Elon Musk: ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್ ಪುತ್ರನ ಹೆಸರಿಗೂ, ಭಾರತಕ್ಕೂ ಇದೆ ನಂಟು - Vistara News

ವಿದೇಶ

Elon Musk: ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್ ಪುತ್ರನ ಹೆಸರಿಗೂ, ಭಾರತಕ್ಕೂ ಇದೆ ನಂಟು

Elon Musk: ಶ್ರೀಮಂತ ಉದ್ಯಮಿ ಅವರ ಪುತ್ರನ ಹೆಸರಿಗೂ ಭಾರತಕ್ಕೂ ಇದೆ ವಿಶೇಷ ನಂಟು. ಅದೇನು ಎನ್ನುವ ವಿವರವನ್ನು ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

VISTARANEWS.COM


on

musk
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ (Elon Musk) ತಮ್ಮ ಪುತ್ರನಿಗೆ ಭಾರತದ ಜತೆಗಿರುವ ನಂಟಿನ ಬಗ್ಗೆ ಮಾತನಾಡಿದ್ದಾರೆ. ಈ ವಿಷಯವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಬಹಿರಂಗಪಡಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ರಾಜೀವ್ ಚಂದ್ರಶೇಖರ್ ಜತೆ ನಡೆದ ಸಭೆಯಲ್ಲಿ ಎಲಾನ್‌ ಮಸ್ಕ್‌ ತಮ್ಮ ಭಾರತೀಯ ಸಂಪರ್ಕದ ಬಗ್ಗೆ ಆಸಕ್ತಿದಾಯಕ ವಿಚಾರಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಭೇಟಿಯ ಚಿತ್ರವನ್ನು ರಾಜೀವ್‌ ಚಂದ್ರಶೇಖರ್‌ ಹಂಚಿಕೊಂಡಿದ್ದಾರೆ. ಎಲಾನ್‌ ಮಸ್ಕ್‌ ತಮ್ಮ ಪುತ್ರನ ಮಧ್ಯದ ಹೆಸರು ಭಾರತೀಯ ಸಂಪರ್ಕವನ್ನು ಹೊಂದಿದೆ ಎಂದು ಬಹಿರಂಗಪಡಿಸಿದ್ದಾರೆ.

ಎಲಾನ್‌ ಮಸ್ಕ್ ಮತ್ತು ಶಿವೋನ್ ಜಿಲಿಸ್ ಅವರ ಪುತ್ರ ‘ಚಂದ್ರಶೇಖರ್’ ಎಂಬ ಮಧ್ಯದ ಹೆಸರನ್ನು ಹೊಂದಿದ್ದಾರೆ. ಇದು 1983ರಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ಗಳಿಸಿದ ಪ್ರಸಿದ್ಧ ಭಾರತೀಯ ಭೌತಶಾಸ್ತ್ರಜ್ಞ ಪ್ರೊಫೆಸರ್ ಎಸ್. ಚಂದ್ರಶೇಖರ್ ಅವರಿಗೆ ಸಲ್ಲಿಸಿದ ಗೌರವಾರ್ಪಣೆ ಎಂದು ಮಸ್ಕ್‌ ಹೇಳಿದ್ದಾರೆ. ಶಿವೋನ್ ಜಿಲಿಸ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಪರಿಣತಿ ಹೊಂದಿರುವ ಕೆನಡಾ ಮೂಲದವರು.

ಚಂದ್ರಶೇಖರ್ ಅವರ ಪೋಸ್ಟ್‌ ಅನ್ನು ದೃಢಪಡಿಸಿದ ಜಿಲಿಸ್, “ಹೌದು, ಅದು ನಿಜ. ನಾವು ಅವನನ್ನು ಪ್ರೀತಿಯಿಂದ ಶೇಖರ್ ಎಂದು ಕರೆಯುತ್ತೇವೆ. ಅದ್ಭುತ ವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ಗೌರವಾರ್ಥವಾಗಿ ಈ ಹೆಸರನ್ನು ಆಯ್ಕೆ ಮಾಡಲಾಗಿದೆʼʼ ಎಂದು ತಿಳಿಸಿದ್ದಾರೆ.

ಎಐ(Artificial Intelligence)ನ ಪ್ರಸ್ತುತ ಸ್ಥಿತಿ, ಹೂಡಿಕೆಯ ನಿರೀಕ್ಷೆಗಳು, ಬದ್ಧತೆಗಳು ಮತ್ತು ಆಡಳಿತದ ಬಗ್ಗೆ ಚರ್ಚಿಸಲು ನೀತಿ ನಿರೂಪಕರು, ಹೂಡಿಕೆದಾರರನ್ನು ಒಗ್ಗೂಡಿಸುವ ಗ್ಲೋಬಲ್ ಎಐ ಶೃಂಗಸಭೆಯನ್ನು ಇಂಗ್ಲೆಂಡ್‌ನಲ್ಲಿ ಆಯೋಜಿಸಲಾಗಿದ್ದು, ರಾಜೀವ್ ಚಂದ್ರಶೇಖರ್ ಭಾಗವಹಿಸಿದ್ದರು. ಶೃಂಗಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ, ರಾಜೀವ್‌ ಚಂದ್ರಶೇಖರ್ ಡಿಜಿಟಲ್ ಆರ್ಥಿಕತೆಯಲ್ಲಿ ಭಾರತದ ಗಮನಾರ್ಹ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ದೇಶವು ತನ್ನ ಡಿಜಿಟಲ್ ಆರ್ಥಿಕತೆಯನ್ನು ಒಟ್ಟು ಜಿಡಿಪಿಯ ಶೇ. 4.5ರಿಂದ ಶೇ. 11ಕ್ಕೆ ವಿಸ್ತರಿಸಿದೆ. 2025-26ರ ವೇಳೆಗೆ ಶೇ. 20ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಸ್ಪೇಸ್ ಎಕ್ಸ್ ಮತ್ತು ಟೆಸ್ಲಾ ಸಿಇಒ ಎಲಾನ್‌ ಮಸ್ಕ್ ಎರಡೂ ದಿನಗಳ ಸಭೆಯಲ್ಲಿ ಭಾಗವಹಿಸಿದ್ದರು. ಎಐ ಸುರಕ್ಷತೆಯ ಮಹತ್ವವನ್ನು ಒತ್ತಿ ಹೇಳಿದ ಮಸ್ಕ್, ತಾಂತ್ರಿಕ ಪ್ರಗತಿಯ ತ್ವರಿತ ವೇಗದಿಂದಾಗಿ ಇದು ನಿರೀಕ್ಷಿಸಬಹುದಾದ ಅಪಾಯಗಳಲ್ಲಿ ಒಂದಾಗಿದೆ. ಹೀಗಾಗಿ ಇದರತ್ತ ಗಮನ ಹರಿಸಬೇಕು ಎಂದು ಹೇಳಿದರು. ಇದಲ್ಲದೆ ಶೃಂಗಸಭೆಯ ಮುಕ್ತಾಯದ ನಂತರ ಮಸ್ಕ್ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ನಡುವಿನ ಪ್ರಶ್ನೋತ್ತರ ಅಧಿವೇಶನವನ್ನು ಲಂಡನ್‌ನಲ್ಲಿ ನಿಗದಿಪಡಿಸಲಾಗಿತ್ತು.

ಇದನ್ನೂ ಓದಿ: Assault in US: ಅಮೆರಿಕದಲ್ಲಿ ಚೂರಿ ಇರಿತ, ಭಾರತೀಯ ವಿದ್ಯಾರ್ಥಿ ಗಂಭೀರ

ಆಫ್ರಿಕಾದಿಂದ ಪ್ರಾರಂಭಿಸಿ ವಿಶ್ವಾದ್ಯಂತ ಕೃತಕ ಬುದ್ಧಿಮತ್ತೆ ಉಪಕ್ರಮಗಳಿಗೆ ಧನಸಹಾಯವನ್ನು ಇಂಗ್ಲೆಂಡ್‌ ಮತ್ತು ಅದರ ಪಾಲುದಾರ ಕಂಪನಿಗಳು ಘೋಷಿಸಿದವು. ಬ್ರಿಟನ್, ಕೆನಡಾ ಮತ್ತು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಒಳಗೊಂಡ ಈ ಸಹಯೋಗದ ಪ್ರಯತ್ನವು ʼಸುರಕ್ಷಿತ ಮತ್ತು ಜವಾಬ್ದಾರಿಯುತʼ ಎಐ ಪ್ರೋಗ್ರಾಮಿಂಗ್ ಅನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

K Annamalai: ಕೆ ಅಣ್ಣಾಮಲೈ ಯುಕೆ ಫೆಲೋಶಿಪ್‌ಗೆ ಆಯ್ಕೆ; ಬಿಜೆಪಿ ರಾಜ್ಯಾಧ್ಯಕ್ಷತೆಗೆ ರಾಜೀನಾಮೆ?

ಯುಕೆ ವಿದೇಶಾಂಗ ಕಚೇರಿಯ ಚೆವೆನಿಂಗ್ ಗುರುಕುಲ ಫೆಲೋಶಿಪ್ ಫಾರ್ ಲೀಡರ್‌ಶಿಪ್ ಮತ್ತು ಎಕ್ಸಲೆನ್ಸ್ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಕೆ. ಅಣ್ಣಾಮಲೈ ( K Annamalai) ಅವರು ಬ್ರಿಟನ್‌ನಲ್ಲಿ ಕೋರ್ಸ್ ಮುಗಿಯುವವರೆಗೆ ತಮ್ಮನ್ನು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಿಂದ ಬಿಡುಗಡೆ ಮಾಡುವಂತೆ ಬಿಜೆಪಿ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

VISTARANEWS.COM


on

By

K Annamalai
Koo

ಲೋಕಸಭಾ ಚುನಾವಣೆಯಲ್ಲಿ (Lok sabha election) ಬಿಜೆಪಿಯಿಂದ (bjp) ತಮಿಳುನಾಡಿನಲ್ಲಿ (tamilnadu) ಸ್ಪರ್ಧಿಸಿ ಸೋತಿದ್ದ ಒಂದು ತಿಂಗಳ ಬಳಿಕ ಕೆ. ಅಣ್ಣಾಮಲೈ ( K Annamalai) ಅವರಿಗೆ ಯುಕೆ (UK) ಫೆಲೋಶಿಪ್‌ ದೊರೆತಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷರೂ ಆಗಿರುವ ಕೆ ಅಣ್ಣಾಮಲೈ ಅವರು ಸದ್ಯದಲ್ಲೇ ಲಂಡನ್‌ಗೆ ತೆರಳಲಿದ್ದಾರೆ. ಯುಕೆ ವಿದೇಶಾಂಗ ಕಚೇರಿಯ ಚೆವೆನಿಂಗ್ ಗುರುಕುಲ ಫೆಲೋಶಿಪ್ ಫಾರ್ ಲೀಡರ್‌ಶಿಪ್ ಮತ್ತು ಎಕ್ಸಲೆನ್ಸ್ ಕಾರ್ಯಕ್ರಮಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ಮೂರು ತಿಂಗಳ ಕಾಲ ಅವರು ಅಲ್ಲಿ ನೆಲೆಸಲಿದ್ದಾರೆ.

ಫೆಲೋಶಿಪ್ ಕಾರ್ಯಕ್ರಮವು ಸೆಪ್ಟೆಂಬರ್ ಮಧ್ಯದಲ್ಲಿ ಪ್ರಾರಂಭವಾಗಲಿದ್ದು, ನವೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಮೂಲಗಳ ಪ್ರಕಾರ ಅಣ್ಣಾಮಲೈ ಅವರು 2024ರ ಲೋಕಸಭೆ ಚುನಾವಣೆಗೆ ಮುನ್ನ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರು ಮತ್ತು ಮೇ ತಿಂಗಳಲ್ಲಿ ದೆಹಲಿಯಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದರು. ಬ್ರಿಟನ್‌ನಲ್ಲಿ ಕೋರ್ಸ್ ಮುಗಿಯುವವರೆಗೆ ತಮ್ಮನ್ನು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಿಂದ ಬಿಡುಗಡೆ ಮಾಡುವಂತೆ ಬಿಜೆಪಿ ಹೈಕಮಾಂಡ್‌ಗೆ ಅಣ್ಣಾಮಲೈ ಅವರು ಮನವಿ ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಅಣ್ಣಾಮಲೈ ಅವರು ನಾಗರಿಕ ಸೇವೆಯನ್ನು ತೊರೆದ ಅನಂತರ ಅವರು ಪ್ರಾರಂಭಿಸಿದ ಎನ್‌ಜಿಒ ‘ವೀ ದಿ ಲೀಡರ್ಸ್’ ಪ್ರತಿಷ್ಠಾನದ ಸಂಸ್ಥಾಪಕರಾಗಿ ಚೆವೆನಿಂಗ್ ಗುರುಕುಲ ಫೆಲೋಶಿಪ್ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರು. ಕಾರ್ಯಕ್ರಮವನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ರಾಜಕೀಯ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ವಿಭಾಗದಲ್ಲಿ ಆಯೋಜಿಸಿದೆ ಎಂದು ಚೆವೆನಿಂಗ್ ವೆಬ್‌ಸೈಟ್ ತಿಳಿಸಿದೆ.

ಯುಕೆ ವಿದೇಶಾಂಗ ಕಚೇರಿಯು 20 ವರ್ಷಗಳಿಗೂ ಹೆಚ್ಚು ಕಾಲ ಫೆಲೋಶಿಪ್ ಕಾರ್ಯಕ್ರಮವನ್ನು ನಡೆಸುತ್ತಿದೆ. ಯುವ ಸಾಧಕರು ಮತ್ತು ಮಧ್ಯಮ ವೃತ್ತಿಪರರು ಹಾಗೂ ವಿವಿಧ ಹಿನ್ನೆಲೆಯ ವೃತ್ತಿಪರರು ಇಲ್ಲಿ ತಮ್ಮ ನಾಯಕತ್ವ ಸಾಮರ್ಥ್ಯವನ್ನು ಪ್ರದರ್ಶಿಸಬಹುದು ಎಂದು ವೆಬ್‌ಸೈಟ್ ಹೇಳಿದೆ. ಈ ಕುರಿತು ಜುಲೈ 26ರಂದು ಬ್ರಿಟಿಷ್ ಹೈ ಕಮಿಷನ್ ಘೋಷಣೆ ಮಾಡಲಿದ್ದು, ಅಣ್ಣಾಮಲೈ ಸೇರಿ ಸುಮಾರು ಹತ್ತು ವೃತ್ತಿಪರರು ಈ ಬಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಚೆವೆನಿಂಗ್ ಗುರುಕುಲ ಫೆಲೋಶಿಪ್ 12 ವಾರಗಳ ಕಾರ್ಯಕ್ರಮವಾಗಿದ್ದು, ಇದಕ್ಕಾಗಿ ಪ್ರತಿ ವರ್ಷ 12 ಅಭ್ಯರ್ಥಿಗಳನ್ನು ಭಾರತದಿಂದ ಗುರುಕುಲ ಫೆಲೋಗಳಾಗಿ ಆಯ್ಕೆ ಮಾಡಲಾಗುತ್ತದೆ. 12 ವಾರಗಳ ವಸತಿ ಕೋರ್ಸ್ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ರಾಜಕೀಯ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ವಿಭಾಗದಲ್ಲಿ ನಡೆಯಲಿದೆ.

ಫೆಲೋಶಿಪ್‌ಗೆ ಸಂಬಂಧಿಸಿದ ಒಂದೆರಡು ಪೂರ್ವ-ಉದ್ದೇಶಿತ ಕಾರ್ಯಕ್ರಮಗಳಿಗೆ ಅಣ್ಣಾಮಲೈ ಈಗಾಗಲೇ ಹಾಜರಾಗಿದ್ದಾರೆ ಮತ್ತು ಸೆಪ್ಟೆಂಬರ್‌ನಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಬಿಜೆಪಿ ಹೈಕಮಾಂಡ್ ರಾಜ್ಯಕ್ಕೆ ಹಂಗಾಮಿ ಅಧ್ಯಕ್ಷರನ್ನು ನೇಮಿಸುವ ನಿರೀಕ್ಷೆಯಿದೆ ಮತ್ತು ಸ್ಥಾನಕ್ಕೆ ಹೆಚ್ಚಿನ ಆಕಾಂಕ್ಷಿಗಳು ಇರುವುದರಿಂದ ತೀವ್ರ ಚರ್ಚೆಗಳು ನಡೆಯುತ್ತಿವೆ.

ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ 2020ರ ಆಗಸ್ಟ್ ನಲ್ಲಿ ಬಿಜೆಪಿ ಸೇರಿದ್ದರು. ‘ಪಕ್ಷದ ನಿಷ್ಠಾವಂತ ಸೈನಿಕ’ ಎಂದು ಗುರುತಿಸಿಕೊಂಡಿರುವ ಅವರು ಪಕ್ಷಕ್ಕೆ ಸೇರಿದಾಗಿನಿಂದ ರಾಜ್ಯದಲ್ಲಿ ಹಲವಾರು ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದರ ಜತೆಗೆ ವಿವಾದಗಳಿಗೂ ಕೇಂದ್ರವಾಗಿದ್ದಾರೆ.

ಇದನ್ನೂ ಓದಿ: Narendra Modi: ನೀಟ್‌ ಅಕ್ರಮ ಕುರಿತು ಸಂಸತ್‌ನಲ್ಲಿ ಮೋದಿ ಪ್ರಸ್ತಾಪ; ವಿದ್ಯಾರ್ಥಿಗಳಿಗೆ ಅವರು ಹೇಳಿದ್ದಿಷ್ಟು

2023ರಲ್ಲಿ ಅಣ್ಣಾಮಲೈ ಅವರು ನಾಲ್ಕು ಆಡಿಯೋ ಟೇಪ್‌ಗಳ ಸರಣಿಯನ್ನು ಬಿಡುಗಡೆ ಮಾಡಿದರು. ಅದರ ಮೂಲಕ ಅವರು ಡಿಎಂಕೆ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು. ‘ಡಿಎಂಕೆ ಫೈಲ್‌ಗಳು’ ಎಂಬ ಶೀರ್ಷಿಕೆಯಡಿ, ಆಡಿಯೋ ಟೇಪ್‌ಗಳ ಭಾಗ ಒಂದರಲ್ಲಿ ಪಟ್ಟಿ ಮಾಡಲಾದ ಆಸ್ತಿಗಳು 1.34 ಲಕ್ಷ ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಇದು ಸ್ಟಾಲಿನ್ ಅವರ ಕುಟುಂಬ ಸದಸ್ಯರು ಮತ್ತು ಇತರ ಹಿರಿಯ ನಾಯಕರು ಸೇರಿದಂತೆ 12 ವ್ಯಕ್ತಿಗಳ ಒಡೆತನದಲ್ಲಿದೆ ಎಂದು ಅವರು ಆರೋಪಿಸಿದ್ದರು. ಅಣ್ಣಾಮಲೈ ಈ ಬಾರಿ ಚುನಾವಣೆಯಲ್ಲಿ ಸೋತಿದ್ದಾರೆ. ಆದರೆ ಅವರ ನಾಯಕತ್ವದಲ್ಲ ಪಕ್ಷ ತಮಿಳುನಾಡಿನಲ್ಲಿ ಶೇಕಡಾವಾರು ಮತ ಗಳಿಕೆಯಲ್ಲಿ ಭಾರಿ ಸಾಧನೆ ಮಾಡಿದೆ.

Continue Reading

ವಾಣಿಜ್ಯ

SEBI: ಅದಾನಿ ವರದಿ: ಹಿಂಡನ್‌ಬರ್ಗ್‌ಗೆ ಸೆಬಿಯಿಂದ ಶೋಕಾಸ್ ನೋಟಿಸ್

SEBI: ಅಮೆರಿಕ ಮೂಲದ ಹಿಂಡನ್‌ಬರ್ಗ್‌ ರಿಸರ್ಚ್ ಸಂಸ್ಥೆಯ ಅದಾನಿ ವರದಿಗೆ ಸಂಬಂಧಿಸಿದಂತೆ ಭಾರತದ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ಶೋಕಾಸ್ ನೋಟಿಸ್ ನೀಡಿದೆ. 46 ಪುಟಗಳ ಶೋಕಾಸ್ ನೋಟಿಸ್ ಅನ್ನು ಜೂನ್ 27ರಂದು ನೀಡಲಾಗಿದೆ ಎಂದು ಹಿಂಡನ್‌ಬರ್ಗ್‌ನ ಮೂಲಗಳು ತಿಳಿಸಿವೆ.

VISTARANEWS.COM


on

SEBI
Koo

ಮುಂಬೈ: ಅಮೆರಿಕ ಮೂಲದ ಹಿಂಡನ್‌ಬರ್ಗ್‌ ರಿಸರ್ಚ್ (Hindenburg research) ಸಂಸ್ಥೆಯ ಅದಾನಿ ವರದಿಗೆ ಸಂಬಂಧಿಸಿದಂತೆ ಭಾರತದ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ(SEBI) ಶೋಕಾಸ್ ನೋಟಿಸ್ ನೀಡಿದೆ. 46 ಪುಟಗಳ ಶೋಕಾಸ್ ನೋಟಿಸ್ ಅನ್ನು ಜೂನ್ 27ರಂದು ನೀಡಲಾಗಿದೆ ಎಂದು ಹಿಂಡನ್‌ಬರ್ಗ್‌ನ ಮೂಲಗಳು ತಿಳಿಸಿವೆ.

ಇದಕ್ಕೆ ಪ್ರತಿಕ್ರಿಯಿಸಿದ ಹಿಂಡನ್‌ಬರ್ಗ್‌, “ಪೂರ್ವ ನಿರ್ದೇಶಿತ ಉದ್ದೇಶವನ್ನು ಪೂರೈಸಲು ರೂಪಿಸಿರುವ ಈ ಶೋಕಾಸ್‌ ನೋಟಿಸ್‌ ಅನ್ನು ನಾವು ಅಸಂಬದ್ಧ ಎಂದು ಭಾವಿಸುತ್ತೇವೆ. ಭ್ರಷ್ಟಾಚಾರವನ್ನು ಬಯಲಿಗೆಳೆಯುವವರನ್ನು ಬೆದರಿಸಿ ಮೌನಗೊಳಿಸುವ ಪ್ರಯತ್ನ ಇದಾಗಿದೆ. ಭಾರತದ ಅತ್ಯಂತ ಪ್ರಬಲ ಸಂಸ್ಥೆಯೊಂದು ವಂಚನೆ ಎಸಗಿದೆ” ಎಂದು ಎಂದು ಆರೋಪಿಸಿದೆ.

ʼʼಭಾರತದಲ್ಲಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳು ನಡೆಸುವ ಭ್ರಷ್ಟಾಚಾರ ಮತ್ತು ವಂಚನೆಯನ್ನು ಬಹಿರಂಗಪಡಿಸುವವರ ಬಾಯಿ ಮುಚ್ಚಿಸುವ ಪ್ರಯತ್ನ ಇದಾಗಿದೆ. ಸೆಬಿ ಕಳುಹಿಸಿದ ನೋಟಿಸ್‌ನಲ್ಲಿ ಕೆ-ಇಂಡಿಯಾ ಆಪೋರ್ಚೂನಿಟೀಸ್ ಫಂಡ್ ಹೆಸರನ್ನು ಪ್ರಸ್ತಾಪಿಸಿದೆ. ಆದರೆ ಅದು ಕೋಟಕ್ ಮಹೀಂದ್ರ ಬ್ಯಾಂಕ್ ಎಂದು ಸ್ಪಷ್ಟವಾಗಿ ಹೇಳಿಲ್ಲ ಯಾಕೆ? ಮತ್ತೊಬ್ಬ ಪ್ರಭಾವಶಾಲಿ ವ್ಯಕ್ತಿಯನ್ನು ರಕ್ಷಿಸುವ ಕೆಲಸ ಇದುʼʼ ಎಂದು ಹಿಂಡನ್‌ಬರ್ಗ್‌ ರಿಸರ್ಚ್ ಸಂಸ್ಥೆ ಖಾರವಾಗಿ ಪ್ರತಿಕ್ರಿಯಿಸಿದೆ.

ಕೆ ಇಂಡಿಯಾ ಆಪೋರ್ಚುನಿಟೀಸ್ ಫಂಡ್ ಅನ್ನು ಕೋಟಕ್ ಮಹೀಂದ್ರ ಇನ್ವೆಸ್ಟ್​ಮೆಂಟ್ ಲಿ ಸಂಸ್ಥೆ ನಿರ್ವಹಿಸುತ್ತದೆ. ಇದು ಉದಯ್ ಕೋಟಕ್ ಅವರ ಕೋಟಕ್ ಮಹೀಂದ್ರ ಬ್ಯಾಂಕ್ ಅಧೀನದಲ್ಲಿರುವ ಸಂಸ್ಥೆಯಾಗಿದೆ. ಕುತೂಹಲ ಎಂದರೆ ಉದಯ್ ಕೋಟಕ್ ಅವರು 2017ರಲ್ಲಿ ಸೆಬಿಯ ಕಾರ್ಪೊರೇಟ್ ಗವರ್ನೆನ್ಸ್ ಕಮಿಟಿಯ ನೇತೃತ್ವ ವಹಿಸಿದ್ದರು. ಇನ್ನು ತನ್ನ ವಿವಿಧ ನೆಟ್‌ವರ್ಕ್‌ಗಳನ್ನು ಬಳಸಿ ಅದಾನಿ ಸ್ಟಾಕ್​ಗಳನ್ನು ಶಾರ್ಟ್ ಮಾಡಿದ್ದೇವೆ ಎಂದು ಸೆಬಿ ಮಾಡಿರುವ ಆರೋಪವನ್ನು ಹಿಂಡನ್‌ಬರ್ಗ್‌ ನಿರಾಕರಿಸಿದೆ.

ಏನಿದು ಹಿಂಡನ್‌ಬರ್ಗ್‌ ವರದಿ ಕೇಸ್?‌

ಗೌತಮ್‌ ಅದಾನಿ ನೇತೃತ್ವದ ಅದಾನಿ ಗ್ರೂಪ್‌ ಅಕ್ರಮ ಎಸಗಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆಯು 2023ರ ಜನವರಿಯಲ್ಲಿ ಪ್ರಕಟಿಸಿದ ವರದಿಯು ದೇಶದಲ್ಲಿ ಸಂಚಲನ ಮೂಡಿಸಿತ್ತು. “ಹೂಡಿಕೆದಾರರಿಗೆ ಅದಾನಿ ಗ್ರೂಪ್‌ ವಂಚನೆ ಮಾಡದೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ ಷೇರು ಮೌಲ್ಯಗಳನ್ನು ಹೆಚ್ಚು ತೋರಿಸಿರುವುದು ವಂಚನೆಯಾಗಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದಾದ ಬಳಿಕ ಅದಾನಿ ಗ್ರೂಪ್‌ ಷೇರು ಮೌಲ್ಯವು ದಿಢೀರನೆ ಕುಸಿದು ಭಾರಿ ನಷ್ಟವಾಗಿತ್ತು. ಅಲ್ಲದೆ, ಅದಾನಿ ಗ್ರೂಪ್‌ ದಿವಾಳಿಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು.

ಇದನ್ನೂ ಓದಿ: ಹಿಂಡನ್‌ಬರ್ಗ್‌ ಕೇಸ್; ಅದಾನಿಗೆ ಬಿಗ್‌ ರಿಲೀಫ್, ಸೆಬಿ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ ಎಂದ ಸುಪ್ರೀಂ

Continue Reading

ವಿದೇಶ

Indian Origin Businessman: 8,300 ಕೋಟಿ ರೂ. ವಂಚನೆ; ಭಾರತೀಯ ಮೂಲದ ಅಮೆರಿಕದ ಉದ್ಯಮಿಗೆ ಜೈಲು

Indian Origin Businessman: ಗೋಲ್ಡ್‌ ಸಚ್ಸ್‌ ಗ್ರೂಪ್‌, ಗೂಗಲ್‌ ಪೇರೆಂಟ್‌ ಆಲ್ಫಬೆಟ್‌ ಮತ್ತು ಇಲಿನಾಯ್ಸ್ ಗವರ್ನರ್ ಜೆಬಿ ಪ್ರಿಟ್ಜ್ಕರ್ ಅವರ ಸಾಹಸೋದ್ಯಮ ಬಂಡವಾಳ ಸಂಸ್ಥೆಗೆ ತಮ್ಮ ಸ್ಕೀಂ ಮೂಲಕ ಶಾ ಕೋಟ್ಯಂತರ ರೂ. ವಂಚನೆ ಮಾಡಿರುವುದು ಸಾಬೀತಾಗಿದ್ದು, ಅಮೆರಿಕ ಜಿಲ್ಲಾ ನ್ಯಾಯಾಧೀಶ ಥಾಮನ್‌ ಡರ್ಕಿನ್‌ ಏಳೂವರೆ ವರ್ಷ ಕಠಿನ ಸಜೆ ವಿಧಿಸಿದೆ. ಹೂಡಿಕೆದಾರರಿಗೆ ಸುಳ್ಳು ಹೇಳಿ ವಂಚನೆ, ಸುಳ್ಳು ಜಾಹೀರಾತು ಪ್ರಕಟಿಸಿ ವಂಚನೆ ಹೀಗೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಶಾಗೆ 15ವರ್ಷಗಳ ಶಿಕ್ಷೆ ವಿಧಿಸಬೇಕೆಂದು ಕೋರ್ಟ್‌ಗೆ ಸಂತ್ರಸ್ತರು ಮನವಿ ಮಾಡಿದ್ದರು.

VISTARANEWS.COM


on

Indian Origin Businessman
Koo

ವಾಷಿಂಗ್ಟನ್‌: ಭಾರತೀಯ ಮೂಲದ ಅಮೆರಿಕದ ಉದ್ಯಮಿ(Indian Origin Businessman), ಔಟ್‌ಕಮ್‌ ಹೆಲ್ತ್‌ ಸಂಸ್ಥೆ(Outcome Health)ಯ ಸಹ ಸಂಸ್ಥಾಪಕ ರಿಶಿ ಶಾ ಅವರಿಗೆ ವಂಚನೆ ಪ್ರಕರಣದಲ್ಲಿ ಏಳೂವರೆ ವರ್ಷ ಶಿಕ್ಷೆಯಾಗಿದೆ. ಬರೋಬ್ಬರಿ 8,300 ಕೋಟಿ ರೂ. ವಂಚನೆ ಪ್ರಕರಣದಲ್ಲಿ ರಿಶಿ ಶಾ ಅವರನ್ನು ಅಮೆರಿಕ ಜಿಲ್ಲಾ ಕೋರ್ಟ್‌ ದೋಷಿ ಎಂದು ಘೋಷಿಸಿದ್ದು, ಇದೀಗ ಶಿಕ್ಷೆ ಪ್ರಮಾಣ ಪ್ರಕಟಿಸಿದೆ.

ಗೋಲ್ಡ್‌ ಸಚ್ಸ್‌ ಗ್ರೂಪ್‌, ಗೂಗಲ್‌ ಪೇರೆಂಟ್‌ ಆಲ್ಫಬೆಟ್‌ ಮತ್ತು ಇಲಿನಾಯ್ಸ್ ಗವರ್ನರ್ ಜೆಬಿ ಪ್ರಿಟ್ಜ್ಕರ್ ಅವರ ಸಾಹಸೋದ್ಯಮ ಬಂಡವಾಳ ಸಂಸ್ಥೆಗೆ ತಮ್ಮ ಸ್ಕೀಂ ಮೂಲಕ ಶಾ ಕೋಟ್ಯಂತರ ರೂ. ವಂಚನೆ ಮಾಡಿರುವುದು ಸಾಬೀತಾಗಿದ್ದು, ಅಮೆರಿಕ ಜಿಲ್ಲಾ ನ್ಯಾಯಾಧೀಶ ಥಾಮನ್‌ ಡರ್ಕಿನ್‌ ಏಳೂವರೆ ವರ್ಷ ಕಠಿನ ಸಜೆ ವಿಧಿಸಿದೆ. ಹೂಡಿಕೆದಾರರಿಗೆ ಸುಳ್ಳು ಹೇಳಿ ವಂಚನೆ, ಸುಳ್ಳು ಜಾಹೀರಾತು ಪ್ರಕಟಿಸಿ ವಂಚನೆ ಹೀಗೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಶಾಗೆ 15ವರ್ಷಗಳ ಶಿಕ್ಷೆ ವಿಧಿಸಬೇಕೆಂದು ಕೋರ್ಟ್‌ಗೆ ಸಂತ್ರಸ್ತರು ಮನವಿ ಮಾಡಿದ್ದರು.

ವೈದ್ಯರ ಕಚೇರಿಗಳಲ್ಲಿನ ಟಿವಿಗಳಲ್ಲಿ ಜಾಹೀರಾತುಗಳನ್ನು ಒದಗಿಸಿದ ಔಟ್‌ಕಮ್ ಹೆಲ್ತ್‌ನ ಸಹ-ಸಂಸ್ಥಾಪಕ, ಭಾರತೀಯ-ಅಮೆರಿಕನ್ ರಿಷಿ ಶಾ, 38, ಕಳೆದ ವರ್ಷ ಫೆಡರಲ್ ಕೋರ್ಟ್‌ ಅನೇಕ ವಂಚನೆ ಮತ್ತು ಮನಿ ಲಾಂಡರಿಂಗ್ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಿತ್ತು. ಇದೀಗ ಶಾ ಮತ್ತು ಮತ್ತು ಇತರ ಇಬ್ಬರು ಸಹೋದ್ಯೋಗಿಗಳಿಗೆ ಕಳೆದ ವಾರ ಚಿಕಾಗೋದಲ್ಲಿ US ಜಿಲ್ಲಾ ನ್ಯಾಯಾಧೀಶ ಥಾಮಸ್ ಡರ್ಕಿನ್ ಅವರು ಶಿಕ್ಷೆ ವಿಧಿಸಿದ್ದಾರೆ ಎಂದು US ಅಟಾರ್ನಿ ಕಚೇರಿ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

2017 ರ ವಾಲ್ ಸ್ಟ್ರೀಟ್ ಜರ್ನಲ್ ಲೇಖನದಲ್ಲಿ ವಂಚನೆಯನ್ನು ಬಹಿರಂಗಪಡಿಸುವ ಮೊದಲು, ಶಾ ಡೆಮಾಕ್ರಟಿಕ್ ವಲಯಗಳಲ್ಲಿ ಉದಯೋನ್ಮುಖ ಉದ್ಯಮಿಯಾಗಿದ್ದರು. 2006 ರಲ್ಲಿ ಅವರು ಚಿಕಾಗೋದ ಉತ್ತರದಲ್ಲಿರುವ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಶಾ ಕಾಂಟೆಕ್ಸ್ಸ್ಟ್‌ ಮೀಡಿಯಾ ಹೆಲ್ತ್‌ ಎಂಬ ಸ್ಟಾರ್ಟ್‌ಅಪ್‌ ಕಂಪೆನಿ ಶುರುಮಾಡಿದ್ದರು. ರೋಗಿಗಳನ್ನು ಗುರಿಯಾಗಿಸಿಕೊಂಡು ಆರೋಗ್ಯ ಜಾಹೀರಾತುಗಳನ್ನು ಸ್ಟ್ರೀಮ್ ಮಾಡಲು ವೈದ್ಯರ ಕಚೇರಿಗಳಲ್ಲಿ ಟೆಲಿವಿಷನ್‌ಗಳನ್ನು ಸ್ಥಾಪಿಸುವ ದೃಷ್ಟಿಕೋನದೊಂದಿಗೆ ಈ ಉದ್ಯಮ ಪ್ರಾರಂಭವಾಗಿತ್ತು. ಇದಾದ ಬಳಿ ಶಾ ತಮ್ಮ ಸಹ ಸಂಸ್ಥಾಪಕಮ ಶಾರದಾ ಅಗರ್ವಾಲ್‌ ಅವರ ಜೊತೆಗೂಡಿ ಸಂಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದರು.

ಔಟ್‌ಕಮ್‌ ಹೆಲ್ತ್‌ ದಿನೇ ದಿನೇ ಎತ್ತರಕ್ಕೆ ಬೆಳೆಯುತ್ತಿದ್ದಂತೆ ಅದರ ಕರ್ಮಕಾಂಡ ಬೆಳಕಿಗೆ ಬಂದಿತ್ತು. ಕಂಪನಿಯು ಪ್ರಸಾರ ಮಾಡುವುದಕ್ಕಿಂತ ಹೆಚ್ಚಿನ ಜಾಹೀರಾತುಗಳನ್ನು ಮಾರಾಟ ಮಾಡಿತು ಮತ್ತು ವೈದ್ಯರ ಕಚೇರಿಗಳಲ್ಲಿನ ಟಿವಿಗಳ ನೆಟ್‌ವರ್ಕ್‌ನ ಗಾತ್ರದ ಬಗ್ಗೆ ಔಷಧೀಯ ದೈತ್ಯ Novo Nordisk A/S ನಂತಹ ಗ್ರಾಹಕರಿಗೆ ಸುಳ್ಳು ಹೇಳಿತ್ತು ಎಂಬುದು ಬಯಲಾಗಿತ್ತು.

ಇದನ್ನೂ ಓದಿ: MUDA site scandal: ಮುಡಾ ನಿವೇಶನಗಳ ಹಂಚಿಕೆ ರದ್ದು; ಬಹುಕೋಟಿ ಹಗರಣದ ತನಿಖೆಗೆ ಸರ್ಕಾರ ಆದೇಶ

Continue Reading

ಕರ್ನಾಟಕ

Ms Universal Petite 2024: ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಕನ್ನಡತಿ, ಶಿರಸಿ ಮೂಲದ ಡಾ. ಶ್ರುತಿಗೆ ಕಿರೀಟ

Ms Universal Petite 2024: ಶಿರಸಿ ತಾಲೂಕಿನ ಮುಂಡಿಗೆಸರ ಮೂಲದ, ಹುಬ್ಬಳಿಯ ವೈದ್ಯೆ ಶ್ರುತಿ ಹೆಗಡೆ ಇತ್ತೀಚಿಗೆ ಅಮೆರಿಕದಲ್ಲಿ ಜರುಗಿದ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಅಮೆರಿಕದಲ್ಲಿ ನಡೆದ ಮಿಸ್ ಯೂನಿವರ್ಸಲ್‌ ಪೆಟೀಟ್‌ ಎನ್ನುವ ಸೌಂದರ್ಯ ಸ್ಪರ್ಧೆಯಲ್ಲಿ ಶ್ರುತಿ 40 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಅವರು ಮಿಸ್ ಯೂನಿವರ್ಸಲ್‌ ಪೆಟೀಟ್‌ ಟೈಟಲ್‌ ಗೆದ್ದ ಮೊದ ಭಾರತೀಯ ಸ್ಪರ್ಧಿ ಎನಿಸಿಕೊಂಡಿದ್ದಾರೆ.

VISTARANEWS.COM


on

Ms Universal Petite 2024
Koo

ವಾಷಿಂಗ್ಟನ್‌: ಉತ್ತರ ಕನ್ನಡ (UttaraKannada) ಜಿಲ್ಲೆಯ ಶಿರಸಿ ತಾಲೂಕಿನ ಮುಂಡಿಗೆಸರ ಮೂಲದ, ಹುಬ್ಬಳಿಯ ವೈದ್ಯೆ ಶ್ರುತಿ ಹೆಗಡೆ (Shruti Hegde) ಇತ್ತೀಚಿಗೆ ಅಮೆರಿಕದಲ್ಲಿ ಜರುಗಿದ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಅಮೆರಿಕದಲ್ಲಿ ನಡೆದ ಮಿಸ್ ಯೂನಿವರ್ಸಲ್‌ ಪೆಟೀಟ್‌ (Ms Universal Petite 2024) ಎನ್ನುವ ಸೌಂದರ್ಯ ಸ್ಪರ್ಧೆಯಲ್ಲಿ ಶ್ರುತಿ 40 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ವಿಶೇಷ ಎಂದರೆ‌ ಶ್ರುತಿ ಮಿಸ್ ಯೂನಿವರ್ಸಲ್‌ ಪೆಟೀಟ್‌ ಟೈಟಲ್‌ ಗೆದ್ದ ಮೊದ ಭಾರತೀಯ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಈ ಸ್ಪರ್ಧೆಯನ್ನು ಸುಮಾರು 15 ವರ್ಷಗಳಿಂದ ಅಮೆರಿಕದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಮೊದಲ ಬಾರಿಗೆ 2009ರಲ್ಲಿ ಈ ಸ್ಪರ್ಧೆ ನಡೆದಿತ್ತು.

ಶಿರಸಿ, ಹುಬ್ಬಳ್ಳಿ ಮೂಲ

ಶ್ರುತಿ ಅವರು ಶಿರಸಿ ಮತ್ತು ಹುಬ್ಬಳ್ಳಿ ನಂಟು ಹೊಂದಿದ್ದಾರೆ. ಶಿರಸಿ ತಾಲೂಕಿನ ಮುಂಡಿಗೆಸರ ಅಜ್ಜೊರಮನೆ ಕುಟುಂಬದವರಾದ ಶ್ರುತಿ ಸದ್ಯ ತಮ್ಮ ಪಾಲಕರಾದ ಕೃಷ್ಣ ಹೆಗಡೆ, ಕಮಲಾ ಅವರೊಂದಿಗೆ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. 2018ರಲ್ಲಿ ಮಿಸ್ ಕರ್ನಾಟಕ ರನ್ನರ್ ಅಪ್, ಮಿಸ್ ಸೌತ್ ಇಂಡಿಯಾ ಕೀರೀಟ ತೊಟ್ಟುಕೊಂಡಿದ್ದ ಶ್ರುತಿ ಕಳೆದ ವರ್ಷ ಮಿಸ್ ಏಷ್ಯಾ ಇಂಟರ್ ನ್ಯಾಷನಲ್ ಇಂಡಿಯಾ ಪ್ರಶಸ್ತಿ ಗೆದ್ದಿದ್ದರು.

ಎಂ.ಡಿ. ಅಧ್ಯಯನ

ಹುಬ್ಬಳ್ಳಿಯಲ್ಲಿ ಎಂಬಿಬಿಎಸ್‌ ಓದಿರುವ ಶ್ರುತಿ ಅವರು ಪ್ರಸ್ತುತ ತುಮಕೂರಿನಲ್ಲಿ ಡರ್ಮಟಾಲಜಿಯಲ್ಲಿ ಎಂ.ಡಿ. ಮಾಡುತ್ತಿದ್ದಾರೆ. ಅವರು ಬಹುಮುಖ ಪ್ರತಿಭೆಯೂ ಹೌದು. ಭರತನಾಟ ಕಲಾವಿದೆಯಾಗಿ ವಿವಿಧ ಕಡೆ ಹಲವು ಪ್ರದರ್ಶನ ನೀಡಿದ್ದಾರೆ. ಜತೆಗೆ ಕನ್ನಡದ ಕೆಲವು ಸಿನಿಮಾ, ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ಈ ಬಾರಿಯ ಸ್ಪರ್ಧೆ ಅಮೆರಿಕದ ಫ್ಲೋರಿಡಾದಲ್ಲಿ ಜೂ. 6ರಿಂದ 10ರವರೆಗೆ ಆಯೋಜಿಸಲಾಗಿತ್ತು. ನ್ಯಾಷನಲ್‌ ಕಾಸ್ಟ್ಯೂಮ್‌ ರೌಂಡ್‌, ಪ್ರಶ್ನೋತ್ತರ ರೌಂಡ್‌ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಯಿತು.

ಏನಿದು ಮಿಸ್ ಯೂನಿವರ್ಸಲ್‌ ಪೆಟೀಟ್‌ ಸ್ಪರ್ಧೆ?

ಮಿಸ್ ಯೂನಿವರ್ಸಲ್‌ ಪೆಟೀಟ್‌ ಎನ್ನುವುದು ಕಡಿಮೆ ಎತ್ತರ ಹೊಂದಿರುವವರಿಗಾಗಿ ಇರುವ ಸ್ಪರ್ಧೆ. 5.2 ಅಡಿ ಎತ್ತರದ ಶ್ರುತಿ ಅವರಿಗೆ ಈ ಹಿಂದೆ ಮಿಸ್‌ ವರ್ಲ್ಡ್‌, ಮಿಸ್‌ ಯೂನಿವರ್ಸ್‌ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಆಗಿರಲಿಲ್ಲ. ಇದೀಗ ಅವರ ಕನಸು ನನಸಾಗಿದೆ. ಹಲವು ವರ್ಷಗಳಿಂದ ನಡೆಸುತ್ತಿದ್ದ ತಯಾರಿಗೆ ಕೊನೆಗೂ ಫಲ ಸಿಕ್ಕಿದೆ ಎಂದು ಅವರು ಈ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Miss World 2024: ಸಿನಿ ಶೆಟ್ಟಿಗೆ ವಿಶ್ವ ಸುಂದರಿ ಕಿರೀಟ ಜಸ್ಟ್‌ ಮಿಸ್‌

ಕ್ರಿಸ್ಟಿನಾ ಪಿಸ್ಕೋವಾಗೆ ವಿಶ್ವ ಸುಂದರಿ ಕಿರೀಟ

ಮುಂಬೈ: ಜೆಕ್ ಗಣರಾಜ್ಯ ದೇಶದ ಕ್ರಿಸ್ಟಿನಾ ಪಿಸ್ಕೋವಾ 2024ನೇ ಆವೃತ್ತಿಯ ವಿಶ್ವ ಸುಂದರಿ (Miss World 2024)ಯಾಗಿ ಹೊರಹೊಮ್ಮಿದ್ದಾರೆ. ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮಾರ್ಚ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು 71ನೇ ವಿಶ್ವ ಸುಂದರಿ ಕಿರೀಟವನ್ನು ತಮ್ಮದಾಗಿಸಿಕೊಂಡರು. ಕ್ರಿಸ್ಟಿನಾ ಕಾನೂನು ಮತ್ತು ವ್ಯವಹಾರ ಆಡಳಿತ ಎರಡರಲ್ಲೂ ಪದವಿ ಅಧ್ಯಯನ ಮಾಡುತ್ತಿದ್ದಾರೆ ಮತ್ತು ರೂಪದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಅವರು ಕ್ರಿಸ್ಟಿನಾ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ ಎಂದು ಮಿಸ್ ವರ್ಲ್ಡ್ ಆರ್ಗನೈಸೇಶನ್ ತಿಳಿಸಿದೆ.

ವಿಶೇಷ ಎಂದರೆ ವಿಶ್ವ ಸುಂದರಿ ಸ್ಪರ್ಧೆಯ ಆತಿಥ್ಯವನ್ನು ಭಾರತ ಬರೋಬ್ಬರಿ 28 ವರ್ಷಗಳ ಬಳಿಕ ವಹಿಸಿತ್ತು. 1996ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಭಾರತವು ಕೊನೆಯದಾಗಿ ಆಯೋಜಿಸಿತ್ತು. ಬೆಂಗಳೂರಿನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಗ್ರೀಸ್‌ನ 19ರ ಹರೆಯದ ಐರಿನ್ ಸ್ಕ್ಲಿವಾ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದರು.

Continue Reading
Advertisement
Virat- Anushka
ಕ್ರೀಡೆ12 mins ago

Virat- Anushka: ಬೆರಿಲ್ ಚಂಡಮಾರುತದ ದೃಶ್ಯವನ್ನು ವಿಡಿಯೊ ಕಾಲ್​ ಮೂಲಕ ಪತ್ನಿ ಅನುಷ್ಕಾಗೆ ತೊರಿಸಿದ ಕೊಹ್ಲಿ; ವಿಡಿಯೊ ವೈರಲ್​ 

Parliament Sessions
ದೇಶ28 mins ago

Parliament Sessions: ತಮ್ಮ ವಿರುದ್ಧ ಧರಣಿ ನಡೆಸುತ್ತಿದ್ದ ಪ್ರತಿಪಕ್ಷ ಸಂಸದರಿಗೆ‌ ಕುಡಿಯಲು ನೀರು ಕೊಟ್ಟ ಪ್ರಧಾನಿ ಮೋದಿ- ವಿಡಿಯೋ ಇದೆ

Nanna Devaru Serial Mayuri And NarasimhaRaju Grand Son Acting
ಕಿರುತೆರೆ35 mins ago

Nanna Devaru Serial: ಕಿರುತೆರೆಗೆ ಕಮ್‌ಬ್ಯಾಕ್‌ ಮಾಡಿದ ಮಯೂರಿ;  ‘ನನ್ನ ದೇವ್ರು’ ಧಾರಾವಾಹಿಗೆ ನರಸಿಂಹರಾಜು ಮೊಮ್ಮಗ ಹೀರೊ!

Safe Drive Tips
ಆಟೋಮೊಬೈಲ್37 mins ago

Safe Drive Tips: ಮಳೆಯಲ್ಲಿ ಬೈಕ್ ಓಡಿಸುವಾಗ ಈ ಸಂಗತಿಗಳು ಗಮನದಲ್ಲಿರಲಿ

India T20I schedule
ಕ್ರೀಡೆ46 mins ago

India T20I schedule: 2026ರ ಟಿ20 ವಿಶ್ವಕಪ್​ಗೂ ಮುನ್ನ ಭಾರತ ಆಡಲಿದೆ 34 ಟಿ20 ಪಂದ್ಯ

high beam lights
ಕರ್ನಾಟಕ49 mins ago

High Beam Lights‌: ರಾತ್ರಿ ಹೈ ಬೀಮ್‌ ಲೈಟ್‌ ಹಾಕಿಕೊಂಡು ವಾಹನ ಚಲಾಯಿಸುತ್ತೀರಾ? ಕೇಸು ಬೀಳುತ್ತೆ ಎಚ್ಚರ!

Cheetah Safari
ಪರಿಸರ1 hour ago

Cheetah Safari: ಬನ್ನೇರುಘಟ್ಟದಲ್ಲಿ ʻಚಿರತೆ ಸಫಾರಿʼ ಶುರು; ಚಿರತೆಗಳನ್ನು ಕಾಡೊಳಗೇ ನೋಡಿ ಆನಂದಿಸಿ!

Viral News
Latest1 hour ago

Viral News: ನೀವೂ ಕೂಡ ನಿಮ್ಮ ಹೆಂಡತಿಯನ್ನು ಇವರಂತೆ ಪ್ರೀತಿಸಬಲ್ಲಿರಾ? ಈ ಫೋಟೊ, ವಿಡಿಯೊ ನೋಡಿ ಹೇಳಿ!

Hathras Stampede
ಪ್ರಮುಖ ಸುದ್ದಿ1 hour ago

Hathras Stampede: ಹತ್ರಾಸ್‌ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 116ಕ್ಕೆ ಏರಿಕೆ; ಸತ್ಸಂಗ ನಡೆಸಿದ ಭೋಲೆ ಬಾಬಾ ನಾಪತ್ತೆ

krishna river drowned death
ಕ್ರೈಂ2 hours ago

Drowned: ಪೊಲೀಸರಿಂದ ತಪ್ಪಿಸಿಕೊಳ್ಳಹೋಗಿ ನೀರುಪಾಲು; ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ 1 ಸಾವು, ಇಬ್ಬರ ರಕ್ಷಣೆ, ಇನ್ನೂ ಐವರು ನಾಪತ್ತೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ14 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌