Hate Speeches: ದ್ವೇಷ ಭಾಷಣಗಳ ವಿರುದ್ಧ ಕ್ರಮ ಜರುಗಿಸಲೇಬೇಕು! ಸರ್ಕಾರಗಳಿಗೆ ಸುಪ್ರೀಂ ತಾಕೀತು - Vistara News

ಕೋರ್ಟ್

Hate Speeches: ದ್ವೇಷ ಭಾಷಣಗಳ ವಿರುದ್ಧ ಕ್ರಮ ಜರುಗಿಸಲೇಬೇಕು! ಸರ್ಕಾರಗಳಿಗೆ ಸುಪ್ರೀಂ ತಾಕೀತು

Hate Speeches: ದ್ವೇಷ ಭಾಷಣಗಳ ಪ್ರಕರಣಗಳ ಕುರಿತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ಕೋರಿ ಹಲವರು ಮತ್ತು ಸಂಘ ಸಂಸ್ಥೆಗಳು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದವು.

VISTARANEWS.COM


on

America tortured Nikhil Gupta, Petition to the Supreme Court
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಯಾವುದೇ ಮತ್ತು ಎಲ್ಲಾ ರೀತಿಯ ದ್ವೇಷ ಭಾಷಣಗಳ (hate speeches) ವಿರುದ್ಧ ಸರ್ಕಾರಗಳು ಕ್ರಮ ಕೈಗೊಳ್ಳಬೇಕು (Action Must) ಎಂದು ಸುಪ್ರೀಂ ಕೋರ್ಟ್ (Supreme Court) ಬುಧವಾರ ಸ್ಪಷ್ಟವಾಗಿ ಹೇಳಿದೆ. ದ್ವೇಷದ ಭಾಷಣಗಳನ್ನು ನಿಗ್ರಹಿಸಲು ಕಾರ್ಯವಿಧಾನವನ್ನು ಜಾರಿಗೆ ತರಲು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಫೆಬ್ರುವರಿಯಲ್ಲಿ ವಿಚಾರಣೆ ಮಾಡಲು ಒಪ್ಪಿಗೆ ಸೂಚಿಸಿ, ಈ ಖಡಕ್ ಸೂಚನೆ ನೀಡಿದೆ.

ದ್ವೇಷದ ಭಾಷಣಗಳ ಹಲವಾರು ನಿದರ್ಶನಗಳನ್ನು ಉಲ್ಲೇಖಿಸಿ ಹಲವರು ಮತ್ತು ಗುಂಪುಗಳು ಸಲ್ಲಿಸಿದ ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠವು, “ದ್ವೇಷ ಭಾಷಣಗಳ ಸಮಸ್ಯೆಯ ಬಗ್ಗೆ ನಾವು ಸಮಗ್ರ ಭಾರತದ ಮೇಲ್ವಿಚಾರಣೆಯನ್ನು ಹೊಂದಲು ಸಾಧ್ಯವಿಲ್ಲ. ಭಾರತದಂತಹ ದೊಡ್ಡ ದೇಶದಲ್ಲಿ ಸಮಸ್ಯೆಗಳಿರುತ್ತವೆ. ಆದರೆ ಅದನ್ನು ಎದುರಿಸಲು ನಮಗೆ ಆಡಳಿತಾತ್ಮಕ ಕಾರ್ಯವಿಧಾನವಿದೆಯೇ ಎಂಬುದು ಕೇಳಬೇಕಾದ ಪ್ರಶ್ನೆಯಾಗಿದೆ” ಎಂದು ಹೇಳಿತು.

ಮುಂದಿನ ವರ್ಷದ ಫೆಬ್ರವರಿಯಲ್ಲಿ ಪ್ರಕರಣವನ್ನು ವಿಚಾರಣೆಗೆ ಮುಂದೂಡಿದ ನ್ಯಾಯಮೂರ್ತಿ ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ಪೀಠವು, ಕಾನೂನು ಉಲ್ಲಂಘಿಸಿದರೆ ಮುಂದಿನ ಕ್ರಮವು ಏನಾಗಿರುತ್ತದೆ ಎಂಬ ಮಾಹಿತಿ ಸಮಾಜಕ್ಕೆ ಗೊತ್ತಿರಬೇಕು. ನಾವು ಸಮಗ್ರ ಭಾರತದ ಆಧಾರದ ಮೇಲೆ ಈ ಪ್ರಕ್ರಿಯೆಗಳನ್ನು ಹೊಂದಲು ಸಾಧ್ಯವಿಲ್ಲ ಅಥವಾ ಪ್ರತಿ ದಿನ ನಿರ್ವಹಿಸಲು ಸಾಧ್ಯವಿಲ್ಲ. ಯಾಕೆಂದರೆ, ಈ ಕುರಿತಾದ ಅರ್ಜಿಗಳು ದಾಖಲಾಗುತ್ತಲೇ ಇರುತ್ತವೆ. ಹಾಗಾಗಿ, ಇದಕ್ಕೊಂದು ಕಾರ್ಯವಿಧಾನವು ಅಗತ್ಯವಿದೆ ಎಂದು ಹೇಳಿತು.

2018ರ ತೆಹ್ಸೀನ್ ಪೂನಾವಾಲಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತೃತ ನಿರ್ದೇಶನಗಳನ್ನು ಈ ಸಂಬಂಧ ನೀಡಿತ್ತು. ದ್ವೇಷದ ಅಪರಾಧಗಳನ್ನು ತಡೆಗಟ್ಟಲು ಮತ್ತು ಅಪರಾಧಗಳನ್ನು ದಾಖಲಿಸಲು ಸಹ ಜವಾಬ್ದಾರಿಯುತ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ನಿರ್ದೇಶ ನೀಡಿತ್ತು.

ಗೋ ರಕ್ಷಕ ಗುಂಪುಗಳಿಂದ ಗುಂಪು ಹತ್ಯೆ ಮತ್ತು ದ್ವೇಷದ ಅಪರಾಧಗಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಪು ಹೊರ ಬಂದಿತ್ತು. ಗುಂಪು ಹತ್ಯೆ ಮತ್ತು ದ್ವೇಷದ ಅಪರಾಧಗಳ ವಿರುದ್ಧ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲು ದೇಶದ ಪ್ರತಿ ಜಿಲ್ಲೆಯಲ್ಲೂ ಪೊಲೀಸ್ ಸೂಪರಿಂಟೆಂಡೆಂಟ್ (ಎಸ್‌ಪಿ) ಶ್ರೇಣಿಗಿಂತ ಕಡಿಮೆಯಿಲ್ಲದ ನೋಡಲ್ ಅಧಿಕಾರಿಯನ್ನು ಹೊಂದಿರಬೇಕೆಂದು ನ್ಯಾಯಾಲಯ ಆಗ ಆದೇಶಿಸಿತ್ತು.

ಈ ನಿರ್ದೇಶನಗಳು ಜಾರಿಯಾಗದ ಕಾರಣ ಅಂದಿನಿಂದ ಅನೇಕ ನ್ಯಾಯಾಂಗ ನಿಂದನಾ ಅರ್ಜಿಗಳು ದಾಖಲಾಗಿವೆ. ಅರ್ಜಿಗಳು ಈಗ ನಡೆಯುತ್ತಿರುವ ವಿಚಾರಣೆಯ ಭಾಗವೇ ಆಗಿವೆ. ಹೀಗೆ ದಾಖಲಾದ ಅರ್ಜಿಗಳಲ್ಲಿ 2018ರ ನಿರ್ದೇಶಗಳನ್ನು ಪಾಲಿಸಲು ವಿಫಲವಾದ ರಾಜ್ಯಗಳ ವಿರುದ್ಧ, ನ್ಯಾಯಾಂಗ ನಿಂದನೆಯ ಅಡಿ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

ಕಳೆದ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್, ದೇಶದ ಜಾತ್ಯತೀತ ಸ್ವರೂಪವನ್ನು ಕಾಪಾಡುವ ಅಗತ್ಯವಾಗಿದೆ ಎಂದು ಒತ್ತಿ ಹೇಳುತ್ತಾ, ಯಾವುದೇ ಧರ್ಮದ ಜನರು ಮಾಡಿದ ದ್ವೇಷ ಭಾಷಣಗಳ ವಿರುದ್ಧ ಸ್ವಯಂಪ್ರೇರಿತವಾಗಿ (ಸ್ವಯಂ) ಮೊಕದ್ದಮೆಗಳನ್ನು ದಾಖಲಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿತ್ತು ಮತ್ತು ಎಚ್ಚರಿಕೆ ಕೂಡ ನೀಡಿತ್ತು.

ಈ ಸುದ್ದಿಯನ್ನೂ ಓದಿ: Karnataka Politics: ದ್ವೇಷ ಭಾಷಣ; ಬಿಜೆಪಿ ಶಾಸಕರಾದ ಅಶ್ವತ್ಥನಾರಾಯಣ, ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Karnataka High Court: ʼಚಿಲ್ಲರೆ ಅಂಗಡಿಯವರಲ್ಲೂ ಯುಪಿಐ ಇದೆ, ನಿಮ್ಮಲ್ಲೇಕಿಲ್ಲ?ʼ ಬೆಸ್ಕಾಂಗೆ ಹೈಕೋರ್ಟ್‌ ತರಾಟೆ

Karnataka High Court: ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಅಥವಾ ಆನ್‌ಲೈನ್ ಪಾವತಿಯ (online payment) ಸೌಲಭ್ಯವನ್ನು ಗ್ರಾಹಕರಿಗೆ ಏಕೆ ಒದಗಿಸಿಲ್ಲ ಎಂಬ ಬಗ್ಗೆ ಆಗಸ್ಟ್ 9ರೊಳಗೆ ಅಫಿಡವಿಟ್ ಸಲ್ಲಿಸುವಂತೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ನ್ಯಾಯಮೂರ್ತಿ ಎನ್.ಎಸ್ ಸಂಜಯ್ ಗೌಡ ಅವರಿದ್ದ ಏಕಸದಸ್ಯ ಪೀಠ ಈ ನಿರ್ದೇಶನ ಜಾರಿ ಮಾಡಿದೆ.

VISTARANEWS.COM


on

karnataka high court
Koo

ಬೆಂಗಳೂರು: ʼಇಡೀ ಜಗತ್ತು ಯುಪಿಐ (UPI) ಮೂಲಕ ಪಾವತಿಗಳನ್ನು ಸ್ವೀಕರಿಸುತ್ತಿದೆ. ದಿನಸಿ ಅಂಗಡಿಯವರಲ್ಲೂ ಅದು ಇದೆ. ಆದರೆ ನಿಮ್ಮಲ್ಲಿ ಇಲ್ಲ ಎಂಬುದು ವಿಚಿತ್ರವಾದ ಸಂಗತಿʼ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ- BESCOM) ಅನ್ನು ಕರ್ನಾಟಕ ಹೈಕೋರ್ಟ್ (Karnataka High Court) ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.

ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಅಥವಾ ಆನ್‌ಲೈನ್ ಪಾವತಿಯ (online payment) ಸೌಲಭ್ಯವನ್ನು ಗ್ರಾಹಕರಿಗೆ ಏಕೆ ಒದಗಿಸಿಲ್ಲ ಎಂಬ ಬಗ್ಗೆ ಆಗಸ್ಟ್ 9ರೊಳಗೆ ಅಫಿಡವಿಟ್ ಸಲ್ಲಿಸುವಂತೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ನ್ಯಾಯಮೂರ್ತಿ ಎನ್.ಎಸ್ ಸಂಜಯ್ ಗೌಡ ಅವರಿದ್ದ ಏಕಸದಸ್ಯ ಪೀಠ ಈ ನಿರ್ದೇಶನ ಜಾರಿ ಮಾಡಿದೆ.

2003ರ ವಿದ್ಯುತ್ ಕಾಯ್ದೆಯ ಸೆಕ್ಷನ್ 47(5)ರ ಪ್ರಕಾರ ಪೂರ್ವಪಾವತಿ ಮೀಟರ್ ಒದಗಿಸುವಂತೆ ಮತ್ತು ಯುಪಿಐ ಮೋಡ್‌ನಲ್ಲಿ ಪಾವತಿಯನ್ನು ಸ್ವೀಕರಿಸಲು ಬೆಸ್ಕಾಂಗೆ ನಿರ್ದೇಶನ ನೀಡಬೇಕೆಂದು ಕೋರಿ ಹಿರಿಯ ನಾಗರಿಕರಾದ ಸೀತಾಲಕ್ಷ್ಮಿ ಎಂಬವರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ಈ ನಿರ್ದೇಶನ ನೀಡಲಾಗಿದೆ.

ಇಡೀ ಜಗತ್ತು ಯುಪಿಐ ಮೂಲಕ ಪಾವತಿಗಳನ್ನು ಸ್ವೀಕರಿಸುತ್ತಿರುವ ಈ ಯುಗದಲ್ಲಿ ಬೆಸ್ಕಾಂ ಯುಪಿಐ ಮೂಲಕ ಹಣವನ್ನು ಸ್ವೀಕರಿಸಲು ನಿರಾಕರಿಸುತ್ತಿರುವುದು ವಿಚಿತ್ರವಾಗಿದೆ. ಯಾರಾದರೂ ನಿಮಗೆ ಹಣವನ್ನು ಪಾವತಿಸಲು ಬಯಸಿದರೆ, ಅದು ಈಗ ಸ್ವೀಕರಿಸಲ್ಪಟ್ಟ ವಿಧಾನವಾಗಿದ್ದರೂ, ನೀವು ಅದನ್ನು ಅಳವಡಿಸಿಕೊಳ್ಳಬೇಕಿದ್ದರೆ ಯಾರಾದರೂ ನ್ಯಾಯಾಲಯಕ್ಕೆ ಬಂದು ರಿಟ್ ಅರ್ಜಿ ಸಲ್ಲಿಸಬೇಕಾಗುತ್ತದೆ. ಯಾರೋ ನಿಮಗೆ ಹಣವನ್ನು ನೀಡಲು ಬಯಸುತ್ತಾರೆ. ಎಲ್ಲರೂ ಡಿಜಿಟಲ್‌ (Digital) ಆಗಿರಿ ಎಂದು ಸರಕಾರ ಘೋಷಿಸುತ್ತದೆ. ಆದರೆ ನೀವು ಕರೆನ್ಸಿ ನೋಟುಗಳನ್ನು ಸಂಗ್ರಹಿಸುವ ಕಾಲಕ್ಕೆ ಹಿಂತಿರುಗಲು ಬಯಸುತ್ತಿದ್ದೀರಿ ಎಂದು ಹೈಕೋರ್ಟ್‌ ಪೀಠ ಬೆಸ್ಕಾಂನ ಕಿವಿ ಹಿಂಡಿತು.

ಪ್ರತಿಯೊಬ್ಬ ದಿನಸಿ ವ್ಯಾಪಾರಿಯೂ ಈಗ ಅವನ ಮುಂದೆ ಯುಪಿಐ ಸ್ಕ್ಯಾನರ್ ಅನ್ನು ಹೊಂದಿದ್ದಾನೆ. ಆದರೆ ನೀವು ಇನ್ನೂ ಅರ್ಜಿದಾರರಿಗೆ ಕ್ಯುಆರ್ ಕೋಡ್ (‌QR Code) ನೀಡಲು ಮೀನಮೇಷ ಎಣಿಸುತ್ತಿದ್ದೀರಿ. ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ನ್ಯಾಯಾಲಯವೇ ಅತ್ಯಂತ ನಿಧಾನವಾಗಿತ್ತು; ನೀವು ನಮಗಿಂತಲೂ ಹಿಂದುಳಿದಿದ್ದೀರಿ ಎಂದು ಕೂಡ ಪೀಠ ಹೇಳಿದೆ.

ವಿಚಾರಣೆಯ ವೇಳೆ ಬೆಸ್ಕಾಂ ಪರ ವಕೀಲರು, ಬೆಸ್ಕಾಂ ಕೌಂಟರ್‌ಗಳಲ್ಲಿ ಯುಪಿಐ ಪಾವತಿ ಮಾಡಲು ಅವಕಾಶವಿಲ್ಲ. ನಗದು ಪಾವತಿಯನ್ನು ಮಾತ್ರ ಸ್ವೀಕರಿಸಲಾಗುತ್ತದೆ ಎಂದು ತಿಳಿಸಿದರು. ಆದರೆ ಗ್ರಾಹಕರು ಬೆಸ್ಕಾಂ ಅಪ್ಲಿಕೇಶನ್ ಮೂಲಕ ಆನ್‌ಲೈನ್/ಯುಪಿಐ ಪಾವತಿಗಳನ್ನು ಮಾಡಬಹುದು. ಹಿರಿಯ ನಾಗರಿಕರು ಮತ್ತು ವಯಸ್ಸಾದವರು ಕೌಂಟರ್‌ಗೆ ಬರುವ ಅಗತ್ಯವಿಲ್ಲದೆ ಮನೆಯಲ್ಲಿ ಕುಳಿತು ಅಪ್ಲಿಕೇಶನ್‌ನಲ್ಲಿ ಇದನ್ನು ಮಾಡಬಹುದು ಎಂದು ಹೇಳಿದರು.

ಅಕ್ಟೋಬರ್ 25, 2023ರಂದು, ಅರ್ಜಿದಾರರು ಮನೆಬಾಡಿಗೆ ಉದ್ದೇಶಗಳಿಂದ ಉಂಟಾಗುವ ಭಾರೀ ಶುಲ್ಕವನ್ನು ಕಟ್ಟಲು ಬೆಸ್ಕಾಂ ಹೊಸಕೋಟೆ ಶಾಖೆಯ ಕ್ಯಾಶ್ ಕೌಂಟರ್‌ಗೆ ಭೇಟಿ ನೀಡಿದ್ದರು. ಯುಪಿಐ ಮೂಲಕ ಪಾವತಿ ಲಭ್ಯವಿಲ್ಲದ ಕಾರಣ ಕರ್ತವ್ಯದಲ್ಲಿದ್ದ ಅಧಿಕಾರಿಗಳು ಅರ್ಜಿದಾರರಿಗೆ ಡಿಡಿ ಮೂಲಕ ಪಾವತಿಸಲು ಸೂಚಿಸಿದ್ದರು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಶ್ರೀಧರ್ ಪ್ರಭು ಅವರು, ವಯಸ್ಸಾದ ಮಹಿಳೆ ದೈನಂದಿನ ಕೆಲಸಗಳನ್ನು ನಿರ್ವಹಿಸುವಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಡಿಮ್ಯಾಂಡ್ ಡ್ರಾಫ್ಟ್ (ಡಿಡಿ) ಪಡೆಯಲು ಸರದಿಯಲ್ಲಿ ನಿಂತು ಕಷ್ಟಪಟ್ಟಿದ್ದಾರೆ. ನಂತರ ಪಾವತಿ ಮಾಡಿದ್ದಾರೆ. ಹೀಗಾಗಿ ಅವರು ತಮ್ಮ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ಐಡೆಂಟಿಟಿ (ಯುಪಿಐಡಿ) ಅನ್ನು ಒದಗಿಸುವ ಮೂಲಕ ಪ್ರಕ್ರಿಯೆಯನ್ನು ಸುಲಭಗೊಳಿಸುವಂತೆ ಮನವಿ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ವಿದ್ಯುತ್ ಬಿಲ್‌ನಲ್ಲಿರುವ ಹೆಚ್ಚುವರಿ ಭದ್ರತಾ ಠೇವಣಿ ಕುರಿತು ಗೊಂದಲ; ಗ್ರಾಹಕರ ಪ್ರಶ್ನೆಗಳಿಗೆ ಇಲ್ಲಿದೆ ಬೆಸ್ಕಾಂ ಉತ್ತರ

Continue Reading

ದೇಶ

Supreme Court Argument : ಸೆಕ್ಯುರಿಟಿಯನ್ನು ಕರೆಸಿ ಹೊರಹಾಕಿಸುವೆ; ಲಾಯರ್ ವಿರುದ್ಧ ಸುಪ್ರೀಂ ಕೋರ್ಟ್​​ ನ್ಯಾಯಮೂರ್ತಿ ಗರಂ

supreme court argument : ಹೂಡಾ ಅವರು ತಮ್ಮ ವಾದ ಮಾಡುತ್ತಿರುವ ನಡುವೆಯೇ ಮಧ್ಯಪ್ರವೇಶಿಸಿದ ನೆಡುಂಪರಾ ನನಗೂ ಮಂಡಿಸುವುದಕ್ಕೆ ಒಂದು ವಿಷಯವಿದೆ ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, “ಅವರು (ಹೂಡಾ) ವಾದಿಸುತ್ತಿದ್ದಾರೆ. ನೀವು ಅವನಿಗೆ ಅಡ್ಡಿಪಡಿಸಬಾರದು ಎಂದು ಹೇಳಿದರು. ಇದಕ್ಕೆ ಸವಾಲು ಹಾಕಿದ ನೆಡಂಪೆರಾ ಅವರು “ನಾನು ಇಲ್ಲಿ ಹಿರಿಯವ” ಎಂದು ಹೇಳಿದರು.

VISTARANEWS.COM


on

supreme court argument
Koo

ಬೆಂಗಳೂರು: ಸುಪ್ರೀಂ ಕೋರ್ಟ್​​ನಲ್ಲಿ ಜುಲೈ 23 ರಂದು ನೀಟ್-ಯುಜಿ ಕುರಿತ ಅರ್ಜಿಗಳ ವಿಚಾರಣೆಯ ವೇಳೆ (Supreme Court Argument) ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್​​ ಮುಖ್ಯ ನ್ಯಾಯಮೂರ್ತಿ (CJI) ಡಿವೈ ಚಂದ್ರಚೂಡ್ ಅವರು ಹಿರಿಯ ವಕೀಲ ಮ್ಯಾಥ್ಯೂಸ್ ನೆಡುಂಪರಾ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಪ್ರಕರಣದಲ್ಲಿ ಅರ್ಜಿದಾರರಲ್ಲಿ ಒಬ್ಬರನ್ನು ಪ್ರತಿನಿಧಿಸುತ್ತಿದ್ದ ಹಿರಿಯ ವಕೀಲರಾದ ನರೇಂದ್ರ ಹೂಡಾ ಅವರು ತಮ್ಮ ವಾದಗಳನ್ನು ಮಂಡಿಸುತ್ತಿದ್ದಾಗ ನೆಡುಂಪರಾ ಮಧ್ಯ ಪ್ರವೇಶಿಸಿದ್ದಕ್ಕೆ ಅವರು ಸಿಟ್ಟಾದರು. ಅಲ್ಲದೆ, ಭದ್ರತಾ ಸಿಬ್ಬಂದಿಯನ್ನು ಕರೆದು ಕೋರ್ಟ್​ನಿಂದ ಹೊರಕ್ಕೆ ಹಾಕುವೆ ಎಂದು ಎಚ್ಚರಿಕೆ ನೀಡಿದರು.

ಹೂಡಾ ಅವರು ತಮ್ಮ ವಾದ ಮಾಡುತ್ತಿರುವ ನಡುವೆಯೇ ಮಧ್ಯಪ್ರವೇಶಿಸಿದ ನೆಡುಂಪರಾ ನನಗೂ ಮಂಡಿಸುವುದಕ್ಕೆ ಒಂದು ವಿಷಯವಿದೆ ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, “ಅವರು (ಹೂಡಾ) ವಾದಿಸುತ್ತಿದ್ದಾರೆ. ನೀವು ಅವನಿಗೆ ಅಡ್ಡಿಪಡಿಸಬಾರದು ಎಂದು ಹೇಳಿದರು. ಇದಕ್ಕೆ ಸವಾಲು ಹಾಕಿದ ನೆಡಂಪೆರಾ ಅವರು “ನಾನು ಇಲ್ಲಿ ಹಿರಿಯವ” ಎಂದು ಹೇಳಿದರು. ಅವರ ಮಾತು ಸಿಜೆಐ ಅವರನ್ನು ಕೆರಳಿಸಿತು. ಅವರು ನೆಡುಂಪರಾಗೆ ತಕ್ಷಣವೇ ಎಚ್ಚರಿಕೆ ನೀಡಿದರು.

ನಾನು ನಿಮಗೆ ಎಚ್ಚರಿಕೆ ಕೊಡುತ್ತಿದ್ದೇನೆ. ನೀವು ಕೋರ್ಟ್​ನ ಗ್ಯಾಲರಿ ಜತೆ ಮಾತನಾಡುತ್ತಿಲ್ಲ. ನೀವು ನನ್ನ ಮಾತನ್ನು ಕೇಳಬೇಕು. ನಾನು ಈ ನ್ಯಾಯಾಲಯದ ಉಸ್ತುವಾರಿ. ತಕ್ಷಣವೇ ಸೆಕ್ಯೂರಿಟಿಯನ್ನು ಕರೆದು ನಿಮ್ಮ ಹೊರ ಹಾಕಬೇಕಾಗುತ್ತದೆ ಎಂದು ಹೇಳಿದರು. ಈ ವೇಳೆ ನೆಡುಂಪರಾ, ಇದನ್ನು ನೀವು ಹೇಳುವ ಅಗತ್ಯವಿಲ್ಲ ಹೇಳಿ ಹೊರಡಲು ಅನುವಾದರು.

ಈ ವೇಳೆ ಮುಖ್ಯ ನ್ಯಾಯಮೂರ್ತಿ, ನೀವು ಅದನ್ನು ಹೇಳಬೇಕಾಗಿಲ್ಲ. ನೀವಿನ್ನು ಹೋಗಬಹುದು. ನಾನು ಕಳೆದ 24 ವರ್ಷಗಳಿಂದ ನ್ಯಾಯಾಂಗ ವ್ಯವಸ್ಥೆಯನ್ನು ನೋಡಿದ್ದೇನೆ. ಈ ನ್ಯಾಯಾಲಯದಲ್ಲಿ ವಕೀಲರ ಕಾರ್ಯವಿಧಾನವನ್ನು ನನಗೆ ನಿರ್ದೇಶಿಸಲು ನಾನು ಅನುಮತಿ ಕೊಡುವುದಿಲ್ಲ ಎಂದು ಹೇಳಿದರು. ಈ ವೇಳೆ ನೆಡುಂಪರಾ ” ಈ ನ್ಯಾಯಾಲಯವನ್ನು 1979 ರಿಂದ ನೋಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: Union Budget 2024 : ಹೂಡಿಕೆಗಳನ್ನು ಉತ್ತೇಜಿಸಲು ‘ಏಂಜಲ್ ಟ್ಯಾಕ್ಸ್’ ರದ್ದು ಮಾಡಿದ ಕೇಂದ್ರ ಸರ್ಕಾರ

ಈ ವೇಳೆ ಮುಖ್ಯ ನ್ಯಾಯಮೂರ್ತಿ ನೆಡುಂಪರಾ ಅವರಿಗೆ. “ದಯವಿಟ್ಟು ಸುಮ್ಮನಿರಿ. ಅಥವಾ ಕುಳಿತುಕೊಳ್ಳಿ. ನೀವು ಹೊರಡಲು ಬಯಸುತ್ತೀರಿ ಎಂದಾದರೆ ಹೋಗಬಹುದು. ಅದು ನಿಮ್ಮ ಆಯ್ಕೆ. ನೀವು ವಿಚಾರಣೆ ಮಧ್ಯಪ್ರವೇಶಿಸಬೇಕಾಗಿಲ್ಲ” ಎಂದು ಸಿಜೆಐ ಹೇಳಿದರು.

ನಾನೇ ನಿಮಗೆ ಕ್ಷಮೆ ನೀಡುತ್ತಿದ್ದೇನೆ ಎಂದ ನೆಡುಂಪರಾ

ಅಲ್ಲಿಗೂ ಸುಮ್ಮನಾಗದ ಮ್ಯಾಥ್ಯೂಸ್ ನೆಡುಂಪರಾ, ಬಳಿಕ “ನಾನು ಒಂದು ವಾಕ್ಯವನ್ನು ಹೇಳುವ ಮೂಲಕ ಮುಕ್ತಾಯಗೊಳಿಸುತ್ತೇನೆ. ನನಗೆ ಮಾಡಿದ ಎಲ್ಲಾ ಅವಮಾನಕ್ಕಾಗಿ ನಾನು ನ್ಯಾಯಾಂಗದ ಪ್ರಭುತ್ವವನ್ನು ಕ್ಷಮಿಸುತ್ತಿದ್ದೇನೆ. ಏಕೆಂದರೆ ಅವರು ಏನು ಮಾಡುತ್ತಿದ್ದಾರೆಂದು ನಿಮಗೆ ತಿಳಿದಿಲ್ಲ. ನನ್ನ ಮನಸ್ಸಿನಲ್ಲಿ ಏನೂ ಇಲ್ಲ, ಪ್ರಭುತ್ವದ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಹೇಳಿ ಹೊರಟರು.

ವಿಚಾರಣೆಯಲ್ಲಿ ಎನ್​ಟಿಎಯನ್ನು ಪ್ರತಿನಿಧಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನೆಡುಂಪರಾ ಅವರ ನಡವಳಿಕೆಯನ್ನು ಅಗೌರವ ಎಂದು ಕರೆದಿದ್ದಾರೆ.

ಶಿಕ್ಷೆಗೆ ಒಳಗಾಗಿದ್ದ ನೆಡುಂಪಾರಾ?

2019ರಲ್ಲಿ, ಸುಪ್ರೀಂ ಕೋರ್ಟ್ ನೆಡುಂಪರಾ ಅವರನ್ನು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಘೋಷಿಸಿ. ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಆ ವೇಳೆ ಅವರು ಆಗಿನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ಅವರ ತಂದೆ ಖ್ಯಾತ ನ್ಯಾಯವಾದಿ ಫಾಲಿ ಎಸ್ ನಾರಿಮನ್ ಅವರ ಹೆಸರನ್ನು ಅನಗತ್ಯವಾಗಿ ಕೋರ್ಟ್​ನಲ್ಲಿ ಉಲ್ಲೇಖಿಸಿದ್ದರು. ಬಳಿಕ ನೆಡುಂಪರಾ ಅವರು ಬೇಷರತ್​​ ಕ್ಷಮೆಯಾಚನೆ ಕೋರಿದ ಬಳಿಕ ಶಿಕ್ಷೆಯನ್ನು ಅಮಾನತುಗೊಳಿಸಿತ್ತು.

Continue Reading

ಪ್ರಮುಖ ಸುದ್ದಿ

Pennar River Dispute: ಪೆನ್ನಾರ್ ನದಿ ನೀರು ಹಂಚಿಕೆ ವಿವಾದ; 8 ವಾರದಲ್ಲಿ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

Pennar River Dispute: ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಯರಗೋಳ ಬಳಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿರುವ ಕೋರ್ಟ್‌, 8 ವಾರಗಳಲ್ಲಿ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

VISTARANEWS.COM


on

Pennar River Dispute
Koo

ಬೆಂಗಳೂರು: ಪೆನ್ನಾರ್ ನದಿ ನೀರು ಹಂಚಿಕೆ ವಿವಾದಕ್ಕೆ (Pennar River Dispute) ಸಂಬಂಧಿಸಿ 8 ವಾರಗಳಲ್ಲಿ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ನೀರು ಹಂಚಿಕೆ ಸಂಬಂಧ ತಮಿಳುನಾಡು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ನ ನ್ಯಾ.ಹಿಮಾ ಕೊಯ್ಲಿ ನೇತೃತ್ವದ ಪೀಠ, ವಾಸ್ತವವಾಗಿ ಏನಾಗಿದೆ ಎಂಬುದನ್ನು ತಿಳಿಸುವಂತೆ ಕೇಂದ್ರ ಜಲಶಕ್ತಿ ಮಂತ್ರಾಲಯಕ್ಕೆ ನಿರ್ದೇಶನ ನೀಡಿದೆ.

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಯರಗೋಳ ಬಳಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿತ್ತು. ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಅಂತಾರಾಜ್ಯ ವಿವಾದವಾಗಿದ್ದರಿಂದ ನ್ಯಾಯಾಧೀಕರಣ ಸ್ಥಾಪನೆಗೆ ಆಗ್ರಹಿಸಿತ್ತು. ಆದರೆ ಮಾತುಕತೆಯಲ್ಲಿ ಇತ್ಯರ್ಥ ಮಾಡಿಕೊಳ್ಳುವ ಇರಾದೆಯನ್ನು ಕರ್ನಾಟಕ ವ್ಯಕ್ತಪಡಿಸಿತ್ತು. ಹಾಗಾಗಿ ವಾಸ್ತವವಾಗಿ ಏನಾಗಿದೆ ಎಂಬುದನ್ನು ತಿಳಿಸಲು 8 ವಾರಗಳಲ್ಲಿ ವರದಿ ನೀಡುವಂತೆ ಕೇಂದ್ರ ಜಲಶಕ್ತಿ ಮಂತ್ರಾಲಯಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

2022ರ ಡಿಸೆಂಬರ್‌ನಲ್ಲಿ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್‌ ನದಿ (ದಕ್ಷಿಣ ಪಿನಾಕಿನಿ) ನೀರು ಬಳಕೆ ವಿವಾದ ಬಗೆಹರಿಸಲು ಮೂರು ತಿಂಗಳೊಳಗೆ ನ್ಯಾಯಾಧಿಕರಣ ರಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಇದರಿಂದಾಗಿ, ಮಾತುಕತೆ ಮೂಲಕ ಜಲವಿವಾದ ಬಗೆಹರಿಸಿಕೊಳ್ಳುವ ಉದ್ದೇಶ ಹೊಂದಿದ್ದ ಕರ್ನಾಟಕಕ್ಕೆ ಹಿನ್ನಡೆಯಾಗಿತ್ತು.

ಏನಿದು ಪ್ರಕರಣ?

ದಕ್ಷಿಣ ಪಿನಾಕಿನಿಯ ಉಪನದಿಯಾದ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಯರಗೋಳ ಗ್ರಾಮದ ಬಳಿ ಅಣೆಕಟ್ಟು ನಿರ್ಮಿಸಲು ಮುಂದಾಗಿದೆ. ಕೋಲಾರ, ಮಾಲೂರು, ಬಂಗಾರಪೇಟೆಯ ಹಲವು ಹಳ್ಳಿಗಳು ಹಾಗೂ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. ಸುಮಾರು 240 ಕೋಟಿ ರೂ. ವೆಚ್ಚದ ಅಣೆಕಟ್ಟು ಯೋಜನೆಗೆ ಕೇಂದ್ರ ಜಲಶಕ್ತಿ ಸಚಿವಾಲಯದ ಅನುಮತಿಯನ್ನೂ ಪಡೆದಿದೆ. ಆದರೆ, ಇದಕ್ಕೆ ತಮಿಳುನಾಡು ಸರ್ಕಾರ ತಕರಾರು ತೆಗೆದಿದ್ದು, ಸುಪ್ರೀಂ ಕೋರ್ಟ್‌ ಮೊರೆಹೋಗಿದೆ.

ತಮಿಳುನಾಡು ತಕರಾರು ಏನು?

ಪೆನ್ನಾರ್‌ ನದಿಯ ನೀರಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವುದು ಅಂತಾರಾಜ್ಯ ಜಲವಿವಾದ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂಬುದು ತಮಿಳುನಾಡಿನ ತಕರಾರಾಗಿದೆ. ಮಾರ್ಕಂಡೇಯ ನದಿಯು ಪೆನ್ನಾರ್‌ನ ಉಪನದಿಯಾದ ಕಾರಣ ಅಣೆಕಟ್ಟು ನಿರ್ಮಿಸಿದರೆ ನದಿ ನೀರಿನ ಹರಿವಿಗೆ ತೊಂದರೆಯಾಗುತ್ತದೆ. ತಮಿಳುನಾಡಿನ ಜನರು ಕೃಷಿ ಹಾಗೂ ಕುಡಿಯಲು ಪೆನ್ನಾರ್‌ ನದಿ ನೀರನ್ನು ಅವಲಂಬಿಸಿದ್ದಾರೆ. ಹಾಗಾಗಿ, ಅಣೆಕಟ್ಟು ನಿರ್ಮಿಸಲು ಅವಕಾಶ ನೀಡಬಾರದು ಎಂದು ತಕರಾರು ತೆಗೆದಿದೆ.

ಇದನ್ನೂ ಓದಿ | Assembly Session: ವಾಲ್ಮೀಕಿ ನಿಗಮ ಅಕ್ರಮ ದಲಿತರಿಗೆ ಮಾಡಿರೋ ಅನ್ಯಾಯ: ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

ಕರ್ನಾಟಕದ ವಾದವೇನು?

ಅಣೆಕಟ್ಟು ನಿರ್ಮಾಣ ಯೋಜನೆ ವೈಜ್ಞಾನಿಕವಾಗಿದ್ದು, ಕೇಂದ್ರ ಜಲಶಕ್ತಿ ಸಚಿವಾಲಯವೇ ಅನುಮತಿ ನೀಡಿದೆ ಎಂದು ಕರ್ನಾಟಕ ವಾದ ಮಂಡಿಸಿದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬುದು ಕರ್ನಾಟಕದ ಉದ್ದೇಶವಾಗಿತ್ತು. ಇದನ್ನು ರಾಜ್ಯ ಸರ್ಕಾರವು ಕೇಂದ್ರಕ್ಕೂ ಮನವರಿಕೆ ಮಾಡಿತ್ತು. ನ್ಯಾಯಾಧಿಕರಣದ ರಚನೆಯು ಬಿಕ್ಕಟ್ಟು ಬಗೆಹರಿಸಲು ಸಮಯ ತೆಗೆದುಕೊಳ್ಳುವುದರಿಂದ ಮಾತುಕತೆಗೆ ಕರ್ನಾಟಕ ಆದ್ಯತೆ ನೀಡಿತ್ತು.

Continue Reading

ಪ್ರಮುಖ ಸುದ್ದಿ

DK Shivakumar: `ಲೋಕಾಯುಕ್ತಕ್ಕೆ ಕೊಟ್ಟ ಮೇಲೆ ಸಿಬಿಐಗೇನು ಕೆಲಸ?’ ಅಕ್ರಮ ಆಸ್ತಿ ಕೇಸ್‌ ಬಗ್ಗೆ ಡಿಕೆ ಶಿವಕುಮಾರ್‌ ಪ್ರಶ್ನೆ

DK Shivakumar: ಸಿಬಿಐ ಎಫ್‌ಐಆರ್‌ ವಜಾ ಮಾಡಬೇಕು ಅಂತ ಕೇಳಿದ್ದೆವು. ಹೈಕೋರ್ಟ್‌ನಲ್ಲಿ ಮಾಡಲು ಆಗುವುದಿಲ್ಲ ಎಂದಿದ್ದರು. ಹೀಗಾಗಿ ಅಪೀಲ್ ಹಾಕಿದ್ದೆ. ಅಲ್ಲೂ ಏನೂ ಮಾಡಲು ಆಗುವುದಿಲ್ಲ ಎಂದು ನಿರ್ಣಯ ಬಂದಿದೆ. ಕೋರ್ಟ್ ಏನು ಹೇಳುತ್ತದೋ ಕೇಳೋಣ. ತನಿಖೆ ನಡೆಯಲಿ ಎಂದು ಡಿಕೆ ಶಿವಕುಮಾರ್‌ ಪ್ರತಿಕ್ರಿಯಿಸಿದರು.

VISTARANEWS.COM


on

Kempambudi lake encroachment cleared soon says DCM DK Shivakumar
Koo

ಬೆಂಗಳೂರು: ಒಂದು ಸಲ ನಮ್ಮ ಸರಕಾರ ಪ್ರಕರಣವನ್ನು ಲೋಕಾಯುಕ್ತಕ್ಕೆ (Lokayukta) ಕೊಟ್ಟ ಮೇಲೆ ಸಿಬಿಐಯವರು ತನಿಖೆ (CBI Probe) ಮಾಡಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್‌ (Supreme Court) ತೀರ್ಮಾನವನ್ನು ಒಪ್ಪಿಕೊಳ್ಳುತ್ತೇನೆ ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DCM DK Shivakumar) ಹೇಳಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಆರಂಭಿಸಿರುವ ತನಿಖೆಯನ್ನು ಕೈಬಿಡುವಂತೆ ಸೂಚಿಸಬೇಕು ಎಂದು ಡಿಕೆ ಶಿವಕುಮಾರ್ (DK Shivakumar) ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯೆ ನೀಡಿದರು.

ಸಿಬಿಐ ಎಫ್‌ಐಆರ್‌ ವಜಾ ಮಾಡಬೇಕು ಅಂತ ಕೇಳಿದ್ದೆವು. ಹೈಕೋರ್ಟ್‌ನಲ್ಲಿ ಮಾಡಲು ಆಗುವುದಿಲ್ಲ ಎಂದಿದ್ದರು. ಹೀಗಾಗಿ ಅಪೀಲ್ ಹಾಕಿದ್ದೆ. ಅಲ್ಲೂ ಏನೂ ಮಾಡಲು ಆಗುವುದಿಲ್ಲ ಎಂದು ನಿರ್ಣಯ ಬಂದಿದೆ. ಕೋರ್ಟ್ ಏನು ಹೇಳುತ್ತದೋ ಕೇಳೋಣ. ತನಿಖೆ ನಡೆಯಲಿ ಎಂದು ಡಿಕೆ ಶಿವಕುಮಾರ್‌ ಪ್ರತಿಕ್ರಿಯಿಸಿದರು.

ಲೋಕಾಯುಕ್ತದವರು ಇನ್ವೆಸ್ಟಿಗೇಶನ್ ಮಾಡುತ್ತಿದ್ದಾರೆ. CBIನವರಿಗೆ ಮಾಡಬೇಡಿ ಅಂತ ಹೇಳಿದರೂ ಮಾಡುತ್ತಿದ್ದಾರೆ. ಏನು ಬೇಕಾದರೂ ಮಾಡಲಿ, ನನ್ನದೇನೂ ತಪ್ಪಿಲ್ಲ. ನಮ್ಮ‌ ಸರ್ಕಾರ ಒಂದು ಸಲ ವಿತ್‌ಡ್ರಾ ಮಾಡಿದ ಮೇಲೆ ಮುಗಿಯಿತು. ನನ್ನ ಆಸ್ತಿ ದಾಖಲೆ ಏನಿದೆ ಕೊಡ್ತೀನಿ ಎಂದು ಡಿಕೆಶಿ ತಿಳಿಸಿದರು. ಕೇಂದ್ರ ಸರ್ಕಾರ ಇದನ್ನು ಉದ್ದೇಶಪೂರ್ವಕ ಮಾಡುತ್ತಿದೆಯಾ ಎಂಬ ಪ್ರಶ್ನೆಗೆ ʼಕೋರ್ಟ್ ಬಗ್ಗೆ ಏನು ಮಾತನಾಡಲೂ ಆಗುವುದಿಲ್ಲ. ಕೋರ್ಟ್ ಹೇಳಿದಂತೆ ಕೇಳಬೇಕುʼ ಎಂದು ಡಿಕೆಶಿ ಉತ್ತರಿಸಿದರು.

ಸಿಬಿಐ ತನಿಖೆ ಕೈಬಿಡಲು ಸುಪ್ರೀಂ ಕೋರ್ಟ್‌ ನಕಾರ

2013ರಿಂದ 2017ರವರೆಗಿನ ಅವಧಿಯಲ್ಲಿ ಡಿಕೆಶಿಯವರು ತಮ್ಮ ಆದಾಯಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸಿದ್ದಾರೆಂದು ಸಿಬಿಐ ಆರೋಪಿಸಿದ್ದು, ಆ ಕುರಿತಂತೆ ಎಫ್ಐಆರ್ ದಾಖಲಿಸಿತ್ತು. ಆ ಪ್ರಕರಣವನ್ನು ಕೈಬಿಡುವಂತೆ ಸಿಬಿಐಗೆ ನಿರ್ದೇಶನ ನೀಡಬೇಕೆಂದು ಕೋರಿ ಡಿಕೆಶಿ ಮನವಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಬಾಲಾ ತ್ರಿವೇದಿ ನೇತೃತ್ವದ ಪೀಠ, ಡಿಕೆ ಶಿವಕುಮಾರ್ ಅವರ ಅರ್ಜಿಯನ್ನು ವಜಾಗಳಿಸಿತು.

ಈ ಹಿಂದಿನ ಸಿದ್ದರಾಮಯ್ಯನವರ ರಾಜ್ಯ ಸರ್ಕಾರದಲ್ಲಿ ಡಿಕೆಶಿಯವರು ಇಂಧನ ಸಚಿವರಾಗಿದ್ದರು. ಆ ಸರ್ಕಾರದ ಅವಧಿಯಲ್ಲಿ 74 ಕೋಟಿ ರೂ.ಗಳಷ್ಟು ದಾಖಲೆರಹಿತ ಆದಾಯವನ್ನು ಡಿಕೆ ಶಿವಕುಮಾರ್ ಅವರು ಗಳಿಸಿದ್ದಾರೆಂದು ಹೇಳಲಾಗಿದೆ. ಅದರಂತೆ, 74.93 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಗಳಿಸಿದ್ದಾರೆಂದು ಸಿಬಿಐ ಆರೋಪಿಸಿತ್ತು. ಆ ಹಿನ್ನೆಲೆಯಲ್ಲಿ ಅವರ ವಿರುದ್ಧ ತನಿಖೆ ನಡೆಸಲು ಅನುಮತಿ ಕೋರಿ 2019ರಲ್ಲಿ ರಾಜ್ಯ ಸರ್ಕಾರಕ್ಕೆ ಸಿಬಿಐ ಅರ್ಜಿ ಸಲ್ಲಿಸಿತ್ತು.

2019ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ಸಿಬಿಐ ಮನವಿಗೆ ಸ್ಪಂದಿಸಿ ತನಿಖೆಗೆ ಅನುಮತಿ ನೀಡಿತ್ತು. ಆನಂತರ ಸಿಬಿಐ, ಡಿಕೆ ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಅದೇ ತನಿಖೆಯನ್ನು ಕೈಬಿಡುವಂತೆ ಡಿಕೆ ಶಿವಕುಮಾರ್ ಅವರು ಹೈಕೋರ್ಟಿನಲ್ಲಿ ಮನವಿ ಸಲ್ಲಿಸಿದ್ದು ಮೊದಲಿಗೆ ಅದು ವಿಭಾಗೀಯ ಪೀಠದಲ್ಲಿ ವಿಚಾರಣೆಯಾಗಿ ಆನಂತರ ಅದೀಗ ವಿಸ್ತ್ರೃತ ಪೀಠಕ್ಕೆ ವರ್ಗಾವಣೆಯಾಗಿದೆ.

ಇದನ್ನೂ ಓದಿ: DK Shivakumar : ಡಿಕೆ ಶಿವಕುಮಾರ್‌ ಟಿಪ್ಪಣಿ ಆಧರಿಸಿ ಮಾಡಿದ ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆಗೆ ಹೈಕೋರ್ಟ್‌ ತಡೆ

Continue Reading
Advertisement
Paris Olympics 2024
ಪ್ರಮುಖ ಸುದ್ದಿ2 mins ago

Paris Olympics 2024 : ಶೂಟಿಂಗ್​ನಲ್ಲಿ ಭಾರತಕ್ಕೆ ಖುಷಿ ಸುದ್ದಿ; ಮಹಿಳೆಯರ 10 ಮೀಟರ್ ಏರ್​ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್​ ಫೈನಲ್​ಗೆ

Paris Olympics 2024
ಫ್ಯಾಷನ್5 mins ago

Paris Olympics 2024: ಭಾರತೀಯ ಅಥ್ಲೀಟ್‌ಗಳ ಡ್ರೆಸ್‌ ಕೋಡ್‌ ವಿನ್ಯಾಸಕ್ಕೆ ಜನರ ಮಿಶ್ರ ಪ್ರತಿಕ್ರಿಯೆ

Vaccin for Hiv
ಆರೋಗ್ಯ38 mins ago

Vaccine for HIV: ವರ್ಷಕ್ಕೆರಡು ಬಾರಿ ಈ ಇಂಜೆಕ್ಷನ್‌ ತೆಗೆದುಕೊಂಡರೆ ಎಚ್‌ಐವಿ ಭಯವೇ ಬೇಡ!

Physical Assault
ದೇಶ46 mins ago

Physical Assault : ಅಶ್ಲೀಲ ವಿಡಿಯೊಗಳನ್ನು ನೋಡಿ 9 ವರ್ಷದ ತಂಗಿಯನ್ನು ಅತ್ಯಾಚಾರ ಮಾಡಿ ಕೊಂದ 13 ವರ್ಷದ ಬಾಲಕ!

Paris Olympics
ಕ್ರೀಡೆ1 hour ago

Paris Olympics: ಕ್ರೀಡಾ ಗ್ರಾಮದಲ್ಲಿ ಭಾರತದ ಅಥ್ಲೀಟ್ಸ್‌ಗೆ ಆಹಾರ ಕೊರತೆ; ರೆಸ್ಟೋರೆಂಟ್​ನಿಂದ ರೋಟಿ, ದಾಲ್‌ ತರಿಸಿದ ಬಾಕ್ಸರ್​

karnataka Rain
ಮಳೆ1 hour ago

Karnataka Rain : ಮಳೆಗೆ ಮನೆ ಮುಳುಗಡೆಯಾದ ಸುದ್ದಿ ಕೇಳಿ ಮನೆ ಯಜಮಾನ ಹೃದಯಾಘಾತದಿಂದ ಸಾವು

Rahul Gandhi
ದೇಶ1 hour ago

Rahul Gandhi: ನೀಟ್‌ನಲ್ಲಿ ‘ಎಷ್ಟು ವೋಟ್‌’ ಪಡೆದಿರಿ ಎಂದು ವಿದ್ಯಾರ್ಥಿಗಳಿಗೆ ಕೇಳಿದ ರಾಹುಲ್‌ ಗಾಂಧಿ; Video ವೈರಲ್

Gautam Gambhir
ಕ್ರೀಡೆ1 hour ago

Gautam Gambhir : ಗೌತಮ್​ ಗಂಭೀರ್​ಗೆ ವಿಶೇಷ ಸಂದೇಶ ಕಳುಹಿಸಿದ ದ್ರಾವಿಡ್​; ಭಾವುಕರಾದ ನೂತನ ಕೋಚ್​!

Kannada New Movie Nava Digantha latest news
ಸಿನಿಮಾ1 hour ago

Kannada New Movie: ನೆರವೇರಿತು ’ನವ ದಿಗಂತ’ ಚಿತ್ರದ ಮುಹೂರ್ತ

DK Shivakumar
ಕರ್ನಾಟಕ2 hours ago

Brand Bengaluru: ‘ಬ್ರ್ಯಾಂಡ್‌ ಬೆಂಗಳೂರು’ ನಿರ್ಮಾಣಕ್ಕೆ ಡಿಕೆಶಿ ಮಾಸ್ಟರ್‌ಪ್ಲಾನ್;‌ ಇಲ್ಲಿದೆ ಸಭೆಯ ವಿವರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

ramanagara news
ರಾಮನಗರ4 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ5 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ23 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

ಟ್ರೆಂಡಿಂಗ್‌