Mutual fund : ಭಾರತದ ಮೊದಲ ಮ್ಯೂಚುವಲ್‌ ಫಂಡ್‌ 60 ವರ್ಷಗಳಲ್ಲಿ ಹೂಡಿಕೆದಾರರಿಗೆ ಕೊಟ್ಟ ಆದಾಯ ಎಷ್ಟು? - Vistara News

ಮನಿ-ಗೈಡ್

Mutual fund : ಭಾರತದ ಮೊದಲ ಮ್ಯೂಚುವಲ್‌ ಫಂಡ್‌ 60 ವರ್ಷಗಳಲ್ಲಿ ಹೂಡಿಕೆದಾರರಿಗೆ ಕೊಟ್ಟ ಆದಾಯ ಎಷ್ಟು?

ಭಾರತದಲ್ಲಿ ಮೊದಲ ಮ್ಯೂಚುವಲ್‌ ಫಂಡ್‌ ಎಂಬ ಹೆಗ್ಗಳಿಕೆಗೆ ಯುನಿಟ್‌ ಟ್ರಸ್ಟ್‌ ಆಫ್‌ ಇಂಡಿಯಾ (UTI) ಪಾತ್ರವಾಗಿದೆ. ಹೂಡಿಕೆದಾರರಿಗೆ ಉತ್ತಮ ಆದಾಯವನ್ನೂ ಕೊಟ್ಟಿದೆ. ಇಲ್ಲಿದೆ ವಿವರ.

VISTARANEWS.COM


on

Stock market regulator SEBI
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಯನಿಟ್‌ ಟ್ರಸ್ಟ್‌ ಆಫ್‌ ಇಂಡಿಯಾ (Unit Trust Of India – UTI) ಭಾರತದ ಮೊಟ್ಟ ಮೊದಲ ಮ್ಯೂಚುವಲ್‌ ಫಂಡ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1963ರಲ್ಲಿ ಸ್ಥಾಪನೆಯಾದ ಯುಟಿಐ ಸಾರ್ವಜನಿಕ ವಲಯದ ಸಂಸ್ಥೆಯಾಗಿದೆ. ಇದು ಮೊದಲ 24 ವರ್ಷಗಳ ಕಾಲ ಮಾರುಕಟ್ಟೆಯನ್ನು ಏಕ ಸ್ವಾಮ್ಯವನ್ನು ಮೆರೆದಿತ್ತು. ಇದಕ್ಕೆ ಮಾರುಕಟ್ಟೆಯಲ್ಲಿ ಎದುರಾಳಿಗಳೇ ಇದ್ದಿರಲಿಲ್ಲ. 1987ರ ಡಿಸೆಂಬರ್‌ನಲ್ಲಿ ಕೆನರಾ ಬ್ಯಾಂಕ್‌ ಮ್ಯೂಚುವಲ್‌ ಫಂಡ್ ಅಸ್ತಿತ್ವಕ್ಕೆ ಬಂದಿತು.‌ ನಂತರ ಕೆಲ ಸಾರ್ವಜನಿಕ ವಲಯದ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳು ಬಿಡುಗಡೆಯಾಯಿತು. ಆಗಿನ ಕಾಲದಲ್ಲಿ ಖಾಸಗಿ ಮ್ಯೂಚುವಲ್‌ ಫಂಡ್‌ ಯೋಜನೆಗಳ ಬಗ್ಗೆ ಸರ್ಕಾರಕ್ಕೆ ನಂಬಿಕೆ ಇದ್ದಿರಲಿಲ್ಲ.

ಮನಿ ಕಂಟ್ರೋಲ್‌ ಡಾಟ್‌ ಕಾಮ್‌ ವಿಶ್ಲೇಷಣೆಯ ಪ್ರಕಾರ ಯುನಿಟ್‌ ಟ್ರಸ್ಟ್‌ ಆಫ್‌ ಇಂಡಿಯಾ ಮ್ಯೂಚುವಲ್‌ ಫಂಡ್‌ ಕಳೆದ 60 ವರ್ಷಗಳಲ್ಲಿ ಹೂಡಿಕೆದಾರರಿಗೆ 9-19% ಆದಾಯವನ್ನು ನೀಡಿದೆ. ಭಾರತದ ಮೊದಲ ಖಾಸಗಿ ಕ್ಷೇತ್ರದ ಮ್ಯೂಚುವಲ್‌ ಫಂಡ್‌ ಕೊಠಾರಿ ಪಯನೀರ್‌ ಆಗಿದೆ. ಈಗ ಇದು ಫ್ರಾಂಕ್ಲಿನ್‌ ಟೆಂಪ್ಲೆಟ್‌ ಮ್ಯೂಚುವಲ್‌ ಫಂಡ್‌ ಜತೆಗೆ ವಿಲೀನವಾಗಿದೆ. 1993ರಲ್ಲಿ ಕೊಠಾರಿ ಪಯನೀರ್‌ ಆರಂಭವಾಗಿತ್ತು.

ಭಾರತದಲ್ಲಿ ಮ್ಯೂಚುವಲ್‌ ಫಂಡ್‌ ಯೋಜನೆಗಳು ಎಂದೂ ಹೂಡಿಕೆದಾರರನ್ನು ನಿರಾಸೆಗೊಳಿಸಿಲ್ಲ. 1986ರಿಂದಲೂ ಹಲವಾರು ಮ್ಯೂಚುವಲ್‌ ಫಂಡ್‌ ಕಂಪನಿಗಳು ಇಲ್ಲಿ ಕಾರ್ಯನಿರ್ವಹಿಸಿವೆ. ಇವುಗಳು ಈಕ್ವಿಟಿ ಸ್ಕೀಮ್‌ ಅಥವಾ ಹೈಬ್ರಿಡ್‌ ಸ್ಕೀಮ್‌ಗಳಾಗಿವೆ. ಈಗ ಭಾರತದಲ್ಲಿ 2,500ಕ್ಕೂ ಹೆಚ್ಚು ಮ್ಯೂಚುವಲ್‌ ಸ್ಕೀಮ್‌ಗಳು ಇವೆ. ಆರಂಭದ ಹಂತದಲ್ಲಿ ಇದ್ದಂಥ ಸಾರ್ವಜನಿಕ ವಲಯದ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳು ಅಂಥ ಆಕರ್ಷಣೆ ಗಳಿಸಿರಲಿಲ್ಲ. 1987-1993ರ ಅವಧಿಯಲ್ಲಿ ಕೆನರಾ ಬ್ಯಾಂಕ್‌ ಮ್ಯೂಚುವಲ್‌ ಫಂಡ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಮ್ಯೂಚುವಲ್‌ ಫಂಡ್‌, ಇಂಡಿಯನ್‌ ಬ್ಯಾಂಕ್‌ ಮ್ಯೂಚುವಲ್‌ ಫಂಡ್‌, ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಬರೋಡಾ ಮ್ಯೂಚುವಲ್‌ ಫಂಡ್‌ ಅಸ್ತಿತ್ವಕ್ಕೆ ಬಂದಿತು.

ಆರಂಭದಲ್ಲಿ ಮ್ಯೂಚುವಲ್‌ ಫಂಡ್‌ ವಲಯಕ್ಕೆ ಯಾವುದೇ ನಿಯಂತ್ರಕ ವ್ಯವಸ್ಥೆ ಅಥವಾ ನಿಯಮಾವಳಿಗಳು ಇದ್ದಿರಲಿಲ್ಲ. 1993ರಲ್ಲಿ ಮ್ಯೂಚುವಲ್‌ ಫಂಡ್‌ ವಲಯಕ್ಕೆ ಸಂಬಂಧಿಸಿ ಮೊದಲ ಕಂತಿನ ನಿಯಮಾವಳಿಗಳು ಜಾರಿಗೆ ಬಂದಿತು. ಆರಂಭದಲ್ಲಿ ಯುಟಿಐ ಹೊರತುಪಡಿಸಿ ಎಲ್ಲ ಮ್ಯೂಚುವಲ್‌ ಫಂಡ್‌ ಯೋಜನೆಗಳು ಈ ನಿಯಮಾವಳಿಗಳ ವ್ಯಾಪ್ತಿಗೆ ಬಂದಿತು. ಬಳಿಕ 2003ರಲ್ಲಿ ಯುಟಿಐ ಕೂಡ ಸೆಬಿಯ ವ್ಯಾಪ್ತಿ ಬಂದಿತು.

ಇದನ್ನೂ ಓದಿ: Mutual fund : ಮ್ಯೂಚುವಲ್‌ ಫಂಡ್‌ ಮಾರುಕಟ್ಟೆಗೆ ಲಿಂಕ್‌ ಆಗಿದ್ದರೂ, ಹೂಡಿಕೆಗೆ ಬೆಸ್ಟ್‌ ಏಕೆ?

ಕಳೆದ ಹಲವಾರು ವರ್ಷಗಳಿಂದ ಸೆಬಿಯು ರಿಟೇಲ್‌ ಹೂಡಿಕೆದಾರರ ಹಿತ ರಕ್ಷಣೆಗೆ ಹಲವು ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದೆ. ಈ ವಿಷಯವನ್ನು ಅದು ಗಂಭೀರವಾಗಿ ಪರಿಗಣಿಸಿದೆ. ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳ ಪ್ರತಿಯೊಂದು ಕ್ರಮಗಳನ್ನೂ ಸೆಬಿ ನಿಕಟವಾಗಿ ಗಮನಿಸುತ್ತದೆ. ಫೈನಾನ್ಷಿಯಲ್‌ ಪ್ರಾಡಕ್ಟ್‌ನಲ್ಲಿ ದೊಡ್ಡ ರಿಸ್ಕ್‌ ಯಾವುದು ಎಂದರೆ ವಂಚನೆ. ಯಾವುದೋ ಕಂಪನಿಯು ಹೆಚ್ಚು ರಿಟರ್ನ್‌ ನೀಡುವ ಆಮಿಷದೊಂದಿಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಯಾವತ್ತೋ ಒಂದು ದಿನ ವಂಚಿಸಬಹುದು. ಹೀಗಾಗಿಯೇ ಸೆಬಿಯು ಬಿಗಿಯಾದ ನಿಯಮಗಳನ್ನು ರೂಪಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಪಿಎಫ್‌ ಅಕೌಂಟ್‌ಗೆ ಹೊಸ ಮೊಬೈಲ್‌ ನಂಬರ್‌ ಸೇರಿಸಿಬೇಕೆ? ಜಸ್ಟ್‌ ಹೀಗೆ ಮಾಡಿ ಸಾಕು

Money Guide: ಭವಿಷ್ಯದ ಉಳಿತಾಯ ಯೋಜನೆಗಳಲ್ಲಿ ನೌಕರರ ಭವಿಷ್ಯ ನಿಧಿ ಪ್ರಮುಖವಾದುದು. ನಿವೃತ್ತಿಗಾಗಿ ಉಳಿತಾಯ ಮಾಡಲು ಇಪಿಎಫ್ ಒಂದು ಸುಲಭ ಮಾರ್ಗ. ಇದು ನಿಮ್ಮ ಸಂಬಳದಿಂದ ಸ್ವಯಂ ಚಾಲಿತವಾಗಿ ಕಡಿತಗೊಳ್ಳುವುದರಿಂದ ಪ್ರತ್ಯೇಕವಾಗಿ ಹೂಡಿಕೆ ಮಾಡಬೇಕಾಗಿಲ್ಲ ಎನ್ನುವುದು ಈ ಯೋಜನೆಯ ಬಹು ದೊಡ್ಡ ಪ್ಲಸ್‌ ಪಾಯಿಂಟ್‌. ಜತೆಗೆ ತುರ್ತು ಅಗತ್ಯದ ಸಂದರ್ಭದಲ್ಲಿ ಒಂದಷ್ಟು ಮೊತ್ತ ಮರಳಿ ಪಡೆಯುವ ಸೌಲಭ್ಯವೂ ಇದೆ. ಈ ಅಕೌಂಟ್‌ಗೆ ನೀವು ಮೊಬೈಲ್‌ ನಂಬರ್‌ ನಮೂದಿಸಬೇಕಾಗುತ್ತದೆ. ಒಂದುವೇಳೆ ನೀವು ಆರಂಭದಲ್ಲಿ ನೀಡಿದ ನಂಬರ್‌ ಅನ್ನು ಬದಲಾಯಿಸಬೇಕೆಂದಿದ್ದರೆ ಅದಕ್ಕೂ ಅವಕಾಶ ಇದೆ. ಸುಲಭವಾಗಿ, ಮನೆಯಲ್ಲೇ ಕುಳಿತು ಮೊಬೈಲ್‌ ನಂಬರ್‌ ಬದಲಾಯಿಸಬಹುದು. ಅದು ಹೇಗೆ ಎನ್ನುವ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ನೌಕರರ ಭವಿಷ್ಯ ನಿಧಿ (Employees’ Provident Fund) ಅತ್ಯುತ್ತಮ ನಿವೃತ್ತಿ ಉಳಿತಾಯ ಯೋಜನೆ ಎನಿಸಿಕೊಂಡಿದೆ. ಈ ಯೋಜನೆಯಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗದಾತರಿಂದ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಉಳಿತಾಯವನ್ನು ಉತ್ತೇಜಿಸಲಾಗುತ್ತದೆ. ನಿವೃತ್ತಿಗಾಗಿ ಉಳಿತಾಯ ಮಾಡಲು ಇಪಿಎಫ್ ಒಂದು ಸುಲಭ ಮಾರ್ಗ. ಇದು ನಿಮ್ಮ ಸಂಬಳದಿಂದ ಸ್ವಯಂ ಚಾಲಿತವಾಗಿ ಕಡಿತಗೊಳ್ಳುವುದರಿಂದ ಪ್ರತ್ಯೇಕವಾಗಿ ಹೂಡಿಕೆ ಮಾಡಬೇಕಾಗಿಲ್ಲ ಎನ್ನುವುದು ಈ ಯೋಜನೆಯ ಬಹು ದೊಡ್ಡ ಪ್ಲಸ್‌ ಪಾಯಿಂಟ್‌. ಎಂಪ್ಲಾಯ್‌ ಪ್ರೊವಿಡೆಂಟ್‌ ಫಂಡ್‌ ಆರ್ಗನೈಸೇಷನ್‌ (EPFO) ಇದನ್ನು ನಿಯಂತ್ರಿಸುತ್ತದೆ. ನೀವು ಒಮ್ಮೆ ಇಪಿಎಫ್‌ ಯೋಜನೆಯಲ್ಲಿ ಹೆಸರು ನೋಂದಾಯಿಸಿದರೆ ಯೂನಿವರ್ಸಲ್‌ ಅಕೌಂಟ್‌ ನಂಬರ್‌ (UAN) ನೀಡಲಾಗುತ್ತದೆ. ಇಇಪಿಎಫ್‌ ಯೋಜನೆ ಆರಂಭಿಸುವಾಗ ನೀವು ಮೊಬೈಲ್‌ ನಂಬರ್‌ ನೀಡಬೇಕಾಗುತ್ತದೆ. ಬಳಿಕ ಪ್ರತಿ ತಿಂಗಳು ನಿಮ್ಮ ಸಂಬಳದಿಂದ ಮೊತ್ತ ಕಡಿತವಾದಾಗ ಈ ಬಗ್ಗೆ ಮಸೇಜ್‌ ಮೂಲಕ ಮಾಹಿತಿ ಕಳುಹಿಸಲಾಗುತ್ತದೆ. ಒಂದುವೇಳೆ ನಿಮ್ಮ ಮೊಬೈಲ್‌ ನಂಬರ್‌ ಬದಲಾಗಿದ್ದರೆ ಅದನ್ನು ಅಪ್‌ಡೇಟ್‌ ಮಾಡುವುದು ಮುಖ್ಯ. ಅದು ಹೇಗೆ ಎನ್ನುವುದರ ವಿವರ ಇಲ್ಲಿದೆ (Money Guide).

ಮೊಬೈಲ್‌ ನಂಬರ್‌ ಯಾಕೆ ಮುಖ್ಯ?

ನಿಮ್ಮ ಕೊಡುಗೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಮಾತ್ರವಲ್ಲ ಬ್ಯಾಲನ್ಸ್‌ ಚೆಕ್‌ ಮಾಡಲು ಕೂಡ ಮೊಬೈಲ್‌ ನಂಬರ್‌ ಮುಖ್ಯ. ಜತೆಗೆ ಪಿಎಫ್‌ ವೆಬ್‌ಸೈಟ್ ಅಥವಾ ಉಮಂಗ್ ಆ್ಯಪ್ ಮೂಲಕ ಯಾವುದೇ ಮಾಹಿತಿಯನ್ನು ಪಡೆಯಲು, ನಿಮ್ಮ ಖಾತೆಯಲ್ಲಿನ ವಿವರ ತಿಳಿದುಕೊಳ್ಳಲು ನೋಂದಾಯಿಸಲಾದ ಮೊಬೈಲ್ ಸಂಖ್ಯೆ ಸಕ್ರಿಯವಾಗಿರುವುದು ಬಹಳ ಮುಖ್ಯ. ಯಾಕೆಂದರೆ ಇದಕ್ಕೆ ಬರುವ ಒಟಿಪಿಯನ್ನು ಆರಂಭದಲ್ಲಿ ನಮೂದಿಸಬೇಕಾಗುತ್ತದೆ.

ಮೊಬೈಲ್‌ ನಂಬರ್‌ ಯಾವೆಲ್ಲ ಪ್ರಯೋಜನ ಲಭ್ಯ?

ನಿಮ್ಮ ಮೊಬೈಲ್‌ ನಂಬರ್‌ ಬಳಸಿ ಇಪಿಎಫ್‌ನ ಈ ಎಲ್ಲ ಸವಲತ್ತುಗಳನ್ನು ಪಡೆದುಕೊಳ್ಳಬಹುದು.

  • ಯುಎಎನ್‌ (UAN)ನ ಸ್ಥಿತಿಯ ಪರಿಶೀಲನೆ (ಸಕ್ರಿಯ ಅಥವಾ ನಿಷ್ಕ್ರೀಯ).
  • ಇಪಿಎಫ್‌ನ ಸಂಪೂರ್ಣ ಮಾಹಿತಿ.
  • ಎಸ್‌ಎಂಎಸ್‌ ಮೂಲಕ ಬ್ಯಾಲನ್ಸ್‌ ಪರಿಶೀಲನೆ.
  • ಕ್ಲೈಮ್‌ ಮಾಡಿದ್ದರೆ ಅದರ ಮಾಹಿತಿ.
  • ನಿಮ್ಮ ಖಾತೆಗೆ ಜಮೆ ಆಗುತ್ತಿರುವ ಮೊತ್ತದ ಮಾಹಿತಿ.
  • ಹಣ ವರ್ಗಾವಣೆಯಾಗುತ್ತಿದ್ದರೆ ಅದರ ಮಾಹಿತಿ.
  • ಬ್ಯಾಂಕ್‌ ಅಕೌಂಟ್‌, ಪ್ಯಾನ್‌ ಕಾರ್ಡ್‌ ಮತ್ತು ಆಧಾರ್‌ ಕಾರ್ಡ್‌ ಲಿಂಕ್‌ ಆಗಿದೆಯಾ ಎನ್ನುವುದರ ಪರಿಶೀಲನೆ.
  • ವಿವಿಧ ಆನ್‌ಲೈನ್‌ ಸೇವೆಗಳ ಒಟಿಪಿ ಪಡೆದುಕೊಳ್ಳಲು.

ಮೊಬೈಲ್‌ ನಂಬರ್‌ ಬದಲಾಯಿಸುವುದು ಹೇಗೆ?

ಒಂದುವೇಳೆ ನೀವು ಆರಂಭದಲ್ಲಿ ನೀಡಿದ್ದ ಮೊಬೈಲ್‌ ನಂಬರ್‌ ಅನ್ನು ಬದಲಾಯಿಸಬೇಕು ಎಂದು ಬಯಸಿದರೆ ಸುಲಭವಾಗಿ, ಆನ್‌ಲೈನ್‌ನಲ್ಲೇ ಈ ಕೆಲಸ ಮಾಡಬಹುದು. ಅದು ಹೇಗೆ ಎನ್ನುವ ಹಂತ ಹಂತದ ಮಾಹಿತಿ ಇಲ್ಲಿದೆ.

  • ಮೊದಲು https://unifiedportal-mem.epfindia.gov.in/memberinterface/ ವೆಬ್‌ಸೈಟ್‌ಗೆ ತೆರಳಿ.
  • ಅಥವಾ ಇಲ್ಲಿ ಕ್ಲಿಕ್‌ ಮಾಡಿ.
  • UAN ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಲಾಗಿನ್ ಆಗಿ
  • ‘Manage’ ಆಯ್ಕೆಯಲ್ಲಿನ ‘Contact Details’ ಆಪ್ಶನ್‌ ಕ್ಲಿಕ್‌ ಮಾಡಿ.
  • ‘Change Mobile No.’ ಆಯ್ಕೆ ಸೆಲೆಕ್ಟ್‌ ಮಾಡಿ.
  • ಎರಡು ಬಾರಿ ಹೊಸ ಮೊಬೈಲ್‌ ನಂಬರ್‌ ನಮೂದಿಸಿ. ಬಳಿಕ ‘Get Mobile OTP’ ಬಟನ್‌ ಕ್ಲಿಕ್‌ ಮಾಡಿ.
  • ಹೊಸ ಮೊಬೈಲ್‌ ನಂಬರ್‌ಗೆ ಬಂದಿರುವ ಒಟಿಪಿಯನ್ನು ನಮೂದಿಸಿ.
  • ಬಳಿಕ ನಿಮ್ಮ ಮೊಬೈಲ್‌ ನಂಬರ್‌ ಯಶಸ್ವಿಯಾಗಿ ಬದಲಾಗುತ್ತದೆ.

ಪಾಸ್‌ವರ್ಡ್‌ ಮರೆತು ಹೋಗಿದ್ದರೆ ಹೀಗೆ ಮಾಡಿ

ಒಂದು ವೇಳೆ ಪಾಸ್‌ವರ್ಡ್‌ ಮರೆತು ಹೋಗಿದ್ದರೆ ಮೊಬೈಲ್‌ ನಂಬರ್‌ ಬದಲಾಯಿಸಲು ಹೀಗೆ ಮಾಡಿ.

  • ಮೊದಲು https://unifiedportal-mem.epfindia.gov.in/memberinterface/ ವೆಬ್‌ಸೈಟ್‌ಗೆ ತೆರಳಿ.
  • ಅಥವಾ ಇಲ್ಲಿ ಕ್ಲಿಕ್‌ ಮಾಡಿ.
  • ಬಲ ಬದಿಯಲ್ಲಿ ಕಾಣಿಸುವ, ಲಾಗಿನ್‌ ಬಾಕ್ಸ್‌ನ ಕೆಳಗಡೆ ಇರುವ ʼForgot Passwordʼ ಆಯ್ಕೆಯನ್ನು ಕ್ಲಿಕ್‌ ಮಾಡಿ.
  • UAN, ಕ್ಯಾಪ್ಚಾ ನಮೂದಿಸಿ ʼSubmitʼ ಬಟನ್‌ ಕ್ಲಿಕ್‌ ಮಾಡಿ.
  • ಹೆಸರು, ಹುಟ್ಟಿದ ದಿನಾಂಕ, ಲಿಂಗದ ವಿವರಗಳನ್ನು ಭರ್ತಿ ಮಾಡಿ ʼVerifyʼ ಬಟನ್‌ ಸೆಲೆಕ್ಟ್‌ ಮಾಡಿ.
  • ಮತ್ತೊಮ್ಮೆ ಕ್ಯಾಪ್ಚಾ, ಆಧಾರ್‌ ನಂಬರ್‌ ನಮೂದಿಸಿ ʼVerifyʼ ಆಯ್ಕೆ ಕ್ಲಿಕ್‌ ಮಾಡಿ.
  • ಆಧಾರ್‌ಗೆ ಲಿಂಕ್‌ ಆಗಿರುವ, ಹೊಸ ಮೊಬೈಲ್‌ ನಂಬರ್‌ ನಮೂದಿಸಿ, ಬಳಿಕ ‘Get OTP’ ಬಟನ್‌ ಕ್ಲಿಕ್‌ ಮಾಡಿ.
  • ಹೊಸ ಮೊಬೈಲ್‌ ನಂಬರ್‌ಗೆ ಬಂದಿರುವ ಒಟಿಪಿ ನಮೂದಿಸಿ, ‘Verify’ ಬಟನ್‌ ಕ್ಲಿಕ್‌ ಮಾಡಿ.
  • ಹೊಸ ಪಾಸ್‌ವರ್ಡ್‌ ಎರಡು ಬಾರಿ ನಮೂದಿಸಿ ‘Submit’ ಆಯ್ಕೆ ಕ್ಲಿಕ್‌ ಮಾಡಿ.
  • ಈಗ ಪಾಸ್‌ವರ್ಡ್‌ ಮತ್ತು ಮೊಬೈಲ್‌ ನಂಬರ್‌ ಬದಲಾಗಿರುತ್ತದೆ.

ಇದನ್ನೂ ಓದಿ: Money Guide: ಉಮಂಗ್ ಆ್ಯಪ್‌ ಮೂಲಕ ಪಿಎಫ್‌ ಮೊತ್ತ ಹೀಗೆ ವಿತ್‌ಡ್ರಾ ಮಾಡಬಹುದು

Continue Reading

ಮನಿ-ಗೈಡ್

EPF Account Rules: ಕ್ಲೈಮ್ ಇತ್ಯರ್ಥ ಇನ್ನು ಸುಲಭ; ಇಪಿಎಫ್‌ಒ ಮಾಡಿದೆ ಹಲವು ಹೊಸ ಬದಲಾವಣೆ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಕ್ಲೈಮ್ ಸೆಟ್ಲ್ ಮೆಂಟ್ ನಲ್ಲಿ ವಿಳಂಬವನ್ನು ತಡೆಯಲು 2024ರ ಮೇ ತಿಂಗಳಿನಿಂದ ಹಲವಾರು ಬದಲಾವಣೆಗಳನ್ನು (EPF Account Rules) ಮಾಡಿದೆ. ಈ ಮೂಲಕ ಉದ್ಯೋಗಿಗಳ ಭವಿಷ್ಯ ನಿಧಿ (EPF) ಹೊಂದಿರುವ ಸದಸ್ಯರ ಹೊರೆಯನ್ನು ಕಡಿಮೆ ಮಾಡುವ ಗುರಿ ಹೊಂದಲಾಗಿದೆ.

VISTARANEWS.COM


on

By

EPF Account Rules
Koo

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ಕ್ಲೈಮ್ ಇತ್ಯರ್ಥ ಪ್ರಕ್ರಿಯೆಯನ್ನು ಸುಗಮಗೊಳಿಸಲು ಹಲವು ಬದಲಾವಣೆಗಳನ್ನು (EPF Account Rules) ಮಾಡಿದೆ. ಕ್ಲೈಮ್ ಸೆಟ್ಲಮೆಂಟ್ (claim settlement) ಮಾಡುವಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಿಂದ ಉಂಟಾಗುವ ವಿಳಂಬವನ್ನು ಕಡಿಮೆ ಮಾಡಲು ಮಾಡುವ ಮೂಲಕ ಕೆಲಸದಲ್ಲಿ ದಕ್ಷತೆಯನ್ನು ಹೆಚ್ಚಿಸಲು ಉದ್ಯೋಗಿಗಳ ಭವಿಷ್ಯ ನಿಧಿ (EPF) ಹೊಂದಿರುವ ಸದಸ್ಯರಿಗೆ ಹೊರೆಯನ್ನು ಕಡಿಮೆ ಮಾಡಲು ಈ ಬದಲಾವಣೆಗಳನ್ನು ಮಾಡಲಾಗಿದೆ.

ಇದರಲ್ಲಿ ಸ್ವಯಂ-ಸೆಟಲ್‌ಮೆಂಟ್ ಸೌಲಭ್ಯದ ವಿಸ್ತರಣೆ, ಬಹು-ಸ್ಥಳದ ಕ್ಲೈಮ್ ಸೆಟಲ್‌ಮೆಂಟ್‌, ಸಾವಿನ ಹಕ್ಕುಗಳ ತ್ವರಿತ ಪ್ರಕ್ರಿಯೆ ಮತ್ತು ಕೆಲವು ಆನ್‌ಲೈನ್ ಕ್ಲೈಮ್‌ಗಳಿಗೆ ಕಡ್ಡಾಯವಾದ ಡಾಕ್ಯುಮೆಂಟ್ ಅಪ್‌ಲೋಡ್‌ ಮಾಡುವಲ್ಲಿ ಸಡಿಲಿಕೆಯನ್ನು ಮಾಡಲಾಗಿದೆ.

ಸ್ವಯಂ ಸೆಟಲ್ ಮೆಂಟ್

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಘೋಷಿಸಿದ ಅತ್ಯಂತ ಮಹತ್ವದ ಬದಲಾವಣೆಯೆಂದರೆ ಸ್ವಯಂ-ಸೆಟಲ್‌ಮೆಂಟ್ ಸೌಲಭ್ಯದ ವಿಸ್ತರಣೆ. ಇದು 68ಬಿ ಮತ್ತು 68ಕೆ ನಿಯಮಗಳ ಅಡಿಯಲ್ಲಿ ವಸತಿ, ಶಿಕ್ಷಣ ಮತ್ತು ವಿವಾಹದ ಹಕ್ಕುಗಳನ್ನು ಒಳಗೊಂಡಿದೆ. ಈ ಈ ಕುರಿತು 2024ರ ಮೇ 13ರಂದು ಪ್ರಕಟಣೆ ಹೊರಡಿಸಲಾಗಿದೆ. ಇದು ಆಡಳಿತಾತ್ಮಕ ಹೊರೆಯನ್ನು ಕಡಿಮೆ ಮಾಡುವ ಮತ್ತು ಕ್ಲೈಮ್ ಪ್ರಕ್ರಿಯೆಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ.

ನಿಯಮ 68ಜೆ ಅಡಿಯಲ್ಲಿ ಯಾರದೇ ಹಸ್ತಕ್ಷೇಪವಿಲ್ಲದೆಯೇ ವೈದ್ಯಕೀಯ ಪರಿಸ್ಥಿತಿಗಳಿಗಾಗಿ ಸದಸ್ಯರು 1 ಲಕ್ಷ ರೂ. ವರೆಗೆ ಮುಂಗಡ ಹಣವನ್ನು ಇಪಿಎಫ್ ಖಾತೆಯಿಂದ ಪಡೆಯಬಹುದು. 2024ರ ಏಪ್ರಿಲ್ 16ರ ಸುತ್ತೋಲೆಯಲ್ಲಿ ನವೀಕರಿಸಲಾದ ಈ ನಿಯಮವು ಸ್ವಯಂ-ಸೆಟಲ್‌ಮೆಂಟ್ ನ ಅಡಿಯಲ್ಲಿ ಈ ಕ್ಲೈಮ್‌ಗಳನ್ನು ಸ್ವಯಂಚಾಲಿತವಾಗಿ ಮಾಡುವುದನ್ನು ಖಚಿತಪಡಿಸುತ್ತದೆ.

ನಿಯಮ 68ಕೆ ಅಡಿಯಲ್ಲಿ ಮದುವೆ ಅಥವಾ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಇಪಿಎಫ್ ನಿಧಿಯಿಂದ ಹಣ ಹಿಂಪಡೆಯಲು ಅನುಮತಿ ನೀಡಲಾಗಿದೆ. ಈ ನಿಯಮವು ಸದಸ್ಯರು ತಮ್ಮ ಮಕ್ಕಳು ಅಥವಾ ಅವರ ಒಡಹುಟ್ಟಿದವರ ಮದುವೆಗೆ ಹಣವನ್ನು ಹಿಂಪಡೆಯಲು ಅವಕಾಶ ನೀಡುತ್ತದೆ. ಹಾಗೆಯೇ ಸದಸ್ಯರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ.ಸ್ವಯಂ-ಸೆಟಲ್‌ಮೆಂಟ್ ಸೌಲಭ್ಯವನ್ನು ವಿಸ್ತರಿಸುವ ಮೂಲಕ ಸದಸ್ಯರಿಗೆ ಹೆಚ್ಚು ಅಗತ್ಯವಿರುವಾಗ ಹಣವನ್ನು ಸುಲಭವಾಗಿ ಒದಗಿಸುವ ಗುರಿಯನ್ನು ಹೊಂದಿದೆ.


ಬಹು ಸ್ಥಳದ ಕ್ಲೈಮ್ ಸೆಟಲ್ ಮೆಂಟ್

ಇಪಿಎಫ್‌ಒ ಬಹು-ಸ್ಥಳದ ಕ್ಲೈಮ್ ಸೆಟಲ್ ಮೆಂಟ್ ಸೌಲಭ್ಯವನ್ನು ಪರಿಚಯಿಸಿದೆ. 2020ರಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾದ ಈ ಉಪಕ್ರಮವು ದೇಶದಾದ್ಯಂತ ಕೆಲಸದ ಹೊರೆಯನ್ನು ಹೆಚ್ಚು ಸಮವಾಗಿ ವಿತರಿಸುವ ಗುರಿಯನ್ನು ಹೊಂದಿದೆ, ಇದರಿಂದಾಗಿ ಕ್ಲೈಮ್ ಪಾವತಿ ವಿಳಂಬವನ್ನು ಕಡಿಮೆ ಮಾಡಿ ದಕ್ಷತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

2024ರ ಮೇ 8ರ ಸುತ್ತೋಲೆಯ ಪ್ರಕಾರ ಇಪಿಎಫ್‌ಒ ಬಹು-ಸ್ಥಳದ ಕ್ಲೈಮ್ ಇತ್ಯರ್ಥಕ್ಕಾಗಿ ಲಿಂಕ್ ಆಫೀಸ್ ವ್ಯವಸ್ಥೆಯನ್ನು ಸ್ಥಾಪಿಸಿದೆ. ಈ ಮೂಲಕ ಇರುವ ಸ್ಥಳದಲ್ಲೇ ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳನ್ನು ಪೂರ್ಣಗೊಳಿಸಲು ಅನುಮತಿ ನೀಡಲಾಗುತ್ತದೆ. ಇದರಿಂದ ಸದಸ್ಯರ ಕ್ಲೈಮ್ ಸೆಟ್ಲಮೆಂಟ್ ಪ್ರಕ್ರಿಯೆಯು ಹೆಚ್ಚು ವೇಗವಾಗಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ನಿಯೋಜಿತ ಪ್ರಾದೇಶಿಕ ಕಚೇರಿ (DRO) ಮತ್ತು ಸಹಯೋಗದ ಪ್ರಾದೇಶಿಕ ಕಚೇರಿ (CRO) ನಡುವಿನ ಸಂಪರ್ಕ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ಈ ಎರಡೂ ಕಚೇರಿಗಳ ಉಸ್ತುವಾರಿಯನ್ನು ಆರ್ ಪಿಎಫ್ ಸಿ ಗೆ ವಹಿಸಲಾಗಿದೆ.ಇದರಿಂದ ಯಾವುದೇ ಸಮಸ್ಯೆಗಳಿಲ್ಲದೆ ಕ್ಲೈಮ್ ಇತ್ಯರ್ಥಗೊಳಿಸಲು ಸಾಧ್ಯವಾಗುತ್ತದೆ ಎಂದು ಸುತ್ತೋಲೆ ಹೇಳಿದೆ.

ಡೆತ್ ಕ್ಲೈಮ್‌ಗಳಿಗೆ ಹೊಸ ನಿಯಮ

ಸಾವಿನ ಹಕ್ಕುಗಳ ಪ್ರಕ್ರಿಯೆಗೆ ಇಪಿಎಫ್ ಒ ​​ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಿದೆ. 2024ರ ಮೇ 17ರಂದು ಹೊರಡಿಸಲಾದ ಸುತ್ತೋಲೆಯ ಪ್ರಕಾರ ಸಾವಿನ ಪ್ರಕರಣಗಳಲ್ಲಿನ ಕ್ಲೈಮ್‌ಗಳನ್ನು ಆಧಾರ್ ದೃಢೀಕರಣದ ಅಗತ್ಯವಿಲ್ಲದೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಆದರೆ ಇದಕ್ಕಾಗಿ ಪ್ರಭಾರ ಅಧಿಕಾರಿ (ಒಐಸಿ) ಯಿಂದ ಅನುಮೋದನೆಯನ್ನು ಪಡೆಯಬೇಕಾಗಿದೆ.

ಯೂನಿವರ್ಸಲ್ ಅಕೌಂಟ್ ನಂಬರ್ (UAN) ನಲ್ಲಿ ಸದಸ್ಯರ ವಿವರಗಳು ಸರಿಯಾಗಿದ್ದರೂ ಆಧಾರ್ ಡೇಟಾಬೇಸ್‌ನಲ್ಲಿ ನಿಖರವಾಗಿಲ್ಲದ ಅಥವಾ ಅಪೂರ್ಣವಾಗಿರುವ ಪ್ರಕರಣಗಳಿಗೆ ಮಾತ್ರ ಈ ಸೂಚನೆಗಳು ಅನ್ವಯಿಸುತ್ತವೆ. ಈ ಕ್ರಮವು ವಂಚನೆಯ ಹಿಂಪಡೆಯುವಿಕೆಗಳನ್ನು ತಡೆಯುತ್ತದೆ ಮತ್ತು ನಿಜವಾದ ಹಕ್ಕುಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸುತ್ತದೆ ಎಂದು ಖಚಿತಪಡಿಸುತ್ತದೆ.


ಕಡ್ಡಾಯ ಚೆಕ್ ಲೀಫ್

ಕೆಲವು ಅರ್ಹ ಪ್ರಕರಣಗಳಿಗೆ ಚೆಕ್ ಲೀಫ್ ಅಥವಾ ದೃಢೀಕೃತ ಬ್ಯಾಂಕ್ ಪಾಸ್‌ಬುಕ್‌ನಚಿತ್ರವನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡುವ ಅಗತ್ಯವನ್ನು ಇಪಿಎಫ್‌ಒ ​​ಸಡಿಲಗೊಳಿಸಿದೆ.

ಇದನ್ನೂ ಓದಿ: UPI Safety Tips: ಈ ಟಿಪ್ಸ್ ಪಾಲಿಸಿ, ಮೊಬೈಲ್ ನಿಂದ ಹಣ ಪಾವತಿಸುವಾಗ ಆಗುವ ವಂಚನೆಯಿಂದ ಪಾರಾಗಿ

2024ರ ಮೇ 28ರ ಸುತ್ತೋಲೆಯಲ್ಲಿ ಘೋಷಿಸಲಾದ ಈ ಬದಲಾವಣೆಯು ಆನ್‌ಲೈನ್ ಕ್ಲೈಮ್ ಫೈಲಿಂಗ್ ಪ್ರಕ್ರಿಯೆಯಲ್ಲಿ ಈ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡದ ಕಾರಣ ತಿರಸ್ಕರಿಸಿದ ಕ್ಲೈಮ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ.

ಡಾಕ್ಯುಮೆಂಟ್ ಅಪ್‌ಲೋಡ್‌ಗಳ ಅಗತ್ಯವಿಲ್ಲದೇ ಕ್ಲೈಮ್‌ಗಳ ದೃಢೀಕರಣವನ್ನು ಖಚಿತಪಡಿಸಿಕೊಳ್ಳಲು ಇಪಿಎಫ್ ಒ ​​ಹಲವಾರು ಮೌಲ್ಯೀಕರಣಗಳನ್ನು ಪರಿಚಯಿಸಿದೆ. ಈ ದೃಢೀಕರಣಗಳಲ್ಲಿ ಸಂಬಂಧಪಟ್ಟ ಬ್ಯಾಂಕ್ ಅಥವಾ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮೂಲಕ ಬ್ಯಾಂಕ್ KYC ಯ ಆನ್‌ಲೈನ್ ಪರಿಶೀಲನೆ, ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ (DSC) ಅನ್ನು ಬಳಸಿಕೊಂಡು ಉದ್ಯೋಗದಾತರಿಂದ ಬ್ಯಾಂಕ್ KYC ಯ ಪರಿಶೀಲನೆ ಮತ್ತು ನೋಂದಣಿ ಮಾಡಿರುವ ಆಧಾರ್ ಸಂಖ್ಯೆಯನ್ನು ಪರಿಶೀಲಿಸುವುದು ಸೇರಿದೆ.

Continue Reading

ಮನಿ ಗೈಡ್

Money Guide: ಹೆಚ್ಚಿನ ಬಡ್ಡಿ ಮಾತ್ರವಲ್ಲ, ಪಿಪಿಎಫ್ ನಿಂದ ಇನ್ನೂ ಏನೇನು ಪ್ರಯೋಜನ?

ಮ್ಯೂಚುವಲ್ ಫಂಡ್‌, ಬ್ಯಾಂಕ್ ಸ್ಥಿರ ಠೇವಣಿ, ಹಣಕಾಸು ಸಂಸ್ಥೆಗಳು ಹೊರತರುವ ವಿವಿಧ ಯೋಜನೆಗಳ ಮೂಲಕ ನೇರ ಹೂಡಿಕೆ (Money Guide) ಉತ್ತಮವಾಗಿದ್ದರೂ ಪಿಪಿಎಫ್ ತನ್ನದೇ ಆದ ಹಲವಾರು ಕಾರಣಗಳಿಂದ ಅತ್ಯುತ್ತಮ ಆಯ್ಕೆಯಾಗಿದೆ ಅದು ಯಾಕೆ ಗೊತ್ತೇ? ಇಲ್ಲಿದೆ ಅದಕ್ಕೆ ಕಾರಣ.

VISTARANEWS.COM


on

By

Money Guide
Koo

ಹೂಡಿಕೆ (investment) ಮಾಡುವಾಗ ಹೆಚ್ಚಿನ ಲಾಭ (Money Guide) ಪಡೆಯುವ ನಿರೀಕ್ಷೆಯಂತೂ ಇದ್ದೇ ಇರುತ್ತದೆ. ಹೀಗಾಗಿ ಹೆಚ್ಚಿನವರು ಆಯ್ಕೆ ಮಾಡುವುದು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public Provident Fund). ಇದರಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭವಂತೂ ಇದ್ದೇ ಇದೆ. ಯಾಕೆಂದರೆ ಇದು ಶೇ. 7.1 ರಷ್ಟು ಬಡ್ಡಿ ದರವನ್ನು (interest rate) ಹೊಂದಿದೆ. ಹೀಗಾಗಿ ಹೂಡಿಕೆ ಮೇಲೆ ನಿರ್ಧಿಷ್ಟ ಮೊತ್ತ ಮರಳಿ ಕೈ ಸೇರುವ ಖಚಿತತೆ ಇರುತ್ತದೆ.

ಆದರೂ ಕೆಲವರು ಪಿಪಿಎಫ್ (PPF) ಮೇಲೆ ಹೂಡಿಕೆ ಮಾಡಲು ಆಸಕ್ತಿ ವಹಿಸುವುದಿಲ್ಲ. ಬದಲಿಗೆ ಅವರು ಈಕ್ವಿಟಿ ಅಥವಾ ಮ್ಯೂಚುವಲ್ ಫಂಡ್‌, ಬ್ಯಾಂಕ್ ಸ್ಥಿರ ಠೇವಣಿ ಅಥವಾ ಹಣಕಾಸು ಸಂಸ್ಥೆಗಳು ಹೊರತಂದಿರುವ ವಿವಿಧ ಯೋಜನೆಗಳ ಮೂಲಕ ನೇರ ಹೂಡಿಕೆಯತ್ತ ಗಮನ ಹರಿಸುತ್ತಾರೆ. ಈ ಯೋಜನೆಗಳು ಉತ್ತಮವಾಗಿದ್ದರೂ ಪಿಪಿಎಫ್ ತನ್ನದೇ ಆದ ಹಲವಾರು ಕಾರಣಗಳಿಂದ ಅತ್ಯುತ್ತಮ ಆಯ್ಕೆ ಎಂಬುದನ್ನು ಖಚಿತಪಡಿಸುತ್ತದೆ. ಅವು ಯಾವುದು ಗೊತ್ತೇ?

ಪಿಪಿಎಫ್ ಸುರಕ್ಷಿತ

ಪಿಪಿಎಫ್ ಅನ್ನು 1968ರಲ್ಲಿ ಭಾರತ ಸರ್ಕಾರವು ಪ್ರಾರಂಭಿಸಿತು. ಇದರರ್ಥ ಪಿಪಿಎಫ್ ಖಾತೆಯ ಮಾಲೀಕರ ಹಣ ಮತ್ತು ಆದಾಯವನ್ನು ಸರ್ಕಾರವು ಖಾತರಿಪಡಿಸುತ್ತದೆ.

ಪಿಪಿಎಫ್ ಬಡ್ಡಿ ದರ

ಪಿಪಿಎಫ್ ಬಡ್ಡಿದರವು ಮೊದಲಿನಷ್ಟು ಹೆಚ್ಚಿಲ್ಲದಿರಬಹುದು. ಆದರೆ ಈಗ ಶೇ. 7.1ರಷ್ಟು ಬಡ್ಡಿ ದರವನ್ನು ಒದಗಿಸುತ್ತದೆ. ಹಣಕಾಸು ಸಚಿವಾಲಯವು ಈ ಬಡ್ಡಿ ದರವನ್ನು ಪರಿಷ್ಕರಿಸುತ್ತದೆ.

ಪಿಪಿಎಫ್ ಅವಧಿ

ಪಿಪಿಎಫ್ ಅವಧಿಯು 15 ವರ್ಷಗಳು. ಈ ವರ್ಷಗಳಲ್ಲಿ ಹೂಡಿಕೆ ಮಾಡುವ ಸಂಪೂರ್ಣ ಮೊತ್ತವು ಲಾಕ್ ಆಗಿರುತ್ತದೆ. ಲಾಕ್-ಇನ್ ಅವಧಿಯು ಕೆಲವರಿಗೆ ಇಷ್ಟವಾಗುವುದಿಲ್ಲ. ಆದರೂ ಪಿಪಿಎಫ್ ಖಾತೆದಾರರು ಇದನ್ನು ಶಿಸ್ತಿನಿಂದ ನಿರ್ವಹಿಸುತ್ತಾರೆ ಎಂದು ಖಚಿತಪಡಿಸುತ್ತದೆ. ಈ ಅವಧಿಯ ಕೊನೆಯಲ್ಲಿ ದೊಡ್ಡ ಮೊತ್ತದ ಪಾವತಿಯ ರೂಪದಲ್ಲಿ ಅದರಿಂದ ಅವರು ಪ್ರಯೋಜನವನ್ನು ಪಡೆಯುತ್ತಾರೆ.

ಪಿಪಿಎಫ್ ವಿಸ್ತರಣೆ

ಪಿಪಿಎಫ್ ಆರಂಭದಲ್ಲಿ 15 ವರ್ಷಗಳವರೆಗೆ ಲಭ್ಯವಿದ್ದರೆ ಖಾತೆದಾರರು ಅದನ್ನು ಐದು ವರ್ಷಗಳ ಬ್ಯಾಚ್‌ನಲ್ಲಿ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ವಿಸ್ತರಿಸಬಹುದು.


ಪಿಪಿಎಫ್ ತೆರಿಗೆ ಉಳಿತಾಯ

ಪಿಪಿಎಫ್ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಉಳಿಸುವ ಸಾಧನವಾಗಿದೆ. ಅಂದರೆ ಈ ಉಪಕರಣದ ಮೂಲಕ ಉಳಿಸಿದ ಹಣಕ್ಕೆ ಯಾವುದೇ ಸಮಯದಲ್ಲಿ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ, ಇದು ಬ್ಯಾಂಕ್ ಎಫ್‌ಡಿಗಳು ಮತ್ತು ಇತರ ಹಲವು ಆಧುನಿಕ, ಹೂಡಿಕೆ ಮಾರ್ಗಗಳಿಗಿಂತ ಭಿನ್ನವಾಗಿದೆ.

ಪಿಪಿಎಫ್ ಹೂಡಿಕೆ ಮಿತಿ

ಖಾತೆದಾರರು ಪ್ರತಿ ವರ್ಷ 1,50,000 ರೂ. ಹೂಡಿಕೆ ಮಾಡಬಹುದಾದರೂ ಈ ಮಿತಿಯನ್ನು ತಲುಪಬೇಕು ಎಂಬ ಯಾವುದೇ ಒತ್ತಾಯವಿಲ್ಲ. ವಾಸ್ತವವಾಗಿ, ಅವರು ಪ್ರತಿ ವರ್ಷ 500 ರೂ.ಗಳಷ್ಟು ಕಡಿಮೆ ಹೂಡಿಕೆ ಮಾಡಬಹುದು. ಪಿಪಿಎಫ್‌ನಲ್ಲಿ ಒಬ್ಬ ವ್ಯಕ್ತಿಗೆ ಸಾಧ್ಯವಾದಷ್ಟು ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವುದು ಯಾವಾಗಲೂ ಉತ್ತಮ ಎಂದು ಹೇಳುವುದಾದರೆ ಅದು ಗ್ರಾಹಕನ ಉಳಿಸುವ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.

ಇದನ್ನೂ ಓದಿ: Stock Market News: ಮೋದಿ ಪ್ರಮಾಣ ವಚನದ ಬಳಿಕ ಷೇರು ಮಾರುಕಟ್ಟೆ ಜಿಗಿತ; ಸೆನ್ಸೆಕ್ಸ್‌ ಹೊಸ ದಾಖಲೆ

ಪಿಪಿಎಫ್ ಸಾಲ

ಪಿಪಿಎಫ್ ಖಾತೆದಾರರು ಹೂಡಿಕೆ ಮಾಡಿದ ಮೊತ್ತಕ್ಕೆ ಸಾಲವನ್ನು ತೆಗೆದುಕೊಳ್ಳಬಹುದು. ಆದರೆ ಅದನ್ನು ತೆರೆದ 3 ವರ್ಷಗಳ ಅನಂತರ ಮಾತ್ರ ಆಗಬಹುದು.

ಶಿಸ್ತು ಬದ್ದ ಠೇವಣಿ, ಬಡ್ಡಿ

ಪಿಪಿಎಫ್ ಹೂಡಿಕೆಯಲ್ಲಿ ಯಾವುದೇ ಗೌಪ್ಯತೆ ಇಲ್ಲ. ಪಿಪಿಎಫ್ ಖಾತೆದಾರರು ಮಾಡಬೇಕಾಗಿರುವುದು ಹಣವನ್ನು ಸಾಧ್ಯವಾದಷ್ಟು ಶಿಸ್ತುಬದ್ಧವಾಗಿ ಠೇವಣಿ ಮಾಡುವುದು ಮಾತ್ರ. ಆಗ ನಿರ್ಧಿಷ್ಟ ಬಡ್ಡಿಯನ್ನು ಆನಂದಿಸಬಹುದು.

Continue Reading

ಮನಿ-ಗೈಡ್

Money Guide: ಈಗಿನ ಆರೋಗ್ಯ ವಿಮಾ ಪಾಲಿಸಿ ಬಗ್ಗೆ ಸಮಾಧಾನ ಇಲ್ಲವೆ? ಹೆಲ್ತ್ ಇನ್ಶೂರೆನ್ಸ್ ಪೋರ್ಟೆಬಿಲಿಟಿ ಬಳಸಿ

Money Guide: ಕಾಯಿಲೆ ಬಂದಾಗ ಔಷಧ ಹುಡುಕುವುದಕ್ಕಿಂತ ಕಾಯಿಲೆಯೇ ಬರದಂತೆ ಮುಂಜಾಗ್ರತೆ ಹೊಂದುವುದು ಜಾಣತನ. ಅದೇ ರೀತಿ ಕಾಯಿಲೆ ಬಂದಾಗ ಇನ್ಶೂರೆನ್ಸ್‌ ಮಾಡಿಸುವುದಕ್ಕಿಂತ ಮೊದಲೇ ಮಾಡಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ವಿವಿಧ ಕಂಪನಿಗಳು ಹಲವಾರು ವಿಶೇಷತೆಗಳನ್ನು ಒಳಗೊಂಡ ಆರೋಗ್ಯ ವಿಮೆಯನ್ನು ಪರಿಚಯಿಸಿವೆ. ಒಂದುವೇಳೆ ನೀವು ಈಗಾಗಲೇ ಖರೀದಿಸಿದ ಪಾಲಿಸಿಯಲ್ಲಿ ತೃಪ್ತರಾಗದಿದ್ದರೆ ಅದನ್ನು ಬದಲಾಯಿಸುವ ಆಯ್ಕೆ ಇದೆ. ಇದನ್ನೇ ಹೆಲ್ತ್ ಇನ್ಶೂರೆನ್ಸ್ ಪೋರ್ಟಬಿಲಿಟಿ ಎಂದು ಕರೆಯಲಾಗುತ್ತದೆ. ಈ ಯೋಜನೆ ಬಗೆಗಿನ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಯಾವುದೇ ಉದ್ಯೋಗವಿರಲಿ ಹೆಲ್ತ್‌ ಇನ್ಶೂರೆನ್ಸ್‌ (Health Insuranceಮಾಡಿಸುವುದು ಅತ್ಯಗತ್ಯ. ಯಾವಾಗ, ಯಾವ ರೀತಿಯ ಆರೋಗ್ಯ ಸಮಸ್ಯೆ ಎದುರಾಗುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಕಾಯಿಲೆ ಬಂದಾಗ ಔಷಧ ಹುಡುಕುವುದಕ್ಕಿಂತ ಕಾಯಿಲೆಯೇ ಬರದಂತೆ ಮುಂಜಾಗ್ರತೆ ಹೊಂದುವುದು ಜಾಣತನ. ಅದೇ ರೀತಿ ಕಾಯಿಲೆ ಬಂದಾಗ ಇನ್ಶೂರೆನ್ಸ್‌ ಮಾಡಿಸುವುದಕ್ಕಿಂತ ಮೊದಲೇ ಮಾಡಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ವಿವಿಧ ಕಂಪನಿಗಳು ಹಲವಾರು ವಿಶೇಷತೆಗಳನ್ನು ಒಳಗೊಂಡ ಆರೋಗ್ಯ ವಿಮೆಯನ್ನು ಪರಿಚಯಿಸಿವೆ. ಒಂದುವೇಳೆ ನೀವು ಈಗಾಗಲೇ ಖರೀದಿಸಿದ ಪಾಲಿಸಿಯಲ್ಲಿ ತೃಪ್ತರಾಗದಿದ್ದರೆ ಅದನ್ನು ಬದಲಾಯಿಸುವ ಆಯ್ಕೆ ಇದೆ. ಅಂದರೆ ನೀವು ನಿಮ್ಮ ಮೊಬೈಲ್‌ ನಂಬರ್‌ ಅನ್ನು ಬದಲಾಯಿಸದೆ ಸಿಮ್‌ ಕಂಪನಿಯನ್ನು ಬದಲಾಯಿಸುವಂತೆ ಆರೋಗ್ಯ ವಿಮೆಯನ್ನೂ ಬದಲಾಯಿಸಬಹುದು. ಆ ಕುರಿತಾದ ವಿವರ ಇಲ್ಲಿದೆ (Money Guide).

ಹೆಲ್ತ್ ಇನ್ಶೂರೆನ್ಸ್ ಪೋರ್ಟೆಬಿಲಿಟಿ (Health Insurance Portability)

ನಿಮ್ಮ ಪ್ರಸ್ತುತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ನಿಮ್ಮ ಆಯ್ಕೆಯ ಮತ್ತೊಂದು ಇನ್ಶೂರೆನ್ಸ್ ಕಂಪನಿಗೆ ವರ್ಗಾಯಿಸುವ ಪ್ರಕ್ರಿಯೆಯನ್ನು ಹೆಲ್ತ್ ಇನ್ಶೂರೆನ್ಸ್ ಪೋರ್ಟೆಬಿಲಿಟಿ ಎನ್ನಲಾಗುತ್ತದೆ. ಈ ಆಯ್ಕೆಯನ್ನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (Insurance Regulatory and Development Authority of India) 2011ರಲ್ಲಿ ಪರಿಚಯಿಸಿದೆ. ನಿಮ್ಮ ಆರೋಗ್ಯ ವಿಮಾ ಪಾಲಿಸಿಯ ವೈಶಿಷ್ಟ್ಯಗಳು ಅಥವಾ ಪ್ರೀಮಿಯಂ ಬಗ್ಗೆ ನಿಮಗೆ ಸಮಾಧಾನ ಇಲ್ಲದಿದ್ದರೆ ಅಥವಾ ಇನ್ನೊಂದು ಕಂಪನಿ ಇನ್ನೂ ಹೆಚ್ಚಿನ ಆಯ್ಕೆಯನ್ನು ನೀಡುತ್ತಿದ್ದರೆ ಅದಕ್ಕೆ ಬದಲಾಯಿಸಬಹುದು.

ಅನುಕೂಲಗಳೇನು?

ಇದು ಇನ್ಶೂರೆನ್ಸ್ ಕಂಪನಿಗಳಲ್ಲಿನ ಬದಲಾವಣೆ ಮಾತ್ರವಲ್ಲ. ಇದರ ಜತೆಗೆ ಇನ್ನೂ ಅನೇಕ ಅನುಕೂಲಗಳು ಲಭಿಸುತ್ತವೆ. ನೀವು ಕಂಪನಿ ಬದಲಾಯಿಸುವಾಗ ಉತ್ತಮ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಹುದು. ಜತೆಗೆ ನಿಮ್ಮ ಕಾಯುವ ಅವಧಿ (Waiting Period) ಮತ್ತು ನೋ-ಕ್ಲೈಮ್ ಬೋನಸ್ ಅನ್ನು ಸಹ ವರ್ಗಾಯಿಸಬಹುದು. ಆದ್ದರಿಂದ ನೀವು ಮೊದಲಿನಿಂದಲೇ ಕಾಯುವ ಅವಧಿಯನ್ನು ಪ್ರಾರಂಭಿಸಬೇಕಾಗಿಲ್ಲ. ಜತೆಗೆ ನೀವು ಕ್ಯುಮುಲೇಟಿವ್ ಬೋನಸ್ (Cumulative bonus) ಅನ್ನು ಕಳೆದುಕೊಳ್ಳುವುದಿಲ್ಲ.

ವೈಶಿಷ್ಟ್ಯಗಳು

ಅಗತ್ಯ ಸೌಲಭ್ಯ ಪಡೆದುಕೊಳ್ಳಿ

ನಿಮ್ಮ ಅಗತ್ಯವನ್ನು ಈಗಿರುವ ಪಾಲಿಸಿ ಪೂರೈಸುವುದಿಲ್ಲ ಎಂದಾದರೆ ನೀವು ಇದನ್ನು ಒಳಗೊಳ್ಳುವ ಪಾಲಿಸಿಗೆ ಬದಲಾಯಿಸಬಹುದು. ಉದಾಹರಣೆಗೆ ಅಂಕಿತಾ ಪಾಲಿಸಿ ಖರೀದಿಸುವಾಗ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದ್ದರೂ ಅದು ಹೆರಿಗೆ ಪ್ರಯೋಜನ ಮತ್ತು ವ್ಯಾಪಕ ಆಸ್ಪತ್ರೆ ವ್ಯಾಪ್ತಿಯನ್ನು ಒಳಗೊಂಡಿರಲಿಲ್ಲ. ಈಗ ಅವರಿಗೆ ಈ ಸೌಲಭ್ಯದ ಅಗತ್ಯವಿದೆ. ಹೀಗಾಗಿ ಅವರು ಈ ಸೌಲಭ್ಯವನ್ನು ಹೊಂದಿರುವ ವಿಮಾ ಯೋಜನೆಗೆ ತಮ್ಮ ಪಾಲಿಸಿಯನ್ನು ಬದಲಾಯಿಸಬಹುದು. ಜತೆಗೆ ವಿಮೆಯ ಮೊತ್ತವನ್ನು ಹೆಚ್ಚಿಸುವ ಆಯ್ಕೆಯೂ ಇದೆ.

ವೆಚ್ಚ ಕಡಿತ

ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಕಡಿಮೆ ಪ್ರೀಮಿಯಂ ಹೊಂದಿರುವ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ ನೀವು ಭವಿಷ್ಯಕ್ಕೆ ಅಗತ್ಯವಾದ ಯೋಜನೆಗಳನ್ನು ಹುಡುಕುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ನೀವು ಪಾಲಿಸಿ ಹೊಂದಿರುವ ಕಂಪನಿಯಲ್ಲಿ ಇದು ದುಬಾರಿಯಾಗಿದ್ದು, ಮತ್ತೊಂದು ಕಂಪನಿಯಲ್ಲಿ ರಿಯಾಯಿತಿ ದರದಲ್ಲಿ ಲಭಿಸುತ್ತದೆ ಮತ್ತು ಹೆಚ್ಚಿನ ಪ್ರಯೋಜನ ಹೊಂದಿದೆ ಎಂದಾದರೆ ಅದರತ್ತ ನಿಮ್ಮ ಪಾಲಿಸಿಯನ್ನು ಬದಲಾಯಿಸಿ.

ಇದನ್ನು ಗಮನಿಸಿ

  • ಅಸ್ತಿತ್ವದಲ್ಲಿರುವ ನಿಮ್ಮ ಪಾಲಿಸಿಯ ಅವಧಿ ಮುಗಿಯುವ ಕನಿಷ್ಠ 45 ದಿನಗಳ ಮೊದಲು ನೀವು ಪೋರ್ಟೆಬಿಲಿಟಿಗೆ ಅರ್ಜಿ ಸಲ್ಲಿಸಬೇಕು.
  • ನಿಮ್ಮ ಹೊಸ ವಿಮಾದಾರರು ಪ್ರೀಮಿಯಂಗಳು, ನಿಯಮಗಳು ಮತ್ತು ಷರತ್ತುಗಳು ಸೇರಿದಂತೆ ಲಭ್ಯವಿರುವ ವಿವಿಧ ಆರೋಗ್ಯ ವಿಮಾ ಯೋಜನೆಗಳ ಪ್ರಯೋಜನವನ್ನು ಪಡೆಯಲು ವಿವಿಧ ನಮೂನೆಗಳನ್ನು ನಿಮಗೆ ಒದಗಿಸುತ್ತಾರೆ. ಅದನ್ನು ಗಮನವಿಟ್ಟು ಓದಿ.
  • ನೀವು ಬಯಸುವ ಯೋಜನೆ ಮತ್ತು ವ್ಯಾಪ್ತಿಯನ್ನು ಆಯ್ಕೆ ಮಾಡಿ ಮತ್ತು ಎಲ್ಲ ದಾಖಲೆಗಳನ್ನು ಸಲ್ಲಿಸಿ.
  • ಹೊಸ ವಿಮಾ ಕಂಪನಿ ಹಿಂದಿನ ವಿಮಾದಾರರಿಂದ ಮಾಹಿತಿಯನ್ನು ಪಡೆಯುವ ಮೂಲಕ ಹಿಂದಿನ ಕ್ಲೈಮ್ ಇತಿಹಾಸ, ವೈದ್ಯಕೀಯ ದಾಖಲೆಗಳು ಪರಿಶೀಲಿಸುತ್ತದೆ.
  • ಹೊಸ ವಿಮಾದಾರರು ಪೋರ್ಟೆಬಿಲಿಟಿಗೆ ಅರ್ಹರೇ ಅಥವಾ ಇಲ್ಲವೇ ಎಂದು ನಿರ್ಧರಿಸಲು ಈ ಮಾಹಿತಿಯನ್ನು ಬಳಸುತ್ತಾರೆ. ಬಳಿಕ 15 ದಿನಗಳೊಳಗೆ ನಿಮ್ಮ ಅರ್ಜಿ ಸ್ವೀಕೃತವಾಗುತ್ತದೆ.

ಯಾವೆಲ್ಲ ಸೌಲಭ್ಯಗಳನ್ನು ಪೋರ್ಟ್‌ ಮಾಡಬಹುದು?

  • ಪ್ರಸ್ತುತ ಇರುವ ಇನ್ಶೂರೆನ್ಸ್ ಮೊತ್ತ
    ನಿಮ್ಮ ಸಂಗ್ರಹಿತ ಕ್ಯುಮುಲೇಟಿವ್ ಬೋನಸ್
    ಮೊದಲೇ ಅಸ್ತಿತ್ವದಲ್ಲಿರುವ ಕಾಯುವ ಅವಧಿ
    ನಿರ್ದಿಷ್ಟ ರೋಗ ನಿರೀಕ್ಷಣಾ ಅವಧಿ
    ಹೆರಿಗೆ ಪ್ರಯೋಜನದ ಕಾಯುವ ಅವಧಿ (ಆಯ್ಕೆ ಮಾಡಿಕೊಂಡಿದ್ದರೆ)

ಅಗತ್ಯವಿರುವ ದಾಖಲೆಗಳು?

  • ನಿಮ್ಮ ಪ್ರಸ್ತುತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ವೇಳಾಪಟ್ಟಿ.
    ಗುರುತಿನ ಪುರಾವೆ
    ವೈದ್ಯಕೀಯ ವಿವರಗಳು

ಇದನ್ನೂ ಓದಿ: Money Guide: ಹೆಲ್ತ್‌ ಇನ್ಶೂರೆನ್ಸ್‌ ಕ್ಲೈಮ್‌ ಆಗುತ್ತಿಲ್ಲವೆ?; ಈ ಸಮಸ್ಯೆ ಇರಬಹುದು ಗಮನಿಸಿ

Continue Reading
Advertisement
Ready Saree Fashion Tips
ಫ್ಯಾಷನ್11 mins ago

Ready Saree Fashion Tips: ರೆಡಿ ಸೀರೆ ಪ್ರಿಯರು ಮರೆಯದೇ ಗಮನದಲ್ಲಿಟ್ಟುಕೊಳ್ಳಬೇಕಾದ 5 ಸಂಗತಿಗಳು

Virat Kohli
ಕ್ರೀಡೆ21 mins ago

Virat Kohli: ಅಮೆರಿಕ ವಿರುದ್ಧವಾದರೂ ವಿಶ್ವ ದಾಖಲೆ ನಿರ್ಮಿಸಲಿದ್ದಾರಾ ಕಿಂಗ್​ ಕೊಹ್ಲಿ?

Chandrababu Naidu
ದೇಶ44 mins ago

Chandrababu Naidu: ವಯಸ್ಸಲ್ಲಿ ಕಿರಿಯರಾದ ಮೋದಿ ಪಾದ ಮುಟ್ಟಲು ಮುಂದಾದ ಚಂದ್ರಬಾಬು ನಾಯ್ಡು; Video ಇದೆ

Benefits Of Eating Guava
ಆರೋಗ್ಯ51 mins ago

Benefits Of Eating Guava: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ಸೀಬೆಕಾಯಿ ತಿನ್ನಿ!

Actor Darshan
ಪ್ರಮುಖ ಸುದ್ದಿ59 mins ago

Actor Darshan: ಡೆವಿಲ್‌ ಗ್ಯಾಂಗ್‌ ಜತೆ ಸ್ಥಳ ಮಹಜರು; ಅಮಾಯಕನಂತೆ ಕೈಕಟ್ಟಿ ನಿಂತ ದರ್ಶನ್‌

FIFA World Cup
ಕ್ರೀಡೆ1 hour ago

FIFA World Cup: ವಿವಾದಾತ್ಮಕ ಗೋಲಿನಿಂದಾಗಿ ಭಾರತಕ್ಕೆ ಸೋಲು; ತನಿಖೆಗೆ ಕೋರಿದ ಎಐಎಫ್‌ಎಫ್‌

Terror attack
ದೇಶ1 hour ago

Terror attack: ಮಗುವಿಗಾಗಿ ಪ್ರಾರ್ಥಿಸಲು ಹೋಗಿದ್ದ ದಂಪತಿ; ಪತ್ನಿ ಎದುರೇ ಉಗ್ರರ ಗುಂಡಿಗೆ ಬಲಿಯಾದ ಪತಿ

Actor Darshan wife Vijayalakshmi will get divorce
ಸ್ಯಾಂಡಲ್ ವುಡ್1 hour ago

Actor Darshan: ಕೊಲೆ ಆರೋಪಿ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ಡಿವೋರ್ಸ್‌?

Fish Spa awareness
ಫ್ಯಾಷನ್1 hour ago

Fish Spa Awareness: ಫಿಶ್‌ ಸ್ಪಾಗೂ ಮುನ್ನ ನೂರು ಬಾರಿ ಯೋಚಿಸಿ!

Kuwait Fire
ವಿದೇಶ1 hour ago

Kuwait Fire: ಕುವೈತ್‌ನಲ್ಲಿ ಭೀಕರ ಅಗ್ನಿ ದುರಂತಕ್ಕೆ 41 ಭಾರತೀಯರ ಬಲಿ; ದಕ್ಷಿಣ ಭಾರತದವರೇ ಹೆಚ್ಚು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ1 day ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ1 day ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ1 day ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ1 day ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌