CM Siddaramaiah : ನಮ್ಮನ್ನು ಬೈಯೋ ಮೊದಲು, ಬಿಜೆಪಿ ಸಂಸದರು ಕೇಂದ್ರದಿಂದ ಬರ ಪರಿಹಾರ ಕೊಡಿಸಲಿ: ಸಿದ್ದರಾಮಯ್ಯ - Vistara News

ಕರ್ನಾಟಕ

CM Siddaramaiah : ನಮ್ಮನ್ನು ಬೈಯೋ ಮೊದಲು, ಬಿಜೆಪಿ ಸಂಸದರು ಕೇಂದ್ರದಿಂದ ಬರ ಪರಿಹಾರ ಕೊಡಿಸಲಿ: ಸಿದ್ದರಾಮಯ್ಯ

CM Siddaramaiah : ರಾಜ್ಯ ಸರ್ಕಾರ ಕುಡಿಯುವ ನೀರಿನ ಬವಣೆ ನೀಗಿಸಲು 900 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದೆ. ಜಿಲ್ಲೆಯ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಅನುದಾನ ನೀಡಿದ್ದು, ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಸಲ್ಲಿಸಿದಲ್ಲಿ, ಸರ್ಕಾರ ತಕ್ಷಣ ಅನುದಾನ ಒದಗಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

VISTARANEWS.COM


on

CM Siddaramaiah
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊಪ್ಪಳ: ಕರ್ನಾಟಕದ ವಿಷಯದಲ್ಲಿ ಕೇಂದ್ರ ಸರ್ಕಾರ (Central Government) ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿದೆ. ಬಿಜೆಪಿ ಸಂಸದರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ರಾಜ್ಯ ಸರ್ಕಾರವನ್ನು (Karnataka Congress Government) ಟೀಕಿಸುವ ಬದಲು ಕೇಂದ್ರದೊಂದಿಗೆ ಮಾತನಾಡಿ ರಾಜ್ಯಕ್ಕೆ ಪರಿಹಾರದ ಹಣವನ್ನು ಬಿಡುಗಡೆಗೊಳಿಸಿದರೆ ಉತ್ತಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.

ಅವರು ಗುರುವಾರ (ನ. 2) ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬರ ಪರಿಹಾರವಾಗಿ 17,900 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ರಾಜ್ಯದ ಸಚಿವರ ಭೇಟಿಗೂ ಸಮಯ ನೀಡದೇ, ಪರಿಹಾರ ಮೊತ್ತವನ್ನು ಬಿಡುಗಡೆ ಮಾಡದೇ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿದೆ. ಕೇಂದ್ರ ಸರ್ಕಾರ ನರೇಗಾ ಯೋಜನೆಯಡಿ ದಿನಗೂಲಿ ಕಾರ್ಮಿಕರ ವೇತನ 600 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ: Karnataka Politics : 6 ತಿಂಗಳಾದರೂ ಸುಧಾರಿಸದ ಸರ್ಕಾರ, ಹಿಡಿತವಿಲ್ಲದ ಸಿಎಂ; ಬಿಜೆಪಿಯಿಂದ ಉಗ್ರ ಹೋರಾಟ: ಬಿಎಸ್‌ವೈ

ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆಗೆ ಚರ್ಚೆ

ಕೇಂದ್ರ ಕಾಂಗ್ರೆಸ್ ನಾಯಕರಾದ ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ‌ ಕೆ.ಸಿ. ವೇಣುಗೋಪಾಲ್ (Randeep Singh Surjewala and KC Venugopal) ಅವರು ರಾಜ್ಯಕ್ಕೆ ಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ನಾಯಕರು ರಾಜ್ಯಕ್ಕೆ ಆಗಮಿಸಿದ್ದಾರೆ. ಶಾಸಕರನ್ನು ಕೆಲವು ನಿಗಮ – ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ (Corporation Board Chairman Post) ನೇಮಕ ಮಾಡುವ ಪ್ರಕ್ರಿಯೆಯೂ ಇದ್ದು, ಈ ಬಗ್ಗೆಯೂ ಕೇಂದ್ರ ನಾಯಕರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಜಿಲ್ಲೆಯ ಜನರ ಕಷ್ಟಗಳಿಗೆ ಜಿಲ್ಲಾ ಮಂತ್ರಿಗಳ ಸ್ಪಂದನೆ

ಬರ ನಿರ್ವಹಣೆಗೆ ಸಂಬಂಧಿಸಿದಂತೆ ಯಾವ ಸಚಿವರೂ ಜಿಲ್ಲೆಗಳಿಗೆ ಭೇಟಿ ನೀಡುತ್ತಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಎಲ್ಲ ಜಿಲ್ಲಾ ಮಂತ್ರಿಗಳು ತಮ್ಮ ಜಿಲ್ಲೆಗಳಿಗೆ ಭೇಟಿ ನೀಡಿ, ಜನರ ಅಹವಾಲುಗಳನ್ನು ಕೇಳಿ, ಅವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರದಿಂದ ಕುಡಿಯುವ ನೀರಿಗೆ 900 ಕೋಟಿ ರೂ

ರಾಜ್ಯ ಸರ್ಕಾರ ಕುಡಿಯುವ ನೀರಿನ ಬವಣೆ ನೀಗಿಸಲು 900 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದೆ. ಜಿಲ್ಲೆಯ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಅನುದಾನ ನೀಡಿದ್ದು, ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಸಲ್ಲಿಸಿದಲ್ಲಿ, ಸರ್ಕಾರ ತಕ್ಷಣ ಅನುದಾನ ಒದಗಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕೃಷಿ ಪಂಪಸೆಟ್ ಮುಂದುವರಿಸಲಾಗುವುದು

ರೈತರ ಕೃಷಿ ಪಂಪಸೆಟ್‌ಗಳಿಗೆ ಇದ್ದ ಪೂರಕ ಸೌಲಭ್ಯಗಳನ್ನು ನಿಲ್ಲಿಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಈ ವಿಚಾರವು ಕೃಷಿ ಇಲಾಖೆಗೆ ಸಂಬಂಧಪಟ್ಟಿದ್ದಾಗಿದೆ. ಈ ಬಗ್ಗೆ ಪರಿಶೀಲಿಸಲಾಗುವುದು.ಕೃಷಿ ಪಂಪಸೆಟ್‌ಗಳಿಗೆ ಈ ಮುಂಚೆ ನೀಡುತ್ತಿದ್ದಂತೆ ಪೂರಕ ಸೌಲಭ್ಯಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿಯವರ ಹಗಲು ಕನಸು

ತನಿಖಾ ಸಂಸ್ಥೆಗಳಿಂದ ಕಾಂಗ್ರೆನ್‌ನವರ ಭ್ರಷ್ಟಾಚಾರ ಬೆಳಕಿಗೆ ಬರುತ್ತಿರುವುದಾಗಿ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ತಿಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಇವೆಲ್ಲ ಸುಳ್ಳು ಆರೋಪಗಳು ಎಂದು ಹೇಳಿದರು. “ಕಾಂಗ್ರೆಸ್ ಸರ್ಕಾರ ಪತನವಾಗಲಿದೆ” ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ‌ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಮುಂಚಿನ ಆಡಳಿತದ ವೈಖರಿ ತೋರುತ್ತಿಲ್ಲ ಎಂಬ ಬಿ.ಎಸ್. ಯಡಿಯೂರಪ್ಪ‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪನವರು ರಾಜಕೀಯದಿಂದ ನಿವೃತ್ತರಾಗಿದ್ದಾರೆ. ಬಿಜೆಪಿಯು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿತು. ವಿಧಾನಸಭೆಯಲ್ಲಿ ಅವರು ಕಣ್ಣೀರಿಟ್ಟಿದ್ದರು. ಅವರ ಪಕ್ಷದವರೇ ಅವರನ್ನು ಮನೆಗೆ ಕಳುಹಿಸಿದ್ದಾರೆ. ಅವರ ಹೇಳಿಕೆಗಳಿಗೆ ಏನೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಸರ್ಕಾರದಿಂದ ಯಾರನ್ನೂ ಕಳಿಸಲ್ಲ

ಕಾಂಗ್ರೆಸ್ ಶಾಸಕರು ದುಬೈಗೆ ಪ್ರವಾಸ ಹೋಗುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಅವರ ಹಣದಲ್ಲಿ ಅವರು ಹೋಗುತ್ತಿದ್ದಾರೆ. ಸರ್ಕಾರದಿಂದ ನಾವು ಯಾರನ್ನೂ ಕಳಿಸುವುದಿಲ್ಲ ಎಂದು ಹೇಳಿದರು.

ಐದು ವರ್ಷ ಆಡಳಿತ ನಮ್ಮದೇ

ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ. ನಾವು ಐದು ವರ್ಷ ಆಡಳಿತ ಮಾಡುತ್ತೇವೆ. ಮತ್ತೆ ಚುನಾವಣೆಗೆ ಹೋಗುತ್ತೇವೆ. ಮತ್ತೆ ಜನ ನಮಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ಸಿಡಿ ಕೇಸ್‌ ಅನ್ನು ಸಿಬಿಐಗೆ ವಹಿಸುವಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬರೆದ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ರಮೇಶ್‌ ಜಾರಕಿಹೊಳಿ ಅವರು ಸೋತು ಮನೆಯಲ್ಲಿರುವವರು. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅದಕ್ಕೆಲ್ಲ ಉತ್ತರಿಸಲಾಗುವುದಿಲ್ಲ ಎಂದರು.

ಇದನ್ನೂ ಓದಿ: Karnataka Rajyotsava : ಕನ್ನಡ ರಾಜ್ಯೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ಅನ್ನದಾನೀಶ್ವರ ಶ್ರೀಗಳಿಗೆ ಅಪಮಾನ; ಡಿಸಿಗೆ ಮನವಿ

ಬಿಜೆಪಿ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿ ಹೋಗಿದ್ದರೂ ಗ್ಯಾರಂಟಿಗಳು ಅನುಷ್ಠಾನವಾಗಿವೆ.
ನಾವು ಐದು ಗ್ಯಾರಂಟಿಗಳನ್ನು ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದ್ದೆವು. ಅದನ್ನು ಈಡೇರಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಮುಂದಿನ 48 ಗಂಟೆಯಲ್ಲಿ ಗುಡುಗು ಸಹಿತ ಭಾರಿ ಮಳೆ; ರೆಡ್‌ ಅಲರ್ಟ್‌ ಘೋಷಣೆ

Karnataka Weather Forecast : ರಾಜ್ಯಾದ್ಯಂತ ಮುಂಗಾರು ಆರ್ಭಟ ಜೋರಾಗಿದೆ. ಮುಂದಿನ 48 ಗಂಟೆಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ (Heavy Rain) ನಿರೀಕ್ಷೆ ಇದ್ದು, ರೆಡ್‌ ಅಲರ್ಟ್‌ ಘೋಷಣೆ (Red Alert) ಮಾಡಲಾಗಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ರಾಜ್ಯಾದ್ಯಂತ ಜೂನ್‌ 10ರಂದು ಭಾರಿ ಮಳೆಯಾಗುವ (Heavy Rain) ಸಾಧ್ಯತೆ ಇದ್ದು, ರೆಡ್‌ ಅಲರ್ಟ್‌ ಘೋಷಣೆ (Red Alert) ಮಾಡಲಾಗಿದೆ. ಕರಾವಳಿಯಲ್ಲಿ ಸಾಧಾರಣದಿಂದ ಭಾರಿ (Rain News) ಮಳೆಯಾಗಲಿದೆ. ಮಲೆನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನಲ್ಲಿ ವ್ಯಾಪಕವಾಗಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ವಿವಿಧೆಡೆ ಗುಡುಗು ಸಹಿತ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ವ್ಯಾಪಕವಾಗಿ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಬಾಗಲಕೋಟೆ, ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಗುಡುಗು, ಮಿಂಚು ಇರಲಿದೆ.

ಮಲೆನಾಡಿನ ಹಾಸನ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಿನಲ್ಲಿ ಚದುರಿದಂತೆ ಮಳೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: Karnataka Rain : ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು, ಹೊರ ಬಂತು ಸವಾರನ ಕರುಳು! ಮತ್ತಿಬ್ಬರು ಗಂಭೀರ

ಈ ಜಿಲ್ಲೆಗಳಲ್ಲಿ ವೇಗವಾಗಿ ಬೀಸುತ್ತೆ ಗಾಳಿ

ಗುಡುಗು ಸಹಿತ ಭಾರೀ ಮಳೆಯೊಂದಿಗೆ ಗಾಳಿ ವೇಗವು ಗಂಟೆಗೆ 55-65 ಕಿ.ಮೀ ಇರಲಿದೆ. ಹೀಗಾಗಿ ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಬಾಗಲಕೋಟೆ, ಹಾವೇರಿ, ಕೊಪ್ಪಳ, ವಿಜಯಪುರ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಐಎಂಡಿ ಆರೆಂಜ್ ಅಲರ್ಟ್ ನೀಡಿದೆ. ಈ ಭಾಗದಲ್ಲಿ ಮಳೆ ಜತೆಗೆ ಗಾಳಿಯು ಗಂಟೆಗೆ 40-50 ಕಿ.ಮೀ ಇರಲಿದೆ. ದಕ್ಷಿಣ ಕನ್ನಡ, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ

ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 45 ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಜೂನ್ 10 ರಿಂದ 12 ರವರೆಗೆ ಮೀನುಗಾರರು ಸಮುದ್ರ ಪ್ರದೇಶಗಳಿಗೆ ಹೋಗದಂತೆ ಸೂಚಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Stabbing in Mangalore : ವಿಜಯೋತ್ಸವ ಮುಗಿಸಿ ಮನೆಗೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಚಾಕು ಇರಿತ

Stabbing in Mangalore : ಬೋಳಿಯಾರು ನಿವಾಸಿಗಳಾದ ಸುರೇಶ್ ‌ಹಾಗೂ ನಂದ ಕುಮಾರ್ ಚೂರಿ ಇರಿತಕ್ಕೆ ಒಳಗಾದವರು. ಮೋದಿ ಅಧಿಕಾರ ಸ್ವೀಕರಿಸಿದ ಬೋಳಿಯಾರ್ ವಿಜಯೋತ್ಸವ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಮುಗಿಸಿ ಅವರು ಬೋಳಿಯಾರು ಪೇಟೆಯಲ್ಲಿ ನಿಂತಿದ್ದರು. ಈ ವೇಳೆ ಅಪರಿಚಿತ ದುಷ್ಕರ್ಮಿಗಳ ತಂಡದಿಂದ ಏಕಾಏಕಿ ಇರಿದು ಪರಾರಿಯಾಗಿದ್ದಾರೆ.

VISTARANEWS.COM


on

Stabbing in Mangalore:
Koo

ಮಂಗಳೂರು: ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ದುರ್ಷರ್ಮಿಗಳು ಚಾಕುವಿನಿಂದ ಇರಿದ (Stabbing in Mangalore) ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಿಯಾರು ಎಂಬಲ್ಲಿ ಘಟನೆ ಸಂಭವಿಸಿದೆ.

ಬೋಳಿಯಾರು ನಿವಾಸಿಗಳಾದ ಸುರೇಶ್ ‌ಹಾಗೂ ನಂದ ಕುಮಾರ್ ಚೂರಿ ಇರಿತಕ್ಕೆ ಒಳಗಾದವರು. ಮೋದಿ ಅಧಿಕಾರ ಸ್ವೀಕರಿಸಿದ ಬೋಳಿಯಾರ್ ವಿಜಯೋತ್ಸವ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಮುಗಿಸಿ ಅವರು ಬೋಳಿಯಾರು ಪೇಟೆಯಲ್ಲಿ ನಿಂತಿದ್ದರು. ಈ ವೇಳೆ ಅಪರಿಚಿತ ದುಷ್ಕರ್ಮಿಗಳ ತಂಡದಿಂದ ಏಕಾಏಕಿ ಇರಿದು ಪರಾರಿಯಾಗಿದ್ದಾರೆ. ಗಾಯಗೊಂಡಿರುವ ಇಬ್ಬರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಂಕ್‌ ಅಧಿಕಾರಿಗಳಿಂದ ಮನೆ ಹರಾಜು ನೋಟಿಸ್‌; ವಿದ್ಯುತ್ ಕಂಬಕ್ಕೆ ನೇಣು ಹಾಕಿಕೊಂಡ ರೈತ

ದಾವಣಗೆರೆ: ಸಾಲದ ಹೊರೆ ಮತ್ತು ಬ್ಯಾಂಕ್ ಅಧಿಕಾರಿಗಳಿಂದ ಮನೆ ಹರಾಜು ನೋಟಿಸ್ ಬಂದಿದ್ದಕ್ಕೆ ಮನನೊಂದು ರೈತರೊಬ್ಬರು ನೇಣಿಗೆ (Farmer Death) ಶರಣಾಗಿದ್ದಾರೆ. ಹನುಮಂತಪ್ಪ (43) ಮೃತ ದುರ್ದೈವಿ.

ಹನುಮಂತಪ್ಪ ತಮ್ಮ ಜಮೀನಿನಲ್ಲಿದ್ದ ವಿದ್ಯುತ್ ಕಂಬಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತನ ಸಾವಿನಿಂದ ಆಕ್ರೋಶಗೊಂಡ ಇತರೆ ರೈತರು ಪ್ರತಿಭಟನೆ ನಡೆಸಿದರು. ಬ್ಯಾಂಕ್ ಅಧಿಕಾರಿಗಳ ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ಕಿಡಿಕಾರಿದರು.

ದಾವಣಗೆರೆ ತಾಲೂಕಿನ ಗುಡಾಳ್ ಗೊಲ್ಲರಹಟ್ಟಿ ಗ್ರಾಮದ ನಿವಾಸಿ ಹನಮಂತಪ್ಪ, 4 ಲಕ್ಷ ರೂಪಾಯಿ ಮನೆ ಸಾಲ ಹಾಗೂ 2.60 ಲಕ್ಷ ರೂಪಾಯಿ ಕುರಿ ಸಾಕಾಣಿಕೆಗೆ ಸಾಲ ಮಾಡಿಕೊಂಡಿದ್ದರು. ಮನೆ ಸಾಲ ಪ್ರತಿ ತಿಂಗಳು ತುಂಬುತ್ತಿದ್ದರು, ಆದರೆ ಕುರಿಸಾಲ ಮಾತ್ರ ಬಾಕಿ ಉಳಿದಿತ್ತು.

ಕುರಿ ಸಾಲ‌ ತಿರಿಸಲು ಹೋದರೆ ಮನೆ ಹಾಗೂ ಕುರಿ ಸಾಲ ಎರಡು ಒಟ್ಟಿಗೆ ಕಟ್ಟುವಂತೆ ಬ್ಯಾಂಕ್ ಅಧಿಕಾರಿಗಳು ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಶನಿವಾರ ದಾವಣಗೆರೆ ನಗರದ ಚಾಮರಾಜಪೇಟೆ ಕೆನರಾ ಬ್ಯಾಂಕ್ ಅಧಿಕಾರಿಗಳು ಮನೆ ಬಾಗಿಲಿಗೆ ಹರಾಜು ನೋಟಿಸ್ ಅಂಟಿಸಿ, ಫೋಟೋ ತೆಗೆದುಕೊಂಡು ಹೋಗಿದ್ದಾರೆ.

ಈ ಘಟನೆ ನಡೆಯುತ್ತಿದ್ದಂತೆ ಭಾನುವಾರ ಬೆಳಗ್ಗೆ ನಾಲ್ಕು ಗಂಟೆಗೆ ಜಮೀನಿಗೆ ಹೋದ ಹನುಮಂತಪ್ಪ ನೇಣಿಗೆ ಶರಣಾಗಿದ್ದಾರೆ. ರೈತನ ಆತ್ಮಹತ್ಯೆಗೆ ಡಿಸಿ ಹಾಗೂ ಬ್ಯಾಂಕ್ ಅಧಿಕಾರಿಗಳೇ ಕಾರಣ. ಮನೆ ಸಾಲ ನಿರಂತರವಾಗಿ ಕಟ್ಟಿದ್ದರೂ ಹರಾಜಿಗೆ ಮುಂದಾಗಿದ್ದಾರೆ ಎಂದು ರೈತರು ಕಿಡಿಕಾರಿದರು. ನಮ್ಮ ಸಮಸ್ಯೆಗೆ ಪರಿಹಾರ ಸಿಗುವ ತನಕ ಶವ ಸಂಸ್ಕಾರ ಮಾಡಲ್ಲ ಎಂದು ಪಟ್ಟು ಹಿಡಿದರು. ಜಿಲ್ಲಾ ಆಸ್ಪತ್ರೆ ಶವಾಗಾರದ ಮುಂದೆ ಹೋರಾಟ ನಡೆಸಿದರು.

Continue Reading

Latest

Veeraloka Books : ಹೊಸ ಲೇಖಕರಿಗೆ ವೀರಲೋಕ ಪ್ರಕಾಶನ ಹೆದ್ದಾರಿಯನ್ನೇ ಸೃಷ್ಟಿಸಿದೆ: ಜಯಂತ್‌ ಕಾಯ್ಕಿಣಿ ಶ್ಲಾಘನೆ

Veeraloka Books: ಕನ್ನಡ ಪುಸ್ತಕ ಲೋಕದ ಪ್ರತಿಕೂಲ ಪರಿಸ್ಥಿತಿಯಲ್ಲಿ ವೀರಲೋಕ ಪ್ರಕಾಶನವು ಅಜ್ಞಾತ ಓದುಗರನ್ನೂ ತಲುಪಿದೆ. ಎಲ್ಲೋ ತಮ್ಮ ಪಾಡಿಗೆ ತಾವು ಬರೆದುಕೊಂಡಿದ್ದು, ಪ್ರಕಾಶಕರು ಸಿಗದೆ ಪರದಾಡುತ್ತಿರುವವರಿಗೆ ವೀರಲೋಕ ಹೆದ್ದಾರಿಯನ್ನೇ ಸೃಷ್ಟಿ ಮಾಡಿದೆ. ಇಡೀ ತಂಡದ ವೇಗ ಹೀಗೆಯೇ ಮುಂದುವರಿಯಲಿ ಎಂದು ಹಿರಿಯ ಸಾಹಿತಿ ಜಯಂತ್‌ ಕಾಯ್ಕಿಣಿ ಅವರು ಹಾರೈಸಿದರು.

VISTARANEWS.COM


on

Veeraloka
Koo

ಬೆಂಗಳೂರು: ಇವತ್ತು ದಾಲ್ ತಡ್ಕ ರೇಟ್ ಜಾಸ್ತಿಯಾದರೆ (Veeraloka Books) ನಾವು ಯಾರನ್ನೂ ಕೇಳುವುದಿಲ್ಲ. ಸುಮ್ಮನೆ ಹೋಗಿ ಹಣ ಕೊಟ್ಟು ತಿಂದು ಬರುತ್ತೇವೆ. ಆದರೆ ಕನ್ನಡ ಪುಸ್ತಕಗಳಿಗೆ ದಾಲ್‌ ತಡ್ಕಾಗಿರುವಷ್ಟು ಬೇಡಿಕೆಯೂ ಇಲ್ಲ. ಮುಖಬೆಲೆ ಐದು ರೂಪಾಯಿ ಜಾಸ್ತಿಯಾದರೂ ಓದುಗ ಪುಸ್ತಕ ಖರೀದಿಸಲು ಹಿಂದೆ ಮುಂದೆ ನೋಡುವಂಥ ಪರಿಸ್ಥಿತಿ ಇದೆ ಎಂದು ಹಿರಿಯ ಸಾಹಿತಿ ಜಯಂತ್‌ ಕಾಯ್ಕಿಣಿ (jayant kaikini) ವಿಷಾದಿಸಿದರು. ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ವೀರಲೋಕ ಬುಕ್ಸ್ 2ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕನ್ನಡ ಪುಸ್ತಕ ಲೋಕದ ಪ್ರತಿಕೂಲ ಪರಿಸ್ಥಿತಿಯಲ್ಲಿ ವೀರಲೋಕ ಪ್ರಕಾಶನವು ಅಜ್ಞಾತ ಓದುಗರನ್ನೂ ತಲುಪಿದೆ. ಎಲ್ಲೋ ತಮ್ಮ ಪಾಡಿಗೆ ತಾವು ಬರೆದುಕೊಂಡಿದ್ದು, ಪ್ರಕಾಶಕರು ಸಿಗದೆ ಪರದಾಡುತ್ತಿರುವವರಿಗೆ ವೀರಲೋಕ ಹೆದ್ದಾರಿಯನ್ನೇ ಸೃಷ್ಟಿ ಮಾಡಿದೆ. ಇಡೀ ತಂಡದ ವೇಗ ಹೀಗೆಯೇ ಮುಂದುವರಿಯಲಿ ಎಂದು ಕಾಯ್ಕಿಣಿ ಅವರು ಹಾರೈಸಿದರು.

ವೀರಲೋಕ ಬುಕ್ಸ್ ಆಯೋಜಿಸಿದ್ದ 2ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಐದು ಕೃತಿಗಳ ಬಿಡುಗಡೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಅವುಗಳಲ್ಲಿ ರಾಧಾಕೃಷ್ಣ ಕಲ್ಚಾರ್‌ ಅವರ ‘ಕವಚ’ ಕಾದಂಬರಿ ವೀರಲೋಕದ ನೂರನೇ ಕೃತಿಯಾಗಿತ್ತು. ಡಾ. ಎಂ ವೆಂಕಟಸ್ವಾಮಿಯವರ ‘ಜಗತ್ತಿನ ಭೀಕರ ಯುದ್ಧಗಳು’, ನೌಶಾದ್ ಜನ್ನತ್ತ್ ಅವರ ‘ಬೇವಾಚ್’, ಸಂದ್ಯಾರಾಣಿಯವರ ‘ನಾತಿಚರಾಮಿ’, ಡಾ. ಶೈಲೇಶ್ ಕುಮಾರ್ ಅವರ ‘ಸುಪ್ತ ಸಾಗರದಾಚೆ’ ಇನ್ನಿತರ ಕೃತಿಗಳಾಗಿದ್ದವು.
ವೀರಲೋಕ ಬುಕ್ಸ್ ಸಂಸ್ಥಾಪಕರಾದ ವೀರಕಪುತ್ರ ಶ್ರೀನಿವಾಸ್ ಅವರು ಆಶಯ ನುಡಿಗಳನ್ನಾಡಿದರು. ಎರಡು ವರ್ಷಗಳಲ್ಲಿನ ಏಳುಬೀಳುಗಳು, ಮೈಲುಗಲ್ಲುಗಳು, ಮುಂದಿನ ತಯಾರಿಗಳ ಬಗ್ಗೆ ವಿವರಿಸಿದರು.

ಇದೇ ವೇದಿಕೆಯಲ್ಲಿ ಅನಂತ ಕುಣಿಗಲ್ ಅವರು ಸಂಪಾದಿಸಿರುವ ವೀರಕಪುತ್ರ ಶ್ರೀನಿವಾಸ್ ಅವರ ಲಲಿತ ಪ್ರಬಂಧಗಳ ಸಂಕಲನ ‘ಬದುಕೇ ಥ್ಯಾಂಕ್ಯೂ’ ಕೃತಿಯೂ ಬಿಡುಗಡೆಯಾಯಿತು. ಕನ್ನಡ ಮಾಣಿಕ್ಯ ಮಾಸ ಪತ್ರಿಕೆಯ ದಶಮಾನೋತ್ಸವವನ್ನೂ ಆಚರಿಸಲಾಯಿತು. ವೀರಲೋಕದ ಐದು ಕೃತಿಗಳ ಮರುಮುದ್ರಣದ ಆವೃತ್ತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ: V Somanna profile : ಅಂದು ಜನತಾ ಬಜಾರ್‌ನಲ್ಲಿ ಸೇಲ್ಸ್‌ಮ್ಯಾನ್‌; ಇಂದು ಕೇಂದ್ರ ಸಚಿವ! ವಿ ಸೋಮಣ್ಣ ರಾಜಕೀಯ ಹಾದಿ ಕುತೂಹಲಕರ

ಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಹಿರಿಯ ಸಾಹಿತಿ ಮಲ್ಲೇಪುರಂ ಜಿ. ವೆಂಕಟೇಶ್, ನಿರ್ದೇಶಕ ಮಂಸೋರೆ, ಸಂಭಾಷಣೆಕಾರ ಮಾಸ್ತಿ, ಮಹೇಶ ಅರಬಳ್ಳಿ, ಭಾರತಿ ಬಿ.ವಿ, ಪೂರ್ಣಿಮಾ ಮಾಳಗಿಮನಿ, ಶೋಭಾ ರಾವ್, ನವೀನ್ ಸಾಗರ್, ಮಂಡ್ಯ ರಮೇಶ್, ಜೋಗಿ, ಸಂತೋಷ್ ಹಾನಗಲ್, ದಿವ್ಯಾ ಆಲೂರು, ಹರಿವು ರತೀಶ್, ಕಾನ್ಕೇವ್ ನಂದೀಶ್, ಪ್ರಕಾಶ್ ಕಂಬತ್ತಳ್ಳಿ, ಷಡಕ್ಷರಿ, ವಿ ನಾಗೇಂದ್ರ ಪ್ರಸಾದ್ ಮತ್ತಿತರು ಉಪಸ್ಥಿತರಿದ್ದರು.

Continue Reading

ಪ್ರಮುಖ ಸುದ್ದಿ

V Somanna profile : ಅಂದು ಜನತಾ ಬಜಾರ್‌ನಲ್ಲಿ ಸೇಲ್ಸ್‌ಮ್ಯಾನ್‌; ಇಂದು ಕೇಂದ್ರ ಸಚಿವ! ವಿ ಸೋಮಣ್ಣ ರಾಜಕೀಯ ಹಾದಿ ಕುತೂಹಲಕರ

V Somanna profile: ಅತಿ ಸಣ್ಣ ಕುಗ್ರಾಮವೊಂದರಿಂದ ಒಂದು ಜತೆ ಬಟ್ಟೆ ಮತ್ತು ಪುಟ್ಟ ಬ್ಯಾಗ್ ಹಿಡಿದುಕೊಂಡು ಹೊಟ್ಟೆಪಾಡಿಗಾಗಿ ಬೆಂಗಳೂರೆಂಬ ಮಹಾ ನಗರಕ್ಕೆ ಕಾಲಿಟ್ಟ ಸೋಮಣ್ಣ ಅವರು, ಮುಂದಿನ ಕೆಲವೇ ವರ್ಷದಲ್ಲಿ ಬೆಂಗಳೂರಿನ ಪ್ರಮುಖ ನಾಯಕರಾಗಿ ಬೆಳೆದರು. ಮೊದಲು ಕಾರ್ಪೊರೇಟರ್‌, ಬಳಿಕ ಶಾಸಕ, ಈಗ ಸಂಸದ-ಸಚಿವ…ಹೀಗೆ ವಿ ಸೋಮಣ್ಣ ಅವರ ರಾಜಕೀಯ ಹಾದಿ ರೋಚಕವಾಗಿದೆ.

VISTARANEWS.COM


on

V Somanna profile
Koo

ವಿ ಸೋಮಣ್ಣ ಅವರು (V Somanna profile) ಬೆಂಗಳೂರಿನ ಬಿನ್ನಿಪೇಟೆಯಲ್ಲಿ ಕಾರ್ಪೋರೇಟರ್‌ ಆಗಿ ರಾಜಕೀಯ ಹಾದಿ ತುಳಿದವರು. ಈಗ ಕೇಂದ್ರ ಸಚಿವರಾಗುವ ತನಕ ಅವರು ಸಾಗಿ ಬಂದ ರಾಜಕೀಯ ಹಾದಿ ರೋಚಕವಾಗಿದೆ. ವಿ ಸೋಮಣ್ಣ ಅವರು ಜನ ಸಮೂಹದ ನಡುವಿನಿಂದ ನಾಯಕರಾಗಿ ಬೆಳೆದು ಬಂದವರು. ಹಾಗಾಗಿ 40 ವರ್ಷಗಳ ಬಳಿಕವೂ ಅವರ ಪ್ರಭಾವ ಮತ್ತು ವರ್ಚಸ್ಸು ರಾಜ್ಯ ರಾಜಕಾರಣದಲ್ಲಿ ಪ್ರಖರವಾಗಿ ಉಳಿದಿದೆ.
ನಾಡಿನ ಅತಿ ಸಣ್ಣ ಕುಗ್ರಾಮವೊಂದರಿಂದ ಒಂದು ಜತೆ ಬಟ್ಟೆ ಮತ್ತು ಪುಟ್ಟ ಬ್ಯಾಗ್ ಹಿಡಿದುಕೊಂಡು ಹೊಟ್ಟೆಪಾಡಿಗಾಗಿ ಬೆಂಗಳೂರೆಂಬ ಮಹಾ ನಗರಕ್ಕೆ ಕಾಲಿಟ್ಟ ಸೋಮಣ್ಣ ಅವರು, ಮುಂದಿನ ಕೆಲವೇ ವರ್ಷದಲ್ಲಿ ಬೆಂಗಳೂರಿನ ಪ್ರಮುಖ ನಾಯಕರಾಗಿ ಬೆಳೆದರು.

ಅವರು ರಾಮನಗರ ಜಿಲ್ಲೆಯ ಮರಳವಾಡಿ ಎಂಬ ಸಣ್ಣ ಊರಿನ ತೇರಬೀದಿಯಿಂದ ಬೆಂಗಳೂರೆಂಬ ರಾಜಬೀದಿಯಲ್ಲಿ ಅಂಬೆಗಾಲಿಟ್ಟು, ಜನತಾ ಬಜಾರ್‌ನಿಂದ ಜನತಾಪಕ್ಷಕ್ಕೆ ಪ್ರವೇಶ ಪಡೆದು, ಕಾರ್ಪೊರೇಟರ್ ಆಗಿ ಲೋಕಲ್ ಲೀಡರ್ ಎಂದು ಗುರುತಿಸಿಕೊಂಡು, ಶಾಸಕರಾಗಿ ವಿಧಾನಸಭೆಗೆ ಪ್ರವೇಶ ಪಡೆದು, ಸಚಿವರಾಗಿ ಇಡೀ ರಾಜ್ಯ ಗುರುತಿಸುವಂಥ ಕೆಲಸ ಮಾಡುವ ಮೂಲಕ ನಾಡಿನ ಮುಂಚೂಣಿ ರಾಜಕೀಯ ಧುರೀಣರಾಗಿ ಬೆಳೆದವರು.
ಶಿಸ್ತು, ಶ್ರದ್ಧೆ, ನೇರ ನಡೆ-ನುಡಿ, ಸರಳ ಸಜ್ಜನಿಕೆ, ಎನಗಿಂತ ಕಿರಿಯರಿಲ್ಲ ಎಂಬ ನಿನಮ್ರತೆ, ಹಿಡಿದ ಕೆಲಸವನ್ನು ಬಿಡದೆ ಮಾಡಿ ಮುಗಿಸುವ ಛಲ, ಜನ ಸಾಮಾನ್ಯರ ತೀರಾ ಸಾಮಾನ್ಯ ಸಮಸ್ಯೆಗಳಿಗೂ ಸ್ಪಂದಿಸುವ ಗುಣ, ಅಭಿವೃದ್ಧಿ ಕುರಿತ ದೂರದೃಷ್ಟಿ, ಅಧ್ಯಯನ ಪ್ರವೃತ್ತಿ, ಜಾತಿ ಧರ್ಮ ಜನಾಂಗದ ಸೀಮಾ ರೇಖೆಯನ್ನು ದಾಟಿ ಜನರೊಂದಿಗೆ ಬೆರೆಯುವಿಕೆ, ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವಕ್ಕೆ ನಿಷ್ಠೆ, ಆದರೆ ನಾಲ್ಕು ಜನರಿಗೆ ಒಳಿತಾಗುತ್ತದೆ ಎಂದೆನಿಸಿದರೆ ಸಾಮ ದಾನ ಭೇದ ದಂಡ ಅಸ್ತ್ರ ಪ್ರಯೋಗಿಸಲೂ ಹಿಂಜರಿದ ದಿಟ್ಟತನ, ಧರ್ಮೋ ರಕ್ಷತಿ ರಕ್ಷಿತಃ ಎಂಬ ಗೀತೋಪದೇಶದ ಪಾಲನೆ, ಸರ್ವ ಜಾತಿ-ಧರ್ಮಗಳ ಸ್ವಾಮೀಜಿಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರ…ಹೀಗೆ ಹತ್ತು ಹಲವಾರು ಹೆಚ್ಚುಗಾರಿಕೆಗಳು ಸೋಮಣ್ಣ ಅವರನ್ನು ಇಂದು ರಾಜಕೀಯವಾಗಿ ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿವೆ.

ಊರು ಬಿಡುವಾಗ ಅಮ್ಮ ಕೊಟ್ಟ 15 ರೂ. ಇತ್ತು…

ಮರಳವಾಡಿ ಎಂಬ ಕುಗ್ರಾಮದಿಂದ ಬದುಕಿನ ದಾರಿ ಹುಡುಕುತ್ತ ತಾವು ಬೆಂಗಳೂರಿಗೆ ಬಂದ ಕತೆಯನ್ನು ಸೋಮಣ್ಣ ಹೇಳುವುದು ಹೀಗೆ:
ಊರಲ್ಲಿ ಪಿಯುಸಿ ಮುಗಿಯುತ್ತಿದ್ದಂತೆ, ಅದ್ಯಾವುದೋ ಹೊಸ ದಿಕ್ಕಿನತ್ತ ನನ್ನ ಮನಸ್ಸು ತುಡಿಯುತ್ತಿತ್ತು. ಊರು ಬಿಟ್ಟು ಬೆಂಗಳೂರಿಗೆ ಹೋಗಲು ಮನಸ್ಸು ತವಕಿಸುತ್ತಿತ್ತು. ಆದರೆ ಮನೆಯಲ್ಲಿ ವ್ಯವಸಾಯ ಮಾಡುವಂತೆ ಒತ್ತಾಯಿಸುತ್ತಿದ್ದರು. ಅದೊಂದು ದಿನ ಗಟ್ಟಿ ಮನಸ್ಸು ಮಾಡಿ ಊರು ಬಿಟ್ಟೆ. ಜೇಬಿನಲ್ಲಿ ಅಮ್ಮ ಕೊಟ್ಟ 15 ರೂ. ಇತ್ತು. ಜತೆಗೆ ಇನ್ನೊಂದು ಜತೆ ಬಟ್ಟೆಯ ಸಣ್ಣ ಬ್ಯಾಗು.

ಬೆಂಗಳೂರಿನಲ್ಲಿ ಬಸಪ್ಪ ಸರ್ಕಲ್ ನಲ್ಲಿ ಬಂದು ಇಳಿದೆ. ನನಗಾಗ 18 ವರ್ಷ. ಅಲ್ಲೇ ಪಕ್ಕದಲ್ಲಿ ಸಣ್ಣ ಧೋಬಿ ಅಂಗಡಿ ಇಟ್ಟುಕೊಂಡಿದ್ದ ನಾಗಣ್ಣ ಎಂಬುವರು ನನ್ನನ್ನು ಗುರುತಿಸಿ, ಏನ್ ಸೋಮಣ್ಣ ಇಲ್ಲಿ ಎಂದರು. ಅಣ್ಣಾ ಏನಾದರು ಒಂದು ದಾರಿ ತೋರಿಸು ಅಣ್ಣಾ ಎಂದು ಅವರಿಗೆ ದುಂಬಾಲು ಬಿದ್ದೆ. ಅವರು ಸೀದಾ ನನ್ನನ್ನು ಚಂಗಲ್ ರಾಯ ಶೆಟ್ಟಿ ಎಂಬುವರ ಬಳಿ ಕರೆದೊಯ್ದರು. ಅವರದು ಮೋಟಾರ್ ರಿಪೇರಿ ಅಂಗಡಿ. ಹುಡುಗಾ ನನ್ನ ಜತೆಗೇ ಇದ್ದುಬಿಡು ಎಂದರವರು. ತಮ್ಮ ಅಂಗಡಿಯಲ್ಲೇ ಉಳಿದುಕೊಳ್ಳಲು ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿಕೊಟ್ಟರು. ಮೋಟಾರು ಬಿಡಿ ಭಾಗಗಳನ್ನು ಎತ್ತಿ ಕೊಡುವುದು, ಅವರು ಕರೆದಲ್ಲಿಗೆ ಹೋಗುವುದು…ಇಷ್ಟೇ ನನ್ನ ಕೆಲಸ.
ಕೆಲ ದಿನಗಳ ಬಳಿಕ ಸಿಂಗಲ್ ರೂಮಿನ ಮನೆಯೊಂದಕ್ಕೆ ಶಿಫ್ಟ್ ಆದೆ. ಕೇವಲ ಆರಡಿ ಎಂಟಡಿ ಅಳತೆಯ ಶೀಟಿನ ಮನೆ ಅದು. ಬಾಡಿಗೆ ತಿಂಗಳಿಗೆ ಕೇವಲ 7 ರೂಪಾಯಿ!

ಪಿಯುಸಿಯಲ್ಲಿ ಫೇಲ್‌ ಆಗಿದ್ದೆ

ನಾನು ಪಿಯುಸಿಯ ಒಂದು ವಿಷಯದಲ್ಲಿ ಫೇಲ್ ಆಗಿದ್ದೆ. ಅದನ್ನು ಪಾಸ್ ಮಾಡಿಕೊಂಡೆ. ಆಗೆಲ್ಲ ಪಿಯುಸಿ ಅಂದರೆ ಒಂದೇ ವರ್ಷ. ಹಗಲು ಮೋಟಾರು ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಲೇ ವಿವಿ ಪುರಂ ಸಂಜೆ ಕಾಲೇಜು ಸೇರಿದೆ. ರಾತ್ರಿಯಿಡೀ ಕಷ್ಟಪಟ್ಟು ಓದಿ ಪದವಿಯಲ್ಲಿ ಒಳ್ಳೆಯ ಅಂಕ ಗಳಿಸಿದೆ.

ಮುಂದೆ ಧೋಬಿ ಅಂಗಡಿಯ ನಾಗಣ್ಣ ನನ್ನನ್ನು ಜಯಸಿಂಹ ಎಂಬುವವರನ್ನು ಪರಿಚಯಿಸಿ ಅವರ ಕಂಪನಿಯಲ್ಲಿ ಕೆಲಸ ಕೊಡಿಸಿದರು. ನಾಗಣ್ಣ ಬಲು ಬುದ್ಧಿವಂತ ಮತ್ತು ಶ್ರಮಜೀವಿ. ನನ್ನ ಬದುಕಿನ ಆರಂಭದ ದಿನಗಳಲ್ಲಿ ನನಗೆ ಆಸರೆಯಾಗಿ ನಿಂತರು. ನಂತರ 1971ರಲ್ಲಿ ನಾನು ಕನ್ಷುಮರ್ ಫೆಡರೇಷನ್ ಗೆ ಅರ್ಜಿ ಸಲ್ಲಿಸಿದೆ. ಗುಮಾಸ್ತನ ಕೆಲಸ ಗಿಟ್ಟಿಸುವುದು ಆ ದಿನಗಳಲ್ಲಿ ನನ್ನ ಮಹತ್ವಾಕಾಂಕ್ಷೆಯಾಗಿತ್ತು! ಎ ಶಾಂತಮಲ್ಲಪ್ಪ ಅವರು ಫೆಡರೇಷನ್ ನ ಅಧ್ಯಕ್ಷರಾಗಿದ್ದರು. ಅವರು ಸಂದರ್ಶನ ತಗೊಂಡು, ”ಗುಮಾಸ್ತನ ಕೆಲಸ ಬೇಡ ನಿನಗೆ. ಸೇಲ್ಸ್ ಅಸಿಸ್ಟೆಂಟ್ ಕೆಲಸಕ್ಕೆ ಬಾ” ಎಂದರು.

ಸೇಲ್ಸ್‌ ಅಸಿಸ್ಟಂಟ್‌ ಕೆಲಸ

ಕೆಲಸಕ್ಕೆ ಸೇರಲು 500 ರೂ. ಡಿಪಾಸಿಟ್ ಕಟ್ಟಬೇಕಿತ್ತು. ಅಷ್ಟು ದುಡ್ಡು ಹೊಂದಿಸಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಊರಲ್ಲಿ ಹೋಗಿ ಕೇಳಿದರೆ, ಏಯ್ ಇಲ್ಲಿ ಬೇಸಾಯ ಮಾಡಿಕೊಂಡಿರು. ಬೆಂಗಳೂರಿಗೆ ಯಾಕೆ ಹೋಗಬೇಕು ನೀನು ಎಂದರು. ಕೊನೆಗೆ ಅಮ್ಮ 200 ರೂ. ಕೊಟ್ಟು ಕಳಿಸಿದರು. ಬೆಂಗಳೂರಿನ ಶಿವಾಜಿ ಟಾಕೀಸ್ ಬಳಿ ಆಗ ಉರುವಲು ಕಟ್ಟಿಗೆ ಮಾರುವ ವೇ ಬ್ರಿಡ್ಜ್ ಇತ್ತು. ಅಲ್ಲಿ ತಿಮ್ಮಯ್ಯ ಎಂಬೊಬ್ಬರ ಪರಿಚಯವಾಗಿತ್ತು. ಅವರ ಬಳಿ ಹೋಗಿ ಸಮಸ್ಯೆ ಹೇಳಿಕೊಂಡಾಗ 500 ರೂ. ಕೊಟ್ಟರು. ಅಂತೂ ಬೆಂಗಳೂರಿನ ಕೆ ಜಿ ರೋಡ್ ನ ಜನತಾ ಬಜಾರ್ ನಲ್ಲಿ ಕೆಲಸ ಶುರು ಮಾಡಿದೆ. ಅಲ್ಲಿಂದ ನನ್ನ ಬದುಕಿಗೆ ಹೊಸ ತಿರುವು ಸಿಕ್ಕಿತು.

ಜನತಾ ಬಜಾರ್ ನಲ್ಲಿ ಕೆಲಸ ಮಾಡುತ್ತಿರುವಾಗಲೇ, ಇನ್ನಷ್ಟು ದುಡಿಯಬೇಕು ಎಂದೆನಿಸುತ್ತಿತ್ತು. ಅದೇ ಹೊತ್ತಿಗೆ ವಿಜಯಾ ಬ್ಯಾಂಕ್ ಮ್ಯಾನೇಜರ್ ಪ್ರಭಾಕರ್ ಎಂಬುವರ ಪರಿಚಯವಾಯಿತು. ಇನ್ನು ಏನಾದರು ಮಾಡಬೇಕಲ್ಲ ಸರ್ ನಾನು ಅಂದೆ. ಪಿಗ್ಮಿ ಕಲೆಕ್ಟ್ ಮಾಡು ನೀನು ಎಂದು ಸಲಹೆ ನೀಡಿದರು. ಮಧ್ಯಾಹ್ನ 1.30ರಿಂದ 4 ಗಂಟೆಯವರೆಗಿನ ಬಿಡುವಿನ ಅವಧಿಯಲ್ಲಿ ಅಂಗಡಿ ಅಂಗಡಿ ತಿರುಗಿ ಪಿಗ್ಮಿ ಕಲೆಕ್ಟ್ ಮಾಡತೊಡಗಿದೆ. ಸಂಜೆ ಡ್ಯೂಟಿ ಮುಗಿದ ಮೇಲೆ ರಾತ್ರಿ 9 ಗಂಟೆವರೆಗೆ ಮತ್ತೆ ಇದೇ ಕೆಲಸ. ಇದರಿಂದ ತಿಂಗಳಿಗೆ ಸುಮಾರು 2 ಸಾವಿರ ರೂ. ಎಕ್ಟ್ರಾ ಇನ್ ಕಮ್ ಬರತೊಡಗಿತು. ಜನತಾ ಬಜಾರ್ ಸಂಬಳ ಹೆಚ್ಚು ಕಡಿಮೆ ಇಷ್ಟೇ ಬರುತ್ತಿತ್ತು.

ಜನತಾ ಬಜಾರ್‌ನಿಂದ ಜನತಾ ಪಕ್ಷಕ್ಕೆ…

ಜನತಾ ಬಜಾರ್ ಯೂನಿಯನ್‌ನಲ್ಲಿ ನಾನು ಮುಂಚೂಣಿ ನಾಯಕನಾಗಿ ಬೆಳೆದೆ. ಸಹಜವಾಗಿಯೇ ದೇವೇಗೌಡರು, ಬಿ ಎಲ್ ಶಂಕರ್, ಪಿ ಜಿ ಆರ್ ಸಿಂಧಿಯಾ ಮತ್ತಿರರ ಸಂಪರ್ಕಕ್ಕೆ ಬಂದೆ. ಅವರ ಮೂಲಕ ನಾನು ಅನಧಿಕೃತವಾಗಿ ಜನತಾ ಪಕ್ಷಕ್ಕೆ ಎಂಟ್ರಿ ಪಡೆದೆ. ಈ ನಡುವೆ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಅವರು ಕೈಗೊಂಡಿದ್ದ ಆಂದೋಲನದಲ್ಲೂ ಕೈ ಜೋಡಿಸಿದೆ. ಚಂದ್ರಶೇಖರ ಅವರು ನಡೆಸಿದ ರಾಷ್ಟ್ರವ್ಯಾಪಿ ಪಾದಯಾತ್ರೆಯಲ್ಲೂ ಹೆಜ್ಜೆ ಹಾಕಿದೆ.

1986ರ ವಿಧಾನಸಭೆ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಲ್ಲಿ ಪಿ ಜಿ ಆರ್ ಸಿಂಧಿಯಾ ಪರ ಸಕ್ರಿಯವಾಗಿ ಕೆಲಸ ಮಾಡಿದೆ. ಅದೇ ವರ್ಷ ಬೆಂಗಳೂರು ಕಾರ್ಪೊರೇಷನ್ ಎಲೆಕ್ಷನ್ ಘೋಷಣೆ ಆಯಿತು. ಮುನಿಯಪ್ಪ ಅಂತ ಒಬ್ಬರು ರೆವಿನ್ಯು ಇನ್ಸ್ ಪೆಕ್ಟರ್ ನನಗೆ ಆತ್ಮೀಯರಾಗಿದ್ದರು. ಅವರು, ಸೋಮಣ್ಣ ನೀನೂ ಎಲೆಕ್ಷನ್ ಗೆ ನಿಂತು ಬಿಡು ಎಂದು ಹವಾ ಹಾಕಿದರು. ನನಗೂ ಉಮೇದು ಬಂತು. ವಿಜಯ ನಗರ ಕ್ಷೇತ್ರದಲ್ಲಿ ಜನತಾ ಪಕ್ಷದಿಂದ ಟಿಕೆಟ್‌ ಕೊಡುವ ಭರವಸೆಯೂ ಸಿಕ್ಕಿತು. ಆದರೆ ನಾಮಪತ್ರ ಸಲ್ಲಿಸಬೇಕು ಎನ್ನುವಷ್ಟರಲ್ಲಿ ಜೀವರಾಜ್ ಆಳ್ವ, ರಘುಪತಿ ಇನ್ನೂ ಕೆಲವರು ಬೇರೆಯವರಿಗೆ ಟಿಕೆಟ್ ಕೊಡಲು ಶತಪ್ರಯತ್ನ ನಡೆಸಿದರು.

ಡಿ ಮಂಜುನಾಥ್ ಆಗ ಜನತಾ ಪಕ್ಷದ ರಾಜ್ಯಾಧ್ಯಕ್ಷರು. ಮಂಜುನಾಥ್, ವಿ ಆರ್ ಕೃಷ್ಣಯ್ಯರ್, ಟಿ ಆರ್ ಶಾಮಣ್ಣ, ಎಚ್ ಡಿ ದೇವೇಗೌಡ, ಬಿ ಎಲ್ ಶಂಕರ್ ಮತ್ತಿತರರನ್ನು ಸಂಪರ್ಕಿಸಿ ನಾನು ಟಿಕೆಟ್ ಗೆ ಪಟ್ಟು ಹಿಡಿದೆ. ಇದಕ್ಕಾಗಿ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಚಂದ್ರಶೇಖರ ಅವರನ್ನೂ ಸಂಪರ್ಕಿಸಿ ವಿನಂತಿಸಿದೆ. ಆದರೆ ಕೊನೆಗೆ ಬಿ ಎಲ್ ಶಂಕರ್ ಒಬ್ಬರು ಮಾತ್ರ ನನ್ನ ಪರವಾಗಿ ನಿಂತರು. ಅಂತಿಮವಾಗಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮೊರೆ ಹೋದೆ. ಕನಕಪುರ ಬೈ ಎಲೆಕ್ಷನ್ ನಲ್ಲಿ ಹೆಗಡೆ ಅವರಿಗಾಗಿ ಸಿಂಧಿಯಾ ರಾಜೀನಾಮೆ ನೀಡಿದ್ದರು. ಹೆಗಡೆ ಅವರನ್ನು ಸೋಲಿಸಲು ಕಾಂಗ್ರೆಸ್ ನಾಯಕರೆಲ್ಲ ಶಕ್ತಿ ಪ್ರಯೋಗದಲ್ಲಿ ತೊಡಗಿದ್ದರು. ನಾನು ಯುವಕರ ತಂಡ ಕಟ್ಟಿಕೊಂಡು ಕಾಂಗ್ರೆಸ್ ಮುಖಂಡರನ್ನು ದಿಗ್ಬಂಧನ ಹಾಕಿ ನೀರಿಳಿಸಿದ್ದು ಹೆಗಡೆ ಅವರಿಗೆ ತಿಳಿದಿತ್ತು. ಹಾಗಾಗಿ ಹೆಗಡೆ ಅವರು ಕೃಪೆಯಿಂದಾಗಿ ಕೊನೆಗೂ ಬಿ ಫಾರಂ ಸಿಕ್ಕಿತು. ನಾನು ನಾಮಪತ್ರ ಸಲ್ಲಿಸಿದೆ. ಆದಿ ಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಬೆಂಬಲವೂ ನನಗೆ ಸಿಕ್ಕಿತು.

ಈ ನಡುವೆ, ನಮ್ಮ ಕಾರ್ಯಕರ್ತರನ್ನು ಸ್ಟೇಷನ್ ಗೆ ಒಯ್ದು ಹಲ್ಲೆ ನಡೆಸಿದ ದುರಹಂಕಾರಿ ಪೊಲೀಸ್ ಅಧಿಕಾರಿಯೊಬ್ಬರಿಗೆ ನಾನು ಸಖತ್ತಾಗಿ ಬೆಂಡೆತ್ತಿದ ಘಟನೆಯಿಂದಾಗಿ ಇಡೀ ವಾರ್ಡ್ ನಲ್ಲಿ ನನ್ನ ಹವಾ ಜೋರಾಯಿತು. ನಾನು ಭಾರಿ ಬಹುಮತದಿಂದ ಗೆಲುವು ಸಾಧಿಸಿದೆ. ಆಗ ಆ ವಾರ್ಡ್ ನಲ್ಲಿ ಏನೇನೂ ಮೂಲಸೌಕರ್ಯ ಇರಲಿಲ್ಲ. ಶಾಂತಿ ಸುವ್ಯವಸ್ಥೆ ಕೂಡ ಕಳವಳಕಾರಿಯಾಗಿತ್ತು. ನಾನು ಹಂತಹಂತವಾಗಿ ಎಲ್ಲ ವರ್ಗದ ಜನರ ವಿಶ್ವಾಸ ಗಳಿಸುತ್ತ, ಮೂಲ ಸೌಕರ್ಯ ಕಲ್ಪಿಸುತ್ತ ಬಂದೆ. ಹಾಗಾಗಿ ಮುಂದಿನ 1987ರ ಕಾರ್ಪೊರೇಷನ್ ಚುನಾವಣೆಯಲ್ಲೂ ಭರ್ಜರಿ ಗೆಲುವು ನನ್ನದಾಯಿತು.

ಬಿನ್ನಿಪೇಟೆಯಿಂದ ವಿಧಾನಸಭೆ ಪ್ರವೇಶ

ಎರಡು ಅವಧಿಗೆ ಕಾರ್ಪೋರೇಟರ್ ಆಗಿ ಜನಪ್ರಿಯತೆ ಗಳಿಸಿದ್ದ ನನಗೆ 1994ರಲ್ಲಿ ಬಿನ್ನಿಪೇಟೆ ಕ್ಷೇತ್ರದಲ್ಲಿ ನಿರಾಯಾಸವಾಗಿ ಜನತಾ ಪಕ್ಷದ ಟಿಕೆಟ್ ಸಿಕ್ಕಿತು. ದಾಖಲೆ ಮತಗಳ ಅಂತರದಿಂದ ಗೆದ್ದೆ.
ಆದರೆ ಮುಖ್ಯಮಂತ್ರಿಯಾಗಲು ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರ ನಡುವೆ ಪೈಪೋಟಿ ನಡೆದು ರಣರಂಪವಾಯಿತು. ನಾನು ದೇವೇಗೌಡರ ಪರ ನಿಂತೆ. ನ್ಯಾಯಯುತವಾಗಿ ದೇವೇಗೌಡರೇ ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮ ಆಶಯವಾಗಿತ್ತು. ವಿಂಡ್ಸರ್ ಮ್ಯಾನರ್ ನನ್ನನ್ನು ಕರೆಸಿದರು. ಅಲ್ಲಿ ಹೆಗಡೆ, ಜೆ ಎಚ್ ಪಟೇಲ್ ಮತ್ತು ಬೊಮ್ಮಾಯಿ ಚಿಂತಾಕ್ರಾಂತರಾಗಿ ಕೂತಿದ್ದರು. ಹೆಗಡೆ ಮನೆ ಬಳಿ ಮತ್ತು ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಭಾರಿ ಗದ್ದಲದ ಕುರಿತಾಗಿ ನನ್ನಿಂದ ಮಾಹಿತಿ ಪಡೆದರು. ನಾನು ಇದ್ದ ವಿಷಯ ವಿವರಿಸಿದೆ. ಹೆಗಡೆಯವರು ಗರಂ ಆಗಿದ್ದರು. ಬೊಮ್ಮಾಯಿಯವರು ಸೂಕ್ಷ್ಮವಾಗಿ ನನಗೊಂದು ಬುದ್ಧಿಮಾತು ಹೇಳಿ ಕಳುಹಿಸಿದರು!

ದೇವೇಗೌಡರು ಮುಖ್ಯಮಂತ್ರಿಯಾದರು. ಆದರೆ ನನ್ನನ್ನು ಮಂತ್ರಿ ಮಾಡಲೇ ಇಲ್ಲ! ನಿನ್ನನ್ನು ಮಂತ್ರಿ ಮಾಡಿದರೆ ಹೆಗಡೆಯವರು ತಕರಾರು ಮಾಡ್ತಾರೆ, ಸದ್ಯ ಸುಮ್ಮನಿರು ಎಂದರು!

ಮುಂದೆ ಅನಿರೀಕ್ಷಿತವಾಗಿ ದೇವೇಗೌಡರು ಪ್ರಧಾನಿಯಾದರು. ಮುಖ್ಯಮಂತ್ರಿ ಹುದ್ದೆಗೆ ಮತ್ತೆ ಪೈಪೋಟಿ ಶುರುವಾಯಿತು. ನಾವು 86 ಮಂದಿ ಸಿದ್ದರಾಮಯ್ಯ ಪರ ಸಹಿ ಮಾಡಿ ಪತ್ರ ರೆಡಿ ಮಾಡಿದೆವು. ಆದರೆ ಆ ಪತ್ರ ವರಿಷ್ಠರಿಗೆ ತಲುಪಿಸುವ ಧೈರ್ಯ ಯಾರೂ ಮಾಡಲಿಲ್ಲ. ನಾನೊಬ್ಬನೆ ಆ ಪತ್ರ ಹಿಡಿದು, ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದ ಜನತಾದಳ ರಾಷ್ಟ್ರ ಮಟ್ಟದ ನಾಯಕರಾದ ಬಿಜು ಪಟ್ನಾಯಕ್, ಮಧು ದಂಡವತೆ ಬಳಿ ಹೋಗಿದ್ದೆ. ಅಲ್ಲೇ ಇದ್ದ ಪಟೇಲರು, ನಾನ್ಯಾಕೆ ಮುಖ್ಯಮಂತ್ರಿ ಆಗಬಾರದು ಎಂದು ನನ್ನನ್ನು ಪ್ರಶ್ನಿಸಿದರು! ನಾನು ಏನೋ ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದೆ.

ಜೆ ಎಚ್‌ ಪಟೇಲರು ಮಂತ್ರಿ ಮಾಡಿದರು

ನಾಟಕೀಯ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಅವರನ್ನು ಮಾಡದೆ ಜೆ ಎಚ್ ಪಟೇಲರನ್ನು ಸಿಎಂ ಮಾಡಲಾಯಿತು. ವಿಶೇಷ ಅಂದರೆ ಪಟೇಲರು ನನ್ನನ್ನು ಮಂತ್ರಿಯನ್ನಾಗಿ ಮಾಡಿದರು! ನಿನಗೆ ಕೆಲಸ ಬಾರದ ಖಾತೆ ಕೊಡ್ತೇನೆ ನೋಡು ಎಂದು ಗದರಿಸುತ್ತ ಬಂದೀಖಾನೆ ಇತ್ಯಾದಿ ಪ್ರಮುಖವಲ್ಲದ ಖಾತೆ ಕೊಟ್ಟರು. ಯಾವ ಖಾತೆ ಆದರೇನು ಎಂದು ನಾನು ನಿಷ್ಠೆಯಿಂದ ಕೆಲಸ ಮಾಡಿದೆ.

ಸನ್ನಡತೆಯ ಕೈದಿಗಳ ಬಿಡುಗಡೆ ಸಮಾರಂಭಕ್ಕೆ ಅಂದಿನ ರಾಜ್ಯಪಾಲ ಖರ್ಷಿದ್ ಅಲಂ ಖಾನ್ ಅವರನ್ನು ಕರೆದಿದ್ದೆ. ಪಟೇಲರೂ ಜತೆಗಿದ್ದರು. ಆಗ ರಾಜ್ಯಪಾಲರು ನನ್ನ ಕಾರ್ಯಶೈಲಿ ಬಗ್ಗೆ ಪಟೇಲರಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದರ ಪರಿಣಾಮವೋ ಏನೋ‌. ಪಟೇಲರು ನನಗೆ ಬೆಂಗಳೂರು ನಗರಾಭಿವೃದ್ಧಿಯಂಥ ಮಹತ್ವದ ಖಾತೆಯ ಹೊಣೆಗಾರಿಕೆ ನೀಡಿದರು. ಬೆಂಗಳೂರಿನ ಹಲವಾರು ಫ್ಲೈ ಓವರ್, ಅಂಡರ್ ಪಾಸ್, ಕಾವೇರಿ ನಾಲ್ಕನೇ ಹಂತದ ಯೋಜನೆ ಸೇರಿದಂತೆ ದೂರದೃಷ್ಟಿಯ ಹಲವಾರು ಯೋಜನೆಗಳು ಆಗ ಜಾರಿಗೆ ಬಂದವು.

1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು

ಆದರೆ 1999ರಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಜನತಾದಳ ಒಡೆದು ಚೂರಾಗಿತ್ತು. ಯಾವ ಬಣದಲ್ಲಿ ಯಾರಿದ್ದಾರೆ ಎಂದು ತಿಳಿಯಲಾರದಷ್ಟು ಪರಿಸ್ಥಿತಿ ಡೋಲಾಯಮಾನವಾಗಿತ್ತು. ”ನೀನು ಕಾಂಗ್ರೆಸ್ ಸೇರು. ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಆಗೋದು ಖಚಿತ. ನಿನ್ನನ್ನು ಅವರು ಮಂತ್ರಿ ಮಾಡ್ತಾರೆ,” ಎಂದು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಸಲಹೆ ನೀಡಿದರು. ನಾನು ಕಾಂಗ್ರೆಸ್ ಸೇರಲು ನಿರ್ಧರಿಸಿ ಕೃಷ್ಣ ಅವರ ಮೇಲೆ ನಂಬಿಕೆ ಇಟ್ಟೆ. ದಿಲ್ಲಿವರೆಗೂ ಹೋಗಿ ಬಂದೆ. ಕಾಂಗ್ರೆಸ್ ಟಿಕೆಟ್ ಕೊಡಿಸುತ್ತೇವೆ ಎಂದು ಹೇಳಿದವರು ಕೊನೇ ಕ್ಷಣದಲ್ಲಿ ಕೈ ಎತ್ತಿದರು.

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ನನಗೆ ಕರೆ ಮಾಡಿ, ನಾಳೆ ಬೆಳಗ್ಗೆಯೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಸೂಚಿಸಿದರು. ನಿನಗೆ ಟಿಕೆಟ್ ಕೊಡದೇ ಇದ್ದುದು ಗೊತ್ತಾಗಿ ಬೇಸರವಾಯಿತು. ನಿನ್ನಂಥ ಕೆಲಸಗಾರ ಈ ಕ್ಷೇತ್ರಕ್ಕೆ ಬೇಕು. ನಿನ್ನ ಬೆಂಬಲಕ್ಕೆ ನಾವಿದ್ದೇವೆ. ಈಗಷ್ಟೇ ಕಾಲಭೈರವನ ಪೂಜೆ ಮುಗಿಸಿ ಬಂದಿದ್ದೇನೆ. ನಿನಗೆ ಒಳ್ಳೆಯದಾಗುತ್ತದೆ ಎಂದು ಹರಸಿದರು.

ಮರುದಿನ ನಾಮಪತ್ರ ಸಲ್ಲಿಸುವಾಗ ಸಾವಿರಾರು ಜನ ಸೇರಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ನಿಂತು ನಾನು ಭಾರೀ ಮತಗಳ ಅಂತರದಿಂದ ಜಯಶಾಲಿಯಾದೆ. ನನ್ನ ಗೆಲುವಿನ ಆರ್ಭಟ ಕಂಡು ಎಲ್ಲ ಪಕ್ಷಗಳ ಹಿರಿಯ ಮುಖಂಡರೂ ಅಚ್ಚರಿಪಟ್ಟರು.

ಬದಲಾದ ಸನ್ನಿವೇಶದಲ್ಲಿ 2004ರಲ್ಲಿ ಬಿನ್ನಿಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತು ಮೂರನೇ ಬಾರಿ ಆಯ್ಕೆ ಆದೆ. 2008ರಲ್ಲಿ ಮತ್ತೆ ಕಾಂಗ್ರೆಸ್ ನಿಂದ ಗೋವಿಂದರಾಜ ನಗರ ಕ್ಷೇತ್ರದಿಂದ ಗೆಲುವು ಸಾಧಿಸಿದೆ.
2010ರಲ್ಲಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಆಗಿ ಆಹಾರ-ನಾಗರಿಕ ಪೂರೈಕೆ, ಮುಜರಾಯಿ ಮತ್ತು ವಸತಿ ಸಚಿವನಾಗಿ ಕಾರ್ಯ ನಿರ್ವಹಿಸಿದೆ. 2016ರಲ್ಲಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಎರಡನೇ ಬಾರಿ ಆಯ್ಕೆಯಾದೆ. 2019ರಲ್ಲಿ ಗೋವಿಂದರಾಜ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಿಂತು ಭಾರಿ ಮತಗಳ ಅಂತರದಿಂದ ಜಯ ಸಾಧಿಸಿದೆ. ಮೊದಲು ತೋಟಗಾರಿಕೆ ಮತ್ತು ರೇಷ್ಮೆ ಖಾತೆ ನೀಡಿದ್ದರು. ಬಳಿಕ 2021ರಲ್ಲಿ ಮಹತ್ವದ ವಸತಿ ಮತ್ತು ಮೂಲ ಸೌಕರ್ಯ ಖಾತೆಗಳ ಹೊಣೆಗಾರಿಕೆ ನೀಡಿದರು.

2023ರ ವಿಧಾನಸಭೆ ಚುನಾವಣೆಯಲ್ಲಿ ಸೋಮಣ್ಣಗೆ ಡಬಲ್‌ ಸೋಲು

ಗೋವಿಂದರಾಜ ನಗರ ಕ್ಷೇತ್ರದಿಂದಲೇ ವಿಧಾನಸಭೆ ಚುನಾವಣೆಗೆ ನಿಲ್ಲಲು ವಿ ಸೋಮಣ್ಣ ತಯಾರಿ ನಡೆಸಿದ್ದರು. ಆದರೆ ಬಿಜೆಪಿ ಹೈಕಮಾಂಡ್‌ ಇವರಿಗೆ ಗೋವಿಂದರಾಜ ನಗರದಲ್ಲಿ ಟಿಕೆಟ್‌ ನೀಡದೆ ಚಾಮರಾಜ ನಗರ ಮತ್ತು ಸಿದ್ದರಾಮಯ್ಯ ಅವರು ಸ್ಪರ್ಧಿಸಿದ್ದ ವರುಣ ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಿತು. ಸೋಮಣ್ಣ ಅವರು ಚುನಾವಣೆ ಎದುರಿಸಿದರು. ಆದರೆ ಎರಡೂ ಕ್ಷೇತ್ರಗಳಲ್ಲಿ ಸೋತು ಹೋದರು. ಆದರೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಹೈಕಮಾಂಡ್‌ ತುಮಕೂರು ಕ್ಷೇತ್ರದ ಟಿಕೆಟ್‌ ನೀಡಿತು. ಸೋಮಣ್ಣ ಅವರು ಇಲ್ಲಿ ನಿರಾಯಾಸವಾಗಿ ಗೆದ್ದರು. ಜತೆಗೆ ಕೇಂದ್ರದಲ್ಲಿ ಮಂತ್ರಿಯೂ ಆದರು!

Continue Reading
Advertisement
Shikakai For Hair
ಆರೋಗ್ಯ18 mins ago

Shikakai For Hair: ತಲೆ ಕೂದಲಿಗೆ ಶ್ಯಾಂಪೂ ಒಳ್ಳೆಯದೋ ಸೀಗೆಕಾಯಿ ಸೂಕ್ತವೋ?

Karnataka Weather Forecast
ಮಳೆ48 mins ago

Karnataka Weather : ಮುಂದಿನ 48 ಗಂಟೆಯಲ್ಲಿ ಗುಡುಗು ಸಹಿತ ಭಾರಿ ಮಳೆ; ರೆಡ್‌ ಅಲರ್ಟ್‌ ಘೋಷಣೆ

Modi Cabinet
ಸಂಪಾದಕೀಯ1 hour ago

ವಿಸ್ತಾರ ಸಂಪಾದಕೀಯ: 3ನೇ ಬಾರಿಯ ‘ವಿಸ್ತೃತ’ ಸರ್ಕಾರವು ‘ವಿಕಸಿತ ಭಾರತ’ಕ್ಕೆ ಶ್ರಮಿಸಲಿ

Health Tips Kannada
ಆರೋಗ್ಯ1 hour ago

Health Tips Kannada: ಉಪ್ಪು ತಿನ್ನುವುದು ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಮುಖ್ಯ!

Dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರು ವಿನಾ ಕಾರಣ ಎಲ್ಲದಕ್ಕೂ ಮೂಗು ತೂರಿಸುವುದು ಬೇಡ!

ind vs pak
ಪ್ರಮುಖ ಸುದ್ದಿ6 hours ago

IND vs PAK : ಭಾರತದ ಎದುರು ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗ; ಕಡಿಮೆ ಸ್ಕೋರ್ ಇದ್ದಾಗಲೂ 6 ರನ್ ಸೋಲು

Stabbing in Mangalore:
ಪ್ರಮುಖ ಸುದ್ದಿ7 hours ago

Stabbing in Mangalore : ವಿಜಯೋತ್ಸವ ಮುಗಿಸಿ ಮನೆಗೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಚಾಕು ಇರಿತ

Modi 3.0 Cabinet
ದೇಶ7 hours ago

Modi 3.0 Cabinet: ಮೋದಿ ನೂತನ ಸಂಪುಟದಿಂದ ಸ್ಮೃತಿ ಇರಾನಿ ಸೇರಿ ಯಾರಿಗೆಲ್ಲ ಕೊಕ್?‌ ಇಲ್ಲಿದೆ ಮಾಹಿತಿ

IND vs PAK:
ಪ್ರಮುಖ ಸುದ್ದಿ8 hours ago

IND vs PAK : ವಿರಾಟ್​ ಕೊಹ್ಲಿಯಿಂದ ಆಟೋಗ್ರಾಫ್ ಪಡೆದುಕೊಂಡ ಕ್ರಿಸ್​ ಗೇಲ್​! ಇಲ್ಲಿದೆ ವಿಡಿಯೊ

Veeraloka
Latest9 hours ago

Veeraloka Books : ಹೊಸ ಲೇಖಕರಿಗೆ ವೀರಲೋಕ ಪ್ರಕಾಶನ ಹೆದ್ದಾರಿಯನ್ನೇ ಸೃಷ್ಟಿಸಿದೆ: ಜಯಂತ್‌ ಕಾಯ್ಕಿಣಿ ಶ್ಲಾಘನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ7 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ7 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌