ಕೊನೆಗೂ ಸೋಲ್ಡ್​ ಆದ ಕನ್ನಡತಿ ವೇದಾ ಕೃಷ್ಣಮೂರ್ತಿ; ಯಾವ ತಂಡಕ್ಕೆ? - Vistara News

ಕ್ರಿಕೆಟ್

ಕೊನೆಗೂ ಸೋಲ್ಡ್​ ಆದ ಕನ್ನಡತಿ ವೇದಾ ಕೃಷ್ಣಮೂರ್ತಿ; ಯಾವ ತಂಡಕ್ಕೆ?

ದ್ವಿತೀಯ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್(Women’s Premier League) 2024ರ ಹರಾಜಿನಲ್ಲಿ(WPL Auction 2024) ವೇದಾ ಕೃಷ್ಣಮೂರ್ತಿ(veda krishnamurthy) ಅವರನ್ನು ಗುಜರಾತ್ ಜೈಂಟ್ಸ್  ತಂಡ ಖರೀದಿ ಮಾಡಿದೆ.

VISTARANEWS.COM


on

veda krishnamurthy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕರ್ನಾಟಕ ಮೂಲದ, ಟೀಮ್​ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ್ತಿ ವೇದಾ ಕೃಷ್ಣಮೂರ್ತಿ(veda krishnamurthy) ಅವರು ಕೊನೆಗೂ ಮಹಿಳಾ ಪ್ರೀಮಿಯರ್ ಲೀಗ್(Women’s Premier League) 2024ರ ಹರಾಜಿನಲ್ಲಿ(WPL Auction 2024) ಸೋಲ್ಡ್​ ಆಗಿದ್ದಾರೆ. ಅವರನ್ನು ಗುಜರಾತ್ ಜೈಂಟ್ಸ್ ತಂಡ ಮೂಲ ಬೆಲೆ 30 ಲಕ್ಷ ರೂ. ನೀಡಿ ಖರೀದಿ ಮಾಡಿದೆ.

ಆರಂಭಿಕ ಹಂತದ ಬಿಡ್ಡಿಂಗ್​ನಲ್ಲಿ ಅವರು ಅನ್​ಸೋಲ್ಡ್​​ ಆಗಿದ್ದರು. ಬಳಿಕ ದ್ವಿತೀಯ ಸುತ್ತಿನ ಬಿಡ್ಡಿಂಗ್​ನಲ್ಲಿ ಅವರನ್ನು ಗುಜರಾತ್ ಜೈಂಟ್ಸ್ ತನ್ನ ಪಾಳಯಕ್ಕೆ ಸೇರಿಸಿಕೊಂಡಿತು. ಮೊದಲ ಹಂತದಲ್ಲಿ ಖರೀದಿ ಮಾಡದಿದ್ದಾಗ ನಿರಾಸೆಗೊಂಡಿದ್ದ ಅವರು ಬಳಿಕದ ಸುತ್ತಿನಲ್ಲಿ ಖರೀದಿಯಾದ ಕಾರಣ ಸಂತಸಗೊಂಡಿದ್ದಾರೆ. ಕ್ರಿಕೆಟ್​ಗೆ ಮರಳುವ ಅವರ ಕನಸು ಮತ್ತೆ ಚಿಗುರೊಡೆದಿದೆ.

2011 ರಲ್ಲಿ ಭಾರತ ವನಿತಾ ಕ್ರಿಕೆಟ್​ ತಂಡಕ್ಕೆ ಪದಾರ್ಪಣೆ ಮಾಡಿದ್ದ ವೇದಾ ಕೃಷ್ಣಮೂರ್ತಿ ಅವರು ಟೀಮ್ ಇಂಡಿಯಾ ಪರ 48 ಏಕ ದಿನ ಮತ್ತು 76 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದೇ ವರ್ಷ ಅವರು ಕರ್ನಾಟಕದ ಮಾಜಿ ಕ್ರಿಕೆಟಿಗ ಅರ್ಜುನ್ ಹೊಯ್ಸಳ ಅವರೊಂದಿಗೆ ಸಪ್ತಪದಿ ತುಳಿದಿದ್ದರು.

ಉತ್ತಮ ಫೀಲ್ಡರ್​

31  ವರ್ಷದ ವೇದಾ ಕೃಷ್ಣಮೂರ್ತಿ ಚಿಕ್ಕಮಗಳೂರಿನವರಾಗಿದ್ದು, 18ರ ಹರೆಯದಲ್ಲೇ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ವೇದಾ ಮಧ್ಯಮ ಕ್ರಮಾಂಕದ ಬ್ಯಾಟರ್‌ ಹಾಗೂ ಅತ್ಯುತ್ತಮ ಫೀಲ್ಡರ್‌ ಆಗಿದ್ದಾರೆ. 2020ರ ಟಿ20 ವಿಶ್ವಕಪ್‌ ವೇಳೆ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಸಲ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರು ಟೀಮ್​ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ. ಈಗ ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಆಡುವ ಮೂಲಕ ಮತ್ತೆ ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ WPL Auction 2024: ಹರಾಜಿನ ಬಳಿಕ ಎಲ್ಲ 5 ತಂಡಗಳ ಆಟಗಾರ್ತಿಯರ ಪಟ್ಟಿ ಹೀಗಿದೆ

ಗುಜರಾತ್ ಜೈಂಟ್ಸ್ ತಂಡ

ಆಶ್ಲೀಗ್ ಗಾರ್ಡ್ನರ್, ಬೆತ್ ಮೂನಿ, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್, ಶಬ್ನಮ್ ಶಕಿಲ್, ಸ್ನೇಹ ರಾಣಾ, ತನುಜಾ ಕನ್ವರ್, ಫೋಬೆ ಲಿಚ್‌ಫೀಲ್ಡ್, ಮೇಘನಾ ಸಿಂಗ್, ತ್ರಿಶಾ ಪೂಜಿತಾ, ಕಾಶ್ವೀ ಗೌತಮ್, ಪ್ರಿಯಾ ಮಿಶ್ರಾ, ಲಾರೆನ್ ಚೀಟಲ್, ಕ್ಯಾಥರಿನ್ ಬ್ರೈಸ್, ಮನ್ನತ್ ಕಶ್ಯಪ್, ತರನ್ನುಮ್ ಪಠಾಣ್, ವೇದಾ ಕೃಷ್ಣಮೂರ್ತಿ.

ಅತ್ಯಧಿಕ ಮೊತ್ತ ಪಡೆದ ಆಟಗಾರ್ತಿಯರು

ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್​ಲ್ಯಾಂಡ್ ಹಾಗೂ ಭಾರತದ ಅನ್​ಕ್ಯಾಪ್ಡ್​ ಆಟಗಾರ್ತಿ ಕಾಶ್ವಿ ಗೌತಮ್ ಈ ಬಾರಿಯ ಬಿಡ್ಡಿಂಗ್​ನಲ್ಲಿ ಅತ್ಯಧಿಕ ಮೊತ್ತ ಪಡೆದ ಆಟಗಾರ್ತಿಯರು. ಉಭಯ ಆಟಗಾರ್ತಿಯರರು ತಲಾ 2 ಕೋಟಿ ಮೊತ್ತಕ್ಕೆ ಸೇಲ್​ ಆದರು. ಕರ್ನಾಟಕದ ವೃಂದಾ ದಿನೇಶ್​ 1.3 ಕೋಟಿ ರೂ. ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ 1.2 ಕೋಟಿ ರೂ., ಆಸ್ಟ್ರೇಲಿಯಾದ ಯುವ ಆಟಗಾರ್ತಿ ಫೋಬಿ ಲಿಚ್ ಫೀಲ್ಡ್ 1 ಕೋಟಿ ರೂ.ಗೆ ಸೇಲ್​ ಆದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Gautam Gambhir : ಗೌತಮ್​ ಗಂಭೀರ್​ಗೆ ವಿಶೇಷ ಸಂದೇಶ ಕಳುಹಿಸಿದ ದ್ರಾವಿಡ್​; ಭಾವುಕರಾದ ನೂತನ ಕೋಚ್​!

Gautam Gambhir : ಗಂಭೀರ್ ಅವರ ಯುಗ ಪ್ರಾರಂಭವಾಗುವ ಮೊದಲು, ರಾಹುಲ್ ದ್ರಾವಿಡ್ ಗೌತಮ್ ಗಂಭೀರ್ ಅವರಿಗೆ ಭಾವನಾತ್ಮಕ ಸಂದೇಶವನ್ನು ಕಳುಹಿಸಿದ್ದಾರೆ. ಅವರ ಹೊಸ ಪಾತ್ರಕ್ಕಾಗಿ ಅವರನ್ನು ಪ್ರೇರೇಪಿಸಿದ್ದಾರೆ. ತಂಡದ ಎಲ್ಲಾ ಆಟಗಾರರೊಂದಿಗೆ ಅದ್ಭುತ ಬಾಂಧವ್ಯ ಹೊಂದಿದ್ದ ದ್ರಾವಿಡ್, ಗಂಭೀರ್ ಕೂಡ ಇದೇ ರೀತಿಯ ಸಂಬಂಧ ಹೊಂದಿರುತ್ತಾರೆ ಎಂದು ನಿರೀಕ್ಷಿಸಿದ್ದಾರೆ. ಆಟಗಾರರು ಫಿಟ್ ಆಗಿರಬೇಕು ಮತ್ತು ಪ್ರತಿ ಪಂದ್ಯಕ್ಕೂ ಲಭ್ಯವಿರಬೇಕು ಎಂದು ದ್ರಾವಿಡ್ ಹಾರೈಸಿದ್ದಾರೆ.

VISTARANEWS.COM


on

Gautam Gambhir
Koo

ಬೆಂಗಳೂರು: ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​​ನಲ್ಲಿ ನಡೆದ 2024ರ ಟಿ 20 ಫೈನಲ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ಚಾಂಪಿಯನ್ ಆಯಿತು. ಇದೇ ವೇಳೆ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಅಭಿಯಾನವೂ ಅಂತ್ಯಗೊಂಡಿತು. ಇದೀಗ ಹೊಸ ಯುಗ ಪ್ರಾರಂಭವಾಗುವ ಸಮಯ ಬಂದಿದೆ. ಕೆಚ್ಚೆದೆಯ ಬ್ಯಾಟರ್​​ ಗೌತಮ್ ಗಂಭೀರ್ (Gautam Gambhir) ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ (IND vs SL) ಭಾರತದ ಹೊಸ ಮುಖ್ಯ ಕೋಚ್ ಆಗಿ ತಮ್ಮ ಕಾರ್ಯವನ್ನು ಪ್ರಾರಂಭಿಸಿದ್ದಾರೆ.

ಗಂಭೀರ್ ಅವರ ಯುಗ ಪ್ರಾರಂಭವಾಗುವ ಮೊದಲು, ರಾಹುಲ್ ದ್ರಾವಿಡ್ ಗೌತಮ್ ಗಂಭೀರ್ ಅವರಿಗೆ ಭಾವನಾತ್ಮಕ ಸಂದೇಶವನ್ನು ಕಳುಹಿಸಿದ್ದಾರೆ. ಅವರ ಹೊಸ ಪಾತ್ರಕ್ಕಾಗಿ ಅವರನ್ನು ಪ್ರೇರೇಪಿಸಿದ್ದಾರೆ. ತಂಡದ ಎಲ್ಲಾ ಆಟಗಾರರೊಂದಿಗೆ ಅದ್ಭುತ ಬಾಂಧವ್ಯ ಹೊಂದಿದ್ದ ದ್ರಾವಿಡ್, ಗಂಭೀರ್ ಕೂಡ ಇದೇ ರೀತಿಯ ಸಂಬಂಧ ಹೊಂದಿರುತ್ತಾರೆ ಎಂದು ನಿರೀಕ್ಷಿಸಿದ್ದಾರೆ. ಆಟಗಾರರು ಫಿಟ್ ಆಗಿರಬೇಕು ಮತ್ತು ಪ್ರತಿ ಪಂದ್ಯಕ್ಕೂ ಲಭ್ಯವಿರಬೇಕು ಎಂದು ದ್ರಾವಿಡ್ ಹಾರೈಸಿದ್ದಾರೆ.

ಗಂಭೀರ್ ಅವರ ದೃಢ ನಿರ್ಧಾರ ಮತ್ತು ಎಂದಿಗೂ ಬಿಟ್ಟುಕೊಡದ ಮನೋಭಾವವನ್ನು ದ್ರಾವಿಡ್ ಶ್ಲಾಘಿಸಿದ್ದಾರೆ. ಅವರು ಈ ಗುಣವನ್ನು ಭಾರತೀಯ ತಂಡಕ್ಕೆ ತರಬಹುದು ಎಂದು ಆಶಿಸಿದ್ದಾರೆ

ರಾಹುಲ್ ದ್ರಾವಿಡ್ ಭಾವನಾತ್ಮಕ ಸಂದೇಶ ಇಲ್ಲಿದೆ

ಬಿಸಿಸಿಐ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ ಆಡಿಯೊ ಸಂದೇಶದಲ್ಲಿ, ದ್ರಾವಿಡ್ ಗಂಭೀರ್ ಅವರಿಗೆ ಭಾರತೀಯ ತಂಡದೊಂದಿಗೆ ಯಾವಾಗಲೂ ಇರುವ ನಿರೀಕ್ಷೆಗಳನ್ನು ಹೇಳಿದ್ದಾರೆ. ಅದೇ ರೀತಿ ಆದರೆ ಅವರಿಗೆ ಯಶಸ್ಸನ್ನು ಹಾರೈಸಿದ್ದಾರೆ. ಭಾರತೀಯ ಕ್ರಿಕೆಟ್ ಅನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಬಹುದು ಎಂದು ಆಶಿಸಿದ್ದಾರೆ.

ಹಲೋ ಗೌತಮ್ (ಗಂಭೀರ್). ಮತ್ತು ಭಾರತೀಯ ಕ್ರಿಕೆಟ್ ತಂಡದ ತರಬೇತುದಾರರಾಗಿ ನಮ್ಮ ವಿಶ್ವದ ಅತ್ಯಂತ ರೋಮಾಂಚಕಾರಿ ಕೆಲಸಕ್ಕೆ ಸ್ವಾಗತ. ಬಾರ್ಬಡೋಸ್​​ನಲ್ಲಿ ಮತ್ತು ಕೆಲವು ದಿನಗಳ ನಂತರ ಮುಂಬೈನಲ್ಲಿ ಮರೆಯಲಾಗದ ಸಂಜೆ ನನ್ನ ಕನಸುಗಳನ್ನು ಮೀರಿದ ರೀತಿಯಲ್ಲಿ ನಾನು ಭಾರತೀಯ ತಂಡದೊಂದಿಗೆ ನನ್ನ ಅವಧಿಯನ್ನು ಕೊನೆಗೊಳಿಸಿ ಮೂರು ವಾರಗಳಾಗಿವೆ. ಎಲ್ಲಕ್ಕಿಂತ ಹೆಚ್ಚಾಗಿ ತಂಡದೊಂದಿಗಿನ ನನ್ನ ಸಮಯದಲ್ಲಿ ನಾನು ಹೊಂದಿರುವ ನೆನಪುಗಳು ಮತ್ತು ಸ್ನೇಹವನ್ನು ನಾನು ಅಮೂಲ್ಯವೆಂದು ಪರಿಗಣಿಸುತ್ತೇನೆ”ಎಂದು ದ್ರಾವಿಡ್ ಹೇಳಿದ್ದಾರೆ.

ನೀವು ಭಾರತದ ತರಬೇತುದಾರನ ಪಾತ್ರವನ್ನು ವಹಿಸಿಕೊಂಡಾಗ, ನಾನು ನಿಮಗೂ ಅದೇ ಸಂಭ್ರಮ ಸಿಗಲಿ ಬಯಸುತ್ತೇನೆ. ಪ್ರತಿ ತಂಡದಲ್ಲಿ ಸಂಪೂರ್ಣ ಫಿಟ್ ಆಟಗಾರರ ಲಭ್ಯತೆಯನ್ನು ನೀವು ಹೊಂದಿರುತ್ತೀರಿ ಎಂದು ನಾನು ಭಾವಿಸುತ್ತೇನೆ. ಅದಕ್ಕೆ ಶುಭವಾಗಲಿ!” ಎಂದು ದ್ರಾವಿಡ್​ ಹೇಳಿದ್ದಾರೆ.

ನಿಮ್ಮ ತಂಡದ ಸಹ ಆಟಗಾರನಾಗಿ ನೀವು ಮೈದಾನದಲ್ಲಿ ಸರ್ವಸ್ವವನ್ನೂ ನೀಡುವುದನ್ನು ನಾನು ನೋಡಿದ್ದೇನೆ. ನಿಮ್ಮ ಬ್ಯಾಟಿಂಗ್ ಪಾಲುದಾರ ಮತ್ತು ಸಹ ಫೀಲ್ಡರ್ ಆಗಿ ನಿಮ್ಮ ದೃಢತೆ ಮತ್ತು ಶರಣಾಗತಿಗೆ ನಿರಾಕರಿಸುವುದನ್ನು ನಾನು ನೋಡಿದ್ದೇನೆ. ಐಪಿಎಲ್ ಋತುಗಳಲ್ಲಿ ಯುವ ಆಟಗಾರರೊಂದಿಗೆ ಕೆಲಸ ಮಾಡುವ ಮತ್ತು ಮೈದಾನದಲ್ಲಿ ತಂಡದಿಂದ ಅತ್ಯುತ್ತಮವಾದದ್ದನ್ನು ಹೊರತೆಗೆಯುವ ನಿಮ್ಮ ಸಾಮರ್ಥ್ಯವನ್ನು ನಾನು ಗಮನಿಸಿದ್ದೇನೆ ಎಂದು ದ್ರಾವಿಡ್ ಹೇಳಿದ್ದಾರೆ.

ನೀವು ಭಾರತೀಯ ಕ್ರಿಕೆಟ್ ಬಗ್ಗೆ ಎಷ್ಟು ಸಮರ್ಪಿತವಾಗಿದ್ದೀರಿ ಎಂದು ನನಗೆ ತಿಳಿದಿದೆ ಮತ್ತು ಈ ಎಲ್ಲಾ ಗುಣಗಳನ್ನು ನೀವು ಈ ಹೊಸ ಕೆಲಸಕ್ಕೆ ಬಳಸುತ್ತಿರಿ ಎಂದು ನನಗೆ ಖಾತ್ರಿಯಿದೆ. ನಿಮಗೆ ತಿಳಿದಿರುವಂತೆ, ನಿರೀಕ್ಷೆಗಳು ಹೆಚ್ಚಾಗಿರುತ್ತವೆ ಮತ್ತು ಪರೀಕ್ಷೆಗಳು ಆಗಾಗ ಎದುರಾಗುತ್ತವೆ. ಆದರೆ ಕೆಟ್ಟ ಸಮಯಗಳಲ್ಲಿಯೂ ನೀವು ಎಂದಿಗೂ ಏಕಾಂಗಿಯಾಗಿರುವುದಿಲ್ಲ. ನಿಮ್ಮ ಆಟಗಾರರು, ನಿಮ್ಮ ಸಹಾಯಕ ಸಿಬ್ಬಂದಿ, ಹಿಂದಿನ ನಾಯಕರ ಬೆಂಬಲವನ್ನು ನೀವು ಹೊಂದಿರುತ್ತೀರಿ. ನೀವು ಯಾರಿಗಾಗಿ ಆಡುತ್ತೀರಿ ಎಂಬುದನ್ನು ಎಂದಿಗೂ ಮರೆಯಬೇಡಿ. ಅಭಿಮಾನಿಗಳಿಗೆ ತುಂಬಾ ಬೇಡಿಕೆಯಿರುತ್ತಾರೆ. ಯಾವಾಗಲೂ ತಂಡದ ಹಿಂದೆಯೇ ಇರಿ. ನಾನು ನಿಮಗೆ ಶುಭ ಹಾರೈಸುತ್ತೇನೆ ಎಂದು ದ್ರಾವಿಡ್ ಹೇಳಿದ್ದಾರೆ.

ಭಾವುಕರಾದ ಗೌತಮ್ ಗಂಭೀರ್

ಈ ಸಂದೇಶವನ್ನು ಕೇಳಿದ ನಂತರ ಗೌತಮ್ ಗಂಭೀರ್ ಭಾವುಕರಾದರು. ದ್ರಾವಿಡ್ ಅವರನ್ನು ತಾವು ನೋಡಿದ ಅತ್ಯಂತ ನಿಸ್ವಾರ್ಥ ಕ್ರಿಕೆಟಿಗ ಎಂದು ಕರೆದರು. ತಮ್ಮ ಕೆಲಸವನ್ನು ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.

ಇದನ್ನೂ ಓದಿ: Ricky Ponting : ಡೆಲ್ಲಿ ಕ್ಯಾಪಿಟಲ್ಸ್​ ಕೋಚಿಂಗ್ ಹುದ್ದೆಯಿಂದ ಪಾಂಟಿಂಗ್ ನಿರ್ಗಮಿಸಿದ್ದು ಯಾಕೆ? ಕಾರಣ ಕೊಟ್ಟ ಮಾಲೀಕ ಪಾರ್ಥ್​ ಜಿಂದಾಲ್​

ದ್ರಾವಿಡ್ ಸಂದೇಶಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ನನಗೆ ತಿಳಿದಿಲ್ಲ ಏಕೆಂದರೆ ಈ ಸಂದೇಶವು ನನಗೆ ತುಂಬಾ ಮುಖ್ಯ. ಇದಕ್ಕೆ ಕಾರಣ ಈ ಸಂದೇಶ ಯಶಸ್ವಿಯಾದ ವ್ಯಕ್ತಿಯಿಂದ ಬಂದದ್ದಲ್ಲ. ನಾನು ಆಡುವಾಗ ಯಾವಾಗಲೂ ನೋಡುತ್ತಿದ್ದ ವ್ಯಕ್ತಿಯಿಂದ ದೊರಕಿದೆ. ರಾಹುಲ್ ಭಾರತೀಯ ಕ್ರಿಕೆಟ್​ಗೆ ಅಗತ್ಯವಿರುವ ಎಲ್ಲವನ್ನೂ ಕೊಟ್ಟಿದ್ದಾರೆ. ನನಗೆ ಮಾತ್ರವಲ್ಲ, ಮುಂದಿನ ಪೀಳಿಗೆಗೆ ಮತ್ತು ಇಂದಿನ ಪೀಳಿಗೆಗೂ ಅವರಿಂದ ಕಲಿಯಲು ಬಹಳಷ್ಟಿದೆ ಎಂದು ಹೇಳಿದ್ದಾರೆ.

ನಾನು ಸಾಮಾನ್ಯವಾಗಿ ಹೆಚ್ಚು ಭಾವುಕನಾಗುವುದಿಲ್ಲ. ಆದರೆ ಈ ಸಂದೇಶವು ನಿಜವಾಗಿಯೂ ನನ್ನನ್ನು ತುಂಬಾ ಕಾಡಿದೆ. ಇದು ಉತ್ತಮ ಸಂದೇಶ ಮತ್ತು ಇದು ಅವರ ಸ್ಥಾನ ತುಂಬುವ ದೊಡ್ಡ ಜವಾಬ್ದಾರಿಯಿದೆ ನಾನು ಅದನ್ನು ಸಂಪೂರ್ಣ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಮಾಡಬಲ್ಲೆ, ಎಂದು ಅವರು ಹೇಳಿದರು.

Continue Reading

ಕ್ರೀಡೆ

Ricky Ponting : ಡೆಲ್ಲಿ ಕ್ಯಾಪಿಟಲ್ಸ್​ ಕೋಚಿಂಗ್ ಹುದ್ದೆಯಿಂದ ಪಾಂಟಿಂಗ್ ನಿರ್ಗಮಿಸಿದ್ದು ಯಾಕೆ? ಕಾರಣ ಕೊಟ್ಟ ಮಾಲೀಕ ಪಾರ್ಥ್​ ಜಿಂದಾಲ್​

Ricky Ponting :

VISTARANEWS.COM


on

Ricky Ponting
Koo

ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ರಿಕಿ ಪಾಂಟಿಂಗ್ (Ricky Ponting) ಅವರನ್ನು ಬಿಟ್ಟಾಗ ಫ್ರಾಂಚೈಸಿಯ ಅಭಿಮಾನಿಗಳಿಗೆ ಮತ್ತು ಆಟಗಾರರಿಗೆ ಆಘಾತವನ್ನುಂಟು ಮಾಡಿತ್ತು. ಆದರೆ ಫ್ರಾಂಚೈಸಿಯ ಸಹ ಮಾಲೀಕ ಮತ್ತು ಅಧ್ಯಕ್ಷ ಪಾರ್ಥ್ ಜಿಂದಾಲ್ ಅಂತಿಮವಾಗಿ ಪಾಂಟಿಂಗ್ ಅವರನ್ನು ಆ ಹುದ್ದೆಯಿಂದ ತೆಗೆದುಹಾಕುವ ನಿರ್ಧಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಮೂಲಕ ರಿಕಿ ಪಾಂಟಿಂಗ್ ಅವರಿಂದ ಬೇರ್ಪಡುವುದಾಗಿ ಘೋಷಿಸಿತು. ಪಾಂಟಿಂಗ್ ಏಳು ವರ್ಷಗಳ ಕಾಲ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು. ಆದರೆ ಅವರ ಅಧಿಕಾರಾವಧಿಯಲ್ಲಿ ತಂಡವು ಒಂದೇ ಒಂದು ಟ್ರೋಫಿಯನ್ನು ಗೆಲ್ಲಲು ವಿಫಲವಾಯಿತು. ಇಷ್ಟು ದೀರ್ಘಾವಧಿಯಲ್ಲಿ ಒಂದೇ ಒಂದು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟ್ರೋಫಿಯನ್ನು ಗೆಲ್ಲಲು ತಂಡದ ಅಸಮರ್ಥತೆಯಿಂದಾಗಿ ಪಾಂಟಿಂಗ್ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಈ ಹಿಂದೆ ಭಾವಿಸಲಾಗಿತ್ತು. ಆದರೆ ಪಾರ್ಥ್ ಜಿಂದಾಲ್ ಅಂತಹ ದೊಡ್ಡ ನಿರ್ಧಾರದ ಹಿಂದಿನ ನಿಜವಾದ ಕಾರಣ ಬಹಿರಂಗಪಡಿಸಿದ್ದಾರೆ.

ಪಾರ್ಥ್ ಜಿಂದಾಲ್ ಏನಂದರು?

ಪಾರ್ಥ್ ಜಿಂದಾಲ್ ಅವರು 2026 ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ತಂಡಕ್ಕೆ ಪ್ರಾಯೋಜಕರಾಗಿರುವ ಪ್ರಸಿದ್ಧ ಜೆಎಸ್​ಡಬ್ಲ್ಯೂ ಗ್ರೂಪ್​ನ ಮುಖ್ಯಸ್ಥರಾಗಿದ್ದಾರೆ. ಒಲಿಂಪಿಕ್ಸ್ ಮುನ್ನಾದಿನದಂದು ಸಿಎನ್ಬಿಸಿ-ಟಿವಿ 18 ಜೊತೆಗಿನ ಇತ್ತೀಚಿನ ಚರ್ಚೆಯಲ್ಲಿ ಮಾತನಾಡಿ, ರಿಕಿ ಪಾಂಟಿಂಗ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಸಿದ ಬಗ್ಗೆ ಮಾತನಾಡಿದ್ದಾರೆ.

ರಿಷಭ್ ಪಂತ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಮತ್ತು ಮುಖೇಶ್ ಕುಮಾರ್ ಅವರಂತಹ ಭಾರತೀಯ ಅಂತಾರಾಷ್ಟ್ರೀಯ ಆಟಗಾರರನ್ನು ಒಳಗೊಂಡಿರುವ ತಮ್ಮ ತಂಡದ ಪ್ರಮುಖ ಗುಂಪಿನಲ್ಲಿ ಯುವ ಸಹ ಮಾಲೀಕ ವಿಶ್ವಾಸವನ್ನು ತೋರಿಸಿದರು.

“ಮೆಗಾ ಹರಾಜಿನ ಉಳಿಸುವ ಮತ್ತು ಬಿಡುಗಡೆ ನಿಯಮಗಳ ಬಗ್ಗೆ ನಾವು ಬಿಸಿಸಿಐಗೆ ನಮ್ಮ ಅಭಿಪ್ರಾಯಗಳನ್ನು ನೀಡುತ್ತೇವೆ. ಡೆಲ್ಲಿ ಕ್ಯಾಪಿಟಲ್ಸ್​ನಲ್ಲಿ ನಾವು ಉತ್ತಮ ಆಟಗಾರರನ್ನು ಹೊಂದಿದ್ದೇವೆ. ರಿಷಭ್ ಪಂತ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜೇಕ್ ಫ್ರೇಸರ್-ಮೆಕ್ಗುರ್ಕ್, ಟ್ರಿಸ್ಟಾನ್ ಸ್ಟಬ್ಸ್, ಮುಖೇಶ್ ಕುಮಾರ್, ಖಲೀಲ್ ಅಹ್ಮದ್ ಅವರಂತಹ ಆಟಗಾರರನ್ನು ನೋಡಿದ್ದೇವೆ ಎಂದು ಜಿಂದಾಲ್ ಹೇಳಿದ್ದಾರೆ.

ಪಾಂಟಿಂಗ್ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ತೆಗೆದುಹಾಕುವ ಬಗ್ಗೆ ಕೇಳಿದಾಗ, ಜಿಂದಾಲ್, ಅವರು ಸದಾ ಭಾರತದಲ್ಲಿ ಲಭ್ಯ ಇರಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ ಎಂದ ಹೇಳಿದ್ದಾರೆ.

ಇದನ್ನೂ ಓದಿ: ICC Champions Trophy : ಪಾಕಿಸ್ತಾನದ ಕ್ರಿಕೆಟ್​ ಮಂಡಳಿಯ ಮಾಧ್ಯಮ ಹಕ್ಕುಗಳನ್ನು ಕೇಳುವವರೇ ಇಲ್ಲ!

ಕೋಚ್​ ಸಂಪೂರ್ಣ ಸಮಯ ಮೀಸಲಿಡಬೇಕು. ಅವರು ಭಾರತದ ಯಾವುದೇ ನಗರದಲ್ಲಿ ಯಾವುದೇ ಸಮಯದಲ್ಲಿ ಲಭ್ಯವಿರಬೇಕು. ನಾವು ಈ ಬದಲಾವಣೆಯನ್ನು ಮಾಡಲು ಇದೊಂದೇ ಕಾರಣ ಎಂದು ಜಿಂದಾಲ್ ಹೇಳಿದ್ದಾರೆ. ಇದೇ ವೇಳೆ ಈ ಏಳು ವರ್ಷಗಳಲ್ಲಿ ರಿಕಿ ಪಾಂಟಿಂಗ್ ಅವರ ಅಮೂಲ್ಯ ಸೇವೆಗಳಿಗಾಗಿ ಧನ್ಯವಾದಗಳನ್ನೂ ಅರ್ಪಿಸಿದ್ದಾರೆ.

ರಿಕಿ ಪಾಂಟಿಂಗ್ ಕೋಚ್ ಆಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 2020ರಲ್ಲಿ ಫೈನಲ್ ತಲುಪಿತ್ತು. ದುರದೃಷ್ಟವಶಾತ್, ಫೈನಲ್ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿತ್ತು.

Continue Reading

ಕ್ರಿಕೆಟ್

Ashwini Puneeth Rajkumar: ಅಪ್ಪು ಕಪ್‌ ಸೀಸನ್‌ 2ಗೆ ಚಾಲನೆ ನೀಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್!

Ashwini Puneeth Rajkumar: ಸೀಸನ್‌ 1 ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಬಾರಿ ಅದ್ದೂರಿಯಾಗಿ ಸೀಸನ್‌ 2 ಅನ್ನು ಆಯೋಜಿಸಲಾಗಿದೆ. ಇತ್ತೀಚೆಗೆ ಅಪ್ಪು ಕಪ್‌ ಸೀಸನ್‌ 2 ಆಕರ್ಷಕ ಟ್ರೋಫಿ ಜೊತೆಗೆ ತಂಡಗಳ ಜೆರ್ಸಿಗಳನ್ನು ಅನಾವರಣಗೊಳಿಸಲಾಗಿತ್ತು. ಇದೀಗ ಅದ್ದೂರಿಯಾಗಿ ಪಂದ್ಯಾವಳಿಗಳನ್ನು ಆರಂಭಿಸಲಾಗಿದ್ದು, ಅಂತಿಮ ವಿಜೇತರಿಗೆ ಭಾರೀ ಬಹುಮಾನ ಘೋಷಣೆ ಮಾಡಲಾಗಿದೆ.

VISTARANEWS.COM


on

Ashwini Puneeth Rajkumar launched Appu Cup season 2
Koo

ಬೆಂಗಳೂರು: ಅಪ್ಪು ನೆನಪನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಅಪ್ಪು ಕಪ್‌ ಸೀಸನ್‌ 2 ಬ್ಯಾಡ್ಮಿಂಟನ್‌ ಟೂರ್ನಿಗೆ ಇಂದು ನಾಗರಬಾವಿಯ ಕಿಂಗ್ಸ್‌ ಕ್ಲಬ್‌ನಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಸ್ಪರ್ಧಾಳುಗಳಿಗೆ ಶುಭ ಕೋರಿ, ಮೊದಲ ಪಂದ್ಯದ ಆರಂಭಕ್ಕೆ ಟಾಸ್‌ ಹಾಕಿದರು.

PRK ಸಂಸ್ಥೆಯ ಸಹಯೋಗದೊಂದಿಗೆ ಚೇತನ್‌ ಸೂರ್ಯ ಅವರು ಈ ಟೂರ್ನಮೆಂಟ್‌ ಅನ್ನು ಆಯೋಜಿಸಿದ್ದು, ಈ ಪಂದ್ಯಾವಳಿಯು ಮೂರು ದಿನಗಳ ಕಾಲ ನಡೆಯಲಿದೆ. ಅಪ್‌ ಕಪ್‌ ಸೀಸನ್‌ 2ನಲ್ಲಿ ಹತ್ತು ತಂಡಗಳು ಭಾಗವಹಿಸಲಿದ್ದು, ಸಿನಿಮಾ, ಧಾರಾವಾಹಿ ಮತ್ತು ಮಾಧ್ಯಮದವರು ಆಡಲಿದ್ದಾರೆ.

ಸೀಸನ್‌ 1 ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಬಾರಿ ಅದ್ದೂರಿಯಾಗಿ ಸೀಸನ್‌ 2 ಅನ್ನು ಆಯೋಜಿಸಲಾಗಿದೆ. ಇತ್ತೀಚೆಗೆ ಅಪ್ಪು ಕಪ್‌ ಸೀಸನ್‌ 2 ಆಕರ್ಷಕ ಟ್ರೋಫಿ ಜೊತೆಗೆ ತಂಡಗಳ ಜೆರ್ಸಿಗಳನ್ನು ಅನಾವರಣಗೊಳಿಸಲಾಗಿತ್ತು. ಇದೀಗ ಅದ್ದೂರಿಯಾಗಿ ಪಂದ್ಯಾವಳಿಗಳನ್ನು ಆರಂಭಿಸಲಾಗಿದ್ದು, ಅಂತಿಮ ವಿಜೇತರಿಗೆ ಭಾರೀ ಬಹುಮಾನ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ

ಕಾರ್ಯಕ್ರಮದಲ್ಲಿ ಮೀಡಿಯಾ ಕನೆಕ್ಟ್‌ ಸಂಸ್ಥಾಪಕಿ ಹಾಗೂ ಸಿಇಒ ದಿವ್ಯಾ ರಂಗೇನಹಳ್ಳಿ, ಡಿಪಿಐಎಸ್ ಫೌಂಡರ್‌, ಚೇರ್‌ಪರ್ಸನ್ ಸುನಿತಾ ಗೌಡ, ‌ಹಿರಿಯ ನಿರ್ಮಾಕರಾದ ಸಾರಾ ಗೋವಿಂದು ಉಪಸ್ಥಿತರಿದ್ದರು.

Continue Reading

ಕ್ರೀಡೆ

Womens Asia Cup Final: 8ನೇ ಪ್ರಶಸ್ತಿ ನಿರೀಕ್ಷೆಯಲ್ಲಿ ಭಾರತ; ನಾಳೆ ಫೈನಲ್​

Womens Asia Cup Final:ಮಹಿಳಾ ಏಷ್ಯಾ ಕಪ್​ ಈವರೆಗಿನ 8 ಕೂಟಗಳಲ್ಲಿ ಭಾರತ 7 ಸಲ ಚಾಂಪಿಯನ್‌ ಆಗುವ ಮೂಲಕ ಪ್ರಭುತ್ವ ಸಾಧಿಸಿದೆ. ಸೋಲು ಕಂಡಿದ್ದು ಒಮ್ಮೆ ಮಾತ್ರ. ಅದು 2018ರಲ್ಲಿ ಬಾಂಗ್ಲಾದೇಶ ವಿರುದ್ಧ. ಅಂದಿನ ಫೈನಲ್​ ಪಂದ್ಯದಲ್ಲಿ ಭಾರತ 3 ವಿಕೆಟ್‌ ಅಂತರದಿಂದ ಸೋಲನುಭವಿಸಿ ಪ್ರಶಸ್ತಿಯಿಂದ ವಂಚಿತವಾಗಿತ್ತು.

VISTARANEWS.COM


on

Womens Asia Cup Final
Koo

ದಾಂಬುಲಾ (ಶ್ರೀಲಂಕಾ): ಮಹಿಳಾ ಏಷ್ಯಾಕಪ್​ ಫೈನಲ್​(Womens Asia Cup Final) ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ. ನಾಳೆ ನಡೆಯುವ ಫೈನಲ್​ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್​ ಭಾರತ ಮತ್ತು ಶ್ರೀಲಂಕಾ(India Women vs Sri Lanka Women Final) ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. 7 ಬಾರಿಯ ಚಾಂಪಿಯನ್​ ಭಾರತವೇ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಹಾಟ್‌ ಫೇವರಿಟ್‌ ಆಗಿದೆ. ಅತ್ತ ಆತಿಥೇಯ ಲಂಕಾ ಚೊಚ್ಚಲ ಪ್ರಶಸ್ತಿ ಗೆಲ್ಲುವ ಇದಾರೆಯಲ್ಲಿದೆ. ಇತ್ತಂಡಗಳು ಕೂಡ ಈ ಬಾರಿ ಅಜೇಯ ತಂಡಗಳಾಗಿ ಫೈನಲ್​ಗೆ ಲಗ್ಗೆಯಿಟ್ಟಿದೆ. ಹೀಗಾಗಿ ಈ ಪಂದ್ಯದವನ್ನು ಹೈವೋಲ್ಟೇಜ್​ ಎಂದು ನಿರೀಕ್ಷೆ ಮಾಡಬಹುದು.

ಮಹಿಳಾ ಏಷ್ಯಾ ಕಪ್​ ಈವರೆಗಿನ 8 ಕೂಟಗಳಲ್ಲಿ ಭಾರತ 7 ಸಲ ಚಾಂಪಿಯನ್‌ ಆಗುವ ಮೂಲಕ ಪ್ರಭುತ್ವ ಸಾಧಿಸಿದೆ. ಸೋಲು ಕಂಡಿದ್ದು ಒಮ್ಮೆ ಮಾತ್ರ. ಅದು 2018ರಲ್ಲಿ ಬಾಂಗ್ಲಾದೇಶ ವಿರುದ್ಧ. ಅಂದಿನ ಫೈನಲ್​ ಪಂದ್ಯದಲ್ಲಿ ಭಾರತ 3 ವಿಕೆಟ್‌ ಅಂತರದಿಂದ ಸೋಲನುಭವಿಸಿ ಪ್ರಶಸ್ತಿಯಿಂದ ವಂಚಿತವಾಗಿತ್ತು.

6ನೇ ಬಾರಿ ಭಾರತ-ಲಂಕಾ ಫೈನಲ್​ ಮುಖಾಮುಖಿ


ಇದುವರೆಗಿನ ಮಹಿಳಾ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ಮತ್ತು ಶ್ರೀಲಂಕಾ 5 ಬಾರಿ ಫೈನಲ್​ ಮುಖಾಮುಖಿಯಾಗಿವೆ. ಎಲ್ಲ ಪಂದ್ಯಗಳನ್ನು ಭಾರತವೇ ಗೆದ್ದು ಬೀಗಿದೆ. ಈ ಬಾರಿಯದ್ದು 6ನೇ ಮುಖಾಮುಖಿ. 6ನೇ ಪ್ರಯತ್ನದಲ್ಲಾದರೂ ಲಂಕಾ ಪ್ರೋಫಿ ಗೆಲ್ಲಬಹುದೇ ಎಂಬ ಪ್ರಶ್ನೆಗೆ ನಾಳೆ ಉತ್ತರ ಸಿಗಲಿದೆ.

ಭಾರತ ಪರ ಬ್ಯಾಟಿಂಗ್​ನಲ್ಲಿ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮ ಮತ್ತು ಸ್ಮೃತಿ ಮಂಧಾನ ಎಲ್ಲ ಪಂದ್ಯಗಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ. ಶಫಾಲಿ 184 ರನ್​ ಗಳಿಸಿ ಕೂಟದ ಅತ್ಯಧಿಕ ರನ್​ ಗಳಿಸಿದ ಆಟಗಾರ್ತಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ವಿಭಾಗ ತುಂಬಾನೆ ಘಾತಕವಾಗಿದೆ. ಸ್ಪಿನ್ನ್​ ಮತ್ತು ವೇಗದ ವಿಭಾಗದಲ್ಲಿ ಸಮತೋಲಿತವಾಗಿದೆ. ರಾಧಾ ಯಾದವ್​, ಆಲ್​ರೌಂಡರ್​ ದೀಪ್ತಿ ಶರ್ಮಾ ತಂಡದ ಸ್ಪಿನ್ನರ್​ಗಳಾದರೆ, ವೇಗಿ ರೇಣುಕಾ ಸಿಂಗ್​ ಮತ್ತು ಪೂಜಾ ವಸ್ತ್ರಾಕರ್​ ವೇಗಿಗಳಾಗಿದ್ದಾರೆ.

ಇದನ್ನೂ ಓದಿ Womens Asia Cup T20: ಬಾಂಗ್ಲಾ ಮಣಿಸಿ ಫೈನಲ್​ ಪ್ರವೇಶಿಸಿದ ಭಾರತ

ಲಂಕಾ ಕೂಡ ಬಲಿಷ್ಠ


ಎದುರಾಳಿ ಶ್ರೀಲಂಕಾ ಕೂಡ ಭಾರತದ ಹಾಗೆ ಬಲಿಷ್ಠವಾಗಿದೆ. ಅದರಲ್ಲೂ ಕೂಟದ ಗರಿಷ್ಠ ಸ್ಕೋರರ್​ ಎನಿಸಿಕೊಂಡಿರುವ ನಾಯಕಿ ಚಾಮರಿ ಅತಪಟ್ಟು ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಒಂದು ಶತಕ ಕೂಡ ಬಾರಿಸಿದ್ದಾರೆ. ಆಡಿದ 4 ಪಂದ್ಯಗಳಿಂದ 243 ರನ್​ ಕಲೆ ಹಾಕಿದ್ದಾರೆ. ಇವರನ್ನು ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸದಂತೆ ಭಾರತೀಯ ಬೌಲರ್​ಗಳು ನೋಡಿಕೊಂಡರೆ ಅರ್ಧ ಪಂದ್ಯ ಗೆದ್ದಂತೆ. ನಿನ್ನೆ ನಡೆದಿದ್ದ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾವನ್ನು ಮಣಿಸಿದರೆ, ಶ್ರೀಲಂಕಾ ಪಾಕಿಸ್ತಾನವನ್ನು ಸೋಲಿಸಿ ಫೈನಲ್​ ಪ್ರವೇಶಿಸಿತ್ತು.

ಸಂಭಾವ್ಯ ತಂಡಗಳು


ಶ್ರೀಲಂಕಾ: ವಿಶ್ಮಿ ಗುಣರತ್ನೆ, ಚಾಮರಿ ಅಟಪಟ್ಟು (ನಾಯಕಿ), ಹರ್ಷಿತಾ ಸಮರವಿಕ್ರಮ, ಹಾಸಿನಿ ಪೆರೇರಾ, ಅನುಷ್ಕಾ ಸಂಜೀವನಿ (ವಾಕ್), ಕವಿಶಾ ದಿಲ್ಹಾರಿ, ನೀಲಾಕ್ಷಿ ಡಿ ಸಿಲ್ವಾ, ಇನೋಶಿ ಪ್ರಿಯದರ್ಶನಿ, ಉದೇಶಿಕಾ ಪ್ರಬೋಧನಿ, ಸುಗಂದಿಕಾ ಕುಮಾರಿ, ಅಚಿನಿ ಕುಲಸೂರ್ಯ.

ಭಾರತ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಉಮಾ ಚೆಟ್ರಿ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೀ), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ತನುಜಾ ಕನ್ವರ್, ರೇಣುಕಾ ಠಾಕೂರ್ ಸಿಂಗ್.

Continue Reading
Advertisement
Minister Dinesh Gundurao drives for the 5th Kannada Sahitya Sammelana in Bengaluru
ಬೆಂಗಳೂರು6 mins ago

Kannada Sahitya Sammelana: ಬೆಂಗಳೂರಿನಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

The woman shows gray hair on her head. Hair with fragments of gray hair, hair roots requiring dyeing
ಆರೋಗ್ಯ7 mins ago

Ways to Prevent Gray Hair: 30 ದಾಟುವ ಮೊದಲೇ ಕೂದಲು ಬೆಳ್ಳಗಾಗುತ್ತಿದೆಯೇ? ಇದಕ್ಕಿದೆ ಸರಳ ಪರಿಹಾರ

Yadgiri News Kolluru bridge inundation MLA Channareddy Patil tunnuru visit inspection
ಯಾದಗಿರಿ8 mins ago

Yadgiri News: ಕೃಷ್ಣಾ ನದಿ ಪ್ರವಾಹದಿಂದ ಕೊಳ್ಳುರು ಸೇತುವೆ ಮುಳುಗಡೆ; ಶಾಸಕ ಚನ್ನಾರೆಡ್ಡಿ ಪಾಟೀಲ ಭೇಟಿ

Nirmala Sahaya Hasta programme by Okkaliga Yuva Brigade on 28th July and 1st 3rd and 5th August
ಬೆಂಗಳೂರು9 mins ago

Bengaluru News: ಒಕ್ಕಲಿಗ ಯುವ ಬ್ರಿಗೇಡ್‌ನಿಂದ ಜು.28ರಂದು ʼನಿರ್ಮಲ ಸಹಾಯ ಹಸ್ತʼ ಕಾರ್ಯಕ್ರಮ

Karnataka weather Forecast
ಮಳೆ10 mins ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

Drowned in water
ಬಳ್ಳಾರಿ22 mins ago

Drowned in water : ಮೀನು ಹಿಡಿಯುವಾಗ ಫಿಟ್ಸ್‌ ಬಂದು ನದಿಗೆ ಬಿದ್ದ ಮೀನುಗಾರ

HD Kumaraswamy
ಪ್ರಮುಖ ಸುದ್ದಿ45 mins ago

HD Kumaraswamy: ರಾಜ್ಯದಲ್ಲಿ ನಾಳೆ ಚುನಾವಣೆ ನಡೆದ್ರೂ ಕಾಂಗ್ರೆಸ್‌ ಮನೆಗೆ; ಭವಿಷ್ಯ ನುಡಿದ ಕುಮಾರಸ್ವಾಮಿ

Paris Olympics 2024
ಪ್ರಮುಖ ಸುದ್ದಿ49 mins ago

Paris Olympics 2024 : ಶೂಟಿಂಗ್​ನಲ್ಲಿ ಭಾರತಕ್ಕೆ ಖುಷಿ ಸುದ್ದಿ; ಮಹಿಳೆಯರ 10 ಮೀಟರ್ ಏರ್​ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್​ ಫೈನಲ್​ಗೆ

Paris Olympics 2024
ಫ್ಯಾಷನ್52 mins ago

Paris Olympics 2024: ಭಾರತೀಯ ಅಥ್ಲೀಟ್‌ಗಳ ಡ್ರೆಸ್‌ ಕೋಡ್‌ ವಿನ್ಯಾಸಕ್ಕೆ ಜನರ ಮಿಶ್ರ ಪ್ರತಿಕ್ರಿಯೆ

Vaccin for Hiv
ಆರೋಗ್ಯ1 hour ago

Vaccine for HIV: ವರ್ಷಕ್ಕೆರಡು ಬಾರಿ ಈ ಇಂಜೆಕ್ಷನ್‌ ತೆಗೆದುಕೊಂಡರೆ ಎಚ್‌ಐವಿ ಭಯವೇ ಬೇಡ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ10 mins ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ5 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ6 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ1 day ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌