ಶಿಕ್ಷಣಪ್ರೇಮಿ, ಏಕೀಕರಣ ಹೋರಾಟಗಾರ ಮಾರುತಿರಾವ್‌ ಮಾಲೆ ನಿಧನ - Vistara News

ಕಲಬುರಗಿ

ಶಿಕ್ಷಣಪ್ರೇಮಿ, ಏಕೀಕರಣ ಹೋರಾಟಗಾರ ಮಾರುತಿರಾವ್‌ ಮಾಲೆ ನಿಧನ

ರಾಷ್ಟ್ರ ಏಕೀಕರಣ ಸಂದರ್ಭದಲ್ಲಿ ಏಕೀಕರಣಕ್ಕೆ ವಿರೋಧಿಸಿ ಹಿಂಸಾಚಾರ ನಡೆಸುತ್ತಿದ್ದ ನಿಜಾಮರ‌ ವಿರುದ್ಧ ಧೀರತನದಿಂದ ಹೋರಾಟ ನಡೆಸಿದ್ದರು.

VISTARANEWS.COM


on

marutirao male
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಲಬುರಗಿ: ಶಿಕ್ಷಣಪ್ರೇಮಿ, ಮಾಜಿ ಎಂಎಲ್‌ಸಿ, ರಾಷ್ಟ್ರ ಏಕೀಕರಣ ಹೋರಾಟಗಾರ ಮಾರುತಿರಾವ್ ಡಿ. ಮಾಲೆ ಅವರು ನಿಧನರಾಗಿದ್ದಾರೆ. ಮೃತರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದರು.

ಬೀದರ್ ಜಿಲ್ಲೆಯ ಘಾಟಬೊರಾಳ್ ಗ್ರಾಮದ ನಿವಾಸಿ, 83 ವರ್ಷದ ಮಾರುತಿರಾವ್ ಡಿ. ಮಾಲೆ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾಗಿದ್ದರು. ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯನ್ನು ಸ್ಥಾಪಿಸಿ ಅದರ ಫೌಂಡರ್ ಜೆನರಲ್ ಸೆಕ್ರೆಟರಿ ಆಗಿದ್ದ ಮಾರುತಿರಾವ್ ಮಾಲೆ ಹತ್ತು ಹಲವು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಸಾವಿರಾರು ಜನರಿಗೆ ವಿದ್ಯಾದಾನ ಮಾಡಿದ್ದರು.

ರಾಷ್ಟ್ರ ಏಕೀಕರಣ ಸಂದರ್ಭದಲ್ಲಿ ಏಕೀಕರಣಕ್ಕೆ ವಿರೋಧಿಸಿ ಹಿಂಸಾಚಾರ ನಡೆಸುತ್ತಿದ್ದ ನಿಜಾಮರ‌ ವಿರುದ್ಧ ಧೀರತನದಿಂದ ಹೋರಾಟ ನಡೆಸಿದ್ದರು. ಕಳೆದ ಕೆಲ‌ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾರುತಿರಾವ್‌, ನಿನ್ನೆ ರಾತ್ರಿ ಕೊನೆಯುಸಿರು ಎಳೆದರು.

ಕಲಬುರಗಿ ಜಿಲ್ಲೆಯ ಹಾರುತಿ ಹಡಗಿಲ್ ಗ್ರಾಮದಲ್ಲಿ ಮಾರುತಿರಾವ್ ಮಾಲೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ. ಇಂದು 11 ಗಂಟೆಗೆ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಗೃಹಸಚಿವ ಜಿಪರಮೇಶ್ವರ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿ ಎಂ.ಫಾತಿಮಾ ಬೀವಿ ನಿಧನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ ಸೇರಿ ವಿವಿಧೆಡೆ ಮಳೆ ಅಬ್ಬರ; ಆರೆಂಜ್‌ ಅಲರ್ಟ್‌ ಘೋಷಣೆ

Karnataka Weather Forecast : ಕರಾವಳಿ, ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಜೂನ್‌ 27ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

VISTARANEWS.COM


on

By

karnataka Weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ (Heavy Rain Alert) ಸಾಧ್ಯತೆಯಿದೆ. ಪ್ರತ್ಯೇಕ ಕಡೆಗಳಲ್ಲಿ ವ್ಯಾಪಕ (Rain News) ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಹಗುರದಿಂದ ಮಧ್ಯಮ ಮಳೆಯಾದರೆ, ಉತ್ತರ ಒಳನಾಡಿನ ಹಗುರದಿಂದ ಕೂಡಿದ ಮಳೆಯಾಗುವ ನಿರೀಕ್ಷೆ ಇದೆ. ರಾಜ್ಯದ ವಿವಿಧೆಡೆ ಗುಡುಗು ಸಹಿತ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನ ಭಾಗದಲ್ಲಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗಲಿದೆ. ಊತ್ತರ ಒಳನಾಡಿನ ಕೆಲ ಪ್ರದೇಶದಲ್ಲಿ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ. ಆದರೆ ಬೆಳಗಾವಿಯಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ.

ಮಲೆನಾಡಿನ ಜಿಲ್ಲೆಯಾದ್ಯಂತ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ವ್ಯಾಪಕ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 21 ಡಿಗ್ರಿ ಸೆಲಿಯಸ್‌ ಇರಲಿದೆ.

ಆರೆಂಜ್‌ ಅಲರ್ಟ್‌

ಗುಡುಗು ಸಹಿತ ಭಾರೀ ಮಳೆಯೊಂದಿಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ.

ಜೂನ್‌ 27ರವರೆಗೆ ಮೀನುಗಾರರಿಗೆ ಎಚ್ಚರಿಕೆ

ಜೂನ್‌ 27 ರವರೆಗೆ ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ

ಇದನ್ನೂ ಓದಿ: Tumkur Shoot out : ತುಮಕೂರಿನಲ್ಲಿ ಸದ್ದು ಮಾಡಿದ ಪೊಲೀಸ್ ತುಪಾಕಿ; ಸರಗಳ್ಳನ ಹೆಡೆಮುರಿ ಕಟ್ಟಿದ ಖಾಕಿ

ಮಾನ್ಸೂನ್‌ಗೂ ಕಾಲಿಟ್ಟ ಟ್ರೆಂಚ್‌ ಕೋಟ್‌ ಫ್ಯಾಷನ್‌!

ಮಳೆಗಾಲಕ್ಕೂ ಟ್ರೆಂಚ್‌ ಕೋಟ್‌ (Monsoon trench coat fashion) ಫ್ಯಾಷನ್‌ ಎಂಟ್ರಿ ನೀಡಿದೆ. ಹೌದು, ಕೇವಲ ಚಳಿಗಾಲದಲ್ಲಿ ಟ್ರೆಂಡಿಯಾಗುತ್ತಿದ್ದ, ಟ್ರೆಂಚ್‌ ಕೋಟ್‌ಗಳು ಇದೀಗ ಮಾನ್ಸೂನ್‌ ಸೀಸನ್‌ಗೂ ಕಾಲಿಟ್ಟಿದ್ದು, ಸೆಲೆಬ್ರೆಟಿಗಳನ್ನು ಮಾತ್ರವಲ್ಲ, ಸಾಮಾನ್ಯ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಇದಕ್ಕೆ ಪೂರಕ ಎಂಬಂತೆ, ಕಿಂಗ್‌ ಖಾನ್‌ ಮಗಳು ಹಾಗೂ ನಟಿ ಸುಹಾನಾ ಖಾನ್‌ ಟ್ರೆಂಚ್‌ ಕೋಟ್‌ ಧರಿಸಿದ್ದು, ಈ ಫ್ಯಾಷನ್‌ ಜೆನ್‌ ಜಿ ಹುಡುಗಿಯರನ್ನು ಸೆಳೆದಿದೆ. ಮಾನ್ಸೂನ್‌ನಲ್ಲೂ ಟ್ರೆಂಚ್‌ ಕೋಟ್‌ ಕ್ಲಾಸಿಯಾಗಿ ಕಾಣಿಸುತ್ತದೆ ಎಂಬುದನ್ನು ಪ್ರೂವ್‌ ಮಾಡಿದೆ.

Monsoon Trench Coat Fashion

ಟ್ರೆಂಚ್‌ಕೋಟ್‌ ವೆರೈಟಿ ವಿನ್ಯಾಸ

ಟ್ರೆಂಚ್‌ ಕೋಟ್‌ಗಳು ನೋಡಲು ಒಂದೇ ಬಗೆಯದ್ದಾಗಿ ಕಾಣುತ್ತವಾದರೂ ಸ್ಟಿಚ್ಚಿಂಗ್‌ ನಾನಾ ಶೈಲಿಯಲ್ಲಿರುತ್ತವೆ. ಸ್ಲೀಕ್‌ ಲುಕ್‌, ಫಾರ್ಮಲ್‌ ಬ್ಲೇಜರ್‌ ಸ್ಟೈಲ್‌ನಲ್ಲೂದೊರಕುತ್ತವೆ. ಮೊದಲೆಲ್ಲಾ ಹಿಲ್‌ ಸ್ಟೇಷನ್‌ಗಳಲ್ಲಿ ಮಾತ್ರ ಇವುಗಳ ಬಳಕೆ ಹೆಚ್ಚಾಗಿತ್ತು. ಬರಬರುತ್ತಾ ಸಿನಿಮಾ ತಾರೆಯರ ವಾರ್ಡ್‌ರೋಬ್‌ ಸೇರಿದ ನಂತರ ಸಾಮಾನ್ಯ ಹುಡುಗಿಯರ ಮನಸ್ಸನ್ನು ಗೆಲ್ಲತೊಡಗಿದವು. ಸ್ವೆಟರ್‌ ಹಾಗೂ ಜಾಕೆಟ್‌ ಧರಿಸುವಂತೆ, ಟ್ರೆಂಚ್‌ ಕೋಟ್‌ಗಳನ್ನು ಧರಿಸುವುದು ಹೆಚ್ಚಾಯಿತು ಎನ್ನುತ್ತಾರೆ ಜಿಯಾ.

ಕ್ಲಾಸಿಕ್‌ ಲುಕ್‌ ಗ್ಯಾರಂಟಿ

ಅಂದಹಾಗೆ, ವೆಸ್ಟರ್ನ್‌ ಲುಕ್‌ ನೀಡುವಲ್ಲಿಈ ಟ್ರೆಂಚ್‌ ಕೋಟ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಡಿಸೈನರ್‌ ಋತು ಹೇಳುವಂತೆ, ಇದೀಗ ಇಂಡೋ – ವೆಸ್ಟರ್ನ್ ಸ್ಟೈಲ್‌ನಲ್ಲೂ ಈ ಕೋಟ್‌ಗಳನ್ನು ಬಳಸುವುದು ಹೆಚ್ಚಾಗತೊಡಗಿದೆ. ಹಾಗಾಗಿ ಫಾರ್ಮಲ್‌ , ಎಥ್ನಿಕ್‌ ಡ್ರೆಸ್‌ ಧರಿಸುವ ಮಾನಿನಿಯರಿಗೂ ಪ್ರಿಯವಾಗತೊಡಗಿವೆ ಎನ್ನುತ್ತಾರೆ ಅವರು.

ಹೀಗಿರಲಿ ಟ್ರೆಂಚ್‌ ಕೋಟ್‌ ಸ್ಟೈಲಿಂಗ್‌

  • ಟ್ರೆಂಚ್‌ ಕೋಟ್‌ ಬೆಚ್ಚಗಿಡುವುದರಿಂದ ಧರಿಸುವವರು ಸಿಂಪಲ್‌ ಇನ್ನರ್‌ ಡ್ರೆಸ್‌ ಧರಿಸುವುದು ಬೆಸ್ಟ್.
  • ಉದ್ದಗಿರುವವರಿಗೆ ಯಾವುದೇ ಬಗೆಯ ಟ್ರೆಂಚ್‌ ಕೋಟ್‌ ಆದರೂ ಸೂಟ್‌ ಆಗುತ್ತವೆ.
  • ಪ್ಲಂಪಿಯಾಗಿರುವವರು ಆದಷ್ಟು ಡಿಸೈನರ್‌ ಕೋಟ್‌ ಧರಿಸುವುದು ಉತ್ತಮ.
  • ವಿಂಟೆಂಜ್‌ ಹಾಗೂ ರಾಯಲ್‌ ಕಲರ್‌ಗಳ ಟ್ರೆಂಚ್‌ ಕೋಟ್‌ಗಳು ರಾಯಲ್‌ ಲುಕ್‌ ನೀಡುತ್ತವೆ.
  • ಪ್ರಿಂಟೆಡ್‌ ಕೋಟ್‌ಗಳು ಟ್ರೆಂಡ್‌ನಲ್ಲಿಲ್ಲ.
  • ಫಿಟ್ಟಿಂಗ್‌ ಇದ್ದರೇ ಮಾತ್ರ ಚೆನ್ನಾಗಿ ಕಾಣಿಸುತ್ತವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

Karnataka Weather Forecast : ರಾಜ್ಯಾದ್ಯಂತ ನೈರುತ್ಯ ಮುಂಗಾರು ದುರ್ಬಲವಾಗಿದ್ದರೂ, ಕರಾವಳಿ ಹಾಗೂ ಒಳನಾಡಿನ ವಿವಿಧೆಡೆ ಮಳೆಯು (Rain News) ಅಬ್ಬರಿಸುತ್ತಿದೆ. ಕಡಲ ತೀರದಲ್ಲಿ ಅಲೆಗಳು ಆಳೆತ್ತರದಲ್ಲಿ ಅಪ್ಪಳಿಸುತ್ತಿದ್ದು, ನಾಳೆಗೂ ಮಳೆ ಮುನ್ಸೂಚನೆಯನ್ನು ನೀಡಲಾಗಿದೆ.

VISTARANEWS.COM


on

By

karnataka Weather Forecast
Koo

ಬೆಂಗಳೂರು: ಕರಾವಳಿಯಲ್ಲಿ ವರುಣಾರ್ಭಟ (Rain News) ಮುಂದುವರೆದಿದೆ. ಕಳೆದ ಎರಡು ಮೂರು ದಿನಗಳಿಂದ ಕರಾವಳಿಯಲ್ಲಿ ಭಾರೀ ಗಾಳಿ ಸಹಿತ ಮಳೆಯಾಗುತ್ತಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದು, ಭಾರೀ ಗಾಳಿ ಹಿನ್ನೆಲೆಯಲ್ಲಿ ದಡಕ್ಕೆ ಆಳೆತ್ತರದ ಅಲೆಗಳು ಅಪ್ಪಳಿಸುತ್ತಿದೆ. ರೆಡ್‌ ಅಲರ್ಟ್‌ ನೀಡಲಾಗಿದ್ದು, ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್ ಬಿದ್ದಿದೆ. ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಮುನ್ಸೂಚನೆ (Karnataka Weather Forecast) ನೀಡಿದೆ.

ಜೂನ್‌ 25ರವರೆಗೆ ಕರಾವಳಿ ಮತ್ತು ದಕ್ಷಿನ ಒಳನಾಡಿನಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನ ಜಿಲ್ಲೆಗಳಾದ ಬೀದರ್‌, ಕಲಬುರಗಿ,ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು, ಚಿಕ್ಕಬಳ್ಳಾಪುರ , ಚಿತ್ರದುರ್ಗ, ಕೋಲಾರ, ರಾಮನಗರ, ತುಮಕೂರು, ವಿಜಯನಗರದಲ್ಲಿ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಮಳೆಯಾಗಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಕೆಲವೊಮ್ಮೆ ಮೇಲ್ಮೈ ಗಾಳಿಯು ಪ್ರಬಲವಾಗಿ ಬೀಸಲಿದೆ.

ರಾಜ್ಯಾದ್ಯಂತ ಮುಂಗಾರು ದುರ್ಬಲವಾಗಿದ್ದರೂ, ಕರಾವಳಿಯ ಬಹುತೇಕ ಕಡೆಗಳಲ್ಲಿ, ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಪಣಂಬೂರು, ಭಾಲ್ಕಿ 5 ಸೆಂ.ಮೀ, ಮಂಗಳೂರು ವಿಮಾನ ನಿಲ್ದಾಣ , ಕೊಟ್ಟಿಗೆಹಾರ ತಲಾ 4 ಸೆಂ.ಮೀ ಮಳೆಯಾಗಿದೆ. ಉಡುಪಿ, ಸುಳ್ಯ, ಬಾದಾಮಿ, ದೇವರಹಿಪ್ಪರಗಿಯಲ್ಲಿ 3 ಸೆಂ.ಮೀ ಮಳೆಯಾಗಿದೆ. ಧರ್ಮಸ್ಥಳ, ಮಂಕಿ, ಪುತ್ತೂರು , ಅಂಕೋಲಾ, ರೋನ್, ಭಾಗಮಂಡಲ, ಆಗುಂಬೆಯಲ್ಲಿ 2 ಸೆಂ.ಮೀ ಮಳೆಯಾಗಿದೆ. ಕಾರವಾರ, ಮೂಲ್ಕಿ, ಕುಂದಾಪುರ, ಬೆಳ್ತಂಗಡಿ, ಹೊನ್ನಾವರ, ಕಾರ್ಕಳ, ಉಪ್ಪಿನಂಗಡಿ, ನರಗುಂದ, ನಿಪ್ಪಾಣಿ, ಶಹಪುರ, ಕುಷ್ಟಗಿ, ಲಿಂಗನಮಕ್ಕಿ ಎಚ್‌ಎಂಎಸ್ , ಪೊನ್ನಂಪೇಟೆಯಲ್ಲಿ 1 ಸೆಂ.ಮೀ ಮಳೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕಲಬುರಗಿ

krishna byre gowda: ಪಹಣಿ-ಆಧಾರ್ ಲಿಂಕ್‌ ಮಾಡಲು ಜುಲೈಗೆ ಅಂತಿಮ ಗಡುವು; ಕೃಷ್ಣ ಬೈರೇಗೌಡ

krishna byre gowda: ಕಲಬುರಗಿಯ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಕಂದಾಯ ಇಲಾಖೆ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಪಹಣಿಗೆ ಆಧಾರ್‌ ಲಿಂಕ್‌ ಮಾಡುವುದರಿಂದ ವಂಚನೆ ತಪ್ಪುತ್ತದೆ. ಜತೆಗೆ ಪರಿಹಾರ, ವರ್ಗಾವಣೆ, ಮ್ಯುಟೇಷನ್ ಪ್ರಕ್ರಿಯೆ ಸರಳವಾಗಲಿದೆ. ಜನರಿಗೆ ಸರ್ಕಾರಿ ಸೇವೆ ಬೇಗ ಲಭ್ಯವಾಗಲಿದೆ ಎಂದು ಸಚಿವರು ಹೇಳಿದರು.

VISTARANEWS.COM


on

Divisional Level Progress Review Meeting of Revenue Department by Minister Krishna Byregowda
Koo

ಕಲಬುರಗಿ: ರಾಜ್ಯದಲ್ಲಿ 4 ಕೋಟಿ ಪಹಣಿಗಳಲ್ಲಿ ಈಗಾಗಲೆ 1.70 ಕೋಟಿ ಪಹಣಿಗೆ ಆಧಾರ್ ಸೀಡಿಂಗ್ ಆಗಿದೆ. ಉಳಿದಿದ್ದನ್ನು ಅಭಿಯಾನದ‌ ಮೂಲಕ ಜುಲೈ ಮಾಸಾಂತಕ್ಕೆ ಪೂರ್ಣಗೊಳಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (krishna byre gowda) ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪಹಣಿಗೆ ಆಧಾರ್‌ ಲಿಂಕ್‌ ಮಾಡುವುದರಿಂದ ವಂಚನೆ ತಪ್ಪುತ್ತದೆ. ಜತೆಗೆ ಪರಿಹಾರ, ವರ್ಗಾವಣೆ, ಮ್ಯುಟೇಷನ್ ಪ್ರಕ್ರಿಯೆ ಸರಳವಾಗಲಿದೆ. ಜನರಿಗೆ ಸರ್ಕಾರಿ ಸೇವೆ ಬೇಗ ಲಭ್ಯವಾಗಲಿದೆ ಎಂದ ಅವರು, ಆಧಾರ್ ಸೀಡಿಂಗ್ ಪ್ರಕ್ರಿಯೆ ಉತ್ತಮ‌ ಪ್ರಗತಿ ಸಾಧಿಸಿದ್ದಕ್ಕೆ ಸಂತಸ‌ ವ್ಯಕ್ತಪಡಿಸಿದರು. ಉತ್ತಮವಾಗಿ ಕಾರ್ಯನಿರ್ವಹಿಸಿದ ವಿ.ಎ.ಗಳನ್ನು ಹುರಿದುಂಬಿಸಲು ಮೊದಲನೇ ಹಂತದಲ್ಲಿ ಇವರಿಗೆ ಲ್ಯಾಪಟಾಪ್ ವಿತರಣೆ ಮಾಡಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಠಾರಿಯಾ ಅವರಿಗೆ ಕಂದಾಯ ಸಚಿವರ ಕೃಷ್ಣ ಬೈರೇಗೌಡ ಅವರು ನಿರ್ದೇಶನ ನೀಡಿದರು.

ನಗರದ ಡಿ.ಸಿ. ಕಚೇರಿ ಸಭಾಂಗಣದಲ್ಲಿ ಸೋಮವಾರ ಕಂದಾಯ ಇಲಾಖೆ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು. ಪ್ರಸಕ್ತ ವರ್ಷ ಹೆಚ್ಚಿನ ಮಳೆ‌ ನಿರೀಕ್ಷೆ ಹಿನ್ನೆಲೆಯಲ್ಲಿ ಪ್ರವಾಹದಿಂದ ಆಗಬಹುದಾದ ಜನ-ಜಾನುವಾರಗಳ ಹಾನಿ ತಪ್ಪಿಸುವುದು ನಮ್ಮೆಲ್ಲರ‌ ಮೊದಲ ಆದ್ಯತೆಯಾಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದು ಸಚಿವರು (Kalaburagi News) ತಿಳಿಸಿದರು.

ಪ್ರವಾಹದಿಂದ ಹಾನಿಯಾದರೆ ಪರಿಹಾರ ನೀಡುವುದು ನಮ್ಮ ಕರ್ತವ್ಯ. ಆದರೆ ಅಷ್ಟೆ ನಮ್ಮ ಕೆಲಸ‌ದ ಸೀಮಿತವಲ್ಲ. ಬದಲಾಗಿ ಪ್ರವಾಹ ಮುನ್ನ ಜನರ ರಕ್ಷಣೆ ಮಾಡಿ ಪ್ರಾಣಿ, ಮಾನವ ಹಾನಿಯಾಗದಂತೆ ತಡೆಯುವುದು ಸರ್ಕಾರದ ಉದ್ದೇಶ. ಇದನ್ನರಿತು ಅಧಿಕಾರಿಗಳು ಕೆಲಸ‌ ಮಾಡಬೇಕು ಎಂದು ಸೂಚಿಸಿದರು.

ಪ್ರವಾಹ ಬಂದ‌ ನಂತರ ತಯಾರಿ ಮಾಡುವುದು ಬೇಡ. ಮಳೆ‌ ಮುನ್ಸೂಚನೆ ಮಾಹಿತಿ ನೀಡುವುದು ಬಹಳಷ್ಟು ಸುಧಾರಣೆಯಾಗಿದೆ.‌ ಇದರ ಆಧಾರದ ಮೇಲೆ ಪ್ರವಾಹ ಭೀತಿ ಇರುವ ನದಿ, ಜಲಾಶಯ ಪಕ್ಕದಲ್ಲಿನ ಜನ ಮತ್ತು ಜಾನುವಾರು ಮುಂಚಿತವಾಗಿಯೇ ರಕ್ಷಣೆಗೆ ಮುಂದಾಗಬೇಕು. ಕಂದಾಯ, ಆರ್.ಡಿ.ಪಿ.ಆರ್, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಬೇಕು. ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯತಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು. ಕಾಳಜಿ ಕೇಂದ್ರದಲ್ಲಿ ಜನರಿಗೆ ಸೂಕ್ತ ಉಪಚಾರ ಮಾಡಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Tirupathi Laddu: ತಿರುಪತಿ ಲಡ್ಡು, ವಿಶೇಷ ದರ್ಶನ ದರದ ಬಗ್ಗೆ ಟಿಟಿಡಿ ಸ್ಪಷ್ಟನೆ

ತಾಲೂಕಿನ ತಹಸೀಲ್ದಾರರು ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಮುಂದಾಳತ್ವ ವಹಿಸಬೇಕು. ಪೊಲೀಸ್, ಅಗ್ನಿಶಾಮಕ, ಅರ್.ಡಿ.ಪಿ.ಆರ್. ಹೀಗೆ ಎಲ್ಲ ಅಧಿಕಾರಿಗಳ ಸಹಾಯ ಪಡೆದು ಯುದ್ದೋಪಾದಿಯಲ್ಲಿ ಕೆಲಸ‌ ಮಾಡಬೇಕು ಎಂದು ತಹಸೀಲ್ದಾರರಿಗೆ ಸಚಿವರು ನಿರ್ದೇಶನ ನೀಡಿದರು.

ಭೀಮಾ ಪ್ರವಾಹ ಭೀತಿ:

ಕಲಬುರಗಿ, ವಿಜಯಪುರ ಜಿಲ್ಲೆಗೆ ಹೆಚ್ಚು. ಮಹಾರಾಷ್ಟ್ರದ ಸರ್ಕಾರದೊಂದಿಗೆ ಕಲಬುರಗಿ ಜಿಲ್ಲಾಡಳಿತ ಸತತ ಸಂಪರ್ಕದಲ್ಲಿರಬೇಕು. ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಅಧಿಕಾರಿಗಳನ್ನು ಪ್ರವಾಹ ಭೀತಿ ಗ್ರಾಮಗಳಿಗೆ ಈಗಲೇ ಭೇಟಿ ನೀಡಿ, ಪ್ರವಾಹ ಬಂದಲ್ಲಿ ಆಗಬಹುದಾದ ಸಮಸ್ಯೆಗಳ ಬಗ್ಗೆ ಅಂದಾಜಿಸಿ ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ವಿಭಾಗದ ಡಿಸಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.

ಇನ್ನು ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಕೈಗೊಳ್ಳುವ ತಾತ್ಕಾಲಿಕ ಪರಿಹಾರ ರೂಪದ ರಸ್ತೆ, ಅಂಗನವಾಡಿ, ಶಾಲೆ‌ ಕಟ್ಟಡ ದುರಸ್ತಿ, ರಸ್ತೆ ಸಂಪರ್ಕ ಜೋಡಣೆ ಇದೆಲ್ಲ ಕಾಮಗಾರಿಗಳು ತಿಂಗಳೊಳಗೆ ಮುಗಿಸಬೇಕು. ಇದನ್ನು ವರ್ಷಗಟ್ಟಲೆ ಎಳೆದಾಡಿದರೆ ಅದಕ್ಕೆ ಅರ್ಥವಿಲ್ಲ ಎಂದು ಡಿಸಿಗಳಿಗೆ ಕಂದಾಯ ಸಚಿವರು ಖಡಕ್ ಸೂಚನೆ ನೀಡಿದರು.

ಕಂದಾಯ ಇಲಾಖೆ ಜನರಿಗೆ ಪೂರಕವಾಗಿ ಕೆಲಸ ಮಾಡಬೇಕೇ ಹೊರತು ಜನರ ಬದುಕಿಗೆ ಹೊರೆಯಾಗಬಾರದು. ಹಲವಾರು ಕಂದಾಯ ಪ್ರಕರಣಗಳಲ್ಲಿ ಜನರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.‌ಇವರನು ಸಮಸ್ಯೆಗಳಿಂದ ಹೊರತರಬೇಕಾದ ಕೆಲಸ ತಳ ಹಂತದ ಅಧಿಕಾರಿಗಳು ಮಾಡಬೇಕಿದೆ ಎಂದರು.

ಇದನ್ನೂ ಓದಿ: Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಇಳಿದ ಚಿನ್ನದ ದರ

ಜಿಲ್ಲಾವಾರು ಪ್ರಗತಿ ಪರಿಶೀಲನೆ ವೇಳೆಯಲ್ಲಿ ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಲ್ಲಿ 135 ಗ್ರಾಮ‌ ಪ್ರವಾಹಕ್ಕೆ ತುತ್ತಾಗುವ ಸಮಸ್ಯಾತ್ಮಕ ಹಳ್ಳಿಗಳನ್ನು ಗುರುತಿಸಿ, ಇದಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿಸಿ ನೇಮಿಸಿದೆ. ಅಲ್ಲದೆ ತರಬೇತಿ ಸಹ ನೀಡಲಾಗಿದೆ. 2020ರಲ್ಲಿ ಉಜನಿ ಜಲಾಶಯದಿಂದ ಭೀಮಾ ನದಿಗೆ 8 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟ ಕಾರಣ 11 ಹಳ್ಳಿಗಳು ತುಂಬಾ ಸಮಸ್ಯೆಯಾಗಿದ್ದವು. ಈ ಬಾರಿ ಪ್ರವಾಹ ನಿಯಂತ್ರಣಕ್ಕೆ ಮುಂಜಾಗ್ರತೆ ಕ್ರಮ ಕೈಗೊಂಡಿದ್ದೇವೆ. 65 ಕಡೆ ಕಾಳಜಿ ಕೇಂದ್ರ, 40 ಕಡೆ ಪ್ರಾಣಿಗಳಿಗೆ ಪುನರ್ವಸತಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಸಭೆಗೆ ವಿವರಿಸಿದರು.

ಯಾದಗಿರಿ ಡಿಸಿ ಡಾ.ಸುಶೀಲಾ ಬಿ. ಮಾತನಾಡಿ, ತಮ್ಮ ಜಿಲ್ಲೆಯಲ್ಲಿ ಕೃಷ್ಣಾ, ಭೀಮಾ ನದಿ ಪ್ರವಾಹಕ್ಕೆ 80 ಹಳ್ಳಿ ಸಂಕಷ್ಟಕ್ಕೆ ಸಿಲುಕಬಹುದೆಂದು ಅಂದಾಜಿಸಿ ಪೂರ್ವಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.

ಬೀದರ್‌ ಜಿಲ್ಲೆಯಲ್ಲಿ ಪ್ರವಾಹಕ್ಕೆ ಹಳ್ಳಿ ಮುಳುಗಡೆಯಾಗುವುದಿಲ್ಲ. ಬದಲಾಗಿ ಜಿಲ್ಲೆಯಲ್ಲಿ ಬಹುತೇಕ ಮನೆಗಳು ಮಣ್ಣಿನಿಂದ ನಿರ್ಮಾಣ ಮಾಡಿದ್ದರಿಂದ ಸತತ ಮಳೆ‌ ಬಿದ್ದಲ್ಲಿ ಮನೆ ಹಾನಿ ಜತೆಗೆ ಬೆಳೆ ಹಾನಿ ಹೆಚ್ಚಲಿದೆ ಎಂದು ಡಿಸಿ ಗೋವಿಂದರೆಡ್ಡಿ ತಿಳಿಸಿದರು.

ಬಳ್ಳಾರಿಯಲ್ಲಿ 19, ಕೊಪ್ಪಳದಲ್ಲಿ 27 ಹಾಗೂ ವಿಜಯನಗರ ಜಿಲ್ಲೆಯಲ್ಲಿ 22 ಹಳ್ಳಿ ಸಮಸ್ಯಾತ್ಮಕ ಇವೆ ಎಂದು ಕ್ರಮವಾಗಿ ಜಿಲ್ಲಾಧಿಕಾರಿಗಳಾದ ಪ್ರಶಾಂತ್‌ ಕುಮಾರ ಮಿಶ್ರಾ, ನಲಿನ್ ಅತುಲ್ ಹಾಗೂ ಎಂ.ಎಸ್. ದಿವಾಕರ್‌ ತಿಳಿಸಿದರು.‌ ಇನ್ನುಳಿದಂತೆ ರಾಯಚೂರು ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ತಾಲೂಕು ಪ್ರವಾಹಕ್ಕೆ ತುತ್ತಾಗುತ್ತವೆ. ಕಳೆದ 2009ರಲ್ಲಿ ನಾರಾಯಣಪುರ ಜಲಾಶಯದಿಂದ 6 ಲಕ್ಷ ನೀರು ಹರಿಬಿಟ್ಟಿದರಿಂದ ಪ್ರವಾಹ ಭೀತಿ ಎದುರಾಗಿತ್ತು. ಭೀತಿಯಿಂದ 70 ಹಳ್ಳಿ ಗುರುತಿಸಿದೆ ಎಂದು ಡಿಸಿ ಚಂದ್ರಶೇಖರ ನಾಯಕ್ ತಿಳಿಸಿದರು.

ಇದನ್ನೂ ಓದಿ: Bomb Hoax: ಕಲಬುರಗಿ ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ ಮೇಲ್, ಮುಂದುವರಿದ ಶೋಧ

ಸರ್ಕಾರಿ ಆಸ್ತಿ ರಕ್ಷಣೆಗೆ ಲ್ಯಾಂಡ್ ಬೀಟ್

ಸರ್ಕಾರಿ ಆಸ್ತಿ ಸಂರಕ್ಷಣೆಗೆ ಸರ್ಕಾರ ಮುಂದಾಗಿದ್ದು, ಈಗಾಗಲೆ 14.50 ಲಕ್ಷ ಸರ್ಕಾರಿ ಆಸ್ತಿ (ಕಂದಾಯ, ಸ್ಮಶಾನ, ಕೆರೆ ಆಸ್ತಿ) ಗುರುತಿಸಿದ್ದು, ಈ ಅಸ್ತಿ ಎಲ್ಲಿ, ಎಷ್ಟು ಅಳತೆಯಲ್ಲಿದೆ ಎಂಬ ನಿಖರ ಮಾಹಿತಿ ಇದೀಗ ನಮ್ಮ ಬೆರಳು ತುದಿಯಲಿ ಲಭ್ಯವಿದೆ. ಸುಮಾರು 10 ಲಕ್ಷ ಆಸ್ತಿ ಸ್ಥಳಕ್ಕೆ ವಿ.ಎ.ಗಳು ಭೇಟಿ ನೀಡಿ ಬೌಂಡರಿ ಫೆನ್ಸಿಂಗ್ ಮಾಡಿದ್ದಾರೆ. ಉಳಿದ ಕಾರ್ಯ ಪ್ರಗತಿಯಲ್ಲಿದೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ರೈತರ ಸಾಗುವಳಿ ಹೊರತುಪಡಿಸಿ ಸ್ಮಶಾನ,‌ ಕೆರೆ ಒತ್ತುವರಿಯಾದಲ್ಲಿ ಅದನ್ನು ತಹಸೀಲ್ದಾರರು ಕೂಡಲೆ ತೆರವುಗೊಳಿಸಬೇಕು. ಮುಂದುವರೆದು ಆಸ್ತಿ ಸಂರಕ್ಷಣೆ‌ ನಿಟ್ಟಿನಲ್ಲಿ ಪ್ರತಿ 3-4 ತಿಂಗಳಿಗೊಮ್ಮೆ ಗ್ರಾಮ ಅಡಳಿತಾಧಿಕಾರಿಗಳು ಈ ಅಸ್ತಿ ಸ್ಥಳಕ್ಕೆ‌ ಭೇಟಿ ನೀಡಿ ತಪಾಸಿಸುವ ಲ್ಯಾಂಡ್ ಬೀಟ್ ಕಾರ್ಯಕ್ರಮ ಜಾರಿಗೆ ತರಲಾಗುತ್ತಿದೆ ಎಂದರು.

1,000 ವಿಎ, 750 ಸರ್ವೇಯರ್ ಭರ್ತಿ

ರಾಜ್ಯದಲ್ಲಿ 1,000 ಗ್ರಾಮ ಆಡಳಿತಾಧಿಕಾರಿಗಳು, 750 ಸರ್ವೇಯರ್ ಭರ್ತಿ ಪ್ರಕಿಯೆ ನಡೆದಿದೆ. ಇದರ ಜತೆಗೆ 34 ಎ.ಡಿ.ಎಲ್.ಆರ್ ನೇಮಕಾತಿ ಸಹ ನಡೆದಿದೆ. ಇದರಿಂದ ಸರ್ವೇಯರ್ ಇಲಾಖೆಗೆ ಬಲ ಬರಲಿದೆ. ಇದನ್ನು‌ ಬಳಸಿಕೊಂಡು ಪ್ರಸ್ತುತ ಇರುವ 22 ಲಕ್ಷ ಮಲ್ಟಿ ಹೋಲ್ಡರ್ ಆರ್.ಟಿ.ಸಿ. ಗಳನ್ನು ಅವರವರಿಗೆ ಪ್ರತ್ಯೇಕವಾಗಿ ಪೋಡಿ ಮಾಡಿ ಆರ್.ಟಿ.ಸಿ. ಮಾಡಿಸಿ ಕೊಡಬೇಕಾಗಿದೆ. ಇದಕ್ಕಾಗಿ ರೋಡ್ ಮ್ಯಾಪ್ ಸಿದ್ಧಗೊಳಿಸಲಾಗುತ್ತಿದೆ ಎಂದರು.

ಕಲುಷಿತ‌ ನೀರು ಪೂರೈಕೆಯಾಗಬಾರದು

ಮಳೆಗಾಲ ಹಿನ್ನೆಲೆಯಲ್ಲಿ ಕಲುಷಿತ ನೀರು ಪೂರೈಕೆ ಸಾಮಾನ್ಯ. ಆದರೆ ಇದನ್ನು‌ ಮೆಟ್ಟಿ ನಿಂತು ಪ್ರತಿ ಹಳ್ಳಿ, ಪಟ್ಟಣದ ಸಾರ್ವಜನಿಕರಿಗೆ ಶುದ್ಧೀಕರಿಸಿದ ಕುಡಿಯುವ ನೀರು ಪೂರೈಸುವುದು ನಮ್ಮ‌ ಜವಾಬ್ದಾರಿ. ಮುಖ್ಯಮಂತ್ರಿಗಳು ಇತ್ತೀಚಿನ ಕಲುಷಿತ ನೀರು ಸೇವನೆ ಪ್ರಕರಣಗಳಿಂದ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿರಿ, ನಿಷ್ಕಾಳಜಿ ವಹಿಸಿದರೆ ಶಿಸ್ತು ಕ್ರಮ ಅನಿವಾರ್ಯ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Dengue Fever : ಬಿಬಿಎಂಪಿ ಆಯುಕ್ತರಿಗೂ ಡೆಂಗ್ಯೂ; ಬೆಂಗಳೂರಲ್ಲಿ 1,230 ಮಂದಿಗೆ ಫೀವರ್‌!

ಸರ್ಕಾರದ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ ಮಹೇಶ್, ಕಂದಾಯ ಇಲಾಖೆಯ ಆಯುಕ್ತ ಪಿ. ಸುನೀಲಕುಮಾರ, ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತೆ ಡಾ.ಬಿ.ಆರ್. ಮಮತಾ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಎಸ್.ಎಸ್.ವೈ. ನಿರ್ದೇಶಕ ರಂಗಪ್ಪಾ, ಕರ್ನಾಟಕ ಪಬ್ಲಿಕ್ ಲ್ಯಾಂಡ್ ಕಾರ್ಪೋರೇಷನ್ ಎಂ.ಡಿ ವಸಂತಕುಮಾರ, ಅಪರ ಪ್ರಾದೇಶಿಕ ಆಯುಕ್ತ ಇಲಿಯಾಸ್ ಅಹ್ಮದ್ ಇಸಾಮದಿ ಉಪಸ್ಥಿತರಿದ್ದರು.

Continue Reading

ಕಲಬುರಗಿ

Bomb Hoax: ಕಲಬುರಗಿ ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ ಮೇಲ್, ಮುಂದುವರಿದ ಶೋಧ

Bomb Hoax: ಬೆದರಿಕೆ ಮೇಲ್ ಕಳಿಸಿರುವ ಅನಾಮಧೇಯ ವ್ಯಕ್ತಿ, ಏರ್‌ಪೋರ್ಟ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಸ್ಥಳಕ್ಕೆ ಪೊಲೀಸರ ಜೊತೆಗೆ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ದೌಡಾಯಿಸಿದ್ದು, ಏರ್‌ಪೋರ್ಟ್‌ನ ಇಂಚಿಂಚು ಸ್ಥಳವನ್ನೂ ಬಿಡದೆ ಪರಿಶೀಲನೆ ನಡೆಸಲಾಯಿತು.

VISTARANEWS.COM


on

kalaburagi airport bomb hoax
Koo

ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣಕ್ಕೆ (Kalaburagi Airport) ಬಾಂಬ್‌ ಬೆದರಿಕೆ (Bomb Hoax, Bomb threat) ಕರೆ ಬಂದಿದ್ದು, ಏರ್‌ಪೋರ್ಟ್‌ನಲ್ಲಿ ಸಂಪೂರ್ಣ ತಪಾಸಣೆ ನಡೆಸಲಾಯಿತು. ಏರ್‌ಪೋರ್ಟ್‌ನ ಇ-ಮೇಲ್‌ಗೆ ಅಜ್ಞಾತ ಮೇಲ್‌ ಐಡಿಯಿಂದ ಬೆದರಿಕೆ ಬಂದಿದೆ.

ಬೆದರಿಕೆ ಮೇಲ್ ಕಳಿಸಿರುವ ಅನಾಮಧೇಯ ವ್ಯಕ್ತಿ, ಏರ್‌ಪೋರ್ಟ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಸ್ಥಳಕ್ಕೆ ಪೊಲೀಸರ ಜೊತೆಗೆ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ದೌಡಾಯಿಸಿದ್ದು, ಏರ್‌ಪೋರ್ಟ್‌ನ ಇಂಚಿಂಚು ಸ್ಥಳವನ್ನೂ ಬಿಡದೆ ಪರಿಶೀಲನೆ ನಡೆಸಲಾಯಿತು. ಪ್ರಯಾಣಿಕರ ಬ್ಯಾಗ್‌ಗಳ ತಪಾಸಣೆ ಮಾಡಲಾಗಿದೆ. ಬೆದರಿಕೆ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಪ್ರಯಾಣಿಕರ ತಪಾಸಣೆಯಲ್ಲಿ ಹೆಚ್ಚಿನ ಕಟ್ಟುನಿಟ್ಟು ಮಾಡಲಾಗಿದೆ. ಆದರೆ ಯಾವುದೇ ವಿಮಾನದ ಕಾರ್ಯಚರಣೆ ವೇಳಾಪಟ್ಟಿಯಲ್ಲಿ ವ್ಯತ್ಯಾಸವಾಗಿಲ್ಲ.

ನಿಲ್ದಾಣಕ್ಕೆ ಬೆದರಿಕೆ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿರುವ ಸಚಿವ ಕೃಷ್ಣ ಭೈರೇಗೌಡ, ʼಇದಕ್ಕೆ ಆತಂತಕಪಡುವ ಅವಶ್ಯಕತೆಯಿಲ್ಲʼ ಎಂದಿದ್ದಾರೆ. ʼಇಂತಹ ಬೆದರಿಕೆ ಬರುತ್ತಿರುತ್ತವೆ. ಆತಂಕ ಪಡುವ ಅವಶ್ಯಕತೆ ಇಲ್ಲ. ಅದೊಂದು ‌ಅನಾಮಧೇಯ‌ ಕರೆ. ಕೆಲ ಹೊತ್ತು ಎಲ್ಲವನ್ನೂ ಪರಿಶೀಲನೆ ‌ಮಾಡಿದ್ದಾರೆ. ಸೆಕ್ಯುರಿಟಿ ಜತೆ ಸಹಕರಿಸಬೇಕಾಗಿದ್ದು ನಮ್ಮ ಕರ್ತವ್ಯ ಅಷ್ಟೆʼ ಎಂದು ತಿಳಿಸಿದ್ದಾರೆ.

ದಿಲ್ಲಿ ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ ಹಾಕಿದ ಬಾಲಕ ಬಂಧನ

ದಿಲ್ಲಿ ವಿಮಾನ ನಿಲ್ದಾಣಕ್ಕೆ (Delhi Airport) ಬಾಂಬ್‌ ಬೆದರಿಕೆಯೊಡ್ಡಿದ್ದ ಬಾಲಕನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. 13 ವರ್ಷದ ಬಾಲಕನೋರ್ವ ದಿಲ್ಲಿ ವಿಮಾನ ನಿಲ್ದಾಣಕ್ಕೆ ಇ-ಮೇಲ್‌ ಮೂಲಕ ಹುಸಿಬಾಂಬ್‌ ಕರೆ ಮಾಡಿದ್ದ ಎನ್ನಲಾಗಿದೆ. ಡೆಪ್ಯೂಟಿ ಪೊಲೀಸ್‌ ಕಮಿಷನರ್‌ ಉಷಾ ರಂಗ್ನಾನಿ ಮಾಹಿತಿ ನೀಡಿದ್ದು, ದುಬೈನಿಂದ ಬಂದಿದ್ದ ವಿಮಾನದಲ್ಲಿ ಬಾಂಬ್‌ ಇಟ್ಟಿರೋದಾಗಿ ಬಾಲಕ ಕೆಲವು ದಿನಗಳ ಹಿಂದೆ ಇ-ಮೇಲ್‌ ಕಳುಹಿಸಿದ್ದ. ತನಿಖೆ ನಡೆಸಿದ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ತಮಾಶೆಗಾಗಿ ಮೇಲ್‌ ಕಳುಹಿಸಿದಾಗ ಹೇಳಿದ್ದಾನೆ. ಇಮೇಲ್‌ ಕಳುಹಿಸಿದ ಕೆಲವೇ ಗಂಟೆಗಳಲ್ಲಿ ಅದನ್ನು ಡಿಲೀಟ್‌ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಇತ್ತೀಚೆಗೆ ಪ್ರಮುಖ ನಗರಗಳಲ್ಲಿ ಬಾಂಬ್‌ ದಾಳಿಗಳ ಬೆದರಿಕೆಗಳು ಜಾಸ್ತಿಯಾಗಿವೆ. ಬೆಂಗಳೂರಿನ ಶಾಲೆಗಳು ಸೇರಿ ಮುಂಬೈ, ದೆಹಲಿ ಏರ್‌ಪೋರ್ಟ್‌ಗಳು, ಸರ್ಕಾರದ ಕಟ್ಟಡಗಳಿಗೆ ಹುಸಿ ಬೆದರಿಕೆ ಕರೆಗಳು, ಇ-ಮೇಲ್‌ಗಳು ರವಾನೆಯಾಗುತ್ತಲೇ ಇವೆ. ಇದರ ಬೆನ್ನಲ್ಲೇ, ಮಂಗಳವಾರ (ಜೂನ್‌ 18) ಮುಂಬೈನಲ್ಲಿರುವ 50ಕ್ಕೂ ಅಧಿಕ ಆಸ್ಪತ್ರೆಗಳನ್ನು ಸ್ಫೋಟಿಸುವುದಾಗಿ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಹಾಕಲಾಗಿತ್ತು.

ದೇಶದ 41 ವಿಮಾನ ನಿಲ್ದಾಣಗಳನ್ನು ಸ್ಫೋಟಿಸಲಾಗುವುದು ಎಂಬುದಾಗಿ ಹುಸಿ ಬಾಂಬ್‌ ಬೆದರಿಕೆ ಹಾಕಲಾಗಿತ್ತು. ಆಗಲೂ ಭದ್ರತಾ ಸಿಬ್ಬಂದಿ, ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಯ ಪರಿಶೀಲನೆ ನಡೆಸಿದ್ದರು. ಇದಾದ ಕೆಲವೇ ಗಂಟೆಯಲ್ಲಿ ಮುಂಬೈನ ಆಸ್ಪತ್ರೆಗಳಿಗೂ ಬಾಂಬ್‌ ಬೆದರಿಕೆ ಹಾಕಲಾಗಿದೆ. ಬಾಂಬ್‌ ಬೆದರಿಕೆಯ ಕುರಿತು ಪೊಲೀಸರೇ ಮಾಹಿತಿ ನೀಡಿದ್ದಾರೆ. ವಿಪಿಎನ್‌ ನೆಟ್‌ವರ್ಕ್‌ ಬಳಸಿ ಬಾಂಬ್‌ ದಾಳಿಯ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಮುಂಬೈನಲ್ಲಿರುವ ಪ್ರತಿಷ್ಠಿತ ಜಸ್ಲೋಕ್‌ ಹಾಸ್ಪಿಟಲ್‌, ರಹೇಜಾ ಹಾಸ್ಪಿಟಲ್‌, ಸೆವೆನ್‌ ಹಿಲ್ಸ್‌, ಕೊಹಿನೂರ್‌, ಕೆಇಎಂ, ಜೆಜೆ ಹಾಸ್ಪಿಟಲ್‌, ಸೇಂಟ್‌ ಜಾರ್ಜ್‌ ಹಾಸ್ಪಿಟಲ್‌ ಸೇರಿ ಹಲವು ಆಸ್ಪತ್ರೆಗಳ ಮೇಲೆ ಬಾಂಬ್‌ ದಾಳಿ ಮಾಡಲಾಗುವುದು ಎಂಬುದಾಗಿ ಬೆದರಿಕೆ ಹಾಕಲಾಗಿದೆ. ಇ-ಮೇಲ್‌ ಮೂಲಕ ಬೆದರಿಕೆ ಒಡ್ಡುತ್ತಲೇ ಪೊಲೀಸರು ಹಾಗೂ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಯು ಆಸ್ಪತ್ರೆಗಳಿಗೆ ತೆರಳಿ, ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ, ಭದ್ರತೆಯನ್ನು ಕೂಡ ಹೆಚ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಕೆಲ ದಿನಗಳ ಹಿಂದಷ್ಟೇ, ದೇಶದ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸಲಾಗುವುದು ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿಗೆ ಬೆದರಿಕೆಯ ಮೇಲ್‌ ಬಂದಿತ್ತು. ಬೆಂಗಳೂರು, ದೆಹಲಿ, ಅಹಮದಾಬಾದ್‌, ಚೆನ್ನೈ ಸೇರಿ ಹಲವು ನಗರಗಳ ಶಾಲೆಗಳನ್ನೂ ಸ್ಫೋಟಿಸುವ ಬೆದರಿಕೆ ಕರೆಗಳು ಬಂದಿದ್ದವು. ಬಳಿಕ ನಕಲಿ ಬಾಂಬ್‌ ಬೆದರಿಕೆ ಎಂಬುದಾಗಿ ತಿಳಿದುಬಂದಿತ್ತು. ಬೆಂಗಳೂರಿನಲ್ಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದಾಗಲಂತೂ ಭಾರಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದಾದ ಬಳಿಕ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಪಡುವಂತಾಗಿತ್ತು.

ಇದನ್ನೂ ಓದಿ: Bomb Threat: ಮುಂಬೈ ತಾಜ್‌ ಹೋಟೆಲ್‌, ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ; 26/11 ರೀತಿ ದಾಳಿಗೆ ಸಂಚು?

Continue Reading
Advertisement
Parineethi Chopra
Latest2 mins ago

Parineethi Chopra: ಏಳುಮಲ್ಲಿಗೆ ತೂಕದ ಚೆಲುವೆ ಪರಿಣಿತಿ ಚೋಪ್ರಾ ಸಿಕ್ಕಾಪಟ್ಟೆ ದಪ್ಪಗಾಗಿದ್ದು ಯಾಕೆ?

Asaduddin Owais
ದೇಶ5 mins ago

Asaduddin Owais: ಪ್ರಮಾಣ ವಚನ ಸ್ವೀಕರಿಸಿ ‘ಜೈ ಪ್ಯಾಲೆಸ್ತೀನ್​’ ಘೋಷಣೆ ಕೂಗಿದ ಓವೈಸಿ ಸದಸ್ಯತ್ವ ರದ್ದು? ಕಾನೂನು ಏನು ಹೇಳುತ್ತದೆ?

Actor Darshan support by anchor hemalatha
ಸ್ಯಾಂಡಲ್ ವುಡ್10 mins ago

‌Actor Darshan: ರೇಣುಕಾಸ್ವಾಮಿಯನ್ನ ಹೀರೊ ಮಾಡೋದು ನಿಲ್ಲಿಸಿ, ದರ್ಶನ್‌ನ ಬಿಟ್ಟುಕೊಡಲ್ಲ ಎಂದ ಖ್ಯಾತ ನಿರೂಪಕಿ!

Life threat
ಕರ್ನಾಟಕ24 mins ago

Life threat: ಹುಬ್ಬಳ್ಳಿ ಏರ್‌ಪೋರ್ಟ್‌ ನಿರ್ದೇಶಕರಿಗೆ ಜೀವ ಬೆದರಿಕೆ; ʼಲಾಂಗ್ ಲಿವ್ ಪ್ಯಾಲೆಸ್ತೀನ್ʼ ಮೇಲ್‌ ಐಡಿಯಿಂದ ಸಂದೇಶ

Para Badminton Ranking
ಕ್ರೀಡೆ35 mins ago

Para Badminton Ranking: ಮೊದಲ ಬಾರಿಗೆ ವಿಶ್ವ ನಂ.1 ಸ್ಥಾನಕ್ಕೇರಿದ ಕನ್ನಡಿಗ ಸುಹಾಸ್‌ ಯತಿರಾಜ್

Actor Darshan Renukaswamy assault police lathi found How did D Gang get
ಕ್ರೈಂ41 mins ago

Actor Darshan: ರೇಣುಕಾಸ್ವಾಮಿ ಹಲ್ಲೆಗೆ ಬಳಸಿದ್ದ ʻಪೊಲೀಸ್ ಲಾಠಿʼ ಪತ್ತೆ! ʻಡಿ ಗ್ಯಾಂಗ್‌ʼಗೆ ಸಿಕ್ಕಿದ್ದು ಹೇಗೆ?

IRCTC
ದೇಶ1 hour ago

IRCTC: ಆನ್‌ಲೈನ್‌ನಲ್ಲಿ ರೈಲ್ವೇ ಟಿಕೆಟ್‌ ಬುಕ್ಕಿಂಗ್‌ ಮಾಡೋ ಮುನ್ನ ಹೊಸ ನಿಯಮದ ಬಗ್ಗೆ ಇರಲಿ ಗಮನ!

1983 World Cup
ಕ್ರೀಡೆ1 hour ago

1983 WC Win Anniversary: ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿನ​ ಸವಿ ನೆನಪನ್ನು ವಿಂಡೀಸ್​ನಲ್ಲಿ ಕೇಕ್​ ಕತ್ತರಿಸಿ ಸಂಭ್ರಮಿಸಿದ ರವಿಶಾಸ್ತ್ರಿ, ಗವಾಸ್ಕರ್, ​ಬಿನ್ನಿ

Viral Video
Latest1 hour ago

Viral Video: ಪೇಪರ್ ನೋಡದೆ ಪ್ರಮಾಣ ವಚನ ಸ್ವೀಕರಿಸಿ ಬೆರಗುಗೊಳಿಸಿದ ಅತ್ಯಂತ ಕಿರಿಯ ಸಂಸದೆ!

cm siddaramaiah water price hike
ಕರ್ನಾಟಕ1 hour ago

CM Siddaramaiah: ತೈಲ, ಹಾಲು ಆಯ್ತು; ಮುಂದಿನ ಸರದಿಯಲ್ಲಿ ನೀರು, ಆಟೋ, ಬಸ್‌ ಟಿಕೆಟ್‌ ದರ ಏರಿಕೆ ಗ್ಯಾರಂಟಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌