Salaar Movie: ಸಲಾರ್‌ಗೆ ʻಎʼ ಸರ್ಟಿಫಿಕೇಟ್; ಅಬ್ಬರಿಸಲಿದೆಯೇ ಕ್ರೌರ್ಯ? - Vistara News

South Cinema

Salaar Movie: ಸಲಾರ್‌ಗೆ ʻಎʼ ಸರ್ಟಿಫಿಕೇಟ್; ಅಬ್ಬರಿಸಲಿದೆಯೇ ಕ್ರೌರ್ಯ?

‘ಸಲಾರ್: ಭಾಗ 1’ ಡಿಸೆಂಬರ್‌ 22ರಂದು ಬಿಡುಗಡೆಯಾಗಲಿದೆ. ಈಗ ‘ಸಲಾರ್​’ (Salaar) ಸಿನಿಮಾಗೆ ಸೆನ್ಸಾರ್​ ಬೋರ್ಡ್​ನಿಂದ ‘ಎ’ ಸರ್ಟಿಫಿಕೇಟ್​ (A certificate) ನೀಡಲಾಗಿದೆ. ಹಾಗಾಗಿ ಈ ಸಿನಿಮಾದಲ್ಲೂ ಕ್ರೌರ್ಯ ಅಬ್ಬರಿಸಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.

VISTARANEWS.COM


on

``A'' certificate for Salaar Movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕೆಜಿಎಫ್‌ (KGF) ಸರಣಿ ಚಿತ್ರಗಳ ಮೂಲಕ ಇಡೀ ದೇಶದ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದವರು ಪ್ರಶಾಂತ್‌ ನೀಲ್‌ (Prashanth Neel). ಇದೀಗ ಅವರು ‘ಸಲಾರ್‌’ (Salaar) ಚಿತ್ರದ ಮೂಲಕ ಮತ್ತೊಮ್ಮೆ ಮ್ಯಾಜಿಕ್‌ ಮಾಡಲು ಮುಂದಾಗುತ್ತಿದ್ದಾರೆ. ಟಾಲಿವುಡ್‌ ಸೂಪರ್‌ ಸ್ಟಾರ್‌ ಪ್ರಭಾಸ್‌ (Prabhas) ಅಭಿನಯದ ‘ಸಲಾರ್‌’ ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ‘ಸಲಾರ್: ಭಾಗ 1’ ಡಿಸೆಂಬರ್‌ 22ರಂದು ಬಿಡುಗಡೆಯಾಗಲಿದೆ. ಈಗ ‘ಸಲಾರ್​’ (Salaar) ಸಿನಿಮಾಗೆ ಸೆನ್ಸಾರ್​ ಬೋರ್ಡ್​ನಿಂದ ‘ಎ’ ಸರ್ಟಿಫಿಕೇಟ್​ (A certificate) ನೀಡಲಾಗಿದೆ. ಹಾಗಾಗಿ ಈ ಸಿನಿಮಾದಲ್ಲೂ ಕ್ರೌರ್ಯ ಅಬ್ಬರಿಸಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.

`ಎ’ ಸರ್ಟಿಫಿಕೇಟ್‌ ಸಿಕ್ಕರೆ 18 ವರ್ಷಕ್ಕಿಂತ ಕಿರಿಯರು ಆ ಸಿನಿಮಾವನ್ನು ನೋಡುವಂತಿಲ್ಲ. ಇದರಿಂದ ಮಕ್ಕಳ ಜತೆ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ತೊಂದರೆ ಆಗಲಿದೆ. ಹೀಗಾಗಿ ಸಲಾರ್‌ ಸಿನಿಮಾ ಉತ್ತಮ ಕಲೆಕ್ಷನ್‌ ಮಾಡೋದು ಡೌಟ್‌ ಅಂತಿದ್ದಾರೆ ಸಿನಿ ತಜ್ಞರು. ಕೆಜಿಎಫ್‌ʼ ಸರಣಿ ಚಿತ್ರಗಳನ್ನು ನಿರ್ಮಿಸಿದ್ದ ಫಿಲ್ಮ್ಸ್‌ ನ ವಿಜಯ್‌ ಕಿರಂಗದೂರು ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಈ ಚಿತ್ರ ತೆರೆಕಾಣಲಿದೆ. ಶ್ರುತಿ ಹಾಸನ್‌, ಜಗಪತಿ ಬಾಬು ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Salaar Movie: ವಿಶೇಷ ಚೇತನ ಗಾಯಕಿಗೆ ಬಂಪರ್‌ ಆಫರ್‌ ಕೊಟ್ಟ ಪ್ರಶಾಂತ್‌ ನೀಲ್‌!

ʼʼಸಲಾರ್‌ʼ ಚಿತ್ರದ ಕಥೆ ದೀರ್ಘವಾಗಿದೆ. ಈ ಕಥೆಯನ್ನು ಹೇಳಲು ಎರಡು ಭಾಗ ಬೇಕೇ ಬೇಕು ಎಂದು ಮೊದಲೇ ನಿರ್ಧರಿಸಿದ್ದೆ. ಆದರೆ ʼಕೆಜಿಎಫ್‌ʼ ಆರಂಭಿಸುವಾಗ ಎರಡು ಪಾರ್ಟ್‌ಗಳಲ್ಲಿ ತೆರೆಗೆ ತರುವ ಉದ್ದೇಶವಿರಲಿಲ್ಲ. ಆದರೆ ʼಸಲಾರ್‌ʼ ವಿಚಾರದಲ್ಲಿ ಎರಡು ಭಾಗ ಎನ್ನುವುದು ಪೂರ್ವ ನಿರ್ಧರಿತವಾಗಿತ್ತುʼʼ ಎಂದು ಪ್ರಶಾಂತ್‌ ನೀಲ್‌ ಈ ಹಿಂದೆ ಹೇಳಿದ್ದರು.

ʼಕೆಜಿಎಫ್ʼ-ʼಸಲಾರ್‌ʼ ಬೇರೆ ಬೇರೆ

“ಸಲಾರ್‌ನಿಂದ ಪ್ರೇಕ್ಷಕರು ಮತ್ತೊಂದು ʼಕೆಜಿಎಫ್ʼ ಅನ್ನು ನಿರೀಕ್ಷಿಸಬಾರದು. ಯಾಕೆಂದರೆ ʼಸಲಾರ್ʼ ತನ್ನದೇ ಆದ ಜಗತ್ತು, ಅದಕ್ಕೆ ತನ್ನದೇ ಆದ ಭಾವನೆ ಮತ್ತು ಪಾತ್ರಗಳಿವೆ. ʼಸಲಾರ್ʼ ಹೇಳುವ ಬೇರೆಯದೇ ಕಥೆಗಾಗಿ ಜನರು ಅದನ್ನು ನೋಡುತ್ತಾರೆ ಎಂದು ಭಾವಿಸುತ್ತೇನೆ. ʼಸಲಾರ್‌ʼನ ಮೊದಲ ದೃಶ್ಯದಿಂದಲೇ ನಾವು ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯಲಿದ್ದೇವೆ. ಭಾರತದಲ್ಲಿ ಕಥೆ ಹೇಳಲಿರುವ ಅತ್ಯುತ್ತಮ ಮಾಧ್ಯಮ ಚಲನಚಿತ್ರವಾಗಿರುವುದರಿಂದ ಅದನ್ನು ʼಸಲಾರ್‌ʼ ಮೂಲಕ ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಲಿದ್ದೇನೆ ಎನ್ನುವ ನಿರೀಕ್ಷೆ ಇದೆʼʼ ಎಂದು ಪ್ರಶಾಂತ್‌ ತಿಳಿಸಿದ್ದರು.

6 ಗಂಟೆಗಳ ಸಿನಿಮಾ!

ʼʼಸಲಾರ್‌ʼನ ಕಥೆಯನ್ನು ಸುಮಾರು 6 ಗಂಟೆಗಳ ಚಲನಚಿತ್ರವನ್ನಾಗಿಸಬಹುದು. ಅದಕ್ಕಾಗಿ ಎರಡು ಪಾರ್ಟ್‌ ಮಾಡಿದ್ದೇನೆ ಎಂದು ಹೇಳಿರುವ ಪ್ರಶಾಂತ್‌ ನೀಲ್‌ ಇನ್ನೊಂದು ಅಚ್ಚರಿಯ ಸಂಗತಿಯನ್ನೂ ರಿವೀಲ್‌ ಮಾಡಿದ್ದಾರೆ. ʼಕೆಜಿಎಫ್‌ʼಗಿಂತ ಮೊದಲೇ ʼಸಲಾರ್‌ʼ ಕಥೆ ಬರೆದಿದ್ದರಂತೆ. ʼʼಸಲಾರ್‌ʼ ಮೊದಲ ಪಾರ್ಟ್‌ನಲ್ಲಿ ಅರ್ಧ ಕಥೆ ಹೇಳುತ್ತೇವೆ. ಉಳಿದರ್ಧ ಕಥೆ ಎರಡನೇ ಪಾರ್ಟ್‌ನಲ್ಲಿ ಬರಲಿದೆʼʼ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Salaar Movie: ಪ್ರಭಾಸ್ ಜತೆ ಐಟಂ ಸಾಂಗ್‌ಗೆ ಸೊಂಟ ಬಳುಕಿಸುತ್ತಿದ್ದಾರೆ ಗದರ್ 2 ನಟಿ?

ಕಥೆ ಏನು?

ʼʼಇದು ಸ್ನೇಹಿತರಿಬ್ಬರು ಶತ್ರುಗಳಾಗುವ ಕಥೆಯನ್ನು ಒಳಗೊಂಡಿದೆ. ಸ್ನೇಹವೇ ʼಸಲಾರ್‌ʼನ ಪ್ರಮುಖ ಭಾವನೆ. ಡಿಸೆಂಬರ್‌ 1ರಂದು ಟ್ರೈಲರ್‌ ಬಿಡುಗಡೆಯಾಗಲಿದ್ದು, ಇದರಲ್ಲಿ ʼಸಲಾರ್‌ʼ ಪ್ರಪಂಚದ ಚಿಕ್ಕ ಪರಿಚಯ ನಿಮಗಾಗಲಿದೆʼʼ ಎಂದು ಹೇಳಿ ಪ್ರಶಾಂತ್‌ ಕುತೂಹಲ ಹುಟ್ಟು ಹಾಕಿದ್ದಾರೆ.

ʼಕೆಜಿಎಫ್‌ʼ ಸರಣಿ ಚಿತ್ರಗಳನ್ನು ನಿರ್ಮಿಸಿದ್ದ ಫಿಲ್ಮ್ಸ್‌ ನ ವಿಜಯ್‌ ಕಿರಂಗದೂರು ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಈ ಚಿತ್ರ ತೆರೆಕಾಣಲಿದೆ. ಮೊದಲ ಬಾರಿ ಪ್ರಭಾಸ್‌ ಮತ್ತು ಪ್ರಶಾಂತ್‌ ನೀಲ್‌ ಒಂದಾಗುತ್ತಿದ್ದು, ಸಿನಿಮಾದ ಇತರ ಮುಖ್ಯ ಪಾತ್ರಗಳಲ್ಲಿ ಪೃಥ್ವಿರಾಜ್‌ ಸುಕುಮಾರನ್‌, ಶ್ರುತಿ ಹಾಸನ್‌, ಜಗಪತಿ ಬಾಬು ಮತ್ತಿತರರು ಕಾಣಿಸಿಕೊಂಡಿದ್ದಾರೆ. ಸದ್ಯ ಪೋಸ್ಟರ್‌ ಮೂಲಕವೇ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಟಾಲಿವುಡ್

Actor Darshan: ದರ್ಶನ್‌ ಅಣ್ಣ ಕನಸಿನಲ್ಲೂ ಯಾರಿಗೂ ತೊಂದರೆ ಕೊಡುವವರಲ್ಲ ಎಂದ ಟಾಲಿವುಡ್‌ ಸ್ಟಾರ್‌ ನಾಗ ಶೌರ್ಯ!

Actor Darshan: ದರ್ಶನ್ ಅವರನ್ನು ಬೆಂಬಲಿಸುವ ನಾಗಶೌರ್ಯ ನಿರ್ಧಾರವು ಮೂರ್ಖತನ ಎಂದು ಅನೇಕರು ಕಮೆಂಟ್‌ ಮಾಡಿದ್ದಾರೆ. ಒಬ್ಬ ಕೊಲೆಗಾರನನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ನೆಟ್ಟಿಗರು ನಾಗ ಶೌರ್ಯ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ಇದೀಗ ನಟನ ಈ ಪೋಸ್ಟ್‌ಗಾಗಿ ಛೀಮಾರಿ ಹಾಕುತ್ತಿದ್ದಾರೆ. 2024ರ ಜೂನ್ 7ರಂದು ರೇಣುಕಾಸ್ವಾಮಿಯನ್ನು ದರ್ಶನ್ ಸಹಚರ ರಘು ಅಪಹರಿಸಿದ್ದ. ಕೆಲವು ವರದಿಗಳ ಪ್ರಕಾರ, ದರ್ಶನ್ ಸಂತ್ರಸ್ತನನ್ನು ಬೆಲ್ಟ್ ನಿಂದ ಹೊಡೆದರು ಮತ್ತು ಆರೋಪಿಸಲಾಗಿದೆ. ಅವರ ಕುಟುಂಬವು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿತು. ಜೂನ್ 9, 2024 ರಂದು, ದರ್ಶನ್ ತಮ್ಮ ಇತ್ತೀಚಿನ ಚಿತ್ರ “ಡೆವಿಲ್: ದಿ ಹೀರೋ” ಸೆಟ್​​ನಲ್ಲಿದ್ದಾಗ ಪವಿತ್ರಾ ಗೌಡ ಅವರೊಂದಿಗೆ ವಿಚಾರಣೆಗೆ ಕರೆದೊಯ್ಯಲಾಗಿತ್ತು.

VISTARANEWS.COM


on

Actor Darshan incident Naga Shaurya support
Koo

ಬೆಂಗಳೂರು: ನಟ ದರ್ಶನ್ (Actor Darshan) ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನ ನ್ಯಾಯಾಂಗ ಬಂಧನಲ್ಲಿದ್ದಾರೆ. ಇಷ್ಟಾದರೂ ದರ್ಶನ್‌ಗೆ ಕೆಲವು ಅಭಿಮಾನಿಗಳು ಹಾಗೂ ನಟ ನಟಿಯರು ಬೆಂಬಲ ನೀಡಿದ್ದಾರೆ. ದಿನ ಕಳೆದಂತೆ ತನಿಖೆಯಿಂದ ಬೆಚ್ಚಿ ಬೀಳಿಸುವ ಸತ್ಯಗಳು ಹೊರಬೀಳುತ್ತಿವೆ. ಕಲೆವರು ಅಂದಿನಿಂದ ದರ್ಶನ್‌ಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ಸಾರ್ವಜನಿಕ ಆಕ್ರೋಶದ ನಡುವೆ, ಟಾಲಿವುಡ್ ಹೀರೊ ನಾಗ ಶೌರ್ಯ ದರ್ಶನ್‌ಗೆ ಬೆಂಬಲ ನೀಡಿದ್ದಾರೆ. ʻದರ್ಶನ್ ಅಣ್ಣ ತಮ್ಮ ಕೆಟ್ಟ ಕನಸಿನಲ್ಲೂ ಯಾರಿಗೂ ತೊಂದರೆ ಕೊಡುವವರಲ್ಲ. ನಾನು ಈ ಸುದ್ದಿಯನ್ನು ಒಪ್ಪಿಕೊಳ್ಳಲಾರೆʼʼಎಂದು ಬರೆದುಕೊಂಡಿದ್ದಾರೆ.

ನಾಗ ಶೌರ್ಯ ಬರೆದುಕೊಂಡಿದ್ದು ಹೀಗೆ ʻ“ಘಟನೆ ಕೇಳಿದಾಗ ಮೃತರ ಕುಟುಂಬಕ್ಕೆ ನನ್ನ ಹೃದಯ ಮರಗುತ್ತದೆ. ಈ ಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿಯನ್ನು ನೀಡಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಈ ವಿಷಯದಲ್ಲಿ ಜನರು ಈಗಾಗಲೇ ತೀರ್ಮಾನಗಳಿಗೆ ಬರುತ್ತಿರುವುದನ್ನು ನೋಡುವುದು ಕಷ್ಟವಾಗುತ್ತದೆ. ದರ್ಶನ್ ಅಣ್ಣ ತಮ್ಮ ಕೆಟ್ಟ ಕನಸಿನಲ್ಲೂ ಯಾರಿಗೂ ತೊಂದರೆ ಕೊಡುವವರಲ್ಲ. ದರ್ಶನ್‌ ಅವರ ಉದಾರತೆ, ಸಹೃದಯ ಸ್ವಭಾವ ಮತ್ತು ಇತರರಿಗೆ ಸಹಾಯ ಮಾಡುವ ಬದ್ಧತೆಯನ್ನು ಅವರನ್ನು ಚೆನ್ನಾಗಿ ಬಲ್ಲವರು ತಿಳಿದುಕೊಂಡಿದ್ದಾರೆ. ಅನೇಕರಿಗೆ ಶಕ್ತಿಯ ಆಧಾರಸ್ತಂಭವಾಗಿದ್ದಾರೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Darshan : ನಟ ದರ್ಶನ್‌ಗಾಗಿ ಊಟ ಬಿಟ್ಟು ಜೈಲಿನ ಹೊರಗೆ ವಿಶೇಷಚೇತನ ಯುವತಿ ಗೋಳಾಟ

ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ನಂಬಿಕೆ ಇದೆ. ಸತ್ಯವು ಶೀಘ್ರದಲ್ಲೇ ಹೊರಬರುತ್ತದೆ. ಇನ್ನೊಂದು ಕುಟುಂಬವು ಸಹ ಬಹಳವಾಗಿ ನರಳುತ್ತಿದೆ ಎಂಬುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಹಾನುಭೂತಿಗೆ ಹೆಸರುವಾಸಿಯಾದ ಅಣ್ಣ ಅವರು ನಿರಪರಾಧಿ ಎಂಬುದು ಸಾಬೀತಾಗುತ್ತದೆ. ನಿಜವಾದ ಅಪರಾಧಿ ಯಾರೆಂಬುದು ಗೊತ್ತಾಗುತ್ತದೆ’ ಎಂದಿದ್ದಾರೆ.

ದರ್ಶನ್ ಅವರನ್ನು ಬೆಂಬಲಿಸುವ ನಾಗಶೌರ್ಯ ನಿರ್ಧಾರವು ಮೂರ್ಖತನ ಎಂದು ಅನೇಕರು ಕಮೆಂಟ್‌ ಮಾಡಿದ್ದಾರೆ. ಒಬ್ಬ ಕೊಲೆಗಾರನನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ನೆಟ್ಟಿಗರು ನಾಗ ಶೌರ್ಯ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ಇದೀಗ ನಟನ ಈ ಪೋಸ್ಟ್‌ಗಾಗಿ ಛೀಮಾರಿ ಹಾಕುತ್ತಿದ್ದಾರೆ.

2024ರ ಜೂನ್ 7ರಂದು ರೇಣುಕಾಸ್ವಾಮಿಯನ್ನು ದರ್ಶನ್ ಸಹಚರ ರಘು ಅಪಹರಿಸಿದ್ದ. ಕೆಲವು ವರದಿಗಳ ಪ್ರಕಾರ, ದರ್ಶನ್ ಸಂತ್ರಸ್ತನನ್ನು ಬೆಲ್ಟ್ ನಿಂದ ಹೊಡೆದರು ಮತ್ತು ಆರೋಪಿಸಲಾಗಿದೆ. ಅವರ ಕುಟುಂಬವು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿತು. ಜೂನ್ 9, 2024 ರಂದು, ದರ್ಶನ್ ತಮ್ಮ ಇತ್ತೀಚಿನ ಚಿತ್ರ “ಡೆವಿಲ್: ದಿ ಹೀರೋ” ಸೆಟ್​​ನಲ್ಲಿದ್ದಾಗ ಪವಿತ್ರಾ ಗೌಡ ಅವರೊಂದಿಗೆ ವಿಚಾರಣೆಗೆ ಕರೆದೊಯ್ಯಲಾಗಿತ್ತು.

ಸ್ವಾಮಿಯನ್ನು ಕೋಲುಗಳಿಂದ ಥಳಿಸಿ ವಿದ್ಯುತ್ ಆಘಾತಗಳನ್ನು ನೀಡಲಾಗುತ್ತು. ಈ ವೇಳೆ ಪವಿತ್ರಾ ಗೌಡ ಸ್ವಲ್ಪ ಸಮಯದವರೆಗೆ ಶೆಡ್ ನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ತೂಗುದೀಪ ಅವರು ಮಾಡಿದ ಪೋಸ್ಟ್​ಗಳಿಗೆ ಸ್ವಾಮಿಯನ್ನು ಶಿಕ್ಷಿಸಲು ಶ್ರೀ ತೂಗುದೀಪ ಅವರನ್ನು ಪ್ರಚೋದಿಸಿದ್ದು ಎಂ.ಎಸ್.ಗೌಡ ಎಂದು ಹೇಳಲಾಗಿದೆ. ಇದೇ ರೀತಿಯ ಹಲವಾರು ಮಾಹಿತಿಗಳ ನೀಡಲಾಗಿದೆ.

Continue Reading

South Cinema

Kalki 2898 AD: ‘ಕಲ್ಕಿ 2898 ಎಡಿ’ಗೆ ವೀಕ್ಷಕರಿಂದ ಬಹುಪರಾಕ್ ; ಹರಿದ ಚಪ್ಪಲಿ ಫೋಟೊ ಹಂಚಿಕೊಂಡ ನಿರ್ದೇಶಕ !

Kalki 2898 AD: ಪ್ರಭಾಸ್‌ ಅವರ ಬಹುನಿರೀಕ್ಷಿತ ಈ ಸಿನಿಮಾವನ್ನು ನಿರ್ದೇಶನ ಮಾಡಿರುವುದು ನಾಗ್ ಅಶ್ವಿನ್ . ಈ ಸಿನಿಮಾ ಸೆಟ್ಟೇರಿ ಮೂರು ವರ್ಷ ಕಳೆದಿತ್ತು. ಈ ಚಿತ್ರದ ಜರ್ನಿ ಹೇಗಿತ್ತು ಎಂದು ಫೋಟೊ ಮೂಲಕ ವಿವರಣೆ ನೀಡಿದ್ದಾರೆ. ಚಿತ್ರವು ಮೊದಲ ದಿನ ವಿಶ್ವದಾದ್ಯಂತ 180 ಕೋಟಿ ರೂ ಗಳಿಸಿದೆ. ಸಿನಿಮಾವನ್ನು ಜನರು ಹಾಡಿ ಹೊಗಳುತ್ತಿದ್ದಾರೆ.

VISTARANEWS.COM


on

Kalki 2898 AD Nag Ashwin Torn Slippers Dedication Behind
Koo

ಬೆಂಗಳೂರು: ನಾಗ್ ಅಶ್ವಿನ್ ನಿರ್ದೇಶಿಸಿದ ಕಲ್ಕಿ 2898 AD (Kalki 2898 AD:), ಎಲ್ಲಾ ಭಾಷೆಗಳಲ್ಲಿ ಮೊದಲ ದಿನದಲ್ಲಿ ಭಾರತದಲ್ಲಿ ಸುಮಾರು 95 ಕೋಟಿ ರೂಪಾಯಿ ಗಳಿಸಿದೆ, ಆದರೆ ಅದರ ಒಟ್ಟು ಸಂಗ್ರಹವು ಸುಮಾರು 115 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಒಟ್ಟಾರೆಯಾಗಿ, ಚಿತ್ರವು ಮೊದಲ ದಿನ ವಿಶ್ವದಾದ್ಯಂತ 180 ಕೋಟಿ ರೂ ಗಳಿಸಿದೆ. ಸಿನಿಮಾವನ್ನು ಜನರು ಹಾಡಿ ಹೊಗಳುತ್ತಿದ್ದಾರೆ. ಈ ಚಿತ್ರದ ಜರ್ನಿ ಹೇಗಿತ್ತು ಎಂಬುದನ್ನು ಒಂದೇ ಒಂದು ಫೋಟೋ ಮೂಲಕ ನಿರ್ದೇಶಕ ನಾಗ್ ಅಶ್ವಿನ್ ಅವರು ವಿವರಿಸಿದ್ದಾರೆ. ಸಿನಿಮಾ ರಿಲೀಸ್ ಸಂದರ್ಭದಲ್ಲಿ ನಾಗ್ ಅಶ್ವಿನ್ ಅವರು ಹರಿದ ಚಪ್ಪಲಿ ಫೋಟೋ ಹಂಚಿಕೊಂಡಿದ್ದಾರೆ.

ಪ್ರಭಾಸ್‌ ಅವರ ಬಹುನಿರೀಕ್ಷಿತ ಈ ಸಿನಿಮಾವನ್ನು ನಿರ್ದೇಶನ ಮಾಡಿರುವುದು ನಾಗ್ ಅಶ್ವಿನ್ . ಈ ಸಿನಿಮಾ ಸೆಟ್ಟೇರಿ ಮೂರು ವರ್ಷ ಕಳೆದಿತ್ತು. ಈ ಚಿತ್ರದ ಜರ್ನಿ ಹೇಗಿತ್ತು ಎಂದು ಫೋಟೊ ಮೂಲಕ ವಿವರಣೆ ನೀಡಿದ್ದಾರೆ. ನಾಗ್ ಅಶ್ವಿನ್ ಅವರು ಇದೇ ಮೊದಲ ಬಾರಿಗೆ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ರಿಲೀಸ್ ಸಂದರ್ಭದಲ್ಲಿ ನಾಗ್ ಅಶ್ವಿನ್ ಅವರು ಹರಿದ ಚಪ್ಪಲಿ ಫೋಟೋ ಹಂಚಿಕೊಂಡಿದ್ದಾರೆ. ‘ಇದು ತುಂಬಾನೇ ದೀರ್ಘ ರಸ್ತೆ’ ಎಂದು ಬರೆದುಕೊಂಡಿದ್ದಾರೆ. ಈ ಚಪ್ಪಲಿ ಒಂದಷ್ಟು ಕಡೆಗಳಲ್ಲಿ ಹರಿದು ಹೋಗಿದೆ. ಈ ಮೂಲಕ ತಮ್ಮ ಶ್ರಮದ ಬಗ್ಗೆ ಹೇಳಿಕೊಂಡಿದ್ದಾರೆ. ಇದೀಗ ಈ ಫೋಟೊ ಶೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅನೇಕರು ನಾಗ್ ಅಶ್ವಿನ್ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: Kalki 2898 AD: ಮೊದಲ ದಿನವೇ ಗಳಿಕೆಯಲ್ಲಿ ದಾಖಲೆ ಬರೆದ ‘ಕಲ್ಕಿ 2898 ಎಡಿ’ ಸಿನಿಮಾ; ಕಲೆಕ್ಷನ್‌ ಎಷ್ಟು?

ನಾಗ್ ಅಶ್ವಿನ್ ನಿರ್ದೇಶಿಸಿದ ಕಲ್ಕಿ 2898 AD, ಎಲ್ಲಾ ಭಾಷೆಗಳಲ್ಲಿ ಮೊದಲ ದಿನದಲ್ಲಿ ಭಾರತದಲ್ಲಿ ಸುಮಾರು 95 ಕೋಟಿ ರೂಪಾಯಿ ಗಳಿಸಿದೆ, ಆದರೆ ಅದರ ಒಟ್ಟು ಸಂಗ್ರಹವು ಸುಮಾರು 115 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಒಟ್ಟಾರೆಯಾಗಿ, ಚಿತ್ರವು ಮೊದಲ ದಿನ ವಿಶ್ವದಾದ್ಯಂತ 180 ಕೋಟಿ ರೂ ಗಳಿಸಿದೆ. ಕಲ್ಕಿ 2898 ಎಡಿ ಸಿನಿಮಾ ಹಲವು ಚಿತ್ರಗಳನ್ನು ಹಿಂದಿಕ್ಕಿದೆ. ಅದರಲ್ಲಿ ಕೆಜಿಎಫ್ 2 (ರೂ. 159 ಕೋಟಿ), ಸಲಾರ್ (ರೂ. 158 ಕೋಟಿ), ಲಿಯೋ (ರೂ. 142.75 ಕೋಟಿ) ಸಿನಿಮಾಗಳ ಜಾಗತಿಕ ಆರಂಭಿಕ ದಾಖಲೆಗಳನ್ನು ಹಿಂದಿಕ್ಕಿದೆ. ಆದರೆ, ಮೊದಲ ದಿನದ ಗಳಿಕೆಯಲ್ಲಿ ‘ಆರ್​ಆರ್​ಆರ್’ (223) ಹಾಗೂ ‘ಬಾಹುಬಲಿ 2’ (217) ಚಿತ್ರವನ್ನು ಹಿಂದಿಕ್ಕಲು ಈ ಸಿನಿಮಾ ಬಳಿ ಸಾಧ್ಯವಾಗಿಲ್ಲ.

ಕಲ್ಕಿ 2898 AD ಜೂನ್ 27 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಯಿತು. ಚಲನಚಿತ್ರವು ಈಗಾಗಲೇ ತನ್ನ ಮುಂಗಡ ಬುಕಿಂಗ್‌ನಲ್ಲಿ ಎಲ್ಲಾ ಭಾಷೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ.

ಕಲ್ಕಿ 2898 ಎಡಿ’ ಚಿತ್ರ ಜೂನ್ 27ರಂದು ರಿಲೀಸ್ ಆಗಿದೆ. ಮೊದಲ ದಿನ ಈ ಚಿತ್ರದ ಲಕ್ಷಾಂತರ ಟಿಕೆಟ್​ಗಳು ಮಾರಾಟ ಆಗಿವೆ. ಜನರು ಚಿತ್ರಕ್ಕೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮಹಾಭಾರತದಿಂದ ಸಿನಿಮಾದ ಕಥೆ ಆರಂಭ ಆಗಲಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರಕ್ಕೆ ಅಶ್ವಿನಿ ದತ್ ಬಂಡವಾಳ ಹೂಡಿದ್ದಾರೆ.

ವಿಶ್ವದಾದ್ಯಂತ (world) ತೆರೆಗೆ ಬಂದ ಅತ್ಯಂತ ದುಬಾರಿ ಚಿತ್ರ (film) ʼಕಲ್ಕಿ 2898 ಎಡಿʼ (Kalki 2898AD) ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಇದು ಹಿಂದೂ ಧರ್ಮದ (hindu dharma) ವಿಷಯದ ಮೇಲೆ ಕೇಂದ್ರೀಕೃತವಾಗಿರುವುದು. ಭಗವಾನ್ ವಿಷ್ಣುವಿನ (baghavan vishnu) 10ನೇ ಅವತಾರ ಕಲ್ಕಿ (kalki). ಸದಾಚಾರ ಮತ್ತು ನೈತಿಕ ನಡವಳಿಕೆಯನ್ನು ಉತ್ತೇಜಿಸುವ ಕಲ್ಕಿ, ಕಲಿಯುಗವನ್ನು ಕೊನೆಗೊಳಿಸಿ ಮತ್ತೆ ಸತ್ಯಯುಗದ ಸುವರ್ಣ ಯುಗವನ್ನು ಪ್ರಾರಂಭಿಸುತ್ತಾನೆ ಎಂದು ನಂಬಲಾಗಿದೆ.

Continue Reading

ಟಾಲಿವುಡ್

Kalki 2898 AD: ಮೊದಲ ದಿನವೇ ಗಳಿಕೆಯಲ್ಲಿ ದಾಖಲೆ ಬರೆದ ‘ಕಲ್ಕಿ 2898 ಎಡಿ’ ಸಿನಿಮಾ; ಕಲೆಕ್ಷನ್‌ ಎಷ್ಟು?

Kalki 2898 AD: ಕಲ್ಕಿ 2898 AD ಜೂನ್ 27 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಯಿತು. ಕಲ್ಕಿ 2898 ಎಡಿ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಮೂರನೇ ಅತಿದೊಡ್ಡ ಓಪನರ್ ಕಂಡ ಸಿನಿಮಾವಾಗಿ ಹೊರಹೊಮ್ಮಿದೆ. ಆರಂಭಿಕ ದಿನದಂದು 180 ಕೋಟಿ ರೂ. ಗಳಿಕೆ ಕಂಡಿದೆ. ಕಲ್ಕಿ 2898 ಎಡಿ’ ಚಿತ್ರಕ್ಕೆ ಭಾರತದಲ್ಲಿ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ.

VISTARANEWS.COM


on

Kalki 2898 AD Box Office Day Prabhas Film Indian Opener Earns 180 Crore
Koo

ಬೆಂಗಳೂರು: ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ (Kalki 2898 AD) ಮತ್ತು ಕಮಲ್ ಹಾಸನ್ ಅಭಿನಯದ ಕಲ್ಕಿ 2898 ಎಡಿ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಮೂರನೇ ಅತಿದೊಡ್ಡ ಓಪನರ್ ಕಂಡ ಸಿನಿಮಾವಾಗಿ ಹೊರಹೊಮ್ಮಿದೆ. ಆರಂಭಿಕ ದಿನದಂದು 180 ಕೋಟಿ ರೂ. ಗಳಿಕೆ ಕಂಡಿದೆ. ಕಲ್ಕಿ 2898 ಎಡಿ’ ಚಿತ್ರಕ್ಕೆ ಭಾರತದಲ್ಲಿ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ, ಸಿನಿಮಾ ಭಾರತದಲ್ಲಿ 95 ಕೋಟಿ ರೂಪಾಯಿ ಬಾಚಿಕೊಂಡಿದೆ. ಗ್ರಾಸ್ ಕಲೆಕ್ಷನ್ ಲೆಕ್ಕಾಚಾರ ಕೊಟ್ಟರೆ 115 ಕೋಟಿ ರೂಪಾಯಿ ಆಗುತ್ತದೆ.

ನಾಗ್ ಅಶ್ವಿನ್ ನಿರ್ದೇಶಿಸಿದ ಕಲ್ಕಿ 2898 AD, ಎಲ್ಲಾ ಭಾಷೆಗಳಲ್ಲಿ ಮೊದಲ ದಿನದಲ್ಲಿ ಭಾರತದಲ್ಲಿ ಸುಮಾರು 95 ಕೋಟಿ ರೂಪಾಯಿ ಗಳಿಸಿದೆ, ಆದರೆ ಅದರ ಒಟ್ಟು ಸಂಗ್ರಹವು ಸುಮಾರು 115 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಒಟ್ಟಾರೆಯಾಗಿ, ಚಿತ್ರವು ಮೊದಲ ದಿನ ವಿಶ್ವದಾದ್ಯಂತ 180 ಕೋಟಿ ರೂ ಗಳಿಸಿದೆ. ಕಲ್ಕಿ 2898 ಎಡಿ ಸಿನಿಮಾ ಹಲವು ಚಿತ್ರಗಳನ್ನು ಹಿಂದಿಕ್ಕಿದೆ. ಅದರಲ್ಲಿ ಕೆಜಿಎಫ್ 2 (ರೂ. 159 ಕೋಟಿ), ಸಲಾರ್ (ರೂ. 158 ಕೋಟಿ), ಲಿಯೋ (ರೂ. 142.75 ಕೋಟಿ) ಸಿನಿಮಾಗಳ ಜಾಗತಿಕ ಆರಂಭಿಕ ದಾಖಲೆಗಳನ್ನು ಹಿಂದಿಕ್ಕಿದೆ. ಆದರೆ, ಮೊದಲ ದಿನದ ಗಳಿಕೆಯಲ್ಲಿ ‘ಆರ್​ಆರ್​ಆರ್’ (223) ಹಾಗೂ ‘ಬಾಹುಬಲಿ 2’ (217) ಚಿತ್ರವನ್ನು ಹಿಂದಿಕ್ಕಲು ಈ ಸಿನಿಮಾ ಬಳಿ ಸಾಧ್ಯವಾಗಿಲ್ಲ.

ಕಲ್ಕಿ 2898 AD ಜೂನ್ 27 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಯಿತು. ಚಲನಚಿತ್ರವು ಈಗಾಗಲೇ ತನ್ನ ಮುಂಗಡ ಬುಕಿಂಗ್‌ನಲ್ಲಿ ಎಲ್ಲಾ ಭಾಷೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ.

ಇದನ್ನೂ ಓದಿ: Vinay Gowda: ʻಡೆವಿಲ್ʼ ಸಿನಿಮಾದಲ್ಲಿ ನಾನೇ ವಿಲನ್, ಪ್ರಾಜೆಕ್ಟ್‌ ಏನಾಗುತ್ತೋ ಗೊತ್ತಿಲ್ಲ ಎಂದ ʻಬಿಗ್ ಬಾಸ್ʼ ಆನೆ ವಿನಯ್ ಗೌಡ!

‘ಕಲ್ಕಿ 2898 ಎಡಿ’ ಚಿತ್ರ ಜೂನ್ 27ರಂದು ರಿಲೀಸ್ ಆಗಿದೆ. ಮೊದಲ ದಿನ ಈ ಚಿತ್ರದ ಲಕ್ಷಾಂತರ ಟಿಕೆಟ್​ಗಳು ಮಾರಾಟ ಆಗಿವೆ. ಜನರು ಚಿತ್ರಕ್ಕೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮಹಾಭಾರತದಿಂದ ಸಿನಿಮಾದ ಕಥೆ ಆರಂಭ ಆಗಲಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರಕ್ಕೆ ಅಶ್ವಿನಿ ದತ್ ಬಂಡವಾಳ ಹೂಡಿದ್ದಾರೆ.

ವಿಶ್ವದಾದ್ಯಂತ (world) ತೆರೆಗೆ ಬಂದ ಅತ್ಯಂತ ದುಬಾರಿ ಚಿತ್ರ (film) ʼಕಲ್ಕಿ 2898 ಎಡಿʼ (Kalki 2898AD) ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಇದು ಹಿಂದೂ ಧರ್ಮದ (hindu dharma) ವಿಷಯದ ಮೇಲೆ ಕೇಂದ್ರೀಕೃತವಾಗಿರುವುದು. ಭಗವಾನ್ ವಿಷ್ಣುವಿನ (baghavan vishnu) 10ನೇ ಅವತಾರ ಕಲ್ಕಿ (kalki). ಸದಾಚಾರ ಮತ್ತು ನೈತಿಕ ನಡವಳಿಕೆಯನ್ನು ಉತ್ತೇಜಿಸುವ ಕಲ್ಕಿ, ಕಲಿಯುಗವನ್ನು ಕೊನೆಗೊಳಿಸಿ ಮತ್ತೆ ಸತ್ಯಯುಗದ ಸುವರ್ಣ ಯುಗವನ್ನು ಪ್ರಾರಂಭಿಸುತ್ತಾನೆ ಎಂದು ನಂಬಲಾಗಿದೆ.

ಲ್ಕಿಯ ಆಗಮನವು ಹಿಂದೂಗಳಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ಈತ ಕಲಿಯುಗದ ಅಂತ್ಯದಲ್ಲಿ ಕಾಣಿಸಿಕೊಳ್ಳುತ್ತಾನೆ ಎಂದೇ ಭಾವಿಸಲಾಗಿದೆ. ಕಲಿಯುಗ ವಂಚನೆ, ಪಾಪ ಮತ್ತು ಅನೈತಿಕತೆಯಿಂದ ತುಂಬಿರುವ ಯುಗವಾಗಿದೆ. ಇದೀಗ ತೆರೆಗೆ ಬಂದಿರುವ ‘ಕಲ್ಕಿ 2898 ಎಡಿ’ ಈ ಕುರಿತು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ತೆಲುಗು ಸೂಪರ್‌ಸ್ಟಾರ್ ಪ್ರಭಾಸ್, ಬಾಲಿವುಡ್ ತಾರೆಗಳಾದ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ತಮಿಳಿನ ಹಿರಿಯ ನಟ ಕಮಲ್ ಹಾಸನ್ ಒಳಗೊಂಡ ಈ ಚಿತ್ರದಲ್ಲಿ ಪೌರಾಣಿಕ ಕಥೆ ಮತ್ತು ವಿಜ್ಞಾನವನ್ನು ಹದವಾಗಿ ಬೆರೆಸಿ ಅದ್ಭುತವಾಗಿ ನಿರ್ಮಿಸಲಾಗಿದೆ. ನಾಗ್ ಅಶ್ವಿನ್ ನಿರ್ದೇಶನದ ಬಹುತೇಕ ಎಲ್ಲಾ ಪ್ರಮುಖ ಪಾತ್ರಗಳನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಗುರುತಿಸಬಹುದು. ಟ್ರೇಲರ್‌ನಲ್ಲಿ ಭವಿಷ್ಯ ನುಡಿದ ಕಲ್ಕಿಯ ಗುರುತಿನ ಬಗ್ಗೆ ಅಶ್ವಿನ್ ಯಾವುದೇ ಸುಳಿವು ನೀಡಲಿಲ್ಲ.

Continue Reading

ಕರ್ನಾಟಕ

Kannada New Movie: ಮೊದಲ ಹಂತದ ಶೂಟಿಂಗ್ ಮುಗಿಸಿದ ʼಹೇ ಪ್ರಭುʼ ಚಿತ್ರ

Kannada New Movie: ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರ 13ನೇ ಹೊಸ ಚಿತ್ರ “ಹೇ ಪ್ರಭು” ಸದ್ದಿಲ್ಲದೆ ಮೊದಲ ಹಂತದ ಶೂಟಿಂಗ್ ಮುಗಿಸಿದೆ. “ಹೇ ಪ್ರಭು ” ಈ ಹೆಸರು ಕೇಳಿದ ತಕ್ಷಣ ನೀವು ದೇವರು ಇರಬಹುದ ಅಧವಾ “ಪ್ರಭು” ಅಂದರೇ ನಮ್ಮ ನಾಡ ಪ್ರಭು ಕೆಂಪೇಗೌಡರಿರಬಹುದಾ ಎಂಬ ಕುತೂಹಲ ಮೂಡಿಸುತ್ತದೆ . ಸದ್ಯಕ್ಕೆ ಚಿತ್ರ ತಂಡ ಶೀರ್ಷಿಕೆ ವಿನ್ಯಾಸ (ಟೈಟಲ್ ಲೋಗೋ) ಅನಾವರಣಗೊಳಿಸಿದೆ, ಇದರಲ್ಲಿ ಕೆಂಪೇಗೌಡರ ಚಿತ್ರವಿರುವುದು ಕುತೂಹಲ ಮೂಡಿಸಿದೆ.

VISTARANEWS.COM


on

Hey Prabhu film has completed its first phase of shooting
Koo

ಬೆಂಗಳೂರು: ವಿನೂತನ ಶೀರ್ಷಿಕೆ ಮತ್ತು ವಿಭಿನ್ನ ಪ್ರಯೋಗಗಳಿಗೆ ಹೆಸರಾಗಿರುವ ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರ 13ನೇ ಹೊಸ ಚಿತ್ರ “ಹೇ ಪ್ರಭು” ಸದ್ದಿಲ್ಲದೆ ಮೊದಲ ಹಂತದ ಶೂಟಿಂಗ್ ಮುಗಿಸಿದೆ. “ಹೇ ಪ್ರಭು” ಈ ಹೆಸರು ಕೇಳಿದ ತಕ್ಷಣ ನೀವು ದೇವರು ಇರಬಹುದಾ ಅಥವಾ “ಪ್ರಭು” ಅಂದರೆ ನಮ್ಮ ನಾಡಪ್ರಭು ಕೆಂಪೇಗೌಡರಿರಬಹುದಾ ಎಂಬ ಕುತೂಹಲ ಮೂಡಿಸುತ್ತದೆ. ಸದ್ಯಕ್ಕೆ ಚಿತ್ರತಂಡ ಶೀರ್ಷಿಕೆ ವಿನ್ಯಾಸ (ಟೈಟಲ್ ಲೋಗೋ) ಅನಾವರಣಗೊಳಿಸಿದೆ. ಇದರಲ್ಲಿ ಕೆಂಪೇಗೌಡರ ಚಿತ್ರವಿರುವುದು (Kannada New Movie) ಸ್ವಲ್ಪ ಕುತೂಹಲ ಮೂಡಿಸಿದೆ.

ಇನ್ನು 5 ದಿನಗಳ ಶೂಟಿಂಗ್ ಮುಗಿದರೆ ಚಿತ್ರೀಕರಣ ಮುಕ್ತಾಯವಾಗುತ್ತದೆ ಎಂದು ತಂಡ ಹೇಳಿಕೊಂಡಿದೆ. ಜೊತೆಜೊತೆಯಾಗಿ ಸಂಕಲನ ಕಾರ್ಯ ಕೂಡ ಪ್ರಗತಿಯಲ್ಲಿದ್ದು, ನಿರ್ದೇಶಕರು ಮೊದಲ ಪ್ರತಿಯನ್ನು ಶೀಘ್ರದಲ್ಲಿ ತರುವುದಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: Share Market: ಮೊದಲ ಬಾರಿಗೆ 79,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್; ಗರಿಷ್ಠ ಮಟ್ಟ ತಲುಪಿದ ನಿಫ್ಟಿ

ಪ್ರಮೋದ್ ಭಾರತೀಯ ಛಾಯಾಗ್ರಹಣ, ಡ್ಯಾನ್ನಿ ಆಂಡರ್ಸನ್, ಸಂಗೀತ, ಚಂದನ್ ಪಿ., ಶಮೀಕ್ ಭಾರದ್ವಾಜ್ ಮತ್ತು ಲಾರೆನ್ಸ್ ಪ್ರೀತಮ್ ತಾಂತ್ರಿಕ ಕೆಲಸದಲ್ಲಿ ಕಾರ್ಯವಹಿಸುತ್ತಿದ್ದಾರೆ. ಮಹೇಶ್ ಮತ್ತು ಪ್ರವೀಣ್ ಅವರ ಸಂಭಾಷಣೆ, ಅರಸು ಅಂತಾರೆ ಮತ್ತು ಮನೋಜ್ ರಾವ್ ಅವರ ಸಾಹಿತ್ಯ ಚಿತ್ರಕ್ಕಿದೆ. 24 Reels ಮತ್ತು Amrutha Film Center ನಿರ್ಮಾಣ, ಕಥೆ ಚಿತ್ರಕಥೆ ವೆಂಕಟ್ ಭಾರದ್ವಾಜ್ ಅವರದ್ದಾಗಿದೆ.

ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಸನ್ ಜೈಪಾಲ್ ಅವರ ಪುತ್ರ ಡ್ಯಾನ್ನಿ ಆಂಡರ್ಸನ್ ಅವರನ್ನು ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ವೆಂಕಟ್ ಭಾರದ್ವಾಜ್ ಪರಿಚಯಿಸುತ್ತಿದ್ದಾರೆ.

ತಾರಾಬಳಗದಲ್ಲಿ ಜಯ್, ಸೂರ್ಯ ರಾಜ್, ಲಕ್ಷ್ಮಣ್ ಶಿವಶಂಕರ್ (ಕೆಂಪಿರ್ವೇ ಖ್ಯಾತಿ), ಸಂಹಿತ ವಿನ್ಯಾಸ, ಗಜಾನನ ಹೆಗಡೆ, ನಿರಂಜನ್ ಪ್ರಸಾದ್, ಹರಿ ಧನಂಜಯ , ಪ್ರಮೋದ್ ರಾಜ್ , ದಿಲೀಪ್ ದೇವ್, ನೇತ್ರ ಗೋಪಾಲ್, ಸುಚಿತ್ರ ದಿನೇಶ್, ಸಾಧನ ಭಟ್, ಮನೋಹರ್, ಶಶಿರ್ ರಾಜು , ಹಾಗೂ ಇತರರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Gold Rate Today: ಆಭರಣ ಖರೀದಿಗೆ ಇದು ಗೋಲ್ಡನ್‌ ಟೈಮ್‌; ಇಳಿದ ಚಿನ್ನದ ದರ

ಶೀಘ್ರದಲ್ಲಿ ತಂಡ “ಹೇ ಪ್ರಭು ” ಮೊದಲ ನೋಟ (First Look) ಬಿಡುಗಡೆ ಮಾಡಲಿದೆ. ಸದ್ಯಕ್ಕೆ ವೆಂಕಟ್ ಭಾರದ್ವಾಜ್ ಅವರ ಹೈನ ಮತ್ತು ಆಹತ ಎರಡು ಚಿತ್ರ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ.

Continue Reading
Advertisement
Actor Darshan fans starts sticker trend mobile cover 6106
ಸ್ಯಾಂಡಲ್ ವುಡ್5 mins ago

Actor Darshan: ‘ಕೈದಿ ನಂ. 6106…ನಮ್ದೇ ದರ್ಬಾರುʼ ಅಂದ್ರು ಫ್ಯಾನ್ಸ್‌; ಮೊಬೈಲ್ ಕವರ್, ಆಟೋ, ಬೈಕ್‌ಗಳಲ್ಲಿ ಸ್ಟಿಕ್ಟರ್ ಟ್ರೆಂಡ್!

Valmiki Corporation Scam
ಕ್ರೈಂ8 mins ago

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಸಿಬಿಐನಿಂದ ಬಂಧನ ಆತಂಕದಲ್ಲಿ ಮಾಜಿ ಸಚಿವ ನಾಗೇಂದ್ರ

Virat Kohli
ಕ್ರಿಕೆಟ್15 mins ago

Virat Kohli: ಕೊಹ್ಲಿ ಕ್ಲಾಸ್ ಪ್ಲೇಯರ್, ಫೈನಲ್​ನಲ್ಲಿ ಆಡುತ್ತಾರೆ ಎಂದು ಬೆಂಬಲ ಸೂಚಿಸಿದ ನಾಯಕ ರೋಹಿತ್​

karnataka Rain
ಮಳೆ16 mins ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Viral Video
Latest17 mins ago

Viral Video: ನಡುರಸ್ತೆಯಲ್ಲಿ ಶಿಕ್ಷಕಿಯ ಹಣೆಗೆ ಸಿಂಧೂರ ಹಚ್ಚಿ ಬಲವಂತವಾಗಿ ಮದುವೆಯಾದ ಯುವಕ!

Viral Video
Latest20 mins ago

Viral Video: ನೋಡುಗರ ಕಣ್ಮನ ಸೆಳೆಯುತ್ತಿದೆ ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಆಮಂತ್ರಣ ಪತ್ರಿಕೆ

Actor Darshan support by singer dr shamitha malnad
ಸ್ಯಾಂಡಲ್ ವುಡ್41 mins ago

Actor Darshan: ಆರಡಿ ದೇಹವ ಮೂರಡಿ ಬಗ್ಗಿಸಿ ನಮ್ಮೊಂದಿಗೆ ವಿನಯದಿ ಮಾತನಾಡಿದ ದರ್ಶನ್‌ ಅಣ್ಣ ಎಂದ ಖ್ಯಾತ ಗಾಯಕಿ!

airtel price hike
ಪ್ರಮುಖ ಸುದ್ದಿ45 mins ago

Airtel Price Hike: ಜಿಯೋ ನಂತರ ಏರ್‌ಟೆಲ್‌ ಡೇಟಾ ಬಳಕೆದಾರರ ಜೇಬಿಗೂ ಕತ್ತರಿ; 21% ದರ ಏರಿಕೆ

murder Case in Kalaburagi
ಕಲಬುರಗಿ47 mins ago

Murder case : ಗಾಣಗಾಪುರ ದತ್ತನ ದರ್ಶನಕ್ಕೆ ಆಗಮಿಸಿದ ಭಕ್ತನ ಬರ್ಬರ ಹತ್ಯೆ

Actor Darshan special appeal to the fans
ಸ್ಯಾಂಡಲ್ ವುಡ್1 hour ago

Actor Darshan: ಪರಪ್ಪನ ಅಗ್ರಹಾರದಿಂದಲೇ ಅಭಿಮಾನಿಗಳ ಬಳಿ ದರ್ಶನ್‌ ವಿಶೇಷ ಮನವಿ; ಏನದು?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ16 mins ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ17 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ18 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು20 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ24 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ7 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ7 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು2 weeks ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

ಟ್ರೆಂಡಿಂಗ್‌