2034ರ ಫಿಫಾ ವಿಶ್ವಕಪ್‌ಗೆ ಭಾರತ ಸಹ ಆತಿಥ್ಯ?; ಸೌದಿ ಫೆಡರೇಶನ್​ನ ಸ್ಪಷ್ಟನೆ ಏನು? - Vistara News

ಕ್ರೀಡೆ

2034ರ ಫಿಫಾ ವಿಶ್ವಕಪ್‌ಗೆ ಭಾರತ ಸಹ ಆತಿಥ್ಯ?; ಸೌದಿ ಫೆಡರೇಶನ್​ನ ಸ್ಪಷ್ಟನೆ ಏನು?

2034ರಲ್ಲಿ ನಡೆಯುವ ಫಿಫಾ ವಿಶ್ವಕಪ್‌(FIFA World Cup 2034) ಟೂರ್ನಿಯ ಸಹ ಆತಿಥ್ಯವನ್ನು ಭಾರತವೂ ವಹಿಸಲಿದೆ ಎನ್ನುವ ಊಹಾಪೋಹಗಳಿಗೆ ಸ್ಪಷ್ಟನೆಯೊಂದು ಸಿಕ್ಕಿದೆ.

VISTARANEWS.COM


on

2034 FIFA World Cup
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದುಬೈ: 2034ರಲ್ಲಿ ನಡೆಯುವ ಪ್ರತಿಷ್ಠಿತ ಫಿಫಾ ವಿಶ್ವಕಪ್‌ನ(FIFA World Cup 2034) ಕೆಲವು ಪಂದ್ಯಗಳಿಗೆ ಭಾರತ ಕೂಡ ಆತಿಥ್ಯ(FIFA World Cup 2034 In India) ವಹಿಸಲಿದೆ ಎಂದು ವರದಿಯಾಗಿತ್ತು. ಆದರೆ ಈ ಬಗ್ಗೆ ಸೌದಿ ಅರೇಬಿಯಾದ ಫುಟ್‌ಬಾಲ್ ಫೆಡರೇಶನ್(Saudi Arabian Football Federation) ಅಧ್ಯಕ್ಷ ಯಾಸರ್ ಅಲ್ ಮಿಸೆಹಲ್(Yasser Al Misehal) ಸ್ಪಷ್ಟನೆ ನೀಡಿದ್ದಾರೆ.

ಒಟ್ಟು 48 ತಂಡಗಳು ಭಾಗಿಯಾಗುವ 2034ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿವೆ. ಈ ಪೈಕಿ ಕನಿಷ್ಠ 10 ಪಂದ್ಯಗಳು ಭಾರತದಲ್ಲಿ ನಡೆಯಲಿದೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಎಲ್ಲ ಊಹಾಪೋಹಗಳಿಗೆ ಸ್ಪಷ್ಟನೆ ಸಿಕ್ಕಿದೆ. ಸೌದಿಯು ಒಂದೇ ದೇಶವಾಗಿ ಈ ಟೂರ್ನಿಯ ಆತಿಥ್ಯವಹಿಸಲಿದೆ ಎಂದು ಯಾಸರ್ ಅಲ್ ಮಿಸೆಹಲ್ ತಿಳಿಸಿದ್ದಾರೆ.

ಇದನ್ನೂ ಓದಿ ಫಿಫಾ ಅರ್ಹತಾ ಸುತ್ತಿನ ಪಂದ್ಯ; ಉರುಗ್ವೆ ವಿರುದ್ಧ ಆಘಾತಕಾರಿ ಸೋಲು ಕಂಡ ಮೆಸ್ಸಿ ಪಡೆ

ನವೆಂಬರ್ 9ರಂದು ನಡೆದಿದ್ದ ಎಐಎಫ್‌ಎಫ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಅವರು 2034ರ ವಿಶ್ವಕಪ್‌ಗೆ ಸಹ ಆತಿಥ್ಯ ವಹಿಸಲು ಭಾರತ ಯೋಚಿಸಬೇಕು ಎಂದು ಹೇಳಿದ್ದರು. ಅವರ ಈ ಹೇಳಿಕೆಯ ಬಳಿಕ ಭಾರತ ಕೂಡ 2034ರ ವಿಶ್ವಕಪ್​ಗೆ ಸಹ ಆತಿಥ್ಯವಹಿಸಿಕೊಳ್ಳಲಿದೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದು ಮಾಡಿತ್ತು. ಅಲ್ಲದೆ ಕೆಲ ಮಾಧ್ಯಮಗಳಲ್ಲಿ ಈ ಕುರಿತಾದ ಸುದ್ದಿಗಳು ಕೂಡ ಪ್ರಕಟಗೊಂಡಿದ್ದವು. ಆದರೆ ಈಗ ಎಲ್ಲ ಅನುಮಾನಕ್ಕೆ ತೆರೆ ಬಿದ್ದಿದೆ.

ಟೂರ್ನಿಗೆ ಸೌದಿ ಅರೇಬಿಯಾ ಏಕಮಾತ್ರ ರಾಷ್ಟ್ರವಾಗಿ ಆತಿಥ್ಯ ವಹಿಸುತ್ತದೆ. ನಮ್ಮಲ್ಲಿ ಬಹಳಷ್ಟು ನಗರಗಳು ಮತ್ತು ಹಲವು ಕ್ರೀಡಾಂಗಣಗಳಿವೆ. ನಮ್ಮ ಯೋಜನೆ ಟೂರ್ನಿಗೆ ಏಕೈಕ ಆತಿಥೇಯ ರಾಷ್ಟ್ರ ಆಗುವುದು” ಎಂದು ಅಲ್ ಮಿಸೆಹಲ್ ಹೇಳುವ ಮೂಲಕ ಭಾರತಕ್ಕೆ ಸಹ ಆತಿಥ್ಯದ ಅವಕಾಶ ನೀಡುವುದಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಅವರ ಈ ಹೇಳಿಕೆಯಿಂದಾಗಿ ಮೊದಲ ಬಾರಿಗೆ ಭಾರತದಲ್ಲಿ ಫಿಫಾ ಟೂರ್ನಿಯ ಪಂದ್ಯವನ್ನು ನಿರೀಕ್ಷೆ ಮಾಡಿದ್ದ ಫುಟ್ಬಾಲ್ ಅಭಿಮಾನಿಗಳಿಗೆ ನಿರಾಸೆಯಾಗಿದೆ.

2026ರ ಫಿಫಾ ಫುಟ್ಬಾಲ್​ ವಿಶ್ವಕಪ್​ನಲ್ಲಿ ಮಹತ್ವದ ಬದಲಾವಣೆ

2026ರಲ್ಲಿ ಅಮೆರಿಕದಲ್ಲಿ(USA) ನಡೆಯಲಿರುವ ಫಿಫಾ ವಿಶ್ವ ಕಪ್​ ಫುಟ್ಬಾಲ್​ ಟೂರ್ನಿಯಲ್ಲಿ(FIFA World Cup 2026) ಮಹತ್ವದ ಬದಲಾವಣೆ ಮಾಡಲಾಗಿದೆ. 2022ರಲ್ಲಿ ಕತಾರ್​ನಲ್ಲಿ ನಡೆದ ಕೂಟದಲ್ಲಿ 32 ತಂಡಗಳು ಪಾಲ್ಗೊಂಡಿದ್ದವು ಆದರೆ ಈ ಬಾರಿ ತಂಡಗಳ ಸಂಖ್ಯೆಯನ್ನು 48ಕ್ಕೆ ಏರಿಸಲಾಗಿದೆ ಫಿಫಾ ಈಗಾಗಲೇ ತಿಳಿಸಿದೆ.

2022ರ ಫಿಫಾ ವಿಶ್ವಕಪ್​ಗೆ​ ಅಮೆರಿಕ, ಕೆನಡಾ(Canada) ಮತ್ತು ಮೆಕ್ಸಿಕೋ(Mexico) ದೇಶಗಳು ಆತಿಥ್ಯ ವಹಿಸಿಕೊಳ್ಳಲಿವೆ. ಈ ಟೂರ್ನಿಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿರುವ ವಿವಾರವನ್ನು ಮಂಗಳವಾರ ಫಿಫಾ ಕೌನ್ಸಿಲ್ ತಿಳಿಸಿದೆ. ಹೊಸ ನಿಯಮದಂತೆ ಈ ಹಿಂದೆ ಇದ್ದ 16 ತಂಡಗಳ ಮೂರು ಗುಂಪನ್ನು 12 ತಂಡದ ನಾಲ್ಕು ಗುಂಪಾಗಿ ವಿಭಾಗಿಸಲಾಗಿದೆ. ಕತಾರ್​ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಒಟ್ಟು 64 ಪಂದ್ಯಗಳನ್ನು ಆಡಿಸಲಾಗಿತ್ತು. ಇದೀಗ ಹೊಸ ಬದಲಾವಣೆಯ ಪ್ರಕಾರ 104 ಪಂದ್ಯಗಳು ನಡೆಯಲಿವೆ.

ಪರಿಷ್ಕೃತ ಸ್ಪರ್ಧೆಯ ರಚನೆಯು ಹಲವು ದೇಶಗಳಿಗೆ ವಿಶ್ವಕಪ್ ಆಡುವ ಕನಸು ನನಸಾಗಿಸಲು ಸಹಾಯ ಮಾಡಲಿದೆ ಎಂದು ಫಿಫಾ ಕೌನ್ಸಿಲ್ ತಿಳಿಸಿದೆ. ಈ ಟೂರ್ನಿಯ ಪಂದ್ಯಗಳು ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ದೇಶಗಳ ಪ್ರಮುಖ 16 ನಗರಗಳಲ್ಲಿ ನಡೆಯಲಿವೆ. ಫಿಫಾ ವಿಶ್ವಕಪ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೂರ್ನಿಗೆ ಮೂರು ತಂಡಗಳು ಜಂಟಿಯಾಗಿ ಆತಿಥ್ಯ ವಹಿಸುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024 Final : ಐಪಿಎಲ್ ಫೈನಲ್​​ನಲ್ಲಿ ಕಡಿಮೆ ಸ್ಕೋರ್​ನ ಕಳಪೆ ದಾಖಲೆ ಬರೆದ ಸನ್​ರೈಸರ್ಸ್​ ಹೈದರಾಬಾದ್​​

IPL 2024 Final: ಬೆಂಗಳೂರು ವಿರುದ್ಧದ ಲೀಗ್ ಪಂದ್ಯದಲ್ಲಿ 3 ವಿಕೆಟ್​ಗೆ 287 ಸ್ಕೋರ್ ಮಾಡುವ ಮೂಲಕ ಐಪಿಎಲ್​ನಲ್ಲಿ ಅತ್ಯಧಿಕ ಮೊತ್ತವನ್ನು ಗಳಿಸಿದ ಎಸ್ಆರ್​ಎಚ್​​ ಬ್ಯಾಟರ್​ಗಳು ಈ ಋತುವಿನ ಅತಿದೊಡ್ಡ ವೇದಿಕೆಯಲ್ಲಿ ಪ್ರದರ್ಶನ ನೀಡಲು ವಿಫಲರಾದರು ಮತ್ತು ಕಡಿಮೆ ಮೊತ್ತಕ್ಕೆ ಔಟಾದರು. ಕೆಕೆಆರ್ ಪರ ಮಿಚೆಲ್ ಸ್ಟಾರ್ಕ್, ಆಂಡ್ರೆ ರಸೆಲ್ ಹಾಗೂ ಹರ್ಷಿತ್ ರಾಣಾ ಭರ್ಜರಿ ಬೌಲಿಂಗ್​ ಮಾಡಿದರು.

VISTARANEWS.COM


on

IPL 2024
Koo

ಚೆನ್ನೈ: ಐಪಿಎಲ್​ 2024ರ ಫೈನಲ್ ಪಂದ್ಯದಲ್ಲಿ (IPL 2024 Final) ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್​ ಹೈದರಾಬಾದ್ ತಂಡ 113 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್​ನಲ್ಲಿ ಅತ್ಯಂತ ಕಡಿಮೆ ಸ್ಕೋರ್ ಗಳಿಸಿದ ಕಳಪೆ ದಾಖಲೆಯನ್ನು ಬರೆಯಿತು. ಅಲ್ಲದೆ 11 ವರ್ಷಗಳ ಹಿಂದೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಫೈನಲ್​ನಲ್ಲಿ 125ರನ್​ಗಳಿಗೆ 9 ಕಳೆದುಕೊಂಡ ಕಳಪೆ ದಾಖಲೆಯನ್ನು ಮುರಿಯಿತು.

ಬೆಂಗಳೂರು ವಿರುದ್ಧದ ಲೀಗ್ ಪಂದ್ಯದಲ್ಲಿ 3 ವಿಕೆಟ್​ಗೆ 287 ಸ್ಕೋರ್ ಮಾಡುವ ಮೂಲಕ ಐಪಿಎಲ್​ನಲ್ಲಿ ಅತ್ಯಧಿಕ ಮೊತ್ತವನ್ನು ಗಳಿಸಿದ ಎಸ್ಆರ್​ಎಚ್​​ ಬ್ಯಾಟರ್​ಗಳು ಈ ಋತುವಿನ ಅತಿದೊಡ್ಡ ವೇದಿಕೆಯಲ್ಲಿ ಪ್ರದರ್ಶನ ನೀಡಲು ವಿಫಲರಾದರು ಮತ್ತು ಕಡಿಮೆ ಮೊತ್ತಕ್ಕೆ ಔಟಾದರು. ಕೆಕೆಆರ್ ಪರ ಮಿಚೆಲ್ ಸ್ಟಾರ್ಕ್, ಆಂಡ್ರೆ ರಸೆಲ್ ಹಾಗೂ ಹರ್ಷಿತ್ ರಾಣಾ ಭರ್ಜರಿ ಬೌಲಿಂಗ್​ ಮಾಡಿದರು. ಕುತೂಹಲಕಾರಿ ಸಂಗತಿಯೆಂದರೆ, ಐಪಿಎಲ್ 2024 ಫೈನಲ್​ನಲ್ಲಿ ಕೆಕೆಆರ್​​ ತಂಡ ಎಲ್ಲ ಬೌಲರ್​ಗಳು ವಿಕೆಟ್ ಪಡೆದರು.

ಐಪಿಎಲ್ ಫೈನಲ್​ನಲ್ಲಿ ಕನಿಷ್ಠ ಮೊತ್ತ

113/10 – ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ – 2024
125/9 – ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ – 2013
128/6 – ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ – 2016
129/8 – ಮುಂಬೈ ಇಂಡಿಯನ್ಸ್ ವಿರುದ್ಧ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ – 2017
130/9 – ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ – 2022

2013ರ ಐಪಿಎಲ್ ಫೈನಲ್​ನಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 148 ರನ್​ಗಳ ಗುರಿ ಬೆನ್ನಟ್ಟುವ ಹಾದಿಯಲ್ಲಿ ಚೆನ್ನೈ 23 ಸೋತಿತ್ತು. ಅದೇನೇ ಇದ್ದರೂ, ಕೋಲ್ಕತಾ ತನ್ನ ಮೂರನೇ ಪ್ರಶಸ್ತಿಯನ್ನು ಗೆಲ್ಲಲು 114 ರನ್​​ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಬೇಕಾಗಿದೆ. ಮತ್ತೊಂದೆಡೆ, ಹೈದರಾಬಾದ್ ತಂಡವು ಭಾನುವಾರ ಚೆನ್ನೈನಲ್ಲಿ ಇತಿಹಾಸವನ್ನು ಬರೆಯಲು ಬಯಸಿದರೆ ಪವಾಡದ ಅಗತ್ಯವಿದೆ.

ಇದನ್ನೂ ಓದಿ: Hardik Pandya : ಡೈವೋರ್ಸ್​ ಗಾಸಿಪ್​ ನಡುವೆ ಹಾರ್ದಿಕ್ ಪಾಂಡ್ಯ ನಾಪತ್ತೆ!

ಪಂದ್ಯದಲ್ಲಿ ಏನಾಯಿತು?

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ದೊಡ್ಡ ಸ್ಕೋರ್ ಬಾರಿಸಬೇಕೆನ್ನುವ ಎಸ್​ಆರ್​ಎಚ್​ ತಂಡದ ಆಸೆ ಕಮರಿ ಹೋಯಿತು. ಮಿಚೆಲ್ ಸ್ಟಾರ್ಕ್ ಅವರ ಮೊದಲ ಓವರ್​ನಲ್ಲಿಯೇ ಅಭಿಷೇಕ್​ ಶರ್ಮಾ 2 ರನ್ ಬಾರಿಸಿ ಔಟಾದರು. ಟ್ರಾವಿಸ್​ ಹೆಡ್​ ಮತ್ತೊಂದು ಬಾರಿ ವಿಫಲಗೊಂಡು ಶೂನ್ಯಕ್ಕೆ ಔಟಾದರು. ಅವರು ವೈಭವ್​ ಎಸೆತಕ್ಕೆ ವಿಕೆಟ್​ ಒಪ್ಪಿಸಿದರು. ಬಳಿಕಬಂದ ರಾಹುಲ್ ತ್ರಿಪಾಠಿ ಸ್ಟಾರ್ಕ್ ಎಸೆತಕ್ಕೆ ಕ್ಯಾಚ್​ ನೀಡಿ ಔಟಾಗುವ ಮೊದಲು 9 ರನ್ ಬಾರಿಸಿದ್ದರು. 21 ರನ್​ಗೆ 3 ವಿಕೆಟ್​ ಕಳೆದುಕೊಂಡ ಎಸ್​ಆರ್​ಎಚ್​ ಸಮಸ್ಯೆಗೆ ಸಿಲುಕಿತು. ಬಳಿಕ ಬಂದ ಮಾರ್ಕ್ರಮ್​ 20 ರನ್ ಬಾರಿಸಿದರೆ ಕ್ಲಾಸೆನ್​ 16 ರನ್​ಗೆ ಸೀಮಿತಗೊಂಡರು.

ಸತತವಾಗಿ ವಿಕೆಟ್​ ಕಳೆದುಕೊಂಡ ಕಾರಣ ಎಸ್​ಆರ್​ಎಚ್​ ತಂಡಕ್ಕೆ ಚೇತರಿಸಿಕೊಳ್ಳುವುದಕ್ಕೆ ಅವಕಾಶವೇ ಸಿಗಲಿಲ್ಲ. ಶಹಬಾಜ್​ ಅಹಮದ್ 8 ರನ್​ಗೆ ಸೀಮಿತಗೊಂಡರೆ ಇಂಪ್ಯಾಕ್ಟ್​ ಪ್ಲೇಯರ್​ ಸಮದ್​ 4 ರನ್​ಗೆ ಔಟಾದರು. ಅಂತಿಮವಾಗಿ ನಾಯಕ ಪ್ಯಾಟ್​ ಕಮಿನ್ಸ್​ 19 ಎಸೆತಕ್ಕೆ 24 ರನ್ ಬಾರಿಸಿ ತಂಡದ ಮೊತ್ತ 100ರ ಗಡಿ ದಾಟಲು ನೆರವಾದರು.

Continue Reading

ಕ್ರೀಡೆ

Hardik Pandya : ಡೈವೋರ್ಸ್​ ಗಾಸಿಪ್​ ನಡುವೆ ಹಾರ್ದಿಕ್ ಪಾಂಡ್ಯ ನಾಪತ್ತೆ!

Hardik Pandya : ವಿರಾಟ್ ಕೊಹ್ಲಿ ಕೂಡ ಮೊದಲ ಗುಂಪಿನೊಂದಿಗೆ ಹೊರಡುತ್ತಾರೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಅವರು ವಿಶ್ವಕಪ್​​ಗೆ ತೆರಳುವ ಆಟಗಾರ ಸಂಗಡ ಕಾಣಿಸಿಕೊಂಡಿಲ್ಲ. ಆದರೆ, ಅವರು ತಡವಾಗಿ ಹೋಗುತ್ತಾರೆ ಹಾಗೂ ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗುವುದಿಲ್ಲ ಎಂಬ ಮಾಹಿತಿ ಬಂದಿದೆ. ಇಷ್ಟೆಲ್ಲ ಆದರೂ ಪಾಂಡ್ಯ ಬಗ್ಗೆ ಯಾರೂ ಮಾತನಾಡುತ್ತಿಲ್ಲ.

VISTARANEWS.COM


on

Hardik Pandya
Koo

ಬೆಂಗಳೂರು: ನಾಯಕ ರೋಹಿತ್ ಶರ್ಮಾ, ವಿಕೆಟ್​ ಕೀಪರ್​ ರಿಷಭ್ ಪಂತ್ ಮತ್ತು ಆಲ್ರೌಂಡರ್ ಶಿವಂ ದುಬೆ ಸೇರಿದಂತೆ ಭಾರತೀಯ ಕ್ರಿಕೆಟಿಗರ ಮೊದಲ ಗುಂಪು ಅಮೆರಿಕಕ್ಕೆ ಪ್ರಯಾಣಿಸಿದೆ. ಅವರೆಲ್ಲರೂ ಜೂನ್ 1 ರಿಂದ ಆರಂಭವಾಗಲಿರುವ ಐಸಿಸಿ ಟಿ 20 ವಿಶ್ವಕಪ್ 2024 ಗಾಗಿ ಸಿದ್ಧತೆ ಪ್ರಾರಂಭಿಸಿದ್ದಾರೆ. ಅದಕ್ಕೂ ಮೊದಲು ಅವರು ಮುಮಬೈ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದರು. ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್​ ಕೂಡ ನಿಯೋಗದಲ್ಲಿದ್ದರು. ಆದರೆ, ಹಾರ್ದಿಕ್ ಪಾಂಡ್ಯ (Hardik Pandya ) ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲ.

ವಿರಾಟ್ ಕೊಹ್ಲಿ ಕೂಡ ಮೊದಲ ಗುಂಪಿನೊಂದಿಗೆ ಹೊರಡುತ್ತಾರೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಅವರು ವಿಶ್ವಕಪ್​​ಗೆ ತೆರಳುವ ಆಟಗಾರ ಸಂಗಡ ಕಾಣಿಸಿಕೊಂಡಿಲ್ಲ. ಆದರೆ, ಅವರು ತಡವಾಗಿ ಹೋಗುತ್ತಾರೆ ಹಾಗೂ ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗುವುದಿಲ್ಲ ಎಂಬ ಮಾಹಿತಿ ಬಂದಿದೆ. ಇಷ್ಟೆಲ್ಲ ಆದರೂ ಪಾಂಡ್ಯ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಪಾಂಡ್ಯ – ನತಾಶಾ ದಂಪತಿ ಪ್ರತ್ಯೇಕಗೊಂಡಿದ್ದಾರೆ ಎಂಬ ಮಾಹಿತಿ ಹರಡುತ್ತಿರುವ ನಡುವೆಯೇ ಅವರು ನಾಪತ್ತೆಯಾಗಿದ್ದಾರೆ.

ಭಾರತ ತಂಡದ ಮೊದಲ ನಿಯೋಗದ ಆಟಗಾರರು ನ್ಯೂಯಾರ್ಕ್​ಗೆ ತೆರಳುವ ವಿಮಾನ ಹಿಡಿಯುವ ಮೊದಲು ತಂಡವು ದುಬೈಗೆ ಹಾರಲಿದ್ದಾರೆ. ಅಲ್ಲೀಂದ ಯುಎಸ್​ಎಗೆ ಪ್ರಯಾಣ ಮಾಡಿ ಅಭ್ಯಾಸ ಪಂದ್ಯ ಸಮೇತ ವಿಶ್ವ ಕಪ್​ ಗೆಲ್ಲುವ ಹಾದಿಯಲ್ಲಿ ತಮ್ಮ ಶ್ರಮ ವಹಿಸಲಿದ್ದಾರೆ.

ಹಾರ್ದಿಕ್ ಪಾಂಡ್ಯ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ.. ಆದಾಗ್ಯೂ ಅವರು ವೇಗದ ಬೌಲಿಂಗ್ ಆಲ್​ರೌಂಡರ್ ಆಯ್ಕೆಯಾಗಿ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಇದು ಸ್ವಲ್ಪ ಮಟ್ಟಿಗೆ ಚರ್ಚೆಯ ಸಂಗತಿಯಾಯಿತು. ಇದೀಗ ಅವರ ಇರುವಿಕೆ ಪತ್ತೆಯಾಗದ ಕಾರಣ ಹೇಗೆ ಆಡುವರೆಂಬ ಚರ್ಚೆ ಶುರುವಾಗಿದೆ.

ಪಾಂಡ್ಯ ಎಲ್ಲಿ?

ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಪ್ಲೇಆಫ್​ಗೆ ಪ್ರವೇಶಿಸಲು ವಿಫಲವಾಯಿತು. 10ನೇ ಸ್ಥಾನ ಪಡೆದು ಹೀನಾಯ ಪ್ರದರ್ಶನವೊಂದಿಗೆ ಅಭಿಯಾನ ಅಂತ್ಯಗೊಳಿಸಿತು. ಅಲ್ಲಿಂದ ಬಳಿಕ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲ. ಐಪಿಎಲ್​ನ 17 ನೇ ಋತುವಿನಲ್ಲಿ ಹಾರ್ದಿಕ್ ಪಾಂಡ್ಯ ದಯನೀಯವಾಗಿ ವಿಫಲರಾದರು. ಎಂಐ ಪಾಯಿಂಟ್ಸ್ ಟೇಬಲ್​ನಲ್ಲಿ ಕೊನೇ ಸ್ಥಾನದಲ್ಲಿತ್ತು. ಆ ವೇಳೆ ಅವರ ಪ್ರದರ್ಶನದ ಬಗ್ಗೆ ಮಾತ್ರ ಚರ್ಚೆನಡೆಯುತ್ತಿತ್ತು. ಇದೀಗ ಅವರ ದಾಂಪತ್ಯ ಜೀವನದ ಬಗ್ಗೆ ಜೋರು ಚರ್ಚೆ ನಡೆಯುತ್ತಿವೆ.

ಇದನ್ನೂ ಓದಿ: Yashasvi Jaiswal : ಚೆನ್ನೈ ಏರ್​ಪೋರ್ಟ್​​ನಲ್ಲಿ ಗೆಳತಿಯೊಂದಿಗೆ ಕಾಣಿಸಿಕೊಂಡ ಯಶಸ್ವಿ ಜೈಸ್ವಾಲ್​; ಇಲ್ಲಿದೆ ವಿಡಿಯೊ

ಹಾರ್ದಿಕ್ ಪಾಂಡ್ಯ ಅಥವಾ ನತಾಶಾ ಈ ಬಗ್ಗೆ ಹೇಳಿಕೆ ನೀಡಿ್ಲ. ಪಾಂಡ್ಯ ತರಬೇತಿಗಾಗಿ ಲಂಡನ್​ಗೆ ಹೋಗಿದ್ದಾರೆ ಮತ್ತು ಅಲ್ಲಿಂದ ನೇರವಾಗಿ ತಂಡ ಸೇರಿಕೊಳ್ಳಲಿದ್ದಾರೆ ಎಂದು ವರದಿಗಳು ಸೂಚಿಸಿವೆ. ಆದರೆ, ಅದಕ್ಕೆ ಒಂದು ಖಾತರಿ ಇಲ್ಲದಾಗಿದೆ. ರಾಜಸ್ಥಾನ್ ರಾಯಲ್ಸ್ ಆಟಗಾರರಾದ ಸಂಜು ಸ್ಯಾಮ್ಸನ್, ಯಜುವೇಂದ್ರ ಚಾಹಲ್, ಅವೇಶ್ ಖಾನ್ ಮತ್ತು ಯಶಸ್ವಿ ಜೈಸ್ವಾಲ್ ಎರಡನೇ ಬ್ಯಾಚ್​​ನಲ್ಲಿ ಹೋಗಲಿದ್ದಾರೆ.

ವಿಶ್ವ ಕಪ್​ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

Continue Reading

ಪ್ರಮುಖ ಸುದ್ದಿ

Yashasvi Jaiswal : ಚೆನ್ನೈ ಏರ್​ಪೋರ್ಟ್​​ನಲ್ಲಿ ಗೆಳತಿಯೊಂದಿಗೆ ಕಾಣಿಸಿಕೊಂಡ ಯಶಸ್ವಿ ಜೈಸ್ವಾಲ್​; ಇಲ್ಲಿದೆ ವಿಡಿಯೊ

Yashasvi Jaiswal : ಜೈಸ್ವಾಲ್​ ಗೆಳತಿ ಮ್ಯಾಡಿ ಹ್ಯಾಮಿಲ್ಟನ್ ಆಗಾಗೆ ಐಪಿಎಲ್ ಪಂದ್ಯಗಳ ಸ್ಟ್ಯಾಂಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತರೆ. ಜೈಸ್ವಾಲ್ ಮತ್ತು ಅವರ ತಂಡವನ್ನು ಹುರಿದುಂಬಿಸುತ್ತಿದ್ದಾರೆ. ಅವರು ಅವರನ್ನು ಬೆಂಬಲಿಸುತ್ತಿರುವುದು ಇದೇ ಮೊದಲಲ್ಲ, ಅವರು ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಸಮಯದಲ್ಲಿಯೂ ಹಾಜರಿದ್ದರು.

VISTARANEWS.COM


on

Yashasvi Jaiswal
Koo

ಬೆಂಗಳೂರು: ಐಪಿಎಲ್​ ಪ್ರಶಸ್ತಿ ಗೆಲ್ಲುವ ರಾಜಸ್ಥಾನ್ ರಾಯಲ್ಸ್ ತಂಡದ ಆಸೆ ಕಮರಿ ಹೋದ ಬಳಿಕ ಆ ತಂಡದ ಆಟಗಾರರು ತಮ್ಮ ತಮ್ಮ ನೆಲೆಗಳಿಗೆ ಹೋರಟು ಹೋಗಿದ್ದಾರೆ. ಅದರಲ್ಲಿ ಯಶಸ್ವಿ ಜೈಸ್ವಾಲ್ (Yashasvi Jaiswal) ಮತ್ತು ಸಂಜು ಸ್ಯಾಮ್ಸನ್​ ಟೀಮ್​ ಇಂಡಿಯಾಕ್ಕೆ ಟಿ20 ವಿಶ್ವ ಕಪ್​ಗಾಗಿ ಆಯ್ಕೆಯಾಗಿದ್ದಾರೆ. ಚೆನ್ನೈನಲ್ಲಿ ನಡೆದ ಪ್ಲೇಆಫ್​ 2ನೇ ಪಂದ್ಯದಲ್ಲಿ ಪಂದ್ಯದಲ್ಲಿ ಆರ್​ಆರ್ ತಂಡ ಸೋತ ಬಳಿಕ ಆಟಗಾರರು ಚೆನ್ನೈ ವಿಮಾನ ನಿಲ್ದಾಣದ ಮೂಲಕ ತಮ್ಮ ಊರುಗಳಿಗೆ ತೆರಳಿದ್ದರು. ಅಂತೆಯೇ ಯಶಸ್ವಿ ಜೈಸ್ವಾಲ್​ ಕೂಡ ಅದೇ ನಿಲ್ದಾಣದ ಮೂಲಕ ಹೋಗಿದ್ದರು. ಈ ವೇಳೆ ಅವರ ಜತೆ ಗೆಳತಿಯೂ ಜತೆಗಿದ್ದರು. ಅವರಿಬ್ಬರು ಜತೆಯಾಗಿ ಹೋಗುವ ವಿಡಿಯೊ ವೈರಲ್ ಆಗಿದೆ.

ಜೈಸ್ವಾಲ್​ ಗೆಳತಿ ಮ್ಯಾಡಿ ಹ್ಯಾಮಿಲ್ಟನ್ ಆಗಾಗೆ ಐಪಿಎಲ್ ಪಂದ್ಯಗಳ ಸ್ಟ್ಯಾಂಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತರೆ. ಜೈಸ್ವಾಲ್ ಮತ್ತು ಅವರ ತಂಡವನ್ನು ಹುರಿದುಂಬಿಸುತ್ತಿದ್ದಾರೆ. ಅವರು ಅವರನ್ನು ಬೆಂಬಲಿಸುತ್ತಿರುವುದು ಇದೇ ಮೊದಲಲ್ಲ, ಅವರು ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಸಮಯದಲ್ಲಿಯೂ ಹಾಜರಿದ್ದರು. ಹ್ಯಾಮಿಲ್ಟನ್ ಅವರೊಂದಿಗಿನ ಸಂಬಂಧದ ಬಗ್ಗೆ ವದಂತಿಗಳನ್ನು ಜೈಸ್ವಾಲ್ ಇನ್ನೂ ಸಾರ್ವಜನಿಕವಾಗಿ ಹೇಳಿಕೊಳ್ಳದೇ ಹೋದರೂ ಸಾಮಾಜಿಕ ಮಾಧ್ಯಮಗಳು ಹಲವಾರು ಊಹಾಪೋಹಗಳನ್ನು ಸೃಷ್ಟಿಸುತ್ತಿವೆ.

ಇದನ್ನೂ ಓದಿ: Jos Butler: ಟಿ20 ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ಇಂಗ್ಲೆಂಡ್​ ತಂಡದ ನಾಯಕ ಬಟ್ಲರ್​

ಕ್ರಿಕೆಟ್​ ಪ್ರೇಕ್ಷಕರು ಹ್ಯಾಮಿಲ್ಟನ್ ಅವರ ಸೌಂದರ್ಯದ ಬಗ್ಗೆಯೂ ಮೆಚ್ಚುಗೆಯ ಮಾತನಾಡಿದ್ದಾರೆ. ಯುವ ಕ್ರಿಕೆಟಿಗನೊಂದಿಗಿನ ಅವರ ಸಂಪರ್ಕವನ್ನು ಚರ್ಚಿಸುತ್ತಿದ್ದಾರೆ. ಈ ಜೋಡಿ ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳು ಕೇಳಿ ಬಂದಿವೆ. 22ರ ಹರೆಯದ ಜೈಸ್ವಾಲ್ 15 ಇನ್ನಿಂಗ್ಸ್​ಗಳಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕ ಸೇರಿದಂತೆ 155.91ರ ಸ್ಟ್ರೈಕ್ ರೇಟ್​ನೊಂದಿಗೆ 435 ರನ್ ಗಳಿಸಿದ್ದಾರೆ.

ಜೂನ್ 1 ರಿಂದ ಪ್ರಾರಂಭವಾಗುವ ಮುಂಬರುವ ಟಿ 20 ವಿಶ್ವಕಪ್ 2024 ಗಾಗಿ ಜೈಸ್ವಾಲ್ ಶೀಘ್ರದಲ್ಲೇ ಯುಎಸ್ಎಗೆ ತೆರಳಲಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡ ಐರ್ಲೆಂಡ್ ವಿರುದ್ಧ ಸೆಣಸಲಿದೆ.

ಕೊಹ್ಲಿಯ ಸಾಧನೆ ಸರಿಗಟ್ಟಿದ ಯಶಸ್ವಿ ಜೈಸ್ವಾಲ್​

ರಾಂಚಿ: ಇಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಗೆಲುವು ಸಾಧಿಸಿದೆ. ಇದರೊಂದಿಗೆ ಸರಣಿ ಭಾರತದ ಕೈವಶವಾಗಿದೆ. 192 ರನ್​​ಗಳ ಸವಾಲಿನ ಗುರಿ ಬೆನ್ನಟ್ಟಿದ ಭಾರತಕ್ಕೆ ಯಶಸ್ವಿ ಜೈಸ್ವಾಲ್ (Yashasvi Jaiswal) ಆರಂಭಿಕರಾಗಿ ಕಣಕ್ಕೆ ಇಳಿದು 44 ರನ್ ಗಳಿಸಿದರು. ರೋಹಿತ್ ಶರ್ಮಾ ಜತೆ ಶಾಂತವಾಗಿ ಆಡಿದ ಅವರು ಆರಂಭಿಕ ವಿಕೆಟ್​ಗೆ 84 ರನ್​ ಬಾರಿಸಿದರು.

ಗೆಲುವಿನಲ್ಲಿ ರೋಹಿತ್ ಶರ್ಮಾ ಅವರ 55 ರನ್​, ಶುಭ್ಮನ್ ಗಿಲ್ ಅವರ ಅಜೇಯ 52 ಮತ್ತು ಧ್ರುವ್ ಜುರೆಲ್ ಅವರ ಉಪಯುಕ್ತ 35 ರನ್​ಗಳಿವೆ. ಇವೆಲ್ಲದರ ನಡುವೆ ಯಶಸ್ವಿ ಜೈಸ್ವಾಲ್​ ಭಾರತ ಪರ ವಿಶೇಷ ಸಾಧನೆ ಮಾಡಿದ್ದಾರೆ. ಈ ಹಾದಿಯಲ್ಲಿ ಅವರು ಮಾಜಿ ನಾಯಕ ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ್ದಾರೆ.

ಜೈಸ್ವಾಲ್​ ನಾಲ್ಕು 50+ ಸ್ಕೋರ್ ಮತ್ತು ಎರಡು ದ್ವಿಶತಕಗಳೊಂದಿಗೆ, ಜೈಸ್ವಾಲ್ ಪ್ರಸ್ತುತ ಸರಣಿಯಲ್ಲಿ 93.57 ಸರಾಸರಿಯಲ್ಲಿ 655 ರನ್ ಗಳಿಸಿದ್ದಾರೆ. 2016/17ರಲ್ಲಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು. ಜೈಸ್ವಾಲ್​ ಸರಣಿಯಲ್ಲಿ ಇನ್ನೂ ಒಂದು ಪಂದ್ಯವನ್ನು ಹೊಂದಿದ್ದಾರೆ. ಅಂದರೆ ಅವರು ವಿರಾಟ್ ಕೊಹ್ಲಿಯನ್ನು ಮೀರಿಸುತ್ತಾರೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ದ್ವಿಪಕ್ಷೀಯ ಸರಣಿಯಲ್ಲಿ ನಿರ್ವಿವಾದ

Continue Reading

ಪ್ರಮುಖ ಸುದ್ದಿ

Jos Butler: ಟಿ20 ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ಇಂಗ್ಲೆಂಡ್​ ತಂಡದ ನಾಯಕ ಬಟ್ಲರ್​

VISTARANEWS.COM


on

Jos Butler
Koo

ಬೆಂಗಳೂರು: ಬಲಗೈ ಬ್ಯಾಟರ್​ ಜೋಸ್ ಬಟ್ಲರ್ ಆಧುನಿಕ ಪೀಳಿಗೆಯ ಅತ್ಯುತ್ತಮ ವೈಟ್-ಬಾಲ್ ಬ್ಯಾಟರ್​ಗಳಲ್ಲಿ ಒಬ್ಬರು. ಅವರು ಜೂನ್ 2 ರಿಂದ ಪ್ರಾರಂಭವಾಗಲಿರುವ ಟಿ 20 ವಿಶ್ವಕಪ್ 2024 ರಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಅವರ ನಾಯಕತ್ವದಲ್ಲಿ ತಂಡ ವಿಶ್ವ ಕಪ್​ ಟ್ರೋಫಿಯನ್ನು ಉಳಿಸಿಕೊಳ್ಳುವುದಕ್ಕೆ ಯತ್ನಿಸಲಿದೆ. ಹಿಂದಿನ ಬಾರಿ ಬೆನ್​ಸ್ಟೋಕ್ಸ್ ನೇತೃತ್ವದಲ್ಲಿ ಇಂಗ್ಲೆಂಡ್​ ತಂಡ ಹಿಂದಿನ ಆವೃತ್ತಿಯಲ್ಲಿ ಕಪ್​ ಗೆದ್ದಿತ್ತು. ಅವರೀಗ ಟಿ20ಐನಲ್ಲಿ 3000 ರನ್ ಗಡಿ ದಾಟಿದ ಇಂಗ್ಲೆಂಡ್​ನ ಮೊದಲ ಬ್ಯಾಟರ್​​ ಎಂಬ ಹೆಗ್ಗಳಿಕೆಗೆ ಬಟ್ಲರ್ ಪಾತ್ರರಾಗಿದ್ದಾರೆ.

ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ 2 ನೇ ಟಿ 20 ಪಂದ್ಯದಲ್ಲಿ ಜೋಸ್ ಬಟ್ಲರ್ ಕೇವಲ 51 ಎಸೆತಗಳಲ್ಲಿ 84 ರನ್ ಗಳಿಸಿ ಪಾಕಿಸ್ತಾನ ವಿರುದ್ಧದ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಟ್ಲರ್ ಈಗ ಟಿ 20 ಪಂದ್ಯಗಳಲ್ಲಿ ಒಂಬತ್ತನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ. 106 ಇನ್ನಿಂಗ್ಸ್​ಗಳಲ್ಲಿ 35.42 ಸರಾಸರಿ ಮತ್ತು 145.10 ಸ್ಟ್ರೈಕ್ ರೇಟ್​ಪ್ರಕಾರ 3011 ರನ್ ಗಳಿಸಿದ್ದಾರೆ.

ಬಟ್ಲರ್ ಟಿ 20 ಪಂದ್ಯಗಳಲ್ಲಿ ತಮ್ಮ ಹೆಸರಿನಲ್ಲಿ ಒಂದು ಶತಕದ ದಾಖಲೆಯನ್ನೂ ಹೊಂದಿದ್ದಾರೆ. ಈ ಬಾರಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರನಾಗಲಿದ್ದಾರೆ. ಅವರ ಬ್ಯಾಟಿಂಗ್ ಪ್ರದರ್ಶನ ಉತ್ತಮವಾಗಿರುವ ಕಾರಣ ಅವಕಾಶ ಹೆಚ್ಚಿದೆ.

ಇದನ್ನೂ ಓದಿ: Virat kohli : ಬ್ರೇಕ್​ ತೆಗೆದುಕೊಂಡ ಕೊಹ್ಲಿ, ಅಭ್ಯಾಸ ಪಂದ್ಯಕ್ಕೆ ಅನುಮಾನ

ಐಪಿಎಲ್ಗೂ ಮುನ್ನ ಬಟ್ಲರ್ ಐಪಿಎಲ್ 2024ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಅಲ್ಲಿ ಅವರು ಎರಡು ಶತಕಗಳನ್ನು ಬಾರಿಸಿದ್ದರು. ಲೀಡ್ಸ್​​ನಲ್ಲಿ ನಡೆದ ಮೊದಲ ಪಂದ್ಯ ರದ್ದಾದ ನಂತರ ಇಂಗ್ಲೆಂಡ್ ನಾಲ್ಕು ಪಂದ್ಯಗಳ ಟಿ 20 ಐ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ಮೂರನೇ ಪಂದ್ಯ ಕಾರ್ಡಿಫ್​​ನಲ್ಲಿ ನಡೆಯಲಿದ್ದು, ಉಳಿದ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ನಾಯಕ ತನ್ನ ಬ್ಯಾಟಿಂಗ್ ಪ್ರದರ್ಶನ ಹೇಗೆ ನೀಡುತ್ತಾರೆ ಎಂದು ಕಾದು ನೋಡಬೇಕಷ್ಟೆ.

ಐಪಿಎಲ್​ ನಡುವೆಯೇ ಹೆಸರು ಬದಲಾಯಿಸಿಕೊಂಡ ಜೋಸ್ ಬಟ್ಲರ್​

ಮುಂಬಯಿ: ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಸಾಕಷ್ಟು ಸಂದರ್ಭದಲ್ಲಿ ತಪ್ಪು ಹೆಸರನ್ನು ಕರೆದ ಬಳಿಕ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುವುದಕ್ಕೆ ನಿರ್ಧರಿಸಿಕೊಂಡರು. ಇಂಗ್ಲೆಂಡ್ ಪರ 57 ಟೆಸ್ಟ್, 181 ಏಕದಿನ ಹಾಗೂ 114 ಟಿ20 ಪಂದ್ಯಗಳನ್ನು ಆಡಿದ್ದಾರೆ ಜೋಸ್ ಬಟ್ಲರ್​. ಜೂನ್​ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ವಿಕೆಟ್ ಕೀಪರ್ ಬ್ಯಾಟರ್​ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಅವರೀಗ ಏಕಾಏಕಿ ಹೆಸರನ್ನು ಬದಲಿಸಿಕೊಂಡಿದ್ದಾರೆ.

ನಾನು ಇಂಗ್ಲೆಂಡ್ ತಂಡದ ವೈಟ್ ಬಾಲ್ ನಾಯಕ. ಇಲ್ಲಿಯವರೆಗೆ ನನ್ನನ್ನು ತಪ್ಪು ಹೆಸರಿನೊಂದಿಗೆ ಕರೆಯಲಾಗುತ್ತಿತ್ತು . ನನ್ನ ಹುಟ್ಟುಹಬ್ಬದ ಕಾರ್ಡ್ ನಲ್ಲಿ ಬೀದಿಯಲ್ಲಿರುವ ಜನರಿಂದ ಹಿಡಿದು ನನ್ನ ತಾಯಿಯವರೆಗೆ. ಪ್ರಿಯ ಜೋಶ್ ಎಂದು ಕರೆಯಬೇಕು. ಇಂಗ್ಲೆಂಡ್ ಪರ 13 ವರ್ಷಗಳ ಕಾಲ ಆಡಿದ ನಂತರ ಮತ್ತು ಎರಡು ವಿಶ್ವಕಪ್ ಪಂದ್ಯಗಳನ್ನು ಗೆದ್ದ ನಂತರ, ನಾನು ಸಮಸ್ಯೆಯನ್ನು ಪರಿಹರಿಸಲು ನಿರ್ಧರಿಸಿದ್ದೇನೆ. ನಾನು ಅಧಿಕೃತವಾಗಿ ಜೋಶ್ ಬಟ್ಲರ್​ ಎಂದು ಹೇಳಿಕೊಂಡಿದ್ದಾರೆ.

Continue Reading
Advertisement
The Kapil Sharma Show
ದೇಶ14 mins ago

Physical Abuse: ಕಪಿಲ್‌ ಶರ್ಮಾ ಶೋನಲ್ಲಿ ಪಾತ್ರ ಕೊಡುವುದಾಗಿ ನಂಬಿಸಿ ಮಹಿಳೆ ಮೇಲೆ ಅತ್ಯಾಚಾರ

IPL 2024
ಕ್ರೀಡೆ17 mins ago

IPL 2024 Final : ಐಪಿಎಲ್ ಫೈನಲ್​​ನಲ್ಲಿ ಕಡಿಮೆ ಸ್ಕೋರ್​ನ ಕಳಪೆ ದಾಖಲೆ ಬರೆದ ಸನ್​ರೈಸರ್ಸ್​ ಹೈದರಾಬಾದ್​​

Hardik Pandya
ಕ್ರೀಡೆ1 hour ago

Hardik Pandya : ಡೈವೋರ್ಸ್​ ಗಾಸಿಪ್​ ನಡುವೆ ಹಾರ್ದಿಕ್ ಪಾಂಡ್ಯ ನಾಪತ್ತೆ!

Rain News
ಕರ್ನಾಟಕ1 hour ago

Rain News: ಮಳೆ ಅವಾಂತರ; ಮನೆಯ ಶೀಟ್‌ ಮೇಲಿದ್ದ ಕಲ್ಲು ಬಿದ್ದು ಬಾಲಕಿ ಸಾವು

Phalody Satta Bazar
ದೇಶ1 hour ago

Phalodi Satta Bazar: ಮೋದಿಗೆ 330 ಸೀಟು ಖಚಿತ ಎಂದ ಸಟ್ಟಾ ಬಜಾರ್‌ ಸಮೀಕ್ಷೆ; ರಾಜ್ಯವಾರು ವರದಿ ಇಲ್ಲಿದೆ

Shivamogga News
ಕರ್ನಾಟಕ2 hours ago

Shivamogga News: ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಹುಚ್ಚಾಟ ಮೆರೆದ ಯುವಕ; ಥಳಿಸಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

turbulence
ಪ್ರಮುಖ ಸುದ್ದಿ2 hours ago

Turbulence: ಟರ್ಬುಲೆನ್ಸ್‌ಗೆ ತುತ್ತಾದ ಮತ್ತೊಂದು ವಿಮಾನ; 12 ಮಂದಿಗೆ ಗಂಭೀರ ಗಾಯ

FIR Filed
ದೇಶ2 hours ago

FIR Filed: ದೇಗುಲದಲ್ಲಿ ಸ್ತ್ರೀಯರು ಬಟ್ಟೆ ಬದಲಿಸೋ ಜಾಗದಲ್ಲಿ ಸಿಸಿಟಿವಿ ಇಟ್ಟ ಅರ್ಚಕ; ಕೀಚಕ ಕೃತ್ಯಕ್ಕೆ ಬಿತ್ತು ಕೇಸ್!

Yashasvi Jaiswal
ಪ್ರಮುಖ ಸುದ್ದಿ2 hours ago

Yashasvi Jaiswal : ಚೆನ್ನೈ ಏರ್​ಪೋರ್ಟ್​​ನಲ್ಲಿ ಗೆಳತಿಯೊಂದಿಗೆ ಕಾಣಿಸಿಕೊಂಡ ಯಶಸ್ವಿ ಜೈಸ್ವಾಲ್​; ಇಲ್ಲಿದೆ ವಿಡಿಯೊ

Rain News
ಕರ್ನಾಟಕ3 hours ago

Rain News: ಚಿತ್ತಾಪುರದಲ್ಲಿ ಸಿಡಿಲು ಬಡಿದು ಇಬ್ಬರ ದುರ್ಮರಣ; ಹೊತ್ತಿ ಉರಿದ ತೆಂಗಿನ ಮರ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ5 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 hours ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ5 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌