Ram Mandir: `ರಾಮ ಮಂಗಳಂ' ಭಕ್ತಿಗೀತೆ ರಿಲೀಸ್ ಮಾಡಿದ ಹೊಂಬಾಳೆ ಫಿಲ್ಮ್ಸ್‌! - Vistara News

ರಾಮ ಮಂದಿರ

Ram Mandir: `ರಾಮ ಮಂಗಳಂ’ ಭಕ್ತಿಗೀತೆ ರಿಲೀಸ್ ಮಾಡಿದ ಹೊಂಬಾಳೆ ಫಿಲ್ಮ್ಸ್‌!

Ram Mandir: ರಾಮಮಂದಿರ ಲೋಕಾರ್ಪಣೆ ಸುದಿನವನ್ನು ಒಂದು ದೇಶ, ಒಂದು ಸಂಸ್ಕೃತಿ ಎನ್ನುವ ರೀತಿಯಲ್ಲಿ ರಾಮಮಂಗಳಂ ಗೀತೆ ಸಂಯೋಜಿಸಲಾಗಿದೆ. ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಹೊಂಬಾಳೆ ಫಿಲ್ಮ್ಸ್ ವತಿಯಿಂದ ರಾಮಮಂಗಳಂ ಗೀತೆ ಸಂಯೋಜಿಸಿ, ಅಯೋಧ್ಯೆ ರಾಮನಿಗೆ ಸಮರ್ಪಿಸಿದ್ದಾರೆ.

VISTARANEWS.COM


on

Ram Mandir Ramachandraya Mangalam song released by hombale Films
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ದೇಶದ ಸೂಪರ್ ಹಿಟ್ಸ್ ಸಿನಿಮಾಗಳ ಮೇಕರ್ ವಿಜಯ್ ಕಿರಗಂದೂರು ಮಾಲೀಕತ್ವದ ಹೊಂಬಾಳೆ ಫಿಲ್ಮ್ಸ್ ಅಯೋಧ್ಯೆ ರಾಮನಿಗಾಗಿ “ರಾಮ ಮಂಗಳಂ” (Ram Mandir) ಗಾಯನ ಗುಚ್ಚ ಅರ್ಪಣೆ ಮಾಡಿದೆ. 17ನೇ ಶತಮಾನದ ರಾಮಭಕ್ತ, ಪುರಾಣ ಪ್ರಸಿದ್ಧ ಗಾಯಕ ಶ್ರೀ ಭದ್ರಾಚಲ ರಾಮದಾಸು ರಚಿಸಿದ್ದ `ರಾಮಮಂಗಳಂ’ ಗೀತೆಗೆ ಗಾಯನ ಸ್ವರೂಪ ಕೊಟ್ಟಿದ್ದಾರೆ.

ರಾಮಮಂದಿರ ಲೋಕಾರ್ಪಣೆ ಸುದಿನವನ್ನು ಒಂದು ದೇಶ, ಒಂದು ಸಂಸ್ಕೃತಿ ಎನ್ನುವ ರೀತಿಯಲ್ಲಿ ರಾಮಮಂಗಳಂ ಗೀತೆ ಸಂಯೋಜಿಸಲಾಗಿದೆ. ಕರ್ನಾಟಕದ ಕಲಾಶ್ರೀ ಖ್ಯಾತಿಯ ಪಂಡಿತ್ ಪ್ರವೀಣ್ ಡಿ ರಾವ್ ಸಾರಥ್ಯದಲ್ಲಿ ವಿ.ಎಸ್.ಶೃತಿ, ಅರುಂಧತಿ ವಶಿಷ್ಠಾ, ಪೂಜಾರಾವ್, ಚಿನ್ಮಯಿ ಚಂದ್ರಶೇಖರ್, ನಿಖಿಲ್ ಪಾರ್ಥಸಾರಥಿ, ಸಾಥ್ವಿಕ್ ಚಕ್ರವರ್ತಿ, ಹೆಚ್.ಸಿ.ಭಾರ್ಗವ್, ಮಧ್ವೇಶ್ ಭಾರದ್ವಾಜ್, ಎಂ.ಆರ್.ಅಭಿಷೇಕ್ ಸೇರಿರುವ ಗಾಯಕರ ತಂಡ ರಾಮಮಂಗಳ ಗೀತೆಗೆ ಧ್ವನಿಯಾಗಿದ್ದಾರೆ.

ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಹೊಂಬಾಳೆ ಫಿಲ್ಮ್ಸ್ ವತಿಯಿಂದ ರಾಮಮಂಗಳಂ ಗೀತೆ ಸಂಯೋಜಿಸಿ, ಅಯೋಧ್ಯೆ ರಾಮನಿಗೆ ಸಮರ್ಪಿಸಿದ್ದಾರೆ.

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ಸೋಮವಾರ (ಜನವರಿ 22) ಪ್ರಾಣಪ್ರತಿಷ್ಠೆ ನೆರವೇರಿಸಲಾಗುತ್ತದೆ. ರಾಮಮಂದಿರದ (Ram Mandir) 500 ವರ್ಷಗಳ ಕನಸು ಈಗ ನನಸಾಗುತ್ತಿರುವ ಕಾರಣ ಕೋಟ್ಯಂತರ ಭಾರತೀಯರು ಉದ್ಘಾಟನೆಗಾಗಿ ಕಾಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra ಅವರು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಿದ್ದು, ಸೋಮವಾರ ಸುಮಾರು 5 ಗಂಟೆ ಮೋದಿ ಅವರು ಅಯೋಧ್ಯೆಯಲ್ಲಿಯೇ ಕಾಲ ಕಳೆಯಲಿದ್ದಾರೆ.

ಇದನ್ನೂ ಓದಿ: Ram Mandir: ರಾಮನ ಪ್ರಾಣ ಪ್ರತಿಷ್ಠಾಪನೆ ದಿನ ರಜೆ ಘೋಷಿಸಿ; ಆರ್.‌ ಅಶೋಕ್‌, ಎಚ್‌ಡಿಕೆ ಆಗ್ರಹ

ಪ್ರಾಣ ಪ್ರತಿಷ್ಠಾ ಎಂದರೇನು?

ಪ್ರಾಣ ಪ್ರತಿಷ್ಠಾ ಎನ್ನುವುದು ಹಿಂದೂ ಮತ್ತು ಜೈನ ಧರ್ಮದಲ್ಲಿನ ಜನಪ್ರಿಯ ಆಚರಣೆಯಾಗಿದ್ದು, ದೇವರ ವಿಗ್ರಹವನ್ನು ಪವಿತ್ರಗೊಳಿಸಿದ ನಂತರ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುತ್ತದೆ. ವಿಗ್ರಹಗಳನ್ನು ಹೀಗೆ ಪ್ರತಿಷ್ಠಾಪಿಸುವ ಸಮಯದಲ್ಲಿ ಪುರೋಹಿತರು ವೈದಿಕ ಸ್ತೋತ್ರಗಳ ಪಠಣ ನಡೆಸುವುದು ವಾಡಿಕೆ. ಪ್ರಾಣ್ ಎಂಬ ಪದದ ಅರ್ಥ ಜೀವಶಕ್ತಿ ಮತ್ತು ಪ್ರತಿಷ್ಠಾ ಎಂದರೆ ಸ್ಥಾಪನೆ. ಪ್ರಾಣ ಪ್ರತಿಷ್ಠಾ ಅಥವಾ ಪ್ರತಿಷ್ಠಾಪನಾ ಸಮಾರಂಭ ಎಂದರೆ ವಿಗ್ರಹಕ್ಕೆ ಜೀವಶಕ್ತಿಯನ್ನು ತುಂಬುವ ಆಚರಣೆ ಎಂದು ಹಿರಿಯರು ಹೇಳುತ್ತಾರೆ.

ಪ್ರಾಣ ಪ್ರತಿಷ್ಠಾ ಪ್ರಕ್ರಿಯೆಯ ಮೊದಲು ವಿಗ್ರಹಕ್ಕೆ ಯಾವುದೇ ವಿಶೇಷ ಶಕ್ತಿ ಇರುವುದಿಲ್ಲ ಎನ್ನಲಾಗಿದೆ. ಪ್ರಾಣ ಪ್ರತಿಷ್ಠಾನದ ಮೂಲಕ ವಿಗ್ರಹಕ್ಕೆ ವಿಶೇಷ ಶಕ್ತಿಗಳನ್ನು ತುಂಬಲಾಗುತ್ತದೆ. ಬಳಿಕವೇ ವಿಗ್ರಹ ದೈವಿಕ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ. ಈ ಪ್ರಕ್ರಿಯೆಯ ನಂತರ ಭಕ್ತರು ಈ ವಿಗ್ರಹಗಳನ್ನು ಪೂಜಿಸಬಹುದು ಎಂದು ನಂಬಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಮ ಮಂದಿರ

Ayodhya Ram Mandir: ಅಯೋಧ್ಯೆ ರಾಮಲಲ್ಲಾನ ಸ್ನಾನವನ್ನೇ ಮರೆತ ಎಂಜಿನಿಯರ್‌ಗಳು! ಗರ್ಭಗುಡಿಯಲ್ಲೀಗ ದೊಡ್ಡ ಸಮಸ್ಯೆ!

ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಪ್ರತಿಷ್ಠಾಪಿತವಾಗಿರುವ ರಾಮಲಲ್ಲಾನಿಗೆ ಸ್ನಾನ ಮಾಡಿಸುವುದು ಪುರೋಹಿತರಿಗೆ ದೊಡ್ಡ ಸವಾಲಾಗಿದೆ. ದೇವಾಲಯವನ್ನು ನಿರ್ಮಿಸಿದಾಗ ಎಂಜಿನಿಯರ್‌ಗಳು ಭಗವಾನ್ ರಾಮನ ‘ಸ್ನಾನ’ದ ಬಗ್ಗೆ ಯೋಚಿಸಲೇ ಇಲ್ಲ. ಹಾಗಾಗಿ ದೇವರಿಗೆ ಸ್ನಾನ ಮಾಡಿಸಿದ ನೀರನ್ನು ಹೊರ ಚೆಲ್ಲುವುದು ದೊಡ್ಡ ಸಮಸ್ಯೆಯಾಗಿದೆ.

VISTARANEWS.COM


on

By

Ayodhya Ram Mandir
Koo

ಅಯೋಧ್ಯೆ: ಸುಮಾರು ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಅಯೋಧ್ಯೆ ರಾಮಮಂದಿರದ (Ayodhya Ram Mandir) ಗರ್ಭಗುಡಿಯಲ್ಲಿ (sanctum sanctorum) ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಅರ್ಚಕರಿಗೆ ತಲೆನೋವಾಗಿ ಪರಿಣಮಿಸಿದೆ. ನೀರು ಸಂಗ್ರಹವಾಗಲು ಹೊರಹರಿವು ಇಲ್ಲದ ಕಾರಣ ಒಳಚರಂಡಿ ವ್ಯವಸ್ಥೆಯಲ್ಲಿ (drainage system) ದೋಷಗಳು ಕಾಣಿಸಿಕೊಂಡಿವೆ.

ನಿತ್ಯದ ಪೂಜಾ ಕೈಂಕರ್ಯಗಳಿಗೆ ಬಳಸುವ ನೀರು ಹರಿದು ಹೋಗದೇ ಇರುವುದು ಅರ್ಚಕರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಗೆ ಆತಂಕ ತಂದಿದೆ ಎಂದು ಅರ್ಚಕರೊಬ್ಬರು ತಿಳಿಸಿದರು.

ಈ ಕುರಿತು ಮಾತನಾಡಿದ ಅರ್ಚಕರೊಬ್ಬರ ಪ್ರಕಾರ, ಅಲಂಕಾರ ಸಮಾರಂಭದ ಮೊದಲು ರಾಮ್ ಲಲ್ಲಾನಿಗೆ ಪ್ರತಿದಿನ ಸ್ನಾನ ಮಾಡಿಸಲಾಗುತ್ತದೆ. ಈ ಆಚರಣೆಯಲ್ಲಿ ಮೊದಲು ಸರಯು ನದಿಯ ನೀರಿನಿಂದ ಅಭಿಷೇಕ ಮಾಡಲಾಗುತ್ತದೆ. ಬಳಿಕ ಹಾಲು, ಮೊಸರು, ತುಪ್ಪ ಮತ್ತು ಜೇನುತುಪ್ಪವನ್ನು ಒಳಗೊಂಡಿರುವ ಮಧು ಪರ್ಕ್ ಎಂದು ಕರೆಯಲ್ಪಡುವ ಮಿಶ್ರಣವನ್ನು ಹಾಕಲಾಗುತ್ತದೆ. ಇದರ ಅನಂತರ ರಾಮ್ ಲಲ್ಲಾನನ್ನು ಸರಯುವಿನ ನೀರಿನಿಂದ ಮತ್ತೆ ಸ್ನಾನ ಮಾಡಿಸಲಾಗುತ್ತದೆ. ಈ ಆಚರಣೆಗಳ ಅನಂತರ ನೆಲದ ಮೇಲೆ ಸಂಗ್ರಹವಾಗುವ ನೀರನ್ನು ಹರಿಸುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು. ಪ್ರಸ್ತುತ, ನೀರನ್ನು ಹಿಡಿಯಲು ದೊಡ್ಡ ಪ್ಲೇಟ್ ಅನ್ನು ಇರಿಸಲಾಗುತ್ತದೆ. ಅನಂತರ ಅದನ್ನು ಸಸ್ಯಗಳಿಗೆ ಬಿಡಲಾಗುತ್ತದೆ. ಉಳಿದ ನೀರನ್ನು ಕೈಯಾರೆ ಒರೆಸಿ ಒಣಗಿಸಲಾಗುತ್ತದೆ.

ಈ ಬಗ್ಗೆ ಯಾವ ಎಂಜಿನಿಯರ್‌ಗಳೂ ಯೋಚಿಸಲಿಲ್ಲ!

ರಾಮಲಲ್ಲಾನಿಗೆ ಸ್ನಾನ ಮಾಡಿಸುವುದು ಪುರೋಹಿತರಿಗೆ ನಿರಂತರ ಸವಾಲಾಗಿದೆ. ದೇವಾಲಯವನ್ನು ನಿರ್ಮಿಸಿದಾಗ ಯಾವುದೇ ಎಂಜಿನಿಯರ್ ಭಗವಾನ್ ರಾಮನ ‘ಸ್ನಾನ’ದ ಬಗ್ಗೆ ಯೋಚಿಸಲಿಲ್ಲ ಮತ್ತು ಆದ್ದರಿಂದ ಗರ್ಭಗುಡಿಯಲ್ಲಿ ಯಾವುದೇ ಔಟ್ಲೆಟ್ ಅನ್ನು ರಚಿಸಲಾಗಿಲ್ಲ ಎಂದು ಅರ್ಚಕರು ಹೇಳಿದರು. ಈ ಕುರಿತು ಎಲ್ ಆ್ಯಂಡ್ ಟಿ ಸಂಸ್ಥೆಯ ಎಂಜಿನಿಯರ್‌ಗಳಿಗೆ ಮಾಹಿತಿ ನೀಡಲಾಗಿದ್ದು, ಪರಿಹಾರ ಹುಡುಕುತ್ತಿದ್ದಾರೆ ಎಂದು ಅವರು ತಿಳಿಸಿದರು.

ರಾಮ್ ಲಲ್ಲಾನನ್ನು ಶಾಖದಿಂದ ರಕ್ಷಿಸಲು ಸಾಕಷ್ಟು ಕೂಲಿಂಗ್ ಪರಿಹಾರ, ಎರಡು ಟವರ್ ಏರ್ ಕಂಡಿಷನರ್‌ಗಳನ್ನು ಸ್ಥಾಪಿಸಲಾಗಿದೆ. ಆದರೆ, ಈ ಎಸಿಗಳು ಸಾಕಷ್ಟಿಲ್ಲ ಎಂಬುದು ಸಾಬೀತಾಗಿದೆ. ರಾಮಮಂದಿರದ ಎಂಜಿನಿಯರ್‌ಗಳು ಸಹ ಈ ಸಮಸ್ಯೆಗೆ ಪರಿಹಾರವನ್ನು ಸಕ್ರಿಯವಾಗಿ ಹುಡುಕುತ್ತಿದ್ದಾರೆ ಎಂದು ಅರ್ಚಕರು ಉಲ್ಲೇಖಿಸಿದ್ದಾರೆ.
ಈ ಕುರಿತು ರಾಮಮಂದಿರ ಟ್ರಸ್ಟ್ ಪ್ರತಿಕ್ರಿಯಿಸಲು ನಿರಾಕರಿಸಿದೆ.

ಇದನ್ನೂ ಓದಿ: Pandit Laxmikant Mathuranath Dixit: ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಮಾಡಿದ ಅರ್ಚಕ ವಿಧಿವಶ

ಪರಿಹಾರ ಕಷ್ಟ ಯಾಕೆ?

ತಾಂತ್ರಿಕ ನ್ಯೂನತೆಗಳಿಂದಾಗಿ ಗರ್ಭಗುಡಿಯೊಳಗೆ ಹೆಚ್ಚು ಪರಿಣಾಮಕಾರಿ ತಂಪಾಗಿಸುವ ವ್ಯವಸ್ಥೆಯನ್ನು ಅಳವಡಿಸಲು ಅಸಾಧ್ಯವಾಗಿದೆ. ಸಂಕೀರ್ಣವಾದ ಕೆತ್ತಿದ ಕಲ್ಲುಗಳಿಂದ ನಿರ್ಮಿಸಲಾದ ರಚನೆಯು ಎಸಿ ಅಳವಡಿಕೆಗೆ ಅಥವಾ ಒಳಚರಂಡಿ ವ್ಯವಸ್ಥೆಯನ್ನು ರಚಿಸಲು ಗಮನಾರ್ಹ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಕಲ್ಲುಗಳನ್ನು ಒಡೆಯುವುದು ಗರ್ಭಗುಡಿಯ ಸೌಂದರ್ಯವನ್ನು ಹಾಳುಮಾಡುವುದು ಮಾತ್ರವಲ್ಲದೆ ತಾಂತ್ರಿಕವಾಗಿಯೂ ಇದು ಸವಾಲಾಗಿದೆ. ಏಕೆಂದರೆ ನಿರ್ಮಾಣವು ಸುಲಭವಾಗಿ ಹಾಳುಮಾಡಲು ಸಾಧ್ಯವಾಗದ ಇಂಟರ್ ಲಾಕ್ ಕಲ್ಲುಗಳನ್ನು ಒಳಗೊಂಡಿದೆ.

ರಾಮ ಮಂದಿರ ಟ್ರಸ್ಟ್ ಈ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವಾಗ ಗರ್ಭಗುಡಿಯ ಸೌಂದರ್ಯವನ್ನು ಸಂರಕ್ಷಿಸುವ ಕಷ್ಟಕರವಾದ ಕೆಲಸವನ್ನು ಎದುರಿಸುತ್ತಿದೆ. ಎಂಜಿನಿಯರ್‌ಗಳು ಸಂಭಾವ್ಯ ಪರಿಹಾರಗಳ ಕುರಿತು ಚರ್ಚಿಸುವುದನ್ನು ಮುಂದುವರೆಸಿದ್ದು ಅರ್ಚಕರು ಮತ್ತು ಭಕ್ತರು ಈ ಪೂಜ್ಯತೆಯ ಪವಿತ್ರತೆ ಮತ್ತು ಸಮಗ್ರತೆಯನ್ನು ಕಾಪಾಡುವ ನಿರ್ಣಯಕ್ಕಾಗಿ ಆಶಿಸುತ್ತಿದ್ದಾರೆ ಎಂದು ಅರ್ಚಕರು ಹೇಳಿದ್ದಾರೆ.

Continue Reading

ದೇಶ

Ram Mandir: ರಾಮಮಂದಿರ ಆವರಣದಲ್ಲೇ ಗುಂಡು ತಗುಲಿ ಯೋಧ ಸಾವು; ರಾತ್ರಿ ಏನಾಯ್ತು?

Ram Mandir: ರಾಮಮಂದಿರ ಆವರಣದಲ್ಲಿ ಅರೆ ಸೇನಾಪಡೆ ಸಿಬ್ಬಂದಿಯೊಬ್ಬರು ಗುಂಡು ತಗುಲಿ ಮೃತಪಟ್ಟಿದ್ದಾರೆ. ಆಕಸ್ಮಿಕವಾಗಿ ಯೋಧನ ಬಂದೂಕಿನಿಂದ ಗುಂಡು ಹಾರಿ, ಅದು ಅವರಿಗೇ ತಗುಲಿರುವ ಸಾಧ್ಯತೆ ಇದೆ. ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯೂ ಇದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

VISTARANEWS.COM


on

Ayodhya Ram mandir
Koo

ಅಯೋಧ್ಯೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದ (Ram Mandir) ಆವರಣದಲ್ಲಿ ಮಂಗಳವಾರ ತಡರಾತ್ರಿ ದುರ್ಘಟನೆ ನಡೆದಿದೆ. ರಾಮಮಂದಿರ ಆವರಣದಲ್ಲಿ ಭದ್ರತೆಗಾಗಿ ನಿಯೋಜಿಸಿದ್ದ ಉತ್ತರ ಪ್ರದೇಶ ವಿಶೇಷ ಭದ್ರತಾ ಪಡೆ (UPSSF) (ಅರೆ ಮಿಲಿಟರಿ ಪಡೆ) ಯೋಧರೊಬ್ಬರಿಗೆ ಗುಂಡು ತಗಲು ಅವರು ಮೃತಪಟ್ಟಿದ್ದಾರೆ. ಯೋಧನ ಬಂದೂಕಿನಿಂದಲೇ ಆಕಸ್ಮಿಕವಾಗಿ ಗುಂಡು ಹಾರಿದ್ದು, ಅದು ಅವರಿಗೇ ತಗುಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದ ಅಂಬೇಡ್ಕರ್‌ ನಗರದ ನಿವಾಸಿಯಾದ ಶತ್ರುಘ್ನ ವಿಶ್ವಕರ್ಮ (25) ಎಂಬ ಯೋಧ ಮೃತಪಟ್ಟಿದ್ದಾರೆ. ಇವರು ಯುಪಿಎಸ್‌ಎಸ್‌ಎಫ್‌ನ ಪೇದೆಯಾಗಿದ್ದರು. ತಡರಾತ್ರಿ ಇವರ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಅದು ಅವರಿಗೇ ತಗುಲಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದ. ಆದಾಗ್ಯೂ, ಆಕಸ್ಮಿಕವಾಗಿ ಗುಂಡು ಹಾರಿದೆಯೋ ಅಥವಾ ಅವರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ayodhya Ram Mandir

ಫೈಜಾಬಾದ್‌ ವಲಯದ ಐಜಿಪಿ ಪ್ರವೀಣ್‌ ಕುಮಾರ್‌ ಅವರು ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ. “ಆಕಸ್ಮಿಕವಾಗಿ ಯೋಧನ ಬಂದೂಕಿನಿಂದ ಗುಂಡು ಹಾರಿ, ಅದು ಅವರಿಗೇ ತಗುಲಿರುವ ಸಾಧ್ಯತೆ ಇದೆ. ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯೂ ಇದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಆದಾಗ್ಯೂ, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂಬುದಾಗಿ ಅವರು ತಿಳಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಆ ವರದಿಯೂ ಬರಬೇಕಿದೆ ಎನ್ನಲಾಗಿದೆ.

ರಾಮಮಂದಿರ ಆವರಣದ, ಮಂದಿರದಿಂದ 150 ಮೀಟರ್‌ ದೂರವಿರುವ ಕೋಟೇಶ್ವರ ದೇವಾಲಯದ ಎದುರು ವಿಐಪಿ ಗೇಟ್‌ ನಿರ್ಮಿಸಲಾಗುತ್ತಿದೆ. ಅಲ್ಲಿ ಶತ್ರುಘ್ನ ವಿಶ್ವಕರ್ಮ ಅವರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಹಲವು ಭದ್ರತಾ ಸಿಬ್ಬಂದಿ ಕೂಡ ರಾತ್ರಿ ಇದ್ದರು. ಇದೇ ವೇಳೆ ಗುಂಡು ಹಾರಿದೆ ಎಂದು ತಿಳಿದುಬಂದಿದೆ. ಅಂಬೇಡ್ಕರ್‌ ನಗರದ ಕೈಜ್‌ಪುರ ಗ್ರಾಮದವರಾದ ಶತ್ರುಘ್ನ ವಿಶ್ವಕರ್ಮ ಅವರು 2019ರಲ್ಲಿ ಯುಪಿಎಸ್‌ಎಸ್‌ಎಫ್‌ಗೆ ಸೇರ್ಪಡೆಯಾಗಿದ್ದರು. ಇತ್ತೀಚೆಗೆ ಅವರನ್ನು ರಾಮಮಂದಿರದ ಭದ್ರತೆಗೆ ನಿಯೋಜಿಸಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: Ram Mandir: ರಾಮಮಂದಿರ ಸ್ಫೋಟಿಸುವ ಉಗ್ರರ ಬೆದರಿಕೆ ಆಡಿಯೊ ವೈರಲ್; ಅಯೋಧ್ಯೆಯಲ್ಲಿ ಹೈ ಅಲರ್ಟ್‌

Continue Reading

ದೇಶ

Ram Mandir: ರಾಮಮಂದಿರ ಸ್ಫೋಟಿಸುವ ಉಗ್ರರ ಬೆದರಿಕೆ ಆಡಿಯೊ ವೈರಲ್; ಅಯೋಧ್ಯೆಯಲ್ಲಿ ಹೈ ಅಲರ್ಟ್‌

Ram Mandir: ಅಯೋಧ್ಯೆಯಲ್ಲಿರುವ ರಾಮಮಂದಿರವನ್ನು ಸ್ಫೋಟಿಸುವ ಕುರಿತು ಜೈಶೆ ಮೊಹಮ್ಮದ್‌ ಉಗ್ರರು ಬೆದರಿಕೆ ಹಾಕಿದ ಆಡಿಯೊ ವೈರಲ್‌ ಆಗಿದೆ. ಇದರ ಬೆನ್ನಲ್ಲೇ, ರಾಮಮಂದಿರದ ಸುತ್ತಮುತ್ತ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. ರಾಮನಗರಿಯ ಎಲ್ಲೆಡೆ ವಾಹನಗಳ ತಪಾಸಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

VISTARANEWS.COM


on

NCERT Textbooks
Koo

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು (Ram Mandir) ಸ್ಫೋಟಿಸಲಾಗುವುದು ಎಂದು ಜೈಶೆ ಮೊಹಮ್ಮದ್‌ ಉಗ್ರ ಸಂಘಟನೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಕಟ್ಟೆಚ್ಚರ ಘೋಷಣೆ ಮಾಡಲಾಗಿದೆ. ರಾಮಮಂದಿರದ ಮೇಲೆ ಬಾಂಬ್‌ ದಾಳಿ‌ (Bomb Threat) ಮಾಡಲಾಗುವುದು ಎಂದು ಜೈಶೆ ಮೊಹಮ್ಮದ್‌ ಉಗ್ರ ಸಂಘಟನೆಯ (Jaish-e-Mohammed) ಆಡಿಯೊ ವೈರಲ್‌ ಆದ ಬೆನ್ನಲ್ಲೇ, ರಾಮಮಂದಿರದ ಸುತ್ತಲೂ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ.

ರಾಮಮಂದಿರ ಸ್ಫೋಟಿಸುವ ಕುರಿತು ಜೈಶೆ ಮೊಹಮ್ಮದ್‌ ಉಗ್ರರು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ರಾಮಮಂದಿರ ಸುತ್ತಮುತ್ತ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಸಿಟಿವಿಗಳ ಮೂಲಕ ಶಂಕಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇರಿಸಲಾಗಿದೆ. ಬಾಂಬ್‌ ನಿಷ್ಕ್ರಿಯ ದಳ, ಶ್ವಾನ ದಳ ಕೂಡ ಅಯೋಧ್ಯೆಯಲ್ಲಿ ಹೆಚ್ಚು ಅಲರ್ಟ್‌ ಆಗಿವೆ. ಅಯೋಧ್ಯೆಯ ಇಂಚಿಂಚೂ ಪ್ರದೇಶದ ಮೇಲೆ ಭದ್ರತಾ ಸಿಬ್ಬಂದಿಯು ನಿಗಾ ಇರಿಸಿದ್ದಾರೆ. ವಾಹನಗಳ ತಪಾಸಣೆಯೂ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರು 2024ರ ಜನವರಿ 22ರಂದು ರಾಮಮಂದಿರದಲ್ಲಿ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಇದಾದ ಬಳಿಕ ದೇಶ-ವಿದೇಶಗಳಿಂದ ರಾಮನ ಭಕ್ತರು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ನಿತ್ಯ ಸರಾಸರಿ ಒಂದು ಲಕ್ಷಕ್ಕೂ ಅಧಿಕ ಮಂದಿ ಅಯೋಧ್ಯೆಗೆ ಭೇಟಿ ನೀಡಿ, ರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ. ರಾಮಮಂದಿರ ನಿರ್ಮಾಣದ ಬಳಿಕ ಅಯೋಧ್ಯೆಯು ದೇಶದ ಪ್ರಮುಖ ಯಾತ್ರಾಸ್ಥಳವಾಗಿ ಬದಲಾಗಿದೆ. ಇದರ ಬೆನ್ನಲ್ಲೇ, ರಾಮಮಂದಿರವನ್ನು ಸ್ಫೋಟಿಸುವ ಕುರಿತು ಉಗ್ರರು ಬೆದರಿಕೆ ಹಾಕಿದ್ದಾರೆ.

ಜಮ್ಮು-ಕಾಶ್ಮೀರದ ಮೂರು ಜಿಲ್ಲೆಗಳಲ್ಲಿ ಕಳೆದ ಒಂದು ವಾರದಲ್ಲಿಯೇ ಉಗ್ರರು ದಾಳಿ ನಡೆಸಿದ್ದಾರೆ. ರಿಯಾಸಿ ಜಿಲ್ಲೆಯ ಮೂಲಕ ವೈಷ್ಣೋದೇವಿ ಯಾತ್ರೆಗೆ ತೆರಳುತ್ತಿದ್ದ ಹಿಂದು ಯಾತ್ರಿಕರ ವಾಹನದ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಲಷ್ಕರೆ ತಯ್ಬಾ ಉಗ್ರ ಸಂಘಟನೆಯು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ದೋಡಾ ಹಾಗೂ ಕಥುವಾ ಜಿಲ್ಲೆಯಲ್ಲಿಯೂ ಉಗ್ರರು ದಾಳಿ ನಡೆಸಿದ್ದಾರೆ. ಹಾಗಾಗಿ, ಕಾಶ್ಮೀರದಲ್ಲಿಯೂ ಹೈ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ನರೇಂದ್ರ ಮೋದಿ ಅವರೇ ಖುದ್ದಾಗಿ ಸಭೆ ನಡೆಸಿ, ಉಗ್ರರಿಗೆ ತಿರುಗೇಟು ನೀಡಲು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Ram Mandir: ರಾಮಮಂದಿರ ‘ಯೂಸ್‌ಲೆಸ್’ ಎಂದ ಸಮಾಜವಾದಿ ಪಕ್ಷದ ನಾಯಕ; ಬಿಜೆಪಿ ಆಕ್ರೋಶ

Continue Reading

ರಾಮ ಮಂದಿರ

Ayodhya Ram mandir: ಈವರೆಗೆ ಅಯೋಧ್ಯೆ ರಾಮಲಲ್ಲಾನ ದರ್ಶನ ಮಾಡಿದವರ ಸಂಖ್ಯೆ 1.5 ಕೋಟಿ!

Ayodhya Ram mandir: ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಜನ್ಮಭೂಮಿ ದೇವಾಲಯದಲ್ಲಿ ಜನವರಿ 22ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಸರಿಸುಮಾರು 1.5 ಕೋಟಿ ಜನರು ರಾಮ್ ಲಲ್ಲಾನ ದರ್ಶನ ಪಡೆದಿದ್ದಾರೆ. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಜನರು ರಾಮಲಲ್ಲಾನ ದರ್ಶನ ಪಡೆಯಲು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ.

VISTARANEWS.COM


on

By

Ayodhya Ram mandir
Koo

ಅಯೋಧ್ಯೆ: ಭಗವಾನ್ ಶ್ರೀರಾಮನ (sriram) ಜನ್ಮ ಸ್ಥಳವಾದ ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram mandir) ರಾಮಲಲ್ಲಾನ (ramlalla) ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಪ್ರತಿನಿತ್ಯ ಸುಮಾರು ಒಂದು ಲಕ್ಷ ಮಂದಿ ಭೇಟಿ ನೀಡುತ್ತಿದ್ದಾರೆ. ದೇವಾಲಯ ಉದ್ಘಾಟನೆಯಾದ ಬಳಿಕ ಈವರೆಗೆ ಸುಮಾರು 1.5 ಕೋಟಿ ಮಂದಿ ದೇವಸ್ಥಾನಕ್ಕೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆದಿದ್ದಾರೆ ಎಂದು ದೇವಾಲಯದ ಟ್ರಸ್ಟ್‌ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ (Shri Ram Janmabhoomi Theertha Kshetra Trust) ಪ್ರಧಾನ ಕಾರ್ಯದರ್ಶಿ (Principal Secretary) ಚಂಪತ್ ರಾಯ್‌ (Champat Rai), ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಜನ್ಮಭೂಮಿ ದೇವಾಲಯದಲ್ಲಿ ಜನವರಿ 22ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಸರಿಸುಮಾರು 1.5 ಕೋಟಿ ಜನರು ರಾಮ್ ಲಲ್ಲಾನ ದರ್ಶನ ಪಡೆದಿದ್ದಾರೆ. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಜನರು ರಾಮಲಲ್ಲಾನ ದರ್ಶನ ಪಡೆಯಲು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಿದರು.

ಹೊಸದಾಗಿ ನಿರ್ಮಿಸಲಾದ ಭವ್ಯವಾದ ರಾಮಜನ್ಮಭೂಮಿ ದೇವಾಲಯದಲ್ಲಿ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಅವರು ರಚಿಸಿರುವ 51 ಇಂಚು ಎತ್ತರದ ಭಗವಾನ್ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾ ಜನವರಿ 22ರಂದು ಎಲ್ಲಾ ಪಂಗಡಗಳಿಗೆ ಸೇರಿದ ಸುಮಾರು 8,000 ಗಣ್ಯರ ಸಮ್ಮುಖದಲ್ಲಿ ನಡುವೆ ನಡೆಯಿತು. ಪ್ರಾಣ ಪ್ರತಿಷ್ಠಾ ಸಮಾರಂಭದ ವಿಧಿವಿಧಾನಗಳ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದರು.

ಇದನ್ನೂ ಓದಿ: Ram Mandir : ಇಲ್ಲಿದೆ ನೋಡಿ ಬಾಲ ರಾಮನ ಕಣ್ಣಿಗೆ ಜೀವಕಳೆ ನೀಡಿದ್ದ ಬಂಗಾರದ ಉಳಿ, ಬೆಳ್ಳಿ ಸುತ್ತಿಗೆಯ ಚಿತ್ರ


ಮುಂದಿನ ಕೆಲಸ?

ಜನ್ಮಭೂಮಿ ದೇವಾಲಯದ ಸುತ್ತಲೂ 14 ಅಡಿ ಅಗಲದ ಭದ್ರತಾ ಗೋಡೆಯನ್ನು ನಿರ್ಮಿಸುವುದಾಗಿ ದೇವಾಲಯದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಘೋಷಿಸಿದರು. ಇದನ್ನು ‘ಪರ್ಕೋಟಾ’ ಎಂದು ಕರೆಯಲಾಗುತ್ತದೆ. ರಾಮ್ ಲಲ್ಲಾನ ಪ್ರಾಣ ಪ್ರತಿಷ್ಠೆ ನಡೆದ ದೇಗುಲದ ನೆಲ ಮಹಡಿ ಮಾತ್ರ ಪೂರ್ಣಗೊಂಡಿದ್ದು, ಮೊದಲ ಅಂತಸ್ತಿನ ಕಾಮಗಾರಿ ನಡೆಯುತ್ತಿದೆ ಎಂದು ರಾಯ್‌ ಹೇಳಿದರು.

ಹಲವು ಸಣ್ಣ ದೇಗುಲಗಳು

ರಾಮ ಮಂದಿರದ ಆವರಣದಲ್ಲಿ ಶಿವನಿಂದ ಹಿಡಿದು ಹನುಮಾನ್ ಗಢಿವರೆಗೆ ಆರು ಸಣ್ಣಸಣ್ಣ ದೇವಾಲಯಗಳನ್ನು ನಿರ್ಮಿಸಬೇಕಿದೆ. ಒಮ್ಮೆ ಪೂರ್ಣಗೊಂಡ ಅನಂತರ, ರಾಮ ಮಂದಿರದ ಆವರಣವು ಏಕಕಾಲಕ್ಕೆ 25,000 ಯಾತ್ರಾರ್ಥಿಗಳಿಗೆ ಅವಕಾಶ ಕಲ್ಪಿಸುತ್ತದೆ ಎಂದು ರಾಯ್‌ ತಿಳಿಸಿದರು.


ಪರ್ಕೋಟಾ ವಿಶೇಷತೆ ಏನು?

ದೇವಾಲಯದ ಸುತ್ತ ನಿರ್ಮಿಸಲಾಗುವ ಪರ್ಕೋಟಾ ಬಹುಪಯೋಗಿಯಾಗಿದ್ದು, ಅಲ್ಲಿ 6 ದೇವಾಲಯಗಳನ್ನು ನಿರ್ಮಿಸಲಾಗುವುದು. ಶಂಕರ, ಸೂರ್ಯ, ಹನುಮಾನ್, ಮಾ ಅನ್ನಪೂರ್ಣ, ಮಹರ್ಷಿ ವಾಲ್ಮೀಕಿ, ವಶಿಷ್ಠ, ವಿಶ್ವಾಮಿತ್ರ ಮತ್ತು ಅಗಸ್ತ್ಯ ರ ದೇವಾಲಯವನ್ನು ಆವರಣದಲ್ಲಿ ನಿರ್ಮಿಸಲಾಗುತ್ತದೆ. ನಿಶಾದ್ ರಾಜ್, ಮಾ ಶಬರಿ, ಮಾ ಅಹಲ್ಯಾ ಮತ್ತು ಜಟಾಯು ದೇವಾಲಯಗಳನ್ನು ನಿರ್ಮಿಸಲಾಗುವುದು ಎಂದರು.

ದೇವಾಲಯದ ಆವರಣದಲ್ಲಿರುವ 600 ಕ್ಕೂ ಹೆಚ್ಚು ಗಿಡಗಳನ್ನು ಸಂರಕ್ಷಿಸಲಾಗಿದೆ. ನೀರು ಸಂಸ್ಕರಣಾ ಘಟಕ, ಒಳಚರಂಡಿ ಸಂಸ್ಕರಣಾ ಘಟಕವೂ ದೇವಾಲಯ ಆವರಣದಲ್ಲಿ ಇದೆ. ಈ ದೇವಾಲಯವು ಸ್ವತಃ ಸ್ವತಂತ್ರವಾಗಿರುತ್ತದೆ ಮತ್ತು ಅಯೋಧ್ಯೆಯ ಜನರು ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ದೇವಾಲಯದ ಅಗತ್ಯವನ್ನು ಪೂರೈಸಲು ಯಾವುದೇ ಸಮಸ್ಯೆ, ಇಲ್ಲ ಎಂದು ತಿಳಿಸಿದರು.

ರಾಮ ನವಮಿ ಆಚರಣೆ

ರಾಮ ಮಂದಿರದಲ್ಲಿ ಏಪ್ರಿಲ್ 17ರಂದು ಅತ್ಯಂತ ವೈಭವದಿಂದ ರಾಮನ ಜನ್ಮ ದಿನವನ್ನು ಆಚರಿಸಲಾಯಿತು. ಭವ್ಯವಾದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಅನಂತರ ಮೊದಲ ಬಾರಿಗೆ ರಾಮನಿಗೆ ‘ಸೂರ್ಯ ತಿಲಕ’ ವನ್ನು ಇಡಲಾಯಿತು. ದೇವಾಲಯವು ಆಗ 19 ಗಂಟೆಗಳ ಕಾಲ ತೆರೆದಿತ್ತು. ಆಹಾರಕ್ರಮಕ್ಕೆ 56 ಖಾದ್ಯಗಳನ್ನು ನೀಡಲಾಯಿತು ಎಂದು ಮಾಹಿತಿ ನೀಡಿದರು.

ನಾಗರ ಶೈಲಿ

ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ಮೂರು ಅಂತಸ್ತಿನ ರಾಮ ಜನ್ಮಭೂಮಿ ಮಂದಿರವು ದೇವಾಲಯದ ಪಟ್ಟಣದಲ್ಲಿ 2.7 ಎಕರೆ ಭೂಮಿಯಲ್ಲಿ 380 ಅಡಿ ಉದ್ದ , 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ. ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ. ಐದು ಮಂಟಪಗಳಲ್ಲಿ ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮತ್ತು ಕೀರ್ತನ ಮಂಟಪಗಳು ಸೇರಿವೆ. ಕಂಬ ಮತ್ತು ಗೋಡೆಗಳ ಮೇಲೆ ಹಿಂದೂ ದೇವಾನುದೇವತೆಗಳ ಸಂಕೀರ್ಣವಾದ ಕೆತ್ತನೆಯ ಚಿತ್ರಣಗಳನ್ನು ಒಳಗೊಂಡಿದೆ.

Continue Reading
Advertisement
LKG UKG in Anganwadis
ಪ್ರಮುಖ ಸುದ್ದಿ12 seconds ago

LKG UKG in Anganwadis: ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸಿಎಂ ಸಹಮತ

Monsoon Trench Coat Fashion
ಫ್ಯಾಷನ್10 mins ago

Monsoon Trench Coat Fashion: ಮಾನ್ಸೂನ್‌ಗೂ ಕಾಲಿಟ್ಟ ಟ್ರೆಂಚ್‌ ಕೋಟ್‌ ಫ್ಯಾಷನ್‌!

Kamal Haasan predicts Deepika Padukone baby choose cinema career
ಟಾಲಿವುಡ್25 mins ago

Kamal Haasan: ಮುಂದೊಂದು ದಿನ ದೀಪಿಕಾ ಮಗು ಸಿನಿಮಾ ಮಾಡಬಹುದು ಎಂದು ಭವಿಷ್ಯ ನುಡಿದ ಕಮಲ್‌ ಹಾಸನ್‌!

tumkur Shoot out
ಕ್ರೈಂ32 mins ago

Tumkur Shoot out : ತುಮಕೂರಿನಲ್ಲಿ ಸದ್ದು ಮಾಡಿದ ಪೊಲೀಸ್ ತುಪಾಕಿ; ಸರಗಳ್ಳನ ಹೆಡೆಮುರಿ ಕಟ್ಟಿದ ಖಾಕಿ

LKG UKG In Govt Schools
ಕರ್ನಾಟಕ38 mins ago

LKG UKG In Govt Schools: ಅಂಗನವಾಡಿ ನೌಕರರ ಧರಣಿ; ಬೇಡಿಕೆಗಳನ್ನು ಸಿಎಂ ಗಮನಕ್ಕೆ ತಂದ ಲಕ್ಷ್ಮಿ ಹೆಬ್ಬಾಳ್ಕರ್‌

Sex Doll
ದೇಶ45 mins ago

AI Sex Dolls: ಶೀಘ್ರವೇ ಬರಲಿವೆ ಎಐ ಆಧಾರಿತ ‘ಸೆಕ್ಸ್‌’ ಬೊಂಬೆಗಳು; ನೈಜ ‘ಸುಖ’ಕ್ಕೆ ಇನ್ನು ಮನುಷ್ಯರೇ ಬೇಕಿಲ್ಲ!

Job Alert
ಉದ್ಯೋಗ47 mins ago

Job Alert: ಗಮನಿಸಿ; GTTCಯಲ್ಲಿನ ಹುದ್ದೆಗೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ; ಇಲ್ಲಿದೆ ಪರಿಷ್ಕೃತ ವೇಳಾಪಟ್ಟಿ

Unusual Story
Latest47 mins ago

Unusual Story: 15 ವರ್ಷದ ವಿದ್ಯಾರ್ಥಿಯಿಂದ ಶಿಕ್ಷಕಿ ಗರ್ಭಿಣಿ! ಜೈಲು ಶಿಕ್ಷೆ

Suraj Revanna Case
ಕರ್ನಾಟಕ1 hour ago

Suraj Revanna Case: ಅಣ್ಣ ಸೂರಜ್‌ 8 ದಿನ ಸಿಐಡಿ ಕಸ್ಟಡಿಗೆ; ತಮ್ಮ ಪ್ರಜ್ವಲ್‌ ನ್ಯಾಯಾಂಗ ಬಂಧನಕ್ಕೆ!

contaminated water
ಬೆಳಗಾವಿ1 hour ago

Contaminated Water : ಬೆಳಗಾವಿ, ಕೋಲಾರದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ3 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ4 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌