Rohit Sharma : ಡಕ್​ ಔಟ್ ಆದರೂ ವಿಶೇಷ ದಾಖಲೆ ಬರೆದ ರೋಹಿತ್​ ಶರ್ಮಾ - Vistara News

ಕ್ರಿಕೆಟ್

Rohit Sharma : ಡಕ್​ ಔಟ್ ಆದರೂ ವಿಶೇಷ ದಾಖಲೆ ಬರೆದ ರೋಹಿತ್​ ಶರ್ಮಾ

Rohit Sharma : ರೋಹಿತ್ ಶರ್ಮಾ ಒಂದೂವರೆ ವರ್ಷದ ಬಳಿಕ ಟಿ20 ತಂಡಕ್ಕೆ ಮರಳಿದ ಬಳಿಕ ಹೊಸ ದಾಖಲೆ ಬರೆದಿದ್ದಾರೆ.

VISTARANEWS.COM


on

Rohit Sharma
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೊಹಾಲಿ : ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿರುವ ಹೊರತಾಗಿಯೂ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ. ಅವರೀಗ 100 ಪಂದ್ಯಗಳ ಗೆಲುವಿನ ಸರದಾರ ಎನಿಸಿಕೊಂಡಿದ್ದಾರೆ. ಸುಮಾರು ಒಂದೂವರೆ ವರ್ಷದ ಬಳಿಕ ಟಿ20 ಮಾದರಿಗೆ ಆಗಮಿಸಿರುವ ಅವರು ಅನಗತ್ಯ ರನ್​ಔಟ್​ಗೆ ಒಳಗಾಗಿದ್ದರೂ ದಾಖಲೆಯನ್ನು ಮುಂದುವರಿಸಿದ್ದಾರೆ.

ಭಾರತದ ಆರಂಭಿಕ ಬ್ಯಾಟರ್​ ರೋಹಿತ್​​ 2 ಎಸೆತಗಳಲ್ಲಿ ಡಕ್ಔಟ್ ಆದ ಹೊರತಾಗಿಯೂ, ಪುರುಷರ ಟಿ20 ಐನಲ್ಲಿ 100 ಗೆಲುವಿನ ಭಾಗವಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪುರುಷರ ಟಿ20ಐನಲ್ಲಿ 100ನೇ ಗೆಲುವಿನ ಮೈಲಿಗಲ್ಲನ್ನು ತಲುಪಿದ ಮೊದಲ ಆಟಗಾರ ಹಾಗೂ ಒಟ್ಟಾರೆ ನಾಲ್ಕನೇ ಕ್ರಿಕೆಟರ್​ ಎಂಬ ಖ್ಯಾತಿ ಅವರದ್ದಾಗಿದೆ

ಇಂಗ್ಲೆಂಡ್​ ಮಹಿಳಾ ಕ್ರಿಕೆಟರ್​ ಡ್ಯಾನಿ ವ್ಯಾಟ್ (111), ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ಜೋಡಿ ಅಲಿಸ್ಸಾ ಹೀಲಿ (100) ಮತ್ತು ಎಲಿಸ್ ಪೆರ್ರಿ (100) ಚುಟುಕು ಸ್ವರೂಪದಲ್ಲಿ 100 ಗೆಲುವಿನ ಭಾಗವಾಗಿದ್ದಾರೆ.

  • ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ಆಟಗಾರರು
  • 111 – ಡ್ಯಾನಿ ವ್ಯಾಟ್
  • 100 – ಅಲಿಸ್ಸಾ ಹೀಲಿ
  • 100 – ಎಲಿಸ್ ಪೆರ್ರಿ
  • 100* – ರೋಹಿತ್ ಶರ್ಮಾ
  • 94 – ಮೆಗ್ ಲ್ಯಾನಿಂಗ್
  • 89 – ಸುಜಿ ಬೇಟ್ಸ್
  • 86 – ಶೋಯೆಬ್ ಮಲಿಕ್

ಟಿ20 ಪಂದ್ಯ ಗೆದ್ದ ಭಾರತದ ಅತ್ಯಂತ ಹಿರಿಯ ನಾಯಕ ಎಂಬ ಹೆಗ್ಗಳಿಕೆಗೂ ರೋಹಿತ್ ಪಾತ್ರರಾಗಿದ್ದಾರೆ. ಭಾರತದ ಆರಂಭಿಕ ಆಟಗಾರನಿಗೆ 36 ವರ್ಷ 256 ದಿನಗಳಾಗಿವೆ.

ಹ ಆಟಗಾರನ ಹೆಸರನ್ನೇ ಮರೆತ ರೋಹಿತ್​ ಶರ್ಮಾ

ಮೊಹಾಲಿ: ಇಲ್ಲಿನ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಜನವರಿ 11 ರಂದು ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಹಾಗೂ ಅಫಘಾನಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ರೋಹಿತ್​ ಶರ್ಮಾ (Rohit Sharma ) ತಮ್ಮ ತಂಡದ ಸಹ ಆಟಗಾರರೊಬ್ಬರ ಹೆಸರನ್ನು ಮರೆಯುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. ರೋಹಿತ್ ಶರ್ಮಾ ತಮ್ಮ ಮರೆಗುಳಿ ಸ್ವಭಾವದ ಮೂಲಕ ಆಗಾಗ ಸುದ್ದಿಯಾಗುತ್ತಾರೆ. ಇದೀಗ ಮತ್ತೊಂದು ಬಾರಿ ಆಟಗಾರನ ಹೆಸರನ್ನೇ ಮರೆತು ಸೋಶಿಯಲ್ ಮೀಡಿಯಾಗಳಲ್ಲಿ ಮೀಮ್ಸ್​ಗೆ ಕಾರಣರಾಗಿದ್ದಾರೆ.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡರು. ಅವರು ಪ್ಲೇಯಿಂಗ್ ಇಲೆವೆನ್ ನಿಂದ ವಂಚಿತಗೊಂಡ ಆಟಗಾರರ ಹೆಸರುಗಳನ್ನು ಬಹಿರಂಗಪಡಿಸಲು ಪ್ರಾರಂಭಿಸಿದರು. ಅವರು ಸಂಜು ಸ್ಯಾಮ್ಸನ್, ಅವೇಶ್ ಖಾನ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಹೆಸರನ್ನು ಬಹಿರಂಗಪಡಿಸಿದರು. ಆದರೆ ಕೊನೆಯ ಹೆಸರನ್ನು ಮರೆತರು. ಅವರೇ ಸ್ಪಿನ್ನರ್ ಕುಲ್ದೀಪ್​ ಯಾದವ್. ಆದರೆ, ಒಟ್ಟು ಸದಸ್ಯರ ಬಗ್ಗೆ ಮಾಹಿತಿ ಹೊಂದಿದ್ದ ವೀಕ್ಷಕ ವಿವರಣೆಗಾರ ಮುರಳಿ ಕಾರ್ತಿಕ್ ಸ್ವಲ್ಪ ಸಹಾಯ ಮಾಡಿದರು. ಅವರು ಕುಲ್ದೀಪ್​ ಅವರು ಅಲ್ಲವೇ ಎಂದು ಕೇಳುವ ಮೂಲಕ ನೆರವು ಕೊಟ್ಟರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Team India : ಶ್ರೀಲಂಕಾ ಪ್ರವಾಸದ ಟಿ20 ಸರಣಿಗೆ ಹಾರ್ದಿಕ್ ಬದಲಿಗೆ ಸೂರ್ಯಕುಮಾರ್ ನಾಯಕ

Team India: ಹಾರ್ದಿಕ್ ಪಾಂಡ್ಯ ವಿಶ್ವಕಪ್ ಸಮಯದಲ್ಲಿ ​​ ರೋಹಿತ್ ಅವರ ಉಪನಾಯಕರಾಗಿದ್ದರು. ಅವರು ಹೆಚ್ಚು ಅನುಭವ ಹೊಂದಿದ್ದಾರೆ. ಮೂರು ಏಕದಿನ ಮತ್ತು 16 ಟಿ 20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಜೊತೆಗೆ ಐಪಿಎಲ್​​ನ ಎರಡು ಋತುಗಳಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದಾರೆ.

VISTARANEWS.COM


on

Team India
Koo

ನವದೆಹಲಿ: ಸೀಮಿತ ಓವರ್​ಗಳ ಪಂದ್ಯಗಳ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿರುವ ಭಾರತ ತಂಡಕ್ಕೆ (Team India) ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್ ತಂಡದ ನಾಯಕರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ. ಅವರು ಟಿ20 ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ತಿಂಗಳು ಟಿ 20 ವಿಶ್ವಕಪ್​ನಲ್ಲಿ ಭಾರತವನ್ನು ಪ್ರಶಸ್ತಿಗೆ ಮುನ್ನಡೆಸಿದ ರೋಹಿತ್ ಶರ್ಮಾ ಅವರಿಂದ ಸೂರ್ಯಕುಮಾರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬಾರ್ಬಡೋಸ್​ನಲ್ಲಿ ನಡೆದ ಫೈನಲ್ ನಂತರ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರೊಂದಿಗೆ ರೋಹಿತ್​​ ನಿವೃತ್ತಿ ಹೊಂದಿದ್ದಾರೆ.

ಹಾರ್ದಿಕ್ ಪಾಂಡ್ಯ ವಿಶ್ವಕಪ್ ಸಮಯದಲ್ಲಿ ​​ ರೋಹಿತ್ ಅವರ ಉಪನಾಯಕರಾಗಿದ್ದರು. ಅವರು ಹೆಚ್ಚು ಅನುಭವ ಹೊಂದಿದ್ದಾರೆ. ಮೂರು ಏಕದಿನ ಮತ್ತು 16 ಟಿ 20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಜೊತೆಗೆ ಐಪಿಎಲ್​​ನ ಎರಡು ಋತುಗಳಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಗಾಯಗಳು ಹಾರ್ದಿಕ್ ಅವರನ್ನು ಕಾಡುತ್ತಿವೆ. ಇತ್ತೀಚೆಗೆ, ಅಕ್ಟೋಬರ್ 19, 2023 ರಂದು ಏಕದಿನ ವಿಶ್ವಕಪ್​ನಲ್ಲಿ ಬಾಂಗ್ಲಾದೇಶ ವಿರುದ್ಧದ ಭಾರತದ ಪಂದ್ಯದ ಸಮಯದಲ್ಲಿ ಅವರಿಗೆ ಆದ ಪಾದದ ಗಾಯವು ಅವರನ್ನು ಐಪಿಎಲ್ 2024 ರವರೆಗೆ ತಂಡದಿಂದ ಹೊರಕ್ಕೆ ಇರುವಂತೆ ಮಾಡಿತು. ಬಳಿಕ ಅವರು ರೋಹಿತ್ ಬದಲಿಗೆ ಮುಂಬೈ ಇಂಡಿಯನ್ಸ್ ನಾಯಕನಾಗಿ ಆಡಿದರು. ಅವರು ಟಿ 20 ವಿಶ್ವಕಪ್​​ನಲ್ಲಿ ರಾಷ್ಟ್ರೀಯ ಕರ್ತವ್ಯಕ್ಕೆ ಮರಳಿದರು. ವಾಸ್ತವವಾಗಿ, 2022 ರ ಆರಂಭದಿಂದ ಭಾರತ ಆಡಿದ 79 ಟಿ 20 ಪಂದ್ಯಗಳಲ್ಲಿ, ಹಾರ್ದಿಕ್ ಕೇವಲ 46 ರಲ್ಲಿ ಮಾತ್ರ ಭಾಗಿಯಾಗಿದ್ದಾರೆ.

ಸೂರ್ಯಕುಮಾರ್ ಈ ಹಿಂದೆ ದೇಶೀಯ ಕ್ರಿಕೆಟ್ನಲ್ಲಿ ಮುಂಬೈ ತಂಡವನ್ನು ಮುನ್ನಡೆಸಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಐದು ಟಿ 20 ಐ ಸರಣಿಯಲ್ಲಿ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೂರು ಟಿ 20 ಐ ಸರಣಿಯಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಅವರು ನಾಯಕತ್ವದ ಸಾಲಿನಲ್ಲಿ ಬಲವಾಗಿದ್ದಾರೆ ಮತ್ತು ಸಮಕಾಲೀನ ಟಿ 20 ಕ್ರಿಕೆಟ್​ಗೆ ಸೂಕ್ತ ವೇಗದಲ್ಲಿ ಬ್ಯಾಟಿಂಗ್ ಮಾಡುತ್ತಾರೆ.

ಇದನ್ನೂ ಓದಿ: Yuvraj Singh : ಅಂಗವಿಕಲರಂತೆ ರೀಲ್ಸ್​ ಮಾಡಿದ ಯುವರಾಜ್​, ಹರ್ಭಜನ್​ ಸಿಂಗ್ ವಿರುದ್ಧ ದೂರು ದಾಖಲು

ಟಿ 20 ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವರಿಂದ ಅಧಿಕಾರ ವಹಿಸಿಕೊಂಡ ಹೊಸ ಕೋಚ್ ಗೌತಮ್ ಗಂಭೀರ್ ಅವರ ಅಡಿಯಲ್ಲಿ ಶ್ರೀಲಂಕಾದಲ್ಲಿ ಟಿ 20 ಪಂದ್ಯಗಳಲ್ಲಿ ಭಾರತ ಪಾಲ್ಗೊಳ್ಳಬೇಕಾಗಿದೆ. 2026 ರಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಮುಂದಿನ ಟಿ 20 ವಿಶ್ವಕಪ್​ಗೆ ತಂಡವನ್ನು ನಿರ್ಮಿಸುವ ನಿಟ್ಟಿನಲ್ಲಿ ಎಲ್ಲಾ ಮೊದಲ ಆಯ್ಕೆಯ ಆಟಗಾರರೊಂದಿಗೆ ತಂಡ ಸಿದ್ಧಗೊಳ್ಳಲಿದೆ. ಟಿ 20 ವಿಶ್ವಕಪ್ ನಂತರ ಭಾರತವು ಜಿಂಬಾಬ್ವೆಯಲ್ಲಿ ಐದು ಪಂದ್ಯಗಳ ಟಿ 20 ಐ ಸರಣಿಯನ್ನು ಆಡಿತು. ಆದರೆ ಆ ತಂಡದಲ್ಲಿ ವಿಶ್ವಕಪ್ ಗೆದ್ದ ತಂಡದಿಂದ ಕೇವಲ ಮೂವರು ಆಟಗಾರರು ಇದ್ದರು. ಅವರು ಕೊನೆಯ ಮೂರು ಪಂದ್ಯಗಳಿಗೆ ಮಾತ್ರ ಲಭ್ಯವಿದ್ದರು.

ಪ್ರವಾಸ ತಂಡವನ್ನು ಅಂತಿಮಗೊಳಿಸಲು ಆಯ್ಕೆದಾರರು ಬುಧವಾರ ಸಭೆ ಸೇರಲಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರವಾಸದಲ್ಲಿ ಮೂರು ಟಿ20 ಪಂದ್ಯಗಳ ಜೊತೆಗೆ ಮೂರು ಏಕದಿನ ಪಂದ್ಯಗಳು ನಡೆಯಲಿವೆ.

Continue Reading

ಕ್ರೀಡೆ

Yuvraj Singh : ಅಂಗವಿಕಲರಂತೆ ರೀಲ್ಸ್​ ಮಾಡಿದ ಯುವರಾಜ್​, ಹರ್ಭಜನ್​ ಸಿಂಗ್ ವಿರುದ್ಧ ದೂರು ದಾಖಲು

Yuvraj Singh: ಅಂಗವಿಕಲರ ಉದ್ಯೋಗ ಉತ್ತೇಜನದ ರಾಷ್ಟ್ರೀಯ ಕೇಂದ್ರದ (ಎನ್​ಸಿಪಿಇಡಿಪಿ) ಕಾರ್ಯನಿರ್ವಾಹಕ ನಿರ್ದೇಶಕ ಅರ್ಮಾನ್ ಅಲಿ ಅವರು ಅಮರ್ ಕಾಲೋನಿ ಪೊಲೀಸ್ ಠಾಣೆಯ ಎಸ್ಎಚ್ಒಗೆ ಕ್ರಿಕೆಟಿಗರ ವಿರುದ್ಧ ದೂರು ದಾಖಲಿಸಿರುವುದರಿಂದ ಈ ವಿಷಯ ಮತ್ತಷ್ಟು ಬೆಳೆದಿದೆ.

VISTARANEWS.COM


on

Yuvraj Singh
Koo

ನವದೆಹಲಿ: ಲೆಜೆಂಡ್ಸ್ ವಿಶ್ವ ಕಪ್​ನ ಉದ್ಘಾಟನಾ ಆವೃತ್ತಿಯಲ್ಲಿ ಗೆಲುವು ಸಾಧಿಸಿದ ಖುಷಿಯಲ್ಲಿ ಮಾಡಿದ ವಿಡಿಯೊ ಭಾರತದ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್ (Yuvraj Singh), ಹರ್ಭಜನ್ ಸಿಂಗ್, ಸುರೇಶ್ ರೈನಾ ಮತ್ತು ಗುರ್ಕೀರತ್ ಮಾನ್ ಗೆ ಸಮಸ್ಯೆಯಾಗಿ ಮಾರ್ಪಟ್ಟಿದೆ. ಎಲ್ಲರ ವಿರುದ್ಧ ಅಂಗವಿಕಲರನ್ನು ಅಪಹಾಸ್ಯ ಮಾಡಿದ ಆರೋಪದ ಮೇಲೆ ಪೊಲೀಸ್ ದೂರು ದಾಖಲಿಸಲಾಗಿದೆ. ವಿಶೇಷವೆಂದರೆ, ಮಾಜಿ ಕ್ರಿಕೆಟಿಗರು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್​ನಲ್ಲಿ ರೀಲ್ ಅನ್ನು ಪೋಸ್ಟ್ ಮಾಡಿದ್ದರು. ಅಲ್ಲಿ ಅವರು ನಟ ವಿಕ್ಕಿ ಕೌಶಲ್ ಅವರ ಮುಂಬರುವ ಚಿತ್ರ ಬ್ಯಾಡ್ ನ್ಯೂಸ್​ನ ವೈರಲ್ ಹಾಡಿನ ‘ತೌಬಾ-ತೌಬಾ’ ಹಾಡಿಗೆ ಹೆಜ್ಜೆ ಹಾಕಿದ್ದರು.

ವಿಶ್ವ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್ ಫೈನಲ್​​ನಲ್ಲಿ ಭಾಗವಹಿಸಿದ ನಂತರ ಕ್ರಿಕೆಟಿಗರು ತಮ್ಮ ದೇಹದ ಸ್ಥಿತಿಯನ್ನು ಹಾಸ್ಯಮಯ ರೀತಿಯಲ್ಲಿ ತೋರಿಸಿದ್ದರು. ಈ ಕಿರು ಕ್ಲಿಪ್ ವಿಕ್ಕಿ ಕೌಶಲ್ ಅವರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಅವರು ಪೋಸ್ಟ್​ಗೆ ನಗುವ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದರು. ಆದಾಗ್ಯೂ, ಭಾರತದ ಪ್ಯಾರಾ-ಬ್ಯಾಡ್ಮಿಂಟನ್ ತಾರೆ ಮಾನಸಿ ಜೋಶಿ ಅವರು ಕ್ರಿಕೆಟಿಗರು ವಿಕಲಚೇತನರನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಟೀಕಿಸಿದ್ದರು. ಅವರ ಆಕ್ರೋಶದ ನಂತರ, ಹರ್ಭಜನ್. ರೀಲ್ ಅನ್ನು ತೆಗೆದು ತಮ್ಮ ಇನ್ಸ್ಟಾಗ್ರಾಮ್ ಮೂಲಕ ಕ್ಷಮೆ ಯಾಚಿಸಿದ್ದರು.

ಅಂಗವಿಕಲರ ಉದ್ಯೋಗ ಉತ್ತೇಜನದ ರಾಷ್ಟ್ರೀಯ ಕೇಂದ್ರದ (ಎನ್​ಸಿಪಿಇಡಿಪಿ) ಕಾರ್ಯನಿರ್ವಾಹಕ ನಿರ್ದೇಶಕ ಅರ್ಮಾನ್ ಅಲಿ ಅವರು ಅಮರ್ ಕಾಲೋನಿ ಪೊಲೀಸ್ ಠಾಣೆಯ ಎಸ್ಎಚ್ಒಗೆ ಕ್ರಿಕೆಟಿಗರ ವಿರುದ್ಧ ದೂರು ದಾಖಲಿಸಿರುವುದರಿಂದ ಈ ವಿಷಯ ಮತ್ತಷ್ಟು ಬೆಳೆದಿದೆ.

ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅರ್ಮಾನ್ ಸೂಚನೆ

ಕ್ರಿಕೆಟಿಗರಲ್ಲದೆ, ಮೆಟಾ ಇಂಡಿಯಾದ ಉಪಾಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಸಂಧ್ಯಾ ದೇವನಾಥನ್ ಕೂಡ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಅನ್ನು ಉಲ್ಲಂಘಿಸಿದ್ದಾರೆ ಎಂದು ದೂರು ನೀಡಲಾಗಿದೆ. “ಈ ವೀಡಿಯೊ ಭಾರತದ ಸಂವಿಧಾನದ 21 ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ, ಇದು ಪ್ರತಿಯೊಬ್ಬ ವ್ಯಕ್ತಿಗೆ ಘನತೆಯಿಂದ ಬದುಕುವ ಹಕ್ಕನ್ನು ಖಾತರಿಪಡಿಸುತ್ತದೆ. ಇದು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ, 2016 ರ ಸೆಕ್ಷನ್ 92 ಅನ್ನು ಉಲ್ಲಂಘಿಸುತ್ತದೆ ಮತ್ತು ನಿಪುನ್ ಮಲ್ಹೋತ್ರಾ ವಿರುದ್ಧ ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (2004 ಎಸ್ಸಿಸಿ ಆನ್ಲೈನ್ ಎಸ್ಸಿ 1639) ಪ್ರಕರಣದಲ್ಲಿ ಸ್ಥಾಪಿಸಲಾದ ಸುಪ್ರೀಂ ಕೋರ್ಟ್​ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ ” ಎಂದು ಅರ್ಮಾನ್ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Chennai Super King : ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್​

ಕ್ರಿಕೆಟಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅರ್ಮಾನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. “ಅವರ ಕೃತ್ಯಗಳಿಗಾಗಿ ಅವರಿಗೆ ದಂಡ ವಿಧಿಸಬೇಕು” ಎಂದು ಅರ್ಮಾನ್ ಅಭಿಪ್ರಾಯಪಟ್ಟಿದ್ದಾರೆ.

Continue Reading

ಕ್ರೀಡೆ

Chennai Super King : ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್​

Chennai Super King :

VISTARANEWS.COM


on

Chennai Super King
Koo

ಬೆಂಗಳೂರು: ಐದು ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super King) ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಅಂತಾರಾಷ್ಟ್ರೀಯ ಸೂಪರ್ ಕಿಂಗ್ಸ್ ಅಕಾಡೆಮಿ ಸ್ಥಾಪಿಸುವುದಾಗಿ ಘೋಷಿಸಿದೆ. ಜನಪ್ರಿಯ ಫ್ರ್ಯಾಂಚೈಸಿ ಇತರ ಅಂತಾರಾಷ್ಟ್ರೀಯ ಅಕಾಡೆಮಿಗಳು. ಅಮೆರಿಕದ ಡಲ್ಲಾಸ್ ಮತ್ತು ಯುನೈಟೆಡ್ ಕಿಂಗ್​​ಡಮ್​​ನ ರೀಡಿಂಗ್​​ನಲ್ಲಿವೆ.

ಸಿಡ್ನಿಯಲ್ಲಿರುವ ಸೂಪರ್ ಕಿಂಗ್ಸ್ ಅಕಾಡೆಮಿಯು ಸಿಡ್ನಿ ಒಲಿಂಪಿಕ್ ಪಾರ್ಕ್​​ನ ಸಿಲ್ವರ್​ವಾಟರ್ ರಸ್ತೆಯ ಕ್ರಿಕೆಟ್ ಸೆಂಟ್ರಲ್​ನಲ್ಲಿ ಸ್ಥಾಪನೆಯಾಗಲಿದೆ. ಅತ್ಯಾಧುನಿಕ ಕೇಂದ್ರವು ವರ್ಷಪೂರ್ತಿ ಒಳಾಂಗಣ ಮತ್ತು ಹೊರಾಂಗಣ ತರಬೇತಿ ಸೌಲಭ್ಯಗಳನ್ನು ಹೊಂದಿರುತ್ತದೆ. ಬಾಲಕ ಮತ್ತು ಬಾಲಕಿಯರಿಗೆ ಕ್ರಿಕೆಟ್ ತರಬೇತಿ ಸೆಪ್ಟೆಂಬರ್ ನಿಂದ ಪ್ರಾರಂಭವಾಗಲಿದೆ.

2008ರಲ್ಲಿ ಐಪಿಎಲ್ ಪ್ರಾರಂಭವಾದಾಗಿನಿಂದ ಪ್ರಾರಂಭವಾದ ಆಸ್ಟ್ರೇಲಿಯಾದೊಂದಿಗೆ ನಮ್ಮ ವಿಶೇಷ ಪ್ರಯಾಣವನ್ನು ವಿಸ್ತರಿಸಲು ನಾವು ಸಂತೋಷಪಡುತ್ತೇವೆ. ಆಸ್ಟ್ರೇಲಿಯಾವು ಬಲವಾದ ಕ್ರೀಡಾ ಸಂಸ್ಕೃತಿ ಮತ್ತು ಶ್ರೀಮಂತ ಕ್ರಿಕೆಟ್ ಪರಂಪರೆಯನ್ನು ಹೊಂದಿರುವ ಚಾಂಪಿಯನ್ ದೇಶವಾಗಿದೆ. ಸೂಪರ್ ಕಿಂಗ್ಸ್ ಅಕಾಡೆಮಿಯು ಹುಡುಗರು ಮತ್ತು ಬಾಲಕಿಯರಿಬ್ಬರ ಕ್ರಿಕೆಟ್ ಪ್ರತಿಭಾನ್ವೇಷನೆಗೆ ಸಹಾಯ ಮಾಡಲಿದೆ. ಇದು ದೇಶದಲ್ಲಿ ಈಗಾಗಲೇ ಬಲವಾದ ಕ್ರಿಕೆಟ್ ವ್ಯವಸ್ಥೇ ಹೊಂದಿದೆ”ಎಂದು ಸಿಎಸ್​ಕೆ ಸಿಇಒ ಕೆಎಸ್ ವಿಶ್ವನಾಥನ್ ಹೇಳಿದರು.

ಕಳೆದ ಕೆಲವು ವರ್ಷಗಳಿಂದ ಕ್ರಿಕೆಟ್​​ನಲ್ಲಿ ಭೌಗೋಳಿಕ ಗಡಿಗಳು ಕಡಿಮೆಯಾಗುತ್ತಿವೆ. ಭಾರತ, ಯುಎಸ್ಎ, ಯುಕೆ ಮತ್ತು ಈಗ ಆಸ್ಟ್ರೇಲಿಯಾದಲ್ಲಿ ಉಪಸ್ಥಿತಿಯೊಂದಿಗೆ ನಮ್ಮ ವಿಶ್ವ ದರ್ಜೆಯ ಸೌಲಭ್ಯಗಳು ಬಲವಾದ ಕೋಚಿಂಗ್ ವಿಯಷ, ವಿನಿಮಯ ಕಾರ್ಯಕ್ರಮಗಳ ಮೂಲಕ ಮುಂದಿನ ಪೀಳಿಗೆಯ ಕ್ರಿಕೆಟಿಗರನ್ನು ಅಭಿವೃದ್ಧಿಪಡಿಸಲು ನಮಗೆ ಅವಕಾಶವಿದೆ” ಎಂದು ಅವರು ಹೇಳಿದರು.

ಮ್ಯಾಥ್ಯೂ ಹೇಡನ್, ಶೇನ್ ವ್ಯಾಟ್ಸನ್ ಮತ್ತು ಪ್ರಸ್ತುತ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ ಅವರಂತಹ ಕೆಲವು ಪ್ರಸಿದ್ಧ ಆಟಗಾರರು ತಮ್ಮ ಜರ್ಸಿಯನ್ನು ಧರಿಸಿರುವುದರಿಂದ ಸೂಪರ್ ಕಿಂಗ್ಸ್ ಆಸ್ಟ್ರೇಲಿಯಾದೊಂದಿಗೆ ಉತ್ತಮ ಸಂಬಂಧವನ್ನು ಹಂಚಿಕೊಂಡಿದೆ. ಕ್ರೀಡೆಯನ್ನು ಪ್ರೀತಿಸುವ ರಾಷ್ಟ್ರದಲ್ಲಿ ಸೂಪರ್ ಕಿಂಗ್ಸ್ ಅಕಾಡೆಮಿಯನ್ನು ಸ್ಥಾಪಿಸುವ ಮೊದಲು ಇದು ಸಮಯದ ವಿಷಯವೆಂದು ತೋರುತ್ತದೆ ಎಂದು ನುಡಿದರು.

ಐಪಿಎಲ್ 2024 ರಲ್ಲಿ ಸಿಎಸ್​​ಕೆ ಪ್ರದರ್ಶನ ಹೇಗಿತ್ತು?

ಐಪಿಎಲ್ 17 ನೇ ಆವೃತ್ತಿಗೆ ಮುಂಚಿತವಾಗಿ ಮಹೇಂದ್ರ ಸಿಂಗ್ ಧೋನಿ ಋತುರಾಜ್ ಗಾಯಕ್ವಾಡ್​​ಗೆ ನಾಯಕತ್ವವನ್ನು ಹಸ್ತಾಂತರಿಸಿದರು. ಮೊದಲ ಆರು ಪಂದ್ಯಗಳಲ್ಲಿ ತಮ್ಮ ತಂಡವನ್ನು ನಾಲ್ಕು ಗೆಲುವುಗಳಿಗೆ ಮುನ್ನಡೆಸಿದ್ದರಿಂದ ಯುವ ಆಟಗಾರ ಉತ್ತಮ ಆರಂಭ ಹೊಂದಿದ್ದರು. ಆದಾಗ್ಯೂ, ಪಂದ್ಯಾವಳಿ ಮುಂದುವರೆದಂತೆ ಮೆನ್ ಇನ್ ಯೆಲ್ಲೋ ಪ್ರಭಾವ ಕಡಿಮೆಯಾಯಿತು. ಆರ್​ಸಿಬಿ ಜತೆ ಕೊನೇ ಪಂದ್ಯ ಸೋತು ಐದನೇ ಸ್ಥಾನ ಪಡೆಯಿತು.

ಇದನ್ನೂ ಓದಿ: Anushka Sharma : ಪತ್ನಿ ಅನುಷ್ಕಾ ಬರ್ತ್​​ಡೇಗೆ ಕೊಹ್ಲಿ ಕೇಕ್​ ಆರ್ಡರ್​ ಮಾಡಿದ್ದು ಬೆಂಗಳೂರಿನಿಂದ; ತಿಂಗಳುಗಳ ಬಳಿಕ ಮಾಹಿತಿ ಬಹಿರಂಗ

ಸಿಎಸ್​ಕೆಯ ಸಹೋದರಿ ಫ್ರಾಂಚೈಸಿಯಾದ ಟೆಕ್ಸಾಸ್ ಸೂಪರ್ ಕಿಂಗ್ಸ್ ಪ್ರಸ್ತುತ ಮೇಜರ್ ಲೀಗ್ ಕ್ರಿಕೆಟ್ (ಎಂಎಲ್​​​ಸಿ ) 2024 ರ ಎರಡನೇ ಆವೃತ್ತಿಯಲ್ಲಿ ಆಡುತ್ತಿದೆ. ಆಡಿರುವ ಮೊದಲ ಐದು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿರುವ ಅವರು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

Continue Reading

ಪ್ರಮುಖ ಸುದ್ದಿ

Anushka Sharma : ಪತ್ನಿ ಅನುಷ್ಕಾ ಬರ್ತ್​​ಡೇಗೆ ಕೊಹ್ಲಿ ಕೇಕ್​ ಆರ್ಡರ್​ ಮಾಡಿದ್ದು ಬೆಂಗಳೂರಿನಿಂದ; ತಿಂಗಳುಗಳ ಬಳಿಕ ಮಾಹಿತಿ ಬಹಿರಂಗ

Anushka Sharma: ಉತ್ತಿಷ್ಠ ಕುಮಾರ್ ಎಂಬುವರು ಮಂಗಳವಾರ ತಮ್ಮ ಇನ್ಸ್ಟಾಗ್ರಾಮ್ ಫೀಡ್​​ನಲ್ಲಿ ದಂಪತಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಬರ್ತ್​ಡೇ ಗರ್ಲ್​​ ಅನುಷ್ಕಾಗೆ ಅವರು ತಯಾರಿಸಿದ ಚಾಕೊಲೇಟ್ ಕೇಕ್ ನ ಚಿತ್ರವನ್ನು ಸಹ ಅವರು ಹಂಚಿಕೊಂಡಿದ್ದಾರೆ. ಕೇಕ್ ಮೇಲಿನ ಸಂದೇಶದಲ್ಲಿ “ಹ್ಯಾಪಿ ಬರ್ತ್ ಡೇ ಮ್ಯಾಡ್ ಒನ್” ಎಂದು ಬರೆಯಲಾಗಿದೆ. ಚಿತ್ರದಲ್ಲಿ ಅನುಷ್ಕಾ ಶರ್ಮಾ ಬಿಳಿ ಉಡುಪನ್ನು ಧರಿಸಿದ್ದರೆ, ವಿರಾಟ್ ಕೊಹ್ಲಿ ಬೀಗ್​ ಬಣ್ಣದ ಟೀ ಶರ್ಟ್ ಧರಿಸಿದ್ದಾರೆ.

VISTARANEWS.COM


on

Anushka Sharma
Koo

ನವದೆಹಲಿ: ಅನುಷ್ಕಾ ಶರ್ಮಾ (Anushka Sharma) ಅವರ 36ನೇ ಹುಟ್ಟುಹಬ್ಬದ ಆಚರಣೆ ಮೇ 1ರಂದು ನಡೆದಿತ್ತು. ಆ ದಿನದ ಸಂಭ್ರಮಾಚರಣೆಗಾಗಿ ಪತಿ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್​ ಕೊಹ್ಲಿ ಬೆಂಗಳೂರಿನಿಂದ ಕೇಕ್ ಆರ್ಡರ್ ಮಾಡಿದ್ದರು ಎಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ಬೇಕರ್ ಒಬ್ಬರು ಅನುಷ್ಕಾ ಶರ್ಮಾ ಅವರ ಹುಟ್ಟುಹಬ್ಬದ ವಿಶೇಷ ಕೇಕ್ ತಯಾರಿಸಲು ವಿರಾಟ್ ಕೊಹ್ಲಿ ತಮ್ಮನ್ನು ಸಂಪರ್ಕಿಸಿದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಉತ್ತಿಷ್ಠ ಕುಮಾರ್ ಎಂಬುವರು ಮಂಗಳವಾರ ತಮ್ಮ ಇನ್ಸ್ಟಾಗ್ರಾಮ್ ಫೀಡ್​​ನಲ್ಲಿ ದಂಪತಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಬರ್ತ್​ಡೇ ಗರ್ಲ್​​ ಅನುಷ್ಕಾಗೆ ಅವರು ತಯಾರಿಸಿದ ಚಾಕೊಲೇಟ್ ಕೇಕ್ ನ ಚಿತ್ರವನ್ನು ಸಹ ಅವರು ಹಂಚಿಕೊಂಡಿದ್ದಾರೆ. ಕೇಕ್ ಮೇಲಿನ ಸಂದೇಶದಲ್ಲಿ “ಹ್ಯಾಪಿ ಬರ್ತ್ ಡೇ ಮ್ಯಾಡ್ ಒನ್” ಎಂದು ಬರೆಯಲಾಗಿದೆ. ಚಿತ್ರದಲ್ಲಿ ಅನುಷ್ಕಾ ಶರ್ಮಾ ಬಿಳಿ ಉಡುಪನ್ನು ಧರಿಸಿದ್ದರೆ, ವಿರಾಟ್ ಕೊಹ್ಲಿ ಬೀಗ್​ ಬಣ್ಣದ ಟೀ ಶರ್ಟ್ ಧರಿಸಿದ್ದಾರೆ.

ಅನುಷ್ಕಾ ಶರ್ಮಾ ಅವರ ಹುಟ್ಟುಹಬ್ಬಕ್ಕೆ ಕೇಕ್ ತಯಾರಿಸಲು ವಿರಾಟ್ ಕೊಹ್ಲಿ ನನ್ನನ್ನು ಸಂಪರ್ಕಿಸಿದಾಗ, ನಾನು ವಿಶೇಷವಾದದ್ದನ್ನು ರಚಿಸಬೇಕು ಎಂದು ಯೋಚಿಸಿದೆ. ಹುಟ್ಟುಹಬ್ಬದ ಆಚರಣೆಗಾಗಿ ಕ್ಲಾಸಿಕ್ ಚಾಕೊಲೇಟ್ ಕೇಕ್ ಬಿಟ್ಟರೆ ಇನ್ಯಾವುದೂ ಇಲ್ಲ ಎಂದು ಅವರು ಹೇಳಿದ್ದಾರೆ.

ವಾರಾಂತ್ಯದಲ್ಲಿ ನನ್ನ ಅಮ್ಮನ ಅಡುಗೆ ಮನೆಯಲ್ಲಿ ಅಡುವೆ ಮಾಡುವುದರಿಂದ ಹಿಡಿದು ನಮ್ಮ ಯುಗದ ಅತ್ಯಂತ ಕ್ರೀಡಾಪಟುಗಳಲ್ಲಿ ಒಬ್ಬರಿಗೆ ಕೇಕ್ ತಯಾರಿಸುವವರೆಗೆ ಇದು ಕಳೆದ ಎಂಟು ವರ್ಷಗಳಲ್ಲಿ ಅದ್ಭುತ ಪ್ರಯಾಣವಾಗಿದೆ! ನನ್ನ ಎಲ್ಲಾ ಅದ್ಭುತ ಗ್ರಾಹಕರಿಗೆ ವಿಶೇಷ ಕೇಕ್ ಗಳನ್ನು ತಯಾರಿಸುವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: R Ashwin : ಸುನೀಲ್ ನರೈನ್ ರೀತಿ ಆರಂಭಿಕರಾಗಿ 20 ಎಸೆತಕ್ಕೆ 45 ರನ್ ಬಾರಿಸಿದ ಆರ್.​ ಅಶ್ವಿನ್​; ಇಲ್ಲಿದೆ ವಿಡಿಯೊ

ಅನುಷ್ಕಾ ಶರ್ಮಾ ಮೇ 1 ರಂದು ತಮ್ಮ 36 ನೇ ಹುಟ್ಟುಹಬ್ಬವನ್ನು ಬೆಂಗಳೂರಿನಲ್ಲಿ ಆಚರಿಸಿಕೊಂಡರು. ಈ ಹಿಂದೆ ಬಾಣಸಿಗ ಮನು ಚಂದ್ರ ಅವರು ಅನುಷ್ಕಾ ಶರ್ಮಾ ಅವರ ಹುಟ್ಟುಹಬ್ಬದ ಆಚರಣೆಯ ಚಿತ್ರ ಹಂಚಿಕೊಂಡಿದ್ದರು.

ಅನುಷ್ಕಾ ಶರ್ಮಾ ಅವರ ಹುಟ್ಟುಹಬ್ಬದಂದು, ವಿರಾಟ್ ಕೊಹ್ಲಿ ಅವರ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು ನಾನು ನಿಮ್ಮನ್ನು ಕಂಡುಕೊಳ್ಳದೇ ಹೋಗಿದ್ದರೆ ನಾನು ಸಂಪೂರ್ಣವಾಗಿ ಕಳೆದುಹೋಗುತ್ತಿದ್ದೆ. ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದಿದ್ದರು.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಡಿಸೆಂಬರ್ 11, 2017 ರಂದು ವಿವಾಹವಾದರು. ಅವರು ವಾಮಿಕಾ ಮತ್ತು ಅಕಾಯ್​ ಎಂಬ ಇಬ್ಬರು ಮಕ್ಕಳ ಪೋಷಕರಾಗಿದ್ದಾರೆ. ಕ್ರಿಕೆಟಿಗ ಜೂಲನ್ ಗೋಸ್ವಾಮಿ ಜೀವನಾಧಾರಿತ ಚಿತ್ರ ‘ಚಕ್ಡಾ ಎಕ್ಸ್ಪ್ರೆಸ್’ನಲ್ಲಿ ಅನುಷ್ಕಾ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ.

Continue Reading
Advertisement
road accident jammu kashmir
ಪ್ರಮುಖ ಸುದ್ದಿ18 mins ago

Road Accident: ಜಮ್ಮು ಕಾಶ್ಮೀರದಲ್ಲಿ ಕಾರು ಅಪಘಾತ, ಬೆಂಗಳೂರಿನ ಮೂವರ ಸಾವು

Anant Radhika Wedding
Latest23 mins ago

Anant Radhika Wedding: ಅಂಬಾನಿ ಮದುವೆಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ಸ್ಟಾರ್ ಯಾರು?

karnataka Weather Forecast
ಮಳೆ53 mins ago

Karnataka Weather : ಬಿರುಗಾಳಿ ಜತೆಗೆ ಅಬ್ಬರಿಸಲಿದ್ದಾನೆ ವರುಣ; ಈ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Warangal Tour
ಪ್ರವಾಸ53 mins ago

Warangal Tour: ಪ್ರವಾಸಿಗರಿಗೆ ಮೋಡಿ ಮಾಡುವ ವಾರಂಗಲ್; ಅಲ್ಲಿ ನೋಡಲೇಬೇಕಾದ ಸ್ಥಳಗಳ ಚಿತ್ರಣ ಇಲ್ಲಿದೆ

Vastu Tips
Latest1 hour ago

Vastu Tips: ಈ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಅಪಾಯ ಗ್ಯಾರಂಟಿ!

dina Bhavishya
ಭವಿಷ್ಯ2 hours ago

Dina Bhavishya : ಆತುರದಲ್ಲಿ ಆಡಿದ ಮಾತು ಅಪಾಯ ತಂದಿತು ಎಚ್ಚರ

Oil Tanker Capsizes
ವಿದೇಶ7 hours ago

Oil Tanker Capsizes: ತೈಲ ತುಂಬಿದ್ದ ಹಡಗು ಮುಳುಗಡೆ; 13 ಭಾರತೀಯರು ಜಲಸಮಾಧಿ

Team India
ಪ್ರಮುಖ ಸುದ್ದಿ7 hours ago

Team India : ಶ್ರೀಲಂಕಾ ಪ್ರವಾಸದ ಟಿ20 ಸರಣಿಗೆ ಹಾರ್ದಿಕ್ ಬದಲಿಗೆ ಸೂರ್ಯಕುಮಾರ್ ನಾಯಕ

Ananth Ambani Wedding
ದೇಶ8 hours ago

Anant Ambani Wedding: ಅನಂತ್‌ ಅಂಬಾನಿ ಮದುವೆಯಲ್ಲಿ ಬಾಂಬ್‌ ಸ್ಫೋಟಕ್ಕೆ ನಡೆದಿತ್ತಾ ಸಂಚು? ಕಿಡಿಗೇಡಿ ಅರೆಸ್ಟ್‌

Yuvraj Singh
ಕ್ರೀಡೆ8 hours ago

Yuvraj Singh : ಅಂಗವಿಕಲರಂತೆ ರೀಲ್ಸ್​ ಮಾಡಿದ ಯುವರಾಜ್​, ಹರ್ಭಜನ್​ ಸಿಂಗ್ ವಿರುದ್ಧ ದೂರು ದಾಖಲು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ18 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ20 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ2 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ3 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌