Model Fashion Life: ಮಿಸೆಸ್‌ ಫ್ಯಾಷನಿಸ್ಟ್‌ ದಿವ್ಯಾ ಶೆಟ್ಟಿಯ ವಿಂಟರ್‌ ಫ್ಯಾಷನ್‌ ಮಂತ್ರ ಇದು! - Vistara News

ಫ್ಯಾಷನ್

Model Fashion Life: ಮಿಸೆಸ್‌ ಫ್ಯಾಷನಿಸ್ಟ್‌ ದಿವ್ಯಾ ಶೆಟ್ಟಿಯ ವಿಂಟರ್‌ ಫ್ಯಾಷನ್‌ ಮಂತ್ರ ಇದು!

ಮಿಸೆಸ್‌ ಫ್ಯಾಷನಿಸ್ಟ್‌ 2018 ಟೈಟಲ್‌ ವಿನ್ನರ್‌ ದಿವ್ಯಾ ಶೆಟ್ಟಿ ಮೂಲತಃ ಫ್ಯಾಷನ್‌ ಡಿಸೈನರ್‌. ಸಾಕಷ್ಟು ಬ್ರಾಂಡ್‌ಗಳೊಂದಿಗೆ ಕೆಲಸ ನಿರ್ವಹಿಸಿರುವ ಇವರು ಈಗಾಗಲೇ ಮ್ಯೂಸಿಕ್‌ ಆಲ್ಬಂ ಹಾಗೂ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಈ ಬಾರಿಯ ಮಾಡೆಲ್‌ ಫ್ಯಾಷನ್‌ ಲೈಫ್‌ (Model Fashion Life) ಕಾಲಂನಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ತಮ್ಮ ಫ್ಯಾಷನ್‌ ಹಾಗೂ ವಿಂಟರ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ ಟಿಪ್ಸ್‌ ಹಂಚಿಕೊಂಡಿದ್ದಾರೆ.

VISTARANEWS.COM


on

Model Fashion Life
ಚಿತ್ರಗಳು : ದಿವ್ಯಾ ಶೆಟ್ಟಿ, ಮಿಸೆಸ್‌ ಫ್ಯಾಷನಿಸ್ಟಾ, ಮಿಸೆಸ್‌ ಫೋಟೋಜೆನಿಕ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಿಸೆಸ್‌ ಫ್ಯಾಷನಿಸ್ಟಾ 2018 ಟೈಟಲ್‌ ವಿನ್ನರ್‌ ದಿವ್ಯಾ ಶೆಟ್ಟಿ, ಮೂಲತಃ ಫ್ಯಾಷನ್‌ ಡಿಸೈನರ್‌. ಸಾಕಷ್ಟು ಬ್ರಾಂಡ್‌ಗಳೊಂದಿಗೆ ಕೆಲಸ ನಿರ್ವಹಿಸಿರುವ ಇವರು ಈಗಾಗಲೇ ಮಲಯಾಳಂ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ, ಜೊತೆಗೆ ಸಿನಿಮಾವೊಂದರಲ್ಲೂ ನಟಿಸಿದ್ದಾರೆ. ಟ್ರಾವೆಲಿಂಗ್‌, ಕುಕ್ಕಿಂಗ್‌, ಗಾರ್ಡೆನಿಂಗ್‌ ಹವ್ಯಾಸ ಹೊಂದಿರುವ ದಿವ್ಯಾಗೆ ರಾಯಲ್‌ ಎನ್‌ಫಿಲ್ಡ್ ಬುಲೆಟ್‌ ರೈಡ್‌ ಮಾಡುವುದು ಇಷ್ಟದ ಸಂಗತಿಗಳಲ್ಲೊಂದಂತೆ. ಈ ಬಾರಿಯ ವಿಸ್ತಾರ ನ್ಯೂಸ್‌ನ ಮಾಡೆಲ್‌ ಫ್ಯಾಷನ್‌ ಲೈಫ್‌ (Model Fashion Life) ಕಾಲಂನಲ್ಲಿ ತಮ್ಮ ಫ್ಯಾಷನ್‌ ಲೈಫ್‌ ಹಾಗೂ ವಿಂಟರ್‌ ಕೇರ್‌ ಬಗ್ಗೆ ಟಿಪ್ಸ್ ನೀಡಿದ್ದಾರೆ.

What is your fashion statement?

ನಿಮ್ಮ ಫ್ಯಾಷನ್‌ ಸ್ಟೇಟ್‌ಮೆಂಟ್‌ ಏನು?

ನನಗೆ ಯಾವುದೇ ಬ್ರಾಂಡ್‌ ಹಾಗೂ ಲೆಬೆಲ್‌ ಬಗ್ಗೆ ಮೋಹವಿಲ್ಲ. ಸರಿಯಾದ ಔಟ್‌ಫಿಟ್‌ ಧರಿಸುವುದು ನನ್ನ ಚಾಯ್ಸ್ನಲ್ಲಿದೆ. ನಮ್ಮ ಬಾಡಿಗೆ ತಕ್ಕಂತೆ ಸೂಕ್ತವಾದ ಕಂಫರ್ಟಬಲ್‌ ಡ್ರೆಸ್‌ ಧರಿಸುತ್ತೇನೆ. ಇನ್ನು ಪರಿಸರ ಸ್ನೇಹಿ ಉಡುಪುಗಳು ನನಗಿಷ್ಟ. ಮರುಬಳಕೆ ಮಾಡಿ ಸಿದ್ಧಪಡಿಸಿದ ಉಡುಗೆಗಳನ್ನು ಪ್ರಿಫರ್‌ ಮಾಡುತ್ತೇನೆ.

Talk about a style statement

ಸ್ಟೈಲ್‌ ಸ್ಟೇಟ್‌ಮೆಂಟ್‌ ಬಗ್ಗೆ ತಿಳಿಸಿ…

ಸದಾ ಮುಖದ ಮೇಲೊಂದು ನಗು ನನ್ನ ಬದಲಾಗದ ಸ್ಟೈಲ್‌ ಸ್ಟೇಟ್‌ಮೆಂಟ್‌. ಇದರೊಂದಿಗೆ ಸಂದರ್ಭಕ್ಕೆ ತಕ್ಕಂತೆ ಫ್ಯಾಷನ್‌ವೇರ್‌ ಧರಿಸುವುದು ನನ್ನ ಸ್ಟೈಲ್‌ ಸ್ಟೇಟ್‌ಮೆಂಟ್‌ನ ಮುಖ್ಯ ಭಾಗವಾಗಿದೆ.

3 tips for winter beauty care?

ಚಳಿಗಾಲದ ಬ್ಯೂಟಿ ಆರೈಕೆಗೆ 3 ಟಿಪ್ಸ್‌ ನೀಡುತ್ತೀರಾ?

ಈ ಸೀಸನ್‌ನಲ್ಲಿ ಕೂದಲು ಒಣಗಿದಂತಿರುತ್ತದೆ. ಹಾಗಾಗಿ ತಲೆಸ್ನಾನಕ್ಕೆ ಮೊದಲು ತಲೆಕೂದಲಿಗೆ ಎಣ್ಣೆ ಹಚ್ಚಿ. ಇದು ಸುಗುಮ ರಕ್ತ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಕೂದಲು ಮಿರಮಿರ ಮಿಂಚುತ್ತದೆ. ಪ್ರತಿದಿನ ಸ್ನಾನಕ್ಕೆ ಮುನ್ನ, ಮುಖ ಹಾಗೂ ಕೈ ಕಾಲಿಗೆ ಕೊಬ್ಬರಿ ಎಣ್ಣೆಯನ್ನು ಸವರಿ, ಕೊಂಚ ಮಸಾಜ್‌ ಮಾಡಿ. ಇದು ಶುಷ್ಕ ತ್ವಚೆಯನ್ನು ಸುಕೋಮಲವಾಗಿಸುತ್ತದೆ. ಈ ಸೀಸನ್‌ನಲ್ಲಿ ಮುಖದ ಗ್ಲೋ ಹೆಚ್ಚಿಸಲು ಆದಷ್ಟೂ ನೀರು ಕುಡಿಯುತ್ತಲೇ ಇರಿ. ಇದರೊಂದಿಗೆ ಯೋಗಾಸನದ ಕೆಲವು ಆಸನಗಳನ್ನು ಮಾಡುವುದರಿಂದ ಮುಖದ ಸೌಂದರ್ಯ ಹೆಚ್ಚಾಗುತ್ತದೆ.

Give some advice on winter fashion…

ವಿಂಟರ್‌ ಫ್ಯಾಷನ್‌ ಬಗ್ಗೆ ಒಂದಿಷ್ಟು ಸಲಹೆ ನೀಡಿ…

ನನಗಂತೂ ಈ ಸೀಸನ್‌ನಲ್ಲಿ ಫ್ಯೂಷನ್‌ವೇರ್‌ ಇಷ್ಟ. ಅದೇ ರೀತಿ ಈ ಫ್ಯಾಷನ್‌ ಮಾಡಲು ಆಸಕ್ತಿ ಇರುವವರು ಹೀಗೆ ಮಾಡಿ ನೋಡಬಹುದು. ಸೀರೆಯೊಂದಿಗೆ ಟ್ರೆಂಚ್‌ ಕೋಟ್‌ ಧರಿಸುವುದು, ಲೆಹೆಂಗಾದೊಂದಿಗೆ ಲೆದರ್‌ ಜಾಕೆಟ್‌, ಕುರ್ತಿ ಮೇಲೆ ಕ್ರಾಪ್‌ ಜಾಕೆಟ್‌ ಪ್ರಯೋಗಿಸಬಹುದು. ಇದು ಡಿಫರೆಂಟ್‌ ಲುಕ್‌ ನೀಡುತ್ತದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Fashion News: ಯಶಸ್ವಿಯಾದ ಮಾಯಾ-2023 ಪಿಇಎಸ್‌ ಅಂತರ್ ಕಾಲೇಜು ಫ್ಯಾಷನ್‌ ಶೋ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಫ್ಯಾಷನ್

Off Shoulder Tops Fashion: ನೀವೂ ಆಫ್‌ ಶೋಲ್ಡರ್‌ ಟಾಪ್‌ ಧರಿಸಬಹುದು! ಆದರೆ ಈ ಎಚ್ಚರಿಕೆ ವಹಿಸಿ

ಶೋಲ್ಡರ್ ಇಲ್ಲದ ಟಾಪ್‌ಗಳು (Off Shoulder Tops Fashion) ಧರಿಸುವುದು ಇಷ್ಟವಾದರೂ ಹೆಚ್ಚಾಗಿ ನಾವು ಇದರಲ್ಲಿ ಕಂಫರ್ಟ್ ಆಗಿರೋದು ಸಾಧ್ಯವಿಲ್ಲ. ಇದನ್ನು ಧರಿಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಸ್ಟೈಲಿಶ್ ಆಗಿ ಮಿಂಚಬಹುದು ಮಾತ್ರವಲ್ಲ ನೀವು ಹೆಚ್ಚು ಕಂಫರ್ಟ್ ಆಗಿ ಇರಬಹುದು. ಅದಕ್ಕಾಗಿ ಇಲ್ಲಿದೆ ಟಿಪ್ಸ್.

VISTARANEWS.COM


on

By

Off Shoulder Tops Fashion
Koo

ಶೋಲ್ಡರ್ ಇಲ್ಲದ ಟಾಪ್‌ಗಳು (Off Shoulder Tops Fashion) ಹೆಚ್ಚು ಸ್ಟೈಲಿಶ್ (stylish) ಲುಕ್ ನೀಡುವುದು ಮಾತ್ರವಲ್ಲ ಇದು ಟ್ರೆಂಡಿ (trendy) ಆಯ್ಕೆಯೂ ಹೌದು. ಆದರೆ ಹೆಚ್ಚಿನವರಿಗೆ ಇದನ್ನು ಧರಿಸುವುದು, ನಿರ್ವಹಣೆ ಮಾಡುವುದು ಸವಾಲಿನ ಕೆಲಸ. ಹೀಗಾಗಿ ಇಷ್ಟವಿದ್ದರೂ ಇಂತಹ ದಿರಸು ಹಾಕಿಕೊಂಡು ಹೊರಗೆ ಹೋಗಲು ಬಹುತೇಕ ಮಂದಿ ಹಿಂಜರಿಯುತ್ತಾರೆ. ಆದರೆ ಸರಿಯಾದ ರೀತಿಯಲ್ಲಿ ಶೋಲ್ಡರ್ ಇಲ್ಲದ ದಿರಸು ಧರಿಸಿದರೆ ಹೆಚ್ಚು ಕಂಫರ್ಟ್ ಫೀಲ್ ಆಗುವುದು ಮಾತ್ರವಲ್ಲ ಎಲ್ಲರ ನಡುವೆ ಸ್ಟೈಲಿಶ್ ಆಗಿಯೂ ಮಿಂಚಬಹುದು.

ಶೋಲ್ಡರ್ ಇಲ್ಲದ ದಿರಸುಗಳನ್ನು ಧರಿಸಲು ಈ ಆರು ಪ್ರಮುಖ ಸಲಹೆಗಳನ್ನು ಪಾಲಿಸಿ. ಆಗ ನೀವೂ ಸ್ಟೈಲಿಶ್ ಆಗಿ ಮಿಂಚಬಹುದು.

ಸ್ಟ್ರಾಪ್ ಇಲ್ಲದ ಬ್ರಾ ಆಯ್ಕೆ ಮಾಡಿ

ಶೋಲ್ಡರ್ ಇಲ್ಲದ ದಿರಸು ಧರಿಸಿ ಹೆಚ್ಚು ಕಂಫರ್ಟ್ ಆಗಬೇಕಾದರೆ ಸ್ಟ್ರಾಪ್ ಇಲ್ಲದ ಬ್ರಾ ಆಯ್ಕೆ ಮಾಡಬೇಕು. ಇದು ಆಫ್-ದ-ಶೋಲ್ಡರ್ ಟಾಪ್‌ಗಳಿಗೆ ಹೆಚ್ಚು ಬೆಂಬಲವನ್ನು ನೀಡುತ್ತದೆ. ಮುಖ್ಯವಾಗಿ ಎದೆ ಭಾಗ ಅಗಲವಾಗಿದ್ದರೆ ಸರಿಯಾದ ಒಳ ಉಡುಪು ಆಯ್ದುಕೊಳ್ಳುವುದು ಬಹು ಮುಖ್ಯವಾಗಿರುತ್ತದೆ. ಬ್ರ್ಯಾಂಡೆಡ್ ಒಳ ಉಡುಪುಗಳನ್ನು ಆಯ್ಕೆ ಮಾಡಿ. ಇದರಲ್ಲಿ ಒಳ ಉಡುಪಿನ ಮೇಲ್ಭಾಗ ಮತ್ತು ಕೆಳ ಭಾಗದಲ್ಲಿ ನಯವಾದ ಮತ್ತು ಆಕರ್ಷಕವಾದ ಸ್ಟ್ರಾಪ್ ಗಳನ್ನು ಹೊಂದಿರುತ್ತದೆ. ಇಂತವುಗಳು ಹೆಚ್ಚು ಕಂಫರ್ಟ್ ಕೊಡುತ್ತದೆ ಮತ್ತು ದಿರಿಸಿನ ಮೇಲಿನ ಅನುಮಾನವನ್ನು ಮನಸ್ಸಿನಿಂದ ತೊಡೆದು ಹಾಕುತ್ತದೆ.


ಸ್ಟ್ರಕ್ಚರ್ಡ್ ಟಾಪ್ಸ್

ಶೋಲ್ಡರ್ ಇಲ್ಲದ ದಿರಸು ಧರಿಸುವಾಗ ಮೇಲ್ಭಾಗದಲ್ಲಿ ಹೆಚ್ಚುವರಿ ಬೆಂಬಲ ಮತ್ತು ಸಹಾಯಕ್ಕೆ ಬಿಲ್ಟ್-ಇನ್ ಬೋನಿಂಗ್, ಅಂಡರ್‌ವೈರ್ ಅಥವಾ ನೆಕ್‌ಲೈನ್ ಸುತ್ತಲೂ ದಪ್ಪವಾದ ರಬ್ಬರ್ ಬ್ಯಾಂಡ್‌ ಇರುವುದನ್ನು ಖಚಿತಪಡಿಸಿಕೊಳ್ಳಿ. ರಚನಾತ್ಮಕ ಮೇಲ್ಭಾಗಗಳು ಹೆಚ್ಚು ಸ್ಟೈಲಿಶ್ ಲುಕ್ ನೀಡುವುದು ಮಾತ್ರವಲ್ಲ ದೇಹದ ಗಾತ್ರಕ್ಕೆ ತಕ್ಕಂತೆ ಸರಿಯಾಗಿ ಹೊಂದಿಕೆಯಾಗುವಂತೆ ಮಾಡಿ ಕೊಂಚ ಸ್ಲಿಮ್ ಮತ್ತು ಫಿಟ್ ಆಗಿರುವಂತೆ ತೋರಿಸುತ್ತದೆ.

ಮೃದು ಬಟ್ಟೆಗಳಿಗೆ ಆದ್ಯತೆ ನೀಡಿ

ಆಫ್-ದಿ-ಶೋಲ್ಡರ್ ಟಾಪ್‌ಗಳಿಗಾಗಿ ಹೆಚ್ಚು ದಪ್ಪವಾದ ಬಟ್ಟೆಗಳು ಸರಿಯಾದ ಆಯ್ಕೆಯಲ್ಲ. ತೆಳು ಮತ್ತು ಮೃದುವಾದ ಬಟ್ಟೆಗಳು ಹೆಚ್ಚು ಕಂಫರ್ಟ್ ಫೀಲ್ ಕೊಡುತ್ತದೆ. ಹತ್ತಿ, ಲೆನಿನ್ ಬಟ್ಟೆಗಳಿಂದ ವಿನ್ಯಾಸಗೊಳಿಸಿರುವ ದಿರಿಸನ್ನು ಆಯ್ಕೆ ಮಾಡಿಕೊಳ್ಳಬಹುದು.


ಸರಿಯಾದ ಬಾಟಮ್ ದಿರಸನ್ನು ಆಯ್ಕೆ ಮಾಡಿ

ಶೋಲ್ಡರ್ ಇಲ್ಲಿದ ದಿರಸು ಧರಿಸುವಾಗ ಸರಿಯಾದ ಬಾಟಮ್ ದಿರಸನ್ನು ಆಯ್ಕೆ ಮಾಡುವುದು ಕೂಡ ಬಹು ಮುಖ್ಯವಾಗಿದೆ. ಇದು ಶೋಲ್ಡರ್ ಲೆಸ್ ಟಾಪ್‌ಗಳಿಗೆ ಸಪೋರ್ಟಿವ್ ಆಗಿದ್ದರೆ ಹೆಚ್ಚು ಕಂಫರ್ಟ್ ಫೀಲ್ ಕೊಡುತ್ತದೆ. ಹೊಕ್ಕುಳ ಬಳಿ ಬರುವ ಜೀನ್ಸ್ ಅಥವಾ ಸ್ಕರ್ಟ್‌ ಗಳನ್ನು ಆಯ್ಕೆ ಮಾಡುವುದು ಮತ್ತು ಹೆಚ್ಚು ದಪ್ಪ, ಅಗಲವಾದ ಎಲಾಸ್ಟಿಕ್ ಇರುವ ಶೋಲ್ಡರ್ ಲೆಸ್ ಟಾಪ್ ಗಳಿಗೆ ಸ್ಟೈಲಿಶ್ ಲುಕ್ ನೀಡುತ್ತದೆ ಮಾತ್ರವಲ್ಲ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಎ-ಲೈನ್ ಸ್ಕರ್ಟ್‌ಗಳು ಮತ್ತು ವೈಡ್ ಲೆಗ್ ಪ್ಯಾಂಟ್‌ಗಳು ಹೆಚ್ಚು ಸಮತೋಲನ ಸಾಧಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: International Mud Day: ಆರೋಗ್ಯ, ಸೌಂದರ್ಯದ ಪಾಲಿಗೆ ಹೊನ್ನು ಈ ಮಣ್ಣು!

ಸರಿಯಾದ ವಿನ್ಯಾಸವನ್ನು ಆಯ್ಕೆ ಮಾಡಿ

ಶೋಲ್ಡರ್ ಲೆಸ್ ಟಾಪ್ ಗಳಲ್ಲಿ ಭುಜದ ಮೇಲ್ಭಾಗ ಸಮಾನವಾಗಿ ಇರುವುದಿಲ್ಲ. ಎದೆ ಭಾಗ ದೊಡ್ಡದಾಗಿರುವವರಿಗೆ ಕಂಠರೇಖೆಯ ದಿರಿಸುಗಳು ಹೆಚ್ಚು ಸುಂದರವಾಗಿ ಕಾಣುತ್ತದೆ. ಇದು ಎದೆಯ ಭಾಗದಲ್ಲಿ ಸುತ್ತುವರೆದಿರುವ ಲೇಯರ್‌ಗಳು, ರಫಲ್ಸ್ ಅಥವಾ ಇತರ ವಿಶೇಷ ವಿನ್ಯಾಸವನ್ನು ಒಳಗೊಂಡಿರುತ್ತದೆ.


ಸೂಕ್ತ ಆಭರಣ ಧರಿಸಿ

ಶೋಲ್ಡರ್ ಲೆಸ್ ಟಾಪ್‌ಗಳನ್ನು ಆಯ್ಕೆ ಮಾಡುವಾಗ ದಪ್ಪ ಕಿವಿಯೋಲೆಗಳು, ನೆಕ್ಲೇಸ್‌ಗಳು ಕೂಡ ಗಮನ ಸೆಳೆಯುವಂತಿರಬೇಕು. ನೆಕ್ಲೇಸ್ ಧರಿಸಲು ಇಷ್ಟವಿಲ್ಲದೇ ಇದ್ದರೆ ಸ್ಟ್ರೈಕಿಂಗ್ ಕಿವಿಯೋಲೆಗಳನ್ನು ಆಯ್ಕೆ ಮಾಡಿ. ಇದರೊಂದಿಗೆ ಆಕರ್ಷಕ ಬೆಲ್ಟ್‌ ಗಳು ಸ್ಟೈಲಿಶ್ ಲುಕ್ ನೀಡುತ್ತದೆ ಮಾತ್ರವಲ್ಲ ಇದು ಸೊಂಟದ ಭಾಗ ಬಿಗಿಗೊಳಿಸಲು ಅದ್ಭುತವಾದ ಪರಿಕರವಾಗಿದೆ.

Continue Reading

ಫ್ಯಾಷನ್

Kids Fashion: ಮಕ್ಕಳ ಕ್ಯೂಟ್‌ ಲುಕ್‌ಗೆ ಸಾಥ್‌ ನೀಡುವ ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್ಸ್!

Kids Fashion: : ಚಿಣ್ಣರ ಸೆಲೆಬ್ರೇಷನ್‌ಗೆ ಸಾಥ್‌ ನೀಡುವಂತಹ ನಾನಾ ಬಗೆಯ ಹೆಡ್‌ಬ್ಯಾಂಡ್‌ಗಳು ಕಾಲಿಟ್ಟಿದ್ದು, ಅವುಗಳಲ್ಲಿ ರ‍್ಯಾಬಿಟ್‌ & ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್‌ಗಳು ಟ್ರೆಂಡಿಯಾಗಿವೆ. ಇವುಗಳಲ್ಲಿ ಯಾವ್ಯಾವ ಬಗೆಯವು ದೊರೆಯುತ್ತಿವೆ. ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Kids Fashion: Bunny Ears Head Bands for Kids' Cute Look!
ಚಿತ್ರಗಳು : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಕ್ಕಳನ್ನು ಕ್ಯೂಟಾಗಿ ಬಿಂಬಿಸುವ ಪಾರ್ಟಿ ಹಾಗೂ ಸೆಲೆಬ್ರೇಷನ್‌ಗೆ ಸಾಥ್‌ ನೀಡುವಂತಹ ನಾನಾ ಬಗೆಯ ರ‍್ಯಾಬಿಟ್‌ & ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. “ಹೆಣ್ಣುಮಕ್ಕಳ ಕೂದಲ ಸೌಂದರ್ಯವನ್ನು ಹೆಚ್ಚಿಸುವಂತಹ ಹೇರ್‌ ಆಕ್ಸೆಸರೀಸ್‌ನಲ್ಲಿ, ಇದೀಗ ರ‍್ಯಾಬಿಟ್‌ ಹಾಗೂ ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್‌ಗಳು (kids fashion) ಬಂದಿದ್ದು, ನಾನಾ ಕಲರ್‌ಗಳಲ್ಲಿ ಬಿಡುಗಡೆಗೊಂಡಿವೆ. ತಲೆಯ ಮೇಲೆ ಧರಿಸಿದಾಗ ಮಕ್ಕಳನ್ನು ಮುದ್ದು ಮುದ್ದಾಗಿ ಬಿಂಬಿಸುತ್ತವೆ. ಅಲ್ಲದೇ, ಸೆಲೆಬ್ರೇಷನ್‌ಗೆ ಸಾಥ್‌ ನೀಡುತ್ತವೆ” ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್ ರಿಂಕು. ಅವರ ಪ್ರಕಾರ, ಬನ್ನಿ ಹಾಗೂ ರ‍್ಯಾಬಿಟ್‌ ಇಯರ್ಸ್ ಹೆಡ್‌ ಬ್ಯಾಂಡ್‌ಗಳು ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಬಂದಿರುವುದು ಬೇಡಿಕೆ ಹೆಚ್ಚಾಗಲು ಕಾರಣ ಎನ್ನುತ್ತಾರೆ.

kids fashion

ಏನಿದು ರ‍್ಯಾಬಿಟ್‌ & ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್ಸ್

ಮೊಲದ ಉದ್ದನಾದ ಕಿವಿಗಳನ್ನು ಹೋಲುವ ವಿನ್ಯಾಸದ ಹೆಡ್‌ ಬ್ಯಾಂಡ್‌ಗಳನ್ನು ಹೀಗೆ ಕರೆಯಲಾಗುತ್ತದೆ. ಕೆಲವು ಫರ್‌ನಂತಹ ಮೆಟಿರಿಯಲ್‌ನಲ್ಲಿ ದೊರೆಯುತ್ತವೆ. ಇನ್ನು ಕೆಲವು ಮಕ್ಕಳ ಬರ್ತ್ ಡೇ ಪಾರ್ಟಿಗೆ ಹೊಂದುವಂತಹ ಮಿರಮಿರ ಮಿನುಗುವ ಡಿಸೈನ್‌ನಲ್ಲಿ ಸಿಗುತ್ತವೆ. ಇನ್ನು, ಕೆಲವು ರಬ್ಬರ್‌ಬ್ಯಾಂಡ್‌ನಂತಹ ವಿನ್ಯಾಸದಲ್ಲೂ ಲಭ್ಯ. ಬ್ಲಾಸಂ ಫ್ಲವರ್ಸ್, ಸ್ಯಾಟಿನ್‌ ಫ್ಯಾಬ್ರಿಕ್‌ನ ಪೋಲ್ಕಾ ಡಾಟ್ಸ್, ಇಯರ್‌ ಮಫ್‌ ಶೈಲಿಯವು, ಎಲ್‌ಇಡಿ ಅಥವಾ ಬ್ಯಾಟರಿ ಶೆಲ್‌ನಿಂದ ಮಿರಮಿರ ಮಿನುಗುವ ಲೈಟ್ಸ್‌ನ ಹೆಡ್‌ ಬ್ಯಾಂಡ್ಸ್, ಕ್ಯಾಂಡಿ ಕಲರ್ಸ್ ಬನ್ನಿ ಹೆಡ್‌ ಬ್ಯಾಂಡ್ಸ್, ನಾಟ್‌ ಬನ್ನಿ ಹೆಡ್‌ ಬ್ಯಾಂಡ್ಸ್, ಮಲ್ಟಿ ಕಲರ್‌ನ ಬನ್ನಿ ಬ್ಯಾಂಡ್ಸ್, ಹಾಲೋಗ್ರಾಫ್‌ನ ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್ಸ್‌ ಚಾಲ್ತಿಯಲ್ಲಿವೆ.

ಆನ್‌ಲೈನ್‌ನಲ್ಲಿ ಬನ್ನಿಇಯರ್ಸ್ ಹೆಡ್‌ ಬ್ಯಾಂಡ್ಸ್

ಇನ್ನು, ಆನ್‌ಲೈನ್‌ನಲ್ಲಿ ರ‍್ಯಾಬಿಟ್‌ ಅಥವಾ ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್‌ಗಳ ವಿನ್ಯಾಸಗಳಿಗೆ ಬರವಿಲ್ಲ. ಮ್ಯಾಚಿಂಗ್‌ ಹೆಡ್‌ ಬ್ಯಾಂಡ್‌ನಿಂದಿಡಿದು ಚಿಣ್ಣರ ಪಾರ್ಟಿ ಹೆಡ್‌ ಬ್ಯಾಂಡ್‌ಗಳು ಲಭ್ಯ. ಆ ಮಟ್ಟಿಗೆ ಸಾಕಷ್ಟು ಆಪ್ಷನ್‌ಗಳಿವೆ ಎನ್ನುತ್ತಾರೆ ಮಾರಾಟಗಾರರು.

kids fashion

ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್ಸ್ ಆಯ್ಕೆಗೆ 5 ಸಿಂಪಲ್‌ ಟಿಪ್ಸ್

  • ಪಾರ್ಟಿಗಾದಲ್ಲಿ ಆದಷ್ಟೂ ಮಿನುಗುವ ಹೆಡ್‌ ಬ್ಯಾಂಡ್ಸ್ ಆಯ್ಕೆ ಮಾಡಿ.
  • ಚಿಕ್ಕ ಮಕ್ಕಳಿಗಾದಲ್ಲಿ ಸಾಫ್ಟ್ ಫ್ಯಾಬ್ರಿಕ್‌ ಅಥವಾ ಫರ್‌ನಂತವನ್ನು ಸೆಲೆಕ್ಟ್ ಮಾಡಿ.
  • ಪುಟ್ಟ ಕಂದಮ್ಮಗಳಿಗೆ ಎಲ್‌ಇಡಿ ಲೈಟ್‌ನಂತವು ಬೇಡ. ಅದೇನಿದ್ದರೂ ಫೋಟೋಶೂಟ್‌ಗೆ ಮಾತ್ರವಿರಲಿ.
  • ಸೆಟ್‌ ಹೆಡ್‌ ಬ್ಯಾಂಡ್‌ಗಳು ದೊರೆಯುತ್ತವೆ.
  • ಕೂದಲಿಗೆ ಸಿಕ್ಕಿ ಹಾಕಿಕೊಳ್ಳದಂತಹ, ಒತ್ತದಂತಹ ಹೆಡ್‌ ಬ್ಯಾಂಡ್‌ ಆಯ್ಕೆ ನಿಮ್ಮದಾಗಿರಲಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Monsoon Rain Boots Fashion: ಮಕ್ಕಳ ಮಾನ್ಸೂನ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಬಗೆಯ ರೈನ್‌ ಬೂಟ್ಸ್

Continue Reading

ಫ್ಯಾಷನ್

Shirt Dress Fashion: ಶರ್ಟ್ ಡ್ರೆಸ್‌ ನ್ಯೂ ಲುಕ್‌ಗೆ 3 ಸಿಂಪಲ್‌ ಐಡಿಯಾ

Shirt Dress Fashion: ನಿಮ್ಮ ಬಳಿಯಿರುವ ಶರ್ಟ್ ಡ್ರೆಸ್‌ಗೆ ಹೊಸ ಲುಕ್‌ ನೀಡಬಹುದು. ಸದಾ ಹಳೇ ಸ್ಟೈಲಿಂಗ್‌ನಲ್ಲೆ ಕಾಣಿಸಿಕೊಳ್ಳುತ್ತಿರುವ ನಿಮಗೆ ಈ ಹೊಸ ಐಡಿಯಾ ಡಿಫರೆಂಟ್‌ ಇಮೇಜ್‌ ನೀಡಬಹುದು. ಯಾವ ಬಗೆಯ ಸ್ಟೈಲಿಂಗ್‌ ನಿಮ್ಮ ಈ ಲುಕ್‌ ಬದಲಿಸಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು 3 ಸಿಂಪಲ್‌ ಐಡಿಯಾ ನೀಡಿದ್ದಾರೆ.

VISTARANEWS.COM


on

Shirt Dress Fashion
ಚಿತ್ರ ಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೀಸನ್‌ ಬದಲಾದರೂ ಶರ್ಟ್ ಡ್ರೆಸ್‌ ಫ್ಯಾಷನ್‌ (Shirt Dress Fashion) ಮಾತ್ರ ಸೈಡಿಗೆ ಸರಿಯುವುದಿಲ್ಲ! ಬದಲಿಗೆ ನಾನಾ ಸ್ಟೈಲಿಂಗ್‌ಗಳಲ್ಲಿ ಡಿಫರೆಂಟ್‌ ವಿನ್ಯಾಸದಲ್ಲಿ ಆಗಾಗ್ಗೆ ಲಗ್ಗೆ ಇಡುತ್ತಲೇ ಇರುತ್ತದೆ. ಪ್ರತಿ ಹುಡುಗಿಯ ಬಳಿಯೂ ಒಂದಲ್ಲ ಒಂದು ಶರ್ಟ್ ಡ್ರೆಸ್ ಇದ್ದೇ ಇರುತ್ತದೆ. ಅದು ಸಿಂಪಲ್‌ ಆಗಿರಬಹುದು ಅಥವಾ ಪ್ರಿಂಟೆಡ್‌ ಆಗಿರಬಹುದು, ಇಲ್ಲವೇ ಚೆಕ್ಸ್, ಗಿಂಗ್ನಂ ಹೀಗೆ ನಾನಾ ವಿನ್ಯಾಸದ್ದಾಗಿರಬಹುದು. ಸದಾ ಒಂದೇ ಶೈಲಿಯಲ್ಲಿ ಇವನ್ನು ಧರಿಸಿದಲ್ಲಿ ನೋಡಲು ಒಂದೇ ತರಹದ್ದಾಗಿ ಕಾಣಿಸಬಹುದು. ಇದರ ಬದಲು ಧರಿಸುವ ಶೈಲಿಯನ್ನು ಬದಲಿಸಿದಲ್ಲಿ ನ್ಯೂ ಲುಕ್‌ ನೀಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Shirt Dress Fashion

ಶರ್ಟ್ ಡ್ರೆಸ್‌ಗೂ ನ್ಯೂ ಲುಕ್‌

ಹೌದು. ನಿಮ್ಮ ಬಳಿಯಿರುವ ಯಾವುದೇ ಬಗೆಯ ಶರ್ಟ್ ಡ್ರೆಸ್‌ಗೆ ಹೊಸ ಲುಕ್‌ ನೀಡಬಹುದು. ಸದಾ ಹಳೇ ಸ್ಟೈಲಿಂಗ್‌ನಲ್ಲೆ ಕಾಣಿಸಿಕೊಳ್ಳುತ್ತಿರುವ ನಿಮಗೆ ಈ ಹೊಸ ಐಡಿಯಾ ಡಿಫರೆಂಟ್‌ ಇಮೇಜ್‌ ನೀಡಬಹುದು ಎನ್ನುವ ಫ್ಯಾಷನಿಸ್ಟ್‌ಗಳು, 3 ಸಿಂಪಲ್‌ ಐಡಿಯಾಗಳನ್ನು ನೀಡಿದ್ದಾರೆ. ಟ್ರೈ ಮಾಡಿ ನೋಡಿ.

ಶರ್ಟ್ ಡ್ರೆಸ್‌ಗೆ ಬಿಗ್‌ ಬಕಲ್‌ ಬೆಲ್ಟ್

ಶರ್ಟ್ ಡ್ರೆಸ್‌ಗೆ ಬಿಗ್‌ ಬೆಲ್ಟ್‌ಗಳನ್ನು ಧರಿಸಿದಲ್ಲಿ ಇಡೀ ಡ್ರೆಸ್‌ನ ಲುಕ್‌ ಬದಲಾಗುವುದು. ಜೊತೆಗೆ ನೋಡಲು ಡಿಫರೆಂಟಾಗಿ ಕಾಣಿಸುವುದು. ನೋಡಲು ಮಿಡಿ ಸ್ಕರ್ಟ್‌ನಂತೆ ಕಾಣಿಸುವುದು. ಇದೀಗ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬಕಲ್‌ ಬೆಲ್ಟ್‌ಗಳು ಹಾಗೂ ಸ್ಟೇಟ್‌ಮೆಂಟ್‌ ಬೆಲ್ಟ್‌ಗಳು ಈ ಡ್ರೆಸ್‌ಗೆ ಸಖತ್ತಾಗಿ ಮ್ಯಾಚ್‌ ಆಗುತ್ತವೆ. ಬ್ಲ್ಯಾಕ್‌ ಶೇಡ್‌ ಹೊರತುಪಡಿಸಿ, ಇತರೇ ಡಿಸೈನ್‌ ಹಾಗೂ ಕಲರ್‌ಗಳಲ್ಲೂ ಲಭ್ಯವಿರುವ ಇವನ್ನು ಧರಿಸಿದಲ್ಲಿ, ಹೊಸ ಡ್ರೆಸ್‌ನಂತೆ ಕಾಣುವುದು.

Shirt Dress Fashion

ಇನ್ನರ್‌ ಟಾಪ್‌ ಮೇಲೆ ಶರ್ಟ್ ಡ್ರೆಸ್‌

ಇನ್ನರ್‌ ಟಾಪ್‌ ಧರಿಸಿ ಅದರ ಮೇಲೆ ಶರ್ಟ್ ಡ್ರೆಸ್‌ ಧರಿಸಬಹುದು. ಆದರೆ, ಇದಕ್ಕಾಗಿ ಒಂದೆರೆಡು ಬಟನ್‌ಗಳು ಓಪನ್‌ ಆಗಿರಬೇಕು. ಆಗ ಮಾತ್ರ, ಮಿಕ್ಸ್ ಮ್ಯಾಚ್‌ ಆದಂತಿರುವ ಶರ್ಟ್ ಡ್ರೆಸ್‌ ಹೈಲೈಟಾಗುತ್ತದೆ. ಕಾಂಟ್ರಸ್ಟ್ ಶೇಡ್‌ನವನ್ನು ಧರಿಸಬಹುದು. ಬೇಕಿದ್ದಲ್ಲಿ ಶರ್ಟ್ ಡ್ರೆಸ್‌ನ ಬಟನ್‌ ಕೋಟ್‌ನಂತೆ ಅರ್ಧಂಬರ್ಧ ಓಪನ್‌ ಮಾಡಬಹುದು. ಕೋಟ್‌ ಡ್ರೆಸ್‌ನಂತೆ ಕಾಣಿಸುವುದು.

ಇದನ್ನೂ ಓದಿ: Monsoon Footwear Fashion: ಮಳೆಗಾಲಕ್ಕೆ ತಕ್ಕಂತೆ ಬದಲಾಗುವ ಫುಟ್‌ವೇರ್‌ ಸ್ಟೈಲಿಂಗ್‌

ಲೇಯರ್‌ ಲುಕ್‌

ಮಳೆಗಾಲದಲ್ಲೂ ಲೇಯರ್‌ ಲುಕ್‌ ನೀಡಬಹುದು. ಶರ್ಟ್ ಡ್ರೆಸ್‌ ಮೇಲೆ ತೆಳುವಾದ ಅಥವಾ ಶೀರ್‌ ಕೋಟ್‌ನಂತಹ ಲಾಂಗ್‌ ಶ್ರಗ್ಸ್ ಅಥವಾ ಜಾಕೆಟ್‌ ಧರಿಸಿದಲ್ಲಿ ಕಂಪ್ಲೀಟ್‌ ಡಿಫರೆಂಟ್‌ ಲುಕ್‌ ನೀಡುವುದರಲ್ಲಿ ಸಂಶಯವಿಲ್ಲ!

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

International Mud Day: ಆರೋಗ್ಯ, ಸೌಂದರ್ಯದ ಪಾಲಿಗೆ ಹೊನ್ನು ಈ ಮಣ್ಣು!

International Mud Day: ಇಂದು ಅಂತಾರಾಷ್ಟ್ರೀಯ ಮಣ್ಣಿನ ದಿನ. ಮಣ್ಣು ಮುಕ್ಕುವುದೆಂದರೆ ಸೋಲುವ, ಮಣ್ಣೆರಚುವುದೆಂದರೆ ಹಾಳು ಮಾಡುವುದೆಂದೇ ಭಾವಿಸುವ ನಮಗೆ, ಮಣ್ಣಿನ ಸಾಂಗತ್ಯದಿಂದ ಬದುಕಿನಲ್ಲಿ ಆಗುವ ಧನಾತ್ಮಕ ಪರಿಣಾಮವನ್ನು ಅರಿಯುವುದಕ್ಕೆ ಇಂಥ ದಿನಗಳು ಅನುವು ಮಾಡಿಕೊಡುತ್ತವೆ.

VISTARANEWS.COM


on

International Mud Day
Koo

ಇಂದು ಅಂತಾರಾಷ್ಟ್ರೀಯ ಮಣ್ಣಿನ ದಿನ (International Mud Day). ಇತ್ತೀಚೆಗೆ ಮಣ್ಣಿನ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ಸುದ್ದಿಯನ್ನೇ ಕೇಳುತ್ತಿರುವ ನಮಗೆ ಮಣ್ಣಿನ ದಿನವೆಂದರೆ ಕಣ್‌ ಬಿಡುವಂತಾಗುವುದು ಸಹಜ. ಅಥವಾ ಎಂದಾದರೂ ಮಣ್ಣಲ್ಲಿ ಮಣ್ಣಾಗಿ ಹೋಗುವಂಥ ಆಧ್ಯಾತ್ಮದ ಬಗ್ಗೆ ಯೋಚಿಸಲೂ ಬಹುದು. ಇಂಥ ಯಾವ ವಿಷಯಕ್ಕೂ ಅಲ್ಲ, ಮಣ್ಣಾಟ ಆಡುವುದರಲ್ಲಿರುವ ಸೊಗಸನ್ನು ಎತ್ತಿ ಹಿಡಿಯುವ ಉದ್ದೇಶ ಈ ದಿನಕ್ಕಿದೆಯಂತೆ. ಮಣ್ಣು ಮುಕ್ಕುವುದೆಂದರೆ ಸೋಲುವ, ಮಣ್ಣೆರಚುವುದೆಂದರೆ ಹಾಳು ಮಾಡುವುದೆಂದೇ ಭಾವಿಸುವ ನಮಗೆ, ಮಣ್ಣಿನ ಸಾಂಗತ್ಯದಿಂದ ಬದುಕಿನಲ್ಲಿ ಆಗುವ ಧನಾತ್ಮಕ ಪರಿಣಾಮವನ್ನು ಅರಿಯುವುದಕ್ಕೆ ಇಂಥ ದಿನಗಳು ಅನುವು ಮಾಡಿಕೊಡುತ್ತವೆ. ಮಣ್ಣೆಂದರೆ ಕೃಷಿ ಎನ್ನುವ ಜನಪ್ರಿಯ ಕಲ್ಪನೆಯೇ ಮನಸ್ಸಿಗೆ ಬರುತ್ತದೆ. ಅದು ನಿಜವೂ ಹೌದು. ಅದಲ್ಲದೆ ಮಣ್ಣಿನ ಮಡಿಕೆಗಳಲ್ಲಿ ಆಹಾರ ಬೇಯಿಸುತ್ತಿದ್ದ ದಿನಗಳಿಂದ ಹಿಡಿದು ಮಣ್ಣನ್ನು ಔಷಧಿಯಾಗಿ ಉಪಯೋಗಿಸುವವರೆಗೆ ಬಹಳಷ್ಟು ಬಗೆಯಲ್ಲಿ ಮಣ್ಣಿನೊಂದಿಗೆ ನಮಗೆ ನಂಟಿದೆ. ಮಣ್ಣು ತಿಂದು ಬಾಯಲ್ಲಿ ಬ್ರಹ್ಮಾಂಡವನ್ನೇ ತೋರಿದ ತುಂಟ ಕೃಷ್ಣನಿಂದ ತೊಡಗಿ, ಮಣ್ಣಲ್ಲಾಡುವ ಎಲ್ಲ ಮಕ್ಕಳಿಗೂ ಕಲ್ಲು-ಮಣ್ಣುಗಳೇ ಮಿತ್ರರು. ಆದರೀಗ ಮಕ್ಕಳು ಮಣ್ಣಲ್ಲಾಡುವುದಕ್ಕಿಂತ ಮೊಬೈಲ್‌ನಲ್ಲಿ ಆಡುವುದೇ ಹೆಚ್ಚು. ಅಂದಹಾಗೆ, ಮಣ್ಣನ್ನು ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತದೆ ಎಂಬುದು ಗೊತ್ತೇ?

Mud Girl

ಮಣ್ಣಿಗೂ ಮಹತ್ವವಿದೆ

ಈಜಿಪ್ತ್‌ನ ರಾಣಿ ಕ್ಲಿಯೋಪಾತ್ರ ತನ್ನ ಚೆಲುವಿಗೂ ಹೆಸರಾಗಿದ್ದವಳು. ಅವಳ ಚರ್ಮದ ಕಾಂತಿಯ ದೇಖರೇಖಿಯಲ್ಲಿ ಮೃತ ಸಮುದ್ರದ (ಡೆಡ್‌ ಸೀ) ಮಣ್ಣನ್ನು ಬಳಸುತ್ತಿದ್ದಳಂತೆ. ಇಷ್ಟೇ ಅಲ್ಲ, 19ನೇ ಶತಮಾನದಲ್ಲಿ ಐರೋಪ್ಯ ದೇಶಗಳ ಸ್ಪಾಗಳಲ್ಲಿ ʻಮಡ್‌ ಬಾತ್‌ʼ ಜನಪ್ರಿಯಗೊಂಡಿತು. ನೋವುಗಳಿಂದ ಮುಕ್ತರಾಗುವುದಕ್ಕೆ, ಚರ್ಮದ ಕಾಂತಿಗೆ ಹಾಗೂ ಇನ್ನೂ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಇದೇ ಮದ್ದು ಎಂಬಂತೆ ಇದನ್ನು ಬಿಂಬಿಸಲಾಗುತ್ತಿತ್ತು. ಇವೆಲ್ಲ ನಿಜವೇ? ಮಣ್ಣನ್ನು ಮೈಗೆಲ್ಲ ಮೆತ್ತಿಕೊಳ್ಳುವುದರಿಂದ ಆರೋಗ್ಯ ಚೆನ್ನಾಗಿ ಆಗುವುದೇ ಅಥವಾ ಇದೂ ಗಾಳಿ ಮೇಲಿನ ಗುಳ್ಳೆಯೇ? ಅಂತಾರಾಷ್ಟ್ರೀಯ ಮಣ್ಣಿನ ದಿನದ ಹಿನ್ನೆಲೆಯಲ್ಲಿ ಮಣ್ಣಿನ ಆರೋಗ್ಯ ಮತ್ತು ಸೌಂದರ್ಯವರ್ಧಕ ಅಂಶಗಳ ಬಗ್ಗೆ ಮಾಹಿತಿ.

ಮಣ್ಣಿನ ಸ್ನಾನ

ಹಲವಾರು ಶತಮಾನಗಳಿಂದ ಮಣ್ಣಿನ ಸ್ನಾನವನ್ನು ಚಿಕಿತ್ಸೆಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ಹಳೆಯ ಕಾಲದ ಈಜಿಪ್ತ್‌, ಗ್ರೀಕ್‌ ಮತ್ತು ರೋಮನ್ನರು ಇದನ್ನು ಸ್ವಾಸ್ಥ್ಯ ಮತ್ತು ಸೌಂದರ್ಯವನ್ನು ಉದ್ದೀಪಿಸುವ ಮಾರ್ಗವಾಗಿ ಬಳಸುತ್ತಿದ್ದರು. ಬೆಚ್ಚಗಿನ ಮಣ್ಣಿನಲ್ಲಿ ದೇಹವನ್ನು ನೆನೆಸುವುದು, ಆ ಮೂಲಕ ಆರ್ಥರೈಟಿಸ್‌ ನೋವುಗಳನ್ನು ಕಡಿಮೆ ಮಾಡಿಕೊಳ್ಳುವುದು ಅವರ ಕ್ರಮವಾಗಿತ್ತು. ಇದಕ್ಕಾಗಿ ಬಿಸಿನೀರಿನ ಬುಗ್ಗೆಗಳ ಪ್ರದೇಶವನ್ನು ಅವಲಂಬಿಸುತ್ತಿದ್ದರು. ಅದಲ್ಲದೆ, ಮಣ್ಣಿನ ಪುಟ್ಟ ಕೊಳಗಳನ್ನೂ ನಿರ್ಮಿಸಿಕೊಳ್ಳುತ್ತಿದ್ದರು. ಈ ನಿಸರ್ಗ ಚಿಕಿತ್ಸೆ ಇಂದಿಗೂ ಜನಪ್ರಿಯವಾಗಿದೆ. ಇದಕ್ಕಾಗಿ ಹಲವು ರೀತಿಯ ಮಣ್ಣುಗಳನ್ನು ಬಳಸಲಾಗುತ್ತದೆ. ಒಂದೊಂದು ಬಗೆಯ ಮಣ್ಣಿಗೂ ಅದರದ್ದೇ ಆದ ಅನುಕೂಲಗಳಿವೆ.

Dead Sea Mud bath Treatment
  • ಮೃತ ಸಮುದ್ರದ ಮಣ್ಣು: ಖನಿಜಗಳಿಂದ ಭರಿತವಾದ ಮಣ್ಣಿದು. ಮೆಗ್ನೀಶಿಯಂ, ಸೋಡಿಯಂ ಮತ್ತು ಪೊಟಾಶಿಯಂ ಅಂಶಗಳು ಇದರಲ್ಲಿ ಅತ್ಯಂತ ಸಾಂದ್ರವಾಗಿರುತ್ತವೆ. ಇದನ್ನು ಡಿಟಾಕ್ಸ್‌ ಮಾಡುವುದಕ್ಕೆ ಮತ್ತು ಚರ್ಮದ ತೇವ ಹೆಚ್ಚಿಸುವುದಕ್ಕೆ ಉಪಯೋಗಿಸಲಾಗುತ್ತದೆ.
  • ಜ್ವಾಲಾಮುಖಿಯ ಬೂದಿ-ಮಣ್ಣು: ಇದನ್ನು ಜ್ವಾಲಾಮುಖಿ ಇದ್ದಂಥ ಜಾಗಗಳಿಂದ ಮಾತ್ರವೇ ಸಂಗ್ರಹಿಸಬಹುದು. ಇದರ ಬೂದಿಯಲ್ಲಿ ಬಹಳಷ್ಟು ರೀತಿಯ ಖನಿಜಗಳು ಸೇರಿಕೊಂಡಿರುತ್ತವೆ. ಚರ್ಮವನ್ನು ಎಕ್‌ಫಾಲಿಯೇಟ್‌ ಮಾಡುವುದಕ್ಕೆ ಮತ್ತು ಶುದ್ಧೀಕರಿಸುವುದಕ್ಕೆ ಇದಕ್ಕಿಂತ ಒಳ್ಳೆಯದು ಇನ್ನೊಂದಿಲ್ಲ ಎಂಬ ಅಭಿಪ್ರಾಯವಿದೆ.
  • ಬೆಂಟೋನೈಟ್‌ ಮಣ್ಣು: ಇದು ಜೇಡಿಮಣ್ಣಿನಂಥದ್ದು. ಆದರೆ ಇದನ್ನೂ ಜ್ವಾಲಾಮುಖಿಯ ಪ್ರದೇಶದಿಂದಲೇ ಸಂಗ್ರಹಿಸಲಾಗುತ್ತದೆ.
  • ಮುಲ್ತಾನಿ ಮಿಟ್ಟಿ (ಫುಲ್ಲರ್ಸ್‌ ಅರ್ಥ್): ಇದೂ ಸಹ ಜೇಡಿಮಣ್ಣಿನಂಥದ್ದೇ ಆಗಿದ್ದು,‌ ಅತಿಯಾದ ಎಣ್ಣೆ ಸೂಸುವ ಮುಖಕ್ಕೆ ಇದನ್ನು ಬಳಸಲಾಗುತ್ತದೆ.

ಲಾಭಗಳೇನು?

ಮುಖಕ್ಕೆ ಮಣ್ಣಿನ ಲೇಪ ಮಾಡುವುದಕ್ಕೆ ಅದರದ್ದೇ ಆದ ಲಾಭಗಳಿವೆ. ಚರ್ಮದ ಕಶ್ಮಲಗಳನ್ನು ತೆಗೆದು, ಮುಖಕ್ಕೆ ಬೇಕಾದ ತೇವವನ್ನು ನೀಡುವುದು ಇದರ ಉದ್ದೇಶ. ಅದರಲ್ಲೂ ಖನಿಜಯುಕ್ತವಾದ ಮಣ್ಣನ್ನು ಲೇಪಿಸುವುದರಿಂದ ಚರ್ಮಕ್ಕೆ ಕಾಂತಿಯನ್ನು ಮರಳಿಸಬಹುದು. ಚರ್ಮದ ಮೇಲಿನ ಸತ್ತ ಕೋಶಗಳನ್ನು ತೆಗೆದು, ಹೊಳಪು ನೀಡುತ್ತದೆ. ನೋವುಗಳ ಪರಿಹಾರಕ್ಕಾಗಿ ಬೆಚ್ಚಗಿನ ಮಣ್ಣಿನಿಲ್ಲಿ ಹುದುಗಿ ಕೂರುವುದು ಜನಪ್ರಿಯ ಕ್ರಮ. ಇದರಿಂದ ಶರೀರಕ್ಕೆ ಬೇಕಾದ ವಿಶ್ರಾಂತಿಯನ್ನು ನೀಡಿ, ಒತ್ತಡವನ್ನೂ ನಿವಾರಿಸಿಕೊಳ್ಳಬಹುದು.

ಇದನ್ನೂ ಓದಿ: Orange Peel Benefits: ಕಿತ್ತಳೆ ಸಿಪ್ಪೆ ಎಸೆಯಬೇಡಿ; ಹೃದಯದ ಆರೋಗ್ಯಕ್ಕೆ ಇದು ಒಳ್ಳೆಯದು!

ತೊಂದರೆಗಳಿವೆಯೇ?

ಎಲ್ಲಕ್ಕಿಂತ ಮುಖ್ಯವಾಗಿದ್ದು ಅಲರ್ಜಿ. ಮಣ್ಣಲ್ಲಿ ಇರಬಹುದಾದ ಕೆಲವು ಖನಿಜಗಳು ಹಲವರ ಚರ್ಮಕ್ಕೆ ಅಲರ್ಜಿಯನ್ನು ತರಬಹುದು. ಇದಲ್ಲದೆ ಸ್ವಚ್ಛತೆಯ ಬಗ್ಗೆಯೂ ಗಮನ ನೀಡಬೇಕು. ಯಾವುದೇ ಸ್ಪಾದಲ್ಲಿ ಇಂಥವನ್ನು ಬಳಸುವುದಾದರೂ, ಶುಚಿತ್ವದ ಬಗ್ಗೆ ಬಹಳ ಲಕ್ಷ್ಯ ವಹಿಸುವಂಥ ಜಾಗವನ್ನೇ ಆಯ್ಕೆ ಮಾಡಿ. ಈಗಾಗಲೇ ಒಣ ಚರ್ಮದ ಸಮಸ್ಯೆ ಇರುವವರಿಗೆ ಬೆಂಟೋನೈಟ್‌ ಮಣ್ಣಿನ ಪ್ಯಾಕ್‌ ಹಾಕಿದರೆ ಶುಷ್ಕತೆ ಹೆಚ್ಚುತ್ತದೆ. ಹಾಗಾಗಿ ಯಾರಿಗೆ ಯಾವುದು ಎಂಬ ಬಗ್ಗೆ ಮಾಹಿತಿ ಹೊಂದುವುದು ಅಗತ್ಯ.

Continue Reading
Advertisement
Actor Darshan In Central Jail remembering mother and son
ಕ್ರೈಂ5 seconds ago

Actor Darshan: ಇಂದಾದ್ರೂ ಭೇಟಿಗೆ ಬರ್ತಾರಾ ದರ್ಶನ್‌ ಅಮ್ಮ, ತಮ್ಮ?

Rakshit Shetty Visited Koragajja Temple And Prayed
ಸಿನಿಮಾ21 mins ago

Rakshit Shetty: ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ಕೊಟ್ಟ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ!

Parliament Sessions
ದೇಶ34 mins ago

Parliament Sessions: ಇಂದು ಸಂಸತ್‌ ಕಲಾಪ ಪುನರಾರಂಭ; ʼನೀಟ್‌ʼ ಚರ್ಚೆಗೆ ಪ್ರತಿಪಕ್ಷಗಳ ಪಟ್ಟು ಸಾಧ್ಯತೆ: Live ಇಲ್ಲಿ ನೋಡಿ

Watermelon At Nigh
ಆರೋಗ್ಯ34 mins ago

Watermelon At Night: ಸಂಜೆ 7 ಗಂಟೆಯ ಕಲ್ಲಂಗಡಿ ಹಣ್ಣನ್ನು ತಿನ್ನಲು ಹೋಗಬೇಡಿ!

Off Shoulder Tops Fashion
ಫ್ಯಾಷನ್34 mins ago

Off Shoulder Tops Fashion: ನೀವೂ ಆಫ್‌ ಶೋಲ್ಡರ್‌ ಟಾಪ್‌ ಧರಿಸಬಹುದು! ಆದರೆ ಈ ಎಚ್ಚರಿಕೆ ವಹಿಸಿ

shubham milk price hike
ಪ್ರಮುಖ ಸುದ್ದಿ36 mins ago

Milk Price Hike: ಹಾಲಿನ ದರ 4 ರೂ. ಹೆಚ್ಚಳ? ಶುಭಂ ಗೋಲ್ಡ್‌ ದರ ಏರಿಕೆ

irat Kohli's Heartfelt Tribute to Anushka Sharma
ಕ್ರಿಕೆಟ್44 mins ago

Virat Kohli: ಈ ಗೆಲುವು ನನ್ನದಷ್ಟೇ ಅಲ್ಲ, ನಿನ್ನದು ಕೂಡ ಎಂದು ಪತ್ನಿಗೆ ಪ್ರೀತಿ ವ್ಯಕ್ತಪಡಿಸಿದ ವಿರಾಟ್‌ ಕೊಹ್ಲಿ!

Birla Opus
ವಾಣಿಜ್ಯ55 mins ago

Birla Opus: ಬಿರ್ಲಾ ಪೇಂಟ್ ಜಾಹೀರಾತು ನಿಮಗೂ ಇಷ್ಟ ಆಗಿರಬೇಕಲ್ಲವೇ? ಇದರ ಸಂದೇಶ ಏನು? ಹಿನ್ನೆಲೆ ಏನು? ಕುತೂಹಲಕರ ಮಾಹಿತಿ

Kalki 2898 AD Prabhas Film Hits Jackpot 500 Cr WW In Opening
ಟಾಲಿವುಡ್1 hour ago

Kalki 2898 AD: ನಾಲ್ಕೇ ದಿನಕ್ಕೆ 500 ಕೋಟಿ ರೂ. ಗಳಿಕೆ ಕಂಡ ʻಕಲ್ಕಿʼ: ಪ್ರಭಾಸ್‌ ಅಬ್ಬರಕ್ಕೆ ಬಾಕ್ಸ್ ಆಫೀಸ್‌ ಧೂಳೀಪಟ!

hosur airport
ಪ್ರಮುಖ ಸುದ್ದಿ1 hour ago

Hosur Airport: ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಹೊಣೆ ಬಿಐಎಎಲ್‌ಗೆ! ಕರ್ನಾಟಕಕ್ಕೆ ಟಕ್ಕರ್‌ ಕೊಟ್ಟ ತಮಿಳುನಾಡು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ16 hours ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು21 hours ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ4 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

ಟ್ರೆಂಡಿಂಗ್‌