Job Alert: 750 ಗ್ರಾಮ ಆಡಳಿತಾಧಿಕಾರಿ ಹುದ್ದೆ ಭರ್ತಿಗೆ ಮುಂದಾದ ಸರ್ಕಾರ; ಶೀಘ್ರ ಅಧಿಸೂಚನೆ - Vistara News

ಉದ್ಯೋಗ

Job Alert: 750 ಗ್ರಾಮ ಆಡಳಿತಾಧಿಕಾರಿ ಹುದ್ದೆ ಭರ್ತಿಗೆ ಮುಂದಾದ ಸರ್ಕಾರ; ಶೀಘ್ರ ಅಧಿಸೂಚನೆ

Job Alert: ವಿಲೇಜ್‌ ಅಕೌಂಟೆಂಟ್‌ ಹುದ್ದೆಯನ್ನು ಗ್ರಾಮ ಆಡಳಿತಾಧಿಕಾರಿ ಎಂದು ಮರು ನಾಮಕರಣ ಮಾಡಿರುವ ಸರ್ಕಾರ ಹುದ್ದೆ ಭರ್ತಿಗೆ ಕ್ರಮ ಕೈಗೊಂಡಿದೆ. ಶೀಘ್ರ ಅಧಿಸೂಚನೆ ಹೊರ ಬೀಳಲಿದೆ.

VISTARANEWS.COM


on

PUC Exam
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯ ಸರ್ಕಾರ ವಿಲೇಜ್‌ ಅಕೌಂಟೆಂಟ್‌ (Village Accountant) ಹುದ್ದೆಯನ್ನು ಗ್ರಾಮ ಆಡಳಿತಾಧಿಕಾರಿ (Village Administrative Officer) ಎಂದು ಮರು ನಾಮಕರಣ ಮಾಡಿದೆ. ಇದೀಗ ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಭರ್ತಿಗೆ ಮಹತ್ವದ ತೀರ್ಮಾನ ಕೈಗೊಂಡಿದೆ. ಶೀಘ್ರ ಬರೋಬ್ಬರಿ 750 ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈಗಾಗಲೇ ಸರ್ಕಾರ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ (Job Alert).

ಆಯ್ಕೆ ಹೇಗೆ?

ಹಿಂದೆ ವಿಲೇಜ್‌ ಅಕೌಂಟೆಂಟ್‌ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪಿಯುಸಿ ಅಂಕದ ಆಧಾರದ ಮೇಲೆ ಆಯ್ಕೆ ಮಾಡಲಾಗುತಿತ್ತು. ಇದೀಗ ಈ ವಿಧಾನವನ್ನು ಬದಲಾಯಿಸಲು ಸರ್ಕಾರ ಮುಂದಾಗಿದೆ. ರಾಜ್ಯ ಮಟ್ಟದಲ್ಲಿ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಮೆರಿಟ್‌ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಪ್ರಸ್ತುತ 9 ಸಾವಿರ ಗ್ರಾಮ ಆಡಳಿತಾಧಿಕಾರಿಗಳಿದ್ದು, ಇನ್ನೂ ಒಂದೂವರೆ ಸಾವಿರದಷ್ಟು ಹುದ್ದೆಗಳನ್ನು ಭರ್ತಿ ಮಾಡುವ ಯೋಜನೆ ಇದೆ. ಮೊದಲ ಹಂತದಲ್ಲಿ ಸುಮಾರು 750 ಹುದ್ದೆಗಳ ಭರ್ತಿಗೆ ಕಂದಾಯ ಇಲಾಖೆ ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೇಮಕಾತಿ ಅಧಿಸೂಚನೆ ಶೀಘ್ರದಲ್ಲಿಯೇ ಹೊರ ಬೀಳುವ ಸಾಧ್ಯತೆ ಇದೆ.

ಪರೀಕ್ಷೆ ಹೇಗೆ?

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ), ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಪೈಕಿ ಯಾವುದಾದರೂ ಒಂದು ಸಂಸ್ಥೆಯ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ನಂತರ ಜಿಲ್ಲಾ ಮಟ್ಟದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

ರ‍್ಯಾಂಕ್‌ ಆಧಾರದಲ್ಲಿ ಆಯ್ಕೆ

ಪರೀಕ್ಷೆ ಬಳಿಕ ಅಭ್ಯರ್ಥಿಗಳ ರ‍್ಯಾಂಕ್‌ ಪಟ್ಟಿ ಬಿಡುಗಡೆಯಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಅಗ್ರಸ್ಥಾನ ಪಡೆದವರಿಗೆ ಕೌನ್ಸಿಲಿಂಗ್‌ ಮೂಲಕ ಸ್ಥಳ ನಿಯುಕ್ತಿಗೊಳಿಸಲಾಗುತ್ತದೆ. ಮೀಸಲಾತಿಗೆ ಅನುಗುಣವಾಗಿ ಹುದ್ದೆಗಳ ಭರ್ತಿ ನಡೆಯಲಿದೆ. 18-35 ವರ್ಷ ವಯೋಮಾನದ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಅನುಕೂಲಗಳೇನು?

ಪಿಯುಸಿ ಅಂಕಗಳ ಬದಲು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಈ ಹುದ್ದೆಗಳನ್ನು ಭರ್ತಿ ಮಾಡಿದರೆ, ಪರೀಕ್ಷೆಗೆ ಓದುವ ಮೂಲಕ ಮೊದಲೇ ಈ ಹುದ್ದೆಯ ಕುರಿತು ಮೊದಲೇ ಜ್ಞಾನ ಮೂಡಲಿದೆ. ಪರೀಕ್ಷೆಗಾಗಿ ಸಾಕಷ್ಟು ಓದುವುದರಿಂದ ಪಂಚಾಯತ್ ರಾಜ್‌ ವ್ಯವಸ್ಥೆ, ಗ್ರಾಮ ಪಂಚಾಯತ್‌ ಕಾರ್ಯಗಳು, ನಿರ್ವಹಣೆ, ಯೋಜನೆಗಳು, ಅನುಷ್ಠಾನದ ಕುರಿತು ಹೆಚ್ಚು ಜ್ಞಾನ ಪಡೆದಂತಾಗುತ್ತದೆ. ಮುಂದೆ ಹುದ್ದೆಗೆ ಆಯ್ಕೆಯಾಗುವವರು ಸುಲಲಿತವಾಗಿ ಕಾರ್ಯ ನಿರ್ವಹಿಸಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.

ಕೆಲವು ದಿನಗಳ ಹಿಂದೆ ಕರ್ನಾಟಕ ಸರ್ಕಾರ ನೀಡಿದ್ದ ಮಾಹಿತಿಯಂತೆ ರಾಜ್ಯದಲ್ಲಿ ಒಟ್ಟು ಖಾಲಿ ಇರುವ ಪಿಡಿಒ ಹುದ್ದೆಗಳ ಸಂಖ್ಯೆ 660. ಜತೆಗೆ ಕಾರ್ಯದರ್ಶಿ 350 ಮತ್ತು ಕಾರ್ಯದರ್ಶಿ ಗ್ರೇಡ್-2 415 ಹುದ್ದೆಗಳಿವೆ. ಪಿಡಿಒ 150, ಕಾರ್ಯದರ್ಶಿ ಗ್ರೇಡ್-1 135, ಕಾರ್ಯದರ್ಶಿ ಗ್ರೇಡ್-2, ದ್ವಿತೀಯ ದರ್ಜೆ ಲೆಕ್ಕ ಸಹಾಯಕ 105 ಹುದ್ದೆಗಳು ಖಾಲಿ ಇದ್ದು, ಶೀಘ್ರ ಭರ್ತಿ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಶೀಘ್ರ ಅರಣ್ಯ ಇಲಾಖೆಯಲ್ಲಿನ ಖಾಲಿ ಹುದ್ದೆ ಭರ್ತಿಗೆ ಕ್ರಮ

ರಾಜ್ಯದ ಅರಣ್ಯ ಇಲಾಖೆಗಳಲ್ಲಿ ಹಲವು ವರ್ಷಗಳಿಂದ ಖಾಲಿ ಇರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ACF), ವಲಯ ಅರಣ್ಯಾಧಿಕಾರಿ (RFO) ಮತ್ತು ಉಪ ವಲಯ ಅರಣ್ಯ ಅಧಿಕಾರಿ (DRFO) ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಸದಸ್ಯ ಗೋಪಾಲಕೃಷ್ಣ ಬೇಳೂರು ಅವರ ಪ್ರಶ್ನೆಗೆ ಲಿಖಿತವಾಗಿ ಉತ್ತರ ಲಭಿಸಿದ್ದು, ಬಾಕಿ ಉಳಿದಿರುವ ಹುದ್ದೆಗಳನ್ನು ಅರಣ್ಯ ಇಲಾಖೆ ಹೊರತಾಗಿ ವಿವಿಧ ಇಲಾಖೆ / ಸಂಸ್ಥೆಗಳ ಮೂಲಕ ಭರ್ತಿ ಮಾಡಬೇಕಾಗಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Job Alert: ಅಪ್ರೆಂಟಿಸ್‌ ಟ್ರೈನಿಂಗ್‌; ಬೆಸ್ಕಾಂನಲ್ಲಿ 400 ಮಂದಿಗೆ ಅವಕಾಶ; ಇಂದೇ ಅರ್ಜಿ ಸಲ್ಲಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಉದ್ಯೋಗ

Job Alert: KSRTCಯಿಂದ ಬೃಹತ್‌ ನೇಮಕಾತಿ; 13,000 ಚಾಲಕ ಹುದ್ದೆಗಳಿಗೆ 7ನೇ ತರಗತಿ ಪಾಸಾದವರು ಅಪ್ಲೈ ಮಾಡಿ

Job Alert: ಉತ್ತಮ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವವರಿಗೆ ಗುಡ್‌ನ್ಯೂಸ್‌ ಇಲ್ಲಿದೆ. ಕೆಎಸ್‌ಆರ್‌ಟಿಸಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಬರೋಬ್ಬರಿ 13,000 ಚಾಲಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 7ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರು. ಚಾಮರಾಜನಗರ ಜಿಲ್ಲೆ ಕೆಎಸ್‌ಆರ್‌ಟಿಸಿ ಡಿಪೋ, ರಾಮನಗರ ಹಾಗೂ ಆನೇಕಲ್ ತಾಲೂಕು ಕೆಎಸ್‌ಆರ್‌ಟಿಸಿ ಬಸ್‌ ಡಿಪೋದಲ್ಲಿ ಈ ಹುದ್ದೆಗಳಿವೆ.

VISTARANEWS.COM


on

Job Alert
Koo

ಬೆಂಗಳೂರು: ಉತ್ತಮ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವವರಿಗೆ ಗುಡ್‌ನ್ಯೂಸ್‌ ಇಲ್ಲಿದೆ. ಕೆಎಸ್‌ಆರ್‌ಟಿಸಿ (Karnataka State Road Transport Corporation) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಬರೋಬ್ಬರಿ 13,000 ಚಾಲಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 7ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರು (KSRTC Recruitment 2024). ಈ ಕುರಿತಾದ ವಿವರ ಇಲ್ಲಿದೆ (Job Alert).

ಎಲ್ಲೆಲ್ಲಿ?

ಚಾಮರಾಜನಗರ ಜಿಲ್ಲೆ ಕೆಎಸ್‌ಆರ್‌ಟಿಸಿ ಡಿಪೋ, ರಾಮನಗರ ಹಾಗೂ ಆನೇಕಲ್ ತಾಲೂಕು ಕೆಎಸ್‌ಆರ್‌ಟಿಸಿ ಬಸ್‌ ಡಿಪೋದಲ್ಲಿ ಈ ಹುದ್ದೆಗಳಿವೆ. ಆಯಾ ಬಸ್‌ ಡಿಪೋಗಳು ಹೊರ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಿವೆ.

ವಿದ್ಯಾರ್ಹತೆ ಮತ್ತು ಮಾಸಿಕ ವೇತನ

7ನೇ ತರಗತಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಜತೆಗೆ ಹೆವಿ ಮೋಟಾರ್ ವಾಹನ ಚಾಲಕರಾಗಿ 2 ವರ್ಷಗಳ ಅನುಭವ ಹೊಂದಿರಬೇಕು. ಅಲ್ಲದೆ ಕರ್ನಾಟಕದ ಮಾನ್ಯತೆ ಪಡೆದಿರುವ ಸರಕು ವಾಹನ ಬ್ಯಾಡ್ಜ್‌ ಹೊಂದಿರುವುದು ಕಡ್ಡಾಯ. ಆಯ್ಕೆಯಾದವರಿಗೆ 23,000 ರೂ. ಮಾಸಿಕ ವೇತನ ನೀಡಲಾಗುತ್ತದೆ. ಜತೆಗೆ ಇಎಸ್‌ಐ, ಇಪಿಎಫ್‌ ಸೌಲಭ್ಯ ಇರಲಿದೆ.

ಇದನ್ನು ಗಮನಿಸಿ

ಹೊರಗುತ್ತಿಗೆ ನೇಮಕಾತಿ ಇದಾಗಿರುವುದರಿಂದ ಹುದ್ದೆಗಳ ಮೇಲೆ ಅಭ್ಯರ್ಥಿಗಳಿಗೆ ಯಾವುದೇ ರೀತಿ ಹಕ್ಕು ಇರುವುದಿಲ್ಲ. ಖಾಯಂ ನೇಮಕಾತಿ ವೇಳೆ ಇವರನ್ನು ತೆರವು ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಆಯ್ಕೆ ವಿಧಾನ

ಅಭ್ಯರ್ಥಿಗಳಿಗೆ ಚಾಲನೆ ತರಬೇತಿಯನ್ನು ನೀಡಿ ಪರೀಕ್ಷೆಯನ್ನು ನಡೆಸಿ ಸಂದರ್ಶನ ಹಾಗೂ ದಾಖಲೆಗಳ ಪರಿಶೀಲನೆಯ ಬಳಿಕ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿಯ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ವಿವರಗಳಿಗೆ: ಚಾಮರಾಜನಗರ ಜಿಲ್ಲೆ ಕೆಎಸ್‌ಆರ್‌ಟಿಸಿ ಡಿಪೋ ದೂರವಾಣಿ ಸಂಖ್ಯೆಗಳು: 8050980889, 8618876846, ರಾಮನಗರ ಹಾಗೂ ಆನೇಕಲ್ ತಾಲೂಕು ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ದೂರವಾಣಿ ಸಂಖ್ಯೆಗಳು: 8050980889, 8618876846ಕ್ಕೆ ಕರೆ ಮಾಡಿ.

ಇದನ್ನೂ ಓದಿ: Job Alert: ಬರೋಬ್ಬರಿ 17,727 ಹುದ್ದೆಗಳ ಭರ್ತಿಗೆ ಮುಂದಾದ SSC; ಇಂದೇ ಅಪ್ಲೈ ಮಾಡಿ

Continue Reading

ಪ್ರಮುಖ ಸುದ್ದಿ

UPSC 2024: ಯುಪಿಎಸ್ಸಿ ಸಿಎಸ್ಇ ಪ್ರಿಲಿಮ್ಸ್ ಫಲಿತಾಂಶ ಪ್ರಕಟ; ಪರಿಶೀಲಿಸುವುದು ಹೇಗೆ?

UPSC 2024 : ಪೂರ್ವಭಾವಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆಯುತ್ತಾರೆ. ಯುಪಿಎಸ್ಸಿ ಸಿಎಸ್ಇ ಮೇನ್ಸ್ ಪರೀಕ್ಷೆ ಇದಾಗಿದೆ. ಇಲ್ಲಿ ಇದು ಎರಡು ಭಾಗಗಳಿವೆ . ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ. ಲೋಕ ಸೇವಾ ಆಯೋಗದ ಪರೀಕ್ಷಾ ಕ್ಯಾಲೆಂಡರ್ ಪ್ರಕಾರ ಮೇನ್ಸ್​ (ಮುಖ್ಯ) ಪರೀಕ್ಷೆ ಸೆಪ್ಟೆಂಬರ್ 20 ರಂದು ಪ್ರಾರಂಭವಾಗಲಿದೆ.

VISTARANEWS.COM


on

UPSC 2024
Koo

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ 2024ನೇ( UPSC 2024) ಸಾಲಿನ ನಾಗರಿಕ ಸೇವೆಗಳ ಪೂರ್ವಭಾವಿ (ಪ್ರಿಲಿಮ್ಸ್​) ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಯುಪಿಎಸ್​ಸಿ ಸಿಎಸ್ಇ 2024 ರ ಪರೀಕ್ಷೆಗೆ ಹಾಜರಾಗಿವು ಅಭ್ಯರ್ಥಿಗಳು upsc.gov.in ಮತ್ತು upsconline.nic.in ವೆಬ್​ಸೈಟ್​ಗೆ ಪ್ರವೇಶ ಮಾಡಿ ಫಲಿತಾಂಶಗಳನ್ನು ಡೌನ್ಲೋಡ್ ಮಾಡಬಹದು. ಸಾಮಾನ್ಯ ಪರೀಕ್ಷೆಯನ್ನು ಜೂನ್ 16 ರಂದು ಸಾಮಾನ್ಯ ಅಧ್ಯಯನ ಪರೀಕ್ಷೆ 1 ಮತ್ತು ಪರೀಕ್ಷೆ 2 ಎಂದು ಎರಡು ಪಾಳಿಗಳಲ್ಲಿ ನಡೆಸಲಾಯಿತು. ಪರೀಕ್ಷೆಯು ಒಟ್ಟು 400 ಅಂಕಗಳನ್ನು ಹೊಂದಿತ್ತು. ಪ್ರಶ್ನೆ ಪತ್ರಿಕೆಯು ಆಬ್ಜೆಕ್ಟಿವ್​ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿದ್ದು, ತಲಾ 4 ಆಯ್ಕೆಗಳನ್ನು ಹೊಂದಿತ್ತು.

ಪೂರ್ವಭಾವಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆಯುತ್ತಾರೆ. ಯುಪಿಎಸ್ಸಿ ಸಿಎಸ್ಇ ಮೇನ್ಸ್ ಪರೀಕ್ಷೆ ಇದಾಗಿದೆ. ಇಲ್ಲಿ ಇದು ಎರಡು ಭಾಗಗಳಿವೆ . ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ. ಲೋಕ ಸೇವಾ ಆಯೋಗದ ಪರೀಕ್ಷಾ ಕ್ಯಾಲೆಂಡರ್ ಪ್ರಕಾರ ಮೇನ್ಸ್​ (ಮುಖ್ಯ) ಪರೀಕ್ಷೆ ಸೆಪ್ಟೆಂಬರ್ 20 ರಂದು ಪ್ರಾರಂಭವಾಗಲಿದೆ.

ಕಳೆದ ವರ್ಷದ ಟ್ರೆಂಡ್ ಪ್ರಕಾರ, ಪರೀಕ್ಷೆಯನ್ನು ಮೇ 26 ರಂದು ನಡೆಸಲಾಯಿತು ಮತ್ತು ಫಲಿತಾಂಶಗಳನ್ನು ಜೂನ್ 12 ರಂದು ಬಿಡುಗಡೆ ಮಾಡಲಾಗಿತ್ತು.

ಇದನ್ನೂ ಓದಿ: Reliance Jio: ಮೊಬೈಲ್‌ ಶುಲ್ಕ ಏರಿಕೆ; ಯಾವ ಕಂಪನಿಯ ಪ್ಲ್ಯಾನ್‌ ಸೂಕ್ತ?

ಭಾರತೀಯ ಆಡಳಿತ ಸೇವೆ, ಭಾರತೀಯ ಪೊಲೀಸ್ ಸೇವೆ, ಭಾರತೀಯ ವಿದೇಶಾಂಗ ಸೇವೆ ಮತ್ತು ಇತರ ಉನ್ನತ ಸೇವೆಗಳಲ್ಲಿ ಪ್ರಮುಖ ಹುದ್ದೆಗಳಿಗೆ ಸ್ಪರ್ಧಿಸುವ ಲಕ್ಷಾಂತರ ನಾಗರಿಕ ಸೇವಾ ಆಕಾಂಕ್ಷಿಗಳ ಭವಿಷ್ಯವನ್ನು ನಿರ್ಧರಿಸುವಲ್ಲಿ ಯುಪಿಎಸ್ಸಿ ಸಿಎಸ್ಇ ಕಟ್-ಆಫ್ ನಿರ್ಣಾಯಕವಾಗಿದೆ. 2023 ರಲ್ಲಿ ಸಾಮಾನ್ಯ ವರ್ಗಕ್ಕೆ ಯುಪಿಎಸ್ಸಿ ಪ್ರಿಲಿಮ್ಸ್ ಕಟ್-ಆಫ್ 75.41 ರಷ್ಟಿತ್ತು.

ಈ ಬಾರಿಯ ಫಲಿತಾಂಶಗಳನ್ನು ಈ ರೀತಿ ಡೌನ್​ಲೋಡ್ ಮಾಡಿಕೊಳ್ಳಿ


  • ಮೊದಲಿಗೆ, ಯುಪಿಎಸ್ಸಿಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಯುಪಿಎಸ್ಸಿ ಸಿವಿಲ್ ಸರ್ವೀಸಸ್ (ಪ್ರಿಲಿಮಿನರಿ) ಫಲಿತಾಂಶ 2024 ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿದಾಗ ಹೊಸ ಪುಟ ತೆರೆಯುತ್ತದೆ.
  • “ಸಲ್ಲಿಸು” ಆಯ್ಕೆಯನ್ನು ಆರಿಸಿದರೆ ಫಲಿತಾಂಶಗಳು ಕಾಣುತ್ತದೆ
  • ಡೌನ್ ಲೋಡ್ ಮಾಡಿ ಮತ್ತು ನಿಮ್ಮ ಭವಿಷ್ಯದ ಅಗತ್ಯಗಳಿಗಾಗಿ ಕಾಪಿಯನ್ನು ಸೇವ್ ಮಾಡಿಟ್ಟುಕೊಳ್ಳಿ.

2024 ರ ಸಿಎಸ್ (ಪಿ) ಪರೀಕ್ಷೆಯ ಅಂಕಗಳು, ಕಟ್-ಆಫ್ ಅಂಕಗಳು ಮತ್ತು ಉತ್ತರ ಕೀಗಳನ್ನು ನಾಗರಿಕ ಸೇವೆಗಳ ಪರೀಕ್ಷೆ ಪೂರ್ಣಗೊಂಡ ನಂತರ ಮತ್ತು ಅಂತಿಮ ಫಲಿತಾಂಶಗಳ ಪ್ರಕಟಣೆಯ ನಂತರ ವೆಬ್​ಸೈಟ್​ನಲ್ಲಿ ಪೋಸ್ಟ್​​ ಮಾಡಲಾಗುತ್ತದೆ.

Continue Reading

ಉದ್ಯೋಗ

Job Alert: HCLನಲ್ಲಿ ಖಾಲಿ ಇರುವ 56 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಮಾಸಿಕ ವೇತನ 1 ಲಕ್ಷ ರೂ.ವರೆಗೆ: ಇಂದೇ ಅಪ್ಲೈ ಮಾಡಿ

Job Alert: ಹಿಂದುಸ್ತಾನ್‌ ಕಾಪರ್‌ ಲಿಮಿಟೆಡ್‌ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 56 ಜೂನಿಯರ್‌ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಡಿಪ್ಲೋಮಾ, ಎಂಜಿನಿಯರಿಂಗ್‌ ಪದವಿ ಪಡೆದು ಕಾರ್ಯಾನುಭವ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಜುಲೈ 21 ಕೊನೆಯ ದಿನ.

VISTARANEWS.COM


on

Job Alert
Koo

ನವದೆಹಲಿ: ಒಂದೊಳ್ಳೆ ಉದ್ಯೋಗ ಹೊಂದಬೇಕು ಎನ್ನುವ ಕನಸು ಕಾಣುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಹಿಂದುಸ್ತಾನ್‌ ಕಾಪರ್‌ ಲಿಮಿಟೆಡ್‌ (Hindustan Copper Limited) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (Hindustan Copper Recruitment 2024). ಒಟ್ಟು 56 ಜೂನಿಯರ್‌ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಡಿಪ್ಲೋಮಾ, ಎಂಜಿನಿಯರಿಂಗ್‌ ಪದವಿ ಪಡೆದು ಕಾರ್ಯಾನುಭವ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಜುಲೈ 21 ಕೊನೆಯ ದಿನ (Job Alert).

ಹುದ್ದೆಗಳ ವಿವರ

ಜೂನಿಯರ್ ಮ್ಯಾನೇಜರ್ (ಮೈನಿಂಗ್‌)- 46 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ / ಮೈನಿಂಗ್ ಎಂಜಿನಿಯರಿಂಗ್‌ನಲ್ಲಿ ಪದವಿ
ಜೂನಿಯರ್ ಮ್ಯಾನೇಜರ್ (ಎಲೆಕ್ಟ್ರಿಕಲ್)- 6 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ / ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ
ಜೂನಿಯರ್ ಮ್ಯಾನೇಜರ್ (ಕಂಪನಿ ಸೆಕ್ರೆಟರಿ) 2 ಹುದ್ದೆ, ವಿದ್ಯಾರ್ಹತೆ: ಕಂಪನಿ ಸೆಕ್ರೆಟರಿ, ಪದವಿ
ಜೂನಿಯರ್ ಮ್ಯಾನೇಜರ್ (ಫೈನಾನ್ಸ್)- 1 ಹುದ್ದೆ, ವಿದ್ಯಾರ್ಹತೆ: ಸಿಎ, ಪದವಿ, ಸ್ನಾತಕೋತ್ತರ ಪದವಿ / ಡಿಪ್ಲೋಮಾ
ಜೂನಿಯರ್ ಮ್ಯಾನೇಜರ್ (ಎಚ್ಆರ್) 1 ಹುದ್ದೆ, ವಿದ್ಯಾರ್ಹತೆ: ಪದವಿ, ಸ್ನಾತಕೋತ್ತರ ಪದವಿ / ಡಿಪ್ಲೋಮಾ, ಎಂಬಿಎ

ವಯೋಮಿತಿ

ಗರಿಷ್ಠ ವಯೋಮಿತಿ 40 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ವಿಭಾಗದ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ವಿಭಾಗದ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಡಿ (ಸಾಮಾನ್ಯ / ಇಡಬ್ಲ್ಯುಎಸ್‌) ವಿಭಾಗದ ಅಭ್ಯರ್ಥಿಗಳಿಗೆ 10, ಪಿಡಬ್ಲ್ಯುಡಿ (ಒಬಿಸಿ) ವಿಭಾಗದ ಅಭ್ಯರ್ಥಿಗಳಿಗೆ 13 ವರ್ಷ ಮತ್ತು ಪಿಡಬ್ಲ್ಯುಡಿ (ಎಸ್‌ಸಿ / ಎಸ್‌ಟಿ) ವಿಭಾಗದ ಅಭ್ಯರ್ಥಿಗಳಿಗೆ 15 ವರ್ಷಗಳ ರಿಯಾಯಿತಿ ಇದೆ.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 30,000 ರೂ. – 1,20,000 ರೂ. ಮಾಸಿಕ ವೇತನ ದೊರೆಯಲಿದೆ.

ಅರ್ಜಿ ಶುಲ್ಕ

ಅರ್ಜಿ ಶುಲ್ಕವಾಗಿ ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯುಎಸ್‌ ವಿಭಾಗದ ಅಭ್ಯರ್ಥಿಗಳು 500 ರೂ. ಆನ್‌ಲೈನ್‌ ಮೂಲಕ ಪಾವತಿಸಬೇಕು. ಇತರ ವಿಭಾಗದ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.

Hindustan Copper Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://www.hindustancopper.com/RecruitmentNew/CandidateLogin/113).
  • ವೈಯಕ್ತಿಕ ಮಾಹಿತಿ ನೀಡಿ ಹೆಸರು ನೋಂದಾಯಿಸಿ.
  • ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.
  • ಅಗತ್ಯ ಮಾಹಿತಿ ನೀಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ದಾಖಲೆ, ಫೋಟೊ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದರು ಮಾತ್ರ).
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಅಪ್ಲಿಕೇಷನ್‌ ಪಾರಂ ಡೌನ್‌ಲೋಡ್‌ ಮಾಡಿ ಪ್ರಿಂಟ್‌ಔಟ್‌ ತೆಗೆದಿಡಿ.

ಇದನ್ನೂ ಓದಿ: Job Alert: 10ನೇ ತರಗತಿ ಪಾಸಾದವರಿಗೆ ಗುಡ್‌ನ್ಯೂಸ್‌; SSCಯಿಂದ ಬರೋಬ್ಬರಿ 8,326 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Continue Reading

ಉದ್ಯೋಗ

Job Alert: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ; ಕೋಸ್ಟ್‌ ಗಾರ್ಡ್‌ನಲ್ಲಿದೆ ಉದ್ಯೋಗಾವಕಾಶ

Job Alert: ಭಾರತೀಯ ಕೋಸ್ಟ್‌ ಗಾರ್ಡ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಸುಮಾರು 320 ಹುದ್ದೆಗಳು ಖಾಲಿ ಇದ್ದು, 10 ಮತ್ತು 12ನೇ ತರಗತಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಉದ್ಯೋಗದ ಸ್ಥಳ: ಭಾರತಾದ್ಯಂತ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಜುಲೈ 3. ನಾವಿಕ್‌ (ಜನರಲ್‌ ಡ್ಯೂಟಿ) – 260 ಮತ್ತು ಯಾಂತ್ರಿಕ್‌ – 60 ಹುದ್ದೆಗಳಿವೆ. ನಾವಿಕ್‌ (ಜನರಲ್‌ ಡ್ಯೂಟಿ) ಹುದ್ದೆಗೆ ಅರ್ಜಿ ಸಲ್ಲಿಸುವವರು ವಿಜ್ಞಾನ ವಿಭಾಗದಲ್ಲಿ 12ನೇ ತರಗತಿ ತೇರ್ಗಡೆಯಾಗಿರಬೇಕು. 10, 12ನೇ ತರಗತಿ, ಡಿಪ್ಲೋಮಾ ಪಾಸಾದವರು ಯಾಂತ್ರಿಕ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು.

VISTARANEWS.COM


on

Job alert
Koo

ಬೆಂಗಳೂರು: ಸರ್ಕಾರಿ ಉದ್ಯೋಗ ಹೊಂದಬೇಕು ಎನ್ನುವುದು ಬಹುತೇಕರ ಕನಸು. ಅಂತಹವರ ಕನಸು ನನಸಾಗಿಸುವ ಸುವರ್ಣಾವಕಾಶವೊಂದು ಒದಗಿ ಬಂದಿದೆ. ಭಾರತೀಯ ಕೋಸ್ಟ್‌ ಗಾರ್ಡ್‌ (Indian Coast Guard) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (Indian Coast Guard Recruitment 2024). ಸುಮಾರು 320 ಹುದ್ದೆಗಳು ಖಾಲಿ ಇದ್ದು, 10 ಮತ್ತು 12ನೇ ತರಗತಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಉದ್ಯೋಗದ ಸ್ಥಳ: ಭಾರತಾದ್ಯಂತ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಜುಲೈ 3 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ನಾವಿಕ್‌ (ಜನರಲ್‌ ಡ್ಯೂಟಿ) – 260 ಮತ್ತು ಯಾಂತ್ರಿಕ್‌ – 60 ಹುದ್ದೆಗಳಿವೆ. ನಾವಿಕ್‌ (ಜನರಲ್‌ ಡ್ಯೂಟಿ) ಹುದ್ದೆಗೆ ಅರ್ಜಿ ಸಲ್ಲಿಸುವವರು ವಿಜ್ಞಾನ ವಿಭಾಗದಲ್ಲಿ 12ನೇ ತರಗತಿ ತೇರ್ಗಡೆಯಾಗಿರಬೇಕು. 10, 12ನೇ ತರಗತಿ, ಡಿಪ್ಲೋಮಾ ಪಾಸಾದವರು ಯಾಂತ್ರಿಕ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು. ಗಮನಿಸಿ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.

ವಯೋಮಿತಿ

Indian Coast Guard Recruitment 2024 ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 22 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.

ಆಯ್ಕೆ ವಿಧಾನ, ಮಾಸಿಕ ವೇತನ ಮತ್ತು ಅರ್ಜಿ ಶುಲ್ಕ

ಕಂಪ್ಯೂಟರ್‌ ಆಧಾರಿತ ಪರೀಕ್ಷೆ, ಅಸ್ಸೆಸ್‌ಮೆಂಟ್‌ ಮತ್ತು ಅಡಾಟ್ಬೆಲಿಟಿ ಟೆಸ್ಟ್‌ (Assessment and Adaptability Test), ದೈಹಿಕ ಸಾಮರ್ಥ್ಯ ಪರೀಕ್ಷೆ, ಡಾಕ್ಯುಮೆಂಟ್‌ ಪರಿಶೀಲನೆ, ವೈದ್ಯಕೀಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ನೇಮಕ ನಡೆಯಲಿದೆ. ಆಯ್ಕೆಯಾದವರಿಗೆ 21,700 ರೂ. – 29,200 ರೂ. ಮಾಸಿಕ ವೇತನ ದೊರೆಯಲಿದೆ. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಇನ್ನು ಉಳಿದ ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 300 ರೂ. ಆನ್‌ಲೈನ್‌ ಮೂಲಕ ಪಾವತಿಸಬೇಕು.

Indian Coast Guard Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ. (https://cgept.cdac.in/icgreg/candidate/login)
  • ನಿಮ್ಮ ಇ-ಮೇಲ್‌ ವಿಳಾಸ ನಮೂದಿಸಿ ಹೆಸರು ನೋಂದಾಯಿಸಿ.
  • ಈಗ ಲಾಗಿನ್‌ ಆಗಿ ನಿಮ್ಮ ಹೆಸರು, ಸಂಪೂರ್ಣ ಮಾಹಿತಿ ನೀಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ದಾಖಲೆ, ಫೋಟೊ, ಅರಿಯಾದ ಅಳತೆಯಲ್ಲಿ ಅಪ್‌ಲೋಡ್‌ ಮಾಡಿ.
  • ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದರು ಮಾತ್ರ).
  • ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ನೋಟ್‌ ಮಾಡಿಟ್ಟುಕೊಳ್ಳಿ.

ಇದನ್ನೂ ಓದಿ: Job Alert: 10ನೇ ತರಗತಿ ಪಾಸಾದವರಿಗೆ ಗುಡ್‌ನ್ಯೂಸ್‌; SSCಯಿಂದ ಬರೋಬ್ಬರಿ 8,326 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Continue Reading
Advertisement
Dharamshala Tour
ಪ್ರವಾಸ19 mins ago

Dharamshala Tour: ಪರಿಪೂರ್ಣ ಪ್ರವಾಸದ ಅನುಭವ ಕೊಡುವ ಧರ್ಮಶಾಲಾ

Vastu Tips
ಧಾರ್ಮಿಕ27 mins ago

Vastu Tips: ಮನೆ, ಅಂಗಡಿಯಲ್ಲಿ ಧನಾತ್ಮಕ ಶಕ್ತಿ ಆಹ್ವಾನಿಸಿ; ಸುಖ, ಶಾಂತಿ, ಸಮೃದ್ಧಿ ವೃದ್ಧಿಸಿ

Sour Curd
ಆರೋಗ್ಯ1 hour ago

Sour Curd: ಹುಳಿ ಬಂದ ಮೊಸರಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ?

Dina Bhavishya
ಭವಿಷ್ಯ1 hour ago

Dina Bhavishya : ಒತ್ತಡಗಳು ದೂರವಾಗಿ ಹರ್ಷದಿಂದ ಕಾಲ ಕಳೆಯುವಿರಿ

ಆಟೋಮೊಬೈಲ್5 hours ago

Mahindra Scorpio N : ಮಹೀಂದ್ರಾ ತನ್ನ ಸ್ಕಾರ್ಪಿಯೋ-ಎನ್ Z8 ವೇರಿಯೆಂಟ್​ನಲ್ಲಿ ನೀಡಿದ ಹಲವು ಫೀಚರ್​ಗಳು

suicide news
ಕರ್ನಾಟಕ6 hours ago

Suicide News : ಮಗನ ಕುಡಿತದ ಚಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಅಪ್ಪ, ಅಮ್ಮ

Aditya L1
ದೇಶ6 hours ago

Aditya L1: ಲ್ಯಾಗ್ರೇಂಜ್‌ ಪಾಯಿಂಟ್‌ನ ಮೊದಲ ಸುತ್ತು ಪೂರ್ಣಗೊಳಿಸಿದ ಆದಿತ್ಯ ಎಲ್‌ 1; ಇಸ್ರೋಗೆ ಭಾರಿ ಮುನ್ನಡೆ

David Miller :
ಪ್ರಮುಖ ಸುದ್ದಿ7 hours ago

David Miller : ಸೋಲಿನ ಬೇಸರದಲ್ಲಿ ವಿದಾಯ ಹೇಳಿದರೇ ಮಿಲ್ಲರ್​​; ದಕ್ಷಿಣ ಆಫ್ರಿಕಾ ಆಟಗಾರನ ಪ್ರತಿಕ್ರಿಯೆ ಏನು?

Sudha Murty
ದೇಶ7 hours ago

Sudha Murty: ಕರ್ನಾಟಕ ಸೇರಿ ದೇಶದ ಪ್ರವಾಸೋದ್ಯಮಕ್ಕೆ ಒತ್ತು ನೀಡಿ; ರಾಜ್ಯಸಭೆಯಲ್ಲಿ ಸುಧಾಮೂರ್ತಿ ಮೊದಲ ಭಾಷಣ!

Physical Abuse
ಕರ್ನಾಟಕ8 hours ago

Physical Abuse : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ11 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌