ICC World Cup 2023 : ಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ತಂಡಕ್ಕೆ 5 ವಿಕೆಟ್​ ಗೆಲುವು; ಸೆಮೀಸ್​ಗೆ ಸನಿಹ - Vistara News

ಕ್ರಿಕೆಟ್

ICC World Cup 2023 : ಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ತಂಡಕ್ಕೆ 5 ವಿಕೆಟ್​ ಗೆಲುವು; ಸೆಮೀಸ್​ಗೆ ಸನಿಹ

ಈ ಗೆಲುವಿನೊಂದಿಗೆ ನ್ಯೂಜಿಲ್ಯಾಂಡ್​ ತಂಡ
ವಿಶ್ವ ಕಪ್​ (ICC World Cup 2023) ಸೆಮಿಫೈನಲ್ ಅವಕಾಶವನ್ನು ಬಹುತೇಕ ನಿಶ್ಚಿತವಾಗಿದೆ.

VISTARANEWS.COM


on

Rachin Ravindra
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಶ್ರೀಲಂಕಾ ತಂಡದ ವಿರುದ್ಧ 5 ವಿಕೆಟ್​ಗಳ ಅಧಿಕಾರಯುತ ಗೆಲುವು ಸಾಧಿಸಿದ ನ್ಯೂಜಿಲ್ಯಾಂಡ್​ ತಂಡ ಹಾಲಿ ವಿಶ್ವ ಕಪ್​ನ (ICC World Cup 2023) ಸೆಮಿಫೈನಲ್​ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಡಿದೆ. ಆದರೆ, ಶನಿವಾರ ನಡೆಯಲಿರುವ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಫಲಿತಾಂಶದ ಬಳಿಕ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ. ಪಾಕಿಸ್ತಾನ ತಂಡವೂ ಸೆಮಿಫೈನಲ್​ ರೇಸ್​ನಲ್ಲಿದೆ. ಆದರೆ, ಮುಂದಿನ ಪಂದ್ಯವನ್ನು 335 ರನ್​ಗಳಿಗಿಂತಳು ಹೆಚ್ಚು ಅಂತರದಿಂದ ಗೆದ್ದರೆ ಮಾತ್ರ ಅದು ಸಾಧ್ಯವಿದೆ. ಹೀಗಾಗಿ ನ್ಯೂಜಿಲ್ಯಾಂಡ್​ ನಾಲ್ಕನೇ ತಂಡವಾಗಿ ಸೆಮೀಸ್​ ಪ್ರವೇಶ ಮಾಡುವುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಇನ್ನೂ ಎರಡು ದಿನ ಕಾಯಬೇಕಾಗಿದೆ.

ನ್ಯೂಜಿಲ್ಯಾಂಡ್​ ತಂಡ ಲಂಕಾ ವಿರುದ್ದದ ಗೆಲುವಿನೊಂದಿಗೆ ಲೀಗ್ ಹಂತದಲ್ಲಿ ಒಟ್ಟು 10 ಅಂಕಗಳನ್ನು ಸಂಪಾದಿಸಿಕೊಂಡಿದೆ. ಹೀಗಾಗಿ ಪ್ರಸ್ತುತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವ ಕಪ್​​ನ ಲೀಗ್​ ಹಂತದಲ್ಲಿ ಇನ್ನೂ ನಾಲ್ಕು ಪಂದ್ಯಗಳು ಬಾಕಿ ಉಳಿದಿವೆ. ಕೊನೇ ಪಂದ್ಯದಲ್ಲಿ ಭಾರತ ಹಾಗೂ ನೆದರ್ಲ್ಯಾಂಡ್ಸ್​ ತಂಡ ಆಡಲಿದೆ. ಆ ಬಳಿಕ ನಡೆಯುವ ಮೊದಲ ಸೆಮಿಫೈನಲ್​ನಲ್ಲಿ ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳು ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ ಎನಿಸಿಕೊಂಡಿದೆ.

ಇದೇ ವೇಳೆ ಶ್ರೀಲಂಕಾ ತಂಡ ಹಾಲಿ ವಿಶ್ವ ಕಪ್​ನಲ್ಲಿ ತನ್ನ ಅಭಿಯಾನ ಮುಗಿಸಿತು. ಆಡಿರುವ 9 ಪಂದ್ಯಗಳಲ್ಲಿ ಕೇವಲ 2 ಗೆಲುವ ಕಂಡಿದೆ. ಹೀಗಾಗಿ ನಾಲ್ಕು ಅಂಕಗಳನ್ನಷ್ಟೇ ಸಂಪಾದಿಸಿದೆ. 1996ರ ವಿಶ್ವ ಕಪ್ ಚಾಂಪಿಯನ್ ತಂಡ ಪ್ರಸ್ತುತ ಅಂಕಪಟ್ಟಿಯಲ್ಲಿ ನೆದರ್ಲ್ಯಾಂಡ್ಸ್​ಗಿಂತ ಮೇಲೆ 9ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ICC World Cup 2023 : ಗೆಲುವಿನೊಂದಿಗೆ ಅಭಿಯಾನ ಮುಗಿಸುವುದೇ ಅಫಘಾನಿಸ್ತಾನ?

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್​ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ 46.4 ಓವರ್​ಗಳಲ್ಲಿ 171 ರನ್​ಗಳಿಗೆ ಆಲ್​ಔಟ್ ಆಯಿತು. ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಇನ್ನೂ 160 ಬಾಕಿ ಇರುವಂತೆಯೇ 5 ವಿಕೆಟ್​ ಕಳೆದುಕೊಂಡು 172 ರನ್ ಬಾರಿಸಿ ಗೆಲುವು ಸಾಧಿಸಿತು.

ಸಾಧಾರಣ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡ 25 ಓವರ್​ಗಳ ಒಳಗೆ ಆಟ ಮುಗಿಸಿ ಗರಿಷ್ಠ ರನ್​ರೇಟ್​ನೊಂದಿಗೆ ಆಡಿತು. ಪೂರಕವಾಗಿ ಮೊದಲ ವಿಕೆಟ್​ಗೆ 86 ರನ್ ಬಾರಿಸಿತು. ಆರಂಭಿಕ ಬ್ಯಾಟರ್​ಗಳಾದ ಡೆವೋನ್​ ಕಾನ್ವೆ (45) ಹಾಗೂ ರಚಿನ್ ರವೀಂದ್ರ (42) ಉತ್ತಮ ಆರಂಭ ತಂದುಕೊಟ್ಟರು. ಆದರೆ, ಈ ಇಬ್ಬರು ಬ್ಯಾಟಿಂಗ್​ನಲ್ಲಿ ಇನ್ನಷ್ಟು ಬಿರುಸು ತರಲು ಹೋಗಿ ಔಟಾದರು. ಬಳಿಕ ಕೇನ್ ವಿಲಿಮ್ಸನ್​ 14 ರನ್​ ಕೊಡುಗೆ ಕೊಟ್ಟರು. ಡ್ಯಾರಿಲ್ ಮಿಚೆಲ್ ಗುರಿಯನ್ನು ಬೇಗ ಮುಟ್ಟುವ ಉದ್ದೇಶದಿಂದ 31 ಎಸೆತಕ್ಕೆ 43 ರನ್ ಬಾರಿಸಿದರು. ಮಾರ್ಕ್​ ಚಾಪ್ಮನ್ ಅನಗತ್ಯ ರನ್​ಔಟ್​ಗೆ ಬಲಿಯಾದರು. ಕೊನೆಯಲ್ಲಿ ಗ್ಲೆನ್​ ಫಿಲಿಪ್ಸ್​ 17 ರನ್ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಲಂಕಾದ ಬ್ಯಾಟಿಂಗ್ ವೈಫಲ್ಯ

ಲಂಕಾ ತಂಡ ಹಾಲಿ ವಿಶ್ವ ಕಪ್​ನ ಕೊನೇ ಪಂದ್ಯದಲ್ಲೂ ದುರ್ಬಲ ಬ್ಯಾಟಿಂಗ್ ಪ್ರದರ್ಶನ ನೀಡಿತು. 32 ರನ್​ಗಳಿಗೆ ಮೊದಲ 3 ವಿಕೆಟ್ ನಷ್ಟಮಾಡಿಕೊಂಡಿತು. ಪಾಥುಮ್ ನಿಸ್ಸಾಂಕ 2 ರನ್​ಗೆ ಔಟಾದರೆ, ಕುಸಾಲ್ ಮೆಂಡಿಸ್​ 6 ಮತ್ತು ಸದೀರಾ ಸಮರವಿಕ್ರಮ 1 ರನ್​ ಬಾರಿಸಿ ಪೆವಿಲಿಯನ್ ಹಾದಿ ಹಿಡಿದರು. ಆದರೆ, ಮತ್ತೊಬ್ಬ ಆರಂಭಿಕ ಬ್ಯಾಟರ್ ಕುಸಾಲ್ ಪೆರೆರಾ 28 ಎಸೆತಗಳಲ್ಲಿ 51 ರನ್ ಬಾರಿಸಿದರು.

ಲಂಕಾ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳೂ ತಂಡಕ್ಕೆ ಹೆಚ್ಚು ನೆರವಾಗಲಿಲ್ಲ. ಮ್ಯಾಥ್ಯೂಸ್ 16 ರನ್ ಬಾರಿಸಿದರೆ, ಧನಂಜಯ ಡಿಸಿಲ್ವಾ 19 ರನ್​ಗೆ ಔಟಾದರು. ಚಾಮಿಕಾ ಕರುಣಾರತ್ನೆ 6 ರನ್​ಗೆ ಸೀಮಿತಗೊಂಡರು. ಆದರೆ, ಸ್ಪಿನ್ನರ್ ಮಹೀಶ್​ ತೀಕ್ಷಣಾ 91 ಎಸೆತಗಳನ್ನು ಎದುರಿಸಿ 38 ರನ್​ ಬಾರಿಸಿದರು. ಕೊನೆಯಲ್ಲಿ ಮಧು ಶಂಕಾ 19 ರನ್ ಕೊಡುಗೆ ಕೊಟ್ಟರು. ಈ ಜೋಡಿ 10ನೇ ವಿಕೆಟ್​ಗೆ 43 ರನ್ ಬಾರಿಸಿದ ಕಾರಣ ತಂಡಕ್ಕೆ ಸ್ವಲ್ಪ ನೆರವಾಯಿತು.

ಕಿವೀಸ್​ ಪರ ಬೌಲ್ಟ್​ 3, ಫರ್ಗ್ಯೂಸನ್​, ಸ್ಯಾಂಟ್ನರ್ ಹಾಗೂ ರಚಿನ್ ರವೀಂದ್ರ ತಲಾ ಎರಡು ವಿಕೆಟ್​ ಉರುಳಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Rohit Sharma: ಚಾಂಪಿಯನ್ಸ್​ ಟ್ರೋಫಿಗೂ ರೋಹಿತ್​ ನಾಯಕ; ಖಚಿತಪಡಿಸಿದ ಜಯ್​ ಶಾ

Rohit Sharma: “ಮುಂಬರುವ ಚಾಂಪಿಯನ್ಸ್ ಟ್ರೋಫಿ 2025 ಮತ್ತು ಮುಂದಿನ ವರ್ಷ ನಡೆಯಲಿರುವ ಮೂರನೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ನಲ್ಲಿ ಭಾರತ ತಂಡ ರೋಹಿತ್​ ಶರ್ಮ ನಾಯಕತ್ವದಲ್ಲಿ ಚಾಂಪಿಯನ್​ ಆಗಲಿದೆ” ಎಂದು ಜಯ್​ ಶಾ ಹೇಳಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

Rohit Sharma
Koo

ಮುಂಬಯಿ: ಏಕದಿನ ಮತ್ತು ಟೆಸ್ಟ್ ಮಾದರಿಗಳಲ್ಲಿ ರೋಹಿತ್ ಶರ್ಮ(Rohit Sharma) ಭಾರತ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ(BCCI secretary Jay Shah) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜತೆಗೆ ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್​ ಟ್ರೋಫಿ(Champions Trophy) ಟೂರ್ನಿಯಲ್ಲಿಯೂ ರೋಹಿತ್​ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

“ಮುಂಬರುವ ಚಾಂಪಿಯನ್ಸ್ ಟ್ರೋಫಿ 2025 ಮತ್ತು ಮುಂದಿನ ವರ್ಷ ನಡೆಯಲಿರುವ ಮೂರನೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ನಲ್ಲಿ ಭಾರತ ತಂಡ ರೋಹಿತ್​ ಶರ್ಮ ನಾಯಕತ್ವದಲ್ಲಿ ಚಾಂಪಿಯನ್​ ಆಗಲಿದೆ” ಎಂದು ಜಯ್​ ಶಾ ಹೇಳಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಟಿ20 ವಿಶ್ವಕಪ್(T20 World Cup 2024 Final)​ ಟೂರ್ನಿಯ ಆರಂಭಕ್ಕೆ ತಂಡ ಪ್ರಕಟಿಸುವ ಮುನ್ನವೇ ಭಾರತ ತಂಡ ಜೂನ್​ 29ರಂದು ಬಾರ್ಬಡೋಸ್​ನಲ್ಲಿ ವಿಶ್ವಕಪ್​ ಗೆಲ್ಲಲಿದೆ ಎಂದು ವೇದಿಯಲ್ಲಿ ಮಾತನಾಡುವ ವೇಳೆ ಬಹಿರಂಗವಾಗಿಯೇ ಭವಿಷ್ಯ(Jay Shah Promise) ನುಡಿದಿದ್ದರು. ಅದರಂತೆ ಭಾರತ ಕಪ್​ ಗೆದ್ದಿತ್ತು. ಇದೀಗ ಮತ್ತೆ ಮುಂದಿನ ವರ್ಷ ನಡೆಯುವ ಟೆಸ್ಟ್​ ವಿಶ್ವಕಪ್​ ಮತ್ತು ಚಾಂಪಿಯನ್ಸ್​ ಟ್ರೋಫಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದು ಸತ್ಯವಾಗಲಿದೆಯಾ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ Jay Shah: ಕೊಹ್ಲಿಯನ್ನೇ ದಿಟ್ಟಿಸಿ ನೋಡುತ್ತಾ ನಿಂತ ಜಯ್​ ಶಾ; ವಿಡಿಯೊ ವೈರಲ್​

ರೋಹಿತ್ ನಾಯಕತ್ವದಲ್ಲಿ, ಕಳೆದ ವಾರ ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್‌ಗಳ ಜಯದೊಂದಿಗೆ 11 ವರ್ಷಗಳ ಐಸಿಸಿ ಪ್ರಶಸ್ತಿ ಬರವನ್ನು ಕೊನೆಗೊಳಿಸಿತ್ತು. 2007 ರ ಉದ್ಘಾಟನಾ ಆವೃತ್ತಿಯ ನಂತರ ಇದು ಭಾರತಕ್ಕೆ ಒಲಿದ ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿಯಾಗಿತ್ತು. ಮೆನ್ ಇನ್ ಬ್ಲೂ ಈ ಹಿಂದೆ ರೋಹಿತ್ ಅವರ ನಾಯಕತ್ವದಲ್ಲಿ ಎರಡು ಫೈನಲ್‌ಗಳನ್ನು ಆಡಿತ್ತು. ಏಕದಿನ ವಿಶ್ವಕಪ್ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್. ಇಲ್ಲಿ ರನ್ನರ್-ಅಪ್ ಸ್ಥಾನ ಗಳಿಸಿತ್ತು.

ಪಾಕ್‌ಗೆ ಭಾರತ ಹೋಗಲ್ಲ

2025ರಲ್ಲಿ ಪಾಕಿಸ್ತಾನದಲ್ಲಿ ಆಯೋಜನೆಗೊಂಡಿರುವ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ತಿಳಿದುಬಂದಿದೆ. ಕೆಲದಿನಗಳ ಹಿಂದಷ್ಟೇ ಚಾಂಪಿಯನ್ಸ್‌ ಟ್ರೋಫಿಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌, ಮಾ.1ಕ್ಕೆ ಲಾಹೋರ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ನಿಗದಿ ಮಾಡಿತ್ತು. ಆದರೆ, ಭದ್ರತೆಯ ಕಾರಣವನ್ನು ನೀಡಿರುವ ಬಿಸಿಸಿಐ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿದೆ ಎಂದು ವರದಿಗಳು ತಿಳಿಸಿವೆ.

Continue Reading

ಕ್ರೀಡೆ

MS Dhoni Birthday: ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಪತ್ನಿ; ವಿಡಿಯೊ ವೈರಲ್​

MS Dhoni Birthday: ಧೋನಿ ಅವರು ಕೇಕ್​ ಕತ್ತರಿಸಿದ ಬಳಿಕ ಪತ್ನಿ ಸಾಕ್ಷಿಗೆ ತಿನ್ನಿಸಿದರು. ಸಾಕ್ಷಿ ಕೂಡ ಒಂದು ತುಂಡು ಕೇಕ್​ ಧೋನಿಗೆ ತಿನ್ನಿಸಿ, ಮುಖಕ್ಕೆ ಹಚ್ಚಿ ಬಳಿಕ ಪಾದ ಮುಟ್ಟಿ ಆಶೀರ್ವಾದ ಪಡೆದರು. ಈ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

MS Dhoni Birthday
Koo

ಮುಂಬಯಿ: ಇಂದು(ಜುಲೈ 7) 43ನೇ ವಸಂತಕ್ಕೆ ಕಾಲಿಟ್ಟ ಟೀಮ್​ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್​ ಧೋನಿ(MS Dhoni Birthday) ಅವರು ತಮ್ಮ ಹುಟ್ಟುಹಬ್ಬವನ್ನು ಪತ್ನಿ ಜತೆ ಕೇಕ್​ ಕತ್ತರಿಸಿ ಆಚರಿಸಿದ್ದಾರೆ. ಈ ವೇಳೆ ಪತ್ನಿ ಸಾಕ್ಷಿ ಸಿಂಗ್(​ ಧೋನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವಿಡಿಯೊ ಇದೀಗ ವೈರಲ್​ ಆಗಿದೆ. ಈ ವಿಡಿಯೊವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿರುವ ಸಾಕ್ಷಿ ಸಿಂಗ್(Sakshi Singh)​, ಹ್ಯಾಪಿ ಬರ್ತ್‌ಡೇ ಟೂ ಯು ಮಾಹಿ ಎಂದು ಬರೆದಿದ್ದಾರೆ.

ಧೋನಿ ಅವರು ಕೇಕ್​ ಕತ್ತರಿಸಿದ ಬಳಿಕ ಪತ್ನಿ ಸಾಕ್ಷಿಗೆ ತಿನ್ನಿಸಿದರು. ಸಾಕ್ಷಿ ಕೂಡ ಒಂದು ತುಂಡು ಕೇಕ್​ ಧೋನಿಗೆ ತಿನ್ನಿಸಿ, ಮುಖಕ್ಕೆ ಹಚ್ಚಿ ಬಳಿಕ ಪಾದ ಮುಟ್ಟಿ ಆಶೀರ್ವಾದ ಪಡೆದರು. ಧೋನಿ ಕೇಕ್​ ಕತ್ತರಿಸುವ ವೇಳೆ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಗಿದ್ದರು.

ಜುಲೈ 4 ರಂದು ಧೋನಿ ಮತ್ತು ಸಾಕ್ಷಿ ತಮ್ಮ 15ನೇ ವರ್ಷದ ವಿವಾಹ ವಾರ್ಷಿಕೋತ್ಸವ(ms dhoni wedding anniversary) ಆಚರಿಸಿದ್ದರು. ಧೋನಿ ಕೇಕ್​ ಕತ್ತರಿಸಿ ಪತ್ನಿಗೆ ತಿನ್ನಿಸುವ ಮೂಲಕ ತಮ್ಮ 15ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಸಂಭ್ರಮಿಸಿದ್ದರು. 2010ರಲ್ಲಿ ಧೋನಿ ಅವರು ಸಾಕ್ಷಿ ಅವರನ್ನು ಡೆಹರಾಡೂನ್​ನಲ್ಲಿ ​ವಿವಾಹವಾಗಿದ್ದರು.  ಈ ಜೋಡಿಗೆ ಝಿವಾ ಎಂಬ ಮುದ್ದಾಗ ಮಗಳಿದ್ದಾಳೆ.

ಧೋನಿ ಆಗಸ್ಟ್​ 15 2020ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದರ. ಸದ್ಯ ಐಪಿಎಲ್​ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಹಿಂದೊಮ್ಮೆ ಧೋನಿ ಅವರು ನನ್ನ ಪತ್ನಿಗೆ ಟ್ರಾವೆಲ್​ ಎಂದರೆ ಬಲು ಇಷ್ಟ. ಕ್ರಿಕೆಟ್​ ನಿವೃತ್ತಿ ಬಳಿಕ ನಾನು ಖಂಡಿತಾ ಹಲವು ದೇಶಕ್ಕೆ ಪ್ರವಾಸ ಮಾಡುವ ಎಲ್ಲ ಯೋಜನೆಗಳನ್ನು ರೂಪಿಸಿದ್ದೇನೆ ಎಂದು ಹೇಳಿದ್ದರು. ಬಿಡುವಿನ ವೇಳೆಯಲ್ಲಿ ಪತ್ನಿ ಮತ್ತು ಮಗಳ ಜತೆ ಧೋನಿ ಆಗಾಗ ವಿದೇಶಕ್ಕೆ ಭೇಟಿ ನೀಡುತ್ತಾ ಪ್ರವಾಸವನ್ನು ಎಂಜಾಯ್​ ಮಾಡುತ್ತಿರುತ್ತಾರೆ.

ಇದನ್ನೂ ಓದಿ MS Dhoni Birthday: 43ನೇ ವಸಂತಕ್ಕೆ ಕಾಲಿಟ್ಟ ಮಹೇಂದ್ರ ಸಿಂಗ್‌ ಧೋನಿ

ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರ ಉಳಿದಿದ್ದರೂ ಅವರ ಮೇಲಿನ ಕ್ರೇಜ್ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ. ಅವರು ಕ್ರಿಕೆಟ್​ ಆಡಬೇಕೆಂಬುವುದು ಅಭಿಮಾನಿಗಳ ಆಶಯವಾಗಿದೆ. ಇದಕ್ಕೆ ಈ ಬಾರಿಯ ಐಪಿಎಲ್​ ಟೂರ್ನಿಯೇ ಉತ್ತಮ ನಿದರ್ಶನ. ಧೋನಿ ಅವರು ಈ ಬಾರಿಯ ಐಪಿಎಲ್​ ಬಳಿಕ ನಿವೃತ್ತಿ ಘೋಷಿಸುತ್ತಾರೆ ಎನ್ನಲಾಗಿತ್ತು. ಇದೇ ಕಾರಣಕ್ಕೆ ಅವರ ಅಭಿಮಾನಿಗಳು ಚೆನ್ನೈ ಪಂದ್ಯ ಎಲ್ಲೆಲ್ಲಿ ನಡೆಯುತ್ತದೋ ಅಲ್ಲೆಲ್ಲ ಹೋಗಿ ಧೋನಿ ಆಟವನ್ನು ಕಣ್ತುಂಬಿಕೊಂಡಿದ್ದಾರೆ. ಜತೆಗೆ ಧೋನಿ ಅವರು ಮೈದಾನಕ್ಕೆ ಬರುವ ವೇಳೆ ಮೊಬೈಲ್​ ಪ್ಲ್ಯಾಶ್​ ಲೈಟ್​ಗಳನ್ನು ಹಾಕಿ ವಿಶೇಷ ಗೌರವ ಸೂಚಿಸುತ್ತಿದ್ದರು.

Continue Reading

ಕ್ರೀಡೆ

Gautam Gambhir: ಕೆಕೆಆರ್ ತಂಡದ ಮೆಂಟರ್​ ಸ್ಥಾನಕ್ಕೆ ಗಂಭೀರ್​ ರಾಜೀನಾಮೆ?; ಕೋಚ್​ ಆಗುವುದು ಖಚಿತ

Gautam Gambhir: ಗೌತಮ್ ಗಂಭೀರ್ ಶ್ರೀಲಂಕಾ ಸರಣಿಯ ವೇಳೆ ಭಾರತ ತಂಡದ ಕೋಚ್ ಸ್ಥಾನವನ್ನು ಅಲಂಕರಿಸಲಿದ್ದಾರೆ ಎನ್ನಲಾಗಿದೆ. ರಾಹುಲ್ ದ್ರಾವಿಡ್ ಕೋಚ್ ಸ್ಥಾನದಿಂದ ಈಗಾಗಲೇ ನಿರ್ಗಮಿಸಿದ್ದಾರೆ.

VISTARANEWS.COM


on

Gautam Gambhir
Koo

ಕೋಲ್ಕತ್ತಾ: ಗೌತಮ್​ ಗಂಭೀರ್(Gautam Gambhir)​ ಅವರು ಟೀಮ್ ಇಂಡಿಯಾದ ಕೋಚ್(Team India Coach)​ ಆಗುವುದು ಬಹುತೇಕ ಖಚಿತ. ಕೆಕೆಆರ್(KKR)​ ತಂಡದ ಮೆಂಟರ್​ ಆಗಿದ್ದ ಅವರು ಇದೀಗ ಈ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಗಂಭೀರ್​ ಶೀಘ್ರದಲ್ಲೇ ಕೋಚ್ ಆಗುವುದು ನಿಶ್ಚಿತ. ಕೆಕೆಆರ್​ ಫ್ರಾಂಚೈಸಿ ಮುಂದಿನ ಶುಕ್ರವಾರ ಕೋಲ್ಕತಾದಲ್ಲಿ ಗಂಭೀರ್​ಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದೆ ಎಂದು ಮೂಲಗಳು ತಿಳಿಸಿವೆ.

​ಗೌತಮ್ ಗಂಭೀರ್ ಶ್ರೀಲಂಕಾ ಸರಣಿಯ ವೇಳೆ ಭಾರತ ತಂಡದ ಕೋಚ್ ಸ್ಥಾನವನ್ನು ಅಲಂಕರಿಸಲಿದ್ದಾರೆ ಎನ್ನಲಾಗಿದೆ. ರಾಹುಲ್ ದ್ರಾವಿಡ್ ಕೋಚ್ ಸ್ಥಾನದಿಂದ ಈಗಾಗಲೇ ನಿರ್ಗಮಿಸಿದ್ದಾರೆ. ದ್ರಾವಿಡ್ ಅವರಿಂದ ತೆರವಾದ ಸ್ಥಾನವನ್ನು ಗಂಭೀರ್ ಭರ್ತಿ ಮಾಡಲಿದ್ದಾರೆ. ಬಿಸಿಸಿಐ ಅಧಿಕೃತ ಘೋಷಣೆ ಮಾಡುವುದೊಂದೆ ಬಾಕಿ. . ಶ್ರೀಲಂಕಾ ವಿರುದ್ಧದ ಸರಣಿ ಜುಲೈ 27ರಿಂದ ಆರಂಭಗೊಳ್ಳಲಿದೆ.

ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ಆಯ್ಕೆಯಾದ ಹೊಸ ಕೋಚ್‌ ಟಿ20 ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಕೆಳವು ದಿನಗಳ ಹಿಂದೆ ಗಂಭೀರ್​ ಜತೆ ವಿ. ರಾಮನ್‌(WV Raman) ಕೂಡ ಕೋಚ್​ ರೇಸ್​ನಲ್ಲಿದ್ದಾರೆ ಎನ್ನಲಾಗಿತ್ತು. ಆದರೆ ಕೊನೆಗೂ ಬಿಸಿಸಿಐ ಗಂಭೀರ್​ಗೆ ಮಣೆ ಹಾಕಿದಂತಿದೆ.

ದಕ್ಷಿಣ ಆಫ್ರಿಕಾದ ಈ ಮಾಜಿ ಆಟಗಾರ, ಕ್ರಿಕೆಟ್​ ಕಂಡ ಬೆಸ್ಟ್​ ಫೀಲ್ಡರ್​ ಜಾಂಟಿ ರೋಡ್ಸ್(Jonty Rhodes) ಅವರು ಭಾರತ ತಂಡದ ಫೀಲ್ಡಿಂಗ್​ ಕೋಚ್​(Jonty Rhodes ia’s New Fielding Coach) ಆಗಲಿದ್ದಾರೆ ಎಂದು ತಿಳಿದುಬಂದಿದೆ. ತಂಡದ ಇತರ ಕೋಚ್​ಗಳ ಆಯ್ಕೆಯಲ್ಲಿ ತನ್ನ ವ್ಯಕ್ತಿಗಳನ್ನು ನೇಮಿಸಿಕೊಳ್ಳುವ ಅವಕಾಶ ನೀಡಬೇಕೆಂದು ಗಂಭೀರ್​ ಅವರು ಬಿಸಿಸಿಐಗೆ ಬೇಡಿಕೆ ಇಟ್ಟಿದ್ದು ಈ ಬೇಡಿಕೆಯನ್ನು ಬಿಸಿಸಿಐ ಒಪ್ಪಿಕೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ Gautam Gambhir : ಕೊಹ್ಲಿಯನ್ನು ತಂಡದಿಂದ ಹೊರಗಿಡಿ; ಕೋಚ್​ ಆಗಲು ಗಂಭೀರ್​ ಒಡ್ಡಿದ್ದ ಷರತ್ತು ಒಪ್ಪಿದ ಬಿಸಿಸಿಐ

ಈ ಬಾರಿಯ ಐಪಿಎಲ್​ನಲ್ಲಿ ಕೆಕೆಆರ್‌ ತಂಡಕ್ಕೆ ಯಶಸ್ವಿ ಮಾರ್ಗದರ್ಶನ ನೀಡಿ ತಂಡವನ್ನು ಚಾಂಪಿಯನ್​ ಮಾಡಿದ ಗಂಭೀರ್‌, ರಾಹುಲ್‌ ದ್ರಾವಿಡ್‌ ಅವರ ಸ್ಥಾನ ತುಂಬಲು ಅರ್ಹರು ಎಂದು ಬಿಸಿಸಿಐ ಭಾವಿಸಿದೆ ಎಂದು ಮೂಲಗಳು ತಿಳಿಸಿವೆ.  ಮೂಲಗಳ ಪ್ರಕಾರ ಗಂಭೀರ್​ ಕೋಚ್​ ಆಗುವ ದೃಷ್ಟಿಯಿಂದಲೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಎನ್ನಲಾಗಿದೆ.

ಗಂಭೀರ್​ ಅವರು ಜಾಂಟಿ ರೋಡ್ಸ್ ಜತೆ ಐಪಿಎಲ್​ನಲ್ಲಿ ಲಕ್ನೋ ತಂಡದ ಪರ ಜತೆಯಾಗಿ 2 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಇದೇ ಕಾಂಬಿನೇಷನ್​ನಲ್ಲಿ ಇದೀಗ ಟೀಮ್​ ಇಂಡಿಯಾದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಕಂಡುಬಂದಿದೆ. 2019ರಲ್ಲಿಯೂ ಜಾಂಟಿ ರೋಡ್ಸ್ ಅವರು ಭಾರತದ ತಂಡದ ಫೀಲ್ಡಿಂಗ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಭಾರತೀಯ ಮೂಲದ ಸಿಬ್ಬಂದಿಗೆ ಬಿಸಿಸಿಐ ಮಣೆ ಹಾಕಿತ್ತು. ಈ ಬಾರಿ ಗಂಭೀರ್​ ಅವರ ಅಭಯಹಸ್ತದಿಂದ ರೋಡ್ಸ್​ಗೆ ಅವಕಾಶ ಸಿಗುವ ಸಾಧ್ಯತೆ ಇದೆ

Continue Reading

ಕ್ರೀಡೆ

IND vs ZIM: ಗೆಲುವಿನ ಹಾದಿಗೆ ಮರಳುವುದೇ ಶುಭಮನ್​ ಗಿಲ್​ ಪಡೆ?; ಇಂದು ದ್ವಿತೀಯ ಟಿ20

IND vs ZIM: ಜಿಂಬಾಬ್ಬೆ ತಂಡದ ಬೌಲಿಂಗ್​ ವಿಭಾಗ ಅತ್ಯಂತ ಘಾತಕವಾಗಿದೆ. ಸ್ಪಿನ್​ ಮತ್ತು ವೇಗಿಗಳು ಉತ್ತಮ ಲಯದಲ್ಲಿದ್ದಾರೆ. ನಾಯಕ ಸಿಕಂದರ್​ ರಾಜಾ ಸ್ಪಿನ್​ ಮೊಡಿಗೆ ಭಾರತೀಯ ಬ್ಯಾಟರ್​ಗಳು ರನ್​ ಗಳಿಸಲು ಪರದಾಡಿದ್ದನ್ನು ಈಗಾಗಲೇ ಕಂಡಿದ್ದೇವೆ. ತೆಂಡೈ ಚತಾರಾ ಕೂಡ ಅಪಾಯಕಾರಿಯಾಗಿದ್ದಾರೆ.

VISTARANEWS.COM


on

IND vs ZIM
Koo

ಹರಾರೆ: ಶನಿವಾರ ನಡೆದಿದ್ದ ಜಿಂಬಾಬ್ವೆ(IND vs ZIM) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿದ್ದ ಶುಭಮನ್​ ಸಾರಥ್ಯದ ಯಂಗ್​ ಟೀಮ್​ ಇಂಡಿಯಾ ಇದೀಗ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಇಂದು ನಡೆಯುವ ದ್ವಿತೀಯ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದೆ. 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿರುವ ಜಿಂಬಾಬ್ವೆ ಈ ಪಂದ್ಯವನ್ನು ಕೂಡ ಗೆಲ್ಲವ ವಿಶ್ವಾಸದಲ್ಲಿದೆ.

ಮೊದಲ ಪಂದ್ಯಕ್ಕೆ ತಂಡದ ಬ್ಯಾಟಿಂಗ್​ ವೈಫಲ್ಯವೇ ಕಾರಣ ಎಂದು ಈಗಾಗಲೇ ನಾಯಕ ಶುಭಮನ್​ ಗಿಲ್​ ಹೇಳಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಭಾರತೀಯ ಬ್ಯಾಟರ್​ಗಳು ಉತ್ತಮವಾಗಿ ಆಡುವ ಅಗತ್ಯವಿದೆ. ಐಪಿಎಲ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿದ್ದ ಅಭಿಷೇಕ್​ ಶರ್ಮ ಅವರು ಮೇಲೆ ಮೊದಲ ಪಂದ್ಯದಲ್ಲಿ ಭಾರೀ ನಿರೀಕ್ಷೆ ಇರಿಸಲಾಗಿತ್ತು. ಆದರೆ ಅವರು ಖಾತೆ ತೆರೆಯುವಲ್ಲಿಯೂ ಯಶಸ್ಸು ಕಾಣಲಿಲ್ಲ. ರಿಂಕು ಸಿಂಗ್​, ಋತುರಾಜ್​ ಗಾಯಕ್ವಾಡ್​,​ ಜುರೇಲ್​, ಪರಾಗ್​ ಸಂಪೂರ್ಣ ವೈಫಲ್ಯ ಕಂಡಿದ್ದರು. ಈ ಪಂದ್ಯದಲ್ಲಿ ಹೇಗೆ ಪ್ರದರ್ಶನ ತೋರಲಿದ್ದಾರೆ ಎಂದು ಕಾದು ನೋಡಬೇಕಿದೆ.

ಜಿಂಬಾಬ್ಬೆ ತಂಡದ ಬೌಲಿಂಗ್​ ವಿಭಾಗ ಅತ್ಯಂತ ಘಾತಕವಾಗಿದೆ. ಸ್ಪಿನ್​ ಮತ್ತು ವೇಗಿಗಳು ಉತ್ತಮ ಲಯದಲ್ಲಿದ್ದಾರೆ. ನಾಯಕ ಸಿಕಂದರ್​ ರಾಜಾ ಸ್ಪಿನ್​ ಮೊಡಿಗೆ ಭಾರತೀಯ ಬ್ಯಾಟರ್​ಗಳು ರನ್​ ಗಳಿಸಲು ಪರದಾಡಿದ್ದನ್ನು ಈಗಾಗಲೇ ಕಂಡಿದ್ದೇವೆ. ತೆಂಡೈ ಚತಾರಾ ಕೂಡ ಅಪಾಯಕಾರಿಯಾಗಿದ್ದಾರೆ.

ಭಾರತ ಮತ್ತು ಜಿಂಬಾಬ್ವೆ ಇದುವರೆಗೆ ಒಟ್ಟು 9 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 6 ಪಂದ್ಯ ಗೆದ್ದಿದ್ದರೆ, ಜಿಂಬಾಬ್ವೆ 3 ಪಂದ್ಯ ಗೆದ್ದಿದೆ. ಇದರಲ್ಲೊಂದು ಗೆಲುವು ಈ ಸರಣಿಯದ್ದಾಗಿದೆ.

ಇದನ್ನೂ ಓದಿ ZIM vs IND : ಜಿಂಬಾಬ್ವೆ ವಿರುದ್ಧ 13 ರನ್​ಗಳಿಂದ ಸೋತ ವಿಶ್ವ ವಿಜೇತ ಭಾರತ ತಂಡ

ಬೌಲಿಂಗ್​ಗೆ ಹೆಚ್ಚು ಸಹಕಾರಿಯಾಗಿರುವ ಹರಾರೆ ಸ್ಪೋರ್ಟ್ಸ್ ಕ್ಲಬ್ ಪಿಚ್​ನಲ್ಲಿ ಒಂದು ಕೂಡ ಲೋ ಸ್ಕೋರ್​ ಆಗುವ ನಿರೀಕ್ಷೆ ಇದೆ. ಹೆಚ್ಚಾಗಿ ಸ್ಪಿನ್​ ಬೌಲರ್​ಗಳು ಮೇಲುಗೈ ಸಾಧಿಸುವ ಸಾಧ್ಯತೆ ಅಧಿಕ. ಹೀಗಾಗಿ ಇತ್ತಂಡಗಳು ಸ್ಪಿನ್​​ ಬೌಲಿಂಗ್​ಗೆ ಹೆಚ್ಚಿನ ಒತ್ತು ನೀಡಬಹುದು. ಸೋಲು ಕಂಡರೂ ಕೂಡ ಭಾರತ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಬದಲಾವಣೆ ಮಾಡುವುದು ಅನುಮಾನ.

ಮೊದಲ ಪಂದ್ಯದಲ್ಲಿ ಸೋಲು


ನಿನ್ನೆ(ಶನಿವಾರ) ನಡೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಭಾರತ ಭರ್ಜರಿ ಬೌಲಿಂಗ್‌ ಮಾಡಿ ಜಿಂಬಾಬ್ವೆ ಆಟಗಾರರನ್ನು 115 ರನ್​ಗೆ ಕಟ್ಟಿ ಹಾಕಿತು. ಈ ಮೊತ್ತವನ್ನು ಭಾರತ ಕೇವಲ 10 ಓವರ್​ನಲ್ಲಿ ಹೊಡೆದು ಮುಗಿಸಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಚೇಸಿಂಗ್ ಆರಂಭಿಸಿದಾಗ ನಡೆದಿದ್ದೇ ಬೇರೆ. ಭಾರತೀಯ ಬ್ಯಾಟರ್​ಗಳ ವಿಕೆಟ್​ಗಳು ತರಗೆಲೆಯಂತೆ ಉದುರಿಹೋಯಿತು. 19,5 ಓವರ್​ಗಳಲ್ಲಿ 102 ರನ್​ಗೆ ಸರ್ವ ಪತನ ಕಂಡು ಸೋಲೊಪ್ಪಿಕೊಂಡಿತು.

Continue Reading
Advertisement
Dolly Dhananjay zebra movie look out
ಸ್ಯಾಂಡಲ್ ವುಡ್2 mins ago

Dolly Dhananjay: ʻಜೀಬ್ರಾʼ ತಂಡದಿಂದ ಹೊರ ಬಿತ್ತು ʻಸತ್ಯದೇವ್ʼ ಫಸ್ಟ್‌ ಲುಕ್‌!

Viral News
ದೇಶ6 mins ago

ಪಿಎಂ ಆವಾಸ್‌ ಯೋಜನೆಯ 40 ಸಾವಿರ ರೂ. ಪಡೆದು 11 ಸ್ತ್ರೀಯರು ಗೆಳೆಯರೊಂದಿಗೆ ಪರಾರಿ; ಕಂಗಾಲಾದ ಪತಿಯರು!

Amritpal Singh
ದೇಶ6 mins ago

Amritpal Singh: ತಾಯಿ ವಿರುದ್ಧವೇ ಹೇಳಿಕೆ ನೀಡಿದ ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್‌ಪಾಲ್‌ ಸಿಂಗ್‌; ಕಾರಣವೇನು?

Leopard attack three in Raichur
ರಾಯಚೂರು15 mins ago

Leopard attack : ರಾಯಚೂರಿನಲ್ಲಿ ಮೂವರ ಮೇಲೆ ದಾಳಿ ಮಾಡಿ ಕಾಲ್ಕಿತ್ತ ಚಿರತೆ!

Hit and Run case
ದೇಶ16 mins ago

Hit and Run Case: ಶಿವಸೇನೆ ಮುಖಂಡನ ಪುತ್ರನಿಂದ ಡ್ರಂಕ್‌ ಆಂಡ್‌ ಡ್ರೈವ್‌; ಸ್ಕೂಟರ್‌ಗೆ BMW ಕಾರು ಡಿಕ್ಕಿ ಹೊಡೆದು ಮಹಿಳೆ ಸಾವು

Sonakshi Sinha has a hilarious take on her pregnancy
ಬಾಲಿವುಡ್21 mins ago

Sonakshi Sinha: ಮದುವೆಯಾದ ಕೆಲವೇ ದಿನಗಳಲ್ಲಿ ಸೋನಾಕ್ಷಿ ಸಿನ್ಹಾ ಗರ್ಭಿಣಿ? ಆಸ್ಪತ್ರೆಯಲ್ಲಿ ನಟಿ ಹೇಳಿದ್ದೇನು?

ATM Robbery
ಕರ್ನಾಟಕ52 mins ago

ATM Robbery: ಎಟಿಎಂನಲ್ಲಿ 15 ಲಕ್ಷ ರೂ. ದೋಚಿದ ಕಳ್ಳರು; ಗ್ಯಾಸ್ ಕಟರ್ ಬಳಸಿ ಕೃತ್ಯ!

Rohit Sharma
ಕ್ರೀಡೆ58 mins ago

Rohit Sharma: ಚಾಂಪಿಯನ್ಸ್​ ಟ್ರೋಫಿಗೂ ರೋಹಿತ್​ ನಾಯಕ; ಖಚಿತಪಡಿಸಿದ ಜಯ್​ ಶಾ

Attempt To Murder
ಬೆಂಗಳೂರು ಗ್ರಾಮಾಂತರ1 hour ago

Attempt To Murder: ಬಾಯಿಗೆ ಬಂದಂತೆ ಬೈದ್ರು ಅಂತ ಸಿಟ್ಟು; ಮಾಲೀಕನಿಗೆ ಹೊಡೆದು ಕೋಮಾಗೆ ಕಳಿಸಿದ ಸಪ್ಲೇಯರ್‌!

murder case
ಶಿವಮೊಗ್ಗ2 hours ago

Murder case : ಸ್ನೇಹಿತನಿಂದಲೇ ಕೊಲೆಯಾದಳು ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ9 hours ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ21 hours ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ24 hours ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ1 day ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು1 day ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ1 day ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ2 days ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ2 days ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ2 days ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

ಟ್ರೆಂಡಿಂಗ್‌