Ranji Trophy : ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವ ದಾಖಲೆ ಬರೆದ ಹೈದರಾಬಾದ್​ ಆಟಗಾರ - Vistara News

ಪ್ರಮುಖ ಸುದ್ದಿ

Ranji Trophy : ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವ ದಾಖಲೆ ಬರೆದ ಹೈದರಾಬಾದ್​ ಆಟಗಾರ

Ranji Trophy : ರಣಜಿ ಟ್ರೋಫಿ ಇತಿಹಾಸದಲ್ಲಿಯೇ ಅತಿ ವೇಗದ ತ್ರಿಶತಕ ಬಾರಿಸಿದ ದಾಖಲೆಯನ್ನು ತನ್ಮಯ್ ಅಗರ್ವಾಲ್ ಮಾಡಿದ್ದಾರೆ.

VISTARANEWS.COM


on

Tanmay Srivastav
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್​​: ಎನ್ಎಫ್​​ಸಿ ಕ್ರಿಕೆಟ್ ಮೈದಾನದಲ್ಲಿ ನಡೆದ ಹೈದರಾಬಾದ್ ಮತ್ತು ಅರುಣಾಚಲ ಪ್ರದೇಶ ನಡುವಿನ ರಣಜಿ ಟ್ರೋಫಿ (Ranji Trophy) ಪಂದ್ಯದ ವೇಳೆ ವಿಶ್ವ ದಾಖಲೆ ಸೃಷ್ಟಿಯಾಗಿದೆ. ಹೈದರಾಬಾದ್ ಆರಂಭಿಕ ಬ್ಯಾಟರ್​ ತನ್ಮಯ್ ಅಗರ್ವಾಲ್ ಮೊದಲ ದಿನದಾಟದ ಅಂತ್ಯಕ್ಕೆ ಅಜೇಯ 323 ರನ್ ಗಳಿಸಿದ್ದಾರೆ. ಅರುಣಾಚಲ ಪ್ರದೇಶದ 172 ರನ್​ಗಳಿಗೆ ಉತ್ತರವಾಗಿ ಹೈದರಾಬಾದ್ ಕೇವಲ 48 ಓವರ್​ಗಳಲ್ಲಿ 1 ವಿಕೆಟ್ ನಷ್ಟಕ್ಕೆ 529 ರನ್ ಗಳಿಸಿದೆ.

160 ಎಸೆತಗಳಲ್ಲಿ 323 ರನ್ ಗಳಿಸಿದ ಅವರು 201.88 ಸ್ಟ್ರೈಕ್ ರೇಟ್​ನೊಂದಿಗೆ ಆಡಿದ್ದಾರೆ. ಇದರಲ್ಲಿ 33 ಬೌಂಡರಿಗಳು ಮತ್ತು 21 ಸಿಕ್ಸರ್​ಗಳು ಸೇರಿಕೊಂಡಿದೆ. ಇದು ರಣಜಿ ಟ್ರೋಫಿ ಪಂದ್ಯದಲ್ಲಿ ಬ್ಯಾಟರ್​​ ಗಳಿಸಿದ ನಾಲ್ಕನೇ ಅತ್ಯುತ್ತಮ ಸ್ಟ್ರೈಕ್ ರೇಟ್. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಭಾರತೀಯ ಬ್ಯಾಟರ್​ ಗಳಿಸಿದ ಅತ್ಯುತ್ತಮ ಸ್ಟ್ರೈಕ್ ರೇಟ್.

ತನ್ಮಯ್ ಅಗರ್ವಾಲ್ ದಾಖಲೆ ನಿರ್ಮಿಸಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗವಾಗಿ 300 ರನ್ (ತ್ರಿಶತಕ) ಪೂರೈಸಿದ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ತನ್ಮಯ್ ಅಗರ್ವಾಲ್ ಪಾತ್ರರಾಗಿದ್ದಾರೆ. ತನ್ಮಯ್ ಒಟ್ಟು 147 ಎಸೆತಗಳಲ್ಲಿ 300 ರನ್ ಗಳಿಸಿದ್ದಾರೆ. ತನ್ಮಯ್ ಅವರಲ್ಲದೆ ಅವರ ಪಾಲುದಾರ ರಾಹುಲ್ ಸಿಂಗ್ ಗಹ್ಲಾಟ್ 105 ಎಸೆತಗಳಲ್ಲಿ 185 ರನ್ ಬಾರಿಸಿದ್ದಾರೆ. ಒಟ್ಟು 26 ಬೌಂಡರಿಗಳು ಮತ್ತು ಮೂರು ಸಿಕ್ಸರ್​ಗಳನ್ನು ಅವರು ಸಿಡಿಸಿದ್ದಾರೆ. ತನ್ಮಯ್ ಅಗರ್ವಾಲ್ ಮೊದಲ ವಿಕೆಟ್​ಗೆ 449 ರನ್​ಗಳ ಜೊತೆಯಾಟವಾಡಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಭಾರತೀಯ ಜೋಡಿಯ ಐದನೇ ಅತಿ ಹೆಚ್ಚು ರನ್​ಗಳ ಜೊತೆಯಾಟವಾಗಿದೆ.

ಅನ್ಮಯ್ ಅಗರ್ವಾಲ್ ಈಗ 443 ರನ್ ಗಳಿಸಿದರೆ ಮತ್ತೊಂದು ದಾಖಲೆ ಸೃಷ್ಟಿಯಾಗಲಿದೆ. ಇದು ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ ಭಾರತೀಯ ಬ್ಯಾಟರ್​ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ. 1948ರಲ್ಲಿ ಕಾಥೇವಾಡ ವಿರುದ್ಧ ಭಾವುಸಾಹೇಬ್ ನಿಂಬಾಳ್ಕರ್ ಅಜೇಯ 443 ರನ್ ಗಳಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಬ್ಯಾಟರ್​​ ಗಳಿಸಿದ ಗರಿಷ್ಠ ಸ್ಕೋರ್ 501*. ಇದನ್ನು ವೆಸ್ಟ್ ಇಂಡೀಸ್ ದಂತಕಥೆ ಬ್ರಿಯಾನ್ ಲಾರಾ 1994 ರಲ್ಲಿ ವಾರ್ವಿಕ್​ಶೈರ್​ ವಿರುದ್ಧ ದಾಖಲಿಸಿದ್ದರು.

ಸಿಕ್ಸರ್​ಗಳ ದಾಖಲೆ

ಈ ಸಾಧನೆಯ ಹೊರತಾಗಿ, ಪ್ರಥಮ ದರ್ಜೆ ಇನ್ನಿಂಗ್ಸ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ಗಳನ್ನು ಬಾರಿಸಿದ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಹಾಗೂ ನ್ಯೂಜಿಲೆಂಡ್ ಬ್ಯಾಟರ್​​ ಕಾಲಿನ್ ಮುನ್ರೊ ಅವರನ್ನು ಹಿಂದಿಕ್ಕಲು ತನ್ಮಯ್​ಗೆ ಈಗ ಇನ್ನೂ 3 ಸಿಕ್ಸರ್​ಗಳ ಅಗತ್ಯವಿದೆ. 2014ರಲ್ಲಿ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ವಿರುದ್ಧ ಆಕ್ಲೆಂಡ್ ಪರ ಆಡಿದ್ದ ಮುನ್ರೊ 23 ಸಿಕ್ಸರ್ ಬಾರಿಸಿದ್ದರು.

ಇದನ್ನೂ ಓದಿ : MS Dhoni : ಧ್ವಜಾರೋಹಣ ಮಾಡಿ ಗಣರಾಜ್ಯೋತ್ಸವ ಆಚರಿಸಿದ ಎಂಎಸ್ ಧೋನಿ

ಪಂದ್ಯದ ಮೊದಲ ದಿನ ಒಟ್ಟು 701 ರನ್ ದಾಖಲಾಗಿದೆ. ಇದು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಈ ಮೈಲಿಗಲ್ಲನ್ನು ದಾಟಿರುವುದು ಇದು ಎರಡನೇ ಬಾರಿ. ಸುಮಾರು 72 ವರ್ಷಗಳ ಹಿಂದೆ, 1950ರಲ್ಲಿ, ಎರಡು ತಂಡಗಳು ಪ್ರಥಮ ದರ್ಜೆ ಪಂದ್ಯದ ಒಂದೇ ದಿನದಲ್ಲಿ 700 ಕ್ಕೂ ಹೆಚ್ಚು ರನ್ ಗಳಿಸಿದ್ದವು.

ಅರುಣಾಚಲ ಪ್ರದೇಶ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 172 ರನ್ಗಳಿಗೆ ಆಲೌಟ್ ಆಗಿತ್ತು, ಇದರಲ್ಲಿ ಟೆಚಿ ಡೋರಿಯಾ ಇನ್ನಿಂಗ್ಸ್​ನ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. ಅವರು ಅಜೇಯ 97 ರನ್ ಗಳಿಸಿದ್ದಾರೆ. ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಟ್ಸ್ಮನ್ ಕ್ರೀಸ್​ನಲ್ಲಿ ಹೆಚ್ಚು ಹೊತ್ತು ಉಳಿಯಲಿಲ್ಲ ಹಾಗೂ ಎರಡಂಕಿ ಮೊತ್ತ ದಾಟಲಿಲ್ಲ.

ರಣಜಿ ಟ್ರೋಫಿಯ ಕಳೆದ ಆವೃತ್ತಿಯಲ್ಲಿ ಡೆಲ್ಲಿ ವಿರುದ್ಧ ಗೆಲ್ಲಲೇಬೇಕಾದ ಪಂದ್ಯವನ್ನು ಗೆಲ್ಲಲು ಸಾಧ್ಯವಾಗದ ಕಾರಣ ಹೈದರಾಬಾದ್ ಎಲೈಟ್ ಗುಂಪಿನಿಂದ ಪ್ಲೇಟ್ ಗುಂಪಿಗೆ ಕುಸಿದಿತ್ತು. ಹೈದರಾಬಾದ್ ಪ್ರಸ್ತುತ ಪ್ಲೇಟ್ ಗ್ರೂಪ್​​ನಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಮೂರು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Narendra Modi: ನನ್ನನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ; ಮಮತಾ ಬ್ಯಾನರ್ಜಿಗೆ ಮೋದಿ ಚಾಟಿ

Narendra Modi: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜೂನ್‌ 4ರಂದು ಪತನವಾಗುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿದ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪ್ರತ್ಯುತ್ತರ ನೀಡಿದ್ದು, “ನನ್ನನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಿಲ್ಲ” ಎಂದು ಹೇಳಿದರು.

VISTARANEWS.COM


on

Narendra Modi
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಮಧ್ಯೆ ವಾಕ್ಸಮರ, ವಾಗ್ದಾಳಿ, ಟೀಕೆ, ವ್ಯಂಗ್ಯ ಚುರುಕಾಗಿವೆ. ಇದಕ್ಕೆ ನಿದರ್ಶನ ಎಂಬಂತೆ, “ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜೂನ್‌ 4ರಂದು ಪತನವಾಗುತ್ತದೆ” ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ನೀಡಿದ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರತ್ಯುತ್ತರ ನೀಡಿದ್ದು, “ನನ್ನನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಿಲ್ಲ” ಎಂದು ಹೇಳಿದರು.

ಎನ್‌ಡಿಟಿವಿಗೆ ನೀಡಿದ ಸಂದರ್ಶನದ ವೇಳೆ ಮಮತಾ ಬ್ಯಾನರ್ಜಿ ಹೇಳಿಕೆ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು. “ಮಮತಾ ಬ್ಯಾನರ್ಜಿ ಅವರು ಹೇಳಿದ್ದು ನಿಜ. ಜೂನ್‌ 4ರಂದು ಲೋಕಸಭೆ ಅವಧಿ ಮುಗಿಯಲಿದೆ. ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಹೊಸ ಸರ್ಕಾರ ರಚಿಸಲಿದೆ. ನಾನು ಕಾಶಿಯವ (ಅವರ ಲೋಕಸಭೆ ಕ್ಷೇತ್ರ), ನಾನು ಅವಿನಾಶಿ. ಕಾಶಿಯನ್ನು ಹೇಗೆ ನಾಶಪಡಿಸಲು ಆಗುವುದಿಲ್ಲವೋ, ಹಾಗೆಯೇ, ನನ್ನನ್ನು ಕೂಡ ಯಾರಿಂದಲೂ ನಾಶಪಡಿಸಲು ಆಗುವುದಿಲ್ಲ” ಎಂಬುದಾಗಿ ಹೇಳಿದರು.

ಬಿಜೆಪಿಯೇ ಅಧಿಕಾರಕ್ಕೆ ಎಂದ ಸಮೀಕ್ಷೆ

ಲೋಕಸಭೆ ಚುನಾವಣೆ ಕುರಿತು ಸಟ್ಟಾ ಬಜಾರ್‌ ಸಮೀಕ್ಷಾ ವರದಿ ತಯಾರಿಸಿದೆ. ಐದು ಹಂತದ ಮತದಾನದ ಮುಕ್ತಾಯದ ಬಳಿಕ ಸಟ್ಟಾ ಬಜಾರ್ ಸಮೀಕ್ಷಾ ವರದಿ ಪ್ರಕಟಿಸಿದಂತೆ, ಬಿಜೆಪಿಯೊಂದೇ 304-306 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಎನ್‌ಡಿಎ ಮೈತ್ರಿಕೂಟವು ಸುಲಭವಾಗಿ 325-330 ಕ್ಷೇತ್ರಗಳಲ್ಲಿ ಜಯಿಸಲಿದೆ. ಮತ್ತೊಂದೆಡೆ ಕಾಂಗ್ರೆಸ್‌ ಪಕ್ಷವು 60-62 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂಬುದಾಗಿ ಸಮೀಕ್ಷಾ ವರದಿ ತಿಳಿಸಿದೆ. ಹಾಗಾಗಿ, ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವೇ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂಬುದು ವರದಿಯ ಸಾರಾಂಶವಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದೇ 300 ಸೀಟುಗಳಲ್ಲಿ ಗೆದ್ದರೂ ಕೆಲ ರಾಜ್ಯಗಳಿಗೆ ಬಿಜೆಪಿಗೆ ಅನುಕೂಲವಾದರೆ, ಕೆಲ ರಾಜ್ಯಗಳಲ್ಲಿ ಬಿಜೆಪಿಗೆ ಕಡಿಮೆ ಸ್ಥಾನಗಳು ಲಭಿಸಲಿವೆ ಎಂದು ಹೇಳಲಾಗುತ್ತಿದೆ. ಬಿಹಾರ, ಹರಿಯಾಣ, ಮಹಾರಾಷ್ಟ್ರ ಹಾಗೂ ರಾಜಸ್ಥಾನದಲ್ಲಿ ಬಿಜೆಪಿಯ ಸ್ಥಾನಗಳು ಕಡಿಮೆಯಾಗಲಿವೆ. ಆದರೆ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಬಿಜೆಪಿಗೆ ಹೆಚ್ಚಿನ ಕ್ಷೇತ್ರಗಳು ಬರಲಿವೆ. ತಮಿಳುನಾಡು ಹಾಗೂ ಒಡಿಶಾ ಕೂಡ ಬಿಜೆಪಿಗೆ ಹೆಚ್ಚಿನ ಕ್ಷೇತ್ರಗಳನ್ನು ತಂದುಕೊಡಲಿವೆ ಎಂಬುದಾಗಿ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Kangana Ranaut: ಈ ಗುಲಾಬಿಯು ನಿಮಗಾಗಿ; ಮೋದಿಗೆ ಕೆಂಪು ಗುಲಾಬಿ ಕೊಟ್ಟು ಸ್ವಾಗತಿಸಿದ ಕಂಗನಾ! Photo ಇದೆ

Continue Reading

ಬೆಂಗಳೂರು

ವಿಸ್ತಾರ ಸಂಪಾದಕೀಯ: ಕಸ ವಿಲೇವಾರಿಗೆ ಹೊಸ ಸಂಸ್ಥೆ, ಜಾರಿಕೊಳ್ಳುವ ನೆಪ ಆಗದಿರಲಿ

ಭಾರತದಲ್ಲಿ ಇಂದೋರ್ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಗಳಿಸಿದೆ. ನಮ್ಮ ಹಲವು ಹಿಂದಿನ ಸಚಿವರು ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿಯೂ ಇದ್ದಾರೆ. ಏನೇನು ಕಲಿತುಕೊಂಡು ಬಂದಿದ್ದಾರೆ, ಕಲಿತದ್ದನ್ನು ಅನ್ವಯಿಸಲಾಗಿದೆಯೇ ಇಲ್ಲವೇ ಎಂಬುದು ತಿಳಿಯದು. ಹಾಗೆ ನೋಡಿದರೆ ಉತ್ತರ ಭಾರತದ ಹೆಚ್ಚಿನ ನಗರಗಳಿಗಿಂತ ಬೆಂಗಳೂರಿನ ತ್ಯಾಜ್ಯ ನಿರ್ವಹಣೆ ಉತ್ತಮವಾಗಿದೆ. ಇನ್ನಷ್ಟು ಉತ್ತಮ ಆಗಬೇಕಿದೆ.

VISTARANEWS.COM


on

Vistara editorial
Koo

ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಸ ವಿಲೇವಾರಿ (waste disposal) ಸಮಸ್ಯೆ ಬೃಹತ್‌ ಆಗಿ ಬೆಳೆದು ನಿಂತಿದೆ. ಬಿಬಿಎಂಪಿಯಲ್ಲಿ (BBMP) ಸಾಕಷ್ಟು ಎಂಜಿನಿಯರ್‌ಗಳು (Engineers) ಇದಕ್ಕಾಗಿಯೇ ಇದ್ದರೂ ಇದನ್ನು ನಿರ್ವಹಿಸುವುದು ಸವಾಲೇ ಆಗಿದೆ. ಹೀಗಾಗಿ, ರಾಜ್ಯ ಸರ್ಕಾರದಿಂದ ಕಸ ವಿಲೇವಾರಿಗೆ ಇದೇ ಜೂನ್‌ 1ರಿಂದ ಹೊಸ ಯೋಜನೆ ಜಾರಿಯಾಗುತ್ತಿದೆ. ಘನ ತ್ಯಾಜ್ಯ ವಿಲೇವಾರಿಗಾಗಿಯೇ (garbage disposal) ಒಂದು ಕಂಪನಿಯನ್ನು ರಾಜ್ಯ ಸರ್ಕಾರ ಸ್ಥಾಪಿಸಿದೆ. “ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ” ಹೆಸರಿನ ಈ ಕಂಪನಿ ಘನತ್ಯಾಜ್ಯ ನಿರ್ವಹಣೆಯನ್ನು ಕೈಗೆತ್ತಿಕೊಳ್ಳಲಿದ್ದು, ಇನ್ನು ಮುಂದೆ ನಗರದಲ್ಲಿ ಕಸದ ಸಮಸ್ಯೆ ಕಂಡುಬಂದರೆ ಅದನ್ನು ಈ ಕಂಪನಿಯ ಮುಂದೆ ಪ್ರಶ್ನಿಸಬೇಕಾಗಲಿದೆ. ಒಂದು ರೀತಿಯಿಂದ ಇದಕ್ಕೊಂದು ಪ್ರತ್ಯೇಕ ವ್ಯವಸ್ಥೆ ಇರುವುದು ಒಳ್ಳೆಯದು.

ರಾಜ್ಯ ಸರ್ಕಾರ ಹಾಗೂ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ ಜಂಟಿಯಾಗಿ ಈ ಸಂಸ್ಥೆಯನ್ನು ನಿರ್ಮಾಣ ಮಾಡಿವೆ. ಇನ್ನು ಮುಂದೆ ಈ ಕಂಪನಿಯಿಂದಲೇ ಕಸ ಸಂಗ್ರಹಣೆ, ಸಾಗಾಣಿಕೆ ಹಾಗೂ ಹಾಗೂ ವಿಲೇವಾರಿ ಕಾರ್ಯ ನಡೆಯಲಿದೆ. ಜೂನ್ 1ರಿಂದ ಮನೆಮನೆಯಿಂದ ಅಟೋದಲ್ಲಿ ಕಸ ಸಂಗ್ರಹಣೆ, ಸಂಗ್ರಹಿಸಿದ ಕಸವನ್ನು ಟಿಪ್ಪರ್ ಲಾರಿಗಳ ಮೂಲಕ ಕಸದ ಸಂಸ್ಕರಣಾ ಘಟಕ ಅಥವಾ ಕ್ಯಾರಿಗಳಿಗೆ ಸಾಗಿಸುವುದು ಈ ಸಂಸ್ಥೆಯ ಹೊಣೆ. ಬಿಬಿಎಂಪಿ ಅಡಿಯಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ನಿರ್ವಹಿಸುತ್ತಿರುವ ಅಟೋ, ಟಿಪ್ಪರ್, ಕಾಂಪ್ಯಾಕ್ಟರ್ ಚಾಲಕರು, ಸಹಾಯಕರು ಕಂಪನಿ ವ್ಯಾಪ್ತಿಗೆ ಬರಲಿದ್ದಾರೆ. ಘನತ್ಯಾಜ್ಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ವಾರ್ಡ್‌ ಮಟ್ಟದ ಎಂಜಿನಿಯರ್‌ಗಳು, ಸಿಬ್ಬಂದಿಗಳು ಹಾಗೂ ಮಾರ್ಷಲ್‌ಗಳು ಕಂಪನಿ ಅಧೀನಕ್ಕೆ ಬರಲಿದ್ದಾರೆ. ಈ ಅಧಿಕಾರಿಗಳ, ಸಿಬ್ಬಂದಿಗಳ ವೇತನವನ್ನು ಕಂಪನಿಯೇ ಪಾವತಿ ಮಾಡಲಿದೆ. ನಗರದಲ್ಲಿ ಇರುವ 7 ಕಸ ಸಂಸ್ಕರಣಾ ಘಟಕಗಳು ಕಂಪನಿ ವ್ಯಾಪ್ತಿಗೆ ಬರಲಿವೆ. ಪೌರ ಕಾರ್ಮಿಕರು, ಗುತ್ತಿಗೆ ಪೌರಕಾರ್ಮಿಕರು ಬಿಬಿಎಂಪಿ ಅಧೀನದಲ್ಲಿ ಕಾರ್ಯ ನಿರ್ವಹಿಸಲಿದ್ದು, ಇವರಿಗೆ ಬಿಬಿಎಂಪಿಯಿಂದ ವೇತನ ದೊರೆಯಲಿದೆ. ಪೌರಕಾರ್ಮಿಕರು ಕೇವಲ ಕಸ ಗುಡಿಸುವುದು, ಸಾರ್ವಜನಿಕ ಸ್ಥಳಗಳನ್ನು ಕ್ಲೀನ್ ಮಾಡುವುದು ಮಾಡಲಿದ್ದಾರೆ. ಘನತ್ಯಾಜ್ಯ ಇಲಾಖೆಯನ್ನು ಆರೋಗ್ಯ ಇಲಾಖೆ ಜೊತೆ ವಿಲೀನ ಮಾಡಿ ಅದೇಶ ಹೊರಡಿಸಲಾಗಿದ್ದು, ಇನ್ನು ಮುಂದೆ ಆರೋಗ್ಯ ಮತ್ತು ನೈರ್ಮಲ್ಯ ಇಲಾಖೆ ಎಂದು ಕರೆಯಲಾಗುತ್ತದೆ.

2012ರಿಂದಲೇ ಘನತ್ಯಾಜ್ಯ ನಿರ್ವಹಣೆ ಬಗ್ಗೆ ಹೈಕೋರ್ಟ್, ಬಿಬಿಎಂಪಿಯ ಕಿವಿ ಹಿಂಡುತ್ತ ಬಂದಿದೆ. ಬೆಂಗಳೂರಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ 2012ರಲ್ಲಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಪೀಠ ವಿಚಾರಣೆ ನಡೆಸಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಯ ಸಾಮರ್ಥ್ಯ ವೃದ್ಧಿಸಲು ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳುವಂತೆ ಸರ್ಕಾರ ಮತ್ತು ಪಾಲಿಕೆಗೆ ಹೈಕೋರ್ಟ್ ಇತ್ತೀಚೆಗೆ ಸೂಚನೆ ನೀಡಿತ್ತು. ಅದರನ್ವಯ ಕ್ರಮ ಕೈಗೊಳ್ಳಲಾಗುತ್ತಿದೆ.

ಭಾರತದಲ್ಲಿ ಇಂದೋರ್ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಗಳಿಸಿದೆ. ನಮ್ಮ ಹಲವು ಹಿಂದಿನ ಸಚಿವರು ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿಯೂ ಇದ್ದಾರೆ. ಏನೇನು ಕಲಿತುಕೊಂಡು ಬಂದಿದ್ದಾರೆ, ಕಲಿತದ್ದನ್ನು ಅನ್ವಯಿಸಲಾಗಿದೆಯೇ ಇಲ್ಲವೇ ಎಂಬುದು ತಿಳಿಯದು. ಹಾಗೆ ನೋಡಿದರೆ ಉತ್ತರ ಭಾರತದ ಹೆಚ್ಚಿನ ನಗರಗಳಿಗಿಂತ ಬೆಂಗಳೂರಿನ ತ್ಯಾಜ್ಯ ನಿರ್ವಹಣೆ ಉತ್ತಮವಾಗಿದೆ. ಇನ್ನಷ್ಟು ಉತ್ತಮ ಆಗಬೇಕಿದೆ. ಆದರೆ ಸಂಸ್ಥೆ ಬದಲಾಯಿಸಿದ ಮಾತ್ರಕ್ಕೆ ನಿರ್ವಹಣೆ ಉತ್ತಮಗೊಳ್ಳುತ್ತದೆ ಎಂದೇನಿಲ್ಲ. ಕಂಪನಿಗೂ ಬಿಬಿಎಂಪಿಗೂ ಹಂಚಿಕೊಳ್ಳಲಾದ ಕಾರ್ಯಗಳಲ್ಲಿ ಭಿನ್ನಮತ ತಲೆದೋರಬಾರದು. ಕಸದ ಸಮಸ್ಯೆಯಿಂದ ಬಿಬಿಎಂಪಿ ಜಾರಿಕೊಳ್ಳಲು ಇದು ನೆಪ ಆಗಬಾರದು. ಈ ಬದಲಾವಣೆಗಳಿಂದ ಮುಂದಿನ ದಿನಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ ಕಸದ ಸಮಸ್ಯೆ ಇರವುದಿಲ್ಲವೇ, ಗಾರ್ಬೆಜ್ ಸಿಟಿ ಗಾರ್ಡನ್ ಸಿಟಿ ಆಗಲಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಕಾದು ನೋಡಬೇಕಿದೆ.

ಇದನ್ನೂ ಓದಿ: Waste Disposal: ಕಸ ವಿಲೇವಾರಿ ಇನ್ನು ಬಿಬಿಎಂಪಿ ಕೆಲಸ ಅಲ್ಲ! ಅದಕ್ಕಾಗಿಯೇ ಬರುತ್ತಿದೆ ಹೊಸ ಸಂಸ್ಥೆ

Continue Reading

ಕ್ರೀಡೆ

SRH vs RR: ಹೈದರಾಬಾದ್​ಗೆ ಗೆಲುವಿನ ‘ಸನ್​ರೈಸ್’; ಫೈನಲ್​ನಲ್ಲಿ ಕೆಕೆಆರ್ ವಿರುದ್ಧ ಕಣಕ್ಕೆ​

SRH vs RR: ಬೌಲರ್‌ಗಳ ದಾಳಿಯ ನಡುವೆಯೂ ಹೆನ್ರಿಚ್​ ಕ್ಲಾಸೆನ್​ ಅರ್ಧಶತಕ ಬಾರಿಸಿ ಆಧರಿಸಿ ನಿಂತ ಪರಿಣಾಮ ತಂಡ 150ರ ಗಡಿ ದಾಟಿ ಉತ್ತಮ ರನ್​ ಕಲೆಹಾಕಿತು. ಒಂದೆಡೆ ವಿಕೆಟ್‌ಗಳು ಬಡಬಡನೆ ಉರುಳುತ್ತಿದ್ದರೂ ಕ್ಲಾಸೆನ್​ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಇದು ಫಲ ಕೊಟ್ಟಿತು.

VISTARANEWS.COM


on

SRH vs RR
Koo

ಚೆನ್ನೈ: ಶುಕ್ರವಾರ ನಡೆದ ಐಪಿಎಲ್​ನ​ ಕ್ವಾಲಿಫೈಯರ್-2​ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್​(Sunrisers Hyderabad) ತಂಡ ರಾಜಸ್ಥಾನ್​ ರಾಯಲ್ಸ್(SRH vs RR)​ ವಿರುದ್ಧ 36 ರನ್​ಗಳ ಭರ್ಜರಿ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿದೆ. ಮೇ 26ರಂದು ನಡೆಯುವ ಫೈನಲ್​ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಈ ಪಂದ್ಯ ಕೂಡ ಚಿದಂಬರಂ ಸ್ಟೇಡಿಯಂನಲ್ಲೇ ನಡೆಯಲಿದೆ.​

ಇಲ್ಲಿನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಸನ್​ರೈಸರ್ಸ್​ ಹೈದರಾಬಾದ್​ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 175 ರನ್​ ಬಾರಿಸಿತು. ಜವಾಬಿತ್ತ ರಾಜಸ್ಥಾನ್​ ಉತ್ತಮ ಆರಂಭ ಪಡೆದರೂ ಕೂಡ ಆ ಬಳಿಕ ನಾಟಕೀಯ ಕುಸಿತ ಕಂಡು 7 ವಿಕೆಟ್​ ನಷ್ಟಕ್ಕೆ 139 ರನ್​ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ರಾಜಸ್ಥಾನ್​ ತಂಡದ ಸೋಲು ಕಂಡು ಪುಟ್ಟ ಅಭಿಮಾನಿಯೊಬ್ಬಳು ಕಣ್ಣೀರು ಸುರಿಸಿದ ದೃಶ್ಯ ಕೂಡ ಕಂಡು ಬಂತು. ಅತ್ತ ಹೈದರಾಬಾದ್​ ತಂಡದ ಮಾಲಕಿ ಕಾವ್ಯಾ ಮಾರನ್​ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ವಿಕೆಟ್​ ಬಿದ್ದಾಗಲೆಲ್ಲಾ ಕುಣಿದು ಕುಪ್ಪಳಿಸುತ್ತಾ, ತನ್ನ ತಂದೆಯನ್ನು ತಬ್ಬಿಕೊಳ್ಳುತ್ತಾ ಸಂಭ್ರಮಿಸುತ್ತಿದ್ದರು.

ಚೇಸಿಂಗ್​ ವೇಳೆ ರಾಜಸ್ಥಾನ್(Rajasthan Royals)​ ತಂಡಕ್ಕೆ ಆಸರೆಯಾದದ್ದು ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್​ ಮಾತ್ರ. ತಂಡ 24 ರನ್​ ಗಳಿಸಿದ್ದ ವೇಳೆ ಟಾಮ್ ಕೊಹ್ಲರ್-ಕ್ಯಾಡ್ಮೋರ್(10) ರೂಪದಲ್ಲಿ ಮೊದಲ ವಿಕೆಟ್​ ಕಳೆದುಕೊಂಡಿತು. ದ್ವಿತೀಯ ವಿಕೆಟ್​ಗೆ ಜತೆಯಾದ ನಾಯಕ ಸಂಜು ಸ್ಯಾ,ಮ್ಸನ್​ ಮತ್ತು ಯಶಸ್ವಿ ಜೈಸ್ವಾಲ್​ ಕೆಲ ಕಾಲ ಜವಾಬ್ದಾರಿಯುತ ಬ್ಯಾಟಿಂಗ್​ ಮೂಲಕ ತಂಡಕ್ಕೆ ನೆರವಾದರು. ಆದರೆ ಈ ಜತೆಯಾಟ ಹೆಚ್ಚು ಹೊತ್ತು ಸಾಗಲಿಲ್ಲ. ಸ್ಯಾಮ್ಸನ್​ 10 ರನ್​ ಗಳಿಸಿದ್ದ ವೇಳೆ ವಿಕೆಟ್​ ಕಳೆದುಕೊಂಡರು. ಆ ಬಳಿಕ ಬಂದ ರಿಯಾನ್​ ಪರಾಗ್​(6), ಆರ್​ ಅಶ್ವಿನ್​(0), ಶಿಮ್ರಾನ್ ಹೆಟ್​ಮೇರ್​(4) ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಪರೇಡ್​ ನಡೆಸಿದರು. ಯಾರೂ ಕೂಡ ತಂಡಕ್ಕೆ ಆಸರೆಯಾಗುವಲ್ಲಿ ಯಶಸ್ಸು ಕಾಣಲಿಲ್ಲ. ಜೈಸ್ವಾಲ್​ 3 ಸಿಕ್ಸರ್​ ಮತ್ತು 4 ಬೌಂಡರಿ ಬಾರಿಸಿ 42 ರನ್​ ಗಳಿಸಿದರು.

ಅಂತಿಮ ಹಂತದಲ್ಲಿ ಧೃವ್​ ಜುರೇಲ್​ ಅರ್ಧಶತಕ ಬಾರಿಸುವ ಮೂಲಕ ಶಕ್ತಿ ಮೀರಿದ ಬ್ಯಾಟಿಂಗ್​ ಹೋರಾಟ ನಡೆಸಿದರು. ಇದೇ ವೇಳೆ ನಟರಾಜ್​ ಓವರ್​ನಲ್ಲಿ ಗಂಟಲಿಗೆ ಚೆಂಡು ತಾಗಿಸಿಕೊಂಡು ಸಣ್ಣ ಮಟ್ಟಿನ ಗಾಯಕ್ಕೆ ತುತ್ತಾದರು. ಆದರೆ ಅವರ ಆಟಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ಸಿಗುತ್ತಿದ್ದರೆ ರಾಜಸ್ಥಾನ್​ಗೆ ಗೆಲುವು ಒಲಿಯುವ ಸಾಧ್ಯತೆ ಇತ್ತು. ವೆಸ್ಟ್​ ಇಂಡೀಸ್​ ತಂಡದ ನಾಯಕ ರೋವ್ಮನ್ ಪೊವೆಲ್‌(6) ಕೂಡ ವಿಫಲರಾದರು. ಹೈದರಾಬಾದ್​ ಪರ ಶಾಬಾಜ್​ ಅಹ್ಮದ್​ 4 ಓವರ್​ಗೆ ಕೇವಲ 23 ರನ್​ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್​ ಕಡೆವಿದರು. ಪಾರ್ಟ್​ ಟೈಮ್​ ಬೌಲರ್​ ಅಭಿಷೇಕ್​ ಶರ್ಮ ಈ ಪಂದ್ಯದಲ್ಲಿ ಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರುವ ಮೂಲಕ 24 ರನ್​ಗೆ 2 ವಿಕೆಟ್​ ಕಿತ್ತರು. ಅಜೇಯರಾಗಿ ಉಳಿದ ಜುರೇಲ್ 35 ಎಸೆತಗಳಿಂದ 56 ರನ್​ ಬಾರಿಸಿದರು. ಇದರದ್ದೇ ತಂಡದ ಪರ ಅತ್ಯಧಿಕ ಗಳಿಕೆ.

ಮೊದಲು ಬ್ಯಾಟಿಂಗ್​ ನಡೆಸಿದ ಹೈದರಾಬಾದ್​ ತಂಡ ಕಳೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅನುಭವಿಸಿ​​ದಂತೆ ಈ ಪಂದ್ಯದಲ್ಲಿಯೂ ಆರಂಭಿಕ ಆಘಾತ ಎದುರಿಸಿತು. ಎಡಗೈ ಬ್ಯಾಟರ್​ ಟ್ರೆಂಟ್​ ಬೌಲ್ಟ್​ ಅವರ ಮೊದಲ ಓವರ್​ನಲ್ಲಿಯೇ ಬಡಬಡನೆ ತಲಾ ಒಂದು ಸಿಕ್ಸರ್ ಮತ್ತು ​ಬೌಂಡರಿ ಬಾರಿಸಿದರೂ ಈ ಬಿರುಸನ್ನು ಕಾಯ್ದುಕೊಳ್ಳಲು ಅವರಿಂದಾಗಲಿಲ್ಲ. ಇದೇ ಓವರ್​ನ ಅಂತಿಮ ಎಸೆತದಲ್ಲಿ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು.

ಇದನ್ನೂ ಓದಿ IPL 2024 : ಅಭಿಮಾನಿಗಳ ದುರಂಹಕಾರವೇ ಆರ್​​ಸಿಬಿ ಸೋಲಿಗೆ ಕಾರಣ ಎಂದ ಮಾಜಿ ಕ್ರಿಕೆಟಿಗ

ದ್ವಿತೀಯ ವಿಕೆಟ್​ಕೆ ಆಡಲಿಳಿದ ರಾಹುಲ್​ ತ್ರಿಪಾಠಿ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ಕೊಟ್ಟು 15 ಎಸೆತಗಳಿಂದ 5 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 37 ರನ್​ ಬಾರಿಸಿ ವಿಕೆಟ್​ ಕಳೆದುಕೊಂಡರು. ಹಲವು ಪಂದ್ಯಗಳ ಬಳಿಕ ಈ ಪಂದ್ಯದಲ್ಲಿ ಆಡಿದ ಐಡೆನ್​ ಮಾರ್ಕ್ರಮ್​ ಕೇವಲ 1 ರನ್​ಗೆ ಔಟಾಗಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು. ಒಂದೇ ಓವರ್​ನಲ್ಲಿ ಬೌಲ್ಟ್​​ 2 ಪ್ರಮುಖ ವಿಕೆಟ್​ ಬೇಟೆಯಾಡಿದರು. ಅಲ್ಲಿಗೆ ಆರಂಭಿಕ ಮೂರು ವಿಕೆಟ್​ ಕೂಡ ಬೌಲ್ಟ್​​ ಪಾಲಾಯಿತು.

ಆಪದ್ಬಾಂಧವ ಕ್ಲಾಸೆನ್​


ಬೌಲರ್‌ಗಳ ದಾಳಿಯ ನಡುವೆಯೂ ಹೆನ್ರಿಚ್​ ಕ್ಲಾಸೆನ್​ ಅರ್ಧಶತಕ ಬಾರಿಸಿ ಆಧರಿಸಿ ನಿಂತ ಪರಿಣಾಮ ತಂಡ 150ರ ಗಡಿ ದಾಟಿ ಉತ್ತಮ ರನ್​ ಕಲೆಹಾಕಿತು. ಒಂದೆಡೆ ವಿಕೆಟ್‌ಗಳು ಬಡಬಡನೆ ಉರುಳುತ್ತಿದ್ದರೂ ಕ್ಲಾಸೆನ್​ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಇದು ಫಲ ಕೊಟ್ಟಿತು. ಕ್ಲಾಸೆನ್​ ಹೊರತುಪಡಿಸಿದರೆ ಟ್ರಾವಿಸ್​ ಹೆಡ್​ ಪ್ರದರ್ಶನ ಗಮನಾರ್ಹ ಮಟ್ಟದಲ್ಲಿತ್ತು. ಹೆಡ್​ 34 ರನ್​ ಬಾರಿಸಿದರು. ಹೆಡ್​ ಮತ್ತು ಕ್ಲಾಸೆನ್​ ಸೇರಿಕೊಂಡು 4 ವಿಕೆಟ್​ಗೆ 42 ರನ್​ಗಳ ಜತೆಯಾಟ ನಡೆಸಿದರು. 18 ಓವರ್​ ತನಕ ಬ್ಯಾಟಿಂಗ್​ ನಡೆಸಿದ ಕ್ಲಾಸೆನ್​ 34 ಎಸೆತಗಳಿಂದ ಭರ್ತಿ 50 ರನ್​ ಗಳಿಸಿ ಸಂದೀಪ್​ ಶರ್ಮಾ ಅವರ ಸ್ಲೋ ಯಾರ್ಕರ್​ ಎಸೆತದ ಮರ್ಮವನ್ನು ಅರಿಯುವಲ್ಲಿ ವಿಫಲವಾಗಿ ಕ್ಲೀನ್​ ಬೌಲ್ಡ್​ ಆದರು. ಅವರ ಅರ್ಧಶತಕದ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 4 ಸಿಕ್ಸರ್ ಸಿಡಿಯಿತು.

ರಾಜಸ್ಥಾನ್​ ಪರ ಚಹಲ್​ ವಿಕೆಟ್​ ಕೀಳದಿದ್ದರೂ ಕೂಡ ಪ್ರಮುಖ ಮೂರು ಆಟಗಾರರ ಕ್ಯಾಚ್​ ಹಿಡಿದು ಮಿಂಚಿದರು. ಅವೇಶ್​ ಖಾನ್​ ಅವರು ಅಪಾಯಕಾರಿ ಅಬ್ದುಲ್​ ಸಮದ್​(0) ಮತ್ತು ನಿತೇಶ್​ ರೆಡ್ಡಿ(5) ಅವರನ್ನು ಸತತ ಎಸೆತಗಳಿಂದ ಔಟ್ ಮಾಡಿದ್ದು ಹೈದರಾಬಾದ್​ನ ದೊಡ್ಡ ಮೊತ್ತಕ್ಕೆ ಹಿನ್ನಡೆಯಾಯಿತು. ಅಂತಿ​ಮ ಹಂತದಲ್ಲಿ ಶಹಬಾಜ್ ಅಹಮದ್ 18 ರನ್​ ಬಾರಿಸಿದರು. ರಾಜಸ್ಥಾನ್​ ಪರ ಬೌಲ್ಟ್​ ಮತ್ತು ಅವೇಶ್​ ಖಾನ್​ ತಲಾ 3 ವಿಕೆಟ್​ ಕಿತ್ತರೆ, ಸಂದೀಪ್​ ಶರ್ಮ 2 ವಿಕೆಟ್​ ಪಡೆದರು.

Continue Reading

ಕರ್ನಾಟಕ

Prajwal Revanna Case: ರಾಜ್ಯಕ್ಕೆ ಬಂದು ಕಾನೂನು ಗೌರವಿಸಿ; ಪ್ರಜ್ವಲ್‌ಗೆ ವಿಸ್ತಾರ ನ್ಯೂಸ್‌ ಬಹಿರಂಗ ಪತ್ರ

Prajwal Revanna Case: ಪ್ರಜ್ವಲ್‌ ರೇವಣ್ಣಗೆ ವಿಸ್ತಾರ ನ್ಯೂಸ್‌ ಕೂಡ ಬಹಿರಂಗ ಪತ್ರದ ಮೂಲಕ ಕರುನಾಡಿಗೆ ಬರುವಂತೆ ಆಗ್ರಹಿಸಿದೆ. “ನಿಮಗಾಗಿ ಹಗಲು-ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ದಕ್ಷ ಅಧಿಕಾರಿಗಳ ಎಸ್‌ಐಟಿ ತಂಡ ಮನೆ-ಮಠ ಬಿಟ್ಟು ಏರ್‌ಪೋರ್ಟ್‌ನಲ್ಲಿ ನಿಮಗೋಸ್ಕರ ಕಾಯಬೇಕಾ..? ನಿಮ್ಮಿಂದಾಗಿದೆ ಎನ್ನಲಾಗ್ತಿರೋ ಪರಮ ಪಾಪದ ಕೂಪದಲ್ಲಿ ನೊಂದು ಬೆಂದು ಹೋಗಿರೋ ಆ ಹೆಣ್ಣುಮಕ್ಕಳ ಬಿಸಿಯುಸಿರು ನಿಮ್ಮನ್ನ ಸುಮ್ಮನೆ ಬಿಡದು” ಎಂದು ವಿಸ್ತಾರ ನ್ಯೂಸ್‌ ತರಾಟೆಗೆ ತೆಗೆದುಕೊಂಡಿದೆ. ನಮ್ಮ ಪತ್ರದ ಪೂರ್ಣಪಾಠ ಇಲ್ಲಿದೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್‌ ರೇವಣ್ಣ (Prajwal Revanna Case) ಕೂಡಲೇ ಕರ್ನಾಟಕಕ್ಕೆ ಬಂದು, ನೆಲದ ಕಾನೂನು ಗೌರವಿಸಬೇಕು ಎಂದು ಸಂಸದನ ಅಜ್ಜ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (H D Deve Gowda) ಅವರು ಬಹಿರಂಗ ಪತ್ರ ಬರೆದಿದ್ದಾರೆ. ರಾಜ್ಯದ ಜನರು ಕೂಡ ಪ್ರಜ್ವಲ್‌ ರೇವಣ್ಣ ವಾಪಸ್‌ ಬರಬೇಕು ಎಂಬುದಾಗಿ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ, ‘ವಿಸ್ತಾರ ನ್ಯೂಸ್’‌ ಕೂಡ ಪ್ರಜ್ವಲ್‌ ರೇವಣ್ಣಗೆ ಬಹಿರಂಗ ಪತ್ರದ ಮೂಲಕ ಕರ್ನಾಟಕಕ್ಕೆ ಬರುವಂತೆ ರಾಜ್ಯದ ಜನರ ಪರವಾಗಿ ಆಗ್ರಹಿಸಿದೆ.

ಹೀಗಿದೆ ವಿಸ್ತಾರ ನ್ಯೂಸ್ ಪತ್ರದ ಸಾರಾಂಶ…

“ಮಿಸ್ಟರ್‌ ಪ್ರಜ್ವಲ್‌, ನಿಮ್ಮನ್ನ ಇವತ್ತು ಓರ್ವ ಸಂಸದ ಅಂತಾ ಕರೆಯೋದಕ್ಕೆ ನಿಜಕ್ಕೂ ಅಸಹ್ಯವೆನ್ನಿಸ್ತಿದೆ. ಅಮೂಲ್ಯ ಮತ ಹಾಕಿ ನಿಮ್ಮನ್ನ ಗೆಲ್ಲಿಸಿದ ಸಮಸ್ತ ಹಾಸನದ ಜನತೆ ಇಂದು ಪಾಪಪ್ರಜ್ಞೆಯಲ್ಲಿ ಮುಳುಗಿಹೋಗಿದ್ದಾರೆ. ಯಾಕೆಂದ್ರೆ, ಪ್ರಜಾಸತ್ತಾತ್ಮಕವಾದ ನಿಮ್ಮ ಹುದ್ದೆಗೆ ನಯಾಪೈಸೆ ಕಿಮ್ಮತ್ತಿಲ್ಲದ ಹಾಗೆ ನಡೆದುಕೊಂಡವರು ನೀವು. ಚಿಕ್ಕ ವಯಸ್ಸಿಗೆ ಸಂಸತ್‌ ಪ್ರವೇಶಿಸಿದ್ದ ನೀವು ಯುವ ಪೀಳಿಗೆಗೆ ಆದರ್ಶವಾಗಿ ನಿಲ್ಲಬೇಕಿತ್ತು. ಆದ್ರೆ ಇಂದು ನಿಮ್ಮ ಹೆಸರನ್ನೂ ಅವರ ಮಕ್ಕಳಿಗೆ ಇಡೋಕೆ ನಾಡಿನ ಪೋಷಕರು ಹಿಂದೇಟು ಹಾಕೋ ಸನ್ನಿವೇಶ ಸೃಷ್ಟಿಸಿಕೊಂಡುಬಿಟ್ಟಿದ್ದೀರಿ” ಎಂಬುದಾಗಿ ವಿಸ್ತಾರ ನ್ಯೂಸ್‌ ತರಾಟೆಗೆ ತೆಗೆದುಕೊಂಡಿದೆ.

ಸಮಸ್ತ ಕರುನಾಡೇ ಹೆಮ್ಮೆಪಡುವಂಥಾ ಕುಟುಂಬದ ಕುಡಿಯಾದ ನೀವು ಇವತ್ತು ಖಳನಾಯಕನ ಜಾಗದಲ್ಲಿ ನಿಂತಿದ್ದೀರಿ. ಒಂದಂತೂ ಸತ್ಯ, ಸಮಸ್ತ ಕರುನಾಡೇ ಗರ್ವದಿಂದ ಬೀಗುವಂತೆ ಪ್ರಧಾನಿ ಹುದ್ದೆಗೇರಿದವರು ನಿಮ್ಮ ತಾತ. ಮರೆಯದಿರಿ, ಅವಿರಿಗೀಗ ಬರೋಬ್ಬರಿ 92 ವರ್ಷ ವಯಸ್ಸು. ಅವರ ಸಂಧ್ಯಾಕಾಲದಲ್ಲಿ ನಿಜಕ್ಕೂ ನಗುನಗುತ್ತಲಿರಬೇಕಿದ್ದ ಜೀವ ಇಂದು ನೋವನ್ನು ಹೇಳಿಕೊಳ್ಳಲಾಗದೆ, ಹೊರಗೂ ಹಾಕಲಾರದೆ ಮೂಕರೋದನದಲ್ಲಿದೆ. ಒಂದೇ ಒಂದು ಕ್ಷಣಕ್ಕೂ ನಿಮ್ಮ ಮನಸ್ಸಿಗೆ ಅಂದು ಅವರ ನೆನಪಾಗಲಿಲ್ಲವೇ…

ನಿಮ್ಮ ವಿರುದ್ಧದ ಆರೋಪಗಳು ಎಂಥಾ ಪ್ರಜ್ಞಾವಂತ ಸಮಾಜವೇ ಆಗಿದ್ರೂ ಕ್ಯಾಕರಿಸಿ ಮುಖಕ್ಕೆ ಉಗಿಯೋಥರದ್ದು ರೀ. ಹೋಗ್ಲಿ ನೀವು ತಪ್ಪೇ ಮಾಡಿಲ್ಲ ಅನ್ನೋದಾದ್ರೆ 28 ದಿನಗಳಿಂದ ನೀವು ತಲೆಮರೆಸಿಕೊಂಡಿದ್ಯಾಕೆ. ಅಂದು ಹೇಡಿಯಂತೆ ಕಾರ್ಗತ್ತಲಲ್ಲಿ ಓಡಿಹೋಗಿದ್ದು ಯಾಕೆ? ಓಡಿ ಹೋಗಿಬಿಟ್ರೆ ಮಾಡಿದ ತಪ್ಪು ಮುಚ್ಚಿಹೋಗಿಬಿಡುತ್ತಾ..? ಹಾಗಂತ ನೀವೇನೂ ಒಲಿಂಪಿಕ್ಸ್‌ನಂಥಾ ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದ ಪರಮವೀರರಾ..?

ನಿಮಗಾಗಿ ಹಗಲು-ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ದಕ್ಷ ಅಧಿಕಾರಿಗಳ ಎಸ್‌ಐಟಿ ತಂಡ ಮನೆ-ಮಠ ಬಿಟ್ಟು ಏರ್‌ಪೋರ್ಟ್‌ನಲ್ಲಿ ನಿಮಗೋಸ್ಕರ ಕಾಯಬೇಕಾ..? ನಿಮ್ಮಿಂದಾಗಿದೆ ಎನ್ನಲಾಗ್ತಿರೋ ಪರಮ ಪಾಪದ ಕೂಪದಲ್ಲಿ ನೊಂದು ಬೆಂದು ಹೋಗಿರೋ ಆ ಹೆಣ್ಣುಮಕ್ಕಳ ಬಿಸಿಯುಸಿರು ನಿಮ್ಮನ್ನ ಸುಮ್ಮನೆ ಬಿಡದು. ಆ ಅಸಹಾಯಕ ಜೀವಗಳಿಗೆ ನಿಜಕ್ಕೂ ನ್ಯಾಯ ಸಿಗಲೇಬೇಕು. ಇದು ಸಮಸ್ತ ಕರುನಾಡಿ ಒಕ್ಕೊರಲ ಆಗ್ರಹ.

ನೆನಪಿರಲಿ… ನೀವು ಇಂದು ಸಂಸದನಾಗಿ ನಿಲ್ಲುವಲ್ಲಿ ನಿಮ್ಮ ಕುಟುಂಬಕ್ಕಿರೋ ಆ ವರ್ಚಸ್ಸಿನ ಪಾಲೇ ಹೆಚ್ಚು. ಈ ರಾಜ್ಯದ ಮುಖ್ಯಮಂತ್ರಿಯಾಗಿ ದುಡಿದ ನಿಮ್ಮ ಚಿಕ್ಕಪ್ಪ ಇಂದು ಬಹಿರಂಗವಾಗಿ ಎಲ್ಲಿದ್ರೂ ಬಾರಪ್ಪಾ ಅನ್ನುವಂಥಾ ಅಸಹಾಯಕ ಸ್ಥಿತಿಯನ್ನು ನಿರ್ಮಿಸಿದವರು ನೀವೇ. ನಿಮ್ಮನ್ನ ಎತ್ತಿ, ಮುದ್ದಾಡಿ, ಭವ್ಯ ಭವಿಷ್ಯದ ಕನಸನ್ನು ಕನವರಿಸಿದ್ದ ನಿಮ್ಮ ತಂದೆಯು ನಿಮ್ಮಿಂದಾಗಿ ಜೈಲಿನ ಕತ್ತಲಕೋಣೆಯಲ್ಲಿ ಒಬ್ಬರೇ ಕೂತು ರೋದಿಸಿದ್ದು ನಿಮಗೆ ಗೊತ್ತಿಲ್ವಾ? ನಿಜಕ್ಕೂ ನಿಮ್ಮೊಳಗೊಬ್ಬ ಮಾನವೀಯ ಜೀವಿ ಇಲ್ಲವೇ ಇಲ್ವಾ? ಹೃದಯವೆನ್ನೋದೇ ಕಲ್ಲುಬಂಡೆಯಾಗಿದೆಯಾ? ಪಾಪಪ್ರಜ್ಞೆ ನಿಮ್ಮನ್ನ ಇನ್ನಿಲ್ಲದಂತೆ ಕಾಡ್ತಿಲ್ವಾ?

ನಿಮ್ಮ ತಾಯಿಯ ಮುಖದಲ್ಲಿದ್ದ ನಗು ನಿಮ್ಮಿಂದ ಬಾಡಿ ಹೋಗಿರೋ ಸತ್ಯದ ಅರಿವು ನಿಮಗಿಲ್ವಾ? ನಿಮ್ಮ ಸಹೋದರ ನಾಲ್ಕು ಜನರ ಮುಂದೆ ಮುಖ ಎತ್ತಿ ಮಾತನಾಡದಂಥಾ ಪರಿಸ್ಥಿತಿಯನ್ನು ನಿರ್ಮಿಸಿದ್ದು ನೀವೇ ಅಲ್ವಾ? ಅದೇನೇ ಇರ್ಲಿ. ಇವತ್ತು ನೀವು ಜರ್ಮನಿಯಲ್ಲಿದ್ದೀರೋ, ಇಲ್ಲ ಮತ್ತಿನ್ನೆಲ್ಲೋ ಪುಕ್ಕಲನಂತೆ ಅಡಗಿ ಕುಳಿತಿದ್ದೀರೋ ಅದು ನಿಮಗೆ ಗೊತ್ತು. ಒಂದೇ ಒಂದು ಪ್ರಶ್ನೆ, ನೀವು ದೇಶ ಬಿಟ್ಟು ಓಡಿಹೋಗಿದ್ದಾದ್ರೂ ಯಾಕೆ? ತಪ್ಪು ಮಾಡಿದ್ದೀರೋ, ಇಲ್ವೋ ಅನ್ನೋದನ್ನ ನಿಮ್ಮ ಮನಸಾಕ್ಷಿಯನ್ನೇ ಪ್ರಶ್ನಿಸಿಕೊಂಡು ಬಿಡಿ.

ನಿಮ್ಮ ವಿರುದ್ಧದ ಆರೋಪಗಳೆಲ್ಲ ಕಪೋಲಕಲ್ಪಿತ, ಎದುರಾಳಿಗಳ ಕುತಂತ್ರ, ಷಡ್ಯಂತ್ರವೇ ಅಂತಾ ಭಾವಿಸಿದ್ರೆ, ನೀವ್ಯಾಕೆ 28 ದಿನದಿಂದ ಕದ್ದು ಓಡ್ತಿದ್ದೀರಿ? ಭಾರತಕ್ಕೆ ಬಂದ್ರೆ ಕೇಸ್‌ ಹಾಕ್ತಾರೆ ಅಂತಾ ಭಯನಾ? ಪೊಲೀಸರು ವಿಚಾರಣೆ ಹೆಸರಲ್ಲಿ ಟಾರ್ಚರ್‌ ಕೊಡ್ತಾರೆ ಅಂತ ದಿಗಿಲಾ? ಜೈಲಿಗೆ ಹಾಕಿಬಿಡ್ತಾರೆ ಅಂತಾ ಕೈಕಾಲು ತಣಗಾಗ್ತಿವೆಯಾ? ಹಾಗಾದ್ರೆ, ಒಂದು ಕೆಲಸ ಮಾಡಿ. ಕೋರ್ಟ್‌ ಮುಂದೆ ಬಂದು ಶರಣಾಗಿ.

ಒಂದಲ್ಲ, ಎರಡಲ್ಲ, ಅದೆಷ್ಟು ಜನರು ನಿಮ್ಮಿಂದ ಇಂದು ಕಣ್ಣೀರು ಸುರಿಸ್ತಿದ್ದಾರೋ ಗೊತ್ತಿಲ್ಲ. ಅದೆಷ್ಟು ತಾಯಂದಿರು ನಿಮಗೆ ಹಿಡಿಶಾಪ ಹಾಕ್ತಿದ್ದಾರೋ ತಿಳಿದಿಲ್ಲ. ಸಮಸ್ತ ಹಾಸನವೇ ಇವತ್ತು ತಲೆತಗ್ಗಿಸಿ ನಿಂತಿದೆ ಅಂದ್ರೆ ಅದು ನಿಮ್ಮಿಂದಲೇ ಅನ್ನೋದನ್ನ ಮಾತ್ರ ಮರೆಯದಿರಿ. ಈ ಮಣ್ಣಿನ ಕಾನೂನು ನೊಂದವರಿಗೆ ನ್ಯಾಯದಾನ ಮಾಡಿಯೇ ತೀರುತ್ತದೆ. ಅದೆಷ್ಟು ದಿನ, ಅದೆಲ್ಲೇ ನೀವು ತಲೆಮರೆಸಿಕೊಂಡು ಸುತ್ತಿದ್ರೂ ಪ್ರತಿ ಆರಂಭಕ್ಕೂ ಅಂತ್ಯವಿರುತ್ತೆ. ಪಾಪದ ಕೊಡ ತುಂಬಿ ಬಂದಾಗ ಅದೆಂಥವನೇ ಆದ್ರೂ ತಲೆಬಾಗಲೇಬೇಕು.

ಸಮಸ್ತ ಕರುನಾಡಿನ ಪರವಾಗಿ

ವಿಸ್ತಾರ ನ್ಯೂಸ್‌ ತಂಡ

ಇದನ್ನೂ ಓದಿ: Prajwal Revanna Case: ಪಾಸ್‌ಪೋರ್ಟ್‌ ವಿಚಾರವಾಗಿ ಪ್ರಜ್ವಲ್‌ಗೆ ವಿದೇಶಾಂಗ ಸಚಿವಾಲಯ ನೋಟಿಸ್;‌ ಶೀಘ್ರ ಬಂಧನ?

Continue Reading
Advertisement
Narendra Modi
ದೇಶ5 hours ago

Narendra Modi: ನನ್ನನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ; ಮಮತಾ ಬ್ಯಾನರ್ಜಿಗೆ ಮೋದಿ ಚಾಟಿ

ಕರ್ನಾಟಕ5 hours ago

Driving Bus With Umbrella: ಛತ್ರಿ ಹಿಡಿದು ಬಸ್ ಚಾಲನೆ; ಮೋಜಿಗಾಗಿ ವಿಡಿಯೊ ಮಾಡಿದ ಡ್ರೈವರ್‌, ಕಂಡಕ್ಟರ್‌ ಸಸ್ಪೆಂಡ್‌!

Vistara editorial
ಬೆಂಗಳೂರು5 hours ago

ವಿಸ್ತಾರ ಸಂಪಾದಕೀಯ: ಕಸ ವಿಲೇವಾರಿಗೆ ಹೊಸ ಸಂಸ್ಥೆ, ಜಾರಿಕೊಳ್ಳುವ ನೆಪ ಆಗದಿರಲಿ

SRH vs RR
ಕ್ರೀಡೆ5 hours ago

SRH vs RR: ಹೈದರಾಬಾದ್​ಗೆ ಗೆಲುವಿನ ‘ಸನ್​ರೈಸ್’; ಫೈನಲ್​ನಲ್ಲಿ ಕೆಕೆಆರ್ ವಿರುದ್ಧ ಕಣಕ್ಕೆ​

Electric Shock
ಕ್ರೈಂ6 hours ago

Electric Shock: ಲಿಂಗಸುಗೂರಿನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

Prajwal Revanna Case
ಕರ್ನಾಟಕ6 hours ago

Prajwal Revanna Case: ರಾಜ್ಯಕ್ಕೆ ಬಂದು ಕಾನೂನು ಗೌರವಿಸಿ; ಪ್ರಜ್ವಲ್‌ಗೆ ವಿಸ್ತಾರ ನ್ಯೂಸ್‌ ಬಹಿರಂಗ ಪತ್ರ

Kangana Ranaut
ದೇಶ7 hours ago

Kangana Ranaut: ಈ ಗುಲಾಬಿಯು ನಿಮಗಾಗಿ; ಮೋದಿಗೆ ಕೆಂಪು ಗುಲಾಬಿ ಕೊಟ್ಟು ಸ್ವಾಗತಿಸಿದ ಕಂಗನಾ! Photo ಇದೆ

T20 World Cup 2024
ಕ್ರೀಡೆ7 hours ago

T20 World Cup 2024: ಕೊನೆಗೂ ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಭಾರತದ ಬದ್ಧ ಎದುರಾಳಿ ಪಾಕಿಸ್ತಾನ

Prajwal Revanna Case
ಕರ್ನಾಟಕ7 hours ago

Prajwal Revanna Case: ವಕೀಲ ದೇವರಾಜೇಗೌಡಗೆ ಇನ್ನೂ 14 ದಿನ ಜೈಲೇ ಗತಿ; ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ

Yuzvendra Chahal
ಕ್ರಿಕೆಟ್7 hours ago

Yuzvendra Chahal: ಸಿಕ್ಸರ್​ ಹೊಡೆಸಿಕೊಂಡು ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಚಹಲ್​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು4 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು4 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ5 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ6 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ6 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ6 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ1 week ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌