ಅಮೆರಿಕ ಅಧ್ಯಕ್ಷ ಬೈಡೆನ್ ಮೊಮ್ಮಗಳ ಕಾರ್ ಮೇಲೆ ದಾಳಿ! ಗುಂಡು ಹಾರಿಸಿದ ಸೀಕ್ರೆಟ್ ಸರ್ವೀಸ್ ಏಜೆಂಟ್ಸ್! - Vistara News

ಪ್ರಮುಖ ಸುದ್ದಿ

ಅಮೆರಿಕ ಅಧ್ಯಕ್ಷ ಬೈಡೆನ್ ಮೊಮ್ಮಗಳ ಕಾರ್ ಮೇಲೆ ದಾಳಿ! ಗುಂಡು ಹಾರಿಸಿದ ಸೀಕ್ರೆಟ್ ಸರ್ವೀಸ್ ಏಜೆಂಟ್ಸ್!

US President: ಅಮೆರಿಕದ ಜಾರ್ಜ್‌ಟೌನ್‌ನಲ್ಲಿ ಮೂವರು ಕಿಡಿಗೇಡಿಗಳು ಅಧ್ಯಕ್ಷ ಜೋ ಬೈಡೆನ್ ಅವರ ಮೊಮ್ಮಗಳ ಕಾರು ಒಡೆಯುವ ಪ್ರಯತ್ನ ಮಾಡಿದ್ದಾರೆ.

VISTARANEWS.COM


on

US President granddaughter's car attacked
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ (US President Joe Biden) ಅವರು ಮೊಮ್ಮಗಳು ನವೋಮಿ ಬೈಡೆನ್ (Naomi Biden) ಅವರ ಕಾರು (Car) ಒಡೆಯಲು ಯತ್ನಿಸಿದ ಮೂವರ ವಿರುದ್ಧ ಸೀಕ್ರೆಟ್ ಸರ್ವೀಸ್ ಏಜೆಂಟ್‌ಗಳು (Secret service agents) ಗುಂಡು ಹಾರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನವೋಮಿ ಬೈಡೆನ್ ಅವರನ್ನು ರಕ್ಷಿಸಲು ನಿಯೋಜಿಸಲಾದ ಏಜೆಂಟ್‌ಗಳು, ಜಾರ್ಜ್‌ಟೌನ್ ನೆರೆಹೊರೆಯಲ್ಲಿ ಅವಳೊಂದಿಗೆ ಹೊರಗಿದ್ದರು. ಅವರು ನಿಲ್ಲಿಸಿದ ಮತ್ತು ಖಾಲಿಯಿಲ್ಲದ ಎಸ್‌ಯುವಿಯ ಕಿಟಕಿಯನ್ನು ಮೂರು ಜನರು ಒಡೆಯುವುದನ್ನು ನೋಡಿದರು. ಬಳಿಕ ಕ್ರಮಕ್ಕೆ ಮುಂದಾದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಕುರಿತಾದ ತನಿಖೆಯ ವಿವರವನ್ನು ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಯಲ್ಲಿ ತಿಳಿಸಲಾಗಿದೆ. ಕಾರು ಒಡೆಯುತ್ತಿದ್ದವರತ್ತ ಏಜೆಂಟರ್‌ಗಳ ಪೈಕಿ ಒಬ್ಬರು ಗುಂಡು ಹಾರಿಸಿದ್ದಾರೆ. ಆದರೆ, ಇದರಿಂದ ಯಾರಿಗೂ ಹಾನಿಯಾಗಿಲ್ಲ ಎಂದು ಸೀಕ್ರೆಟ್ ಏಜೆಂಟ್ ಸೇವೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಗುಂಡು ಹಾರಿಸುತ್ತಿದ್ದಂತೆ ಕಾರ್ ಒಡೆಯುತ್ತಿದ್ದ ಮೂವರು ಕೆಂಪು ಬಣ್ಣದ ಕಾರಿನಲ್ಲಿ ಪರಾರಿಯಾದರು ಎಂದು ಹೇಳಲಾಗಿದೆ. ಈ ಮಧ್ಯೆ ಪರಾರಿಯಾಗಿರುವರ ಪತ್ತೆಗಾಗಿ ಮೆಟ್ರೋಪಾಲಿಟನ್ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಸೀಕ್ರೆಂಟ್ ಏಜೆಂಟ್ ಸರ್ವಿಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದೇ ರೀತಿಯ ಘಟನೆಯೊಂದು ಕಳೆದ ತಿಂಗಳು ಕೂಡ ನಡೆದಿತ್ತು. ಟೆಕ್ಸಾಸ್‌ನ ಯುಎಸ್ ಪ್ರತಿನಿಧಿ ಹೆನ್ರಿ ಕ್ಯುಲ್ಲರ್ ಅವರನ್ನು ಕಳೆದ ತಿಂಗಳು ಕ್ಯಾಪಿಟಲ್ ಬಳಿ ಮೂರು ಶಸ್ತ್ರಸಜ್ಜಿತ ಆಕ್ರಮಣಕಾರರು ಅಡ್ಡಗಟ್ಟಿದ್ದರು. ಈ ಆರಪಿಗಳು ಅವರ ಕಾರನ್ನು ಕದ್ದಿದ್ದಾರೆ. ಆದರೆ ಕ್ಯುಲ್ಲರ್ ಅವರಿಗೆ ದೈಹಿಕವಾಗಿ ಹಾನಿ ಮಾಡಲಿಲ್ಲ. ಈ ವರ್ಷದ ಫೆಬ್ರವರಿಯಲ್ಲಿ, ಮಿನ್ನೇಸೋಟಾದ ಆಂಜಿ ಕ್ರೇಗ್ ತನ್ನ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಹಲ್ಲೆಗೊಳಗಾಗಿದ್ದರು. ಈ ವೇಳೆ ಗಂಭೀರ ಗಾಯವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಮೊಮ್ಮಗಳಾದ ನವೋಮಿ ಬೈಡೆನ್ ಅವರು ನವೆಂಬರ್ 2022ರಲ್ಲಿ ಪೀಟರ್ ನೀಲ್ ಜತೆ ವೈಟ್‌ಹೌಸ್‌ನಲ್ಲಿ ವಿವಾಹವಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಏಕೆಂದರೆ, ವೈಟ್‌ಹೌಸ್‌ನ ಸೌತ್ ಲಾನ್‌ನಲ್ಲಿ ಮದುವೆಯಾದ ಮೊದಲ ವಧು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ನವೋಮಿ ಮತ್ತು ಪೀಟರ್ ಸಹ ಜೋ ಬೈಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರೊಂದಿಗೆ 1600 ಪೆನ್ಸಿಲ್ವೇನಿಯಾ ಅವೆನ್ಯೂದಲ್ಲಿ ಆಗಸ್ಟ್ 2021 ರಿಂದ ವಾಸಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Joe Biden: ಚುನಾವಣೆ ಮೊದಲೇ ಜೋ ಬೈಡೆನ್‌ಗೆ ಸಂಕಷ್ಟ; ಮಗನ ವಿರುದ್ಧ ಕ್ರಿಮಿನಲ್‌ ಚಾರ್ಜ್‌ಶೀಟ್!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Team India : ಈ ಕೆಲಸ ಇಷ್ಟವಿದೆ; ಟೀಮ್ ಇಂಡಿಯಾ ಕೋಚ್​ ಹುದ್ದೆಯ ಬಗ್ಗೆ ಮೊದಲ ಹೇಳಿಕೆ ನೀಡಿದ ಗೌತಮ್ ಗಂಭೀರ್​

Team India: ಅಬುಧಾಬಿಯ ಮೆಡಿಯೋರ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಂಭೀರ್, ಇತ್ತೀಚೆಗೆ ಕೆಕೆಆರ್​ ತಂಡಕ್ಕೆ ಮೂರನೇ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಮಾರ್ಗದರ್ಶನ ನೀಡಿದ ಬಗ್ಗೆ ಮಾತನಾಡಿದರು. ಅವರು ಯುವ ಕ್ರೀಡಾ ಉತ್ಸಾಹಿಗಳೊಂದಿಗೆ ಮಾತುಕತೆ ನಡೆಸಿದರು. ಭಾರತೀಯ ಕ್ರಿಕೆಟ್ ಬಗ್ಗೆ ತಮ್ಮ ಆಕಾಂಕ್ಷೆಗಳು ಮತ್ತು ದೃಷ್ಟಿಕೋನವನ್ನು ಹಂಚಿಕೊಂಡರು. ಈ ವೇಳೆ ಅವರು ಭಾರತ ತಂಡದ ಕೋಚ್ ಆಗುವ ಬಗ್ಗೆಯೂ ಮಾತನಾಡಿದ್ದಾರೆ.

VISTARANEWS.COM


on

Team India
Koo

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಮುಂದಿನ ಕೋಚ್ ಯಾರು ಆಗುತ್ತಾರೆ ಎಂಬ ಕೌತುಕದ ನಡುವೆಯೂ ಗೌತಮ್ ಗಂಭೀರ್ ಅವರ ಹೆಸರು ಮೊದಲಾಗಿ ಕೇಳಿ ಬರುತ್ತಿದೆ. ಆದರೆ, ಅವರಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಹಲವಾರು ದಿನಗಳಿಂದ ಇದೇ ಊಹಾಪೋಹ ನಡೆಯುತ್ತಿದೆ. ಏತನ್ಮಧ್ಯೆ, ಭಾರತದ ಮಾಜಿ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಅವರು ಭಾರತೀಯ ರಾಷ್ಟ್ರೀಯ ಪುರುಷರ ಕ್ರಿಕೆಟ್ ತಂಡಕ್ಕೆ ತರಬೇತುದಾರರಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ, ನನ್ನ ವೃತ್ತಿಜೀವನದ ಅತ್ಯುನ್ನತ ಗೌರವ ಎಂಬದಾಗಿಯೂ ಹೇಳಿದ್ದಾರೆ.

ಅಬುಧಾಬಿಯ ಮೆಡಿಯೋರ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಂಭೀರ್, ಇತ್ತೀಚೆಗೆ ಕೆಕೆಆರ್​ ತಂಡಕ್ಕೆ ಮೂರನೇ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಮಾರ್ಗದರ್ಶನ ನೀಡಿದ ಬಗ್ಗೆ ಮಾತನಾಡಿದರು. ಅವರು ಯುವ ಕ್ರೀಡಾ ಉತ್ಸಾಹಿಗಳೊಂದಿಗೆ ಮಾತುಕತೆ ನಡೆಸಿದರು. ಭಾರತೀಯ ಕ್ರಿಕೆಟ್ ಬಗ್ಗೆ ತಮ್ಮ ಆಕಾಂಕ್ಷೆಗಳು ಮತ್ತು ದೃಷ್ಟಿಕೋನವನ್ನು ಹಂಚಿಕೊಂಡರು. ಈ ವೇಳೆ ಅವರು ಭಾರತ ತಂಡದ ಕೋಚ್ ಆಗುವ ಬಗ್ಗೆಯೂ ಮಾತನಾಡಿದ್ದಾರೆ.

ಭಾರತ ಹಿರಿಯರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಬದಲಿಗೆ ಗಂಭೀರ್ ಅವರನ್ನು ನೇಮಕ ಮಾಡಲಾಗುತ್ತಿದೆ ಎಂಬ ಸುದ್ದಿಗಳಿವೆ. ಐಪಿಎಲ್ ಫ್ರಾಂಚೈಸಿ ನೈಟ್ ರೈಡರ್ಸ್​ಗೆ ಇತ್ತೀಚಿನ ಬದ್ಧತೆಯ ಹೊರತಾಗಿಯೂ ವಿಶ್ವಕಪ್ ವಿಜೇತ ಮಾಜಿ ಆರಂಭಿಕ ಆಟಗಾರ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ. ದ್ರಾವಿಡ್ ಅವರ ಅಧಿಕಾರಾವಧಿ ಜೂನ್ ನಲ್ಲಿ ಕೊನೆಗೊಳ್ಳಲಿರುವುದರಿಂದ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಉನ್ನತ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನವಾಗಿತ್ತು.

ನಾನು ಭಾರತ ತಂಡಕ್ಕೆ ತರಬೇತುದಾರನಾಗಲು ಇಷ್ಟಪಡುತ್ತೇನೆ. ನಿಮ್ಮ ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುವುದಕ್ಕಿಂತ ದೊಡ್ಡ ಗೌರವ ಇನ್ನೊಂದಿಲ್ಲ. ನೀವು ವಿಶ್ವದಾದ್ಯಂತ 140 ಕೋಟಿ ಭಾರತೀಯರನ್ನು ಪ್ರತಿನಿಧಿಸುತ್ತಿದ್ದೀರಿ ಮತ್ತು ನೀವು ಭಾರತವನ್ನು ಪ್ರತಿನಿಧಿಸಿದಾಗ ಅದಕ್ಕಿಂತ ಗೌರವ ಇನ್ನೇನು?” ಎಂದು ಗಂಭೀರ್ ಎನ್​ಐ ಜತೆ ಮಾತನಾಡುತ್ತಾ ಹೇಳಿದ್ದಾರೆ.

ವಿಶ್ವ ಕಪ್​​ನಲ್ಲಿ ಯಶಸ್ಸನ್ನು ಸಾಧಿಸಲು ಸಾಮೂಹಿಕ ಪ್ರಯತ್ನವನ್ನು ಗಂಭೀರ್ ಒತ್ತಿಹೇಳಿದರು. ವಿಶೇಷವಾಗಿ ಅಪೇಕ್ಷಿತ ಕ್ರಿಕೆಟ್ ವಿಶ್ವಕಪ್ ಅನ್ನು ಉಲ್ಲೇಖಿಸಿದರು.”ಭಾರತ ವಿಶ್ವಕಪ್ ಗೆಲ್ಲಲು ಸಹಾಯ ಮಾಡುವುದು ನಾನಲ್ಲ. 140 ಕೋಟಿ ಭಾರತೀಯರು ಭಾರತಕ್ಕೆ ವಿಶ್ವಕಪ್ ಗೆಲ್ಲಲು ಸಹಾಯ ಮಾಡುತ್ತಾರೆ. ಪ್ರತಿಯೊಬ್ಬರೂ ನಮಗಾಗಿ ಪ್ರಾರ್ಥಿಸಲು ಪ್ರಾರಂಭಿಸಿದರೆ ಮತ್ತು ನಾವು ಆಡಲು ಮತ್ತು ಪ್ರತಿನಿಧಿಸಲು ಪ್ರಾರಂಭಿಸಿದರೆ, ಭಾರತವು ವಿಶ್ವಕಪ್ ಗೆಲ್ಲುತ್ತದೆ, “ಎಂದು ಅವರು ಹೇಳಿದರು.

ಇದನ್ನೂ ಓದಿ: T20 World Cup 2024 : ಒಮಾನ್ ವಿರುದ್ಧ ಹೊಸ ದಾಖಲೆ ಬರೆದ ನಮೀಬಿಯಾ ತಂಡದ ರುಬೆನ್ ಟ್ರಂಪೆಲ್ಮನ್

ಮಾಜಿ ಆರಂಭಿಕ ಬ್ಯಾಟ್ಸ್ಮನ್ ಆಟವನ್ನು ಆಡುವ ತಮ್ಮ ಯೋಚನೆಗಳನ್ನು ಹಂಚಿಕೊಂಡರು. ನಿರ್ಭೀತ ವಿಧಾನದ ಮಹತ್ವ ಒತ್ತಿ ಹೇಳಿದರು. ಅತ್ಯಂತ ಮುಖ್ಯವಾದ ವಿಷಯವೆಂದರೆ ನಿರ್ಭೀತರಾಗಿರುವುದು ಎಂದು ಗಂಭೀರ್ ಪ್ರತಿಪಾದಿಸಿದರು. ಗರಿಷ್ಠ ಗುರಿಯಾಗಿಸಿಕೊಂಡಿರುವ ಯಾವುದೇ ತಂಡಕ್ಕೆ ಧೈರ್ಯ ಮತ್ತು ಆತ್ಮವಿಶ್ವಾಸವು ನಿರ್ಣಾಯಕ ಅಂಶಗಳಾಗಿವೆ ಎಂದು ಸೂಚಿಸಿದರು.

ವಿಶ್ವ ಕಪ್​ ಗೆಲುವುಗಳಲ್ಲಿ ಗಂಭೀರ್​ ಪ್ರಯತ್ನ ಸ್ಮರಣೀಯ

2007ರ ಐಸಿಸಿ ಟಿ20 ವಿಶ್ವಕಪ್ ಹಾಗೂ 2011ರ ಐಸಿಸಿ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಗಂಭೀರ್ ಪ್ರಮುಖ ಪಾತ್ರ ವಹಿಸಿದ್ದರು. ಅವರ ದೃಢತೆ ಮತ್ತು ತಂತ್ರಗಾರಿಕೆಗೆ ಹೆಸರುವಾಸಿಯಾದ ಅವರು ಕೋಚಿಂಗ್ ಪಾತ್ರದಲ್ಲಿ ಸಂಭಾವ್ಯ ಪಾಲ್ಗೊಳ್ಳುವಿಕೆಯು ಪ್ರಸ್ತುತ ತಂಡಕ್ಕೆ ಅನುಭವ ಮತ್ತು ಒಳನೋಟದ ಸಂಪತ್ತನ್ನು ತರಬಹುದು.

ಗಂಭೀರ್ 2022 ರಲ್ಲಿ ಲಕ್ನೋ ಐಪಿಎಲ್ ಫ್ರಾಂಚೈಸಿಯೊಂದಿಗೆ ತಮ್ಮ ಮಾರ್ಗದರ್ಶಕ ವೃತ್ತಿಜೀವನವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರಾರಂಭಿಸಿದರು. ಅವರ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ, ಆಂಡಿ ಫ್ಲವರ್ ತರಬೇತುದಾರರಾಗಿದ್ದ ಲಕ್ನೊ ಸೂಪರ್ ಜೈಂಟ್ಸ್ ತಂಡವು ಪ್ಲೇಆಫ್ ತಲುಪಿತ್ತು 2024ರಲ್ಲಿ ಗಂಭೀರ್ ಕೆಕೆಆರ್​ಗೆ ಮರಳಿದ್ದರು. ಅಲ್ಲಿ ಅವರು ತಮ್ಮ ಮೂರನೇ ಐಪಿಎಲ್ ಚಾಂಪಿಯನ್​ಶಿಪ್​ ಗೆಲ್ಲಲು ನೆರವಾದರು.

Continue Reading

ಅಂಕಣ

ರಾಜಮಾರ್ಗ ಅಂಕಣ: ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೆ ಎಂಬ ಮಹಾ ಕನಸು!

ರಾಜಮಾರ್ಗ ಅಂಕಣ: ಜಾರ್ಜ್ ಭರವಸೆ ಕೊಟ್ಟ ಹಾಗೆ ಎಂಟು ವರ್ಷಗಳ ಒಳಗೆ ಈ ಪ್ರಾಜೆಕ್ಟ್ ಪೂರ್ತಿ ಆಯಿತು. 1998 ಜನವರಿ 26ರಂದು ಅಂದಿನ ಪ್ರಧಾನಿ ವಾಜಪೇಯಿ ಅವರು ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಕೊಂಕಣ ರೈಲ್ವೆಯ ಹೊಸ ಮಾರ್ಗವನ್ನು ಉದ್ಘಾಟನೆ ಮಾಡಿದರು. ತನ್ನ ತಂದೆ ಮರಣವನ್ನು ಹೊಂದಿದಾಗಲೂ ಕಣ್ಣೀರು ಹಾಕದೆ ಇದ್ದ ಉಕ್ಕಿನ ಮನುಷ್ಯ ಜಾರ್ಜ್ ಫರ್ನಾಂಡಿಸ್ ಅಂದು ಅಕ್ಷರಶಃ ಪುಟ್ಟ ಮಗುವಿನ ಹಾಗೆ ಕಣ್ಣೀರು ಹಾಕಿದ್ದರು!

VISTARANEWS.COM


on

George Fernandes ರಾಜಮಾರ್ಗ ಅಂಕಣ
Koo

ಇಂದು( ಜೂನ್ 3) ಜಾರ್ಜ್ ಫರ್ನಾಂಡಿಸ್ ಅವರ ಹುಟ್ಟಿದ ಹಬ್ಬ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: 1989ರ ಇಸವಿಯಲ್ಲಿ ಪ್ರಧಾನಿ ವಿ.ಪಿ ಸಿಂಗ್ (VP Singh) ಅವರ ಕ್ಯಾಬಿನೆಟ್‌ನಲ್ಲಿ ರೈಲ್ವೇ ಮಂತ್ರಿ (Railway minister) ಆಗಿ ಪ್ರತಿಜ್ಞೆ ಸ್ವೀಕರಿಸಿದ ತಕ್ಷಣ ಜಾರ್ಜ್ ಫರ್ನಾಂಡಿಸ್ (George Fernandes) ಉನ್ನತ ರೈಲ್ವೇ ಅಧಿಕಾರಿಗಳ ತುರ್ತು ಸಭೆಯನ್ನು ಕರೆದಿದ್ದರು.

ಜಾರ್ಜ್ ಫರ್ನಾಂಡಿಸ್ ಅಂದು ಹೇಳಿದ್ದು ಎರಡೇ ಮಾತು – ನನ್ನ ಮನಸಿನಲ್ಲಿ ಎರಡು ರೈಲ್ವೇಯ ಯೋಜನೆಗಳು ಇವೆ. ಒಂದು ಬಿಹಾರದಲ್ಲಿ ಚಿಟ್ಟೌನಿ, ಮತ್ತೊಂದು ಕರ್ನಾಟಕದಲ್ಲಿ ಕೊಂಕಣ ರೈಲ್ವೆ (Konkan Railway). ಮುಂದಿನ ಬಜೆಟ್ಟಿನಲ್ಲಿ ಅವುಗಳಿಗೆ ನಾನು ಹಣವನ್ನು ಮೀಸಲು ಇಡುತ್ತೇನೆ. ಅವೆರಡೂ ಪೂರ್ತಿ ಆಗಬೇಕು.

ಅವರು ಎರಡು ರೈಲ್ವೇ ಯೋಜನೆಗಳ ಹಿಂದೆ ಬಿದ್ದದ್ದೇಕೆ?

ಆಗ ಪತ್ರಕರ್ತರು ಅವೆರಡು ಯೋಜನೆಗಳು ಮಾತ್ರವೇ ಯಾಕೆ? ಎಂದು ಕೇಳಿದ್ದರು. ಅದಕ್ಕೆ ಜಾರ್ಜ್ ಫರ್ನಾಂಡೀಸ್ ಹೇಳಿದ್ದು – ಒಂದು ನನಗೆ ವೋಟನ್ನು ಹಾಕಿ ಗೆಲ್ಲಿಸಿದ ರಾಜ್ಯ ಬಿಹಾರ್. ಇನ್ನೊಂದು ನನ್ನ ಜನ್ಮ ಕೊಟ್ಟ ರಾಜ್ಯ ಕರ್ನಾಟಕ! ಎರಡು ರಾಜ್ಯಗಳ ಋಣವನ್ನು ಮರೆಯಲು ಸಾಧ್ಯವೇ?

ಜಾರ್ಜ್ ಅವರಿಗೆ ಮಂತ್ರಿಯಾಗಿ ಮುಂದೆ ತಾನು ಏನು ಮಾಡಬೇಕು ಅನ್ನುವುದು ಸ್ಪಷ್ಟ ಆಗಿತ್ತು! ನಾನು ಇವತ್ತು ʻಕೊಂಕಣ ರೈಲ್ವೆ’ ಎಂಬ ಮಹತ್ವಾಕಾಂಕ್ಷೆಯ ಯೋಜನೆಯು ಅನುಷ್ಠಾನವಾದ ಬಗ್ಗೆ ತುಂಬಾ ವಿಸ್ತಾರ ಆಗಿ ಬರೆಯಬೇಕು. ಏಕೆಂದರೆ ಜಾರ್ಜ್ ಇಲ್ಲವಾದ್ರೆ ಅದು ಇವತ್ತಿಗೂ ಪೂರ್ತಿ ಆಗುತ್ತಿರಲಿಲ್ಲ!

ʻಕೊಂಕಣ ರೈಲ್ವೆ ‘ ಎಂಬ ಮಹಾ ಮಿಷನ್!

ಭಾರತದ ಅತೀ ದೊಡ್ಡ, ಸವಾಲಿನ ರೈಲ್ವೇ ಪ್ರಾಜೆಕ್ಟ್ ಅದು! 70ರ ದಶಕದಲ್ಲಿ ಕರಾವಳಿ ಕರ್ನಾಟಕದ ಬೇರೆ ಬೇರೆ ಕಡೆಯಿಂದ ಮುಂಬೈಗೆ ಹೋಗಿ ಉದ್ಯಮ, ವ್ಯವಹಾರ ಆರಂಭ ಮಾಡಿದ್ದ ತುಳುವರಿಗೆ ಮುಂಬೈಗೆ ಹೋಗಲು ಆಗ 48 ಗಂಟೆ ಅವಧಿಯು ಬೇಕಾಗಿತ್ತು! ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರಭಸವಾಗಿ ಹರಿಯುತ್ತಿದ್ದ ದೊಡ್ಡ ದೊಡ್ಡ ನದಿಗಳಿಗೆ ಆಗ ಸೇತುವೆಗಳು ಆಗಿರಲಿಲ್ಲ.

ಕರಾವಳಿ ಕರ್ನಾಟಕದ ಮಂದಿಯು ರಸ್ತೆಯ ಮಾರ್ಗದಲ್ಲಿ ಚಿಕ್ಕಮಗಳೂರಿನವರೆಗೆ (ಕಡೂರು)ಹೋಗಿ ಅಲ್ಲಿಂದ ಟ್ರೈನನ್ನು ಏರಿಕೊಂಡು ಮುಂಬಯಿ ತಲುಪುವಾಗ ಎರಡು ದಿನ ಮತ್ತು ಎರಡು ರಾತ್ರಿಗಳು ಕಳೆದುಹೋಗುತ್ತಿದ್ದವು! ಬೇರೆ ಯಾವುದೇ ಮಾರ್ಗವು ಕೂಡ ಆಗ ಇರಲಿಲ್ಲ. ವಿಮಾನ ಆರಂಭ ಆಗಿರಲಿಲ್ಲ.

ಕೊಂಕಣ ರೈಲ್ವೇಗೆ ಎದುರಾಯಿತು ನೂರಾರು ಸವಾಲು

ಜಾರ್ಜ್ ತಾವು ಭರವಸೆ ಕೊಟ್ಟ ಹಾಗೆ ರೈಲ್ವೆ ಬಜೇಟಲ್ಲಿ ಕೊಂಕಣ್ ರೈಲ್ವೆಗೆ ಮಂಜೂರಾತಿ ಪಡೆದರು. ಒಂದಿಷ್ಟು ದುಡ್ಡು ಕೂಡ ಪಡೆದರು. ಆದರೆ ಅದು ‘ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆ’ ಎಂಬ ಹಾಗೆ ಇತ್ತು. ಆದರೆ ಜಾರ್ಜ್ ಹಿಡಿದ ಹಠ ಬಿಡುವ ಜಾಯಮಾನದವರೆ ಅಲ್ಲವಲ್ಲ!

ಮುಂದೆ ಒಂದೆರಡು ತಿಂಗಳ ಒಳಗೆ ಕೊಂಕಣ ರೈಲ್ವೆಸ್ ಕಂಪೆನಿಯು ಉದ್ಘಾಟನೆ ಆಯಿತು(1990 ಜುಲೈ 19). ಕೆಲವೇ ತಿಂಗಳ ಹಿಂದೆ ಕೇಂದ್ರ ಸರಕಾರದ ಸೇವೆಯಿಂದ ನಿವೃತ್ತಿ ಹೊಂದಿದ್ದ ಚೀಫ್ ಇಂಜಿನಿಯರ್ ಕೇರಳದ ಈ. ಶ್ರೀಧರನ್ ಅವರನ್ನು ಆ ಕಂಪೆನಿಯ ಮುಖ್ಯಸ್ಥರಾಗಿ ಆಗಮಿಸಲು ಜಾರ್ಜ್ ವಿನಂತಿ ಮಾಡಿದರು. ಶ್ರೀಧರನ್ ಒಪ್ಪಿದರು. ಅವರಿಗೆ ಜಾರ್ಜ್ ಹೇಳಿದ್ದು ಒಂದೇ ಮಾತು – ಸರ್, ನೀವು ಕೆಲಸ ಮಾಡ್ತಾ ಹೋಗಿ. ಕೆಲಸ ನಿಲ್ಲಬಾರದು. ದುಡ್ಡು ನಾನು ಹೊಂದಿಸುವೆ!

ನಾನು ರೈಲ್ವೆ ಮಂತ್ರಿ ಆಗಿರದಿದ್ದರೂ….!

ಮುಂದೆ ಶಿಲಾನ್ಯಾಸದ ಕಾರ್ಯಕ್ರಮ ನಡೆದಾಗ ರೈಲ್ವೆ ಮಂತ್ರಿ ಜಾರ್ಜ್ ಹೇಳಿದ್ದು – ಮುಂದೆ ನಾನು ರೈಲ್ವೆ ಮಂತ್ರಿ ಆಗಿರುತ್ತೇನೋ ಇಲ್ಲವೋ ಗೊತ್ತಿಲ್ಲ. ಎಂಟು ವರ್ಷಗಳ ಒಳಗೆ ಈ ಯೋಜನೆಯು ಖಂಡಿತವಾಗಿ ಪೂರ್ತಿ ಆಗುತ್ತದೆ. ಅದಕ್ಕೆ ಬೇಕಾದ ದುಡ್ಡು ನನ್ನ ಹೊಣೆ!

ಜಾರ್ಜ್ ಫರ್ನಾಂಡಿಸ್ ನುಡಿದ ಹಾಗೆ ನಡೆದರು. ಸರಕಾರದ ದುಡ್ಡು ಸಾಲದೆ ಹೋದಾಗ ಪಬ್ಲಿಕ್ ಇಶ್ಯುಸ್ ಮೂಲಕ ಫಂಡ್ಸ್ ಒಟ್ಟು ಮಾಡಿದರು. ಆ ಯೋಜನೆಯ ಫಲಾನುಭವಿಗಳ ಸಭೆ ಕರೆದು ಭಿಕ್ಷಾಪಾತ್ರೆ ಹಿಡಿದರು. ಜನರು ಹಿಂದೆ ಮುಂದೆ ನೋಡದೆ ಜಾರ್ಜ್ ಮೇಲೆ ಭರವಸೆ ಇಟ್ಟರು. ಜಾರ್ಜ್ ಅವರ ಕನ್ವಿನ್ಸಿಂಗ್ ಪವರ್ ತುಂಬಾ ಅದ್ಭುತ ಆಗಿತ್ತು. ಅವರ ಕೊಂಕಣಿ, ತುಳು, ಹಿಂದೀ, ಇಂಗ್ಲಿಷ್, ಮರಾಠಿ ಭಾಷೆಯ ಮಾತುಗಳು ಜನರಲ್ಲಿ ಭಾರೀ ಭರವಸೆ ಮೂಡಿಸಿದವು.

ಶ್ರೀಧರನ್ ಎಂಬ ಮಹಾನ್ ಕಾಯಕ ರಾಕ್ಷಸ

ಇನ್ನು ಈ ಶ್ರೀಧರನ್ ಸಾಮರ್ಥ್ಯದ ಬಗ್ಗೆ ಎಷ್ಟು ಬರೆದರೂ ಅದು ಕಡಿಮೆಯೇ! ಆತ ಮಹಾ ಕಾಯಕ ರಾಕ್ಷಸ! ತುಂಬಾ ಸ್ಟ್ರಾಂಗ್ ಆಗಿದ್ದ ಯುವ ಇಂಜಿನಿಯರಗಳ ತಂಡವನ್ನು ಕಟ್ಟಿಕೊಂಡ ಅವರು ಮುಂದಿನ ಎಂಟು ವರ್ಷಗಳ ಕಾಲ ಮಾಡಿದ್ದೆಲ್ಲವೂ ಅದ್ಭುತ! ಎಲ್ಲವೂ ಮಹೋನ್ನತ!

ಅತ್ಯಂತ ದುರ್ಗಮವಾದ ಪರ್ವತಗಳ ಶ್ರೇಣಿ! ಜಾರುವ ಬಂಡೆಗಳು! ಒಂದು ಮಳೆಗೆ ಜಾರಿ ಕುಸಿದು ಹೋಗುವ ಶೇಡಿ ಮಣ್ಣಿನ ನೆಲ! ಬೆಟ್ಟಗಳನ್ನು ಅಗೆದು ಮೈಲು ದೂರದ ಸುರಂಗಗಳನ್ನು ಕೊರೆಯುವ ಸವಾಲು! ಅದು ಇಡೀ ಭಾರತದ ರೈಲ್ವೆ ಇತಿಹಾಸದ ಅತ್ಯಂತ ಸಾಹಸದ ಮತ್ತು ಕಠಿಣ ಸವಾಲಿನ ಪ್ರಾಜೆಕ್ಟ್ ಆಗಿತ್ತು!

ಮೂರು ರಾಜ್ಯಗಳ ಹೃದಯದ ಮೂಲಕ ಹಾದು ಹೋಗುವ 760 ಕಿಲೋಮೀಟರ್ ರೈಲ್ವೆ ಹಳಿಗಳು! 2000 ಸಣ್ಣ ಸೇತುವೆಗಳು! 179 ದೊಡ್ಡ ಸೇತುವೆಗಳು! 92 ಭಾರೀ ಸುರಂಗಗಳು! ಅದರಲ್ಲಿ ಕೆಲವು ಮೈಲುಗಟ್ಟಲೆ ಉದ್ದ ಇವೆ! 59 ವೈಭವದ ನಿಲ್ದಾಣಗಳು! ಆಗಾಗ ಗುಡ್ಡದ ಕುಸಿತದ ಹಿನ್ನೆಲೆಯಲ್ಲಿ ಕೆಲಸವು ಕಷ್ಟ ಆಯ್ತು. ಆದರೆ ಈ. ಶ್ರೀಧರನ್ ಕೆಲಸವನ್ನು ನಿಲ್ಲಲು ಬಿಡಲಿಲ್ಲ! ಜಾರ್ಜ್ ಅವರನ್ನು ಬೆನ್ನು ಬಿಡಬೇಕಲ್ಲ!

ಜಾರ್ಜ್ ಫರ್ನಾಂಡಿಸ್ ನುಡಿದಂತೆ ನಡೆದರು

ಜಾರ್ಜ್ ಭರವಸೆ ಕೊಟ್ಟ ಹಾಗೆ ಎಂಟು ವರ್ಷಗಳ ಒಳಗೆ ಈ ಪ್ರಾಜೆಕ್ಟ್ ಪೂರ್ತಿ ಆಯಿತು. 1998 ಜನವರಿ 26ರಂದು ಅಂದಿನ ಪ್ರಧಾನಿ ವಾಜಪೇಯಿ ಅವರು ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಕೊಂಕಣ ರೈಲ್ವೆಯ ಹೊಸ ಮಾರ್ಗವನ್ನು ಉದ್ಘಾಟನೆ ಮಾಡಿದರು. ಆಗ ಕೇಂದ್ರದ ರಕ್ಷಣಾ ಮಂತ್ರಿ ಆಗಿದ್ದರು ಜಾರ್ಜ್ ಫರ್ನಾಂಡಿಸ್. ಅಂದು ವೇದಿಕೆಯಲ್ಲಿ ಇದ್ದು ಆನಂದ ಭಾಷ್ಪ ಸುರಿಸಿದರು! ತನ್ನ ತಂದೆ ಮರಣವನ್ನು ಹೊಂದಿದಾಗಲೂ ಕಣ್ಣೀರು ಹಾಕದೆ ಇದ್ದ ಉಕ್ಕಿನ ಮನುಷ್ಯ ಜಾರ್ಜ್ ಫರ್ನಾಂಡಿಸ್ ಅಂದು ಅಕ್ಷರಶಃ ಪುಟ್ಟ ಮಗುವಿನ ಹಾಗೆ ಕಣ್ಣೀರು ಹಾಕಿದ್ದರು! ಅಂದು ಮಂಗಳೂರು ಮುಂಬೈ ನಡುವೆ ಮೊದಲ ಟ್ರೈನ್ ಓಡಿತ್ತು!

ಕೊಂಕಣ ರೈಲು ಕ್ರಾಂತಿಯನ್ನೇ ಮಾಡಿತು!

ಅದುವರೆಗೆ ಮಂಗಳೂರು ಮುಂಬೈ ನಡುವಿನ ಪ್ರಯಾಣಕ್ಕೆ 48 ಗಂಟೆ ತೆಗೆದುಕೊಳ್ಳುತ್ತಿದ್ದ ಕರಾವಳಿಯ ಮಂದಿ ಅಂದು ಕೇವಲ 15 ಗಂಟೆಯಲ್ಲಿ ಮುಂಬೈ ತಲುಪಿದ್ದರು! ಈಗಇನ್ನೂ ಕಡಿಮೆಯ ಸಮಯವು ಸಾಕಾಗುತ್ತದೆ. ದೂರವು 1200 ಕಿಲೋಮೀಟರ್‌ನಿಂದ 760 ಕಿಲೋಮೀಟರ್‌ಗೆ ಇಳಿದಿದೆ. ಅತ್ಯಂತ ಆಕರ್ಷಕವಾದ 59 ಸ್ಟೇಶನ್‌ಗಳು ಕೂಡ ಮುಗಿದು ಬಿಟ್ಟಿದ್ದವು. ತುಳುವರ ಸಂತೋಷಕ್ಕೆ ಅಂದು ಪಾರವೇ ಇರಲಿಲ್ಲ. ಈ. ಶ್ರೀಧರನ್ ಈ ಪ್ರಾಜೆಕ್ಟನ್ನು ಪೂರ್ತಿ ಮಾಡಿ ಇನ್ನೊಂದು ಪ್ರಾಜೆಕ್ಟ್ ಹಿಂದೆ ಹೋದರು. ಅವರೆಲ್ಲಿ ವಿಶ್ರಾಂತಿ ಪಡೆಯುತ್ತಾರೆ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅಳಿಸಲಾಗದ ನೋವು ಬಿಟ್ಟು ಹೋದ ಮಂಗಳೂರು ವಿಮಾನ ದುರಂತ!

ಇಂದು ಅದೇ ಕೊಂಕಣ್ ರೈಲ್ವೆ ಹಳಿಗಳ ಮೂಲಕ ನೂರಾರು ಟ್ರೈನಗಳು ಓಡುತ್ತಿವೆ. ದಕ್ಷಿಣ ಭಾರತ ಮತ್ತು ಉತ್ತರ ಭಾರತವನ್ನು ಕನೆಕ್ಟ್ ಮಾಡುವ ಶ್ರೇಷ್ಟ ಸಾರಿಗೆ ವ್ಯವಸ್ಥೆ ಅದು. ಅದೇ ಹಳಿಗಳ ಮೇಲೆ ಈಗ ಭಾರತದ ಅತ್ಯಂತ ವೇಗವಾದ ರೈಲು ಕೂಡ ಓಡುತ್ತಿದೆ. ಖರ್ಚು ಕೂಡ ತುಂಬಾ ಕಡಿಮೆ.

ಜಾರ್ಜ್ ಫರ್ನಾಂಡಿಸ್ ಆದರು ಲೆಜೆಂಡ್

ಇಂದು( ಜೂನ್ 3) ಜಾರ್ಜ್ ಫರ್ನಾಂಡಿಸ್ ಅವರ ಹುಟ್ಟಿದ ಹಬ್ಬ. ಬದುಕಿದ್ದರೆ ಅವರಿಗೆ ಇಂದು 94ವರ್ಷ ಆಗಿರುತ್ತಿತ್ತು. ಅವರಿಂದು ಬದುಕಿಲ್ಲ. ಅವರು ಗತಿಸಿ ಐದು ವರ್ಷಗಳೇ ಆಗಿವೆ. ಆದರೆ ಪ್ರತೀ ದಿನವೂ ರೈಲಿನಲ್ಲಿ ಪ್ರಯಾಣ ಮಾಡುವ ಜನರ ಹೃದಯದಲ್ಲಿ ಅವರು ಸದಾ ಜೀವಂತ ಇರುತ್ತಾರೆ.

ಉಡುಪಿ ಇಂದ್ರಾಳಿ ಜಂಕ್ಷನನಿಂದ ರೈಲ್ವೆ ನಿಲ್ದಾಣದ ತನಕ ಹೋಗುವ ರಸ್ತೆಗೆ ಜಾರ್ಜ್ ಫರ್ನಾಂಡಿಸ್ ಅವರ ಹೆಸರು ಇಡಲಾಗಿದೆ. ಆದರೆ ಆ ನಾಮಫಲಕವು ಎಲ್ಲೋ ಮರೆಗೆ ಹೋಗಿದೆ. ಸರಕಾರಗಳು ಅವರನ್ನು ಮರೆತಿವೆ. ಅವರ ಬಗ್ಗೆ ನಿರ್ಲಕ್ಷ್ಯವು ಖಂಡಿತಾ ಸಲ್ಲದು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಸಾವನ್ನೇ ಆಹ್ವಾನಿಸಿದ ಸುಂದರಿ ಝೋರಯಾ ಟರ್ ಬ್ರೀಕ್

Continue Reading

ಪ್ರಮುಖ ಸುದ್ದಿ

T20 World Cup 2024 : ಒಮಾನ್ ವಿರುದ್ಧ ಹೊಸ ದಾಖಲೆ ಬರೆದ ನಮೀಬಿಯಾ ತಂಡದ ರುಬೆನ್ ಟ್ರಂಪೆಲ್ಮನ್

T20 World Cup 2024 : ಬಾರ್ಬಡೋಸ್​​ನ ಕೆನ್ಸಿಂಗ್ಟನ್ ಓವಲ್​​ನಲ್ಲಿ ನಡೆದ ಗ್ರೂಪ್ ಬಿ ಪಂದ್ಯದಲ್ಲಿ ಒಮಾನ್ ಬ್ಯಾಟಿಂಗ್ ಘಟಕವನ್ನು ಛಿದ್ರಗೊಳಿಸುವ ಮೂಲಕ 26 ವರ್ಷದ ಎಡಗೈ ವೇಗಿ ಟಿ 20 ಐ ಪಂದ್ಯದ ಮೊದಲ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

VISTARANEWS.COM


on

T20 World Cup 2024
Koo

ನ್ಯೂಯಾರ್ಕ್​: ಸೋಮವಾರ (ಜೂನ್ 3 ರಂದು) ನಡೆದ ಟಿ20 ವಿಶ್ವಕಪ್ 2024ರ ಮೊದಲ ಪಂದ್ಯದಲ್ಲಿ ಒಮಾನ್ ತಂಡದ ವಿರುದ್ಧ ನಮೀಬಿಯಾ ತಂಡದ ರೂಬೆನ್ ಟ್ರಂಪೆಲ್ಮನ್ ಹೊಸ ಟಿ20 ದಾಖಲೆ ಬರೆದಿದ್ದಾರೆ. ಬಾರ್ಬಡೋಸ್​​ನ ಕೆನ್ಸಿಂಗ್ಟನ್ ಓವಲ್​​ನಲ್ಲಿ ನಡೆದ ಗ್ರೂಪ್ ಬಿ ಪಂದ್ಯದಲ್ಲಿ ಒಮಾನ್ ಬ್ಯಾಟಿಂಗ್ ಘಟಕವನ್ನು ಛಿದ್ರಗೊಳಿಸುವ ಮೂಲಕ 26 ವರ್ಷದ ಎಡಗೈ ವೇಗಿ ಟಿ 20 ಐ ಪಂದ್ಯದ ಮೊದಲ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಾಯಕ ಗೆರ್ಹಾರ್ಡ್ ಎರಾಸ್ಮಸ್ ಟಾಸ್ ಗೆದ್ದ ನಂತರ ರೂಬೆನ್ ಟ್ರಂಪೆಲ್ಮನ್ ಮಾರಕ ಬೌಲಿಂಗ್ ದಾಳಿ ಮಾಡಿದರು. ಬೌಲರ್​ಗಳಿಗೆ ಸಾಕಷ್ಟು ಮಾಡುವ ಪಿಚ್​ನಲ್ಲಿ ಭರ್ಜರಿ ಬೌಲಿಂಗ್​ ಮಾಡಲು ಮುಂದಾದರು. ಪಂದ್ಯದ ಮೊದಲ ಎರಡು ಎಸೆತಗಳಲ್ಲಿ ಆರಂಭಿಕ ಆಟಗಾರ ಕಶ್ಯಪ್ ಪ್ರಜಾಪತಿ ಮತ್ತು ನಾಯಕ ಅಕಿಬ್ ಇಲ್ಯಾಸ್ ಅವರ ದೊಡ್ಡ ವಿಕೆಟ್​​ಗಳನ್ಉ ಉರುಳಿಸುದರ. ಹೀಗಾಗಿ ನಮೀಬಿಯಾ ಉತ್ತಮ ಆರಂಭ ಪಡೆಯಿತು. ಇದು ಟ್ರಂಪೆಲ್ಮನ್ ಅವರ ಎಡಗೈ ಸ್ವಿಂಗ್ ಬೌಲಿಂಗ್ ಮಾಸ್ಟರ್ ಕ್ಲಾಸ್ ಪ್ರದರ್ಶನವಾಗಿದೆ. ಪ್ರಜಾಪತಿಯನ್ನು ಲೆಂತ್ ಎಸೆತದ ಮೂಲಕ ಹಿಮ್ಮೆಟ್ಟಿಸಿದರೆ ಇಲ್ಯಾಸ್ ಗೆ ಆಡಲು ಸಾಧ್ಯವೇ ಇಲ್ಲದ ಸ್ವಿಂಗ್ ಯಾರ್ಕರ್ ಹಾಕಿದರು. ಆದಾಗ್ಯೂ, ಟ್ರಂಪೆಲ್ಮನ್ ಹ್ಯಾಟ್ರಿಕ್ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಅವರು ತಮ್ಮ ಎರಡನೇ ಓವರ್​ನಲ್ಲಿ ವಿಕೆಟ್ ಕೀಪರ್ ನಸೀಮ್ ಅವರನ್ನು 6 ರನ್​ಗಳಿಗೆ ಔಟ್ ಮಾಡಿದರು. ಪಂದ್ಯದ ಮೂರನೇ ಓವರ್​ನಲ್ಲಿ ನಮೀಬಿಯಾ 3 ವಿಕೆಟ್ ನಷ್ಟಕ್ಕೆ 10 ರನ್ ಗಳಿಸಿತ್ತು.

ಇನ್ನಿಂಗ್ಸ್ ನ 19 ನೇ ಓವರ್ ನಲ್ಲಿ ಟೇಲ್ ಎಂಡರ್ ಕಲೀಮುಲ್ಲಾ ಅವರನ್ನು ಔಟ್ ಮಾಡುವ ಮೂಲಕ ಟ್ರಂಪೆಲ್ಮನ್ ಸೋಮವಾರ ತಮ್ಮ ಖಾತೆಗೆ ಮತ್ತೊಂದು ವಿಕೆಟ್ ಸೇರಿಸಿದರು. ಟ್ರಂಪೆಲ್ಮನ್ 21 ರನ್ಗಳಿಗೆ 4 ವಿಕೆಟ್​​ ಪಡೆದರು. ಇದು ಟಿ 20 ಐ ಕ್ರಿಕೆಟ್​​ನಲ್ಲಿ ಅವರ ವೃತ್ತಿಜೀವನದ ಅತ್ಯುತ್ತಮ ಸಾಧನೆ.

ಇದನ್ನೂ ಓದಿ: T20 World Cup 2024 : ಉಗ್ರರ ಬೆದರಿಕೆ ನಡುವೆಯೂ ನ್ಯೂಯಾರ್ಕ್​ನಲ್ಲಿ ಭಾರತ ತಂಡದ ಆಟಗಾರರ ಬಿಂದಾಸ್​ ತಿರುಗಾಟ!

ಟಿ 20 ವಿಶ್ವಕಪ್ ಪಂದ್ಯದಲ್ಲಿ ಟ್ರಂಪೆಲ್ಮನ್ ಅವರ 21 ರನ್​ಗಳಿಗೆ 4 ವಿಕೆಟ್​ ಸಾಧನೆಯೊಂದಿಗೆ ನಮೀಬಿಯಾ ತಂಡವು ಒಮಾನ್ ತಂಡವನ್ನು 19.4 ಓವರ್​​ಗಳಲ್ಲಿ 109 ರನ್​ಗಳಿಗೆ ಆಲೌಟ್ ಮಾಡಿತು.

ಬಾರ್ಬಡೋಸ್ ನಲ್ಲಿ ಒಮಾನ್ ಹೋರಾಟ

ಒಮಾನ್ ತಂಡ ತನ್ನ ಇನಿಂಗ್ಸ್​ನಲ್ಲಿ ಉತ್ತಮವಾಗಿ ಆಡಲಿಲ್ಲ. ಅವರು ನಿಯಮಿತವಾಗಿ ವಿಕೆಟ್​ಗಳನ್ನು ಕಳೆದುಕೊಳ್ಳುತ್ತಲೇ ಸಾಗಿದರು. ಅನುಭವಿ ಆಲ್ರೌಂಡರ್ ಝೀಶಾನ್ ಮಕ್ಸೂದ್ ಮಾತ್ರ ಅಗ್ರ ಕ್ರಮಾಂಕದಲ್ಲಿ 100 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್​​ನಲ್ಲಿ ಸ್ಕೋರ್ ಮಾಡಿದ್ದಾರೆ. ಮಕ್ಸೂದ್ 20 ಎಸೆತಗಳಲ್ಲಿ 22 ರನ್ ಗಳಿಸಿ ಔಟಾದರು,. ಪವರ್ ಪ್ಲೇ ನಂತರ ಒಮಾನ್ 4 ವಿಕೆಟ್ ನಷ್ಟಕ್ಕೆ 37 ರನ್ ಗಳಿಗೆ ಕುಸಿಯಿತು.

ಖಾಲಿದ್ ಕೈಲ್ ಮತ್ತು ಅಯಾನ್ ಖಾನ್ 31 ರನ್​ಗಳ ಜೊತೆಯಾಟ ನೀಡಿದರು. ಆದರೆ ಒಮಾನ್ ನಮೀಬಿಯಾದ ಬೌಲಿಂಗ್ ದಾಳಿಯ ವೈವಿಧ್ಯತೆ ಮತ್ತು ಗುಣಮಟ್ಟವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಅನುಭವಿ ಡೇವಿಡ್ ವೈಸ್ ಮೂರು ವಿಕೆಟ್ ಪಡೆದರೆ, ನಾಯಕ ಗೆರ್ಹಾರ್ಡ್ ಎರಾಸ್ಮಸ್​ ನಾಲ್ಕು ಓವರ್​ಗಳಲ್ಲಿ ಕೇವಲ 20 ರನ್ ನೀಡಿ ಎರಡು ವಿಕೆಟ್ ಪಡೆದರು. ಬಳಿಕ ಬ್ಯಾಟ್ ಮಾಡಿದ ನಮೀಬಿಯಾ ತಂಡವೂ 106 ರನ್​ ಗಳಿಸಿತು. ಪಂದ್ಯ ಟೈ ಆದ ಕಾರಣ ಸೂಪರ್ ಓವರ್​ ನಡೆಸಲಾಯಿತು. ಅಲ್ಲಿ ನಮೀಬಿಯಾ ಗೆಲುವು ಸಾಧಿಸಿತು.

Continue Reading

ಕರ್ನಾಟಕ

MLC Election: “ಬುರ್ಖಾ ಸ್ಟೂಡೆಂಟ್‌ ಗೇಲಿ…” ರೊಚ್ಚಿಗೆದ್ದ ಪ್ರತಾಪ್‌ ಸಿಂಹರಿಂದ ರಘುಪತಿ ಭಟ್‌ ಪರ ಪೋಸ್ಟ್‌, ಡಿಲೀಟ್!

MLC Election: ರಘುಪತಿ ಭಟ್ ಪರವಾಗಿ ಪೋಸ್ಟ್ ಮಾಡುವ ಮೂಲಕ ಪಕ್ಷದ ವಿರುದ್ಧ ಪರೋಕ್ಷ ಅಸಮಾಧಾನವನ್ನು ಪ್ರತಾಪ್‌ ಹೊರಹಾಕಿದರೇ ಎಂದು ಚರ್ಚೆಯಾಗುತ್ತಿದೆ. ಪ್ರತಾಪ್‌ಗೂ ಈ ಬಾರಿ ಮೈಸೂರಿನಿಂದ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್‌ ದೊರೆತಿಲ್ಲ.

VISTARANEWS.COM


on

pratap simha mlc election
Koo

ಮೈಸೂರು: ನೈರುತ್ಯ ಪದವೀಧರ (Graduate constituency) ವಿದಾನ ಪರಿಷತ್‌ (MLC Election) ಕ್ಷೇತ್ರದಲ್ಲಿ ಬಿಜೆಪಿಯಿಂದ (BJP) ಟಿಕೆಟ್‌ ಸಿಗದೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಘುಪತಿ ಭಟ್‌ (Raghupathi Bhat) ಅವರ ಪರ ಮೈಸೂರು ಸಂಸದ‌, ಬಿಜೆಪಿ ಮುಖಂಡ ಪ್ರತಾಪ್‌ ಸಿಂಹ (Mysore MP Pratap Simha) ಪೋಸ್ಟ್‌ ಮಾಡಿ ಅಚ್ಚರಿ ಮೂಡಿಸಿದ್ದಾರೆ. ನಂತರ ಅದನ್ನು ಡಿಲೀಟ್‌ ಮಾಡಿದ್ದಾರೆ.

“ಉಡುಪಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಮವಸ್ತ್ರ ಸಂಹಿತೆಯನ್ನು ಮುರಿದು ಬುರ್ಖಾ ಧರಿಸಿ ಕ್ಲಾಸಿಗೆ ಬಂದ ಜಿಹಾದಿ ಮನಸ್ಥಿತಿಯ ವಿರುದ್ಧ ಹೋರಾಡಿದ ರಘುಪತಿ ಭಟ್ಟರಿಗೆ MLA ಟಿಕೆಟ್ಟೂ ಸಿಗಲಿಲ್ಲ, MLC ಟಿಕೆಟ್ಟನ್ನೂ ಕೊಡಲಿಲ್ಲ. ಸಾಲದೆಂಬಂತೆ ಪಕ್ಷದಿಂದಲೂ ಉಚ್ಛಾಟನೆಗೆ ಒಳಗಾಗಿ ಬುರ್ಖಾ ಸ್ಟೂಡೆಂಟ್ ಆಲಿಯಾ ಅಸ್ಸಾದಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ” ಎಂದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರತಾಪ್ ಸಿಂಹ ಪೋಸ್ಟ್ ಮಾಡಿದ್ದಾರೆ.‌

ಸ್ವಲ್ಪ ಹೊತ್ತಿನ ಬಳಿಕ ಅದನ್ನು ಡಿಲೀಟ್‌ ಮಾಡಿದ ಪ್ರತಾಪ್‌, ವಿಧಾನ ಪರಿಷತ್ತಿಗೆ ಸ್ಪರ್ಧಿಸಿರುವ ಆರು ಬಿಜೆಪಿ ಅಭ್ಯರ್ಥಿಗಳ ಫೋಟೋಗಳನ್ನು ಪೋಸ್ಟ್‌ ಮಾಡಿ, ಇವರಿಗೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅದರಲ್ಲಿ ರಘುಪತಿ ಭಟ್‌ ಎದುರು ನಿಂತಿರುವ ಧನಂಜಯ ಸರ್ಜಿ ಅವರೂ ಇದ್ದಾರೆ. ನಂತರ ಅದನ್ನೂ ಡಿಲೀಟ್‌ ಮಾಡಿದ್ದಾರೆ!

ರಘುಪತಿ ಭಟ್ ಪರವಾಗಿ ಪೋಸ್ಟ್ ಮಾಡುವ ಮೂಲಕ ಪಕ್ಷದ ವಿರುದ್ಧ ಪರೋಕ್ಷ ಅಸಮಾಧಾನವನ್ನು ಪ್ರತಾಪ್‌ ಹೊರಹಾಕಿದರೇ ಎಂದು ಚರ್ಚೆಯಾಗುತ್ತಿದೆ. ಪ್ರತಾಪ್‌ಗೂ ಈ ಬಾರಿ ಮೈಸೂರಿನಿಂದ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್‌ ದೊರೆತಿಲ್ಲ. ಪ್ರತಾಪ್‌ ಬದಲು ಬಿಜೆಪಿ ಟಿಕೆಟ್‌ ಮೈಸೂರಿನ ರಾಜವಂಶಸ್ಥ ಯದುವೀರ್‌ ಪಾಲಾಗಿತ್ತು. ಟಿಕೆಟ್‌ ಪ್ರಕಟವಾಗುವ ಮುನ್ನ ತುಸು ಅಸಮಾಧಾನವನ್ನು ಪ್ರಕಟಿಸಿದ್ದ ಪ್ರತಾಪ್‌, ನಂತರ ಯದುವೀರ್‌ ಜೊತೆಗೆ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. “ಮೋದಿಯವರನ್ನು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮೆಲ್ಲರ ಗುರಿ” ಎಂದು ಘೋಷಿಸಿಕೊಂಡಿದ್ದರು.

ಉಡುಪಿಯಲ್ಲಿ ನಡೆದ ಹಿಜಾಬ್‌ ಪ್ರಕರಣದಲ್ಲಿ ರಘುಪತಿ ಭಟ್‌ ಪ್ರಧಾನ ಪಾತ್ರ ವಹಿಸಿದ್ದರು. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ಬರುವುದನ್ನು ಆಕ್ಷೇಪಿಸಿ ದೊಡ್ಡ ಪ್ರತಿಭಟನೆಯನ್ನೇ ಸಂಘಟಿಸಿದ್ದರು. ಇದು ತಿಂಗಳುಗಳ ಕಾಲ ರಾಜ್ಯ, ರಾಷ್ಟ್ರೀಯ ಸುದ್ದಿಯಾಗಿತ್ತು. ಆದರೆ ರಘುಪತಿ ಭಟ್‌ ಅವರಿಗೆ ಬಿಜೆಪಿಯಿಂದ ವಿಧಾನಸಭೆ ಟಿಕೆಟ್‌ ದೊರೆತಿರಲಿಲ್ಲ. ವಿಧಾನ ಪರಿಷತ್‌ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಅವರಿಗೆ ಅದೂ ದೊರೆತಿರಲಿಲ್ಲ.

ಇದನ್ನೂ ಓದಿ: MLC Election: ಮೇಲ್ಮನೆ ಚುನಾವಣೆ ಮತದಾನ ಆರಂಭ, 6 ಕ್ಷೇತ್ರಗಳಲ್ಲಿ 78 ಸ್ಪರ್ಧಿಗಳ ಹಣಾಹಣಿ

Continue Reading
Advertisement
Udupi-Chikmagalur Lok Sabha constituency
ದೇಶ9 mins ago

Udupi-Chikmagalur Lok Sabha constituency: ಬದಲಾವಣೆ ನಡುವೆ ಯಾರಿಗೆ ಮಣೆ ಹಾಕಲಿದ್ದಾರೆ ಉಡುಪಿ ಕ್ಷೇತ್ರದ ಮತದಾರರು?

Vasishta Simha Lovely Kannada Film Trailer Event
ಸ್ಯಾಂಡಲ್ ವುಡ್15 mins ago

Vasishta Simha: ಟ್ರೈಲರ್‌ ಲಾಂಚ್ ವೇಳೆ ರಿಷಬ್ ಶೆಟ್ಟಿ ಕಾಲಿಗೆ ಬಿದ್ದ ವಸಿಷ್ಠ ಸಿಂಹ!

Heat wave
ದೇಶ15 mins ago

Heat Wave: ಒಡಿಶಾದಲ್ಲಿ ಬಿಸಿಗಾಳಿ ಶಾಖಕ್ಕೆ ಒಂದೇ ದಿನ 45 ಜನ ಬಲಿ

Food Poisoning
ಮೈಸೂರು16 mins ago

Food Poisoning : ಮೈಸೂರಲ್ಲಿ ಗೃಹ ಪ್ರವೇಶದ ಊಟ ತಿಂದ ವೃದ್ಧೆ ಸಾವು; 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Gold Rate Today
ಚಿನ್ನದ ದರ26 mins ago

Gold Rate Today: ಚಿನ್ನದ ಬೆಲೆ ಮತ್ತೂ ಇಳಿಕೆ; ಇಂದಿನ ಧಾರಣೆಯನ್ನು ಇಲ್ಲಿ ಗಮನಿಸಿ

karnataka Rain
ಮಳೆ36 mins ago

Karnataka Rain : ಸಿಡಿಲಿಗೆ ಆಕಳು ಬಲಿ; ಹಲವೆಡೆ ಮಳೆ ಅವಾಂತರಕ್ಕೆ ಜನರು ತತ್ತರ

Team India
ಪ್ರಮುಖ ಸುದ್ದಿ45 mins ago

Team India : ಈ ಕೆಲಸ ಇಷ್ಟವಿದೆ; ಟೀಮ್ ಇಂಡಿಯಾ ಕೋಚ್​ ಹುದ್ದೆಯ ಬಗ್ಗೆ ಮೊದಲ ಹೇಳಿಕೆ ನೀಡಿದ ಗೌತಮ್ ಗಂಭೀರ್​

Priyanka Chopra The Bluff team Malti enjoys
ಬಾಲಿವುಡ್53 mins ago

Priyanka Chopra: ಆಸ್ಟ್ರೇಲಿಯಾದ ಬೀಚ್‌ನಲ್ಲಿ ಅಮ್ಮನ ಸಿನಿ ತಂಡದ ಜತೆ ಎಂಜಾಯ್ ಮಾಡಿದ ಮಾಲತಿ ಮೇರಿ ಚೋಪ್ರಾ!

George Fernandes ರಾಜಮಾರ್ಗ ಅಂಕಣ
ಅಂಕಣ54 mins ago

ರಾಜಮಾರ್ಗ ಅಂಕಣ: ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೆ ಎಂಬ ಮಹಾ ಕನಸು!

gold rate today
ಕರ್ನಾಟಕ1 hour ago

Gold Rate Today: ಚಿನ್ನ ಕೊಳ್ಳಲು ಇದೇ ಸೂಕ್ತ ಸಮಯ; ಮತ್ತೆ ಬಂಗಾರದ ದರ ಇಳಿಕೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ7 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌