Vastu Tips: ಮನೆಯ ಪ್ರವೇಶದ್ವಾರದ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಬೇಡಿ - Vistara News

ಲೈಫ್‌ಸ್ಟೈಲ್

Vastu Tips: ಮನೆಯ ಪ್ರವೇಶದ್ವಾರದ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಬೇಡಿ

Vastu Tips: ಮನೆಯಲ್ಲಿ ಸುಖ, ಶಾಂತಿ ನೆಲೆಸಲು ವಾಸ್ತು ಶಾಸ್ತ್ರ ಕೆಲವೊಂದು ಸಲಹೆಗಳನ್ನು ನೀಡುತ್ತದೆ. ಮನೆಯ ಪ್ರವೇಶದ್ವಾರದ ವಿಚಾರದಲ್ಲಿ ನಾವು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ವಿವರ ಇಲ್ಲಿದೆ.

VISTARANEWS.COM


on

home entrance
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನೆಮ್ಮದಿಯ ಜೀವನಕ್ಕೆ ವಾಸ್ತು ಶಾಸ್ತ್ರ ಬಹಳ ಮುಖ್ಯ. ಅದರಲ್ಲೂ ನಾವು ಬಹುಪಾಲು ಸಮಯ ಕಳೆಯುವ ಮನೆಯಲ್ಲಿ ವಾಸ್ತು ಶಾಸ್ತ್ರವನ್ನು ಸರಿಯಾಗಿ ಅನುಸರಿಸಿದರೆ ಬಹಳಷ್ಟು ಸಮಸ್ಯೆಗಳಿಂದ ಪಾರಾಗಬಹುದು. ಅಲ್ಲದೆ ಮನೆ ಸಮೃದ್ಧಿಯಿಂದಲೂ ಕೂಡಿರುತ್ತದೆ. ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ಅಂಶವೂ ಹೀಗೆ ಇರಬೇಕು ಎಂದು ಹೇಳಲಾಗಿದೆ. ಅದರಲ್ಲೂ ಪ್ರವೇಶದ್ವಾರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಬಹುತೇಕ ಎಲ್ಲ ಶಕ್ತಿಗಳು ನಿಮ್ಮ ಮನೆಯ ಪ್ರವೇಶದ್ವಾರ ಅಥವಾ ಮುಖ್ಯದ್ವಾರದ ಮೂಲಕ ಬರುತ್ತವೆ. ಹೀಗಾಗಿ ವಾಸ್ತು ಶಾಸ್ತ್ರವನ್ನು ಬಳಸುವ ಮೂಲಕ ನೀವು ಈ ಪರಿಸರದಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು. ಮನೆಯ ಮುಂಭಾಗ ಹೇಗಿರಬೇಕು? ಪ್ರವೇಶದ್ವಾರ ವಿಚಾರದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಏನು? ಎನ್ನುವ ವಿವರ ಇಲ್ಲಿದೆ (Vastu Tips).

ಪ್ರವೇಶದ್ವಾರ ಈ ಭಾಗಕ್ಕೆ ಮುಖ ಮಾಡಿರಲಿ

ಈಶಾನ್ಯ: ನಿಮ್ಮ ಮನೆಯ ಪ್ರವೇಶದ್ವಾರವನ್ನು ಇರಿಸಲು ಈಶಾನ್ಯ ಉತ್ತಮ ದಿಕ್ಕು. ಈಶಾನ್ಯ ಮೂಲೆಯು ಬೆಳಗಿನ ಸೂರ್ಯನಿಗೆ ಒಡ್ಡಿಕೊಳ್ಳುವುದರಿಂದ ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ.

ಉತ್ತರ: ವಾಸ್ತು ಪ್ರಕಾರ ನಿಮ್ಮ ಮನೆಯ ಪ್ರವೇಶ ದ್ವಾರಕ್ಕೆ ಉತ್ತರ ದಿಕ್ಕು ಎರಡನೇ ಅತ್ಯುತ್ತಮ ಸ್ಥಳ. ಇಲ್ಲಿ ಶಕ್ತಿಯ ಮಟ್ಟವು ಹೆಚ್ಚಾಗಿದ್ದರೂ ಈ ದಿಕ್ಕು ಮನೆಯ ನಿವಾಸಿಗಳಿಗೆ ಅದೃಷ್ಟವನ್ನು ತರುತ್ತದೆ.

ಪೂರ್ವ: ನೀವು ಶಕ್ತಿ ಮತ್ತು ಅದೃಷ್ಟವನ್ನು ಹುಡುಕುತ್ತಿದ್ದರೆ ಪೂರ್ವವು ಸೂಕ್ತ ದಿಕ್ಕು.

ಆಗ್ನೇಯ: ಮನೆಯ ಪ್ರವೇಶಕ್ಕೆ ದಕ್ಷಿಣ ದಿಕ್ಕನ್ನು ಅಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ತಪ್ಪಿಸಬೇಕು. ನಿಮ್ಮ ಆಯ್ಕೆಗಳು ಸೀಮಿತವಾಗಿದ್ದರೆ ಆಗ್ನೇಯ ಪ್ರವೇಶ ದಿಕ್ಕನ್ನು ಪ್ರವೇಶದ್ವಾರಕ್ಕಾಗಿ ಬಳಸಿಕೊಳ್ಳಬಹುದು.

ವಾಯವ್ಯ: ವಾಯವ್ಯ ದಿಕ್ಕಿನ ಪ್ರವೇಶದ್ವಾರಗಳು ಸಂಜೆಯ ಸೂರ್ಯನ ಬೆಳಕು ಮತ್ತು ಸಂಪತ್ತನ್ನು ಸಾಕಷ್ಟು ಪ್ರಮಾಣದಲ್ಲಿ ಹೊತ್ತು ತರುತ್ತವೆ.

ಹೀಗೆ ಮಾಡಿ

  • ಮನೆ ನೆಲ ಮಟ್ಟದಲ್ಲಿ ಇಲ್ಲ ಎನ್ನುವುದನ್ನು ಖಚಿತಪಡಿಸಿ. ಮುಂಭಾಗದಲ್ಲಿ ಒಂದೆರಡು ಮೆಟ್ಟಿಲನ್ನಾದರೂ ಅಳವಡಿಸಿ
  • ಪ್ರವೇಶದ್ವಾರದ ಬಾಗಿಲಿಗೆ ಉತ್ತಮ ಗುಣಮಟ್ಟದ ಮರವನ್ನೇ ಬಳಸಿ
  • ಸರಳ ಮತ್ತು ಸ್ವಚ್ಛ ನೇಮ್‌ ಪ್ಲೇಟ್‌ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ
  • ಪ್ರವೇಶದ್ವಾರದ ಬಾಗಿಲಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಿ. ಜತೆಗೆ ಯಾವುದೇ ಕಲೆಯೂ ಇರಬಾರದು.

ಇದನ್ನು ತಪ್ಪಿಸಿ

  • ಇನ್ನೊಂದು ಮನೆಯ ಪ್ರವೇಶ ದ್ವಾರಕ್ಕೆ ಎದುರಾಗಿ ನಿಮ್ಮ ಮನೆ ಮುಖ ಮಾಡುವುದನ್ನು ತಪ್ಪಿಸಿ. ಒಂದು ಇದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದಾದರೆ ಮನೆಯ ಮುಖ್ಯದ್ವಾರ ಬಾಗಿಲಿಗೆ ಕುಂಕುಮದಿಂದ ಸ್ವಸ್ತಿಕ ಚಿಹ್ನೆ ಎಳೆಯಿರಿ
  • ಮುಂಭಾಹದಲ್ಲಿ ಪೀಠೋಪಕರಣಗಳು ಮತ್ತು ಇತರ ಅಲಂಕಾರಗಳನ್ನಿ ಇರಿಸಬೇಡಿ
  • ಮನೆಯ ಮುಂಭಾಗ ಸೆಪ್ಟಿಕ್‌ ಟ್ಯಾಂಕ್‌ ಇರಿಸಬೇಡಿ
  • ಮನೆಯ ಮುಂಭಾಗ ಶೂ ರ‍್ಯಾಕ್‌, ಶೂ ಇರಿಸಬೇಡಿ
  • ವೃತ್ತಾಕಾರದ ಅಥವಾ ಸ್ಲೈಡಿಂಗ್ ಪ್ರವೇಶ ದ್ವಾರವನ್ನು ಆಯ್ಕೆ ಮಾಡಬೇಡಿ
  • ದಕ್ಷಿಣಾಭಿಮುಖ ದಿಕ್ಕುಗಳು ನಿಮ್ಮ ಮನೆಗೆ ಸೂಕ್ತವಲ್ಲ. ಆದ್ದರಿಂದ ಪ್ರವೇಶದ್ವಾರವನ್ನು ದಕ್ಷಿಣ, ಆಗ್ನೇಯ ಅಥವಾ ನೈಋತ್ಯ ದಿಕ್ಕಿನಲ್ಲಿ ಇಡುವುದನ್ನು ತಪ್ಪಿಸಿ

ಹೊಸ್ತಿಲು

ಪ್ರತಿ ಮನೆಯ ಮುಖ್ಯದ್ವಾರದ ಬಾಗಿಲು ಹೊಸ್ತಿಲನ್ನು ಹೊಂದಿರಬೇಕು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ವಾಸ್ತು ಪ್ರಕಾರ ಹೊಸ್ತಿಲು ನಕಾರಾತ್ಮಕ ಶಕ್ತಿಗಳ ವಿರುದ್ಧ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ನಕಾರಾತ್ಮಕ ಶಕ್ತಿ ಪ್ರವೇಶಿಸುವುದನ್ನು ತಡೆಯುತ್ತದೆ.

ಗಿಡಗಳನ್ನು ಇಡಿ

ಮುಖ್ಯ ಬಾಗಿಲಿನ ಒಳಗೆ ಮತ್ತು ಹೊರಗೆ ಸಸ್ಯಗಳನ್ನು ಇರಿಸಬೇಕು. ಇದು ಮನೆಯ ಸೌಂದರ್ಯ ವೃದ್ಧಿಸುವುದಷ್ಟೇ ಅಲ್ಲದೆ ಆರೋಗ್ಯಕ್ಕೂ ಪೂರಕ. ನೆನಪಿಡಿ ಮುಳ್ಳಿನ ಸಸ್ಯಗಳನ್ನು ಇರಿಸಬೇಡಿ. ಇವು ಶುಭ ಸೂಚಕವಲ್ಲ. ಅಲ್ಲದೆ ಪ್ರವೇಶದ್ವಾರದಲ್ಲಿ ಕಸದ ಬುಟ್ಟಿಯನ್ನು ಇಡುವುದನ್ನು ತಪ್ಪಿಸಿ. ಯಾಕೆಂದರೆ ಅದು ದುರಾದೃಷ್ಟವನ್ನು ಆಕರ್ಷಿಸಬಹುದು. ನಿಮ್ಮ ಮನೆ ಮತ್ತು ಪ್ರವೇಶದ್ವಾರದ ಉತ್ತಮ ವಾಸ್ತುವನ್ನು ಉತ್ತೇಜಿಸಲು ಸ್ವಚ್ಛತೆಯನ್ನು ಕಾಪಾಡಿ.

ಇದನ್ನೂ ಓದಿ: Vastu Tips: ವಾಸ್ತು ಪ್ರಕಾರ ಈ ಗಿಡಗಳನ್ನು ಮನೆಯೊಳಗೆ ಇಡಲೇಬಾರದು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Dietary Guidelines: ಕಡಿಮೆ ದೈಹಿಕ ಚಟುವಟಿಕೆ ಇರುವವರಿಗೆ ಯಾವ ರೀತಿಯ ಆಹಾರ ಸೂಕ್ತ?

ಕಡಿಮೆ ಚಟುವಟಿಕೆಯುಳ್ಳ ಪುರುಷರು ಮತ್ತು ಮಹಿಳೆಯರು ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದರ ಕುರಿತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮಾರ್ಗಸೂಚಿಯನ್ನು (Dietary Guidelines) ಬಿಡುಗಡೆ ಮಾಡಿದ್ದು, ಈ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Dietary Guidelines
Koo

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಕಡಿಮೆ ಚಟುವಟಿಕೆ ಹೊಂದಿರುವ ಪುರುಷರು (men) ಮತ್ತು ಮಹಿಳೆಯರು (women) ಆಹಾರದಲ್ಲಿ (food) ಪೌಷ್ಟಿಕಾಂಶಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದ್ದು, ಇದಕ್ಕಾಗಿ ಇಂಥವರು ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದರ ಮಾರ್ಗಸೂಚಿಯನ್ನು (Dietary Guidelines) ಬಿಡುಗಡೆ ಮಾಡಿದೆ.

ಉಪಾಹಾರದಲ್ಲಿ ಏನು ಇರಬೇಕು?

ಐಸಿಎಂಆರ್ ಪ್ರಕಾರ ಕಡಿಮೆ ಚಟುವಟಿಕೆ ಹೊಂದಿರುವ ಪುರುಷರ ಉಪಾಹಾರದಲ್ಲಿ ನೆನೆಸಿದ ಮತ್ತು ಬೇಯಿಸಿದ ಬಜ್ರಾ 90 ಗ್ರಾಂ ಮತ್ತು ತರಕಾರಿಗಳು 50 ಗ್ರಾಂ ಒಳಗೊಂಡಿರಬೇಕು. ಅದೇ ರೀತಿ ಮಹಿಳೆಯರಿಗೆ ನೆನೆಸಿದ ಮತ್ತು ಬೇಯಿಸಿದ ಬಜ್ರಾವನ್ನು ಉಪಾಹಾರದಲ್ಲಿ 60 ಗ್ರಾಂ ಮತ್ತು ತರಕಾರಿಗಳು 100 ಗ್ರಾಂ ಸೇರಿಸಿಕೊಳ್ಳಬೇಕು.

ಊಟದಲ್ಲಿ ಏನು ಇರಬೇಕು?

ಮಧ್ಯಾಹ್ನದ ಊಟದಲ್ಲಿ ಪುರುಷರು ಧಾನ್ಯಗಳನ್ನು 100 ಗ್ರಾಂ ಮತ್ತು ಬೇಳೆಕಾಳುಗಳು 30 ಗ್ರಾಂ, ಮಹಿಳೆಯರು ಮಧ್ಯಾಹ್ನದ ಊಟದಲ್ಲಿ ಧಾನ್ಯಗಳು 80 ಗ್ರಾಂ ಮತ್ತು ದ್ವಿದಳ ಧಾನ್ಯಗಳನ್ನು 20 ಗ್ರಾಂ ತೆಗೆದುಕೊಳ್ಳಬಹುದು. ಸಂಜೆ ಇಬ್ಬರಿಗೂ 50 ಮಿಲಿ ಲೀಟರ್ ಹಾಲು ಕುಡಿಯಲು ಸೂಚಿಸಲಾಗುತ್ತದೆ.


ನಮ್ಮ ಆಹಾರ ಹೇಗಿರಬೇಕು?

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆಧುನಿಕ ಆಹಾರ ಪದ್ಧತಿಗೆ ಸರಿ ಹೊಂದುವಂತೆ ಭಾರತೀಯರಿಗೆ ನವೀಕರಿಸಿದ ಆಹಾರ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ.

ಐಸಿಎಂಆರ್ ನ ಆಹಾರ ಮಾರ್ಗಸೂಚಿಗಳ ಪ್ರಕಾರ ಆರೋಗ್ಯಕರ ಊಟವು ಹೆಚ್ಚಿನ ತರಕಾರಿ, ಸಾಕಷ್ಟು ಧಾನ್ಯ, ಕಾಳು, ಬೀನ್ಸ್, ಬೀಜಗಳು, ಹಣ್ಣುಗಳನ್ನು ಒಳಗೊಂಡಿರುತ್ತದೆ. ಜೊತೆಗೆ ಮೊಸರು ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ಹೆಚ್ಚುವರಿ ಸಕ್ಕರೆಗಳಿಂದ ಮುಕ್ತ ಅಥವಾ ಅತೀ ಕಡಿಮೆ ಪ್ರಮಾಣದಲ್ಲಿ ಎಣ್ಣೆ, ಕೊಬ್ಬು ಮತ್ತು ಉಪ್ಪನ್ನು ಹೊಂದಿರುವ ಆಹಾರ ಒಳ್ಳೆಯ ಆಯ್ಕೆಯಾಗಿರುತ್ತದೆ.

ಆರೋಗ್ಯಕರವಾಗಿರಲು ಆಹಾರ ಮಾತ್ರವಲ್ಲ ದೈಹಿಕವಾಗಿ ಸಕ್ರಿಯವಾಗಿರುವುದು ಕೂಡ ಮುಖ್ಯವಾಗಿರುತ್ತದೆ. ಇದಕ್ಕಾಗಿ ನಿಯಮಿತವಾಗಿ ವ್ಯಾಯಾಮ ಮಾಡಲು ಸೂಚಿಸಲಾಗಿದೆ. ತಾಜಾ ಆಹಾರ ಸೇವಿಸುವುದು ಬಹು ಮುಖ್ಯ. ಆಹಾರ ಸುರಕ್ಷತೆಯ ಕಡೆಗೂ ಗಮನವಿರಬೇಕು. ಕನಿಷ್ಠ ಸಂಸ್ಕರಿಸಿದ ಆಹಾರಗಳ ಆಯ್ಕೆ ಒಳ್ಳೆಯದು ಎಂಬುದನ್ನು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Which Sweetener Is Better: ಸಕ್ಕರೆ, ಬೆಲ್ಲ, ಕಲ್ಲುಸಕ್ಕರೆ- ಯಾವುದು ಒಳ್ಳೆಯದು?

ದೈಹಿಕ ಚಟುವಟಿಕೆ ಹೇಗಿರಬೇಕು?

ಮಾರ್ಗಸೂಚಿಗಳ ಪ್ರಕಾರ ಎಲ್ಲಾ ವಯಸ್ಸಿನ ವ್ಯಕ್ತಿಗಳು ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ 30ರಿಂದ 45 ನಿಮಿಷಗಳ ಮಧ್ಯಮ, ತೀವ್ರತೆಯ ದೈಹಿಕ ಚಟುವಟಿಕೆಯನ್ನು ನಡೆಸಲೇಬೇಕು. ಮಕ್ಕಳಲ್ಲಿ ದಿನಕ್ಕೆ ಕನಿಷ್ಠ 60 ನಿಮಿಷಗಳ ನಿಯಮಿತ ದೈಹಿಕ ಚಟುವಟಿಕೆ ಇದ್ದರೆ ಅಧಿಕ ತೂಕ ಮತ್ತು ಸ್ಥೂಲಕಾಯತೆಯನ್ನು ತಡೆಯಬಹುದು ಎನ್ನುತ್ತದೆ ಐಸಿಎಂಆರ್ ಮಾರ್ಗಸೂಚಿ.

Continue Reading

ಆರೋಗ್ಯ

Veg v/s Non Veg Thali: ಭಾರತದಲ್ಲಿ ನಾನ್‌ವೆಜ್‌ ಊಟಕ್ಕಿಂತ ವೆಜ್ ಊಟ ದುಬಾರಿ! ಏಕೆ ಗೊತ್ತಾ?

ಕಳೆದ ಒಂದು ವರ್ಷದಲ್ಲಿ ವಿವಿಧ ಕಾರಣಗಳಿಂದ ತರಕಾರಿ ಬೆಳೆಗಳು ಗಗನಕ್ಕೇರಿದ್ದು, ಮನೆಯಲ್ಲಿ ತಯಾರಿಸುವ ವೆಜ್ ಥಾಲಿ ಬೆಲೆ ನಾನ್ ವೆಜ್ ಥಾಲಿಗಿಂತ (Veg v/s Non Veg Thali) ದುಬಾರಿಯಾಗಿದೆ. ಇದಕ್ಕೆ ಹಲವು ಕಾರಣಗಳೂ ಇವೆ. ಭಾರತದಲ್ಲಿ ಮಾಂಸಾಹಾರಿ ಊಟಕ್ಕಿಂತ ಸಸ್ಯಾಹಾರಿ ಊಟ ದುಬಾರಿ ಆಗಿರುವುದರ ಕುತೂಹಲಕರ ಹಿನ್ನೆಲೆ ಇಲ್ಲಿದೆ.

VISTARANEWS.COM


on

By

Veg v/s Non Veg Thali
Koo

ಭಾರತದಲ್ಲಿ ಸಸ್ಯಾಹಾರಿ ಊಟವು ಮಾಂಸಾಹಾರಿ ಊಟಕ್ಕಿಂತ (Veg v/s Non Veg Thali) ದುಬಾರಿಯಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈರುಳ್ಳಿ (onion) ಬೆಲೆ ಶೇ. 41, ಟೊಮೆಟೊ (tomato) ಬೆಲೆ ಶೇ.40 ಮತ್ತು ಆಲೂಗಡ್ಡೆ (potato) ಬೆಲೆ ಶೇ. 38ರಷ್ಟು ಹೆಚ್ಚಳವಾಗಿರುವ ಕಾರಣ ಮನೆಯಲ್ಲಿ ತಯಾರಿಸುವ ಸಸ್ಯಾಹಾರಿ ಊಟದ ಪ್ಲೇಟ್ ಬೆಲೆ ಶೇ. 13ರಷ್ಟು ಹೆಚ್ಚಾಗಿದೆ ಎಂದು ಸಿಆರ್ ಐಎಸ್‌ಐಎಲ್ (CRISIL) ವರದಿ ತಿಳಿಸಿದೆ.

ಮನೆಯಲ್ಲಿ ತಯಾರಿಸುವ ಥಾಲಿಯಲ್ಲಿ ಧಾನ್ಯ, ಬೇಳೆಕಾಳು, ತರಕಾರಿ, ಮಸಾಲೆ, ಖಾದ್ಯ ತೈಲ ಮತ್ತು ಅಡುಗೆ ಅನಿಲವೆಲ್ಲ ಸೇರಿ ಸರಾಸರಿ ವೆಚ್ಚವನ್ನು ಅಧ್ಯಯನಕ್ಕೆ ಪರಿಗಣಿಸಲಾಗಿದೆ. ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾರತದಲ್ಲಿ ಚಾಲ್ತಿಯಲ್ಲಿರುವ ಬೆಲೆಗಳ ಆಧಾರದ ಮೇಲೆ ಲೆಕ್ಕಹಾಕಲಾಗಿದೆ. ಇದು ಸಾಮಾನ್ಯ ಮನುಷ್ಯನ ವೆಚ್ಚದ ಮೇಲೆ ತೀವ್ರ ಪ್ರಭಾವ ಬೀರುತ್ತಿದೆ.

ವೆಜ್ ಥಾಲಿ ಬೆಲೆ ಎಷ್ಟು ಹೆಚ್ಚಳ?

ಮನೆಯಲ್ಲಿ ಬೇಯಿಸಿದ ವೆಜ್ ಥಾಲಿಯ ಬೆಲೆ ಏಪ್ರಿಲ್‌ನಲ್ಲಿ ಶೇ. 8ರಷ್ಟು ಏರಿಕೆಯಾಗಿದೆ. ಆದರೆ ಮಾಂಸಾಹಾರಿ ಥಾಲಿಯ ಬೆಲೆ ಶೇ.4ರಷ್ಟು ಕಡಿಮೆಯಾಗಿದೆ.

ಕಾರಣ ಏನು?

ಕಳೆದ ಆರ್ಥಿಕ ವರ್ಷದ ಕ್ರಮವಾಗಿ ಈರುಳ್ಳಿ, ಟೊಮ್ಯಾಟೊ ಮತ್ತು ಆಲೂಗೆಡ್ಡೆಗಳ ಬೆಲೆಗಳು ವರ್ಷಕ್ಕೆ ಶೇ.41, ಶೇ. 40 ಮತ್ತು ಶೇ. 38ರಷ್ಟು ಏರಿಕೆಯಾದ ಕಾರಣ ಸಸ್ಯಾಹಾರಿ ಥಾಲಿಯ ಬೆಲೆ ಹೆಚ್ಚಾಗಿದೆ. ಬೆಳೆ ಬೆಳೆಯುವ ಪ್ರಮಾಣದಲ್ಲಿ ಗಮನಾರ್ಹ ಕುಸಿತ ಮತ್ತು ಪಶ್ಚಿಮ ಬಂಗಾಳದಲ್ಲಿ ಆಲೂಗಡ್ಡೆ ಬೆಳೆ ಹಾನಿ, ಕಡಿಮೆ ಈರುಳ್ಳಿ ಮಾರುಕಟ್ಟೆಗೆ ಬಂದಿದ್ದು ಬೆಲೆ ಏರಿಕೆಗೆ ಮುಖ್ಯ ಕಾರಣ.

ಅಕ್ಕಿಯ ಬೆಲೆ ಶೇ. 13ರಿಂದ ಶೇ.14ರಷ್ಟು, ಬೇಳೆಕಾಳುಗಳ ಬೆಲೆ ಶೇ. 9ರಿಂದ ಶೇ. 20ರಷ್ಟು ವರ್ಷಕ್ಕೆ ಏರಿಕೆಯಾಗಿದೆ.
ಜೀರಿಗೆ, ಮೆಣಸಿನಕಾಯಿ ಮತ್ತು ಸಸ್ಯಜನ್ಯ ಎಣ್ಣೆಯ ಬೆಲೆಗಳು ಕ್ರಮವಾಗಿ ಶೇ. 40, ಶೇ. 31 ಮತ್ತು ಶೇ. 10ರಷ್ಟು ಕುಸಿತವಾಗಿದೆ. ಇದು ಥಾಲಿ ವೆಚ್ಚದಲ್ಲಿ ಮತ್ತಷ್ಟು ಹೆಚ್ಚಾಳಕ್ಕೆ ಕೊಂಚ ನಿಯಂತ್ರಣ ಹಾಕಿದೆ.


ಮಾಂಸಾಹಾರಿ ಥಾಲಿ ಬೆಲೆಯಲ್ಲಿ ಇಳಿಕೆ

ಕಳೆದ ಹಣಕಾಸು ವರ್ಷದಲ್ಲಿ ಮಾಂಸದ ಕೋಳಿಗಳ ಬೆಲೆಯಲ್ಲಿ ವರ್ಷದಲ್ಲಿ ಕುಸಿತವಾಗಿದ್ದರೂ ತಿಂಗಳಿನಲ್ಲಿ ಸ್ಥಿರವಾಗಿತ್ತು. ಇದರಿಂದ ಮಾಂಸಾಹಾರಿ ಥಾಲಿಯ ಬೆಲೆ ಕೇವಲ ಶೇ. 3ರಷ್ಟು ಹೆಚ್ಚಳವಾಗಿತ್ತು. ಈರುಳ್ಳಿ ಬೆಲೆಯಲ್ಲಿನ ಶೇ. 4ರಷ್ಟು ಇಳಿಕೆಯಿಂದಾಗಿ ಮಾಂಸಾಹಾರಿ ಥಾಲಿಯು ತಿಂಗಳ ಬೆಲೆ ಸ್ಥಿರವಾಗಿತ್ತು. ಇಂಧನ ವೆಚ್ಚದಲ್ಲಿ ಶೇ. 3ರಷ್ಟು ಕುಸಿತವಾಗಿದ್ದು, ಟೊಮೆಟೊ ಮತ್ತು ಆಲೂಗಡ್ಡೆ ಬೆಲೆ ಏರಿಕೆಯಾಗಿತ್ತು.

ಮಾಂಸಾಹಾರಿ ಥಾಲಿಯ ಬೆಲೆಯು ಬ್ರಾಯ್ಲರ್‌ಗಳ ಬೆಲೆಯಲ್ಲಿ ಅಂದಾಜು ಶೇ. 4ರಷ್ಟು ಹೆಚ್ಚಳದಿಂದಾಗಿ ಏರಿಕೆಯಾಗಿದೆ. ಇದು ಹೆಚ್ಚಿನ ಬೇಡಿಕೆ ಮತ್ತು ಹೆಚ್ಚುತ್ತಿರುವ ವೆಚ್ಚಗಳ ಕಾರಣದಿಂದಾಗಿ ಎನ್ನಲಾಗಿದೆ.
ಕಡಿಮೆ ಕೋಳಿ ಬೆಲೆಗಳಿಂದಾಗಿ ಮನೆಯಲ್ಲಿ ಬೇಯಿಸಿದ, ಮಾಂಸಾಹಾರಿ ಥಾಲಿಯ ಬೆಲೆ ಏಪ್ರಿಲ್‌ನಲ್ಲಿ ಕಡಿಮೆಯಾಗಿದೆ. ಆದರೆ ಈರುಳ್ಳಿ, ಆಲೂಗೆಡ್ಡೆ ಮತ್ತು ಟೊಮ್ಯಾಟೊ ಬೆಲೆಗಳ ಏರಿಕೆಯೊಂದಿಗೆ ಸಸ್ಯಾಹಾರಿ ಥಾಲಿಯನ್ನು ತಯಾರಿಸುವ ವೆಚ್ಚವನ್ನು ಹೆಚ್ಚಾಗಿದೆ.

ಇದನ್ನೂ ಓದಿ: Digestion Tips: ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವುದು ಹೇಗೆ?

ಎಷ್ಟು ಹೆಚ್ಚಳ?

ಮನೆಯಲ್ಲಿ ತಯಾರಿಸುವ ವೆಜ್ ಥಾಲಿ ಬೆಲೆ 2022ರ ಡಿಸೆಂಬರ್‌ನಿಂದ 2023ರ ಜೂನ್‌ವರೆಗೆ 26.7ರ ಒಳಗೆ ಇತ್ತು ಹಾಗೂ ಮಾಂಸಾಹಾರಿ ಥಾಲಿ ಬೆಲೆ 60.5ರ ಒಳಗಿತ್ತು. ಜುಲೈ ಮತ್ತು ಆಗಸ್ಟ್ ನಲ್ಲಿ ವೆಜ್ ಥಾಲಿ ಬೆಲೆ 34.1ರ ಸಮೀಪವಿದ್ದು, ಮಾಂಸಾಹಾರಿ ಥಾಲಿ 62.8 ರವರೆಗೆ ತಲುಪಿತ್ತು. ಬಳಿಕ ವೆಜ್ ಮತ್ತು ನಾನ್ ವೆಜ್ ಥಾಲಿ ಬೆಲೆ ಇಳಿಕೆಯಾಗಿದ್ದು, 2024ರ ಏಪ್ರಿಲ್ ನಲ್ಲಿ ವೆಜ್ ಥಾಲಿ ಬೆಲೆ 27.4ಕ್ಕೆ ತಲುಪಿದ್ದು, ನಾನ್ ವೆಜ್ ಥಾಲಿ ಬೆಲೆ 56.3ಕ್ಕೆ ತಲುಪಿದೆ.

Continue Reading

ಫ್ಯಾಷನ್

Mango Facepack: ಆಕರ್ಷಕ ತ್ವಚೆಗಾಗಿ ಸೀಸನ್‌ ಮ್ಯಾಂಗೋ ಫೇಸ್‌ಪ್ಯಾಕ್‌

ಮಾವಿನ ಹಣ್ಣು ತಿನ್ನಲು ರುಚಿಯಷ್ಟೇ ಅಲ್ಲ. ಇದು ಸೌಂದರ್ಯ ವರ್ಧಕವೂ ಹೌದು. ಮ್ಯಾಂಗೋ ಫೇಸ್‌ಪ್ಯಾಕ್‌ (Mango Facepack) ಕುರಿತ ಟಿಪ್ಸ್ ಇಲ್ಲಿದೆ.

VISTARANEWS.COM


on

Mango Facepack
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಿಮಗೆ ಗೊತ್ತೆ? ಈ ಸೀಸನ್‌ನಲ್ಲಿ ಅತಿ ಹೆಚ್ಚಾಗಿ ಸವಿಯಲು ಬಳಸುವ ಮಾವಿನ ಹಣ್ಣಿನಿಂದ ತ್ವಚೆಯ (Mango Facepack) ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದಂತೆ! ಹಾಗೆನ್ನುತ್ತಾರೆ ಬ್ಯೂಟಿ ತಜ್ಞೆ ಉಮಾ. ಅವರ ಪ್ರಕಾರ, ಮಾವು ಚರ್ಮದ ಸೌಂದರ್ಯ ಹೆಚ್ಚಿಸಲು ಸಹಕಾರಿಯಂತೆ. ಇನ್ನು ತಜ್ಞರ ಪ್ರಕಾರ, ಮಾವಿನ ಹಣ್ಣಿನಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ವಿಟಮಿನ್‌ ‘ಸಿ’ ಹೇರಳವಾಗಿದೆ. ಹಾಗಾಗಿ ಇದನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ಚರ್ಮ ಟ್ಯಾನ್‌ ಆಗಿರುವುದನ್ನು ಇದರಿಂದ ಹೋಗಲಾಡಿಸಬಹುದಂತೆ.

Mango Facepack

ಮ್ಯಾಂಗೋ ಫೇಸ್‌ಪ್ಯಾಕ್‌

ಆಯಾ ಸೀಸನ್‌ನಲ್ಲಿ ದೊರೆಯುವ ಬಹುತೇಕ ಹಣ್ಣುಗಳು ದೇಹಕ್ಕೆ ಪೌಷ್ಟಿಕಾಂಶವನ್ನು ಪೂರೈಸುವುದು ಮಾತ್ರವಲ್ಲ, ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತದೆ. ಹಾಗೆಂದು ಯದ್ವಾತದ್ವಾ ಕೂಡ ಬಳಸಕೂಡದು ಎಂದು ಸಲಹೆ ನೀಡುವ ಬ್ಯೂಟಿ ತಜ್ಞೆ ಉಮಾ, ನಿಮ್ಮ ಸುಕೋಮಲ ತ್ವಚೆಗೆ ಅನುಗುಣವಾಗಿ ಬಳಸಬೇಕು ಎನ್ನುತ್ತಾರೆ.

ಸುಕೋಮಲ ತ್ವಚೆಗಾಗಿ

ಒಂದು ಮಾವಿನ ಹಣ್ಣಿನ ಚಿಕ್ಕ ಭಾಗವನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಹಾಲು, ಅಕ್ಕಿ ಹಿಟ್ಟು ಹಾಗೂ ಜೇನುತುಪ್ಸ ಬೆರೆಸಿ ಮಿಶ್ರಣ ಮಾಡಿ. ತೆಳುವಾಗಿ ಮುಖದ ಮೇಲೆ ಲೇಪನ ಮಾಡಿ. 10 ನಿಮಿಷದ ನಂತರ ತಣ್ಣೀರಿನಲ್ಲಿ ತೊಳೆಯಿರಿ. ತ್ವಚೆ ಮೃದುವಾಗುವುದು.

ಸಿಪ್ಪೆಯಲ್ಲಿ ಫೇಸ್‌ ಪ್ಯಾಕ್‌

ಮಾವಿನ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಬಿಸಿಲಲ್ಲಿ ಒಣಗಿಸಿ, ಪೌಡರ್‌ ಮಾಡಿಟ್ಟುಕೊಳ್ಳಿ. ಒಂದು ಟೀ ಸ್ಪೂನ್‌ ಮೊಸರು ಸೇರಿಸಿ ಮಿಶ್ರ ಮಾಡಿ. ಮುಖಕ್ಕೆ ಲೇಪಿಸಿ, ತಣ್ಣಿರಿನಲ್ಲಿ ತೊಳೆಯಿರಿ. ಇದು ಕಲೆಯನ್ನು ಹೋಗಲಾಡಿಸುತ್ತದೆ.

Mango Facepack

ಮಿಶ್ರ ತ್ವಚೆಯವರಿಗೆ ಫೇಸ್‌ಪ್ಯಾಕ್‌

ಮಾವಿನ ರಸಕ್ಕೆ ಸ್ವಲ್ಪ ಕಡಲೆಹಿಟ್ಟು ಮತ್ತು ಚೂರು ಜೇನುತುಪ್ಪ ಬೆರೆಸಿ ಮಿಶ್ರ ಮಾಡಿ. ತೆಳುವಾಗಿ ಮುಖದ ಮೇಲೆ ಲೇಪನ ಮಾಡಿ, ಒಣಗಿದ ನಂತರ ಮುಖವನ್ನು ವಾಶ್‌ಮಾಡಿ. ತ್ವಚೆ ಕಾಂತಿಯುಕ್ತವಾಗುವುದು.

ಇದನ್ನೂ ಓದಿ: New Fashion Trend: ಕ್ವೀನ್‌ ಲುಕ್‌ ನೀಡುವ ಡಿಸೈನರ್‌ ಪರ್ಲ್ ಶೈಲಿಯ ಹೆಡ್‌ಬ್ಯಾಂಡ್‌

ಎಣ್ಣೆ ತ್ವಚೆಯವರಿಗೆ ಕ್ಲೆನ್ಸಿಂಗ್‌

ಹುಳಿ ಮಾವಿನ ರಸವನ್ನು ತ್ವಚೆಗೆ ಕ್ಲೆನ್ಸರ್‌ನಂತೆ ಬಳಸಬಹುದು. ಕತ್ತರಿಸಿದ ಚೂರು ಮಾವಿನ ತುಂಡಿನಿಂದ ದುಂಡಾಕಾರದಲ್ಲಿ ಮುಖವನ್ನು ಒಂದೆರೆಡು ನಿಮಿಷಗಳ ಕಾಲ ಮೃದುವಾಗಿ ಉಜ್ಜಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಚರ್ಮ ಸ್ವಚ್ಛಗೊಳ್ಳುತ್ತದೆ. ಅತಿ ಹೆಚ್ಚು ಸಮಯ ತ್ವಚೆಯನ್ನು ಉಜ್ಜಕೂಡದು. ಈ ಮಧ್ಯೆ ತ್ವಚೆಗೆ ಕಿರಿಕಿರಿಯಾದಲ್ಲಿ ಕ್ಲೆನ್ಸಿಂಗ್‌ ಮಾಡುವುದು ಬೇಡ.

(ಲೇಖಕರು ಫ್ಯಾಷನ್ ಪತ್ರಕರ್ತೆ)

Continue Reading

ಸಿನಿಮಾ

Manisha Koirala: ಕ್ಯಾನ್ಸರ್‌ ವಿರುದ್ಧ ಹೋರಾಡಿದ್ದು ಹೇಗೆ? ಅನುಭವ ಹಂಚಿಕೊಂಡ ಮನೀಶಾ ಕೊಯಿರಾಲ

ಸಂಜಯ್ ಲೀಲಾ ಬನ್ಸಾಲಿ ಅವರ ʼಹೀರಾಮಂಡಿʼ ಸರಣಿಯಲ್ಲಿ ನಟಿಸಿರುವ ಬಾಲಿವುಡ್ ನಟಿ ಮನಿಶಾ ಕೊಯಿರಾಲಾ (Manisha Koirala) ಚಿತ್ರೀಕರಣದ ಸಮಯದಲ್ಲಿ ಕ್ಯಾನ್ಸರ್ ನಿಂದಾಗಿ ಉಂಟಾಗಿರುವ ಖಿನ್ನತೆಯ ವಿರುದ್ಧ ಹೋರಾಡಿರುವ ಬಗ್ಗೆ ಹೇಳಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

VISTARANEWS.COM


on

By

Manisha Koirala
Koo

ಕ್ಯಾನ್ಸರ್ (cancer) ವಿರುದ್ಧ ಹೋರಾಡಿದ ಬಾಲಿವುಡ್ ನಟಿ (Bollywood actress) ಮನೀಶಾ ಕೊಯಿರಾಲ (Manisha Koirala) ʼಹೀರಾಮಂಡಿʼ (Heeramandi) ಚಿತ್ರೀಕರಣದ ವೇಳೆ ಅನುಭವಿಸಿದ ಖಿನ್ನತೆ, ಮೂಡ್ ಸ್ವಿಂಗ್‌ಗಳ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಅವರ ʼಹೀರಾಮಂಡಿʼ ಸರಣಿಯ ಚಿತ್ರೀಕರಣದ ಸಮಯದಲ್ಲಿ ಕ್ಯಾನ್ಸರ್‌ ತಮ್ಮ ಅಭಿನಯ ಮತ್ತು ಆರೋಗ್ಯದ ಬೀರಿದ ಪರಿಣಾಮದ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ಅವರ ʼಹೀರಾಮಂಡಿʼ ಸರಣಿಯಲ್ಲಿ ನಟಿ ಮನಿಶಾ ಕೊಯಿರಾಲಾ ಅವರು ವೇಶ್ಯೆಯರ ಮುಖ್ಯಸ್ಥರಾಗಿ ಕಾಣಿಸಿಕೊಂಡಿದ್ದಾರೆ. ನೆಟ್‌ಫ್ಲಿಕ್ಸ್ ಸರಣಿಯ ಚಿತ್ರೀಕರಣದ ಸಮಯದಲ್ಲಿ ಖಿನ್ನತೆಯ ವಿರುದ್ಧ ಹೋರಾಡಿದ ಬಗ್ಗೆ ಅವರು ಆಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಯಾನ್ಸರ್‌ನಿಂದ ಪ್ರಭಾವಿತರಾಗಿದ್ದ ಅವರು ಮೂಡ್ ಸ್ವಿಂಗ್‌ಗಳಿಂದಾಗಿ ಅಭಿನಯದ ಮೇಲೆ ಅದು ಹೇಗೆ ಪರಿಣಾಮ ಬೀರಿದೆ ಎಂಬ ಬಗ್ಗೆ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ.

ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮನೀಶಾ, ಕ್ಯಾನ್ಸರ್‌ನಿಂದ ಪ್ರಭಾವಿತನಾಗಿದ್ದ ನನಗೆ ದೇಹ ಮತ್ತು ಮನಸ್ಸು ಹೇಗೆ ಒಂದಕ್ಕೊಂದು ಹೆಣೆದುಕೊಂಡಿದೆ ಎಂಬುದು ತಿಳಿದಿದೆ. ಆದರೆ ಮೇಲೆ ವಿಶ್ವಾಸ ಇಟ್ಟರೆ ಮಾತ್ರ ನಾವು ವಿಜಯಿಯಾಗಬಹುದು. ಈಗಲೂ ಕೆಲವೊಮ್ಮೆ ನಾನು ಖಿನ್ನತೆಯನ್ನು ಅನುಭವಿಸುತ್ತೇನೆ. ʼಹೀರಾಮಂಡಿʼ ಚಿತ್ರೀಕರಣದ ವೇಳೆ ಅದು ನನ್ನನ್ನು ತುಂಬಾ ಕಾಡಿತು. ಪದೇಪದೇ ಮನಸ್ಥಿತಿ ಬದಲಾಗುತ್ತಿದೆ ಎಂದೆನಿಸುತ್ತಿತ್ತು. ಕ್ಯಾನ್ಸರ್ ನಿಂದ ಹೊರ ಬಂದ ಅನಂತರವೂ ಆರೋಗ್ಯದ ಮೇಲೆ ಅದರ ಪರಿಣಾಮವಿರುತ್ತದೆ ಎಂದರು.


2012ರಲ್ಲಿ ಕ್ಯಾನ್ಸರ್ ಪತ್ತೆ

ಮನೀಶಾ ಅವರಿಗೆ 2012ರಲ್ಲಿ ಅಂಡಾಶಯದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ನ್ಯೂಯಾರ್ಕ್‌ನಲ್ಲಿ ಶಸ್ತ್ರಚಿಕಿತ್ಸೆ ಮತ್ತು ಕೀಮೋಥೆರಪಿ ಪಡೆದು 2014ರಲ್ಲಿ ಅವರು ಚೇತರಿಸಿಕೊಂಡರು. ಚಿತ್ರೀಕರಣದ ವೇಳೆ ನಾನು ಅದನ್ನು ಮಾಡಲು ಸಾಧ್ಯವಾಗುತ್ತದೆಯೇ ಅಥವಾ ನನ್ನ ದೇಹವು ಅದನ್ನು ತೆಗೆದುಕೊಳ್ಳುತ್ತದೆಯೇ ಎಂಬ ಖಚಿತತೆ ನನಗಿರಲಿಲ್ಲ. ಆದರೆ ನಿರ್ದೇಶಕರು ಅದನ್ನು ಅರ್ಥಮಾಡಿಕೊಳ್ಳುತ್ತಿದ್ದರು. 12 ಗಂಟೆಗಳ ಶೂಟಿಂಗ್ ಅನಂತರ ನಾವು ನಿಲ್ಲಿಸುತ್ತಿದ್ದೆವು. ಸಂಜಯ್ ನನ್ನ ಭಯ ಮತ್ತು ಆತಂಕವನ್ನು ಅರ್ಥಮಾಡಿಕೊಂಡರು ಎಂದು ಮನೀಶಾ ತಿಳಿಸಿದ್ದಾರೆ.

ಇದನ್ನೂ ಓದಿ: Actor Prabhas: ʼಕಣ್ಣಪ್ಪʼ ಚಿತ್ರಕ್ಕೆ ಎಂಟ್ರಿಕೊಟ್ಟ ಪ್ರಭಾಸ್‌; ಹೊಸ ಪೋಸ್ಟರ್‌ ರಿಲೀಸ್‌

ಸಮಯದ ಮೌಲ್ಯ ಅರ್ಥವಾಗಿದೆ

ಸಾಮಾಜಿಕ ಮಾಧ್ಯಮದದಲ್ಲಿ ಮನೀಶಾ ಈ ಹಿಂದೆ ತಮ್ಮ ಕ್ಯಾನ್ಸರ್ ಪ್ರಯಾಣದ ಬಗ್ಗೆ ಹೇಳಿಕೊಂಡಿದ್ದಾರೆ. ಜೀವನದಲ್ಲಿ ನಾನು ಕೃತಜ್ಞಳಾಗಿರಲು ಬಹಳಷ್ಟು ಇದೆ. ವೃತ್ತಿಜೀವನವು ಬಹಳಷ್ಟು ಉನ್ನತ ಕ್ಷಣಗಳು, ಮಹತ್ವದ ಪಾತ್ರಗಳು, ಅತ್ಯುತ್ತಮ ನಿರ್ದೇಶಕರು ಮತ್ತು ಸ್ನೇಹವನ್ನು ನೋಡಿದೆ. ಸಮಯದ ಪರೀಕ್ಷೆಯಲ್ಲಿ ನಿಂತಿದ್ದೇನೆ ಮತ್ತು ದೇವರ ಅನುಗ್ರಹದಿಂದ ನಾನು ಕ್ಯಾನ್ಸರ್ ವಿರುದ್ಧ ಹೋರಾಡಿದ ಎರಡನೇ ಬಾರಿ ಜೀವ ಪಡೆದುಕೊಂಡಿದ್ದೇನೆ. ನಾನು ಜೀವನದಲ್ಲಿ ಅತ್ಯಂತ ಕಡಿಮೆ ಕಷ್ಟಗಳನ್ನು ನೋಡಿದ್ದೇನೆ ಮತ್ತು ಅನೇಕ ತಪ್ಪುಗಳನ್ನೂ ಮಾಡಿದ್ದೇನೆ. ಜೀವನವು ಅದರ ಎಲ್ಲಾ ಉತ್ತುಂಗ ಮತ್ತು ಕೆಳಮಟ್ಟಗಳೊಂದಿಗೆ ಉತ್ತಮ ಶಿಕ್ಷಣ ನೀಡಿದೆ. ಈಗ ನಾನು ಸಮಯದ ಮೌಲ್ಯವನ್ನು ಹೆಚ್ಚು ತೀವ್ರವಾಗಿ ಅರ್ಥಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಹೀರಾಮಂಡಿಯಲ್ಲಿ ಮನೀಶಾ ಅವರೊಂದಿಗೆ ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಸಂಜೀದಾ ಶೇಖ್ ಮತ್ತು ಶರ್ಮಿನ್ ಸೆಗಲ್ ಕೂಡ ನಟಿಸಿದ್ದಾರೆ.

Continue Reading
Advertisement
888 rupees postpaid plan with 15 OTT applications for JioFiber AirFiber customers
ತಂತ್ರಜ್ಞಾನ19 mins ago

Reliance Jio: ಜಿಯೋಫೈಬರ್, ಏರ್ ಫೈಬರ್ ಗ್ರಾಹಕರಿಗೆ ಆಫರ್‌; 15 ಒಟಿಟಿ ಅಪ್ಲಿಕೇಷನ್‌ ಜತೆಗೆ 888 ರೂ. ಪೋಸ್ಟ್ ಪೇಯ್ಡ್ ಪ್ಲಾನ್

Prajwal Revanna case SIT to issue Red Corner Notice against Prajwal
ಕ್ರೈಂ25 mins ago

Prajwal Revanna case: ಪ್ರಜ್ವಲ್‌ ರೇವಣ್ಣ ವಿರುದ್ಧ ರೆಡ್‌ ಕಾರ್ನರ್ ಬ್ರಹ್ಮಾಸ್ತ್ರ; ಯಾವ ದೇಶದಲ್ಲಿದ್ದರೂ ಅರೆಸ್ಟ್‌ ಮಾಡಲು ಸಿದ್ಧತೆ?

IPL 2024
ಕ್ರೀಡೆ37 mins ago

IPL 2024 : ಐಪಿಎಲ್​ನಲ್ಲಿ ಹೊಸ ಇತಿಹಾಸ; ಸಚಿನ್​ ದಾಖಲೆ ಮುರಿದ ಸಾಯಿ ಸುದರ್ಶನ್​

US
ಪ್ರಮುಖ ಸುದ್ದಿ42 mins ago

ಮಹಿಳೆಯ ಕುತ್ತಿಗೆಗೆ ಬೆಲ್ಟ್‌ನಿಂದ ಬಿಗಿದು, ರಸ್ತೆ ಬದಿಯೇ ಅತ್ಯಾಚಾರ ಎಸಗಿದ ದುಷ್ಟ; ಭೀಕರ ವಿಡಿಯೊ ಇಲ್ಲಿದೆ

Prajwal Revanna case Three FIRs against Prajwal Wanted list in all three
ಕ್ರೈಂ47 mins ago

Prajwal Revanna case: ಪ್ರಜ್ವಲ್‌ ಮೇಲೆ ಒಟ್ಟು ಮೂರು FIR; ಮೂರರಲ್ಲೂ ವಾಂಟೆಡ್‌ ಲಿಸ್ಟ್‌ನಲ್ಲಿ ಸಂಸದ!

Prajwal Revanna Case
ಪ್ರಮುಖ ಸುದ್ದಿ49 mins ago

Prajwal Revanna Case: ಸ್ಫೋಟಕ ಆಡಿಯೊ ರಿಲೀಸ್‌ ಮಾಡಿದ ಬೆನ್ನಲ್ಲೇ ವಕೀಲ ದೇವರಾಜೇಗೌಡ ವಶಕ್ಕೆ

Prajwal Revanna case Another rape case filed against Prajwal
ಕ್ರೈಂ1 hour ago

Prajwal Revanna case: ಪ್ರಜ್ವಲ್‌ ಮೇಲೆ ಮತ್ತೊಂದು ಅತ್ಯಾಚಾರ ಕೇಸ್‌; ಕಠಿಣ ಸೆಕ್ಷನ್‌ ಜಡಿದ SIT! ಯಾವುದಕ್ಕೆ ಎಷ್ಟು ವರ್ಷ ಜೈಲು?

IPL 2024
ಕ್ರೀಡೆ1 hour ago

IPL 2024 : “ಶಾರುಖ್​ ಎಂದೂ ನಮ್ಮನ್ನು ಪ್ರಶ್ನಿಸಿಲ್ಲ”, ಎಲ್​ಎಸ್​​ಜಿ ಮಾಲೀಕನಿಗೆ ತಿರುಗೇಟು ಕೊಟ್ಟ ಗಂಭೀರ್​

Dr C N Manjunath
ಕರ್ನಾಟಕ1 hour ago

Dr C N Manjunath: ಮತ್ತೆ ವೈದ್ಯ ವೃತ್ತಿಗೆ ಮರಳಿದ್ದಾರೆ ಹೃದ್ರೋಗ ತಜ್ಞ ಡಾ.ಸಿ.ಎನ್‌. ಮಂಜುನಾಥ್‌

Murder Case
ಕರ್ನಾಟಕ2 hours ago

Murder Case: ಬೆಂಗಳೂರಿನಲ್ಲಿ ಒಂಟಿ ಮಹಿಳೆಯ ಕತ್ತು ಹಿಸುಕಿ ಕೊಲೆ; ಮನೆ ಬಾಡಿಗೆ ಕೇಳುವ ನೆಪದಲ್ಲಿ ಕೃತ್ಯ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Physical Abuse The public prosecutor called the client woman to the lodge
ಕ್ರೈಂ8 hours ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ10 hours ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ11 hours ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ18 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ1 day ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ1 day ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ1 day ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ1 day ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

ಟ್ರೆಂಡಿಂಗ್‌