Viral News: ಮಕ್ಕಳ ನೋಟ್‌ಬುಕ್‌ ಪೇಜ್‌ನಲ್ಲಿ ರಾಜೀನಾಮೆ ಪತ್ರ ಬರೆದ ಪ್ರಮುಖ ಕಂಪನಿಯ ಸಿಎಫ್ಒ! - Vistara News

ವೈರಲ್ ನ್ಯೂಸ್

Viral News: ಮಕ್ಕಳ ನೋಟ್‌ಬುಕ್‌ ಪೇಜ್‌ನಲ್ಲಿ ರಾಜೀನಾಮೆ ಪತ್ರ ಬರೆದ ಪ್ರಮುಖ ಕಂಪನಿಯ ಸಿಎಫ್ಒ!

Viral News: ಪ್ರಮುಖ ಕಂಪೆನಿಯೊಂದರ ಸಿಎಫ್‌ಒ ಕೈಯಲ್ಲಿಯೇ ಬರೆದ ರಾಜೀನಾಮೆ ಪತ್ರ ಇದೀಗ ವೈರಲ್‌ ಆಗಿದೆ.

VISTARANEWS.COM


on

hand writing
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಕೈಯಲ್ಲಿ ಪತ್ರ ಬರೆಯುವವರೇ ಕಡಿಮೆಯಾಗಿರುವ ಈ ಕಾಲದಲ್ಲಿ ಕಂಪೆನಿಯೊಂದರ ಸಿಎಫ್ಒ (Chief Financial Officer) ಕೈ ಬರಹದಲ್ಲಿ ಬರೆದಿರುವ ರಾಜೀನಾಮೆ ಪತ್ರ ವೈರಲ್‌ ಆಗಿದೆ (Viral News). ಷೇರು ಮಾರುಕಟ್ಟೆಯ ಮುಖ್ಯ ಕಂಪೆನಿಯೊಂದರ ಸಿಇಒ ಕೈಯಲ್ಲೇ ಬರೆದ ಎರಡು ಪ್ಯಾರಾದ ರಾಜೀನಾಮೆ ಪತ್ರವು ಇದೀಗ ಅನೇಕರ ಗಮನ ಸೆಳೆಯುತ್ತಿದೆ. ಪೇಂಟ್ ತಯಾರಕ ಕಂಪೆನಿ ಮಿಟ್ಶಿ ಇಂಡಿಯಾ(Mitshi India)ದಲ್ಲಿ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದ ರಿಂಕು ಪಟೇಲ್ ನವೆಂಬರ್‌ 15ರಂದು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು.

ಈ ಪತ್ರವನ್ನು ರೂಲ್ಡ್ ಶೀಟ್ ಮೇಲೆ ಬರೆಯಲಾಗಿದೆ. ಇದು ಮಗುವಿನ ನೋಟ್‌ಬುಕ್‌ನ ಪುಟದಂತೆ ಕಾಣಿಸುತ್ತಿದೆ. ಇ-ಮೇಲ್ ಯುಗದಲ್ಲಿಯೂ ಕೈ ಬರಹದಲ್ಲಿ ಬರೆದ ಪತ್ರ ಅಚ್ಚರಿ ಹುಟ್ಟು ಹಾಕಿದೆ. “ವೈಯಕ್ತಿಕ ಕಾರಣಗಳಿಂದಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನಾನು ಸಿಎಫ್ಒ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ನಾನು ನಿಮಗೆ ಈ ಮೂಲಕ ತಿಳಿಸುತ್ತೇನೆ. ನಿಮ್ಮ ಸಂಸ್ಥೆಗಾಗಿ ಕೆಲಸ ಮಾಡಿರುವುದು ತುಂಬಾ ಸಂತಸ ತಂದಿದೆ ಮತ್ತು ಇಲ್ಲಿ ಅತ್ಯುತ್ತಮ ಅನುಭವವನ್ನು ಹೊಂದಿದ್ದೇನೆ” ಎಂದು ಪತ್ರದಲ್ಲಿ ಬರೆಯಲಾಗಿದೆ.

ಈ ಕೈಬರಹದ ಪತ್ರವನ್ನು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌(ಬಿಎಸ್ಇ) ಗುರುವಾರ ತನ್ನ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ. “ರಿಂಕು ನಿಕೇತ್ ಪಟೇಲ್ ವೈಯಕ್ತಿಕ ಕಾರಣಗಳಿಂದಾಗಿ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ” ಎಂದು ಮಿಟ್ಶಿ ಇಂಡಿಯಾ ಲಿಮಿಟೆಡ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಕಂಪೆನಿಗೆ ಹೊಸ ಸಿಎಫ್ಒ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಸಿಎಫ್ಒ ಸ್ಥಾನವನ್ನು ಭರ್ತಿ ಮಾಡಿದ ನಂತರ ಸ್ಟಾಕ್ ಎಕ್ಸ್‌ಚೇಂಜ್‌ಗೆ ತಿಳಿಸಲಾಗುವುದು ಎಂದು ಕಂಪೆನಿ ಹೇಳಿದೆ.

ನೆಟ್ಟಿಗರು ಏನಂದ್ರು?

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ಈ ಪೋಸ್ಟ್‌ ಅನ್ನು ಇದುವರೆಗೆ 1 ಲಕ್ಷಕ್ಕಿಂತ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. “ಈ ಸಿಎಫ್ಒ ತನ್ನ ಮಗುವಿನ ರಫ್ ನೋಟ್ ಪುಸ್ತಕದಿಂದ ಒಂದು ಪುಟವನ್ನು ಹರಿದು ಅದರಲ್ಲಿ ರಾಜೀನಾಮೆ ಪತ್ರವನ್ನು ಬರೆದು ಬಿಎಸ್ಇಯಲ್ಲಿ ಅಪ್‌ಲೋಡ್‌ ಮಾಡಿದ್ದಾರೆʼʼ ಎನ್ನುವ ಕ್ಯಾಪ್ಶನ್‌ನೊಂದಿಗೆ ನೆಟ್ಟಿರೊಬ್ಬರು ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದಕ್ಕೆ ನೂರಾರು ಮಂದಿ ಕಮೆಂಟ್‌ ಮಾಡಿದ್ದಾರೆ. ʼʼಉತ್ತಮ ಕೈಬರಹ. ಬಹುಶಃ ಸಿಎಫ್ಒ ಅವರ ಮಗು ಈ ಟಿಪ್ಪಣಿಯನ್ನು ಬರೆದಿರಬೇಕುʼʼ ಒಬ್ಬರು ಹೇಳಿದ್ದಾರೆ. ʼʼಇದೊಂದು ಅಪರೂಪದ ರಾಜೀನಾಮೆ ಪತ್ರʼʼ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ಪೋಸ್ಟ್‌ ವೈರಲ್‌ ಆಗಿ ಗಮನ ಸೆಳೆಯುತ್ತಿದೆ.

ಮೂಲತಃ ಡೇರಾ ಪೇಂಟ್ಸ್ ಮತ್ತು ಕೆಮಿಕಲ್ಸ್ ಲಿಮಿಟೆಡ್ ಎಂದು ಕರೆಯಲ್ಪಡುವ ಮಿಟ್ಶಿ ಇಂಡಿಯಾ ಲಿಮಿಟೆಡ್ ಅನ್ನು 1976ರಲ್ಲಿ ಸ್ಥಾಪಿಸಲಾಯಿತು. 1992ರಲ್ಲಿ ಐಪಿಒ ಕಂಪೆನಿ ಪ್ರಕಟಿಸಿತು. ಕಾರ್ಪೊರೇಟ್ ವೆಬ್‌ಸೈಟ್‌ ಪ್ರಕಾರ ಈ ಕಂಪೆನಿಯನ್ನು 28 ವರ್ಷಗಳಿಂದ ಬಿಎಸ್ಇಯಲ್ಲಿ ಪಟ್ಟಿ ಮಾಡಲಾಗಿದೆ. ಮಿಟ್ಶಿ ಇಂಡಿಯಾ ಪೇಂಟ್ ತಯಾರಿಕೆಯೊಂದಿಗೆ ಲೋಹ, ಕಾಗದ, ಪ್ಲಾಸ್ಟಿಕ್, ಹಾರ್ಡ್‌ವೇರ್‌ ಉತ್ಪನ್ನಗಳನ್ನೂ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದೆ.

ಇದನ್ನೂ ಓದಿ: Viral Video: ಡ್ಯಾನ್ಸ್‌ ಆಯ್ತು, ರೊಮ್ಯಾನ್ಸ್‌ ಆಯ್ತು; ಇದೀಗ ಮೆಟ್ರೋದಲ್ಲಿ ಫೈಟ್‌ ಸೀನ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಬಾಲಕಿಯ ಹಿಂಭಾಗ ಮುಟ್ಟಿದ ಮುಸ್ಲಿಂ ಯುವಕ; ಆಮೇಲೆ ನಡೆದಿದ್ದೇ ಬೇರೆ!

Viral Video:ಮುಜಾಫರ್‌ನಗರದಲ್ಲಿ ಈ ಘಟನೆ ನಡೆದಿದ್ದು, ಸಲ್ಮಾನ್‌ ಎಂಬ ಯುವಕನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಈ ಕಾಮುಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಹೇಯ ಕೃತ್ಯ ಎಸಗಿದ್ದಾನೆ. ಬೈಕ್‌ನಲ್ಲಿ ಬಂದ ಸಲ್ಮಾನ್‌, ರಸ್ತೆಯಲ್ಲಿ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದ ಬಾಲಕಿಯ ಹಿಂಭಾಗವನ್ನು ಮುಟ್ಟಿ ಕಿರುಕುಳ ನೀಡಿ ಎಸ್ಕೇಪ್‌ ಆಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.ಇದೇ ವೇಳೆ ಸಂತ್ರಸ್ತ ಬಾಲಕಿ ತನ್ನ ಮನೆಯವರಿಗೆ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಆ ಬಳಿಕ ಮನೆಯವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.

VISTARANEWS.COM


on

Viral Video
Koo

ಉತ್ತರಪ್ರದೇಶ: ಕೊಲೆ, ಅತ್ಯಾಚಾರ, ಲೈಂಗಿಕ ಕಿರುಕುಳಗಳಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಹಾಡಹಗಲೇ ಜನನಿಬಿಡ ಪ್ರದೇಶದಲ್ಲೇ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಕಿರುಕುಳ(Physical Abuse)ಗಳೂ ನಡೆಯುತ್ತಿರುತ್ತವೆ. ಅಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಹಾಡುಹಗಲೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಕಿಡಿಗೇಡಿಯೋರ್ವ ಲೈಂಗಿಕ ಕಿರುಕುಳ ನೀಡಿದ್ದಾನೆ. ಯೋಗಿನಾಡು ಉತ್ತರಪ್ರದೇಶ(Uttar Pradesh) ಮುಜಾಫರ್‌ನಗರದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ. ಇನ್ನು ವಿಡಿಯೋ ವೈರಲ್‌ ಆಗುತ್ತಿದ್ದಂತೆ ಕಿಡಿಯ ಹಡೆಮುರಿ ಕಟ್ಟಿರುವ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಮುಜಾಫರ್‌ನಗರದಲ್ಲಿ ಈ ಘಟನೆ ನಡೆದಿದ್ದು, ಸಲ್ಮಾನ್‌ ಎಂಬ ಯುವಕನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಈ ಕಾಮುಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಹೇಯ ಕೃತ್ಯ ಎಸಗಿದ್ದಾನೆ. ಬೈಕ್‌ನಲ್ಲಿ ಬಂದ ಸಲ್ಮಾನ್‌, ರಸ್ತೆಯಲ್ಲಿ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದ ಬಾಲಕಿಯ ಹಿಂಭಾಗವನ್ನು ಮುಟ್ಟಿ ಕಿರುಕುಳ ನೀಡಿ ಎಸ್ಕೇಪ್‌ ಆಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.ಇದೇ ವೇಳೆ ಸಂತ್ರಸ್ತ ಬಾಲಕಿ ತನ್ನ ಮನೆಯವರಿಗೆ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಆ ಬಳಿಕ ಮನೆಯವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೆಟ್ಟಿಗರೊಬ್ಬರು ಎಕ್ಸ್‌ನಲ್ಲಿ ಶೇರ್‌ ಮಾಡಿ, ಉತ್ತರಪ್ರದೇಶ ಪೊಲೀಸರಿಗೆ ಟ್ಯಾಗ್‌ ಮಾಡಿದ್ದರು.

ಆರೋಪಿ ಕಾಲಿಗೆ ಗುಂಡೇಟು

ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಆರೋಪಿ ಸಲ್ಮಾನ್‌ನನ್ನು ಅರೆಸ್ಟ್‌ ಮಾಡಿದ್ದಾರೆ. ಈ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರು ಎನ್‌ಕೌಂಟರ್‌ನಲ್ಲಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇನ್ನು ಆರೋಪಿಯ ಹೇಯ ಕೃತ್ಯಕ್ಕೆ ಇದು ತಕ್ಕ ಪಾಠ ಎಂದು ಅನೇಕರು ಕಮೆಂಟ್‌ ಮಾಡಿದ್ದಾರೆ. ಇನ್ನು ಈ ವಿಡಿಯೋಗೆ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ಈ ವ್ಯಕ್ತಿಯ ವಿರುದ್ಧ ಗರಂ ಆಗಿದ್ದಾರೆ.

ಇದನ್ನೂ ಓದಿ:Viral Video: ರೈಲಿನಲ್ಲಿ ಊಟ ಸೇವಿಸುವ ಮುನ್ನ ಎಚ್ಚರ…ಎಚ್ಚರ..! ಭಾರೀ ವೈರಲ್‌ ಆಗ್ತಿದೆ ಈ ವಿಡಿಯೋ

Continue Reading

ಸಿನಿಮಾ

Radhika Merchant: ಪ್ರಿವೆಡ್ಡಿಂಗ್‌ಗೆ ಅಂಬಾನಿ ಸೊಸೆ ಧರಿಸಿದ್ದು 65 ವರ್ಷ ಹಳೆಯ ಸ್ಕರ್ಟ್‌! ಇದರ ಬೆಲೆ?

Radhika Merchant: ವೈರಲ್ ಬಾರ್ಬಿಕೋರ್ ಮತ್ತು ಕೊಕ್ವೆಟ್ ಕೋರ್ ಫ್ಯಾಷನ್ ಒಳಗೊಂಡ ಈ ಡ್ರೆಸ್‌ ಪ್ರಕಾಶಮಾನವಾದ ರಾಸ್ಪ್ಬೆರಿ ಗುಲಾಬಿ ಬಣ್ಣಗಳ ಮಿಶ್ರಣದಲ್ಲಿದೆ. 1959ರ ಫ್ಯಾಷನ್‌ ಸ್ಲೀವ್ ಲೆಸ್ ಡ್ರೆಸ್ ಆಗಿದ್ದರೂ ಮಾಡರ್ನ್ ಆಗಿದೆ. ವಿಶಾಲವಾದ ಭುಜದ ಪಟ್ಟಿಗಳು, ಚೌಕಾಕಾರದ ಡಿಸೈನ್‌, ಜತೆಗೆ ಸ್ಕರ್ಟ್ ರೀತಿಯ ವಿನ್ಯಾಸ ಇನ್ನಷ್ಟು ಸೌಂದರ್ಯವನ್ನು ಹೆಚ್ಚಿಸುತ್ತವೆ. ಈ ಸ್ಕರ್ಟ್‌ ಬೆಲೆ 3,20,714ರೂ. ಆಗಿದೆ.

VISTARANEWS.COM


on

Radhika Merchant archival Dior dress for her pre-wedding
Koo

ಬೆಂಗಳೂರು: ರಾಧಿಕಾ ಮರ್ಚಂಟ್‌ (Radhika Merchant) ಹಾಗೂ ಅನಂತ್ ಅಂಬಾನಿ ಮದುವೆಗೆ ಸಜ್ಜಾಗುತ್ತಿದ್ದಾರೆ. ಈ ಮುಂಚೆ ಇಟಲಿಯಲ್ಲಿ ನಡೆದ ಪ್ರಿ ವೆಡ್ಡಿಂಗ್‌ ಫೋಟೊಗಳು ಇದೀಗ ಭಾರಿ ವೈರಲ್‌ ಆಗುತ್ತಿವೆ. ಇಟಲಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ವಿವಾಹ ಪೂರ್ವ ಆಚರಣೆಯಲ್ಲಿ ರಾಧಿಕಾ ಮರ್ಚಂಟ್‌ ಅವರ ಡ್ರೆಸ್‌ ಕೂಡ ಹೈಲೈಟ್‌ ಆಗಿತ್ತು. ಆರ್ಕೈವಲ್ ಡಿಯೊರ್ ಸ್ಕರ್ಟ್‌ (archival Dior dress) ಧರಿಸಿದ್ದರು ರಾಧಿಕಾ. 1959ರ ಫ್ಯಾಷನ್‌ ಸ್ಲೀವ್ ಲೆಸ್ ಡ್ರೆಸ್ ಆಗಿದ್ದರೂ ಮಾಡರ್ನ್ ಆಗಿದೆ. ವಿಶಾಲವಾದ ಭುಜದ ಪಟ್ಟಿಗಳು, ಚೌಕಾಕಾರದ ಡಿಸೈನ್‌, ಜತೆಗೆ ಸ್ಕರ್ಟ್ ರೀತಿಯ ವಿನ್ಯಾಸ ಇನ್ನಷ್ಟು ಸೌಂದರ್ಯವನ್ನು ಹೆಚ್ಚಿಸುತ್ತವೆ. ಈ ಸ್ಕರ್ಟ್‌ ಬೆಲೆ 3,20,714ರೂ. ಆಗಿದೆ.

ರಾಧಿಕಾ ಮರ್ಚಂಟ್‌ ಇಟಲಿಯ ಪೋರ್ಟೋಫಿನೋದಲ್ಲಿ ನಡೆದ ಆಚರಣೆಗಳಿಗಾಗಿ ಬಾರ್ಬಿಕೋರ್ ಟ್ರೆಂಡ್ ಧರಿಸಿದ್ದರು. ಈ ಉಡುಪನ್ನು ಯೆವ್ಸ್ ಸೇಂಟ್ ಲಾರೆಂಟ್ ವಿನ್ಯಾಸಗೊಳಿಸಿದ್ದಾರೆ. ವರದಿಯ ಪ್ರಕಾರ ರಾಧಿಕಾ ಅವರ ಆರ್ಕೈವಲ್ ಡಿಯೊರ್ ಉಡುಪನ್ನು ಸ್ಯಾನ್ ಫ್ರಾನ್ಸಿಸ್ಕೋದ ಕಸ್ಸಂದ್ರ ಕಾರ್ಪೆಂಟರ್ ಅವರಿಂದ ಪಡೆಯಲಾಗಿದೆ ಎನ್ನಲಾಗಿದೆ . ಇದು ಮೂಲತಃ ಜೀನಿ ಮ್ಯಾಗ್ನಿನ್ ಅವರದ್ದು ಎನ್ನಲಾಗಿದೆ.

ವೈರಲ್ ಬಾರ್ಬಿಕೋರ್ ಮತ್ತು ಕೊಕ್ವೆಟ್ ಕೋರ್ ಫ್ಯಾಷನ್ ಒಳಗೊಂಡ ಈ ಡ್ರೆಸ್‌ ಪ್ರಕಾಶಮಾನವಾದ ರಾಸ್ಪ್ಬೆರಿ ಗುಲಾಬಿ ಬಣ್ಣಗಳ ಮಿಶ್ರಣದಲ್ಲಿದೆ. 1959ರ ಫ್ಯಾಷನ್‌ ಸ್ಲೀವ್ ಲೆಸ್ ಡ್ರೆಸ್ ಆಗಿದ್ದರೂ ಮಾಡರ್ನ್ ಆಗಿದೆ. ವಿಶಾಲವಾದ ಭುಜದ ಪಟ್ಟಿಗಳು, ಚೌಕಾಕಾರದ ಡಿಸೈನ್‌, ಜತೆಗೆ ಸ್ಕರ್ಟ್ ರೀತಿಯ ವಿನ್ಯಾಸ ಇನ್ನಷ್ಟು ಸೌಂದರ್ಯವನ್ನು ಹೆಚ್ಚಿಸುತ್ತವೆ. ಈ ಸ್ಕರ್ಟ್‌ ಬೆಲೆ 3,20,714ರೂ. ಆಗಿದೆ. ರಾಧಿಕಾ ಅವರು ಈ ಸ್ಕರ್ಟ್‌ ಜತೆಗೆ ವಜ್ರದ ಉಂಗುರ, ಗುಲಾಬಿ ಬಣ್ಣದ ಹರ್ಮೆಸ್ ಮಿನಿ ಕೆಲ್ಲಿ ಬ್ಯಾಗ್ ಧರಿಸಿದ್ದರು. ಪೋನಿಟೇಲ್‌ಗೆ ರೇಷ್ಮೆಯ ಸ್ಕಾರ್ಫ್‌ ಧರಿಸಿದ್ದರು.

ಇದನ್ನೂ ಓದಿ: Pawan Kalyan: ಮರು ಬಿಡುಗಡೆಯಾಗುತ್ತಿದೆ ಪವನ್ ಕಲ್ಯಾಣ್ ಹಳೆಯ ಸಿನಿಮಾ..!

ವರದಿಯ ಪ್ರಕಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಹಿಂದೂ ವೈದಿಕ ಸಮಾರಂಭದ ಪ್ರಕಾರ ಮದುವೆಯಾಗಲಿದ್ದಾರೆ. ವಿವಾಹ ಆಮಂತ್ರಣ ಪತ್ರಿಕೆಯ ಚಿತ್ರ ಬಹಿರಂಗಗೊಂಡಿದ್ದು ಅದರ ಪ್ರಕಾರ ಮೂರು ಸಮಾರಂಭಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ. ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿರುವ ಭವ್ಯವಾದ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್​ನಲ್ಲಿ ಮದುವೆ ನಡೆಯಲಿದೆ.

ಜುಲೈ 12 ರಿಂದ ಮೂರು ದಿನಗಳ ಕಾಲ ವಿವಾಹ ಉತ್ಸವಗಳು ನಡೆಯಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 12ರಂದು ರಂದು ವಿವಾಹದೊಂದಿಗೆ ಆಚರಣೆಗೆ ಚಾಲನೆ ಸಿಗಲಿದೆ. ಅಂದು ಅತಿಥಿಗಳು ಭಾರತೀಯ ಸಾಂಪ್ರದಾಯಿಕ ಉಡುಪನ್ನು ಧರಿಸುವ ನಿರೀಕ್ಷೆಯಿದೆ. ಮದುವೆಯ ನಂತರ, ಮುಂದಿನ ಕಾರ್ಯಕ್ರಮವು ಜುಲೈ 13 ರಂದು ಶುಭ ಆಶಿರ್ವಾದ್ ಅಥವಾ ದೈವಿಕ ಆಶೀರ್ವಾದ ಕಾರ್ಯಕ್ರಮ. ಅಂದು ಡ್ರೆಸ್ ಕೋಡ್ ಭಾರತೀಯ ಕ್ಯಾಶುವಲ್ ಡ್ರೆಸ್​ ಆಗಿದೆ. ಜುಲೈ 14 ರಂದು ಆಯೋಜಿಸಲಾಗುವ ವಿವಾಹ ಆರತಕ್ಷತೆ ಅಥವಾ ಮಂಗಲ್ ಉತ್ಸವ್ ನಡೆಯಲಿದೆ. ಅಂದು ಅತಿಥಿಗಳು ಭಾರತೀಯ ಚಿಕ್ ಉಡುಪನ್ನು ಧರಿಸುವ ನಿರೀಕ್ಷೆಯಿದೆ.


Continue Reading

ಕ್ರೀಡೆ

Viral Video: ಹೋಟೆಲ್ ಕಾರಿಡಾರ್​ನಲ್ಲಿ ಗಾಲ್ಫ್ ಆಡಿದ ಪಂತ್​-ಸೂರ್ಯಕುಮಾರ್​

Viral Video: ರಿಷಭ್​ ಪಂತ್​ ಮತ್ತು ಸೂರ್ಯಕುಮಾರ್​ ಅವರು ಹೋಟೆಲ್ ಕಾರಿಡಾರ್​ನಲ್ಲಿ ಪೇಪರ್​ ಬ್ಯಾಗ್​ ಒಂದನ್ನು ಇರಿಸಿ ಬ್ಯಾಟ್​ ಮೂಲಕ ಗಾಲ್ಫ್ ಆಡಿದ್ದಾರೆ. ಈ ವಿಡಿಯೊ ವೈರಲ್(Viral Video)​ ಆಗಿದೆ.

VISTARANEWS.COM


on

Viral Video
Koo

ನ್ಯೂಯಾರ್ಕ್​: ಇಂದು ನಡೆಯುವ ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಪಂದ್ಯದಲ್ಲಿ ಭಾರತ ತಂಡ ತನ್ನ ಬದ್ಧ ಎದುರಾಳಿ ಪಾಕಿಸ್ತಾನ(India vs Pakistan) ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾದ(team India) ಸ್ಟಾರ್​ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ರಿಷಭ್​ ಪಂತ್​(Rishabh Pant) ಮತ್ತು ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್​(Suryakumar Yadav) ಅವರು ಹೋಟೆಲ್ ಕಾರಿಡಾರ್​ನಲ್ಲಿ ಗಾಲ್ಫ್​ ಆಡಿದ್ದಾರೆ. ಈ ವಿಡಿಯೊ ವೈರಲ್(Viral Video)​ ಆಗಿದೆ.

ರಿಷಭ್​ ಪಂತ್​ ಮತ್ತು ಸೂರ್ಯಕುಮಾರ್​ ಅವರು ಹೋಟೆಲ್ ಕಾರಿಡಾರ್​ನಲ್ಲಿ ಪೇಪರ್​ ಬ್ಯಾಗ್​ ಒಂದನ್ನು ಇರಿಸಿ ಬ್ಯಾಟ್​ ಮೂಲಕ ಗಾಲ್ಫ್ ಆಡಿದ್ದಾರೆ. ಪಂತ್​ ಅವರು ಗಾಲ್ಫ್ ಚೆಂಡನ್ನು ತಮ್ಮ ಬ್ಯಾಟ್​ ಮೂಲಕ ಬಾರಿಸಿ ಚೆಂಡನ್ನು ನೇರವಾಗಿ ಪೇಪರ್​ ಬ್ಯಾಗ್ ಒಳಗಡೆಗೆ ಬಾರಿಸುವಲ್ಲಿ ಯಶಸ್ಸು ಕೂಡ ಕಂಡಿದ್ದಾರೆ. ಚೆಂಡು ಗುರಿ ತಲುಪಿದ ಸಂತಸದಲ್ಲಿ ಪಂತ್​ ಮತ್ತು ಸೂರ್ಯಕುಮಾರ್​ ಜೋರಾಗಿ ಕಿರುಚುತ್ತಾ ಕುಣಿದು ಕುಪ್ಪಳಿಸಿದ್ದಾರೆ. ಇದರ ವಿಡಿಯೊವನ್ನು ಪಂತ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪಂತ್​ ಅವರು ಕಳೆದ ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಅಜೇಯ 36 ರನ್​ ಬಾರಿಸಿ ಮಿಂಚಿದ್ದರು. ಇದೀಗ ಇಂದು ನಡೆಯುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ಉತ್ತಮ ಬ್ಯಾಟಿಂಗ್​ ನಡೆಸುವ ವಿಶ್ವಾಸದಲ್ಲಿದ್ದಾರೆ. 2022ರಲ್ಲಿ ಪಂತ್​ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಸುಮಾರು 14 ತಿಂಗಳ ಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಹೀಗಾಗಿ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿ ಅವರಿಗೆ ಮಿಸ್​ ಆಗಿತ್ತು. ಇದೀಗ ಟಿ20 ವಿಶ್ವಕಪ್​ನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಯೋಜನೆಯಲ್ಲಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿಯೂ ಪಂತ್​ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು.

ಭಾರತ ಈ ಇಂದಿನ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಚೈನಾಮನ್​ ಖ್ಯಾತಿಯ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳುವ ಯೋಜನೆಯಲ್ಲಿದೆ. ಅಕ್ಷರ್‌ ಪಟೇಲ್‌ ಅವರನ್ನು ಈ ಪಂದ್ಯದಿಂದ ಕೈಬಿಡುವ ಸಾಧ್ಯತೆ ಅಧಿಕವಾಗಿದೆ. ಉಳಿದಂತೆ ಯಾವುದೇ ಬದಲಾವಣೆ ಕಂಡು ಬಾರದು. ಕೊಹ್ಲಿ ಮತ್ತು ರೋಹಿತ್​ ಅವರೇ ಭಾರತದ ಇನಿಂಗ್ಸ್​ ಆರಂಭಿಸಲಿದ್ದಾರೆ.

ಇದನ್ನೂ ಓದಿ IND vs PAK: ಇಂದು ಪಾಕ್​ ವಿರುದ್ಧ ಆಡಲಿದ್ದಾರಾ ಟೀಮ್​ ಇಂಡಿಯಾ ನಾಯಕ ರೋಹಿತ್​?

ಸಂಭ್ಯಾವ್ಯ ತಂಡಗಳು


ಭಾರತ:
 ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕಟ್​ ಕೀಪರ್​), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್/ ಕುಲ್​ದೀಪ್​ ಯಾದವ್​, ಜಸ್​ಪ್ರೀತ್​ ಬುಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

ಪಾಕಿಸ್ತಾನ: ಬಾಬರ್ ಆಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್​ ಕೀಪರ್​), ಉಸ್ಮಾನ್ ಖಾನ್, ಫಖರ್ ಜಮಾನ್, ಅಜಮ್ ಖಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಮೊಹಮ್ಮದ್ ಅಮೀರ್, ಹಾರಿಸ್ ರೌಫ್.

Continue Reading

ದೇಶ

Viral Video: ರೈಲಿನಲ್ಲಿ ಊಟ ಸೇವಿಸುವ ಮುನ್ನ ಎಚ್ಚರ…ಎಚ್ಚರ..! ಭಾರೀ ವೈರಲ್‌ ಆಗ್ತಿದೆ ಈ ವಿಡಿಯೋ

Viral Video:ರೈಲು ಪ್ರಯಾಣಿಕರೊಬ್ಬರು ರೈಲಿನಲ್ಲಿ ಊಟ ಆರ್ಡರ್‌ ಮಾಡಿದ್ದರು. ಅನ್ನ, ಸಾಂಬಾರ್‌, ದಾಲ್‌ ಹಾಗೂ ಎರಡು ವಿಧದ ಪಲ್ಯವನ್ನು ಊಟದಲ್ಲಿ ಬಯಸಿದ್ದರು. ಊಟ ಬರುತ್ತಿದ್ದಂತೆ ಬಹಳ ಉತ್ಸಾಹದಿಂದ ಊಟದ ಬಾಕ್ಸ್‌ ತೆರೆಯುತ್ತಿದ್ದಂತೆ ಅದರಲ್ಲಿದ್ದ ಗುಲಾಬ್‌ ಜಾಮೂನಿನಲ್ಲಿ ಜೀವಂತ ಜಿರಳೆ ಇರುವುದನ್ನು ಕಂಡು ಪ್ರಯಾಣಿಕರು ಹೌಹಾರಿದ್ದಾರೆ.

VISTARANEWS.COM


on

Viral Video
Koo

ನವದೆಹಲಿ: ರೈಲು ಪ್ರಯಾಣಿಕರೇ ಎಚ್ಚರ…ಎಚ್ಚರ.. ರೈಲಿನಲ್ಲಿ ಪೂರೈಸುವ ಆಹಾರಗಳನ್ನು ಸೇವಿಸುವ ಮುನ್ನ ಈ ಸುದ್ದಿಯನ್ನೊಮ್ಮೆ ಓದಿ. ರೈಲಿನಲ್ಲಿ ಶುಚಿ-ರುಚಿಯಾದ ಆಹಾರ ಸಿಗೋದು ಕೊನೇಯ ಕ್ಷಣದಲ್ಲಿ ಟಿಕೆಟ್‌ ಸಿಗುವಷ್ಟೇ ಕಷ್ಟಸಾಧ್ಯ. ಅಂತಹದ್ದೇ ಒಂದು ಘಟನೆ ವರದಿಯಾಗಿದ್ದು, ರೈಲಿನಲ್ಲಿ ಪ್ರಯಾಣಿಕರಿಗೆ ನೀಡಲಾಗಿದ್ದ ಊಟದಲ್ಲಿ ಜೀವಂತ ಜಿರಳೆ ಪತ್ತೆಯಾಗಿದೆ. ಈ ವಿಡಿಯೋ(Viral Video)ವನ್ನು ಪ್ರಯಾಣಿಕ ಸಾಮಾಜಿಕ ಜಾಲತಾಣ(Social Media)ದಲ್ಲಿ ಹಂಚಿಕೊಂಡಿದ್ದು, ಬಹಳ ವೈರಲ್‌ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ?

ರೈಲು ಪ್ರಯಾಣಿಕರೊಬ್ಬರು ರೈಲಿನಲ್ಲಿ ಊಟ ಆರ್ಡರ್‌ ಮಾಡಿದ್ದರು. ಅನ್ನ, ಸಾಂಬಾರ್‌, ದಾಲ್‌ ಹಾಗೂ ಎರಡು ವಿಧದ ಪಲ್ಯವನ್ನು ಊಟದಲ್ಲಿ ಬಯಸಿದ್ದರು. ಊಟ ಬರುತ್ತಿದ್ದಂತೆ ಬಹಳ ಉತ್ಸಾಹದಿಂದ ಊಟದ ಬಾಕ್ಸ್‌ ತೆರೆಯುತ್ತಿದ್ದಂತೆ ಅದರಲ್ಲಿದ್ದ ಗುಲಾಬ್‌ ಜಾಮೂನಿನಲ್ಲಿ ಜೀವಂತ ಜಿರಳೆ ಇರುವುದನ್ನು ಕಂಡು ಪ್ರಯಾಣಿಕರು ಹೌಹಾರಿದ್ದಾರೆ.

ತಕ್ಷಣ ಕೋಪಗೊಂಡ ಪ್ರಯಾನಿಕ ಆ ಊಟದ ವಿಡಿಯೋ ಮಾಡಿ ರೆಡ್ಡಿಟ್‌ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ವಿಡಿಯೋ ಶೇರ್‌ ಆಗುತ್ತಿದ್ದಂತೆ ರೈಲ್ವೆ ಸಿಬ್ಬಂದಿಯ ಭಾರೀ ನಿರ್ಲಕ್ಷ್ಯಕ್ಕೆ ನೆಟ್ಟಿಗರು ಅಕ್ರೋಸ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕ ಆರೋಗ್ಯದ ಜೊತೆ ಆಟವಾಡುತ್ತಿದ್ದೀರಾ ಎಂದು ಕಿಡಿ ಕಾರಿದ್ದಾರೆ. ಇನ್ನು ಕೆಲವರು ಇದೊಂದು ದುಬಾರಿ ಮಾಂಸಾಹಾರಿ ಊಟ ಎಂದು ವ್ಯಂಗ್ಯವಾಡಿದ್ದಾರೆ.

Cockroach in food
byu/Aggravating-Wrap-266 inindianrailways

ರೈಲಿನಲ್ಲಿ ಇಂತಹ ಅನುಭವ ಮೊದಲೇನಲ್ಲ. ಕಾಶಿ ಎಕ್ಸ್‌ಪ್ರೆಸ್‌ನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಇತ್ತೀಚೆಗೆ ಇದೇ ರೀತಿಯ ಅನುಭವವನ್ನು ಹಂಚಿಕೊಂಡಿದ್ದರು. ಪರ್ವೇಜ್ ಹಶ್ಮಿ ಅವರು ತಮ್ಮ ಊಟದಲ್ಲಿ ಕೀಟ ಕಂಡುಬಂದ ನಂತರ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ದಾಲ್ ಮತ್ತು ಸಬ್ಜಿಯಲ್ಲಿ ಹುಳ ಪತ್ತೆಯಾಗಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದರು. ಈ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿದ್ದರು.

ಇನ್ನು ಕೆಲವು ದಿನಗಳ ಹಿಂದೆ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲೂ ಇಂತಹ ಒಂದು ಘಟನೆ ವರದಿಯಾಗಿತ್ತು. ಪ್ರಯಾಣಿಕರೊಬ್ಬರ ಊಟದಲ್ಲಿ ಸತ್ತ ಜಿರಳೆ ಪತ್ತೆ ಆಗಿದ್ದು. ಆ ಪ್ರಯಾಣಿಕರು ಊಟ, ಸತ್ತ ಜಿರಳೆ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ವೈರಲ್ ಆಗಿತ್ತು. ಡಾ. ಶುಭೇಂದು ಕೇಶಾರಿ ಅವರು, ‘ಫೆಬ್ರವರಿ 1ರಂದು ರೈಲು ನಂ. 20173 RKMP ನಲ್ಲಿ ಐಆರ್‌ಸಿಸಿ ಅವರು ನೀಡಿದ ಆಹಾರದ ಪ್ಯಾಕೆಟ್‌ನಲ್ಲಿ ಸತ್ತ ಜಿರಳೆಯನ್ನು ನೋಡಿ ನಾನು ಆಘಾತಕ್ಕೊಳಗಾಗಿದ್ದೇನೆ, ರಾಣಿ ಕಮಲಾಪತಿಯಿಂದ ಜಬಲ್‌ಪುರ ಜಂಕ್ಷನ್‌ಗೆ ಪ್ರಯಾಣಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಬಳಿಕವೇ ಘಟನೆ ಮುನ್ನೆಲೆಗೆ ಬಂದಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ತಮ್ಮ ಐಷಾರಾಮಿ ಸೇವೆಗಳು, ಉತ್ತಮ ಗುಣಮಟ್ಟದ ಸುರಕ್ಷತೆ ಮತ್ತು ವೇಗಕ್ಕೆ ಹೆಸರುವಾಸಿ ಆಗಿದೆ. ಇನ್ನೂ ಈ ಘಟನೆ ಗಮನಿಸಿರುವ IRCTC ತನ್ನ X ಹ್ಯಾಂಡಲ್ ಮೂಲಕ ವೈರಲ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದೆ. ಆದ ಪ್ರಮಾದಕ್ಕೆ, ಅನಾನುಕೂಲತೆಗೆ ಪ್ರಯಾಣಿಕರಿಗೆ ಕ್ಷಮೆ ಕೇಳಿದೆ.

ಇದನ್ನೂ ಓದಿ: Narendra Modi: ‌ಮೋದಿ ಪ್ರಮಾಣವಚನ ಸಂಭ್ರಮಕ್ಕೆ ಗಣ್ಯರ ದಂಡೇ ಸಾಕ್ಷಿ; ದೇಶ-ವಿದೇಶಗಳ ಗಣ್ಯರ ಪಟ್ಟಿ ಹೀಗಿದೆ

Continue Reading
Advertisement
Puja Tomar
ಕ್ರೀಡೆ2 mins ago

Puja Tomar: ಯುಎಫ್​ಸಿ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಪೂಜಾ ತೋಮರ್

road Accident
ಕಲಬುರಗಿ22 mins ago

Road Accident : ಟೆಂಪೋ ಪಲ್ಟಿ; ಓವರ್‌ಟೇಕ್‌ ಧಾವಂತಕ್ಕೆ ಕಾರ್ಮಿಕ ಸಾವು, ಮತ್ತೋರ್ವ ಗಂಭೀರ

Modi 3.0 Cabinet
ದೇಶ25 mins ago

Modi 3.0 Cabinet: ರಾಜ್ಯದಿಂದ ಜೋಶಿ, ಶೋಭಾ ಕರಂದ್ಲಾಜೆ, ಕುಮಾರಸ್ವಾಮಿಗೆ ಸಚಿವ ಸ್ಥಾನ; ಡಾ. ಮಂಜುನಾಥ್‌ಗೆ ಇಲ್ಲ ಅವಕಾಶ

Gold Rate Today
ಚಿನ್ನದ ದರ25 mins ago

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಬೆಲೆ ಗಮನಿಸಿ

Maharaj Movie Objects by Bajrang Dal Starring Junaid Khan
ಬಾಲಿವುಡ್26 mins ago

Maharaj Movie: ಹಿಂದು ಧರ್ಮ, ಶ್ರೀಕೃಷ್ಣನ ಅವಹೇಳನ; ಆಮೀರ್ ಖಾನ್ ಪುತ್ರನಿಗೆ ಬಜರಂಗದಳ ವಾರ್ನಿಂಗ್!

Electric shock
ಬೆಂಗಳೂರು ಗ್ರಾಮಾಂತರ39 mins ago

Electric shock : ಬಟ್ಟೆ ಒಣ ಹಾಕಲು ಹೋದಾಗ ಕರೆಂಟ್‌ ಶಾಕ್‌ನಿಂದ ವಿದ್ಯಾರ್ಥಿ ಸಾವು

JEE Advanced Result 2024
ಶಿಕ್ಷಣ56 mins ago

JEE Advanced 2024 Result: ಜೆಇಇ ಅಡ್ವಾನ್ಸ್ಡ್‌ ಫಲಿತಾಂಶ ಪ್ರಕಟ; ರಿಸಲ್ಟ್‌ ಹೀಗೆ ಚೆಕ್‌ ಮಾಡಿ

IND vs PAK
ಕ್ರಿಕೆಟ್58 mins ago

IND vs PAK: ಮೋದಿಯ ಪ್ರಮಾಣ ವಚನದ ಬದಲು ಭಾರತ-ಪಾಕ್ ಪಂದ್ಯ ವೀಕ್ಷಿಸುವೆ ಎಂದ ​ಶಶಿ ತರೂರ್

Viral Video
ವೈರಲ್ ನ್ಯೂಸ್1 hour ago

Viral Video: ಬಾಲಕಿಯ ಹಿಂಭಾಗ ಮುಟ್ಟಿದ ಮುಸ್ಲಿಂ ಯುವಕ; ಆಮೇಲೆ ನಡೆದಿದ್ದೇ ಬೇರೆ!

Drowned in water
ಬೆಳಗಾವಿ1 hour ago

Drowned in water : ಆಯತಪ್ಪಿ ಘಟಪ್ರಭಾ ನದಿಗೆ ಬಿದ್ದ ಟ್ರಾಕ್ಟರ್; ಓರ್ವ ನೀರುಪಾಲು, 12 ಮಂದಿ ಪಾರು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ5 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌