Karnataka Rajyotsava : ಕನ್ನಡ ರಾಜ್ಯೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ಅನ್ನದಾನೀಶ್ವರ ಶ್ರೀಗಳಿಗೆ ಅಪಮಾನ; ಡಿಸಿಗೆ ಮನವಿ - Vistara News

ಕರ್ನಾಟಕ

Karnataka Rajyotsava : ಕನ್ನಡ ರಾಜ್ಯೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ಅನ್ನದಾನೀಶ್ವರ ಶ್ರೀಗಳಿಗೆ ಅಪಮಾನ; ಡಿಸಿಗೆ ಮನವಿ

Karnataka Rajyotsava : ಕನ್ನಡ ರಾಜ್ಯೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ಮುಂಡರಗಿ ಸಂಸ್ಥಾನಮಠದ ಜ.ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳ ಹೆಸರನ್ನು ಕೊನೆಯಲ್ಲಿ ಹಾಕಿ ಅವಮಾನ ಮಾಡಲಾಗಿದೆ ಎಂದು ಭಕ್ತವೃಂದ ಆಕ್ರೋಶಗೊಂಡಿದೆ. ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮುಂದೆ ಇಂತಹ ಪ್ರಮಾದ ಆಗದಂತೆ ಕ್ರಮ ವಹಿಸಲು ಒತ್ತಾಯಿಸಿವೆ.

VISTARANEWS.COM


on

Mundaragi Dr Annadaneshwara Mahashivayogi Swamiji
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗದಗ: ಕನ್ನಡ ಸಾಹಿತ್ಯ ಲೋಕಕ್ಕೆ ಇಡೀ ಜೀವನವನ್ನೇ ಸವೆಸಿದ, ನಡೆದಾಡುವ ವಿಶ್ವವಿದ್ಯಾಲಯವೆಂದೇ ಖ್ಯಾತಿ ಪಡೆದಿರುವ ಹಿರಿಯ ಮಠಾಧೀಶರಾದ ಮುಂಡರಗಿ ಸಂಸ್ಥಾನಮಠದ ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳಿಗೆ (Dr Annadaneshwara Mahashivayogi Swamiji) ಮುಂಡರಗಿ ತಾಲೂಕು ಆಡಳಿತವು ಅಗೌರವ ತೋರಿದೆ ಎಂದು ಜನಾಕ್ರೋಶ ವ್ಯಕ್ತವಾಗಿದೆ. ನವೆಂಬರ್‌ 1ರಂದು ತಾಲೂಕು ಆಡಳಿತದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ (Karnataka Rajyotsava) ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಮಹಾ ಸ್ವಾಮೀಜಿಯವರ ಹೆಸರನ್ನು ಸಾಮಾನ್ಯರ ಸಾಲಿನಲ್ಲಿ ಮುದ್ರಣ ಮಾಡಿರುವುದು ಈಗ ತಾಲೂಕು ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ. ಇದು ಸ್ವಾಮೀಜಿಯವರಿಗೆ ತೋರಿದ ಅಗೌರವ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ. ಅಲ್ಲದೆ, ಮುಂದೆ ಇಂತಹ ಅಚಾತುರ್ಯ ನಡೆಯದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ.

ಗದಗ ಜಿಲ್ಲೆ ಮುಂಡರಗಿ ಸಂಸ್ಥಾನಮಠದ ಜ.ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ನಡೆದಾಡುವ ವಿಶ್ವವಿದ್ಯಾಲಯವೆಂದೇ ಖ್ಯಾತಿ ಪಡೆದಿದ್ದಾರೆ.ನೂರಾರು ಕೃತಿಗಳ ರಚನೆ, ಪ್ರಕಟಣೆ ಸೇರಿದಂತೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಶ್ರೀಗಳ ಕೊಡುಗೆ ಅನನ್ಯವಾಗಿದೆ.

Mundaragi Dr Annadaneshwara Mahashivayogi Swamiji

ಇದನ್ನೂ ಓದಿ: Fraud Case : ಎನ್ವಿ ಗ್ರೀನ್ ಕಂಪನಿ ಮಾಲೀಕನ ವಿರುದ್ಧ ಎಫ್ಐಆರ್; ಕೋಟಿ ವಂಚಿಸಿದ್ರಾ ಅಶ್ವತ್ಥ್‌ ಹೆಗ್ಡೆ?

ಡಾ. ಅನ್ನದಾನೀಶ್ವರ ಶ್ರೀಗಳು ಮಠಾಧೀಶರಾದರೂ ಧಾರ್ಮಿಕ ಕ್ಷೇತ್ರದ ಜತೆ ಜತೆಗೆ ಶಿಕ್ಷಣ, ಸಾಹಿತ್ಯ, ಕೃಷಿ, ಸಮಾಜ ಸೇವೆ, ವಿಜ್ಞಾನ, ಆರೋಗ್ಯ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರೀಗಳು ರಚಿಸಿರುವ ಗ್ರಂಥಗಳು ಇಂಗ್ಲಿಷ್ ಭಾಷೆ ಸೇರಿದಂತೆ ಹಲವು ಭಾಷೆಗಳಿಗೆ ಭಾಷಾಂತರಗೊಂಡಿವೆ. ಡಾ. ಅನ್ನದಾನೀಶ್ವರ ಸ್ವಾಮೀಜಿಗಳ ಸಾಹಿತ್ಯ ಕೃಷಿಯನ್ನು ಪರಿಗಣಿಸಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ನಾಡೋಜ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅಲ್ಲದೆ, ಹಲವಾರು ಪ್ರಶಸ್ತಿ ಪುರಸ್ಕಾರಗಳು ಶ್ರೀಗಳನ್ನು ಅರಸಿ ಬಂದಿವೆ.

Mundaragi Dr Annadaneshwara Mahashivayogi Swamiji
ತಾಲೂಕು ಆಡಳಿತಕ್ಕೆ ಮನವಿ ನೀಡಿದ ಭಕ್ತ ವೃಂದ

ಮಹಿಳಾ ವಿವಿಯಲ್ಲಿ ಜಗದ್ಗುರು ಅನ್ನದಾನೀಶ್ವರ ಅಧ್ಯಯನ ಪೀಠ

ಡಾ. ಅನ್ನದಾನೀಶ್ವರ ಶ್ರೀಗಳ ಸಮಗ್ರ ಸಾಹಿತ್ಯದ ಮೇಲೆ 19 ಸಂಪುಟಗಳು ಬಿಡುಗಡೆಗೊಂಡಿದ್ದು, ಶ್ರೀಗಳ ಸಾಹಿತ್ಯದ ಮೇಲೆ ಈಗಾಗಲೇ ಐದು ಜನ ಪಿಎಚ್.ಡಿ ಪದವಿ ಹಾಗೂ ಹಲವು ಜನ ಎಂಫಿಲ್ ಪದವಿ ಪಡೆದಿದ್ದಾರೆ. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಜಗದ್ಗುರು ಅನ್ನದಾನೀಶ್ವರ ಅಧ್ಯಯನ ಪೀಠವನ್ನು ತೆರೆಯಲಾಗಿದೆ‌.

ಮುಂಡರಗಿಗೆ ನೀಡಿದ ಕೊಡುಗೆ ಅನನ್ಯ

ಇದೇ ಮುಂಡರಗಿ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಭವನಕ್ಕೆ, ವಿಜ್ಞಾನ ಭವನಕ್ಕೆ ಹಾಗೂ ಆಸ್ಪತ್ರೆ, ಕ್ರೀಡಾಂಗಣ, ಸೇರಿದಂತೆ ಹಲವು ಗ್ರಾಮಗಳಲ್ಲಿನ ಶಾಲಾ ಕಾಲೇಜು, ವಸತಿ ನಿಲಯದ ಕಟ್ಟಡಗಳಿಗೆ ಉಚಿತವಾಗಿ ಭೂಮಿ ಸೇರಿದಂತೆ ಹಣದ ಸಹಾಯ, ಸಹಕಾರವನ್ನು ಡಾ. ಅನ್ನದಾನೀಶ್ವರ ಸ್ವಾಮೀಜಿಗಳು ನೀಡಿದ್ದಾರೆ.

ಆಮಂತ್ರಣ ಪತ್ರಿಕೆಯಲ್ಲಿ ಕೊನೆಯ ಸಾಲು!

ಈಗ ಮುಂಡರಗಿ ತಾಲೂಕು ಆಡಳಿತ ವ್ಯವಸ್ಥೆ ಹಾಗೂ ತಾಲೂಕು ರಾಜ್ಯೋತ್ಸವ ಸಮಿತಿಯು ಡಾ. ಅನ್ನದಾನೀಶ್ವರ ಶ್ರೀಗಳ ಹೆಸರನ್ನು ಕೊನೆಯ ಸಾಲಿನಲ್ಲಿ ಹಾಕಿ ಪ್ರಮಾದ ಎಸಗಿದೆ. ಶ್ರೀಗಳ ಹೆಸರನ್ನು ಕರ್ನಾಟಕ ರಾಜ್ಯೋತ್ಸವದ ಸಂಭ್ರಮದ ಆಮಂತ್ರಣ ಪತ್ರಿಕೆಯಲ್ಲಿ ಮೊದಲಿನ ಸಾನಿಧ್ಯ ಸ್ಥಾನವನ್ನು ನೀಡುವುದು ಇದುವರೆಗೆ ನಡೆದುಕೊಂಡು ಬಂದ ಪದ್ಧತಿಯಾಗಿತ್ತು. ಆದರೆ, ಈಗ ಆಮಂತ್ರಣ ಪತ್ರಿಕೆಯಲ್ಲಿ ಕಾರ್ಯಕ್ರಮದ ಪಟ್ಟಿಯ ಕೊನೇ ಸಾಲಿನಲ್ಲಿ ಮುದ್ರಿಸಿರುವುದು ಭಕ್ತವೃಂದದ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Chaitra Fraud Case : ಚೈತ್ರಾ ವಂಚನೆ ಪ್ರಕರಣ; ಸಿಸಿಬಿ ತನಿಖೆ ಪೂರ್ಣ, ಮುಂದಿನ ವಾರ ಚಾರ್ಜ್‌ಶೀಟ್‌?

ಅಲ್ಲದೆ, ಈ ವಿಚಾರದ ಬಗ್ಗೆ ರಾಜ್ಯೋತ್ಸವಕ್ಕೆ ಆಗಮಿಸಿದ್ದ ಕಾರ್ಯಕ್ರಮದಲ್ಲಿಯೇ ಸ್ವತಃ ಡಾ. ಅನ್ನದಾನೀಶ್ವರ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಅಪಮಾನವು ಕನ್ನಡ ತಾಯಿಗೆ ಮಾಡಿರುವುದಾಗಿದೆ ಎಂದು ಹೇಳಿದ್ದರು.

ಹಾರಿಕೆ ಉತ್ತರ ನೀಡುತ್ತಿರುವ ಅಧಿಕಾರಿಗಳು

ಈ ವಿಚಾರಕ್ಕೆ ತಾಲೂಕಿನ ದಂಡಾಧಿಕಾರಿಯನ್ನು ಪ್ರಶ್ನೆ ಮಾಡಿದಾ, ಸರ್ಕಾರಿ ಶಿಷ್ಟಾಚಾರದ ಪ್ರಕಾರವಾಗಿ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿದೆ. ಕಳೆದ ವರ್ಷದ ಆಮಂತ್ರಣ ಪತ್ರಿಕೆಯನ್ನು ನೋಡಿಯೇ ಈ ವರ್ಷವೂ ಅದೇ ರೀತಿ ಮುದ್ರಿಸಲಾಗಿದೆ. ಮುಂಬರುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಶಿಷ್ಟಾಚಾರ ನಿಯಮವನ್ನು ಬದಲಾಯಿಸಿಕೊಳ್ಳುತ್ತೇವೆ ಎಂದು ಹಾರಿಕೆ ಉತ್ತರ ನಿಡಿದ್ದಾರೆ.

ಜಿಲ್ಲಾಧಿಕಾರಿಗೆ ಮನವಿ

ಈಗ ಡಾ. ಅನ್ನದಾನೀಶ್ವರ ಶ್ರೀಗಳ ಭಕ್ತವೃಂದದವರು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದು, ಇನ್ನು ಮುಂದೆ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶ್ರೀಗಳಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Mundaragi Dr Annadaneshwara Mahashivayogi Swamiji
ಜಿಲ್ಲಾಧಿಕಾರಿಗೆ ಮನವಿ ನೀಡಿದ ಭಕ್ತವೃಂದ

ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲೇನಿದೆ?

ಮುಂಡರಗಿಯ ಪರಮ ಪೂಜ್ಯ ಜಗದ್ಗುರು ನಾಡೋಜ ಡಾ|| ಅನ್ನದಾನೀಶ್ವರ ಮಹಾಶಿವಯೋಗಿಗಳು ಈ ನಾಡು ಕಂಡ ಅಪರೂಪ ಜಗದ್ಗುರುಗಳು. ತ್ರಿಭಾಷಾ ಪಂಡಿತರಾದ ಜಗದ್ಗುರುಗಳು ಈ ನಾಡಿನ ಸರ್ವಶ್ರೇಷ್ಠ ಸಾಹಿತಿಗಳಾಗಿ ಒಂದು ನೂರಾ ಐವತ್ತಕ್ಕಿಂತ ಹೆಚ್ಚು ಕೃತಿಗಳನ್ನು ರಚಿಸಿ ಈ ನಾಡಿನ ಸಾಹಿತ್ಯ ದೇವಿಯ ಸಿರಿವಂತಿಕೆಯನ್ನು ಹೆಚ್ಚಿಸಿದ್ದಾರೆ. ಪೂಜ್ಯರ ಸಾಹಿತ್ಯವನ್ನು ಕುರಿತು ಐದು ಜನ ವಿದ್ವಾಂಸರು ಮಹಾಪ್ರಬಂಧಗಳನ್ನು ರಚಿಸಿ ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್‌ ಪದವಿಯನ್ನು ಪಡೆದುಕೊಂಡಿದ್ದಾರೆ. ಶ್ರೀ ಮಠದಿಂದ ಸುಮಾರು ಎರಡು ನೂರಾ ಅರವತ್ತು ಪುಸ್ತಕಗಳನ್ನು ಪ್ರಕಟಿಸಿ ಸಾಹಿತ್ಯ ಜಗದ್ಗುರುಗಳು ಎಂಬ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ.

ಶಿಕ್ಷಣ ಪ್ರೇಮಿಗಳಾದ ಶ್ರೀ ಜಗದ್ಗುರು ಅನ್ನದಾನೀಶ್ವರ ಮಹಾಸ್ವಾಮಿಗಳು ಶೈಕ್ಷಣಿಕವಾಗಿ ತೀರಾ ಹಿಂದುಳಿದ ಮುಂಡರಗಿಯಲ್ಲಿ ಆರಂಭ ಮಾಡಿ ಬಡ ಮಕ್ಕಳಿಗೆ ನಿರಂತರವಾಗಿ ಜ್ಞಾನದಾಸೋಹ ಹಾಗೂ ಉಚಿತ ಪ್ರಸಾದ ದಾಸೋಹವನ್ನು ನೀಡಿ ಈ ಭಾಗ ಬಡ ವಿದ್ಯಾರ್ಥಿಗಳ ಕಾಮಧೇನು ಕಲ್ಪವೃಕ್ಷವಾಗಿದ್ದಾರೆ. ಪೂಜ್ಯರ ಅಹರ್ನಿಶಿ ಪ್ರಯತ್ನದಿಂದ ಇಂದು ನಾಡಿನಾದ್ಯಾಂತ ಮೂವತ್ತೆರಡು ಅಂಗ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವುದು ಅವರ ಶಿಕ್ಷಣ ಪ್ರೇಮ ಹಾಗೂ ಕಾರ್ಯದಕ್ಷತೆಗೆ ಕನ್ನಡಿ ಹಿಡಿಯುತ್ತದೆ. ಇಂತಹ ವಿದ್ಯಾ ಸಂಸ್ಥೆಗಳನ್ನು ಗ್ರಾಮೀಣ ಭಾಗದಲ್ಲಿ ನಡೆಸುವುದರಿಂದ ಅನೇಕರಿಗೆ ಉದ್ಯೋಗವನ್ನು ನೀಡಿ ಅವರ ಬಾಳಿಗೆ ದಾರಿ ದೀಪವಾಗಿದ್ದಾರೆ.

ಕೋಡಗೈ ದಾನಿಗಳಾದ ಪರಮ ಪೂಜ್ಯ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳು ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಸದಾ ಧನಸಹಾಯ ನೀಡುವುದರೊಂದಿಗೆ ಸುಮಾರು ಒಂದು ನೂರು ಎಕರೆ ಭೂಮಿಯನ್ನು ದಾನ ಮಾಡಿ ಈ ಭಾಗದ ಪುಣ್ಯಪುರುಷರೆಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.

ಪರಮ ಪೂಜ್ಯ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳು ಎಂಬತ್ತರ ಇಳಿ ವಯಸ್ಸಿನಲ್ಲಿಯೂ ಧರ್ಮ ಪ್ರಸಾರ ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಂಡು ಭಕ್ತ ಜನರನ್ನು ಧರ್ಮದ ಹಾದಿಯಲ್ಲಿ ನಡೆಸಿದ್ದಾರೆ. ಸಮಾಜ ಸೇವೆಯೆ ಶಿವಪೂಜೆ ಎಂದು ಭಾವಿಸಿ ಹಗಲಿರುಳು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಆದರ್ಶವಾಗಿದೆ.

ಇದನ್ನೂ ಓದಿ: Karnataka Politics : 6 ತಿಂಗಳಾದರೂ ಸುಧಾರಿಸದ ಸರ್ಕಾರ, ಹಿಡಿತವಿಲ್ಲದ ಸಿಎಂ; ಬಿಜೆಪಿಯಿಂದ ಉಗ್ರ ಹೋರಾಟ: ಬಿಎಸ್‌ವೈ

ಪರಮ ಪೂಜ್ಯ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳು ಸಾಹಿತ್ಯಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಸಾಧನೆಗಳನ್ನು ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪದವಿಯನ್ನು ನೀಡಿದರೆ, ಹಂಪಿಯ ಕನ್ನಡ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕನ್ನಡ ನಾಡಿಗೆ ಇಂತಹ ಮಹದುಪಕಾರವನ್ನು ಮಾಡಿದ ಪರಮ ಪೂಜ್ಯ ಜಗದ್ಗುರುಗಳಿಗೆ 2023ರ ನವೆಂಬರ್‌ 1ರಂದು ಜರುಗಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸೂಕ್ತ ಸ್ಥಾನ ಮಾನವನ್ನು ನೀಡದೆ, ತಾಲೂಕು ಆಡಳಿತ ಅವರಿಗೆ ಅಗೌರವವನ್ನು ಮಾಡಿದೆ. ಈ ಕಾರ್ಯವೈಖರಿಯಿಂದ ಪೂಜ್ಯ ಜಗದ್ಗುರುಗಳ ಮನಸ್ಸಿಗೆ ನೋವಾಗಿದೆ. ಈ ಭಾಗದ ಭಕ್ತರಿಗೂ ಬಹಳಷ್ಟು ಬೇಸರವಾಗಿದೆ. ಆದ ಕಾರಣ ಭವಿಷ್ಯದಲ್ಲಿ ಇಂತಹ ಅವಘಡಗಳಿಗೆ ಅವಕಾಶ ಕೊಡದೆ ಸರ್ಕಾರಿ ಕಾರ್ಯಕ್ರಮಗಳನ್ನು ಸಂಯೋಜಿಸಬೇಕೆಂದು ಈ ಭಾಗದ ಸಮಗ್ರ ಜನತೆಯ ಪರವಾಗಿ ತಮ್ಮಲ್ಲಿ ನಮ್ರವಾಗಿ ವಿನಂತಿಸುತ್ತೇವೆ” ಎಂದು ಮುಂಡರಗಿಯ ಭಕ್ತ ಸಮೂಹವು ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

water crisis: ಕರ್ನಾಟಕಕ್ಕೆ ಜಲಾಘಾತ! ಹಳ್ಳಿ ಹಳ್ಳಿಯಲ್ಲಿ ನೀರಿಲ್ಲ; ಖಾಸಗಿ ಬೋರ್‌ವೆಲ್‌ನಿಂದ ಪೂರೈಕೆಗೆ ಸರ್ಕಾರ ಸೂಚನೆ

water crisis: ನಗರ ಪ್ರದೇಶಗಳ 52 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇದೆ. 1272 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಆಗಬಾರದು. 7200 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಆಗಬಹುದು. ಹೀಗಾಗಿ ಈಗಾಗಲೇ 7080 ಖಾಸಗಿ ಬೋರ್‌ವೆಲ್‌ಗಳನ್ನು ನೋಡಿದ್ದೇವೆ. ಮೇವು ಖರೀದಿಗೆ ಟೆಂಡರ್ ಆಗಿದೆ. ಜಿಲ್ಲೆಗೆ ಒಂದು ಗೋಶಾಲೆ ತೆರೆಯಲು ನಿರ್ಧಾರ ಮಾಡಲಾಗಿದೆ. ಹೋಬಳಿ ಮಟ್ಟದಲ್ಲಿ ಗೋಶಾಲೆ ಇಲ್ಲವೇ ಮೇವಿನ ಬ್ಯಾಂಕ್ ತೆರೆಯಲು ಸೂಚಿಸಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

VISTARANEWS.COM


on

Water crisis in Karnataka Govt orders supply from private borewells
Koo

ಬೆಂಗಳೂರು: ರಾಜ್ಯದ ಬೇಸಿಗೆ ಕಾಲ ಪ್ರಾರಂಭದಲ್ಲಿಯೇ ನೀರಿಗೆ ಹಾಹಾಕಾರ (water crisis) ಶುರುವಾಗಿದೆ. ಹಳ್ಳಿ ಹಳ್ಳಿಗಳಲ್ಲಿ ನೀರಿಗೆ ತತ್ವಾರ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ಇರುವ ಕಡೆಗೆ ಪೈಪ್‌ಲೈನ್‌ ಮೂಲಕ ನೀರು ಸರಬರಾಜು (Water supply through pipeline) ನಿರ್ಧಾರಕ್ಕೆ ಬರಲಾಗಿದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಮಾರ್ಚ್‌, ಏಪ್ರಿಲ್‌ನಲ್ಲಿ ಮೇವು ಹಾಗೂ ನೀರಿನ ಕೊರತೆ (Water scarcity) ಇನ್ನಷ್ಟು ಜಾಸ್ತಿಯಾಗಲಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು, ಸಿಇಒಗಳು ಹಾಗೂ ಎಸಿಗಳ ಜತೆ ಸಭೆ ಮಾಡಿದ್ದೇನೆ. ಖಾಸಗಿ ಬೋರ್‌ವೆಲ್‌ (Borewell water) ಮೂಲಕ ನೀರು ಕೊಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಮೇವು ಮತ್ತು ನೀರಿನ ಸಮಸ್ಯೆ ಇನ್ನಷ್ಟು ಜಾಸ್ತಿ ಆಗಲಿರುವ ಹಿನ್ನೆಲೆಯಲ್ಲಿ ಈಗಾಗಲೇ ಟೆಂಡರ್ ಮಾಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಟೆಂಡರ್ ಆಗಿದೆ. ತಾಲೂಕು ಮತ್ತು ಪಂಚಾಯಿತಿ ವ್ಯಾಪ್ತಿಯಲ್ಲಿ ಟೆಂಡರ್ ಮಾಡಲು ಸೂಚಿಸಲಾಗಿದೆ. ಪೈಪ್‌ಲೈನ್ ಮೂಲಕ ನೀರು ಕೊಟ್ಟರೆ ಜನರಿಗೆ ಸಮಾಧಾನವಾಗಲಿದೆ. ಬಿಂದಿಗೆಯಲ್ಲಿ ನೀರು ಕೊಟ್ಟರೆ ಯಾವುದಕ್ಕೂ ಸಾಲುವುದಿಲ್ಲ. ಇರುವ ಖಾಸಗಿ ಬೋರ್‌ವೆಲ್ ಮೂಲಕ ನೀರು ಒದಗಿಸುವಂತೆ ಸೂಚಿಸಿದ್ದೇವೆ. ಈಗಾಗಲೇ 116 ಹಳ್ಳಿಯಲ್ಲಿ 175 ಟ್ರಿಪ್ ನೀರು ಕೊಡುತ್ತಿದ್ದೇವೆ. 382 ಹಳ್ಳಿಗಳಲ್ಲಿ ಬಾಡಿಗೆ ಬೋರ್‌ವೆಲ್ ಮೂಲಕ ನೀರು ಕೊಡುತ್ತಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

Water crisis in Karnataka Govt orders supply from private borewells

ನಗರ ಪ್ರದೇಶಗಳ 52 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇದೆ. 1272 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಆಗಬಾರದು. 7200 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಆಗಬಹುದು. ಹೀಗಾಗಿ ಈಗಾಗಲೇ 7080 ಖಾಸಗಿ ಬೋರ್‌ವೆಲ್‌ಗಳನ್ನು ನೋಡಿದ್ದೇವೆ. ಮೇವು ಖರೀದಿಗೆ ಟೆಂಡರ್ ಆಗಿದೆ. ಜಿಲ್ಲೆಗೆ ಒಂದು ಗೋಶಾಲೆ ತೆರೆಯಲು ನಿರ್ಧಾರ ಮಾಡಲಾಗಿದೆ. ಹೋಬಳಿ ಮಟ್ಟದಲ್ಲಿ ಗೋಶಾಲೆ ಇಲ್ಲವೇ ಮೇವಿನ ಬ್ಯಾಂಕ್ ತೆರೆಯಲು ಸೂಚಿಸಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಹಿಂದಿನ ನೀರಿನ ಬಿಲ್‌ ಕೊಡುತ್ತೇವೆ

ನವೆಂಬರ್ ಬಳಿಕ ಖಾಸಗಿ ಬೋರ್‌ವೆಲ್‌ ಮೂಲಕ ನೀರು ಪೂರೈಕೆ ಮಾಡಿದ್ದರೆ ನಾವು ಅದರ ಹಣವನ್ನು ನೀಡುತ್ತೇವೆ. ಅದಕ್ಕಿಂತ ಹಳೆಯ ಬಿಲ್‌ಗೆ ಪಾವತಿ ಮಾಡುವುದಿಲ್ಲ. ಇದನ್ನು ಜಿಲ್ಲಾಧಿಕಾರಿಗಳು ನಿರ್ವಹಣೆ ಮಾಡಲಿದ್ದಾರೆ. ಇನ್ನು ಹತ್ತು ದಿನಗಳ ಒಳಗೆ ನವೆಂಬರ್ ಬಳಿಕ ಪಡೆದ ಬೋರ್ವೆಲ್‌ ನೀರು ಪೂರೈಕೆಗೆ ಹಣ ಕೊಡಲು ಸೂಚಿಸಿದ್ದೇನೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬೆಂಗಳೂರಲ್ಲೂ ನೀರಿನ ಸಮಸ್ಯೆ

ಬೆಂಗಳೂರು ನೀರಿನ ಸಮಸ್ಯೆ ಬಗ್ಗೆ ಚರ್ಚೆ ಆಗುತ್ತಿದೆ. ಕಂದಾಯ ಇಲಾಖೆಯಿಂದ ನೀರು ಕೊಡುತ್ತೇವೆ. ಬಿಬಿಎಂಪಿ ಜತೆ ಸೇರಿ ನೀರು ಪೂರೈಕೆಗೆ ಕ್ರಮವಹಿಸಲಾಗುತ್ತಿದೆ. ಟ್ಯಾಂಕರ್ ನೀರಿಗೆ ದುಬಾರಿ ಹಣ ಪಡೆಯುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದಿದ್ದು, ಇದನ್ನು ತಡೆಯಲು ಬಿಬಿಎಂಪಿ ಮುಂದಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಶೀಘ್ರ ಸರ್ವೆಯರ್‌ಗಳ ನೇಮಕ

ನಾವು ಸರ್ವೆಗೆ ಹೆಚ್ಚಿನ‌ ಒತ್ತು ಕೊಟ್ಟಿದ್ದೇವೆ. ಸರ್ಕಾರಿ ಭೂಮಿ ಮಂಜೂರಾಗಿರುತ್ತದೆ. ಆದರೆ, ಅವರಿಗೆ ಪೋಡಿ ಆಗಿರುವುದಿಲ್ಲ. ಇದರ ಬಗ್ಗೆ ಹೆಚ್ಚಿನ‌ ಗಮನ ನೀಡುತ್ತೇವೆ. 991 ಪರವಾನಗಿ ಪಡೆದಿರುವ ಸರ್ವೆಯರ್‌ಗಳನ್ನು ಎಲ್ಲ ಜಿಲ್ಲೆಗೆ ಒದಗಿಸುತ್ತೇವೆ. 364 ಮಂದಿಯನ್ನು ಸರ್ಕಾರದಿಂದ ನೇಮಕ ಮಾಡಿಕೊಳ್ಳಲಾಗುತ್ತದೆ. ಕೆಪಿಎಸ್‌ಸಿಯಿಂದ ನೇಮಕ ಪ್ರಕ್ರಿಯೆ ನಡೆಸಲಾಗುತ್ತದೆ. ಈ ಸಂಬಂಧ ಶೀಘ್ರವೇ ನೋಟಿಫಿಕೇಶನ್‌ ಹೊರಬೀಳಲಿದೆ. 27 ಸರ್ವೆ ಅಸಿಸ್ಟೆಂಟ್ ಡೈರೆಕ್ಟರ್‌ಗಳ ನೇಮಕ ನಡೆಯಲಿದೆ. ಪ್ರತಿಯೊಂದು ತಾಲೂಕಿಗೆ ಆಧುನಿಕ ಉಪಕರಣವನ್ನು ನೀಡಲಾಗುತ್ತದೆ. 18 ಕೋಟಿ ರೂ. ವೆಚ್ಚದಲ್ಲಿ‌ ರೋವರ್ಸ್ ಖರೀದಿ ಮಾಡಲಾಗುತ್ತದೆ. ಎರಡು ತಿಂಗಳಲ್ಲಿ ಆರ್‌ಟಿಸಿ ಆಕಾರಬಂದ್ ನಿಗದಿ ಪಡಿಸಲು ಸೂಚನೆ ನೀಡಿದ್ದೇನೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಇದನ್ನೂ ಓದಿ: Arecanut Price: ಅಡಿಕೆ ಧಾರಣೆಯಲ್ಲಿ ದಿಢೀರ್‌ ಕುಸಿತ; ಬೆಲೆ ಇಳಿಕೆಗೆ ಅಕ್ರಮ ಸಾಗಣೆ ಕಾರಣವೇ?

ತಹಸೀಲ್ದಾರ್‌ ಕೋರ್ಟ್‌ನಲಿ ಶೀಘ್ರ ಇತ್ಯರ್ಥ

ತಹಸೀಲ್ದಾರ್ ಕೋರ್ಟ್‌ನಲ್ಲಿ‌ ಕೇಸ್ ಇತ್ಯರ್ಥಕ್ಕೆ 212 ದಿನ ತೆಗೆದುಕೊಳ್ಳುತ್ತಿತ್ತು. ಸರ್ಕಾರದ ಗೈಡ್‌ಲೈನ್‌ನಲ್ಲಿರೋದು 62 ದಿನವಾಗಿದೆ. ಈಗ 92 ದಿನದಲ್ಲೇ ಕ್ಲಿಯರ್ ಮಾಡುತ್ತಿದ್ದೇವೆ. 70 ದಿನದಲ್ಲಿ ಕೇಸ್ ಇತ್ಯರ್ಥಕ್ಕೆ ಮುಂದಾಗಿದ್ದೇವೆ. 2215 ಕೇಸ್‌ಗಳು ವರ್ಷವಾದರೂ ಇತ್ಯರ್ಥವಾಗದೇ ಇದ್ದವು. ಈಗ ಒಂದು ವರ್ಷದಲ್ಲಿ ಎಲ್ಲ ಕೇಸ್ ಕ್ಲಿಯರ್ ಮಾಡಿದ್ದೇವೆ. ಎಸಿ ಕೋರ್ಟ್‌ನಲ್ಲಿ 5 ವರ್ಷಕ್ಕಿಂತ ಹಿಂದಿನ ಕೇಸ್‌ಗಳು ಬಾಕಿ ಇವೆ. 32787 ಕೇಸ್‌ಗಳು ಪೆಂಡಿಂಗ್‌ ಇದ್ದವು. ಈಗ ಕೇವಲ 7000 ಕೇಸ್‌ಗಳು ಮಾತ್ರ ಪೆಂಡಿಂಗ್ ಇವೆ. 20, 25 ಸಾವಿರ ಕೇಸ್‌ಗಳನ್ನು ಕ್ಲಿಯರ್‌ ಮಾಡಿದ್ದೇವೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

Continue Reading

ಬೆಂಗಳೂರು

blast in bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಜಸ್ಟ್‌ 10 ಸೆಕೆಂಡ್‌ ಅಂತರದಲ್ಲಿ ಎರಡೆರಡು ಬಾರಿ ಸ್ಫೋಟ!

blast in bengaluru : ಕೆಫೆ ಫೇಮಸ್‌ ಆಗಿದ್ದರಿಂದಲೇ ವಿರೋಧಿಗಳು ಈ ರೀತಿಯ ಕೃತ್ಯ ಎಸಗಿದ್ದರಾ ಎಂಬ ಅನುಮಾನಗಳು ಮೂಡಿವೆ. ರಾಮೇಶ್ವರಂ ಕೆಫೆಯಲ್ಲಿ ಜಸ್ಟ್‌ 10 ಸೆಕೆಂಡ್‌ ಅಂತರದಲ್ಲಿ ಎರಡೆರಡು ಬಾರಿ ಸ್ಫೋಟಗೊಂಡಿತ್ತು ಎನ್ನಲಾಗಿದೆ.

VISTARANEWS.COM


on

By

rameshwaram cafe bengaluru incident
Koo

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟವು ಆತಂಕವನ್ನು ಹೆಚ್ಚಿಸಿದೆ. ಈ ನಡುವೆ ಹೋಟೆಲ್‌ ಉದ್ಯಮದಲ್ಲಿ ರಾಮೇಶ್ವರಂ ಕೆಫೆಯ ಬೆಳವಣಿಗೆ ಸಹಿಸಲು ಆಗದೇ ಇರುವವರೇ ಗ್ರಾಹಕರ ಸೋಗಿನಲ್ಲಿ ಬಂದು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

ಈ ಬಗ್ಗೆ ರಾಮೇಶ್ವರಂ ಕೆಫೆ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ವಿಸ್ತಾರ ನ್ಯೂಸ್‌ ಜತೆಗೆ ಪ್ರತಿಕ್ರಿಯಿಸಿದ್ದಾರೆ. ಕೆಫೆಯಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಫೆಯಲ್ಲಿ ಯಾವುದೇ ಶಾರ್ಟ್‌ ಸರ್ಕ್ಯೂಟ್‌ ಆಗಲಿ, ಸಿಲಿಂಡರ್‌ ಸ್ಫೋಟವಾಗಿಲ್ಲ. ಬದಲಿಗೆ ಕೆಫೆಯ ಕೈ ತೊಳೆಯುವ ಜಾಗದಲ್ಲಿ ಸ್ಫೋಟವಾಗಿದೆ.

ಇದು ಹೊರಗಿನಿಂದ ತಂದಿಟ್ಟಿದ್ದ ಬ್ಯಾಗ್‌ ಸ್ಫೋಟಗೊಂಡಿದೆ. 10 ಸೆಕೆಂಡ್ ಅಂತರದಲ್ಲಿ 2 ಬಾರಿ ಸ್ಫೋಟವಾಗಿದೆ. ಮೇಲ್ನೋಟಕ್ಕೆ ಗ್ರಾಹಕರ ಸೋಗಿನಲ್ಲಿ ಬಂದು ಈ ಕೃತ್ಯ ಎಸಗಿರುವುದು ಸ್ಪಷ್ಟವಾಗಿದೆ ಎಂದಿದ್ದಾರೆ. ತನಿಖೆಯ ದೃಷ್ಟಿಯಿಂದ ಪೊಲೀಸರಿಗೆ ಸಿಸಿಟಿವಿ ಫೋಟೇಜ್‌ಗಳನ್ನು ಕೊಟ್ಟಿದ್ದೇವೆ. ತನಿಖೆಯಿಂದ ಎಲ್ಲವೂ ಬಯಲಾಗಲಿದೆ ಎಂದು ದಿವ್ಯಾ ತಿಳಿಸಿದ್ದಾರೆ.

ಈ ಘಟನೆಯಿಂದ ನಾನು ಅಘಾತಕ್ಕೆ ಒಳಗಾಗಿದ್ದೇನೆ. ನಮ್ಮ ಇತರೆ ಔಟ್‌ಲೇಟ್‌ಗಳಿಗೂ ಭದ್ರತೆ ಕೊಡುವಂತೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಈ ಘಟನೆಯಲ್ಲಿ ಮೂವರು ಸಿಬ್ಬಂದಿಗೆ, ಇಬ್ಬರು ಗ್ರಾಹಕರು ಗಾಯಗೊಂಡಿದ್ದಾರೆ ಎಂದು ದಿವ್ಯಾ ಮಾಹಿತಿ ನೀಡಿದ್ದಾರೆ.

ರಾಮೇಶ್ವರಂ ಕೆಫೆಯಲ್ಲಿ ಊಟಕ್ಕೆ ಬಂದಿದ್ದ ಗ್ರಾಹಕರೊಬ್ಬರು ಸ್ಫೋಟದ ಕುರಿತು ಎಕ್ಸ್‌ ಮೂಲಕ ವಿಡಿಯೊ ಹಂಚಿಕೊಂಡಿದ್ದಾರೆ. ಕೆಫೆಯಲ್ಲಿ ಏಕಾಏಕಿ ಸ್ಫೋಟಗೊಂಡು ಪೂರ್ತಿ ಹೊಗೆ ಆವರಿಸಿಕೊಂಡಿತ್ತು. ಸಾರ್ವಜನಿಕರು, ಹೋಟೆಲ್‌ ಸಿಬ್ಬಂದಿ ಎಲ್ಲರೂ ಹೊರ ಓಡಿ ಬಂದಿದ್ದರು. ಘಟನೆಯಲ್ಲಿ ವಯೋವೃದ್ಧರು ಗಾಯಗೊಂಡಿದ್ದರು.

ಘಟನಾ ಸ್ಥಳಕ್ಕೆ ಗುಪ್ತಚರ ಇಲಾಖೆಯ ಎಡಿಜಿಪಿ ಶರತ್ ಚಂದ್ರ, ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲೋಕ್‌ ಮೋಹನ್‌, ಶುಕ್ರವಾರ ಸುಮಾರು ಒಂದು ಗಂಟೆಗೆ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟವಾಗಿದೆ. ಸ್ಥಳಕ್ಕೆ ಎಫ್‌ಎಸ್ಎಲ್ ತಂಡ ಬಂದಿದೆ. ಘಟನೆಯಲ್ಲಿ ಒಟ್ಟಾರೆ 9 ಮಂದಿ ಗಾಯಗೊಂಡಿದ್ದಾರೆ. ಸಿಎಂ ಮತ್ತು ಗೃಹ ಸಚಿವರು ಮಾಹಿತಿ ಪಡೆದಿದ್ದಾರೆ, ಎಫ್‌ಎಸ್ಎಲ್ ಪೂರ್ಣ ಪರಿಶೀಲನೆ ಬಳಿಕ ಸ್ಫೋಟ ಸಂಬಂಧ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Road Collapse: ರಸ್ತೆ ಕುಸಿದು ಸಿಲುಕಿದ ಲಾರಿ; ಜಲಮಂಡಳಿ ಬೇಕಾಬಿಟ್ಟಿ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ

Road Collapse: ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ರಸ್ತೆ ಕುಸಿದು ಟ್ರಕ್‌ ಸಿಲುಕಿದೆ. ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿಯ ಕಳಪೆ ಒಳಚರಂಡಿ ಕಾಮಗಾರಿಯಿಂದ ಅವ್ಯವಸ್ಥೆ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

VISTARANEWS.COM


on

Road collapse
Koo

ಬೆಂಗಳೂರು: ನಗರದಲ್ಲಿ ಕೇಬಲ್‌ ಅಳವಡಿಕೆ, ನೀರಿನ ಪೈಪ್‌ಲೈನ್‌ ಅಳವಡಿಕೆ ಸೇರಿ ವಿವಿಧ ಉದ್ದೇಶಗಳಿಗೆ ಎಲ್ಲೆಂದರಲ್ಲಿ ರಸ್ತೆಗಳನ್ನು ಅಗೆಯುವುದು ಹೆಚ್ಚಾಗುತ್ತಿದೆ. ಕೆಲಸ ಮುಗಿದ ನಂತರ ಸರಿಯಾಗಿ ಗುಂಡಿಗಳನ್ನು ಮುಚ್ಚದ ಕಾರಣ ವಾಹನ ಸವಾರರು ಪರದಾಡುವಂತಾಗಿದೆ. ಅದೇ ರೀತಿ ನಾಯಂಡಹಳ್ಳಿಯಲ್ಲಿ ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿಯ ಕಳಪೆ ಒಳಚರಂಡಿ ಪೈಪ್‌ ಕಾಮಗಾರಿಯಿಂದ ರಸ್ತೆ ಕುಸಿದು ಟ್ರಕ್‌ವೊಂದು ಸಿಲುಕಿದ ಘಟನೆ ನಡೆದಿದೆ.

ಕಾಮಗಾರಿ ವೇಳೆ ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿ ಒಂದಲ್ಲ ಒಂದು ಯಡವಟ್ಟು ಮಾಡುತ್ತಲೇ ಇರುತ್ತವೆ. ನಾಯಂಡಹಳ್ಳಿ ವಾರ್ಡ್‌ ಜನವಸತಿ ಪ್ರದೇಶದಲ್ಲಿ ಕಳೆದ ತಿಂಗಳು ಒಳಚರಂಡಿ ಪೈಪ್‌ ದುರಸ್ತಿಗೆಂದು ಚೆನ್ನಾಗಿದ್ದ ರೋಡ್ ಅಗೆದು ಕಾಮಗಾರಿ ನಡೆಸಲಾಗಿತ್ತು. ಆದರೆ, ಥಾರ್‌ ರೋಡ್ ಅಗೆದು ಬೇಕಾಬಿಟ್ಟಿ ಕಾಂಕ್ರೀಟ್‌ ಹಾಕಿದ್ದರಿಂದ ರಸ್ತೆ ಕುಸಿದು, ಆ ಮಾರ್ಗದಲ್ಲಿ ಮಣ್ಣು ಸಾಗಿಸುತ್ತಿದ್ದ ಲಾರಿಯೊಂದು ಸಿಲುಕಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಇದನ್ನೂ ಓದಿ | Organ donors: ಅಂಗಾಂಗ ದಾನಿ ಕುಟುಂಬಗಳ ಕಣ್ಣೀರ ಕಥೆ ಕೇಳಿದ ಸಿಎಂ ಸಿದ್ದರಾಮಯ್ಯ

ಒಳಚರಂಡಿ ಪೈಪ್ ಹಾಕುವಾಗಲೂ ಜಲ ಮಂಡಳಿ ಅಧಿಕಾರಿಗಳು ಸ್ಥಳೀಯರಿಗೆ ಕಿರಿಕಿರಿ ನೀಡಿದ ಆರೋಪ ಕೇಳಿಬಂದಿದೆ. ನಾಯಂಡಹಳ್ಳಿ ಕೆರೆ ಸಮೀಪದ ರಸ್ತೆ ಅಧ್ವಾನದಿಂದ ಯಾವಾಗ ಏನಾಗುತ್ತೋ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಜನವರಿಯಲ್ಲಿ ಚೆನ್ನಾಗಿದ್ದ ರೋಡ್‌ ಅಗೆದು ಪೈಪ್ ಕಾಮಗಾರಿ ಮಾಡಲಾಗಿದೆ. ಅದಾದ ಒಂದೇ ತಿಂಗಳಲ್ಲಿ ಕಳಪೆ ಕಾಮಗಾರಿಯಿಂದ ರಸ್ತೆ ಕುಸಿದು ಲಾರಿ ಸಿಲುಕಿದೆ. ಬಿಬಿಎಂಪಿ ಮತ್ತು ಬಿಡಬ್ಲ್ಯುಎಸ್‌ಎಸ್‌ಬಿ ಎಡವಟ್ಟಿನಿಂದ ಈ ರೀತಿಯಾಗಿದೆ. ಕಳಪೆ ಕಾಮಗಾರಿಯಿಂದ ರಸ್ತೆಯಲ್ಲಿ ಓಡಾಡೋಕು ಆತಂಕದ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ನಾಯಂಡಹಳ್ಳಿ ಕೆರೆಯ ಸಮೀಪ ಜಲಮಂಡಳಿ ಹಾಗೂ ಬಿಬಿಎಂಪಿಯ ಕಳಪೆ ಕಾಮಗಾರಿಯಿಂದ ರಸ್ತೆ ಕುಸಿದು ಲಾರಿ ಸಿಲುಕಿಕೊಂಡಿದೆ. ಇದರಿಂದ ರಸ್ತೆಯಲ್ಲಿ ಎರಡು ದೊಡ್ಡ ಗುಂಡಿಗಳು ಬಿದ್ದಿವೆ. ಅಧಿಕಾರಿಗಳ ಕಳಪೆ ಕಾಮಗಾರಿಯಿಂದಲೇ ಸಮಸ್ಯೆ ಉಂಟಾಗಿದೆ ಎಂದು ನಾಯಂಡಹಳ್ಳಿ ನಿವಾಸಿ, ವಕೀಲ ವಿಲ್ಫ್ರೆಡ್‌ ಶ್ರೇಯಸ್ ಅಸಮಾಧಾನ ಹೊರಹಾಕಿದ್ದಾರೆ.

Continue Reading

ಬೆಂಗಳೂರು

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Rameshwaram Cafe Blast : ರಾಮೇಶ್ವರಂ ಕೆಫೆಯಲ್ಲಿ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ನಗರ ಆಯುಕ್ತ ದಯಾನಂದ (Blast in Bengaluru) ದೌಡಾಯಿಸಿದ್ದಾರೆ.

VISTARANEWS.COM


on

By

rameshwaram cafe bengaluru incident
Koo

ಬೆಂಗಳೂರು: ಬೆಂಗಳೂರಿನ ಇಂದಿರಾ ನಗರದ (Indira Nagara) ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಿಗೂಢ ಸ್ಫೋಟವು ತಲ್ಲಣಗೊಳಿಸಿದೆ. ಸ್ಫೋಟಗೊಂಡ ಸ್ಥಳದಲ್ಲಿ ಬ್ಯಾಟರಿಯೊಂದು ಪತ್ತೆಯಾಗಿದ್ದು, ಇದು ಪೂರ್ವನಿಯೋಜಿತಾ ಸ್ಫೋಟನಾ ಎಂಬ ಶಂಕೆ ಇದೆ.

ಸ್ಥಳಕ್ಕೆ ಬೆಂಗಳೂರು ನಗರ ಆಯುಕ್ತ ದಯಾನಂದ ದೌಡಾಯಿಸಿದ್ದು, ಅಧಿಕಾರಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಎನ್‌ಐಎ, ಎನ್‌ಎಸ್‌ಜಿ ಅಧಿಕಾರಿಗಳು ಸ್ಥಳಕ್ಕಾಗಮಿಸುವ ಸಾಧ್ಯತೆ ಇದೆ. ಸ್ಫೋಟ ಸಂಬಂಧ ಅಗ್ನಿಶಾಮಕ ದಳ ಸಿಬ್ಬಂದಿಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

ಸಿಲಿಂಡರ್ ಬ್ಲಾಸ್ಟ್ ಆಗಿರುವ ಸಾಧ್ಯವಿಲ್ಲ ಎಂದು ಖಚಿತ ಪಡಿಸಿದ್ದಾರೆ. ಜಿಲೇಟಿನ್ ಕಡ್ಡಿಗಳಿಂದ ಸ್ಪೋಟವಾಗಿದ್ಯಾ? ಮೈಕ್ರೊ ಓವನ್‌ ಅಥವಾ ಬಾಯ್ಲರ್ ಬ್ಲಾಸ್ಟ್ ಆಗಿದ್ಯಾ ಎಂಬುದನ್ನೂ ಕೂಡ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಎಫ್‌ಎಸ್‌ಎಲ್ ಅಧಿಕಾರಿಗಳಿಂದಲೇ ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಬಯಲಾಗಬೇಕಿದೆ. ಇತ್ತ ಪೊಲೀಸರು ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿದ್ದಾರೆ.

ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಗಾಯಾಳುಗಳ ಸಂಖ್ಯೆ 8ಕ್ಕೆ ಏರಿಕೆ ಆಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಮೈಕ್ರೋ ಚಿಪ್ ಇಂಡಿಯಾ ಲಿ. ನಲ್ಲಿ ಕೆಲಸ ಮಾಡುತ್ತಿದ್ದ ಐವರು ಮಧ್ಯಾಹ್ನಕ್ಕೆ ಊಟಕ್ಕೆ ಬಂದಿದ್ದರು. ಊಟದ ಸಮಯಕ್ಕೆ ಸ್ಫೋಟಗೊಂಡಿದ್ದು, ಕೈ ತೊಳೆಯುವ ಜಾಗದಿಂದ ಶಬ್ಧ ಕೇಳಿ ಬಂದಿದೆ. ಉತ್ತರ ಭಾರತ ಮೂಲದ ಆಕ್ಸಿಸ್ ಬ್ಯಾಂಕ್ ಉದ್ಯೋಗಿ ಮೋಮಿ ಎಂಬಾಕೆ ಗಾಯಗೊಂಡಿದ್ದಾರೆ. ಫಾರುಕ್ ಹುಸಾಯ್, ದಿಪಾಂಶು ಎಂಬುವವರು ಗಾಯಗೊಂಡಿದ್ದು, ಸ್ವರ್ಣ ನಾರಯಣಪ್ಪ ಗಂಭೀರ ಗಾಯಗೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Exam Tips
ಆರೋಗ್ಯ13 mins ago

Exam Tips: ಮಕ್ಕಳ ಪರೀಕ್ಷೆ ಪೋಷಕರಿಗೂ ಪರೀಕ್ಷೆಯೇ? ಇಲ್ಲಿವೆ ಒತ್ತಡರಹಿತ ಎಕ್ಸಾಮ್‌ಗಾಗಿ ಟಿಪ್ಸ್!

Water crisis in Karnataka Govt orders supply from private borewells
ಬೆಂಗಳೂರು16 mins ago

water crisis: ಕರ್ನಾಟಕಕ್ಕೆ ಜಲಾಘಾತ! ಹಳ್ಳಿ ಹಳ್ಳಿಯಲ್ಲಿ ನೀರಿಲ್ಲ; ಖಾಸಗಿ ಬೋರ್‌ವೆಲ್‌ನಿಂದ ಪೂರೈಕೆಗೆ ಸರ್ಕಾರ ಸೂಚನೆ

rameshwaram cafe bengaluru incident
ಬೆಂಗಳೂರು22 mins ago

blast in bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಜಸ್ಟ್‌ 10 ಸೆಕೆಂಡ್‌ ಅಂತರದಲ್ಲಿ ಎರಡೆರಡು ಬಾರಿ ಸ್ಫೋಟ!

Pro Kabaddi Final
ಕ್ರೀಡೆ38 mins ago

Pro Kabaddi Final: ಕೆಲವೇ ಕ್ಷಣದಲ್ಲಿ ಫೈನಲ್; ಚೊಚ್ಚಲ ಪ್ರಶಸ್ತಿಗಾಗಿ ಪುಣೇರಿ-ಹರಿಯಾಣ ಫೈಟ್​

Doggie's Summer Fashion
ಫ್ಯಾಷನ್43 mins ago

Doggie’s Summer Fashion: ಮುದ್ದಿನ ಶ್ವಾನಗಳಿಗೂ ಬಂತು ಫ್ಯಾಷೆನಬಲ್‌ ಸಮ್ಮರ್‌ ಕ್ಯಾಪ್ಸ್ & ಹ್ಯಾಟ್ಸ್

Kannada New Movie dheer bhahath Roy song out
ಸ್ಯಾಂಡಲ್ ವುಡ್44 mins ago

Kannada New Movie: ʻಧೀರ ಭಗತ್ ರಾಯ್ʼ ಸಿನಿಮಾದ ʼಏನು ಕರ್ಮʼ ಹಾಡು ಬಿಡುಗಡೆ

T20 World Cup
ಪ್ರಮುಖ ಸುದ್ದಿ54 mins ago

T20 World Cup : ಟಿ20 ವಿಶ್ವ ಕಪ್​ನಲ್ಲಿ ಭಾರತಕ್ಕೆ ಎಷ್ಟು ಪಂದ್ಯಗಳಿವೆ?

Jet Suit Race
ವಿದೇಶ56 mins ago

Jet Suit Race: ವಿಶ್ವದ ಮೊದಲ ಜೆಟ್‌ ಸೂಟ್‌ ರೇಸ್‌ಗೆ ದುಬೈ ಸಾಕ್ಷಿ; ಏನಿದು ಅದ್ಭುತ ರೇಸ್?‌

Kannada New Movie line man song out now
ಸ್ಯಾಂಡಲ್ ವುಡ್1 hour ago

Kannada New Movie: ಲೈನ್ ಮ್ಯಾನ್ ಸಿನಿಮಾದಿಂದ ಬಂತು ಮೊದಲ ಹಾಡು!

Road collapse
ಬೆಂಗಳೂರು1 hour ago

Road Collapse: ರಸ್ತೆ ಕುಸಿದು ಸಿಲುಕಿದ ಲಾರಿ; ಜಲಮಂಡಳಿ ಬೇಕಾಬಿಟ್ಟಿ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

rameshwaram cafe bengaluru incident
ಬೆಂಗಳೂರು2 hours ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ2 hours ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ13 hours ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ2 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ3 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ3 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ3 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ4 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ4 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

ಟ್ರೆಂಡಿಂಗ್‌