World Cup Points Table: ಆಫ್ಘನ್​ಗೆ ಗೆಲುವು; ಅಂಕಪಟ್ಟಿಯಲ್ಲಿ ಕುಸಿದ ಪಾಕಿಸ್ತಾನ - Vistara News

ಕ್ರಿಕೆಟ್

World Cup Points Table: ಆಫ್ಘನ್​ಗೆ ಗೆಲುವು; ಅಂಕಪಟ್ಟಿಯಲ್ಲಿ ಕುಸಿದ ಪಾಕಿಸ್ತಾನ

ಸದ್ಯ ಅಫಘಾನಿಸ್ತಾನ ತಂಡ 7 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದು 8 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ. ಇನ್ನು 2 ಪಂದ್ಯಗಳು ಬಾಕಿ ಇವೆ.

VISTARANEWS.COM


on

icc world cup semi final calculation
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಕ್ನೋ: ಅಫಘಾನಿಸ್ತಾನ ತಂಡ ನೆದರ್ಲೆಂಡ್ಸ್​(Netherlands vs Afghanistan) ವಿರುದ್ಧ 7 ವಿಕೆಟ್​ಗಳಿಂದ ಗೆಲುವು ದಾಖಲಿಸಿ ವಿಶ್ವಕಪ್​ ಅಂಕಪಟ್ಟಿಯಲ್ಲಿ(World Cup Points Table) 5ನೇ ಸ್ಥಾನಕ್ಕೇರಿದೆ. ಇದಕ್ಕೂ ಮುನ್ನ 5ನೇ ಸ್ಥಾನದಲ್ಲಿದ್ದ ಭಾರತದ ಬದ್ಧ ವೈರಿ ಪಾಕಿಸ್ತಾನ ಒಂದು ಸ್ಥಾನ ಕುಸಿತ ಕಂಡು 6ನೇ ಸ್ಥಾನದಲ್ಲಿದೆ.

ಸದ್ಯ ಅಫಘಾನಿಸ್ತಾನ ತಂಡ 7 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದು 8 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ. ಇನ್ನು 2 ಪಂದ್ಯಗಳು ಬಾಕಿ ಇವೆ. ಎದುರಾಳಿಗಳು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ. ಈ 2 ಪಂದ್ಯಗಳನ್ನು ಆಫ್ಘನ್ ಗೆದ್ದರೆ 12 ಅಂಕ ಪಡೆದು ಸೆಮಿಫೈನಲ್​ ಪ್ರವೇಶ ಪಡೆಯಬಹುದು. ಆದರೆ ಇಲ್ಲೂ ಕೆಲ ಲೆಕ್ಕಾಚಾರಗಳಿವೆ.

ಆಫ್ಘನ್​ ಸೆಮಿ ಲೆಕ್ಕಾಚಾರ ಹೇಗಿದೆ?

4ನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ ಇನ್ನುಳಿದ 2 ಪಂದ್ಯಗಳ ಪೈಕಿ ಒಂದನ್ನು ಸೋಲಬೇಕು.​ ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮೂರು ಪಂದ್ಯಗಳಲ್ಲಿ 2 ಪಂದ್ಯವನ್ನು ಸೋಲಬೇಕು ಹೀಗಾದರೆ ಆಫ್ಘನ್​ ಯಾವುದೇ ಚಿಂತೆಯಿಲ್ಲದೆ ಸೆಮಿಫೈನಲ್​ ಪ್ರವೇಶ ಪಡೆಯಲಿದೆ. ಒಂದೊಮ್ಮೆ ಅಫಘಾನಿಸ್ತಾನ ಮುಂದಿನ ಎರಡು ಪಂದ್ಯಗಳ ಪೈಕಿ ಒಂದನ್ನು ಗೆದ್ದರೆ 10 ಅಂಕ ಆಗಲಿದೆ. ಆಗ ಕಿವೀಸ್​ ಮತ್ತು ಆಸೀಸ್​ ಎಲ್ಲ ಪಂದ್ಯಗಳನ್ನು ಸೋಲು ಕಾಣಬೇಕಾಗುತ್ತದೆ. ಇಲ್ಲವಾದಲ್ಲಿ ಆಫ್ಘನ್​ ಲೆಕ್ಕಾಚಾರ ಉಲ್ಟಾ ಆಗಲಿದೆ. ಕೇವಲ ಆಸೀಸ್​ ಕಿವೀಸ್​ ಮಾತ್ರವಲ್ಲ ಪಾಕ್​ ಕೂಡ ಕನಿಷ್ಠ ಒಂದು ಪಂದ್ಯ ಸೋಲಬೇಕು.

ಇದನ್ನೂ NED vs AFG: ಡಚ್ಚರನ್ನು ಮಣಿಸಿ ಪಾಕ್​ ಹಿಂದಿಕ್ಕಿದ ಆಫ್ಘನ್​​; ಸೆಮಿಗೆ ಇನ್ನೆರಡು ಹೆಜ್ಜೆ ಬಾಕಿ

ನೆದರ್ಲೆಂಡ್ಸ್​ ತಂಡ ಈ ಪಂದ್ಯದಲ್ಲಿ ಸೋಲು ಕಂಡರೂ ಈ ಹಿಂದೆ ಇದ್ದ 8ನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಡಚ್ಚರಿಗೆ ಇನ್ನು 2 ಪಂದ್ಯಗಳು ಬಾಕಿ ಉಳಿದಿದೆ. ಅಂತಿಮ ಪಂದ್ಯ ಭಾರತ ವಿರುದ್ಧ ನ.12ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ.

ಇದನ್ನೂ ಓದಿ ಮಳೆ ಭೀತಿಯ ಮಧ್ಯೆ ಪಾಕ್​-ಕಿವೀಸ್​ ಅದೃಷ್ಟ ಪರೀಕ್ಷೆ; ಇತ್ತಂಡಗಳಿಗೂ ಗೆಲುವು ಅತ್ಯಗತ್ಯ

ನೂತನ ಅಂಕಪಟ್ಟಿ ಹೀಗಿದೆ

ತಂಡಪಂದ್ಯಗೆಲುವುಸೋಲುಅಂಕನೆಟ್​ ರನ್​ರೇಟ್​
ಭಾರತ77014+2.102
ದಕ್ಷಿಣ ಆಫ್ರಿಕಾ76112+2.290
ಆಸ್ಟ್ರೇಲಿಯಾ​6428+0.970
ನ್ಯೂಜಿಲ್ಯಾಂಡ್7438+0.484
ಅಫಘಾನಿಸ್ತಾನ7438-0.330
ಪಾಕಿಸ್ತಾನ7346-0.024
ಶ್ರೀಲಂಕಾ 7254-1.162
ನೆದರ್ಲ್ಯಾಂಡ್ಸ್7254-1.398
ಬಾಂಗ್ಲಾದೇಶ​ 7162-1.446
ಇಂಗ್ಲೆಂಡ್​​​ 6152-1.652

ಇಂಗ್ಲೆಂಡ್​ ತಂಡದ ಸೆಮಿ ಲೆಕ್ಕಾಚಾರ

ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಸದ್ಯ ಆಡಿದ 6 ಪಂದ್ಯಗಳಲ್ಲಿ 5 ಸೋಲು ಕಂಡು 2 ಅಂಕದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಇನ್ನು ಬಟ್ಲರ್​ ಪಡೆಗೆ ಮೂರು ಪಂದ್ಯಗಳು ಬಾಕಿ ಉಳಿದಿವೆ. ಎದುರಾಳಿಗಳು ನೆದರ್ಲೆಂಡ್ಸ್​​, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ. ಈ ಮೂರು ಪಂದ್ಯಗಳನ್ನು ಇಂಗ್ಲೆಂಡ್​ ಗೆದ್ದರೆ 8 ಅಂಕ ಸಂಪಾದಿಸಿ, ಉಳಿದಿರುವ ಮೂರು ಸ್ಥಾನಗಳ ಪೈಕಿ ಯಾವುದಾದದರು ಒಂದು ಸ್ಥಾನ ಪಡೆದು ಸೆಮಿಫೈನಲ್​ ಪ್ರವೇಶಿಸಬಹುದು. ಆದರೆ ಇಲ್ಲಿಯೂ ಒಂದು ಲೆಕ್ಕಾಚಾರವಿದೆ.

ಸದ್ಯ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಉಳಿದಿರುವ ಮೂರು ಪಂದ್ಯಗಳಲ್ಲಿ ಸೋಲು ಕಾಣಬೇಕು. ಆಗ ಈ ಮೂರು ಸೋಲಿನಿಂದಾಗಿ ಉಭಯ ತಂಡಗಳು ಈಗಿರುವ 8 ಅಂಕದಲ್ಲೇ ಉಳಿಯಲಿದೆ. ಆಗ ರನ್​ರೇಟ್​ ಆಧಾರದಲ್ಲಿ ಈ ಅದೃಷ್ಟ ಇಂಗ್ಲೆಂಡ್​ಗೆ ಸಿಗಬಹುದು. ಏಕೆಂದರೆ ಸೋಲು ಕಂಡ ಕಾರಣ ಕಿವೀಸ್​ ಮತ್ತು ಆಸೀಸ್​ ತಂಡದ ರನ್​ ರೇಟ್​ ಕುಸಿತ ಕಂಡಿರುತ್ತದೆ. ಸತತ ಗೆಲುವು ಸಾಧಿಸಿದ ಇಂಗ್ಲೆಂಡ್​ನ ರನ್​ರೇಟ್​ ಪ್ಲಸ್​ ಆಗಿರುತ್ತದೆ. ಹೀಗಾಗಿ ಇಂಗ್ಲೆಂಡ್​ಗೆ ಈ ಲಾಭ ಸಿಗಲಿದೆ. ಎಲ್ಲದ್ದಕ್ಕೂ ಇಂಗ್ಲೆಂಡ್​ ಗೆಲವು ಕಾಣಬೇಕು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

1983 WC Win Anniversary: ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿನ​ ಸವಿ ನೆನಪನ್ನು ವಿಂಡೀಸ್​ನಲ್ಲಿ ಕೇಕ್​ ಕತ್ತರಿಸಿ ಸಂಭ್ರಮಿಸಿದ ರವಿಶಾಸ್ತ್ರಿ, ಗವಾಸ್ಕರ್, ​ಬಿನ್ನಿ

1983 World Cup: ವೆಸ್ಟ್​ ಇಂಡೀಸ್​ನಲ್ಲಿರುವ ಟೀಮ್​ ಇಂಡಿಯಾ ಆಟಗಾರರಾದ ರಿಷಭ್​ ಪಂತ್​, ಮೊಹಮ್ಮದ್​ ಸಿರಾಜ್​, ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್​ ಅಗರ್ಕರ್​ ಸೇರಿ ಕೆಲ ಆಟಗಾರರು ಲೆಜಂಡರಿ ಕ್ರಿಕೆಟಿಗರ ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಕೇಕ್ ಕತ್ತರಿಸಿ ಅಂದಿನ ಚೊಚ್ಚಲ ವಿಶ್ವಕಪ್​ ಗೆಲುವನ್ನು ಸಂಭ್ರಮಿಸಿದರು

VISTARANEWS.COM


on

1983 World Cup
Koo

ಗಯಾನ: ಭಾರತೀಯ ಕ್ರಿಕೆಟಿನ ದಿಕ್ಕನ್ನೇ ಬದಲಿಸಿದ ಈ ಮಹಾ ವಿಜಯಕ್ಕೆ(1983 World Cup) ಮಂಗಳವಾರ 41 ವರ್ಷ ತುಂಬಿತು(1983 WC Win Anniversary). 1983ರ ಜೂ. 25ರಂದು ಐತಿಹಾಸಿಕ ಲಾರ್ಡ್ಸ್‌ ಅಂಗಳದಲ್ಲಿ ಎರಡು ಬಾರಿಯ ಹಾಲಿ ಚಾಂಪಿಯನ್‌, ಭಯಾನಕ ವೆಸ್ಟ್‌ ಇಂಡೀಸ್​ ತಂಡವನ್ನು ಫೈನಲ್‌ನಲ್ಲಿ 43 ರನ್ನುಗಳಿಂದ ಉರುಳಿಸಿದ “ಕಪಿಲ್‌ ಡೆವಿಲ್ಸ್‌’ ಹೊಸ ಇತಿಹಾಸ ಬರೆದ ಅದ್ಭುತ ಕ್ಷಣವದು. ಈ ಸಂಭ್ರಮಕ್ಕೆ 41 ವರ್ಷ ತುಂಬಿದ ನಿಟ್ಟಿನಲ್ಲಿ ಅಂದಿನ ವಿಶ್ವಕಪ್​ ತಂಡದ ಸದಸ್ಯರಾದ ರವಿಶಾಸ್ತ್ರಿ(Ravi Shastri), ಸುನೀಲ್ ಗವಾಸ್ಕರ್(Sunil Gavaskar)​ ಮತ್ತು ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿರುವ ರೋಜರ್ ಬಿನ್ನಿ(Roger Binny) ಅವರು ಹಾಲಿ ಟಿ20 ವಿಶ್ವಕಪ್​ ಆಡುತ್ತಿರುವ ಟೀಮ್​ ಇಂಡಿಯಾ ಆಟಗಾರರೊಂದಿಗೆ ಸಂಭ್ರಮಾಚರಣನೆ ನಡೆಸಿದ್ದಾರೆ.

ವೆಸ್ಟ್​ ಇಂಡೀಸ್​ನಲ್ಲಿರುವ ಟೀಮ್​ ಇಂಡಿಯಾ ಆಟಗಾರರಾದ ರಿಷಭ್​ ಪಂತ್​(Rishabh Pant), ಮೊಹಮ್ಮದ್​ ಸಿರಾಜ್​, ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್​ ಅಗರ್ಕರ್​ ಸೇರಿ ಕೆಲ ಆಟಗಾರರು ಲೆಜಂಡರಿ ಕ್ರಿಕೆಟಿಗರ ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಕೇಕ್ ಕತ್ತರಿಸಿ ಅಂದಿನ ಚೊಚ್ಚಲ ವಿಶ್ವಕಪ್​ ಗೆಲುವನ್ನು ಸಂಭ್ರಮಿಸಿದರು. ಈ ಸುಂದರ ಕ್ಷಣದ ಫೋಟೊವನ್ನು ರವಿಶ್ರಾಸ್ತ್ರಿ ತಮ್ಮ ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟನ್ನು ಐಸಿಸಿ ಕೂಡ ಶೇರ್​ ಮಾಡಿದೆ.

ಆ ಕಾಲಕ್ಕೆ ಭಾರತದಲ್ಲಿ ಇನ್ನೂ ಕ್ರಿಕೆಟ್​ ಅಷ್ಟಾಗಿ ಖ್ಯಾತಿ ಪಡೆದಿರಲಿಲ್ಲ. ಭಾರತ ತಂಡವೂ ಕೂಡ ಬಲಿಷ್ಠವಾಗಿರಲಿಲ್ಲ. ಕೇವಲ ಲೆಕ್ಕ ಭರ್ತಿಗೆ ಇದ್ದ ತಂಡ ಎಂದು ಎಲ್ಲರಿಂದಲೂ ಅಪಹಾಸ್ಯಕ್ಕೆ ಒಳಗಾಗಿತ್ತು. ಜತೆಗೆ ಭಾರತೀಯ ಆಟಗಾರರಿಗೂ ಇದೊಂದು ವಿದೇಶ ಪ್ರವಾಸ ಎಂಬ ಭಾವನೆ ಇದ್ದಿತ್ತು. ಆದರೆ ಲಂಡನ್​ನಲ್ಲಿ ನಡೆದದ್ದೇ ಬೇರೆ.

ಫೈನಲ್​ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್​ ಎದುರಾದಾಗ ಇಡೀ ವಿಶ್ವವೇ ಮತ್ತೊಮ್ಮೆ ವಿಂಡೀಸ್​ ಚಾಂಪಿಯನ್​ ಆಗಲಿದೆ ಎಂದು ಹೇಳಿದ್ದರು. ಆದರೆ, ಕಪಿಲ್​ದೇವ್​ ನೇತೃತ್ವದ ಭಾರತ ತಂಡ ಅಸಾಧಾರಣ ಪ್ರದರ್ಶನ ತೋರಿ ಹ್ಯಾಟ್ರಿಕ್​​ ಹಾದಿಯಲ್ಲಿದ್ದ ವಿಂಡೀಸ್​ ತಂಡವನ್ನು ಕಟ್ಟಿಹಾಕಿ ಇತಿಹಾಸ ನಿರ್ಮಿಸಿದರು.

ಇದನ್ನೂ ಓದಿ 1983 World Cup: ಕಪಿಲ್‌ ಪಡೆಯ ಏಕದಿನ ವಿಶ್ವಕಪ್‌ ವಿಜಯ ದಿವಸಕ್ಕೆ 40ರ ಸಂಭ್ರಮ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಭಾರತ 183 ರನ್​ಗಳಿಗೆ ಆಲೌಟ್​ ಆಯಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ವಿಂಡೀಸ್​ಗೆ ಛಲ ಬಿಡದ ಮದನ್​ಲಾಲ್​ ಮತ್ತು ಮೊಹಿಂದರ್​ ಅಮರ್​ನಾಥ್​(Mohinder Amarnath) ಉತ್ಕೃಷ್ಟ ಮಟ್ಟದ ಬೌಲಿಂಗ್​ ನಡೆಸಿ ತಲಾ 3 ವಿಕೆಟ್​ ಕೆಡವಿದರು. ಅಂತಿಮವಾಗಿ ಕೆರೆಬಿಯನ್ನರನ್ನು 140 ರನ್​​ಗೆ ಆಲೌಟ್​ ಮಾಡುವ ಮೂಲಕ 43 ರನ್​ಗಳಿಂದ ಗೆಲುವು ಸಾಧಿಸಿ ದೇಶಕ್ಕೆ ಮೊದಲ ಏಕದಿನ ವಿಶ್ವಕಪ್​ ತಂದುಕೊಟ್ಟರು. ನಾಯಕ ಕಪಿಲ್​ದೇವ್​ ಅವರು ಲಾರ್ಡ್ಸ್​ನಲ್ಲಿ ಕಪ್​ ಎತ್ತಿ ಭಾರತದ ವಿಜಯ ಪತಾಕೆ ಹಾರಿಸಿದ್ದರು.

ಅಂದಿನ ಕಪಿಲ್‌ ಪಡೆಯ ಓರ್ವ ಸದಸ್ಯ ಸಯ್ಯದ್‌ ಕಿರ್ಮಾನಿ ಹೇಳಿದಂತೆ “ನಮ್ಮ 1983ರ ವಿಶ್ವಕಪ್‌ ಗೆಲುವು ಮೊದಲ ಪ್ರೀತಿಯಂತೆ, ಯಾವತ್ತೂ ಮರೆಯಲಾಗದ್ದು” ನಿಜಕ್ಕೂ ಈ ಮಾತು ಇಂದಿಗೂ ಮರೆಯಲಾಗದಂತೆ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ.

Continue Reading

ಕ್ರಿಕೆಟ್

IND vs ENG: ಇಂಗ್ಲೆಂಡ್‌ ಎದುರು ಭಾರತಕ್ಕೆ ಸೇಡಿನ ಪಂದ್ಯ; ನಾಳೆ ದ್ವಿತೀಯ ಸೆಮಿಫೈನಲ್​

IND vs ENG: ಹಾಲಿ ಚಾಂಪಿಯನ್​ ಇಂಗ್ಲೆಂಡ್​ 2022ರಲ್ಲಿ ಅಡಿಲೇಡ್​ನಲ್ಲಿ ನಡೆದ ಟಿ20 ವಿಶ್ವಕಪ್​ ಸೆಮೀಸ್​ನಲ್ಲಿ ಭಾರತಕ್ಕೆ 10 ವಿಕೆಟ್​ಗಳ ಹೀನಾಯ ಸೋಲುಣಿಸಿ ಫೈನಲ್​ ಪ್ರವೇಶಿಸಿತ್ತು. ಇದೀಗ ಅಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಅಪೂರ್ವ ಅವಕಾಶವೊಂದು ಭಾರತಕ್ಕೆ ಎದುರಾಗಿದೆ.

VISTARANEWS.COM


on

IND vs ENG
Koo


ಗಯಾನಾ: ಲೀಗ್‌ ಮತ್ತು ಸೂಪರ್​-8 ಹಂತದಲ್ಲಿ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಟಿ20 ವಿಶ್ವಕಪ್‌(T20 World Cup 2024) ನಾಕೌಟ್‌ ಪ್ರವೇಶಿಸಿರುವ ಭಾರತ(IND vs ENG) ತಂಡದ ಮುಂದೀಗ ಸೇಡಿನ ಪಂದ್ಯವೊಂದು ಕಾದು ಕುಳಿತಿದೆ. ನಾಳೆ(ಗುರುವಾರ) ರಾತ್ರಿ ನಡೆಯಲಿರುವ ಸೆಮಿಫೈನಲ್‌(T20 World Cup 2024) ಮುಖಾಮುಖಿಯಲ್ಲಿ ರೋಹಿತ್​ ಶರ್ಮ ಪಡೆ ಬಲಿಷ್ಠ ಇಂಗ್ಲೆಂಡ್‌ ಸವಾಲನ್ನು ಎದುರಿಸಲಿದೆ.

ಹಾಲಿ ಚಾಂಪಿಯನ್​ ಇಂಗ್ಲೆಂಡ್​ 2022ರಲ್ಲಿ ಅಡಿಲೇಡ್​ನಲ್ಲಿ ನಡೆದ ಟಿ20 ವಿಶ್ವಕಪ್​ ಸೆಮೀಸ್​ನಲ್ಲಿ ಭಾರತಕ್ಕೆ 10 ವಿಕೆಟ್​ಗಳ ಹೀನಾಯ ಸೋಲುಣಿಸಿ ಫೈನಲ್​ ಪ್ರವೇಶಿಸಿತ್ತು. ಇದೀಗ ಅಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಅಪೂರ್ವ ಅವಕಾಶವೊಂದು ಭಾರತಕ್ಕೆ ಎದುರಾಗಿದೆ. ಇದರಲ್ಲಿ ರೋಹಿತ್​ ಬಳಗ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದೊಂದು ಕುತೂಹಲ. ದಿನದ ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಫಘಾನಿಸ್ತಾನ ತಂಡ ಸೆಣಸಾಟ ನಡೆಸಲಿದೆ.

ಅಡಿಲೇಡ್​ನಲ್ಲಿ ನಡೆದಿದ್ದ ಕಳೆದ ಟಿ20 ವಿಶ್ವಕಪ್​ ಸೆಮೀ ಫೈನಲ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಭಾರತ 6 ವಿಕೆಟ್​ಗೆ 168 ರನ್​ಗಳ ಸಾಧಾರಣ ಮೊತ್ತ​ ಪೇರಿಸಿ ಸವಾಲೊಡ್ಡಿತು. ಈ ಮೊತ್ತವನ್ನು ಇಂಗ್ಲೆಂಡ್​ 16 ಓವರ್​ಗಳಲ್ಲೇ ವಿಕೆಟ್​ ನಷ್ಟವಿಲ್ಲದೆ 170 ರನ್​ ಗಳಿಸಿ ಗೆದ್ದಿತ್ತು. ಜಾಸ್​ ಬಟ್ಲರ್​(80*) ಮತ್ತು ಅಲೆಕ್ಸ್​ ಹೇಲ್ಸ್​(86*) ಅಜೇಯ ಬ್ಯಾಟಿಂಗ್​ ಆರ್ಭಟದ ಮುಂದೆ ಭಾರತೀಯ ಬೌಲರ್​ಗಳು ಸಂಪೂರ್ಣ ಮಂಕಾದರು. ಭಾರತ ಪರ ವಿರಾಟ್​ ಕೊಹ್ಲಿ ಮತ್ತು ಹಾರ್ದಿಕ್​ ಪಾಂಡ್ಯ ಅರ್ಧಶತಕ ಬಾರಿಸಿದ್ದರು. ಆದರೆ ಈ ಬಾರಿ ಕೊಹ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ವಿಫಲರಾಗಿದ್ದಾರೆ. 2 ಶೂನ್ಯ ಕೂಡ ಸುತ್ತಿದ್ದಾರೆ. ಎರಡಂಕಿ ಮೊತ್ತ ಪೇರಿಸಿದ್ದು ಒಮ್ಮೆ ಮಾತ್ರ.

ಇದನ್ನೂ ಓದಿ IND vs ENG: ಭಾರತ-ಇಂಗ್ಲೆಂಡ್​ ಸೆಮಿ ಕಾದಾಟಕ್ಕೆ ಮೀಸಲು ದಿನ ಇಲ್ಲ; ಪಂದ್ಯ ರದ್ದಾದರೆ ಯಾರಾಗಲಿದ್ದಾರೆ ವಿಜೇತರು?

ಮಳೆ ಬಂದರೆ ಭಾರತಕ್ಕೆ ಲಾಭ


ಪ್ರಾವಿಡೆನ್ಸ್​ ಸ್ಟೇಡಿಯಂನಲ್ಲಿ ನಡೆಯಲಿರುವ ಇತ್ತಂಡಗಳ ನಡುವಣ ಈ ಪಂದ್ಯಕ್ಕೆ ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಪಂದ್ಯದ ಸಮಯದಲ್ಲಿ ಮಳೆ ಸುರಿಯುವ ಸಾಧ್ಯತೆ ಶೇ. 88ರಷ್ಟಿದೆ ಎಂದು ಎಚ್ಚರಿಕೆ ನೀಡಿದೆ. ಪಂದ್ಯ ರದ್ದಾದರೂ ಅಚ್ಚರಿ ಇಲ್ಲ ಎಂದು ಹೇಳಿದೆ. ಈ ಪಂದ್ಯಕ್ಕೆ ಮೀಸಲು ದಿನವಿಲ್ಲ. ಆದರೆ, ಪಂದ್ಯ ಮುಗಿಸಲು 250 ನಿಮಿಷಗಳ ಹೆಚ್ಚುವರಿ ಸಮಯವನ್ನು ಐಸಿಸಿ ನೀಡಿದೆ. ಒಂದು ವೇಳೆ ಪಂದ್ಯ ರದ್ದುಗೊಂಡರೆ ಭಾರತ ತಂಡ ಫೈನಲ್​ಗೇರಲಿದೆ. ಏಕೆಂದರೆ ಸೂಪರ್​-8 ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಸಂಪಾದಿಸಿದೆ. ಇಂಗ್ಲೆಂಡ್​ ಸೂಪರ್​-8 ಅಂಕಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿತ್ತು. ಹೀಗಾಗಿ ಈ ಲಾಭ ಭಾರತಕ್ಕೆ ಲಭಿಸಲಿದೆ.

ಜೂನ್​ 29ಕ್ಕೆ ಬ್ರಿಜ್​ಟೌನ್​ನಲ್ಲಿ ಫೈನಲ್​ ಪಂದ್ಯ ನಡೆಯಲಿದೆ. ನಿಗದಿತ ದಿನದಂದು ಪಂದ್ಯ ಪೂರ್ಣಗೊಳ್ಳಲಿದ್ದರೆ. ಪಂದ್ಯ ಎಲ್ಲಿಗೆ ನಿಂತಿರುತ್ತದೆಯೇ ಅಲ್ಲಿಂದಲೇ ಮೀಸಲು ದಿನ ಅಂದರೆ ಜೂನ್​ 30 (ಭಾನುವಾರ) ನಡೆಯಲಿದೆ. ಫೈನಲ್​ನಲ್ಲೂ ಫಲಿತಾಂಶ ನಿರ್ಧಾರಕ್ಕೆ ಉಭಯ ತಂಡಗಳು ಕನಿಷ್ಠ 10 ಓವರ್​ ಆಡಬೇಕು. ಮೀಸಲು ದಿನವೂ ಮಳೆ ಅಡ್ಡಿಪಡಿಸಿದರೆ, ಫೈನಲ್​ಗೇರಿದ ಎರಡೂ ತಂಡಗಳನ್ನು ಜಂಟಿ ಚಾಂಪಿಯನ್​ ಎಂದು ಐಸಿಸಿ ಘೋಷಿಸಲಿದೆ.

Continue Reading

ಕ್ರೀಡೆ

Inzamam Ul Haq: ಭಾರತ ತಂಡದ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ ಪಾಕ್​ ಮಾಜಿ ನಾಯಕ

Inzamam Ul Haq: ಪಾಕ್​ ತಂಡ ಈ ಬಾರಿ ಆಡಿದ ಟಿ20 ವಿಶ್ವಕಪ್​ ಪಂದ್ಯದಲ್ಲಿ ಕ್ರಿಕೆಟ್​ ಶಿಶು ಅಮೆರಿಕ ವಿರುದ್ಧವೂ ಹೀನಶಯವಾಗಿ ಸೋಲು ಕಂಡಿತ್ತು. ಆಡಿದ 4 ಪಂದ್ಯಗಳಲ್ಲಿ ಕೇವ 2 ಪಂದ್ಯ ಮಾತ್ರ ಗೆದ್ದು ಲೀಗ್​ ಹಂತದಿಂದಲೇ ನಿರ್ಗಮನ ಕಂಡಿತ್ತು. ಈ ಸೋಲು ಪಾಕ್​ನ ಮಾಜಿ ಆಟಗಾರರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

VISTARANEWS.COM


on

Inzamam Ul Haq
Koo

ಕರಾಚಿ: ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಮಾತಿನಂತೆ ಪಾಕಿಸ್ತಾನದ ತಕರಾರು ಮುಗಿದಂತೆ ಕಾಣುತ್ತಿಲ್ಲ. ಟಿ20 ವಿಶ್ವಕಪ್(T20 World Cup 2024)​ ಟೂರ್ನಿಯಿಂದ ಹೊರಬಿದ್ದಿರುವುದನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತೋರುತ್ತಿದೆ. ಪಾಕಿಸ್ತಾನದ ಮಾಜಿ ನಾಯಕ ಹಾಗೂ ಆಟಗಾರ ಇಂಜಮಾಮ್ ಉಲ್ ಹಕ್(Inzamam Ul Haq) ಅವರು ಭಾರತದ ತಂಡದ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ವಿಶ್ಲೇಷಣಾ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಇಂಜಮಾಮ್ ಉಲ್ ಹಕ್ ಈ ಆರೋಪ ಮಾಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿದ್ದ ಸಲೀಂ ಮಲಿಕ್ ಅವರು ವೇಗಿ ಅರ್ಶ್​ದೀಪ್ ಸಿಂಗ್(Arshdeep Singh) ಅವರ ರಿವರ್ಸ್ ಸ್ವಿಂಗ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಆದರೆ, ಇಂಜಮಾಮ್ ಅವರು ಅರ್ಶ್​ದೀಪ್ ರಿವರ್ಸ್ ಸ್ವಿಂಗ್ ಬಗ್ಗೆ ಅನುಮಾನವಿದೆ ಎಂದು ಹೇಳಿದರು.

“15ನೇ ಓವರ್​ನಲ್ಲಿ ಅರ್ಶದೀಪ್​ ಸಿಂಗ್​ ಬೌಲಿಂಗ್​ ನಡೆಸುವ ವೇಳೆ ಚೆಂಡು ಹೆಚ್ಚು ಸ್ವಿಂಗ್​ ಆಗುತ್ತಿತ್ತು. ನಾನು ಗಮನಿಸಿದ ಹಾಗೆ ಈ ರೀತಿ ಚೆಂಡು ಏಕಾಏಕಿ ಸ್ವಿಂಗ್​ ಆಗಲು ಸಾಧ್ಯವಿಲ್ಲ. ನನ್ನ ಪ್ರಕಾರ ಭಾರತೀಯ ಆಟಗಾರರು 12 ಅಥವಾ 13ನೇ ಓವರ್​ನಲ್ಲಿ ಚೆಂಡಿಗೆ ಶೈನಿಂಗ್​ ಹಚ್ಚಿದಂತೆ ಕಾಣುತ್ತಿದೆ. ಅಂಪೈರ್​ಗಳು ಇದನ್ನು ಸೂಕ್ಷವಾಗಿ ಪರಿಗಣಿಸಬೇಕು. ಇಲ್ಲಿ ಯಾವುದೋ ಮೋಸದಾಟ ನಡೆದಂತಿದೆ” ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ ಪಾಕ್​ ತಂಡದ ಸರಣಿ ಸೋಲಿನ ರಹಸ್ಯ ಬಯಲು ಮಾಡಿದ ಮಾಜಿ ನಾಯಕ

ಇಂಜಮಾಮ್ ಅವರ ಈ ಆರೋಪಕ್ಕೆ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸರಿಯಾದ ತಿಇರುಗೇಟು ನೀಡಿದ್ದಾರೆ. ನೀವು ಮಾಡುತ್ತಿರುವ ಈ ಆರೋಪ ಯಾವ ಕಾರಣಕ್ಕೆ ಎಂದು ಭಾರತೀಯರಿಗೆ ಮಾತ್ರವಲ್ಲ ಬೇರೆ ದೇಶದ ಕ್ರಿಕೆಟಿಗರಿಗು ತಿಳಿದಿದೆ. ಟೂರ್ನಿಯಿಂದ ಹೊರ ಬಿದ್ದರೂ ಕೂಡ ಕೊಂಕು ಬಯಸುವ ನಿಮ್ಮ ಈ ನರಿ ಬುದ್ದಿಯನ್ನು ಮೊದಲು ಬಿಟ್ಟು ಬಿಡಿ ಎಂದಿದ್ದಾರೆ.

ಪಾಕ್​ ತಂಡ ಈ ಬಾರಿ ಆಡಿದ ಟಿ20 ವಿಶ್ವಕಪ್​ ಪಂದ್ಯದಲ್ಲಿ ಕ್ರಿಕೆಟ್​ ಶಿಶು ಅಮೆರಿಕ ವಿರುದ್ಧವೂ ಹೀನಶಯವಾಗಿ ಸೋಲು ಕಂಡಿತ್ತು. ಆಡಿದ 4 ಪಂದ್ಯಗಳಲ್ಲಿ ಕೇವ 2 ಪಂದ್ಯ ಮಾತ್ರ ಗೆದ್ದು ಲೀಗ್​ ಹಂತದಿಂದಲೇ ನಿರ್ಗಮನ ಕಂಡಿತ್ತು. ಈ ಸೋಲು ಪಾಕ್​ನ ಮಾಜಿ ಆಟಗಾರರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಭಾರತದ ಬಿರುದ್ಧ ಇಲ್ಲ ಸಲ್ಲದ ಆರೋಪ ಮಾಡಲಾರಂಭಿಸಿದ್ದಾರೆ.

ಪಾಕಿಸ್ತಾನದ ಮಾಜಿ ಆಟಗಾರರು ಭಾರತೀಯ ಆಟಗಾರರ ಮೇಲೆ ಈ ರೀತಿಯ ಆರೋಪಗಳು ಮಾಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯ ವೇಳೆಯೂ ಇಂತಹ ಹಲವು ಆರೋಪಗಳನ್ನು ಮಾಡಿದ್ದರು. ಭಾರತೀಯ ಆಟಗಾರರು ಬೌಲಿಂಗ್​ ಮತ್ತು ಬ್ಯಾಟಿಂಗ್​ ನಡೆಸುವ ವೇಳೆ ಬೇರೆ ಬೆಂಡನ್ನು ಬಳಸುತ್ತಾರೆ, ಐಸಿಸಿ ಕೂಡ ಭಾರತಕ್ಕೆ ಬೆಂಬಲ ನೀಡುತ್ತಿದೆ ಎಂದು ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದರು.

Continue Reading

ಕ್ರೀಡೆ

IND vs ENG: ಭಾರತ-ಇಂಗ್ಲೆಂಡ್​ ಸೆಮಿ ಕಾದಾಟಕ್ಕೆ ಮೀಸಲು ದಿನ ಇಲ್ಲ; ಪಂದ್ಯ ರದ್ದಾದರೆ ಯಾರಾಗಲಿದ್ದಾರೆ ವಿಜೇತರು?

IND vs ENG: ಭಾರತ-ಇಂಗ್ಲೆಂಡ್​ ನಡುವಿನ 2ನೇ ಸೆಮಿಫೈನಲ್​ ಪಂದ್ಯಕ್ಕೆ ಮೀಸಲು ದಿನವಿಲ್ಲ. ಹೀಗಾಗಿ ಒಂದು ವೇಳೆ ಪಂದ್ಯ ರದ್ದುಗೊಂಡರೆ ಭಾರತ ತಂಡ ಫೈನಲ್​ಗೇರಲಿದೆ. ಏಕೆಂದರೆ ಸೂಪರ್​-8 ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಸಂಪಾದಿಸಿದೆ.

VISTARANEWS.COM


on

IND vs ENG
Koo

ಗಯಾನಾ: ಹಾಲಿ ಆವೃತ್ತಿಯ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಯಲ್ಲಿ ಅಜೇಯ ಗೆಲುವಿನೋಟ ಮುಂದುವರಿಸಿರುವ ಟೀಮ್​ ಇಂಡಿಯಾ ನಾಳೆ(ಗುರುವಾರ) ಪ್ರಾವಿಡೆನ್ಸ್​ ಸ್ಟೇಡಿಯಂನಲ್ಲಿ ನಡೆಯಲಿರುವ 2ನೇ ಸೆಮಿಫೈನಲ್(India vs England semi-final)​ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್(IND vs ENG)​ ತಂಡದ ಸವಾಲು ಎದುರಿಸಲಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡಚಣೆ ತರುವ ಭೀತಿ ಎದುರಾಗಿದೆ.

ಹವಾಮಾನ ವರದಿಗಳ ಪ್ರಕಾರ ಭಾರಿ ಮಳೆಯಿಂದಾಗಿ ಪಂದ್ಯ ರದ್ದಾದರೂ ಅಚ್ಚರಿ ಇಲ್ಲ ಎಂದು ಎಚ್ಚರಿಕೆ ನೀಡಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ವಿಜೇತರನ್ನು ನಿರ್ಧರಿಸುವುದು ಹೇಗೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಅಭಿಮಾನಿಗಳಲ್ಲಿ ಈ ಪ್ರಶ್ನೆ ಕಾಡಲೂ ಕೂಡ ಒಂದು ಕಾರಣವಿದೆ. ದಕ್ಷಿಣ ಆಫ್ರಿಕಾ-ಅಫಘಾನಿಸ್ತಾನ ನಡುವಿನ ಮೊದಲ ಸೆಮಿಫೈನಲ್​ ಪಂದ್ಯಕ್ಕೆ ಮೀಸಲು ದಿನವಿದ್ದರೂ, ಭಾರತ-ಇಂಗ್ಲೆಂಡ್​ ನಡುವಿನ 2ನೇ ಸೆಮಿಫೈನಲ್​ ಪಂದ್ಯಕ್ಕೆ ಮೀಸಲು ದಿನವಿಲ್ಲ. ಹೀಗಾಗಿ ಒಂದು ವೇಳೆ ಪಂದ್ಯ ರದ್ದುಗೊಂಡರೆ ಭಾರತ ತಂಡ ಫೈನಲ್​ಗೇರಲಿದೆ. ಏಕೆಂದರೆ ಸೂಪರ್​-8 ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಸಂಪಾದಿಸಿದೆ. ಇಂಗ್ಲೆಂಡ್​ ಸೂಪರ್​-8 ಅಂಕಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿತ್ತು. ಹೀಗಾಗಿ ಈ ಲಾಭ ಭಾರತಕ್ಕೆ ಲಭಿಸಲಿದೆ.

ಶೇ. 88 ರಷ್ಟು ಮಳೆ


ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಪಂದ್ಯದ ಸಮಯದಲ್ಲಿ ಮಳೆ ಸುರಿಯುವ ಸಾಧ್ಯತೆ ಶೇ. 88ರಷ್ಟಿದೆ. ಫೈನಲ್​ ಪಂದ್ಯ ಶನಿವಾರವೇ ನಡೆಯಲಿರುವುದರಿಂದ, 2ನೇ ಸೆಮೀಸ್​ಗೆ ಮೀಸಲು ದಿನವಿಲ್ಲ ಎಂದು ಐಸಿಸಿ ಈ ಮೊದಲೇ ಸ್ಪಷ್ಟಪಡಿಸಿತ್ತು. ಈ ಪಂದ್ಯಕ್ಕೆ ಮೀಸಲು ದಿನ ಇರದಿದ್ದರೂ ಕೂಡ ಪಂದ್ಯ ಮುಗಿಸಲು 250 ನಿಮಿಷಗಳ ಹೆಚ್ಚುವರಿ ಸಮಯವನ್ನು ಐಸಿಸಿ ನೀಡಿದೆ. ಜತೆಗೆ ಸೆಮಿಫೈನಲ್​ನಲ್ಲಿ ಸ್ಪಷ್ಟ ಫಲಿತಾಂಶ ಬರಬೇಕಾದರೆ ಉಭಯ ತಂಡಗಳು ಕನಿಷ್ಠ 10 ಓವರ್​ಗಳ ಪಂದ್ಯ ಆಡಬೇಕಾಗಿದೆ. ಲೀಗ್​, ಸೂಪರ್​-8ನಲ್ಲಿ ಫಲಿತಾಂಶಕ್ಕೆ ಕನಿಷ್ಠ 5 ಓವರ್​ಗಳ ಪಂದ್ಯ ಸಾಕಾಗಿತ್ತು.

ಇದನ್ನೂ ಓದಿ IND vs AUS : ಟಿ20 ವಿಶ್ವ ಕಪ್​ 2024ರಲ್ಲಿ ಗರಿಷ್ಠ ಸ್ಕೋರ್ ಬಾರಿಸಿದ ಭಾರತ ತಂಡ; 5 ವಿಕೆಟ್​ಗೆ 205

ಫೈನಲ್​ಗಿದೆ ಮೀಸಲು ದಿನ


ಮೊದಲ ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಕ್ಕೆ ಮೀಸಲು ದಿನ ಇದೆ. ಜೂನ್​ 29ಕ್ಕೆ ಬ್ರಿಜ್​ಟೌನ್​ನಲ್ಲಿ ಫೈನಲ್​ ಪಂದ್ಯ ನಡೆಯಲಿದೆ. ನಿಗದಿತ ದಿನದಂದು ಪಂದ್ಯ ಪೂರ್ಣಗೊಳ್ಳಲಿದ್ದರೆ. ಪಂದ್ಯ ಎಲ್ಲಿಗೆ ನಿಂತಿರುತ್ತದೆಯೇ ಅಲ್ಲಿಂದಲೇ ಮೀಸಲು ದಿನ ಅಂದರೆ ಜೂನ್​ 30 (ಭಾನುವಾರ) ನಡೆಯಲಿದೆ. ಫೈನಲ್​ನಲ್ಲೂ ಫಲಿತಾಂಶ ನಿರ್ಧಾರಕ್ಕೆ ಉಭಯ ತಂಡಗಳು ಕನಿಷ್ಠ 10 ಓವರ್​ ಆಡಬೇಕು. ಮೀಸಲು ದಿನವೂ ಮಳೆ ಅಡ್ಡಿಪಡಿಸಿದರೆ, ಫೈನಲ್​ಗೇರಿದ ಎರಡೂ ತಂಡಗಳನ್ನು ಜಂಟಿ ಚಾಂಪಿಯನ್​ ಎಂದು ಐಸಿಸಿ ಘೋಷಿಸಲಿದೆ.

Continue Reading
Advertisement
Self Harming
ಕರ್ನಾಟಕ16 seconds ago

Self Harming: ಕೆಲಸದಿಂದ ತೆಗೆದು ಕಿರುಕುಳ; ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

jewellery robbery case
ಕ್ರೈಂ53 seconds ago

Robbery Case: 30 ಸೆಕೆಂಡ್‌ನಲ್ಲಿ ಇಡೀ ಜ್ಯುವೆಲ್ಲರಿ ದರೋಡೆ, ಸಿಸಿಟಿವಿಯಲ್ಲಿ ಕೃತ್ಯ ಸೆರೆ

Parineethi Chopra
Latest12 mins ago

Parineethi Chopra: ಏಳುಮಲ್ಲಿಗೆ ತೂಕದ ಚೆಲುವೆ ಪರಿಣಿತಿ ಚೋಪ್ರಾ ಸಿಕ್ಕಾಪಟ್ಟೆ ದಪ್ಪಗಾಗಿದ್ದು ಯಾಕೆ?

Asaduddin Owais
ದೇಶ15 mins ago

Asaduddin Owais: ಪ್ರಮಾಣ ವಚನ ಸ್ವೀಕರಿಸಿ ‘ಜೈ ಪ್ಯಾಲೆಸ್ತೀನ್​’ ಘೋಷಣೆ ಕೂಗಿದ ಓವೈಸಿ ಸದಸ್ಯತ್ವ ರದ್ದು? ಕಾನೂನು ಏನು ಹೇಳುತ್ತದೆ?

Actor Darshan support by anchor hemalatha
ಸ್ಯಾಂಡಲ್ ವುಡ್20 mins ago

‌Actor Darshan: ರೇಣುಕಾಸ್ವಾಮಿಯನ್ನ ಹೀರೊ ಮಾಡೋದು ನಿಲ್ಲಿಸಿ, ದರ್ಶನ್‌ನ ಬಿಟ್ಟುಕೊಡಲ್ಲ ಎಂದ ಖ್ಯಾತ ನಿರೂಪಕಿ!

Life threat
ಕರ್ನಾಟಕ34 mins ago

Life threat: ಹುಬ್ಬಳ್ಳಿ ಏರ್‌ಪೋರ್ಟ್‌ ನಿರ್ದೇಶಕರಿಗೆ ಜೀವ ಬೆದರಿಕೆ; ʼಲಾಂಗ್ ಲಿವ್ ಪ್ಯಾಲೆಸ್ತೀನ್ʼ ಮೇಲ್‌ ಐಡಿಯಿಂದ ಸಂದೇಶ

Para Badminton Ranking
ಕ್ರೀಡೆ45 mins ago

Para Badminton Ranking: ಮೊದಲ ಬಾರಿಗೆ ವಿಶ್ವ ನಂ.1 ಸ್ಥಾನಕ್ಕೇರಿದ ಕನ್ನಡಿಗ ಸುಹಾಸ್‌ ಯತಿರಾಜ್

Actor Darshan Renukaswamy assault police lathi found How did D Gang get
ಕ್ರೈಂ52 mins ago

Actor Darshan: ರೇಣುಕಾಸ್ವಾಮಿ ಹಲ್ಲೆಗೆ ಬಳಸಿದ್ದ ʻಪೊಲೀಸ್ ಲಾಠಿʼ ಪತ್ತೆ! ʻಡಿ ಗ್ಯಾಂಗ್‌ʼಗೆ ಸಿಕ್ಕಿದ್ದು ಹೇಗೆ?

IRCTC
ದೇಶ1 hour ago

IRCTC: ಆನ್‌ಲೈನ್‌ನಲ್ಲಿ ರೈಲ್ವೇ ಟಿಕೆಟ್‌ ಬುಕ್ಕಿಂಗ್‌ ಮಾಡೋ ಮುನ್ನ ಹೊಸ ನಿಯಮದ ಬಗ್ಗೆ ಇರಲಿ ಗಮನ!

1983 World Cup
ಕ್ರೀಡೆ1 hour ago

1983 WC Win Anniversary: ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿನ​ ಸವಿ ನೆನಪನ್ನು ವಿಂಡೀಸ್​ನಲ್ಲಿ ಕೇಕ್​ ಕತ್ತರಿಸಿ ಸಂಭ್ರಮಿಸಿದ ರವಿಶಾಸ್ತ್ರಿ, ಗವಾಸ್ಕರ್, ​ಬಿನ್ನಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌