Anushka Sharma : ಎರಡನೇ ಟೆಸ್ಟ್​ ಪಂದ್ಯದ ವೇಳೆ ಸ್ಟೇಡಿಯಮ್​ನಲ್ಲಿ ಕಾಣಿಸಿಕೊಂಡ ಅನುಷ್ಕಾ, ಅಥಿಯಾ - Vistara News

ಕ್ರಿಕೆಟ್

Anushka Sharma : ಎರಡನೇ ಟೆಸ್ಟ್​ ಪಂದ್ಯದ ವೇಳೆ ಸ್ಟೇಡಿಯಮ್​ನಲ್ಲಿ ಕಾಣಿಸಿಕೊಂಡ ಅನುಷ್ಕಾ, ಅಥಿಯಾ

Anushka Sharma : ಭಾರತ ತಂಡದ ಗೆಲುವನ್ನು ವೀಕ್ಷಿಸಲು ಕೊಹ್ಲಿ ಪತ್ನಿ ಅನುಷ್ಕಾ ಹಾಗೂ ರಾಹುಲ್ ಪತ್ನಿ ಅಥಿಯಾ ದಕ್ಷಿಣ ಆಫ್ರಿಕಾಗೆ ತೆರಳಿದ್ದಾರೆ,

VISTARANEWS.COM


on

Anushka Sharma
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೇಪ್​ಟೌನ್​: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯವನ್ನು ವಿರಾಟ್​ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ (Anushka Sharma) ಹಾಗೂ ಕೆ. ಎಲ್​ ರಾಹುಲ್ ಪತ್ನಿ ಅಥಿಯಾ ಶೆಟ್ಟಿ ವೀಕ್ಷಿಸಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹೊಸ ವರ್ಷಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾರೆ. ಕಾಮನಬಿಲ್ಲು ರಾಷ್ಟ್ರದಲ್ಲಿ ಅವರು ಊಟ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಕೆಎಲ್ ರಾಹುಲ್ ಪತ್ನಿ ಅಥಿಯಾ ಶೆಟ್ಟಿ ಕೂಡ ತಮ್ಮ ಪತಿಯೊಂದಿಗೆ ಹೊಸ ವರ್ಷವನ್ನು ಆಚರಿಸಲು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಿದ್ದರು.

ಸೆಂಚೂರಿಯನ್​ನಲ್ಲಿ ನ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​​ನಲ್ಲಿ ಭಾರತವು ಇನ್ನಿಂಗ್ಸ್ ಮತ್ತು 32 ರನ್​ಗಳ ಅವಮಾನಕರ ಸೋಲನ್ನು ಅನುಭವಿಸಿತು. ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕನಸು ನಷ್ಟ ಮಾಡಿಕೊಂಡಿತು. ಸರಣಿಯ ಆರಂಭಿಕ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಸಂಪೂರ್ಣ ಕುಸಿದಿತ್ತು, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಮಾತ್ರ ಮಿಂಚಿದರು. ರಾಹುಲ್ ಅವರ ಅದ್ಭುತ ಶತಕ ಮತ್ತು ಎರಡನೇ ಇನ್ನಿಂಗ್ಸ್​​ನಲ್ಲಿ ಕೊಹ್ಲಿಯ ಅಸಾಧಾರಣ ಅರ್ಧಶತಕವು ಪ್ರವಾಸಿ ತಂಡಕ್ಕೆ ಖುಷಿಯ ವಿಚಾರ.

ಎರಡನೇ ಪಂದ್ಯದಲ್ಲಿ ಏನಾಯಿತು?

ದಕ್ಷಿಣ ಆಫ್ರಿಕಾ ಪ್ರವಾಸದ (Ind vs SA) ಟೆಸ್ಟ್​ ಸರಣಿಯ ಎರಡನೇ ಪಂದ್ಯದ ಮೊದಲ ದಿನದಾಟದ ಮುಕ್ತಾಯಕ್ಕೆ ಭಾರತ ತಂಡ ಮುನ್ನಡೆ ಪಡೆದುಕೊಂಡಿದೆ. ಏತನ್ಮಧ್ಯೆ, ದಿನಾಟದಲ್ಲಿ ಒಟ್ಟು 23 ವಿಕೆಟ್​ಗಳು ಉರುಳಿರುವುದು ಬೌನ್ಸಿ ಪಿಚ್​ನ ಕರಾಮತ್ತಿಗೆ ಸಾಕ್ಷಿ ಎನಿಸಿತು. ಉಭಯ ತಂಡಗಳ ವೇಗದ ಬೌಲರ್​ಗಳು ಮಿಂಚಿದರೆ ಬ್ಯಾಟರ್​ಗಳು ಬೌಲರ್​ಗಳ ವೇಗ ಮತ್ತು ಆವೇಗಕ್ಕೆ ಬೆಚ್ಚಿ ಬಿದ್ದರು. ಇಲ್ಲಿನ ನ್ಯೂಲ್ಯಾಂಡ್ಸ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆತಿಥೇಯ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್​ನಲ್ಲಿ 55 ರನ್​ಗಳಿಗೆ ಆಲ್​ಔಟ್ ಅಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ 153 ರನ್​ಗಳಿಗೆ ಸರ್ವಪತನ ಕಂಡಿತು. ಎರಡನೇ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ತಂಡ 62 ರನ್​ಗಳಿಗೆ 3 ವಿಕೆಟ್​ ನಷ್ಟ ಮಾಡಿಕೊಂಡಿದ್ದು ಇನ್ನೂ 36 ರನ್​ಗಳ ಹಿನ್ನಡೆಯನ್ನು ಹೊಂದಿದೆ.

ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್​

ವೇಗದ ಬೌಲರ್​ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮುಖೇಶ್ ಕುಮಾರ್ ಹಾಗೂ ಮೊಹಮ್ಮದ್ ಸಿರಾಜ್ ನೆರವಿನಿಂದ ದಿನದ ಆರಂಭಿಕ ಸೆಷನ್​ನಲ್ಲಿ ಕ್ಷಿಣ ಆಫ್ರಿಕಾವನ್ನು ಕೇವಲ 55 ರನ್​ಗಳಿಗೆ ಆಲೌಟ್ ಮಾಡಿತು ಭಾರತ. ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್​ ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿದ ಸ್ವಲ್ಪ ಸಮಯದ ನಂತರ, ಸಿರಾಜ್ ಆತಿಥೇಯರ ಅಗ್ರ ಕ್ರಮಾಂಕ ಬ್ಯಾಟರ್​ಗಳನ್ನು ಔಟ್​ ಮಾಡಿದರು. ಸಿರಾಜ್​ 15 ರನ್​ಗಳಿಗೆ 6 ವಿಕೆಟ್ ಪಡೆದರು. ಬುಮ್ರಾ ಮತ್ತು ಕುಮಾರ್ ದಕ್ಷಿಣ ಆಫ್ರಿಕಾದ ಉಳಿದ ನಾಲ್ಕು ವಿಕೆಟ್​ಗಳನ್ನು ಕಬಳಿಸಿದರು.

<blockquote class=”twitter-tweet”><p lang=”en” dir=”ltr”>Athiya Shetty is there in Cape Town, South Africa to support husband KL Rahul &amp; team India. <a href=”https://t.co/2cBvPGmrlE”>pic.twitter.com/2cBvPGmrlE</a></p>&mdash; Juman Sarma (@cool_rahulfan) <a href=”https://twitter.com/cool_rahulfan/status/1742531566101037408?ref_src=twsrc%5Etfw”>January 3, 2024</a></blockquote> <script async src=”https://platform.twitter.com/widgets.js” charset=”utf-8″></script>

ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಡಕ್ ಔಟ್ ಆದ ನಂತರ ಭಾರತದ ನಾಯಕ ರೋಹಿತ್ ಶರ್ಮಾ ಮೊದಲ 10 ಓವರ್​ಗಳಲ್ಲಿ ತಮ್ಮ ಆಕ್ರಮಣಕಾರಿ ಆಟವಾಡಿದರು. ಅವರು 39 ರನ್​ ಬಾರಿಸಿದರು. ಅದರಲ್ಲಿ ಏಳು ಬೌಂಡರಿಗಳಿದ್ದವು. ಶುಬ್ಮನ್ ಗಿಲ್ (36) ಮತ್ತು ಬ್ಯಾಟಿಂಗ್ ಅನುಭವಿ ವಿರಾಟ್ ಕೊಹ್ಲಿ (46) ಕೂಡ ಪ್ರವಾಸಿ ತಂಡದ ಪರ ಎಚ್ಚರಿಕೆಯ ರನ್ ಗಳಿಸಿದರು.

ಭಾರತದ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಕೂಡ ಡಕ್ ಔಟಾದರೆ, ಕೆಎಲ್ ರಾಹುಲ್​ 33 ಎಸೆತಗಳಲ್ಲಿ ಕೇವಲ ಎಂಟು ರನ್ ಗಳಿಸಿದರು. ಆದಕ್ಕೆ ಮೊದಲು 4 ವಿಕೆಟ್​ಗೆ 154 ರನ್ ಬಾರಿಸಿದ್ದ ಭಾರತ ಭರ್ಜರಿ ಮುನ್ನಡೆ ಸಾಧಿಸುವ ಸುಳಿವು ನೀಡಿತು. ಆದರೆ, ನಂತರ 11 ಎಸೆತಗಳ ಅಂತರದಲ್ಲಿ ತಮ್ಮ ಕೊನೆಯ ಆರು ವಿಕೆಟ್​ಗಳನ್ನು ಕಳೆದುಕೊಳ್ಳುವ ಮೂಲಕ ಅದೇ ರನ್​ಗೆ ಸೀಮಿತಗೊಂಡಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Irfan Pathan : ಕಹಿ ನೆನಪು; ಬುರ್ಖಾ ಧರಿಸದ ಪತ್ನಿ ಜತೆ ಫೋಟೋ ತೆಗಿಸಿಕೊಳ್ಳಲು ಒಪ್ಪದ ಇರ್ಫಾನ್ ಪಠಾಣ್​​

Irfan Pathan: ಫೆಬ್ರವರಿ 2024 ರಲ್ಲಿ, ದಂಪತಿ ತಮ್ಮ 8 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದರು. ಆ ಸಮಯದಲ್ಲಿ ಇರ್ಫಾನ್ ಪಠಾಣ್ ತಮ್ಮ ಹೆಂಡತಿಯ ಮುಖವನ್ನು ಮೊದಲ ಬಾರಿಗೆ ಅನಾವರಣಗೊಳಿಸಿದ್ದರು. ಈ ಕ್ರಮವು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ವ್ಯಕ್ತಿಗಳಿಂದ ಗಮನಾರ್ಹ ಟೀಕೆಗೆ ಗುರಿಯಾಯಿತು. ಕೆಲವರು ಅವರನ್ನು ಅನಗತ್ಯವಾಗಿ ಟೀಕೆ ಮಾಡಿದ್ದರು.

VISTARANEWS.COM


on

Irfan Pathan
Koo

ಬೆಂಗಳೂರು: ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ಮತ್ತು ಸ್ವಿಂಗ್ ಬೌಲರ್ ಇರ್ಫಾನ್ ಪಠಾಣ್ (Irfan Pathan) ತಮ್ಮ ಪತ್ನಿ ಸಫಾ ಬೇಗ್ ಅವರೊಂದಿಗೆ ಮುಂಬೈನ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದರು. ಆದಾಗ್ಯೂ ಅವರು ಪರ್ದಾ (ಬುರ್ಖಾ) ಇಲ್ಲದೆ ಅವರೊಂದಗಿಎ ಫೋಟೋಗಳನ್ನು ತೆಗೆದುಕೊಳ್ಳಲು ಇರ್ಫಾನ್​ ಪಠಾಣ್​ ಪಾಪರಾಜಿಗಳಿಗೆ (ಫೋಟೊಗ್ರಾಫರ್​ಗಳಿಗೆ) ನಿರಾಕರಿಸಿದ ಪ್ರಸಂಗ ನಡೆಯಿತು. ಸಾಮಾನ್ಯವಾಗಿ ಪಠಾಣ್ ಪತ್ನಿ ಸಫಾ ಬುರ್ಖಾ ಧರಿಸಿಕೊಂಡಿರುತ್ತಾರೆ. ಆದರೆ ಈ ಬಾರಿ ಕರಿ ವರ್ಣದ ಬಟ್ಟೆಯಲ್ಲಿದ್ದರು. ಹಿಂದೊಮ್ಮೆ ಅವರು ಮುಖವನ್ನು ಮುಚ್ಚದೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಬಳಿಕ ಆನ್ ಲೈನ್ ನಲ್ಲಿ ಟೀಕೆ ಮತ್ತು ಟ್ರೋಲ್ ಗಳನ್ನು ಎದುರಿಸಬೇಕಾಯಿತು.

ಫೆಬ್ರವರಿ 2024 ರಲ್ಲಿ, ದಂಪತಿ ತಮ್ಮ 8 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದರು. ಆ ಸಮಯದಲ್ಲಿ ಇರ್ಫಾನ್ ಪಠಾಣ್ ತಮ್ಮ ಹೆಂಡತಿಯ ಮುಖವನ್ನು ಮೊದಲ ಬಾರಿಗೆ ಅನಾವರಣಗೊಳಿಸಿದ್ದರು. ಈ ಕ್ರಮವು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ವ್ಯಕ್ತಿಗಳಿಂದ ಗಮನಾರ್ಹ ಟೀಕೆಗೆ ಗುರಿಯಾಯಿತು. ಕೆಲವರು ಅವರನ್ನು ಅನಗತ್ಯವಾಗಿ ಟೀಕೆ ಮಾಡಿದ್ದರು.

ಕೆಲವು ವರ್ಷಗಳ ಹಿಂದೆ ಇರ್ಫಾನ್ ಪಠಾಣ್ ತಮ್ಮ ಪತ್ನಿ ಸಫಾ ಬೇಗ್ ಅವರ ಮುಖವನ್ನು ತೋರಿಸದೇ ಇದ್ದಿದ್ದಕ್ಕೆ ಟ್ರೋಲ್ ಎದುರಿಸಿದ್ದರು. ಆದಾಗ್ಯೂ, ಸಫಾ ಬೇಗ್ ತನ್ನ ಪತಿಯನ್ನು ಬೆಂಬಲಿಸಿದ್ದರು. ಅವೆಲ್ಲವೂ ನಮ್ಮ ಆಯ್ಕೆ ಎಂದು ಹೇಳಿದ್ದರು.

ಇದನ್ನೂ ಓದಿ: Dubbing Premier League : ಶನಿವಾರದಿಂದ 3ನೇ ಆವೃತ್ತಿಯ ಡಬ್ಬಿಂಗ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ

ಫೋಟೋ ಭಯ

ಇರ್ಫಾನ್ ಪಠಾಣ್ ತಮ್ಮ ಪತ್ನಿ ಸಫಾ ಮತ್ತು ಮಗನೊಂದಿಗೆ ಬಾಂದ್ರಾದ ಕೆಫೆಯಲ್ಲಿ ವಿಹಾರಿಸುತ್ತಿದ್ದರು. ಪಾಪರಾಜಿಗಳ ಗುಂಪು ಪಠಾಣ್ ಅವರನ್ನು ಹಿಂಬಾಲಿಸಿ ಅವರ ಕುಟುಂಬದ ಫೋಟೋಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿತು. ಆದರೆ ಸಫಾ ಅವರಿಂದ ಆತುರದಿಂದ ಹೊರಟುಹೋದರು. ಇದರಿಂದ ಸಿಟ್ಟಿಗೆದ್ದ ಇರ್ಫಾನ್ ಪಠಾಣ್ ತಮ್ಮ ಪತ್ನಿಯ ಫೋಟೋ ತೆಗೆಯದಂತೆ ಪಾಪರಾಜಿಗಳಿಗೆ ಮನವಿ ಮಾಡಿದರು.

ಇರ್ಫಾನ್ ಪಠಾಣ್ ವೃತ್ತಿಜೀವನ

ಕ್ರಿಕೆಟ್​ನಿಂದ ನಿವೃತ್ತಿಯಾದ ನಂತರ, ಬಹು-ಪ್ರತಿಭಾವಂತ ಇರ್ಫಾನ್ ಪಠಾಣ್ ವಿವಿಧ ಅನ್ವೇಷಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರು ಆಟದ ಬಗ್ಗೆ ಆಳವಾದ ತಿಳುವಳಿಕೆಯೊಂದಿಗೆ ಕ್ರಿಕೆಟ್ ವಿಶ್ಲೇಷಕ ಮತ್ತು ವೀಕ್ಷಕವಿವರಣೆಗಾರರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಪೋಷಿಸುವ ಗುರಿಯೊಂದಿಗೆ ಅವರು ತಮ್ಮ ಸಹೋದರನೊಂದಿಗೆ ಕ್ರಿಕೆಟ್ ಅಕಾಡೆಮಿ ಆಫ್ ಪಠಾಣ್ಸ್ ಅನ್ನು ಸ್ಥಾಪಿಸಿದ್ದಾರೆ. ವಿಶೇಷವೆಂದರೆ 2015 ರಲ್ಲಿ, ಅವರು ನೃತ್ಯ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯ ಮತ್ತೊಂದು ಮುಖವನ್ನು ಪ್ರದರ್ಶಿಸಿದ್ದರು.

ತೀರಾ ಇತ್ತೀಚೆಗೆ ಅವರು ಬಹರಾಂಪುರ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ತಮ್ಮ ಸಹೋದರ ಯೂಸುಫ್ ಪಠಾಣ್ ಅವರನ್ನು ಬೆಂಬಲಿಸಿ ಮತಯಾಚಿಸಿದರು.

Continue Reading

ಕ್ರಿಕೆಟ್

Dubbing Premier League : ಶನಿವಾರದಿಂದ 3ನೇ ಆವೃತ್ತಿಯ ಡಬ್ಬಿಂಗ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ

Dubbing Premier League: ಕಳೆದ ಎರಡು ಆವೃತ್ತಿಯ ಯಶಸ್ಸಿನ ಹಿನ್ನೆಲೆಯಲ್ಲಿ ಕಲಾವಿದರೇ ಜತೆಯಾಗಿ ಸೇರಿಕೊಂಡು ಈ ಟೂರ್ನಿಯನ್ನು ಅಯೋಜಿಸಿದ್ದಾರೆ. ಕರ್ನಾಟಕದ ಜನಪ್ರಿಯ ಸುದ್ದಿವಾಹಿನಿ ‘ವಿಸ್ತಾರ ನ್ಯೂಸ್​’ ಈ ಟೂರ್ನಿಗೆ ಮಾಧ್ಯಮ ಸಹಯೋಗ ನೀಡಿದೆ. ಅದೇ ರೀತಿ ಎಮ್​ ಸ್ಪೋರ್ಟ್​​ ಯೂಟ್ಯೂಬ್ ಚಾನೆಲ್​ನಲ್ಲಿ ಪಂದ್ಯದ ಕ್ಷಣಗಳು ನೇರ ಪ್ರಸಾರವಾಗಲಿದ್ದು https://cricheroes.com/ ನಲ್ಲಿ ಲೈವ್ ಸ್ಕೋರ್ ಅಪ್​ಡೇಟ್​ ಸಿಗಲಿದೆ.

VISTARANEWS.COM


on

Dubbing Premier League
Koo

ಬೆಂಗಳೂರು: ಕನ್ನಡ ಸಿನಿಮಾ ಹಾಗೂ ಕಿರುತೆರೆ ಕ್ಷೇತ್ರದಲ್ಲಿ ದುಡಿಯುತ್ತಿರುವ ಅಸಂಖ್ಯಾತ ಡಬ್ಬಿಂಗ್ ಕಲಾವಿದರು ಹಾಗೂ ಕಲಾವಿದರ ಸಮಾಗಮದೊಂದಿಗೆ ಆಯೋಜಿಸಲಾಗುತ್ತಿರುವ ಡಬ್ಬಿಂಗ್​ ಪ್ರೀಮಿಯರ್ ಲೀಗ್ (Dubbing Premier League)​ ಕ್ರಿಕೆಟ್​ ಟೂರ್ನಿಯ ಮೂರನೇ ಆವೃತ್ತಿ ಶನಿವಾರ (ಮೇ 18) ಹಾಗೂ ಭಾನುವಾರ (ಮೇ 19)ರಂದು ನಡೆಯಲಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಗ್ಲೋಬಲ್​ ಅಕಾಡೆಮಿ ಆಫ್​ ಟೆಕ್ನಾಲಜಿಯ ಮೈದಾನದಲ್ಲಿ ಈ ಟೂರ್ನಿಯು ಪಂದ್ಯಗಳು ಅಯೋಜನೆಗೊಂಡಿದೆ. ಈ ಕ್ರಿಕೆಟ್​ ಪಂದ್ಯಾವಳಿಯಲ್ಲಿ ಸಿನಿ ಹಾಗೂ ಕಿರುತೆರೆ ಕ್ಷೇತ್ರದ ಹೆಸರಾಂತ ಕಲಾವಿದರು ಹಾಗೂ ಸೆಲೆಬ್ರಿಟಿಗಳು ಪಾಲ್ಗೊಳ್ಳಲಿದ್ದಾರೆ. ಅವರೆಲ್ಲರೂ ಒಂದೆಡೆ ಸೇರಿ “ಜಂಟಲ್​ಮ್ಯಾನ್ಸ್​ ಸ್ಪೋರ್ಟ್”​​ ಎಂದೇ ಕರೆಯವ ಕ್ರಿಕೆಟ್​ ಆಡಿ ಸಂಭ್ರಮಿಸಲಿದ್ದಾರೆ.

ಕಳೆದ ಎರಡು ಆವೃತ್ತಿಯ ಯಶಸ್ಸಿನ ಹಿನ್ನೆಲೆಯಲ್ಲಿ ಕಲಾವಿದರೇ ಜತೆಯಾಗಿ ಸೇರಿಕೊಂಡು ಈ ಟೂರ್ನಿಯನ್ನು ಅಯೋಜಿಸಿದ್ದಾರೆ. ಕರ್ನಾಟಕದ ಜನಪ್ರಿಯ ಸುದ್ದಿವಾಹಿನಿ ‘ವಿಸ್ತಾರ ನ್ಯೂಸ್​’ ಈ ಟೂರ್ನಿಗೆ ಮಾಧ್ಯಮ ಸಹಯೋಗ ನೀಡಿದೆ. ಅದೇ ರೀತಿ ಎಮ್​ ಸ್ಪೋರ್ಟ್​​ ಯೂಟ್ಯೂಬ್ ಚಾನೆಲ್​ನಲ್ಲಿ ಪಂದ್ಯದ ಕ್ಷಣಗಳು ನೇರ ಪ್ರಸಾರವಾಗಲಿದ್ದು https://cricheroes.com/ ನಲ್ಲಿ ಲೈವ್ ಸ್ಕೋರ್ ಅಪ್​ಡೇಟ್​ ಸಿಗಲಿದೆ.

ಶನಿವಾರ ಬೆಳಗ್ಗೆ 7.30ಕ್ಕೆ ಮೊದಲ ಪಂದ್ಯ ನಡೆಯಲಿದೆ. ಅದಕ್ಕಿಂತ ಮೊದಲು ಟೂರ್ನಿಯ ಉದ್ಘಾಟನಾ ಕಾರ್ಯಕ್ರಮ ಅಯೋಜನೆಗೊಂಡಿದೆ. ಟೂರ್ನಿಯಲ್ಲಿ 9 ತಂಡಗಳು ಪ್ರಶಸ್ತಿಗಾಗಿ ಹೋರಾಡಲಿವೆ. ನಿರಂಜನ್ ಸ್ಟುಡಿಯೋಸ್, ಧ್ವನಿ ಸಂಗಮ ಸ್ಟುಡಿಯೋಸ್, ಆರ್​ಸಿಬಿ, ಹರಿವು ಹುಡುಗರು, ಸೌಂಡ್ ಮ್ಯಾಪ್ ರಾಯಲ್ಸ್ ರಾಯಲ್ ಎಡಿಟರ್ಸ್, ಲಗಾನಾ ಬಾಯ್ಸ್, ಕನ್ನಡ ಕಂಠಗಳು, ಭಜರಂಗಿ ಬಾಯ್ಸ್ ಕ್ರಿಕೆಟರ್ಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ತಂಡಗಳಾಗಿವೆ. ಎರಡು ದಿನಗಳ ಅವಧಿಯಲ್ಲಿ 10 ಲೀಗ್ ಪಂದ್ಯಗಳು ಹಾಗೂ ಎರಡು ಸೆಮಿ ಫೈನಲ್ ಹಾಗೂ ಫೈನಲ್ ಸೇರಿ ಒಟ್ಟು 13 ಪಂದ್ಯಗಳು ನಡೆಯಲಿವೆ.

ವಸತಿ ಸಚಿವರ ಆಗಮನ ನಿರೀಕ್ಷೆ

ಕರ್ನಾಟಕ ಸರ್ಕಾರದ ವಸತಿ ಸಚಿವರಾದ ಬಿ. ಝಡ್​ ಜಮೀರ್​ ಅಹಮದ್ ಅವರು ಆಗಮಿಸಿ ಪಂದ್ಯವನ್ನು ವೀಕ್ಷಿಸುವುದಾಗಿ ಹೇಳಿದ್ದಾರೆ ಎಂಬುದಾಗಿ ಆಯೋಜಕರು ತಿಳಿಸಿದ್ದಾರೆ. ಅದೇ ರೀತಿ ಕಲಾವಿದರ ಈ ಸಂಗಮಕ್ಕೆ ಸಿನಿಮಾ ಹಾಗೂ ಕಿರುತೆರೆ ಕ್ಷೇತ್ರದ ಹಲವಾರು ಕಲಾವಿದರು ಆಗಮಿಸುವ ನಿರೀಕ್ಷೆಯಿದೆ. ಚಲನಚಿತ್ರ ಕಲಾವಿದ ಮತ್ತು ನಿರ್ದೇಶಕ, ನಾಗೇಂದ್ರ ಅರಸ್, ಸಿನಿಮಾ ಕಲಾವಿದ ರಮೇಶ್ ಪಂಡಿತ್, ಜೀ ಟಿವಿ ಮಹಾನಟಿ ಸೀರಿಯಲ್​ ನ ಆಶಿಕಾ ಶರ್ಮಾ, ಟಿವಿ ಕಲಾವಿದರಾದ ಪುನೀತ್ ಬಾಬು, ಧನಂಜಯ. ಸುಹಾಸ್ ಆತ್ರೇಯಸ್, ಕಾರ್ತಿಕ್ ವೈಭವ್,ಆಯುಷ್ ಜೆ ಶೆಟ್ಟಿ, ವಲ್ಲಭ ಸೂರಿ, ಮಧುಸೂದನ್, ಸಿನಿ ಕಲಾವಿದರಾದ ಹರ್ಷಿಲ್ ಕೌಶಿಕ್, ಶಕ್ತಿ ರಾಜ್, ವಿಕಾಸ್ ವಸಿಷ್ಠ, ರಿಚಾ ಶಾಸ್ತ್ರಿ, ಸಿಲ್ಲಿ ಲಲ್ಲಿ ಆನಂದ್, ಚೇತನ್ ಗಂಧರ್ವ, ಯಶವಂತ್ ಬಿಜೂರ್, ನರೇಶ್ ಗಾಂಧಿ, ಗೀತರಚನೆಕಾರ ಪ್ರಮೋದ್ ಮರವಂತೆ, ಟಿವಿ ಕಲಾವಿದೆ ಪುಷ್ಪಾ ಅನಿಲ್, ಗಾಯಕರಾದ ಕರಿಬಸವ ಅವರು ಟೂರ್ನಿಯಲ್ಲಿ ಪಾಲ್ಗಳ್ಳಲಿದ್ದಾರೆ.

ಇದನ್ನೂ ಓದಿ: IPL 2024 : ಆರ್​ಸಿಬಿ ವಿರುದ್ಧ ವೇಗದ ಬೌಲರ್​ ಕಣಕ್ಕೆ; ಚೆನ್ನೈ ತಂಡದಲ್ಲಿ ಸಂಭ್ರಮ

ಎರಡು ಆವೃತ್ತಿಗಳ ಯಶಸ್ಸು

ಸಿನಿಮಾ ಹಾಗೂ ಕಿರುತೆರೆಯಲ್ಲಿ ಹಲವಾರು ಡಬ್ಬಿಂಗ್ ಕಲಾವಿದರು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿ ಬದುಕಿನ ಜಂಜಾಟ ಹಾಗೂ ಇನ್ನೂ ಅನೇಕ ಕಾರಣಗಳಿಂದಾಗಿ ಅವರೆಲ್ಲರೂ ಪರಸ್ಪರ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎರಡು ವರ್ಷಗಳ ಹಿಂದೆ ಡಬ್ಬಿಂಗ್​ ಆರ್ಟಿಸ್ಟ್​​ಗಳು ಹಾಗೂ ಇನ್ನಿತರ ಕಲಾವಿರ ಸಮಾಗಮದಲ್ಲಿ ಕ್ರಿಕೆಟ್ ಟೂರ್ನಿಯನ್ನು ಆರಂಭಿಸಲಾಗಿತ್ತು. ಕಳೆದ ಎರಡು ವರ್ಷದ ಟೂರ್ನಿ ಅತ್ಯಂತ ಯಶಸ್ಸು ಕಂಡಿತ್ತು. ಕಲಾವಿದರು ಎರಡು ದಿನಗಳ ಕಾಲ ಜತೆಯಾಗಿ ಸೇರಿಕೊಂಡು ಕ್ರಿಕೆಟ್ ಆಡಿ ಸಂಭ್ರಮಿಸಿದ್ದರು. ಟ್ರೋಫಿ ಗೆದ್ದಿದ್ದರು. ಈ ಯಶಸ್ಸಿನ ಹಿನ್ನೆಲೆಯಲ್ಲಿ ಮೂರನೇ ಆವೃತ್ತಿಯನ್ನು ಆಯೋಜಿಸಲಾಗಿದೆ. ಶನಿವಾರ ಹಾಗೂ ಭಾನುವಾರ ಕ್ರಿಕೆಟ್​ ಪ್ರೇಮಿ ಕಲಾವಿದರು ಈ ಟೂರ್ನಿಯಲ್ಲಿ ಆಡಿ ಸಂಭ್ರಮಿಸಲಿದ್ದಾರೆ ಎಂಬುದಾಗಿ ಅಯೋಜಕರು ಮಾಹಿತಿ ನೀಡಿದ್ದಾರೆ.

Continue Reading

ಪ್ರಮುಖ ಸುದ್ದಿ

IPL 2024 : ಆರ್​ಸಿಬಿ ವಿರುದ್ಧ ವೇಗದ ಬೌಲರ್​ ಕಣಕ್ಕೆ; ಚೆನ್ನೈ ತಂಡದಲ್ಲಿ ಸಂಭ್ರಮ

IPL 2024: ದೀಪಕ್ ಚಾಹರ್ ಸದಾ ಗಾಯದಿಂದ ಬಳಲುತ್ತಿರುವ ಬೌಲರ್ ಎನಿಸಿಕೊಂಡಿದ್ದಾರೆ. ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಹಲವಾರು ಗಾಯಗಳನ್ನು ಅನುಭವಿಸಿದ್ದಾರೆ. ಗಾಯದಿಂದ ಚೇತರಿಸಿಕೊಂಡ ನಂತರ ಅವರು ಐಪಿಎಲ್ 2024 ಗೆ ಬಂದಿದ್ದರು ಆದರೆ ಸಿಎಸ್​ಕೆ ಪರ 8 ಪಂದ್ಯಗಳನ್ನು ಆಡಿದ ನಂತರ ಅವರು ಹೊಸ ಹೊಡೆತವನ್ನು ತಿಂದರು. ಅವರ ಅನುಪಸ್ಥಿತಿಯು ತಂಡದಲ್ಲಿ ದೊಡ್ಡ ಸಮಸ್ಯೆ ಉಂಟುಮಾಡಿತ್ತು.

VISTARANEWS.COM


on

IPL 2024
Koo

ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ದೀಪಕ್ ಚಾಹರ್ ಗಾಯದ ಸಮಸ್ಯೆಯಿಂದ ಹೊರಬಂದಿದ್ದು, ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ. ಐಪಿಎಲ್ 2024 ರ (IPL 2024) ಕೊನೆಯ ಲೀಗ್ ಪಂದ್ಯದಲ್ಲಿ ಸಿಎಸ್​ಕೆ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಚೆನ್ನೈನಲ್ಲಿ ನಡೆದ ಋತುವಿನ ಆರಂಭಿಕ ಪಂದ್ಯದಲ್ಲಿ ಕೊನೆಯ ಬಾರಿಗೆ ಭೇಟಿಯಾದ ಎರಡು ದಕ್ಷಿಣ ಭಾರತದ ಫ್ರಾಂಚೈಸಿಗಳ ನಡುವಿನ ರಿವರ್ಸ್ ಪಂದ್ಯ ಇದಾಗಿದೆ. ಹಿಂದಿನ ಪಂದ್ಯದಲ್ಲಿ ದೀಪಕ್ ಚಾಹರ್ 37 ರನ್ ನೀಡಿ ಗ್ಲೆನ್ ಮ್ಯಾಕ್ಸ್​ವೆಲ್​ ವಿಕೆಟ್ ಪಡೆದಿದ್ದರು.

ದೀಪಕ್ ಚಾಹರ್ ಸದಾ ಗಾಯದಿಂದ ಬಳಲುತ್ತಿರುವ ಬೌಲರ್ ಎನಿಸಿಕೊಂಡಿದ್ದಾರೆ. ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಹಲವಾರು ಗಾಯಗಳನ್ನು ಅನುಭವಿಸಿದ್ದಾರೆ. ಗಾಯದಿಂದ ಚೇತರಿಸಿಕೊಂಡ ನಂತರ ಅವರು ಐಪಿಎಲ್ 2024 ಗೆ ಬಂದಿದ್ದರು ಆದರೆ ಸಿಎಸ್​ಕೆ ಪರ 8 ಪಂದ್ಯಗಳನ್ನು ಆಡಿದ ನಂತರ ಅವರು ಹೊಸ ಹೊಡೆತವನ್ನು ತಿಂದರು. ಅವರ ಅನುಪಸ್ಥಿತಿಯು ತಂಡದಲ್ಲಿ ದೊಡ್ಡ ಸಮಸ್ಯೆ ಉಂಟುಮಾಡಿತ್ತು.

ಮೇ 1 ರಂದು ಐಪಿಎಲ್ 2024 ರ 49 ನೇ ಪಂದ್ಯಕ್ಕಾಗಿ ಚೆಪಾಕ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೂಪರ್ ಕಿಂಗ್ಸ್ ತಂಡ ಆತಿಥ್ಯ ನೀಡಿದಾಗ ದೀಪಕ್ ಚಾಹರ್​​ ಪೂರ್ತಿ ಸ್ಪೆಲ್​ ಎಸೆಯಲು ವಿಫಲಗೊಂಡಿದ್ದರು. ಅವರು ಗಾಯದಿಂದಾಗಿ ಪೆವಿಲಿಯನ್​ಗೆ ಮರಳಿದ್ದರು.

163 ರನ್​ಗಳ ಗುರಿ ಬೆನ್ನಟ್ಟಿ ಚೆನ್ನೈ ತಂಡಕ್ಕೆ ಸ್ಯಾಮ್ ಕರ್ರನ್ ಪಡೆ 162 ರನ್ಗಳ ಗುರಿ ನೀಡಿತ್ತು. ಗುರಿ ಕಡಿಮೆ ಇತ್ತು. ಹೀಗಾಗಿ ಬೌಲರ್​ಗಳ ನೆರವು ಅಗತ್ಯವಾಗಿತ್ತು. ಆದಾಗ್ಯೂ, ಪಂದ್ಯದ ಮೊದಲ ಓವರ್​ನಲ್ಲಿ ದೀಪಕ್ ಚಹರ್ ಕೇವಲ 2 ಎಸೆತಗಳನ್ನು ಎಸೆದ ನಂತರ ನೋವಿನಿಂದ ಮೈದಾನದಿಂದ ಹೊರನಡೆದಾಗ ಆತಿಥೇಯರಿಗೆ ದೊಡ್ಡ ಹೊಡೆತ ಸಿಕ್ಕಂತಾಯಿತು.

ಇದನ್ನೂ ಓದಿ: IPL 2024 : ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯದ ವಿಜೇತರು ಯಾರು ಎಂದು ತಿಳಿಸಿದ ಬ್ರಿಯಾನ್ ಲಾರಾ

ದೀಪಕ್ ಚಹರ್ ಮೈದಾನದಿಂದ ನಿರ್ಗಮಿಸಿದ ನಂತರ, ಪಂಜಾಬ್ ಕಿಂಗ್ಸ್ ಅಗ್ರ ಕ್ರಮಾಂಕವು 113 ರನ್ ಗಳಿಸಿದ ನಂತರ ಕ್ರೀಸ್ ನಿಂದ ನಿರ್ಗಮಿಸಿತು. 4 ಮತ್ತು 5ನೇ ಕ್ರಮಾಂಕದ ಬ್ಯಾಟರ್​ಗಳಾದ ಶಶಾಂಕ್ ಸಿಂಗ್ ಮತ್ತು ಸ್ಯಾಮ್ ಕರ್ರನ್ ತಮ್ಮ ಜೊತೆಯಾಟದ ಮೂಲಕ ಪಂಜಾಬ್ ತಂಡವನ್ನು ಗೆಲುವು ಕಂಡಿತು.

ಗಾಯದ ಆತಂಕ

ಪಂದ್ಯದ ನಂತರ, ಸಿಎಸ್ಕೆ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಚಾಹರ್ ಅವರ ಗಾಯದ ಬಗ್ಗೆ ಹೀಗೆ ಹೇಳಿದ್ದರು, ದೀಪಕ್ ಚಹರ್ ಉತ್ತಮವಾಗಿ ಕಾಣುತ್ತಿಲ್ಲ. ಆದ್ದರಿಂದ, ಫಿಸಿಯೋ ಮತ್ತು ವೈದ್ಯರು ನೋಡಿದಾಗ ಹೆಚ್ಚು ಸಕಾರಾತ್ಮಕ ವರದಿಯನ್ನು ನಾನು ಆಶಿಸುತ್ತೇನೆ ಎಂದು ಹೇಳಿದ್ದರು.

ಬೆಂಗಳೂರಿನಲ್ಲಿ ಸಿಎಸ್​ಕೆ ತಂಡದ ಅಭ್ಯಾಸದ ಸಮಯದಲ್ಲಿ, ದೀಪಕ್ ಚಹರ್ ಪೂರ್ಣ ತೀವ್ರತೆಯಲ್ಲಿ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಇದು ವೇಗಿ ಆರ್​ಸಿಬಿ ವಿರುದ್ಧ ಆಡಲು ಫಿಟ್ ಆಗಿದ್ದಾರೆ ಎಂದು ಸೂಚಿಸುತ್ತದೆ. ಅವರು ನೇರವಾಗಿ ಪ್ಲೇಯಿಂಗ್ ಇಲೆವೆನ್​ಗೆ ಬರುತ್ತಾರೆಯೇ ಅಥವಾ ಇಂಪ್ಯಾಕ್ಟ್​ ಪ್ಲೇಯರ್​ ಆಗಿರುತ್ತಾರೆಯೇ ನೋಡಬೇಕಾಗಿದೆ.

Continue Reading

ಕ್ರೀಡೆ

SubAir facility: ಸಬ್‌ ಏರ್‌ ಸಿಸ್ಟಮ್‌ ಹೇಗೆ ಕಾರ್ಯನಿರ್ವಹಿಸುತ್ತದೆ?; ಮಳೆ ನಿಂತು ಎಷ್ಟು ಗಂಟೆಯಲ್ಲಿ ಪಂದ್ಯ ಆರಂಭ?

SubAir facility: ಉದಾಹರಣೆಗೆ ಒಂದು ಗಂಟೆ ಭಾರಿ ಮಳೆ ಸುರಿದರೆ 7 ನಿಮಿಷಗಳಲ್ಲಿ ಕ್ರೀಡಾಂಗಣ ಪಂದ್ಯಕ್ಕೆ ಸಿದ್ಧವಾಗಿರುತ್ತದೆ. ನೀರನ್ನು ಹೀರಿಕೊಂಡ ನಂತರ ಸಬ್‌ ಏರ್‌ ಯಂತ್ರದ ಮೂಲಕ ಅದೇ ಕೊಳವೆಗಳಲ್ಲಿ ಔಟ್‌ಫೀಲ್ಡ್‌ಗೆ ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನು ಒಣಗಿಸುವ ವ್ಯವಸ್ಥೆಯಿದೆ.

VISTARANEWS.COM


on

SubAir facility
Koo

ಬೆಂಗಳೂರು: ನಾಳೆ ನಡೆಯುವ ಆರ್​ಸಿಬಿ(RCB) ಮತ್ತು ಚೆನ್ನೈ(CSK) ನಡುವಣ ಪಂದ್ಯಕ್ಕೆ ಮಳೆ ಭೀತಿ ಇದ್ದರೂ ಅಭಿಮಾನಿಗಳು ಯಾವುದೇ ಚಿಂತೆ ಪಡುವ ಅಗತ್ಯವಿಲ್ಲ. ಎಷ್ಟೇ ಮಳೆಯಾದರೂ ಕೂಡ ಮಳೆ ನಿಂತ ಕೆಲವೇ ಕ್ಷಣದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(M Chinnaswamy Stadium) ಪಂದ್ಯವನ್ನು ಆರಂಭಗೊಳ್ಳುವಂತೆ ಮಾಡುವ ವಿಶೇಷ ಸಬ್‌ ಏರ್‌ ಸಿಸ್ಟಮ್‌(SubAir facility) ತಂತ್ರಜ್ಞಾನ(SubAir facility Chinnaswamy) ಈ ಮೈದಾನದಲ್ಲಿದೆ. ಹೀಗಾಗಿ ಮಳೆ ಬಂದರೂ ಪಂದ್ಯ ನಡೆಯುವುದು ಖಚಿತ.

ಸಬ್‌ ಏರ್‌ ಸಿಸ್ಟಮ್‌ ಅಳವಡಿಸಿಕೊಂಡ ವಿಶ್ವದ ಮೊದಲ ಕ್ರಿಕೆಟ್‌ ಕ್ರೀಡಾಂಗಣ ಎಂಬ ಖ್ಯಾತಿ ಚಿನ್ನಸ್ವಾಮಿ ಕ್ರೀಡಾಂಗಣದ್ದಾಗಿದೆ. ಅಮೆರಿಕ, ಲಂಡನ್ ಮತ್ತು ಆಸ್ಟ್ರೇಲಿಯಾದ ಗಾಲ್ಫ್ ಸ್ಟೇಡಿಯಂಗಳಲ್ಲಿ ಮಾತ್ರ ಇಂತಹ ಅತ್ಯಾಧುನಿಕ ವ್ಯವಸ್ಥೆ ಇದೆ.

2017ರಲ್ಲಿ ಚೆನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ತಂತ್ರಜ್ಞಾನದ ಪರೀಕ್ಷಾರ್ಥ ಪ್ರದರ್ಶನದ ವೇಳೆ ಸುಮಾರು 5 ಸಾವಿರ ಲೀಟರ್‌ ನೀರನ್ನು ಮೈದಾನಕ್ಕೆ ಹಾಯಿಸಲಾಗಿತ್ತು. ಕೆಲವೇ ಸೆಕೆಂಡ್‌(32 ಸೆ.)ಗಳಲ್ಲಿ ಸಬ್‌ ಏರ್‌ ಸಿಸ್ಟಮ್‌ನ ಯಂತ್ರ ನೀರನ್ನು ಹೀರಿಕೊಂಡಿತ್ತು. ಹುಲ್ಲುಹಾಸಿನ ತಳಮಟ್ಟದಲ್ಲೂ ನೀರಿನ ಅಂಶ ಉಳಿಯದಂತೆ ಹೀರಿಕೊಂಡಿತ್ತು. ಆ ಮೂಲಕ ಎಷ್ಟೇ ಮಳೆ ಬಂದರೂ, ಮಳೆ ನಿಂತ ನಂತರ ಅತಿ ಶೀಘ್ರದಲ್ಲಿ ಮೈದಾನವನ್ನು ಪಂದ್ಯಕ್ಕೆ ಅಣಿಗೊಳಿಸಲು ತಾನು ಸಿದ್ಧ ಎಂಬುದನ್ನು ಸಬ್‌ ಏರ್‌ ಸಿಸ್ಟಮ್‌ ವ್ಯವಸ್ಥೆ ನಿರೂಪಿಸಿತ್ತು. ಅಂದಿನ ಪರೀಕ್ಷಾರ್ಥ ಪ್ರದರ್ಶನದ ವಿಡಿಯೊ ಈಗ ವೈರಲ್​ ಆಗುತ್ತಿದೆ.

ಹಳೆಯ ವಿಡಿಯೊ ಈಗ ವೈರಲ್​ ಆಗಲು ಕೂಡ ಒಂದು ಕಾರಣವಿದೆ. ಏಕೆಂದರೆ ನಾಳೆ ನಡೆಯುವ ಆರ್​ಸಿಬಿ ಮತ್ತು ಚೆನ್ನೈ ವಿರುದ್ಧದ ಪಂದ್ಯಕ್ಕೆ ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಪ್ಲೇ ಆಫ್​ ಪ್ರವೇಶಕ್ಕೆ ಆರ್​ಸಿಬಿಗೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಹೀಗಾಗಿ ಪಂದ್ಯ ನಡೆಯಲಿದೆಯಾ ಎನ್ನುವ ಅನುಮಾನ ಮತ್ತು ಗೊಂದಲ ಆರ್​ಸಿಬಿ ಅಭಿಮಾನಿಗಳಲ್ಲಿ ಮೂಡಿದೆ. ಈ ಕಾರಣದಿಂದ ಯಾರು ಚಿಂತಿಸುವ ಅಗತ್ಯವಿಲ್ಲ ಎಂದು ಹೇಳುವ ಸಲುವಾಗಿ ಆ ವಿಡಿಯೊ ಈಗ ವೈರಲ್​ ಆಗುತ್ತಿದೆ. ವಿಡಿಯೊ ಕಂಡ ಬಳಿಕ ಅಭಿಮಾನಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಒಂದೊಮ್ಮೆ ಮಳೆಯ ಆರ್ಭಟ ನಿಲ್ಲದೇ ಹೋದಲ್ಲಿ, ಆಗ ಎಷ್ಟೇ ದೊಡ್ಡ ತಂತ್ರಜ್ಞಾನವಿದ್ದರೂ ಇದು ಉಪಯೋಗಕ್ಕೆ ಬಾರದು. ಹೀಗಾಗಿ ಪಂದ್ಯದ ಅಳಿವು ಉಳಿವಿನ ಭವಿಷ್ಯ ಮಳೆಯ ಕೈಯಲ್ಲಿದೆ.

7 ನಿಮಿಷಗಳಲ್ಲಿ ಪಂದ್ಯಕ್ಕೆ ಸಜ್ಜು


4.25 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಬ್‌ ಏರ್‌ ಸಿಸ್ಟಮ್‌ ವ್ಯವಸ್ಥೆಯಿಂದಾಗಿ ಎಷ್ಟೇ ಮಳೆಯಾದರೂ, ಮಳೆ ನಿಂತ ನಂತರ ಕೆಲವೇ ನಿಮಿಷಗಳಲ್ಲಿ ಚಿನ್ನಸ್ವಾಮಿಯಲ್ಲಿ ಪಂದ್ಯಗಳು ಆರಂಭಗೊಳ್ಳಲಿವೆ. ಉದಾಹರಣೆಗೆ ಒಂದು ಗಂಟೆ ಭಾರಿ ಮಳೆ ಸುರಿದರೆ 7 ನಿಮಿಷಗಳಲ್ಲಿ ಕ್ರೀಡಾಂಗಣ ಪಂದ್ಯಕ್ಕೆ ಸಿದ್ಧವಾಗಿರುತ್ತದೆ. ನೀರನ್ನು ಹೀರಿಕೊಂಡ ನಂತರ ಸಬ್‌ ಏರ್‌ ಯಂತ್ರದ ಮೂಲಕ ಅದೇ ಕೊಳವೆಗಳಲ್ಲಿ ಔಟ್‌ಫೀಲ್ಡ್‌ಗೆ ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನು ಒಣಗಿಸುವ ವ್ಯವಸ್ಥೆಯಿದೆ.

ಇದನ್ನೂ ಓದಿ RCB vs CSK: ವಾಹನ ಸವಾರರೇ ಗಮನಿಸಿ, ನಾಳೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ

ಸಬ್‌ ಏರ್‌ ಸಿಸ್ಟಮ್‌ ಯಂತ್ರವನ್ನು ನಿಭಾಯಿಸಲು ಕೆಎಸ್‌ಸಿಎ ಕ್ಯುರೇಟರ್‌ಗಳಿಗೂ ವಿಶೇಷ ತರಬೇತಿ ನೀಡಲಾಗಿದೆ. ಮೈದಾನದ ಕೆಲವೆಡೆ ರಿಮೋಟ್‌ ಸೆನ್ಸರ್‌ಗಳನ್ನು ಕೂಡ ಅಳವಡಿಸಲಾಗಿದ್ದು, ಒಂದು ವೇಳೆ ಕ್ರೀಡಾಂಗಣದಲ್ಲಿ ಸಿಬ್ಬಂದಿ ಇಲ್ಲದಿರುವಾಗ ಅಥವಾ ಮಧ್ಯರಾತ್ರಿ ಮಳೆ ಸುರಿದರೆ ಮನೆಯಲ್ಲೇ ಕುಳಿತು ಯಂತ್ರಕ್ಕೆ ಚಾಲನೆಯನ್ನೂ ನೀಡಬಹುದಾಗಿದೆ.

ಸಬ್‌ ಏರ್‌ ಸಿಸ್ಟಮ್‌ ವಿಶೇಷತೆ

1. ಮಳೆ ಆರಂಭವಾದ ಕ್ಷಣದಿಂದ ಪ್ರತಿ ನಿಮಿಷಕ್ಕೆ 10 ಸಾವಿರ ಲೀಟರ್‌ ವೇಗದಲ್ಲಿ ಈ ಯಂತ್ರ ಮೈದಾನದಿಂದ ನೀರನ್ನು ಹೀರಿಕೊಳ್ಳುತ್ತದೆ.

2. ಈ ಹಿಂದಿನ ಚರಂಡಿ ವ್ಯವಸ್ಥೆಗಿಂತ 36 ಪಟ್ಟು ವೇಗದಲ್ಲಿ ನೀರನ್ನು ಮೈದಾನದಿಂದ ಖಾಲಿ ಮಾಡುತ್ತದೆ.

3. ಎಷ್ಟೇ ಮಳೆಯಾದರೂ ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ಮೈದಾನ ಪಂದ್ಯಕ್ಕೆ ಸಜ್ಜು

Continue Reading
Advertisement
Swati Maliwal
ದೇಶ2 mins ago

Swati Maliwal: ಸ್ವಾತಿ ಮಾಲಿವಾಲ್‌ ಕೇಸ್‌ಗೆ ಟ್ವಿಸ್ಟ್;‌ ತಮ್ಮ ಸಂಸದೆ ವಿರುದ್ಧವೇ ತಿರುಗಿಬಿದ್ದ ಆಪ್‌ ನಾಯಕರು!

Irfan Pathan
ಕ್ರೀಡೆ5 mins ago

Irfan Pathan : ಕಹಿ ನೆನಪು; ಬುರ್ಖಾ ಧರಿಸದ ಪತ್ನಿ ಜತೆ ಫೋಟೋ ತೆಗಿಸಿಕೊಳ್ಳಲು ಒಪ್ಪದ ಇರ್ಫಾನ್ ಪಠಾಣ್​​

Tatkal Tickets
ದೇಶ21 mins ago

Tatkal Tickets: ಕೊನೆ ಘಳಿಗೆಯಲ್ಲಿ ರೈಲು ಪ್ರಯಾಣಕ್ಕೆ ತತ್ಕಾಲ್‌ ಟಿಕೆಟ್‌ ಪಡೆಯುವುದು ಹೇಗೆ?

Prajwal Revanna Case DK Shivakumar offers Rs 100 crore to get involved in pen drive case Devaraje Gowda allegations
ಕ್ರೈಂ24 mins ago

Prajwal Revanna Case: ಪೆನ್‌ಡ್ರೈವ್‌ ಕೇಸ್‌ನಲ್ಲಿ ಶಾಮೀಲಾಗಲು ಡಿಕೆಶಿಯಿಂದ 100 ಕೋಟಿ ರೂಪಾಯಿ ಆಫರ್; ದೇವರಾಜೇಗೌಡ ಆರೋಪ

Delhi Airport
ದೇಶ26 mins ago

Delhi Airport: ಹಾರುತ್ತಿದ್ದ ವಿಮಾನದಲ್ಲಿ ಅಗ್ನಿ ಅವಘಡ; ದೆಹಲಿ ಏರ್‌ಪೋರ್ಟ್‌ನಲ್ಲಿ ಎಮರ್ಜನ್ಸಿ ಘೋಷಣೆ!

water aerator
ಬೆಂಗಳೂರು32 mins ago

Water Aerator : ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ರೆ 10 ನಿಮಿಷದಲ್ಲಿ ಮನೆ ತಲುಪುತ್ತದೆ ವಾಟರ್ ಏರಿಯೇಟರ್​

Holenarasipura sexual assault case lot of confusion in the victim statement against HD Revanna Case
ಕ್ರೈಂ1 hour ago

HD Revanna Case: ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಕೇಸ್‌; ರೇವಣ್ಣ ವಿರುದ್ಧ ಸಂತ್ರಸ್ತೆ ಹೇಳಿಕೆಯಲ್ಲಿ ಭಾರಿ ಗೊಂದಲ!

Bhatkal News
ಕರ್ನಾಟಕ1 hour ago

Bhatkal News: ಭಟ್ಕಳದ ಕಡವಿನಕಟ್ಟೆ ಹೊಳೆಯಲ್ಲಿ ಮುಳುಗಿ ಇಬ್ಬರ ಸಾವು

Dubbing Premier League
ಕ್ರಿಕೆಟ್1 hour ago

Dubbing Premier League : ಶನಿವಾರದಿಂದ 3ನೇ ಆವೃತ್ತಿಯ ಡಬ್ಬಿಂಗ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ

Uttar Pradesh
ದೇಶ1 hour ago

Uttar Pradesh: ಉತ್ತರ ಪ್ರದೇಶದಲ್ಲಿ ಲೋಕಸಭೆ ಸಮರ; ನೀವು ತಿಳಿಯಲೇಬೇಕಾದ 5 ಕುತೂಹಲಕರ ಅಂಶಗಳು ಇಲ್ಲಿವೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ14 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ15 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌