Mutual fund : 2,500ಕ್ಕೂ ಹೆಚ್ಚು ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳಲ್ಲಿ ಆಯ್ಕೆ ಮಾಡಿಕೊಳ್ಳುವುದು ಹೇಗೆ? - Vistara News

ಮನಿ-ಗೈಡ್

Mutual fund : 2,500ಕ್ಕೂ ಹೆಚ್ಚು ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳಲ್ಲಿ ಆಯ್ಕೆ ಮಾಡಿಕೊಳ್ಳುವುದು ಹೇಗೆ?

ಭಾರತದಲ್ಲಿ ಸಾವಿರಾರು ಮ್ಯೂಚುವಲ್‌ ಫಂಡ್‌ಗಳು ಲಭ್ಯ. ಇದರಲ್ಲಿ ಯಾವ ಕೆಟಗರಿಯಲ್ಲಿ ಇನ್ವೆಸ್ಟ್‌ ಮಾಡಬೇಕು ಎಂಬುದನ್ನು ಮೊದಲು ನಿರ್ಧರಿಸುವುದು ಮುಖ್ಯ.

VISTARANEWS.COM


on

Mutual Fund
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತದಲ್ಲಿ 44 ಮ್ಯೂಚುವಲ್‌ ಫಂಡ್‌ ಹೌಸ್‌ಗಳಿವೆ. 2,500ಕ್ಕೂ ಹೆಚ್ಚು ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳು ಇವೆ. ಹೀಗಾಗಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ ಸಹಜ. ( Mutual fund ) ನೀವು ಕಾರು ಖರೀದಿಸಬೇಕು ಎಂದುಕೊಳ್ಳುವಾಗ ಹೇಗೆ ಹುಡುಕಾಟವನ್ನು ಆರಂಭಿಸುತ್ತೀರಿ? ಮೊಟ್ಟ ಮೊದಲು ಯಾವ ಕೆಟಗರಿಯ ಕಾರು ಎಂದು ನಿರ್ಧಾರ ಮಾಡುತ್ತೀರಿ. ಹ್ಯಾಚ್‌ ಬ್ಯಾಕ್‌, ಸೆಡಾನ್‌, ಎಸ್‌ ಯುವಿ, ಲಕ್ಸುರಿ ಕೆಟಗರಿಗಳಲ್ಲಿ ಯಾವುದು ನಿಮ್ಮ ಆಯ್ಕೆ ಎಂದು ತೀರ್ಮಾನಿಸುತ್ತೀರಿ. ಬಳಿಕ ನೀವು ಕೆಟಗರಿಯಲ್ಲಿರುವ ವಿಶೇಷತೆಗಳ ಬಗ್ಗೆ ಆಲೋಚಿಸುತ್ತೀರಿ. ಮ್ಯೂಚುವಲ್‌ ಫಂಡ್‌ಗಳಲ್ಲೂ ನಾವು ಕೆಟಗರಿಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಬಳಿಕ ಯೋಜನೆಯನ್ನು ಹುಡುಕುತ್ತೀರಿ.

ಮಾರುಕಟ್ಟೆ ನಿಯಂತ್ರಕ ಸೆಬಿಯು 2016ರಲ್ಲಿ ಒಂದು ಅಂಶವನ್ನು ಗಮನಿಸಿತು. ಮ್ಯೂಚುವಲ್‌ ಫಂಡ್‌ ಕಂಪನಿಗಳು ಒಂದೇ ರೀತಿಯ ಸ್ಕೀಮ್‌ಗಳನ್ನು ಬಿಡುಗಡೆಗೊಳಿಸುತ್ತಿದ್ದವು. ಅದು ಹೂಡಿಕೆದಾರರನ್ನು ಗೊಂದಲಕ್ಕೀಡು ಮಾಡುತ್ತಿತ್ತು. ಒಂದೇ ಫಂಡ್‌ ಹೌಸ್‌ ಭಿನ್ನ ಹೆಸರುಗಳಲ್ಲಿ ನಾಲ್ಕು ಲಾರ್ಜ್‌ ಕ್ಯಾಪ್‌ ಮ್ಯೂಚುವಲ್‌ ಫಂಡ್‌ಗಳನ್ನು ಬಿಡುಗಡೆ ಮಾಡುತ್ತಿತ್ತು. ನಾಲ್ಕೂ ಯೋಜನೆಗಳಲ್ಲಿ 90 ಪರ್ಸೆಂಟ್‌ ಷೇರುಗಳು ಓವರ್‌ ಲ್ಯಾಪ್‌ ಆಗುತ್ತಿತ್ತು. ಇದಾದ ಬಳಿಕ ಸೆಬಿಯು ಮ್ಯೂಚುವಲ್‌ ಫಂಡ್‌ಗಳನ್ನು ಕೆಟಗರಿಗಳಾಗಿ ವಿಭಜಿಸಲು ನಿರ್ಧರಿಸಿತು.

ಸೆಬಿಯು ಮ್ಯೂಚುವಲ್‌ ಫಂಡ್‌ ಮಾರುಕಟ್ಟೆಯನ್ನು ವ್ಯವಸ್ಥಿತಗೊಳಿಸುವ ಉದ್ದೇಶದಿಂದ ಎರಡು ವಿಷಯಗಳಲ್ಲಿ ಕಾರ್ಯಪ್ರವೃತ್ತವಾಯಿತು. ಮೊದಲನೆಯದಾಗಿ 37 ಕೆಟಗರಿಗಳನ್ನು ಸೃಷ್ಟಿಸಿತು. ಓಪನ್‌ ಎಂಡೆಡ್‌ ಫಂಡ್‌ಗಳಿಗೆ ಇದು ಅನ್ವಯ. ಎರಡನೆಯದಾಗಿ ಪ್ರತಿ ಫಂಡ್‌ ಹೌಸ್‌ ಪ್ರತಿಯೊಂದು ಕೆಟಗರಿಯಲ್ಲಿ ಒಂದೇ ಮ್ಯೂಚುವಲ್‌ ಫಂಡ್‌ ಯೋಜನೆಯನ್ನು ಹೊಂದಿರಬೇಕು ಎಂದು ನಿಯಮವನ್ನು ಜಾರಿಗೊಳಿಸಿತು. ಕ್ಲೋಸ್‌ ಎಂಡೆಡ್‌ ಫಂಡ್‌ಗಳನ್ನು ಇದರಿಂದ ಹೊರಗಿಡಲಾಗಿದೆ. ಮ್ಯೂಚುವಲ್‌ ಫಂಡ್‌ ಕೆಟಗರಿಗಳಲ್ಲಿ ಈಕ್ವಿಟಿ ಮ್ಯೂಚುವಲ್‌ ಫಂಡ್‌, ಡೆಟ್‌ ಮ್ಯೂಚುವಲ್‌ ಫಂಡ್‌, ಹೈಬ್ರಿಡ್‌ ಮ್ಯೂಚುವಲ್‌ ಫಂಡ್‌, ಮಲ್ಟಿ ಕ್ಯಾಪ್‌, ಲಾರ್ಜ್‌ ಕ್ಯಾಪ್‌, ಮಿಡ್‌ ಕ್ಯಾಪ್‌, ಸ್ಮಾಲ್‌ ಕ್ಯಾಪ್‌, ಇಎಲ್‌ಎಸ್‌ಎಸ್‌, ಫ್ಲಿಕ್ಸಿ -ಕ್ಯಾಪ್‌, ಮಲ್ಟಿ-ಕ್ಯಾಪ್‌ ಇತ್ಯಾದಿ 37 ವಿಧಗಳಿವೆ.

ಮ್ಯೂಚುವಲ್‌ ಫಂಡ್‌ಗಳ 37 ವಿಧಗಳ ಪೈಕಿ ಮೂರು ಬೇಸಿಕ್‌ ಕೆಟಗರಿಗಳು ಇವೆ. ಲಾರ್ಜ್‌, ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಫಂಡ್‌ಗಳೆಂದು ಅವುಗಳನ್ನು ಕರೆಯುತ್ತಾರೆ. ಎರಡನೇ ಹಂತದಲ್ಲಿರುವ ಕ್ರಾಸ್-ಕ್ಯಾಪ್‌ ಕೆಟಗರಿಗಳು ಯಾವುದು ಎಂದರೆ, ಮಲ್ಟಿ -ಕ್ಯಾಪ್‌, ಫ್ಲೆಕ್ಸಿ-ಕ್ಯಾಪ್‌ ಮತ್ತು ಲಾರ್ಜ್‌ ಆಂಡ್‌ ಮಿಡ್-ಕ್ಯಾಪ್.‌

ಇದನ್ನೂ ಓದಿ: Divya Ayodhya: ರಾಮಮಂದಿರ ಯಾತ್ರಿಕರಿಗಾಗಿ ಬಂತು ಆ್ಯಪ್; ಆಲ್‌ ಇನ್‌ ಒನ್‌ ಗೈಡ್‌ನಲ್ಲೇನಿದೆ?

ಹೀಗೆ ಮ್ಯೂಚುವಲ್‌ ಫಂಡ್‌ಗಳು ನಾನಾ ವಿಧಗಳಲ್ಲಿ ಮತ್ತು ಗಾತ್ರಗಳಲ್ಲಿ ಸಿಗುವುದರಿಂದ, ಇವುಗಳಲ್ಲಿ ನಿಮ್ಮ ಆಯ್ಕೆ ಮಾಡುವುದಕ್ಕೆ ಮುನ್ನ, ನಿಮ್ಮ ಉದ್ದೇಶ ಯಾವುದು ಎಂಬುದನ್ನು ಖಚಿತಗೊಳಿಸಬೇಕು. ನಿಮ್ಮ ಉದ್ದೇಶವನ್ನೂ ಅಲ್ಪಾವಧಿ, ಮಧ್ಯಮ ಮತ್ತು ದೀರ್ಘಾವಧಿ ಎಂದು ಮೂರು ಕೆಟಗರಿಗಳಲ್ಲಿ ವಿಂಗಡಿಸಬಹುದು. ಯಾವುದೇ ಫಂಡ್‌ನಲ್ಲಿ ಹೂಡಿಕೆ ಮಾಡುವುದಕ್ಕೆ ಮುನ್ನ ಇನ್ವೆಸ್ಟ್‌ ಮೆಂಟಿನ ಗುರಿಗಳನ್ನು ನಿರ್ಧರಿಸಬೇಕು. ನಿಮ್ಮ ಆದ್ಯತೆ ಏನು ಎಂದು ನಿಶ್ಚಯಿಸಬೇಕು. ಬಳಿಕ ಹಣದುಬ್ಬರವನ್ನು ಪರಿಗಣಿಸಬೇಕು. ನಂತರ ಡೆಟ್‌ ಮ್ಯೂಚುವಲ್‌ ಫಂಡ್‌, ಈಕ್ವಿಟಿ ಮ್ಯೂಚುವಲ್‌ ಫಂಡ್‌ ಅಥವಾ ಹೈಬ್ರಿಡ್‌ ಮ್ಯೂಚುವಲ್‌ ಫಂಡ್‌ ಅನ್ನು ಬಳಸಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಗೃಹಸಾಲದ ಕಂತು ಪೂರ್ತಿಯಾಯ್ತೆ? ನಿಲ್ಲಿ, ನಿಮ್ಮ ಜವಾಬ್ದಾರಿ ಇನ್ನೂ ಇದೆ!

Money Guide: ಹೋಮ್‌ ಲೋನ್‌ ಸಂಪೂರ್ಣ ಪಾವತಿಸಿದ ಮೇಲೂ ನಿಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಸಾಲ ಪಾವತಿಯಾದ ಬಳಿಕವೂ ನೀವು ಒಂದಷ್ಟು ಮುಖ್ಯ ಕೆಲಸ ಮಾಡಬೇಕಾಗುತ್ತದೆ. ಭವಿಷ್ಯದಲ್ಲಿ ಯಾವುದೇ ತೊಂದರೆ ಎದುರಾಗದಿರಲು ಕೆಲವು ಅಂಶಗಳತ್ತ ನೀವು ಗಮನ ಹರಿಸಲೇ ಬೇಕು. ಅವು ಯಾವುವು ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಸ್ವಂತದ್ದೊಂದು ಸೂರು ಹೊಂದಿರಬೇಕು ಎನ್ನುವ ಕನಸು ಯಾರಿಗೆ ಇಲ್ಲ ಹೇಳಿ? ಆದರೆ ಈ ಕನಸನ್ನು ನನಸು ಮಾಡಿಕೊಳ್ಳುವುದು ಮಾತ್ರ ಬಹು ಪ್ರಯಾಸದ ಸಂಗತಿ. ಅದರಲ್ಲಿಯೂ ಈ ದುಬಾರಿ ದುನಿಯಾದಲ್ಲಿ ಮನೆ ಕಟ್ಟಬೇಕು ಎಂದರೆ ಸಾಮಾನ್ಯ ವರ್ಗದ ಜನರು ಸಾಲದ ಮೊರೆ ಹೋಗಲೇ ಬೇಕಾಗುತ್ತದೆ. ಸರಿ ಅಂತೂ ಗೃಹಸಾಲ ಮಂಜೂರಾಗಿ, ಗೃಹ ಪ್ರವೇಶ ನಡೆದು, ಸಾಲವನ್ನೂ ಕಟ್ಟಿಯಾಯ್ತು ಎಂದುಕೊಳ್ಳೋಣ. ʼಅಬ್ಬ ದೊಡ್ಡ ಹೊರೆಯೊಂದು ತಲೆಯ ಮೇಲಿಂದ ಇಳಿಯಿತುʼ ಎಂದು ನೆಮ್ಮದಿಯ ನಿಟ್ಟುಸಿರು ಬಿಡುವ ಮುನ್ನ ಇಲ್ಲಿ ಗಮನಿಸಿ. ಸಾಲ ಕಟ್ಟಿದ ಮಾತ್ರಕ್ಕೆ ನಿಮ್ಮ ಎಲ್ಲ ಜವಾಬ್ದಾರಿ ಮುಗಿಯಿತು ಎಂದುಕೊಳ್ಳಬೇಡಿ. ಸಾಲ ತೀರಿಸಿದ ಮೇಲೂ ನೀವು ಮಾಡಿ ಮುಗಿಸಬಹುದಾದು ಬಹು ಮುಖ್ಯ ಕೆಲಸಗಳಿವೆ. ಅವು ಯಾವುವು ಎನ್ನುವ ಮಾಹಿತಿ ತಿಳಿದುಕೊಳ್ಳಲು ಇಂದಿನ ಮನಿಗೈಡ್‌ (Money Guide) ಓದಿ.

ಎನ್‌ಒಸಿ ಪಡೆದುಕೊಳ್ಳಿ

ಗೃಹಸಾಲವನ್ನು ಸಂಪೂರ್ಣವಾಗಿ ಪಾವತಿಸದ ಬಳಿಕ ನೀವು ಮಾಡಬೇಕಾದ ಬಹು ಮುಖ್ಯ ಕೆಲಸ ಎಂದರೆ ಬ್ಯಾಂಕ್‌ನಿಂದ ಎನ್‌ಒಸಿ (ನಿರಾಕ್ಷೇಪಣಾ ಪತ್ರ) ಅಥವಾ ನೋ ಡ್ಯೂ ಸರ್ಟಿಫಿಕೆಟ್‌ (ಎನ್‌ಡಿಸಿ) ಪಡೆದುಕೊಳ್ಳುವುದು. ನೀವು ಸಂಪೂರ್ಣ ಸಾಲವನ್ನು ಮರುಪಾವತಿಸಿದ್ದೀರಿ ಎನ್ನುವುದನ್ನು ಬ್ಯಾಂಕ್‌ ಪ್ರಮಾಣಿಕರಿಸುವ ಸರ್ಟಿಫಿಕೆಟ್‌ ಇದು. ಗಮನಿಸಿ, ಈ ಪತ್ರವನ್ನು ಪಡೆದುಕೊಳ್ಳುವ ಮುನ್ನ ಇದರಲ್ಲಿ ನಮೂದಿಸಿರುವ ಎಲ್ಲ ಅಂಶಗಳು ಸರಿಯಾಗಿವೆಯೇ ಎನ್ನುವುದನ್ನು ಪರಿಶೀಲಿಸಿ. ಅಕ್ಷರ ದೋಷ ಅಥವಾ ಯಾವುದಾದರೂ ಮಾಹಿತಿಯಲ್ಲಿ ತಪ್ಪು ಕಂಡು ಬಂದರೆ ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತನ್ನಿ. ಜತೆಗೆ ಈ ಪ್ರಮಾಣ ಪತ್ರದಲ್ಲಿ ಸಾಲ ನೀಡಿದ ಸಂಸ್ಥೆಯ ಹೆಸರು, ಸಾಲದ ಖಾತೆ ಸಂಖ್ಯೆ, ಸಾಲ ಪಡೆದ ಆಸ್ತಿಯ ವಿವರ, ನಿಮ್ಮ ವಿಳಾಸ, ಸಾಲದ ಕಂತು ಆರಂಭಗೊಂಡ ಮತ್ತು ಕೊನೆಗೊಂಡ ದಿನಾಂಕ ಇದೆಯೇ ಎನ್ನುವುದನ್ನು ಪರಿಶೀಲಿಸಿ. ಮನೆ ಇನ್ನು ಸಂಪೂರ್ಣವಾಗಿ ನಿಮ್ಮ ಸೊತ್ತು ಎನ್ನುವುದು ಕೂಡ ಇದರಲ್ಲಿ ನಮೂದಾಗಿದೆ ಎನ್ನುವುದನ್ನು ಚೆಕ್‌ ಮಾಡಿ.

ಮೂಲ ದಾಖಲೆ ಪಡೆದುಕೊಳ್ಳಿ

ಗೃಹಸಾಲಕ್ಕೆ ಅರ್ಜಿ ಸಲ್ಲಿಸುವಾಗ ಬ್ಯಾಂಕ್‌ಗಳು ನಿಮ್ಮ ಮನೆಯ ಮೂಲ ದಾಖಲೆಗಳನ್ನು ಪಡೆದುಕೊಳ್ಳುತ್ತವೆ. ಸಾಲ ಪಾವತಿಯಾದ ಬಳಿಕ ಬ್ಯಾಂಕ್‌ಗಳು ಈ ಮೂಲ ದಾಖಲೆಗಳನ್ನು ನಿಮಗೆ ಹಿಂದಿರುಗಿಸಬೇಕು ಎನ್ನುವ ನಿಯಮ ಇದೆ. ಒಂದು ಬೇಳೆ ಬ್ಯಾಂಕ್‌ ಇದನ್ನು ನೀಡಲು ಮರೆತರೆ ನೀವು ನೆನಪಿಸಿ ತಪ್ಪದೆ ಪಡೆದುಕೊಳ್ಳಿ. ದಾಖಲೆಗಳೆಲ್ಲ ಸರಿಯಾಗಿವೆಯೇ ಎನ್ನುವುದನ್ನು ಪರಿಶೀಲಿಸುವುದನ್ನು ಮರೆಯಬೇಡಿ.

ದಾಖಲೆಗಳನ್ನು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಿ

ಗೃಹಸಾಲ ನೀಡುವಾಗ ನಿಮ್ಮ ಆಸ್ತಿಯ ಹಕ್ಕನ್ನು ಬ್ಯಾಂಕ್‌ ಹೊಂದಿರುತ್ತದೆ. ಒಂದುವೇಳೆ ಸಾಲ ಪಡೆದವರು ಮರು ಪಾವತಿಸದಿದ್ದರೆ ಆಸ್ತಿಯನ್ನು ಮಾರಾಟ ಮಾಡುವ ಹಕ್ಕು ಬ್ಯಾಂಕ್‌ಗೆ ಇರುತ್ತದೆ. ಹೀಗಾಗಿ ಸಾಲ ಮರುಪಾವತಿ ಮಾಡಿದ ಬಳಿಕ ಆಸ್ತಿಯನ್ನು ನಿಮ್ಮ ಹೆಸರಿಗೆ ಬರೆಸುವುದನ್ನು ಯಾವುದೇ ಕಾರಣಕ್ಕೂ ತಪ್ಪಿಸಲೇಬೇಡಿ. ಜತೆಗೆ ಋಣಭಾರ ಪ್ರಮಾಣಪತ್ರ ಪಡೆದುಕೊಳ್ಳಿ. ಈ ಬಗ್ಗೆ ಬ್ಯಾಂಕ್‌ ಸಿಬ್ಬಂದಿ ಬಳಿ ಕೇಳಿ ತಿಳಿದುಕೊಳ್ಳಿ.

ಕ್ರೆಡಿಟ್‌ ಸ್ಕೋರ್‌ ಪರಿಶೀಲಿಸಿ

ಸಾಲ ಮಂಜೂರಾದ ಬಳಿಕ ನಿಮ್ಮ ಮರುಪಾವತಿಯನ್ನು ಗಮನಿಸಿ ಕ್ರೆಡಿಟ್‌ ಬ್ಯೂರೋ ಕ್ರೆಡಿಟ್‌ ಸ್ಕೋರ್‌ ನೀಡುತ್ತದೆ. ಹೀಗಾಗಿ ಸಾಲದ ಎಲ್ಲ ಕಂತನ್ನು ಪಾವತಿಸಿದ ಬಳಿಕ ಸಾಲಮುಕ್ತರಾಗಿದ್ದೀರಿ ಎನ್ನುವುದನ್ನು ಬ್ಯಾಂಕ್‌ ಅಪ್‌ಡೇಟ್‌ ಮಾಡಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಕೆಲವೊಮ್ಮೆ ಬ್ಯಾಂಕ್‌ಗಳು ಬ್ಯುರೋಕ್ಕೆ ಮಾಹಿತಿ ನೀಡಲು ಮರೆಯುವ ಸಾಧ್ಯತೆ ಇದೆ. ಹೀಗಾಗಿ ಇದನ್ನು ಪರಿಶೀಲಿಸಿ ಬ್ಯಾಂಕ್‌ ಸಿಬ್ಬಂದಿ ಗಮನಕ್ಕೆ ತನ್ನಿ.

ಒಟ್ಟಿನಲ್ಲಿ ಗೃಹಸಾಲದ ಎಲ್ಲ ಕಂತುಗಳನನು ಪಾವತಿಸಿದ ಬಳಿಕ ಭವಿಷ್ಯದಲ್ಲಿ ಯಾವುದೇ ತೊಂದರೆ, ಕಾನೂನು ಸಮಸ್ಯೆ ಎದುರಾಗದಿರಲು ಈ ಎಲ್ಲ ಅಂಶಗಳತ್ತ ಗಮನ ಹರಿಸುವುದು ಮುಖ್ಯ.

ಇದನ್ನೂ ಓದಿ: Money Guide: ಬ್ಯಾಂಕ್‌ ಖಾತೆ, ಮ್ಯೂಚುವಲ್‌ ಫಂಡ್‌ ಹೊಂದಿದ್ದೀರಾ? ಹಾಗಾದರೆ ಮೊದಲು ಈ ಕೆಲಸ ಮಾಡಿ

Continue Reading

ಮನಿ-ಗೈಡ್

Money Guide: ವೇತನದ ಜತೆಗೆ ಮಾಸಿಕವಾಗಿ 9,250 ರೂ. ಆದಾಯ ಬೇಕೆ? ಈ ಯೋಜನೆಯಲ್ಲಿ ಹೂಡಿಕೆ ಮಾಡಿ

Money Guide: ಮಾಸಿಕ ಸಂಬಳವೊಂದನ್ನೇ ಆಶ್ರಯಿಸಿರುವ ಮಧ್ಯಮ ವರ್ಗದ ಜನರಿಗೆ ಅನಾರೋಗ್ಯ, ಅಪಘಾತದಂತಹ ಅನಿರೀಕ್ಷಿತ ಆಘಾತ ಮಾನಸಿಕ ಒತ್ತಡಕ್ಕೆ ಕಾರಣವಾಗಬಲ್ಲದು. ಹೀಗಾಗಿ ಇಂತಹ ಪರಿಸ್ಥಿತಿಯನ್ನು ಯಾವುದೇ ಗೊಂದಲಗಳಿಲ್ಲದೆ ದಾಟಬೇಕು ಎಂದಾದರೆ ಮಾಸಿಕ ವೇತನದ ಜತೆಗೆ ಇನ್ನೊಂದಷ್ಟು ಆದಾಯವೂ ಇರಬೇಕಾಗುತ್ತದೆ. ನೀವೂ ಇಂತಹ ಆದಾಯ ನಿರೀಕ್ಷಿಸುತ್ತಿದ್ದೀರಾ? ಹಾಗಾದರೆ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ನಿಮ್ಮ ನೆರವಿಗೆ ಬರುತ್ತದೆ. ಏನಿದು ಯೋಜನೆ? ಯಾರೆಲ್ಲ ಅರ್ಹರು? ನಿಮ್ಮ ಎಲ್ಲ ಪ್ರಶ್ನೆಗೆ ಇಲ್ಲಿದೆ ಉತ್ತರ.

VISTARANEWS.COM


on

Money Guide
Koo

ಬೆಂಗಳೂರು: ದಿನ ಕಳೆದಂತೆ ಜೀವನ ವೆಚ್ಚವೂ ಅಧಿಕವಾಗುತ್ತಿದೆ. ಮಾಸಿಕ ಸಂಬಳವೊಂದನ್ನೇ ಆಶ್ರಯಿಸಿರುವ ಮಧ್ಯಮ ವರ್ಗದ ಜನರಿಗೆ ಅನಾರೋಗ್ಯ, ಅಪಘಾತದಂತಹ ಅನಿರೀಕ್ಷಿತ ಆಘಾತ ಮಾನಸಿಕ ಒತ್ತಡಕ್ಕೆ ಕಾರಣವಾಗಬಲ್ಲದು. ಹೀಗಾಗಿ ಇಂತಹ ಪರಿಸ್ಥಿತಿಯನ್ನು ಯಾವುದೇ ಗೊಂದಲಗಳಿಲ್ಲದೆ ದಾಟಬೇಕು ಎಂದಾದರೆ ಮಾಸಿಕ ವೇತನದ ಜತೆಗೆ ಇನ್ನೊಂದಷ್ಟು ಆದಾಯವೂ ಇರಬೇಕಾಗುತ್ತದೆ. ಇದಕ್ಕಾಗಿ ಎಲ್ಲರಿಗೂ ಪಾರ್ಟ್‌ ಟೈಂ ಜಾಬ್‌ ಮಾಡಲು ಸಾಧ್ಯವಿಲ್ಲ. ಇಂತಹವರಿಗಾಗಿ ನೆರವಾಗುವ ಯೋಜನೆಯೇ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (Post Office Monthly Income Scheme). ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಇದಕ್ಕೆ ಯಾರೆಲ್ಲ ಅರ್ಹರು? ನೀವು ಇದರಲ್ಲಿ ಖಾತೆ ತೆರೆಯಬೇಕಾದರೆ ಏನು ಮಾಡಬೇಕು? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Money Guide).

ಏನಿದು ಯೋಜನೆ?

ಇದರಲ್ಲಿ ಏಕಾಂಗಿಯಾಗಿ ಅಥವಾ ತಮ್ಮ ಸಂಗಾತಿಯೊಂದಿಗೆ ಜಂಟಿಯಾಗಿ ಖಾತೆಗಳನ್ನು ತೆರೆಯಬಹುದು. ವೈಯಕ್ತಿಕ ಖಾತೆಯಲ್ಲಿ ಗರಿಷ್ಠ 9 ಲಕ್ಷ ರೂ. ಮತ್ತು ಜಂಟಿ ಖಾತೆಯಲ್ಲಿ 15 ಲಕ್ಷ ರೂ.ವರೆಗೆ ಠೇವಣಿ ಇಡಬಹುದು. ಕನಿಷ್ಠ ಠೇವಣಿ ಅವಧಿ ಐದು ವರ್ಷ. ಈ ಠೇವಣಿಯ ಮೇಲೆ ಗಳಿಸಿದ ಬಡ್ಡಿಯು ಮಾಸಿಕ ಆದಾಯದ ರೂಪದಲ್ಲಿ ನಿಮಗೆ ಲಭಿಸುತ್ತದೆ. ಜಂಟಿ ಖಾತೆದಾರರು 15 ಲಕ್ಷ ರೂ.ಗಳನ್ನು ಠೇವಣಿ ಮಾಡುವ ಮೂಲಕ ಮಾಸಿಕ 9,250 ರೂ.ಗಳವರೆಗೆ ಗಳಿಸಬಹುದು. ಇನ್ನು 9 ಲಕ್ಷ ರೂ.ಗಳ ಠೇವಣಿ ಹೂಡುವವರು ಮಾಸಿಕ 5,500 ರೂ. ಪಡೆದುಕೊಳ್ಳಲಿದ್ದಾರೆ. ಸರ್ಕಾರಿ ಬೆಂಬಲಿತ ಯೋಜನೆ ಇದಾಗಿರುವುದರಿಂದ ಇದರಲ್ಲಿನ ಹೂಡಿಕೆ ಸುರಕ್ಷಿತ.

ಪಿಒಎಂಐಎಸ್‌ ವೈಶಿಷ್ಟ್ಯ

  • ಕನಿಷ್ಠ 1,000 ರೂ. ಹೂಡಿಕೆ ಮೂಲಕ ಖಾತೆ ತೆರೆಯಬಹುದು.
  • ಗರಿಷ್ಠ ಹೂಡಿಕೆ ಸಿಂಗಲ್‌ ಅಕೌಂಟ್‌ಗೆ 9 ಲಕ್ಷ ರೂ. ಮತ್ತು ಜಾಯಿಂಟ್‌ ಅಕೌಂಟ್‌ಗೆ 15 ಲಕ್ಷ ರೂ.
  • ಠೇವಣಿಯ ಅವಧಿ 5 ವರ್ಷ.
  • ಗರಿಷ್ಠ ಮೊತ್ತದ ಮಿತಿಗೆ ಒಳಪಟ್ಟು ಈ ಯೋಜನೆಯಡಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ನಿರ್ವಹಿಸಬಹುದು.
  • ಒಂದು ವರ್ಷದ ನಂತರ ಖಾತೆಯನ್ನು ಅಕಾಲಿಕವಾಗಿ ಮುಚ್ಚಬಹುದು. 3 ವರ್ಷಗಳ ಅವಧಿ ಮುಗಿದ ನಂತರ ಖಾತೆಯನ್ನು ಮುಚ್ಚಿದರೆ ಠೇವಣಿಯ ಮೊತ್ತದಿಂದ ಶೇ. 1ರಷ್ಟು ಕಡಿತಗೊಳಿಸಲಾಗುತ್ತದೆ.
  • ಸದ್ಯ ಈ ಯೋಜನೆಯಲ್ಲಿ 7.4% ಬಡ್ಡಿ ರ ಲಭ್ಯ.

ಯಾರೆಲ್ಲ ತೆರೆಯಬಹುದು?

  • ವಯಸ್ಕರು (ಸಿಂಗಲ್‌ ಅಥವಾ ಜಾಯಿಂಟ್‌ ಅಕೌಂಟ್‌).
  • ಗರಿಷ್ಠ ಮೂರು ವ್ಯಕ್ತಿಗಳೊಂದಿಗೆ ಜಂಟಿಯಾಗಿ ಖಾತೆ ಹೊಂದಬಹುದು.
  • ಅಪ್ರಾಪ್ತ ವಯಸ್ಕ / ಮಾನಸಿಕ ಅಸ್ವಸ್ಥರ ಪರವಾಗಿ ಪೋಷಕರು ಖಾತೆ ತೆರೆಯಬಹುದು.
  • ಜಂಟಿ ಖಾತೆಯಲ್ಲಿನ ಎಲ್ಲರಿಗೂ ಹಣವನ್ನು ಸಮಾನವಾಗಿ ಹಂಚಲಾಗುತ್ತದೆ.

ಇದನ್ನು ಗಮನಿಸಿ

  • ಖಾತೆ ತೆರೆದ ದಿನಾಂಕದಿಂದ ಒಂದು ತಿಂಗಳು ಪೂರ್ಣಗೊಂಡ ನಂತರ ಮತ್ತು ಅವಧಿ ಮುಗಿಯುವ (Maturity) ತನಕ ಬಡ್ಡಿಯನ್ನು ಪಾವತಿಸಲಾಗುತ್ತದೆ.
  • ಠೇವಣಿ ಇಟ್ಟ 1 ವರ್ಷದೊಳಗೆ ಹಿಂಪಡೆಯಲು ಸಾಧ್ಯವಿಲ್ಲ.
  • ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ಪಾಸ್‌ಬುಕ್‌ನೊಂದಿಗೆ ನಿಗದಿತ ಅರ್ಜಿ ನಮೂನೆಯನ್ನು ಸಲ್ಲಿಸುವ ಮೂಲಕ ಖಾತೆ ತೆರೆದ ದಿನಾಂಕದಿಂದ 5 ವರ್ಷಗಳ ನಂತರ ಕ್ಲೋಸ್‌ ಮಾಡಬಹುದು.
  • ಒಂದು ವೇಳೆ ಖಾತೆದಾರನು ಅವಧಿ ಮುಕ್ತಾಯದ ಮುನ್ನವೇ ಮರಣ ಹೊಂದಿದರೆ, ಖಾತೆಯನ್ನು ಮುಚ್ಚಬಹುದು ಮತ್ತು ಮೊತ್ತವನ್ನು ನಾಮಿನಿಗೆ ಮರುಪಾವತಿಸಲಾಗುತ್ತದೆ.

ಯಾವೆಲ್ಲ ದಾಖಲೆಗಳು ಬೇಕು?

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಗೆ ನೋಂದಾಯಿಸಲು ವಿಳಾಸದ ಪುರಾವೆ, ಫೋಟೊ ಇರುವ ಗುರುತಿನ ಚೀಟಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಎರಡು ಪಾಸ್‌ಪೋರ್ಟ್‌ ಗಾತ್ರದ ಫೋಟೊಗಳೊಂದಿಗೆ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ.

ಇದನ್ನೂ ಓದಿ: EPF Death Claim: ಆಧಾರ್ ದೃಢೀಕರಣ ಇಲ್ಲದೇ ಇದ್ದರೂ ಇಪಿಎಫ್‌ಒ ಡೆತ್ ಕ್ಲೈಮ್ ಸಾಧ್ಯವೆ? ಇಲ್ಲಿದೆ ಮಾಹಿತಿ

Continue Reading

ಮನಿ-ಗೈಡ್

Health Insurance: ಕ್ಯಾಶ್​ಲೆಸ್​ ಕ್ಲೈಮ್‌ ಗಳಿಗೆ ಆಸ್ಪತ್ರೆಯಲ್ಲಿ ಇನ್ನು ಹೆಚ್ಚು ಹೊತ್ತು ಕಾಯಬೇಕಿಲ್ಲ; ಇಲ್ಲಿದೆ ಹೊಸ ನಿಯಮ

ಮೂರು ಗಂಟೆಗಳ ಒಳಗೆ ಆಸ್ಪತ್ರಗಳಲ್ಲಿ ನಗದು ರಹಿತ ಆರೋಗ್ಯ ವಿಮಾ (Health Insurance) ಕ್ಲೈಮ್ ಗಳನ್ನು ಸಲ್ಲಿಸಬೇಕು ಎಂದು ಐಆರ್ ಡಿಐಎ ಸೂಚಿಸಿದೆ. ಹಿಂದಿನ 55 ಆದೇಶಗಳನ್ನು ರದ್ದುಗೊಳಿಸಿ ಒಂದು ಸಮಗ್ರ ಆದೇಶವನ್ನು ಹೊರಡಿಸಲಾಗಿದೆ. ಇದರಲ್ಲಿ ಮಾಡಿರುವ ಬದಲಾವಣೆಗಳು ಇಂತಿವೆ.

VISTARANEWS.COM


on

By

health-insurence
Koo

ಬೆಂಗಳೂರು: ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (IRDAI) ಆರೋಗ್ಯ ವಿಮಾ ಪಾಲಿಸಿಗಳ (Health Insurance) ಮಾನದಂಡಗಳಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. 55 ಸುತ್ತೋಲೆಗಳನ್ನು ರದ್ದುಗೊಳಿಸಿ ಆರೋಗ್ಯ ವಿಮಾ ಉತ್ಪನ್ನಗಳ ಕುರಿತು ಸಮಗ್ರವಾಗಿ ಒಂದು ಸುತ್ತೋಲೆ ಪ್ರಕಟಿಸಿದೆ. ಪ್ರಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ (hospital discharge) ವಿನಂತಿ ಸ್ವೀಕರಿಸಿದ ಕ್ಯಾಶ್​ಲೆಸ್​ ಕ್ಲೈಮ್ ಗಳನ್ನು ಮೂರು ಗಂಟೆಗಳ ಒಳಗೆ ಇತ್ಯರ್ಥಗೊಳಿಸಬೇಕು ಐಆರ್ ಡಿಎಐ ಸೂಚಿಸಿದೆ.

ಯಾವುದೇ ಸಂದರ್ಭದಲ್ಲಿ ಪಾಲಿಸಿದಾರರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಹೆಚ್ಚು ಕಾಯುವಂತೆ ಮಾಡಬಾರದು. ಮೂರು ಗಂಟೆಗಳಿಗಿಂತ ಹೆಚ್ಚು ವಿಳಂಬವಾದರೆ ಆಸ್ಪತ್ರೆಯಿಂದ ವಿಧಿಸಲಾದ ಹೆಚ್ಚುವರಿ ಮೊತ್ತವನ್ನು ವಿಮಾದಾರರು ಭರಿಸಬೇಕಾಗುತ್ತೆ ಎಂದು ಕಂಪನಿ ತಿಳಿಸಿದೆ. ತುರ್ತು ಸಂದರ್ಭಗಳಲ್ಲಿ ಬರುವ ನಗದು ರಹಿತ ವಿನಂತಿಯನ್ನು ವಿಮಾದಾರರು ತಕ್ಷಣವೇ ನಿರ್ಧರಿಸಬೇಕು ಎಂದು ಐಆರ್ ಡಿ ಎಐ ಹೇಳಿದೆ.

2024ರ ಜುಲೈ 31ರೊಳಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲು ವಿಮಾದಾರರಿಗೆ ಆದೇಶಿಸಿರುವ ಐಆರ್ ಡಿಎಐ ನಗದು ಕ್ಯಾಶ್​ಲೆಸ್​​ ವಿನಂತಿಗಳನ್ನು ಸ್ವೀಕರಿಸಲು ವಿಮಾದಾರರು ಆಸ್ಪತ್ರೆಯಲ್ಲಿ ಹೆಲ್ಪ್​ ಡೆಸ್ಕ್‌ಗಳನ್ನು ಸಹ ವ್ಯವಸ್ಥೆಗೊಳಿಸಬಹುದು ಎಂದು ಹೇಳಿದೆ.


ಇತರ ಕೆಲವು ಬದಲಾವಣೆಗಳು ?

ಲಭ್ಯವಿರುವ ಉತ್ಪನ್ನಗಳ ಮೂಲಕ ಪಾಲಿಸಿದಾರರಿಗೆ ವಿಮಾ ಕಂಪನಿಗಳು ವ್ಯಾಪಕ ಆಯ್ಕೆಗಳನ್ನು ಒದಗಿಸಬೇಕು ಎಂದು ಐಆರ್ ಡಿಎಐ ಹೇಳಿದೆ. ಅದೇ ಉದ್ದೇಶವನ್ನು ಪೂರೈಸಲು, ವಿಮಾದಾರರು ಎಲ್ಲಾ ವಯಸ್ಸಿನವರು, ಪ್ರದೇಶಗಳು, ಔದ್ಯೋಗಿಕ ವಿಭಾಗಗಳು, ವೈದ್ಯಕೀಯ ಪರಿಸ್ಥಿತಿಗಳು/ ಚಿಕಿತ್ಸೆಗಳು, ಎಲ್ಲಾ ರೀತಿಯ ಆಸ್ಪತ್ರೆಗಳು ಮತ್ತು ಆರೋಗ್ಯ ರಕ್ಷಣೆ ಒದಗಿಸುವವರಿಗೆ ವೈವಿಧ್ಯಮಯ ವಿಮಾ ಉತ್ಪನ್ನಗಳನ್ನು ಒದಗಿಸಬೇಕು ಎಂದು ಹೇಳಿದೆ.

ಇದನ್ನೂ ಓದಿ: Health Insurance Benefits : ಉದ್ಯೋಗಿಗಳ ಆರೋಗ್ಯ ವಿಮೆ ಏಕೆ ಮಹತ್ವಪೂರ್ಣ? ಇಲ್ಲಿದೆ ಡಿಟೇಲ್ಸ್

ಹಲವು ಆರೋಗ್ಯ ವಿಮಾ ಪಾಲಿಸಿಗಳನ್ನು ಹೊಂದಿರುವ ಪಾಲಿಸಿದಾರನು ಸ್ವೀಕಾರಾರ್ಹ ಕ್ಲೈಮ್ ಮೊತ್ತವನ್ನು ಪಡೆಯುವ ಪಾಲಿಸಿ ಆಯ್ಕೆಯನ್ನು ಹೊಸ ಸುತ್ತೋಲೆಯಲ್ಲಿ ಪಡೆಯುತ್ತಾನೆ. ವಿಮಾದಾರರು ಪ್ರತಿ ಪಾಲಿಸಿ ಡಾಕ್ಯುಮೆಂಟ್ ಜೊತೆಗೆ ಗ್ರಾಹಕರ ಮಾಹಿತಿ ಶೀಟ್​​ (CIS) ಒದಗಿಸಬೇಕಾಗುತ್ತದೆ. ಪಾಲಿಸಿ ಅವಧಿಯಲ್ಲಿ ಯಾವುದೇ ಕ್ಲೈಮ್‌ಗಳು ಮಾಡದಿದ್ದರೆ ವಿಮಾ ಮೊತ್ತವನ್ನು ಹೆಚ್ಚಿಸುವ ಅಥವಾ ಪ್ರೀಮಿಯಂ ಮೊತ್ತವನ್ನು ರಿಯಾಯಿತಿ ಮಾಡಬೇಕಾಗುತ್ತದೆ.

ಒಂದು ವೇಳೆ ಪಾಲಿಸಿದಾರರು, ಚಾಲ್ತಿಯಲ್ಲಿರು ಪಾಲಿಸಿಯನ್ನು ಯಾವುದೇ ಸಮಯದಲ್ಲಿ ರದ್ದುಮಾಡಲು ಬಯಸಿದರೆ ಅವಧಿ ಪ್ರೀಮಿಯಂ/ ಅನುಪಾತದ ಪ್ರೀಮಿಯಂನ ಮರುಪಾವತಿ ಮಾಡಬೇಕಾಗುತ್ತದೆ.

ರೋಗಿಯನ್ನು ದಾಖಲಿಸುವ ಮೊದಲು ವಿಮಾ ಕಂಪನಿಯು ಆಸ್ಪತ್ರೆಯ ಟಿಪಿಎ ಡೆಸ್ಕ್‌ಗೆ ಪೂರ್ವ-ಅನುಮೋದನೆಯನ್ನು ಒದಗಿಸಿದ ಮೇಲೂ ಶೇ.43ರಷ್ಟು ವಿಮಾ ಪಾಲಿಸಿದಾರರು ತಮ್ಮ “ಆರೋಗ್ಯ ವಿಮೆ” ಕ್ಲೈಮ್‌ಗಳನ್ನು ಪಡೆಯಲು ತೊಂದರೆಗಳನ್ನು ಎದುರಿಸಿದ್ದಾರೆ ಎಂದು ಸಮೀಕ್ಷೆಯೊಂದರಲ್ಲಿ ತಿಳಿದು ಬಂದಿದೆ. ಕೆಲವು ಪ್ರಕರಣಗಳಲ್ಲಿ, ರೋಗಿಯು ಡಿಸ್ಚಾರ್ಜ್‌ಗೆ ಸಿದ್ಧವಾದ ಅನಂತರ 10- 12 ಗಂಟೆಗಳ ಬಳಿಕ ಕ್ಲೇಮ್​ ನೀಡಲಾಗಿದೆ.

Continue Reading

ಮನಿ-ಗೈಡ್

Money Guide: ಹಣ ಪಾವತಿ ಅಂಗಳಕ್ಕೆ ಕಾಲಿಡಲು ಅದಾನಿ ಗ್ರೂಪ್‌ ಸಜ್ಜು; ಗೂಗಲ್‌ ಪೇ, ಫೋನ್‌ ಪೇಗೆ ಪ್ರಬಲ ಪೈಪೋಟಿ?

Money Guide: ಭಾರತದ ಉದ್ಯಮಿ, ವಿಶ್ವದ ಸಿರಿವಂತರ ಪೈಕಿ ಒಬ್ಬರೆನಿಸಿಕೊಂಡಿರುವ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಇದೀಗ ಯುಪಿಐ ಮತ್ತು ಕ್ರೆಡಿಟ್ ಕಾರ್ಡ್ ವ್ಯವಹಾರಕ್ಕೆ ಪ್ರವೇಶಿಸಲು ತಯಾರಾಗಿದೆ. ಅದಾನಿ ಒನ್‌ ಅಪ್ಲಿಕೇಷನ್‌ ಮೂಲಕ ಸೇವೆ ಲಭಿಸಲಿದೆ ಎನ್ನಲಾಗಿದೆ. ಈ ಬಗ್ಗೆ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಭಾರತದಲ್ಲಿ ಡಿಜಿಟಲ್‌ ಪೇಮೆಂಟ್‌ (Digital Payments) ವಿಧಾನ ಜನಪ್ರಿಯವಾಗಿದೆ. ಮಾಲ್‌ಗಳಿಂದ ಹಿಡಿದು ತಳ್ಳುಗಾಡಿಯವರೆಗೆ ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (UPI) ಮೂಲಕ ವ್ಯವಹಾರ ನಡೆಸಲಾಗುತ್ತದೆ. ಗೂಗಲ್ ಪೇ, ಫೋನ್ ಪೇ, ಅಮೆಜಾನ್ ಪೇ ಹಾಗೂ ಇತರ ಪಾವತಿ ವ್ಯವಸ್ಥೆಗಳು ಭಾರತದಲ್ಲಿ ಯುಪಿಐ ಪಾವತಿ ವ್ಯವಸ್ಥೆಯ ಬಳಕೆಯನ್ನು ವ್ಯಾಪಕಗೊಳಿಸಿವೆ. ಜತೆಗೆ ಕ್ರೆಡಿಟ್‌ ಕಾರ್ಡ್‌ ಬಳಕೆಯೂ ಅಧಿಕವಾಗಿದೆ. ಇದೀಗ ಈ ಎಲ್ಲ ಕಂಪನಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲು ಭಾರತದ ಮತ್ತೊಂದು ದೈತ್ಯ ಕಂಪನಿಯೊಂದು ಮುಂದಾಗಿದೆ. ಹೌದು, ಭಾರತದ ಉದ್ಯಮಿ, ವಿಶ್ವದ ಸಿರಿವಂತರ ಪೈಕಿ ಒಬ್ಬರೆನಿಸಿಕೊಂಡಿರುವ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ (Adani Group) ಇದೀಗ ಯುಪಿಐ ಮತ್ತು ಕ್ರೆಡಿಟ್ ಕಾರ್ಡ್ ವ್ಯವಹಾರಕ್ಕೆ ಪ್ರವೇಶಿಸಲು ತಯಾರಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಭಾರತದಲ್ಲಿ ಈಗಾಗಲೇ ಯುಪಿಐ ಮತ್ತು ಕ್ರೆಡಿಟ್ ಕಾರ್ಡ್ ಕ್ಷೇತ್ರದಲ್ಲಿ ನೆಲೆಯೂರಿರುವ ಗೂಗಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ಗೆ ಪ್ರತಿಸ್ಪರ್ಧಿಯಾಗಿ ಅದಾನಿ ಗ್ರೂಪ್ ಇ-ಕಾಮರ್ಸ್ ಮತ್ತು ಪಾವತಿ ಕ್ಷೇತ್ರವನ್ನು ಪ್ರವೇಶಿಸುವ ಪ್ರಯತ್ನದಲ್ಲಿದೆ ಎಂದು ಫೈನಾನ್ಶಿಯಲ್‌ ಟೈಮ್ಸ್‌ ವರದಿ ಮಾಡಿದೆ.

ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುವ ಹಣ ಪಾವತಿ ವಿಧಾನವಾದ ಯುಪಿಐ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಪರವಾನಗಿ ಪಡೆಯಲು ಕಂಪನಿಯು ಈಗಾಗಲೇ ಕೆಲಸ ಆರಂಭಿಸಿದೆ. ಮಾತ್ರವಲ್ಲ ಅದಾನಿ ಕ್ರೆಡಿಟ್ ಕಾರ್ಡ್‌ ಯೋಜನೆಗಳನ್ನು ಅಂತಿಮಗೊಳಿಸಲು ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಸರ್ಕಾರದ ಬೆಂಬಲದೊಂದಿಗೆ ಭಾರತದಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ಸಾರ್ವಜನಿಕ ಇ-ಕಾಮರ್ಸ್ ನೆಟ್‌ವರ್ಕ್‌ ಓಪನ್ ನೆಟ್‌ವರ್ಕ್‌ ಫಾರ್ ಡಿಜಿಟಲ್ ಕಾಮರ್ಸ್ (Open Network for Digital Commerce) ಮೂಲಕ ಆನ್‌ಲೈನ್‌ ಶಾಪಿಂಗ್ ಸೇವೆ ಒದಗಿಸಲು ಚಿಂತನೆ ನಡೆಸಲಾಗಿದೆ.

ಅದಾನಿ ಒನ್ ಅಪ್ಲಿಕೇಷನ್‌ ಮೂಲಕ ಸೇವೆ

ಒಂದು ವೇಳೆ ಅನುಮತಿ ದೊರೆತರೆ ಕಂಪನಿಯ ಅದಾನಿ ಒನ್‌ (Adani One) ಅಪ್ಲಿಕೇಷನ್‌ ಮೂಲಕ ಸೇವೆ ಲಭಿಸಲಿದೆ. ಅದಾನಿ ಒನ್ ಅಪ್ಲಿಕೇಶನ್ ಅನ್ನು 2022ರಲ್ಲಿ ಪ್ರಾರಂಭಿಸಲಾಗಿದ್ದು, ಇದು ಪ್ರಸ್ತುತ ಹೋಟೆಲ್ ಮತ್ತು ಫ್ಲೈಟ್ ಬುಕಿಂಗ್‌ನಂತಹ ಪ್ರವಾಸೋದ್ಯಮ ಸೇವೆಗಳನ್ನು ಒದಗಿಸುತ್ತದೆ. ಈಗಾಗಲೇ ಅದಾನಿ ಗ್ರೂಪ್ ಬಂದರು, ವಿಮಾನ ನಿಲ್ದಾಣಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ಹೊಂದಿದ್ದು, ಇದರಲ್ಲಿನ ಗ್ರಾಹಕರನ್ನು ಸುಲಭವಾಗಿ ಸೆಳೆಯಬಹುದು ಎನ್ನುವ ಲೆಕ್ಕಾಚಾರವಿದೆ. ʼʼಸದ್ಯ ಏಷ್ಯಾದ ಎರಡನೇ ಶ್ರೀಮಂತ ವ್ಯಕ್ತಿಯಾಗಿರುವ ಅದಾನಿ ಗ್ರೂಪ್‌ನ ಸ್ಥಾಪಕ ಗೌತಮ್ ಅದಾನಿ ಅವರು ಶೀಘ್ರದಲ್ಲಿಯೇ ಡಿಜಿಟಲ್‌ ಪಾವತಿ ರಂಗಕ್ಕೆ ಪ್ರವೇಶಿಸಲು ಯೋಜನೆ ಹಾಕಿಕೊಂಡಿದ್ದಾರೆʼʼ ಎಂದು ಮೂಲಗಳು ಮಾಹಿತಿ ನೀಡಿವೆ.

ತೀವ್ರ ಸ್ಪರ್ಧೆ

ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಸದ್ಯ ಡಿಜಿಟಲ್‌ ಪಾವತಿ ಕ್ಷೇತ್ರದಲ್ಲಿ ಗೂಗಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ ಪ್ರಬಲ ಶಕ್ತಿಯಾಗಿ ಗುರುತಿಸಿಕೊಂಡಿವೆ. ಇದೀಗ ಯುಪಿಐ, ಕ್ರೆಡಿಟ್ ಕಾರ್ಡ್ ಸೇವೆ ಆರಂಭಿಸುವ ಮೂಲಕ ಅದಾನಿ ಗ್ರೂಪ್‌ ಇ-ಕಾಮರ್ಸ್ ಮತ್ತು ಪಾವತಿ ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧೆ ಒಡ್ಡುವ ಸಾಧ್ಯತೆ ಇದೆ. ಯಾವ ರೀತಿ ಕಾರ್ಯ ನಿರ್ವಹಿಸಲಿದೆ ಎನ್ನುವ ಬಗ್ಗೆ ಶೀಘ್ರದಲ್ಲೇ ಮಾಹಿತಿ ಹೊರ ಬೀಳಲಿದೆ. ಒಟ್ಟಿನಲ್ಲಿ ಈ ಸುದ್ದಿ ತೀವ್ರ ಸಂಚಲನ ಮೂಡಿಸಿದೆ.

ಇದನ್ನೂ ಓದಿ: Money Guide: ಭಾರತದಲ್ಲಿಯೂ ಆರಂಭವಾಯ್ತು ಬಹು ನಿರೀಕ್ಷಿತ ಗೂಗಲ್ ವ್ಯಾಲೆಟ್‌; ಇದು ಗೂಗಲ್‌ ಪೇಗಿಂತ ಹೇಗೆ ಭಿನ್ನ?

Continue Reading
Advertisement
bangalore rain news
ಪ್ರಮುಖ ಸುದ್ದಿ14 mins ago

Bangalore Rain News: ಬೆಂಗಳೂರಿಗೆ ಮುಂಗಾರು ಶಾಕ್‌, ನೂರಾರು ಮರಗಳು ಧರೆಗೆ, ಅಪಾರ್ಟ್‌ಮೆಂಟ್‌ ನಿವಾಸಿಗಳು ಅಲ್ಲೇ ಲಾಕ್!‌

Chikkodi Lok Sabha Constituency
ಚಿಕ್ಕೋಡಿ23 mins ago

Chikkodi Lok Sabha Constituency: ಜೊಲ್ಲೆ vs ಜಾರಕಿಹೊಳಿ; ಯಾರಿಗೆ ಗೆಲುವಿನ ಹೋಳಿ?

Toll Fee Hike
ದೇಶ29 mins ago

Toll Fee Hike: ವಾಹನ ಸವಾರರಿಗೆ ಮತ್ತೆ ಸುಂಕದ ಬರೆ; ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ದರ ಹೆಚ್ಚಳ

road accident tractor
ಪ್ರಮುಖ ಸುದ್ದಿ56 mins ago

Road Accident: ಮದುವೆ ದಿಬ್ಬಣದ ಟ್ರ್ಯಾಕ್ಟರ್‌ ಪಲ್ಟಿಯಾಗಿ 13 ಸಾವು, ರಾಷ್ಟ್ರಪತಿ ಸಂತಾಪ

Belagavi Lok Sabha Constituency
ಬೆಳಗಾವಿ1 hour ago

Belagavi Lok Sabha Constituency: ಶೆಟ್ಟರ್‌ ವರ್ಸಸ್‌ ಹೆಬ್ಬಾಳ್ಕರ್‌; ಯಾರಿಗೆ ಬೆಳಗಾವಿ ಕುಂದಾ?

Sweating And Body Odor
ಆರೋಗ್ಯ1 hour ago

Sweating And Body Odor: ಅತಿಯಾಗಿ ಬೆವರುತ್ತಿದ್ದೀರಾ? ಈ ಆಹಾರಗಳು ನಿಮ್ಮ ಬೆವರ ದುರ್ಗಂಧಕ್ಕೆ ಮುಖ್ಯ ಕಾರಣ!

karnataka Weather Forecast
ಮಳೆ2 hours ago

Karnataka Weather : ಬೆಂಗಳೂರಿಗೆ ಆವರಿಸಿದ ಮುಂಗಾರು; ಹಲವೆಡೆ ಇಂದು ಗಾಳಿಯೊಂದಿಗೆ ಭಯಂಕರ ಮಳೆ

Hassan Lok Sabha Constituency
ಪ್ರಮುಖ ಸುದ್ದಿ2 hours ago

Hassan Lok Sabha Constituency : ಅತ್ಯಾಚಾರ ಆರೋಪಿ ಪ್ರಜ್ವಲ್​ ರೇವಣ್ಣ ಹಾಸನದಲ್ಲಿ ಮತ್ತೆ ಗೆಲ್ಲುವರೇ?

Ways To Stay Young
ಲೈಫ್‌ಸ್ಟೈಲ್2 hours ago

Ways To Stay Young: ಸಮುದ್ರದಾಳದಲ್ಲಿ ದಿನ ಕಳೆದರೆ ಇಳಿ ವಯಸ್ಸಲ್ಲೂ ಯೌವನ ಮರಳಿ ಬರುತ್ತದೆ!

Tattoo Care
ಆರೋಗ್ಯ3 hours ago

Tattoo Care: ಟ್ಯಾಟೂ ಪ್ರಿಯರೇ ಹುಷಾರ್‌! ಎಚ್‌ಐವಿ, ಕ್ಯಾನ್ಸರ್‌ಗೂ ಇದು ಕಾರಣ ಆಗಬಹುದು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ21 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ7 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌