MS Dhoni : ಧ್ವಜಾರೋಹಣ ಮಾಡಿ ಗಣರಾಜ್ಯೋತ್ಸವ ಆಚರಿಸಿದ ಎಂಎಸ್ ಧೋನಿ - Vistara News

ಕ್ರೀಡೆ

MS Dhoni : ಧ್ವಜಾರೋಹಣ ಮಾಡಿ ಗಣರಾಜ್ಯೋತ್ಸವ ಆಚರಿಸಿದ ಎಂಎಸ್ ಧೋನಿ

MS Dhoni : ಮಹೇಂದ್ರ ಸಿಂಗ್ ಧೋನಿ ಮುಂದಿನ ಐಪಿಎಲ್​ ನಲ್ಲಿ ಆಡಲು ಸಜ್ಜಾಗಿದ್ದಾರೆ ಹಾಗೂ ಅವರಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

VISTARANEWS.COM


on

Mahendra Singh Dhoni
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ (MS Dhoni) ಅವರು 75ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಅವರು ಸಂಭ್ರಮಿಸಿದ್ದಾರೆ. ಸಿಎಸ್​ಕೆ ನಾಯಕ ಐಪಿಎಲ್ 2024ರಲ್ಲಿ ಕ್ರಿಕೆಟ್ ಆಡಲು ಮರಳಲಿದ್ದಾರೆ. ಇದು ಅವರ ಕೊನೆಯ ಐಪಿಎಲ್ ಸೀಸನ್ ಆಗಿರಬಹುದು ಎಂದು ಹೇಳಲಾಗಿದೆ.

ಎಂ.ಎಸ್.ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್​​ ಅವರು ವಿಡಿಯೊ ಶೇರ್ ಮಾಡಿದ್ದು, ರಾಷ್ಟ್ರಧ್ವಜದ ಮುಂದೆ ನಿಂತಿರುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 5ನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ನಾಟಕೀಯ ಫೈನಲ್​ನಲ್ಲಿ ರವೀಂದ್ರ ಜಡೇಜಾ ಗೆಲುವಿನ ರನ್ ಗಳಿಸಿದ್ದರು. 42ರ ಹರೆಯದ ಧೋನಿ ಆರನೇ ಐಪಿಎಲ್ ಪ್ರಶಸ್ತಿಗಾಗಿ ಸಿಎಸ್​​ಕೆ ತಂಡವನ್ನು ಮುನ್ನಡೆಸಲಿದ್ದಾರೆ.

ಮೊಣಕಾಲು ಸಮಸ್ಯೆಯಿಂದ ಇಡೀ ಐಪಿಎಲ್ 2023ರ ಆವೃತ್ತಿಯಲ್ಲಿ ಆಡಿದ್ದ ಧೋನಿ ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಐಪಿಎಲ್ 2023 ಮುಗಿದ ನಂತರ ಅವರು ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮುಂದಿನ ಐಪಿಎಲ್ ಋತುವಿಗೆ ಮುಂಚಿತವಾಗಿ ಫಿಟ್ ಆಗಲು ಅವರಿಗೆ ಸಾಕಷ್ಟು ಸಮಯವಿದೆ.

ಐಪಿಎಲ್ 2024ರಲ್ಲಿ ಧೋನಿ ಆಡಲಿದ್ದಾರೆ.

ಐಪಿಎಲ್ 2023 ಫೈನಲ್ ನಂತರ ಭಾವನಾತ್ಮಕ ಭಾಷಣದಲ್ಲಿ ಧೋನಿ ಭಾರತೀಯ ಅಭಿಮಾನಿಗಳು ಮತ್ತು ಸಿಎ ಅಭಿಮಾನಿಗಳಿಗಾಗಿ ಮತ್ತೊಂದು ಋತುವಿನಲ್ಲಿ ಆಡುವುದಾಗಿ ಭರವಸೆ ನೀಡಿದ್ದರು. ಐಪಿಎಲ್ 2024ರ ಹರಾಜಿಗೆ ಮುಂಚಿತವಾಗಿ ಅವರನ್ನು ಸಿಎಸ್​ಕೆ ಉಳಿಸಿಕೊಂಡಿದೆ.

ಇದನ್ನೂ ಓದಿ : Ind vs Eng : ಮೊದಲ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ ಭಾರತಕ್ಕೆ 127 ರನ್ ಮುನ್ನಡೆ

ನನ್ನ ನಿವೃತ್ತಿಯನ್ನು ಘೋಷಿಸಲು ಇದು ಅತ್ಯುತ್ತಮ ಸಮಯ. ಆದರೆ ಈ ವರ್ಷ ನಾನು ಎಲ್ಲೇ ಇದ್ದರೂ ನನಗೆ ಪ್ರೀತಿ ದೊರಕಿದೆ. ಅದಕ್ಕಾಗಿ ಧನ್ಯವಾದಗಳು. ಆದರೆ ನನಗೆ ಕಠಿಣ ವಿಷಯವೆಂದರೆ ಇನ್ನೂ ಒಂಬತ್ತು ತಿಂಗಳು ಕಷ್ಟಪಟ್ಟು ಕೆಲಸ ಮಾಡುವುದು. ಅವೆಲ್ಲವೂ ನನ್ನ ದೇಹದ ಮೇಲೆ ಅವಲಂಬಿತವಾಗಿರುತ್ತದೆ. ನಾನು ನಿರ್ಧರಿಸಲು 6-7 ತಿಂಗಳುಗಳಿವೆ, “ಎಂದು ಕಳೆದ ಋತುವಿನ ಅಂತಿಮ ಮಾತುಕತೆಯಲ್ಲಿ ಧೋನಿ ಹೇಳಿದ್ದರು.

ಐಪಿಎಲ್ 2024 ರ ಹರಾಜಿಗೆ ಮುಂಚಿತವಾಗಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಸೇರಿದಂತೆ ಎಂಟು ಆಟಗಾರರನ್ನು ಸಿಎಸ್ಕೆ ಬಿಡುಗಡೆ ಮಾಡಿತ್ತು. ಉಳಿಸಿಕೊಂಡ ಆಟಗಾರರಲ್ಲಿ ಮೊಯೀನ್ ಅಲಿ, ದೀಪಕ್ ಚಹರ್, ಡೆವೊನ್ ಕಾನ್ವೇ, ತುಷಾರ್ ದೇಶಪಾಂಡೆ, ಶಿವಂ ದುಬೆ, ಋತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಖೇಶ್ ಚೌಧರಿ, ಮಥೀಶಾ ಪತಿರಾನಾ, ಅಜಿಂಕ್ಯ ರಹಾನೆ, ಶೇಕ್ ರಶೀದ್, ಮಿಚೆಲ್ ಸ್ಯಾಂಟ್ನರ್, ಸಿಮರ್ಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಾನಾ ಇದ್ದರು. ರವಿನ್ ರವೀಂದ್ರ ಮತ್ತು ಡ್ಯಾರಿಲ್ ಮಿಚೆಲ್ ಸೇರಿದಂತೆ ಆರು ಆಟಗಾರರನ್ನು ಸಿಎಸ್​ಕೆ ಹರಾಜಿನಲ್ಲಿ ಖರೀದಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ

ಎಂಎಸ್ ಧೋನಿ (ನಾಯಕ), ಮೊಯೀನ್ ಅಲಿ, ದೀಪಕ್ ಚಹರ್, ಡೆವೊನ್ ಕಾನ್ವೇ, ತುಷಾರ್ ದೇಶಪಾಂಡೆ, ಶಿವಂ ದುಬೆ, ಋತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಖೇಶ್ ಚೌಧರಿ, ಮಥೀಶಾ ಪತಿರಾನಾ, ಅಜಿಂಕ್ಯ ರಹಾನೆ, ಶೇಖ್ ರಶೀದ್, ಮಿಚೆಲ್ ಸ್ಯಾಂಟ್ನರ್, ಸಿಮರ್ಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡ್ಯಾರಿಲ್ ಮಿಚೆಲ್, ಸಮೀರ್ ರಿಜ್ವಿ.

ಸಿಎಸ್​ಕೆ ಆಟಗಾರರು:

ರಚಿನ್ ರವೀಂದ್ರ (1.8 ಕೋಟಿ ರೂ.), ಶಾರ್ದೂಲ್ ಠಾಕೂರ್ (4 ಕೋಟಿ ರೂ.), ಡ್ಯಾರಿಲ್ ಮಿಚೆಲ್ (14 ಕೋಟಿ ರೂ.), ಸಮೀರ್ ರಿಜ್ವಿ (8.40 ಕೋಟಿ ರೂ.), ಮುಸ್ತಾಫಿಜುರ್ ರೆಹಮಾನ್ (2 ಕೋಟಿ ರೂ.), ಅವನೀಶ್ ರಾವ್ ಅರವೇಲಿ (20 ಲಕ್ಷ ರೂ.)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IND vs BAN: ಇಂದು ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯ; ಕೊಹ್ಲಿ ಆಡುವುದು ಅನುಮಾನ

IND vs BAN: ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್​ ಆಡುತ್ತಿರುವ ಕಾರಣ ಟೀಮ್​ ಇಂಡಿಯಾಕ್ಕೆ ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳವ ಸವಾಲು ದೊಡ್ಡ ಮಟ್ಟದಲ್ಲಿರಲಿದೆ. ಈಗಾಗಲೇ ನಾಯಕ ರೋಹಿತ್​ ಶರ್ಮ ಕೂಡ ಈ ಮಾತನ್ನು ಒಪ್ಪಿಕೊಂಡಿದ್ದಾರೆ. ಭಾರತದ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಸಾರವಾದರೂ ಕೂಡ ಈ ಪಂದ್ಯ ಅಮೆರಿಕದಲ್ಲಿ ಹಗಲು ಪಂದ್ಯವಾಗಿರಲಿದೆ.

VISTARANEWS.COM


on

IND vs BAN
Koo

ನ್ಯೂಯಾರ್ಕ್​: ಒಂಬತ್ತನೇ ಆವೃತ್ತಿಯ ಟಿ20 ವಿಶ್ವಕಪ್‌(T20 World Cup 2024) ಕ್ರಿಕೆಟ್‌ ಪಂದ್ಯಾವಳಿಗೆ ಕ್ಷಣಗಣನೆ ಮೊದಲ್ಗೊಂಡಿದೆ. ಇಂದು(ಶನಿವಾರ) ನಡೆಯುವ ಅಭ್ಯಾಸ ಪಂದ್ಯದಲ್ಲಿ ಭಾರತ(IND vs BAN) ತಂಡ ನೆರೆಯ ಬಾಂಗ್ಲಾದೇಶ(IND vs BAN Warm-up Match) ವಿರುದ್ಧ ಕಣಕ್ಕಿಳಿಯಲಿದೆ. ನ್ಯೂಯಾರ್ಕ್​ನಲ್ಲಿ ಈ ಪಂದ್ಯ ನಡೆಯಲಿದೆ.

ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್​ ಆಡುತ್ತಿರುವ ಕಾರಣ ಟೀಮ್​ ಇಂಡಿಯಾಕ್ಕೆ ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳವ ಸವಾಲು ದೊಡ್ಡ ಮಟ್ಟದಲ್ಲಿರಲಿದೆ. ಈಗಾಗಲೇ ನಾಯಕ ರೋಹಿತ್​ ಶರ್ಮ ಕೂಡ ಈ ಮಾತನ್ನು ಒಪ್ಪಿಕೊಂಡಿದ್ದಾರೆ. ಭಾರತದ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಸಾರವಾದರೂ ಕೂಡ ಈ ಪಂದ್ಯ ಅಮೆರಿಕದಲ್ಲಿ ಹಗಲು ಪಂದ್ಯವಾಗಿರಲಿದೆ.

ಐಪಿಎಲ್​ ಆಡಿದ ಜೋಶ್​ನಲ್ಲಿರುವ ಭಾರತೀಯ ಆಟಗಾರರು ಈ ಟೂರ್ನಿಯಲ್ಲೂ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆ ಇದೆ. ಈ ಬಾರಿಯ ಐಪಿಎಲ್​ ಕೂಟದ ಗರಿಷ್ಠ ರನ್​ ಸರದಾರ ವಿರಾಟ್​ ಕೊಹ್ಲಿ ಅವರು ಅಭ್ಯಾಸ ಪಂದ್ಯ ಆಡುವುದು ಅನುಮಾನ ಎನ್ನಲಾಗಿದೆ. ಏಕೆಂದರೆ ಅವರು ನಿನ್ನೆಯಷ್ಟೇ ನ್ಯೂಯಾರ್ಕ್ ತಲುಪಿದ್ದಾರೆ. ಹೀಗಾಗಿ ಅವರು ಆಡುವ ಬಗ್ಗೆ ಯಾವುದೇ ಖಚಿತತೆ ಇಲ್ಲ. ಬಾಂಗ್ಲಾದೇಶ ಈಗಾಗಲೇ ಅಮೆರಿಕ ವಿರುದ್ಧ ಆಡಿದ ಮೊದಲ ಅಭ್ಯಾಸ ಪಂದ್ಯದಲ್ಲಿ ಸೋಲು ಕಂಡಿತ್ತು. ಹೀಗಾಗಿ ತಂಡದ ಮೇಲೆ ಹೆಚ್ಚಿನ ಭರವಸೆ ಇರಿಸುವುದು ಕಷ್ಟ. ಅನುಭವಿ ಆಟಗಾರರ ಪಡೆಯೇ ಹೊಂದಿದ್ದರೂ, ಯಾರು ಕೂಡ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ.

ಇದನ್ನೂ ಓದಿ T20 World Cup 2024 : ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?

ಇಂದು ನಡೆಯುವ ಉದ್ಘಾಟನ ಲೀಗ್​ ಪಂದ್ಯದಲ್ಲಿ ಆತಿಥೇಯ ಅಮೆರಿಕ ಮತ್ತು ಕೆನಡಾ ಸೆಣಸಾಡಲಿದೆ. ಅಮೆರಿಕದಲ್ಲಿ ಈ ಪಂದ್ಯ ಶನಿವಾರ ನಡೆದರೂ ಕೂಡ ಭಾರತೀಯ ಕಾಲಮಾನದಂತೆ ಈ ಪಂದ್ಯ ಭಾನುವಾರ ಬೆಳಗ್ಗೆ 6 ಗಂಟೆಗೆ ಪ್ರಸಾರಗೊಳ್ಳಲಿದೆ.

ಭಾರತ: ರೋಹಿತ್‌ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಶಿವಂ ದುಬೆ, ರಿಷಭ್‌ ಪಂತ್‌, ಸಂಜು ಸ್ಯಾಮ್ಸನ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ಅರ್ಷದೀಪ್‌ ಸಿಂಗ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌.

ಬಾಂಗ್ಲಾದೇಶ: ನಜ್ಮುಲ್‌ ಹುಸೇನ್‌ (ನಾಯಕ), ತಸ್ಕಿನ್‌ ಅಹ್ಮದ್‌, ಲಿಟನ್‌ ದಾಸ್‌, ಸೌಮ್ಯ ಸರ್ಕಾರ್‌, ತಾಂಜಿದ್‌ ಹಸನ್‌ ತಮೀಮ್‌, ಶಕಿಬ್‌ ಅಲ್‌ ಹಸನ್‌, ತೌಹಿದ್‌ ಹೃದಯ್‌, ಮಹ್ಮದುಲ್ಲ ರಿಯಾದ್‌, ಜಾಕರ್‌ ಅಲಿ ಅನಿಕ್‌, ತನ್ವೀರ್‌ ಇಸ್ಲಾಮ್‌, ಮಹೆದಿ ಹಸನ್‌, ರಿಷಾದ್‌ ಹುಸೇನ್‌, ಮುಸ್ತಫಿಜುರ್‌ ರೆಹಮಾನ್‌, ಶೊರೀಫುಲ್‌ ಇಸ್ಲಾಮ್‌, ತಾಂಜಿಮ್‌ ಹಸನ್‌.

Continue Reading

ಕ್ರೀಡೆ

Neeraj Chopra: 2 ತಿಂಗಳು ವಿದೇಶದಲ್ಲಿ ಕಠಿಣ ತರಬೇತಿ ಪಡೆಯಲಿದ್ದಾರೆ ನೀರಜ್ ಚೋಪ್ರಾ

Neeraj Chopra: ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದ ನೀರಜ್​ ಚೋಪ್ರಾ ಜುಲೈ 28 ರವರೆಗೆ ಯುರೋಪ್‌ನ ವಿವಿಧ ಸ್ಥಳಗಳಲ್ಲಿ ತರಬೇತಿ ಪಡೆಯಲಿದ್ದಾರೆ. ಕ್ರೀಡಾ ಸಚಿವಾಲಯದ ಮಹತ್ವದ ಯೋಜನೆಯಾದ ‘ಟಾರ್ಗೆಟ್ ಒಲಂಪಿಕ್ ಪೋಡಿಯಂ’ ಅಡಿಯಲ್ಲಿ ಅವರಿಗೆ ಈ ವಿದೇಶಿ ತರಬೇತಿಯ ವೆಚ್ಚವನ್ನು ಭರಿಸಲಾಗುತ್ತದೆ.

VISTARANEWS.COM


on

Neeraj Chopra
Koo

ನವದೆಹಲಿ: ಮಹತ್ವದ ಕ್ರೀಡಾಕೂಟವಾದ ಪ್ಯಾರಿಸ್ ಒಲಿಂಪಿಕ್ಸ್(​Paris Olympics 2024) ಆರಂಭಕ್ಕೆ ಇನ್ನು ಒಂದುವರೆ ತಿಂಗಳು ಮಾತ್ರ ಬಾಕಿ ಉಳಿದಿವೆ. ಈ ಕ್ರೀಡಾಕೂಟದ ಸಿದ್ಧತೆಯಾಗಿ ಟೋಕಿಯೊ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ಭಾರತದ ಸ್ಟಾರ್​ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Neeraj Chopra) ಅವರು ಕೋಚ್ ಕ್ಲಾಸ್ ಬಾರ್ಟೋನಿಯೆಟ್ಜ್ ಮತ್ತು ಫಿಸಿಯೋ ಇಶಾನ್ ಮಾರ್ವಾಹಾ ಅವರೊಂದಿಗೆ 60 ದಿನ ಯುರೋಪ್‌ನಲ್ಲಿ ತರಬೇತಿ ಪಡೆಯಲಿದ್ದಾರೆ.

ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದ ನೀರಜ್​ ಚೋಪ್ರಾ ಜುಲೈ 28 ರವರೆಗೆ ಯುರೋಪ್‌ನ ವಿವಿಧ ಸ್ಥಳಗಳಲ್ಲಿ ತರಬೇತಿ ಪಡೆಯಲಿದ್ದಾರೆ. ಕ್ರೀಡಾ ಸಚಿವಾಲಯದ ಮಹತ್ವದ ಯೋಜನೆಯಾದ ‘ಟಾರ್ಗೆಟ್ ಒಲಂಪಿಕ್ ಪೋಡಿಯಂ’ ಅಡಿಯಲ್ಲಿ ಅವರಿಗೆ ಈ ವಿದೇಶಿ ತರಬೇತಿಯ ವೆಚ್ಚವನ್ನು ಭರಿಸಲಾಗುತ್ತದೆ.

“ನಾನು ಕಠಿಣ ತರಬೇತಿ ಪಡೆಯುತ್ತಿದ್ದೇನೆ ಮತ್ತು ಉತ್ತಮ ಭಾವನೆ ಹೊಂದಿದ್ದೇನೆ. ನನ್ನ ಸಾಮರ್ಥ್ಯದ ಅತ್ಯುತ್ತಮ ಪ್ರದರ್ಶನವನ್ನು ನಾನು ಇನ್ನೂ ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ. ಇದಕ್ಕಾಗಿ ನಾನು ಹಿಂದೆಂದೂ ತಯಾರಿಸಿದ ಅತ್ಯುತ್ತಮ ತಯಾರಿಯಾನ್ನು ನಡೆಸಲಿದ್ದೇನೆ. ಇದು ಮುಂದಿನ ದಿನಗಳಲ್ಲಿ ಉತ್ತಮಗೊಳ್ಳುತ್ತದೆ ಎಂಬ ವಿಶ್ವಾಸವಿದೆ. ನಾನು ನನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುತ್ತೇನೆ. ಈ ಸ್ಪರ್ಧೆಯನ್ನು ಆನಂದಿಸುತ್ತೇನೆ” ಎಂದು ನೀರಜ್ ಹೇಳಿದರು.

ಕಳೆದ ತಿಂಗಳು ಭುನೇಶ್ವರದಲ್ಲಿ ನಡೆದಿದ್ದ ಫೆಡರೇಷನ್ ಕಪ್‌ನಲ್ಲಿ(Federation Cup) ಕಣಕ್ಕಿಳಿದ್ದ ನೀರಜ್ ಚೋಪ್ರಾ(82.27 ಮೀ.), ಕನ್ನಡಿಗ ಡಿಪಿ ಮನು ಅವರಿಂದ ತೀವ್ರ ಪೈಪೋಟಿ ಎದುರಿಸಿ ಚಿನ್ನದ ಪದಕ ಗೆದ್ದಿದ್ದರು. ನೀರಜ್​ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್​ನಲ್ಲಿ ಬೆಳ್ಳಿ ಗೆದ್ದಿದ್ದರು. ಒಲಿಂಪಿಕ್ಸ್‌ನ ಟ್ರ್ಯಾಕ್‌ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

ನೀರಜ್​ರ ಇದುವರೆಗಿನ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದು. ಈ ಎಸೆತವನ್ನು 2022ರ ಸ್ಟಾಕ್​ಹೋಮ್​ ಡೈಮಂಡ್​ ಲೀಗ್​ನಲ್ಲಿ ಎಸೆದಿದ್ದರು. ಅಭ್ಯಾಸದ ವೇಳೆ ಈಗಾಗಲೆ ನೀರಜ್​ ಹಲವು ಬಾರಿ 90 ಮೀ. ಗಡಿ ದಾಟಿದ್ದಾರೆ. ಆದರೆ, ಸ್ಪರ್ಧೆಗಳಲ್ಲಿ ಇದು ಸಾಧ್ಯವಾಗಿರಲಿಲ್ಲ. ಈ ಬಾರಿ ಸ್ಪರ್ಧೆಯಲ್ಲಿಯೂ ಇದನ್ನು ಸಾಧಿಸಲಿದ್ದೇನೆ ಎಂದು ನೀರಜ್​ ಹೇಳಿದ್ದಾರೆ.

ಇದನ್ನೂ ಓದಿ Paris Olympics 2024: ಒಲಿಂಪಿಕ್ಸ್‌ಗೆ‌ ಅರ್ಹತೆ ಪಡೆದ ಬಾಕ್ಸರ್ ನಿಶಾಂತ್ ದೇವ್

ಚಿನ್ನದ ವಿಶ್ವಾಸದಲ್ಲಿ ಕೋಚ್​


ನೀರಜ್ ಅವರ ಮೊದಲ ಕೋಚ್​ ಕಾಶಿನಾಥ್ ನಾಯ್ಕ್ ಅವರು ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿಯೂ(neeraj chopra paris olympics) ನೀರಜ್​ ಚಿನ್ನದ ಪದಕ ಗೆಲ್ಲಲಿದ್ದಾರೆ ಎಂದು ಇತ್ತೀಚೆಗೆ ಸಂದರ್ಶನವೊಂದಲ್ಲಿ ಭವಿಷ್ಯ ನುಡಿದಿದ್ದರು.

“ನಾನು 2015 ರಿಂದ ನೀರಜ್​ ಜತೆ ಕೆಲಸ ಮಾಡುತ್ತಿದ್ದೇನೆ. ಅವರ ಛಲವನ್ನು ಮೆಚ್ಚಲೇ ಬೇಕು.​ ಸಾಧಿಸುವ ಛಲವೇ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅತ್ಯಂತ ಶಿಸ್ತಿನ ಕ್ರೀಡಾಪಟು ಕೂಡ ಆಗಿದ್ದಾರೆ. 90 ಮೀ. ದೂರ ಜಾವೆಲಿನ್​ ಎಸೆಯುವದು ಪ್ರಮುಖ ಗುರಿ ಎಂದು ನೀರಜ್​ ಈಗಾಗಲೇ ಹೇಳಿದ್ದಾರೆ. ಹೇಳಿದಂತೆ ಅವರು ಈ ದೂರವನ್ನು ಕ್ರಮಿಸುವ ವಿಶ್ವಾಸ ನನ್ನಲ್ಲಿದೆ” ಎಂದು ಹೇಳಿದ್ದರು.

Continue Reading

ಕ್ರೀಡೆ

Paris Olympics 2024: ಒಲಿಂಪಿಕ್ಸ್‌ಗೆ‌ ಅರ್ಹತೆ ಪಡೆದ ಬಾಕ್ಸರ್ ನಿಶಾಂತ್ ದೇವ್

Paris Olympics 2024: ಏಕಪಕ್ಷಿಯವಾಗಿ ಸಾಗಿದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಭಾರತೀಯ ಬಾಕ್ಸರ್​ನ ಬಲಿಷ್ಠ ಪಂಚ್​ಗಳಿಗೆ ತಡೆಯೊಡ್ಡುವಲ್ಲಿ ಮೊಲ್ಡೊವಾದ ವಸಿಲೆ ಸೆಬೊಟಾರಿ ಸಂಪೂರ್ಣವಾಗಿ ವಿಫಲರಾದರು. ಗೆಲುವಿನ ಅಂತರ 5-0. ಮತ್ತೊಂದೆಡೆ ಮಹಿಳೆಯರ 60 ಕೆಜಿ ವಿಭಾಗದಲ್ಲಿ ಮಾಜಿ ಯೂತ್ ವರ್ಲ್ಡ್ ಚಾಂಪಿಯನ್ ಭಾರತದ ಅಂಕುಶಿತಾ ಬೊರೊ ಸೋಲು ಕಂಡರು.

VISTARANEWS.COM


on

Paris Olympics 2024
Koo

ನವದೆಹಲಿ: ಭಾರತದ ಬಾಕ್ಸರ್ ನಿಶಾಂತ್ ದೇವ್ ಅವರು ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಬಾಕ್ಸಿಂಗ್ ಒಲಿಂಪಿಕ್ಸ್‌ ಅರ್ಹತಾ ಪಂದ್ಯದಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಮೂಲಕ 2024ರ ಪ್ಯಾರಿಸ್(Paris Olympics 2024) ಕ್ರೀಡಾಕೂಟಕ್ಕೆ ಟಿಕೆಟ್‌ ಪಡೆದುಕೊಂಡಿದ್ದಾರೆ. ನಿಶಾಂತ್‌ ದೇವ್‌(Nishant Dev) ಅವರು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಪುರುಷ ಬಾಕ್ಸರ್​ ಆಗಿದ್ದಾರೆ. ಒಟ್ಟಾರೆಯಾಗಿ 4ನೇ ಬಾಕ್ಸರ್ ಆಗಿದ್ದಾರೆ. ಮಹಿಳಾ ಬಾಕ್ಸರ್‌ಗಳಾದ ನಿಖತ್ ಜರೀನ್ (50 ಕೆಜಿ), ಪ್ರೀತ್ ಪವಾರ್ (54 ಕೆಜಿ) ಮತ್ತು ಲೊವ್ಲಿನಾ ಬೊರ್ಗೊಹೈನ್ (75 ಕೆಜಿ) ಈಗಾಗಲೇ ಪ್ಯಾರಿಸ್‌ಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಏಕಪಕ್ಷಿಯವಾಗಿ ಸಾಗಿದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಭಾರತೀಯ ಬಾಕ್ಸರ್​ನ ಬಲಿಷ್ಠ ಪಂಚ್​ಗಳಿಗೆ ತಡೆಯೊಡ್ಡುವಲ್ಲಿ ಮೊಲ್ಡೊವಾದ ವಸಿಲೆ ಸೆಬೊಟಾರಿ ಸಂಪೂರ್ಣವಾಗಿ ವಿಫಲರಾದರು. ಗೆಲುವಿನ ಅಂತರ 5-0. ಮತ್ತೊಂದೆಡೆ ಮಹಿಳೆಯರ 60 ಕೆಜಿ ವಿಭಾಗದಲ್ಲಿ ಮಾಜಿ ಯೂತ್ ವರ್ಲ್ಡ್ ಚಾಂಪಿಯನ್ ಭಾರತದ ಅಂಕುಶಿತಾ ಬೊರೊ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಸ್ವೀಡನ್‌ನ ಮಾಜಿ ಯುರೋಪಿಯನ್‌ ಗೇಮ್ಸ್‌ ಕಂಚಿನ ಪದಕ ವಿಜೇತೆ ಆಗ್ನೆಸ್ ಅಲೆಕ್ಸಿಸ್ಸನ್ ವಿರುದ್ಧ 2-3 ಅಂಕಗಳ ಅಂತರದ ಸೋಲು ಕಾಣುವ ಒಲಿಂಪಿಕ್ಸ್​ ಟಿಕೆಟ್​ ಪಡೆಯುವಲ್ಲಿ ವಿಫಲವಾದರು. ಪ್ಯಾರಿಸ್ ಒಲಿಂಪಿಕ್ಸ್(Paris Olympics)​ ಕ್ರೀಡಾಕೂಟ ಜುಲೈ 26ರಿಂದ ಆರಂಭಗೊಳ್ಳಲಿದೆ.

ಚಿನ್ನ ಗೆದ್ದ ಬಾಕ್ಸರ್​ಗಳಿಗೆ ಸಿಗಲಿದೆ ಭಾರೀ ನಗದು ಬಹುಮಾನ


ಕೆಲವು ತಿಂಗಳ ಹಿಂದೆ ವಿಶ್ವ ಅಥ್ಲೆಟಿಕ್ (ಡಬ್ಲ್ಯುಎ) ಸಂಸ್ಥೆ ಟ್ರ್ಯಾಕ್ ಮತ್ತು ಫೀಲ್ಡ್(track & field gold medallists) ವಿಭಾಗದಲ್ಲಿ ಚಿನ್ನ ಜಯಿಸುವ ಅಥ್ಲೀಟ್‌ಗಳಿಗೆ 41.60 ಲಕ್ಷ ನಗದು ಪ್ರಶಸ್ತಿ ನೀಡುವುದಾಗಿ ಪ್ರಕಟಿಸಿತ್ತು. ಇದೀಗ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (International Boxing Association) ಕೂಡ ಮಹತ್ವದ ನಿರ್ಧಾರ ಕೈಗೊಂಡಿದ್ದು, ಚಿನ್ನ ಗೆಲ್ಲುವ ಪ್ರತಿಯೊಬ್ಬ ಬಾಕ್ಸರ್​ಗಳಿಗೆ 41.68 ಲಕ್ಷ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಜತೆಗೆ ಕೋಚ್‌, ರಾಷ್ಟ್ರೀಯ ತಂಡಗಳಿಗೆ 10 ಲಕ್ಷ ನೀಡುವುದಾಗಿಯೂ ಪ್ರಕಟಿಸಿದೆ.

ಇಲ್ಲಿ ಗಮನಿಸಬೇಕದ ವಿಚಾರವೆಂದರೆ ಹಣಕಾಸು ವಿಷಯದಲ್ಲಿ ಪಾರದರ್ಶಕತೆ ಕಾಪಾಡದ ಕಾರಣಕ್ಕೆ ಐಒಸಿ, ಬಾಕ್ಸಿಂಗ್ ಸಂಸ್ಥೆಯನ್ನು ನಿರ್ಬಂಧಿಸಿದೆ. 2020ರ ಟೋಕಿಯೊ ಒಲಿಂಪಿಕ್ಸ್‌ ಬಾಕ್ಸಿಂಗ್ ಸ್ಪರ್ಧೆಗಳನ್ನು ಐಬಿಎ(IBA) ನೆರವಿಲ್ಲದೇ ಐಒಸಿಯೇ ಸಂಘಟಿಸಿತ್ತು. ಕ್ರೀಡಾ ಸಂಸ್ಥೆಗಳು ನೀಡುವ ಬಹುಮಾನ ಹಣಕ್ಕೂ ಐಒಸಿ ಸಮ್ಮತಿ ನೀಡಿಲ್ಲ.

ಇದನ್ನೂ ಓದಿ Paris Olympics 2024: ಚಿನ್ನ ಗೆದ್ದ ಬಾಕ್ಸರ್​ಗಳಿಗೆ ಸಿಗಲಿದೆ ಭಾರೀ ನಗದು ಬಹುಮಾನ; ಮಹತ್ವದ ನಿರ್ಧಾರ ಕೈಗೊಂಡ ಐಬಿಎ

ಜುಲೈ 26ರಂದು ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮದೊಂದಿಗೆ ಪ್ಯಾರಿಸ್​ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಲಾಗುವುದು. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಈಗಾಗಲೇ ಕ್ರೀಡಾಕೂಟದ ಆಯೋಜಕರು ಮಾಡಿದ್ದಾರೆ. ಗೇಮ್ಸ್‌ಗಾಗಿಯೇ ಇಲ್ಲಿನ ಸೀನ್‌ ನದಿಯನ್ನು ಸಾರ್ವಜನಿಕ ನಿಧಿಯಿಂದ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿ ಈ ನದಿಯನ್ನು ಸ್ನಾನಮಾಡಲು ಯೋಗ್ಯವೆನಿಸುವ ರೀತಿಯಲ್ಲಿ ಸ್ವಚ್ಛ ಮಾಡಲಾಗಿದೆ.

ಬೋಟ್‌ಗಳಲ್ಲೇ ಪರೇಡ್

ಒಲಿಂಪಿಕ್ಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

Continue Reading

ಪ್ರಮುಖ ಸುದ್ದಿ

Virat kohli : ಕಡೆಗಣಿಸುವ ಹೇಳಿಕೆ ನೀಡಿ ಕೊಹ್ಲಿಗೆ ಮತ್ತೆ ಅವಮಾನ ಮಾಡಿದ ಅಂಬಾಟಿ ರಾಯುಡು

Virat kohli : ಐಪಿಎಲ್ 2024 ರ ಸಮಯದಲ್ಲಿ ಕೊಹ್ಲಿ ಬಗ್ಗೆ ಕಳಪೆ ಹೇಳಿಕೆಗಳೊಂದಿಗೆ ವಿವಾದವನ್ನು ಹುಟ್ಟುಹಾಕಿದ ನಂತರ, ಭಾರತದ ಮಾಜಿ ಬ್ಯಾಟರ್​ ಜೂನ್ 2 ರಿಂದ ಪ್ರಾರಂಭವಾಗುವ ಟಿ 20 ವಿಶ್ವಕಪ್ 2024ನಲ್ಲಿಯೂ ಕೊಹ್ಲಿಯನ್ನು ಕಡೆಗಣಿಸುವ ಹೇಳಿಕೆ ನೀಡಿದ್ದಾರೆ.

VISTARANEWS.COM


on

Virat Kohli
Koo

ನವದೆಹಲಿ: ಭಾರತದ ಮಾಜಿ ಬ್ಯಾಟರ್ ಮತ್ತು ಆರು ಬಾರಿ ಐಪಿಎಲ್ ವಿಜೇತ ಅಂಬಾಟಿ ರಾಯುಡು ಕಳೆದ ಕೆಲವು ವಾರಗಳಿಂದ ವಿರಾಟ್ ಕೊಹ್ಲಿ (Virat kohli) ಅವರ ಅಭಿಮಾನಿಗಳ ರೇಡಾರ್ನಲ್ಲಿದ್ದಾರೆ ಮತ್ತು ಟೀಮ್ ಇಂಡಿಯಾದ ಬ್ಯಾಟಿಂಗ್ ಮಾಂತ್ರಿಕನನ್ನು ಅನಗತ್ಯವಾಗಿ ಟೀಕಿಸಿದ್ದಕ್ಕಾಗಿ ಫಲ ಅನುಭವಿಸುತ್ತಿದ್ದಾರೆ. ಟೀಕೆಗಳ ಹೊರತಾಗಿಯೂ, ರಾಯುಡು ಮತ್ತೊಮ್ಮೆ ಕೊಹ್ಲಿ ಬಗ್ಗೆ ತಮ್ಮ ಉದಾಸೀನ ಭಾವ ವ್ಯಕ್ತಪಡಿಸಿದ್ದಾರೆ. ಮುಂಬರುವ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ (T20 World Cup) ಭಾರತೀಯ ಕ್ರಿಕೆಟ್ ತಂಡದ ಪರ ಕೊಹ್ಲಿ ಅತಿ ಹೆಚ್ಚು ರನ್ ಗಳಿಸುವುದಿಲ್ಲ ಎಂದು ಹೇಳಿದ್ದಾರೆ.

ಐಪಿಎಲ್ 2024 ರ ಸಮಯದಲ್ಲಿ ಕೊಹ್ಲಿ ಬಗ್ಗೆ ಕಳಪೆ ಹೇಳಿಕೆಗಳೊಂದಿಗೆ ವಿವಾದವನ್ನು ಹುಟ್ಟುಹಾಕಿದ ನಂತರ, ಭಾರತದ ಮಾಜಿ ಬ್ಯಾಟರ್​ ಜೂನ್ 2 ರಿಂದ ಪ್ರಾರಂಭವಾಗುವ ಟಿ 20 ವಿಶ್ವಕಪ್ 2024ನಲ್ಲಿಯೂ ಕೊಹ್ಲಿಯನ್ನು ಕಡೆಗಣಿಸುವ ಹೇಳಿಕೆ ನೀಡಿದ್ದಾರೆ.

ಕೊಹ್ಲಿ ಅಲ್ಲ ಎಂದ ಅಂಬಾಟಿ

ಯುಎಸ್ಎ ಮತ್ತು ಕೆರಿಬಿಯನ್​ನಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಸೂರ್ಯಕುಮಾರ್​ ಭಾರತ ಪರ ಅತಿ ಹೆಚ್ಚು ರನ್​ ಗಳಿಸಲಿದ್ದಾರೆ ಎಂದು ಹೇಳಿದ್ದಾರೆ. ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರು 2024ರ ಟಿ 20 ವಿಶ್ವಕಪ್​​ನಲ್ಲಿ ಭಾರತದ ಪ್ರಭಾವಿ ಆಟಗಾರರು ಎಂದು ಹೇಳಿದ್ದಾರೆ. ಆದರೆ, ಕೊಹ್ಲಿ ಅಲ್ಲ ಎಂದಿದ್ದಾರೆ.

ರಾಯುಡು ತಮ್ಮ ಮಾಜಿ ಮುಂಬೈ ಇಂಡಿಯನ್ಸ್​ ಸಹ ಆಟಗಾರ ಮತ್ತು ಭಾರತ ತಂಡದ ನಾಯಕ ರೋಹಿತ್ ಅವರನ್ನು ತಮ್ಮ ಆದ್ಯತೆಯ ಆಯ್ಕೆ ಎಂದು ಹೆಸರಿಸಿದ್ದಾರೆ. ಈ ಮೆಗಾ ಈವೆಂಟ್​ನಲ್ಲಿ ರೋಹಿತ್ ಭಾರತದ ನಾಯಕನಾಗಿ ಮಿಂಚುತ್ತಾರೆ ಎಂದು ಅವರು ನಂಬಿದ್ದಾರೆ.

ಮುಂಬರುವ ಟಿ 20 ವಿಶ್ವಕಪ್ 2024 ರಲ್ಲಿ ಭಾರತಕ್ಕಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂದು ರಾಯುಡು ಹೆಸರಿಸಿದ್ದಾರೆ, ಪಂದ್ಯಾವಳಿಯ ಇತಿಹಾಸದಲ್ಲಿ ಭಾರತೀಯ ನಾಯಕ ಎಂದಿಗೂ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಲ್ಲ.

ರಾಯುಡು ಅವರ ಆಯ್ಕೆಯು ಕೆಲವು ಅಭಿಮಾನಿಗಳನ್ನು ಕೆರಳಿಸಬಹುದು. ವಿಶೇಷವಾಗಿ ಕೊಹ್ಲಿಯನ್ನು ನಿರ್ಲಕ್ಷಿಸಿದ್ದಕ್ಕಾಗಿ ಪ್ರತಿಕ್ರಿಯೆ ಪಡೆಯಲಿದ್ದಾರೆ. ಕೊಹ್ಲಿ ಐಪಿಎಲ್ 2024 ರಲ್ಲಿ ರೆಡ್-ಹಾಟ್ ಫಾರ್ಮ್​ನಲ್ಲಿದ್ದರು. ಅವರ 742 ರನ್ ಬಾರಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಆದರೆ ರೋಹಿತ್ ಆಡಿರಲಿಲ್ಲ.

ಟಿ 20 ವಿಶ್ವಕಪ್​ನಲ್ಲಿ ಕೊಹ್ಲಿಯ ಸಾಧನೆ


ಎಂಐ ಆರಂಭಿಕ ಆಟಗಾರ ರೋಹಿತ್​ ಐಪಿಎಲ್ 2024 ರಲ್ಲಿ 400 ಕ್ಕೂ ಹೆಚ್ಚು ರನ್ ಗಳಿಸಿದ್ದರು. ಆದರೆ ಅವರು ಋತುವಿನಾದ್ಯಂತ ಸರಿಯಾಗಿ ಆಡಿಲ್ಲ ಮತ್ತೊಂದೆಡೆ, ಕೊಹ್ಲಿ ಟಿ 20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ, 27 ಪಂದ್ಯಗಳಲ್ಲಿ 1141 ರನ್, 81.50 ಪ್ರಭಾವಶಾಲಿ ಸರಾಸರಿ ಮತ್ತು 131.30 ಸ್ಟ್ರೈಕ್ ರೇಟ್ ಹೊಂದಿದ್ದರೆ.

ಇದನ್ನೂ ಓದಿ: T20 World Cup 2024 : ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?

ಮಹೇಲ ಜಯವರ್ಧನೆ (1016) ಮತ್ತು ಕ್ರಿಸ್ ಗೇಲ್ (965) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದರೆ, ರೋಹಿತ್ 39 ಪಂದ್ಯಗಳಲ್ಲಿ 963 ರನ್ ಗಳಿಸಿ ಟಿ 20 ವಿಶ್ವಕಪ್ ನಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ. 2022ರ ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ 296 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು.

ಭಾರತ ತಂಡ ಜೂನ್ 5ರಂದು ನ್ಯೂಯಾರ್ಕ್​ನಲ್ಲಿ ಐರ್ಲೆಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದು, ಜೂನ್ 9ರಂದು ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಮೆನ್ ಇನ್ ಬ್ಲೂ ಈಗಾಗಲೇ ಯುಎಸ್ಎಯಲ್ಲಿ ತರಬೇತಿಯನ್ನು ಪ್ರಾರಂಭಿಸಿದೆ, ಮತ್ತು ಜೂನ್ 1 ರಂದು ಬಾಂಗ್ಲಾದೇಶ ವಿರುದ್ಧದ ಏಕೈಕ ಅಭ್ಯಾಸ ಪಂದ್ಯಕ್ಕೆ ಮುಂಚಿತವಾಗಿ ಕೊಹ್ಲಿ ಶೀಘ್ರದಲ್ಲೇ ನ್ಯೂಯಾರ್ಕ್ನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

Continue Reading
Advertisement
IND vs BAN
ಕ್ರೀಡೆ49 seconds ago

IND vs BAN: ಇಂದು ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯ; ಕೊಹ್ಲಿ ಆಡುವುದು ಅನುಮಾನ

Exit Poll
Lok Sabha Election 202412 mins ago

Exit Poll: ಇಂದು ಸಂಜೆ 6.30ಕ್ಕೆ ಎಕ್ಸಿಟ್ ಪೋಲ್ ರಿಸಲ್ಟ್; ಮತಗಟ್ಟೆ ಸಮೀಕ್ಷೆ ಹೇಗೆ ನಡೆಸುತ್ತಾರೆ?

Kannada Cinema In OTT bad manners 02 Kannada Movie
ಸ್ಯಾಂಡಲ್ ವುಡ್17 mins ago

Kannada Cinema In OTT: ಒಟಿಟಿಗೆ ಲಗ್ಗೆ ಇಟ್ಟ ʼಬ್ಯಾಡ್‌ ಮ್ಯಾನರ್ಸ್‌ʼ, ‘O2’; ಸ್ಟ್ರೀಮಿಂಗ್ ಎಲ್ಲಿ?

hum do humare barah
ಕರ್ನಾಟಕ20 mins ago

Hum Do Humare Barah: ʼಹಮ್ ದೋ, ಹಮಾರೇ ಬಾರಹ್ʼ ಚಿತ್ರ ಬಿಡುಗಡೆಗೆ ಮುಸ್ಲಿಮರ ವಿರೋಧ: “ಪೆನ್‌ಡ್ರೈವ್‌ ಕೇಸ್‌ ಮೇಲೆ ಮಾಡಿ” ಎಂದು ಗರಂ!

Neeraj Chopra
ಕ್ರೀಡೆ36 mins ago

Neeraj Chopra: 2 ತಿಂಗಳು ವಿದೇಶದಲ್ಲಿ ಕಠಿಣ ತರಬೇತಿ ಪಡೆಯಲಿದ್ದಾರೆ ನೀರಜ್ ಚೋಪ್ರಾ

Neha Gowda is pregnant the actress shared the good news
ಕಿರುತೆರೆ44 mins ago

Neha Gowda: ಮೊದಲ ಮಗುವಿನ ನಿರೀಕ್ಷೆಯಲ್ಲಿ ಗೊಂಬೆ-ಚಂದನ್‌ ದಂಪತಿ

Vastu Tips
ಧಾರ್ಮಿಕ44 mins ago

Vastu Tips: ಮನೆಯ ಯಾವ ಕೋಣೆಗೆ ಯಾವ ಬಣ್ಣ ಇದ್ದರೆ ನೆಮ್ಮದಿ ಸಿಗುತ್ತದೆ? ವಾಸ್ತು ಸಲಹೆ ಹೀಗಿದೆ

prajwal revanna case mobile
ಪ್ರಮುಖ ಸುದ್ದಿ46 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ಮೊಬೈಲ್‌ ಮಂಗಮಾಯ! ಏನಂತಾರೆ ಪ್ರಜ್ವಲ್ಲು?

LPG Price Cut
ವಾಣಿಜ್ಯ53 mins ago

LPG Price Cut: ಎಲ್‌ಪಿಜಿ ಗ್ರಾಹಕರಿಗೆ ಗುಡ್‌ನ್ಯೂಸ್‌; ಕಮರ್ಷಿಯಲ್ ಅಡುಗೆ ಅನಿಲ ದರ ಇಳಿಕೆ

Paris Olympics 2024
ಕ್ರೀಡೆ60 mins ago

Paris Olympics 2024: ಒಲಿಂಪಿಕ್ಸ್‌ಗೆ‌ ಅರ್ಹತೆ ಪಡೆದ ಬಾಕ್ಸರ್ ನಿಶಾಂತ್ ದೇವ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 weeks ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌