Under 19 World Cup: ಸೂಪರ್​ ಸಿಕ್ಸ್​ ಪ್ರವೇಶಿಸಿದ ಭಾರತ; ಅಮೆರಿಕ ವಿರುದ್ಧ 201 ರನ್​ ಗೆಲುವು - Vistara News

ಕ್ರೀಡೆ

Under 19 World Cup: ಸೂಪರ್​ ಸಿಕ್ಸ್​ ಪ್ರವೇಶಿಸಿದ ಭಾರತ; ಅಮೆರಿಕ ವಿರುದ್ಧ 201 ರನ್​ ಗೆಲುವು

ಭಾರತ ತಂಡವು(India U19 vs United States U19) ಐಸಿಸಿ ಅಂಡರ್‌-19 ವಿಶ್ವಕಪ್‌(Under 19 World Cup) ಕ್ರಿಕೆಟ್‌ ಕೂಟದ ತನ್ನ ಮೂರನೇ ಪಂದ್ಯದಲ್ಲಿ ಅಮೆರಿಕ ತಂಡವನ್ನು 201 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿ ಸೂಪರ್‌ ಸಿಕ್ಸ್‌ ಹಂತಕ್ಕೇರಿದೆ.

VISTARANEWS.COM


on

Raj Limbani struck in his first over
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬ್ಲೋಮ್‌ಫಾಂಟೇನ್‌: ಆರಂಭಿಕ ಆಟಗಾರ ಅರ್ಶಿನ್ ಕುಲಕರ್ಣಿ(108)​ ಬಾರಿಸಿದ ಆಕರ್ಷಕ ಶತಕದಿಂದಾಗಿ ಭಾರತ ತಂಡವು(India U19 vs United States U19) ಐಸಿಸಿ ಅಂಡರ್‌-19 ವಿಶ್ವಕಪ್‌(Under 19 World Cup) ಕ್ರಿಕೆಟ್‌ ಕೂಟದ ತನ್ನ ಮೂರನೇ ಪಂದ್ಯದಲ್ಲಿ ಅಮೆರಿಕ ತಂಡವನ್ನು 201 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿ ಸೂಪರ್‌ ಸಿಕ್ಸ್‌ ಹಂತಕ್ಕೇರಿದೆ. ಜ.30ರಂದು ನಡೆಯುವ ಸೂಪರ್​ ಸಿಕ್ಸ್​ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್​ ಸವಾಲು ಎದುರಿಸಲಿದೆ.

ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಭಾರತ, ​ಅರ್ಶಿನ್ ಕುಲಕರ್ಣಿ(Arshin Kulkarni) ಹಾಗೂ ಮುಶೀರ್‌ ಖಾನ್​ ಅವರ ಸೊಗಸಾದ ಬ್ಯಾಟಿಂಗ್​ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ ಕೇವಲ 5 ವಿಕೆಟ್​ ನಷ್ಟಕ್ಕೆ
326 ರನ್​ ಬಾರಿಸಿತು. ಬೃಹತ್​ ಮೊತ್ತವನ್ನು ಕಂಡು ಕಂಗಾಲಾದ ಅಮೆರಿಕ 8 ವಿಕೆಟ್​ ಕಳೆದುಕೊಂಡು ಕೇವಲ 125 ರನ್​ ಗಳಿಸಲಷ್ಟೇ ಶಕ್ತವಾಯಿತು. ಭಾರತ 201 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. ಅಚ್ಚರಿ ಎಂದರೆ ಕಳೆದ ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿಯೂ ಭಾರತ 201 ರನ್​ಗಳ ಗೆಲುವು ಸಾಧಿಸಿತ್ತು.

ಭಾರತದ ಇನಿಂಗ್ಸ್​ ಆರಂಭಿಸಿದ ಅರ್ಶಿನ್ ಕುಲಕರ್ಣಿ ತಾಳ್ಮೆಯು ಬ್ಯಾಟಿಂಗ್​ ನಡೆಸಿ ಶತಕ ಬಾರಿಸಿದರು. ಇವರ ಈ ಶತಕದ ಇನಿಂಗ್ಸ್​ನಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್​ ದಾಖಲಾಯಿತು. ಕಳೆದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಶತಕ ಬಾರಿಸಿದ್ದ ​ಮುಶೀರ್‌ ಖಾನ್​ ಈ ಪಂದ್ಯದಲ್ಲಿಯೂ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದರು.

ಮೂರನೇ ವಿಕೆಟ್​ಗೆ ಆಡಲಿಳಿದ ಮುಶೀರ್‌ ಖಾನ್​ 6 ಬೌಂಡರಿ ಮತ್ತು ಒಂದು ಸಿಕ್ಸರ್​ ಸಿಡಿಸಿ 73 ರನ್​ ಗಳಿಸಿ ಅರ್ಧಶತಕ ಬಾರಿಸಿದರು. ನಾಯಕ ಉದಯ್‌ ಸಹರನ್‌(35), ಪ್ರಿಯಾಂಶು ಮೊಲಿಯಾ ಅಜೇಯ 27 ರನ್​ ಬಾರಿಸಿ ತಂಡದ ಬೃಹತ್​ ಮೊತ್ತಕ್ಕೆ ನೆರವು ನೀಡಿದರು.

ಇದನ್ನೂ ಓದಿ IND vs ENG: ಟೀಮ್​ ಇಂಡಿಯಾವನ್ನು ಮಣಿಸಿ ವಿಶೇಷ ದಾಖಲೆ ಬರೆದ ಇಂಗ್ಲೆಂಡ್​

ಭಾರತ ಪರ ಬೌಲಿಂಗ್​ನಲ್ಲಿ ಸಂಘಟಿತ ದಾಳಿ ನಡೆಸಿದ ನಮನ್ ತಿವಾರಿ 9 ಓವರ್​ ಎಸೆದು 3 ಮೇಡನ್​ ಸಹಿತ 20 ರನ್​ಗೆ 4 ವಿಕೆಟ್​ ಕಿತ್ತು ಮಿಂಚಿದರು. ಉಳಿದಂತೆ ಮುರುಗನ್​ ಅಶ್ವಿನ್​, ಪ್ರಿಯಾಂಶು ಮೊಲಿಯಾ, ಸೌಮಿ ಪಾಂಡೆ ಮತ್ತು ರಾಜ್ ಲಿಂಬಾನಿ ತಲಾ ಒಂದು ವಿಕೆಟ್​ ಪಡೆದರು.

ಚೇಸಿಂಗ್​ ನಡೆಸಿದ ಅಮೆರಿಕ ಪರ ಉತ್ಕರ್ಷ್ ಶ್ರೀವಾಸ್ತವ (40) ಮತ್ತು ಅಮೋಗ್​ ಅರೆಪಲ್ಲಿ(27) ಮಾತ್ರ ನಿರೀಕ್ಷಿತ ಮಟ್ಟದ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಉಳಿದ ಎಲ್ಲ ಬ್ಯಾಟರ್​ಗಳು ಅಗ್ಗಕ್ಕೆ ಔಟಾಗಿ ನಿರಾಸೆ ಮೂಡಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

T20 ವಿಶ್ವಕಪ್

NED vs RSA: ಹೋರಾಡಿ ಸೋತ ನೆದರ್ಲೆಂಡ್ಸ್​; ಹರಿಣ ಪಡೆಗೆ ಪ್ರಯಾಸದ ಗೆಲುವು

NED vs RSA: ಡೇವಿಡ್​ ಮಿಲ್ಲರ್​ ಜವಾಬ್ದಾರಿಯುತ ಬ್ಯಾಟಿಂಗ್​ ನಡೆಸಿ ಯಾವುದೇ ಹಾನಿಯಾಗದಂತೆ ನೋಡಿಕೊಂಡು ತಂಡವನ್ನು ಗೆಲುವಿನ ದಡ ಸೇರಿಸಿದರು. ಮಿಲ್ಲರ್​ 51 ಎಸೆತ ಎದುರಿಸಿ ಅಜೇಯ 59 ರನ್​ ಬಾರಿಸಿದರು

VISTARANEWS.COM


on

NED vs RSA
Koo

ನ್ಯೂಯಾರ್ಕ್​: ಡೇವಿಡ್​ ಮಿಲ್ಲರ್(59)​ ಅವರ ಅಜೇಯ ಅರ್ಧಶತಕದ ಬ್ಯಾಟಿಂಗ್​ ನೆರವಿನಿಂದ ಶನಿವಾರ ನಡೆದ ಟಿ20 ವಿಶ್ವಕಪ್​ ಟೂರ್ನಿಯ 16ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ಸ್​ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಸತತ 2 ಗೆಲುವು ದಾಖಲಿಸಿ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ.

ಇಲ್ಲಿನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ(Nassau County International Cricket Stadium) ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ನೆದರ್ಲೆಂಡ್ಸ್(NED vs RSA) ತಂಡ ಮಧ್ಯಮ ಕ್ರಮಾಂಕದ ಬ್ಯಾಟರ್​ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್(40) ಉಪಯುಕ್ತ ಬ್ಯಾಟಿಂಗ್​ ನರೆವಿನಿಂದ 9 ವಿಕೆಟ್​ಗೆ 103 ರನ್​ ಬಾರಿಸಿತು. ಜವಾಬಿತ್ತ ದಕ್ಷಿಣ ಆಫ್ರಿಕಾ ಈ ಸಣ್ಣ ಮೊತ್ತವನ್ನು ಬಾರಿಸಲು 6 ವಿಕೆಟ್​ ಕಳೆದುಕೊಂಡು ಕೊನೆಗೂ 106 ರನ್​ ಬಾರಿಸಿ ಗೆಲುವು ದಾಖಲಿಸಿತು.

ಬ್ಯಾಟಿಂಗ್​ಗೆ ಯೋಗ್ಯವಲ್ಲದ ಪಿಚ್​ನಲ್ಲಿ ಉಭಯ ತಂಡಗಳ ಬ್ಯಾಟರ್​ಗಳು ರನ್​ ಗಳಿಸಲು ಪರದಾಟ ನಡೆಸಿದರು. ಚೀಸಿಂಗ್​ ವೇಳೆ ದಕ್ಷಿಣ ಆಫ್ರಿಕಾ ಮೊದಲ ಎಸೆತದಲ್ಲೇ ಕ್ವಿಂಟನ್​ ಡಿ ಕಾಕ್(0) ಅವರ ವಿಕೆಟ್​ ಕಳೆದುಕೊಂಡಿತು. ಸಂವಹನ ಕೊರತೆಯಿಂದಾಗಿ ಇಲ್ಲದ ರನ್​ ಗಳಿಸುವ ಯತ್ನದಲ್ಲಿ ರನೌಟ್​ಗೆ ಬಲಿಯಾದರು. ಈ ವಿಕೆಟ್​ ಪತನಗೊಂಡು 3 ರನ್​ ಆಗುವಷ್ಟರಲ್ಲಿ ಮತ್ತೆರಡು ವಿಕೆಟ್​ ಕೂಡ ಪತನಗೊಂಡಿತು. ರೀಜಾ ಹೆಂಡ್ರಿಕ್ಸ್(3) ಮತ್ತು ನಾಯಕ ಐಡೆನ್ ಮಾರ್ಕ್ರಾಮ್(0) ವಿಕೆಟ್​ ಕೈಚೆಲ್ಲಿದರು. 3 ರನ್​ಗೆ 3 ವಿಕೆಟ್​ ಕಳೆದುಕೊಂಡ ಹರಿಣ ಪಡೆ ಆರಂಭಿಕ ಆಘಾತ ಎದುರಿಸಿತು.

ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಒಂದು ಹಂತದಲ್ಲಿ ಆಸರೆಯಾಗುವ ಸೂಚನೆ ನೀಡಿದ್ದ ಅಪಾಯಕಾರಿ ಬ್ಯಾಟರ್​ ಹೆನ್ರಿಚ್​ ಕ್ಲಾಸೆನ್​ ಕೂಡ 4 ರನ್​ಗೆ ಆಟ ಮುಗಿಸಿದರು. ನಾಟಕೀಯ ಕುಸಿತ ಕಂಡ ದಕ್ಷಿಣ ಆಫ್ರಿಕಾಗೆ ಆಸರೆಯಾದದ್ದು ಡೇವಿಡ್​ ಮಿಲ್ಲರ್​ ಮತ್ತು ಟ್ರಿಸ್ಟಾನ್ ಸ್ಟಬ್ಸ್. ಉಭಯ ಆಟಗಾರರು ತಾಳ್ಮೆಯುತ ಬ್ಯಾಟಿಂಗ್​ ನಡೆಸಿ 5ನೇ ವಿಕೆಟ್​ಗೆ 65 ರನ್​ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಈ ಜೋಡಿ ನಿಂತು ಆಡದೇ ಹೋಗಿದ್ದರೆ ಹರಿಣ ಪಡೆಗೆ ಸೋಲು ಖಚಿತವಾಗುತ್ತಿತ್ತು.

ಇದನ್ನೂ ಓದಿ French Open Final 2024: 4ನೇ​ ಫ್ರೆಂಚ್‌ ಓಪನ್‌ ಟ್ರೋಫಿ ಗೆದ್ದ ಇಗಾ ಸ್ವಿಯಾಟೆಕ್‌

ಟ್ರಿಸ್ಟಾನ್ ಸ್ಟಬ್ಸ್ 37 ಎಸೆತಗಳಿಂದ 33 ರನ್​ ಬಾರಿಸಿ ಬಾಸ್ ಡಿ ಲೀಡೆಗೆ ವಿಕೆಟ್​ ಒಪ್ಪಿಸಿದರು. ಇವರ ವಿಕೆಟ್​ ಪತನದ ಬಳಿಕ ಬಂದ ಮಾರ್ಕೊ ಜಾನ್ಸೆನ್​ 3 ರನ್​ ಗಳಿಸಿ ವಿಕೆಟ್​ ಕಳೆದುಕೊಂಡರು. ಈ ವೇಳೆ ತಂಡಕ್ಕೆ ಕೊಂಚ ಆತಂಕ ಎದುರಾದರೂ ಕೂಡ ಡೇವಿಡ್​ ಮಿಲ್ಲರ್​ ಜವಾಬ್ದಾರಿಯುತ ಬ್ಯಾಟಿಂಗ್​ ನಡೆಸಿ ಯಾವುದೇ ಹಾನಿಯಾಗದಂತೆ ನೋಡಿಕೊಂಡು ತಂಡವನ್ನು ಗೆಲುವಿನ ದಡ ಸೇರಿಸಿದರು. ಮಿಲ್ಲರ್​ 51 ಎಸೆತ ಎದುರಿಸಿ ಅಜೇಯ 59 ರನ್​ ಬಾರಿಸಿದರು. ಅವರ ಈ ಅರ್ಧಶತಕದ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 4 ಸೊಗಸಾದ ಸಿಕ್ಸರ್​ ಮತ್ತು 3 ಬೌಂಡರಿ ಸಿಡಿಯಿತು. ಪಂದ್ಯ ಸೋತರೂ ಕೂಡ ನೆದರ್ಲೆಂಡ್ಸ್​ ತಂಡದ ಹೋರಾಟವನ್ನು ಮೆಚ್ಚಲೇ ಬೇಕು.

ಮೊದಲು ಬ್ಯಾಟಿಂಗ್​ ನಡೆಸಿದ ನೆದರ್ಲೆಂಡ್ಸ್​ ಕೂಡ 17 ರನ್​ಗೆ ಮೂರು ವಿಕೆಟ್​ ಕಳೆದುಕೊಂಡು ಆಘಾತ ಎದುರಿಸಿತು. ಇನ್ನೇನು 50ರ ಒಳಗೆ ಗಂಟು ಮೂಟೆ ಕಟ್ಟುತ್ತದೆ ಎನ್ನುವಷ್ಟರಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ ಮತ್ತು 8ನೇ ಕ್ರಮಾಂಕದಲ್ಲಿ ಆಡಿದ ವ್ಯಾನ್ ಬೀಕ್ ನಡೆಸಿದ ಸಣ್ಣ ಮಟ್ಟಿನ ಬ್ಯಾಟಿಂಗ್​ ಹೋರಾಟದಿಂದ ತಂಡ 100ರ ಗಡಿ ದಾಟಿತು. ಎಂಗಲ್‌ಬ್ರೆಕ್ಟ್ 2 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 40 ರನ್​ ಬಾರಿಸಿದರೆ, ವ್ಯಾನ್ ಬೀಕ್ 3 ಬೌಂಡರಿ ನೆರವಿನಿಂದ 23 ರನ್​ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ಒಟ್ನೀಲ್ ಬಾರ್ಟ್ಮನ್ ಘಾತಕ ಬೌಲಿಂಗ್​ ನಡೆಸಿ ಕೇವಲ 11 ರನ್​ ವೆಚ್ಚದಲ್ಲಿ ಪ್ರಮುಖ 4 ವಿಕೆಟ್​ ಕಿತ್ತರು. ಉಳಿದಂತೆ ಮಾರ್ಕೊ ಜಾನ್ಸೆನ್​ ಮತ್ತು ಅನ್ರಿಚ್​ ನೋರ್ಜೆ ತಲಾ 2 ವಿಕೆಟ್​ ಪಡೆದರು.

Continue Reading

ಪ್ರಮುಖ ಸುದ್ದಿ

French Open Final 2024: 4ನೇ​ ಫ್ರೆಂಚ್‌ ಓಪನ್‌ ಟ್ರೋಫಿ ಗೆದ್ದ ಇಗಾ ಸ್ವಿಯಾಟೆಕ್‌

French Open Final 2024: ಶನಿವಾರ ನಡೆದ ಈ ಫೈನಲ್​ ಪಂದ್ಯದಲ್ಲಿ ಸ್ವಿಯಾಟೆಕ್​ ಅವರ ಆಕ್ರಮಣಕಾರಿ ಆಟದ ಮುಂದೆ ಪಾವೊಲಿನಿ ಸಂಪೂರ್ಣವಾಗಿ ಮಂಕಾದರು. ಯಾವ ಹಂತದಲ್ಲಿಯೂ ಕೂಡ ಪೈಪೋಟಿ ನೀಡಲು ಇವರಿಂದ ಸಾಧ್ಯವಾಗಲಿಲ್ಲ. ಹೀಗಾಗಿ 6-2, 6-1 ನೇರ ಸೆಟ್​ಗಳ ಹೀನಾಯ ಸೋಲು ಕಂಡರು. ಕೇವಲ 68 ನಿಮಿಷದಲ್ಲಿ ಈ ಪಂದ್ಯ ಮುಕ್ತಾಯ ಕಂಡಿತು.

VISTARANEWS.COM


on

French Open Final 2024
Koo

ಪ್ಯಾರಿಸ್‌: ಪೋಲೆಂಡ್‌ನ‌ ಇಗಾ ಸ್ವಿಯಾಟೆಕ್‌(Iga Swiatek) ಅವರು ಫ್ರೆಂಚ್‌ ಓಪನ್‌(French Open Final 2024) ಟೂರ್ನಿಯಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು(ಶನಿವಾರ) ನಡೆದ ಮಹಿಳಾ ಸಿಂಗಲ್ಸ್​ ವಿಭಾಗದ ಫೈನಲ್​ ಪಂದ್ಯದಲ್ಲಿ ಜಾಸ್ಮಿನ್​ ಪಾವೊಲಿನಿ(Jasmine Paolini) ವಿರುದ್ಧ ಅಧಿಕಾರಯು ಗೆಲುವು ಸಾಧಿಸಿ ಮತ್ತೊಮ್ಮೆ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಆವೇ ಅಂಗಣದ ಕೂಟದಲ್ಲಿ 4ನೇ ಹಾಗೂ ಹ್ಯಾಟ್ರಿಕ್​ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಒಟ್ಟಾರೆಯಾಗಿ ಇದು ಸ್ವಿಯಾಟೆಕ್​ಗೆ 5ನೇ ಗ್ರ್ಯಾನ್‌ ಸ್ಲಾಮ್‌ ಕಿರೀಟ. ಒಂದು ಟ್ರೋಫಿ ಯುಎಸ್​ ಓಪನ್​ನಲ್ಲಿ ಒಲಿದಿತ್ತು.

ಶನಿವಾರ ನಡೆದ ಈ ಫೈನಲ್​ ಪಂದ್ಯದಲ್ಲಿ ಸ್ವಿಯಾಟೆಕ್​ ಅವರ ಆಕ್ರಮಣಕಾರಿ ಆಟದ ಮುಂದೆ ಪಾವೊಲಿನಿ ಸಂಪೂರ್ಣವಾಗಿ ಮಂಕಾದರು. ಯಾವ ಹಂತದಲ್ಲಿಯೂ ಕೂಡ ಪೈಪೋಟಿ ನೀಡಲು ಇವರಿಂದ ಸಾಧ್ಯವಾಗಲಿಲ್ಲ. ಹೀಗಾಗಿ 6-2, 6-1 ನೇರ ಸೆಟ್​ಗಳ ಹೀನಾಯ ಸೋಲು ಕಂಡರು. ಕೇವಲ 68 ನಿಮಿಷದಲ್ಲಿ ಈ ಪಂದ್ಯ ಮುಕ್ತಾಯ ಕಂಡಿತು.

ಸ್ವಿಯಾಟೆಕ್‌ ರೋಲ್ಯಾಂಡ್​ ಗ್ಯಾರಸ್​ನಲ್ಲಿ ಸತತ 21 ಪಂದ್ಯಗಳ ಅಜೇಯ ಓಟ ಮುಂದುವರಿಸಿ ಪಾರಮ್ಯ ಮೆರದರು. 28 ವರ್ಷದ ಪಾವೊಲಿನಿ ಇದೇ ಮೊದಲ ಬಾರಿಗೆ ಗ್ರಾಂಡ್​ ಸ್ಲಾಂ ಟೂರ್ನಿಯ ಫೈನಲ್​ ಪ್ರವೇಶಿಸಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯಿವ ನಿರೀಕ್ಷೆಯಲ್ಲಿದ್ದರು. ಆದರೆ ಇದಕ್ಕೆ ಸ್ವಿಯಾಟೆಕ್​ ಅನವು ಮಾಡಿಕೊಳ್ಳಲಿಲ್ಲ.

ಸ್ವಿಯಾಟೆಕ್ ಮೂರು ವರ್ಷಗಳ ಕಾಲ ಪಂದ್ಯಾವಳಿಯನ್ನು ಗೆದ್ದ ಮೂರನೇ ಆಟಗಾರ್ತಿ ಎನಿಸಿಕೊಂಡರು. ಇದಕ್ಕೂ ಮುನ್ನ ಹೆನಿನ್, 2005-07ರಲ್ಲಿ ಕೊನೆಯದಾಗಿ ಈ ಸಾಧನೆ ಮಾಡಿದ್ದರು. ಮೋನಿಕಾ ಸೆಲೆಸ್ 1990 ರ ದಶಕದ ಆರಂಭದಲ್ಲಿ ಈ ಸಾಧನೆಯನ್ನು ಮಾಡಿದ್ದರು.

ಇದನ್ನೂ ಓದಿ IND vs PAK: ಭಾರತ-ಪಾಕ್​ ಹೈವೋಲ್ಟೇಜ್​ ಪಂದ್ಯದ ಹವಾಮಾನ ವರದಿ, ಆಡುವ ಬಳಗ ಹೇಗಿದೆ?

ಅಲ್ಕರಾಜ್‌-ಜ್ವರೇವ್ ಫೈನಲ್​ ಫೈಟ್​​


ನಾಳೆ ನಡೆಯುವ ಪುರುಷರ ಸಿಂಗಲ್ಸ್​ ಫೈನಲ್​ ಪಂದ್ಯದಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತ ಕಾರ್ಲೋಸ್‌ ಅಲ್ಕರಾಜ್‌ ಮತ್ತು ನಾಲ್ಕನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದಾರೆ.

ಅಲ್ಕರಾಜ್​ಗೆ ಇದು ಚೊಚ್ಚಲ ಫ್ರೆಂಚ್​ ಓಪನ್​ ಫೈನಲ್​ ಪಂದ್ಯವಾಗಿದೆ. 14 ಬಾರಿಯ ಚಾಂಪಿಯನ್​ ರಫೆಲ್​ ನಡಾಲ್​ ಮತ್ತು ಸರ್ಬಿಯಾದ ನೊವಾಕ್​ ಜೋಕೊವಿಕ್​ ಗಾಯದಿಂದಾಗಿ ಟೂರ್ನಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಬಳಿಕ ಅಲ್ಕರಾಜ್ ಪ್ರಶಸ್ತಿ ಗೆಲ್ಲುವ ಫೇವರಿಟ್​ ಎನಿಸಿಕೊಂಡಿದ್ದರು. ಇದೀಗ ನಾಳೆ ನಡೆಯುವ ಫೈನಲ್​ನಲ್ಲಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯಲಿದ್ದಾರಾ ಎಂದು ಕಾದು ನೋಡಬೇಕಿದೆ.

ಶುಕ್ರವಾರ ನಡೆದಿದ್ದ ಸೆಮಿಫೈನಲ್​ ಪಂದ್ಯದಲ್ಲಿ ಅಲ್ಕರಾಜ್ ಐದು ಸೆಟ್​ಗಳ 4 ಗಂಟೆಗಳ ಕಾಲ ನಡೆದ ತೀವ್ರ ಪೈಪೋಟಿಯ ಪಂದ್ಯದಲ್ಲಿ ಆಸ್ಟ್ರೇಲಿಯನ್​ ಚಾಂಪಿಯನ್​ ಇಟಲಿಯ ಜನ್ನಕ್​ ಸಿನ್ನರ್​ ಅವರನ್ನು 2-6, 6-3,3-6,6-4, 6-3 ಸೇಟ್​ಗಳ ಗೆಲುವು ಸಾಧಿಸಿದ್ದರು.

Continue Reading

ಕ್ರೀಡೆ

IND vs PAK: ಭಾರತ-ಪಾಕ್​ ಹೈವೋಲ್ಟೇಜ್​ ಪಂದ್ಯದ ಹವಾಮಾನ ವರದಿ, ಆಡುವ ಬಳಗ ಹೇಗಿದೆ?

IND vs PAK:ನ್ಯೂಯಾರ್ಕ್​ನಲ್ಲಿ ಈ ಪಂದ್ಯ ಹಗಲು ನಡೆದರೂ ಕೂಡ ಭಾರತದಲ್ಲಿ ರಾತ್ರಿ 8 ಗಂಟೆಗೆ ಪಂದ್ಯ ಪ್ರಸಾರಗೊಳ್ಳಲಿದೆ. ಸ್ಟಾರ್​ ಸ್ಪೋರ್ಟ್ಸ್​ ಮತ್ತು ಡಿಡಿ ದೂರದರ್ಶನದಲ್ಲಿ ಪಂದ್ಯಗಳು ನೇರಪ್ರಸಾರ ಇರಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ ಮೊಬೈಲ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದು.

VISTARANEWS.COM


on

IND vs PAK
Koo

ನ್ಯೂಯಾರ್ಕ್​: ಕ್ರಿಕೆಟ್​ ಅಭಿಮಾನಿಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಹೈವೋಲ್ಟೇಜ್​ ಪಂದ್ಯ ನಡೆಯುವುದು ಅನುಮಾನ ಎನ್ನುವಂತಿದೆ. ಪಂದ್ಯಕ್ಕೆ(IND vs PAK match Weather Reports) ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದೆ.

ಮಳೆ ಭೀತಿ


ಸದ್ಯದ ಮುನ್ಸೂಚನೆಯಂತೆ ಪಂದ್ಯ ನಡೆಯುವ ಭಾನುವಾರ ನ್ಯೂಯಾರ್ಕ್​ನಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಅಕ್ಯುವೆದರ್‌ನ ಮುನ್ಸೂಚನೆಯ ಪ್ರಕಾರ ಅಮೆರಿಕದ ಕಾಲಮಾನದ ಪ್ರಕಾರ ಬೆಳಗ್ಗೆ 11 ಸುಮಾರಿಗೆ ಶೇ. 51 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಭಾರತದಲ್ಲಿ ಈ ಪಂದ್ಯ ರಾತ್ರಿ ಪ್ರಸಾರವಾಗುತ್ತದೆ. ಮಳೆಯಿಂದ ಪಂದ್ಯ ರದ್ದುಗೊಂಡರೆ ಉಭಯ ತಂಡಗಳಿಗೂ ತಲಾ 1 ಅಂಕ ನೀಡಲಾಗುತ್ತದೆ. ಏಕೆಂದರೆ ಲೀಗ್​ ಪಂದ್ಯಗಳಿಗೆ ಮೀಸಲು ದಿನ ಇಲ್ಲ.

ಪಂದ್ಯದ ಪ್ರಸಾರ


ನ್ಯೂಯಾರ್ಕ್​ನಲ್ಲಿ ಈ ಪಂದ್ಯ ಹಗಲು ನಡೆದರೂ ಕೂಡ ಭಾರತದಲ್ಲಿ ರಾತ್ರಿ 8 ಗಂಟೆಗೆ ಪಂದ್ಯ ಪ್ರಸಾರಗೊಳ್ಳಲಿದೆ. ಸ್ಟಾರ್​ ಸ್ಪೋರ್ಟ್ಸ್​ ಮತ್ತು ಡಿಡಿ ದೂರದರ್ಶನದಲ್ಲಿ ಪಂದ್ಯಗಳು ನೇರಪ್ರಸಾರ ಇರಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ ಮೊಬೈಲ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದು.

ಇದನ್ನೂ ಓದಿ IND vs PAK: ಬಾಬರ್‌ ಪಡೆಯನ್ನು ಬೆಂಡೆತ್ತಲಿ ರೋಹಿತ್​ ಸಾರಥ್ಯದ ಟೀಮ್​ ಇಂಡಿಯಾ

ಮುಖಾಮುಖಿ


ಒಟ್ಟು 7 ಬಾರಿ ಇತ್ತಂಡಗಳು ಟಿ20 ವಿಶ್ವಕಪ್​ನಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 6 ಪಂದ್ಯ ಗೆದ್ದರೆ, ಪಾಕಿಸ್ತಾನ ಒಂದು ಪಂದ್ಯ ಗೆದ್ದಿದೆ. ಭಾರತಕ್ಕೆ ಸೋಲು ಎದುರಾದದ್ದು 2021ರಲ್ಲಿ ದುಬೈನಲ್ಲಿ ನಡೆದಿದ್ದ ಟೂರ್ನಿಯಲ್ಲಿ. ವಿರಾಟ್​ ಕೊಹ್ಲಿ ಸಾರಥ್ಯದ ಟೀಮ್​ ಇಂಡಿಯಾ 10 ವಿಕೆಟ್​ಗಳ ಹೀನಾಯ ಸೋಲು ಕಂಡಿತ್ತು. ಒಟ್ಟಾರೆಯಾಗಿ ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದ್ದರೂ ಕೂಡ ಪಾಕ್​ ಸವಾಲನ್ನು ಅಷ್ಟು ಹಗುರವಾಗಿ ಕಡೆಗಣಿಸುವಂತಿಲ್ಲ.

ಪಿಚ್​ ರಿಪೋರ್ಟ್​


ನಾಸ್ಸೌ ಕ್ರಿಕೆಟ್​ ಸ್ಟೇಡಿಯಂನ ಪಿಚ್​ನಲ್ಲಿ ಹಲವು ಬಿರುಕು ಇರುವುದರಿಂದ ಇದು ಬೌಲರ್​ಗಳಿಗೆ ಯೋಗ್ಯವಾಗಿದೆ. ಆದರೆ ಬ್ಯಾಟರ್​ಗಳು ರನ್​ ಗಳಿಸಲು ಪರದಾಡುವ ಜತೆಗೆ ಗಾಯಗೊಳ್ಳುವ ಸಾಧ್ಯತೆಯೂ ಅಧಿಕವಾಗಿದೆ. ಇಲ್ಲಿ ಇದುವರೆಗೆ ನಡೆದ ಎಲ್ಲ ಪಂದ್ಯಗಳು ಕೂಡ ಕನಿಷ್ಠ ಮೊತ್ತದ ಪಂದ್ಯಗಳಾಗಿವೆ. ಪಿಚ್​ ಬಗ್ಗೆ ಈಗಾಗಲೇ ಹಲವು ತಂಡಗಳ ಆಟಗಾರರು ಅಸಮಾಧಾನ ಹೊರಹಾಕಿದ್ದಾರೆ.

ಸಂಭ್ಯಾವ್ಯ ತಂಡಗಳು


ಭಾರತ:
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕಟ್​ ಕೀಪರ್​), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್​ಪ್ರೀತ್​ ಬುಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

ಪಾಕಿಸ್ತಾನ: ಬಾಬರ್ ಆಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್​ ಕೀಪರ್​), ಉಸ್ಮಾನ್ ಖಾನ್, ಫಖರ್ ಜಮಾನ್, ಅಜಮ್ ಖಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಮೊಹಮ್ಮದ್ ಅಮೀರ್, ಹಾರಿಸ್ ರೌಫ್.

Continue Reading

ಕ್ರೀಡೆ

IND vs PAK: ಬಾಬರ್‌ ಪಡೆಯನ್ನು ಬೆಂಡೆತ್ತಲಿ ರೋಹಿತ್​ ಸಾರಥ್ಯದ ಟೀಮ್​ ಇಂಡಿಯಾ

IND vs PAK: ಮೇಲ್ನೋಟಕೆ ಭಾರತ ಈ ಬಾರಿಯ ಕೂಟದಲ್ಲಿ ಫೇವರಿಟ್‌ ಆಗಿ ಗುರುತಿಸಿಕೊಂಡಿದೆ. ಆದರೆ ಅತಿಯಾದ ಆತ್ಮವಿಶ್ವಾಸ ಸಲ್ಲದು. ಎಲ್ಲ ಪಂದ್ಯದಲ್ಲಿಯೂ ಎಚ್ಚರ ಅಗತ್ಯ. ಅದರಂತೆ ಯಾವುದೇ ಕಾರಣಕ್ಕೂ ಎದುರಾಳಿಗಳನ್ನು ಕಡೆಗಣಿಸುವಂತಿಲ್ಲ. ಇದಕ್ಕೆ ಅಮೆರಿಕ ವಿರುದ್ಧ ಪಾಕ್​, ಅಫಘಾನಿಸ್ತಾನ ವಿರುದ್ಧ ನ್ಯೂಜಿಲ್ಯಾಂಡ್​ ಸೋಲು ಕಂಡಿರುವುದೇ ಉತ್ತಮ ನಿದರ್ಶನ.

VISTARANEWS.COM


on

IND vs PAK
Koo

ನ್ಯೂಯಾರ್ಕ್​: ಕ್ರೀಡಾ ಲೋಕವೇ ನ್ಯೂಯಾರ್ಕ್​ನತ್ತ ಮುಖ ಮಾಡಿ ಸೂಪರ್‌ ಸಂಡೆಯ ಕ್ಷಣಗಣನೆಯಲ್ಲಿ ತೊಡಗಿದೆ. ಅಭಿಮಾನಿಗಳ ಕಾತರ, ಕೌತುಕಗಳೆಲ್ಲ ಸೀಮೆಯನ್ನು ಮೀರಿವೆ. ಇದಕ್ಕೆಲ್ಲ ಒಂದೇ ಕಾರಣ, ಭಾರತ- ಪಾಕಿಸ್ತಾನ(IND vs PAK) ನಡುವಿನ ಟಿ20 ವಿಶ್ವಕಪ್‌ ಪಂದ್ಯ(T20 World Cup 2024).

ಭಾನುವಾರ ರಾತ್ರಿ ನಡೆಯುವ ‘ಎ’ ವಿಭಾಗದ ಪಂದ್ಯದಲ್ಲಿ ಬುದ್ಧ ಎದುರಾಳಿಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಉಳಿದೆಲ್ಲ ಪಂದ್ಯಗಳಿಗಿಂದ ಈ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯದ ಜೋಶ್‌ ದೊಡ್ಡ ಮಟ್ಟದಲ್ಲೇ ಇರುತ್ತದೆ. ಅಕ್ಷರಶಃ ಇದೊಂದು ಕದನವೇ ಆಗಿರುತ್ತದೆ. ಗೆದ್ದರೆ ಯುದ್ಧವನ್ನೇ ಜಯಿಸಿದ ಮಹಾಸಂಭ್ರಮ. ರೋಹಿತ್​ ಪಡೆಯ ಮೇಲಿನ ನಿರೀಕ್ಷೆ ದೊಡ್ಡ ಮಟ್ಟದಲ್ಲೇ ಇದೆ. ಹಾಗೆಯೇ ಅಮೆರಿಕ ವಿರುದ್ಧ ಸೋತಿರುವ ಪಾಕಿಸ್ತಾನಕ್ಕೆ ಒತ್ತಡವೂ ಇದೆ. ಗೆದ್ದರಷ್ಟೇ ಮುಂದಿನ ಹಂತಕ್ಕೇರಬಹುದು. ಹೀಗಾಗಿ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆ ಹೆಚ್ಚು.

ಭಾರತ ಬಲಿಷ್ಠ ಆದರೆ…


ಮೇಲ್ನೋಟಕೆ ಭಾರತ ಈ ಬಾರಿಯ ಕೂಟದಲ್ಲಿ ಫೇವರಿಟ್‌ ಆಗಿ ಗುರುತಿಸಿಕೊಂಡಿದೆ. ಆದರೆ ಅತಿಯಾದ ಆತ್ಮವಿಶ್ವಾಸ ಸಲ್ಲದು. ಎಲ್ಲ ಪಂದ್ಯದಲ್ಲಿಯೂ ಎಚ್ಚರ ಅಗತ್ಯ. ಅದರಂತೆ ಯಾವುದೇ ಕಾರಣಕ್ಕೂ ಎದುರಾಳಿಗಳನ್ನು ಕಡೆಗಣಿಸುವಂತಿಲ್ಲ. ಇದಕ್ಕೆ ಅಮೆರಿಕ ವಿರುದ್ಧ ಪಾಕ್​, ಅಫಘಾನಿಸ್ತಾನ ವಿರುದ್ಧ ನ್ಯೂಜಿಲ್ಯಾಂಡ್​ ಸೋಲು ಕಂಡಿರುವುದೇ ಉತ್ತಮ ನಿದರ್ಶನ. ಏಕದಿನ ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧ ಭಾರತ ಅಜೇಯವಾಗಿದ್ದರೂ ಕೂಡ, ಟಿ20ಯಲ್ಲಿ ಅಜೇಯವಲ್ಲ. ಭಾರತದ ಆತಿಥ್ಯದಲ್ಲೇ ದುಬೈನಲ್ಲಿ 2021ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ 10 ವಿಕೆಟ್​ಗಳ ಹೀನಾಯ ಸೋಲು ಕಂಡಿತ್ತು. 2022ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿತ್ತು. ಟಿ20ಯಲ್ಲಿ ಪಾಕಿಸ್ತಾನ ತಂಡ ಭಾರತಕ್ಕೆ ಪೈಪೋಟಿ ನೀಡುತ್ತಿದೆ. ಹೀಗಾಗಿ ಎಚ್ಚರದಿಂದ ಆಡಬೇಕು.

ಇದನ್ನೂ ಓದಿ IND vs PAK: ಪಾಕ್​ ವಿರುದ್ಧದ ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಲು ಕೊಹ್ಲಿ ಸಜ್ಜು; ಯಾವುದು ಈ ದಾಖಲೆ?

ಬುಮ್ರಾ ಮೇಲೆ ತಂಡ ಅವಲಂಬಿತ


ವೇಗಿ ಮೊಹಮ್ಮದ್​ ಶಮಿ ಗೈರಿನಲ್ಲಿ ಜಸ್​ಪ್ರೀತ್​ ಬುಮ್ರಾ ಬೌಲಿಂಗ್‌ ಮೇಲೆ ಇಡೀ ತಂಡ ಅವಲಂಬಿತವಾಗಿದೆ! ಹಾಗಾಗಿ ಬುಮ್ರಾ ಬೌಲಿಂಗ್‌ನಲ್ಲಿ ಪೂರ್ಣ ಭಾರವನ್ನು ಹೊರಲೇಬೇಕಾಗಿದೆ. ಅವರಿಗೆ ವೇಗಿ ಸಿರಾಜ್​, ಅರ್ಶ್‌ದೀಪ್‌ ಸಿಂಗ್‌, ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಸ್ಪಿನ್ನರ್‌ಗಳಾದ ಜಡೇಜಾ​, ಅಕ್ಷರ್​ ನೆರವು ನೀಡಬೇಕಾಗಿದೆ. ಇವರೆಲ್ಲ ಒಂದಾಗಿ ತಮ್ಮ ಬೌಲಿಂಗ್‌ ಸಾಮರ್ಥ್ಯವನ್ನು ತೋರಿದರೆ ಭಾರತದ ಅಶ್ವಮೇಧವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.

ಕೊಹ್ಲಿ ಮೇಲೆ ನಂಬಿಕೆ


ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಒಂದು ರನ್​ಗೆ ಸೀಮಿತರಾದರೂ ಕೂಡ ಪಾಕ್‌ ವಿರುದ್ಧ ಉತ್ತಮ ದಾಖಲೆಯನ್ನೇ ಹೊಂದಿದ್ದಾರೆ. ಈ ನಿಟಿನಲ್ಲಿ ಕೊಹ್ಲಿ ಬ್ಯಾಟಿಂಗ್‌ ಅಬ್ಬರ ಇಲ್ಲೂ ನಿರೀಕ್ಷಿಸಬಹುದು. ಟಿ20 ನಂ.1 ಬ್ಯಾಟರ್​ ಸೂರ್ಯಕುಮಾರ್​ ಬ್ಯಾಟ್​ ಮಂಕಾದಂತೆ ಕಾಣುತ್ತಿದೆ. ಈ ಬಾರಿಯ ಐಪಿಎಲ್​ನಲ್ಲಿಯೂ ಒಂದೆರಡು ಪಂದ್ಯಗಳನ್ನು ಬಿಟ್ಟರೆ ಬಹುತೇಕ ಪಂದ್ಯಗಳಲ್ಲಿ ವಿಫಲರಾಗಿದ್ದರು. ಹೀಗಾಗಿ ಅವರು ಬ್ಯಾಟಿಂಗ್​ ಫಾರ್ಮ್​ಗೆ ಮರಳುವ ಅನಿವಾರ್ಯತೆ ಇದೆ. ಉಳಿದಂತೆ ಯಾವುದೇ ಸಮಸ್ಯೆಗಳಿಲ್ಲ.

ಪಾಕ್‌ ತಂಡವೂ ಬಲಿಷ್ಠ


ಭಾರತ ತಂಡದಂತೆ ಪಾಕಿಸ್ತಾನ ಕೂಡ ಬಲಿಷ್ಠವಾಗಿದೆ. ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಎರಡೂ ವಿಭಾಗಲ್ಲಿ ವೈವಿಧ್ಯಮಯವಾಗಿ ಗೋಚರಿಸಿದೆ. ಬ್ಯಾಟಿಂಗ್‌ನಲ್ಲಿ ಮೊಹಮ್ಮದ್‌ ರಿಜ್ವಾನ್‌, ನಾಯಕ ಬಾಬರ್‌ ಅಜಂ, ಇಫ್ತಿಕರ್​, ಫಕಾರ್​ ಜಮಾನ್​ ಬಲವಾದರೆ ಅತ್ತ ಬೌಲಿಂಗ್‌ನಲ್ಲಿ ಶಾಹೀನ್‌ ಅಫ್ರಿದಿ, ಶದಾಬ್‌, ಆಮೀರ್​, ರವೂಫ್‌ ಮತ್ತು ನಶೀಮ್​ ಶಾ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಅದರಲ್ಲೂ ಹೊಸ ಚೆಂಡಿನಲ್ಲಿ ಅಫ್ರಿದಿ ಬೆಂಕಿ ಎಸೆತಗಳನ್ನು ಎಸೆಯುವುದರಲ್ಲಿ ಎತ್ತಿದ ಕೈ.

Continue Reading
Advertisement
NED vs RSA
T20 ವಿಶ್ವಕಪ್4 hours ago

NED vs RSA: ಹೋರಾಡಿ ಸೋತ ನೆದರ್ಲೆಂಡ್ಸ್​; ಹರಿಣ ಪಡೆಗೆ ಪ್ರಯಾಸದ ಗೆಲುವು

Karnataka police
ಕರ್ನಾಟಕ5 hours ago

Davanagere News: ದಾವಣಗೆರೆಯಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್‌ಗಿರಿ; ನಾಲ್ವರ ಬಂಧನ

French Open Final 2024
ಪ್ರಮುಖ ಸುದ್ದಿ6 hours ago

French Open Final 2024: 4ನೇ​ ಫ್ರೆಂಚ್‌ ಓಪನ್‌ ಟ್ರೋಫಿ ಗೆದ್ದ ಇಗಾ ಸ್ವಿಯಾಟೆಕ್‌

Govt Employees
ಕರ್ನಾಟಕ6 hours ago

Govt Employees: ಪ್ರತಿ ಸೋಮವಾರ ಕೇಂದ್ರ ಕಚೇರಿಗಳಿಗೆ ಅಧಿಕಾರಿ, ನೌಕರರ ಹಾಜರು ಕಡ್ಡಾಯ: ರಾಜ್ಯ ಸರ್ಕಾರ ಆದೇಶ

Kisan Samman Nidhi
ಪ್ರಮುಖ ಸುದ್ದಿ6 hours ago

Kisan Samman Nidhi: ರೈತರಿಗೆ ಗುಡ್‌ ನ್ಯೂಸ್;‌ ಕಿಸಾನ್‌ ಸಮ್ಮಾನ್‌ ನಿಧಿ 2 ಸಾವಿರ ರೂ. ಹೆಚ್ಚಳ, ಇನ್ನು ಸಿಗೋದು 8 ಸಾವಿರ ರೂ.!

IND vs PAK
ಕ್ರೀಡೆ6 hours ago

IND vs PAK: ಭಾರತ-ಪಾಕ್​ ಹೈವೋಲ್ಟೇಜ್​ ಪಂದ್ಯದ ಹವಾಮಾನ ವರದಿ, ಆಡುವ ಬಳಗ ಹೇಗಿದೆ?

World Environment Day Celebration at Kittur Rani Chennamma Residential School
ದಾವಣಗೆರೆ7 hours ago

Davanagere News: ತರಗನಹಳ್ಳಿಯ ಚನ್ನಮ್ಮ ವಸತಿ ಶಾಲೆಯಲ್ಲಿ ಪರಿಸರ ದಿನಾಚರಣೆ

Physical Abuse
ಕರ್ನಾಟಕ7 hours ago

Physical Abuse: 34 ವರ್ಷದ ವಿಚ್ಛೇದಿತ ಮಹಿಳೆ ಜತೆ 25ರ ಯುವಕನ ಲವ್ವಿ ಡವ್ವಿ; ಗರ್ಭಿಣಿ ಮಾಡಿ ಪರಾರಿ!

World Environment Day Celebration at Kamaruru Government higher Primary School
ಶಿವಮೊಗ್ಗ7 hours ago

World Environment Day: ಚಂದ್ರಗುತ್ತಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ

Youth Congress National General Secretary Raksha Ramaiah latest statement
ಚಿಕ್ಕಬಳ್ಳಾಪುರ7 hours ago

Raksha Ramaiah: ಚಿಕ್ಕಬಳ್ಳಾಪುರದಲ್ಲಿ ನಾನಾ ಕಾರಣಗಳಿಂದ ಮತಗಳನ್ನು ಗೆಲುವಾಗಿ ಪರಿವರ್ತಿಸಲು ಸಾಧ್ಯವಾಗಿಲ್ಲ: ರಕ್ಷಾ ರಾಮಯ್ಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ1 day ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ1 day ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ5 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ5 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ7 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌