Actress Nayanthara: ರಾಮನ ಕುರಿತಾದ ಸಂಭಾಷಣೆ ಮೂಲಕ ವಿವಾದದ ಕಿಡಿ ಹೊತ್ತಿಸಿದ ನಯನತಾರಾ ಚಿತ್ರ - Vistara News

South Cinema

Actress Nayanthara: ರಾಮನ ಕುರಿತಾದ ಸಂಭಾಷಣೆ ಮೂಲಕ ವಿವಾದದ ಕಿಡಿ ಹೊತ್ತಿಸಿದ ನಯನತಾರಾ ಚಿತ್ರ

Actress Nayanthara: ನಯನತಾರಾ ಅಭಿನಯದ ʼಅನ್ನಪೂರ್ಣಿʼ ಚಿತ್ರ ಸದ್ಯ ವಿವಾದ ಎಬ್ಬಿಸಿದೆ. ಸಿನಿಮಾದಲ್ಲಿನ ರಾಮನ ಕುರಿತಾದ ಸಂಭಾಷಣೆ ಹಲವರ ಕಂಗೆಣ್ಣಿಗೆ ಗುರಿಯಾಗಿದೆ.

VISTARANEWS.COM


on

Annapoorani
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೆನ್ನೈ: ಇತ್ತೀಚೆಗೆ ಥಿಯೇಟರ್‌ಗಳಲ್ಲಿ ತೆರೆಕಂಡ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ (Actress Nayanthara) ಅಭಿನಯದ ʼಅನ್ನಪೂರ್ಣಿʼ (Annapoorani) ಚಿತ್ರ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಟೈಟಲ್‌ ರೋಲ್‌ನಲ್ಲಿ ನಯನತಾರಾ ಕಾಣಿಸಿಕೊಂಡಿರುವ ಈ ಸಿನಿಮಾ ಇದೀಗ ವಿವಾದ ಎಬ್ಬಿಸಿದೆ. ಶಿವಸೇನೆಯ ಮಾಜಿ ನಾಯಕ ರಮೇಶ್ ಸೋಲಂಕಿ ಇದೀಗ ಚಿತ್ರದ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಸಿನಿಮಾ ‘ಹಿಂದೂ ವಿರೋಧಿ’ ಎಂದು ಆರೋಪಿಸಿದ್ದಾರೆ. ಸಿನಿಮಾ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ ಎಂದು ದೂರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಮೇಶ್ ಸೋಲಂಕಿ, “ನಾನು ಚಿತ್ರ ನಿರ್ಮಿಸಿರುವ ಹಿಂದೂ ವಿರೋಧಿ ಝೀ ಸ್ಟುಡಿಯೋ ಮತ್ತು ನೆಟ್‌ಫ್ಲಿಕ್ಸ್‌ ವಿರುದ್ಧ ದೂರು ದಾಖಲಿಸಿದ್ದೇನೆ. ಭಗವಾನ್ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗಾಗಿ ಇಡೀ ಜಗತ್ತು ಕಾತುರದಿಂದ ನಿರೀಕ್ಷಿಸುತ್ತಿರುವ ಸಮಯದಲ್ಲಿ, ಜೀ ಸ್ಟುಡಿಯೋಸ್, ನಾಡ್ ಸ್ಟುಡಿಯೋಸ್ ಮತ್ತು ಟ್ರೈಡೆಂಟ್ ಆರ್ಟ್ಸ್ ನಿರ್ಮಿಸಿದ ಈ ಹಿಂದೂ ವಿರೋಧಿ ಚಿತ್ರ ʼಅನ್ನಪೂರ್ಣಿʼ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆʼʼ ಎಂದು ಬರೆದುಕೊಂಡಿದ್ದಾರೆ.

ಬಳಿಕ ಅವರು ಚಿತ್ರದಲ್ಲಿನ ಹಿಂದೂ ವಿರೋಧಿ ದೃಶ್ಯಗಳು ಯಾವುವು ಎನ್ನುವುದನ್ನು ಪಟ್ಟಿ ಮಾಡಿ ಕೊಟ್ಟಿದ್ದಾರೆ. ʼʼ1. ಹಿಂದೂ ಪೂಜಾರಿಯ ಮಗಳು ಬಿರಿಯಾನಿ ಅಡುಗೆ ಮಾಡುವ ವೇಳೆ ನಮಾಜ್‌ ಮಾಡುತ್ತಾಳೆ. 2. ಲವ್‌ ಜಿಹಾದ್‌ ಅನ್ನು ಪ್ರಚಾರ ಮಾಡಲಾಗಿದೆ. 3. ಫರ್ಹಾನ್‌ ಎನ್ನುವ ಪಾತ್ರ ಭಗವಾನ್‌ ಶ್ರೀರಾಮ ಮಾಂಸ ತಿನ್ನುವವರಾಗಿದ್ದರು ಎಂದು ಹೇಳುವ ದೃಶ್ಯ ಇದೆ. ನೆಟ್‌ಫ್ಲಿಕ್ಸ್‌ ಇಂಡಿಯಾ ಮತ್ತು ಝೀ ಸ್ಟುಡಿಯೋಸ್‌ ಉದ್ದೇಶಪೂರ್ವಕವಾಗಿ ಈ ಚಿತ್ರವನ್ನು ನಿರ್ಮಿಸಿದೆ. ಹಿಂದೂ ಭಾವನೆಗಳಿಗೆ ಧಕ್ಕೆ ತರಲು ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಸಮಯದಲ್ಲೇ ಚಿತ್ರ ಬಿಡುಗಡೆ ಮಾಡಲಾಗಿದೆ” ಎಂದು ಅವರು ಬರೆದಿದ್ದಾರೆ.

ಈ ಕುರಿತು ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವೀಸ್‌ ಅವರಿಗೆ ಮನವಿ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ʼಅನ್ನಪೂರ್ಣಿʼ ಚಿತ್ರದ ನಿರ್ದೇಶಕ ನಿಲೇಶ್‌ ಕೃಷ್ಣ, ನಟಿ ನಯನತಾರಾ, ನಿರ್ಮಾಪಕರಾದ ಜತಿನ್‌ ಸೇಥಿ, ಆರ್‌.ರವೀಂದ್ರನ್‌ ಮತ್ತು ಪುನೀತ್‌ ಗೋಯೆಂಕಾ, ಝೀ ಸ್ಟುಡಿಯೋಸ್‌ನ ಮುಖ್ಯ ವ್ಯವಹಾರ ಅಧಿಕಾರಿ ಶಾರಿಕ್‌ ಪಟೇಲ್‌ ಮತ್ತು ನೆಟ್‌ಫ್ಲಿಕ್ಸ್‌ ಇಂಡಿಯಾ ಹೆಡ್‌ ಮೋನಿಕಾ ಶೆರ್ಗಿಲ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ನೆಟ್‌ಫ್ಲಿಕ್ಸ್‌ ಇಂಡಿಯಾ, ನಯನತಾರಾ ಅಥವಾ ʼಅನ್ನಪೂರ್ಣಿʼ ಚಿತ್ರತಂಡ ಈ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಹಿರಿಯ ಕಲಾವಿದರಾದ ಕನ್ನಡಿಗ ಅಚ್ಯುತ್‌ ಕುಮಾರ್‌, ಸತ್ಯರಾಜ್‌, ಕಾರ್ತಿಕ್‌ ಕುಮಾರ್‌, ರೇಣುಕಾ, ಪಾರ್ವತಿ ಟಿ. ಮತ್ತಿತರರು ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬ್ರಾಹ್ಮಣ ಕುಟುಂಬದ ಯುವತಿ (ನಯನತಾರಾ) ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಸೇರಿ ಅಲ್ಲಿ ಯಾವೆಲ್ಲ ಸವಾಲುಗಳನ್ನು ಎದುರಿಸುತ್ತಾಳೆ ಎನ್ನುವುದೇ ಚಿತ್ರದ ಕಥೆ. ಬಾಕ್ಸ್‌ ಆಫೀಸ್‌ನಲ್ಲಿ ಈ ಸಿನಿಮಾ ಕೇವಲ 6 ಕೋಟಿ ರೂ. ಗಳಿಸಿದೆ.

ಇದನ್ನೂ ಓದಿ: Actress Nayanthara: ‘ಅನ್ನಪೂರ್ಣಿ’ಯಾಗಿ ನಯನತಾರಾ; ಟೀಸರ್‌ನಲ್ಲಿದೆ ಟ್ವಿಸ್ಟ್‌, ಮನಸೋತ ಪ್ರೇಕ್ಷಕರು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Darshan: ದರ್ಶನ್‌ ನನ್ನ ಊಟದ ತಟ್ಟೆ ತೊಳೆದು ಚಪ್ಪಲಿ ತೆಗೆದಿಟ್ಟಿದ್ರು; ʻದಚ್ಚುʼ ಸರಳತೆ ಬಗ್ಗೆ ಉಮಾಪತಿ ಹೇಳಿಕೆ ವೈರಲ್‌!

Actor Darshan: ಈ ಮುಂಚೆ ದರ್ಶನ್‌ ಅವರು ಉಮಾಪತಿಗೆ ʻತಗಡುʼ ಎಂದಿದ್ದಕ್ಕೆ ಉಮಾಪತಿ ಪರೋಕ್ಷವಾಗಿ ಪೋಸ್ಟ್‌ ಮೂಲಕ ತಿರುಗೇಟು ಕೊಟ್ಟಿದ್ದರು. “ತಾಳ್ಮೆ ಕೆಲವೊಮ್ಮೆ ಶಕ್ತಿ” ಎಂದು ವಿಡಿಯೊ ಪೋಸ್ಟ್ ಮಾಡಿದ್ದರು. ಇದಾದ ಬಳಿಕ ʻಡಿ ಬಾಸ್‌ʼ ಫ್ಯಾನ್ಸ್‌ ಉಮಾಪತಿ ಅವರು ದರ್ಶನ್‌ ಕುರಿತಾದ ಹೇಳಿಕೆಗೆ ಕ್ಲಾಸ್‌ ತೆಗೆದುಕೊಂಡಿದ್ದೂ ಉಂಟು. ಇದೀಗ ದರ್ಶನ್ ಜತೆಗೆ ಒಡನಾಟದಲ್ಲಿದ್ದ ಮುಂಚಿನ ಸಂದರ್ಭದಲ್ಲಿ ಉಮಾಪತಿ ಮಾತನಾಡಿರುವ ವಿಡಿಯೊ ಹಾಗೂ ಹೇಳಿಕೆಗಳು ವೈರಲ್‌ ಆಗುತ್ತಿವೆ.

VISTARANEWS.COM


on

Actor Darshan simplicity talk by umapathy old video goes viral
Koo

ಬೆಂಗಳೂರು: ದರ್ಶನ್‌ ಅರೆಸ್ಟ್‌ (Actor Darshan) ಆದ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಅವರು ದರ್ಶನ್‌ ಕುರಿತಾಗಿ ಸಾಕಷ್ಟು ಹೇಳಿಕೆ ಜತೆಗೆ ಪೋಸ್ಟ್‌ ಕೂಡ ಮಾಡಿದ್ದರು. ʻನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು. ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆʼಎಂದು ದರ್ಶನ್‌ ಕುರಿತಾಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದರು. ಈ ಮುಂಚೆ ದರ್ಶನ್‌ ಅವರು ಉಮಾಪತಿಗೆ ʻತಗಡುʼ ಎಂದಿದ್ದಕ್ಕೆ ಉಮಾಪತಿ ಪರೋಕ್ಷವಾಗಿ ಪೋಸ್ಟ್‌ ಮೂಲಕ ತಿರುಗೇಟು ಕೊಟ್ಟಿದ್ದರು. “ತಾಳ್ಮೆ ಕೆಲವೊಮ್ಮೆ ಶಕ್ತಿ” ಎಂದು ವಿಡಿಯೊ ಪೋಸ್ಟ್ ಮಾಡಿದ್ದರು. ಇದಾದ ಬಳಿಕ ʻಡಿ ಬಾಸ್‌ʼ ಫ್ಯಾನ್ಸ್‌ ಉಮಾಪತಿ ಅವರು ದರ್ಶನ್‌ ಕುರಿತಾದ ಹೇಳಿಕೆಗೆ ಕ್ಲಾಸ್‌ ತೆಗೆದುಕೊಂಡಿದ್ದೂ ಉಂಟು. ಇದೀಗ ದರ್ಶನ್ ಜತೆಗೆ ಒಡನಾಟದಲ್ಲಿದ್ದ ಮುಂಚಿನ ಸಂದರ್ಭದಲ್ಲಿ ಉಮಾಪತಿ ಮಾತನಾಡಿರುವ ವಿಡಿಯೊ ಹಾಗೂ ಹೇಳಿಕೆಗಳು ವೈರಲ್‌ ಆಗುತ್ತಿವೆ.

‘ಉಪಾಧ್ಯಕ್ಷ’ ಸಿನಿಮಾ ಬಿಡುಗಡೆ ಸಮಯದಲ್ಲಿ ಉಮಾಪತಿ ಶ್ರೀನಿವಾಸ್ ಸಂದರ್ಶನ ನೀಡಿದ್ದರು. ಅದರಲ್ಲಿ ದರ್ಶನ್ ಸರಳ, ಸಜ್ಜನಿಕೆ ಬಗ್ಗೆ ಉಮಾಪತಿ ಮಾತನಾಡಿದ್ದರು.

ಮಾಧ್ಯಮವೊಂದರ ಸಂದರ್ಶನದಲ್ಲಿ ಉಮಾಪತಿ ಮಾತನಾಡಿ ʻರಾಬರ್ಟ್‌ ಸಿನಿಮಾದಲ್ಲಿ ದರ್ಶನ್‌ ಜತೆ ಕೆಲಸ ಮಾಡುವಾಗ , ಒಳ್ಳೆಯ ಸಮಯ ಕಳೆದಿದ್ದೆವು. ರಾಮೋಜಿ ಫಿಲ್ಮಿಸಿಟಿಯಲ್ಲಿ ಊಟಕ್ಕೂ ಮುಂಚೆ ನಮ್ಮ ತಟ್ಟೆಯನ್ನು ತೊಳೆದುಕೊಂಡು ಬರುತ್ತಿದ್ದರು. ಒಮ್ಮೆ ನನ್ನ ಚಪ್ಪಲಿ ಸೋಫಾ ಕೆಳಗೆ ಹೋಗಿತ್ತು. ನನ್ನನ್ನು ಕೈ ತೊಳೆದುಕೊಂಡು ಬರಲು ಹೇಳಿ, ನೀವು ನಂಬಲ್ಲ ನನ್ನ ಚಪ್ಪಲಿ ತೆಗೆದು ಅಲ್ಲಿಟ್ಟಿದ್ದರು. ಆದರೆ ಅಂತಹ ವ್ಯಕ್ತಿ ಈ ರೀತಿ ಮಾಡಿದ್ರಲ್ಲ ಎನ್ನುವ ಬೇಜಾರಷ್ಟೇ. ಏನೇ ಸಮಸ್ಯೆ ಬಂದರೂ, ನಿರ್ಮಾಪಕರೇ ಏನೋ ಆಯ್ತಂತೆ. ನಾನು ಇದ್ದೀನಿ ತಲೆ ಕೆಡಿಸಿಕೊಳ್ಳಬೇಡಿ ಎನ್ನುತ್ತಿದ್ದರುʼʼಎಂದಿದ್ದರು. ನನ್ನ ತಾಯಿ ಯಾವಾಗಲೂ ಹೇಳೋರು. ದೇವರ ಏಟು ತಡೆದುಕೊಳ್ಳಬಹುದು . ಮನುಷ್ಯರ ಕಣ್ಣೇಟು ತಡೆದುಕೊಳ್ಳುವುದು ಕಷ್ಟ ಅಂತ. ಯಾವುದೋ ಒಂದು ಘಟನೆಯಿಂದ ದರ್ಶನ್‌ ಅವರ ಮೇಲಿನ ನಂಬಿಕೆ ಕಡಿಮೆ ಆಗುವುದಿಲ್ಲ. ನಮ್ಮಿಬ್ಬರ ನಡುವೆ ತಂದಿಟ್ಟು ತಮಾಷೆ ನೋಡುತ್ತಿದ್ದಾರೆ ಎಂದು ಸಾಕಷ್ಟು ಬಾರಿ ಅನಿಸಿದೆ. ನಾವು ಮುಂದೊಂದು ದಿನ ಒಟ್ಟಿಗೆ ಇರಬಹುದುʼʼಎಂದಿದ್ದರು. ಆದರೀಗ ಉಮಾಪತಿ ದರ್ಶನ್‌ ಕೇಸ್‌ ಬಗ್ಗೆ ನೇರನೇರವಾಗಿ ಹೇಳಿಕೆ ನೀಡುತ್ತಿದ್ದಾರೆ.

ಇದನ್ನೂ ಓದಿ: Actor Darshan: ದರ್ಶನ್ ಬಗ್ಗೆ ಮಾತನಾಡಿದ್ದಕ್ಕೆ ಜೀವ ಬೆದರಿಕೆ; ಪೊಲೀಸರಿಗೆ ನಟ ಪ್ರಥಮ್‌ ದೂರು

ದರ್ಶನ್‌ ಉಮಾಪತಿಗೆ ವಾರ್ನಿಂಗ್‌ ನೀಡಿದ್ದೇನು?

ಈ ಹಿಂದೆ ಉಮಾಪತಿ ಅವರು ಕಾಟೇರ ಟೈಟಲ್‌ ನಾನೇ ಕೊಟ್ಟಿದ್ದು ಎಂದು ಹಲವಾರು ಸಂದರ್ಶನಗಳಲ್ಲಿ ಹೇಳಿದ್ದರು. ದರ್ಶನ್‌ ಈ ಬಗ್ಗೆ ಮಾತನಾಡಿ ʻʻತಗಡೇ, ರಾಬರ್ಟ್‌ ಕಥೆ ನಿನಗೆ ಕೊಟ್ಟಿದ್ದು ನಾವು. ಇಂಥ ಒಳ್ಳೆ ಕಥೆ ಮತ್ತೆ ಯಾಕ್‌ ಬಿಟ್ಟೆ ನೀನು?ʼʼ ಎಂದು ವೇದಿಕೆ ಮೇಲೆಯೇ ಉಮಾಪತಿಗೆ ಪ್ರಶ್ನೆ ಮಾಡಿದ್ದರು. ʻಈ ಕಥೆ ನಾನು ಮಾಡಿಸಿದೆ, ಕಥೆ ನಾನು ಕೊಟ್ಟೆ ಎಂದು ಎಂದು ಹೇಳಿಕೊಂಡು ಬಂದಿದ್ದೆಯಲ್ವಾ?ಇಂಥ ಒಳ್ಳೆ ಕಥೆ ಯಾಕೆ ಬಿಟ್ಟೆ ನೀನು. ಅಯ್ಯೋ ತಗಡೇ… ಎಲ್ಲ ಆಧಾರ ಇಟ್ಟುಕೊಂಡೇ ಮಾತನಾಡಬೇಕುʼʼ ಎಂದು ಉಮಾಪತಿಗೆ ನೇರವಾಗಿ ದರ್ಶನ್‌ ಖಡಕ್ ವಾರ್ನಿಂಗ್ ಕೊಟ್ಟಿದ್ದರು.

Continue Reading

ಟಾಲಿವುಡ್

Actor Chiranjeevi: ಮೆಗಾಸ್ಟಾರ್ ಚಿರಂಜೀವಿ ಮಾಜಿ ಅಳಿಯ ಶಿರಿಷ್ ಭಾರದ್ವಾಜ್ ನಿಧನ

Actor Chiranjeevi: ಮಾಧ್ಯಮಗಳ ವರದಿ ಪ್ರಕಾರ ಶಿರಿಷ್ ಭಾರದ್ವಾಜ್‌ ಅವರು ಕೆಲವು ದಿನಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ,ಆಗಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಆದರೆ ಆರೋಗ್ಯ ಸ್ಥಿತಿ ದಿನೇ ದಿನೇ ಹದಗೆಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

VISTARANEWS.COM


on

Actor Chiranjeevi ex-son-in-law Sirish Bharadwaj passes away
Koo

ಬೆಂಗಳೂರು: ಮೆಗಾಸ್ಟಾರ್ ಚಿರಂಜೀವಿ (Actor Chiranjeevi) ಅವರ ಮಾಜಿ ಅಳಿಯ ಹಾಗೂ ಶ್ರೀಜಾ ಅವರ ಮಾಜಿ ಪತಿ ಶಿರಿಷ್ ಭಾರದ್ವಾಜ್ ನಿಧನರಾಗಿದ್ದಾರೆ. ಶಿರಿಷ್ ಭಾರದ್ವಾಜ್  ಮತ್ತು ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ ಪ್ರೀತಿಸಿ ಮದುವೆಯಾಗಿದ್ದರು. ಕುಟುಂಬಸ್ಥರ ವಿರೋಧ ನಡುವೆ ಪ್ರೀತಿಸಿ ಮದುವೆಯಾಗಿದ್ದ ಶ್ರೀಜಾ ಮನೆಯಿಂದ ಹೊರ ಹೋಗಿದ್ದರು. ಆ ಬಳಿಕ ಶ್ರೀಜಾ ಹಾಗೂ ಶಿರಿಷ್ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಆದರೆ ಕೆಲ ವರ್ಷಗಳ ಬಳಿಕ ದಾಂಪತ್ಯದಲ್ಲಿ ಬಿರುಕು ಮೂಡಿ ಶ್ರೀಜಾ ತನ್ನ ಪುತ್ರಿಯೊಂದಿಗೆ ಮತ್ತೆ ತಂದೆ ಚಿರಂಜೀವಿ ಮನೆಗೆ ವಾಪಸ್ ಆಗಿದ್ದರು.

2012ರಲ್ಲಿ ಶ್ರೀಜಾ ಕಿರುಕುಳ ನೀಡಿದ್ದಕ್ಕಾಗಿ ಶಿರಿಷ್ ಭಾರದ್ವಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆ ನಂತರ 2014ರಲ್ಲಿ ಶ್ರೀಜಾ ಅವರು ಶಿರಿಷ್ ಭಾರದ್ವಾಜ್‌ಗೆ ವಿಚ್ಛೇದನ ನೀಡಿದ್ದರು. ಇದೀಗ ಶಿರಿಷ್ ಭಾರದ್ವಾಜ್ ಬಾರದ ಲೋಕಕ್ಕೆ ಹೋಗಿದ್ದಾರೆ. ಸದ್ಯ ಶಿರಿಷ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಟಾಲಿವುಡ್‌ ಮಾಧ್ಯಮಗಳು ವರದಿ ಮಾಡಿವೆ.

ಮಾಧ್ಯಮಗಳ ವರದಿ ಪ್ರಕಾರ ಶಿರಿಷ್ ಭಾರದ್ವಾಜ್‌ ಅವರು ಕೆಲವು ದಿನಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ,ಆಗಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಆದರೆ ಆರೋಗ್ಯ ಸ್ಥಿತಿ ದಿನೇ ದಿನೇ ಹದಗೆಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಶ್ರೀಜಾ ಅವರಿಂದ ವಿಚ್ಛೇದನದ ನಂತರ, ಶಿರಿಷ್ ಭಾರದ್ವಾಜ್‌ ಬೇರೊಬ್ಬ ಮಹಿಳೆಯನ್ನು ವಿವಾಹವಾಗಿದ್ದರು. ನಂತರ ಶ್ರೀಜಾ ಅವರು ಕಲ್ಯಾಣ್ ದೇವ್ ಅವರನ್ನು ವಿವಾಹವಾದರು. ಶ್ರೀಜಾ ಮತ್ತು ಶಿರೀಷ್ ಶಿರಿಷ್ ಭಾರದ್ವಾಜ್‌ ಜೋಡಿಗೆ ಹೆಣ್ಣು ಮಗಳು ಇದ್ದಳು. ವಿಚ್ಛೇದನ ಬಳಿಕ ಮಗಳು ತಾಯಿ ಜತೆಗೆ ಇದ್ದಾಳೆ. ಮತ್ತೊಂದೆಡೆ, ಕಲ್ಯಾಣ್ ದೇವ್ ಜತೆ ಮತ್ತೆ ಮದುವೆಯಾದ ಶ್ರೀಜಾ ಅವರು ಮತ್ತೊಂದು ಮಗುವಿಗೆ ಜನ್ಮ ನೀಡಿದರು. ಶ್ರೀಜಾ ಅವರ ಎರಡನೇ ಪತಿ ಕೆಲವು ಚಿತ್ರಗಳಲ್ಲಿ ಹೀರೋ ಆಗಿ ನಟಿಸಿದ್ದರು.

ಇದನ್ನೂ ಓದಿ: Sonakshi Sinha: ಮುಸ್ಲಿಂ ಹುಡುಗನ ಜತೆ ಮಗಳು ಸೋನಾಕ್ಷಿ ಮದುವೆ; ಶತ್ರುಘ್ನ ಸಿನ್ಹಾ ಮುನಿಸು?

ಆಗಿನ ಕಾಲಕ್ಕೆ ಶ್ರೀಜಾ ಮತ್ತು ಶಿರಿಷ್ ಭಾರದ್ವಾಜ್‌ ಅವರ ಮದುವೆ ವಿಚಾರ ಎಷ್ಟು ಸೆನ್ಸೇಷನ್ ಆಗಿತ್ತೋ, ಅವರ ವಿಚ್ಛೇದನವೂ ಅಷ್ಟೇ ವೈರಲ್‌ ಆಗಿತ್ತು. ಶಿರಿಷ್ ಸ್ನೇಹಿತರು ಮಾತ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಶ್ರೀಜಾ ಮತ್ತು ಕಲ್ಯಾಣ್ ದೇವ್ ಮಾರ್ಚ್ 2016ರಂದು ಅದ್ಧೂರಿಯಾಗಿ ಬೆಂಗಳೂರಿನಲ್ಲಿ ವಿವಾಹವಾದರು. ಕೆಲವು ಸಮಯದ ನಂತರ ಶ್ರೀಜಾ ತನ್ನ ಹೆಸರಿನಿಂದ ಪತಿಯ ಹೆಸರನ್ನು ಕೈಬಿಟ್ಟರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕಲ್ಯಾಣ್ ದೇವ್ ಜತೆಗಿನ ಫೋಟೊವನ್ನು ಡಿಲೀಟ್ ಮಾಡಿ ಇಬ್ಬರೂ ಒಬ್ಬರಿಗೊಬ್ಬರು ಅನ್ ಫಾಲೋ ಮಾಡಿದರು. ಇದೀಗ ಕಲ್ಯಾಣ್ ದೇವ್ ಜತೆಗೂ ಶ್ರೀಜಾ ಡಿವೋರ್ಸ್‌ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

Continue Reading

ಸ್ಯಾಂಡಲ್ ವುಡ್

Actor Darshan: ʻಡಿ ಬಾಸ್ʼ ಹೊರ ಬಂದ್ಮೇಲೆ ಉತ್ತರ ಸಿಗೋ ರೀತಿಯಲ್ಲೇ ಸಿಗುತ್ತೆ; ಉಮಾಪತಿ ವಿರುದ್ಧ ದಚ್ಚು ಫ್ಯಾನ್ಸ್‌ ಕಿಡಿ!

Actor Darshan: ಉಮಾಪತಿ ಪರೋಕ್ಷವಾಗಿ ಪೋಸ್ಟ್‌ ಮೂಲಕ ತಿರುಗೇಟು ಕೊಟ್ಟಿದ್ದರು. “ತಾಳ್ಮೆ ಕೆಲವೊಮ್ಮೆ ಶಕ್ತಿ” ಎಂದು ವಿಡಿಯೊ ಪೋಸ್ಟ್ ಮಾಡಿದ್ದರು. ಅಷ್ಟೇ ಅಲ್ಲ ಮಾಧ್ಯಮಗಳಿಗೆ ಕೊಲೆ ಕೇಸ್‌ ವಿಚಾರವಾಗಿ ʻʻʻನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು. ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆʼʼಎಂದಿದ್ದರು. ಇದೀಗ ಉಮಾಪತಿ ವಿರುದ್ಧ ತೂಗುದೀಪ ಟೀಮ್ ಕಿಡಿಕಾರಿದೆ. ʻಡಿ ಬಾಸ್ ಹೊರಬಂದಮೇಲೆ ಉತ್ತರ ಸಿಗುವ ರೂಪದಲ್ಲೇ ಸಿಗತ್ತೆʼ ಎಂದು ಖಡಕ್‌ ಆಗಿ ಬರೆದು ಪೋಸ್ಟ್‌ ಶೇರ್‌ ಮಾಡಿಕೊಂಡಿದೆ.

VISTARANEWS.COM


on

Actor Darshan case reaction by umapathy d boss Fans violent
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ (Actor Darshan) ಅರೆಸ್ಟ್‌ ಆಗಿದ್ದಾರೆ. ಈ ಮುಂಚೆ ದರ್ಶನ್‌ ಅವರು ಉಪಾತಿಗೆ ʻತಗಡುʼ ಎಂದಿದ್ದಕ್ಕೆ ಉಮಾಪತಿ ಪರೋಕ್ಷವಾಗಿ ಪೋಸ್ಟ್‌ ಮೂಲಕ ತಿರುಗೇಟು ಕೊಟ್ಟಿದ್ದರು. “ತಾಳ್ಮೆ ಕೆಲವೊಮ್ಮೆ ಶಕ್ತಿ” ಎಂದು ವಿಡಿಯೊ ಪೋಸ್ಟ್ ಮಾಡಿದ್ದರು. ಅಷ್ಟೇ ಅಲ್ಲ ಮಾಧ್ಯಮಗಳಿಗೆ ಕೊಲೆ ಕೇಸ್‌ ವಿಚಾರವಾಗಿ ʻʻʻನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು. ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆʼʼಎಂದಿದ್ದರು. ಇದೀಗ ಉಮಾಪತಿ ವಿರುದ್ಧ ತೂಗುದೀಪ ಟೀಮ್ ಕಿಡಿಕಾರಿದೆ. ʻಡಿ ಬಾಸ್ ಹೊರಬಂದಮೇಲೆ ಉತ್ತರ ಸಿಗುವ ರೂಪದಲ್ಲೇ ಸಿಗತ್ತೆʼ ಎಂದು ಖಡಕ್‌ ಆಗಿ ಬರೆದು ಪೋಸ್ಟ್‌ ಶೇರ್‌ ಮಾಡಿಕೊಂಡಿದೆ.

ತೂಗುದೀಪ ಡಿ ಟೀಮ್‌-ಆರ್‌ ಈ ರೀತಿ ಪೋಸ್ಟ್‌ ಮಾಡಿದೆ ʻʻಉಮಾಪತಿ ಅವರೇ ನೀವು ಆಡಿರುವ ಮಾತುಗಳಿಗೆ ಡಿ ಬಾಸ್ ರವರು ಹೊರ ಬಂದಮೇಲೆ ಉತ್ತರ ಸಿಗುವ ರೀತಿಯಲ್ಲೇ ಸಿಗುತ್ತೆ.. ಅದು ಆಗಿರಲಿ ಬಿಡಿ! 2021 ಫೆಬ್ರವರಿ 15 ಮಡಿಕೇರಿಯಲ್ಲಿ ರಾತ್ರಿ ಸರಿ ಸುಮಾರು 10 ರಿಂದ 11ರ ಸಮಯ, ರಾಬರ್ಟ್ ಚಿತ್ರದ ಟ್ರೈಲರ್ ಅನ್ನು ತಮ್ಮ ನೆಚ್ಚಿನ ಸೆಲೆಬ್ರಿಟಿಗಳಿಗಾಗಿ ಮುಂಚಿತವಾಗಿ ಡಿ ಬಾಸ್ ರವರು ಬಿಡುಗಡೆಯನ್ನು ನಿಮ್ಮ ಕೈನಿಂದಲೇ ಮಾಡಿಸ್ತಾರೆ, ಅದು ಕೂಡ ದೊಡ್ಡ ಪರದೆ ಮೇಲೆ… ಮಾಡುವ ಮುನ್ನ ನಮ್ಮ ನಿರ್ಮಾಪಕರ ಈ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು, ಟ್ರೈಲರ್ ಬಿಡುಗಡೆ ಮಾಡಲು ಒಂದು ಷರತ್ತು ಹಾಕುತ್ತಾರೆ, ಆ ಷರತ್ತು ಏನು ಅಂತ ನಿಮಗೆ ಮರೆತು ಹೋಗಿರಬಹುದು.

ಆದರೆ ನಾವು ಆ ಷರತ್ತು ಮರೆತಿಲ್ಲ, ಟ್ರೈಲರ್ ಬಿಡುಗಡೆ ಮಾಡ್ಬೇಕು ಅಂದ್ರೆ ನಮ್ಮ ನಿರ್ಮಾಪಕರ ಕೈಗೆ ನಿಮ್ಮ ಕೈಲಿ ಎಷ್ಟು ಹಣ ಕೊಡೋಕೆ ಆಗುತ್ತೋ ಅಷ್ಟು ಕೊಡಿ ಅಂದಾಗ ಕೇವಲ 45 ನಿಮಿಷಗಳ ಒಳಗೆ ಬರೋಬ್ಬರಿ 2 ಲಕ್ಷ ರೂ. ಸಂಗ್ರಹಣೆ ಆದಂತ ಹಣ ಕೊಟ್ಟೆವು. ಅದಕ್ಕೆ ಇನ್ನು ಸ್ವಲ್ಪ ತನ್ನ ಕೈನಿಂದ ಕೊಟ್ಟು ಹಣದಲ್ಲಿ, ತುಮಕೂರು ಸಿದ್ದಗಂಗಾ ಮಠಕ್ಕೆ ಬೇಕಾದ ಸಾಮಗ್ರಿಗಳನ್ನು ಕೊಡಲಾಯ್ತು. ಅದು ಕೂಡ ನಿಮ್ಮ ಕೈನಿಂದಲೇ ಶಿರಾ ಅಭಿಮಾನಿ ಸಂಘದವರಿಗೆ ಕೊಡಿಸಿದ್ದು ಮರೆತು ಹೋಯಿತಾ ಸಾರ್. ಚೆನ್ನಾಗಿದ್ದಾಗ ಜತೆಯಲ್ಲಿ ಚನ್ನಾಗಿ ತಿಂದು ತೇಗಿ, ಈಗ ಆ ಮನುಷ್ಯನ ಮೇಲೆ ವಿಷ ಕಕ್ಕುವ ನಿಮಗೆ ನರಸಿಂಹ ಒಳ್ಳೆಯದು ಮಾಡಲಿʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Darshan: ಕಸ್ಟಡಿಯಲ್ಲಿರೋ ದರ್ಶನ್‌ಗೆ ಹೆಚ್ಚಾಯ್ತು ಬಿಪಿ; ಪವಿತ್ರಾಗೌಡ ಮಾತ್ರ ಕೂಲ್‌ ಕೂಲ್‌..!

ಪೋಸ್ಟ್‌ ವೈರಲ್‌

ಉಮಾಪತಿ ಪ್ರತಿಕ್ರಿಯೆ ಏನು?

ಕೊಲೆ ಕೇಸ್‌

ʻʻಯಾರೇ ಈ ಕೃತ್ಯ ಮಾಡಿದ್ದರೂ ಗಲ್ಲಿಗೇರಿಸಬೇಕು. ತಪ್ಪು ಎಲ್ಲರೂ ಮಾಡ್ತಾರೆ. ಯಾರಿಗೋ ತೊಂದರೆ ಕೊಟ್ಟು ಬದುಕ್ತೀವಿ ಎನ್ನುವುದು ತಪ್ಪು. ಪಾಪ ಪ್ರಜ್ಞೆ ಕಾಡುತ್ತ ಇರುತ್ತೆ. . ದರ್ಶನ್ ಕುಂತ್ರೆ ಜುಟ್ಟು, ನಿಂತರೆ ಕಾಲು ಇದು ನನ್ನ ಅನುಭವ ಎಂದಿದ್ದಾರೆ. ಇನ್ನಾದರೂ ಅವರು ಸುಧಾರಿಸಿಕೊಳ್ಳಬೇಕು. ಈ ಪ್ರಕರಣದಲ್ಲಿ ಲಿಂಕ್ ಇರೋದು ಕೆಲವರಿಗೆ ಮಾತ್ರ. ಇನ್ನೂ ಉಳಿದವರು ಅಮಾಯಕರು ದರ್ಶನ್ ಮೇಲಿನ ಪ್ರೀತಿಗೆ ಬಂದಿದ್ದಾರೆ ಅಷ್ಟೇ. ಇವಾಗ ಅವರು ಜೈಲಿಗೆ ಹೋಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸಮಾಜಕ್ಕೆ ಮಾದರಿಯಾಗುವ ವ್ಯಕ್ತಿಯನ್ನು ಪ್ರೀತಿಸಿ ಬೇಡ ಹೇಳೋದಿಲ್ಲ. ಆದರೆ ನಿಮ್ಮ ಕುಟುಂಬನ ಬೀದಿಗೆ ಬಿಟ್ಟು ಪೋಷಕರನ್ನು ಬಲಿ ಕೊಟ್ಟು ಪ್ರೀತಿಸಲು ಹೋಗಬೇಡಿʼʼಎಂದರು.

ನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು

ದರ್ಶನ್‌ ಅವರು ಸ್ನೇಹಿತರಾಗಿಗಿದ್ದಾಗ ಅವರು ನನ್ನ ಜತೆ ಚೆನ್ನಾಗಿಯೇ ಇದ್ದರು. ಅದೇನೋ ಅಂತರಲ್ಲ  6 ಗಂಟೆ ನಂತರ ಬ್ಯಾಡ್ ಮ್ಯಾನ್, 6ರ ಮುಂಚೆ ಗುಡ್ ಮ್ಯಾನ್ ಅಂತ. ಅದು ಅವರವರ ಹವ್ಯಾಸ. ನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು. ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆ. ನಾನು ನೋಡಿದ ಹಾಗೆ ದರ್ಶನ್ ಒಳ್ಳೆಯ ಮನುಷ್ಯನೇ. ನನಗಂತೂ ಅವರು ಅನ್ಯಾಯ ಮಾಡಿಲ್ಲ. ಆದರೆ ಆ ಮೈಸೂರು ಕೇಸ್ ನಂತರ ಅವರ ನಡವಳಿಕೆ ಬದಲಾಯ್ತು. ಕಾಟೇರ ಟೈಟಲ್ ಅವರೇ ಕೊಟ್ಟಿರಬಹುದು. ಆದರೆ ಅದು ನನ್ನ ಬ್ಯಾನರ್‌ನಲ್ಲಿ ರಿಜಿಸ್ಟರ್ ಆಗಿದ್ದು, ಅದಕ್ಕೆ ದುಡ್ಡು ಕೊಟ್ಟಿದ್ದು ನಾನೇʼʼ ಎಂದಿದ್ದಾರೆ.

Continue Reading

ಕರ್ನಾಟಕ

Rachel Movie: ಮಲಯಾಳಿ ನಟಿ ಹನಿ ರೋಸ್ ನಾಯಕಿಯಾಗಿ ನಟಿಸಿರುವ ‘ರೆಚೆಲ್’ ಚಿತ್ರದ ಟೀಸರ್ ರಿಲೀಸ್‌

Rachel Movie: ಮಲಯಾಳಿ ನಟಿ ಹನಿ ರೋಸ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ರೆಚೆಲ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮೂಲ ಮಲಯಾಳಂನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಕನ್ನಡದಲ್ಲೂ ರಿಲೀಸ್‌ ಆಗಲಿದೆ. ಚಿತ್ರವು ಹಿಂಸಾಚಾರ ಮತ್ತು ರಕ್ತಪಾತದ ಕಥೆಯಾಗಿರುತ್ತದೆ ಎಂದು ಟೀಸರ್ ಸುಳಿವು ನೀಡುತ್ತದೆ. ಎಬ್ರಿಡ್ ಶೈನ್ ಸಹ ನಿರ್ಮಾಣದ ಜತೆಗೆ ಮತ್ತು ಬರಹಗಾರರಾಗಿರುವ ಈ ಚಿತ್ರವನ್ನು ಆನಂದಿನಿ ಬಾಲಾ ನಿರ್ದೇಶಿಸಿದ್ದಾರೆ. ಹನಿ ರೋಸ್ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

VISTARANEWS.COM


on

Malayali actress Honey Rose starring Rachel movie Teaser release
Koo

ಬೆಂಗಳೂರು: ಮಲಯಾಳಿ ನಟಿ ಹನಿ ರೋಸ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ರೆಚೆಲ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮೂಲ ಮಲಯಾಳಂನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಕನ್ನಡದಲ್ಲೂ ರಿಲೀಸ್‌ ಆಗಲಿದೆ. ಚಿತ್ರವು ಹಿಂಸಾಚಾರ ಮತ್ತು ರಕ್ತಪಾತದ ಕಥೆಯಾಗಿರುತ್ತದೆ ಎಂದು ಟೀಸರ್ ಸುಳಿವು ನೀಡುತ್ತದೆ.

ಎಬ್ರಿಡ್ ಶೈನ್ ಸಹ ನಿರ್ಮಾಣದ ಜತೆಗೆ ಮತ್ತು ಬರಹಗಾರರಾಗಿರುವ ಈ ಚಿತ್ರವನ್ನು ಆನಂದಿನಿ ಬಾಲಾ ನಿರ್ದೇಶಿಸಿದ್ದಾರೆ. ಹನಿ ರೋಸ್ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಚಿತ್ರದಲ್ಲಿ ಬಾಬು ರಾಜ್, ಕಲಾಭವನ್ ಶಾಜೋನ್, ರೋಷನ್ ಬಶೀರ್, ಚಂದು ಸಲೀಂಕುಮಾರ್, ರಾಧಿಕಾ ರಾಧಾಕೃಷ್ಣನ್, ಜಾಫರ್ ಇಡುಕ್ಕಿ, ವಿನೀತ್ ತಟ್ಟಿಲ್, ಜೋಜಿ, ದಿನೇಶ್ ಪ್ರಭಾಕರ್, ಪಾಲಿ ವಲ್ಸನ್, ವಂದಿತಾ ಮನೋಹರನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Union Budget 2024: ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿ 5 ಲಕ್ಷ ರೂ.ಗೆ ಏರಿಕೆ? ಇಲ್ಲಿದೆ ಮಹತ್ವದ ಅಪ್‌ಡೇಟ್

ಈ ಚಿತ್ರವನ್ನು ಬಾದುಶಾ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ಬಾದುಶಾ ಎನ್‌ಎಂ, ರಾಜನ್ ಚಿರಾಯಿಲ್ ಮತ್ತು ಎಬ್ರಿಡ್ ಶೈನ್ ನಿರ್ಮಿಸಿದ್ದಾರೆ. ಕಥೆಯನ್ನು ರಾಹುಲ್ ಮನಪ್ಪಟ್ಟು ಬರೆದಿದ್ದು, ಚಿತ್ರಕಥೆಯನ್ನು ರಾಹುಲ್ ಮನಪ್ಪಟ್ಟು ಮತ್ತು ಎಬ್ರಿಡ್ ಶೈನ್ ಮಾಡಿದ್ದಾರೆ. ಸಹ ನಿರ್ಮಾಪಕ – ಹನ್ನನ್ ಮರಮುತ್ತಮ್, ಛಾಯಾಗ್ರಹಣ – ಸ್ವರೂಪ್ ಫಿಲಿಪ್, ಸಂಗೀತ ಮತ್ತು ಬಿಜಿಎಂ – ಇಶಾನ್ ಛಾಬ್ರಾ, ಸಂಕಲನ – ಮನೋಜ್, ನಿರ್ಮಾಣ ವಿನ್ಯಾಸಕ – ಸುಜಿತ್ ರಾಘವ್, ಧ್ವನಿ ಮಿಶ್ರಣ – ರಾಜಕೃಷ್ಣನ್ ಎಂ ಆರ್, ಧ್ವನಿ ವಿನ್ಯಾಸ – ಶ್ರೀ ಶಂಕರ್, ಕಾರ್ಯನಿರ್ವಾಹಕ ನಿರ್ಮಾಪಕರು – ಮಂಜು ಬಾದುಷಾ, ಶೆಮಿ ಬಶೀರ್, ಶೈಮಾ ಮುಹಮ್ಮದ್ ಬಶೀರ್ ಅವರದ್ದು.

Continue Reading
Advertisement
Hooch Tragedy
ದೇಶ1 hour ago

Hooch Tragedy: ಕಳ್ಳಬಟ್ಟಿ ಸೇವಿಸಿ 16 ಮಂದಿ ಸಾವು, 70ಕ್ಕೂ ಅಧಿಕ ಜನ ಅಸ್ವಸ್ಥ

Blacklist contractors who do not complete work within time says Minister Mankala Vaidya
ಉತ್ತರ ಕನ್ನಡ1 hour ago

Uttara Kannada News: ಅವಧಿಯೊಳಗೆ ಕಾಮಗಾರಿ ಮುಕ್ತಾಯಗೊಳಿಸದ ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸಿ: ಸಚಿವ ಮಂಕಾಳ ವೈದ್ಯ

Appu Cup Season 2 to be held in July A team building event was held in Bengaluru
ಬೆಂಗಳೂರು1 hour ago

Appu Cup Badminton: ʼಅಪ್ಪು ಕಪ್ ಸೀಸನ್ 2ʼ; ಟೀಮ್ ಬಿಲ್ಡಿಂಗ್‌ಗೆ ಶುಭ ಕೋರಿದ ಅಶ್ವಿನಿ ಪುನೀತ್ ರಾಜಕುಮಾರ್

RSA vs USA
ಕ್ರೀಡೆ1 hour ago

SA vs USA: ಮಿಂಚಿದ ಡಿಕಾಕ್; ಯುಎಸ್‌ಎ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 18 ರನ್‌ಗಳ ಜಯ

NET 2024
ದೇಶ2 hours ago

NET 2024: ಪರೀಕ್ಷೆ ನಡೆದ ಒಂದೇ ದಿನದಲ್ಲಿ ನೆಟ್ ರದ್ದುಗೊಳಿಸಿದ ಕೇಂದ್ರ ಸರ್ಕಾರ; ಏನಿದು ಕೇಸ್?‌

Hajj Pilgrims
ದೇಶ3 hours ago

Hajj Pilgrims: ಬಿಸಿಗಾಳಿ, ಬಿಸಿಲಿನ ಹೊಡೆತ; ಹಜ್‌ ಯಾತ್ರೆ ಕೈಗೊಂಡ 68 ಭಾರತೀಯರ ಸಾವು

Bescom complaint against false information video about electricity compensation for farmers
ಕರ್ನಾಟಕ4 hours ago

Fact Check: ಹೊಲದಲ್ಲಿ ಟ್ರಾನ್ಸ್‌ಫಾರ್ಮರ್‌ ಇದ್ದರೆ ರೈತರಿಗೆ ಪರಿಹಾರ? ಬೆಸ್ಕಾಂ ಹೇಳಿದ್ದೇನು?

Murder Case
ಕರ್ನಾಟಕ4 hours ago

Murder Case: 3 ವರ್ಷದ ಬಾಲಕನ ಕತ್ತು ಸೀಳಿ ಕೊಂದ ಚಿಕ್ಕಪ್ಪ; ನದಿಯಲ್ಲಿ ಈಜಲು ಹೋಗಿ ಇಬ್ಬರು ನಾಪತ್ತೆ

Suniel Shetty
ಬಾಲಿವುಡ್4 hours ago

Suniel Shetty: ಅಪ್ಪ ವೇಟರ್‌ ಆಗಿ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್‌ಗೆ ಈಗ ಸುನೀಲ್‌ ಶೆಟ್ಟಿ ಒಡೆಯ; ಇದಪ್ಪ Success ಅಂದ್ರು ಜನ!

DCM DK Shivakumar visit Kengal Anjaneya temple
ಕರ್ನಾಟಕ4 hours ago

DK Shivakumar: ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದಿಂದ ನನ್ನ ಹೊಸ ರಾಜಕೀಯ ಅಧ್ಯಾಯ ಪ್ರಾರಂಭ: ಡಿ.ಕೆ.ಶಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು2 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು3 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ3 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ3 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ4 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ4 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ5 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ5 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌