಟ್‌ನಲ್ಲಿ ಕ್ಯಾಟ್‌ ವಾಕ್‌ ಮಾಡಿದರು. ಎಥ್ನಿಕ್‌ ಹಾಗೂ ವೆಸ್ಟರ್ನ್ ರೌಂಡ್‌ ಸೇರಿದಂತೆ ನಾನಾ ಸುತ್ತುಗಳಲ್ಲಿ ಜ್ಯೂರಿ ಟೀಮ್‌ನ ಮನಗೆದ್ದರು.

ಒಬ್ಬರಿಗಿಂತ ಒಬ್ಬರು ಮನಮೋಹಕವಾಗಿ ಕಾಣಿಸುತ್ತಿದ್ದರು. ಎಲ್ಲದಕ್ಕಿಂತ ಹೆಚ್ಚಾಗಿ ಭಿನ್ನ-ವಿಭಿನ್ನ ಡಿಸೈನರ್‌ ಕಾಸ್ಟ್ಯೂಮ್‌ಗಳಲ್ಲಿ ಅತ್ಯಾಕರ್ಷಕವಾಗಿ ರ್ಯಾಂಪ್‌ ವಾಕ್‌ ಮಾಡಿದ್ದು, ಎಲ್ಲರ ಗಮನ ಸೆಳೆಯಿತು. ಮದುವೆಯಾಗದ ಮಾಡೆಲ್‌ಗಳು, ಮದುವೆಯಾದ ವಿವಾಹಿತ ಮಾಡೆಲ್‌ಗಳು ಹಾಗೂ ಮಕ್ಕಳು ಟೈಟಲ್‌ಗಾಗಿ ಸಾಕಷ್ಟು ರೌಂಡ್‌ಗಳಲ್ಲಿ, ವೈವಿಧ್ಯಮಯವಾಗಿ ಪಾಲ್ಗೊಂಡರು.

ಫ್ಯಾಷನಿಸ್ಟ್‌ ಯಶ್‌ ಮಾತು

“ಮಾಡೆಲ್‌ಗಳಾಗಲು ಬಯಸುವ ಯುವಕ ಯುವತಿಯರಿಗೆ ಮಾತ್ರವಲ್ಲ, ವಿವಾಹಿತರಿಗೂ ವೇದಿಕೆ ಕಲ್ಪಿಸುತ್ತಿರುವುದು ಸಂತಸ ತಂದಿದೆ. ಇದಕ್ಕಾಗಿ ಗ್ರೂಮಿಂಗ್‌ನಿಂದಿಡಿದು ರ್ಯಾಂಪ್‌ವರೆಗಿನ ಟ್ರೈನಿಂಗ್‌ ನೀಡುತ್ತಿದ್ದೇವೆ. ಇದರ ಫಲಿತಾಂಶ ಇಂದಿನ ಶೋನಲ್ಲಿ ಕಾಣಬಹುದು” ಎಂದು ಮಾತನಾಡಿದರು.

Fashion Awards Winners

ಪೇಜೆಂಟ್‌ ವಿಜೇತರ ಪಟ್ಟಿ

ಸುಮಾರು 100ಕ್ಕೂ ಹೆಚ್ಚು ಭಾವಿ ಮಾಡೆಲ್‌ಗಳು ಪೇಜೆಂಟ್‌ನಲ್ಲಿ ಪಾಲ್ಗೊಂಡಿದ್ದರು. ಲಿಟಲ್‌ ಪ್ರಿನ್ಸ್ ಆಗಿ ಆರ್ಯ ನವೀನ್‌, ಪ್ರಿನ್ಸೆಸ್‌ ಆಗಿ ತನ್ಯಾಗೌಡ ವಿಜೇತರಾದರು.ಇನ್ನು ಮಿಸ್ಟರ್‌ ಸೂಪರ್‌ ಮಾಡೆಲ್‌ ಟೈಟಲನ್ನು ಬೆಂಗಳೂರಿನ ರಾಜೇಶ್‌ ತಮ್ಮದಾಗಿಸಿಕೊಂಡರು. ಮಿಸ್‌ ಸೂಪರ್‌ ಮಾಡೆಲ್‌ ಟೈಟಲ್‌ ಹರ್ಷಿತಾ ಅವರದ್ದಾಯಿತು. ಮಿಸೆಸ್‌ ಸೂಪರ್‌ ಮಾಡೆಲ್‌ ಆಫ್‌ ಇಂಡಿಯಾ ಟೈಟಲ್‌ ಶಾಮ್ಲಿ ಪಾಲಾಯಿತು.

List of Pageant Winners

ಫ್ಯಾಷನ್‌ ಅವಾರ್ಡ್ಸ್ ವಿಜೇತರು

ನಟ ಅನಿರುದ್ಧ್, ಜಯಶ್ರೀ, ತನುಜಾ, ನಟಿ ಪ್ರಥಮ ಪ್ರಸಾದ್‌ ರಾವ್‌, ಜ್ಯೋತಿ, ಸುನೇತ್ರಾ, ಸಾಗರ್‌ ಫ್ಯಾಷನ್‌ ಅವಾರ್ಡ್ಸ್ ಪಡೆದುಕೊಂಡರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Fashion Pageant News: ಮಿಸ್‌ ಕ್ವೀನ್‌ ಆಫ್‌ ಕರ್ನಾಟಕ ಪೇಜೆಂಟ್‌ನಲ್ಲಿ ಕಿರೀಟ ತೊಟ್ಟವರಾರು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Star Saree Fashion: ಡಿಸೈನರ್‌ ಸೀರೆಯಲ್ಲಿ ನಟಿ ತಾನ್ಯಾ ಹೋಪ್‌ರಂತೆ ಕಾಣಲು ಈ 5 ಸಿಂಪಲ್‌ ರೂಲ್ಸ್ ಫಾಲೋ ಮಾಡಿ!

ಡಿಸೈನರ್‌ ಪಾರ್ಟಿವೇರ್‌ ಸೀರೆಯಲ್ಲಿ (Star Saree Fashion) ನಟಿ ತಾನ್ಯಾ ಹೋಪ್‌ರಂತೆ ಗ್ಲಾಮರಸ್‌ ಆಗಿ ಕಾಣಿಸಲು ನಿಮಗೂ ಆಸೆಯಾಗಿದೆಯೇ! ಹಾಗಾದಲ್ಲಿ, 5 ಸಿಂಪಲ್‌ ರೂಲ್ಸ್ ಫಾಲೋ ಮಾಡಿ ಎನ್ನುವ ಸ್ಟೈಲಿಸ್ಟ್ ಗಳು ಒಂದಿಷ್ಟು ಸಲಹೆ ನೀಡಿದ್ದಾರೆ.

VISTARANEWS.COM


on

Star Saree Fashion
ಚಿತ್ರಗಳು: ತಾನ್ಯಾ ಹೋಪ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್‌ ಹಾಗೂ ಬಹುಭಾಷಾ ನಟಿ ತಾನ್ಯಾ ಹೋಪ್‌ ಸೀರೆಯಲ್ಲಿ (Star Saree Fashion) ಸಖತ್‌ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಡಿಸೈನರ್‌ ಪಾರ್ಟಿವೇರ್‌ ಸೀರೆಯುಟ್ಟರೂ ಆಕರ್ಷಕವಾಗಿ ಹಾಗೂ ಗ್ಲಾಮರಸ್‌ ಆಗಿ ಕಾಣಿಸಬಹುದು ಎಂಬುದನ್ನು ನಟಿ ತಾನ್ಯಾ ಪ್ರೂವ್‌ ಮಾಡಿದ್ದಾರೆ. ಅವರು ಧರಿಸಿರುವ ಸೀರೆ ಅವರ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. “ಪಾರ್ಟಿವೇರ್‌ ಸೀರೆಗಳು ಇದೀಗ ಅತಿ ಹೆಚ್ಚು ಟ್ರೆಂಡಿಯಾಗಿರುವ ಸೀರೆಗಳು! ಶಿಮ್ಮರ್‌ ಸೀರೆಗಳನ್ನು ಹೊರತುಪಡಿಸಿದಲ್ಲಿ, ಜಾರ್ಜೆಟ್ ಶೈಲಿಯ ಡಿಸೈನರ್‌ ಸೀರೆಗಳು ಇದೀಗ ಪಾರ್ಟಿ ಪ್ರಿಯ ಮಾನಿನಿಯರನ್ನು ಆಕರ್ಷಿಸಿವೆ. ಹಾಗೆಂದು ಇವುಗಳ ಬೆಲೆಯೇನೂ ಕಡಿಮೆಯೇನಿಲ್ಲ! ಎಂಬ್ರಾಯ್ಡರಿ ಹಾಗೂ ಅವುಗಳ ಡಿಸೈನ್‌ ಮತ್ತು ಫ್ಯಾಬ್ರಿಕ್‌ನ ಆಧಾರದ ಮೇಲೆ ಬೆಲೆ ನಿಗಧಿಯಾಗಿರುತ್ತವೆ. ಇನ್ನು ಇತ್ತೀಚೆಗೆ ಸೆಲೆಬ್ರೆಟಿಗಳು ಕೂಡ ಇಂತಹ ಸೀರೆಗಳತ್ತ ವಾಲಿದ್ದಾರೆ. ಮಾಮೂಲಿಯಂತೆ ಸ್ಟೈಲಿಂಗ್‌ ಮಾಡುವ ಬದಲು ಗ್ಲಾಮರಸ್‌ ಆಗಿ ಮಾಡುತ್ತಾರೆ. ಹಾಗಾಗಿ ನೋಡಲು ಚೆಂದನಾಗಿ ಕಾಣಿಸುತ್ತಾರೆ” ಎನ್ನುತ್ತಾರೆ ಸೀರೆ ಡ್ರೇಪಿಸ್ಟ್ ಧವನ್‌. ಇನ್ನು, ನಟಿ ತಾನ್ಯಾ ಹೋಪ್‌ರಂತೆ ಡಿಸೈನರ್‌ ಪಾರ್ಟಿವೇರ್‌ ಸೀರೆಯಲ್ಲಿ ಗ್ಲಾಮರಸ್‌ ಆಗಿ ಕಾಣಿಸಲು ಯಾರಿಗೆ ಇಷ್ಟವಿಲ್ಲ ಹೇಳಿ! ಹಾಗಾದಲ್ಲಿ ಒಂದಿಷ್ಟು ಸಿಂಪಲ್‌ ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತಂತೆ 5 ಟಿಪ್ಸ್ ನೀಡಿದ್ದಾರೆ.

Star Saree Fashion

ಪಾರ್ಟಿ ಥೀಮ್‌ಗೆ ತಕ್ಕ ಸೀರೆ ಆಯ್ಕೆ ಮಾಡಿ

ನೀವು ಭಾಗವಹಿಸುವ ಕಾಯರ್ಕ್ರಮಕ್ಕೆ ತಕ್ಕಂತೆ ಮ್ಯಾಚ್‌ ಆಗುವಂತಹ ಡಿಸೈನರ್‌ ಪಾರ್ಟಿವೇರ್ ಸೀರೆಗಳನ್ನು ಆಯ್ಕೆ ಮಾಡಿ. ಅದು ಟ್ರೆಡಿಷನಲ್‌ ಸಮಾರಂಭವೇ ಅಥವಾ ಕ್ಯಾಶುವಲ್‌ ಪಾರ್ಟಿಯಾ ಎಂಬುದು ತಿಳಿದು ಆರಿಸಿ.

ಮಿನುಗುವ ಡಿಸೈನ್ಸ್/ ಹ್ಯಾಂಡ್‌ವರ್ಕ್ ಸೀರೆಯ ಆಯ್ಕೆ

ಪಾರ್ಟಿಗೆ ಧರಿಸುವ ಸೀರೆಗಳು ಆದಷ್ಟೂ ಮಿನುಗುವ ಡಿಸೈನ್ಸ್ ಹೊಂದಿರಲಿ. ಎಂಬ್ರಾಯ್ಡರಿ ಹ್ಯಾಂಡ್‌ ವರ್ಕ್, ಕಟ್‌ವರ್ಕ್ ಡಿಸೈನ್ಸ್ ಇರುವಂತಹ ಡಿಸೈನರ್‌ ಸೀರೆ ಆಯ್ಕೆ ಮಾಡಿ. ಟ್ರೆಡಿಷನಲ್‌ ಲುಕ್‌ ಇರುವಂತವು ಬೇಡ!

Star Saree Fashion

ಡಿಸೈನರ್ ಸೀರೆಗೆ ಗ್ಲಾಮರಸ್‌ ಬ್ಲೌಸ್‌

ಡಿಸೈನರ್‌ ಸೀರೆಗೆ ಯಾವುದೇ ಕಾರಣಕ್ಕೂ ಟ್ರೆಡಿಷನಲ್‌ ಲುಕ್‌ ನೀಡುವಂತಹ ಎಥ್ನಿಕ್‌ ಡಿಸೈನ್‌ನ ಬ್ಲೌಸ್‌ ಆಯ್ಕೆ ಮಾಡಬೇಡಿ. ಹಾಲ್ಟರ್‌ ನೆಕ್‌ ಬ್ಲೌಸ್‌, ಸ್ಲಿವ್‌ಲೆಸ್‌ ಬ್ಲೌಸ್‌, ಬ್ಯಾಕ್‌ ಬಟನ್‌ ಬ್ಲೌಸ್‌, ಸ್ಟ್ರಾಪ್‌ ಬ್ಲೌಸ್‌ ಹಾಗೂ ಡಿಸೈನರ್‌ ಸ್ಲೀವ್‌ ಬ್ಲೌಸ್‌ಗಳನ್ನು ಸೆಲೆಕ್ಟ್ ಮಾಡಿ, ಧರಿಸಿ.

ಮಿನಿಮಲ್‌ ಆಭರಣ ಧರಿಸಿ

ಮೊದಲೇ ಪಾರ್ಟಿವೇರ್‌ ಡಿಸೈನರ್‌ ಸೀರೆಗಳು ಜಗಮಗಿಸುತ್ತಿರುತ್ತವೆ. ಇಲ್ಲವೇ ಎಂಬ್ರಾಯ್ಡರಿ ಹೈಲೈಟಾಗುತ್ತಿರುತ್ತವೆ. ಇವುಗಳನ್ನು, ಮಾಸುವಂತೆ ಮಾಡುವ ಹೆವ್ವಿ ಜ್ಯುವೆಲರಿಗಳನ್ನು ಧರಿಸುವುದು ಬೇಡ. ಬದಲಿಗೆ ಮಿನಿಮಲ್‌ ಆಭರಣಗಳನ್ನು ಧರಿಸಿ. ಸೀರೆ ಎದ್ದು ಕಾಣಿಸುವುದು.

Star Saree Fashion

ಸೀರೆಯ ಡ್ರೇಪಿಂಗ್‌

ಉಡುವ ಸೀರೆಯ ಡ್ರೇಪಿಂಗ್‌ ಬಾಡಿ ಮಾಸ್‌ ಇಂಡೆಕ್ಸ್ ಹೈ ಲೈಟ್‌ ಮಾಡುವಂತಿರಲಿ. ಆಗಷ್ಟೇ ಬಳುಕುವ ಬಳ್ಳಿಯಂತೆ ಕಾಣಬಹುದು. ಡ್ರೇಪಿಂಗ್‌ ಮಾಡುವ ಶೈಲಿ ಸೀರೆಯ ಇಡೀ ಲುಕ್ಕನ್ನು ಬದಲಿಸಬಲ್ಲದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Holiday Fashion: ಹಾಲಿ ಡೇ ಫ್ಯಾಷನ್‌ಗೆ ಮರಳಿ ಬಂತು ಹಿಪ್ಪಿ ಪ್ಯಾಂಟ್ಸ್!

Continue Reading

ಫ್ಯಾಷನ್

Haldi Shastra Fashion: ಮದುವೆಯ ಹಳದಿ ಶಾಸ್ತ್ರದ ಡ್ರೆಸ್‌ ಕೋಡ್‌ಗೆ 5 ಸಿಂಪಲ್‌ ಐಡಿಯಾ

ಮದುವೆಗೂ ಮುನ್ನ ನಡೆಯುವ ಹಳದಿ ಶಾಸ್ತ್ರಕ್ಕೂ (Haldi Shastra Fashion) ಇದೀಗ ನಾನಾ ಬಗೆಯ ಡ್ರೆಸ್‌ ಕೋಡ್‌ಗಳು ಕಾಲಿಟ್ಟಿವೆ. ಆ ದಿನ ಹಳದಿ ಉಡುಗೆ-ತೊಡುಗೆ ಧರಿಸುವುದಷ್ಟೇ ಅಲ್ಲ! ಸ್ಟೈಲಿಂಗ್‌ ಕೂಡ ಆಕರ್ಷಕವಾಗಿರಬೇಕು? ಅದು ಹೇಗೆ? ಎಂಬುದರ ಬಗ್ಗೆ ವೆಡ್ಡಿಂಗ್‌ ಸ್ಟೈಲಿಸ್ಟ್‌ಗಳು 5 ಸಿಂಪಲ್‌ ಐಡಿಯಾ ನೀಡಿದ್ದಾರೆ.

VISTARANEWS.COM


on

Haldi Shastra Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಂಪ್ರದಾಯಕ್ಕೆ ತಕ್ಕಂತೆ ನಡೆಯುವ ಮದುವೆಯ ಹಳದಿ ಶಾಸ್ತ್ರಕ್ಕೂ (Haldi Shastra Fashion) ಇದೀಗ ಫ್ಯಾಷನ್‌ ಟಚ್‌ ದೊರಕಿದೆ. ಹೌದು, ಮದುವೆಗೂ ಮುನ್ನ ನಡೆಯುವ ಈ ಕಾರ್ಯಕ್ರಮದಲ್ಲಿ ಮೊದಲಿನಂತೆ ಹಳೆಯ ಅಥವಾ ಯಾವುದೋ ಒಂದು ಹಳದಿ ಅಥವಾ ಶ್ವೇತ ವರ್ಣದ ಸೀರೆ ಅಥವಾ ಔಟ್‌ಫಿಟ್‌ ಧರಿಸಿದರೇ ಸಾಲದು. ಇದಕ್ಕೆಂದೇ ನಾನಾ ಬಗೆಯ ಡ್ರೆಸ್‌ಕೋಡ್‌ಗಳು ಕಾಲಿಟ್ಟಿವೆ. ಆ ದಿನದಂದು ಮದುಮಕ್ಕಳು ಮಾತ್ರವಲ್ಲ, ಭಾಗವಹಿಸುವ ಇತರರು ಕೂಡ ಹೇಗೆಲ್ಲಾ ಔಟ್‌ಫಿಟ್‌ ಧರಿಸಬಹುದು? ಆಕರ್ಷಕವಾಗಿ ಕಾಣುವಂತೆ ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು ಎಂಬುದರ ಬಗ್ಗೆ ವೆಡ್ಡಿಂಗ್‌ ಸ್ಟೈಲಿಸ್ಟ್‌ಗಳು ಸಿಂಪಲ್ 5 ಟಿಪ್ಸ್ ನೀಡಿದ್ದಾರೆ.

Haldi Shastra Fashion

ಹಳದಿ ಶೇಡ್‌ ಔಟ್‌ ಫಿಟ್ಸ್ ಪ್ಲಾನಿಂಗ್‌

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಹಳದಿ ವರ್ಣದ ಅಥವಾ ಸನ್‌ಕಲರ್‌ ಶೇಡ್‌ನ ಔಟ್‌ಫಿಟ್‌ ಹಾಗೂ ಸೀರೆ ಧರಿಸಲು ಮುನ್ನವೇ ಸೂಚಿಸಬೇಕು. ಆ ನಂತರವಷ್ಟೇ ಎಲ್ಲರೂ ಯೂನಿಫಾರ್ಮ್‌ನಂತೆ ಹಳದಿಮಯವಾಗಿ ಕಾಣಿಸಲು ಸಾಧ್ಯ.

Haldi Shastra Fashion

ಮದುಮಕ್ಕಳಿಗೆ ಶ್ವೇತ ವರ್ಣ

ಹಳದಿ ಶಾಸ್ತ್ರದಲ್ಲಿ ಭಾಗವಹಿಸುವವರೆಲ್ಲರೂ ಹಳದಿ ದಿರಸಿದಲ್ಲಿ ಮುಖ್ಯ ಪಾತ್ರದಾರಿಗಳಾದ ಮದುಮಗಳು ಹಾಗೂ ಮದುವೆ ಗಂಡು ಶ್ವೇತಾ ವರ್ಣದ ಔಟ್‌ಫಿಟ್‌ ಧರಿಸುವುದು ಉತ್ತಮ. ಹಳದಿ ನೀರನ್ನು ಎರಚಿದಾಗ ಈ ಉಡುಪುಗಳು ವಿಡಿಯೋ ಹಾಗೂ ಫೋಟೋಗಳಲ್ಲಿ ಆಕರ್ಷಕವಾಗಿ ಕಾಣಿಸುತ್ತವೆ.

ಟ್ವಿನ್ನಿಂಗ್‌ ಕಾನ್ಸೆಪ್ಟ್

ಮದುವೆಯಾಗುವ ಹೆಣ್ಣು ಹಾಗೂ ಗಂಡು ಟ್ವಿನ್ನಿಂಗ್‌ ಡ್ರೆಸ್‌ಕೋಡ್‌ ಪ್ಲಾನ್‌ ಮಾಡಬಹುದು. ಇಲ್ಲವೇ ಒಂದೇ ಬಗೆಯ ಫ್ಯಾಬ್ರಿಕ್‌ ಉಡುಪನ್ನು ಧರಿಸಬಹುದು. ಇದು ಕೂಡ ಆಕರ್ಷಕವಾಗಿ ಬಿಂಬಿಸುತ್ತವೆ.

Haldi Shastra Fashion

ಥೀಮ್‌ಗೆ ತಕ್ಕಂತೆ ಹಳದಿ ಶಾಸ್ತ್ರ

ಹಳದಿ ಶಾಸ್ತ್ರಕ್ಕೂ ಇದೀಗ ನಾನಾ ಬಗೆಯ ಥೀಮ್‌ ಡ್ರೆಸ್‌ಕೋಡ್‌ಗಳು ಬಂದಿವೆ. ಉದಾಹರಣೆಗೆ., ಹುಡುಗಿಗೆ ಶಕುಂತಲಾ ಸ್ಟೈಲಿಂಗ್‌, ಫ್ಲವರ್‌ ಗರ್ಲ್, ರಾಣಿ-ಮಹಾರಾಣಿ ಲುಕ್‌ ಹೀಗೆ ನಾನಾ ಬಗೆಯವನ್ನು ಕಾಣಬಹುದು. ಆಯಾ ಥೀಮ್‌ಗೆ ತಕ್ಕಂತೆ ಫ್ಯಾಷನ್‌ವೇರ್‌ಗಳನ್ನು ಧರಿಸಬಹುದು.

ಇದನನೂ ಓದಿ: Summer Dress Fashion: ಸೀಸನ್‌ ಎಂಡ್‌ ಫ್ಯಾಷನ್‌ಗೆ ಕಾಲಿಟ್ಟ ಸಮುದ್ರದ ಅಲೆ ಬಿಂಬಿಸುವ ವೆವಿ ಡ್ರೆಸ್‌!

ಹೂವಿನ ಆಭರಣಗಳ ಮ್ಯಾಚಿಂಗ್‌

ನೈಜ ಹೂವುಗಳ ಅಥವಾ ಕೃತಕ ಹೂವುಗಳ ಆಭರಣಗಳನ್ನು ಆಯ್ಕೆ ಮಾಡಿರುವ ಹಳದಿ ಶಾಸ್ತ್ರದ ಉಡುಪಿಗೆ ಹಾಗೂ ಸೀರೆಗೆ ತಕ್ಕಂತೆ ಮದುಮಗಳು ಮ್ಯಾಚ್‌ ಮಾಡಬಹುದು. ದುಂಡು ಮಲ್ಲಿಗೆ, ಮಿನಿ ಬಟನ್‌ ರೋಸ್‌ ಹೀಗೆ ನಾನಾ ಬಗೆಯ ಮಿನಿ ಹೂವುಗಳ ಆಭರಣಗಳನ್ನು ಧರಿಸಿದಾಗ ಹಳದಿ ಶಾಸ್ತ್ರದ ಉಡುಗೆಗಳು ಹೈಲೈಟಾಗುತ್ತವೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Holiday Fashion: ಹಾಲಿ ಡೇ ಫ್ಯಾಷನ್‌ಗೆ ಮರಳಿ ಬಂತು ಹಿಪ್ಪಿ ಪ್ಯಾಂಟ್ಸ್!

ಹಾಲಿ ಡೇ ಹಾಗೂ ಔಟಿಂಗ್‌ಗೆ (Holiday Fashion) ಧರಿಸುವಂತಹ ಹಿಪ್ಪಿ ಪ್ಯಾಂಟ್‌ಗಳು ಇದೀಗ ಈ ಸೀಸನ್‌ಎಂಡ್‌ನಲ್ಲಿ ಎಂಟ್ರಿ ನೀಡಿವೆ. ನಾನಾ ಪ್ರಿಂಟ್ಸ್‌ನಲ್ಲಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಯಾವ್ಯಾವ ವಿನ್ಯಾಸದವು ಹೆಚ್ಚು ಟ್ರೆಂಡಿಯಾಗಿವೆ? ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು? ಎಂಬುದರ ಬಗ್ಗೆ ಫ್ಯಾಷನಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Holiday Fashion
ಚಿತ್ರಗಳು: ಶಿವಲೀಕಾ ಒಬಿರಾಯ್‌ ಪಾಠಕ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫಂಕಿ ಲುಕ್‌ ನೀಡುವ ಹಿಪ್ಪಿ ಪ್ಯಾಂಟ್‌ಗಳು ಹಾಲಿ ಡೇ ಫ್ಯಾಷನ್‌ಗೆ (Holiday Fashion) ಮರಳಿವೆ. ಹೌದು, ನೋಡಲು ವೆರೈಟಿ ಪ್ರಿಂಟ್ಸ್ ಹಾಗೂ ವಿಂಟೇಜ್‌ ಪ್ರಿಂಟ್ಸ್‌ನಲ್ಲಿ ದೊರಕುತ್ತಿರುವ ಹಿಪ್ಪಿ ಪ್ಯಾಂಟ್‌ಗಳು )Hippie pants) ಹೊಸ ರೂಪದಲ್ಲಿ ಮರಳಿವೆ. ಬೀಚ್‌ ಹಾಲಿ ಡೇ ಮಾತ್ರವಲ್ಲ, ವೀಕೆಂಡ್‌ ಔಟಿಂಗ್‌ನಲ್ಲೂ ಇವು ಹುಡುಗಿಯರನ್ನು ಸವಾರಿ ಮಾಡತೊಡಗಿವೆ.

Holiday Fashion

ವಿದೇಶಿಗರ ಟ್ರಾವೆಲ್‌ ಪ್ಯಾಂಟ್ಸ್

“ಮೊದಲೆಲ್ಲಾ ಹಿಪ್ಪಿ ಪ್ಯಾಂಟ್‌ಗಳೆಂದಾಕ್ಷಣಾ (Hippie pants) ವಿದೇಶಿಗರು ಪ್ರಯಾಣ ಹಾಗೂ ಟೂರ್‌ ಮಾಡುವ ಸಂದರ್ಭದಲ್ಲಿ ಧರಿಸುವ ಪ್ಯಾಂಟ್‌, ದೊಗಲೆ ಪ್ಯಾಂಟ್‌ ಎಂದೆಲ್ಲಾ ಅಭಿಪ್ರಾಯ ಪಡಲಾಗುತ್ತಿತ್ತು. ಇದೀಗ ಈ ಕಾನ್ಸೆಪ್ಟ್ ಬದಲಾಗಿದೆ. ನಮ್ಮಲ್ಲೂ ಹುಡುಗಿಯರು, ಈ ಸೀಸನ್‌ನ ಸೆಕೆಯಿಂದ ಪಾರಾಗಲು ಈ ಪ್ಯಾಂಟ್‌ಗಳನ್ನು ಆಯ್ಕೆ ಮಾಡತೊಡಗಿದ್ದಾರೆ. ಪರಿಣಾಮ, ಈ ಪ್ಯಾಂಟ್‌ಗಳು ಇದೀಗ ಹಾಲಿ ಡೇ ಹಾಗೂ ಔಟಿಂಗ್‌ಗೆ ಮಾತ್ರವಲ್ಲದೇ, ಇತರೇ ಸಮಯದಲ್ಲೂ ಧರಿಸುವುದು ಹೆಚ್ಚಾಗುತ್ತಿದೆ” ಎನ್ನುವ ಫ್ಯಾಷನಿಸ್ಟ್‌ ಛಾಯಾ ಪ್ರಕಾರ, ಇದೀಗ ಜೆನ್‌ ಜಿ ಹುಡುಗಿಯರ ಸೀಸನ್‌ ಲಿಸ್ಟ್‌ನಲ್ಲಿ ಇವು ಸೇರಿವೆ ಎನ್ನುತ್ತಾರೆ.

ಟ್ರೆಂಡಿ ಹಿಪ್ಪಿ ಪ್ಯಾಂಟ್ಸ್

ಹಿಪ್ಪಿ ಪ್ಯಾಂಟ್‌ಗಳಲ್ಲಿ (Hippie pants) ಯೂನಿಸೆಕ್ಸ್ ಪ್ರಿಂಟ್ಸ್ ಹಾಗೂ ಡಿಸೈನ್‌ನವು ಲಭ್ಯ. ಆದರೆ ಹುಡುಗ-ಹುಡುಗಿಯರ ಸೊಂಟದಳತೆಗೆ ಇವು ಹೊಂದಬೇಕಷ್ಟೇ! ಹಾಗಾಗಿ, ಅವರವರ ಸೊಂಟದ ಫಿಟ್ಟಿಂಗ್‌ಗೆ ತಕ್ಕಂತೆ ಧರಿಸುವುದು ಸೂಕ್ತ ಎನ್ನುತ್ತಾರೆ ಸ್ಟೈಲಿಸ್ಟ್ ಖಾನ್‌.

Holiday Fashion

ಪಲ್ಹಾಜೋ ಹಿಪ್ಪಿ ಪ್ಯಾಂಟ್ಸ್

ಪಲ್ಹಾಜೋ ಶೈಲಿಯ ಅಗಲವಾದ ಪ್ರಿಂಟೆಡ್‌ ಹಿಪ್ಪಿ ಪ್ಯಾಂಟ್‌ಗಳು (Hippie pants) ಚಾಲ್ತಿಯಲ್ಲಿವೆ. ಇವುಗಳಲ್ಲಿ ವಿಂಟೇಜ್‌ ಕಲೆಕ್ಷನ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ.

ವೈಡ್‌ ಲೆಗ್‌ ಹಿಪ್ಪಿ ಪ್ಯಾಂಟ್ಸ್

ಅಗಲವಾಗಿರುವ ದೊಗಲೆಯಾಗಿರುವ ಪ್ಯಾಂಟ್‌ಗಳಿವು. ಹಾಗಾಗಿ ಪ್ರಿಂಟ್ಸ್‌ನಲ್ಲಿನ ಚಿತ್ತಾರಗಳು ಕೂಡ ಅಗಲವಾಗಿ ಹರಡಿಕೊಂಡಂತೆ ಇರುತ್ತವೆ. ನೋಡಲು ಫಂಕಿ ಲುಕ್‌ ನೀಡುತ್ತವೆ. ಪರ್ಫೆಕ್ಟ್ ರಿಲ್ಯಾಕ್ಸಿಂಗ್‌ ಮೂಡ್‌ ಸೃಷ್ಟಿಸುತ್ತವೆ.

Holiday Fashion

ಬೆಲ್‌ ಬಾಟಮ್‌ ಹಿಪ್ಪಿ ಪ್ಯಾಂಟ್ಸ್

ಹೆಸರೇ ಹೇಳುವಂತೆ, ಒಂದು ಕಾಲದಲ್ಲಿ, ರೆಟ್ರೋ ಸ್ಟೈಲ್‌ನಲ್ಲಿ ಸಖತ್‌ ಪಾಪುಲರ್‌ ಆಗಿದ್ದ ಪ್ಯಾಂಟ್‌ಗಳಿವು. ಫ್ಲೇರ್ ಹೊಂದಿದಂತೆ ಕಾಣುವ ಇವು ಧರಿಸಿದಾಗ ಕಂಪ್ಲೀಟ್‌ ರೆಟ್ರೋ ಲುಕ್‌ ನೀಡುತ್ತವೆ ಎನ್ನಬಹುದು.

ಇದನ್ನೂ ಓದಿ: Star Fashion: ಪಂಚೆ ಜೊತೆ ಟ್ರೋಫಿ ಜಾಕೆಟ್‌ ಧರಿಸಿದ ನಟಿ ತಮನ್ನಾಳ ಯೂನಿಕ್‌ ಫ್ಯಾಷನ್‌!

ಹಿಪ್ಪಿ ಪ್ಯಾಂಟ್ಸ್ ಸಿಂಪಲ್‌ 3 ಟಿಪ್ಸ್

  • ಕಚೇರಿಗೆ ಧರಿಸಲು ಇವು ಸೂಕ್ತವಲ್ಲ!
  • ಸರಿಯಾದ ಟಾಪ್‌ ಮ್ಯಾಚ್‌ ಮಾಡಿದಾಗ ಅಂದವಾಗಿ ಕಾಣಬಲ್ಲವು.
  • ಮಿಕ್ಸ್-ಮ್ಯಾಚ್‌ ಮಾಡುವ ಚಾಕಚಕ್ಯತೆ ಇದ್ದಲ್ಲಿ ಇವನ್ನು ಹಾಲಿಡೇ ಹೊರತುಪಡಿಸಿಯೂ ಧರಿಸಬಹುದು. ಆಕರ್ಷಕವಾಗಿ ಕಾಣುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಪ್ರಮುಖ ಸುದ್ದಿ

Prajwal Revanna : ಪ್ರಜ್ವಲ್​ ರೇವಣ್ಣ ಅರೆಸ್ಟ್​ ಆಗುವಾಗ ಧರಿಸಿದ್ದ ಬಟ್ಟೆಯ ಬ್ರಾಂಡ್ ಗಮನಿಸಿ! ಅದರ ಬೆಲೆ ಎಷ್ಟಿರಬಹುದು?

Prajwal Revanna : ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಿಂದ ಬೆಂಗಳೂರಿಗೆ ಬರುವಾಗ ಬೂದು ಬಣ್ಣದ ಹೂಡಿ ಬಟ್ಟೆಯನ್ನು ಧರಿಸಿದ್ದರು. ಅದು ಅಂಡರ್​ ಆರ್ಮರ್​ ಬ್ರಾಂಡ್​ನ ಕರಿ ಬಿಗ್ ಸ್ಲ್ಪಾಷ್​ ಹೂಡಿ ಟಿಶರ್ಟ್​. ಅಂಡರ್ ಆರ್ಮರ್ ಅಮೆರಿಕ ಮೂಲದ ಸ್ಪೋರ್ಟ್ಸ್​ ಬ್ರಾಂಡ್​ ಆಗಿದೆ. ಇದು ನಾನಾ ರೀತಿಯ ಸ್ಪೋರ್ಟ್ಸ್​ ಮೆಟೀರಿಯಲ್​ ಅನ್ನು ಉತ್ಪಾದನೆ ಮಾಡುತ್ತದೆ.

VISTARANEWS.COM


on

Prajwal revanna
Koo

ಬೆಂಗಳೂರು : ಪೆನ್​ಡ್ರೈವ್​ ಅಶ್ಲೀಲ ವಿಡಿಯೊ ಪ್ರಕರಣದಲ್ಲಿ ಎಸ್​ಐಟಿ ವಶದಲ್ಲಿರುವ ಪ್ರಜ್ವಲ್ ರೇವಣ್ಣ (Prajwal Revanna) ಜರ್ಮನಿಯಿಂದ ಬರುವಾಗ ಹಾಕಿಕೊಂಡು ಬಂದಿರುವ ಬಟ್ಟೆಯ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ. ಜರ್ಮನಿಯಿ ಮ್ಯೂನಿಕ್​ನಿಂದ ವಿಮಾನ ಏರುವಾಗ ಹಾಕಿದ್ದ ಬಟ್ಟೆಯಲ್ಲಿಯೇ ಅವರು ಪೊಲೀಸರ ವಶಕ್ಕೆ ಸಿಕ್ಕಿದ್ದಾರೆ. ಈ ವೇಳೆ ಅವರ ಬೂದು ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರು. ಶುಕ್ರವಾರ ಅವರನ್ನು ಎಸ್​ಐಟಿ ಅಧಿಕಾರಿಗಳು ಮೆಡಿಕಲ್​ ಟೆಸ್ಟ್​ ಹಾಗೂ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವ ವೇಳೆಯೂ ಅದೇ ಬಟ್ಟೆಯನ್ನು ಧರಿಸಿದ್ದರು. ಹೀಗಾಗಿ ಆ ಬಟ್ಟೆಯ ಬಗ್ಗೆ ಚರ್ಚೆ ನಡೆದಿದೆ.

ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಿಂದ ಬೆಂಗಳೂರಿಗೆ ಬರುವಾಗ ಬೂದು ಬಣ್ಣದ ಹೂಡಿ ಬಟ್ಟೆಯನ್ನು ಧರಿಸಿದ್ದರು. ಅದು ಅಂಡರ್​ ಆರ್ಮರ್​ ಬ್ರಾಂಡ್​ನ ಕರಿ ಬಿಗ್ ಸ್ಲ್ಪಾಷ್​ ಹೂಡಿ ಟಿಶರ್ಟ್​. ಅಂಡರ್ ಆರ್ಮರ್ ಅಮೆರಿಕ ಮೂಲದ ಸ್ಪೋರ್ಟ್ಸ್​ ಬ್ರಾಂಡ್​ ಆಗಿದೆ. ಇದು ನಾನಾ ರೀತಿಯ ಸ್ಪೋರ್ಟ್ಸ್​ ಮೆಟೀರಿಯಲ್​ ಅನ್ನು ಉತ್ಪಾದನೆ ಮಾಡುತ್ತದೆ. ಭಾರತದಲ್ಲೂ ಈ ಬ್ರಾಂಡ್​ ಸಿಕ್ಕಾಪಟ್ಟೆ ಫೇಮಸ್. ಆದರೆ, ಇದರ ಬೆಲೆ ಕನಿಷ್ಠ 6 ಸಾವಿರ ರೂಪಾಯಿಂದ ಆರಂಭಗೊಳ್ಳುತ್ತದೆ. ಅಂತೆಯೇ ಪ್ರಜ್ವಲ್ ರೇವಣ್ಣ ಬಂಧನದ ವೇಳೆ ಹಾಕಿಕೊಂಡಿದ್ದ ಬಟ್ಟೆಗೆ ಆನ್​ಲೈನ್​ನಲ್ಲಿ 7 ಸಾವಿರ ರೂಪಾಯಿ ತೋರಿಸುತ್ತಿದೆ. ಅದು ಡಿಸ್ಕೌಂಟ್ ಬೆಲೆಯಲ್ಲಿ. ಅಲ್ಲದೆ , ಪ್ರಜ್ವಲ್ ಹಾಕಿದ ಬಟ್ಟೆಯ ಬಗ್ಗೆಯೇ ಹುಡುಕಿಕೊಂಡು ಹೋದರೆ ಬೆಲೆಗಳನ್ನು ಡಾಲರ್​ ಲೆಕ್ಕದಲ್ಲಿ ತೋರಿಸುತ್ತಿದೆ.

ಇದನ್ನೂ ಓದಿ: Bhavani Reavanna : ಭವಾನಿ ರೇವಣ್ಣಗೆ ಬಂಧನ ಭೀತಿ; ಜಾಮೀನು ಅರ್ಜಿ ತೀರ್ಪು ಮುಂದಕ್ಕೆ

ಪ್ರಜ್ವಲ್ ರೇವಣ್ಣ ಈ ಬಟ್ಟೆಯನ್ನು ಜರ್ಮನಿಯಿಂದಲೇ ಖರೀದಿ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಅಂತಾರಾಷ್ಟ್ರೀಯ ಬ್ರಾಂಡ್​ ಆಗಿರುವ ಕಾರಣ ಅವರು ಅಲ್ಲಿಯೇ ಖರೀದಿ ಮಾಡಿ ಬಂದಿರಬಹುದು. ಹೀಗಾಗಿ ಅವರು ಡಾಲರ್ ಲೆಕ್ಕದಲ್ಲಿಯೇ ದುಡ್ಡು ಪಾವತಿ ಮಾಡಿರಬಹುದು. ಹೀಗಾಗಿ ಅವರು ಕನಿಷ್ಠ 10 ಸಾವಿರ ರೂಪಾಯಿ ಕೊಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ನಾನವನಲ್ಲ, ನಾನವನಲ್ಲ; ಪೊಲೀಸರ ಪ್ರಶ್ನೆಗೆ ಈ ಒಂದೇ ಉತ್ತರ ನೀಡುತ್ತಿರುವ ಪ್ರಜ್ವಲ್​ ರೇವಣ್ಣ!

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಪೆನ್​ಡ್ರೈವ್ ಹಗರಣದ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣನನ್ನು (Prajwal Revanna) ಎಸ್​ಐಟಿ ತನಿಖಾಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಆದರೆ, ಪೊಲೀಸರು ಕೇಳುವ ಎಲ್ಲ ಪ್ರಶ್ನೆಗಳಿಗೆ ಪ್ರಜ್ವಲ್ ರೇವಣ್ಣ ‘ನಾನವನಲ್ಲ, ನನಗೆ ಗೊತ್ತಿಲ್ಲ’ ಎಂಬ ಉತ್ತರವನ್ನೇ ನೀಡುತ್ತಿದ್ದಾರೆ. ಈ ಮೂಲಕ ಆರಂಭಿಕ ಹಂತದಲ್ಲಿ ಯಾವುದೇ ಮಾಹಿತಿಯನ್ನು ಪೊಲೀಸರಿಗೆ ನೀಡಲು ಸಿದ್ದತೆ ನಡೆಸಿಕೊಂಡು ಬಂದಿದ್ದಾನೆ ಪ್ರಜ್ವಲ್ ರೇವಣ್ಣ

ಎಸ್​ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸುವ ಮೂದಲು 24 ಗಂಟೆಗಳ ಅವಧಿಯನ್ನು ಹೊಂದಿದ್ದಾರೆ. ಹೀಗಾಗಿ ಪೊಲೀಸರು ಪ್ರಾಥಮಿಕ ಹಂತದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ, ಪ್ರಜ್ವಲ್ ರೇವಣ್ಣ ಮಾತ್ರ ಯಾವುದೆಕ್ಕೂ ಸಮರ್ಥ ಉತ್ತರ ನೀಡುತ್ತಿಲ್ಲ ಎಂದು ಹೇಳಲಾಗಿದೆ.

ಎಸ್​ಐಟಿ ಪೊಲೀಸರು ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾಗಿರುವ ಮೂರು ಎಫ್​ಐಆರ್ ಕುರಿತಾಗಿ ಪ್ರಶ್ನೆಗಳನ್ನು ಕೇಳುತತಿದ್ದಾರೆ. ಅವರ ಹೇಳಿಕೆಗಳ ಕುರಿತು ವಿಡಿಯೊ ದಾಖಲೆಯನ್ನು ಸೃಷ್ಟಿಸಲು ಪೊಲೀಸರು ಮುಂದಾಗಿದ್ದಾರೆ. ಅದೇ ರೀತಿ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎಂದು ಹೇಳಲಾದ ವಿಡಿಯೊಗಳಲ್ಲಿರುವ ಕೆಲವು ದೃಶ್ಯಗಳ ಕುರಿತೂ ಅವರಿಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

Continue Reading
Advertisement
Exit Poll 2024
ದೇಶ20 mins ago

Exit Poll 2024 : ಮತಗಟ್ಟೆ ಸಮೀಕ್ಷೆಗಳನ್ನು ನಾವು ನಂಬಲ್ಲ; ಡಿಕೆಶಿ, ಎಂಬಿ ಪಾಟೀಲ್ ಸ್ಪಷ್ಟ ನುಡಿ

Prajwal Revanna Case
ಕರ್ನಾಟಕ37 mins ago

Prajwal Revanna Case: ಕಡೆಗೂ ವಿಚಾರಣೆಗೆ ಹಾಜರಾಗದ ಭವಾನಿ ರೇವಣ್ಣ; 7 ಗಂಟೆ ಕಾದು ಎಸ್‌ಐಟಿ ತಂಡ ವಾಪಸ್

Exit Poll 2024
ಪ್ರಮುಖ ಸುದ್ದಿ45 mins ago

Exit Poll 2024 : ತಮಿಳುನಾಡು, ಕೇರಳದಲ್ಲೂ ಅರಳಲಿದೆ ಕಮಲ; ಮೋದಿಗಿದು ಐತಿಹಾಸಿಕ ಸಾಧನೆ

Exit Poll 2024
ದೇಶ1 hour ago

Exit Poll 2024: ಗುಜರಾತ್‌ನಲ್ಲಿ ಬಿಜೆಪಿ ಕ್ಲೀನ್‌ಸ್ವೀಪ್‌, ಉತ್ತರ ಪ್ರದೇಶದಲ್ಲಿ ಮೇಲುಗೈ; ರಾಜ್ಯವಾರು ಎಕ್ಸಿಟ್‌ ಪೋಲ್‌ ವರದಿ ಇಲ್ಲಿದೆ

exit poll 2024
ಪ್ರಮುಖ ಸುದ್ದಿ1 hour ago

Exit Poll 2024: ಮುಸ್ಲಿಮರ ಶೇ.72ರಷ್ಟು ಮತಗಳು ಕಾಂಗ್ರೆಸ್‌ಗೆ; ಮೋದಿ ವಿರುದ್ಧ ಒಂದಾದ ಅಲ್ಪಸಂಖ್ಯಾತರು

Union Minister Pralhad Joshi showed humanity by taking the injured to the hospital in his convoy vehicle
ಕರ್ನಾಟಕ2 hours ago

Pralhad Joshi: ಗಾಯಾಳುಗಳನ್ನು ಬೆಂಗಾವಲು ವಾಹನದಲ್ಲೇ ಆಸ್ಪತ್ರೆಗೆ ಸೇರಿಸಿದ ಪ್ರಲ್ಹಾದ್‌ ಜೋಶಿ

Air Conditioner Safety
ತಂತ್ರಜ್ಞಾನ2 hours ago

Air Conditioner Safety: ಎಸಿ ಏಕೆ ಬ್ಲಾಸ್ಟ್ ಆಗುತ್ತದೆ? ಅಪಾಯ ತಡೆಯುವುದು ಹೇಗೆ?

Valmiki Corporation Scam
ಕರ್ನಾಟಕ2 hours ago

Valmiki Corporation Scam: ವಾಲ್ಮೀಕಿ ನಿಗಮದ ಇಬ್ಬರು ಅಧಿಕಾರಿಗಳಿಗೆ 6 ದಿನ ಎಸ್‌ಐಟಿ ಕಸ್ಟಡಿ

Ballari DC Prashanth Kumar Mishra visit to Vote counting centre Review of final preparations
ಬಳ್ಳಾರಿ2 hours ago

Lok Sabha Election 2024: ಬಳ್ಳಾರಿಯ ಮತ ಎಣಿಕೆ ಕೇಂದ್ರಕ್ಕೆ ಡಿಸಿ ಭೇಟಿ: ಅಂತಿಮ ಸಿದ್ಧತೆ ಪರಿಶೀಲನೆ

Exit poll 2024
ಪ್ರಮುಖ ಸುದ್ದಿ2 hours ago

Exit Poll 2024 : ಕರ್ನಾಟಕದಲ್ಲಿ ಬಿಜೆಪಿಗೆ ನಷ್ಟ, ಕಾಂಗ್ರೆಸ್​ಗೆ ಲಾಭ ; ಜೆಡಿಎಸ್​ಗೆ +1

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Liquor ban
ಬೆಂಗಳೂರು4 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 weeks ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

ಟ್ರೆಂಡಿಂಗ್‌