Money Guide: ಆನ್‌ಲೈನ್‌ ಸಾಲದ ವಂಚನೆಯ ಕೂಪಕ್ಕೆ ಬೀಳದಿರಲು ಏನು ಮಾಡಬೇಕು? - Vistara News

ಮನಿ-ಗೈಡ್

Money Guide: ಆನ್‌ಲೈನ್‌ ಸಾಲದ ವಂಚನೆಯ ಕೂಪಕ್ಕೆ ಬೀಳದಿರಲು ಏನು ಮಾಡಬೇಕು?

Money Guide: ಆನ್‌ಲೈನ್‌ ಸಾಲದ ಹೆಸರಿನಲ್ಲಿ ವಂಚನೆಯ ಜಾಲ ಇದೀಗ ಸಕ್ರಿಯವಾಗಿದೆ. ಅದರಿಂದ ಹೇಗೆ ಪಾರಾಗಬಹುದು ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

loan new
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ರಸ್ತುತ ನಮ್ಮ ಕನಸುಗಳನ್ನು ಈಡೇರಿಸಲು ಸಾಲದ ಮೊರೆ ಹೋಗಬೇಕಾದ ಅನಿವಾರ್ಯತೆಗೆ ಸಿಲುಕಿದ್ದೇವೆ. ಮನೆ ನಿರ್ಮಾಣ, ವಾಹನ ಖರೀದಿ, ಕೃಷಿ ಚಟುವಟಿಕೆ ಹೀಗೆ ಮಧ್ಯಮ ವರ್ಗದ ಜನರು ವಿವಿಧ ಕಾರಣಗಳಿಗೆ ಸಾಲದತ್ತ ಮುಖ ಮಾಡುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ವಂಚಕರು ಆನ್‌ಲೈನ್‌ ಲೋನ್‌ ಹೆಸರಿನಲ್ಲಿ ದುಡ್ಡು ದೋಚುತ್ತಾರೆ. ಹಾಗಾದರೆ ಇಂತಹ ಮೋಸದ ಜಾಲದಿಂದ (Loan Scam) ಹೇಗೆ ಪಾರಾಗಬಹುದು ಎನ್ನುವುದರ ವಿವರ ಮನಿಗೈಡ್‌ (Money Guide)ನಲ್ಲಿದೆ.

ನಮ್ಮ ಅನಿವಾರ್ಯತೆಯನ್ನು ದುರುಪಯೋಗಿಸಿಕೊಂಡು ಅಂತಹ ಕಂಪೆನಿಗಳು ದುಡ್ಡು ದೋಚುತ್ತವೆ. ಹೆಚ್ಚಿನ ಮುಂಗಡ ಶುಲ್ಕಗಳು, ಅವಾಸ್ತವಿಕ ಬಡ್ಡಿದರಗಳು ಮತ್ತು ಷರತ್ತುಗಳ ಹೆಸರಿನಲ್ಲಿ ಹಗಲು ದರೋಡೆಗೆ ಇಳಿಯುತ್ತವೆ. ಡಿಜಿಟಲ್ ಪಾವತಿ ಮತ್ತು ಹಣಕಾಸು ಸೇವೆಗಳ ಪ್ಲಾಟ್‌ಫಾರ್ಮ್‌ ಫೋನ್‌ ಪೇ ಇಂತಹ ಸಾಲಗಳಿಂದ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಕೆ ನೀಡಿದೆ.

ಸಾಲದ ಹೆಸರಿನಲ್ಲಿ ಮೋಸ

ಲೋನ್‌ ಸ್ಕ್ಯಾಮ್‌ ಎಂದು ಕರೆಯಲಾಗುವ ಈ ವಂಚನೆಯ ಜಾಲ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ನೋಡೋಣ: ನೀವು ಬಯಸಿದ ಸಾಲವನ್ನು ತ್ವರಿತವಾಗಿ ಮತ್ತು ಸುಲಭವಾಗಿ ಪಡೆಯಬಹುದು ಎಂಬ ವಂಚಕರು ಸುಳ್ಳು ಭರವಸೆ ನೀಡುತ್ತಾರೆ. ಉದಾಹರಣೆಗೆ ನೀವು ಬ್ಯಾಂಕ್‌ನಿಂದ ಸಾಲ ಪಡೆಯಲು ಉತ್ತಮ ಕ್ರೆಡಿಟ್ ಸ್ಕೋರ್ (CIBIL Score) ಹೊಂದಿಲ್ಲದಿದ್ದರೆ ಅಥವಾ ಬಹಳ ಕಡಿಮೆ ಸಮಯದಲ್ಲಿ ದೊಡ್ಡ ಮೊತ್ತದ ಹಣದ ಅಗತ್ಯವಿದ್ದರೆ ಆ ಸಂದರ್ಭವನ್ನು ವಂಚಕರು ಬಳಸಿಕೊಳ್ಳುತ್ತಾರೆ. ಕೆಲವೇ ನಿಮಿಷಗಳಲ್ಲಿ ಸಾಲ ನೀಡುತ್ತೇವೆ ಎಂದು ನಂಬಿಸುತ್ತಾರೆ.

ಈ ಮೋಸದ ಜಾಲ ಮುಖ್ಯವಾಗಿ ಎರಡು ರೀತಿಯಲ್ಲಿ ನಡೆಯುತದೆ. ವಂಚಕರು ಭದ್ರತೆಯಾಗಿ ಒಂದು ನಿರ್ದಿಷ್ಟ ಮೊತ್ತವನ್ನು ಮುಂಗಡವಾಗಿ ಕೇಳುತ್ತಾರೆ. ಅದನ್ನು ಎಂದಿಗೂ ಹಿಂದಿರುಗಿಸಲಾಗುವುದಿಲ್ಲ. ಜತೆಗೆ ಪ್ರೊಸೆಸಿಂಗ್‌ ಶುಲ್ಕ, ವಿಳಂಬ ಶುಲ್ಕ, ಬಡ್ಡಿ ಮತ್ತಿತರ ಹೆಸರಿನಲ್ಲಿ ದೊಡ್ಡ ಮೊತ್ತವನ್ನು ಪಡೆಯುತ್ತಾರೆ. ಭಾರೀ ಮೊತ್ತದ ನಷ್ಟವಾಗುತ್ತದೆ.

ಹೇಗೆ ಸಂಪರ್ಕಿಸುತ್ತಾರೆ?

ವಂಚಕರು ನಿಮ್ಮನ್ನು ಎಸ್ಎಂಎಸ್, ಇಮೇಲ್ ಅಥವಾ ಫೋನ್ ಮೂಲಕ ಸಂಪರ್ಕಿಸುತ್ತಾರೆ. ನಿಮ್ಮ ವಿವರಗಳನ್ನು ಭರ್ತಿ ಮಾಡಲು ಮತ್ತು ತ್ವರಿತ ಲೋನ್ ಅನುಮೋದನೆ ಪಡೆಯಲು ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಲು ಪದೇ ಪದೆ ಒತ್ತಾಯಿಸುತ್ತಾರೆ. ಒಂದು ವೇಳೆ ನೀವು ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿದ್ದೀರಿ ಅಂತಿಟ್ಟುಕೊಳ್ಳೋಣ. ನಿಮ್ಮ ಸಂಪೂರ್ಣ ಸಂಪರ್ಕ ಪಟ್ಟಿ, ಫೋಟೊ ಮತ್ತು ವೀಡಿಯೊಗಳಿಗೆ ಅಕ್ಸೆಸ್‌ ಕೇಳುತ್ತದೆ. ಇನ್ನು ನೀವು ಆಧಾರ್, ಪ್ಯಾನ್, ವಿಳಾಸ ಮತ್ತು ನಿಮಗೆ ಅಗತ್ಯವಿರುವ ಮೊತ್ತದಂತಹ ಮೂಲ ವಿವರಗಳನ್ನು ಭರ್ತಿ ಮಾಡಿದ ಕೂಡಲೇ ನಿಮ್ಮ ಖಾತೆಗೆ ನಗದು ಕ್ರೆಡಿಟ್ ಆಗುತ್ತದೆ.

ಮೊದಲೇ ಹೇಳಿದಂತೆ ಈ ಸಾಲಗಳನ್ನು ಸಂಕೀರ್ಣ ನಿಯಮಗಳು ಮತ್ತು ಷರತ್ತುಗಳನ್ನು ಹೊಂದಿರುತ್ತವೆ. ಅದನ್ನು ಮೊದಲೇ ತಿಳಿಸಲಾಗುವುದಿಲ್ಲ. ಕಡಿಮೆ ಬಡ್ಡಿದರದ ಭರವಸೆಯೊಂದಿಗೆ ಮೋಸಗೊಳಿಸುತ್ತಾರೆ. ನಂತರ ಕಡಿಮೆ ಬಡ್ಡಿದರವು ಸೀಮಿತ ಅವಧಿಗೆ ಮಾತ್ರ ಎಂದು ವರಾತ ಬದಲಾಯಿಸುತ್ತಾರೆ. ಅದರ ನಂತರ ಹೆಚ್ಚಿನ ಬಡ್ಡಿಯನ್ನು ವಿಧಿಸಲಾಗುತ್ತದೆ. ಗಮನಿಸಿ ಇದನ್ನು ಮೊದಲೇ ಉಲ್ಲೇಖಿಸುವುದಿಲ್ಲ.

ಇದನ್ನೂ ಓದಿ: Money Guide: ಆಧಾರ್‌ ಅಪ್‌ಡೇಟ್‌ನಿಂದ ಎಫ್‌ಡಿ ಹೂಡಿಕೆವರೆಗೆ; ತಿಂಗಳಾಂತ್ಯಕ್ಕೆ ಮುಗಿಸಲೇಬೇಕಾದ ಕೆಲಸಗಳಿವು

ಹೊಡೆತದ ಮೇಲೆ ಹೊಡೆತ

ಹೆಚ್ಚಿನ ಬಡ್ಡಿದರಗಳ ಜತೆಗೆ ಸಾಲಗಳನ್ನು ಮರುಪಾವತಿಸದಿರುವುದಕ್ಕೆ ಪ್ರತಿದಿನ ಭಾರೀ ದಂಡವನ್ನು ವಿಧಿಸುತ್ತವೆ. ಅದಕ್ಕೆ ಹೆಚ್ಚಿನ ಪ್ರೊಸೆಸಿಂಗ್‌ ಶುಲ್ಕ ಸೇರಿದಂತೆ ಇತರ ದಂಡಗಳನ್ನು ಸೇರಿಸುತ್ತಾರೆ. ಮಾತ್ರವಲ್ಲ ಈ ಅಪ್ಲಿಕೇಷನ್‌ಗಳು ನಿಮ್ಮ ಫೋನ್‌ನ ಎಲ್ಲ ಮಾಹಿತಿಗಳನ್ನು ಕದ್ದು ಬ್ಲ್ಯಾಕ್‌ ಮೇಲ್‌ ಮಾಡುವ ಸಾಧ್ಯತೆಯೂ ಇದೆ. ಸಾಲ ವಸೂಲಾತಿ ಏಜೆಂಟರು ನಿರಂತರ ಕಿರುಕುಳ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇದೇ ಕಾರಣದಿಂದ ಇತ್ತೀಚೆಗೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು.

ನೀವೇನು ಮಾಡಬೇಕು?

  • ಫೋನ್, ಇಮೇಲ್ ಅಥವಾ ಇತರ ವಿಧಾನಗಳ ಮೂಲಕ ನಿಮ್ಮ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
  • ಸಾಲ ನೀಡುವ ಕಂಪೆನಿಯ ಪೂರ್ವಾಪರ ತಿಳಿದುಕೊಳ್ಳಿ
  • ಯಾವುದೇ ಒಟಿಪಿ ಅಥವಾ ಇತರ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಫೋನ್ ಪೇ, ಪೇಟಿಎಂ ಅಥವಾ ಗೂಗಲ್ ಪೇಯಂತಹ ಪ್ಲಾಟ್ ಫಾರ್ಮ್‌ಗಳು ಅಂತಹ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಎಂದಿಗೂ ಕೇಳುವುದಿಲ್ಲ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಕಡಿಮೆ ಅವಧಿಯಲ್ಲಿ 1 ಕೋಟಿ ರೂ. ಗಳಿಸುವುದು ಹೇಗೆ? ಇಲ್ಲಿದೆ ಹೂಡಿಕೆಯ ಲೆಕ್ಕಾಚಾರ

ಕಡಿಮೆ ಸಮಯದಲ್ಲಿ ಒಂದು ಕೋಟಿ ರೂಪಾಯಿ (Money Guide) ಗಳಿಸುವುದು ಅಸಾಧ್ಯವಲ್ಲ. ಇಲ್ಲಿ ಗಮನಿಸಬೇಕಾದ ಕೆಲವು ಪ್ರಮುಖ ಸಂಗತಿಗಳಿವೆ. ಅವುಗಳಲ್ಲಿ ಮುಖ್ಯವಾಗಿ ಅಗತ್ಯವಿರುವ ಹೂಡಿಕೆಯ ಮೊತ್ತವು ಅವಧಿ (duration) ಮತ್ತು ಹೂಡಿಕೆಯ ಮೇಲಿನ ಆದಾಯದ ಅಂದಾಜು ದರವನ್ನು (estimated rate) ಆಧರಿಸಿ ಗಮನಾರ್ಹವಾಗಿ ಬದಲಾಗುತ್ತದೆ ಎಂಬುದು ಕೂಡ ಗಮನಿಸಬೇಕು. 10, 15, ಮತ್ತು 20 ವರ್ಷಗಳಲ್ಲಿ 1 ಕೋಟಿ ರೂಪಾಯಿಗಳನ್ನು ತಲುಪಲು ಎಷ್ಟು ಹೂಡಿಕೆ ಅಗತ್ಯವಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

VISTARANEWS.COM


on

By

Money Guide
Koo

ಕಡಿಮೆ ವರ್ಷಗಳಲ್ಲಿ ಕೋಟಿ ರೂಪಾಯಿ ಸಂಪಾದಿಸಬೇಕು ಎನ್ನುವ ಕನಸು (financial goal) ಎಲ್ಲರಿಗೂ ಇರುತ್ತದೆ. ಆದರೆ ದಾರಿಯ ಮೂಲ (Money Guide) ಯಾವುದು ಎಂಬುದು ಗೊತ್ತಿರುವುದಿಲ್ಲ. ಹೂಡಿಕೆದಾರರಲ್ಲಿ (Investment) ಹೆಚ್ಚಿನವರು 1 ಕೋಟಿ ರೂಪಾಯಿಗಳ ಆರ್ಥಿಕ ಗುರಿಯನ್ನು ಸಾಧಿಸಬೇಕು ಎಂದುಕೊಳ್ಳುತ್ತಾರೆ. ಇದಕ್ಕಾಗಿ ಅನೇಕ ಹೂಡಿಕೆದಾರರು ತಮ್ಮ ಹೂಡಿಕೆಯಲ್ಲಿ ಸ್ಥಿರತೆಗಾಗಿ ಶ್ರಮಿಸುತ್ತಾರೆ. ಆದರೂ ಬಹುತೇಕ ಸಂದರ್ಭದಲ್ಲಿ ವಿಫಲರಾಗುತ್ತಾರೆ.

ಇಲ್ಲಿ ಗಮನಿಸಬೇಕಾದ ಕೆಲವು ಪ್ರಮುಖ ಸಂಗತಿಗಳಿವೆ. ಅವುಗಳಲ್ಲಿ ಮುಖ್ಯವಾಗಿ ಅಗತ್ಯವಿರುವ ಹೂಡಿಕೆಯ ಮೊತ್ತವು ಅವಧಿ (duration) ಮತ್ತು ಹೂಡಿಕೆಯ ಮೇಲಿನ ಆದಾಯದ ಅಂದಾಜು ದರವನ್ನು (estimated rate) ಆಧರಿಸಿ ಗಮನಾರ್ಹವಾಗಿ ಬದಲಾಗುತ್ತದೆ ಎಂಬುದು ಕೂಡ ಗಮನಿಸಬೇಕು. 10, 15, ಮತ್ತು 20 ವರ್ಷಗಳಲ್ಲಿ 1 ಕೋಟಿ ರೂಪಾಯಿಗಳನ್ನು ತಲುಪಲು ಎಷ್ಟು ಹೂಡಿಕೆ ಅಗತ್ಯವಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

10 ವರ್ಷಗಳಲ್ಲಿ 1 ಕೋಟಿ ರೂ. ಗಳಿಸಿ

ಕಡಿಮೆ ಸಮಯದಲ್ಲಿ ಒಂದು ಕೋಟಿ ರೂಪಾಯಿ ಗಳಿಸುವುದು ಕಷ್ಟವಲ್ಲ. ಇದಕ್ಕಾಗಿ ಹೂಡಿಕೆದಾರರು 10 ವರ್ಷಗಳಲ್ಲಿ 1 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ಮಾಸಿಕ ಆಧಾರದ ಮೇಲೆ ಗಮನಾರ್ಹ ಮೊತ್ತವನ್ನು ಉಳಿಸಬೇಕು. ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಅಥವಾ ಸ್ಟಾಕ್‌ಗಳಲ್ಲಿ ಸಕ್ರಿಯ ಹೂಡಿಕೆ ಮಾಡುವ ಮೂಲಕ ಶೇ. 12ರಷ್ಟು ವಾರ್ಷಿಕ ಆದಾಯವನ್ನು ನಿರೀಕ್ಷಿಸಿದರೆ ತಿಂಗಳ ಹೂಡಿಕೆಯು ಸುಮಾರು 44,640 ರೂ. ಗಳಾಗಿರುತ್ತದೆ.

15 ವರ್ಷಗಳಲ್ಲಿ 1 ಕೋಟಿ ರೂ. ಗಳಿಸಿ

15 ವರ್ಷಗಳವರೆಗೆ ಯೋಜನೆಯು ಹೆಚ್ಚು ಪರಿಣಾಮಕಾರಿಯಾಗಿದೆ. ಶೇ. 12ರ ವಾರ್ಷಿಕ ಆದಾಯವನ್ನು ನಿರೀಕ್ಷಿಸಿದರೆ ಮಾಸಿಕ ಹೂಡಿಕೆಯು ತುಂಬಾ ಚಿಕ್ಕದಾಗಿದೆ. ಪ್ರತಿ ತಿಂಗಳು ಸುಮಾರು 21,020 ರೂ. ಉಳಿತಾಯ ಮಾಡಬೇಕಾಗುತ್ತದೆ. ಇದು ಮುಂಚಿತವಾಗಿ ಪ್ರಾರಂಭಿಸುವುದರ ಪ್ರಯೋಜನಗಳನ್ನು ಎತ್ತಿ ತೋರಿಸುತ್ತದೆ. ಹೂಡಿಕೆಗಳು ಹೆಚ್ಚು ಫಲ ನೀಡಲು ಹೆಚ್ಚಿನ ಸಮಯವನ್ನು ನೀಡುತ್ತದೆ.

20 ವರ್ಷಗಳಲ್ಲಿ 1 ಕೋಟಿ ರೂ. ಗಳಿಸಿ

ಸುದೀರ್ಘ ವರ್ಷದ ಹೂಡಿಕೆಯು ಮಾಸಿಕ ಹೂಡಿಕೆಯ ಅವಶ್ಯಕತೆಯು ಇನ್ನಷ್ಟು ಕಡಿಮೆಯಾಗುತ್ತದೆ. ದೀರ್ಘಾವಧಿಯ ಲಾಭವನ್ನು ಕೊಡುತ್ತದೆ. ಶೇ. 12 ವಾರ್ಷಿಕ ಆದಾಯದಲ್ಲಿ ಹೂಡಿಕೆದಾರರು 1 ಕೋಟಿ ರೂ. ಗುರಿಯನ್ನು ತಲುಪಲು ಪ್ರತಿ ತಿಂಗಳು ಸುಮಾರು 10,880 ರೂ. ಹೂಡಿಕೆ ಮಾಡಬೇಕಾಗುತ್ತದೆ.


ಹೂಡಿಕೆ ಶಿಸ್ತು ಬದ್ಧವಾಗಿರಲಿ

ನಿರ್ದಿಷ್ಟ ಗುರಿಯನ್ನು ತಲುಪಬೇಕಾದರೆ ಇದಕ್ಕಾಗಿ ಶಿಸ್ತುಬದ್ಧ ಹೂಡಿಕೆಯ ಅಗತ್ಯವಿರುತ್ತದೆ ಮತ್ತು ಆದಾಯವನ್ನು ಗರಿಷ್ಠಗೊಳಿಸಲು ಸರಿಯಾದ ಆಯ್ಕೆ ಮಾಡುವುದು ಕೂಡ ಮುಖ್ಯ. ಅದಕ್ಕಾಗಿ ಹೂಡಿಕೆದಾರರು ಮಾರುಕಟ್ಟೆಯ ಅಪಾಯಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಅವರ ಹೂಡಿಕೆಯ ತಂತ್ರವು ಅವರ ಅಪಾಯ ಸಹಿಷ್ಣುತೆ ಮತ್ತು ಹಣಕಾಸಿನ ಗುರಿಗಳೊಂದಿಗೆ ಹೊಂದಿಕೆಯಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಹೂಡಿಕೆ ಪೋರ್ಟ್‌ಫೋಲಿಯೊವನ್ನು ವೈವಿಧ್ಯಗೊಳಿಸುವುದು ಮತ್ತು ನಿಯತಕಾಲಿಕವಾಗಿ ಪರಿಶೀಲಿಸುವುದು ಸಹ ಟ್ರ್ಯಾಕ್‌ನಲ್ಲಿ ಉಳಿಯಲು ನಿರ್ಣಾಯಕವಾಗಿದೆ.

ಇದನ್ನೂ ಓದಿ: Money Guide: ಹಿರಿಯ ನಾಗರಿಕರು ಮಾಸಿಕ 20,000 ರೂ. ಆದಾಯ ಗಳಿಸಲು ಈ ಯೋಜನೆಯಲ್ಲಿ ಹೂಡಿಕೆ ಮಾಡಿ

ಗಮನಿಸಬೇಕಾದ ಅಂಶಗಳು

ಸಂಪತ್ತು ಕ್ರೋಡೀಕರಣಕ್ಕೆ ಸ್ಥಿರವಾದ ಮತ್ತು ಶಿಸ್ತಿನ ಹೂಡಿಕೆಯು ನಿರ್ಣಾಯಕವಾಗಿರುವುದರಿಂದ ಸಾಧ್ಯವಾದಷ್ಟು ಬೇಗ ಹೂಡಿಕೆಯನ್ನು ಪ್ರಾರಂಭಿಸಿ.

ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳಂತಹ ಸೂಕ್ತವಾದ ಹೂಡಿಕೆಯ ವಿಧಾನಗಳನ್ನು ಆಯ್ಕೆ ಮಾಡಿ. ಅದು ಹಣಕಾಸಿನ ಉದ್ದೇಶಗಳನ್ನು ಪೂರೈಸಲು ಅಗತ್ಯವಾದ ಆದಾಯವನ್ನು ನೀಡುತ್ತದೆ.

ಹೆಚ್ಚುವರಿಯಾಗಿ ನಿಯಮಿತವಾಗಿ ಹೂಡಿಕೆಗಳನ್ನು ಪರಿಶೀಲಿಸಬೇಕು ಮತ್ತು ಗುರಿಗಳು ಮತ್ತು ಅಪಾಯ ಸಹಿಷ್ಣುತೆಯೊಂದಿಗೆ ಹೊಂದಾಣಿಕೆಯನ್ನು ಕಾಪಾಡಿಕೊಳ್ಳಲು ಅವುಗಳನ್ನು ಸರಿಹೊಂದಿಸಬೇಕು.

ಇವುಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅನ್ವಯಿಸುವುದರಿಂದ ಹೂಡಿಕೆದಾರರು ತಮ್ಮ ಆಯ್ಕೆ ಮಾಡಿದ ಕಾಲಮಿತಿಯೊಳಗೆ 1 ಕೋಟಿ ರೂ. ಅನ್ನು ಸಂಗ್ರಹಿಸುವುದು ಕಷ್ಟವಾಗುವುದಿಲ್ಲ.

Continue Reading

ಮನಿ-ಗೈಡ್

Money Guide: ನಿಮ್ಮ ಎಲ್‌ಐಸಿ ಪಾಲಿಸಿ ಲ್ಯಾಪ್ಸ್‌ ಆಗಿದೆಯಾ? ನವೀಕರಿಸಲು ಹೀಗೆ ಮಾಡಿ

Money Guide: ಭಾರತದ ಅತೀ ದೊಡ್ಡ ವಿಮಾ ಕಂಪನಿ ಎನಿಸಿಕೊಂಡಿರುವ ಭಾರತೀಯ ಜೀವ ವಿಮಾ ನಿಗಮದಲ್ಲಿ ನೀವು ಪಾಲಿಸಿ ಹೊಂದಿದ್ದೀರಾ? ಅನಿವಾರ್ಯ ಕಾರಣದಿಂದ ಪಾಲಿಸಿಯ ಕಂತು ಕಟ್ಟದೆ ಅದು ಮಧ್ಯದಲ್ಲೇ ಲ್ಯಾಪ್ಸ್‌ ಆಗಿದ್ದರೆ ಅದನ್ನು ಹೇಗೆ ನವೀಕರಿಸಬಹುದು ಎನ್ನುವ ವಿವರ ಇಂದಿನ ಮನಿಗೈಡ್‌ನಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಪ್ರತಿಯೊಬ್ಬರೂ ವಿಮೆ (Insurance) ಮಾಡಿಸಬೇಕು ಎನ್ನುತ್ತಾರೆ ಆರ್ಥಿಕ ತಜ್ಞರು. ಅದರಲ್ಲಿಯೂ ಅನಿಶ್ಚತೆಯಿಂದ ಕೂಡಿದ ಈ ಆಧುನಿಕ ಕಾಲಘಟ್ಟದಲ್ಲಿ ವಿಮೆ ಮಾಡಿಸುವುದು ಪ್ರತಿಯೊಬ್ಬರಿಗೂ ಅನಿವಾರ್ಯ ಎನಿಸಿಕೊಂಡಿದೆ. ಹೀಗಾಗಿ ಇಂದು ಅನೇಕ ಇನ್ಶೂರೆನ್ಸ್‌ ಕಂಪನಿಗಳು ಹುಟ್ಟಿಕೊಂಡಿವೆ. ಅದರಲ್ಲಿಯೂ ಭಾರತದ ಅತೀ ದೊಡ್ಡ ವಿಮಾ ಕಂಪನಿ ಎನಿಸಿಕೊಂಡಿರುವ ಭಾರತೀಯ ಜೀವ ವಿಮಾ ನಿಗಮ (Life Insurance Corporation of India-LIC) ವಿವಿಧ ಕೊಡುಗೆಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತದೆ. ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾದ ಕಾರಣ ಬಹುತೇಕರ ಮೊದಲ ಆಯ್ಕೆ ಎಲ್‌ಐಸಿಯೇ ಆಗಿರುತ್ತದೆ. ನೀವು ಎಲ್‌ಐಸಿ ಗ್ರಾಹಕರಾಗಿದ್ದು, ಅನಿವಾರ್ಯ ಕಾರಣದಿಂದ ಪಾಲಿಸಿಯ ಕಂತು ಕಟ್ಟದೆ ಅದು ಮಧ್ಯದಲ್ಲೇ ಲ್ಯಾಪ್ಸ್‌ ಆಗಿದ್ದರೆ ಅದನ್ನು ಹೇಗೆ ನವೀಕರಿಸಬಹುದು ಎನ್ನುವ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಹೇಗೆ ಲ್ಯಾಪ್ಸ್‌ ಆಗುತ್ತದೆ?

ಎಲ್‌ಐಸಿ ಪಾಲಿಸಿ ಹೇಗೆ ಲ್ಯಾಪ್ಸ್‌ ಆಗುತ್ತದೆ ಎನ್ನುವುದನ್ನು ಮೊದಲು ನೋಡೋಣ. ಸತತವಾಗಿ ಮೂರು ಪ್ರೀಮಿಯಂಗಳನ್ನು ಪಾವತಿಸದಿದ್ದ ಸಂದರ್ಭದಲ್ಲಿ ನಿಮ್ಮ ಪಾಲಿಸಿ ಲ್ಯಾಪ್ಸ್ ಆಗುತ್ತದೆ. ಸಾಮಾನ್ಯವಾಗಿ ಪಾಲಿಸಿದಾರರಿಗೆ 15 ಮತ್ತು 30 ದಿನಗಳ ನಡುವಿನ ಗ್ರೇಸ್‌ ಅವಧಿಯನ್ನು ನೀಡಲಾಗಿರುತ್ತದೆ. ಗ್ರೇಸ್‌ ಅವಧಿಯಲ್ಲಿಯೂ ನೀವು ಪ್ರೀಮಿಯಂ ಪಾವತಿಸಲು ವಿಫಲರಾದಾಗ ಲ್ಯಾಪ್ಸ್‌ ಮಾಡಲಾಗುತ್ತದೆ. ಒಂದುವೇಳೆ ಪಾಲಿಸಿ ಲ್ಯಾಪ್‌ ಆದರೆ ಯಾವ ಅನುಕೂಲವೂ ಲಭಿಸುವುದಿಲ್ಲ. ಅನಾರೋಗ್ಯ ಅಥವಾ ಅಂಗವೈಕಲ್ಯದ ಕಾರಣದಿಂದ ಪ್ರೀಮಿಯಂ ಪಾವತಿಸಲು ಸಾಧ್ಯವಾಗದಿದ್ದರೆ ಪಾಲಿಸಿ ಲ್ಯಾಪ್ಸ್ ಆಗುವುದಿಲ್ಲ. ಆದರೆ ಈ ಬಗ್ಗೆ ನೀವು ಎಲ್ಐಸಿಗೆ ವೈದ್ಯರ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ.

ನವೀಕರಣ / ಪುನಶ್ಚೇತನ ಹೇಗೆ?

ಲ್ಯಾಪ್ಸ್ ಆದ ಪಾಲಿಸಿಗಳನ್ನು ನವೀಕರಿಸಲು ನೀವು ಮೊದಲ ಬಾರಿಗೆ ಪ್ರೀಮಿಯಂ ಮಿಸ್ ಮಾಡಿದ ದಿನಾಂಕದಿಂದ 2 ವರ್ಷಗಳವರೆಗೆ ಅವಕಾಶವಿದೆ. ಈ ಅವಧಿಯಲ್ಲಿ ನೀವು ಬಡ್ಡಿಯನ್ನು ಪಾವತಿಸಿ ನವೀಕರಿಸಬಹುದು. ಹೇಗೆ ನವೀಕರಿಸಬಹುದು ಎನ್ನುವುದರ ಹಂತ ಹಂತದ ಮಾಹಿತಿ ಇಲ್ಲಿದೆ.

  • ಎಲ್ಐಸಿಯನ್ನು ಸಂಪರ್ಕಿಸಿ: ಕಸ್ಟಮರ್ ಕೇರ್ ಸಂಖ್ಯೆ, ಇ-ಮೇಲ್ ಮೂಲಕ ಎಲ್‌ಐಸಿಯನ್ನು ಸಂಪರ್ಕಿಸಿ. ಇಲ್ಲದಿದ್ದರೆ ನಿಮ್ಮ ಸಮೀಪದ ಎಲ್ಐಸಿ ಶಾಖೆಗೆ ಭೇಟಿ ನೀಡಿ.
  • ಪುನಶ್ಚೇತನ ಅರ್ಜಿ (Revival form) ಸಲ್ಲಿಸಿ: ಲ್ಯಾಪ್ಸ್ ಆದ ಪಾಲಿಸಿಯನ್ನು ಮತ್ತೆ ಸಕ್ರಿಯಗೊಳಿಸಲು ಪುನಶ್ಚೇತನ ಅರ್ಜಿ (Revival form) ನಮೂನೆಯನ್ನು ಭರ್ತಿಗೊಳಿಸಿ ಎಲ್ಐಸಿಗೆ ಸಲ್ಲಿಸಿ.
  • ಬಾಕಿ ಪ್ರೀಮಿಯಂ ಮತ್ತು ಬಡ್ಡಿಯನ್ನು ಪಾವತಿಸಿ: ನೀವು ಮಿಸ್‌ ಮಾಡಿದ ಎಲ್ಲ ಪ್ರೀಮಿಯಂಗಳನ್ನು ಮತ್ತು ಆ ಪ್ರೀಮಿಯಂಗಳ ಮೇಲಿನ ಬಡ್ಡಿಯನ್ನು ಪಾವತಿಸಿ.
  • ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿ: ದೀರ್ಘ ಸಮಯದಿಂದ ನಿಮ್ಮ ಎಲ್ಐಸಿ ಪಾಲಿಸಿ ಲ್ಯಾಪ್ಸ್ ಆಗಿದ್ದರೆ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸುವುದು ಅಗತ್ಯ.
  • ಮನವಿ ಪರಿಶೀಲನೆ: ನೀವು ಸಲ್ಲಿಸಿರುವ ಎಲ್ಲ ದಾಖಲೆಗಳು ಹಾಗೂ ಪಾವತಿಗಳನ್ನು ಎಲ್‌ಐಸಿ ಪರಿಶೀಲಿಸುತ್ತದೆ. ಒಂದು ವೇಳೆ ನಿಮ್ಮ ಮನವಿ ಅನುಮೋದನೆಗೊಂಡರೆ ಎಲ್ಐಸಿ ನಿಮ್ಮ ಪಾಲಿಸಿಯನ್ನು ಪುನಶ್ಚೇತನಗೊಳಿಸಿ, ಹೊಸ ಪಾಲಿಸಿ ದಾಖಲೆಯನ್ನು ನೀಡುತ್ತದೆ.
  • ಗಮನಿಸಿ ಪಾಲಿಸಿಯ ನವೀಕರಣ ಉದ್ದೇಶಕ್ಕಾಗಿ ಅಗತ್ಯವಿರುವ ವೈದ್ಯಕೀಯ ವರದಿಗಳು ಹಾಗೂ ವಿಶೇಷ ರಿಪೋರ್ಟ್ಸ್‌ಗಳ ವೆಚ್ಚವನ್ನು ವಿಮಾದಾರರೇ ಭರಿಸಬೇಕಾಗುತ್ತದೆ.

ನಿಮ್ಮ ಪಾಲಿಸಿಯನ್ನು ಪುನರುಜ್ಜೀವನಗೊಳಿಸಿದ ನಂತರ ನಿಯಮಿತವಾಗಿ ನಿಮ್ಮ ಪ್ರೀಮಿಯಂಗಳನ್ನು ಪಾವತಿಸುವುದನ್ನು ಮರೆಯಬೇಡಿ.

ವ್ಯಾಟ್ಸ್‌ಆ್ಯಪ್‌ ಮೂಲಕ ಎಲ್‌ಐಸಿ ಸೇವೆ

ಈಗ ಎಲ್‌ಐಸಿಯ ಕೆಲವು ಸೇವೆ ವ್ಯಾಟ್ಸ್‌ಆ್ಯಪ್‌ನಲ್ಲಿಯೂ ಲಭ್ಯ. ಅದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ. Hi ಎಂದು ವ್ಯಾಟ್ಸ್‌ಆ್ಯಪ್‌ನಲ್ಲಿ ಟೈಪ್‌ ಮಾಡಿ 8976862090 ನಂಬರ್‌ಗೆ ಮೆಸೇಜ್‌ ಕಳಿಸಿ. ಆಗ 11 ಆಯ್ಕೆಗಳನ್ನು ನಿಮ್ಮ ಮುಂದಿರುತ್ತದೆ. ಉದಾಹರಣೆಗೆ ಚಾಟ್‌ ಬಾಕ್ಸ್‌ನಲ್ಲಿ ಆಪ್ಷನ್‌ ನಂಬರ್‌ ನಮೂದಿಸಿ. ಉದಾಹರಣೆಗೆ 1 ಎಂದು ಟೈಪ್‌ ಮಾಡಿದರೆ ನಿಮ್ಮ ಮುಂದಿನ ಎಲ್‌ಐಸಿ ಪ್ರೀಮಿಯಂ ಕಟ್ಟುವ ದಿನಾಂಕ ತಿಳಿಯಬಹುದು. ಎಷ್ಟು ಮೊತ್ತ ಎಂಬುದನ್ನೂ ತಿಳಿದುಕೊಳ್ಳಬಹುದು.

ಇದನ್ನೂ ಓದಿ: Retirement Planning: ನಿವೃತ್ತಿ ಬಳಿಕ 1 ಲಕ್ಷ ರೂ. ಪಿಂಚಣಿ ಗಳಿಸೋದು ಹೇಗೆ? ಸುಲಭ ಯೋಜನೆಯ ಮಾಹಿತಿ ಇಲ್ಲಿದೆ

Continue Reading

ಮನಿ-ಗೈಡ್

Money Guide: ಹಿರಿಯ ನಾಗರಿಕರು ಮಾಸಿಕ 20,000 ರೂ. ಆದಾಯ ಗಳಿಸಲು ಈ ಯೋಜನೆಯಲ್ಲಿ ಹೂಡಿಕೆ ಮಾಡಿ

Money Guide: 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್‌ ಸ್ಕೀಮ್‌ ಅತ್ಯತ್ತಮ ಹೂಡಿಕೆ ಯೋಜನೆ ಎನಿಸಿಕೊಂಡಿದೆ. ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್‌ ಸ್ಕೀಮ್‌ ವಿಶೇಷವಾಗಿ ಹಿರಿಯ ನಾಗರಿಕರಿಗೆಂದೇ ರೂಪಿಸಲಾಗಿದೆ. ಇತ್ತೀಚೆಗೆ ಬಡ್ಡಿ ದರವೂ ಏರಿಕೆಯಾಗಿದೆ. ಸರ್ಕಾರಿ ಬೆಂಬಲಿತ ಯೋಜನೆ ಇದಾಗಿರುವುದರಿಂದ ಹೂಡಿಕೆ ಮಾಡುವುದರಿಂದ ಅಪಾಯವೂ ಕಡಿಮೆ. ಒಟ್ಟಿನಲ್ಲಿ ಸುರಕ್ಷಿತ ಹೂಡಿಕೆಗೆ ಆದ್ಯತೆ ನೀಡುವವರಿಗೆ ಇದು ಉತ್ತಮ ಆಯ್ಕೆ.

VISTARANEWS.COM


on

Money Guide
Koo

ಬೆಂಗಳೂರು: ನಿವೃತ್ತಿಯ ನಂತರ ಹಾಯಾಗಿ, ಯಾವುದೇ ಚಿಂತೆ ಇಲ್ಲದೆ ಜೀವನ ಕಳೆಯಬೇಕು ಎನ್ನುವುದು ಬಹುತೇಕರ ಕನಸು. ಈ ರೀತಿಯ ನೆಮ್ಮದಿಯ ಜೀವನಕ್ಕೆ ಆರ್ಥಿಕವಾಗಿ ಸ್ವಾವಲಂಬಿಯಾಗಿರುವುದು ಮುಖ್ಯ. ಮಾಸಿಕ ಪಿಂಚಣಿ ಇಲ್ಲದಿದ್ದರೂ ಚಿಂತೆ ಬೇಡ. ಈ ವಿಶೇಷ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ನಿರ್ದಿಷ್ಟ ಆದಾಯ ಗಳಿಬಹುದು. ಆ ಯೋಜನೆಯೇ ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್‌ ಸ್ಕೀಮ್‌ (Senior Citizens Savings Scheme-SCSS). 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಇದು ಉತ್ತಮ ಹೂಡಿಕೆಯ ಆಯ್ಕೆ. ಈ ಬಗ್ಗೆ ವಿವರ ಮನಿಗೈಡ್‌ (Money Guide)ನಲ್ಲಿದೆ.

ಏನಿದು ಯೋಜನೆ?

ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್‌ ಸ್ಕೀಮ್‌ ವಿಶೇಷವಾಗಿ ಹಿರಿಯ ನಾಗರಿಕರಿಗೆಂದೇ ರೂಪಿಸಲಾಗಿದೆ. ಇತ್ತೀಚೆಗೆ ಬಡ್ಡಿ ದರವೂ ಏರಿಕೆಯಾಗಿದೆ. ಈ ಯೋಜನೆಯಲ್ಲಿ 50,000 ರೂ. ತನಕದ ಬಡ್ಡಿ ಆದಾಯ ತೆರಿಗೆ ಮುಕ್ತ. ಪಿಪಿಎಫ್‌ಗಿಂತ ಹೆಚ್ಚಿನ ಆದಾಯವನ್ನು ನೀಡುತ್ತದೆ. ಹೀಗಿದ್ದರೂ ಇದರಲ್ಲಿ ವೈಯಕ್ತಿಕವಾಗಿ ಗರಿಷ್ಠ 15 ಲಕ್ಷ ರೂ. ಹೂಡಿಕೆ ಮಾಡಬಹುದು. ಈ ಯೋಜನೆಯು ಐದು ವರ್ಷಗಳ ಅವಧಿಯನ್ನು ಹೊಂದಿದೆ. ಇನ್ನೂ ಮೂರು ವರ್ಷಗಳವರೆಗೆ ವಿಸ್ತರಿಸಬಹುದು. ಎಸ್‌ಸಿಎಸ್‌ಎಸ್‌ ಯೋಜನೆಯಲ್ಲಿ ಸರ್ಕಾರ ಇತ್ತೀಚೆಗೆ ಹಲವು ಬದಲಾವಣೆಗಳನ್ನು ತಂದಿದೆ. ಒಬ್ಬ ವ್ಯಕ್ತಿಯು ನಿವೃತ್ತಿ ಹೊಂದಿದ ದಿನಾಂಕದಿಂದ ಮೂರು ತಿಂಗಳೊಳಗೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ ಖಾತೆಯನ್ನು ತೆರೆಯಬಹುದು. ಅಲ್ಲದೆ ಹೊಸ ಅಧಿಸೂಚನೆಯು, ಸರ್ಕಾರಿ ಉದ್ಯೋಗಿಯ ಸಂಗಾತಿಯೂ ಯೋಜನೆಯಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. 

ಮೊದಲೇ ಹೇಳಿದಂತೆ ಈ ಯೋಜನೆಯನ್ನು ಹಿರಿಯ ನಾಗರಿಕರಿಗೆಂದೇ ರೂಪಿಸಲಾಗಿದೆ. ಸರ್ಕಾರಿ ಬೆಂಬಲಿತ ಯೋಜನೆ ಇದಾಗಿರುವುದರಿಂದ ಹೂಡಿಕೆ ಮಾಡುವುದರಿಂದ ಅಪಾಯವೂ ಕಡಿಮೆ. ಒಟ್ಟಿನಲ್ಲಿ ಸುರಕ್ಷಿತ ಹೂಡಿಕೆಗೆ ಆದ್ಯತೆ ನೀಡುವವರಿಗೆ ಇದು ಉತ್ತಮ ಆಯ್ಕೆ ಎನಿಸಿಕೊಂಡಿದೆ.

ಯಾರೆಲ್ಲ ಹೂಡಿಕೆ ಮಾಡಬಹುದು?

ಸರ್ಕಾರದಿಂದಲೇ ನಡೆಸಲಾಗುವ ಸಣ್ಣ ಉಳಿತಾಯ ಯೋಜನೆ ಇದಾಗಿದ್ದು, 60 ವರ್ಷ ಮೇಲ್ಪಟ್ಟು ವಯಸ್ಸಿನವರು ಅಥವಾ ವಿಆರ್‌ಎಸ್‌ ನಿವೃತ್ತಿ ಪಡೆದ 55 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರು. ವೈಯಕ್ತಿಕವಾಗಿ ಅಥವಾ ಸಂಗಾತಿಯೊಂದಿಗೆ ಜಂಟಿಯಾಗಿ ಖಾತೆಯನ್ನು ತೆರೆಯಬಹುದು.

ಬಡ್ಡಿ ದರ

ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಎಸ್‌ಸಿಎಸ್‌ಎಸ್‌ ಖಾತೆ ತೆರೆಯಬಹುದು. ಸದ್ಯ ಈ ಯೋಜನೆಗೆ ವಾರ್ಷಿಕ ಶೇ. 8.2ರಷ್ಟು ಬಡ್ಡಿ ಇದೆ. ಕನಿಷ್ಠ ಹೂಡಿಕೆ 1,000 ರೂ. ಮತ್ತು ಗರಿಷ್ಠ ಹೂಡಿಕೆ 30 ಲಕ್ಷ ರೂ. ವಿಶೇಷ ಎಂದರೆ ತೆರಿಗೆ ಸೆಕ್ಷನ್‌ 80 ಸಿ ಅಡಿಯಲ್ಲಿ ಟ್ಯಾಕ್ಸ್‌ ಡಿಡಕ್ಷನ್‌ಗೂ ಅವಕಾಶ ಇದೆ.

ಮಾಸಿಕ 20 ಸಾವಿರ ರೂ. ಪಡೆಯುವುದು ಹೇಗೆ?

ಈ ಯೋಜನೆ ಮೂಲಕ ಮಾಸಿಕ 20 ಸಾವಿರ ರೂ. ಪಡೆಯುವುದು ಹೇಗೆ ಎನ್ನುವುದನ್ನು ಉದಾಹರಣೆ ಮೂಲಕ ನೋಡೋಣ. ಸದ್ಯ ಎಸ್‌ಸಿಎಸ್‌ಎಸ್‌ ಯೋಜನೆಗೆ 8.2 ಬಡ್ಡಿ ಲಭಿಸುವ ಹಿನ್ನೆಲೆಯಲ್ಲಿ ನೀವು 30 ಲಕ್ಷ ರೂ. ಹೂಡಿಕೆ ಮಾಡಿದರೆ ಪ್ರತಿ ವರ್ಷ 2.46 ಲಕ್ಷ ರೂ. ಬಡ್ಡಿ ಲಭಿಸುತ್ತದೆ. ಅಂದರೆ ಪ್ರತಿ ತಿಂಗಳು 20,000 ರೂ. ಸಿಕ್ಕಂತಾಗುತ್ತದೆ. ಒಟ್ಟಿನಲ್ಲಿ ಇದು ಹಿರಿಯ ನಾಗರಿಕರಿಗೆ ಉತತ್ಮ ಯೋಜನೆ ಎನಿಸಿಕೊಂಡಿದೆ.

ಇದನ್ನೂ ಓದಿ: Money Guide: ನಿವೃತ್ತಿಯ ನಂತರವೂ ಆರ್ಥಿಕವಾಗಿ ಸದೃಢರಾಗಬೇಕೆ?; ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ

Continue Reading

ಮನಿ-ಗೈಡ್

Retirement Planning: ನಿವೃತ್ತಿ ಬಳಿಕ 1 ಲಕ್ಷ ರೂ. ಪಿಂಚಣಿ ಗಳಿಸೋದು ಹೇಗೆ? ಸುಲಭ ಯೋಜನೆಯ ಮಾಹಿತಿ ಇಲ್ಲಿದೆ

ವ್ಯವಸ್ಥಿತ ಹೂಡಿಕೆ ಯೋಜನೆ ಮೂಲಕ ಮ್ಯೂಚುಯಲ್ ಫಂಡ್ ಹೂಡಿಕೆಯು ಭಾರತದಲ್ಲಿ ಏಕರೂಪದ ಹೂಡಿಕೆಗಿಂತ ಹೆಚ್ಚು ಜನಪ್ರಿಯವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಇದನ್ನು ಸಣ್ಣ ಮಾಸಿಕ ಹೂಡಿಕೆಯೊಂದಿಗೆ ಪ್ರಾರಂಭಿಸಬಹುದು. ಒಂದು ವೇಳೆ ನಿವೃತ್ತಿ ಬಗ್ಗೆ ಯೋಜನೆ (Retirement Planning) ರೂಪಿಸುತ್ತಿದ್ದರೆ ಎಸ್ ಐಪಿ ಬಗ್ಗೆ ತಿಳಿದುಕೊಂಡು ಹೂಡಿಕೆ ಮಾಡಿದರೆ ನಿವೃತ್ತಿ ಜೀವನವನ್ನು ಆರ್ಥಿಕ ಹೊರೆ ಇಲ್ಲದೆ ಕಳೆಯಬಹುದು. ದೊಡ್ಡ ಮೊತ್ತದ ನಿವೃತ್ತಿ ಪಡೆಯುವ ವಿಧಾನಗಳ ಮಾಹಿತಿ ಇಲ್ಲಿದೆ.

VISTARANEWS.COM


on

By

Retirement Panning
Koo

ನಿವೃತ್ತಿ ಯೋಜನೆ (Retirement Planning) ಮಾಡುತ್ತಿದ್ದೀರಾ. ಹಾಗಿದ್ದರೆ ಎಸ್‌ಐಪಿ ಬಗ್ಗೆ ತಿಳಿದುಕೊಳ್ಳಿ.. ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮೂಲಕ ಮ್ಯೂಚುಯಲ್ ಫಂಡ್ (Mutual fund) ಹೂಡಿಕೆಯು ಭಾರತದಲ್ಲಿ (India) ಏಕರೂಪದ ಹೂಡಿಕೆಗಿಂತ ಹೆಚ್ಚು ಜನಪ್ರಿಯವಾಗುತ್ತಿದೆ ಎಂಬುದನ್ನು ಭಾರತದಲ್ಲಿ ಕಳೆದ ಒಂದು ವರ್ಷದ ಮ್ಯೂಚುಯಲ್ ಫಂಡ್‌ಗಳ ಅಸೋಸಿಯೇಷನ್ ​​ಡೇಟಾ ಹೇಳುತ್ತದೆ. ಇದರ ಹಿಂದಿರುವ ಪ್ರಮುಖ ಕಾರಣ 100 ರೂ. ನ ಸಣ್ಣ ಮಾಸಿಕ ಹೂಡಿಕೆಯೊಂದಿಗೆ ಜನಸಾಮಾನ್ಯರೂ ಪ್ರಾರಂಭಿಸಬಹುದು.

ಎಸ್‌ಐಪಿ ಹೂಡಿಕೆಯು ರೂಪಾಯಿ ವೆಚ್ಚ ಸರಾಸರಿ ಮತ್ತು ಸಂಯುಕ್ತ ಬೆಳವಣಿಗೆಯನ್ನು ಒದಗಿಸುತ್ತದೆ. ಸಂಯುಕ್ತ ಬೆಳವಣಿಗೆಯ ಪ್ರಯೋಜನವೆಂದರೆ ಒಂದು ಸಣ್ಣ ಮಾಸಿಕ ಎಸ್ ಐ ಪಿ ಕೊಡುಗೆಯು ದೀರ್ಘಾವಧಿಯವರೆಗೆ ಹೂಡಿಕೆಯಲ್ಲಿ ಉಳಿದಿದ್ದರೆ ದೊಡ್ಡ ನಿವೃತ್ತಿ ಪ್ರಯೋಜನವನ್ನು ಪಡೆಯಲು ಸಹಾಯ ಮಾಡುತ್ತದೆ.

ಮಾಸಿಕ 5,000 ರೂ.ಗಳ ಎಸ್ ಐ ಪಿನೊಂದಿಗೆ ಪ್ರಾರಂಭಿಸಿ ಅದನ್ನು 30 ವರ್ಷಗಳವರೆಗೆ ಇರಿಸಿದರೆ ದೊಡ್ಡ ಮೊತ್ತವನ್ನು ನಿರ್ಮಿಸಬಹುದು. ದೀರ್ಘಾವಧಿಯ ಕ್ಯಾಪಿಟಲ್ ಗೇನ್ಸ್ ತೆರಿಗೆಯನ್ನು ಪಾವತಿಸಿದ ಅನಂತರ ಆ ಹಣವನ್ನು ವ್ಯವಸ್ಥಿತ ಹಿಂತೆಗೆದುಕೊಳ್ಳುವ ಯೋಜನೆಯಲ್ಲಿ (ಎಸ್‌ಡಬ್ಲ್ಯೂಪಿ) ಹೂಡಿಕೆ ಮಾಡಿದರೆ ಅಲ್ಲಿ ಶೇ. 7ರಷ್ಟು ಆದಾಯವನ್ನು ಪಡೆಯಬಹುದು. ಅಂದರೆ ಮುಂದಿನ 30 ವರ್ಷಗಳವರೆಗೆ ಮಾಸಿಕ 1 ಲಕ್ಷ ರೂಪಾಯಿ ಪಿಂಚಣಿ ಪಡೆಯಬಹುದು.

ಎಸ್ ಐ ಪಿಯಲ್ಲಿ ಹೂಡಿಕೆ ಮಾಡುವ ಮುನ್ನ ಎಸ್ ಐ ಪಿ ಮತ್ತು ಎಸ್ ಡಬ್ಲ್ಯೂ ಪಿ ನಡುವಿನ ವ್ಯತ್ಯಾಸ ತಿಳಿಯಿರಿ.


ಎಸ್ ಐ ಪಿ ಎಂದರೇನು?

ಎಸ್ ಐ ಪಿ ಎನ್ನುವುದು ಮ್ಯೂಚುಯಲ್ ಫಂಡ್ ಹೂಡಿಕೆಯ ಒಂದು ವಿಧಾನವಾಗಿದೆ. ಒಟ್ಟು ಮೊತ್ತದ ವಿಧಾನಕ್ಕಿಂತ ಭಿನ್ನವಾಗಿ ಒಬ್ಬರು ಒಂದು ಬಾರಿ ಮೊತ್ತವನ್ನು ಠೇವಣಿ ಮಾಡುತ್ತಾರೆ. ಅವರು ದೈನಂದಿನ, ಮಾಸಿಕ ಅಥವಾ ವಾರ್ಷಿಕ ಆಧಾರದ ಮೇಲೆ ಎಸ್ ಐಪಿ ಮೂಲಕ ಪೂರ್ವ-ನಿಶ್ಚಿತ ಮೊತ್ತದಲ್ಲಿ ಹೂಡಿಕೆ ಮಾಡುತ್ತಾರೆ.

ಕೆಲವು ಮ್ಯೂಚುವಲ್ ಫಂಡ್ ಯೋಜನೆಗಳು ಎಸ್ ಐ ಪಿಗಳನ್ನು 100 ರೂ.ಗೆ ಪ್ರಾರಂಭಿಸಬಹುದು. ಮ್ಯೂಚುವಲ್ ಫಂಡ್ ಸ್ಕೀಮ್‌ನ ಕಾರ್ಯಕ್ಷಮತೆಯೊಂದಿಗೆ ಸಿಂಕ್ ಮಾಡುವ ಮೂಲಕ ಎನ್‌ಎವಿಯ ಬೆಲೆಯು ಪ್ರತಿ ತಿಂಗಳು ಬದಲಾಗುತ್ತಲೇ ಇರುವುದರಿಂದ ಎಸ್‌ಐಪಿ ರೂಪಾಯಿ ವೆಚ್ಚದ ಸರಾಸರಿಯನ್ನು ಒದಗಿಸುತ್ತದೆ. ಮಾರುಕಟ್ಟೆ ಮತ್ತು ಎನ್ ಎವಿ ದರಗಳು ಕಡಿಮೆಯಾದಾಗ ಹೂಡಿಕೆದಾರರು ಹೆಚ್ಚಿನ ಎನ್ ಎವಿ ಗಳನ್ನು ಖರೀದಿಸುತ್ತಾರೆ. ಮಾರುಕಟ್ಟೆ ದರ ಹೆಚ್ಚಾದಾಗ ಮತ್ತು ಎನ್‌ಎವಿ ದರವೂ ಹೆಚ್ಚಿರುವಾಗ, ಹೂಡಿಕೆದಾರರು ಕಡಿಮೆ ಎನ್‌ಎವಿಗಳನ್ನು ಖರೀದಿಸುತ್ತಾರೆ.

ಒಟ್ಟು ಮೊತ್ತದ ಹೂಡಿಕೆಗಳಂತೆ ಎಸ್‌ಐಪಿ ಹೂಡಿಕೆಗಳು ಕೂಡ ಸಂಯುಕ್ತ ಬೆಳವಣಿಗೆಯನ್ನು ನೀಡುತ್ತವೆ. ಆದ್ದರಿಂದ ನೀವು 1,000 ರೂ. ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದರೂ ಸಹ 40 ವರ್ಷಗಳವರೆಗೆ ಹೂಡಿಕೆ ಮಾಡುವುದನ್ನು ಮುಂದುವರಿಸಿ ಮತ್ತು ಅದರ ಮೇಲೆ ಶೇ. 12ರಷ್ಟು ಪ್ರತಿಶತ ವಾರ್ಷಿಕ ಸಂಯುಕ್ತ ಬೆಳವಣಿಗೆಯನ್ನು ಪಡೆದರೆ 4.80 ಲಕ್ಷ ರೂ. ವರೆಗೆ ಹೂಡಿಕೆಯು ಬೆಳೆಯಬಹುದು. ಆ ಕಾಲಮಿತಿಯಲ್ಲಿ 1,18,82,420 ರೂ. ನಿವೃತ್ತಿ ಮೊತ್ತವನ್ನು ನಿರ್ಮಿಸಲು ಎಸ್ ಐಪಿ ಅನ್ನು ಸಾಧನವಾಗಿ ಪರಿಗಣಿಸುವ ಯಾರಾದರೂ ದೀರ್ಘಾವಧಿಯ ಹೂಡಿಕೆಯನ್ನು ಆಯ್ಕೆ ಮಾಡಬಹುದು.

ಎಸ್‌ಡಬ್ಲ್ಯೂಪಿ ಎಂದರೇನು?

ಎಸ್ಐಪಿನಲ್ಲಿ ಪ್ರತಿ ತಿಂಗಳು ಹಣವನ್ನು ಹೂಡಿಕೆ ಮಾಡಿದರೆ ಎಸ್‌ಡಬ್ಲ್ಯೂಪಿ ಯೋಜನೆಯ ಮ್ಯೂಚುವಲ್ ಫಂಡ್ ಯೋಜನೆಯಿಂದ ಪ್ರತಿ ತಿಂಗಳು ಹಣವನ್ನು ಹಿಂಪಡೆಯುತ್ತೀರಿ.

ಮ್ಯೂಚುಯಲ್ ಫಂಡ್‌ನಲ್ಲಿ ಒಟ್ಟು ಮೊತ್ತವನ್ನು ಹೂಡಿಕೆ ಮಾಡುವವರು ಎಸ್‌ಡಬ್ಲ್ಯೂಪಿ ಅನ್ನು ಆಯ್ಕೆ ಮಾಡುತ್ತಾರೆ ಮತ್ತು ನಿಗದಿತ ಮೊತ್ತವನ್ನು ಹಿಂಪಡೆಯುತ್ತಾರೆ. ಆ ಹಣವನ್ನು ನಿಮಗೆ ನೀಡಲು ಫಂಡ್ ಹೌಸ್ ಪ್ರತಿ ತಿಂಗಳು ಎನ್‌ಎವಿಗಳನ್ನು ಮಾರಾಟ ಮಾಡುತ್ತದೆ.

ಠೇವಣಿಗಳ ಮೇಲೆ ಆದಾಯವನ್ನು ಪಡೆಯುವುದರಿಂದ ಮಾಸಿಕ ಪಿಂಚಣಿ ಪಡೆದರೂ ಸಹ ಹೂಡಿಕೆಯಲ್ಲಿರುವ ಮೊತ್ತವು ಅವರಿಗೆ ಬಹು ವರ್ಷಗಳವರೆಗೆ ಮಾಸಿಕ ಆದಾಯವನ್ನು ನೀಡುತ್ತದೆ.

ವಾಪಸಾತಿ ದರವು ರಿಟರ್ನ್ ದರಕ್ಕಿಂತ ತುಂಬಾ ಕಡಿಮೆಯಿದ್ದರೆ ಅದು ಹಲವು ದಶಕಗಳವರೆಗೆ ಮಾಸಿಕ ಆದಾಯವನ್ನು ಒದಗಿಸುತ್ತದೆ.

ಎಸ್‌ಡಬ್ಲ್ಯೂಪಿ ಸಹ ರೂಪಾಯಿ ವೆಚ್ಚದ ಸರಾಸರಿಯನ್ನು ನೀಡುತ್ತದೆ. ಅಲ್ಲಿ ದರವು ಕಡಿಮೆಯಾದಾಗ ನಿಧಿಯು ಹೆಚ್ಚು ಎನ್ ಎವಿ ಗಳನ್ನು ಮಾರಾಟ ಮಾಡುತ್ತದೆ ಮತ್ತು ಎನ್ ಎವಿ ದರವು ಹೆಚ್ಚಾದಾಗ ಮಾರಾಟ ಕಡಿಮೆಯಾಗಿದೆ.

ಎಸ್‌ಐಪಿನಿಂದ 1 ಲಕ್ಷ ಪಿಂಚಣಿ ಹೇಗೆ ಪಡೆಯುವುದು?

30ನೇ ವಯಸ್ಸಿನಲ್ಲಿ 5,000 ಎಸ್‌ಐಪಿ ಅನ್ನು ಪ್ರಾರಂಭಿಸಿದರೆ ಅದನ್ನು 30 ವರ್ಷಗಳವರೆಗೆ ಮುಂದುವರಿಸಿ. ಆ ಅವಧಿಯಲ್ಲಿ ನಿಮ್ಮ ಒಟ್ಟು ಕೊಡುಗೆಗಳು 18,00,000 ರೂ. ಆಗಿರುತ್ತದೆ. ದೀರ್ಘಾವಧಿಯ ಬಂಡವಾಳ ಲಾಭಗಳು 1,58,49,569 ರೂ. ಆಗಿರುತ್ತದೆ ಮತ್ತು ಮೆಚ್ಯೂರಿಟಿ ಮೊತ್ತವು 1,76,49,569 ರೂ. ಆಗಿರುತ್ತದೆ. ಬಂಡವಾಳದ ಲಾಭವು ಹೂಡಿಕೆಗಿಂತ ಸುಮಾರು 10 ಪಟ್ಟು ಹೆಚ್ಚು. ಇದು ಸಂಯುಕ್ತ ಬೆಳವಣಿಗೆಯಿಂದಾಗಿ ಮಾತ್ರ. 60ನೇ ವಯಸ್ಸಿನಲ್ಲಿ ಇದು ನಿಮ್ಮ ನಿವೃತ್ತಿ ವೇತನವಾಗುತ್ತದೆ.


1 ಲಕ್ಷ ರೂ. ತೆರಿಗೆ ವಿನಾಯಿತಿ ಪಡೆದ ಅನಂತರ ನೀವು ಅದನ್ನು ಹಿಂತೆಗೆದುಕೊಂಡರೆ ಶೇ. 10ರಷ್ಟು ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆಯನ್ನು ಪಾವತಿಸಿದರೆ ನಿಮ್ಮ ತೆರಿಗೆ ಮೊತ್ತವು 17,54,956.90 ರೂ. ತೆರಿಗೆ ಪಾವತಿಸಿದ ಅನಂತರ ಕೊನೆಯಲ್ಲಿ 1,58,94,612.10 ರೂ. ಉಳಿಯುತ್ತದೆ.

ಇದನ್ನೂ ಓದಿ: Price Hike: ಮೊಬೈಲ್ ಕಂಪನಿಗಳಿಂದ ದರ ಏರಿಕೆ; ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬಹುದೆ?

ಮಾಸಿಕ ಪಿಂಚಣಿ ಪಡೆಯಲು ಹೂಡಿಕೆ ಮಾಡುವುದರಿಂದ ಸಾಲ ನಿಧಿಯನ್ನು ಸುರಕ್ಷಿತ ಆಯ್ಕೆ ಮಾಡಬಹುದು. ಅಲ್ಲಿ ನಿಮ್ಮ ಹೂಡಿಕೆಯ ಮೇಲೆ ಸಾಧಾರಣ ಶೇ. 7ರಷ್ಟು ಲಾಭವನ್ನು ಪಡೆಯಬಹುದು.

1,58,94,612.10 ರೂ.ಗಳನ್ನು ಡೆಟ್ ಫಂಡ್‌ನಲ್ಲಿ ಹೂಡಿಕೆ ಮಾಡಿ ಶೇಕಡಾ ಏಳರಷ್ಟು ವಾರ್ಷಿಕ ಆದಾಯವನ್ನು ಪಡೆದರೆ 30 ವರ್ಷಗಳವರೆಗೆ 1 ಲಕ್ಷ ರೂಪಾಯಿಗಳ ಮಾಸಿಕ ಪಿಂಚಣಿಯನ್ನು ಸುಲಭವಾಗಿ ಡ್ರಾ ಮಾಡಬಹುದು ಮತ್ತು ಅದರ ಅನಂತರವೂ ನಿಮ್ಮ ಬಳಿ 62,99,829 ರೂ. ಮ್ಯೂಚುವಲ್ ಫಂಡ್ ಖಾತೆಯಲ್ಲಿ ಬಾಕಿ ಮೊತ್ತ ಉಳಿದಿರುತ್ತದೆ.

ಎಸ್‌ಐಪಿ ಈ ಯೋಜನೆಯ ಹೂಡಿಕೆ ಅವಧಿಯು 30 ವರ್ಷಗಳು ಮತ್ತು ಇದು ಸಾಕಷ್ಟು ದೀರ್ಘಾವಧಿಯದ್ದಾಗಿದೆ. ಆದರೆ ನಿವೃತ್ತಿ ಯೋಜನೆಯನ್ನು ಮೊದಲೇ ಪ್ರಾರಂಭಿಸಿದರೆ ಸುಲಭವಾಗುತ್ತದೆ. ಎಷ್ಟು ಬೇಗನೆ ಇದನ್ನು ಪ್ರಾರಂಭಿಸುತ್ತೀರೋ ಅಷ್ಟು ಹೆಚ್ಚಿನ ನಿವೃತ್ತಿ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತದೆ.

Continue Reading
Advertisement
Dengue Cases
ಕರ್ನಾಟಕ2 mins ago

Dengue Cases: ರಾಜ್ಯದಲ್ಲಿ ಸೋಮವಾರ 197 ಡೆಂಗ್ಯೂ ಕೇಸ್‌ಗಳು ಪತ್ತೆ, ಒಬ್ಬರ ಸಾವು

ಕ್ರೀಡೆ7 mins ago

Kuldeep Yadav: ಕುಲ್​ದೀಪ್ ಯಾದವ್​ರನ್ನು​ ಅಭಿನಂದಿಸಿದ ಯೋಗಿ ಆದಿತ್ಯನಾಥ್

Channappa Gowda Mosambi elected as new District President of Akhila bharata Veerashaiva Mahasabha
ಯಾದಗಿರಿ29 mins ago

Yadgiri News: ಅಖಿಲ ಭಾರತ ವೀರಶೈವ ಮಹಾಸಭಾ ನೂತನ ಜಿಲ್ಲಾಧ್ಯಕ್ಷರಾಗಿ ಚನ್ನಪ್ಪಗೌಡ ಮೋಸಂಬಿ ಅವಿರೋಧ ಆಯ್ಕೆ

Maharashtra Rain
Latest31 mins ago

Maharashtra Rain: ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ; ರಾಯಗಢ ಕೋಟೆಯಲ್ಲಿ ಪ್ರವಾಸಿಗರಿಗೆ ಪ್ರಾಣ ಸಂಕಟ; ವಿಡಿಯೊ ನೋಡಿ

Money Guide
ಮನಿ-ಗೈಡ್39 mins ago

Money Guide: ಕಡಿಮೆ ಅವಧಿಯಲ್ಲಿ 1 ಕೋಟಿ ರೂ. ಗಳಿಸುವುದು ಹೇಗೆ? ಇಲ್ಲಿದೆ ಹೂಡಿಕೆಯ ಲೆಕ್ಕಾಚಾರ

land fraud
ಕರ್ನಾಟಕ42 mins ago

land fraud: ಭೂ ವಂಚನೆ ತಡೆಗೆ ಪಹಣಿ-ಆಧಾರ್‌ ಜೋಡಣೆ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ: ಸಿಎಂ ಸಿದ್ದರಾಮಯ್ಯ

Golden Star Ganesh starring Krishnam Pranaya Sakhi movie releasing on 15th August
ಕರ್ನಾಟಕ47 mins ago

Kannada New Movie: ಗಣೇಶ್‌ ವೃತ್ತಿಜೀವನದ ಬಿಗ್ ಬಜೆಟ್ ಚಿತ್ರ ʼಕೃಷ್ಣಂ ಪ್ರಣಯ ಸಖಿʼ

Heavy rain in coastal areas of Uttara Kannada district
ಉತ್ತರ ಕನ್ನಡ49 mins ago

Uttara Kannada News: ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ, 12 ಕಾಳಜಿ ಕೇಂದ್ರಗಳಲ್ಲಿ 437 ಜನರಿಗೆ ಆಸರೆ

Sri Kyatha Lingeshwara Swamy new temple Inauguration on 13th August
ತುಮಕೂರು52 mins ago

Shira News: ಆ.13ರಂದು ಶ್ರೀ ಕ್ಯಾತಲಿಂಗೇಶ್ವರ ಸ್ವಾಮಿ ನೂತನ ದೇವಾಲಯದ ಜೀರ್ಣೋದ್ಧಾರ ಸಮಾರಂಭ

defrauding the government in Quarry Mine Royalty CM Siddaramaiah instructs for strict action
ಕರ್ನಾಟಕ53 mins ago

CM Siddaramaiah: ಕ್ವಾರಿ ಗಣಿ ರಾಯಲ್ಟಿಯಲ್ಲಿ ಸರ್ಕಾರಕ್ಕೆ ವಂಚನೆ; ಕಠಿಣ ಕ್ರಮಕ್ಕೆ ಸಿಎಂ ಸೂಚನೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rain Effect
ಮಳೆ4 hours ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ6 hours ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ8 hours ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ9 hours ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು10 hours ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ1 day ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ1 day ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ1 day ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ2 days ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

ಟ್ರೆಂಡಿಂಗ್‌