Horoscope Today | ಚಾಮುಂಡೇಶ್ವರಿ ದೇವಿ ವರ್ಧಂತಿಯ ಈ ದಿನ ನಿಮ್ಮ ಭವಿಷ್ಯ ಹೀಗಿದೆ - Vistara News

ಪ್ರಮುಖ ಸುದ್ದಿ

Horoscope Today | ಚಾಮುಂಡೇಶ್ವರಿ ದೇವಿ ವರ್ಧಂತಿಯ ಈ ದಿನ ನಿಮ್ಮ ಭವಿಷ್ಯ ಹೀಗಿದೆ

ಶುಭಕೃತ ನಾಮ ಸಂವತ್ಸರ, ಗ್ರೀಷ್ಮ ಋತು, ಆಷಾಢ ಮಾಸದ ಸಪ್ತಮಿಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (Horoscope Today) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

horoscope today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದಿನ ಪಂಚಾಂಗ

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ.

ತಿಥಿ: ಸಪ್ತಮಿ 07:35 ವಾರ:  ಬುಧವಾರ
ನಕ್ಷತ್ರ: ರೇವತಿ 12:49 ಯೋಗ: ಸುಕರ್ಮ 12:40
ಕರಣ: ಬಾಲವ 19:47 ದಿನ ವಿಶೇಷ : ಅಂತಾರಾಷ್ಟ್ರೀಯ ಚೆಸ್‌ ದಿನ, ಚಾಮುಂಡೇಶ್ವರಿ ವರ್ಧಂತಿ ಉತ್ಸವ

ಸೂರ್ಯೋದಯ: 0೬.೦೩  ಸೂರ್ಯಾಸ್ತ: 07.೦೦

ರಾಹು ಕಾಲ : ಮಧ್ಯಾಹ್ನ 12.00 ರಿಂದ 1.30
ಗುಳಿಕಕಾಲ:  ಪ್ರಾತಃ ಕಾಲ 10.30 ರಿಂದ 12.00
ಯಮಗಂಡಕಾಲ: ಪ್ರಾತಃ ಕಾಲ 7.30 ರಿಂದ 9.00

ದ್ವಾದಶ ರಾಶಿ ಭವಿಷ್ಯ (Horoscope Today)

Horoscope Today

ಮೇಷ: ನಿಮ್ಮ ಹಾಸ್ಯದ ಮನೋಭಾವ ಇತರರನ್ನು ಆಕರ್ಷಿಸುವುದು. ಹಣಕಾಸು ಪ್ರಗತಿ ಉತ್ತಮ. ಧಾರ್ಮಿಕ ಸ್ಥಳಗಳ ಭೇಟಿ. ಅಧ್ಯಾತ್ಮ ವ್ಯಕ್ತಿಗಳ ಮಾರ್ಗದರ್ಶನ ದೊರೆಯಲಿದೆ. ಆರೋಗ್ಯ ಉತ್ತಮ. ಉದ್ಯೋಗ ಶುಭಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ:

Horoscope Today

ವೃಷಭ: ವ್ಯವಹಾರದಲ್ಲಿ ಸಂಗಾತಿಯ ಹಸ್ತಕ್ಷೇಪ ನಿಮಗೆ ಕೋಪ ತರಿಸಬಹುದು, ತಾಳ್ಮೆಯಿಂದ ವರ್ತಿಸಿ. ಈ ಹಿಂದೆ ಕಾಡಿದ ವ್ಯಾಧಿ ಮರುಕಳಿಸುವ ಸಾಧ್ಯತೆ ಇದೆ. ದಿನದ ಮಟ್ಟಿಗೆ ಖರ್ಚು. ಏತನ್ಮಧ್ಯೆ ಅತಿಥಿಗಳ ಆಗಮನ ಹರ್ಷ ತರುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

Horoscope Today

ಮಿಥುನ: ಘಟಿಸಿದ ಘಟನೆಗಳನ್ನು ಮೆಲುಕು ಹಾಕುತ್ತಾ ಕಾಲಹರಣ ಮಾಡುವ ಬದಲು, ಮುಂದೆ ಆಗುವ ಕೆಲಸಗಳ ಬಗೆಗೆ ಕಾರ್ಯ ಪ್ರವೃತ್ತರಾಗಿ. ದಿನದ ಮಟ್ಟಿಗೆ ಅನಿವಾರ್ಯ ಕಾರಣಗಳಿಂದ ಖರ್ಚು. ಅನೇಕ ವಿಚಾರಗಳಿಂದ ಒತ್ತಡಕ್ಕೆ ಒಳಾಗಾಗುವ ಸಾಧ್ಯತೆ. ಕೋಪದಿಂದ ಏನನ್ನು ಸಾಧಿಸಲಾಗದು. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ:

Horoscope Today

ಕಟಕ: ಹಣದ ಹರಿವು ಹೆಚ್ಚಾಗಲಿದೆ. ಮಾನಸಿಕ ನೆಮ್ಮದಿ ಸಿಗುವುದು. ಹೊಸ ಭರವಸೆಯ ಅವಕಾಶಗಳು ಹುಡುಕಿಕೊಂಡು ಬರುವವು. ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಫಲ ಸಿಗಲಿದೆ. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

Horoscope Today

ಸಿಂಹ: ಕುಟುಂಬದ ಆಪ್ತರ ಹಾಗೂ ಸ್ನೇಹಿತರ ಸೂಕ್ತ ಸಲಹೆ ಸಹಕಾರ ಸಿಗುವುದು. ಒತ್ತಡದ ಜೀವನಕ್ಕೆ ಕೊಂಚ ಮಟ್ಟಿಗೆ ವಿಶ್ರಾಂತಿ ಸಿಗಲಿದೆ. ಹಣಕಾಸು ಪ್ರಗತಿ ಉತ್ತಮ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ, ಅಗತ್ಯವಿದ್ದಷ್ಟೇ ಮಾತನಾಡಿ, ಸಮಾಧಾನದಿಂದ ವರ್ತಿಸಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

Horoscope Today

ಕನ್ಯಾ: ಅನೇಕ ವಿಷಯಗಳು ನಿಮಗೆ ಒತ್ತಡ ಉಂಟುಮಾಡುವ ಸಾಧ್ಯತೆ. ಖರ್ಚು ಹೆಚ್ಚಾಗುವ ಸಾಧ್ಯತೆ. ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ. ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕುಟುಂಬದ ಅಸಹಕಾರದಿಂದ ಕಿರಿಕಿರಿ. ಉ‌ದ್ಯೋಗದಲ್ಲಿ ಮಿಶ್ರಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ:

Horoscope Today

ತುಲಾ: ಆಪ್ತ ಸಂಬಂಧಿಕರಿಂದ ಸಹಾಯ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ. ಹಣಕಾಸು ಪ್ರಗತಿ. ಹಳೆಯ ವಿಚಾರಗಳು ನಿಮ್ಮ ಮನಸ್ಸಿಗೆ ಘಾಸಿ ಮಾಡುವ ಸಾಧ್ಯತೆ, ಎಚ್ಚರಿಕೆ ಇರಲಿ. ಉತ್ತಮ ಆರೋಗ್ಯ, ಉದ್ಯೋಗದಲ್ಲಿ ಸಾಧಾರಣ. ಕುಟುಂಬದ ಸಹಕಾರ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

Horoscope Today

ವೃಶ್ಚಿಕ: ವಾಹನ ಚಾಲನೆ ಮಾಡುವಾಗ ಆದಷ್ಟು ಎಚ್ಚರಿಕೆ ವಹಿಸಿ. ಆಪ್ತರ ಸಲಹೆಗಳನ್ನು ತಿರಸ್ಕಾರ ಭಾವದಿಂದ ನೋಡಬೇಡಿ, ವ್ಯತಿರಿಕ್ತವಾದ ಪರಿಣಾಮದಿಂದಾಗಿ ಸ್ನೇಹದಲ್ಲಿ ಬಿರುಕು ಮೂಡುವ ಸಾಧ್ಯತೆ. ಅನಗತ್ಯ ಖರ್ಚು. ಆರೋಗ್ಯ ಸಾಧಾರಣ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ:

Horoscope Today

ಧನಸ್ಸು: ಅನಿರೀಕ್ಷಿತ ಪ್ರಯಾಣ. ಆತುರದ ಭರದಲ್ಲಿ ಅತಿರೇಕದ ಮಾತುಗಳು ಜಗಳ ಇರಬಹುದು, ಸಮಾಧಾನದಿಂದ ವರ್ತಿಸಿ. ಅಮೂಲ್ಯ ವಸ್ತುಗಳು ಕೈತಪ್ಪುವ ಸಾಧ್ಯತೆ, ಎಚ್ಚರಿಕೆ ಇರಲಿ. ಕುಟುಂಬ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡದಂತೆ ವರ್ತಿಸಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ:

Horoscope Today

ಮಕರ: ಆರೋಗ್ಯ ಉತ್ತಮ. ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳವಾಗುವ ಭರವಸೆ. ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುಲು ಪ್ರಯತ್ನಿಸುವಿರಿ. ಸಮಾರಂಭದ ಆಮಂತ್ರಣ ಬರುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

Horoscope Today

ಕುಂಭ: ಆಹಾರದ ಕ್ರಮ ಆರೋಗ್ಯದಲ್ಲಿ ವ್ಯತ್ಯಾಸ ಮೂಡಿಸಬಹುದು. ಅಮೂಲ್ಯ ವಸ್ತುಗಳ ಬಗೆಗೆ ಕಾಳಜಿ ವಹಿಸಿ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಉದ್ಯೋಗದಲ್ಲಿ ಪ್ರಗತಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ:

Horoscope Today

ಮೀನ: ಹಾಸ್ಯ ಪ್ರಜ್ಞೆಯಿಂದ ಕಾರ್ಯವನ್ನು ಸಾಧಿಸುವುದರಲ್ಲಿ ಯಶಸ್ಸು ಪಡೆಯುವಿರಿ. ಸಂಗಾತಿಯ ಹಸ್ತಕ್ಷೇಪ ನಿಮಗೆ ಮುಜುಗರ ಉಂಟು ಮಾಡುವ ಸಾಧ್ಯತೆ. ಉದ್ಯೋಗದಲ್ಲಿ ಭರವಸೆ ಮೂಡಲಿದೆ. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ:

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

ಇದನ್ನೂ ಓದಿ | Karka Sankranti 2022 | ಇಂದು ಕಟಕ ರಾಶಿಗೆ ಸೂರ್ಯನ ಸಂಚಾರ; ತಿಳಿಯಿರಿ ನಿಮ್ಮ ಭವಿಷ್ಯದ ವಿಚಾರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Lok Sabha Election: ಮತ ಚಲಾಯಿಸಿದ ರಾಷ್ಟ್ರಪತಿ ಮುರ್ಮು, ಸೋನಿಯಾ, ರಾಹುಲ್;‌ ಮತಕ್ಕಾಗಿ ಸರ್ಟಿಫಿಕೇಟ್ ಪಡೆದ ಜೈಶಂಕರ್‌!

Lok Sabha Election 2024: ದಿಲ್ಲಿಯ ಗಣ್ಯ ಮತಗಟ್ಟೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸಿ ಮತ ಚಲಾಯಿಸಿದರು. ಇನ್ನೊಂದು ಮತಗಟ್ಟೆಯಲ್ಲಿ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಮತ ಚಲಾಯಿಸಿ, ಇಂಕ್‌ ಹಾಕಿದ ತಮ್ಮ ಬೆರಳುಗಳನ್ನು ಪ್ರದರ್ಶಿಸಿದರು. ಪ್ರಿಯಾಂಕ ಗಾಂಧಿ ಅವರ ಮಕ್ಕಳಾದ ರೆಹಾನ್‌ ಮತ್ತು ಮಿರಾಯಾ ಕೂಡ ತಮ್ಮ ಮತಗಳನ್ನು ಚಲಾಯಿಸಿದರು.

VISTARANEWS.COM


on

lok sabha election 2024 jaishankar rahul sonia murmu
Koo

ಹೊಸದಿಲ್ಲಿ: ಇಂದು ನಡೆಯುತ್ತಿರುವ ಲೋಕಸಭೆ ಚುನಾವಣೆ (Lok Sabha Election 2024) 6ನೇ ಹಂತದ ಮತದಾನದಲ್ಲಿ (voting) ಈವರೆಗೆ ಹಲವು ಗಣ್ಯರು ಮತ ಚಲಾಯಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu), ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌, ಕಾಂಗ್ರೆಸ್‌ ಮುಖಂಡರಾದ ಸೋನಿಯಾ ಗಾಂಧಿ (Sonia Gandhi), ರಾಹುಲ್‌ ಗಾಂಧಿ (Rahul Gandhi) ತಮ್ಮ ಮತ ಚಲಾಯಿಸಿದರು.

ದಿಲ್ಲಿಯ ಗಣ್ಯ ಮತಗಟ್ಟೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸಿ ಮತ ಚಲಾಯಿಸಿದರು. ಇನ್ನೊಂದು ಮತಗಟ್ಟೆಯಲ್ಲಿ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಮತ ಚಲಾಯಿಸಿ, ಇಂಕ್‌ ಹಾಕಿದ ತಮ್ಮ ಬೆರಳುಗಳನ್ನು ಪ್ರದರ್ಶಿಸಿದರು. ಪ್ರಿಯಾಂಕ ಗಾಂಧಿ ಹಾಗೂ ಅವರ ಮಕ್ಕಳಾದ ರೆಹಾನ್‌ ಮತ್ತು ಮಿರಾಯಾ ಕೂಡ ತಮ್ಮ ಮತಗಳನ್ನು ಚಲಾಯಿಸಿದರು.

ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಮತ ಚಲಾಯಿಸಿ, “ಮತದಾನವು ಒಂದು ಜವಾಬ್ದಾರಿ ಮತ್ತು ಅಧಿಕಾರವಾಗಿದೆ. ಭಾರತವು ವಿಶ್ವದ ಅತ್ಯಂತ ವೈವಿಧ್ಯಮಯ, ಸಕ್ರಿಯ ಮತ್ತು ಪರಿಣಾಮಕಾರಿ ಪ್ರಜಾಪ್ರಭುತ್ವವಾಗಿದೆ” ಎಂದು ಹೇಳಿದರು. ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರೂ ಮತ ಹಾಕಿದರು.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ದೆಹಲಿಯಲ್ಲಿ ಮತ ಚಲಾಯಿಸಿದರು. ತಮ್ಮ ಗೊತ್ತುಪಡಿಸಿದ ಮತಗಟ್ಟೆಯಲ್ಲಿ ಮೊದಲ ಪುರುಷ ಮತದಾರರಾಗಿದ್ದ ಕಾರಣ ಅವರು ಈ ಮತದಾನಕ್ಕಾಗಿ ಪ್ರಮಾಣಪತ್ರವನ್ನು ಸಹ ಪಡೆದರು. “ಈ ಬೂತ್‌ನಲ್ಲಿ ನಾನು ಮೊದಲ ಪುರುಷ ಮತದಾರನಾಗಿದ್ದೇನೆ” ಎಂದು ಜೈಶಂಕರ್ ತಮ್ಮ ಪ್ರಮಾಣಪತ್ರವನ್ನು ಹಿಡಿದುಕೊಂಡು ಫೋಟೋ ತೆಗೆಸಿಕೊಂಡರಲ್ಲದೆ, ಛಾಯಾಚಿತ್ರವನ್ನು ತಮ್ಮ x ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದಕ್ಕೂ ಮುನ್ನ ಅವರ ಮತಗಟ್ಟೆಯ ವಿಚಾರದಲ್ಲಿ ಗೊಂದಲ ಉಂಟಾಯಿತು. ಮೊದಲು ಬೇರೆ ಮತಗಟ್ಟೆಗೆ ತೆರಲಿದ ಅವರು, ನಂತರ ಸರಿಯಾದ ಮತಗಟ್ಟೆಗೆ ಹೋಗಿ ಮತ ಚಲಾಯಿಸಿದರು. “”ದೇಶಕ್ಕೆ ಇದು ನಿರ್ಣಾಯಕ ಕ್ಷಣವಾಗಿರುವುದರಿಂದ ಜನರು ಹೊರಗೆ ಬಂದು ಮತ ಚಲಾಯಿಸಬೇಕೆಂದು ನಾವು ಬಯಸುತ್ತೇವೆ. ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ನನಗೆ ವಿಶ್ವಾಸವಿದೆ” ಎಂದು ಅವರು ಮತದಾನದ ನಂತರ ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ, ಪಿಡಿಪಿ ಮುಖ್ಯಸ್ಥೆ ಮತ್ತು ಅನಂತನಾಗ್-ರಜೌರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮೆಹಬೂಬಾ ಮುಫ್ತಿ (Mehabuba Mufti) ಅವರು ಪಕ್ಷದ ಮುಖಂಡರು ಮತ್ತು ಬೆಂಬಲಿಗರೊಂದಿಗೆ ತಮ್ಮ ಕಾರ್ಯಕರ್ತರ ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಚುನಾವಣೆಗಳಲ್ಲಿ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿದರು. PDP ಪೋಲಿಂಗ್ ಏಜೆಂಟ್‌ಗಳು ಮತ್ತು ಕಾರ್ಯಕರ್ತರನ್ನು ಯಾವುದೇ ಕಾರಣವಿಲ್ಲದೆ ಬಂಧಿಸಲಾಗಿದೆ ಎಂದು ಮುಫ್ತಿ ಹೇಳಿಕೊಂಡಿದ್ದಾರೆ.

9 ಗಂಟೆವರೆಗಿನ ಮತದಾನ ಪ್ರಮಾಣ ಹೀಗಿದೆ:

ಬಿಹಾರ : 9.66
ಹರಿಯಾಣ : 8.31
ಜಮ್ಮು & ಕಾಶ್ಮೀರ : 8.89
ಜಾರ್ಖಂಡ್ : 11.74
ದಿಲ್ಲಿ : 8.94
ಒಡಿಶಾ : 7.43
ಉತ್ತರ ಪ್ರದೇಶ : 12.33
ಪಶ್ಚಿಮ ಬಂಗಾಳ : 16.54

ಯಾವ ರಾಜ್ಯಗಳ ಎಷ್ಟು ಕ್ಷೇತ್ರಗಳಲ್ಲಿ ಮತದಾನ?

ಆರನೇ ಹಂತದಲ್ಲಿ 5.84 ಕೋಟಿ ಪುರುಷರು, 5.29 ಕೋಟಿ ಮಹಿಳೆಯರು, 5120 ತೃತೀಯ ಲಿಂಗಿಗಳು ಸೇರಿ ಒಟ್ಟು 11.13 ಕೋಟಿ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಬಿಹಾರದ 8 ಸ್ಥಾನಗಳು, ಹರಿಯಾಣದ ಎಲ್ಲ 10 ಸ್ಥಾನ, ಜಾರ್ಖಂಡ್‌ 4, ಜಮ್ಮು-ಕಾಶ್ಮೀರ 1, ದೆಹಲಿಯ ಎಲ್ಲ 7 ಸ್ಥಾನ, ಒಡಿಶಾ 6, ಉತ್ತರ ಪ್ರದೇಶ 14 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಲ್ಲಿ ವೋಟಿಂಗ್‌ ನಡೆಯಲಿದೆ. ಒಟ್ಟು 889 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿ ಇದ್ದಾರೆ.

ಇದನ್ನೂ ಓದಿ: Lok Sabha Election: 58 ಕ್ಷೇತ್ರಗಳಲ್ಲಿ 6ನೇ ಹಂತದ ಮತದಾನ ಆರಂಭ; ಜೈಶಂಕರ್‌ ಮತಗಟ್ಟೆ ಗೊಂದಲ, ಮುಫ್ತಿ ಪ್ರತಿಭಟನೆ

Continue Reading

ಪ್ರವಾಸ

Konark Tourist Destination: ರಜೆಯಲ್ಲಿ ಕೋನಾರ್ಕ್‌ಗೆ ಹೋದಾಗ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಲು ಮರೆಯಬೇಡಿ

ರಜಾ ದಿನಗಳಲ್ಲಿ ಪ್ರವಾಸ ಮಾಡಲು ಕೋನಾರ್ಕ್ ಸೂಕ್ತ ಸ್ಥಳ. ಒಡಿಶಾ ರಾಜ್ಯದ ಪುರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾದ ಕೋನಾರ್ಕ್ ನಲ್ಲಿ ನಿಮಗೆ ನೋಡಲು ಹಲವು ಸ್ಥಳಗಳಿವೆ. ಅಲ್ಲಿ ನೀವು ನೋಡಲೇ ಬೇಕಾದ ಆಕರ್ಷಕ ಸ್ಥಳಗಳು ಯಾವವು? ಪ್ರಮುಖ ಸ್ಥಳಗಳ ಪಟ್ಟಿ ಮತ್ತು ಅವುಗಳ ಕಿರು (Konark tourist destination) ಪರಿಚಯ ಇಲ್ಲಿದೆ.

VISTARANEWS.COM


on

Konark Tourist Destination
Koo

ರಜಾ ದಿನಗಳಲ್ಲಿ ಪ್ರವಾಸ ಮಾಡಲು ಕೋನಾರ್ಕ್ ಸೂಕ್ತ ಸ್ಥಳ. ಒಡಿಶಾ ರಾಜ್ಯದ ಪುರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾದ ಕೋನಾರ್ಕ್ ನಲ್ಲಿ ನಿಮಗೆ ನೋಡಲು ಹಲವು ಸ್ಥಳಗಳಿವೆ. ಅಲ್ಲಿ ನೀವು ನೋಡಲೇ ಬೇಕಾದ ಆಕರ್ಷಕ ಸ್ಥಳಗಳ (Konark tourist destination) ಪಟ್ಟಿ ಇಲ್ಲಿದೆ.

Konark Sun Temple

ಕೋನಾರ್ಕ್ ಸೂರ್ಯ ದೇವಾಲಯ

ಇದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಇದನ್ನು 13ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಈ ದೇವಾಲಯವನ್ನು ಕುದುರೆಗಳಿಂದ ಎಳೆಯಲ್ಪಟ್ಟ ದೈತ್ಯ ರಥದ ರೂಪದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಗಂಗಾ ರಾಜವಂಶದ ವಾಸ್ತುಶಿಲ್ಪ ಕಲೆಯು ಕಲ್ಲಿನ ಪ್ರತಿ ಇಂಚಿನಲ್ಲೂ ಕಂಡುಬರುತ್ತದೆ. ರಾಶಿಚಕ್ರಗಳ ಮೂಲಕ ಸೂರ್ಯನ ಚಲನೆಯನ್ನು ಸಂಕೇತಿಸುವ ದೈತ್ಯ ಚಕ್ರಗಳ ಜೋಡಿಗಳನ್ನು ಕೆತ್ತಲಾಗಿದೆ. ಇಲ್ಲಿ ಎತ್ತರದ ಕಲ್ಲಿನ ಕಂಬಗಳು ಮತ್ತು ಭವ್ಯವಾದ ವೇದಿಕೆಯ ವ್ಯವಸ್ಥೆ ಇದೆ. ಇಲ್ಲಿ ಕಾಸ್ಮಿಕ ಆಚರಣೆಗಳನ್ನು ನಡೆಸಲಾಗುತ್ತಿತ್ತು. ಇದು ಇಂದಿಗೂ ಪ್ರವಾಸಿಗರನ್ನು ಆಕರ್ಷಿಸುತ್ತದೆ.

Konark Beach

ಕೋನಾರ್ಕ್ ಬೀಚ್

ಬಂಗಾಳ ಕೊಲ್ಲಿಯ ಸಮುದ್ರ ಮತ್ತು ಕೋನಾರ್ಕ್ ದೇವಾಲಯದ ಆವರಣದ ಸುತ್ತಲೂ ಆವರಿಸಿರುವ ಸುಂದರ ರಮಣೀಯವಾದ ಬೀಚ್ ಇದಾಗಿದೆ. ಇದರ ಶಾಂತವಾದ ನೀಲಿ ಬಣ್ಣದ ನೀರು ಮತ್ತು ದಡದಲ್ಲಿರುವ ಕ್ಯಾಸುರಿನಾಸ್ ಮರಗಳಿಂದ ಕೂಡಿದ ಚಿನ್ನದಂತೆ ಹೊಳೆಯುವ ಮರಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ನಗರ ಜೀವನದಿಂದ ಬೇಸತ್ತ ಜನರು ನಿಮ್ಮ ಮನಸ್ಸಿನ ಬೇಸರ ಕಳೆಯಲು ಇಲ್ಲಿಗೆ ಬರಬಹುದು.

Konark Dance Festival

ಕೋನಾರ್ಕ್ ನೃತ್ಯ ಉತ್ಸವ

ಕೋನಾರ್ಕ್ ನ ಭವ್ಯವಾದ ಸೂರ್ಯ ದೇವಾಲಯದ ಎದುರು ಇರುವಂತಹ ತೆರೆದ ಸಭಾಂಗಣಗಳಲ್ಲಿ ಶಾಸ್ತ್ರೀಯ ನೃತ್ಯ ಉತ್ಸವವನ್ನು ನಡೆಸಲಾಗುತ್ತದೆ. ಇದನ್ನು ಒಡಿಶಾ ಪ್ರವಾಸೋದ್ಯಮವು ಪ್ರತಿವರ್ಷ ಡಿಸೆಂಬರ್ ನ ಆರಂಭದಲ್ಲಿ ಆಯೋಜಿಸುತ್ತದೆ. ದೇಶದ ವೈವಿಧ್ಯಮಯ ಪ್ರದರ್ಶನ ಕಲೆಗಳ ಪರಂಪರೆಯನ್ನು ತಿಳಿಸುವ ಪ್ರಖ್ಯಾತ ವ್ಯಕ್ತಿಗಳಿಂದ ಅಸಾಧಾರಣ ಪ್ರದರ್ಶನಗಳನ್ನು ಇಲ್ಲಿ ಪ್ರದರ್ಶಿಸಿಲಾಗುತ್ತದೆ.

Ramachandi Temple Konark

ರಾಮಚಂಡಿ ದೇವಸ್ಥಾನ

ಇದು ದಂತಕಥೆಗಳನ್ನು ಸಾರುವ ಕುಶ ಭದ್ರಾ ನದಿಯ ಸೊಂಪಾದ ದಡದಲ್ಲಿ ನೆಲೆಸಿರುವ ಪುರಾತನ ದೇವಾಯವಾಗಿದೆ.ಪುರಾಣಗಳ ಪ್ರಕಾರಣ ಇಲ್ಲಿನ ದೇವತೆ ರಾಮಚಂಡಿ ಭೂಮಿಯಲ್ಲಿ ದುಷ್ಟತನದಿಂದ ಮರೆದ ರಾಕ್ಷಸರನ್ನು ಸಂಹರಿಸಿ ಇಲ್ಲಿ ನೆಲೆಸಿದಳು ಎಂಬ ನಂಬಿಕೆ ಇದೆ. ದೇವಾಲಯ ಮುಂಭಾಗದಲ್ಲಿ ಸುಂದರವಾದ ಕೆಂಪು ಮತ್ತು ಬಿಳಿ ಸ್ತಂಭಗಳಿದ್ದು, ಇದನ್ನು ಶತಮಾನಗಳ ಹಿಂದೆ ನಿರ್ಮಿಸಲಾಗಿದೆ ಎನ್ನಲಾಗಿದೆ. ಇಲ್ಲಿ ಪ್ರತಿದಿನ ಭಕ್ತರು ಮಣ್ಣಿನ ದೀಪಗಳನ್ನು ಬೆಳಗಿಸುತ್ತಾರಂತೆ.

Chandrabhaga Beach Konark

ಚಂದ್ರಭಾಗ ಬೀಚ್

ಪುರಿ ಕೋನಾರ್ಕ್ ಮೆರೈನ್ ಡ್ರೈವ್ ರಸ್ತೆಯಲ್ಲಿರುವ ಕೋನಾರ್ಕ್ ಸೂರ್ಯದೇವಾಲಯದಿಂದ ಕೇವಲ 3 ಕಿಮೀ ದೂರದಲ್ಲಿರುವ ಚಂದ್ರಭಾಗ ಬೀಚ್ ನಿಮ್ಮ ರಜಾದಿನಗಳನ್ನು ಕಳೆಯಲು ಹೆಚ್ಚು ಪ್ರಶಸ್ತವಾದ ಸ್ಥಳವಾಗಿದೆ. ಇಲ್ಲಿ ಮಾಘ ಸಪ್ತಮಿ ಆಚರಣೆಗಳು, ಅದ್ಭುತವಾದ ಸೂರ್ಯೋದಯವನ್ನು ವೀಕ್ಷಿಸಬಹುದು.

Archaeological Museum Konark

ಆರ್ಕಿಯಾಲಾಜಿಕಲ್ ಮ್ಯೂಸಿಯಂ ಕೋನಾರ್ಕ್

ಸೂರ್ಯದೇವಾಲಯದಿಂದ 2 ಕಿಮೀ ದೂರದಲ್ಲಿರುವ ಈ ಪುಟ್ಟ ಮ್ಯೂಸಿಯಂ ನಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಕುತೂಹಲಕಾರಿ ವಸ್ತುಗಳಿವೆ. ಇಲ್ಲಿ ಪ್ರಾಚೀನ ಕಲ್ಲಿನ ಕಲಾಕೃತಿಗಳು , ದೇವಾಲಯದ ತುಣುಕುಗಳು ಮತ್ತು ಸುತ್ತಮುತ್ತಲಿನ ಸ್ಥಳಗಳಿಂದ ದೊರೆತ ವಸ್ತುಗಳಿಂದ ತಯಾರಿಸಿದ ಪ್ರತಿಮೆಗಳು ಕಂಡುಬರುತ್ತದೆ.

Kuruma Village Konark

ಕುರುಮಾ ಗ್ರಾಮ

ಚೌರಾಸಿ ದೇವಸ್ಥಾನದಿಂದ ಕೋನಾರ್ಕ್ ನ ಪಶ್ಚಿಮಕ್ಕೆ ಕೇವಲ 3 ಕಿ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಹಸಿರು ಭತ್ತದ ಗದ್ದೆಗಳು ಮತ್ತು ಗ್ರಾಮೀಣ ಪರಿಸರ ಕಂಡುಬರುತ್ತದೆ. ಇಲ್ಲಿ ಬೆನಿಗ್ನ್ ಭೌಮಕರ ಆಳ್ವಿಕೆಯಲ್ಲಿ ನಿರ್ಮಿಸಲಾದ 8ನೇ ಶತಮಾನದ ಪ್ರಾಚೀನ ಬೌದ್ಧ ಸಾಂಸ್ಕೃತಿಕ ಕೇಂದ್ರದ ಅವಶೇಷಗಳು ಕಂಡುಬರುತ್ತದೆ. ಈ ಅವಶೇಷಗಳ ಮೂಲಕ ಇಟ್ಟಿಗೆ ಸ್ತೂಪಗಳು, ನಿವಾಸಿ ವಿಹಾರಗಳು ಮತ್ತು ಅಲಂಕಾರಿಕ ಬಾಗಿಲು ಜಾಮ್ ಗಳಂತಹ ರಚನೆಗಳನ್ನು ಒಳಗೊಂಡಿರುವುದು ತಿಳಿಯುತ್ತದೆ.

ಕೋನಾರ್ಕ್ ಖಗೋಳ ವೀಕ್ಷಣಾಲಯ

ಇದು ಪುರಾತನ ಗ್ರಂಥಗಳು, ಕೋನಾರ್ಕ್ ದೇವಾಲಯದ ನಿರ್ಮಾತೃಗಳು ಕ್ರಿಯಾ ವಿಧಿಗಳನ್ನು ಯೋಜಿಸಲು, ಪ್ರಗತಿಯನ್ನು ನ್ಯಾವಿಗೆಟ್ ಮಾಡಲು ರಚಿಸಿರುವ ವಿಸ್ತಾರವಾದ ಖಗೋಳ ವಿದ್ಯಮಾನಗಳನ್ನು ದಾಖಲಿಸುತ್ತದೆ. ಇಲ್ಲಿ ಇಂದಿಗೂ ಖಗೋಳಶಾಸ್ತ್ರಜ್ಞರನ್ನು ಆಕರ್ಷಿಸುವಂತಹ ಕಾಸ್ಮಿಕ್ ಮಾರ್ಗಗಳು ಮತ್ತು ಗ್ರಹಗಳ ಸ್ಥಾನಗಳನ್ನು ಅರ್ಥೈಸಲು ಪುರೋಹಿತರು ಬಳಸುವ ಸನ್ಡಿಯಲ್ ಗಳು, ಸಮಭಾಜಕ ಉಂಗುರುಗಳು ಮತ್ತು ಕಮಾನಿನ ಮೆರಿಡಿಯನ್ ಗಳಂತಹ ಕಲ್ಲಿನ ಉಪಹರಣಗಳಿವೆ.

ಇದನ್ನೂ ಓದಿ: Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

ಮೆರೈನ್ ಡ್ರೈವ್ ಇಕೋ ರಿಟ್ರೀಟ್ ಕೋನಾರ್ಕ್

ಕೋನಾರ್ಕ್ ಮೆರೈನ್ ಡ್ರೈವ್ ಉದ್ದಕ್ಕೂ ಬೀಚ್ ವಿಲೇಜ್ ಪ್ರಕೃತಿ ರೆಸಾರ್ಟ್ ಅನ್ನು ಪರಿಶೀಲಿಸುವ ಮೂಲಕ ಬಂಗಾಳಕೊಲ್ಲಿಯ ನೀಲಿ ನೀರು ಮತ್ತು ಕ್ಯಾಸುರಿನಾ ಮರಗಳೊಳಗೆ ಸುಸ್ಥಿರ ಐಷರಾಮಿಗಳನ್ನು ನೀವು ಆರಿಸಬಹುದು. ಪರಿಸರ ಸ್ನೇಹಿ ಕುಟೀರಗಳು, ಬಿದಿರಿನ ಗುಡಿಸಲುಗಳು ಅಥವಾ ಟೆಂಟ್ ಹೌಸ್ ಗಳಲ್ಲಿ ನೀವು ಪಕ್ಷಿ ವೀಕ್ಷಣೆಯನ್ನು ಮಾಡಬಹುದು.

Continue Reading

ಕ್ರೀಡೆ

IPL 2024: ಐಪಿಎಲ್​ ಟ್ರೋಫಿಯಲ್ಲಿರುವ ಸಂಸ್ಕೃತ ಶ್ಲೋಕದ ಮೂಲ ಸಾರವೇನು?

IPL 2024: ಕಪಿಲ್​ ಸಾರಥ್ಯದಲ್ಲಿ ಗೆದ್ದ ವಿಶ್ವ ಕಪ್​ ಮೇಲೆ “ಯತ್ರಾ ಅವಸರ ಪ್ರಾಪ್ನೋತಿಹಿ” ಎಂದು ಬರೆಯಲಾಗಿತ್ತು. ಇದನ್ನೇ ಪ್ರಸಿದ್ಧ ಐಪಿಎಲ್​ ಟ್ರೋಫಿಯಲ್ಲಿಯೂ ಬರೆಯಲಾಗಿದೆ. ಐಪಿಎಲ್​ ಎಂಬುದು ಸ್ಥಳೀಯ ಆಟಗಾರರ ಪ್ರತಿಭೆಯನ್ನು ಅನಾವರಣ ಮಾಡಿಸಲು ಇರುವಂತ ಉತ್ತಮ ವೇದಿಕೆಯಾಗಿದೆ.

VISTARANEWS.COM


on

IPL 2024
Koo

ಚೆನ್ನೈ: ವಿಶ್ವದಲ್ಲೇ ಅತ್ಯಂತ ಶ್ರೀಮಂತ ಟಿ20 ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ 17ನೇ ಆವೃತ್ತಿ(IPL 2024) ಕೊನೆಯ ಹಂತಕ್ಕೆ ಬಂದು ನಿಂತಿದೆ. ನಾಳೆ(ಭಾನುವಾರ) ನಡೆಯುವ ಫೈನಲ್​ ಪಂದ್ಯದಲ್ಲಿ ಕೆಕೆಆರ್​ ಮತ್ತು ಹೈದರಾಬಾದ್​ ತಂಡಗಳು ಕದಾಟ ನಡೆಸಲಿದೆ. ಟೂರ್ನಿಗೆ ವಿಧ್ಯುಕ್ತ ಚಾಲನೆ ಸಿಕ್ಕ ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿಯೇ ಕೂಟಕ್ಕೆ ತೆರೆ ಬೀಳಲಿದೆ. ಈ ಬಾರಿ ಚಾಂಪಿಯನ್​ ಯಾರಾಗಬಹುದು ಎನ್ನುವ ಕುತೂಹಲದ ಮಧ್ಯೆ ಟ್ರೋಫಿಯಲ್ಲಿ(IPL Trophy) ಬರೆದಿರುವ ಸಂಸ್ಕೃತ ಶ್ಲೋಕದ(IPL Trophy Shlok) ಅರ್ಥವೇನು? 1983ರ ವಿಶ್ವಕಪ್(1983 Cricket World Cup) ಟ್ರೋಫಿಗೂ ಇರುವ ನಂಟೇನು?​ ಎಂಬ ಮತ್ತೊಂದು ಕುತೂಹಲ ಅಭಿಮಾನಿಗಳದ್ದು.

ಭಾರತದ ಮೊದಲ ವಿಶ್ವಕಪ್​ ನಂಟು


ಐಪಿಎಲ್​ ಟ್ರೋಫಿಯಲ್ಲಿ ಬರೆದಿರುವ ಸಂಸ್ಕೃತ ಶ್ಲೋಕಕ್ಕೂ 1983ರ ವಿಶ್ವಕಪ್ ಟ್ರೋಫಿಗೂ ನಂಟಿದೆ. ಹೌದು, ಭಾರತ ತಂಡ 1983ರಲ್ಲಿ ಗೆದ್ದ ಏಕದಿನ ವಿಶ್ವಕಪ್ ಟ್ರೋಫಿ ಮೇಲೆ “ಯತ್ರಾ ಅವಸರ ಪ್ರಾಪ್ನೋತಿಹಿ”(Yatra Pratibha Avsara Prapnotihi) ಎಂಬ ಸಂಸ್ಕೃತ ಶ್ಲೋಕವೊಂದನ್ನು ಬರೆಯಲಾಗಿತ್ತು. ಇದೇ ಶ್ಲೋಕವನ್ನು ಐಪಿಎಲ್​ ಟ್ರೋಫಿಯಲ್ಲಿಯೂ ಬರೆಯಲಾಗಿದೆ. ಇದರ ಅರ್ಥ ಎಲ್ಲಿ ಪ್ರತಿಭೆಗಳು ಇರುತ್ತಾರೋ ಅಲ್ಲಿ ಅವಕಾಶವೂ ಇರುತ್ತದೆ ಎಂದು. ಇದನ್ನೇ ಸ್ಫೂರ್ತಿಯನ್ನಾಗಿಟ್ಟುಕೊಂಡು ಐಪಿಎಲ್​ ಟ್ರೋಫಿಯ ಮೇಲೂ ಈ ಶ್ಲೋಕವನ್ನು ಕೆತ್ತಲಾಗಿದೆ.


1983ರಲ್ಲಿ ಕಪಿಲ್​ ದೇವ್​ ಸಾರಥ್ಯದ ಭಾರತ ತಂಡ ಲಂಡನ್​ಗೆ ವಿಶ್ವಕಪ್​ ಆಡಲು ತೆರಳಿದ್ದಾಗ ಭಾರತ ತಂಡವನ್ನು ಅತ್ಯಂತ ಕೀಳು ಮಟ್ಟದಲ್ಲಿ ಅಪಮಾನ ಮಾಡಲಾಗಿತ್ತು. ಅದರಲ್ಲೂ ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ಮಾಧ್ಯಮಗಳು ಕೆಲ ಸವಾಲನ್ನು ಹಾಕಿದ್ದವು. ಸ್ವತಃ ಭಾರತೀಯರೀಗೂ ಕಪ್​ ಗೆಲ್ಲುವ ವಿಶ್ವಾಸವಿರಲಿಲ್ಲ. ಆದರೆ ಅಂದು ಕಪೀಲ್​ ದೇವ್​ ಪಡೆ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು.

ಕಪಿಲ್​ ಸಾರಥ್ಯದಲ್ಲಿ ಗೆದ್ದ ವಿಶ್ವ ಕಪ್​ ಮೇಲೆ “ಯತ್ರಾ ಅವಸರ ಪ್ರಾಪ್ನೋತಿಹಿ” ಎಂದು ಬರೆಯಲಾಗಿತ್ತು. ಇದನ್ನೇ ಪ್ರಸಿದ್ಧ ಐಪಿಎಲ್​ ಟ್ರೋಫಿಯಲ್ಲಿಯೂ ಬರೆಯಲಾಗಿದೆ. ಐಪಿಎಲ್​ ಎಂಬುದು ಸ್ಥಳೀಯ ಆಟಗಾರರ ಪ್ರತಿಭೆಯನ್ನು ಅನಾವರಣ ಮಾಡಿಸಲು ಇರುವಂತ ಉತ್ತಮ ವೇದಿಕೆಯಾಗಿದೆ. ಈ ಟೂರ್ನಿಯಿಂದ ಅದೆಷ್ಟೋ ಆಟಗಾರರು ಬೆಳಕಿಗೆ ಬಂದು ಇಂದು ವಿಶ್ವದ ನಂ.1 ಆಟಗಾರರಾಗಿಯೂ ಮೆರೆದಾಡಿದ್ದಾರೆ. ಈ ಕಾರಣದಿಂದ ಟ್ರೋಫಿ ಮೇಲೆ ಬರೆದಿರುವ ಶ್ಲೋಕ ಅರ್ಥಪೂರ್ಣವಾಗಿದೆ.

ಇದನ್ನೂ ಓದಿ IPL 2024 Prize money: ಐಪಿಎಲ್​ ವಿನ್ನರ್​ಗೆ ಸಿಗುವ ಬಹುಮಾನ ಮೊತ್ತವೆಷ್ಟು? 4ನೇ ಸ್ಥಾನಿ ಆರ್​ಸಿಬಿಗೆ ಸಿಕ್ಕ ಹಣವೆಷ್ಟು?

ಒಟ್ಟು 46.5 ಕೋಟಿ ರೂ. ಬಹುಮಾನ ಮೊತ್ತ


ಫೈನಲ್​ನಲ್ಲಿ ವಿಜೇತ ತಂಡ 20 ಕೋಟಿ ರೂಪಾಯಿ ಬಹುಮಾನವನ್ನು ಪಡೆಯಲಿದೆ. ರನ್ನರ್ ಅಪ್‌ ತಂಡಕ್ಕೆ 15 ಕೋಟಿ ರೂ. ಸಿಗಲಿದೆ. ಮೂರನೇ ಸ್ಥಾನಿಯಾದ ತಂಡಕ್ಕೆ 7 ಕೋಟಿ ಮತ್ತು 4ನೇ ಸ್ಥಾನಿಗೆ 6.5 ಕೋಟಿ ರೂ ಸಿಗಲಿದೆ. ಈಗಾಗಲೇ ರಾಜಸ್ಥಾನ್​ ಮತ್ತು ಆರ್​ಸಿಬಿ ಪ್ಲೇ ಆಫ್​ನಲ್ಲಿ ಸೋಲಿ ಕಂಡು ಕ್ರಮವಾಗಿ 3 ಮತ್ತು ನಾಲ್ಕನೇ ಸ್ಥಾನ ಪಡೆದಿವೆ. ಹೀಗಾಗಿ ರಾಜಸ್ಥಾನ್​ಗೆ(7 ಕೋಟಿ) ಮತ್ತು ಆರ್​ಸಿಬಿಗೆ(6.5 ಕೋಟಿ) ಮೊತ್ತ ಸಿಗಲಿದೆ. ಒಟ್ಟು ಬಹುಮಾನ ಮೊತ್ತ 46.5 ಕೋಟಿ ರೂ. ಆಗಿದೆ.

Continue Reading

ಪ್ರವಾಸ

Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

ಆಧ್ಯಾತ್ಮದಲ್ಲಿ ಆಸಕ್ತಿ ಇರುವ, ದೇವಸ್ಥಾನಗಳ ಭೇಟಿಯಿಂದ ಶಾಂತಿ ನೆಮ್ಮದಿ ಕಂಡುಕೊಳ್ಳುವ ಯಾರೇ ಆದರೂ, ತಮಿಳುನಾಡಿನ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ಕೊಡಲು ಬಯಸುತ್ತಾರೆ. ಬೃಹತ್‌ ದೇವಸ್ಥಾನಗಳು, ಪುರಾತನ ಐತಿಹಾಸಿಕ ದೇವಸ್ಥಾನಗಳ ದರ್ಶನ ಮಾಡಿಕೊಂಡು ಪುನೀತರಾಗುವ ಇಚ್ಛೆ ಇರುವ ಮಂದಿ ತಮಿಳುನಾಡಿನ ಈ ಪ್ರಮುಖ ದೇವಸ್ಥಾನಗಳಿಗೆ ಜೀವಿತಾವಧಿಯಲ್ಲಿ ಒಮ್ಮೆಯಾದರೂ (Best Tourist Places In Tamilnadu) ಹೋಗಿ ಬರಬೇಕು.

VISTARANEWS.COM


on

Best Tourist Places In Tamilnadu
Koo

ತಮಿಳುನಾಡು ಎಂದ ತಕ್ಷಣ ನೆನಪಾಗುವುದು ಸುಂದರ ದೇವಸ್ಥಾನಗಳು, ಈ ದೇವಸ್ಥಾನಗಳಲ್ಲಿ ಸಿಗುವ ರುಚಿಯಾದ ಪ್ರಸಾದ, ಸಾಂಪ್ರದಾಯಿಕ ಉಡುಗೆ ತೊಡುಗೆಗಳು, ಹೊಟ್ಟೆ ತುಂಬಿಸುವ ಸೊಗಸಾದ ಊಟ. ಆಧ್ಯಾತ್ಮದಲ್ಲಿ ಆಸಕ್ತಿ ಇರುವ, ದೇವಸ್ಥಾನಗಳ ಭೇಟಿಯಿಂದ ಶಾಂತಿ ನೆಮ್ಮದಿ ಕಂಡುಕೊಳ್ಳುವ ಯಾರೇ ಆದರೂ, ತಮಿಳುನಾಡಿನ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ಕೊಡಲು ಬಯಸುತ್ತಾರೆ. ಬೃಹತ್‌ ದೇವಸ್ಥಾನಗಳು, ಪುರಾತನ ಐತಿಹಾಸಿಕ ದೇವಸ್ಥಾನಗಳ ದರ್ಶನ ಮಾಡಿಕೊಂಡು ಪುನೀತರಾಗುವ ಇಚ್ಛೆ ಇರುವ ಮಂದಿ ತಮಿಳುನಾಡಿನ ಈ ಪ್ರಮುಖ ದೇವಸ್ಥಾನಗಳಿಗೆ ಜೀವಿತಾವಧಿಯಲ್ಲಿ ಒಮ್ಮೆಯಾದರೂ (Best Tourist Places In Tamilnadu) ಹೋಗಿ ಬರಬೇಕು.

Meenakshi Temple, Madurai

ಮೀನಾಕ್ಷಿ ದೇವಸ್ಥಾನ, ಮಧುರೈ

ತಮಿಳುನಾಡಿನ ಅತ್ಯಂತ ಪ್ರಸಿದ್ಧವಾದ ದೇವಸ್ಥಾನಗಳ ಪೈಕಿ ಮಧುರೈನ ಮೀನಾಕ್ಷಿ ದೇವಾಲಯ ಪ್ರಮುಖವಾದುದು. ಇಲ್ಲಿ ಶಿವನನ್ನು ಸುಂದರೇಶ್ವರನ ಹೆಸರಿನಲ್ಲೂ, ಪಾರ್ವತಿಯನ್ನು ಮೀನಾಕ್ಷಿಯ ಹೆಸರಿನಲ್ಲೂ ಪೂಜಿಸಲಾಗುತ್ತದೆ. ಬೃಹತ್‌ ದೇವಾಲಯ ಸಮುಚ್ಛಯವಾಗಿರುವ ಇದಕ್ಕೆ ಒಮ್ಮೆ ಒಳಗೆ ಹೊಕ್ಕರೆ, ಹೊರಬರಲು ಕೆಲವು ಗಂಟೆಗಳು ಬೇಕು. ಸುಮಾರು 16ನೇ ಶತಮಾನದ್ದೆಂದು ಹೇಳಲಾಗುವ ಈ ದೇವಾಲಯಕ್ಕೆ ನಿತ್ಯವೂ ಲಕ್ಷಗಟ್ಟಲೆ ಭಕ್ತರು ದೂರದೂರುಗಳಿಂದ ಬಂದು ದರ್ಶನ ಪಡೆಯುತ್ತಾರೆ. ಮಧುರೈಗೆ ಹೋದರೆ, ಇಲ್ಲಿನ ಸಾಂಪ್ರದಾಯಿಕ ಊಟ, ಜಿಗರ್‌ಥಂಡಾ, ದೋಸೆ, ಇಡ್ಲಿಗಳ ರುಚಿಯನ್ನು ಸವಿಯಲು ಮರೆಯಬೇಡಿ.

Kumari Amman Kovil, Kanyakumari

ಕುಮಾರಿ ಅಮ್ಮನ್‌ ಕೋಯಿಲ್‌, ಕನ್ಯಾಕುಮಾರಿ

51 ಶಕ್ತಿ ಪೀಠಗಳಲ್ಲಿ ಒಂದಾದ ಈ ದೇವಸ್ಥಾನದಲ್ಲಿ ದೇವಿಯು ಬಾಣಾಸುರನ ವಧೆಗಾಗಿ ಅವತರಿಸಿದ ಪುಟ್ಟ ಹುಡುಗಿಯ ರೂಪವನ್ನೇ ಇಲ್ಲಿ ಪೂಜಿಸಲಾಗುತ್ತದೆ. ಬಹಳ ಪ್ರಸಿದ್ಧವಾದ ಈ ದೇವಾಲಯವನ್ನು ನೋಡಲು ಹೋದರೆ, ಭಾರತದ ಕೆಳತುದಿಯಾದ ಕನ್ಯಾಕುಮಾರಿಯ ಹಲವು ಜಾಗಗಳಲ್ಲಿ ಸುತ್ತಾಡಿ ಬರಬಹುದು.

Nataraja Temple, Chidambaram

ನಟರಾಜ ದೇವಾಲಯ, ಚಿದಂಬರಂ

ಚಿದಂಬರಂನ ನಟರಾಜ ದೇವಸ್ಥಾನ ಕೂಡಾ ತಮಿಳುನಾಡಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಇಲ್ಲಿ ಗೋವಿಂದರಾಜ ಪೆರುಮಾಳ್‌ ಹಾಗೂ ನಟರಾಜನಾದ ಶಿವ ಇಬ್ಬರನ್ನೂ ಪ್ರಮುಖವಾಗಿ ಪೂಜಿಸಲಾಗುತ್ತದೆ. ಹಾಗಾಗಿ, ಶೈವ ಪಂಥ ಹಾಗೂ ವೈಷ್ಣವ ಪಂಥವನ್ನು ಅನುಸರಿಸುವ ಮಂದಿ ಇಲ್ಲಿಗೆ ದರ್ಶನ ನೀಡುತ್ತಾರೆ. ಹಾಗಾಗಿ ಎರಡೂ ಪಂಥದ ಮಂದಿಯನ್ನು ಸೆಳೆಯುವ ಅಪರೂಪದ ದೇವಸ್ಥಾನವಿದು.

Arunachaleshwar Temple, Thiruvannamalai

ಅರುಣಾಚಲೇಶ್ವರ ದೇವಸ್ಥಾನ, ತಿರುವಣ್ಣಾಮಲೈ

ಒಂಭತ್ತನೇ ಶತಮಾನದಲ್ಲಿ ಚೋಳರು ಕಟ್ಟಿಸಿದರೆನ್ನಲಾಗುವ ಈ ದೇವಸ್ಥಾನ ಅತ್ಯಂತ ಪ್ರಸಿದ್ಧವಾದ ಶಿವ ದೇವಸ್ಥಾನ. ಅಣ್ಣಾಮಲೈ ಬೆಟ್ಟದ ಬುಡದಲ್ಲಿರುವ ಈ ದೇವಾಲಯದ ಪ್ರಸಿದ್ಧ ಆಚರಣೆಗಳ ಪೈಕಿ ಗಿರಿವಲಂ ಕೂಡಾ ಒಂದು. ಸಾವಿರಾರು ಭಕ್ತರು ಪ್ರತಿ ಹುಣ್ಣಿಮೆಯ ದಿನ ಅಣ್ಣಾಮಲೈ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ರಾತ್ರಿಯಿಡೀ ಪ್ರದಕ್ಷಿಣೆ ಬಂದು ಅರುಣಾಚಲನ ದರ್ಶನ ಮಾಡುತ್ತಾರೆ.

ರಾಮನಾಥಸ್ವಾಮಿ ದೇವಸ್ಥಾನ, ರಾಮೇಶ್ವರಂ

ರಾಮೇಶ್ವರಂನಲ್ಲಿರುವ ಈ ಶಿವನ ದೇವಾಲಯ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿದೆ. ಸಮುದ್ರ ತೀರದಲ್ಲಿರುವ ಈ ದೇವಸ್ಥಾನದ ಲಿಂಗವನ್ನು ಸ್ವತಃ ಶ್ರೀರಾಮನೇ ಸೀತೆಯ ಹುಡುಕಾಟದಲ್ಲಿ ಇಲ್ಲಿಗೆ ಬಂದಾಗ ಪ್ರತಿಷ್ಠಾತಿಸಿ ಪೂಜಿಸಿದ ಎಂಬ ಸ್ಥಳಪುರಾಣವಿದೆ. 12ನೇ ಶತಮಾನದಲ್ಲಿ ಪಾಂಡ್ಯರಾಜರು ಈ ದೇವಾಲಯವನ್ನು ವಿಸ್ತರಿಸಿ ಪುನರುಜ್ಜೀವನಗೊಳಿಸಿದರು ಎಂದು ಇತಿಹಾಸ ಹೇಳುತ್ತದೆ.

Sri Ranganathaswamy Temple, Srirangam, Tiruchirappalli

ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಂ, ತಿರುಚಿರಾಪಳ್ಳಿ

ತ್ರಿಚಿ ಅಥವಾ ತಿರುಚಿರಾಪಳ್ಳಿಯ ರಂಗನಾಥ ಸ್ವಾಮಿ ದೇವಾಲಯ ಈಗಲೂ ಪೂಜೆ ನಡೆಯುವ ದೇವಸ್ಥಾನಗಳ ಪೈಕಿ ಅತ್ಯಂತ ವಿಸ್ತಾರವಾದ ದೇವಾಲಯ. ವೈಷ್ಣವ ಪಂಥದ ಮಂದಿಯ ಪ್ರಮುಖ ದೇವಾಲಯವಾದ ಇಲ್ಲಿ ಶ್ರೀಹರಿಯು ಗರ್ಭಗುಡಿಯಲ್ಲಿ ಶೇಷಶಯನದ ರೀತಿಯಲ್ಲಿ ಪವಡಿಸಿರುವುದು ವಿಶೇಷ.

Brihadeeswara Temple, Thanjavur

ಬೃಹದೀಶ್ವರ ದೇವಸ್ಥಾನ, ತಂಜಾವೂರು

11ನೇ ಶತಮಾನದಲ್ಲಿ ಚೋಳರ ಕಾಲದಲ್ಲಿ ಕಟ್ಟಲಾದ ಈ ದೇವಸ್ಥಾನ ಭಾರತದ ಪ್ರಮುಖ ಶಿವ ದೇವಾಲಯಗಳಲ್ಲಿ ಒಂದು. ನಿತ್ಯವೂ ಸಾವಿರಾರು ಭಕ್ತರು ಭೇಟಿಕೊಡುವ ಈ ದೇವಸ್ಥಾನ. ಇದು ತನ್ನ ಅತ್ಯಪೂರ್ವ ವಾಸ್ತುಶಿಲ್ಪ, ಕೆತ್ತನೆಗಳಿಂದಷ್ಟೇ ಅಲ್ಲ, ತನ್ನ ಹಲವು ವಿಸ್ಮಯಗಳಿಂದಲೂ ಬಲು ಪ್ರಸಿದ್ಧಿ. ಅದಕ್ಕಾಗಿಯೇ ನಿತ್ಯವೂ ಇಲ್ಲಿ ಭಕ್ತರಷ್ಟೇ ಅಲ್ಲ, ದೇಶವಿದೇಶಗಳಿಂದ ಪ್ರವಾಸಿಗರೂ ಅಚ್ಚರಿಯಿಂದ ಭೇಟಿ ನೀಡುತ್ತಾರೆ

Kapaleeswara Temple, Mylapore, Chennai

ಕಪಾಲೀಶ್ವರ ದೇವಸ್ಥಾನ, ಮೈಲಾಪುರ, ಚೆನ್ನೈ

ಪಲ್ಲವರ ಕಾಲದಲ್ಲಿ ಏಳನೇ ಶತಮಾನದಲ್ಲಿ ಕಟ್ಟಲಾದ ಈ ದೇವಸ್ಥಾನ, ಚೆನ್ನೈನ ಪ್ರಸಿದ್ಧ ದೇವಸ್ಥಾನಗಳ ಪೈಕಿ ಒಂದು. ಶಿವನನ್ನು ಇಲ್ಲಿ ಕಪಾಲೀಶ್ವರನ ಹೆಸರಿನಲ್ಲಿ ಪೂಜಿಸುತ್ತಾರೆ. ಚೆನ್ನೈಯಲ್ಲೇ ಇರುವ ಇದಕ್ಕೆ ನಿತ್ಯವೂ ಸಾವಿರಾರು ಭಕ್ತರು ನೆರೆಯುತ್ತಾರೆ.

ಇದನ್ನೂ ಓದಿ: South Indian Monsoon Destinations: ದಕ್ಷಿಣ ಭಾರತದ ಈ 6 ಸ್ಥಳಗಳಲ್ಲಿ ಮಳೆಗಾಲದಲ್ಲಿ ಚಾರಣ ಮಾಡಲೇಬೇಕು!

Continue Reading
Advertisement
Cylinder Blast at Belgavi
ಬೆಳಗಾವಿ20 mins ago

Cylinder Blast : ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ವೃದ್ಧ ದಂಪತಿ ವಾರದ ನಂತರ ಸಾವು

lok sabha election 2024 jaishankar rahul sonia murmu
ಪ್ರಮುಖ ಸುದ್ದಿ42 mins ago

Lok Sabha Election: ಮತ ಚಲಾಯಿಸಿದ ರಾಷ್ಟ್ರಪತಿ ಮುರ್ಮು, ಸೋನಿಯಾ, ರಾಹುಲ್;‌ ಮತಕ್ಕಾಗಿ ಸರ್ಟಿಫಿಕೇಟ್ ಪಡೆದ ಜೈಶಂಕರ್‌!

Konark Tourist Destination
ಪ್ರವಾಸ44 mins ago

Konark Tourist Destination: ರಜೆಯಲ್ಲಿ ಕೋನಾರ್ಕ್‌ಗೆ ಹೋದಾಗ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಲು ಮರೆಯಬೇಡಿ

Karthi next film Suriya to produce Meiyazhagan
ಕಾಲಿವುಡ್52 mins ago

Karthi next film: ಇಂದು ನಟ ಕಾರ್ತಿ ಬರ್ತ್‌ಡೇ: ತಮ್ಮನ ಚಿತ್ರಕ್ಕೆ ಅಣ್ಣ ಸೂರ್ಯ ಬಂಡವಾಳ!

IPL 2024
ಕ್ರೀಡೆ53 mins ago

IPL 2024: ಐಪಿಎಲ್​ ಟ್ರೋಫಿಯಲ್ಲಿರುವ ಸಂಸ್ಕೃತ ಶ್ಲೋಕದ ಮೂಲ ಸಾರವೇನು?

Best Tourist Places In Tamilnadu
ಪ್ರವಾಸ1 hour ago

Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

rave party culprit with jagan mohan reddy
ಪ್ರಮುಖ ಸುದ್ದಿ1 hour ago

Rave Party: ರೇವ್‌ ಪಾರ್ಟಿ ಆರೋಪಿಗೆ ಆಂಧ್ರ ಸಿಎಂ ಜಗನ್‌ ಜೊತೆ ಸ್ನೇಹ!

IPL 2024 Prize money
ಕ್ರೀಡೆ2 hours ago

IPL 2024 Prize money: ಐಪಿಎಲ್​ ವಿನ್ನರ್​ಗೆ ಸಿಗುವ ಬಹುಮಾನ ಮೊತ್ತವೆಷ್ಟು? 4ನೇ ಸ್ಥಾನಿ ಆರ್​ಸಿಬಿಗೆ ಸಿಕ್ಕ ಹಣವೆಷ್ಟು?

South Indian Monsoon Destinations
ಪ್ರವಾಸ2 hours ago

South Indian Monsoon Destinations: ದಕ್ಷಿಣ ಭಾರತದ ಈ 6 ಸ್ಥಳಗಳಲ್ಲಿ ಮಳೆಗಾಲದಲ್ಲಿ ಚಾರಣ ಮಾಡಲೇಬೇಕು!

Kiccha Sudeep Max cinema Pre climax Photo leak
ಸ್ಯಾಂಡಲ್ ವುಡ್2 hours ago

Kiccha Sudeep: ʻಮ್ಯಾಕ್ಸ್ʼ ಪ್ರಿ- ಕ್ಲೈಮ್ಯಾಕ್ಸ್ ಫೋಟೊ ಲೀಕ್‌? ಬೆಂಕಿ ಬಿರುಗಾಳಿ ಅಂದ್ರು ಫ್ಯಾನ್ಸ್‌!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು4 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು4 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ5 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ6 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ6 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ6 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ1 week ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌