Vastu Tips: ಮನೆಯ ಪ್ರವೇಶದ್ವಾರದ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಬೇಡಿ - Vistara News

ಲೈಫ್‌ಸ್ಟೈಲ್

Vastu Tips: ಮನೆಯ ಪ್ರವೇಶದ್ವಾರದ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಬೇಡಿ

Vastu Tips: ಮನೆಯಲ್ಲಿ ಸುಖ, ಶಾಂತಿ ನೆಲೆಸಲು ವಾಸ್ತು ಶಾಸ್ತ್ರ ಕೆಲವೊಂದು ಸಲಹೆಗಳನ್ನು ನೀಡುತ್ತದೆ. ಮನೆಯ ಪ್ರವೇಶದ್ವಾರದ ವಿಚಾರದಲ್ಲಿ ನಾವು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ವಿವರ ಇಲ್ಲಿದೆ.

VISTARANEWS.COM


on

home entrance
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನೆಮ್ಮದಿಯ ಜೀವನಕ್ಕೆ ವಾಸ್ತು ಶಾಸ್ತ್ರ ಬಹಳ ಮುಖ್ಯ. ಅದರಲ್ಲೂ ನಾವು ಬಹುಪಾಲು ಸಮಯ ಕಳೆಯುವ ಮನೆಯಲ್ಲಿ ವಾಸ್ತು ಶಾಸ್ತ್ರವನ್ನು ಸರಿಯಾಗಿ ಅನುಸರಿಸಿದರೆ ಬಹಳಷ್ಟು ಸಮಸ್ಯೆಗಳಿಂದ ಪಾರಾಗಬಹುದು. ಅಲ್ಲದೆ ಮನೆ ಸಮೃದ್ಧಿಯಿಂದಲೂ ಕೂಡಿರುತ್ತದೆ. ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ಅಂಶವೂ ಹೀಗೆ ಇರಬೇಕು ಎಂದು ಹೇಳಲಾಗಿದೆ. ಅದರಲ್ಲೂ ಪ್ರವೇಶದ್ವಾರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಬಹುತೇಕ ಎಲ್ಲ ಶಕ್ತಿಗಳು ನಿಮ್ಮ ಮನೆಯ ಪ್ರವೇಶದ್ವಾರ ಅಥವಾ ಮುಖ್ಯದ್ವಾರದ ಮೂಲಕ ಬರುತ್ತವೆ. ಹೀಗಾಗಿ ವಾಸ್ತು ಶಾಸ್ತ್ರವನ್ನು ಬಳಸುವ ಮೂಲಕ ನೀವು ಈ ಪರಿಸರದಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು. ಮನೆಯ ಮುಂಭಾಗ ಹೇಗಿರಬೇಕು? ಪ್ರವೇಶದ್ವಾರ ವಿಚಾರದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಏನು? ಎನ್ನುವ ವಿವರ ಇಲ್ಲಿದೆ (Vastu Tips).

ಪ್ರವೇಶದ್ವಾರ ಈ ಭಾಗಕ್ಕೆ ಮುಖ ಮಾಡಿರಲಿ

ಈಶಾನ್ಯ: ನಿಮ್ಮ ಮನೆಯ ಪ್ರವೇಶದ್ವಾರವನ್ನು ಇರಿಸಲು ಈಶಾನ್ಯ ಉತ್ತಮ ದಿಕ್ಕು. ಈಶಾನ್ಯ ಮೂಲೆಯು ಬೆಳಗಿನ ಸೂರ್ಯನಿಗೆ ಒಡ್ಡಿಕೊಳ್ಳುವುದರಿಂದ ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ.

ಉತ್ತರ: ವಾಸ್ತು ಪ್ರಕಾರ ನಿಮ್ಮ ಮನೆಯ ಪ್ರವೇಶ ದ್ವಾರಕ್ಕೆ ಉತ್ತರ ದಿಕ್ಕು ಎರಡನೇ ಅತ್ಯುತ್ತಮ ಸ್ಥಳ. ಇಲ್ಲಿ ಶಕ್ತಿಯ ಮಟ್ಟವು ಹೆಚ್ಚಾಗಿದ್ದರೂ ಈ ದಿಕ್ಕು ಮನೆಯ ನಿವಾಸಿಗಳಿಗೆ ಅದೃಷ್ಟವನ್ನು ತರುತ್ತದೆ.

ಪೂರ್ವ: ನೀವು ಶಕ್ತಿ ಮತ್ತು ಅದೃಷ್ಟವನ್ನು ಹುಡುಕುತ್ತಿದ್ದರೆ ಪೂರ್ವವು ಸೂಕ್ತ ದಿಕ್ಕು.

ಆಗ್ನೇಯ: ಮನೆಯ ಪ್ರವೇಶಕ್ಕೆ ದಕ್ಷಿಣ ದಿಕ್ಕನ್ನು ಅಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ತಪ್ಪಿಸಬೇಕು. ನಿಮ್ಮ ಆಯ್ಕೆಗಳು ಸೀಮಿತವಾಗಿದ್ದರೆ ಆಗ್ನೇಯ ಪ್ರವೇಶ ದಿಕ್ಕನ್ನು ಪ್ರವೇಶದ್ವಾರಕ್ಕಾಗಿ ಬಳಸಿಕೊಳ್ಳಬಹುದು.

ವಾಯವ್ಯ: ವಾಯವ್ಯ ದಿಕ್ಕಿನ ಪ್ರವೇಶದ್ವಾರಗಳು ಸಂಜೆಯ ಸೂರ್ಯನ ಬೆಳಕು ಮತ್ತು ಸಂಪತ್ತನ್ನು ಸಾಕಷ್ಟು ಪ್ರಮಾಣದಲ್ಲಿ ಹೊತ್ತು ತರುತ್ತವೆ.

ಹೀಗೆ ಮಾಡಿ

  • ಮನೆ ನೆಲ ಮಟ್ಟದಲ್ಲಿ ಇಲ್ಲ ಎನ್ನುವುದನ್ನು ಖಚಿತಪಡಿಸಿ. ಮುಂಭಾಗದಲ್ಲಿ ಒಂದೆರಡು ಮೆಟ್ಟಿಲನ್ನಾದರೂ ಅಳವಡಿಸಿ
  • ಪ್ರವೇಶದ್ವಾರದ ಬಾಗಿಲಿಗೆ ಉತ್ತಮ ಗುಣಮಟ್ಟದ ಮರವನ್ನೇ ಬಳಸಿ
  • ಸರಳ ಮತ್ತು ಸ್ವಚ್ಛ ನೇಮ್‌ ಪ್ಲೇಟ್‌ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ
  • ಪ್ರವೇಶದ್ವಾರದ ಬಾಗಿಲಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಿ. ಜತೆಗೆ ಯಾವುದೇ ಕಲೆಯೂ ಇರಬಾರದು.

ಇದನ್ನು ತಪ್ಪಿಸಿ

  • ಇನ್ನೊಂದು ಮನೆಯ ಪ್ರವೇಶ ದ್ವಾರಕ್ಕೆ ಎದುರಾಗಿ ನಿಮ್ಮ ಮನೆ ಮುಖ ಮಾಡುವುದನ್ನು ತಪ್ಪಿಸಿ. ಒಂದು ಇದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದಾದರೆ ಮನೆಯ ಮುಖ್ಯದ್ವಾರ ಬಾಗಿಲಿಗೆ ಕುಂಕುಮದಿಂದ ಸ್ವಸ್ತಿಕ ಚಿಹ್ನೆ ಎಳೆಯಿರಿ
  • ಮುಂಭಾಹದಲ್ಲಿ ಪೀಠೋಪಕರಣಗಳು ಮತ್ತು ಇತರ ಅಲಂಕಾರಗಳನ್ನಿ ಇರಿಸಬೇಡಿ
  • ಮನೆಯ ಮುಂಭಾಗ ಸೆಪ್ಟಿಕ್‌ ಟ್ಯಾಂಕ್‌ ಇರಿಸಬೇಡಿ
  • ಮನೆಯ ಮುಂಭಾಗ ಶೂ ರ‍್ಯಾಕ್‌, ಶೂ ಇರಿಸಬೇಡಿ
  • ವೃತ್ತಾಕಾರದ ಅಥವಾ ಸ್ಲೈಡಿಂಗ್ ಪ್ರವೇಶ ದ್ವಾರವನ್ನು ಆಯ್ಕೆ ಮಾಡಬೇಡಿ
  • ದಕ್ಷಿಣಾಭಿಮುಖ ದಿಕ್ಕುಗಳು ನಿಮ್ಮ ಮನೆಗೆ ಸೂಕ್ತವಲ್ಲ. ಆದ್ದರಿಂದ ಪ್ರವೇಶದ್ವಾರವನ್ನು ದಕ್ಷಿಣ, ಆಗ್ನೇಯ ಅಥವಾ ನೈಋತ್ಯ ದಿಕ್ಕಿನಲ್ಲಿ ಇಡುವುದನ್ನು ತಪ್ಪಿಸಿ

ಹೊಸ್ತಿಲು

ಪ್ರತಿ ಮನೆಯ ಮುಖ್ಯದ್ವಾರದ ಬಾಗಿಲು ಹೊಸ್ತಿಲನ್ನು ಹೊಂದಿರಬೇಕು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ವಾಸ್ತು ಪ್ರಕಾರ ಹೊಸ್ತಿಲು ನಕಾರಾತ್ಮಕ ಶಕ್ತಿಗಳ ವಿರುದ್ಧ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ನಕಾರಾತ್ಮಕ ಶಕ್ತಿ ಪ್ರವೇಶಿಸುವುದನ್ನು ತಡೆಯುತ್ತದೆ.

ಗಿಡಗಳನ್ನು ಇಡಿ

ಮುಖ್ಯ ಬಾಗಿಲಿನ ಒಳಗೆ ಮತ್ತು ಹೊರಗೆ ಸಸ್ಯಗಳನ್ನು ಇರಿಸಬೇಕು. ಇದು ಮನೆಯ ಸೌಂದರ್ಯ ವೃದ್ಧಿಸುವುದಷ್ಟೇ ಅಲ್ಲದೆ ಆರೋಗ್ಯಕ್ಕೂ ಪೂರಕ. ನೆನಪಿಡಿ ಮುಳ್ಳಿನ ಸಸ್ಯಗಳನ್ನು ಇರಿಸಬೇಡಿ. ಇವು ಶುಭ ಸೂಚಕವಲ್ಲ. ಅಲ್ಲದೆ ಪ್ರವೇಶದ್ವಾರದಲ್ಲಿ ಕಸದ ಬುಟ್ಟಿಯನ್ನು ಇಡುವುದನ್ನು ತಪ್ಪಿಸಿ. ಯಾಕೆಂದರೆ ಅದು ದುರಾದೃಷ್ಟವನ್ನು ಆಕರ್ಷಿಸಬಹುದು. ನಿಮ್ಮ ಮನೆ ಮತ್ತು ಪ್ರವೇಶದ್ವಾರದ ಉತ್ತಮ ವಾಸ್ತುವನ್ನು ಉತ್ತೇಜಿಸಲು ಸ್ವಚ್ಛತೆಯನ್ನು ಕಾಪಾಡಿ.

ಇದನ್ನೂ ಓದಿ: Vastu Tips: ವಾಸ್ತು ಪ್ರಕಾರ ಈ ಗಿಡಗಳನ್ನು ಮನೆಯೊಳಗೆ ಇಡಲೇಬಾರದು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Tattoo Care: ಟ್ಯಾಟೂ ಪ್ರಿಯರೇ ಹುಷಾರ್‌! ಎಚ್‌ಐವಿ, ಕ್ಯಾನ್ಸರ್‌ಗೂ ಇದು ಕಾರಣ ಆಗಬಹುದು!

ನೀವು ಟ್ಯಾಟೂ (Tattoo Care) ಪ್ರಿಯರೇ? ಶರೀರದ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ಯೋಚನೆಯಲ್ಲಿದ್ದೀರೇ? ಹಾಗಾದರೆ ನೀವು ಓದಲೇಬೇಕಾದ ಮಾಹಿತಿ ಈ ಲೇಖನದಲ್ಲಿದೆ. ಟ್ಯಾಟೂ ಶಾಯಿಯ ದುಷ್ಪರಿಣಾಮದ ಬಗ್ಗೆ ವೈದ್ಯಲೋಕ ಎಚ್ಚರಿಕೆಯ ಮಾತನ್ನು ಹೇಳಿದೆ. ಆರೋಗ್ಯ ತಜ್ಞರ ಪ್ರಕಾರ ಟ್ಯಾಟೂ ಹಾಕಿಸಿಕೊಳ್ಳುವಾಗ ಹೆಚ್ಚಿನ ಎಚ್ಚರಿಕೆ ವಹಿಸದಿದ್ದರೆ, ಗಂಭೀರವಾದ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.

VISTARANEWS.COM


on

Tattoo Care
Koo

ಇತ್ತೀಚಿನ ವರ್ಷಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವ ಟ್ರೆಂಡ್‌ (Tattoo Care) ಜೋರಾಗಿದೆ. ಅವರಿಷ್ಟದ ಯಾರೋ ತಾರೆಯರನ್ನು ಅಥವಾ ಕ್ರೀಡಾಳುಗಳನ್ನು ನೋಡಿ ಟ್ಯಾಟೂ ಹಾಕಿಸಿಕೊಳ್ಳುವವರು ಲೆಕ್ಕವಿಲ್ಲದಷ್ಟು ಮಂದಿ. ಬರೀ ಕಪ್ಪು ಬಣ್ಣದ್ದು, ಬಣ್ಣ ಬಣ್ಣದ್ದು, ಹೆಸರುಗಳು, ಯಾರದ್ದೋ ಮುಖಗಳು, ಹೂ-ಬಳ್ಳಿಯ ಚಿತ್ರಗಳು, ಅರ್ಥವಿಲ್ಲದ ಆಕೃತಿಗಳು- ಹೀಗೆ ಏನೇನೋ ನಮೂನೆಗಳನ್ನು ಇದರಲ್ಲಿ ಕಾಣಬಹುದು. ಇದೆಲ್ಲ ಸರಿ. ಆದರೆ ಆರೋಗ್ಯ ತಜ್ಞರ ಪ್ರಕಾರ ಟ್ಯಾಟೂ ಹಾಕಿಸಿಕೊಳ್ಳುವಾಗ ಹೆಚ್ಚಿನ ಎಚ್ಚರಿಕೆ ವಹಿಸದಿದ್ದರೆ, ಗಂಭೀರವಾದ ಆರೋಗ್ಯ ಸಮಸ್ಯೆಗಳು ಗಂಟಿಕ್ಕಿಕೊಳ್ಳಬಹುದು.

Close up of the tattoo machine

ಏನು ಸಮಸ್ಯೆ?

ಟ್ಯಾಟೂ ಹಾಕಿಸಿಕೊಳ್ಳುವುದರಲ್ಲಿ ಏನಿದೆ ಸಮಸ್ಯೆ? ಜಗತ್ತಿನಲ್ಲಿ ಲಕ್ಷಗಟ್ಟಲೆ ಜನ ಹಾಕಿಸಿಕೊಂಡಿದ್ದಾರಲ್ಲ, ಹಾಕಿಸಿಕೊಳ್ಳುತ್ತಲೂ ಇದ್ದಾರಲ್ಲ ಎಂಬ ಕುತೂಹಲ ಇರಬಹುದು. ವೈದ್ಯರ ಪ್ರಕಾರ, ಹೆಪಟೈಟಿಸ್‌ ಬಿ, ಸಿ, ಎಚ್‌ಐವಿ ಹಾಗೂ ಹಲವು ರೀತಿಯ ಕ್ಯಾನ್ಸರ್‌ಗಳು ಬರಬಹುದು. ಈ ಬಗ್ಗೆ ಸ್ವೀಡನ್‌ನಲ್ಲಿ ನಡೆಸಲಾದ ಅಧ್ಯಯನವೊಂದರಲ್ಲಿ, ಟ್ಯಾಟೂ ಹಾಕಿಸಿಕೊಂಡಿದ್ದ ೧೧,೯೦೫ ಜನರಿಂದ ಮಾಹಿತಿ ಕಲೆಹಾಕಲಾಗಿತ್ತು. ಇದರಲ್ಲಿ ಟ್ಯಾಟೂ ಹಾಕಿಸಿಕೊಂಡ ಬಹಳಷ್ಟು ಜನರಲ್ಲಿ ಲಿಂಫೋಮ ಸಾಧ್ಯತೆಗಳು ಕಂಡುಬಂದಿದ್ದವು.

ಹೀಗೇಕೆ?

ಟ್ಯಾಟೂ ಹಾಕುವುದಕ್ಕೆ ಬಳಸಲಾಗುವ ಶಾಯಿಯಲ್ಲಿ ಪಾಲಿಸೈಕ್ಲಿಕ್‌ ಅರೋಮ್ಯಾಟಿಕ್‌ ಹೈಡ್ರೋಕಾರ್ಬನ್‌ (ಪಿಎಎಚ್‌) ಎಂಬ ಕ್ಯಾನ್ಸರ್‌ಕಾರಕ ಇರುವಂಥ ಎಲ್ಲ ಸಾಧ್ಯತೆಗಳಿವೆ. ಎಲ್ಲ ಶಾಯಿಗಳೂ ಇದನ್ನು ಹೊಂದಿರುತ್ತವೆ ಎಂದಲ್ಲ, ಆದರೆ ಇದನ್ನು ಹೊಂದಿರುವಂಥ ಶಾಯಿಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಪಿಎಎಚ್‌ ಅಂಶ ದೇಹದೊಳಗೆ ಹೋದಾಕ್ಷಣ, ಶರೀರದ ಪ್ರತಿರೋಧಕ ಶಕ್ತಿ ಜಾಗೃತಗೊಳ್ಳುತ್ತದೆ. ಈ ಅಂಶದ ಬಹುಭಾಗ ಚರ್ಮದಿಂದ ಬೇರೆಯಾಗಿ, ಶರೀರವನ್ನು ಪ್ರವೇಶಿಸಿ, ದೇಹದ ಲಿಂಫ್‌ ನೋಡ್‌ಗಳಲ್ಲಿ ಜಮೆಯಾಗುತ್ತವೆ. ಇದರಿಂದಲೇ ಲಿಂಫೋಮದಂಥ ರೋಗಗಳು ತಲೆದೋರುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು.

Tattoo bottle and needle

ತಪ್ಪು ಮಾಹಿತಿ

ಟ್ಯಾಟೂ ಶಾಯಿಗಳ ಬಾಟಲಿಯ ಮೇಲೆ ನೀಡಿರುವ ಮಾಹಿತಿಗೂ, ಆ ಶಾಯಿಯಲ್ಲಿ ಇರುವಂಥ ಅಂಶಗಳಿಗೂ ಎಷ್ಟೋ ಬಾರಿ ತಾಳೆಯೇ ಬೀಳುವುದಿಲ್ಲ ಎಂಬ ಅಂಶವನ್ನು ಇತ್ತೀಚೆಗೆ ಆಸ್ಟ್ರೇಲಿಯದಲ್ಲಿ ನಡೆಸಲಾದ ಅಧ್ಯಯನ ಬಯಲು ಮಾಡಿತ್ತು. ಪರೀಕ್ಷೆಗೆ ಒಳಪಡಿಸಲಾದ ಶೇ 20ಕ್ಕಿಂತ ಹೆಚ್ಚಿನ ಶಾಯಿಗಳಲ್ಲಿ ಪಿಎಎಚ್‌ ಅಂಶಗಳು ಕಂಡಿದ್ದವು. ಮಾತ್ರವಲ್ಲ, ಪಾದರಸ, ಬ್ಯಾರಿಯಂನಂಥ ಭಾರೀ ಖನಿಜಗಳು ಸಹ ಇದರಲ್ಲಿ ಇದ್ದವು ಎಂದು ಅಧ್ಯಯನದ ವಿವರಗಳನ್ನು ನೀಡುತ್ತಾ ತಜ್ಞರು ತಿಳಿಸುತ್ತಾರೆ. ಈ ರಾಸಾಯನಿಕಗಳು ಕೆಲವೊಮ್ಮೆ ಚರ್ಮದ ತೊಂದರೆಗಳಿಂದ ಹಿಡಿದು ಚರ್ಮದ ಕ್ಯಾನ್ಸರ್‌, ಯಕೃತ್‌ ಕ್ಯಾನ್ಸರ್‌, ಮೂತ್ರಪಿಂಡದ ಕ್ಯಾನ್ಸರ್‌ ಮತ್ತು ರಕ್ತದ ಕ್ಯಾನ್ಸರ್‌ಗೂ ಕಾರಣವಾಗಬಹುದು. ಇದಲ್ಲದೆ, ಟ್ಯಾಟೂ ಹಾಕುವುದಕ್ಕೆ ಬಳಸುವ ಸೂಜಿಗಳ ವಿಚಾರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದರೆ, ಎಚ್‌ಐವಿ, ಹೆಪಟೈಟಿಸ್‌ ಬಿ, ಸಿ ಯಂಥ ರೋಗಗಳು ಅಂಟಬಹುದು.

ಇದನ್ನೂ ಓದಿ: Quitting Smoking: ಈ ಆಹಾರ ಸೇವಿಸುವ ಮೂಲಕ ಸಿಗರೇಟು, ಗುಟ್ಕಾ ಚಟದಿಂದ ದೂರ ಆಗಬಹುದು!

ಭಾರತದಲ್ಲಿಲ್ಲ

ಟ್ಯಾಟೂ ಶಾಯಿಗಳಲ್ಲಿ ಬಳಸಬಹುದಾದ ರಾಸಾಯನಿಕಗಳ ಬಗ್ಗೆ ಭಾರತದಲ್ಲಂತೂ ಸ್ಪಷ್ಟ ನಿರ್ದೇಶನಗಳಿಲ್ಲ. ಶಾಯಿ ಬಾಟಲಿಯ ಮೇಲೆ ನಮೂದಿಸಿದ ಅಂಶಗಳೇ ಒಳಗೂ ಇವೆಯೇ ಎಂಬುದನ್ನೂ ಯಾರೂ ಪರಿಶೀಲಿಸುವುದಿಲ್ಲ. ಟ್ಯಾಟೂ ಹಾಕುವ ಸ್ಥಳಗಳು ಮತ್ತು ಹಾಕುವವರ ಬಗ್ಗೆ ನಿಗಾ ಇಡುವಂಥ ವ್ಯವಸ್ಥೆ ಇಲ್ಲ. ಅಲ್ಲಿ ಪಾಲನೆಯಾಗುವ ಸ್ವಚ್ಛತೆ ಮತ್ತು ಇತರ ಕ್ರಮಗಳು ಸರಿಯಿಲ್ಲದಿದ್ದರೆ, ಶಿಸ್ತುಕ್ರಮ ಜರುಗಿಸುವಂಥ ವ್ಯವಸ್ಥೆಯೂ ಇಲ್ಲ. ಈ ಎಲ್ಲ ವಿಷಯಗಳ ಕುರಿತಾಗಿ ಯಾವುದೇ ನೀತಿ-ನಿಯಮಾವಳಿಗಳು ರಚನೆಗೊಂಡಿಲ್ಲ. ಹಾಗಾಗಿ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸುವುದು ಅಗತ್ಯ.

Continue Reading

ಆಹಾರ/ಅಡುಗೆ

Aam Panna Recipe: ಆಮ್‌ ಪನ್ನಾ! ಮಾವಿನಕಾಯಿಯ ಅದ್ಭುತ ಪೇಯ ಇದು; ನೀವೂ ಮಾಡಿ ನೋಡಿ

ಮಾವಿನ ಕಾಯಿ ದೊರೆತರೆ, ಉಪ್ಪಿನಕಾಯಿ, ಗೊಜ್ಜು ಸೇರಿದಂತೆ ಥರಹೇವಾರಿ ಅಡುಗೆಗಳನ್ನು ಮಾಡುವುದು ಸಾಮಾನ್ಯ. ಅವುಗಳ ಪೈಕಿ ಆಮ್‌ ಪನ್ನಾ ಕೂಡಾ ಒಂದು. ಈ ಮಹಾರಾಷ್ಟ್ರ ಮೂಲದ ಪೇಯ ಬೇಸಿಗೆಗೆ ಅತ್ಯಂತ ಹಿತ ನೀಡುವ ಪೇಯಗಳ ಪೈಕಿ ಒಂದು. ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಹಾಗೂ ಆರೋಗ್ಯಕರವೂ ಆಗಿರುವ ಈ ಪೇಯದಿಂದ ಸಾಕಷ್ಟು ಲಾಭಗಳೂ ಇವೆ. ಬನ್ನಿ, ಆಮ್‌ ಪನ್ನಾದ (Aam Panna Recipe) ಲಾಭಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

Aam Panna Recipe
Koo

ಹೇಳಿಕೇಳಿ ಇದು ಮಾವಿನಹಣ್ಣಿನ ಕಾಲ. ಮಾರುಕಟ್ಟೆಗೆ ಕಾಲಿಟ್ಟರೆ ಮಾವಿನಹಣ್ಣಿನಷ್ಟೇ ಸುಲಭವಾಗಿ ಮಾವಿನಕಾಯಿಯೂ ದೊರೆಯುತ್ತದೆ. ಮಾವಿನ ಕಾಯಿ ದೊರೆತರೆ, ಉಪ್ಪಿನಕಾಯಿ, ಗೊಜ್ಜು ಸೇರಿದಂತೆ ಥರಹೇವಾರಿ ಅಡುಗೆಗಳನ್ನು ಮಾಡುವುದು ಸಾಮಾನ್ಯ. ಅವುಗಳ ಪೈಕಿ ಆಮ್‌ ಪನ್ನಾ ಕೂಡಾ ಒಂದು. ಈ ಮಹಾರಾಷ್ಟ್ರ ಮೂಲದ ಪೇಯ ಬೇಸಿಗೆಗೆ ಅತ್ಯಂತ ಹಿತ ನೀಡುವ ಪೇಯಗಳ ಪೈಕಿ ಒಂದು. ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಹಾಗೂ ಆರೋಗ್ಯಕರವೂ ಆಗಿರುವ ಈ ಪೇಯದಿಂದ ಸಾಕಷ್ಟು ಲಾಭಗಳೂ ಇವೆ. ಬನ್ನಿ, ಆಮ್‌ ಪನ್ನಾದ (Aam Panna Recipe) ಲಾಭಗಳು ಯಾವುವು ಎಂಬುದನ್ನು ನೋಡೋಣ.

healthy internal organs of human digestive system

ಪಚನಕ್ರಿಯೆಗೆ ಒಳ್ಳೆಯದು

ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಹೊಂದಿರುವ ಮಂದಿಗೆ ಆಮ್‌ ಪನ್ ಒಳ್ಳೆಯದು. ಹೊಟ್ಟೆಯುಬ್ಬರ ಹಾಗೂ ಮಲಬದ್ಧತೆಯ ಸಮಸ್ಯೆ ನಿಮಗೆ ಆಗಾಗ ಕಾಣಿಸುತ್ತಿದೆ ಎಂದಾದಲ್ಲಿ ಇದರಲ್ಲಿ ಅದಕ್ಕೆ ಉತ್ತರವಿದೆ. ಆಮ್‌ ಪನ್ನಾದಲ್ಲಿ ನಾರಿನಂಶವಿದೆ. ಅಷ್ಟೇ ಅಲ್ಲ, ಮಾವಿನ ಕಾಯಿಯಲ್ಲಿ ಜೀರ್ಣಕಾರಿ ಗುಣಗಳಿವೆ. ಜೊತೆಗ ಆಮ್‌ ಪನ್ನಾ ಮಾಡುವಾಗ ಬಳಸಿದ ಜೀರಿಗೆ, ಸೈಂದವ ಲವಣ, ಕರಿಮೆಣಸು ಎಲ್ಲವೂ ಕೂಡಾ ಜೀರ್ಣಕ್ರಿಯೆಗೆ ಅತ್ಯಂತ ಒಳ್ಳೆಯದು.

Antioxidants in it keep immunity strong Benefits Of Mandakki

ರೋಗನಿರೋಧಕತೆ ಹೆಚ್ಚಿಸುತ್ತದೆ

ಆಮ್‌ ಪನ್ನಾದ ಮತ್ತೊಂದು ಲಾಭವೆಂದರೆ ಇದು ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ. ಕಾರಣ ಇದರಲ್ಲಿರುವ ವಿಟಮಿನ್‌ ಸಿ. ಮಾವಿನಕಾಯಿಯಲ್ಲಿ ವಿಟಮಿನ್‌ ಸಿ ಹೇರಳವಾಗಿ ಇರುವುದರಿಂದ ಇದು ರೋಗ ನಿರೋಧಕತೆಯ ವಿಚಾರದಲ್ಲಿ ಉತ್ತಮ ಕೊಡುಗೆ ನೀಡುತ್ತದೆ. ಅಷ್ಟೇ ಅಲ್ಲ, ಮಾವಿನಕಾಯಿಯಲ್ಲಿ ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ಇದೂ ಕೂಡಾ ರೋಗ ನಿರೋಧಕತೆ ಹೆಚ್ಚಿಸಲು ಸಹಾಯ ಮಾಡುತ್ತದೆ.

Skin Care

ಚರ್ಮದ ಆರೋಗ್ಯಕ್ಕೆ ಉತ್ತಮ

ಆಮ್‌ ಪನ್ನಾ ಚರ್ಮದ ಆರೋಗ್ಯಕ್ಕೂ ಒಳ್ಳೆಯದು ಎಂಬುದು ತಿಳಿದಿದೆಯೇ? ಹೌದು. ವಿಟಮಿನ್‌ ಸಿ ಹೇರಳವಾಗಿರುವ ಮಾವಿನ ಕಾಯಿ ಚರ್ಮದ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ. ಚರ್ಮದ ಹೊಳಪಿಗೆ, ತಾಜಾತನಕ್ಕೆ, ಹಾಗೂ ಆರೋಗ್ಯದಿಂದ ಕಂಗೊಳಿಸುವಂತೆ ಮಾಡಲು ವಿಟಮಿನ್‌ ಸಿ ಬೇಕೇ ಬೇಕು. ಮೊಡವೆ, ಕಪ್ಪುಕಲೆ, ಚುಕ್ಕೆಗಳು ಇತ್ಯಾದಿ ಚರ್ಮದ ಸಮಸ್ಯೆಗಳಿಗೂ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ.

weight loss

ತೂಕ ಇಳಿಕೆಗೂ ಒಳ್ಳೆಯದು

ನೀವು ತೂಕ ಇಳಿಕೆಯ ಹಂಬಲದಲ್ಲಿದ್ದರೆ ಆಮ್‌ ಪನ್ನಾ ಕೂಡಾ ಅದಕ್ಕೆ ಸಹಾಯ ಮಾಡುತ್ತದೆ. ಇದು ಕಡಿಮೆ ಕ್ಯಾಲರಿಯ, ನಾರಿನಂಶ ಹೆಚ್ಚಿರುವ ಪೇಯವಾದ್ದರಿಂದ ಇದನ್ನು ಯಾವ ತಲೆಬಿಸಿಗಳಿಲ್ಲದೆ ಕುಡಿಯಬಹುದು.

Aam Panna

ಆಮ್‌ ಪನ್ನಾ ಹೇಗೆ ಮಾಡುವುದು?

ಮಾವಿನ ಕಾಯಿಯನ್ನು ಬೇಯಿಸಿ. ಅದು ಮೆದುವಾಗುವವರೆಗೆ ಬೇಯಲಿ. ಬೆಂದಾಗ ಮಾವಿನ ಕಾಯಿಯ ಸಿಪ್ಪೆಯ ಬಣ್ಣ ಬದಲಾಗುತ್ತದೆ. ಬೇಯಿಸಿದ ಮಾವಿನ ಕಾಯಿ ತಣ್ಣಗಾದಾಗ, ಅದರ ಸಿಪ್ಪೆ ಹಾಗೂ ಬೀಜವನ್ನು ಬೇರ್ಪಡಿಸಿ. ಉಳಿದ ಭಾಗವನ್ನು ಚೆನ್ನಾಗಿ ಮ್ಯಾಶ್‌ ಮಾಡಿ. ಅದಕ್ಕೆ ಜೀರಿಗೆ, ಕರಿಮೆಣಸು, ಸೈಂದವ ಲವಣ, ಚೆನ್ನಾಗಿ ಕತ್ತರಿಸಿದ ಪುದಿನ ಎಲೆಗಳನ್ನು ಸೇರಿಸಿ ಮಿಕ್ಸಿಯಲ್ಲಿ ತಿರುಗಿಸಿ. ಸಕ್ಕರೆ ನಿಮ್ಮ ಅಗತ್ಯಕ್ಕೆ ತಕ್ಕಂತೆ ಸೇರಿಸಬಹುದು. ನಂತರ ಅದಕ್ಕೆ ಅಗತ್ಯವಿದ್ದಷ್ಟು ನೀರನ್ನು ಸೇರಿಸಿ. ತಣ್ಣಗೆ ಬೇಕಿದ್ದರೆ ಐಸ್‌ ಕ್ಯೂಬ್‌ ಸೇರಿಸಿ ಕುಡಿಯಿರಿ.

ಇದನ್ನೂ ಓದಿ: Healthy Salad Tips: ನೀವು ಸಲಾಡ್‌ ಪ್ರಿಯರೇ? ಸಲಾಡ್‌ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!

Continue Reading

ಫ್ಯಾಷನ್

Denim Tube Tops Fashion: ಡೆನಿಮ್‌ನಲ್ಲೂ ಬಂತು ಟ್ಯೂಬ್‌ ಟಾಪ್ ಫ್ಯಾಷನ್‌!

ಡೆನಿಮ್‌ನಲ್ಲೂ ಟ್ಯೂಬ್‌ ಟಾಪ್‌ ಫ್ಯಾಷನ್‌ (Denim Tube Tops Fashion) ಬಂದಿದೆ. ಶಾರ್ಟ್ಸ್ ಹಾಗೂ ಪ್ಯಾಂಟ್‌ನೊಂದಿಗೆ ಧರಿಸಿದಾಗ ನೋಡಲು ಕೋ-ಆರ್ಡ್ ಸೆಟ್‌ನಂತೆ ಕಾಣುವ ಇವನ್ನು ಹೇಗೆಲ್ಲಾ ಧರಿಸಬಹುದು? ಯಾವ ಡಿಸೈನ್‌ನವು ಹೆಚ್ಚು ಚಾಲ್ತಿಯಲ್ಲಿವೆ? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Denim Tube Tops Fashion
ಚಿತ್ರಗಳು: ಸೌಮ್ಯಾ ಟಂಡನ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಡೆನಿಮ್‌ ಟ್ಯೂಬ್‌ ಟಾಪ್‌ಗಳು (Denim Tube Tops Fashion) ಇದೀಗ ಜೆನ್‌ ಜಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಹೌದು, ಅಲ್ಟ್ರಾ ಮಾಡರ್ನ್‌ ಹುಡುಗಿಯರ ಫೆವರೇಟ್‌ ಲಿಸ್ಟ್‌ನಲ್ಲಿರುವ ಇವು ಗ್ಲಾಮರಸ್‌ ಲುಕ್‌ ನೀಡುತ್ತಿವೆ. ಮೊದಲೆಲ್ಲಾ ಸಾಫ್ಟ್ ಫ್ಯಾಬ್ರಿಕ್‌ನಲ್ಲಿದ್ದ ಈ ಟ್ಯೂಬ್ ಟಾಪ್‌ಗಳು ಇದೀಗ ಡೆನಿಮ್‌ನಲ್ಲೂ ಬಂದಿರುವುದು ಯುವತಿಯರ ವಾರ್ಡ್ರೋಬ್‌ ಲಿಸ್ಟ್‌ಗೆ ಸೇರಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ ನ್ಯಾಸ. ಅವರ ಪ್ರಕಾರ, ಟೀನೇಜ್‌ ಹುಡುಗಿಯರಿಂದಿಡಿದು ಕಾರ್ಪೋರೇಟ್‌ ಕ್ಷೇತ್ರದವರು ಕೂಡ ಈ ಟಾಪ್‌ಗಳ ಪ್ರೇಮಿಗಳು.

Denim Tube Tops Fashion

ಟ್ರೆಂಡಿಯಾಗಿರುವ ಡೆನಿಮ್‌ ಟ್ಯೂಬ್‌ ಟಾಪ್ಟ್

ಇಡೀ ಭುಜವನ್ನು ಎಕ್ಸ್‌ಫೋಸ್‌ ಮಾಡುವ ಆಫ್‌ ಶೋಲ್ಡರ್, ಬಾಡಿಕಾನ್‌, ಕಾರ್ಸೆಟ್ ಶೈಲಿಯವು ಟ್ಯೂಬ್‌ ಟಾಪ್‌ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಇವುಗಳ ವಿಶೇಷ ಎಂದರೇ, ಬಟನ್‌ ಇರುವಂತವು ಆಗಮಿಸಿವೆ. ವಿಂಟೇಜ್‌ ಬಟನ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಇನ್ನು ಇತರೇ ಟ್ಯೂಬ್‌ ಟಾಪ್‌ಗಳಿಗೆ ಬಟನ್‌ ಇರುವುದಿಲ್ಲ. ಬದಲಿಗೆ ಸ್ಟ್ರೆಚಬಲ್‌ ಫ್ಯಾಬ್ರಿಕ್‌ ಹೊಂದಿರುತ್ತವೆ. ಎಲಾಸ್ಟಿಕ್‌ನಂತೆ ಎಳೆದಾಗ ಸ್ಟ್ರೆಚ್‌ ಆಗುತ್ತವೆ. ಆದರೆ, ಡೆನಿಮ್‌ನವು ಕೊಂಚ ದಪ್ಪ ಫ್ಯಾಬ್ರಿಕ್‌ ಹೊಂದಿರುವುದರಿಂದ ಇವಕ್ಕೆ ಬಟನ್‌ಗಳನ್ನು ಫಿಕ್ಸ್ ಮಾಡಲಾಗಿರುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ಜೀವನ್‌.

Denim Tube Tops Fashion

ಡೆನಿಮ್‌ ಟ್ಯೂಬ್‌ ಟಾಪ್‌ ಮಿಕ್ಸ್-ಮ್ಯಾಚ್‌

ಡೆನಿಮ್‌ ಟ್ಯೂಬ್‌ ಟಾಪ್‌ಗಳನ್ನು ನಾನಾ ರೀತಿಯಲ್ಲಿ ಧರಿಸಬಹುದು. ಕೋ ಆರ್ಡ್ ಸೆಟ್‌ನಂತೆ ಬಿಂಬಿಸಬೇಕಾದಲ್ಲಿ ಅವನ್ನು ನಾನಾ ಬಗೆಯ ಜೀನ್ಸ್ ಪ್ಯಾಂಟ್‌ಗಳೊಂದಿಗೆ ಧರಿಸಬಹುದು. ಡೆನಿಮ್‌ ಶಾರ್ಟ್ಸ್ ಹಾಗೂ ಸ್ಕರ್ಟ್ಸ್‌ನೊಂದಿಗೂ ಧರಿಸಬಹುದು. ಡಿಫರೆಂಟ್‌ ಲುಕ್‌ ನೀಡಲು ಇತರೇ ಫ್ಯಾಬ್ರಿಕ್‌ನ ಸ್ಕರ್ಟ್ಸ್ ಅಥವಾ ಪ್ಯಾಂಟ್‌ ಜೊತೆಯೂ ಧರಿಸಬಹುದು. ನಿಮಗೆ ಮಿಕ್ಸ್-ಮ್ಯಾಚ್‌ ಮಾಡುವ ಸ್ಟೈಲಿಂಗ್‌ ಬಗ್ಗೆ ಬೇಸಿಕೆ ಅರಿವಿರಬೇಕಷ್ಟೇ! ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Denim Tube Tops Fashion

ಲೈಟ್‌ವೈಟ್‌ ಫ್ಯಾಬ್ರಿಕ್‌ನ ಆಯ್ಕೆ

“ಡೆನಿಮ್‌ ಟ್ಯೂಬ್‌ ಟಾಪ್‌ಗಳಲ್ಲೂ ಇದೀಗ ಲೈಟ್‌ ವೈಟ್ ಇರುವಂತಹ ಭಾರವಿಲ್ಲದ ಫ್ಯಾಬ್ರಿಕ್‌ನವನ್ನು ನಾನಾ ಬ್ರಾಂಡ್‌ಗಳು ಮಾರಾಟ ಮಾಡುತ್ತಿವೆ. ಖರೀದಿಸುವಾಗ ನೋಡಿ ಕೊಳ್ಳಬೇಕು” ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್ ರಾಜ್‌.

Denim Tube Tops Fashion

ಡೆನಿಮ್‌ ಟ್ಯೂಬ್‌ ಟಾಪ್‌ ಪ್ರಿಯರಿಗೆ 5 ಟಿಪ್ಸ್

  • ಟ್ರಯಲ್‌ ನೋಡದೇ ಯಾವುದೇ ಕಾರಣಕ್ಕೂ ಖರೀದಿಸಬೇಡಿ.
  • ನಿಮ್ಮ ಬಾಡಿ ಮಾಸ್‌ ಇಂಡೆಕ್ಸ್‌ಗೆ ಫಿಟ್‌ ಆಗಿ ಕೂರುವುದಾದಲ್ಲಿ ಮಾತ್ರ ಧರಿಸಿ.
  • ತೀರಾ ಸ್ಲಿಮ್‌ ಅಥವಾ ತೀರಾ ಪ್ಲಂಪಿಯಾಗಿರುವವರಿಗೂ ಇವು ಸೂಕ್ತವಲ್ಲ.
  • ಟ್ಯೂಬ್‌ ಟಾಪ್ಸ್‌ನೊಳಗೆ ಟೈಟ್‌ ಇನ್ನರ್‌ ಧರಿಸುವುದು ಅಗತ್ಯ.
  • ಎಕ್ಸ್ ಪೋಸ್ ಆಗುವುದರಿಂದ ಸಂದರ್ಭಕ್ಕೆ ತಕ್ಕಂತೆ ಚೂಸ್‌ ಮಾಡಿ.

( ಲೇಖಕಿ: ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Star Fashion: ಪಂಚೆ ಜೊತೆ ಟ್ರೋಫಿ ಜಾಕೆಟ್‌ ಧರಿಸಿದ ನಟಿ ತಮನ್ನಾಳ ಯೂನಿಕ್‌ ಫ್ಯಾಷನ್‌!

Continue Reading

ಆರೋಗ್ಯ

Healthy Sandwich Spread: ಮನೆಯಲ್ಲೇ ಮಾಡಿ ಕಡಿಮೆ ಕ್ಯಾಲರಿಯ ಆರೋಗ್ಯಕರ ಸ್ಯಾಂಡ್‌ವಿಚ್‌ ಸ್ಪ್ರೆಡ್‌!

ಮಕ್ಕಳಿರುವ ಹೆತ್ತವರಿಗಂತೂ, ವಾರದಲ್ಲಿ ಎರಡು ಸಲವಾದರೂ ಮನೆಯಲ್ಲಿ ಸ್ಯಾಂಡ್‌ವಿಚ್‌ ಮಾಡಬೇಕಾದ ಪ್ರಸಂಗಗಳು ಇದ್ದೇ ಇರುತ್ತವೆ. ಕಚೇರಿ ಕೆಲಸಕ್ಕೆ ಬೇಗ ಹೋಗಬೇಕಾದಾಗ, ಅತೀವ ಕೆಲಸದ ಒತ್ತಡದಲ್ಲಿರುವಾಗ, ಅಡುಗೆ ಮಾಡಲು ಪುರುಸೊತ್ತು, ವ್ಯವಧಾನ ಇರದಿದ್ದಾಗ, ಬೇರೆ ಅಡುಗೆ ಮಾಡಲು ಗೊತ್ತಿಲ್ಲದೇ ಇದ್ದಾಗ, ಏನಾದರೂ ರುಚಿಯಾಗಿ ತಿನ್ನಬೇಕೆಂದು ಬಯಕೆಯಾದಾಗ, ಹೀಗೆ ನಾನಾ ಕಾರಣಗಳಲ್ಲಿ ಸ್ಯಾಂಡ್‌ವಿಚ್‌ ಎಂಬ ತಿನಿಸು ಅಡುಗೆಮನೆಯಲ್ಲಿ ಹೊತ್ತಲ್ಲದ ಹೊತ್ತಿನಲ್ಲೆಲ್ಲ ಪ್ರತ್ಯಕ್ಷವಾಗುತ್ತದೆ. ಮನೆಯಲ್ಲೇ ಮಾಡಬಹುದಾದ ಸ್ಯಾಂಡ್‌ವಿಚ್‌ ಸ್ಪ್ರೆಡ್‌ಗಳ (healthy sandwich spread) ವಿವರ ಇಲ್ಲಿದೆ.

VISTARANEWS.COM


on

Healthy Sandwich Spread
Koo

ಸ್ಯಾಂಡ್‌ವಿಚ್‌ ಎಂಬ ತಿನಿಸು, ಬೆಳಗ್ಗೆ, ಮಧ್ಯಾಹ್ನ ಸಂಜೆ ರಾತ್ರಿಯೆನ್ನದೆ, ಯಾವುದೇ ಹೊತ್ತಿಗೂ ಹೊಟ್ಟೆ ತುಂಬಿಸಬಲ್ಲ ಒಂದು ಸುಲಭವಾದ ತಿನಿಸು. ಅಷ್ಟೇ ರುಚಿಯಾದ ತಿನಸು ಎಂಬುದರಲ್ಲೂ ಎರಡು ಮಾತಿಲ್ಲ. ಮಕ್ಕಳಿರುವ ಹೆತ್ತವರಿಗಂತೂ, ವಾರದಲ್ಲಿ ಎರಡು ಸಲವಾದರೂ ಮನೆಯಲ್ಲಿ ಸ್ಯಾಂಡ್‌ವಿಚ್‌ ಮಾಡಬೇಕಾದ ಪ್ರಸಂಗಗಳು ಇದ್ದೇ ಇರುತ್ತವೆ. ಕಚೇರಿ ಕೆಲಸಕ್ಕೆ ಬೇಗ ಹೋಗಬೇಕಾದಾಗ, ಅತೀವ ಕೆಲಸದ ಒತ್ತಡದಲ್ಲಿರುವಾಗ, ಅಡುಗೆ ಮಾಡಲು ಪುರುಸೊತ್ತು, ವ್ಯವಧಾನ ಇರದಿದ್ದಾಗ, ಬೇರೆ ಅಡುಗೆ ಮಾಡಲು ಗೊತ್ತಿಲ್ಲದೇ ಇದ್ದಾಗ, ಏನಾದರೂ ರುಚಿಯಾಗಿ ತಿನ್ನಬೇಕೆಂದು ಬಯಕೆಯಾದಾಗ, ಹೀಗೆ ನಾನಾ ಕಾರಣಗಳಲ್ಲಿ ಸ್ಯಾಂಡ್‌ವಿಚ್‌ ಎಂಬ ತಿನಿಸು ಅಡುಗೆಮನೆಯಲ್ಲಿ ಹೊತ್ತಲ್ಲದ ಹೊತ್ತಿನಲ್ಲೆಲ್ಲ ಪ್ರತ್ಯಕ್ಷವಾಗುತ್ತದೆ. ಬ್ರೆಡ್‌ ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲ ಎಂದು ತಿಳಿದಿದ್ದರೂ, ಬಹುತೇಕರ ಮನೆಗಳಲ್ಲಿ ಬ್ರೆಡ್‌ ಬಳಕೆ ಸಾಮಾನ್ಯ. ಈ ಬ್ರೆಡ್‌ ಒಳಗೆ ಮೆಯೋನೀಸ್‌ ಅಥವಾ ಇನ್ನೇನೋ ಅದರೊಳಗೆ ಸುರಿದು ಇನ್ನಷ್ಟು ಅನಾರೋಗ್ಯಕರ ವಾತಾವರಣವನ್ನು ಅಲ್ಲಿ ಸೃಷ್ಟಿಸುವುದು ಬೇಡವೆನಿಸಿದವರೆಲ್ರೂ, ಸ್ಯಾಂಡ್‌ವಿಚ್‌ನಲ್ಲೂ ಆರೋಗ್ಯಕರ ವಿಧಾನಗಳನ್ನು ಹುಡುಕುತ್ತಾರೆ. ಆದರಷ್ಟೂ ಬ್ರೆಡ್‌ ಜೊತೆಗೆ ಒಂದಷ್ಟು ತರಕಾರಿ, ಪ್ರೊಟೀನ್‌, ನೈಸರ್ಗಿಕ ಆಹಾರಗಳು ಹೊಟ್ಟೆ ಸೇರಲಿ ಎಂದು ಬಯಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಬಗೆಬಗೆಯ ಸ್ಪ್ರೆಡ್‌ಗಳು ರುಚಿಕರವಾಗಿ ಕಂಡರೂ, ಅದರಲ್ಲಿರುವ ಆರೋಗ್ಯಕರ ಅಂಶಗಳು ಅಷ್ಟಕ್ಕಷ್ಟೇ ಎಂಬ ಸತ್ಯವೂ ತಿಳಿದಿರುವುದರಿಂದ ಒಂದಿಷ್ಟಿ ಒಳ್ಳೆಯ ಆರೋಗ್ಯಕರ, ಹಾಗೂ ಕಡಿಮೆ ಕ್ಯಾಲರಿಯ ಮನೆಯಲ್ಲೇ ಮಾಡಬಹುದಾದ ಸ್ಯಾಂಡ್‌ವಿಚ್‌ ಸ್ಪ್ರೆಡ್‌ಗಳ ವಿವರ ಇಲ್ಲಿದೆ. ಸಾಕಷ್ಟು ಪೋಷಕಾಂಶವನ್ನು ನೀಡುವ ಈ ಆರೋಗ್ಯಕರ ಸ್ಪ್ರೆಡ್‌ಗಳು (healthy sandwich spread) ಇವು.

Hummus Sandwich Spread

ಹುಮಸ್‌

ಚೆನ್ನಾ, ಎಳ್ಳು ಹಾಗೂ ಆಲಿವ್‌ ಎಣ್ಣೆಯಿಂದ ಮಾಡಬಹುದಾದ ಹುಮಸ್‌, ಪ್ರೊಟೀನ್‌ನಿಂದ ಸಮೃದ್ಧವಾಗಿರುವ ಸ್ಪ್ರೆಡ್‌. ಇದರಲ್ಲಿ ದೇಹಕ್ಕೆ ಅಗತ್ಯವಾದ ಒಳ್ಳೆಯ ಕೊಬ್ಬಿದೆ. ಇದನ್ನು ತಯಾರಿಸಿ, ಸ್ಯಾಂಡ್‌ವಿಚ್‌ ಮಾಡುವಾಗ ಒಳಗೆ ಲೇಪಿಸಿ ಟೊಮೇಟೋ, ಸೌತೆಕಾಯಿ ಇತ್ಯಾದಿಗಳನ್ನೂ ಇಟ್ಟು ಸ್ಯಾಂಡ್‌ವಿಚ್‌ ಮಾಡಬಹುದು.

Avocado Sandwich Spread

ಬೆಣ್ಣೆಹಣ್ಣು

ಅವಕಾಡೋ ಅಥವಾ ಬೆಣ್ಣೆಹಣ್ಣನ್ನು ಸ್ಯಾಂಡ್‌ವಿಚ್‌ ಒಳಗೆ ಸ್ಪ್ರೆಡ್‌ನಂತೆ ಬಳಸಬಹುದು. ರುಚಿಯಾದ ಹಾಗೂ ಅಷ್ಟೇ ಪೋಷಕಾಂಶಯುಕ್ತವೂ ಆಗಿರುವ ಈ ಸ್ಪ್ರೆಡ್‌ ಮಾಡಲು ಬೆಣ್ಣೆಹಣ್ಣಿಗೆ ವಿವಿಧ ಮಿಕ್ಸ್‌ಡ್‌ ಹರ್ಬ್ಸ್‌ ಹಾಗೂ ಮಸಾಲೆಗಳನ್ನು ಬಳಸಬಹುದು. ಸಿಹಿಯಾದ ಹಾಗೂ ಸ್ಪೈಸೀಯಾದ ಸ್ಯಾಂಡ್‌ವಿಚ್‌ಗಳೆರಡಕ್ಕೂ ಇದು ಸೂಕ್ತವಾದ ಆಯ್ಕೆ.

Berries Sandwich Spread

ಬೆರ್ರಿಗಳು

ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಸಿಹಿಯಾದ ಸ್ಯಾಂಡ್‌ವಿಚ್‌ ಇಷ್ಟವಾಗುತ್ತಿದ್ದರೆ, ಮಾರುಕಟ್ಟೆಯಿಂದ ಜ್ಯಾಮ್‌ ತಂದು ಸುರಿಯುವ ಬದಲು ಬೆರ್ರಿ ಹಣ್ಣುಗಳನ್ನು ಮ್ಯಾಶ್‌ ಮಾಡಿ ಬಳಸಬಹುದು. ನಿಮಗಿಷ್ಟವಾದ ಬೆರ್ರಿ ಹಣ್ಣುಗಳನ್ನು ಕೊಂಡು ತಂದು ಅವನ್ನೆಲ್ಲ ಮ್ಯಾಶ್‌ ಮಾಡಿ, ಸ್ವಲ್ಪ ಜೇನುತುಪ್ಪ ಸೇರಿಸಿ ಪೇಸ್ಟ್‌ ತರಹ ಮಾಡಿ, ನೈಸರ್ಗಿಕವಾದ ಸಿಹಿಯಾದ ಸ್ಯಾಂಡ್‌ವಿಚ್‌ಗಳನ್ನು ಮಾಡಬಹುದು. ಬೆಳಗಿನ ಹಗುರವಾದ ಉಪಹಾರಕ್ಕೆ ಇದನ್ನು ಮಾಡಬಹುದು.

Peanut Butter Sandwich Spread

ಪೀನಟ್‌ ಬಟರ್‌

ಮಾರುಕಟ್ಟೆಯಿಂದ ದೊಡ್ಡ ಜಾರ್‌ನಲ್ಲಿ ಪೀನಟ್‌ ಬಟರ್‌ ತಂದು ಸ್ಯಾಂಡ್‌ವಿಚ್‌ಗೆ ಸ್ಪ್ರೆಡ್‌ ಮಾಡಿ ಕೊಡುವ ಬದಲು ನೀವೇ ಏಕೆ ಪೀನಟ್‌ ಬಟರನ್ನು ಮನೆಯಲ್ಲಿಯೇ ಮಾಡಬಾರದು? ನೆಲಗಡಲೆಯಿಂದ ಪೀನಟ್‌ ಬಟರ್‌ ಮಾಡಿ ಅದರ ಜೊತೆಗೆ ಬಾಳೆಹಣ್ಣಿನ ತುಣುಕುಗಳನ್ನೂ ಸೇರಿಸಿ ಅದನ್ನು ಸ್ಯಾಂಡ್‌ವಿಚ್‌ ಸ್ಪ್ರೆಡ್‌ ಆಗಿ ಬಳಸಬಹುದು. ಬೇಕಾದರೆ ಜೇನುತುಪ್ಪವನ್ನೂ ಸೇರಿಸಬಹುದು.

Paneer Mayonnaise Sandwich Spread

ಪನೀರ್‌ನ ಮೆಯೋನೀಸ್‌

ನಿಮಗೆ ಮೆಯೋನೀಸ್‌ ಅತ್ಯಂತ ಪ್ರಿಯವಾದ ಸ್ಯಾಂಡ್‌ವಿಚ್‌ ಸ್ಪ್ರೆಡ್‌ ಆಗಿದ್ದರೆ, ನೀವು ಪನೀರ್‌ ಅಥವಾ ಮೊಸರಿನಿಂದ ಇಂತಹ ಸ್ಯಾಂಡ್‌ವಿಚ್‌ ಸ್ಪ್ರೆಡ್‌ ಮಾಡಬಹುದು. ಯಾವುದೇ ಕಷ್ಟವಿಲ್ಲದ, ರುಚಿಯಲ್ಲೂ ರಾಜಿ ಮಾಡಿಕೊಳ್ಳದ ಈ ಸ್ಪ್ರೆಡ್‌ ಮಕ್ಕಳಿಗೂ ಬಹಳ ಪ್ರಿಯವಾಗುತ್ತದೆ. ಮೊಸರಿನ ನೀರನ್ನು ಸಂಪೂರ್ಣವಾಗಿ ಒಂದು ಬಟ್ಟೆಯಲ್ಲಿ ಹಿಂಡಿ ತೆಗೆದು ಅಥವಾ ಪನೀರ್‌ರನ್ನು ಚೆನ್ನಾಗಿ ಮ್ಯಾಶ್‌ ಮಾಡಿ ಅದಕ್ಕೆ ಒಂದಿಷ್ಟು ನೆನೆಸಿದ ಗೋಡಂಬಿ ಹಾಗೂ ಒಂದು ಹಸಿ ಬೆಳ್ಳುಳ್ಳಿಯನ್ನು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಂಡು ಪೇಸ್ಟ್‌ ತಯಾರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಮಿಕ್ಸ್ಡ್‌ ಹರ್ಬ್ಸ್‌ ಸೇರಿಸಿದರೆ, ಮಾರುಕಟ್ಟೆಯ ಮೆಯೋನೀಸ್‌ಗಳೆಲ್ಲ ಮಕಾಡೆ ಮಲಗಬೇಕು!

ಇದನ್ನೂ ಓದಿ: Heatwave Effect: ಬೇಸಿಗೆಗೂ ಕಣ್ಣಿನ ಸಮಸ್ಯೆಗೂ ಇದೆ ನಂಟು!

Continue Reading
Advertisement
Tattoo Care
ಆರೋಗ್ಯ8 mins ago

Tattoo Care: ಟ್ಯಾಟೂ ಪ್ರಿಯರೇ ಹುಷಾರ್‌! ಎಚ್‌ಐವಿ, ಕ್ಯಾನ್ಸರ್‌ಗೂ ಇದು ಕಾರಣ ಆಗಬಹುದು!

Banglore rain
ಪ್ರಮುಖ ಸುದ್ದಿ38 mins ago

Bangalore Rain News : ಬೆಂಗಳೂರಿನಲ್ಲಿ ಭಾರಿ ಮಳೆ; ಹಲವು ಕಡೆ ಉರುಳಿ ಬಿದ್ದ ಮರಗಳು, ಮೆಟ್ರೋ ಸಂಚಾರಕ್ಕೂ ಅಡಚಣೆ

Chamarajanagar Lok Sabha Constituency
ಪ್ರಮುಖ ಸುದ್ದಿ38 mins ago

Chamarajanagar Lok Sabha Constituency : ಚಾಮರಾಜನಗರ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್​​ಗೆ ತವಕ

Dina Bhavishya
ಭವಿಷ್ಯ38 mins ago

Dina Bhavishya : ಈ ದಿನ ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭ

Amul Milk
ದೇಶ5 hours ago

Amul Milk: ಗ್ರಾಹಕರಿಗೆ ಬಿಗ್‌ ಶಾಕ್‌; ಹಾಲಿನ ಬೆಲೆ ಲೀಟರ್‌ಗೆ 2 ರೂ. ಹೆಚ್ಚಳ

Odisha Assembly Election
ದೇಶ6 hours ago

Odisha Assembly Election: ಒಡಿಶಾ ವಿಧಾನಸಭಾ ಚುನಾವಣೆ; ಬಿಜೆಡಿ-ಬಿಜೆಪಿ ನಡುವೆ ತೀವ್ರ ಹಣಾಹಣಿ: ಹಳೆ ದೋಸ್ತಿಗೆ ಠಕ್ಕರ್‌ ಕೊಡುತ್ತಾ ಕಮಲ ಪಡೆ?

Mysore lok sabha constituency
ಪ್ರಮುಖ ಸುದ್ದಿ7 hours ago

Mysore lok sabha Constituency : ಕಿಂಗ್​​ ವರ್ಸಸ್​ ಆರ್ಡಿನರಿ ಸಿಟಿಜನ್​ ಫೈಟ್​​ನಲ್ಲಿ ಗೆಲುವು ಯಾರಿಗೆ?

Haveri Lok Sabha Constituency
ಹಾವೇರಿ8 hours ago

Haveri Lok Sabha Constituency: ಹಾವೇರಿಯಲ್ಲಿ ಅನುಭವಿ vs ಉತ್ಸಾಹಿ; ಯಾರಿಗೆ ಜಯದ ಮಾಲೆ?

Hyderabad City : Hyderabad no longer joint capital of Andhra Pradesh, Telangana from today
ಪ್ರಮುಖ ಸುದ್ದಿ8 hours ago

Hyderabad City : ಹೈದರಾಬಾದ್​ ಇನ್ನು ತೆಲಂಗಾಣಕ್ಕಷ್ಟೇ ರಾಜಧಾನಿ; ಏನಿದು ವಿಂಗಡಣೆ?

Loksabha Election 2024
Lok Sabha Election 20248 hours ago

Lok Sabha Election 2024: ಮತ ಎಣಿಕೆಗೆ 1 ದಿನವಷ್ಟೇ ಬಾಕಿ; ಚುನಾವಣಾ ಆಯೋಗದ ಕದ ತಟ್ಟಿದ ಎನ್‌ಡಿಎ, ʼಇಂಡಿಯಾʼ ಮೈತ್ರಿಕೂಟ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ19 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌