Amla Benefits: ನೆಲ್ಲಿಕಾಯಿಯನ್ನು ಮರೆತರೆ ನಿಮ್ಮ ಆರೋಗ್ಯದ ಕಾಳಜಿಯನ್ನೇ ಮರೆತಂತೆ! - Vistara News

ಆರೋಗ್ಯ

Amla Benefits: ನೆಲ್ಲಿಕಾಯಿಯನ್ನು ಮರೆತರೆ ನಿಮ್ಮ ಆರೋಗ್ಯದ ಕಾಳಜಿಯನ್ನೇ ಮರೆತಂತೆ!

ನೆಲ್ಲಿಕಾಯಿಯ ಸೇವನೆಯಿಂದ ವಿಟಮಿನ್‌ ಸಿ ಲಾಭಗಳನ್ನು (Amla Benefits) ಪಡೆಯಬಹುದು. ಇದರಿಂದ ರೋಗ ನಿರೋಧಕತೆ ಹೆಚ್ಚುವುದಷ್ಟೇ ಅಲ್ಲ, ಕೂದಲು ಹಾಗೂ ಚರ್ಮದ ಆರೋಗ್ಯವೂ ಸಾಕಷ್ಟು ವೃದ್ಧಿಸುತ್ತದೆ.

VISTARANEWS.COM


on

indian gooseberry
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಟ್ಟದ ನೆಲ್ಲಿಕಾಯಿ (Amla, Indian Gooseberry) ಎಂಬುದು ನಮ್ಮ ಪೂರ್ವಜರ ಕಾಲದಿಂದಲೂ ನಾವು ಬಳಸಿಕೊಂಡು ಬಂದ ಆಹಾರ. ಇದರ ಪ್ರಯೋಜನಗಳು (Amla Benefits) ಅನೇಕ. ಆಹಾರವಾಗಿಯೂ ನಾವು ಮೊದಲಿನಿಂದ ಬಳಕೆ ಮಾಡುತ್ತಲೇ ಬಂದರೂ, ಇದರ ಬಳಕೆ ನಿತ್ಯಜೀವನದಲ್ಲಿ ಮಾಡುವವರು ಕಡಿಮೆ. ಆಯುರ್ವೇದದಲ್ಲೂ ನೆಲ್ಲಿಕಾಯಿಗೆ ಮಹತ್ವದ ಸ್ಥಾನವಿದೆ. ಅದು, ನೆಲ್ಲಿಕಾಯಿಯನ್ನು ನಿತ್ಯವೂ ತಿನ್ನುವುದರಿಂದ ಆರೋಗ್ಯವೃದ್ಧಿಯಾಗುತ್ತದೆ ಎನ್ನುತ್ತದೆ. ನೆಲ್ಲಿಕಾಯಿಯಿಂದ ರೋಗನಿರೋಧಕ ಶಕ್ತಿ (Immunity) ಹೆಚ್ಚುವುದಲ್ಲದೆ, ಪಚನಕ್ರಿಯೆಯೂ ಚುರುಕಾಗುತ್ತದೆ. ಮಲಬದ್ಧತೆ ದೂರವಾಗಿ ಚರ್ಮ, ಕೂದಲ ಆರೋಗ್ಯ ವೃದ್ಧಿಯಾಗುತ್ತದೆ. ಇದರಿಂದ ಆಯುಸ್ಸೂ ವೃದ್ಧಿಯಾಗುತ್ತದೆ. ಈ ನೆಲ್ಲಿಕಾಯಿಯ ಉಪಯೋಗಗಳನ್ನು ತಿಳಿಯದವರಿಲ್ಲ. ಆದರೆ, ತಿನ್ನಲು ಮಾತ್ರ ಮನಸ್ಸು ಮಾಡುವುದೂ ಇಲ್ಲ. ಹಾಗಾದರೆ ಬನ್ನಿ, ನೆಲ್ಲಿಕಾಯಿಯನ್ನು ತಿನ್ನುವುದರಿಂದ ಏನೆಲ್ಲ ಉಪಯೋಗಗಳನ್ನು ನಾವು ಪಡೆಯಬಹುದು (Amla health benefits) ಎಂಬುದನ್ನು ನೋಡೋಣ.

1. ನೆಲ್ಲಿಕಾಯಿಯಲ್ಲಿರುವಷ್ಟು ವಿಟಮಿನ್‌ ಸಿ (Vitamin C) ಕಿತ್ತಳೆಯಲ್ಲೂ ಇಲ್ಲ. ಹಾಗಾಗಿ ನೆಲ್ಲಿಕಾಯಿ ನೈಸರ್ಗಿಕವಾಗಿ ಲಭ್ಯವಿರುವ ವಿಟಮಿನ್‌ ಸಿ ಪೋಷಕಾಂಶಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ್ದು. ಹೀಗಾಗಿ ನೆಲ್ಲಿಕಾಯಿಯ ಸೇವನೆಯಿಂದ ವಿಟಮಿನ್‌ ಸಿ ಲಾಭಗಳನ್ನು ಪಡೆಯಬಹುದು. ಇದರಿಂದ ರೋಗ ನಿರೋಧಕತೆ ಹೆಚ್ಚುವುದಷ್ಟೇ ಅಲ್ಲ, ಕೂದಲು ಹಾಗೂ ಚರ್ಮದ ಆರೋಗ್ಯವೂ ಸಾಕಷ್ಟು ವೃದ್ಧಿಸುತ್ತದೆ.

2. ನೆಲ್ಲಿಕಾಯಿಯಲ್ಲಿ ಆಂಟಿ ಆಕ್ಸಿಡೆಂಟ್‌ಗಳಾದ ಟ್ಯಾನಿನ್‌, ಪಾಲಿಫೀನಾಲ್‌ ಹಾಗೂ ಫ್ಲೇವನಾಯ್ಡ್‌ಗಳು ಇವೆ. ಇವು ದೇಹವು ಫ್ರೀ ರ್ಯಾಡಿಕಲ್‌ಗಳ ಉತ್ಪಾದೆಯನ್ನು ತಡೆಯಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಪರಿಸರದ ಕಲುಷಿತ ವಾತಾವರಣದಿಂದ ದೇಹದ ಮೇಲಾಗುವ ಪರಿಣಾಮಗಳು ಹಾಗೂ ಒತ್ತಡ ಹೆಚ್ಚುವುದನ್ನು ಇವು ತಡೆಯುತ್ತವೆ.

3. ನೆಲ್ಲಿಕಾಯಿಯಲ್ಲಿರುವ ವಿಟಮಿನ್‌ ಸಿ ದೇಹಕ್ಕೆ ರೋಗ ನಿರೋಧಕ ಶಕ್ತಿಯ ರಕ್ಷಣಾತ್ಮಕ ಕವಚವನ್ನೇ ನೀಡುತ್ತದೆ. ನೆಲ್ಲಿಕಾಯಿಯನ್ನು ನಿತ್ಯವೂ ಸೇವಿಸುವುದರಿಂದ ದೇಹಕ್ಕೆ ನೆಗಡಿ, ಶೀತ, ಜ್ವರ, ಕೆಮ್ಮು ಇತ್ಯಾದಿ ಸಮಸ್ಯೆಗಳು ಆಗಾಗ ಬರುವುದು ಕಡಿಮೆಯಾಗುತ್ತದೆ. ಮುಖ್ಯವಾಗಿ ಇವುಗಳಿಂದ ಮುಕ್ತಿ ದೊರೆತು ಆರೋಗ್ಯಯುತ ಜೀವನ ನಿಮ್ಮದಾಗುತ್ತದೆ.

4. ನೆಲ್ಲಿಕಾಯಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ನೆಲ್ಲಿಕಾಯಿಯಲ್ಲಿ ನಾರಿನಂಶ ಇರುವ ಜೊತೆಗೆ ಲ್ಯಾಕ್ಸೇಟಿವ್‌ ಗುಣಗಳೂ ಇರುವುದರಿಂದ ಮಲಬದ್ಧತೆಯಂಥ ಸಮಸ್ಯೆ ಇರುವ ಮಂದಿಗೂ ನೆಲ್ಲಿಕಾಯಿ ಉತ್ತಮ ಪರಿಹಾರ ನೀಡುತ್ತದೆ.

gooseberry

5. ನೆಲ್ಲಿಕಾಯಿ ಕೂದಲುದುರುವಿಕೆಯನ್ನು ತಡೆಗಟ್ಟಿ, ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಕೂದಲು ಅಕಾಲದಲ್ಲಿ ಬೆಳ್ಳಗಾಗದಂತೆ ಕಾಪಾಡುವ ಜೊತೆಗೆ, ತಲೆಕೂದಲ ಬುಡದ ಆರೋಗ್ಯ ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಚರ್ಮದ ಆರೋಗ್ಯವನ್ನೂ ಇವು ಹೆಚ್ಚಿಸುತ್ತವೆ. ಚರ್ಮದ ಕಾಂತಿಯನ್ನು ಹೆಚ್ಚಿಸಿ, ವಯಸ್ಸಾಗುವಿಕೆಯ ಲಕ್ಷಣಗಳನ್ನು ಮುಂದೂಡುತ್ತದೆ.

6. ನೆಲ್ಲಿಕಾಯಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ ಹಾಗೂ ಆಂಟಿ ಇನ್‌ಫ್ಲಮೇಟರಿ ಗುಣಗಳಿಂದಾಗಿ ಇವು ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತವೆ. ಹೀಗಾಗಿ ಮಧುಮೇಹಿಗಳಿಗೆ ನೆಲ್ಲಿಕಾಯಿ ಒಳ್ಲೆಯದು. ಇನ್ಸುಲಿನ್‌ ಉತ್ಪಾದನೆಯನ್ನೂ ಪ್ರಚೋದಿಸುತ್ತದೆ.

7. ನೆಲ್ಲಿಕಾಯಿ ಕೊಲೆಸ್ಟೆರಾಲ್‌ ಅನ್ನೂ ಕೂಡಾ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದರಿಂದ ಸಹಜವಾಗಿಯೇ, ಹೃದಯದ ಆರೋಗ್ಯ ಹೆಚ್ಚಿಸುವಲ್ಲಿ ನೆಲ್ಲಿಕಾಯಿ ನೆರವಾಗುತ್ತದೆ.

ಇದನ್ನೂ ಓದಿ: Vitamin C Foods: ವಿಟಮಿನ್‌ ಸಿ ಪಡೆಯಲು ಕಿತ್ತಳೆ, ನಿಂಬೆ, ನೆಲ್ಲಿಕಾಯಿಯೇ ಆಗಬೇಕಿಲ್ಲ, ಇವುಗಳಲ್ಲೂ ಇದೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಳಗಾವಿ

Contaminated Water : ಬೆಳಗಾವಿ, ಕೋಲಾರದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವು

Polluted Water: ಕನಸಗೇರಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡಿದ್ದವರಲ್ಲಿ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇತ್ತ ಕೋಲಾರದಲ್ಲಿ ಕಲುಷಿತ ನೀರು ಕುಡಿದ ವೃದ್ಧರೊಬ್ಬರು (Contaminated Water) ಅಸುನೀಗಿದ್ದಾರೆ.

VISTARANEWS.COM


on

By

contaminated water
Koo

ಬೆಳಗಾವಿ: ಕಲುಷಿತ ನೀರು ಸೇವಿಸಿ ಮಹಿಳೆಯೊಬ್ಬರು (Contaminated Water) ಮೃತಪಟ್ಟಿದ್ದಾರೆ. ಹೊಳೆವ್ವಾ ಬಾಳಪ್ಪ ಧನದವರ (38) ಮೃತ ದುರ್ದೈವಿ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕನಸಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ.

ಕನಸಗೇರಿ ಗ್ರಾಮದಲ್ಲಿ ಬಾವಿಯ ನೀರು ಸೇವಿಸಿ ಸುಮಾರು ಹತ್ತು ಮಂದಿ ಅಸ್ವಸ್ಥಗೊಂಡಿದ್ದರು. ನಿನ್ನೆ ಸಂಜೆ ಭಾನುವಾರ ಹೊಳೆವ್ವಾ ಬಾಳಪ್ಪ ಅವರಿಗೆ ವಾಂತಿಭೇದಿ ಕಾಣಿಸಿಕೊಂಡು ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದರು.

ಸ್ಥಳಕ್ಕೆ ಡಿಎಚ್ಒ ಮಹೇಶ್ ಕೋಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬಸ್ಥರಿಂದ ಮಾಹಿತಿ ಪಡೆದು ಸಾಂತ್ವನ ಹೇಳಿದರು. ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಪರಿಶೀಲನೆ ನಡೆಸಿ, ಇದೇ ವೇಳೆ ಅಸ್ವಸ್ಥಗೊಂಡವರ ಆರೋಗ್ಯವನ್ನು ವಿಚಾರಿಸಿದರು.

ಇದನ್ನೂ ಓದಿ: Road Accident : ಚಲಿಸುತ್ತಿದ್ದಾಗಲೇ ಆಂಬ್ಯುಲೆನ್ಸ್‌ ಟಯರ್‌ ಬ್ಲಾಸ್ಟ್‌; ಬೈಕ್‌ನಿಂದ ಸ್ಕಿಡ್ ಆಗಿ ಬಿದ್ದು ವ್ಯಕ್ತಿ ಸಾವು

ಕೋಲಾರದಲ್ಲಿ ವೃದ್ಧ ಸಾವು

ವೃದ್ಧರೊಬ್ಬರು ಮನೆಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ವೆಂಕಟರಮಣಪ್ಪ (60) ಮೃತದುರ್ದೈವಿ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಿಣಜೇನಹಳ್ಳಿಯಲ್ಲಿ ಘಟನೆ ನಡೆದಿದೆ. ಕಲುಷಿತ ನೀರು ಸೇವಿಸಿದ್ದರಿಂದಲೇ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಗ್ರಾಮದಲ್ಲಿ 5 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಪಂಚಾಯಿತಿಯಿಂದಲೇ ಮನೆ ಮನೆಗೂ ನೀರು ಬಿಡುಗಡೆ ಆಗಿದ್ದು, ಆ ನೀರು ಸೇವಿಸಿಯೇ ವೃದ್ಧ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಊರುಕುಂಟೆ ಮಿಟ್ಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Dengue Fever : ಬಿಬಿಎಂಪಿ ಆಯುಕ್ತರಿಗೂ ಡೆಂಗ್ಯೂ; ಬೆಂಗಳೂರಲ್ಲಿ 1,230 ಮಂದಿಗೆ ಫೀವರ್‌!

Dengue Fever : ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಾಗುತ್ತಿದ್ದು, ಜನರು ಮುನ್ನೆಚ್ಚರಿಕೆಯನ್ನು ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಬೆಂಗಳೂರಲ್ಲಿ ಬಿಬಿಎಂಪಿ ಆಯುಕ್ತರು ಸೇರಿ ಸಾವಿರಕ್ಕೂ ಹೆಚ್ಚು ಮಂದಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ.

VISTARANEWS.COM


on

By

Dengue fever rises across the state including Bengaluru BBMP Commissioner also get fever
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಮಳೆ ಶುರುವಾದರೆ ಸಾಕು ಇದರ ಜತೆಗೆ ಸೊಳ್ಳೆಗಳ ಕಾಟವೂ ಹೆಚ್ಚಲಿದೆ. ಇದೇ ಋತುವಿನಲ್ಲಿ ಡೆಂಗ್ಯೂ ಜ್ವರ (Dengue Fever) ಹೆಚ್ಚಳ ಆಗುವುದರಿಂದ ಎಚ್ಚರ ವಹಿಸುವುದು ಅತಿ ಅವಶ್ಯಕ. ಸದ್ಯ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಡೆಂಗ್ಯೂ ಭೀತಿ ಹೆಚ್ಚಾಗಿದೆ. ಬೆಂಗಳೂರಿನ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೂ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ನಾಲ್ಕು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡು, ಡೆಂಗ್ಯೂ ಧೃಡಪಟ್ಟಿದೆ.

ಹವಾಮಾನ ವೈಪರೀತ್ಯ ಮತ್ತು ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. 2022ರಲ್ಲಿ ರಾಜ್ಯದಲ್ಲಿ 7,317 ಡೆಂಗ್ಯೂ ಜ್ವರ (Dengue fever) ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ನಾಲ್ವರು ಮೃತಪಟ್ಟಿದ್ದರು. 2023ರಲ್ಲಿ 2003 ಪ್ರಕರಣಗಳು ವರದಿಯಾಗಿದ್ದವು. 2024ರಲ್ಲಿ ಈ ವರೆಗೆ (ಜೂನ್‌) 85,365 ಶಂಕಿತವಾಗಿದ್ದು, ಇದರಲ್ಲಿ 37,144 ಮಂದಿಯ ರಕ್ತ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಆ ಪ್ರಕಾರ 3,957 ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ. ಬೆಂಗಳೂರಲ್ಲಿ 1230 ಮಂದಿಗೆ ಡೆಂಗ್ಯೂ ಜ್ವರ ಕಂಡು ಬಂದಿದೆ. ಈವರೆಗೆ ಡೆಂಗ್ಯೂನಿಂದ ಮೃತಪಟ್ಟ ವರದಿ ಆಗಿಲ್ಲ.

ಇದನ್ನೂ ಓದಿ: Empty Stomach Foods: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ!

Dengue fever rises across the state including Bengaluru BBMP Commissioner also get fever

ಡೆಂಗ್ಯೂ ಹೇಗೆ ಹರಡುತ್ತದೆ?

ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್‌ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಉತ್ತಮವಾಗಿದೆ.

ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆಹಾರ/ಅಡುಗೆ

Empty Stomach Foods: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ!

Empty Stomach Foods: ಬೆಳಗ್ಗೆ ಒಳ್ಳೆಯ ಆಹಾರ ತಿಂದರೆ, ಸಹಜವಾಗಿಯೇ ಇಡೀ ದಿನ ನಿಮ್ಮ ದೇಹ ಉಲ್ಲಸಿತವಾಗಿರುತ್ತದೆ. ಇಲ್ಲವಾದರೆ, ಉತ್ಸಾಹ ಕಡಿಮೆಯಾಗುತ್ತದೆ. ದೇಹ ಬಳಸುತ್ತದೆ. ಉದಾಸೀನತೆ, ಮೈಗಳ್ಳತನ ಕಾಡುತ್ತದೆ. ನಿದ್ದೆ, ಸೋಮಾರಿತನ ಎಳೆಯುತ್ತದೆ. ದೇಹ ಚುರುಕಾಗಿರಬೇಕಾದರೆ, ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಏನು ತಿನ್ನಬೇಕು ಎಂಬುದು ನಮಗೆ ಗೊತ್ತಿರಬೇಕು. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Empty Stomach Foods
Koo

ಬೆಳಗ್ಗೆ ಎದ್ದ ಕೂಡಲೇ ಏನು ತಿನ್ನುತ್ತೇವೆ (Empty Stomach Foods) ಎಂಬುದರ ಮೇಲೆ ಇಡೀ ದಿನ ನಮ್ಮ ದೇಹ ಹೇಗಿರುತ್ತದೆ ಎಂಬುದು ಅವಲಂಬಿತವಾಗುತ್ತದೆ ಎಂಬುದು ತಿಳಿದವರ ಮಾತು. ಆರೋಗ್ಯದ ವಿಚಾರಕ್ಕೆ ಬಂದರೆ ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ಯಾಕೆಂದರೆ, ಬೆಳಗ್ಗೆ ಒಳ್ಳೆಯ ಆಹಾರ ತಿಂದರೆ, ಸಹಜವಾಗಿಯೇ ಇಡೀ ದಿನ ನಿಮ್ಮ ದೇಹ ಉಲ್ಲಸಿತವಾಗಿರುತ್ತದೆ. ಇಲ್ಲವಾದರೆ, ಉತ್ಸಾಹ ಕಡಿಮೆಯಾಗುತ್ತದೆ. ದೇಹ ಬಳಸುತ್ತದೆ. ಉದಾಸೀನತೆ, ಮೈಗಳ್ಳತನ ಕಾಡುತ್ತದೆ. ನಿದ್ದೆ, ಸೋಮಾರಿತನ ಎಳೆಯುತ್ತದೆ. ದೇಹ ಚುರುಕಾಗಿರಬೇಕಾದರೆ, ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಏನು ತಿನ್ನಬೇಕು ಎಂಬುದು ನಮಗೆ ಗೊತ್ತಿರಬೇಕು. ಬಹಳಷ್ಟು ಮಂದಿ ಬೆಳಗ್ಗೆದ್ದ ಕೂಡಲೇ ಚಹಾದ ಮೊರೆ ಹೋಗುವುದು ಸಾಮಾನ್ಯವೇ ಆದರೂ, ಅದನ್ನು ಬಿಟ್ಟು ಒಳ್ಳೆಯ ಆಹಾರದತ್ತ ಗಮನ ಹರಿಸುವುದಿದ್ದರೆ, ನೀವು ಖಾಲಿ ಹೊಟ್ಟೆಯಲ್ಲಿ ಏನೇನೆಲ್ಲ ತಿಂದರೆ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಎಂದು ನೋಡೋಣ ಬನ್ನಿ.

Egg Protein Foods

ಮೊಟ್ಟೆ

ದಿನದ ಆರಂಭವನ್ನು ಮಾಡುವುದಿದ್ದಲ್ಲಿ ಮೊಟ್ಟೆ ಅತ್ಯುತ್ತಮ ಆಹಾರ. ಮೊಟ್ಟೆಯಲ್ಲಿ ಪ್ರೊಟೀನ್‌ ಸೇರಿದಂತೆ ದೇಹಕ್ಕೆ ಬೇಕಾದ ಬಹಳಷ್ಟು ಪೋಷಕಾಂಶಗಳು ಇವೆ. ದೇಹ ಜಡವಾಗಿದ್ದಾಗ, ಮಲಗಿ ಎದ್ದ ಕೂಡಲೇ ಚುರುಕುಗೊಳಿಸಲು, ಉಲ್ಲಾಸ ನೀಡಿ ತಕ್ಷಣ ಚಿಗಿತುಕೊಳ್ಳಲು ಮೊಟ್ಟೆ ಬಹಳ ಒಳ್ಳೆಯದು. ಬೇಯಿಸಿ, ಆಮ್ಲೆಟ್‌ ಮಾಡಿ, ಅಥವಾ ಇನ್ನಾವುದೇ ತಿನಿಸಿನ ರೂಪದಲ್ಲಿ ಅದನ್ನು ನೀವು ತಿನ್ನಬಹುದು. ಹಾಗಾಗಿ ಇದು ಒಂದು ಅತ್ಯುತ್ತಮವಾದ ಬ್ರೇಕ್‌ಫಾಸ್ಟ್‌ ಆಯ್ಕೆ.

Mixed Nuts and Seeds Weight Loss Snacks

ಬೀಜಗಳು

ಒಂದು ಮುಷ್ಟಿ ಒಂದು ಬೀಜಗಳನ್ನು ಬೆಳಗ್ಗೆ ಎದ್ದ ಕೂಡಲೇ ಬಾಯಿಗೆ ಹಾಕಿಕೊಳ್ಳುವುದು ಒಳ್ಳೆಯ ಅಭ್ಯಾಸ. ಇದು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳಗ್ಗೆ ಬೇಕಾದ ಶಕ್ತಿಯನ್ನು ಇದು ಒಡನೆಯೇ ನೀಡುತ್ತದೆ. ರಾತ್ರಿ ಬೀಜಗಳನ್ನು ನೆನೆ ಹಾಕಿ ಬೆಳಗ್ಗೆ ಎದ್ದ ಕೂಡಲೇ ತಿನ್ನುವುದರಿಂದ ಬೀಜಗಳ ಎಲ್ಲ ಬಗೆಯ ಪೋಷಕಾಂಶಗಳ ಲಾಭವನ್ನೂ ದೇಹ ಪಡೆದುಕೊಳ್ಳುತ್ತದೆ.

Papaya Digestive Boosting Foods

ಪಪ್ಪಾಯಿ

ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿನ್ನುವುದು ಕೂಡಾ ಒಳ್ಳೆಯದು. ಪಪ್ಪಾಯಿಯಲ್ಲಿ ಕಡಿಮೆ ಕ್ಯಾಲರಿಯಿದ್ದು, ಅತ್ಯಂತ ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ. ಇದು ಹೊಟ್ಟೆ ಹಾಗೂ ಜೀರ್ಣಾಂಗವ್ಹೂಹಕ್ಕೆ ಒಳ್ಳೆಯದು. ತೂಕ ಇಳಿಸುವ ಮಂದಿಗೂ ಅತ್ಯಂತ ಒಳ್ಳೆಯದು.

Berries Abdominal Obesity

ಬೆರ್ರಿ

ಬೆಳಗಿನ ಖಾಲಿ ಹೊಟ್ಟೆಗೆ ಬೆರ್ರಿ ಹಣ್ಣುಗಳು ಉತ್ತಮ. ಬೆರ್ರಿ ಹಣ್ಣುಗಳಲ್ಲಿ ಹೆಚ್ಚು ನಾರಿನಂಶ ಇರುವುದರಿಂದ ಇದು ನಿಮ್ಮನ್ನು ಹೆಚ್ಚು ಹೊತ್ತು ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ. ಕಡಿಮೆ ಕ್ಯಾಲರಿಯ ಆಹಾರ ಇದಾಗಿದ್ದು, ಸ್ವಲ್ಪ ಹೆಚ್ಚು ತಿಂದರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಸ್ಟ್ರಾಬೆರ್ರಿ, ಬ್ಲೂಬೆರ್ರಿ ಮತ್ತಿರರ ಯಾವುದೇ ಬೆರ್ರಿ ವಿಧಗಳನ್ನು ಬೆಳಗ್ಗೆ ಸೇವಿಸುವುದು ಉತ್ತಮ.

Oats Vegetarian foods for stamina

ಓಟ್ಸ್‌

ಓಟ್ಸ್‌ ಅಥವಾ ಓಟ್‌ಮೀಲ್‌ ಬೆಳಗ್ಗೆ ತಿನ್ನುವುದು ಒಳ್ಳೆಯದು. ಇದರಲ್ಲೂ ನಾರಿನಂಶ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದ್ದು, ಹೊಟ್ಟೆ ತುಂಬಿಸಲು ಸರಿಯಾದ ಆಹಾರ. ಇದರ ಜೊತೆಗೆ ಒಣ ಬೀಜಗಳು ಹಾಗೂ ನಿಮ್ಮ ಇಷ್ಟ ಹಣ್ಣುಗಳನ್ನೂ ಸೇರಿಸಬಹುದು. ಸಕ್ಕರೆ ಸೇರಿಸದೆ, ಹಾಗೆಯೇ ಹಾಲಿನ ಜೊತೆಗೆ ಮಾಡಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಗ್ಯಾಸ್‌, ಹೊಟ್ಟೆಯುಬ್ಬರ ಇತ್ಯಾದಿ ಸಮಸ್ಯೆಯಿರುವ ಮಂದಿಗೂ ಇದು ಒಳ್ಳೆಯದು.

ಇದನ್ನೂ ಓದಿ: Menopausal Weight Gain: ಋತುಚಕ್ರ ನಿಂತ ಬಳಿಕ ತೂಕ ಹೆಚ್ಚುವುದನ್ನು ತಡೆಯಬಹುದೇ?

Continue Reading

ಆರೋಗ್ಯ

Sesame Oil Benefits: ಈ 10 ಕಾರಣಗಳಿಗಾದರೂ ನೀವು ಆಗಾಗ ಆಹಾರದಲ್ಲಿ ಎಳ್ಳೆಣ್ಣೆಯನ್ನು ಬಳಸಬೇಕು!

Sesame Oil Benefits: ಎಳ್ಳೆಣ್ಣೆಯಲ್ಲಿರುವ ಪೋಷಕಾಂಶಗಳ ಕಾರಣದಿಂದ ಇದೊಂದು ಅತ್ಯುತ್ತಮ, ಆರೋಗ್ಯಕರ ಎಣ್ಣೆಗಳ ಸಾಲಿಗೆ ಸೇರುತ್ತದೆ. ಉತ್ತಮ ಆರೋಗ್ಯ, ಸರಿಯಾದ ಪಚನಕ್ರಿಯೆ, ಒಳ್ಳೆಯ ಕೂದಲು, ಚರ್ಮದ ಆರೋಗ್ಯ ಎಲ್ಲವೂ ಸೇರಿದಂತೆ ಸಾಕಷ್ಟು ಆರೋಗ್ಯಕರ ಲಾಭಗಳನ್ನು ಎಳ್ಳೆಣ್ಣೆಯ ಬಳಕೆಯಿಂದ ಪಡೆಯಬಹುದು. ಬನ್ನಿ, ಆಗಾಗ, ಅಡುಗೆಯಲ್ಲಿ ಎಳ್ಳೆಣ್ಣೆಯನ್ನು ಸ್ವಲ್ಪ ಬಳಸುವುದರಿಂದ ಏನೆಲ್ಲ ಲಾಭಗಳ್ನು ಪಡೆಯಬಹುದು ಎಂಬುದನ್ನು ನೋಡೋಣ.

VISTARANEWS.COM


on

Sesame Oil Benefits
Koo

ಎಳ್ಳೆಣ್ಣೆ ಬಹಳ ಹಿಂದಿನಿಂದಲೂ ಭಾರತದಲ್ಲಿ ನಮ್ಮ ಹಿರಿಯರು ಬಳಸುತ್ತಾ ಬಂದಿರುವ ಎಣ್ಣೆ. ಎಳ್ಳಿನಿಂದ ತಯಾರಿಸುವ ಈ ಎಣ್ಣೆ ಕೇವಲ ಆಹಾರಕ್ಕಷ್ಟೇ ಅಲ್ಲ, ವೈದ್ಯಕೀಯ ಉಪಯೋಗಕ್ಕೂ ಪ್ರಾಚೀನ ಕಾಲದಿಂದಲೂ ಬಳಸಲ್ಪಡುತ್ತಿತ್ತು ಎಂಬುದಕ್ಕೆ ಪುರಾವೆಗಳು ಸಿಗುತ್ತವೆ. ಇದರಲ್ಲಿರುವ ಪೋಷಕಾಂಶಗಳ ಕಾರಣದಿಂದ ಇದೊಂದು ಅತ್ಯುತ್ತಮ, ಆರೋಗ್ಯಕರ ಎಣ್ಣೆಗಳ ಸಾಲಿಗೆ ಸೇರುತ್ತದೆ. ಉತ್ತಮ ಆರೋಗ್ಯ, ಸರಿಯಾದ ಪಚನಕ್ರಿಯೆ, ಒಳ್ಳೆಯ ಕೂದಲು, ಚರ್ಮದ ಆರೋಗ್ಯ ಎಲ್ಲವೂ ಸೇರಿದಂತೆ ಸಾಕಷ್ಟು ಆರೋಗ್ಯಕರ ಲಾಭಗಳನ್ನು ಎಳ್ಳೆಣ್ಣೆಯ ಬಳಕೆಯಿಂದ ಪಡೆಯಬಹುದು. ಬನ್ನಿ, ಆಗಾಗ, ಅಡುಗೆಯಲ್ಲಿ ಎಳ್ಳೆಣ್ಣೆಯನ್ನು ಸ್ವಲ್ಪ ಬಳಸುವುದರಿಂದ ಏನೆಲ್ಲ ಲಾಭಗಳ್ನು ಪಡೆಯಬಹುದು (Sesame Oil Benefits) ಎಂಬುದನ್ನು ನೋಡೋಣ.

Sesame Oil
  • ಎಳ್ಳೆಣ್ಣೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಂಟಿಆಕ್ಸಿಡೆಂಟ್‌ಗಳಿವೆ. ವಿಟಮಿನ್‌ ಇ ಹಾಗೂ ಲಿಗ್ನನ್‌ಗಳೆಂಬ ಈ ಆಂಟಿ ಆಕ್ಸಿಡೆಂಟ್‌ಗಳು ದೇಹವನ್ನು ಆಕ್ಸಿಡೇಟಿವ್‌ ಒತ್ತಡದಿಂದ ರಕ್ಷಿಸುತ್ತವೆ. ಅಂಗಾಶಗಳಿಗೆ ಹಾನಿಯಾಗುವುದನ್ನು ಇದು ತಡೆಯುವುದಷ್ಟೇ ಅಲ್ಲ, ಕ್ಯಾನ್ಸರ್‌, ಹೃದಯದ ಕಾಯಿಲೆಯಂಥ ದೊಡ್ಡ ಸಮಸ್ಯೆಗಳಿಂದಲೂ ಕೊಂಚ ರಕ್ಷಣೆ ನೀಡುತ್ತದೆ.
  • ಎಳ್ಳೆಣ್ಣೆಯಲ್ಲಿ ಆಂಟಿ ಇನ್‌ಪ್ಲಮೇಟರಿ ಗುಣಗಳು ಸಾಕಷ್ಟಿವೆ. ಹೀಗಾಗಿ ಇದು ಸಂಧಿವಾತ ಮತ್ತಿತರ ಉರಿಯೂತದ ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಎಳ್ಳೆಣ್ಣೆಯಲ್ಲಿ ಪಾಲಿ ಸ್ಯಾಚುರೇಟೆಡ್‌ ಫ್ಯಾಟ್‌ ಹಾಗೂ ಮೋನೋ ಸ್ಯಾಚುರೇಟೆಡ್‌ ಎಣ್ಣೆ ಎರಡೂ ಇರುವುದರಿಂದ ಇದು ಕೆಟ್ಟ ಕೊಲೆಸ್ಟೆರಾಲ್‌ ಮಟ್ಟವನ್ನು ಕೆಳಗಿಳಿಸಿ, ಒಳ್ಳೆಯ ಕೊಲೆಸ್ಟೆರಾಲ್‌ ಮಟ್ಟವನ್ನು ಏರಿಸಲು ಸಹಾಯ ಮಾಡುತ್ತದೆ. ಇದು ಹೃದಯದ ಕಾಯಿಲೆ, ಪಾರ್ಶ್ವವಾಯು ಮತ್ತಿತರ ಸಮಸ್ಯೆಗಳನ್ನೂ ದೂರವಿರಿಸಲು ಸಹಾಯ ಮಾಡುತ್ತದೆ.
  • ಎಳ್ಳೆಣ್ಣೆಯಲ್ಲಿ ಮೆಗ್ನೀಶಿಯಂನ ಪ್ರಮಾಣ ಹೆಚ್ಚಿದ್ದು ಇದು ರಕ್ತ ಪರಿಚಲನೆಯನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡವನ್ನೂ ಸಮತೋಲನಕ್ಕೆ ತರಲು ಸಹಾಯವಾಗುತ್ತದೆ. ಪರಿಣಾಮವಾಗಿ, ಹೃದಯದ ಸಮಸ್ಯೆ ಹಾಗೂ ಪಾರ್ಶ್ವವಾಯುವಿನಂಥ ಸಮಸ್ಯೆಗಳೂ ದೂರ ಉಳಿಯುತ್ತವೆ.
  • ಎಳ್ಳೆಣ್ಣೆಯಲ್ಲಿ ಕ್ಯಾಲ್ಶಿಯಂ, ಮೆಗ್ನೀಶಿಯಂ, ಝಿಂಕ್‌, ಕಾಪರ್‌ ಹೆಚ್ಚಿನ ಪ್ರಮಾಣದಲ್ಲಿ ಇವೆ. ಇದರಿಂದ ಎಲುಬಿನ ಸಾಂದ್ರತೆ ಹಾಗೂ ಸಾಮರ್ಥ್ಯ ಕಡಿಮೆಯಾಗದು. ವಯಸ್ಸಾದಂತೆ ಕಾಣಿಸಿಕೊಳ್ಳುವ ಎಲುಬಿನ ಸಮಸ್ಯೆಗಳೂ ಅಷ್ಟು ಬೇಗನೆ ಬಾರದು. ಮೂಳೆಗಳ ಆರೋಗ್ಯಕ್ಕೆ ಎಳ್ಳೆಣ್ಣೆ ಅತ್ಯಂತ ಒಳ್ಳೆಯದು.
  • ಚರ್ಮದ ಆರೋಗ್ಯಕ್ಕೆ ಎಳ್ಳೆಣ್ಣೆ ಒಳ್ಳೆಯದು. ಇದರಲ್ಲಿ ವಿಟಮಿನ್‌ ಇ ಇರುವುದರಿಂದ ಇದು ಚರ್ಮವನ್ನು ಕಲೆಗಳಿಂದ, ಸುಕ್ಕಿನಿಂದ ಮುಕ್ತವಾಗಿಸುತ್ತದೆ. ಚರ್ಮದಲ್ಲಿ ಕಪ್ಪು ಕಲೆಗಳಾಗದಂತೆ ನೋಡಿಕೊಳ್ಳುತ್ತದೆ. ಚರ್ಮಕ್ಕೆ ಹೆಚ್ಚು ತೇವಾಂಶ ನೀಡಿ, ಚರ್ಮ ಲಕಲಕನೆ ಹೊಳೆಯುವಂತೆ ಮಾಡುತ್ತದೆ.
  • ಎಳ್ಳೆಣ್ಣೆ ಬಾಯಿಯ ಆರೋಗ್ಯವನ್ನೂ ಹೆಚ್ಚಿಸುತ್ತದೆ. ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಹಾಗೂ ಕೊಳಕನ್ನು ತೆಗೆದು, ಕ್ಯಾವಿಟಿಯಂಥ ಸಮಸ್ಯೆ ಬರದಂತೆ ಕಾಪಾಡುತ್ತದೆ.
  • ಎಳ್ಳೆಣ್ಣೆ ಪಚನಕ್ರಿಯೆಗೆ ಒಳ್ಳೆಯದು. ಎಳ್ಳೆಣ್ಣೆಯಲ್ಲಿರುವ ಜಾರುವ ಗುಣವು ಆಹಾರವನ್ನು ಒಳಗಿನ ಜೀರ್ಣಾಂಗವ್ಯೂಹದಲ್ಲಿ ಚೆನ್ನಾಗಿ ಜಾರಿಕೊಂಡು ಹೋಗುವ ಹಾಗೆ ಮಾಡುವ ಜೊತೆಗೆ ಪಚನಕ್ರಿಯೆಗೆ ಸಹಕರಿಸಿ ಮಲಬದ್ಧತೆಯ ಸಮಸ್ಯೆಯನ್ನು ದೂರವಿರಿಸುತ್ತದೆ.
  • ಎಳ್ಳೆಣ್ಣೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಝಿಂಕ್‌ ಹಾಗೂ ರೋಗನಿರೋಧಕತೆ ಹೆಚ್ಚಿಸುವ ಖನಿಜಾಂಶಗಳು ಎಲ್ಲ ಪೋಷಕಾಂಶಗಳೂ ಕೂಡಾ ದೇಹಕ್ಕೆ ಹೀರಿಕೆಯಾಗುವಂತೆ ನೋಡಿಕೊಳ್ಳುತ್ತದೆ.
  • ಕೂದಲ ಆರೋಗ್ಯಕ್ಕೂ ಕೂಡ ಎಳ್ಳೆಣ್ಣೆ ಒಳ್ಳೆಯದು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಕೂದಲ ಬುಡವನ್ನು ಗಟ್ಟಿಕೊಳಿಸಿ ಕೂದಲಿಗೆ ಶಕ್ತಿಯನ್ನು ನೀಡುತ್ತದೆ. ಕೂದಲುದುರುವಿಕೆಯ ಸಮಸ್ಯೆ ಇರುವ ಮಂದಿಗೂ ಇದು ಒಳ್ಳೆಯದು. ಎಳ್ಳೆಣ್ಣೆಯ ನಿಯಮಿತ ಸೇವನೆ ಹಾಗೂ ಕೂದಲಿಗೆ ಬಳಕೆ ಮಾಡುವುದರಿಂದ ಆರೋಗ್ಯಕರವಾದ ಹೊಳಪಾದ, ಸೊಂಪಾದ ಕೂದಲು ನಿಮ್ಮದಾಗುತ್ತದೆ.

ಇದನ್ನೂ ಓದಿ: Sipping Tea Or Coffee With Meals: ಊಟತಿಂಡಿ ಜೊತೆಜೊತೆಗೆ ಚಹಾ ಕಾಫಿ ಹೀರುವ ಅಭ್ಯಾಸ ಒಳ್ಳೆಯದೇ, ಕೆಟ್ಟದ್ದೇ?

Continue Reading
Advertisement
Viral Video
Latest5 mins ago

Viral Video: ರೀಲ್ಸ್ ಮಾಡಲು ಹೋದ ವಿದ್ಯಾರ್ಥಿನಿಗೆ ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ

JP Nadda
ದೇಶ11 mins ago

JP Nadda: ರಾಜ್ಯಸಭೆ ಸದನ ನಾಯಕರಾಗಿ ಜೆ.ಪಿ. ನಡ್ಡಾ ಆಯ್ಕೆ; ಪಿಯೂಷ್‌ ಗೋಯಲ್‌ ಬದಲು ನೇಮಕ

LKG UKG in Anganwadis
ಪ್ರಮುಖ ಸುದ್ದಿ12 mins ago

LKG UKG in Anganwadis: ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸಿಎಂ ಸಹಮತ

Monsoon Trench Coat Fashion
ಫ್ಯಾಷನ್21 mins ago

Monsoon Trench Coat Fashion: ಮಾನ್ಸೂನ್‌ಗೂ ಕಾಲಿಟ್ಟ ಟ್ರೆಂಚ್‌ ಕೋಟ್‌ ಫ್ಯಾಷನ್‌!

Kamal Haasan predicts Deepika Padukone baby choose cinema career
ಟಾಲಿವುಡ್36 mins ago

Kamal Haasan: ಮುಂದೊಂದು ದಿನ ದೀಪಿಕಾ ಮಗು ಸಿನಿಮಾ ಮಾಡಬಹುದು ಎಂದು ಭವಿಷ್ಯ ನುಡಿದ ಕಮಲ್‌ ಹಾಸನ್‌!

tumkur Shoot out
ಕ್ರೈಂ44 mins ago

Tumkur Shoot out : ತುಮಕೂರಿನಲ್ಲಿ ಸದ್ದು ಮಾಡಿದ ಪೊಲೀಸ್ ತುಪಾಕಿ; ಸರಗಳ್ಳನ ಹೆಡೆಮುರಿ ಕಟ್ಟಿದ ಖಾಕಿ

LKG UKG In Govt Schools
ಕರ್ನಾಟಕ49 mins ago

LKG UKG In Govt Schools: ಅಂಗನವಾಡಿ ನೌಕರರ ಧರಣಿ; ಬೇಡಿಕೆಗಳನ್ನು ಸಿಎಂ ಗಮನಕ್ಕೆ ತಂದ ಲಕ್ಷ್ಮಿ ಹೆಬ್ಬಾಳ್ಕರ್‌

Sex Doll
ದೇಶ57 mins ago

AI Sex Dolls: ಶೀಘ್ರವೇ ಬರಲಿವೆ ಎಐ ಆಧಾರಿತ ‘ಸೆಕ್ಸ್‌’ ಬೊಂಬೆಗಳು; ನೈಜ ‘ಸುಖ’ಕ್ಕೆ ಇನ್ನು ಮನುಷ್ಯರೇ ಬೇಕಿಲ್ಲ!

Job Alert
ಉದ್ಯೋಗ58 mins ago

Job Alert: ಗಮನಿಸಿ; GTTCಯಲ್ಲಿನ ಹುದ್ದೆಗೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ; ಇಲ್ಲಿದೆ ಪರಿಷ್ಕೃತ ವೇಳಾಪಟ್ಟಿ

Unusual Story
Latest59 mins ago

Unusual Story: 15 ವರ್ಷದ ವಿದ್ಯಾರ್ಥಿಯಿಂದ ಶಿಕ್ಷಕಿ ಗರ್ಭಿಣಿ! ಜೈಲು ಶಿಕ್ಷೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ3 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ4 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌