Zodiac Compatibility: ಈ ಕೆಳಗಿನ ರಾಶಿಯ ಮಂದಿ ಅಷ್ಟು ಸುಲಭದಲ್ಲಿ ಪ್ರೀತಿಯಲ್ಲಿ ಬೀಳುವುದಿಲ್ಲ! - Vistara News

ಭವಿಷ್ಯ/ಧಾರ್ಮಿಕ

Zodiac Compatibility: ಈ ಕೆಳಗಿನ ರಾಶಿಯ ಮಂದಿ ಅಷ್ಟು ಸುಲಭದಲ್ಲಿ ಪ್ರೀತಿಯಲ್ಲಿ ಬೀಳುವುದಿಲ್ಲ!

ಯಾವೆಲ್ಲ ರಾಶಿಯ ಮಂದಿ (Zodiac compatibility) ಅಷ್ಟು ಸುಲಭಕ್ಕೆ ಪ್ರೀತಿಯಲ್ಲಿ ಬೀಳುವುದಿಲ್ಲ ಎಂಬುದನ್ನು ನೋಡೋಣ ಬನ್ನಿ.

VISTARANEWS.COM


on

love and zodiac
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಎಲ್ಲರ ಗುಣವೂ ಒಂದೇ ಥರ ಇರುವುದಿಲ್ಲ. ತಮ್ಮ ರಾಶಿಯ ಗುಣಗಳಿಗೆ ಅನುಸಾರವಾಗಿ ಪ್ರತಿಯೊಬ್ಬರಿಗೂ ಅವರವರ ಮೂಲ ಗುಣಗಳಿದ್ದೇ (Zodiac Characters) ಇರುತ್ತದೆ ಎಂಬುದನ್ನು ಜ್ಯೋತಿಷ್ಯ ವಿಜ್ಞಾನ (Astrology) ಹೇಳುತ್ತದೆ. ಪ್ರೀತಿಯ ವಿಚಾರವೂ ಅಷ್ಟೇ. ರಾಶಿ ಉಣದ ಆಧಾರದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಮೂಲಗುಣಗಳು ಇವೆ. ಅಂದರೆ, ಕೆಲವರಿಗೆ ಪ್ರೀತಿಯಲ್ಲಿ ಬೀಳಲು ಸೆಕೆಂಡುಗಳು ಸಾಕು. ನೋಡಿದ ತಕ್ಷಣ ಬೀಳುವುದು ಪ್ರೀತಿಯಲ್ಲೇ. ಹಾಗಂತ ಇವರದ್ದು ನಿಜವಾದ ಪ್ರೀತಿ ಅಲ್ಲ, ಪ್ರೀತಿಯಲ್ಲಿ ಬೀಳುವುದೇ ಇವರಿಗೆ ಚಟ ಎಂದು ಅರ್ಥೈಸಿಕೊಳ್ಳಬೇಕಾಗಿಲ್ಲ. ಕೆಲವರು ಪ್ರೀತಿ ಎಂದು ತಿಳಿದು ಮೋಸ ಹೋಗಬಹುದು, ಇನ್ನೂ ಕೆಲವರು, ನಿಜವಾದ ಪ್ರೀತಿಯನ್ನೇ ದಕ್ಕಿಸಿಕೊಂಡಿರಬಹುದು ಹೀಗೆ ಅನೇಕ ಬಗೆಗಳಿರುತ್ತವೆ. ಆದರೆ, ಕೆಲವರು ಮಾತ್ರ ಸುಲಭಕ್ಕೆ ಪ್ರೀತಿಯಲ್ಲಿ ಬೀಳುವುದಿಲ್ಲ. ಅವರು ಪ್ರೀತಿಯಲ್ಲಿ ಬಿದ್ದರೂ ಅಷ್ಟು ಸುಲಭಕ್ಕೆ ಬಿದ್ದೆವೆಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಪ್ರೀತಿ ಪಕ್ವವಾಗುವವರೆಗೂ ಸಮಯ ತೆಗೆದುಕೊಳ್ಳುತ್ತಾರೆ. ಒರೆಗೆ ಹಚ್ಚಿ, ಇದು ಪ್ರೀತಿಯಾ ಎಂಬುದನ್ನು ಮತ್ತೆ ಮತ್ತೆ ಖಚಿತಪಡಿಸಿಕೊಳ್ಳುತ್ತಾರೆ. ಪೂರ್ತಿ ನಂಬಿಕೆ ಬರಲು ದೀರ್ಘ ಸಮಯ ತೆಗೆದುಕೊಂಡರೂ, ಪ್ರೀತಿಯಲ್ಲಿ ಬಿದ್ದೆವೆಂದು (love and zodiac) ಒಪ್ಪಿಕೊಂಡರೆ ಇವರದ್ದು ಕರಡಿ ಪ್ರೀತಿ. ಬನ್ನಿ, ಯಾವೆಲ್ಲ ರಾಶಿಯ ಮಂದಿ (Zodiac compatibility) ಅಷ್ಟು ಸುಲಭಕ್ಕೆ ಪ್ರೀತಿಯಲ್ಲಿ ಬೀಳುವುದಿಲ್ಲ ಎಂಬುದನ್ನು ನೋಡೋಣ ಬನ್ನಿ.

1. ವೃಷಭ: ಈ ರಾಶಿ ಮಂದಿಯ ಲೆಕ್ಕಾಚಾರ ಬೇರೆಯೇ. ಇವರು ನಂಬಿಕೆ ಎಂಬುದರ ತಳಹದಿ ಗಟ್ಟಿಯಾಗಿಸಿದ ಮೇಲೆಯೇ ಪ್ರೀತಿಯ ಸೌಧ ಕಟ್ಟಲು ಹೊರಡುತ್ತಾರೆ. ನಂಬಿಕೆಯ ತಳಹದಿ ಸ್ವಲ್ಪ ಅಲ್ಲಾಡಿದರೂ ಸಾಕು, ಆ ಕಟ್ಟಡ ಕಟ್ಟುವ ಆಸಕ್ತಿಯೇ ಇವರಿಗೆ ಹೊರಟುಹೋಗುತ್ತದೆ. ಹಾಗಾಗಿ ಇವರು ನಿಜವಾದ ಪ್ರೀತಿಯಲ್ಲಿ ಬೀಳಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ.

2. ಕನ್ಯಾ: ಕನ್ಯಾ ರಾಶಿಯ ಮಂದಿ ಭಾವನೆಗೆ ಬೆಲೆ ಕೊಡುವವರು. ಇವರಿಗೆ ಭಾವನಾತ್ಮಕವಾಗಿ ಇನ್ನೊಬ್ಬರ ಜೊತೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ತಮಗೆ ಇಷ್ಟವಾದರು ನಿಜವಾಗಿಯೂ ನಮ್ಮ ಪ್ರೀತಿ ಅರ್ಹರೇ ಎಂದು ತಿಳಿದುಕೊಳ್ಳಲು ಇವರು ನಾನಾ ಬಗೆಗಳಲ್ಲಿ ಅವರನ್ನು ನೋಡುತ್ತಾರೆ. ಅವರ ಇಷ್ಟಾನಿಷ್ಟಗಳು, ಭಾವನೆಗಳು, ಆಸಕ್ತಿಗಳು ಹೀಗೆ ಬಹಳ ವಿಚಾರಗಳಲ್ಲಿ ಹೊಂದಾಣಿಕೆ ಇದೆ ಅನಿಸಿದರೆ ಇವರು ನಿಧಾನವಾಗಿ ಪ್ರೀತಿಯ ಆಳಕ್ಕೆ ಬೀಳುತ್ತಾರೆ.

3. ವೃಶ್ಚಿಕ: ಈ ರಾಶಿಯ ಮಂದಿ ಗಾಢತೆ ಹಾಗೂ ಆಳವಾದ ಪ್ರೀತಿಗೆ ಹೆಸರಾದವರು. ಇವರಿಗೆ ತಮ್ಮ ನಿಜವಾದ ಭಾವನೆಯನ್ನು ಅರಿತುಕೊಳ್ಳಲು ಹಾಗೂ ಮತ್ತೊಬ್ಬರಿಗೆ ತಿಳಿಸಲು ಸಮಯ ಬೇಕಾಗುತ್ತದೆ. ಪ್ರೀತಿಯ ಆಳ ಅವರಿಗೆ ಅರಿತ ಮೇಲಷ್ಟೇ ಇವರು ಪ್ರೀತಿಸಿದವರಿಗೆ ನಿವೇದಿಸಲು ಬಯಸುತ್ತಾರೆ.

4. ಮಕರ: ಈ ರಾಶಿಯ ಮಂದಿ ಪ್ರೀತಿಯಲ್ಲಿ ಅಷ್ಟು ಸುಲಭವಾಗಿ ಬೀಳುವುದಿಲ್ಲ. ಬಿದ್ದರೂ ಅದನ್ನು ಒಪ್ಪಿಕೊಳ್ಳುವುದಕ್ಕೆ ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಅಂದರೆ, ತಮ್ಮಿಬ್ಬರ ಇಷ್ಟಾನಿಷ್ಟಗಳನ್ನು ಬಹಳಷ್ಟು ಅಳೆದು ತೂಗಿ, ಒಂದಕ್ಕೊಂದು ಹೊಂದಿಕೆ ಆಗುತ್ತದಾ ಎಂದು ಸಾಕಷ್ಟು ಯೋಚಿಸಿದ ಮೇಲೆ ಪ್ರೀತಿ ಪಕ್ಕಾ ಆಗಿದೆ ಎಂದು ಅನಿಸಿದರೆ, ನಾನಾ ಪ್ರಕಾರಗಳಲ್ಲಿ ಒರೆಗೆ ಹಚ್ಚಿ ನೋಡಿ ಇದು ಅಪ್ಪಟ ಚಿನ್ನ ಎಂದು ತಿಳಿದ ಮೇಲಷ್ಟೇ ಪ್ರೀಯ ದೋಣಿಗೆ ಕಾಲಿಡುತ್ತಾರೆ.

5. ಕುಂಭ:‌ ಈ ರಾಶಿಯ ಮಂದಿ ಬಹಳ ಇಂಡಿಪೆಂಡೆಂಟ್‌ ವ್ಯಕ್ತಿತ್ವವುಳ್ಳವರು. ಪ್ರೀತಿಯಲ್ಲಿ ಬಿದ್ದಾಗಲೂ ಅಷ್ಟೇ ತಮ್ಮದೇ ವ್ಯಕ್ತಿತ್ವವನ್ನು ಹಾಗೆಯೇ ಇರಬಯಸುವವರು. ಹಾಗಾಗಿ ತಮ್ಮೊಳಗೆ ಪ್ರೀತಿಯಿಂದಾದ ಆಳವಾದ ಪರಿಣಾಮವನ್ನು ಅರ್ಥ ಮಾಡಿಕೊಳ್ಳಲು ಹಾಗೂ ಭಾವನೆಯನ್ನು ತಿಳಿಸಲು ಇವರಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಹಾಗಾಗಿ ಪ್ರೀತಿಯಂತಹ ಸಂಬಂಧಗಳ ವಿಚಾರದಲ್ಲಿ ಇವರು ಅಷ್ಟು ಸುಲಭದಲ್ಲಿ ಬೀಳುವುದಿಲ್ಲ.

ಇದನ್ನೂ ಓದಿ: Zodiac Compatibility: ಯಾವ ರಾಶಿ ಜೋಡಿಗಳು ಸಂಬಂಧದಲ್ಲಿ ಹಾವು ಮುಂಗುಸಿಗಳಂತಾಗುತ್ತಾರೆ ಗೊತ್ತೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಭವಿಷ್ಯ

Dina Bhavishya : ಈ ರಾಶಿಯವರು ಯಾರೊಂದಿಗೂ ದಿನದ ಮಟ್ಟಿಗೆ ಹಣಕಾಸಿನ ವ್ಯವಹಾರ ಮಾಡಬೇಡಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷದ ಚತುರ್ದಶಿ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಬುಧವಾರವೂ ವೃಶ್ಚಿಕ ರಾಶಿಯಲ್ಲೆ ನೆಲಸಲಿದ್ದಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ತುಲಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ವೃಷಭ ರಾಶಿಯವರು ಸಂಬಂಧವಿರದ ವಿಷಯಗಳಿಗೆ ಕಿವಿಗೊಡವುದು ಬೇಡ. ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಹಳೆಯ ವಿಚಾರಗಳನ್ನು ಕೆರಳಿಸಿ ಗಾಯ ಮಾಡಿಕೊಳ್ಳುವುದು ಬೇಡ. ಮಿಥುನ ರಾಶಿಯವರು ನಿಮ್ಮ ಅಭಿಪ್ರಾಯಗಳಿಗೆ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ, ಹೀಗಾಗಿ ಆತುರದಲ್ಲಿ ಮಾತನಾಡಿ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ. ಅನಿರೀಕ್ಷಿತ ಖರ್ಚು ಇರಲಿದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (22-05-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ
ತಿಥಿ: ಚತುರ್ದಶಿ 18:47 ವಾರ: ಬುಧವಾರ
ನಕ್ಷತ್ರ: ಸ್ವಾತಿ 07:45 ಯೋಗ: ವರಿಯಾನ 12:35
ಕರಣ: ಗರಜ 06:17 ಅಮೃತ ಕಾಲ: ರಾತ್ರಿ 11:54 ರಿಂದ 01:36 ರವರಗೆ
ದಿನದ ವಿಶೇಷ: ಕೂರ್ಮ ಜಯಂತಿ

ಸೂರ್ಯೋದಯ : 05:53   ಸೂರ್ಯಾಸ್ತ : 06:40

ರಾಹುಕಾಲ : ಮಧ್ಯಾಹ್ನ 12.00 ರಿಂದ 1.30
ಗುಳಿಕಕಾಲ: ಬೆಳಗ್ಗೆ
10.30 ರಿಂದ 12.00
ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಸ್ನೇಹಿತರು ಅಥವಾ ಕುಟುಂಬದ ಸದಸ್ಯರೊಂದಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಸ್ವಲ್ಪ ಮಟ್ಟಿನ ವ್ಯತ್ಯಾಸದಿಂದ ಖರ್ಚು ಹೆಚ್ಚಲಿದೆ. ಹಿರಿಯರ ಮಾರ್ಗದರ್ಶನ ಸಿಗಲಿದೆ. ಅತಿಥಿಗಳ ಆಗಮನ ನಿಮ್ಮ ಯೋಚಿತ ಕಾರ್ಯ ವಿಳಂಬವಾಗುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ವಿರಸ ಉಂಟಾಗುವ ಸಾಧ್ಯತೆ ಇದೆ ಹೀಗಾಗಿ ಮಾತಿನಲ್ಲಿ ಹಿಡಿತವಿರಲಿ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 4

Horoscope Today

ವೃಷಭ:ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಪ್ರಶಂಸೆ ಸಿಗುವುದು. ದಿನದ ಮಟ್ಟಿಗೆ ಖರ್ಚು ಇರಲಿದೆ. ಸಂಬಂಧವಿರದ ವಿಷಯಗಳಿಗೆ ಕಿವಿಗೊಡವುದು ಬೇಡ. ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಹಳೆಯ ವಿಚಾರಗಳನ್ನು ಕೆರಳಿಸಿ ಗಾಯ ಮಾಡಿಕೊಳ್ಳುವುದು ಬೇಡ. ಆರೋಗ್ಯ ಮಧ್ಯಮವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 3

Horoscope Today

ಮಿಥುನ: ನಿಮ್ಮ ಅಭಿಪ್ರಾಯಗಳಿಗೆ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ, ಹೀಗಾಗಿ ಆತುರದಲ್ಲಿ ಮಾತನಾಡಿ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ. ಅನಿರೀಕ್ಷಿತ ಖರ್ಚು ಇರಲಿದೆ. ಆರೋಗ್ಯದ ಕಡೆಗೆ ಕಾಳಜಿ ವಹಿಸುವುದು ಉತ್ತಮ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕಟಕ: ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಗೃಹಬಳಕೆ ಸಾಧನಗಳ ಖರೀದಿ ಸಾಧ್ಯತೆಯಿಂದ ಖರ್ಚು ಇರಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಅತಿಥಿಗಳ ಆಗಮನ ಹರ್ಷ ತರಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

Horoscope Today

ಸಿಂಹ: ನಿಮ್ಮ ಮಾತುಗಳಿಂದ ಇತರರನ್ನು ಆಕರ್ಷಸುವಿರಿ. ನಾಲಿಗೆಯ ರುಚಿಗೆ ಮಾರು ಹೋಗಿ ಆರೋಗ್ಯ ಹಾಳು ಮಾಡಿಕೊಳ್ಳುವುದು ಬೇಡ, ಮಿತಿ ಇರಲಿ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಸಂಗಾತಿಯ ಮಾತುಗಳು ಮಧುರವೇನಿಸಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ಕನ್ಯಾ: ನಿಮ್ಮ ತ್ಯಾಗದ ಮನೋಭಾವ ನಿಮಗೆ ಸಂತಸ ತರುವುದು. ಯಾರೊಂದಿಗೂ ದಿನದ ಮಟ್ಟಿಗೆ ಹಣಕಾಸಿನ ವ್ಯವಹಾರ ಮಾಡಬೇಡಿ, ವಿನಾಕಾರಣ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ. ಕುಟುಂಬದಲ್ಲಿ ಅನಾವಶ್ಯಕ ಮಾತುಗಳಿಂದ ಜಗಳವಾಗಬಹುದು, ಮೌನದಿಂದ ವರ್ತಿಸಿ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 1

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಇತರರು ನಿಮ್ಮ ಕಾರ್ಯಗಳನ್ನು ಪ್ರಶಂಸೆ ಮಾಡುವರು. ಹಣಕಾಸಿನ ಹರಿವು ಹೆಚ್ಚಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಸಹದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ, ಎಚ್ಚರಿಕೆ ಇರಲಿ. ವಿನಾಕಾರಣ ಜಗಳ ಮಾಡಿ ಮನಸ್ಸು ಕೆಡಿಸಿಕೊಳ್ಳುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 4

Horoscope Today

ವೃಶ್ಚಿಕ: ಇತರರನ್ನು ಟೀಕಿಸಲು ನಿಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡುವುದು ಬೇಡ. ಅನಾವಶ್ಯಕ ವಿಚಾರ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳುವುದು ಬೇಡ. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ . ಉದ್ಯೋಗಿಗಳಿಗೆ ಶುಭ. ಕುಟುಂಬದಲ್ಲಿ ಹಳೆಯ ವಿಚಾರಗಳು ಕಲಹ ಸೃಷ್ಟಿಸಬಹುದು, ಮಾತು ಮಿತವಾಗಿರಲಿ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 5

Horoscope Today

ಧನಸ್ಸು: ಕುಟುಂಬದ ಸದಸ್ಯರೊಂದಿಗೆ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಅಮೂಲ್ಯ ವಸ್ತುಗಳ ಮೇಲೆ ಗಮನವಿರಲಿ. ದಿನದ ಮಟ್ಟಿಗೆ ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ. ಹಣಕಾಸು ಪ್ರಗತಿ ಸಾಧಾರಣವಾಗಿರಲಿದೆ. ವಿನಾಕಾರಣ ನಿಮ್ಮ ಸಿಟ್ಟು ಸಂಗಾತಿಯ ಮೇಲೆ ಹಾಕಿ, ಕುಟುಂಬದ ವಾತಾವರಣ ಕೆಡಿಸುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 2

Horoscope Today

ಮಕರ:ನಿಮ್ಮ ಕೋಪದ ಸ್ವಭಾವದಿಂದ ಇತರರೊಂದಿಗೆ ವಾದಕ್ಕೆಳಿಯಬೇಡಿ. ಆತುರದಲ್ಲಿ ಅತಿರೇಕದ ಮಾತುಗಳು ಜಗಳ ತಂದಿತು. ಆರೋಗ್ಯದ ಕಡೆಗೆ ಗಮನವಿರಲಿ. ದಿನದ ಮಟ್ಟಿಗೆ ಖರ್ಚು ಇರಲಿದೆ. ಆತ್ಮೀರೊಂದಿಗೆ ಪ್ರಯಾಣಿಸುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ಕುಂಭ: ಕೆಲಸಕ್ಕೆ ಹಾಕಿದ ಶ್ರಮ ವ್ಯರ್ಥವಾಗದಂತೆ ಎಚ್ಚರಿಕೆ ವಹಿಸಿ. ಆತುರದಲ್ಲಿ ಅತಿರೇಕದ ಮಾತುಗಳನ್ನಾಡುವುದು ಸರಿಯಲ್ಲ, ತಾಳ್ಮೆಯಿಂದ ಮಾತನಾಡಿ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 9

Horoscope Today

ಮೀನ: ರಹಸ್ಯ ಕಾರ್ಯಗಳು ಯಶಸ್ಸು ತಂದು ಕೊಡಲಿವೆ. ಕುಟುಂಬಕ್ಕೆ ಸಮಯವನ್ನು ನೀಡುವಿರಿ. ವಿನಾಕಾರಣ ಕೋಪಗೊಂಡು ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ. ಖರ್ಚು ಹೆಚ್ಚಾಗಲಿದೆ. ಸಂಗಾತಿ ನಿಮ್ಮ ಮನಸ್ಸಿನ ಭಾವನೆಗಳಿಗೆ ಸ್ಪಂದಿಸುವಳು. ಮಧುರ ಪ್ರೇಮ ಅಂಕುರವಾಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ತುಮಕೂರು

Tumkur News: ವಿಜೃಂಭಣೆಯಿಂದ ನಡೆದ ಶ್ರೀ ಬೇವಿನಳಮ್ಮ ದೇವಿ ಜಲಧಿ ಮಹೋತ್ಸವ

Tumkur News: ಕೊರಟಗೆರೆ ತಾಲೂಕಿನ ಚನ್ನರಾಯದುರ್ಗ ಹೋಬಳಿಯ ಜೆಟ್ಟಿ ಅಗ್ರಹಾರ ಕೆರೆಯಂಗಳದಲ್ಲಿ ಏಳು ಹಳ್ಳಿ ಗ್ರಾಮದೇವತೆ ಶ್ರೀ ಬೇವಿನಳಮ್ಮ ದೇವಿಯ ಜಲಧಿ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ ನೆರೆವೇರಿತು. ಶ್ರೀ ಬೇವಿನಳಮ್ಮ ದೇವಿಯ ಜಲಧಿ ಮಹೋತ್ಸವ ಅಂಗವಾಗಿ ದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಧಾರ್ಮಿಕ ಪೂಜೆ ಸಲ್ಲಿಸಿದ ನಂತರ ಗಂಗಾ ಪೂಜೆ ನಡೆಯಿತು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

VISTARANEWS.COM


on

Shree Bevinalamma Devi Jaladhi Mahotsav celebration in koratagere taluk
Koo

ಕೊರಟಗೆರೆ: ತಾಲೂಕಿನ ಚನ್ನರಾಯದುರ್ಗ ಹೋಬಳಿಯ ಜೆಟ್ಟಿ ಅಗ್ರಹಾರ ಕೆರೆಯಂಗಳದಲ್ಲಿ ಏಳು ಹಳ್ಳಿ ಗ್ರಾಮದೇವತೆ ಶ್ರೀ ಬೇವಿನಳಮ್ಮ ದೇವಿಯ ಜಲಧಿ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ (Tumkur News) ನೆರೆವೇರಿತು.

ಶ್ರೀ ಬೇವಿನಳಮ್ಮ ದೇವಿಯ ಜಲಧಿ ಮಹೋತ್ಸವ ಅಂಗವಾಗಿ ದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಧಾರ್ಮಿಕ ಪೂಜೆ ಸಲ್ಲಿಸಿದ ನಂತರ ಗಂಗಾ ಪೂಜೆ ನಡೆಯಿತು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಇದನ್ನೂ ಓದಿ:Meta: ಮೆಟಾದಿಂದ ಯುವ ಜನರಿಗೆ ಡಿಜಿಟಲ್ ಸುರಕ್ಷಾ ಪಾಠ

ಸಾಹಿತಿ ಡಾ. ನರಸಿಂಹಮೂರ್ತಿ ಮಾತನಾಡಿ, ಸುಮಾರು 250 ವರ್ಷಗಳ ಇತಿಹಾಸವುಳ್ಳ ದೇವಗಾನಿಕೆ ಶ್ರೀ ಬೇವಿನಳಮ್ಮ ತಾಯಿ ಏಳು ಜನ ಅಕ್ಕತಂಗಿಯರಲ್ಲಿ ತಾಯಿಯು ಒಬ್ಬಳು. ಈ ತಾಯಿಯ ಜಾತ್ರೆ-ಜಲಧಿ ವಿಶೇಷವಾಗಿ ಆಚರಣೆ ಮಾಡುತ್ತಾ ನಮ್ಮ ಪೂರ್ವಿಕರು ಬಂದಿದ್ದಾರೆ. ಹಾಗೆ ನಾವು ಕೂಡ ಈ ಆಚರಣೆಯನ್ನು ಮುಂದುವರಿಸುತ್ತಾ ಬಂದಿದ್ದೇವೆ. ಈ ದೇವಿಯ ಜಾತ್ರೆಯನ್ನು ಐದು ವರ್ಷಕ್ಕೊಮ್ಮೆ ಮಾಡುತ್ತಿದ್ದು, ಜಲಧಿಯನ್ನು ವರ್ಷಕ್ಕೊಮ್ಮೆ ಬಹಳ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ವೇಳೆ ಕಾಂಗ್ರೆಸ್ ಮುಖಂಡ ಮಂಜುನಾಥ್ ಮಾತನಾಡಿ, ಜಟ್ಟಿ ಅಗ್ರಹಾರ ಎಂದರೇ ಜಟ್ಟಿ ಮನೆತನದವರಿಗೆ ರಾಜ ಮಹಾರಾಜರು ಉಡುಗೊರೆಯಾಗಿ ನೀಡಿದಂತಹ ಇತಿಹಾಸವುಳ್ಳ ಗ್ರಾಮವಾಗಿದ್ದು, ಇಲ್ಲಿ ನೆಲೆಸಿರುವ ಗ್ರಾಮ ಶಕ್ತಿ ಬೇವಿನಳಮ್ಮ ತಾಯಿಯು ಗ್ರಾಮಕ್ಕೆ ಯಾವುದೇ ತೊಂದರೆ ತೊಡಕುಗಳು ಆಗದಂತೆ ಕಾಪಾಡಿಕೊಂಡು ಬರುತ್ತಿದ್ದಾಳೆ. ಬರಗಾಲವಿರುವುದರಿಂದ ಅದ್ದೂರಿಯಾಗಿ ಜಾತ್ರೆ ಮಾಡಲು ಆಗದ ಕಾರಣ ಜಲಧಿಯನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: India Skills: ಇಂಡಿಯಾ ಸ್ಕಿಲ್ಸ್ 2024 ಗ್ರ್ಯಾಂಡ್ ಫಿನಾಲೆ; ವರ್ಲ್ಡ್ ಸ್ಕಿಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ 58 ವಿಜೇತರು

ಈ ಸಂದರ್ಭದಲ್ಲಿ ಪೂಜಾರು ಲಕ್ಷ್ಮೀಶ್, ಗ್ರಾಮಸ್ಥರಾದ ತಿಮ್ಮರಾಜು, ಮಧುಸೂಧನ್, ಟೈಗರ್ ನಾಗರಾಜು, ಬಸವರಾಜು, ಕೇಬಲ್ ಸಿದ್ದಗಂಗಯ್ಯ, ಮಂಜುನಾಥ್, ಹನುಮಂತರಾಜು, ಚಂದ್ರಕುಮಾರ್, ಸಿದ್ದರಾಜು, ದೇವರಾಜು, ನಾಗರಾಜು, ಕೆಂಪರಾಜು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡಿದ್ದರು.

Continue Reading

ಕರ್ನಾಟಕ

Bengaluru News: ಸಮಾಜಕ್ಕೆ ಸಂತೋಷ ನೀಡುವ ವ್ಯಕ್ತಿತ್ವ ರೂಪಿಸಿಕೊಳ್ಳಿ: ಪೇಜಾವರ ಶ್ರೀ

Bengaluru News: ಉಡುಪಿ ಶ್ರೀ ಭಂಡಾರಕೇರಿ ಮಠ, ಲೋಕ ಸಂಸ್ಕೃತಿ ವಿದ್ಯಾ ವಿಕಾಶ ಪ್ರತಿಷ್ಠಾನದಿಂದ ಬೆಂಗಳೂರಿನ ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಸಮಾರೋಪ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.

VISTARANEWS.COM


on

udupi Shree Bhandarakeri math annual award programme in bengaluru
Koo

ಬೆಂಗಳೂರು: ಸಮಾಜಕ್ಕೆ ಸಂತೋಷ ನೀಡುವ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ಪೇಜಾವರ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ (Bengaluru News) ತಿಳಿಸಿದರು.

ಉಡುಪಿ ಶ್ರೀ ಭಂಡಾರಕೇರಿ ಮಠ, ಲೋಕ ಸಂಸ್ಕೃತಿ ವಿದ್ಯಾ ವಿಕಾಶ ಪ್ರತಿಷ್ಠಾನವು ಬೆಂಗಳೂರಿನ ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಸಮಾರೋಪ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ರಾಜ ಪ್ರಭುತ್ವ ಇದ್ದಾಗ ಮಹಾರಾಜರೇ ಪ್ರಜೆಗಳಿಗೆ ಸಂತೋಷವಾಗುವ ರೀತಿ ರಾಜ್ಯಭಾರ ಮಾಡುತ್ತ ಇದ್ದರು. ರಾಮ ಇದಕ್ಕೆ ಆದರ್ಶ ಪುರುಷ. ಆದರೆ ಇಂದು ಪ್ರಜಾಪ್ರಭುತ್ವ ಇದೆ. ಪ್ರಜೆಗಳೇ ಸಮಾಜಕ್ಕೆ ಹಿತವಾಗುವಂತೆ ಬಾಳಬೇಕು. ಇತರರಿಗೆ ನೆಮ್ಮದಿ, ಸಂಭ್ರಮ ನೀಡುವ ಉದಾತ್ತ ಮನೋಭಾವ ರೂಢಿಸಿಕೊಂಡರೆ ನಾಡು ಸುಭಿಕ್ಷವಾಗಿರುತ್ತದೆ ಎಂದರು.

ಇದನ್ನೂ ಓದಿ: Harbhajan Singh : ಭಾರತ ತಂಡದ ಕೋಚ್ ಆಗಲು ಉತ್ಸಾಹ ತೋರಿದ ಹರ್ಭಜನ್​ ಸಿಂಗ್​

ಶ್ರೀ ಭಂಡಾರ ಕೇರಿ ಗುರುಗಳು ವೇದವ್ಯಾಸರ ಜಯಂತಿಯನ್ನು ರಾಷ್ಟ್ರಗುರು ವೇದವ್ಯಾಸ ಜಯಂತಿಯನ್ನಾಗಿ ಆಚರಿಸಬೇಕೆಂದು ಸಂಕಲ್ಪ ಮಾಡಿ, ಆ ನಿಟ್ಟಿನಲ್ಲಿ ಕಳೆದ ಎರಡು ದಶಕಗಳಿಂದ ವಿಶೇಷವಾದ ಕಾರ್ಯಕ್ರಮವನ್ನು ರೂಪಿಸುತ್ತಿದ್ದಾರೆ. ಪಂಡಿತರಿಗೆ, ವಿದ್ವಾಂಸರಿಗೆ ಸಾಕಷ್ಟು ಮನ್ನಣೆ ನೀಡಿ ಗೌರವಾದರಗಳನ್ನು ದಯ ಪಾಲಿಸಿದ್ದಾರೆ. ಶ್ರೀ ಭಂಡಾರಕೇರಿ ಗುರುಗಳ ಆಶಯ ಈಡೇರಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಗವಾನ್ ವೇದವ್ಯಾಸರ ಜಯಂತಿಯನ್ನು ಎಲ್ಲರೂ ಸಂಭ್ರಮಿಸುವಂತಾಗಲಿ ಎಂದು ಪೇಜಾವರ ಶ್ರೀಗಳು ಆಶಿಸಿದರು.

ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರತಿಷ್ಠಾಪನೆ ಮತ್ತು 48 ದಿನಗಳ ಮಂಡಲೋತ್ಸವದಲ್ಲಿ ಶ್ರೀ ಪೇಜಾವರ ಶ್ರೀಗಳು ವಿಶೇಷ ಸಾನಿಧ್ಯ ವಹಿಸಿ ಎಲ್ಲಾ ಕಾರ್ಯವನ್ನು ಸಾಂಗವಾಗಿ ನೆರವೇರಿಸಿ ಕೊಟ್ಟಿದ್ದು ವಿಶ್ವದ ಹೆಮ್ಮೆ ಎಂದು ತಿಳಿಸಿದರು.

70 ಜನರಿಗೆ ಸನ್ಮಾನ ಸಂಕಲ್ಪ

ಶ್ರೀ ವೇದವ್ಯಾಸ ಜಯಂತಿ ಸಂದರ್ಭದಲ್ಲಿ ಮೂವರು ಪಂಡಿತರಿಗೆ ಶ್ರೀಮಠ ವಾರ್ಷಿಕ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದೆ. ಇದರೊಂದಿಗೆ ನಮ್ಮ ಎಪ್ಪತ್ತನೇ ವರ್ಧಂತಿ ಸಮಾರಂಭವೂ ನಡೆಯುತ್ತಿದ್ದು, ಈ ವರ್ಷ ಪೂರ್ಣ 70 ಜನ ಪಂಡಿತರಿಗೆ ಸನ್ಮಾನ ಮತ್ತು ಗೌರವವನ್ನು ಮಾಡಿ ಅವರನ್ನು ಪ್ರೋತ್ಸಾಹಿಸುವ ಸಂಕಲ್ಪ ಮಾಡಲಾಗಿದೆ ಎಂದು ಭಂಡಾರ ಕೇರಿ ಶ್ರೀಗಳು ತಿಳಿಸಿದರು.

ಇದನ್ನೂ ಓದಿ: India Skills: ಇಂಡಿಯಾ ಸ್ಕಿಲ್ಸ್ 2024 ಗ್ರ್ಯಾಂಡ್ ಫಿನಾಲೆ; ವರ್ಲ್ಡ್ ಸ್ಕಿಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ 58 ವಿಜೇತರು

ವೇದವ್ಯಾಸ ಜಯಂತಿ ಅಂಗವಾಗಿ ಬೆಳಗ್ಗೆ 8ಕ್ಕೆ ಹೋಮ, 9ಕ್ಕೆ ವೇದ ಶಾಸ್ತ್ರ ವಿನೋದ, ಮಧ್ಯಾಹ್ನ 2ಕ್ಕೆ ವಸಂತ ಉತ್ಸವ, ಸಂಜೆ 5ಕ್ಕೆ ಶ್ರೀ ವಿದ್ಯಾಮಾನ್ಯರ ಭಾವಚಿತ್ರ ಶೋಭಾಯಾತ್ರೆ ನೆರವೇರಿತು.

ಪ್ರಶಸ್ತಿ ಪ್ರದಾನ

ಉಡುಪಿ ಶ್ರೀ ಭಂಡಾರಕೇರಿ ಮಠದ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲದ ದಾಮೋದರಾಚಾರ್ಯರ ಪರವಾಗಿ ಅವರ ಶಿಷ್ಯ ಸಂತಾನ ಕೃಷ್ಣ ಅವರಿಗೆ (1 ಲಕ್ಷ ರೂ. ನಗದು, ಸನ್ಮಾನ ಪತ್ರ, ಸ್ಮರಣಿಕೆ), ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕ ಮಧ್ವೇಶ ನಡಿಲ್ಲಾಯ ಅವರಿಗೆ (ರಾಜಹಂಸ ಪ್ರಶಸ್ತಿ), ಬಸವನಗುಡಿ ಶ್ರೀ ಜಯತೀರ್ಥ ವಿದ್ಯಾಪೀಠದ ಪಂಡಿತ ಸತ್ಯಬೋಧಾಚಾರ್ಯ ಹೊನ್ನಾಳಿ ಅವರಿಗೆ (ಶ್ರೀ ಸತ್ಯತೀರ್ಥ ಅನುಗ್ರಹ ಪ್ರಶಸ್ತಿ) ತಲಾ 50 ಸಾವಿರ ರೂ. ನಗದು, ಸನ್ಮಾನ ಪತ್ರ ನೀಡಿ, ಗೌರವಿಸಲಾಯಿತು.

ಇದನ್ನೂ ಓದಿ: Viral Video: ಇಂಗ್ಲೀಷ್‌ನಲ್ಲೂ ಮಾತಾಡುತ್ತೆ…ಮಿಮಿಕ್ರಿನೂ ಮಾಡುತ್ತೆ ಈ ಗಿಣಿ; ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ!

ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಶ್ರೀ ಭಂಡಾರಕೇರಿ ಶ್ರೀಗಳು ‘ಶ್ರೀ ರಾಮ ಲಲನ ಲಾಲನ ಲಲಾಮ ತೀರ್ಥ’ ಎಂದು ಬಿರುದು ನೀಡಿ, ಸನ್ಮಾನಿಸಿದರು. ನೂರಾರು ಜನ ವಿದ್ವಾಂಸರು, ಪಂಡಿತರು ಇದಕ್ಕೆ ಸಾಕ್ಷಿಯಾದರು.

Continue Reading

ಕರ್ನಾಟಕ

Koppala News: ಅಂಜನಾದ್ರಿ ದೇಗುಲ ಹುಂಡಿ ಎಣಿಕೆ; 5‌ ವಿದೇಶಿ ನಾಣ್ಯಗಳು ಪತ್ತೆ

Koppala News: ಗಂಗಾವತಿ ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪುರದ ಅಂಜನಾದ್ರಿ ಬೆಟ್ಟದ ಆಂಜನೇಯನ ದೇವಸ್ಥಾನದಲ್ಲಿನ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿರುವ ಹಣ ಎಣಿಕೆ ಮಾಡಿದಾಗ ಪಾಕಿಸ್ತಾನ, ಮೊರಾಕ್ಕೊ, ಶ್ರೀಲಂಕಾ, ಅಮೆರಿಕಾ ಮತ್ತು ನೇಪಾಳ ದೇಶದ ನಾಣ್ಯಗಳು ಪತ್ತೆಯಾಗಿವೆ. ಅಂಜನಾದ್ರಿ ದೇಗುಲದ ಕಾಣಿಕೆ ಹುಂಡಿಯಲ್ಲಿ ಒಟ್ಟು 31.21 ಲಕ್ಷ ರೂಪಾಯಿ ಮೊತ್ತದ ನಗದು ಹಣ ಸಂಗ್ರಹವಾಗಿದೆ.

VISTARANEWS.COM


on

5 foreign coins found in anjanadri temple hundi counting
Koo

ಗಂಗಾವತಿ: ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪುರದ ಅಂಜನಾದ್ರಿ (Anjanadri) ಬೆಟ್ಟದ ಆಂಜನೇಯನ ದೇವಸ್ಥಾನದಲ್ಲಿನ (Anjaneya Temple) ಕಾಣಿಕೆ ಹುಂಡಿಯಲ್ಲಿ (Koppala News) ಸಂಗ್ರಹವಾಗಿರುವ ಹಣ ಎಣಿಕೆ ಮಾಡಿದಾಗ ಐದು ದೇಶಗಳ ನಾಣ್ಯಗಳು ಪತ್ತೆಯಾಗಿವೆ.

ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೂಚನೆ ಮೆರೆಗೆ, ತಹಸೀಲ್ದಾರ್ ಯು. ನಾಗರಾಜ್ ನೇತೃತ್ವದಲ್ಲಿ ಕಂದಾಯ ಇಲಾಖೆ ಹಾಗೂ ದೇಗುಲ ಸಿಬ್ಬಂದಿ ಮಂಗಳವಾರ ಕಾಣಿಕೆ ಪೆಟ್ಟಿಗೆಯಲ್ಲಿ ಸಂಗ್ರಹವಾದ ಹಣ ಎಣಿಕೆ ನಡೆಸಿದರು. ಈ ಸಂದರ್ಭದಲ್ಲಿ ಪಾಕಿಸ್ತಾನ, ಮೊರಾಕ್ಕೊ, ಶ್ರೀಲಂಕಾ, ಅಮೆರಿಕಾ ಮತ್ತು ನೇಪಾಳ ದೇಶದ ನಾಣ್ಯಗಳು ಪತ್ತೆಯಾಗಿವೆ.

ಇದನ್ನೂ ಓದಿ: Bengaluru News: ಸಮಾಜಕ್ಕೆ ಸಂತೋಷ ನೀಡುವ ವ್ಯಕ್ತಿತ್ವ ರೂಪಿಸಿಕೊಳ್ಳಿ: ಪೇಜಾವರ ಶ್ರೀ

ಪಾಕಿಸ್ತಾನದ ಐದು ರೂಪಾಯಿ ಮುಖ ಬೆಲೆಯ ನಾಣ್ಯ, ಯುನೈಟೆಡ್ ಸ್ಟೇಟ್ ಆಫ್ ಆಮೆರಿಕಾದ ಒಂದು ಸೆಂಟ್‌, ಮೊರಾಕ್ಕೊದಾ ಒಂದು ದಿರಮ್, ನೇಪಾಳದ ಒಂದು ನಾಣ್ಯ ಹಾಗೂ ಶ್ರೀಲಂಕದ ಐದು ರೂಪಾಯಿ ನಾಣ್ಯಗಳು ಹುಂಡಿಯಲ್ಲಿ ಪತ್ತೆಯಾಗಿವೆ.

30.21 ಲಕ್ಷ ರೂ. ಸಂಗ್ರಹ

ಐದು ವಿದೇಶಿ ನಾಣ್ಯ ಸೇರಿದಂತೆ ಅಂಜನಾದ್ರಿ ದೇಗುಲದ ಕಾಣಿಕೆ ಹುಂಡಿಯಲ್ಲಿ ಒಟ್ಟು 31.21 ಲಕ್ಷ ರೂಪಾಯಿ ಮೊತ್ತದ ನಗದು ಹಣ ಸಂಗ್ರಹವಾಗಿದೆ. ಕಳೆದ ಮಾರ್ಚ್‌ 27 ರಿಂದ ಇಲ್ಲಿವರೆಗೂ ಅಂದರೆ ಮೇ 21ರ ವರೆಗಿನ ಒಟ್ಟು 56 ದಿನಗಳಲ್ಲಿ 31.21 ಲಕ್ಷ ಮೊತ್ತದ ಹಣ ಸಂಗ್ರಹವಾಗಿದೆ.

ಇದನ್ನೂ ಓದಿ: India Skills: ಇಂಡಿಯಾ ಸ್ಕಿಲ್ಸ್ 2024 ಗ್ರ್ಯಾಂಡ್ ಫಿನಾಲೆ; ವರ್ಲ್ಡ್ ಸ್ಕಿಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ 58 ವಿಜೇತರು

ಹುಂಡಿ ಎಣಿಕೆಯ ವೇಳೆ ಶಿರಸ್ತೇದಾರ್‌ ರವಿಕುಮಾರ ನಾಯಕ್ವಾಡಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ್, ಮಹೇಶ್ ದಲಾಲ, ಹಾಲೇಶ ಗುಂಡಿ, ದೇಗುಲದ ವ್ಯವಸ್ಥಾಪಕ ವೆಂಕಟೇಶ ಹಾಗೂ ಸಿಬ್ಬಂದಿ ಇದ್ದರು.

Continue Reading
Advertisement
Sweat Problem
ಆರೋಗ್ಯ1 hour ago

Sweat Problem: ದುರ್ಗಂಧದ ಬೆವರಿನ ಸಮಸ್ಯೆಗೆ ಇಲ್ಲಿವೆ ನೈಸರ್ಗಿಕ ಪರಿಹಾರಗಳು!

Dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರು ಯಾರೊಂದಿಗೂ ದಿನದ ಮಟ್ಟಿಗೆ ಹಣಕಾಸಿನ ವ್ಯವಹಾರ ಮಾಡಬೇಡಿ

Mobile
ದೇಶ7 hours ago

ಪರೀಕ್ಷೆಗೆ ಓದುವುದು ಬಿಟ್ಟು ಮೊಬೈಲ್‌ನಲ್ಲೇ ತಲ್ಲೀನ; 22 ವರ್ಷದ ಮಗಳನ್ನೇ ಕೊಂದ ತಾಯಿ

Rameshwaram Cafe Blast
ಕರ್ನಾಟಕ7 hours ago

Rameshwaram Cafe Blast: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಹುಬ್ಬಳ್ಳಿಯಲ್ಲಿ ಇಬ್ಬರು ಎನ್‌ಐಎ ವಶಕ್ಕೆ

LPL 2024
ಪ್ರಮುಖ ಸುದ್ದಿ7 hours ago

LPL 2024 : ಐಪಿಎಲ್ ಎಫೆಕ್ಟ್​, ಸಿಕ್ಕಾಪಟ್ಟೆ ದುಡ್ಡು ಬಾಚಿದ ಮಹೀಶ್ ಪತಿರಾನಾ

Porsche
ಸಂಪಾದಕೀಯ7 hours ago

ವಿಸ್ತಾರ ಸಂಪಾದಕೀಯ: ಸಬಲರ ಎದುರು ದುರ್ಬಲ ಕಾನೂನು; ಅಮಾಯಕರ ಜೀವಕ್ಕೆ ಬೆಲೆಯೇ ಇಲ್ಲ

Hajj pilgrimage
ಬೆಂಗಳೂರು7 hours ago

Hajj Pilgrimage: ಹಜ್ ಯಾತ್ರಿಗಳನ್ನು ಬೀಳ್ಕೊಟ್ಟ ಸಿಎಂ ಸಿದ್ದರಾಮಯ್ಯ; ಹಜ್ ಭವನ ನಿರ್ಮಾಣಕ್ಕೆ ಅನುದಾನ

IPL 2024
ಕ್ರೀಡೆ7 hours ago

IPL 2024 : ಕೆಕೆಆರ್​ 4ನೇ ಬಾರಿ ಐಪಿಎಲ್​​ನ​ ಫೈನಲ್​ಗೆ, ಎಸ್ಆರ್​ಎಚ್​ಗೆ ಇನ್ನೊಂದು ಅವಕಾಶ

Robert Vadra
ದೇಶ8 hours ago

Robert Vadra: ಸ್ವಂತ ಬಲದಿಂದ ರಾಜಕೀಯಕ್ಕೆ ಬರುವೆ, ಗಾಂಧಿ ಹೆಸರು ಬಳಸಲ್ಲ; ರಾಬರ್ಟ್‌ ವಾದ್ರಾ ಶಪಥ!

IPL 2024
ಕ್ರೀಡೆ8 hours ago

IPL 2024 : ರನ್​ ಔಟ್​​ ಆಗಿದ್ದಕ್ಕೆ ಸಿಟ್ಟಿಗೆದ್ದ ಕಾವ್ಯಾ ಮಾರನ್​, ಕಣ್ಣೀರು ಹಾಕಿದ ರಾಹುಲ್ ತ್ರಿಪಾಠಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ13 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು18 hours ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು19 hours ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

ಟ್ರೆಂಡಿಂಗ್‌